AB de Villiers : ಕೊನೇ ಎರಡು ವರ್ಷ ಒಂದೇ ಕಣ್ಣಿನಲ್ಲಿ ಆಡಿದ್ದ ಎಬಿಡಿ ವಿಲಿಯರ್ಸ್​​! - Vistara News

ಕ್ರಿಕೆಟ್

AB de Villiers : ಕೊನೇ ಎರಡು ವರ್ಷ ಒಂದೇ ಕಣ್ಣಿನಲ್ಲಿ ಆಡಿದ್ದ ಎಬಿಡಿ ವಿಲಿಯರ್ಸ್​​!

AB de Villiers : ದಕ್ಷಿಣ ಆಫ್ರಿಕಾ ತಂಡದ ಆಟಗಾರ 2021ರಲ್ಲಿ ಎಲ್ಲ ಮಾದರಿಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ್ದಾರೆ.

VISTARANEWS.COM


on

AB de Villiers
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕ್ರಿಕೆಟ್ ಅನ್ನು ಅತ್ಯಂತ ಸುಲಭವಾಗಿ ಆಡಬಹುದು ಎಂದು ತೋರಿಸಿಕೊಟ್ಟವರಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟರ್​ ಎಬಿಡಿ ವಿಲಿಯರ್ಸ್​ ಅಗ್ರಗಣ್ಯರು. ಅವರನ್ನು ಈ ಪೀಳಿಗೆಯ ಅಸಾಮಾನ್ಯ ಪ್ರತಿಭೆ ಎಂದೇ ಪರಿಗಣಿಸಲಾಗಿದೆ. 2004-2018ರ ಅವಧಿಯಲ್ಲಿ ದಕ್ಷಿಣ ಆಫ್ರಿಕಾ ಪರ 114 ಟೆಸ್ಟ್, 228 ಏಕದಿನ ಹಾಗೂ 78 ಟಿ20 ಪಂದ್ಯಗಳನ್ನು ಆಡಿದ್ದಾರೆ. ಮೈದಾನದ ಯಾವುದೇ ಮೂಲೆಗೆ ಚೆಂಡನ್ನು ಕಳುಹಿಸಬಲ್ಲ ಅವರ ಸಾಮರ್ಥ್ಯದಿಂದಾಗಿ ಅವರನ್ನು ಮಿಸ್ಟರ್​ 360 ಎಂದೂ ಕರೆಯಲಾಗುತ್ತದೆ.

ಎಬಿಡಿ ವಿಲಿಯನ್ಸ್​ ದಕ್ಷಿಣ ಆಫ್ರಿಕಾದ ನಾಯಕರಾಗಿದ್ದರು. ವಿಶೇಷವಾಗಿ 2015 ರ ವಿಶ್ವಕಪ್​​ನಲ್ಲಿ ಅವರು ತಂಡವನ್ನು ಮುನ್ನಡೆಸಿದ್ದರು. ಅಲ್ಲಿ ದಕ್ಷಿಣ ಆಫ್ರಿಕಾವು ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್​ನಲ್ಲಿ ಹೃದಯ ವಿದ್ರಾವಕ ಸೋಲನ್ನು ಅನುಭವಿಸಿತು. 2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಲು ಕಾರಣವಾದ ಹಲವು ಅಂಶಗಳಲ್ಲಿ ಇದೂ ಒಂದು ಎಂದು ಹೇಳಲಾಗಿದೆ.

ಅವರು 2019 ರ ವಿಶ್ವಕಪ್​​ಗೆ ದಕ್ಷಿಣ ಆಫ್ರಿಕಾ ತಂಡಕ್ಕೆ ಮರಳಲು ಪ್ರಯತ್ನಿಸಿದರೂ, ವಿಷಯಗಳು ಕಾರ್ಯರೂಪಕ್ಕೆ ಬರಲಿಲ್ಲ. ಐಪಿಎಲ್ 2021 ರ ನಂತರ ಎಲ್ಲಾ ಕ್ರಿಕೆಟ್​ನಿಂದ ನಿವೃತ್ತರಾಗುವ ಮೊದಲು ಅವರು ಈ ಮಧ್ಯೆ ಫ್ರ್ಯಾಂಚೈಸ್ ಕ್ರಿಕೆಟ್ ಆಡುವುದನ್ನು ಮುಂದುವರಿಸಿದರು. ತಮ್ಮ ಕೊನೆಯ ವೃತ್ತಿಪರ ಪಂದ್ಯಗಳ ಎರಡು ವರ್ಷಗಳ ಕರಾಳ ದಿನವನ್ನು ಅವರು ಇದೀಗ ಬಹಿರಂಗಗೊಳಿಸಿದ್ದಾರೆ. ತಮ್ಮ ಬಲ ಕಣ್ಣು ಬಲ ದೃಷ್ಟಿ ಕಳೆದುಕೊಳ್ಳುತ್ತಿದ್ದ ಕಾರಣ ಒಂದೇ ಕಣ್ಣಿನಲ್ಲಿ ಆಡಿದ್ದೆ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.

ಏನಾಗಿತ್ತು ಅವರಿಗೆ?

ಮಗು ಒದ್ದ ಕಾರಣ ಕಣ್ಣಿಗೆ ಪೆಟ್ಟು ಬಿದ್ದು ಹಾನಿಯಾಗಿತ್ತು. ಅದರಿಂದ ವರ್ಷದಿಂದ ವರ್ಷಕ್ಕೆ ಕಣ್ಣಿನ ದೃಷ್ಟಿ ಕಳೆದುಕೊಳ್ಳಲು ಆರಂಭಿಸಿದ್ದೆ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ. “ನನ್ನ ಮಗ ಆಕಸ್ಮಿಕವಾಗಿ ತನ್ನ ಹಿಮ್ಮಡಿಯಿಂದ ನನ್ನ ಕಣ್ಣಿಗೆ ಒದೆದಿದ್ದ. ನಾನು ಬಲಗಣ್ಣಿನ ದೃಷ್ಟಿಯನ್ನು ಕಳೆದುಕೊಳ್ಳಲು ಪ್ರಾರಂಭಿಸಿದೆ. ನಾನು ಶಸ್ತ್ರಚಿಕಿತ್ಸೆ ಮಾಡಿದಾಗ ವೈದ್ಯರು ನನ್ನನ್ನು ಕೇಳಿದರು, ‘ನೀವು ಇಷ್ಟು ಈ ರೀತಿ ಕ್ರಿಕೆಟ್ ಆಡಿದ್ದು ಹೇಗೆ?’. ಅದೃಷ್ಟವಶಾತ್ ನನ್ನ ವೃತ್ತಿಜೀವನದ ಕೊನೆಯ ಎರಡು ವರ್ಷಗಳಲ್ಲಿ ನನ್ನ ಎಡಗಣ್ಣು ಉತ್ತಮ ಕೆಲಸ ಮಾಡಿದೆ. ಹೀಗಾಗಿ ಒಂದೇ ಕಣ್ಣಿನಲ್ಲಿ ಆಡಲು ಸಾಧ್ಯವಾಯಿತು ಎಂದು ಎಬಿಡಿ ವಿಲಿಯರ್ಸ್​ ಹೇಳಿಕೊಂಡಿದ್ದಾರೆ.

ಡಿವಿಲಿಯರ್ಸ್ ಅವರು 2019 ರ ವಿಶ್ವಕಪ್​​ಗಾಗಿ ದಕ್ಷಿಣ ಆಫ್ರಿಕಾಕ್ಕೆ ಹೇಗೆ ಮರಳಲು ಬಯಸಿದ್ದರು ಎಂಬುದರ ಬಗ್ಗೆಯೂ ಮಾತನಾಡಿದರು. ಆದರೆ ಅವರು ತಮ್ಮ ನಿವೃತ್ತಿ ನಿರ್ಧಾರವನ್ನು ಏಕೆ ಹಿಂತೆಗೆದುಕೊಳ್ಳಲಿಲ್ಲ ಎಂಬ ಕಾರಣವನ್ನು ಬಹಿರಂಗಪಡಿಸಿದರು.

“ಕೋವಿಡ್ ಖಂಡಿತವಾಗಿಯೂ ನಮ್ಮೆಲ್ಲರ ಬದುಕಿನಲ್ಲಿ ಒಂದು ಪಾತ್ರವನ್ನು ವಹಿಸಿದೆ, ಅದರ ಬಗ್ಗೆ ಯಾವುದೇ ಸಂದೇಹವಿಲ್ಲ. ಅಂತಾರರಾಷ್ಟ್ರೀಯ ದೃಷ್ಟಿಕೋನದಿಂದ, ಹೇಳುವುದಾದರೆ 2015ರ ವಿಶ್ವಕಪ್ ವೇಳೆ ಆಘಾತ ಉಂಟಾಗಿತ್ತು. ಅದರಿಂದ ಹೊರಬರಲು ನನಗೆ ಸ್ವಲ್ಪ ಸಮಯ ಹಿಡಿಯಿತು. ನಂತರ,ನಾನು ತಂಡಕ್ಕೆ ಮರಳಿದಾಗ ಮತ್ತು ನಾನು ಬದ್ಧನಾಗಲು ಸಿದ್ಧಗೊಂಡಿದ್ದೆ. ಆದರೆ, ಆ ಸಮಯದಲ್ಲಿ ನನಗೆ ನಿಜವಾಗಿಯೂ ಅಗತ್ಯವಿರುವ ಅದೇ ಮಾದರಿ ತಂಡದಲ್ಲಿ ಇರಲಿಲ್ಲ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.

ನನ್ನ ಹೃದಯ ಆರ್​​ಸಿಬಿಯಲ್ಲೇ ಇದೆ ಎಂದ ಮಿಸ್ಟರ್​ 360

ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ (AB de Villiers) ಭವಿಷ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಗೆ ಮರಳಲು ಬಯಸುತ್ತೇನೆ ಎಂದು ಶನಿವಾರ ಹೇಳಿದ್ದಾರೆ. 11 ಋತುಗಳಲ್ಲಿ ಬೆಂಗಳೂರು ಫ್ರಾಂಚೈಸಿ ಪರ ಆಡಿದ ಡಿವಿಲಿಯರ್ಸ್ 2021 ರಲ್ಲಿ ಎಲ್ಲಾ ರೀತಿಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ್ದಾರೆ. ಆದರೂ ಅವರಿಗೆ ಆರ್​ಸಿಬಿ ಬಗ್ಗೆ ವಿಶೇಷವಾದ ಅಭಿಮಾನವಿದೆ. ಹೀಗಾಗಿ ಅವರು ಈ ತಂಡವನ್ನು ಅವರು ಪದೇಪದೇ ಉಲ್ಲೇಖಿಸುತ್ತಾರೆ.

ಇದನ್ನೂ ಓದಿ : Mohammed Shami : ಐಸಿಸಿ ಪ್ರಶಸ್ತಿಗೆ ಮೊಹಮ್ಮದ್ ಶಮಿಯ ಹೆಸರು ನಾಮನಿರ್ದೇಶನ

ಐಪಿಎಲ್​​ನಲ್ಲಿ ಎಬಿ ಡಿವಿಲಿಯರ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದೊಂದಿಗೆ ಮತ್ತೆ ಒಂದಾಗುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಅದಕ್ಕೆ ಕಾಲ ಕೂಡಿ ಬಂದಿಲ್ಲ. ಅವರು ಆರ್​ಸಿಬಿಗೆ ಮಾರ್ಗದರ್ಶಕರಾಗಿ ಸೇರುತ್ತಾರೆ ಎಂಬ ವದಂತಿಗಳಿದ್ದವು. ಅದು ಸುಳ್ಳಾಯಿತು. ಎಬಿ ಡಿವಿಲಿಯರ್ಸ್ ಕಳೆದ ಋತುವಿನಲ್ಲಿ ಅಭಿಮಾನಿಗಳಿಗೆ ವಿದಾಯ ಹೇಳಲು ಬೆಂಗಳೂರಿಗೆ ಬಂದಿದ್ದರು. ಆದಾಗ್ಯೂ, ಅವರು ಮುಂದಿನ ದಿನಗಳಲ್ಲಿ ಆರ್​​ಸಿಬಿಗೆ ಸೇರಲು ಎದುರು ನೋಡುತ್ತಿದ್ದಾರೆ. ಆರ್​ಸಿಬಿ ನನ್ನ ಹೃದಯದಲ್ಲಿದೆ ಎಂದು ಹೇಳುವ ಮೂಲಕ ಅವರ ಈ ಮಾತಿಗೆ ಪುಷ್ಟಿ ಕೊಟ್ಟಿದ್ದಾರೆ.

“ನಾನು ಹಾಗೆ ಭಾವಿಸುತ್ತೇನೆ. ನನ್ನ ಹೃದಯವು ಆರ್​ಸಿಬಿಯೊಂದಿಗೆ ಇದೆ. ಅಲ್ಲಿ ಅನೇಕ ವರ್ಷ ಆಡಿದ್ದೇನೆ. ಬೆಂಗಳೂರಿನ ಅಭಿಮಾನಿಗಳೊಂದಿಗೆ ನನಗೆ ಉತ್ತಮ ಸಂಪರ್ಕವಿದೆ. ಅವರು ಅಪಾರ ಪ್ರೀತಿ ತೋರುತ್ತಾರೆ ಎಂದು ಎಬಿ ಡಿವಿಲಿಯರ್ಸ್ ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

Lockie Ferguson: 4 ಓವರ್‌ ಎಸೆದು, ಒಂದೂ ರನ್‌ ಕೊಡದೆ 3 ವಿಕೆಟ್‌ ಕಿತ್ತ ಲಾಕಿ ಫರ್ಗ್ಯೂಸನ್;‌ ವಿಶ್ವದಾಖಲೆ

Lockie Ferguson: ಟಿ-20 ವಿಶ್ವಕಪ್‌ ಟೂರ್ನಿಯ ಗ್ರೂಪ್‌ ಹಂತದ ಕೊನೆಯ ಪಂದ್ಯದಲ್ಲಿ ಟಾಸ್‌ ಗೆದ್ದ ಕೇನ್‌ ವಿಲಿಯಮ್ಸನ್‌ ಅವರು ಬೌಲಿಂಗ್‌ ಆಯ್ದುಕೊಂಡರು. ಪಪುವಾ ನ್ಯೂಗಿನಿಯಾ ಇನ್ನಿಂಗ್ಸ್‌ನ ಐದನೇ ಓವರ್‌ ಎಸೆಯಲು ಲಾಕಿ ಫರ್ಗ್ಯೂಸನ್‌ ಕಣಕ್ಕಿಳಿದರು. ಮೊದಲ ಓವರ್‌ನ ಮೊದಲ ಎಸೆತದಲ್ಲಿಯೇ ಲಾಕಿ ಫರ್ಗ್ಯೂಸನ್‌ ಅವರು ನಾಯಕ ಅಸಾದ್‌ ವಾಲಾ ಅವರ ವಿಕೆಟ್‌ ಪಡೆದರು. ಅಲ್ಲಿಂದ ಹಿಂತಿರುಗಿ ನೋಡದ ಲಾಕಿ ಫರ್ಗ್ಯೂಸನ್‌, ನಾಲ್ಕೂ ಓವರ್‌ ಮೇಡನ್‌ ಮಾಡುವ ಜತೆಗೆ ಮೂರು ವಿಕೆಟ್‌ ಕಬಳಿಸಿದರು.

VISTARANEWS.COM


on

Lockie Ferguson
Koo

ಟರೌಬಾ: ಟಿ-20 ಪಂದ್ಯಗಳಲ್ಲಿ ಯಾವುದೇ ಬೌಲರ್‌ ಒಂದು ಓವರ್‌ಗೆ 8ಕ್ಕಿಂತ ಕಡಿಮೆ ರನ್‌ಗಳನ್ನು ನೀಡಿದರೆ, ಆತನನ್ನೇ ಉತ್ತಮ ಬೌಲರ್‌ ಎಂದು ಕರೆಯಲಾಗುತ್ತದೆ. ಆದರೆ, ನ್ಯೂಜಿಲ್ಯಾಂಡ್‌ ಕ್ರಿಕೆಟ್‌ ತಂಡದ ವೇಗಿ ಲಾಕಿ ಫರ್ಗ್ಯೂಸನ್‌ (Lockie Ferguson) ಅವರು 4 ಓವರ್‌ಗಳನ್ನು ಎಸೆದು, ನಾಲ್ಕೂ ಓವರ್‌ಗಳನ್ನು ಮೇಡನ್‌ ಮಾಡಿದ್ದಲ್ಲದೆ 3 ವಿಕೆಟ್‌ಗಳನ್ನು ಪಡೆಯುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ. ಟಿ-20 ವಿಶ್ವಕಪ್‌ (T20 World Cup 2024) ಇತಿಹಾಸದಲ್ಲಿಯೇ ನಾಲ್ಕು ಓವರ್‌ ಎಸೆದು, ಒಂದು ರನ್‌ ಕೊಡದ ಅಥವಾ ಮೋಸ್ಟ್‌ ಎಕನಾಮಿಕಲ್‌ ಸ್ಪೆಲ್‌ ಮಾಡಿದ ಬೌಲರ್‌ ಎನಿಸಿದ್ದಾರೆ.

ಟಿ-20 ವಿಶ್ವಕಪ್‌ ಟೂರ್ನಿಯ ಗ್ರೂಪ್‌ ಹಂತದ ಕೊನೆಯ ಪಂದ್ಯದಲ್ಲಿ ಟಾಸ್‌ ಗೆದ್ದ ಕೇನ್‌ ವಿಲಿಯಮ್ಸನ್‌ ಅವರು ಬೌಲಿಂಗ್‌ ಆಯ್ದುಕೊಂಡರು. ಪಪುವಾ ನ್ಯೂಗಿನಿಯಾ ಇನ್ನಿಂಗ್ಸ್‌ನ ಐದನೇ ಓವರ್‌ ಎಸೆಯಲು ಲಾಕಿ ಫರ್ಗ್ಯೂಸನ್‌ ಕಣಕ್ಕಿಳಿದರು. ಮೊದಲ ಓವರ್‌ನ ಮೊದಲ ಎಸೆತದಲ್ಲಿಯೇ ಲಾಕಿ ಫರ್ಗ್ಯೂಸನ್‌ ಅವರು ನಾಯಕ ಅಸಾದ್‌ ವಾಲಾ ಅವರ ವಿಕೆಟ್‌ ಕಬಳಿಸಿದರು. ಇದೇ ಆತ್ಮವಿಶ್ವಾಸದಲ್ಲಿಯೇ ಲಾಕಿ ಫರ್ಗ್ಯೂಸನ್‌ ಅವರು ನಾಲ್ಕೂ ಓವರ್‌ಗಳನ್ನು ಎಸೆದರು. ನಾಲ್ಕಕ್ಕೆ ನಾಲ್ಕೂ ಮೇಡನ್‌ ಮಾಡಿದ ಅವರು, ಅಸಾದ್‌ ವಾಲಾ ಜತೆಗೆ ಚಾರ್ಲ್ಸ್‌ ಅಮಿತಿ ಹಾಗೂ ಚಾಡ್‌ ಸೋಪರ್‌ ಅವರ ವಿಕೆಟ್‌ ಪಡೆದರು.

ಲಾಕಿ ಫರ್ಗ್ಯೂಸನ್‌ ಸೇರಿ ನ್ಯೂಜಿಲ್ಯಾಂಡ್‌ ಬೌಲರ್‌ಗಳ ಎದುರು ಮಂಡಿಯೂರಿದ ಪಪುವಾ ನ್ಯೂಗಿನಿಯಾ ತಂಡವು 19.4 ಓವರ್‌ಗಳಲ್ಲಿ 78 ರನ್‌ಗಳಿಗೆ ಸರ್ವಪತನ ಕಂಡಿತು. ಟಿಮ್‌ ಸೌಥಿ, ಟ್ರೆಂಟ್‌ ಬೌಲ್ಟ್‌ ಹಾಗೂ ಐಶ್‌ ಸೋಧಿ ಅವರು ಕೂಡ ತಲಾ ಎರಡು ವಿಕೆಟ್‌ ಪಡೆದು ಎದುರಾಳಿ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದರು. ಟಿ-20 ವಿಶ್ವಕಪ್‌ ಇತಿಹಾಸದಲ್ಲಿಯೇ ನಾಲ್ಕೂ ಓವರ್‌ಗಳನ್ನು ಮೇಡನ್‌ ಮಾಡಿದ ಮೊದಲ ಬೌಲರ್‌ ಎಂಬ ಖ್ಯಾತಿಗೆ ಲಾಕಿ ಫರ್ಗ್ಯೂಸನ್‌ ಪಾತ್ರರಾದರು. ಇನ್ನು ಟಿ-20 ಇತಿಹಾಸದಲ್ಲಿ ನಾಲ್ಕೂ ಓವರ್‌ ಮೇಡನ್‌ ಮಾಡಿದ ಎರಡನೇ ಬೌಲರ್‌ ಎನಿಸಿದರು. ಇದಕ್ಕೂ ಮೊದಲು ಅಂದರೆ 2021ರಲ್ಲಿ ಕೆನಡಾದ ಸಾದ್‌ ಬಿನ್‌ ಜಫರ್‌ ಅವರು ಪನಾಮ ವಿರುದ್ಧ ನಡೆದ ಟಿ-20 ಪಂದ್ಯದಲ್ಲಿ ಎಲ್ಲ ನಾಲ್ಕೂ ಓವರ್‌ಗಳನ್ನು ಮೇಡನ್‌ ಮಾಡಿದ್ದರು.

ಪಪುವಾ ನ್ಯೂಗಿನಿಯಾ ನೀಡಿದ ಅಲ್ಪ ಮೊತ್ತವನ್ನು ಬೆನ್ನತ್ತಿದ ನ್ಯೂಜಿಲ್ಯಾಂಡ್‌ ತಂಡವು 12.2 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು ಸುಲಭವಾಗಿ ಗೆಲುವಿನ ದಡ ಸೇರಿತು. ಇದರೊಂದಿಗೆ ಗ್ರೂಪ್‌ ಹಂತದ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದು ಟೂರ್ನಿಯಿಂದ ಹೊರ ನಡೆಯಿತು. ನ್ಯೂಜಿಲ್ಯಾಂಡ್‌ ತಂಡ ಇರುವ ಸಿ ಗ್ರೂಪ್‌ನಿಂದ ಅಫಘಾನಿಸ್ತಾನ ಹಾಗೂ ವೆಸ್ಟ್‌ ಇಂಡೀಸ್‌ ತಂಡಗಳು ಸೂಪರ್‌ 8ರ ಘಟ್ಟಕ್ಕೆ ತಲುಪಿವೆ. ಅಂದಹಾಗೆ, ಲಾಕಿ ಫರ್ಗ್ಯೂಸನ್‌ ಅವರು ಆರ್‌ಸಿಬಿಯ ಪ್ರಮುಖ ಬೌಲರ್‌ ಕೂಡ ಆಗಿದ್ದಾರೆ.

ಇದನ್ನೂ ಓದಿ: T20 World Cup Super 8 Stage: ಸೂಪರ್​-8 ಪಂದ್ಯಕ್ಕೂ ಮಳೆ ಭೀತಿ; ಭಾರತ-ಆಸೀಸ್​ ಪಂದ್ಯ ಅನುಮಾನ!

Continue Reading

ಕ್ರೀಡೆ

T20 World Cup Super 8 Stage: ಸೂಪರ್​-8 ಪಂದ್ಯಕ್ಕೂ ಮಳೆ ಭೀತಿ; ಭಾರತ-ಆಸೀಸ್​ ಪಂದ್ಯ ಅನುಮಾನ!

T20 World Cup Super 8 Stage: ಸೂಪರ್ 8ನಲ್ಲಿ(T20 World Cup 2024) ಪ್ರತಿ ತಂಡಗಳು ತನ್ನ ಗುಂಪಿನ ಉಳಿದ ಮೂರು ತಂಡಗಳ ವಿರುದ್ದ ಆಡಲಿದೆ. ಪ್ರತಿ ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಸೆಮಿ ಫೈನಲ್​ ಪ್ರವೇಶಿಸಿದೆ.

VISTARANEWS.COM


on

T20 World Cup Super 8
Koo

ಸೇಂಟ್ ಲೂಸಿಯಾ​: ಟಿ20 ವಿಶ್ವಕಪ್​ನ(T20 World Cup) ಹಲವು ಲೀಗ್​ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿ ಪಂದ್ಯಗಳು ರದ್ದುಗೊಂಡಿದ್ದವು. ಸೂಪರ್​-8 ಹಂತಕ್ಕೇರುವಲ್ಲಿ(T20 World Cup Super 8 Stage) ಕೆಲ ತಂಡಕ್ಕೆ ಮಳೆ ಭಾರೀ ಹಿನ್ನಡೆ ಉಂಟುಮಾಡಿತ್ತು. ಇದೀಗ ಸೂಪರ್​-8 ಹಂತದ ಪಂದ್ಯಗಳಿಗೂ(T20 World Cup Super 8) ಮಳೆ ಭೀತಿ ಎದುರಾಗಿದೆ.

ಜೂನ್​ 19ರಂದು ನಾರ್ತ್​ಸೌಂಡ್​ನಲ್ಲಿ ನಡೆಯಲಿರುವ ಸೂಪರ್​ 8ನ ಮೊದಲ ಪಂದ್ಯದಲ್ಲಿ ಆತಿಥೇಯ ಅಮೆರಿಕ ಮತ್ತು ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಲಿವೆ. ಗ್ರಾಸ್​ ಐಲೆಟ್​, ಬ್ರಿಜ್​ಟೌನ್​, ಸೇಂಟ್​ ವಿನ್ಸೆಂಟ್​ನಲ್ಲಿ ಸೂಪರ್​-8ನ ಇತರ ಪಂದ್ಯಗಳು ನಿಗದಿಯಾಗಿವೆ. ಈ ಪೈಕಿ ಬಹುತೇಕ ಎಲ್ಲ ಸ್ಥಳಗಳಲ್ಲಿ ಮಳೆ ಭೀತಿ ಇದೆ.

ಭಾರತ-ಆಸೀಸ್​ ಪಂದ್ಯಕ್ಕೂ ಮಳೆ ಭೀತಿ


ಜೂನ್​ 24ರಂದು ಗ್ರಾಸ್​ ಐಲೆಟ್​ನಲ್ಲಿ ನಡೆಯಲಿರುವ ಭಾರತ-ಆಸೀಸ್​(Australia vs India) ನಡುವಿನ ಹೈವೋಲ್ಟೇಜ್​ ಪಂದ್ಯಕ್ಕೆ ಭಾರೀ ಮಳೆಯಾಗಿ ಪಂದ್ಯ ರದ್ದಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ. ಒಂದೊಮ್ಮೆ ಮಳೆಯಿಂದ ಪಂದ್ಯ ರದ್ದಾದರೆ ಇತ್ತಂಡಗಳಿಗೂ ತಲಾ ಒಂದು ಅಂಕ ನೀಡಲಾಗುತ್ತದೆ. ಹೀಗಾಗಿ ಭಾರತ ಅಫಘಾನಿಸ್ತಾನ ಮತ್ತು ಬಾಂಗ್ಲಾ ಎದುರಿನ ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದು ಸೆಮಿಫೈನಲ್​ ಟಿಕೆಟ್​ ಖಾತ್ರಿಗೊಳಿಸಬೇಕು. ಜೂನ್​ 29ರಂದು ಬ್ರಿಜ್​ಟೌನ್​ನಲ್ಲಿ ನಿಗದಿಯಾಗಿರುವ ಫೈನಲ್​ ಪಂದ್ಯವೂ ಮಳೆ ಭೀತಿ ಎದುರಾಗಿದೆ.

ಇದನ್ನೂ ಓದಿ Team India: ಬಾರ್ಬಡೋಸ್​ನಲ್ಲಿ ಬೀಚ್​ ವಾಲಿಬಾಲ್​ ಆಡಿದ ಟೀಮ್​ ಇಂಡಿಯಾ; ವಿಡಿಯೊ ವೈರಲ್​


ಸೂಪರ್ 8ನಲ್ಲಿ(T20 World Cup 2024) ಪ್ರತಿ ತಂಡಗಳು ತನ್ನ ಗುಂಪಿನ ಉಳಿದ ಮೂರು ತಂಡಗಳ ವಿರುದ್ದ ಆಡಲಿದೆ. ಪ್ರತಿ ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಸೆಮಿ ಫೈನಲ್​ ಪ್ರವೇಶಿಸಿದೆ.

ಗುಂಪು 1: ಭಾರತ, ಆಸ್ಟ್ರೇಲಿಯಾ, ಅಫಘಾನಿಸ್ತಾನ, ಬಾಂಗ್ಲಾದೇಶ

ಗುಂಪು 2: ಯುಎಸ್ಎ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ

ಎರಡು ಸೆಮಿಫೈನಲ್ ಮತ್ತು ಫೈನಲ್‌ ಪಂದ್ಯಕ್ಕೆ ಮೀಸಲು ದಿನಗಳು ಜಾರಿಯಲ್ಲಿವೆ. ಒಂದೊಮ್ಮೆ ಮಳೆಯಿಂದ ಮೀಸಲು ದಿನವೂ ಸೆಮಿಫೈನಲ್​ ಪಂದ್ಯ ನಡೆಯದಿದ್ದರೆ ಆಗ ರನ್​ ರೇಟ್ ಆಧಾರದಲ್ಲಿ ಮುಂದಿರುವ ತಂಡ ನೇರವಾಗಿ ಫೈನಲ್​ ಪ್ರವೇಶ ಪಡೆಯಲಿದೆ. ಫೈನಲ್​ನ ಮೀಸಲು ದಿನವೂ ರದ್ದುಗೊಂಡರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ತಂಡವನ್ನು ವಿಜಯೀ ಎಂದು ನಿರ್ಧರಿಸಲಾಗುತ್ತದೆ.

ಬೌಂಡರಿ ಕೌಂಟ್​ ಇಲ್ಲ

2019 ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಸೂಪರ್​ ಓವರ್​ ಟೈಗೊಂಡಾಗ ಫಲಿತಾಂಶಕ್ಕೆ ಬೌಂಡರಿ ಲೆಕ್ಕಾಚಾರವನ್ನು ಮಾಡಲಾಗಿತ್ತು. ಇದು ಭಾರಿ ವಿವಾದಕ್ಕೂ ಕಾರಣವಾಗಿತ್ತು. ಹೀಗಾಗಿ ಈ ಬಾರಿಯ ಟಿ20 ವಿಶ್ವಕಪ್​ ಫೈನಲ್​ ಪಂದ್ಯ ಟೈ ಆದರೆ ಫಲಿತಾಂಶ ಬರುವ ತನಕ ಸೂಪರ್​ ಓವರ್​ ಆಡಿಸಲಾಗುತ್ತದೆ.

ಭಾರತದ ಸೂಪರ್​-8 ಪಂದ್ಯದ ವೇಳಾಪಟ್ಟಿ

ಎದುರಾಳಿದಿನಾಂಕತಾಣಪ್ರಸಾರ
ಭಾರತ-ಅಫಘಾನಿಸ್ತಾನಜೂನ್​ 20ಬಾರ್ಬಡೋಸ್ರಾತ್ರಿ 8ಕ್ಕೆ
ಭಾರತ-ಬಾಂಗ್ಲಾದೇಶಜೂನ್​ 22ಆಂಟಿಗುವಾರಾತ್ರಿ 8ಕ್ಕೆ
ಭಾರತ-ಆಸ್ಟ್ರೇಲಿಯಾಜೂನ್​ 24ಸೇಂಟ್ ಲೂಸಿಯಾರಾತ್ರಿ 8ಕ್ಕೆ
Continue Reading

ಕ್ರೀಡೆ

Team India: ಬಾರ್ಬಡೋಸ್​ನಲ್ಲಿ ಬೀಚ್​ ವಾಲಿಬಾಲ್​ ಆಡಿದ ಟೀಮ್​ ಇಂಡಿಯಾ; ವಿಡಿಯೊ ವೈರಲ್​

Team India: ಬಾರ್ಬಡೋಸ್(Barbados) ಬೀಚ್​ನಲ್ಲಿ ವಿರಾಟ್​ ಕೊಹ್ಲಿ, ರಿಂಕು ಸಿಂಗ್​, ಯಶಸ್ವಿ ಜೈಸ್ವಾಲ್, ಚಹಲ್​, ಸಂಜು ಸ್ಯಾಮ್ಸನ್​, ಶಿವಂ ದುಬೆ, ಹಾರ್ದಿಕ್​ ಪಾಂಡ್ಯ ಸೇರಿ ಕೆಲ ಆಟಗಾರರು ಬೀಚ್​ ವಾಲಿಬಾಲ್​ ಆಡಿ ಎಂಜಾಯ್​ ಮಾಡಿದ್ದಾರೆ.

VISTARANEWS.COM


on

Team India
Koo

ಬಾರ್ಬಡೋಸ್: ಸೂಪರ್​-8 ಪಂದ್ಯವನ್ನಾಡಲು ವೆಸ್ಟ್ ಇಂಡೀಸ್​ ತಲುಪಿರುವ ಟೀಮ್​ ಇಂಡಿಯಾದ(Team India) ಆಟಗಾರರು ಪಂದ್ಯಕ್ಕೂ ಮುನ್ನ ಇಲ್ಲಿನ ಪ್ರಸಿದ್ಧ ಬಾರ್ಬಡೋಸ್(Barbados) ಬೀಚ್​ನಲ್ಲಿ ವಾಲಿಬಾಲ್​(Beach Volleyball) ಆಡಿ ಎಂಜಾಯ್​ ಮಾಡಿದ್ದಾರೆ. 2 ತಂಡಗಳಾಗಿ ಆಟಗಾರರು ಮತ್ತು ಕೋಚಿಂಗ್​ ಸಿಬ್ಬಂದಿಗಳು ಶರ್ಟ್​ ಲೆಸ್​ ಆಗಿ ವಾಲಿಬಾಲ್​ ಆಡಿರುವ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದೆ.

ವಿರಾಟ್​ ಕೊಹ್ಲಿ, ರಿಂಕು ಸಿಂಗ್​, ಯಶಸ್ವಿ ಜೈಸ್ವಾಲ್ ಸೇರಿ ಕೆಲ ಆಟಗಾರರು ಜತೆಯಾಗಿ ಆಡಿದರೆ, ಮತ್ತೊಂದು ತಂಡದಲ್ಲಿ ಚಹಲ್​, ಸಂಜು ಸ್ಯಾಮ್ಸನ್​, ಶಿವಂ ದುಬೆ, ಹಾರ್ದಿಕ್​ ಪಾಂಡ್ಯ ಆಡಿದ್ದಾರೆ. ಎಲ್ಲರು ಮೋಜು ಮಸ್ತಿ ಮಾಡಿ ಆಡುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ.


ಲೀಗ್ ಹಂತದಲ್ಲಿ ಆಡಿದ ಮೂರು ಪಂದ್ಯಗಳನ್ನು ಗೆದ್ದು ಅಜೇಯವಾಗಿರುವ ಭಾರತ ಸೂಪರ್-8ನಲ್ಲಿ ತನ್ನ ಮೊದಲ ಪಂದ್ಯವನ್ನು ಅಫಘಾನಿಸ್ತಾನ ವಿರುದ್ಧ ಆಡಿಲಿದೆ. ಕೆನಡಾ ವಿರುದ್ಧದ ಅಂತಿಮ ಲೀಗ್​ ಪಂದ್ಯ ಮಳೆಯಿಂದ ರದ್ದಾಗಿತ್ತು. ಹೀಗಾಗಿ ಭಾರತಕ್ಕೆ ಮೂರು ಲೀಗ್​ ಪಂದ್ಯವನ್ನಾಡುವ ಅವಕಾಶ ಮಾತ್ರ ಲಭಿಸಿತ್ತು. ವಿರಾಟ್​ ಕೊಹ್ಲಿ ಆಡಿದ ಮೂರು ಪಂದ್ಯಗಳಲ್ಲಿಯೂ ಒಂದಂಕಿಗೆ ಸೀಮಿತರಾಗಿ ಘೋರ ಬ್ಯಾಟಿಂಗ್​ ವೈಫಲ್ಯ ಕಂಡಿದ್ದರು. ಇದರಲ್ಲೊಂದು ಗೋಲ್ಡನ್​ ಡಕ್​ ಕೂಡ ಒಳಗೊಂಡಿದೆ. ಮಹತ್ವದ ಸೂಪರ್​-8 ಸುತ್ತಿನ ಪಂದ್ಯದಲ್ಲಾದರೂ ಕೊಹ್ಲಿ ನಿರೀಕ್ಷಿತ ಬ್ಯಾಟಿಂಗ್​ ನಡೆಸುವ ಮೂಲಕ ತಂಡಕ್ಕೆ ಆಸರೆಯಾಗಬೇಕಿದೆ.

ಇದನ್ನೂ ಓದಿ Smriti Mandhana: ಶತಕ ಬಾರಿಸಿ ವಿಶೇಷ ದಾಖಲೆ ಬರೆದ ಸ್ಮೃತಿ ಮಂಧಾನ

ಸೂಪರ್​ 8 ಹಂತದ ಮೊದಲ ಪಂದ್ಯ ಜೂನ್​ 19ರಿಂದ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಅಮೆರಿಕ ಮತ್ತು ದಕ್ಷಿಣ ಆಫ್ರಿಕಾ ಸೆಣಸಾಟ ನಡೆಸಲಿವೆ. ಭಾರತ ತನ್ನ ಮೊದಲ ಪಂದ್ಯವನ್ನು ಅಫಘಾನಿಸ್ತಾನ ವಿರುದ್ಧ ಆಡಲಿದೆ. ಈ ಪಂದ್ಯ ಜೂನ್​ 20ರಂದು ಬಾರ್ಬಡೋಸ್​ನಲ್ಲಿ ನಡೆಯಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಹೈವೋಲ್ಟೇಜ್​ ಪಂದ್ಯ ಜೂನ್​ 24 ಭಾನುವಾರದಂದು ನಡೆಯಲಿದೆ. ಟೀಮ್​ ಇಂಡಿಯಾದ ಎಲ್ಲ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಪ್ರಸಾರಗೊಳ್ಳಲಿದೆ.

ಭಾರತದ ಸೂಪರ್​-8 ಪಂದ್ಯದ ವೇಳಾಪಟ್ಟಿ

ಎದುರಾಳಿದಿನಾಂಕತಾಣಪ್ರಸಾರ
ಭಾರತ-ಅಫಘಾನಿಸ್ತಾನಜೂನ್​ 20ಬಾರ್ಬಡೋಸ್ರಾತ್ರಿ 8ಕ್ಕೆ
ಭಾರತ-ಬಾಂಗ್ಲಾದೇಶಜೂನ್​ 22ಆಂಟಿಗುವಾರಾತ್ರಿ 8ಕ್ಕೆ
ಭಾರತ-ಆಸ್ಟ್ರೇಲಿಯಾಜೂನ್​ 24ಸೇಂಟ್ ಲೂಸಿಯಾರಾತ್ರಿ 8ಕ್ಕೆ

ಕೊಹ್ಲಿ ವೈಫಲ್ಯಕ್ಕೆ ನಿಧಾನಗತಿ ಪಿಚ್ ಕಾರಣ!


ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸುವ ಮುನ್ನ ಅಮೆರಿಕ ಮತ್ತು ವಿಂಡೀಸ್​ ಪಿಚ್​ಗಳು ನಿಧಾನಗತಿಯದ್ದಾಗಿದ್ದು, ಕೊಹ್ಲಿಗೆ ಇದು ಸೂಕ್ತವಾಗಿಲ್ಲ ಹೀಗಾಗಿ ಅವರನ್ನು ಆಯ್ಕೆ ಮಾಡುವುದು ಅನುಮಾನ ಎನ್ನಲಾಗಿತ್ತು. ಆದರೆ, ಸ್ಟಾರ್​ ಆಟಗಾರನನ್ನು ಕೈ ಬಿಟ್ಟರೆ ಬಿಸಿಸಿಐ ವಿರುದ್ಧ ಭಾರೀ ಟೀಕೆ ಮತ್ತು ವಿರೋಧ ವ್ಯಕ್ತವಾಗುವುದು ಎನ್ನುವ ನಿಟ್ಟಿನಲ್ಲಿ ಅವರಿಗೆ ಅವಕಾಶ ನೀಡಲಾಗಿತ್ತು. ಅಂದು ಊಹೆ ಮಾಡಿದಂತೆ ಇದೀಗ ಕೊಹ್ಲಿ ನಿಧಾನಗತಿಯ ಪಿಚ್​ನಲ್ಲಿ ರನ್​ ಗಳಿಸಲು ಪರದಾಡುತ್ತಿದ್ದಾರೆ.

Continue Reading

ಕ್ರೀಡೆ

MS Dhoni: ಕಾರಿನಲ್ಲಿ ಬರುತ್ತಿದ್ದ ಧೋನಿಯನ್ನು ತಡೆದು ನಿಲ್ಲಿಸಿ ಫೋಟೊ ತೆಗೆಸಿಕೊಂಡ ಅಭಿಮಾನಿ; ವಿಡಿಯೊ ವೈರಲ್​

MS Dhoni: ಕಳೆದ ವಾರವಷ್ಟೇ ಧೋನಿ ಅವರು ಪ್ಯಾರಿಸ್​ನ ಪ್ರವಾಸಿ ಸ್ಥಳವೊಂದಕ್ಕೆ ಭೇಟಿ ನೀಡಿದ ಸಂದರ್ಭ ಅವರ ಅಭಿಮಾನಿಯೊಬ್ಬ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದ. ಈ ಫೋಟೊ ಎಲ್ಲಡೆ ವೈರಲ್​ ಆಗಿತ್ತು. ಇದೀಗ ರಾಂಚಿಯಲ್ಲಿ ಅಭಿಮಾನಿಯೊಬ್ಬ ಕಾರಿನಲ್ಲಿ ಬರುತ್ತಿದ್ದ ಧೋನಿಯನ್ನು ನಿಲ್ಲಿಸಿ ಅವರ ಜತೆ ಫೋಟೊ ತೆಗಿಸಿಕೊಂಡಿದ್ದಾನೆ.

VISTARANEWS.COM


on

MS Dhoni
Koo

ರಾಂಚಿ: ಐಪಿಎಲ್​ ಟೂರ್ನಿ ಮುಗಿಸಿ ಪ್ಯಾರಿಸ್​ ಪ್ರವಾಸ ಮಾಡಿದ್ದ ಮಹೇಂದ್ರ ಸಿಂಗ್​ ಧೋನಿ(MS Dhoni) ಅವರು ಮತ್ತೆ ತವರಿಗೆ ವಾಪಸ್​ ಆಗಿದ್ದಾರೆ. ತವರಿಗೆ ಮರಳಿದ್ದೇ ತಡ ರಾಂಚಿಯಲ್ಲಿ ಧೋನಿ ತಮ್ಮ ಐಶಾರಾಮಿ ಮರ್ಸಿಡಿಸ್‌ ಬೆಂಜ್‌ ಕಾರಿನಲ್ಲಿ ಸುತ್ತಾಡಿದ್ದಾರೆ. ಈ ವಿಡಿಯೊವನ್ನು ಧೋನಿ ಅವರ ಅಭಿಮಾನಿಯೊಬ್ಬ(ms dhoni fan) ಮೊಬೈಲ್​ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಇದೇ ವೇಳೆ ಧೋನಿ ಜತೆಗೆ ಈ ಅಭಿಮಾನಿ ಫೋಟೊ ಕೂಡ ತೆಗೆಸಿಕೊಂಡಿದ್ದಾರೆ.


ಕಳೆದ ವಾರವಷ್ಟೇ ಧೋನಿ ಅವರು ಪ್ಯಾರಿಸ್​ನ ಪ್ರವಾಸಿ ಸ್ಥಳವೊಂದಕ್ಕೆ ಭೇಟಿ ನೀಡಿದ ಸಂದರ್ಭ ಅವರ ಅಭಿಮಾನಿಯೊಬ್ಬ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದ. ಈ ಫೋಟೊ ಎಲ್ಲಡೆ ವೈರಲ್​ ಆಗಿತ್ತು. ಇದೀಗ ರಾಂಚಿಯಲ್ಲಿ ಅಭಿಮಾನಿಯೊಬ್ಬ ಕಾರಿನಲ್ಲಿ ಬರುತ್ತಿದ್ದ ಧೋನಿಯನ್ನು ನಿಲ್ಲಿಸಿ ಅವರ ಜತೆ ಫೋಟೊ ತೆಗಿಸಿಕೊಂಡಿದ್ದಾನೆ. ಈ ಫೊಟೊ ಕಂಡ ಧೋನಿ ಅಭಿಮಾನಿಗಳು ನೀವು ನಿಜವಾಗಿಯೂ ಅದೃಷ್ಟಶಾಲಿ ಎಂದು ಕಮೆಂಟ್‌ ಮಾಡಿದ್ದಾರೆ.

ಧೋನಿ(MS Dhoni) ಯಾವಾಗಲೂ ತಮ್ಮ ವ್ಯಕ್ತಿತ್ವದಿಂದ ಅವರ ಅಭಿಮಾನಿಗಳ ಹೃದಯವನ್ನು ಗೆಲ್ಲುತ್ತಾರೆ. ಹೀಗಾಗಿ ಧೋನಿ ಎಂದರೆ ಅಭಿಮಾನಿಗಳಿಗೊಂದು ಎಮೋಷನ್ (ಭಾವನೆ). ಅವರು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು(MS Dhoni Fan) ಹೊಂದಿದ್ದಾರೆ. ಅವರ ಭೇಟಿಗಾಗಿ ಅಭಿಮಾನಿಗಳು ಚಾತಕ ಪಕ್ಷಿಗಳಂತೆ ಕಾದು ಕುಳಿತಿರುತ್ತಾರೆ. ಕೆಲ ಅಭಿಮಾನಿಗಳು ಧೋನಿಯನ್ನು ಭೇಟಿಯಾಗಿ ಅವರಿಗೆ ವಿಶೇಷ ಉಡುಗೊರೆಯನ್ನು ನೀಡುತ್ತಾರೆ. 

ಇದನ್ನೂ ಓದಿ MS Dhoni Fan: ಪ್ಯಾರಿಸ್​ನಲ್ಲಿ ಧೋನಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಅಭಿಮಾನಿ

ಧೋನಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿ ಕೆಳವು ವರ್ಷಗಳಾಗಿವೆ. ಕೇವಲ ಐಪಿಎಲ್​ ಟೂರ್ನಿಯಲ್ಲಿ(IPL 2024) ಮಾತ್ರ ಆಡುತ್ತಿದ್ದಾರೆ. ಈ ಆವೃತ್ತಿಯಲ್ಲಿ ಧೋನಿ ಅವರು ಐಪಿಎಲ್​ಗೆ ವಿದಾಯ ಹೇಳಲಿದ್ದಾರೆ ಎನ್ನಲಾಗಿತ್ತು. ಆದರೆ ಧೋನಿ ಇದುವರೆಗೆ ತಮ್ಮ ನಿವೃತ್ತಿ ಪ್ರಕಟಿಸಿಲ್ಲ. ಮುಂದಿನ ಬಾರಿಯೂ ಅವರು ಆಡಲಿದ್ದಾರೆ ಎಂದು ಫ್ರಾಂಚೈಸಿ ಮೂಲಗಳು ಮಾಹಿತಿ ನೀಡಿದೆ.

ಆರ್​ಸಿಬಿ ವಿರುದ್ಧ ಸೋಲುವ ಮೂಲಕ ಚೆನ್ನೈ ಸೂಪರ್​ ಕಿಂಗ್ಸ್​(CSK) ತಂಡ 17ನೇ ಆವೃತ್ತಿಯ ಐಪಿಎಲ್​ನಿಂದ ಹೊರಬಿದ್ದಿತ್ತು. ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಚೆನ್ನೈ 27 ರನ್​ಗಳ ಅಂತರದಿಂದ ಸೋಲು ಕಂಡಿತ್ತು. ಈ ಸೋಲಿನ ಮರು ದಿನವೇ ಧೋನಿ(MS Dhoni) ತಮ್ಮ ತವರಾದ ರಾಂಚಿಗೆ ಮರಳಿದ್ದರು. ತವರಿನಲ್ಲಿ ಬೈಕ್​ ರೈಡಿಂಗ್​ ಮಾಡಿದ್ದರು. ಅವರು ಬೈಕ್​ನಲ್ಲಿ ಸುತ್ತಾಡಿಕೊಂಡು ವಾಪಸ್​ ಮನೆಗೆ ಬರುತ್ತಿರುವ ವಿಡಿಯೊ ವೈರಲ್​ ಆಗಿತ್ತು.

ಧೋನಿ ತಮ್ಮ ಬೈಕ್ ಮತ್ತು ಕಾರ್​ಗಳನ್ನು ಇರಿಸಲು ತಮ್ಮ ಮನೆಯ ಪಕ್ಕದಲ್ಲಿ ದೊಡ್ಡ ಕಟ್ಟಡವನ್ನೇ ಹೊಂದಿದ್ದಾರೆ. ಕೆಳವು ದಿನಗಳ ಹಿಂದೆ ವೆಂಕಟೇಶ್ ಪ್ರಸಾದ್ ಮತ್ತು ಸುನಿಲ್ ಜೋಶಿ ಅವರು ಧೋನಿಯ ರಾಂಚಿಯಲ್ಲಿರುವ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಧೋನಿ ಫಾರ್ಮ್ ಹೌಸ್​ನಲ್ಲಿರುವ ಬೈಕ್​(ms dhoni bike collection) ಮತ್ತು ಕಾರುಗಳ ವಿಡಿಯೊವನ್ನು ಹಂಚಿಕೊಂಡಿದ್ದರು. ಇದನ್ನು ಕಂಡ ಅನೇಕರು ಅಬ್ಬಾ… ಎಂದು ಆಶ್ಚರ್ಯವಾಗಿದ್ದರು. ಈ ಫಾರ್ಮ್​ಹೌಸ್​ನ ವಿಡಿಯೊ ವೈರಲ್​ ಆಗಿತ್ತು.

Continue Reading
Advertisement
pattanagere shed actor darshan renuka swamy murder
ಕ್ರೈಂ7 mins ago

Actor Darshan: ಆ ಭೀಕರ ಶೆಡ್‌ನಲ್ಲಿ ಇನ್ನೂ ಹಲವರ ರಕ್ತದ ಕಲೆ ಪತ್ತೆ! ಏನ್‌ ನಡೆದಿತ್ತು ಇಲ್ಲಿ?

Beer Side Effect
ಆರೋಗ್ಯ10 mins ago

Beer Side Effect: ಬಿಯರ್‌ ಕುಡಿದರೆ ತೂಕ ಹೆಚ್ಚುತ್ತದೆ ಎನ್ನುವುದು ನಿಜವೇ?

Nuclear Weapon
ದೇಶ16 mins ago

Nuclear Weapon: ಭಾರತದಲ್ಲಿದೆ ಪಾಕಿಸ್ತಾನಕ್ಕಿಂತ ಹೆಚ್ಚಿನ ಪರಮಾಣು ಶಸ್ತ್ರಾಸ್ತ್ರ; ಹೀಗಿದೆ ಹೊಸ ಅಂಕಿ-ಅಂಶ

Neeraj Chopra
ಕ್ರೀಡೆ21 mins ago

Neeraj Chopra: ಇಂದು ಪಾವೊ ನೂರ್ಮಿ ಗೇಮ್ಸ್​ನಲ್ಲಿ ನೀರಜ್ ಚೋಪ್ರಾ ಸ್ಪರ್ಧೆ

Euro 2024
ಕ್ರೀಡೆ50 mins ago

Euro 2024: ಉಕ್ರೇನ್​ಗೆ ಆಘಾತವಿಕ್ಕಿದ ರೊಮೇನಿಯಾ; 3-0 ಗೋಲ್​ ಅಂತರದ ಗೆಲುವು

actor darshan yashas surya
ಪ್ರಮುಖ ಸುದ್ದಿ51 mins ago

Actor Darshan: ಹಾಸ್ಯನಟ ಚಿಕ್ಕಣ್ಣ ಬೆನ್ನಲ್ಲೇ ನಟ ಯಶಸ್‌ ಸೂರ್ಯಗೂ ನೋಟೀಸ್‌, ವಿಚಾರಣೆ

Leader of the Opposition
ರಾಜಕೀಯ1 hour ago

Opposition Leader: 10 ವರ್ಷ ಬಳಿಕ ಲೋಕಸಭೆಯಲ್ಲಿ ವಿರೋಧಪಕ್ಷ ನಾಯಕ! ಇವರಿಗೆ ಸಿಗುವ ಸವಲತ್ತುಗಳೇನು?

Sonakshi Sinha
ಬಾಲಿವುಡ್1 hour ago

Sonakshi Sinha: ಮುಸ್ಲಿಂ ಹುಡುಗನ ಜತೆ ಮಗಳು ಸೋನಾಕ್ಷಿ ಮದುವೆ; ಶತ್ರುಘ್ನ ಸಿನ್ಹಾ ಮುನಿಸು?

Viral News
Latest2 hours ago

Viral News: ವಿದ್ಯಾರ್ಥಿಗಳಿಗೆ ಬಡಿಸಿದ್ದ ಊಟದ ತಟ್ಟೆಯಲ್ಲಿತ್ತು ಸತ್ತ ಹಾವು! ವಿಡಿಯೊ ನೋಡಿ

Pankaja Munde
ದೇಶ2 hours ago

ಚುನಾವಣೆಯಲ್ಲಿ ಸೋತಿದ್ದಕ್ಕೆ ನಾಲ್ವರ ಆತ್ಮಹತ್ಯೆ; ಸಾಂತ್ವನ ಹೇಳಿ ಕಣ್ಣೀರಿಟ್ಟ ಬಿಜೆಪಿ ನಾಯಕಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಮೈಸೂರು20 hours ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು21 hours ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ2 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ2 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ2 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ3 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ4 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು4 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು4 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ4 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

ಟ್ರೆಂಡಿಂಗ್‌