Anushka Sharma: ಲಂಡನ್​ ಬಿಟ್ಟು ಮಗನ ಜತೆ ಮತ್ತೆ ಮುಂಬೈಗೆ ಮರಳಲಿದ್ದಾರೆ ಕೊಹ್ಲಿ ಪತ್ನಿ ಅನುಷ್ಕಾ! - Vistara News

ಕ್ರೀಡೆ

Anushka Sharma: ಲಂಡನ್​ ಬಿಟ್ಟು ಮಗನ ಜತೆ ಮತ್ತೆ ಮುಂಬೈಗೆ ಮರಳಲಿದ್ದಾರೆ ಕೊಹ್ಲಿ ಪತ್ನಿ ಅನುಷ್ಕಾ!

Anushka Sharma: ಫೆಬ್ರವರಿ 15 ರಂದು ಲಂಡನ್​ನಲ್ಲಿ ಅನುಷ್ಕಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗುವಿಗೆ ಅಕಾಯ್​ ಎಂದು ಹೆಸರಿಡಲಾಗಿದೆ. ಮಗನನ್ನು ಇದುವರೆಗೂ ಭಾರತಕ್ಕೆ ಕರೆ ತಂದಿಲ್ಲ. ಅನುಷ್ಕಾ ಐಪಿಎಲ್​ ವೇಳೆ ಭಾರತಕ್ಕೆ ಬಂದಿದ್ದರೂ ಕೂಡ ಮಗನನ್ನು ಲಂಡನ್​ನಲ್ಲಿಯೇ ಬಿಟ್ಟು ಬಂದಿದ್ದರು.

VISTARANEWS.COM


on

Anushka Sharma
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಸರಿ ಸುಮಾರು ಒಂದು ವರ್ಷದಿಂದ ಲಂಡನ್‌ನಲ್ಲಿಯೇ ನೆಲೆಸಿರುವ ಟೀಮ್​ ಇಂಡಿಯಾದ ಸ್ಟಾರ್​ ಕ್ರಿಕೆಟಿಗ ವಿರಾಟ್​ ಕೊಹ್ಲಿ(virat kohli) ಅವರ ಪತ್ನಿ, ಬಾಲಿವುಡ್​ ನಟಿ ಅನುಷ್ಕಾ ಶರ್ಮಾ(Anushka Sharma) ಇದೀಗ ಮತ್ತೆ ತಮ್ಮ ತವರಾದ ಮುಂಬೈಗೆ(Anushka Sharma Return to Mumbai) ಮರಳಲಿದ್ದಾರೆ ಎಂದು ತಿಳಿದುಬಂದಿದೆ. ಮಗ ಅಕಾಯ್​(Akaay) ಅವರನ್ನು ಮೊದಲ ಬಾರಿಗೆ ಭಾರತಕ್ಕೆ ಕರೆತರಲು ಸಿದ್ಧತೆಯಲ್ಲಿದ್ದಾರೆ ಎನ್ನಲಾಗಿದೆ.

ಫೆಬ್ರವರಿ 15 ರಂದು ಲಂಡನ್​ನಲ್ಲಿ ಅನುಷ್ಕಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗುವಿಗೆ ಅಕಾಯ್​ ಎಂದು ಹೆಸರಿಡಲಾಗಿದೆ. ಮಗನನ್ನು ಇದುವರೆಗೂ ಭಾರತಕ್ಕೆ ಕರೆ ತಂದಿಲ್ಲ. ಅನುಷ್ಕಾ ಐಪಿಎಲ್​ ವೇಳೆ ಭಾರತಕ್ಕೆ ಬಂದಿದ್ದರೂ ಕೂಡ ಮಗನನ್ನು ಲಂಡನ್​ನಲ್ಲಿಯೇ ಬಿಟ್ಟು ಬಂದಿದ್ದರು. ಮಗನ ಆರೈಕೆಗೆಂದೇ ಅನುಷ್ಕಾ ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯ ವೇಳೆ ಕೊಹ್ಲಿ ಜತೆ ಪ್ರಯಾಣಿಸಿರಲಿಲ್ಲ. ಸದ್ಯ ಕೊಹ್ಲಿ ಕೂಡ ಲಂಡನ್​ನಲ್ಲಿಯೇ ಪತ್ನಿ ಮತ್ತು ಮಕ್ಕಳ ಜತೆಗಿದ್ದಾರೆ.

ಕೆಲ ತಿಂಗಳುಗಳ ಹಿಂದೆ ವಿರಾಟ್​ ಕೊಹ್ಲಿ ಮತ್ತು ಅನುಷ್ಕಾ ಅವರು ಲಂಡನ್​ನಲ್ಲಿಯೇ ನೆಲೆಸಲಿದ್ದಾರೆ ಎಂದು ವರದಿಯಾಗಿತ್ತು. ಆದರೆ, ಇದೀಗ ವರದಿಯಾದ ಪ್ರಕಾರ ಮಗ ಅನುಷ್ಕಾ ಮತ್ತೆ ಭಾರತಕ್ಕೆ ಬಂದು ಮುಂಬೈಯಲ್ಲಿ ನೆಲೆಸಲಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಾಕ್ಷಿ ಎಂಬತೆ ಅನುಷ್ಕಾ ಅವರು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಶೀಘ್ರದಲ್ಲೇ ನಿಮ್ಮನ್ನು ಭೇಟಿಯಾಗಲಿದ್ದೇನೆ ಎಂದು ಬರೆದುಕೊಂಡು ಆರೋಗ್ಯಕರ ಆಹಾರ ಮತ್ತು ತಿಂಡಿಗಳ ಬ್ರ್ಯಾಂಡ್‌ನ ಪ್ರಚಾರದ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್​ ಕಂಡ ನೆಟ್ಟಿಗರು ಇದು ಅನುಷ್ಕಾ ಮತ್ತೆ ಮುಂಬೈಗೆ ಬರುವ ಸುಳಿವು ಎಂದು ಹೇಳಿದ್ದಾರೆ.


ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ, ಅನುಷ್ಕಾ ಮತ್ತು ವಿರಾಟ್ ಯುಕೆ ಮೂಲದ ಕಂಪನಿಯ ನಿರ್ದೇಶಕರಾಗಿದ್ದಾರೆ. ಯುಕೆ ಸರ್ಕಾರದ ಫೈಂಡ್ ಅಂಡ್ ಅಪ್ಡೇಟ್ ಕಂಪನಿಯ ಮಾಹಿತಿ ಸೇವೆಯ ಪ್ರಕಾರ, ದಂಪತಿಗಳು ಮ್ಯಾಜಿಕ್ ಲ್ಯಾಂಪ್​​ನ ಮೂವರು ನಿರ್ದೇಶಕರಲ್ಲಿ ಇಬ್ಬರು. ಇದು ಆಗಸ್ಟ್ 1, 2022 ರಂದು ಆರಂಭಗೊಂಡ ಸಲಹಾ ಸಂಸ್ಥೆಯಾಗಿದೆ. ಕಂಪನಿಯ ಅಧಿಕೃತ ಕಚೇರಿ ವಿಳಾಸವು ಯುಕೆಯ ವೆಸ್ಟ್ ಯಾರ್ಕ್​ಶೈರ್​ನಲ್ಲಿದೆ.

ಇದನ್ನೂ ಓದಿ Anushka Sharma : ಪತ್ನಿ ಅನುಷ್ಕಾ ಬರ್ತ್​​ಡೇಗೆ ಕೊಹ್ಲಿ ಕೇಕ್​ ಆರ್ಡರ್​ ಮಾಡಿದ್ದು ಬೆಂಗಳೂರಿನಿಂದ; ತಿಂಗಳುಗಳ ಬಳಿಕ ಮಾಹಿತಿ ಬಹಿರಂಗ

ಕೊಹ್ಲಿ ಮತ್ತು ಅನುಷ್ಕಾ ಅದೆಷ್ಟೋ ಜನರಿಗೆ ಸ್ಫೂರ್ತಿಯಾಗಿದ್ದಾರೆ. ಈ ಜೋಡಿ ಸೇವಾ (seVVA) ಎಂಬ ಹೆಸರಿನ ಎನ್​ಜಿವೊ ನಡೆಸುತ್ತಿದ್ದು ಈ ಮೂಲಕ ಹಲವರಿಗೆ ಸಹಾಯವನ್ನು ಮಾಡುತ್ತಿದ್ದಾರೆ. ಕೊಹ್ಲಿಯ ಎಲ್ಲ ಏರಿಳಿತದಲ್ಲಿಯೂ ಪತ್ನಿ ಅನುಷ್ಕಾ ಬೆಂಬಲಕ್ಕೆ ನಿಂತು ಅವರಿಗೆ ಸಾದಾ ಪ್ರೋತ್ಸಾಹವನ್ನು ನೀಡುತ್ತಲೇ ಬಂದಿದ್ದಾರೆ. ಕೊಹ್ಲಿ ಕೂಡ ತನ್ನ ಬದುಕಿನಲ್ಲಿ ಅನುಷ್ಕಾ ಮುಖ್ಯ ಪಾತ್ರಹಿಸಿರುದಾಗಿ ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿದ್ದರು. “ಅನುಷ್ಕಾ ಅವರ ಭೇಟಿ ನನ್ನ ಜೀವನದಲ್ಲಿ ಹೊಸ ದೃಷ್ಟಿಕೋನವನ್ನು ಕೊಟ್ಟಿದೆ. ಹಾಗೇ ಎಲ್ಲವನ್ನೂ ಸ್ವೀಕರಿಸುವ ಭಾವನೆಯನ್ನು ಬೆಳೆಸಿಕೊಳ್ಳಲು ಸಹಕರಿಸಿದೆ” ಎಂದು ಕೊಹ್ಲಿ ಹೇಳಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Shreyas Gopal: ಕೇರಳ ಬಿಟ್ಟು ಮತ್ತೆ ಕರ್ನಾಟಕ ತಂಡಕ್ಕೆ ಮರಳಿದ ಶ್ರೇಯಸ್ ಗೋಪಾಲ್

Shreyas Gopal: ಕಳೆದ ವರ್ಷ ತಂಡದಲ್ಲಿ ಸರಿಯಾದ ಅವಕಾಶ ಸಿಗುತ್ತಿಲ್ಲ ಎನ್ನುವ ಕಾರಣದಿಂದ ಶ್ರೇಯಸ್ ಗೋಪಾಲ್ ರಾಜ್ಯ ತಂಡವನ್ನು ತೊರೆದು ಕೇರಳ ತಂಡಕ್ಕೆ ಸೇರ್ಪಡೆಗೊಂಡಿದ್ದರು. ಈ ಬಾರಿ ಮತ್ತೆ ಕರ್ನಾಟಕದ ಪರ ಆಡಲು ನಿರ್ಧರಿಸಿದ್ದಾರೆ.

VISTARANEWS.COM


on

Shreyas Gopal
Koo

ಬೆಂಗಳೂರು: ಕರ್ನಾಟಕ ತಂಡ ತೊರೆದು ಕೇರಳ ತಂಡಕ್ಕೆ ಹೋಗಿದ್ದ ಶ್ರೇಯಸ್ ಗೋಪಾಲ್(Shreyas Gopal) ಮತ್ತೆ ತವರು ತಂಡಕ್ಕೆ ವಾಪಸ್​ ಆಗಿದ್ದಾರೆ. ಕಳೆದ ವರ್ಷ ರಣಜಿ ಟೂರ್ನಿಯ ವೇಳೆ ಅವರು ಕೇರಳ ತಂಡ ಸೇರಿದ್ದರು. ರಾಜ್ಯ ತಂಡಕ್ಕೆ ಮರಳಿದ ವಿಚಾರವನ್ನು ಕರ್ನಾಟಕ ರಾಜ್ಯ ಕ್ರಿಕೆಟ್​ ಸಂಸ್ಥೆಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.

30 ವರ್ಷದ ಶ್ರೇಯಸ್ ಗೋಪಾಲ್ 2013ರಿಂದ 10 ವರ್ಷಗಳ ಕಾಲ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. ಆದರೆ, ಕಳೆದ ವರ್ಷ ತಂಡದಲ್ಲಿ ಸರಿಯಾದ ಅವಕಾಶ ಸಿಗುತ್ತಿಲ್ಲ ಎನ್ನುವ ಕಾರಣದಿಂದ ಅವರು ರಾಜ್ಯ ತಂಡವನ್ನು ತೊರೆದು ಕೇರಳ ತಂಡಕ್ಕೆ ಸೇರ್ಪಡೆಗೊಂಡಿದ್ದರು. ಈ ಬಾರಿ ಮತ್ತೆ ಕರ್ನಾಟಕದ ಪರ ಆಡಲು ನಿರ್ಧರಿಸಿದ್ದಾರೆ. ಕೆರಳ ತಂಡದಿಂದ ನಿರಾಕ್ಷೇಪಣಾ ಪತ್ರವನ್ನು ಕೂಡ ಪಡೆದುಕೊಂಡಿದ್ದಾರೆ. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕೇರಳ ಪರ ಆಡಿದ್ದ ಅವರು ಕೇವಲ 7 ಪಂದ್ಯಗಳಲ್ಲಿ 12 ವಿಕೆಟ್​​ಗಳನ್ನು ಪಡೆದಿದ್ದರು.

ಇದನ್ನೂ ಓದಿ Ranji Trophy : ರಣಜಿ ಟ್ರೋಫಿಯಲ್ಲಿ ಕಳೆಗುಂದಿದ ಕರ್ನಾಟಕ ತಂಡ

ಶ್ರೇಯಸ್ ಗೋಪಾಲ್ ಇದುವರೆಗೆ 82 ಪ್ರಥಮ ದರ್ಜೆ, 65 ಲಿಸ್ಟ್​ ‘ಎ’ ಹಾಗೂ 97 ಟಿ20 ಪಂದ್ಯ ಆಡಿದ್ದಾರೆ. ಪ್ರಸ್ತುತ ಸಾಗುತ್ತಿರುವ ಮಹಾರಾಜಾ ಟಿ20 ಟ್ರೋಫಿಯಲ್ಲಿ ಮಂಗಳೂರು ತಂಡದ ಪರ ಆಡುತ್ತಿದ್ದಾರೆ.  ಶ್ರೇಯಸ್​ ಗೋಪಾಲ್ ಅತ್ಯುತ್ತಮ ಲೆಗ್ ಸ್ಪಿನ್ನರ್. ವಿರಾಟ್​ ಕೊಹ್ಲಿಗೂ ಅವರ ಎಸೆತವನ್ನು ಎದುರಿಸಲು ಕಷ್ಟವಾಗುತ್ತದೆ. ಐಪಿಎಲ್​ನಲ್ಲಿ ಒಟ್ಟು ಮೂರು ಬಾರಿ ಕೊಹ್ಲಿಯನ್ನು ಔಟ್​ ಮಾಡಿದ್ದಾರೆ.

ಆಫ್ಘನ್ ಕ್ರಿಕೆಟ್​ ತಂಡಕ್ಕೆ ಶ್ರೀಧರ್ ಸಹಾಯಕ ಕೋಚ್

ಭಾರತ ತಂಡದ ಮಾಜಿ ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್(R Sridhar) ಅವರು ಅಫಘಾನಿಸ್ತಾನ(Afghanistan) ಕ್ರಿಕೆಟ್ ತಂಡದ ಸಹಾಯಕ ಕೋಚ್ ಆಗಿ ನೇಮಕಗೊಂಡಿದ್ದಾರೆ. ನ್ಯೂಜಿಲ್ಯಾಂಡ್​ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಮುಂಬರುವ ಸರಣಿಯಲ್ಲಿ ಶ್ರೀಧರ್ ಆಫ್ಘನ್​ ತಂಡದ ಸಹಾಯಕ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

ಶ್ರೀಧರ್​ ಭಾರತ ಕ್ರಿಕೆಟ್ ತಂಡದಲ್ಲಿ 2014ರಿಂದ ಸತತ 7 ವರ್ಷಗಳ ಕಾಲ ಫೀಲ್ಡಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ರವಿಶಾಸ್ತ್ರಿ ಕೋಚ್​ ಆಗಿದ್ದ ವೇಳೆ ಅವರ ಸಹಾಯಕ ಸಿಬ್ಬಂದಿಯ ಭಾಗವಾಗಿ ಕೆಲಸ ಮಾಡಿದ್ದರು. ನ್ಯೂಜಿಲ್ಯಾಂಡ್​ ವಿರುದ್ಧ ಅಫಫ್ಘಾನಿಸ್ತಾನ ಒಂದು ಟೆಸ್ಟ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ.

ಹೈದರಾಬಾದ್ ಮೂಲದ ಆರ್.ಶ್ರೀಧರ್ 35 ಪ್ರಥಮ ದರ್ಜೆ ಮತ್ತು 15 ‘ಎ’ ದರ್ಜೆಯ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ. 2015 ಮತ್ತು 2019ರ ಏಕದಿನ ವಿಶ್ವಕಪ್ ಮತ್ತು 2016 ಮತ್ತು 2021ರ ಟಿ-20 ವಿಶ್ವಕಪ್​ಗಳಲ್ಲಿ ಭಾರತ ತಂಡದ ಫೀಲ್ಡಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ್ದರು.

Continue Reading

ಕ್ರೀಡೆ

Paralympic 2024: ಒಂದು ವಾರ ಮೊದಲೇ ಪ್ಯಾರಿಸ್‌ನತ್ತ ಹೊರಟ ಭಾರತದ ಅಥ್ಲೀಟ್​ ತಂಡ

Paralympic 2024: 16 ಅಥ್ಲೀಟ್​ಗಳ ತಂಡ ಪ್ಯಾರಿಸ್‌ನ ಹೋಟೆಲ್‌ಗಳಲ್ಲಿ ವಾಸ್ತವ್ಯ ಹೂಡಲಿದ್ದು, ಕ್ರೀಡೆಗಳ ಉದ್ಘಾಟನಾ ಸಮಾರಂಭಕ್ಕೆ ಮೂರು ದಿವಸ ಮೊದಲು ಕ್ರೀಡಾ ಗ್ರಾಮಕ್ಕೆ ತೆರಳಲಿದೆ. ಈ ಬಾರಿ ಅಥ್ಲೀಟ್​ಗಳ ತಂಡ ಐದು ಚಿನ್ನ ಸೇರಿ ಡಜನ್ ಪದಕಗಳ ಮೇಲೆ ಕಣ್ಣಿಟ್ಟಿದೆ.

VISTARANEWS.COM


on

Paralympics 2024
Koo

ನವದೆಹಲಿ: ಇದೇ ತಿಂಗಳು ಆಗಸ್ಟ್​ 28ರಿಂದ ಪ್ಯಾರಿಸ್​ನಲ್ಲಿ(Paralympic 2024) ಆರಂಭಗೊಳ್ಳಲಿರುವ ಪ್ಯಾರಾಲಿಂಪಿಕ್ಸ್(Paris Paralympics)​ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಜಾವೆಲಿನ್ ತಾರೆ ಸುಮಿತ್ ಅಂಟಿಲ್‌ ಅವರನ್ನು ಒಳಗೊಂಡ ಭಾರತದ ಅಥ್ಲೀಟುಗಳ ಮೊದಲ ತಂಡ ಪ್ಯಾರಿಸ್​ಗೆ ಪ್ರಯಾಣ ಬೆಳೆಸಿದೆ. ಪ್ಯಾರಿಸ್‌ ಹವಾಮಾನಕ್ಕೆ ಒಗ್ಗಿಕೊಳ್ಳುವ ಉದ್ದೇಶದಿಂದ ಅಥ್ಲೀಟ್​ಗಳು ಒಂದು ವಾರ ಮೊದಲೇ ಫ್ರಾನ್ಸ್ ರಾಜಧಾನಿಗೆ ತೆರಳಿತು.

16 ಅಥ್ಲೀಟ್​ಗಳ ತಂಡ ಪ್ಯಾರಿಸ್‌ನ ಹೋಟೆಲ್‌ಗಳಲ್ಲಿ ವಾಸ್ತವ್ಯ ಹೂಡಲಿದ್ದು, ಕ್ರೀಡೆಗಳ ಉದ್ಘಾಟನಾ ಸಮಾರಂಭಕ್ಕೆ ಮೂರು ದಿವಸ ಮೊದಲು ಕ್ರೀಡಾ ಗ್ರಾಮಕ್ಕೆ ತೆರಳಲಿದೆ. ಈ ಬಾರಿ ಅಥ್ಲೀಟ್​ಗಳ ತಂಡ ಐದು ಚಿನ್ನ ಸೇರಿ ಡಜನ್ ಪದಕಗಳ ಮೇಲೆ ಕಣ್ಣಿಟ್ಟಿದೆ.

2021ರ ಟೋಕಿಯೊ ಪ್ಯಾರಾ ಕ್ರೀಡೆಗಳಲ್ಲಿ ಭಾರತದ ಸ್ಪರ್ಧಿಗಳು ದಾಖಲೆಯ 19 ಪದಕಗಳನ್ನು (5 ಚಿನ್ನ, 8 ಬೆಳ್ಳಿ ಮತ್ತು 6 ಕಂಚು) ಗೆದ್ದುಕೊಂಡು ಗಮನ ಸೆಳೆದಿದ್ದರು. ಈ ಬಾರಿ ಭಾರತ 12 ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುವ 84 ಅಥ್ಲೀಟ್​ಗಳ ತಂಡವನ್ನು ಕಳುಹಿಸುತ್ತಿದೆ. ಇದು ಪ್ಯಾರಾಲಿಂಪಿಕ್ಸ್‌ ಕ್ರೀಡೆಗಳಲ್ಲಿ ಭಾರತ ಕಳುಹಿಸುತ್ತಿರುವ ಅತಿ ದೊಡ್ಡ ತಂಡವೆನಿಸಿದೆ. ಈಗಾಗಲೇ ಪ್ರಧಾನಿ ಮೋದಿ  ಭಾರತದ ಕ್ರೀಡಾಪಟುಗಳಿಗೆ ಶುಭ ಹಾರೈಸಿದ್ದಾರೆ. ಜತೆಗೆ ಆತ್ಮ ವಿಶ್ವಾಸ ತುಂಬಿದ್ದಾರೆ.

ಕಳೆದ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಜಾವೆಲಿನ್‌ ತ್ರೋವರ್‌ ಸುಮಿತ್‌ ಅಂಟಿಲ್‌ ಈ ಬಾರಿಯೂ ಚಿನ್ನ ಗೆಲ್ಲುವುದಾಗಿ ಮೋದಿಗೆ ಭರವಸೆ ನೀಡಿದ್ದಾರೆ. ಸುಮಿತ್‌ ಅಂಟಿಲ್‌ ಪ್ಯಾರಾಲಿಂಪಿಕ್ಸ್‌ ಉದ್ಘಾಟನ ಸಮಾರಂಭದಲ್ಲಿ ಶಾಟ್‌ಪುಟರ್‌ ಭಾಗ್ಯಶ್ರೀ ಜಾಧವ್‌ ಅವರೊಂದಿಗೆ ಭಾರತದ ಧ್ವಜಧಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸುಮಿತ್ ಅಂಟಿಲ್ ಮತ್ತು ಕೆಲವು ಪ್ಯಾರಾ ಅಥ್ಲೀಟುಗಳು ನೆಲ್ಸನ್ ಮಂಡೇಲಾ ಕ್ರೀಡಾ ಕಾಂಪ್ಲೆಕ್ಸ್‌ನಲ್ಲಿ ತರಬೇತಿ ಪಡೆದುಕೊಳ್ಳಲಿದ್ದಾರೆ. ನಂತರ ಕ್ರೀಡಾ ಗ್ರಾಮಕ್ಕೆ ವಾಸ್ತವ್ಯ ಬದಲಾಯಿಸಲಿದ್ದಾರೆ.

ಪ್ಯಾರಾ ಅಥ್ಲೆಟಿಕ್ಸ್‌ ತಂಡದಿಂದ ನಾವು ಐದು ಚಿನ್ನದ ಪದಕ ಮತ್ತು ಒಟ್ಟು 12 ಪದಕಗಳನ್ನು ಗೆಲ್ಲುವ ಗುರಿಹೊಂದಿದ್ದೇವೆ. ಇದು ಪ್ಯಾರಾಲಿಂಪಿಕ್ಸ್‌ನಲ್ಲಿ ನಮ್ಮ ಅತ್ಯುತ್ತಮ ಸಾಧನೆಯಾಗಲಿದೆ ಎಂದು ಪ್ಯಾರಾ ಅಥ್ಲೆಟಿಕ್ಸ್‌ ಹೆಡ್‌ ಕೋಚ್‌ ಸತ್ಯನಾರಾಯಣ ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಭಾರತದ ಸ್ಪರ್ಧಿಗಳು– ಆರ್ಚರಿ, ಅಥ್ಲೆಟಿಕ್ಸ್‌, ಬ್ಯಾಡ್ಮಿಂಟನ್‌, ಕೆನೊಯಿಂಗ್‌, ಸೈಕ್ಲಿಂಗ್‌, ಅಂಧರ ಜುಡೊ, ಪವರ್‌ಲಿಫ್ಟಿಂಗ್‌, ರೋಯಿಂಗ್‌, ಶೂಟಿಂಗ್, ಈಜು, ಟೇಬಲ್ ಟೆನಿಸ್ ಮತ್ತು ಟೇಕ್ವಾಂಡೊ ಕ್ರೀಡೆಗಳಲ್ಲಿ ಸ್ಪರ್ಧಿಸಲಿದ್ದಾರೆ.

ಇದನ್ನೂ ಓದಿ Indian Paralympic Team: ಪದಕ ಬೇಟೆಗೆ ಹೊರಟ ಭಾರತೀಯ ಪ್ಯಾರಾಲಿಂಪಿಕ್ಸ್‌ ತಂಡಕ್ಕೆ ಬೀಳ್ಕೊಡುಗೆ

“ದೇಶದ ಅಥ್ಲೀಟ್​ಗಳು ಈ ಬಾರಿಯೂ ಉತ್ತಮ ಪ್ರದರ್ಶನ ನೀಡುವ ಮೂಲಕ ದೇಶದ ಕೀರ್ತಿ ಪತಾಕೆಯನ್ನು ಹಾರಿಸುವ ವಿಶ್ವಾಸ ನನಗಿದೆ. ನಾನು ನಿರೀಕ್ಷೆ ಮಾಡಿದಂತೆ ಈ ಬಾರಿ 25 ಪದಕ ಒಲಿಯಲಿದೆ” ಎಂದು ಭಾರತ ಪ್ಯಾರಾಲಿಂಪಿಕ್ ಸಮಿತಿ ಅಧ್ಯಕ್ಷ ದೇವೇಂದ್ರ ಝಜಾರಿಯಾ ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ ವರ್ಷ ಹಾಂಗ್‌ಝೌನ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲೂ ಭಾರತದ ಪ್ಯಾರಾಲಿಂಪಿಕ್ಸ್‌ ತಂಡ 111 ಪದಕಗಳನ್ನು ಜಯಿಸಿ, ಉತ್ತಮ ಸಾಧನೆ ಮೆರೆದಿತ್ತು. ಹೀಗಾಗಿ ಈ ಬಾರಿ ಹೆಚ್ಚಿನ ನಿರೀಕ್ಷೆ ಇರಿಸಲಾಗಿದೆ. ಜಪಾನ್‌ನ ಕೋಬೆಯಲ್ಲಿ ಈ ವರ್ಷದ ಮೇ ತಿಂಗಳಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಭಾರತದ ಅಥ್ಲೀಟ್​ಗಳು ಆರು ಚಿನ್ನ, ಐದು ಬೆಳ್ಳಿ ಮತ್ತು ಆರು ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದರು. ಪದಕ ಪಟ್ಟಿಯಲ್ಲಿ ಆರನೇ ಸ್ಥಾನ ಪಡೆದಿದ್ದು ಇದುವರೆಗಿನ ಭಾರತದ ಸರ್ವಶ್ರೇಷ್ಠ ಸಾಧನೆಯಾಗಿತ್ತು.

Continue Reading

ಕ್ರೀಡೆ

R Sridhar: ಆಫ್ಘನ್ ಕ್ರಿಕೆಟ್​ ತಂಡದ ಸಹಾಯಕ ಕೋಚ್ ಆಗಿ ಶ್ರೀಧರ್ ನೇಮಕ

R Sridhar: ಹೈದರಾಬಾದ್ ಮೂಲದ ಆರ್.ಶ್ರೀಧರ್ 35 ಪ್ರಥಮ ದರ್ಜೆ ಮತ್ತು 15 ‘ಎ’ ದರ್ಜೆಯ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ. 2015 ಮತ್ತು 2019ರ ಏಕದಿನ ವಿಶ್ವಕಪ್ ಮತ್ತು 2016 ಮತ್ತು 2021ರ ಟಿ-20 ವಿಶ್ವಕಪ್​ಗಳಲ್ಲಿ ಭಾರತ ತಂಡದ ಫೀಲ್ಡಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ್ದರು.

VISTARANEWS.COM


on

R Sridhar
Koo

ನವದೆಹಲಿ: ಭಾರತ ತಂಡದ ಮಾಜಿ ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್(R Sridhar) ಅವರು ಅಫಘಾನಿಸ್ತಾನ(Afghanistan) ಕ್ರಿಕೆಟ್ ತಂಡದ ಸಹಾಯಕ ಕೋಚ್ ಆಗಿ ನೇಮಕಗೊಂಡಿದ್ದಾರೆ. ನ್ಯೂಜಿಲ್ಯಾಂಡ್​ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಮುಂಬರುವ ಸರಣಿಯಲ್ಲಿ ಶ್ರೀಧರ್ ಆಫ್ಘನ್​ ತಂಡದ ಸಹಾಯಕ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

ಶ್ರೀಧರ್​ ಭಾರತ ಕ್ರಿಕೆಟ್ ತಂಡದಲ್ಲಿ 2014ರಿಂದ ಸತತ 7 ವರ್ಷಗಳ ಕಾಲ ಫೀಲ್ಡಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ರವಿಶಾಸ್ತ್ರಿ ಕೋಚ್​ ಆಗಿದ್ದ ವೇಳೆ ಅವರ ಸಹಾಯಕ ಸಿಬ್ಬಂದಿಯ ಭಾಗವಾಗಿ ಕೆಲಸ ಮಾಡಿದ್ದರು. ನ್ಯೂಜಿಲ್ಯಾಂಡ್​ ವಿರುದ್ಧ ಅಫಫ್ಘಾನಿಸ್ತಾನ ಒಂದು ಟೆಸ್ಟ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ.

ಹೈದರಾಬಾದ್ ಮೂಲದ ಆರ್.ಶ್ರೀಧರ್ 35 ಪ್ರಥಮ ದರ್ಜೆ ಮತ್ತು 15 ‘ಎ’ ದರ್ಜೆಯ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ. 2015 ಮತ್ತು 2019ರ ಏಕದಿನ ವಿಶ್ವಕಪ್ ಮತ್ತು 2016 ಮತ್ತು 2021ರ ಟಿ-20 ವಿಶ್ವಕಪ್​ಗಳಲ್ಲಿ ಭಾರತ ತಂಡದ ಫೀಲ್ಡಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ್ದರು.

ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ(ಎನ್​ಸಿಎ) 2014 ರ ವಿಶ್ವಕಪ್‌ನಲ್ಲಿ ಭಾರತ ಅಂಡರ್-19 ತಂಡದೊಂದಿಗೆ ಮತ್ತು ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್‌ ತಂಡದೊಂದಿಗೂ ಸಹಾಯಕ ಕೋಚ್​ ಆಗಿ ಕೆಲಸ ಮಾಡಿದ್ದಾರೆ. ಶ್ರೀಧರ್ ಲೆವೆಲ್-3 ಸರ್ಟಿಫೈಡ್ ಕೋಚ್ ಆಗಿದ್ದಾರೆ. ಸದ್ಯ ಕಿವೀಸ್​ ಮತ್ತು ದಕ್ಷಿಣ ಆಫ್ರಿಕಾ ಸರಣಿಗೆ ಮಾತ್ರ ಸಹಾಯಕ ಕೋಚ್​ ಆಗಿರುವ ಶ್ರೀಧರ್​ ಭವಿಷ್ಯದಲ್ಲಿ ದೀರ್ಘಕಾಲದವರೆಗೆ ತಂಡದಲ್ಲಿ ಮುಂದುವರಿಯಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಅಫಘಾನಿಸ್ತಾನ ಕ್ರಿಕೆಟ್​ ಮಂಡಳಿ(Afghanistan Cricket Board) ತನ್ನ ಹೇಳಿಯಲ್ಲಿ ತಿಳಿಸಿದೆ.

ಇದನ್ನೂ ಓದಿ Virat Kohli: ಐಪಿಎಲ್​ನ ನೆಚ್ಚಿನ ಎದುರಾಳಿ ತಂಡವನ್ನು ಹೆಸರಿಸಿದ ವಿರಾಟ್​ ಕೊಹ್ಲಿ

ಕೀನ್ಯಾ ತಂಡಕ್ಕೆ ದೊಡ್ಡ ಗಣೇಶ್ ಮುಖ್ಯ ಕೋಚ್

ಕೆಲ ದಿನಗಳ ಹಿಂದಷ್ಟೇ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಕನ್ನಡಿಗ ದೊಡ್ಡ ಗಣೇಶ್(Dodda Ganesh) ಅವರು ಕೀನ್ಯಾ ತಂಡದ(Dodda Ganesh Kenya Head Coach) ಮುಖ್ಯ ಕೋಚ್​ ಆಗಿ ನೇಕಮಗೊಂಡಿದ್ದರು. 90ರ ದಶಕದಲ್ಲಿ ಭಾರತ ಮತ್ತು ಕರ್ನಾಟಕ ರಣಜಿ ತಂಡದಲ್ಲಿ ಉತ್ತಮ ಪ್ರದರ್ಶನ ತೋರಿದ ಹೆಗ್ಗಳಿಕೆ ಇವರದ್ದು. ದೊಡ್ಡ ಗಣೇಶ್ ಅವರ ನೇತೃತ್ವದಲ್ಲಿ ಕೀನ್ಯಾ ತಂಡವು ಮುಂಬರುವ ಐಸಿಸಿ ಡಿವಿಷನ್ 2 ಚಾಲೆಂಜ್ ಲೀಗ್​​ನಲ್ಲಿ ಕಣಕ್ಕಿಳಿಯಲಿದೆ.

50 ವರ್ಷದ ದೊಡ್ಡ ಗಣೇಶ್ ನೇರ ನುಡಿಗಳಿಂದಲೇ ಹೆಸರುವಾಸಿ. 1997ರಲ್ಲಿ ಭಾರತ ಪರ 4 ಟೆಸ್ಟ್ ಮತ್ತು ಒಂದು ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 104 ಪಂದ್ಯಗಳಿಂದ 365 ವಿಕೆಟ್​ ಪಡೆದಿದ್ದಾರೆ. ಭಾರತ ತಂಡದ ಪರ 6 ವಿಕೆಟ್​ ಕಿತ್ತಿದ್ದಾರೆ. ಲಿಸ್ಟ್​ ‘ಎ’ ಕ್ರಿಕೆಟ್​ನಲ್ಲಿ 89 ಪಂದ್ಯಗಳನ್ನಾಡಿ 128 ವಿಕೆಟ್​ ಪಡೆದಿದ್ದಾರೆ. ಬ್ಯಾಟಿಂಗ್​ನಲ್ಲಿಯೂ ಉತ್ತಮ ದಾಖಲೆ ಹೊಂದಿರುವ ಇವರು ಲಿಸ್ಟ್​ ‘ಎ’ ಮತ್ತು ಪ್ರಥಮ ದರ್ಜೆ ಕ್ರಿಕೆಟ್​ ಸೇರಿ ಒಟ್ಟು 2,548 ರನ್​ ಬಾರಿಸಿದ್ದಾರೆ. 6 ಬಾರಿ 10 ಕ್ಕೂ ಅಧಿಕ ವಿಕೆಟ್ ಕಬಳಿಸಿದ್ದಾರೆ.

Continue Reading

ಕ್ರೀಡೆ

Lausanne Diamond League: ಇಂದು ಲಾಸಾನ್ನೆ ಡೈಮಂಡ್‌ ಲೀಗ್‌ನಲ್ಲಿ ನೀರಜ್‌ ಸ್ಪರ್ಧೆ

Lausanne Diamond League: ಪ್ಯಾರಿಸ್‌ನಲ್ಲಿ ಒಲಿಂಪಿಕ್ಸ್ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿ ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಿದ್ದ ಪಾಕಿಸ್ತಾನದ ಅರ್ಷದ್ ನದೀಮ್(Arshad Nadeem) ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿಲ್ಲ.

VISTARANEWS.COM


on

Lausanne Diamond League:
Koo

ಲುಸಾನ್‌: 2 ವಾರಗಳ ಹಿಂದಷ್ಟೇ ಮುಕ್ತಾಯ ಕಂಡಿದ್ದ ಪ್ಯಾರಿಸ್ ಒಲಿಂಪಿಕ್ಸ್‌ ಕೂಟದಲ್ಲಿ ಐತಿಹಾಸಿಕ ಬೆಳ್ಳಿ ಪದಕ ಜಯಿಸಿದ್ದ ಭಾರತ ಸ್ಟಾರ್​ ಜಾವೆಲಿನ್​ ಎಸೆತಗಾರ ನೀರಜ್​ ಚೋಪ್ರಾ(Neeraj Chopra) ಅವರು ಮತ್ತೊಂದು ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಭಾಗವಹಿಸಲು ಸಜ್ಜಾಗಿದ್ದಾರೆ. ಇಂದು ತಡರಾತ್ರಿ ನಡೆಯುವ ಲಾಸನ್ ಡೈಮಂಡ್ ಲೀಗ್(Lausanne Diamond League)​ನಲ್ಲಿ ಸ್ಪರ್ಧಿಸಲಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್‌ 2024ರ ಕಂಚಿನ ವಿಜೇತೆ ಆಂಡರ್ಸನ್ ಪೀಟರ್ಸ್ (ಗ್ರೆನಡಾ), ಜಾಕುಬ್ ವಡ್ಲೆಜ್ (ಜೆಕ್ ರಿಪಬ್ಲಿಕ್) ಮತ್ತು ಜೂಲಿಯಸ್ ಯೆಗೊ (ಕೀನ್ಯಾ) ಅವರಿಂದ ನೀರಜ್​ಗೆ ತೀವ್ರ ಪೈಪೋಟಿ ಎದುರಾಗುವ ಸಾಧ್ಯತೆ ಇದೆ. ಪ್ಯಾರಿಸ್‌ನಲ್ಲಿ ಒಲಿಂಪಿಕ್ಸ್ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿ ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಿದ್ದ ಪಾಕಿಸ್ತಾನದ ಅರ್ಷದ್ ನದೀಮ್(Arshad Nadeem) ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿಲ್ಲ.

2022ರಲ್ಲಿ ಡೈಮಂಡ್ ಲೀಗ್ ಚಾಂಪಿಯನ್ ಆಗಿದ್ದ ಚೋಪ್ರಾ ಕಳೆದ ವರ್ಷದ ಪ್ರದರ್ಶನವನ್ನು ಉತ್ತಮಪಡಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. 2023ರಲ್ಲಿ ಎವ್‌ಜಿನಿಯಲ್ಲಿ ನಡೆದಿದ್ದ ಫೈನಲ್‌ನಲ್ಲಿ ಚೋಪ್ರಾ ಎರಡನೇ ಸ್ಥಾನ ಪಡೆದಿದ್ದರು. ಝೆಕ್ ರಿಪಬ್ಲಿಕ್‌ನ ಜೇಕಬ್ ವಡ್ಲೆಚ್ ಮೊದಲ ಸ್ಥಾನ ಪಡೆದಿದ್ದರು. ಸದ್ಯ ಡೈಮಂಡ್ ಲೀಗ್ ಅಂಕಪಟ್ಟಿಯಲ್ಲಿ 7 ಅಂಕದೊಂದಿಗೆ 4ನೇ ಸ್ಥಾನದಲ್ಲಿರುವ ಚೋಪ್ರಾ ಅವರು ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಲು ಸರಣಿಯಲ್ಲಿ ಅಗ್ರ-6ರೊಳಗೆ ಸ್ಥಾನ ಪಡೆಯಬೇಕಾಗಿದೆ. ಗಾಯದ ಕಳವಳದ ಹೊರತಾಗಿಯೂ ಚೋಪ್ರಾ ಅವರು ಒಲಿಂಪಿಕ್ಸ್ ನಂತರ ಸ್ವಿಟ್ಸರ್‌ಲ್ಯಾಂಡ್‌ನಲ್ಲಿ ತರಬೇತಿ ಆರಂಭಿಸಿದ್ದರು.

ಇದನ್ನೂ ಓದಿ Manu Bhaker-Neeraj Chopra: ನೀರಜ್​ ಚೋಪ್ರಾ ಜತೆ ಮದುವೆ ವದಂತಿ; ಸ್ಪಷ್ಟನೆ ನೀಡಿದ ಮನು ಭಾಕರ್​ ತಂದೆ

ಗಾಯದ ಮಧ್ಯೆಯೂ 26ರ ಹರೆಯದ ಚೋಪ್ರಾ ಪ್ಯಾರಿಸ್ ಒಲಿಂಪಿಕ್ಸ್ ಫೈನಲ್‌ನಲ್ಲಿ 89.45 ಮೀ.ದೂರಕ್ಕೆ ಜಾವೆಲಿನ್ ಎಸೆದು ಬೆಳ್ಳಿ ಪದಕ ಗೆದ್ದಿದ್ದರು. ಇದು ನೀರಜ್ ಅವರ ವರ್ಷದ ಎರಡನೇ ಡೈಮಂಡ್ ಲೀಗ್ ಪ್ರದರ್ಶನವಾಗಿದೆ. ಮೇ ತಿಂಗಳಲ್ಲಿ ನಡೆದ ದೋಹಾ ಡೈಮಂಡ್ ಲೀಗ್‌ನಲ್ಲಿ ಅವರು ಎರಡನೇ ಸ್ಥಾನ ಗಳಿಸಿದ್ದರು.

ಹಲವು ವರ್ಷಗಳಿಂದ 90 ಮೀಟರ್‌ ದೂರಕ್ಕೆ ಜಾವೆಲಿನ್‌ ಎಸೆಯುವುದಕ್ಕೆ ಸತತ ಪ್ರಯತ್ನ ನಡೆಸುತ್ತಿರುವ ನೀರಜ್​ ಇನ್ನು ಮುಂದೆ 90 ಮೀ. ಗುರಿಯನ್ನು ದೇವರಿಗೆ ಬಿಡುತ್ತೇನೆ ಎಂದು ಹೇಳಿದ್ದರು. ನೀರಜ್​ರ ಇದುವರೆಗಿನ ಶ್ರೇಷ್ಠ ನಿರ್ವಹಣೆ 89.94 ಮೀ. ದೂರ ಎಸೆದಿರುವುದು. ಈ ಎಸೆತವನ್ನು 2022ರ ಸ್ಟಾಕ್​ಹೋಮ್​ ಡೈಮಂಡ್​ ಲೀಗ್​ನಲ್ಲಿ ಎಸೆದಿದ್ದರು. 

ಪ್ಯಾರಿಸ್‌ ಒಲಿಂಪಿಕ್ಸ್‌ ಬಳಿಕ ನೀರಜ್​ ಅವರು ಜರ್ಮನಿಯಲ್ಲಿ ತೊಡೆಸಂಧು ನೋವಿಗೆ ಚಿಕಿತ್ಸೆ ಪಡೆಯಲಿದ್ದಾರೆ ಎನ್ನಲಾಗಿತ್ತು. ಇದೀಗ ಅವರಿಗೆ ವೈದ್ಯರು ಸದ್ಯಕ್ಕೆ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ನೀರಜ್​ ಡೈಮಂಡ್‌ ಲೀಗ್‌ನಲ್ಲಿ ಪಾಲ್ಗೊಳ್ಳಲು ಮುಂದಾಗಿದ್ದಾರೆ. ಮುಂದಿನ ತಿಂಗಳು ಸೆಪ್ಟೆಂಬರ್ 13 ಮತ್ತು 14ರಂದು ಬ್ರಸೆಲ್ಸ್‌ನಲ್ಲಿ ಕೊನೆಯ ಡೈಮಂಡ್‌ ಲೀಗ್‌ ನಡೆಯಲಿದೆ. ಇದಾದ ಬಳಿಕ ನೀರಜ್​ ಮತ್ತೆ ವೈದ್ಯರನ್ನು ಸಂಪರ್ಕಿಸಿ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಲೈವ್ ಸ್ಟೀಮಿಂಗ್


ಡೈಮಂಡ್ ಲೀಗ್​ನ ನೇರಪ್ರಸಾರ ಇಂದು (ಗುರುವಾರ) ರಾತ್ರಿ 11.30ಕ್ಕೆ ಆರಂಭವಾಗಲಿದೆ. ಭಾರತೀಯ ಕಾಲಮಾನ ಆಗಸ್ಟ್ 23 ರಂದು (12:22 AM) ಪ್ರಸಾರಗೊಳ್ಳಲಿದೆ. ಜಿಯೋ ಸಿನೆಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ವಿಕ್ಷೀಸಬಹುದು. ಟಿವಿ ನೇರ ಪ್ರಸಾರ ಸ್ಪೋರ್ಟ್ಸ್​ 18-3 ಚಾನೆಲ್‌ನಲ್ಲಿ ಲಭ್ಯವಿರುತ್ತದೆ.

Continue Reading
Advertisement
Actress Kangana Ranaut
Latest23 mins ago

Actress Kangana Ranaut : ಬಾಲಿವುಡ್ ಪಾರ್ಟಿಗಳಲ್ಲಿ ನಡೆಯೋದೇನು? ಅಸಲಿ ಕತೆ ರಿವೀಲ್‌ ಮಾಡಿದ ಕಂಗನಾ!

Kangana Ranaut
ಸಿನಿಮಾ27 mins ago

Kangana Ranaut: ಕಂಗನಾ ರಣಾವತ್ ಅಭಿನಯದ ಎಮರ್ಜೆನ್ಸಿ ಚಿತ್ರಕ್ಕೆ ನಿಷೇಧ ಹೇರಲು ಸಿಖ್ಖರ ಒತ್ತಾಯ

Bengaluru News
ಬೆಂಗಳೂರು44 mins ago

Bengaluru News : ಹದಗೆಟ್ಟ ರಸ್ತೆಗಳ ರಿಪೇರಿಗೆ ಮುಂದಾದ ಬಿಬಿಎಂಪಿ; ಇನ್ನೊಂದು ತಿಂಗಳು ಈ ರಸ್ತೆಗಳಲ್ಲಿ ವಾಹನ ಸಂಚಾರ ಬಂದ್‌!

Shreyas Gopal
ಕ್ರೀಡೆ53 mins ago

Shreyas Gopal: ಕೇರಳ ಬಿಟ್ಟು ಮತ್ತೆ ಕರ್ನಾಟಕ ತಂಡಕ್ಕೆ ಮರಳಿದ ಶ್ರೇಯಸ್ ಗೋಪಾಲ್

physical abuse nippani
ಕ್ರೈಂ1 hour ago

Physical Abuse: 10 ರೂಪಾಯಿಯ ಆಸೆ ತೋರಿಸಿ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ವೃದ್ಧ!

UGCET 2024 /NEET seat allotment results will be declared on Sept 1st
ಬೆಂಗಳೂರು1 hour ago

UGCET 2024: ಸೆಪ್ಟೆಂಬರ್ 1ಕ್ಕೆ ಸಿಇಟಿ/ನೀಟ್ ಸೀಟು ಹಂಚಿಕೆ ರಿಸ್ಟಲ್‌ ಅನೌನ್ಸ್‌; ಆಪ್ಶನ್ ಎಂಟ್ರಿಗೆ ಇವತ್ತೆ ಲಾಸ್ಟ್

Viral Video
Latest1 hour ago

Viral Video: ವಧುವಿನ ಮುಂದೆಯೇ ಆಕೆಯ ಸಹೋದರಿಗೆ ಕಿಸ್‌ ಕೊಟ್ಟ ವರ! ಮದುವೆಗೆ ಬಂದವರು ಕಕ್ಕಾಬಿಕ್ಕಿ!

Sophia Leone
ಸಿನಿಮಾ1 hour ago

Sophia Leone: ಪೋರ್ನ್ ತಾರೆ ಸೋಫಿಯಾ ಲಿಯೋನ್ ಸಾವಿನ ರಹಸ್ಯ ಬಯಲು!

Paralympics 2024
ಕ್ರೀಡೆ2 hours ago

Paralympic 2024: ಒಂದು ವಾರ ಮೊದಲೇ ಪ್ಯಾರಿಸ್‌ನತ್ತ ಹೊರಟ ಭಾರತದ ಅಥ್ಲೀಟ್​ ತಂಡ

murder attempt bk sangameshwara son
ಕ್ರೈಂ2 hours ago

Murder Attempt: ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ ಪುತ್ರನ ಹತ್ಯೆಗೆ ಸಂಚು ಪತ್ತೆ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌