T20 Cricket : 10 ರನ್​ಗೆ ಆಲ್ಔಟ್​, 2 ಎಸೆತಗಳಲ್ಲಿ ಮ್ಯಾಚ್​ ಫಿನಿಶ್​; ಟಿ20 ಕ್ರಿಕೆಟ್​ನಲ್ಲಿ ಹೊಸ ದಾಖಲೆ - Vistara News

ಕ್ರಿಕೆಟ್

T20 Cricket : 10 ರನ್​ಗೆ ಆಲ್ಔಟ್​, 2 ಎಸೆತಗಳಲ್ಲಿ ಮ್ಯಾಚ್​ ಫಿನಿಶ್​; ಟಿ20 ಕ್ರಿಕೆಟ್​ನಲ್ಲಿ ಹೊಸ ದಾಖಲೆ

ಕೆಲವೇ ತಿಂಗಳ ಹಿಂದೆ ಸಿಡ್ನಿ ಥಂಡರ್ಸ್​​ ತಂಡ ಟಿ20 ಕ್ರಿಕೆಟ್ ಮಾದರಿಯಲ್ಲಿ (T20 Cricket)15 ರನ್​ಗಳಿಗೆ ಆಲ್​ಔಟ್​ ಅಗಿತ್ತು. ಆ ದಾಖಲೆ ಮುರಿದಿದೆ.

VISTARANEWS.COM


on

All out for 10 runs, match finished in 2 balls; A new record in T20 cricket
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಬೆಂಗಳೂರು: ಕ್ರಿಕೆಟ್​ ಪಂದ್ಯದ ಫಲಿತಾಂಶಗಳು ಎಂದಿಗೂ ಅನಿಶ್ಚಿತ. ಬಲಿಷ್ಠ ತಂಡವೂ ಕನಿಷ್ಠ ಮೊತ್ತಕ್ಕೆ ಕುಸಿದ ಹಲವಾರು ಉದಾಹರಣೆಗಳಿವೆ. ಅಂತೆಯೇ ಸಣ್ಣ ಪುಟ್ಟ ತಂಡಗಳು ರನ್​ ಶಿಖರವನ್ನೇ ನಿರ್ಮಿಸಿದ ಹಲವಾರು ಪ್ರಸಂಗಗಳಿವೆ. ಅಂತೆಯೇ ಸ್ಪೇನ್​ನಲ್ಲಿ ನಡೆದ ಟಿ20 ಕ್ರಿಕೆಟ್ ಮ್ಯಾಚ್ (T20 Cricket)​ ಒಂದು ಕನಿಷ್ಠ ಮೊತ್ತಕ್ಕೆ ಮುಕ್ತಾಯಗೊಳ್ಳುವ ಮೂಲಕ ವಿಶ್ವ ದಾಖಲೆ ಬರೆದಿದೆ. ಮೊದಲು ಬ್ಯಾಟ್​ ಮಾಡಿದ ತಂಡ 10 ರನ್​ಗೆ ಆಲ್​ಔಟ್​ ಆಗುವ ಮೂಲಕ ಕಳಪೆ ದಾಖಲೆ ಬರೆದರೆ, ಎದುರಾಳಿ ತಂಡ ಕೇವಲ 2 ಎಸೆತಗಳಲ್ಲಿ ಗುರಿ ಮುಟ್ಟಿ ವಿಶ್ವ ದಾಖಲೆ ಮಾಡಿದೆ. ಇದು ಆಧುನಿಕ ಕ್ರಿಕೆಟ್​ ಇತಿಹಾಸದಲ್ಲಿ ಹೊಸ ದಾಖಲೆ ಎನಿಸಿಕೊಂಡಿದೆ.

ಇಸ್ಲೆ ಆಫ್​ ಮ್ಯಾನ್​ ಟೂರ್​ ಆಫ್​ ಸ್ಪೇನ್​ ಟೂರ್ನಿಯಲ್ಲಿ ಇಂಥದ್ದೊಂದು ದಾಖಲೆ ಸೃಷ್ಟಿಯಾಗಿದೆ. ಅಚ್ಚರಿಯೆಂದರೆ ಅದು ಟೂರ್ನಿಯ ಫೈನಲ್​ ಪಂದ್ಯ ಕೂಡ. ಲಾ ಮಂಗಾ ಕ್ಲಬ್​ನ ಗ್ರೌಂಡ್​ನಲ್ಲಿ ಈ ಟೂರ್ನಿ ಆಯೋಜನೆಗೊಂಡಿತ್ತು. ಇಸ್ಲೆ ಆಫ್​ ಮ್ಯಾನ್​ ಮತ್ತು ಕ್ರಿಸ್ಟಿಯನ್​ ಮುನೋಜ್ ಮಿಲ್ಸ್​ ಸ್ಪೇನ್​ ತಂಡಗಳ ನಡುವೆ ಈ ಹಣಾಹಣಿ ನಡೆದಿದೆ.

ಟಾಸ್ ಗೆದ್ದ ಸ್ಪೇನ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರೆ ಬ್ಯಾಟಿಂಗ್ ಅವಕಾಶ ಪಡೆದ ಇಸ್ಲೆ ಆಫ್​ ಮ್ಯಾನ್​ ತಂಡ 8.4 ಓವರ್​ಗಳಲ್ಲಿ ಆಲ್​ಔಟ್ ಆಯಿತು. ಅಷ್ಟರೊಳಗೆ ಆ ತಂಡಕ್ಕೆ ಕೇವಲ 10 ರನ್​ಗಳನ್ನು ಮಾತ್ರ ಬಾರಿಸಲು ಸಾಧ್ಯವಾಯಿತು. 11 ರನ್​ ಗುರಿ ಬೆನ್ನಟ್ಟಿದ ಸ್ಪೇನ್​ ತಂಡದ ಬ್ಯಾಟರ್ ಮೊದಲ ಎರಡು ಎಸೆತಗಳಲ್ಲಿ ಎರಡು ಸಿಕ್ಸರ್​ ಬಾರಿಸುವ ಮೂಲಕ ಗೆಲುವು ತಂದುಕೊಟ್ಟರು. ಈ ಮೂಲಕ ಈ ಪಂದ್ಯ ಇತಿಹಾಸ ಸೃಷ್ಟಿಸಿತು.

ಇದನ್ನೂ ಓದಿ : Vijay Merchant Trophy | 6 ರನ್​ಗೆ 11 ಬ್ಯಾಟ್ಸ್​ಮನ್​ಗಳು ಔಟ್​, ಭಾರತದ ಕ್ರಿಕೆಟ್​ ಇತಿಹಾಸದಲ್ಲೊಂದು ಕಳಪೆ ದಾಖಲೆ

ಕೆಲವು ವಾರಗಳ ಹಿಂದೆ ಮುಕ್ತಾಯಗೊಂಡ ಬಿಗ್​ ಬ್ಯಾಷ್​ ಲೀಗ್​ನಲ್ಲಿ ಟಿ20 ಕ್ರಿಕೆಟ್​ ಇತಿಹಾಸದ ಕನಿಷ್ಠ ಮೊತ್ತದ ದಾಖಲೆ ಸೃಷ್ಟಿಯಾಗಿತ್ತು. ಆ ಪಂದ್ಯದಲ್ಲಿ ಸಿಡ್ನಿ ಥಂಡರ್ ತಂಡ ಕೇವಲ 15 ರನ್​ಗಳಿಗೆ ಆಲ್​ಔಟ್​ ಆಗುವ ಮೂಲಕ ಕಳಪೆ ದಾಖಲೆ ಮಾಡಿತ್ತು. ಅದನ್ನೀಗ ಇಸ್ಲೆ ಆಫ್​ ಮ್ಯಾನ್​ ತಂಡ ಮುರಿದಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

Latest

ಡೆಲ್ಲಿ ವಿರುದ್ಧ ಸೇಡು ತೀರಿಸಿಕೊಳ್ಳಲು ಸಜ್ಜಾದ RCB! ಹೇಗಿರಲಿದೆ ಹೈವೋಲ್ಟೇಜ್‌ ಮ್ಯಾಚ್‌?

VISTARANEWS.COM


on

ಇಂದು (ಏಪ್ರಿಲ್ 27) ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ 2026ರ ನಿರ್ಣಾಯಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (DC) ಮುಖಾಮುಖಿಯಾಗಲಿವೆ. ಏಪ್ರಿಲ್ 19 ರಂದು ಬೆಂಗಳೂರಿನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳಲು ಹಾಲಿ ಚಾಂಪಿಯನ್ ಆರ್‌ಸಿಬಿ ಸರ್ವಸನ್ನದ್ಧವಾಗಿದೆ. ಪ್ರಸ್ತುತ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಆರ್‌ಸಿಬಿ, ಕಳೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಗೆಲುವು ಸಾಧಿಸಿ ಭರ್ಜರಿ ಫಾರ್ಮ್‌ನಲ್ಲಿದೆ. ಆದರೆ, ಫಿಲ್ ಸಾಲ್ಟ್ ಅವರ ಗಾಯದ ಸಮಸ್ಯೆ ತಂಡಕ್ಕೆ ಸಣ್ಣ ತಲೆನೋವು ತಂದಿದ್ದು, ಅವರ ಸ್ಥಾನದಲ್ಲಿ ಜಾಕೋಬ್ ಬೆಥೆಲ್ ಕಣಕ್ಕಿಳಿಯುವ ಸಾಧ್ಯತೆಯಿದೆ.

ಮತ್ತೊಂದೆಡೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವು ತೀವ್ರ ಒತ್ತಡದಲ್ಲಿದೆ. ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 264 ರನ್ ಗಳಿಸಿದ್ದರೂ ಸಹ, ಟಿ20 ಇತಿಹಾಸದ ದಾಖಲೆಯ ರನ್ ಚೇಸ್‌ಗೆ ಬಲಿಯಾಗಿ ಸೋಲೊಪ್ಪಿಕೊಂಡಿತ್ತು. ಕೆ.ಎಲ್ ರಾಹುಲ್ ಅವರ ಅಮೋಘ 152 ರನ್‌ಗಳ ಇನಿಂಗ್ಸ್ ಕೂಡ ತಂಡಕ್ಕೆ ಜಯ ತಂದುಕೊಡಲಿಲ್ಲ. ಸದ್ಯ ಏಳು ಪಂದ್ಯಗಳಲ್ಲಿ ಕೇವಲ ಮೂರು ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿರುವ ಅಕ್ಷರ್ ಪಟೇಲ್ ನೇತೃತ್ವದ ಡೆಲ್ಲಿ ತಂಡಕ್ಕೆ, ಪ್ಲೇ-ಆಫ್ ರೇಸ್‌ನಲ್ಲಿ ಉಳಿಯಬೇಕಾದರೆ ಇಂದಿನ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ. ಲುಂಗಿ ಎನ್‌ಗಿಡಿ ಅವರ ಅನುಪಸ್ಥಿತಿ ಡೆಲ್ಲಿಯ ಬೌಲಿಂಗ್ ವಿಭಾಗಕ್ಕೆ ಹಿನ್ನಡೆಯಾಗುವ ಭೀತಿ ಎದುರಾಗಿದೆ.

ಇತಿಹಾಸದ ಅಂಕಿಅಂಶಗಳನ್ನು ಗಮನಿಸಿದರೆ ಆರ್‌ಸಿಬಿ ತಂಡವು ಡೆಲ್ಲಿ ವಿರುದ್ಧ ಸ್ಪಷ್ಟ ಪ್ರಾಬಲ್ಯ ಹೊಂದಿದೆ. ಈವರೆಗೆ ನಡೆದ 34 ಮುಖಾಮುಖಿಗಳಲ್ಲಿ ಆರ್‌ಸಿಬಿ 20 ಪಂದ್ಯಗಳನ್ನು ಗೆದ್ದಿದ್ದರೆ, ಡೆಲ್ಲಿ 13 ರಲ್ಲಿ ಮಾತ್ರ ಜಯ ಸಾಧಿಸಿದೆ. ದೆಹಲಿಯ ಮೈದಾನದಲ್ಲೂ ಆಡಿದ 11 ಪಂದ್ಯಗಳಲ್ಲಿ 7 ಬಾರಿ ಬೆಂಗಳೂರು ಜಯಭೇರಿ ಬಾರಿಸಿದೆ. ಇಂದಿನ ಪಂದ್ಯವು ಸಂಜೆ 7:30ಕ್ಕೆ ಆರಂಭವಾಗಲಿದ್ದು, ಗೆಲುವಿನ ಲಯದಲ್ಲಿರುವ ರಜತ್ ಪಾಟಿದಾರ್ ಸೈನ್ಯವು ಹತಾಶ ಸ್ಥಿತಿಯಲ್ಲಿರುವ ಡೆಲ್ಲಿಯನ್ನು ಅವರದ್ದೇ ತವರಿನಲ್ಲಿ ಮಣಿಸಿ ಸೇಡು ತೀರಿಸಿಕೊಳ್ಳುತ್ತದೆಯೇ ಎಂದು ಕಾದು ನೋಡಬೇಕಿದೆ.

Continue Reading

Latest

ಮುಂದಿನ ಪಂದ್ಯದಿಂದ ‘ಯಂಗ್ ಸೆನ್ಸೇಷನ್’ ಔಟ್? ವೈಭವ್ ಸೂರ್ಯವಂಶಿ ಬಗ್ಗೆ ಕೋಚ್ ಕೊಟ್ಟ ಅಪ್ಡೇಟ್ ಏನು?

VISTARANEWS.COM


on

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೇವಲ 38 ಎಸೆತಗಳಲ್ಲಿ 103 ರನ್ ಚಚ್ಚಿ ಐಪಿಎಲ್‌ನಲ್ಲಿ ಸಂಚಲನ ಸೃಷ್ಟಿಸಿದ್ದ ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟರ್ ವೈಭವ್ ಸೂರ್ಯವಂಶಿ ಈಗ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ. ಹೈದರಾಬಾದ್ ವಿರುದ್ಧದ ಅಮೋಘ ಶತಕದ ನಂತರ ಫೀಲ್ಡಿಂಗ್‌ಗೆ ಬಂದಿದ್ದ ವೈಭವ್, ಮಂಡಿರಜ್ಜು (Hamstring) ಸಮಸ್ಯೆಯಿಂದಾಗಿ ಮೈದಾನದಿಂದ ಹೊರನಡೆದಿದ್ದರು. ಫಿಸಿಯೋಗಳ ನೆರವಿನೊಂದಿಗೆ ಕುಂಟುತ್ತಾ ಮೈದಾನ ತೊರೆದ ಅವರು ಮತ್ತೆ ಫೀಲ್ಡಿಂಗ್‌ಗೆ ಮರಳದಿದ್ದದ್ದು ಅಭಿಮಾನಿಗಳಲ್ಲಿ ಮುಂದಿನ ಪಂದ್ಯದ ಲಭ್ಯತೆಯ ಬಗ್ಗೆ ಆತಂಕ ಮೂಡಿಸಿತ್ತು.

ಈ ಕುರಿತು ಪಂದ್ಯದ ಬಳಿಕ ಮಾಹಿತಿ ನೀಡಿದ ರಾಜಸ್ಥಾನ ತಂಡದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್, ಸೂರ್ಯವಂಶಿ ಅವರ ಗಾಯ ಅಷ್ಟೊಂದು ಗಂಭೀರವಾಗಿಲ್ಲ ಎಂದು ತಿಳಿಸಿದ್ದಾರೆ. “ವೈಭವ್ ಅವರ ಮಂಡಿರಜ್ಜು ಭಾಗದಲ್ಲಿ ಸ್ವಲ್ಪ ಅಸ್ವಸ್ಥತೆ ಇರುವುದು ನಿಜ, ಆದರೆ ಸದ್ಯ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಗುಣಮುಖರಾಗುತ್ತಿದ್ದಾರೆ. ಇನ್ನು ಒಂದು ಅಥವಾ ಎರಡು ದಿನಗಳಲ್ಲಿ ಅವರ ಫಿಟ್‌ನೆಸ್ ಬಗ್ಗೆ ಸಂಪೂರ್ಣ ಸ್ಪಷ್ಟತೆ ಸಿಗಲಿದೆ” ಎಂದು ಹೇಳುವ ಮೂಲಕ ಸೂರ್ಯವಂಶಿ ಮುಂದಿನ ಪಂದ್ಯಕ್ಕೆ ಮರಳುವ ಆಶಾವಾದ ವ್ಯಕ್ತಪಡಿಸಿದ್ದಾರೆ.

ರಾಜಸ್ಥಾನ ರಾಯಲ್ಸ್ ತಂಡವು ಏಪ್ರಿಲ್ 28 ರಂದು ಸತತ ಆರು ಗೆಲುವುಗಳೊಂದಿಗೆ ಅಜೇಯವಾಗಿರುವ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಪ್ರಸ್ತುತ ಟೂರ್ನಿಯಲ್ಲಿ ಆರ್‌ಆರ್ ತಂಡದ ಪ್ರಮುಖ ರನ್ ಸ್ಕೋರರ್ ಆಗಿರುವ ವೈಭವ್ ಸೂರ್ಯವಂಶಿ ಅಲಭ್ಯರಾದರೆ, ಅದು ತಂಡಕ್ಕೆ ದೊಡ್ಡ ಹೊಡೆತ ನೀಡಲಿದೆ. ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಸಂಜು ಸ್ಯಾಮ್ಸನ್ ಪಡೆಗೆ ಪ್ಲೇ-ಆಫ್ ಹಾದಿ ಸುಗಮಗೊಳಿಸಲು ಈ ಯಂಗ್ ಸೆನ್ಸೇಷನ್ ಆಟಗಾರನ ಫಿಟ್‌ನೆಸ್ ಅತ್ಯಂತ ನಿರ್ಣಾಯಕವಾಗಿದೆ.

Continue Reading

Latest

ಹೋಮ್‌ಗ್ರೌಂಡ್‌ನಲ್ಲಿ ಆರ್‌ಸಿಬಿಗಿಂದು ಕೊನೆ ಲೀಗ್‌ ಪಂದ್ಯ! ಗುಜರಾತ್ ಟೈಟನ್ಸ್ ಸವಾಲಿಗೆ ಸಜ್ಜಾದ ವಿರಾಟ್‌ ಪಡೆ

VISTARANEWS.COM


on

ಬೆಂಗಳೂರು: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಈ ಬಾರಿಯ ಐಪಿಎಲ್ ಸೀಸನ್‌ನಲ್ಲಿ ತನ್ನ ತವರು ಮೈದಾನವಾದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಅಂತಿಮ ಲೀಗ್ ಪಂದ್ಯವನ್ನು ಆಡಲಿದೆ. ಶುಭ್‌ಮನ್ ಗಿಲ್ ನೇತೃತ್ವದ ಗುಜರಾತ್ ಟೈಟನ್ಸ್ ವಿರುದ್ಧ ನಡೆಯಲಿರುವ ಈ ಹಣಾಹಣಿಯಲ್ಲಿ ಗೆಲುವಿನ ಮೂಲಕ ತವರಿನ ಪ್ರೇಕ್ಷಕರಿಗೆ ಸ್ಮರಣೀಯ ವಿದಾಯ ಹೇಳಲು ಬೆಂಗಳೂರು ಪಡೆ ಸಜ್ಜಾಗಿದೆ. ಈ ಪಂದ್ಯದ ನಂತರ ಆರ್‌ಸಿಬಿ ತನ್ನ ಮುಂದಿನ ಪಂದ್ಯಗಳಿಗಾಗಿ ರಾಯ್ಪುರಕ್ಕೆ ಪ್ರಯಾಣ ಬೆಳೆಸಲಿದೆ. ಪ್ರಸ್ತುತ ಅಂಕಪಟ್ಟಿಯಲ್ಲಿ ಭದ್ರ ನೆಲೆ ಕಂಡುಕೊಳ್ಳಲು ಈ ಗೆಲುವು ಉಭಯ ತಂಡಗಳಿಗೂ ಅತ್ಯಂತ ನಿರ್ಣಾಯಕವಾಗಿದೆ.

ಆರ್‌ಸಿಬಿ ಈ ವರ್ಷ ಚಿನ್ನಸ್ವಾಮಿ ಮೈದಾನದಲ್ಲಿ ಆಡಿದ 4 ಪಂದ್ಯಗಳ ಪೈಕಿ 3ರಲ್ಲಿ ಜಯ ಸಾಧಿಸಿ ಭರ್ಜರಿ ಫಾರ್ಮ್‌ನಲ್ಲಿದೆ. ಕಳೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಅನುಭವಿಸಿದ ಸೋಲಿನ ಆಘಾತದಿಂದ ಹೊರಬಂದು, ಮತ್ತೆ ಗೆಲುವಿನ ಹಳಿಗೆ ಮರಳುವ ವಿಶ್ವಾಸದಲ್ಲಿ ರಜತ್ ಪಾಟೀದಾರ್ ಸೈನ್ಯವಿದೆ. ಬ್ಯಾಟಿಂಗ್ ವಿಭಾಗದಲ್ಲಿ ವಿರಾಟ್ ಕೊಹ್ಲಿ, ನಾಯಕ ರಜತ್ ಪಾಟೀದಾರ್ ಮತ್ತು ಫಿಲ್ ಸಾಲ್ಟ್ ಅಬ್ಬರಿಸುತ್ತಿದ್ದು, ತಂಡಕ್ಕೆ ಬಲಿಷ್ಠ ಅಡಿಪಾಯ ಹಾಕುತ್ತಿದ್ದಾರೆ. ವಿಶೇಷವಾಗಿ ಟಿಮ್ ಡೇವಿಡ್ ಅವರ 203.52 ರ ಸ್ಟ್ರೈಕ್ ರೇಟ್ ತಂಡದ ಮಧ್ಯಮ ಕ್ರಮಾಂಕಕ್ಕೆ ಹೆಚ್ಚಿನ ಬಲ ತಂದಿದೆ. ಬೌಲಿಂಗ್‌ನಲ್ಲಿ ಹೇಜಲ್‌ವುಡ್ ಮತ್ತು ಭುವನೇಶ್ವರ್ ಕುಮಾರ್ ಜೋಡಿ ಎದುರಾಳಿಗಳನ್ನು ಕಟ್ಟಿಹಾಕಲು ಸನ್ನದ್ಧವಾಗಿದೆ.

ಇನ್ನೊಂದೆಡೆ, ಗುಜರಾತ್ ಟೈಟನ್ಸ್ ತಂಡವು ಸ್ಥಿರ ಪ್ರದರ್ಶನದ ಹುಡುಕಾಟದಲ್ಲಿದ್ದು, ಪ್ರಬಲ ಬೌಲಿಂಗ್ ಪಡೆಯನ್ನು ನೆಚ್ಚಿಕೊಂಡಿದೆ. ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್ ಮತ್ತು ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವರನ್ನೊಳಗೊಂಡ ವೇಗದ ಪಡೆ ಆರ್‌ಸಿಬಿಯ ಸ್ಫೋಟಕ ಬ್ಯಾಟರ್‌ಗಳಿಗೆ ಬ್ರೇಕ್ ಹಾಕಲು ಮಾಸ್ಟರ್ ಪ್ಲ್ಯಾನ್ ರೂಪಿಸಿದೆ. ಅದರಲ್ಲೂ ಪ್ರಸಿದ್ಧ್ ಕೃಷ್ಣ ತಮ್ಮ ತವರು ಮೈದಾನದಲ್ಲಿ ಹಳೆಯ ತಂಡದ ವಿರುದ್ಧ ಹೇಗೆ ಮಿಂಚಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಉಭಯ ತಂಡಗಳ ನಡುವೆ ಇದುವರೆಗೆ ನಡೆದ 6 ಮುಖಾಮುಖಿಗಳಲ್ಲಿ ಎರಡೂ ತಂಡಗಳು ತಲಾ 3 ಪಂದ್ಯಗಳನ್ನು ಗೆದ್ದು ಸಮಬಲ ಸಾಧಿಸಿರುವುದರಿಂದ, ಇಂದಿನ ಪಂದ್ಯವು ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡುವುದರಲ್ಲಿ ಸಂಶಯವಿಲ್ಲ.

Continue Reading

Latest

ತಾಯಿ ನಿಧನದ ಶೋಕದಲ್ಲೂ ತಂಡಕ್ಕಾಗಿ ಕಣಕ್ಕಿಳಿದ ಮುಖೇಶ್ ಚೌಧರಿ! ಗೆಲುವನ್ನು ಅರ್ಪಿಸಿ ಮಾನವೀಯತೆ ಮೆರೆದ ನಾಯಕ ಗಾಯಕ್ವಾಡ್

VISTARANEWS.COM


on

ವಾಂಖೆಡೆ ಮೈದಾನದಲ್ಲಿ ಏಪ್ರಿಲ್ 23ರಂದು ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ರೋಚಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 103 ರನ್‌ಗಳ ಬೃಹತ್ ಜಯ ದಾಖಲಿಸಿದೆ. ಈ ಗೆಲುವಿಗಿಂತಲೂ ಮಿಗಿಲಾಗಿ ಅಭಿಮಾನಿಗಳ ಗಮನ ಸೆಳೆದಿದ್ದು ವೇಗಿ ಮುಖೇಶ್ ಚೌಧರಿ ಅವರ ಅಪ್ರತಿಮ ವೃತ್ತಿಧರ್ಮ. ತಮ್ಮ ತಾಯಿ ಪ್ರೇಮಾ ದೇವಿ ನಿಧನರಾದ ಕೇವಲ ಎರಡೇ ದಿನಕ್ಕೆ, ತಾಯಿಯ ಅಂತ್ಯಕ್ರಿಯೆ ಮುಗಿಸಿ ಮೈದಾನಕ್ಕಿಳಿದ ಮುಖೇಶ್, ತಂಡದ ಗೆಲುವಿಗಾಗಿ ಸರ್ವಸ್ವವನ್ನೂ ಧಾರೆ ಎರೆದರು. ಅವರ ಈ ಬದ್ಧತೆ ಕ್ರೀಡಾ ಜಗತ್ತಿನಲ್ಲಿ ಹೊಸ ಸಂಚಲನ ಮೂಡಿಸಿದೆ.

ಪಂದ್ಯದ ನಿರ್ಣಾಯಕ ಹಂತದಲ್ಲಿ ಕ್ವಿಂಟನ್ ಡಿ ಕಾಕ್ ಅವರ ವಿಕೆಟ್ ಪಡೆದ ಮುಖೇಶ್, ಯಾವುದೇ ಅಬ್ಬರದ ಸಂಭ್ರಮಾಚರಣೆ ಮಾಡದೆ ಮೌನವಾಗಿ ಆಕಾಶದತ್ತ ಕೈ ತೋರಿಸಿ “ಅಮ್ಮ ಇದು ನಿನಗಾಗಿ” ಎಂದು ತಮ್ಮ ಪ್ರದರ್ಶನವನ್ನು ಸಮರ್ಪಿಸಿದ ಕ್ಷಣ ಭಾವುಕವಾಗಿತ್ತು. ಸುಮಾರು ಒಂದು ವರ್ಷದಿಂದ ಅನಾರೋಗ್ಯದ ವಿರುದ್ಧ ಹೋರಾಡುತ್ತಿದ್ದ ತಾಯಿಯನ್ನು ಕಳೆದುಕೊಂಡ ನೋವಿನ ನಡುವೆಯೂ, ತಂಡಕ್ಕೆ ತನ್ನ ಅವಶ್ಯಕತೆ ಇದೆ ಎಂದು ಅರಿತು ಮೈದಾನಕ್ಕೆ ಮರಳಿದ ಅವರ ಸ್ಥೈರ್ಯಕ್ಕೆ ಕ್ರಿಕೆಟ್ ಲೋಕವೇ ಶರಣಾಗಿದೆ. ಮುಖೇಶ್ ಅವರ ಶಿಸ್ತುಬದ್ಧ ಬೌಲಿಂಗ್ ಮುಂಬೈ ಪಡೆಯನ್ನು ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿತು.

ಇನ್ನು ಪಂದ್ಯ ಮುಗಿದ ಬಳಿಕ ಸಿಎಸ್‌ಕೆ ನಾಯಕ ರುತುರಾಜ್ ಗಾಯಕ್ವಾಡ್ ಅವರು ಮುಖೇಶ್ ಅವರನ್ನು ಅಪ್ಪಿಕೊಂಡು ಸಾಂತ್ವನ ಹೇಳುವ ಮೂಲಕ ಮಾನವೀಯತೆ ಮೆರೆದರು. ಇಂತಹ ಕಠಿಣ ಪರಿಸ್ಥಿತಿಯಲ್ಲೂ ತಂಡಕ್ಕಾಗಿ ಮರಳಿದ ಮುಖೇಶ್ ಅವರ ಮಾನಸಿಕ ಶಕ್ತಿಯನ್ನು ಶ್ಲಾಘಿಸಿದ ಗಾಯಕ್ವಾಡ್, ಈ ಭರ್ಜರಿ ಗೆಲುವನ್ನು ಮುಖೇಶ್ ಮತ್ತು ಅವರ ತಾಯಿಗೆ ಅರ್ಪಿಸುವುದಾಗಿ ಘೋಷಿಸಿದರು. ನಾಯಕನ ಈ ನಿರ್ಧಾರ ಮತ್ತು ಮುಖೇಶ್ ಅವರ ಕರ್ತವ್ಯ ಪ್ರಜ್ಞೆ ಸಿಎಸ್‌ಕೆ ತಂಡದ ಒಗ್ಗಟ್ಟನ್ನು ಸಾಬೀತುಪಡಿಸಿದೆ.

Continue Reading
Advertisement
Latest10 hours ago

ಇತಿಹಾಸ ಬರೆಯಲು ಸಜ್ಜಾದ ರನ್ ಮಷೀನ್: ಐಪಿಎಲ್ ಕ್ರಿಕೆಟ್‌ನಲ್ಲಿ ಕೊಹ್ಲಿ ಹೊಸ ರೆಕಾರ್ಡ್‌

Latest10 hours ago

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಉಗ್ರ ಮೊಹಮ್ಮದ್ ಶಾರಿಕ್‌ಗೆ 10 ವರ್ಷ ಕಠಿಣ ಶಿಕ್ಷೆ ವಿಧಿಸಿದ NIA ನ್ಯಾಯಾಲಯ

Latest11 hours ago

ಪಾಕಿಸ್ತಾನಕ್ಕೆ ಮತ್ತೊಂದು ಆರ್ಥಿಕ ಪೆಟ್ಟು: 3.5 ಬಿಲಿಯನ್ ಡಾಲರ್ ಸಾಲ ಮರುಪಾವತಿಗೆ ಯುಎಇ ಸೂಚನೆ

ಸಿನಿಮಾ12 hours ago

ಎಲೆಕ್ಷನ್ ಮುಗಿದರೂ ಮುಗಿಯದ ದಳಪತಿ ಆಸ್ತಿ ಸಂಘರ್ಷ: ಹೆಂಡತಿಗೆ ಕೊಟ್ಟ 12 ಕೋಟಿ ಸಾಲದ ರಹಸ್ಯವೇನು?

Latest12 hours ago

ಹರಿಹರ ಪೀಠದಲ್ಲಿ ಲೆಕ್ಕ ಸಮರ: ವಚನಾನಂದ ಶ್ರೀ, ಟ್ರಸ್ಟಿಗಳ ನಡುವೆ ಆರೋಪ-ಪ್ರತ್ಯಾರೋಪ.

Latest13 hours ago

RCB v/s GT ಪಂದ್ಯದ ವೇಳೆ ಭದ್ರತಾ ವೈಫಲ್ಯ: 240 ಸಿಸಿಟಿವಿಗಳನ್ನು ನಿಷ್ಕ್ರಿಯಗೊಳಿಸಿದ್ದೇಕೆ? ಹೊರಬಿತ್ತು ಶಾಕಿಂಗ್‌ ಸತ್ಯ!

Latest13 hours ago

ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರೀ ಏರಿಕೆ ಸಾಧ್ಯತೆ: ಮೇ 1ರಿಂದ ಬದಲಾಗಲಿವೆ ಎಲ್‌ಪಿಜಿ ನಿಯಮಗಳು

Latest15 hours ago

ಮೇನಲ್ಲಿ ನಡೆಯಲಿದೆ ಪ್ಯಾನ್-ಐಐಟಿ ಬೆಂಗಳೂರು ಸಮ್ಮಿಟ್-2026

ಕರ್ನಾಟಕ16 hours ago

ಡಿಕೆಶಿ ಪದೇ ಪದೇ ದೆಹಲಿಗೆ ಹೋಗುತ್ತಿರುವುದೇಕೆ? ಸತೀಶ್ ಜಾರಕಿಹೊಳಿ ನೀಡಿದ ಆ ಗೊಂದಲದ ಹೇಳಿಕೆಯಲ್ಲಿದೆಯೇ ದೊಡ್ಡ ಸುಳಿವು

Latest17 hours ago

ಇರಾನ್‌ನಿಂದ ಹೊಸ ಶಾಂತಿ ಸಂಧಾನ: ಹಾರ್ಮುಜ್ ಜಲಸಂಧಿ ಮುಕ್ತಗೊಳಿಸಲು ಅಮೆರಿಕಕ್ಕೆ ಷರತ್ತುಬದ್ಧ ಪ್ರಸ್ತಾವನೆ ಸಲ್ಲಿಕೆ

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌