Team India | ರಾಹುಲ್‌ ದ್ರಾವಿಡ್‌, ರೋಹಿತ್‌ ಶರ್ಮ ಜತೆ ಸಭೆ ನಡೆಸಲು ಮುಂದಾಗಿದೆ ಬಿಸಿಸಿಐ - Vistara News

T20 ವಿಶ್ವಕಪ್

Team India | ರಾಹುಲ್‌ ದ್ರಾವಿಡ್‌, ರೋಹಿತ್‌ ಶರ್ಮ ಜತೆ ಸಭೆ ನಡೆಸಲು ಮುಂದಾಗಿದೆ ಬಿಸಿಸಿಐ

ಮುಂದಿನ ಆವೃತ್ತಿಯ ವಿಶ್ವ ಕಪ್‌ಗೆ ಸಜ್ಜಾಗಲು ಬಿಸಿಸಿಐ ತಕ್ಷಣದಲ್ಲೇ ಸಭೆಯೊಂದನ್ನು ನಡೆಸಿ ಟೀಮ್‌ ಇಂಡಿಯಾ (Team India) ಬಗ್ಗೆ ಕೆಲವೊಂದು ತೀರ್ಮಾನಗಳನ್ನು ಕೈಗೊಳ್ಳಲಿದೆ.

VISTARANEWS.COM


on

Virat kohli
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ : ಟಿ೨೦ ವಿಶ್ವ ಕಪ್‌ ಅಭಿಯಾನವನ್ನು ಭಾರತ ತಂಡ (Team India) ಹೀನಾಯ ಪ್ರದರ್ಶನದೊಂದಿಗೆ ಕೊನೆಗೊಳಿಸಿದೆ. ಇಂಗ್ಲೆಂಡ್‌ ವಿರುದ್ಧದ ಸೆಮಿ ಫೈನಲ್‌ ಹಣಾಹಣಿಯಲ್ಲಿ ೧೦ ವಿಕೆಟ್‌ಗಳ ಸೋಲು ಅನುಭವಿಸಿರುವುದು ಬಿಸಿಸಿಐ ಪಾಲಿಗೆ ಅರಗಿಸಿಕೊಳ್ಳಲಾಗದ ಸಂಗತಿ ಎನಿಸಿದೆ. ಪೂರಕವಾಗಿ ಆಟಗಾರರ ಆಯ್ಕೆ, ರಣ ತಂತ್ರ ಸೇರಿದಂತೆ ನಾನಾ ವಿಷಯಗಳ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮ ಹಾಗೂ ಹೆಡ್‌ ಕೋಚ್‌ ರಾಹುಲ್‌ ದ್ರಾವಿಡ್‌ ಅವರೊಂದಿಗೆ ಸಭೆ ನಡೆಸಲು ಬಿಸಿಸಿಐ ಹಿರಿಯ ಅಧಿಕಾರಿಗಳು ಮುಂದಾಗಿದ್ದಾರೆ.

ಸಭೆಯಲ್ಲಿ ಮಾಜಿ ನಾಯಕ ವಿರಾಟ್‌ ಕೊಹ್ಲಿಯೂ ಹಾಜರು ಇರುತ್ತಾರೆ ಎಂಬುದಾಗಿ ಬಿಸಿಸಿಐ ಮೂಲಗಳು ತಿಳಿಸಿವೆ. ಭಾರತ ತಂಡ ವಿಶ್ವ ಕಪ್‌ನಲ್ಲಿ ಹೀನಾಯ ಸೋಲು ಕಾಣುವುದಕ್ಕೆ ಕಾರಣವೇನು ಹಾಗೂ ಸುಧಾರಿಸಿಕೊಳ್ಳುವುದಕ್ಕೆ ಇರುವ ಅವಕಾಶಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಬಿಸಿಸಿಐ ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್‌ ಸಂಸ್ಥೆ ಎಂಬ ಖ್ಯಾತಿ ಪಡೆದುಕೊಂಡಿದೆ. ಆದರೆ, ೨೦೧೧ರಿಂದ ಒಂದೇ ಒಂದು ಐಸಿಸಿ ಟ್ರೋಫಿಯನ್ನು ಗೆದ್ದಿಲ್ಲ. ದೊಡ್ಡ ಸಂಸ್ಥೆಗೆ ವಿಶ್ವ ಮಟ್ಟದ ಟ್ರೋಫಿ ಗೆಲ್ಲಲು ಯಾಕೆ ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆ ಜಗತ್ತಿನ ಮೂಲೆ ಮೂಲೆಗಳಿಂದ ಎದ್ದಿದೆ. ಈ ಹಿನ್ನೆಲೆಯಲ್ಲಿ ಟೀಮ್‌ ಇಂಡಿಯಾದ ಆಟಗಾರರ ಹಾಗೂ ಅಧಿಕಾರಿಗಳ ನಡುವಿನ ಸಭೆ ಹೆಚ್ಚು ಮಹತ್ವ ಪಡೆದುಕೊಂಡಿದೆ.

೨೦೨೪ಕ್ಕೆ ಸಿದ್ಧತೆ

ಮುಂದಿನ ಆವೃತ್ತಿಯ ಟಿ೨೦ ವಿಶ್ವ ಕಪ್‌ ೨೦೨೪ಲ್ಲಿ ನಡೆಯಲಿದೆ. ವೆಸ್ಟ್‌ ಇಂಡೀಸ್‌ ಹಾಗೂ ಅಮೆರಿಕ ಟೂರ್ನಿಗೆ ಆತಿಥ್ಯ ವಹಿಸಲಿದೆ. ಆ ಟೂರ್ನಿಯಲ್ಲಾದರೂ ಚಾಂಪಿಯನ್ ಪಟ್ಟ ಗೆಲ್ಲಬೇಕು ಎಂಬುದು ಬಿಸಿಸಿಐ ಗುರಿಯಾಗಿದೆ. ಅದಕ್ಕಾಗಿ ಯುವ ತಂಡವೊಂದನ್ನು ಕಟ್ಟುವ ಕಾರ್ಯ ಈ ಸಭೆಯ ಬಳಿಕ ಆರಂಭವಾಗಬಹುದು ಎಂಬುದಾಗಿಯೂ ಕ್ರಿಕೆಟ್‌ ಪಂಡಿತರು ಹೇಳುತ್ತಿದ್ದಾರೆ.

ಹಿರಿಯ ಆಟಗಾರರಿಗೆ ಕೊಕ್‌

ಭಾರತ ತಂಡದಲ್ಲಿ ೩೦ ವರ್ಷ ದಾಟಿದ ಹಿರಿಯ ಆಟಗಾರರೇ ಹೆಚ್ಚಿದ್ದಾರೆ ಎಂಬ ಆರೋಪಗಳಿವೆ. ಇದರಿಂದಲೇ ಸೋಲಿಗೆ ಒಳಗಾಗುತ್ತಿದೆ ಎಂಬುದು ಎಲ್ಲರ ಅರೋಪವಾಗಿದೆ. ಹೀಗಾಗಿ ಯುವ ಆಟಗಾರರನ್ನು ಒಳಗೊಂಡಿರುವ ತಂಡವನ್ನು ಕಟ್ಟುವುದಕ್ಕಾಗಿ ಬಿಸಿಸಿಐ ಯೋಜನೆ ರೂಪಿಸಿಕೊಂಡಿದೆ ಎನ್ನಲಾಗಿದೆ. ಸಭೆಯಲ್ಲಿ ಈ ವಿಚಾರವೂ ಚರ್ಚೆಗೆ ಬರುವುದು ಖಚಿತ.

ಇದನ್ನೂ ಓದಿ ವ| Team India | ವಿಶ್ವ ಕಪ್‌ ನಿರ್ಗಮನದ ಬಳಿಕ ಟೀಮ್ ಇಂಡಿಯಾ ಕೋಚಿಂಗ್‌ ಸಿಬ್ಬಂದಿಗೆ ರಜಾ ಕೊಟ್ಟ ಬಿಸಿಸಿಐ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

Team India: ವೆಸ್ಟ್​ ಇಂಡೀಸ್​ ಮೈದಾನ ಭಾರತದ ಪಾಲಿಗೆ ಅನ್ ಲಕ್ಕಿ; ಹಿಂದಿನ 2 ವಿಶ್ವಕಪ್ ಟೂರ್ನಿಯ​ ಹಿನ್ನೋಟ ಇಲ್ಲಿದೆ

Team India: ವೆಸ್ಟ್​ ಇಂಡೀಸ್​ನಲ್ಲಿ ನಡೆದ ಇದುವರೆಗಿನ ಐಸಿಸಿ ಟೂರ್ನಿಯಲ್ಲಿ ಭಾರತಕ್ಕೆ ನಿರಾಸೆ ಎದುರಾಗಿದ್ದೆ ಹೆಚ್ಚು. 2007 ಏಕದಿನ ವಿಶ್ವಕಪ್​, 2010 ಟಿ20 ವಿಶ್ವಕಪ್​ನಲ್ಲಿ ಭಾರತ ಅತ್ಯಂತ ಹೀನಾಯವಾಗಿ ಸೋಲು ಕಂಡ ಅವಮಾನಕ್ಕೆ ಸಿಲುಕಿತ್ತು

VISTARANEWS.COM


on

T20 World Cup 2024
Koo

ಬೆಂಗಳೂರು: ಭಾರತ ತಂಡ(Team India) ಟಿ20 ವಿಶ್ವಕಪ್​ ಟೂರ್ನಿಯ(T20 World Cup 2024) ಲೀಗ್​ ಪಂದ್ಯವನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್​ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ. ನಾಕೌಟ್​ ಹಂತಕ್ಕೇರಿದರೆ ವೆಸ್ಟ್​ ಇಂಡೀಸ್​ನಲ್ಲಿ(team india in west indies) ಪಂದ್ಯವನ್ನಾಡಬೇಕಿದೆ. ಇದು ಭಾರತಕ್ಕೆ ಚಿಂತೆ ಪಡುವಂತೆ ಮಾಡಿದೆ.

ಹೌದು, ವೆಸ್ಟ್​ ಇಂಡೀಸ್​ನಲ್ಲಿ ನಡೆದ ಇದುವರೆಗಿನ ಐಸಿಸಿ ಟೂರ್ನಿಯಲ್ಲಿ ಭಾರತಕ್ಕೆ ನಿರಾಸೆ ಎದುರಾಗಿದ್ದೆ ಹೆಚ್ಚು. 2007 ಏಕದಿನ ವಿಶ್ವಕಪ್​, 2010 ಟಿ20 ವಿಶ್ವಕಪ್​ನಲ್ಲಿ ಭಾರತ ಅತ್ಯಂತ ಹೀನಾಯವಾಗಿ ಸೋಲು ಕಂಡ ಅವಮಾನಕ್ಕೆ ಸಿಲುಕಿತ್ತು. 2007ರಲ್ಲಿ ದ್ರಾವಿಡ್​ ಸಾರಥ್ಯದಲ್ಲಿ ಕಣಕ್ಕಿಳಿದಿದ್ದ ಭಾರತ ತಂಡ ಬಾಂಗ್ಲಾದೇಶ ವಿರುದ್ಧವೂ ಸೋಲು ಕಂಡು ಗುಂಪು ಹಂತದಿಂದಲೇ ಹೊರಬಿದ್ದಿತ್ತು. 2010ರ ಟಿ20 ವಿಶ್ವಕಪ್​ನಲ್ಲಿಯೂ ಧೋನಿ ಸಾರಥ್ಯದ ಟೀಮ್​ ಇಂಡಿಯಾ ಗುಂಪು ಹಂತದಿಂದಲೇ ನಿರ್ಗಮನ ಕಂಡಿತ್ತು. ಹೀಗಾಗಿ ಕೆರಿಬಿಯನ್​ ದ್ವೀಪ ಭಾರತದ ಪಾಲಿಗೆ ಅದೃಷ್ಟವಲ್ಲ ಎನ್ನಲಡ್ಡಿಯಿಲ್ಲ.

2007ರ ಟಿ20 ವಿಶ್ವ ಕಪ್ (T20 World Cup 2024)​ ಉದ್ಘಾಟನಾ ಆವೃತ್ತಿಯಲ್ಲೇ ಚಾಂಪಿಯನ್​ ಆಗಿ ಭಾರತ ಹೊರಹೊಮ್ಮಿತು. ಇದರ ಬಳಿಕ ಭಾರತ ಮತ್ತೆ ಟಿ20 ಚಾಂಪಿಯನ್​ ಆಗಲೇ ಇಲ್ಲ. ಇದೀಗ 17 ವರ್ಷಗಳ ಬಳಿಕ ಮತ್ತೆ ಚಾಂಪಿಯನ್​ ಆಗುವ ಇರಾದೆಯೊಂದಿಗೆ ಟೀಮ್ ಇಂಡಿಯಾ ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ ಆದರೆ, ತಂಡಕ್ಕೆ ಹಲವು ಸವಾಲು ಕೂಡ ಇದೆ.

ಈ ಕೂಟದಲ್ಲಿ ಭಾರತ ನೀಡುವ ಪ್ರದರ್ಶನದ ಮೇಲೆ ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮ ಟಿ20 ಭವಿಷ್ಯ ಅಡಗಿದೆ. ಈ ಕೂಟ ಮುಗಿದ ಮೇಲೆ ಯಾರ್ಯಾರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವ ಪ್ರಶ್ನೆಗಳೂ ಇವೆ. ಹೀಗಾಗಿ ರೋಹಿತ್​ ಮತ್ತು ಕೊಹ್ಲಿ ಪಾಲಿಗೆ ಇದೊಂದು ಮಹತ್ವದ ಕೂಟ ಎನ್ನಲಡ್ಡಿಯಿಲ್ಲ.

ಇದನ್ನೂ ಓದಿ IND vs PAK T20 World Cup: ಪಾಕಿಸ್ತಾನ​ ವಿರುದ್ಧ ಭಾರತಕ್ಕೆ ಗೆಲುವು ಖಚಿತ ಎಂದ ಪಾಕ್​ ಆಟಗಾರ

ನಂ.1 ಆದರೂ ಎಚ್ಚರ ಅಗತ್ಯ


ಟಿ20 ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿರುವ ಭಾರತ ತಂಡ ಬಲಿಷ್ಠ ಎನ್ನಬಹುದು. ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌, ಹಾರ್ದಿಕ್‌ ಪಾಂಡ್ಯ, ರಿಷಭ್​ ಪಂತ್​, ಜಸ್​ಪ್ರೀತ್​ ಬುಮ್ರಾ, ಸೂರ್ಯಕುಮಾರ್​ ತಂಡದ ಪ್ರಮುಖ ಆಟಗಾರರು. ಆದರೆ, ಭಾರತ ಪೂರ್ಣ ಎಚ್ಚರವಾಗಿಯೇ ಪ್ರತೀ ಪಂದ್ಯದಲ್ಲಿ ಕಣಕ್ಕಿಳಿಯಬೇಕು. ಎದುರಾಳಿಯನ್ನು ಒಮ್ಮೆಯೂ ಕಡೆಗಣಿಸುವುದು ಸಾಧ್ಯವೇ ಇಲ್ಲ. ಯಾರು ಯಾರನ್ನು ಕೆಡವಿ ಬೀಳಿಸುತ್ತಾರೆ ಎಂಬುದು ಟಿ20 ಮಾದರಿಯಲ್ಲಿ ಅಂದಾಜಿಸುವುದಕ್ಕೆ ಕಷ್ಟ ಸಾಧ್ಯ. ಇದಕ್ಕೆ ಉತ್ತಮ ನಿದರ್ಶನವೆಂದರೆ ಅಭ್ಯಾಸ ಪಂದ್ಯದಲ್ಲಿ ಅನುಭವಿ ಬಾಂಗ್ಲಾದೇಶಕ್ಕೆ ಕ್ರಿಕೆಟ್​ ಶಿಶು ಅಮೆರಿಕ ಸೋಲುಣಿಸಿದ್ದು. ಆದ್ದರಿಂದ ಭಾರತ ಎಚ್ಚರ ತಪ್ಪಬಾರದು. ಕೆಲವೇ ಓವರ್‌ಗಳಲ್ಲಿ ಪಂದ್ಯದ ಚಿತ್ರಣವೇ ಬದಲಾಗುವುದು ಟಿ20 ಪಂದ್ಯಗಳ ಶಕ್ತಿ.

ಟಿ20 ವಿಶ್ವ ಕಪ್​ನಲ್ಲಿ ಭಾರತ ಸಾಧನೆ

2007ಚಾಂಪಿಯನ್​
20092ನೇ ಸುತ್ತು
20102ನೇ ಸುತ್ತು
20122ನೇ ಸುತ್ತು
2014ರನ್ನರ್​ ಅಪ್​
2016ಸೆಮಿಫೈನಲ್​
20212ನೇ ಸುತ್ತು
2022ಸೆಮಿಫೈನಲ್​
Continue Reading

ಕ್ರೀಡೆ

Shubman Gill: ಕಿರುತೆರೆ​ ನಟಿಯೊಂದಿಗೆ ಶುಭಮನ್​ ಗಿಲ್ ಮದುವೆ?; ಸ್ವತಃ ಸ್ಪಷ್ಟನೆ ನೀಡಿದ ನಟಿ

Shubman Gill: ಸಾಮಾಜಿಕ ಮಾಧ್ಯಮಗಳ ವರದಿ ಪ್ರಕಾರ ಶುಭಮನ್​ ಗಿಲ್​ ಮತ್ತು ರಿದ್ಧಿಮಾ ಪಂಡಿತ್ ಕೆಲವು ವರ್ಷಗಳಿಂದ ಗುಟ್ಟಾಗಿ ಪ್ರೀತಿಸುತ್ತಿದ್ದರು. ಈ ಜೋಡಿ ಇದೇ ಡಿಸೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ ಎಂದು ಹೇಳಿದೆ. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ನಟಿ, ತಾನು ಶುಭ್‌ಮನ್ ಗಿಲ್ ಅವರನ್ನು ಮದುವೆಯಾಗುತ್ತಿಲ್ಲ ಎಂದು ಹೇಳಿದ್ದಾರೆ.

VISTARANEWS.COM


on

Shubman Gill
Koo

ಮುಂಬಯಿ: ಟೀಮ್​ ಇಂಡಿಯಾದ ಸ್ಟಾರ್​​ ಯುವ ಆಟಗಾರ ಶುಭಮನ್​ ಗಿಲ್(Shubman Gill)​ ಅವರು ಶೀಘ್ರದಲ್ಲೇ ವಿವಾಹವಾಗಲಿದ್ದಾರೆ ಎನ್ನುವ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಗಿಲ್​ ಮದುವೆಯಾಗುತ್ತಿರುವುದು ಸಾರಾ ತೆಂಡೂಲ್ಕರ್(sara tendulkar)​ ಅಲ್ಲ ಬದಲಾಗಿ ಕಿರುತೆರೆಯ ಸುಂದರಿ ರಿದ್ಧಿಮಾ ಪಂಡಿತ್ ಅವರನ್ನು ವರಿಸಲಿದ್ದಾರೆ ಎಂದು ವರದಿಯಾಗಿದೆ. ಇದಕ್ಕೆ ರಿದ್ಧಿಮಾ ಪಂಡಿತ್(Ridhima Pandit) ಸ್ಪಷ್ಟನೆಯನ್ನು ಕೂಡ ನೀಡಿದ್ದಾರೆ.

ಸಾಮಾಜಿಕ ಮಾಧ್ಯಮಗಳ ವರದಿ ಪ್ರಕಾರ ಶುಭಮನ್​ ಗಿಲ್​ ಮತ್ತು ರಿದ್ಧಿಮಾ ಪಂಡಿತ್ ಕೆಲವು ವರ್ಷಗಳಿಂದ ಗುಟ್ಟಾಗಿ ಪ್ರೀತಿಸುತ್ತಿದ್ದರು. ಈ ಜೋಡಿ ಇದೇ ಡಿಸೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ ಎಂದು ಹೇಳಿದೆ. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ನಟಿ, ತಾನು ಶುಭ್‌ಮನ್ ಗಿಲ್ ಅವರನ್ನು ಮದುವೆಯಾಗುತ್ತಿಲ್ಲ. ಈ ವದಂತಿಗಳಲ್ಲಿ ಯಾವುದೇ ಸತ್ಯವಿಲ್ಲ. ನನ್ನ ಜೀವನದಲ್ಲಿ ಈ ರೀತಿಯ ಮಹತ್ವದ ಘಟನೆ ನಡೆದರೆ ನಾನೇ ಮುಂದೆ ಬಂದು ಸುದ್ದಿ ಪ್ರಕಟಿಸುತ್ತೇನೆ ಎಂದು ಹೇಳುವ ಮೂಲಕ ಈ ಸುಳ್ಳು ಸುದ್ದಿಯನ್ನು ತಳ್ಳಿಹಾಕಿದ್ದಾರೆ.

ಈ ಜೋಡಿ ಮದುವೆಯಾಗುತ್ತಾರೆ ಎಂಬ ಸುಳ್ಳು ಸುದ್ದಿ ಹಬ್ಬಲು ಕಾರಣವೆಂದರೆ, ಕೆಲ ದಿನಗಳ ಹಿಂದೆ ರಿದ್ಧಿಮಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಮದುವೆಯ ಕುರಿತಾದ ವಿಡಿಯೊವೊಂದನ್ನು ಹಾಕಿದ್ದರು. ಇದೇ ವೇಳೆ ಕೆಲ ನೆಟ್ಟಿಗರು ಗಿಲ್ ಅವರ ಹೆಸರನ್ನು ಪ್ರಸ್ತಾಪಿಸಿದ್ದರು. ಹೀಗಾಗಿ ಗಿಲ್​ ಮತ್ತು ರಿದ್ಧಿಮಾ ಮದುವೆಯಾಗುತ್ತಾರೆ ಎನ್ನುವ ಸುದ್ದಿ ಹರಡಿತು.

ಇದನ್ನೂ ಓದಿ Shubman Gill: ಶತಕದ ಐಪಿಎಲ್​ ಪಂದ್ಯವನ್ನಾಡಲು ಸಜ್ಜಾದ ಗಿಲ್​; ಸಾಧನೆ ಹೇಗಿದೆ?

ಸಾರಾ ತೆಂಡೂಲ್ಕರ್ ಮತ್ತು ಶುಭಮನ್​ ಗಿಲ್​(Gill And Sara) ಇಬ್ಬರು ಕದ್ದು ಮುಚ್ಚಿ ಡೇಟಿಂಗ್(sara tendulkar and shubman gill relationship)​ ನಡೆಸುತ್ತಿದ್ದಾರೆ, ಇವರಿಬ್ಬರು ಪ್ರೀತಿ ಕೂಡ ಮಾಡುತ್ತಿದ್ದಾರೆ ಎಂಬ ಸುದ್ದಿ ಈಗಾಗಲೇ ಹಲವು ಬಾರಿ ಕೇಳಿಬಂದಿತ್ತು.  ಆದಾಗ್ಯೂ, ಇಬ್ಬರೂ ವದಂತಿಯನ್ನು ನಿರಾಕರಿಸಿಲ್ಲ ಅಥವಾ ದೃಢಪಡಿಸಿಲ್ಲ. ಪಾಪರಾಜಿಗಳು ಇಬ್ಬರು ಸೆಲೆಬ್ರಿಟಿಗಳನ್ನು ಸಾರ್ವಜನಿಕವಾಗಿ ಸಾಕಷ್ಟು ಬಾರಿ ಪ್ರಶ್ನಿಸಿದ್ದಾರೆ.

ರೆಸ್ಟೋರೆಂಟ್​ನಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದ ಸಾರಾ-ಗಿಲ್​

ಏಕದಿನ ವಿಶ್ವಕಪ್​ ಪಂದ್ಯವನ್ನಾಡಲು ಟೀಮ್​ ಇಂಡಿಯಾದ ಆಟಗಾರರು ಮುಂಬೈಗೆ ಬಂದಿದ್ದ ವೇಳೆ ಶುಭಮನ್​ ಗಿಲ್​ ಮತ್ತು ಸಾರಾ ಅವರು ರೆಸ್ಟೋರೆಂಟ್​ನಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದರು. ಇಬ್ಬರು ಜತೆಯಾಗಿ ಕಾಣಿಸಿಕೊಂಡ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ರೆಸ್ಟೋರೆಂಟ್‌ನಿಂದ ಸಾರಾ ಜತೆಗೆ ಬರುತ್ತಿರುವುದನ್ನು ಪಾಪರಾಜಿಗಳು ಕಂಡ ತಕ್ಷಣ ಶುಭಮನ್​ ಗಿಲ್​ ತನಗೇನು ತಿಳಿಯದವರಂತೆ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಇದೊಂದು ಅಚಾನಕ್ ಮುಖಾಮುಖಿ ಎಂಬಂತೆ ತಮ್ಮ ಪತವನ್ನು ಬದಲಿಸಿ ಒಮ್ಮೆ ಅತ್ತಿಂದಿತ್ತ ಇತ್ತಿಂದತ್ತ ನಡೆದಿದ್ದರು. ಗಿಲ್ ಕ್ರಿಕೆಟ್​ ಆಡುವ ವೇಳೆ ಹೆಚ್ಚಾಗಿ ಸಾರಾ ಕೂಡ ಪ್ರೇಕ್ಷಕರ ಸ್ಟ್ಯಾಂಡ್​ನಲ್ಲಿ ಕಾಣಿಸಿಕೊಳ್ಳುತ್ತಾರೆ. ಅಲ್ಲದೆ ಗಿಲ್​ ಉತ್ತಮವಾಗಿ ಆಡಿದಾಗ ಚಪ್ಪಾಳೆ ತಟ್ಟುತ್ತಾ, ಔಟಾದಾಗ ಸಪ್ಪೆ ಮೋರೆ ಹಾಕಿ ಕುಳಿತ ಹಲವು ಫೋಟೊ ಮತ್ತು ವಿಡಿಯೊ ಈಗಾಗಲೇ ವೈರಲ್​ ಕೂಡ ಆಗಿದೆ.

Continue Reading

ಕ್ರೀಡೆ

Ambati Rayudu: ಸ್ಟಾಂಡರ್ಡ್​ ಕಮ್ಮಿ ಮಾಡಿದರೆ ಉತ್ತಮ ಎಂದು ಕೊಹ್ಲಿಯ ಕಾಲೆಳೆದ ರಾಯುಡು

Ambati Rayudu: 55 ಅಂತರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿರುವ ರಾಯುಡು 3 ಶತಕ ಮತ್ತು 10 ಅರ್ಧ ಶತಕಗಳೊಂದಿಗೆ 47.05 ಸರಾಸರಿಯೊಂದಿಗೆ 1694 ರನ್‌ಗಳಿಸಿದ್ದರು. ರಾಯುಡು ಅವರಿಗೆ ಟೆಸ್ಟ್‌ ತಂಡದಲ್ಲಿ ಆಡುವ ಅವಕಾಶ ಲಭ್ಯವಾಗಿರಲಿಲ್ಲ.

VISTARANEWS.COM


on

Ambati Rayudu
Koo

ಮುಂಬಯಿ: ಈ ಬಾರಿಯ ಐಪಿಎಲ್​ ಟೂರ್ನಿ ವೇಳೆ ಆರ್​ಸಿಬಿ(RCB) ಮತ್ತು ವಿರಾಟ್​ ಕೊಹ್ಲಿ(virat kohli) ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡಿದ್ದ ಟೀಮ್​ ಇಂಡಿಯಾದ ಮಾಜಿ ಆಟಗಾರ ಅಂಬಾಟಿ ರಾಯುಡು(Ambati Rayudu) ಇದೀಗ ಮತ್ತೊಮ್ಮೆ ಕೊಹ್ಲಿಯನ್ನು ಟೀಕಿಸಿದ್ದಾರೆ. ಐಪಿಎಲ್​ ಆಡಿದಂತಲ್ಲ ಇದು ಐಸಿಸಿ ಟೂರ್ನಿ ಎಂದು ಹೇಳುವ ಮೂಲಕ ವ್ಯಂಗ್ಯವಾಡಿದ್ದಾರೆ.

ಟಿ20 ವಿಶ್ವಕಪ್​ ಬಗೆಗಿನ ಚರ್ಚೆಯ ವೇಳೆ ರಾಯುಡು ಅವರು, ಕೊಹ್ಲಿ ತನ್ನ ತಂಡದಲ್ಲಿರುವ ಸಹ ಆಟಗಾರರಂತೆ ಪ್ರದರ್ಶನ ನೀಡಬೇಕು. ಕೊಂಚ ಸ್ಟಾಂಡರ್ಡ್​ ಕಮ್ಮಿ ಮಾಡುಕೊಳ್ಳುವುದು ಸೂಕ್ತ. ​ಕೊಹ್ಲಿ ತಂಡದಲ್ಲಿರುವ ಪ್ರತಿಯೊಬ್ಬರು ತಮ್ಮಂತೆ ಆಟವಾಡಲು ಬಯಸುತ್ತಾರೆ. ಇದು ಕಷ್ಟಕರವಾಗಿದ್ದು, ತಂಡದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಯುಡು ಅವರ ಈ ಹೇಳಿಕೆಗೆ ಕೊಹ್ಲಿ ಅಭಿಮಾನಿಗಳು ಸರಿಯಾಗಿಯೇ ತಿರುಗೇಟು ನೀಡಿದ್ದಾರೆ. ಕ್ರಿಕೆಟ್​ ಮೈದಾನದಲ್ಲಿ ಮತ್ತು ಸಾರ್ವಜನಿಕ ಸ್ಥಳದಲ್ಲಿ ನಿಮ್ಮ ವರ್ತನೆಯನ್ನು ನಾವು ಕಂಡಿದ್ದೇವೆ. ಹೀಗಾಗಿ ನೀವು ಬೇರೆಯವರಿಗೆ ಸ್ಟಾಂಡರ್ಡ್ ಪಾಠ ಮಾಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ರಾಯುಡು ಈ ಹಿಂದೆ ತಮ್ಮ ಕಾರಿಗೆ ಅಡ್ಡ ಬಂದ ಕಾರಣಕ್ಕೆ ವಾಕಿಂಗ್​ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದರು.

ಇದನ್ನೂ ಓದಿ Ambati Rayudu: ವೈಎಸ್​ಆರ್​ಪಿ ಪಕ್ಷ ತೊರೆದ ಮೂರೇ ದಿನಕ್ಕೆ ಮತ್ತೊಂದು ಪಕ್ಷ ಸೇರಲು ಮುಂದಾದ ಅಂಬಾಟಿ ರಾಯುಡು

ಪ್ಲೇ ಆಫ್ಸ್‌ ರೇಸ್‌ನಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಹೊರದಬ್ಬಿದ ದಿನದಿಂದಲೂ ಸಿಎಸ್‌ಕೆ ಮಾಜಿ ಬ್ಯಾಟರ್‌ ಅಂಬಾಟಿ ರಾಯುಡು ನಾನಾ ರೀತಿಯಲ್ಲಿ ಆರ್‌ಸಿಬಿ ಮತ್ತು ತಂಡವನ್ನು ಟೀಕಿಸುತ್ತಾಲೇ ಬಂದಿದಿದ್ದರು.

“ಆರ್‌ಸಿಬಿ ಬೆಂಬಲಿಗರನ್ನು ಕಂಡು ನನ್ನ ಹೃದಯ ಉಕ್ಕುತ್ತಿದೆ. ಹಲವು ವರ್ಷಗಳಿಂದ ಒಂದೇ ಉತ್ಸಾಹ ಮತ್ತು ಪ್ರೀತಿಯಿಂದ ಅವರು ತಮ್ಮ ತಂಡವನ್ನು ಬೆಂಬಲಿಸಿಕೊಂಡು ಬಂದಿದ್ದಾರೆ. ವ್ಯಕ್ತಿ ಪೂಜೆ ಮತ್ತು ವೈಯಕ್ತಿಕ ಮೈಲುಗಲ್ಲುಗಳಿಗಿಂತಲೂ ತಂಡಕ್ಕೆ ಟ್ರೋಫಿ ಗೆದ್ದುಕೊಡಬೇಕು ಎಂಬುದು ತಂಡದ ಉದ್ದೇಶ ಆಗಿದ್ದರೆ, ಈಗಾಗಲೇ ತಂಡ ಟ್ರೋಫಿ ಗೆಲ್ಲುತ್ತಿತ್ತು. ಆರ್‌ಸಿಬಿ ಕಳೆದ 17 ಆವೃತ್ತಿಯಲ್ಲಿ ಎಂತಹ ಅದ್ಭುತ ಆಟಗಾರರನ್ನು ಕೈಬಿಟ್ಟಿದೆ ಎಂಬುದನ್ನು ನೆನಪಿಸಿಕೊಳ್ಳಿ. ತಂಡಕ್ಕೆ ಮೊದಲ ಆದ್ಯತೆ ನೀಡುವ ಆಟಗಾರರನ್ನು ತರುವಂತೆ ಮ್ಯಾನೇಜ್ಮೆಂಟ್‌ ಮೇಲೆ ಒತ್ತಡ ಹಾಕಿ. ಮೆಗಾ ಆಕ್ಷನ್‌ ಮೂಲಕ ತಂಡ ಹೊಸ ಅಧ್ಯಾಯ ಬರೆಯಲಿ” ಎಂದು ರಾಯುಡು ಗೇಲಿ ಮಾಡಿ ಟ್ವೀಟ್‌ ಮಾಡಿದ್ದರು.

ಭಾರತ ಪರ ಮೂರು ಶತಕ

55 ಅಂತರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿರುವ ರಾಯುಡು 3 ಶತಕ ಮತ್ತು 10 ಅರ್ಧ ಶತಕಗಳೊಂದಿಗೆ 47.05 ಸರಾಸರಿಯೊಂದಿಗೆ 1694 ರನ್‌ಗಳಿಸಿದ್ದರು. ರಾಯುಡು ಅವರಿಗೆ ಟೆಸ್ಟ್‌ ತಂಡದಲ್ಲಿ ಆಡುವ ಅವಕಾಶ ಲಭ್ಯವಾಗಿರಲಿಲ್ಲ. 2013 ರಲ್ಲಿ ಜಿಂಬಾಬ್ವೆ ಎದುರು ಪಾದಾರ್ಪಣ ಪಂದ್ಯವಾಡಿದ ರಾಯುಡು ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನು ರಾಂಚಿಯಲ್ಲಿ ಆಡಿದ್ದರು.

Continue Reading

ಕ್ರೀಡೆ

IND vs PAK T20 World Cup: ಪಾಕಿಸ್ತಾನ​ ವಿರುದ್ಧ ಭಾರತಕ್ಕೆ ಗೆಲುವು ಖಚಿತ ಎಂದ ಪಾಕ್​ ಆಟಗಾರ

IND vs PAK T20 World Cup: ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಯಾರು ಗೆಲ್ಲಬಹುದು ಎಂಬ ಪ್ರಶ್ನೆಗೆ ಉತ್ತರಿಸಿದ ಪಾಕ್​ ತಂಡದ ಮಾಜಿ ವಿಕೆಟ್​ ಕೀಪರ್​ ಕಮ್​ ಬ್ಯಾಟರ್​ ಕಮ್ರಾನ್​ ಅಕ್ಮಲ್(Kamran Akmal)​, ಪಾಕಿಸ್ತಾನವನ್ನು ಭಾರತ ಸೋಲಿಸುವುದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದ್ದಾರೆ.

VISTARANEWS.COM


on

IND vs PAK
Koo

ಕರಾಚಿ: ಸಾಂಪ್ರದಾಯಿಕ ಬುದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ(IND vs PAK T20 World Cup) ನಡುವಣ ಟಿ20 ವಿಶ್ವಕಪ್(T20 World Cup 2024)​ ಪಂದ್ಯ ಜೂನ್ 9ರಂದು ನಡೆಯಲಿದೆ. ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಉಭಯ ದೇಶಗಳ ಅಭಿಮಾನಿಗಳು ಮಾತ್ರವಲ್ಲದೆ ಇಡೀ ವಿಶ್ವವೇ ಕಾದು ಕುಳಿತಿದೆ. ಪಂದ್ಯಕ್ಕೂ ಮುನ್ನವೇ ಯಾವ ತಂಡ ಗೆಲ್ಲಲಿದೆ ಎಂದು ಕ್ರಿಕೆಟ್​ ಪಂಡಿತರು ಭವಿಷ್ಯ ನುಡಿಯಲಾರಂಭಿಸಿದ್ದಾರೆ. ಆದರೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗನ ಭವಿಷ್ಯವೊಂದು ಅಚ್ಚರಿಗೆ ಕಾರಣವಾಗಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಯಾರು ಗೆಲ್ಲಬಹುದು ಎಂಬ ಪ್ರಶ್ನೆಗೆ ಉತ್ತರಿಸಿದ ಪಾಕ್​ ತಂಡದ ಮಾಜಿ ವಿಕೆಟ್​ ಕೀಪರ್​ ಕಮ್​ ಬ್ಯಾಟರ್​ ಕಮ್ರಾನ್​ ಅಕ್ಮಲ್(Kamran Akmal)​, ಪಾಕಿಸ್ತಾನವನ್ನು ಭಾರತ ಸೋಲಿಸುವುದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದ್ದಾರೆ.

“ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನ​ ತಂಡದ ಪ್ರದರ್ಶನವನ್ನು ನೋಡುವಾಗ ಅದು ಕೂಡ ಭಾರತದಂತಹ ಬಲಿಷ್ಠ ತಂಡದ ವಿರುದ್ಧ ಗೆಲ್ಲುವುದು ಕನಸಿನ ಮಾತು. ಐರ್ಲೆಂಡ್‌ನಂತಹ ಸಣ್ಣ ತಂಡಗಳ ವಿರುದ್ಧವೇ ಪಾಕಿಸ್ತಾನ ಸೋಲು ಕಂಡಿದೆ. ಹೀಗಿರುವಾಗ ಭಾರತದ ವಿರುದ್ಧ ಗೆಲ್ಲಲು ಸಾಧ್ಯವೇ? ಗುಣಮಟ್ಟದ ಕ್ರಿಕೆಟ್ ಆಡುವ ಮತ್ತು ಎಲ್ಲಾ ತಯಾರಿಗಳೊಂದಿಗೆ ಬಂದಿರುವ ಭಾರತ ತಂಡವು ಪಾಕಿಸ್ತಾನವನ್ನು ಸೋಲಿಸುವುದರಲ್ಲಿ ಅನುಮಾನವೇ ಬೇಡ” ಎಂದು ಹೇಳಿದ್ದಾರೆ. ಅಕ್ಮಲ್ ಅವರ ಈ ಹೇಳಿಕೆ ಪಾಕಿಸ್ತಾನದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕೆಲ ಪಾಕಿಸ್ತಾನಿ ನೆಟ್ಟಿಗರು ಅಕ್ಮಲ್​ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಹಿಗ್ಗಾಮುಗ್ಗಾ ಜಾಡಿಸಿ ದೇಶ ವಿರೋಧಿ ಎಂದು ಹೇಳಿದ್ದಾರೆ. ಪಾಕಿಸ್ತಾನ ಇಂಗ್ಲೆಂಡ್​ ವಿರುದ್ಧ ಆಡಿದ ಟಿ20 ಸರಣಿಯಲ್ಲೂ ಹೀನಾಯವಾಗಿ ಸೋಲು ಕಂಡಿತ್ತು.

ಇದನ್ನೂ ಓದಿ IND vs PAK: ಉಗ್ರರಿಂದ ‘ಒಂಟಿ ತೋಳ’ ದಾಳಿ ಬೆದರಿಕೆ; ಭಾರತ-ಪಾಕ್​ ಪಂದ್ಯಕ್ಕೆ ಭಾರೀ ಭದ್ರತಾ ವ್ಯವಸ್ಥೆ

ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಣ ಪಂದ್ಯಕ್ಕೆ ಉಗ್ರರಿಂದ ದಾಳಿಯ ಬೆದರಿಕೆ ಬಂದಿರುವ ಕಾರಣ ಕ್ರೀಡಾಂಗಣದಲ್ಲಿ ಭಾರೀ ಭದ್ರತಾ ವ್ಯವಸ್ಥೆ ಕೈಗೊಳಲಾಗಿದೆ. ಐಸಿಸ್-ಕೆ ಹೆಸರಿನ ಭಯೋತ್ಪಾದಕ ಸಂಘಟನೆಯು “ಲೋನ್ ವುಲ್ಫ್” ದಾಳಿ ನಡೆಸುವುದಾಗಿ ಘೋಷಿಸಿತ್ತು. ಹೀಗಾಗಿ ಪಂದ್ಯಕ್ಕೆ ಸುಧಾರಿತ ಕಣ್ಗಾವಲು ಏರ್ಪಡಿಸಲಾಗಿದೆ.

ಹೈವೋಲ್ಟೇಜ್ ಕದನಕ್ಕೆ ನ್ಯೂಯಾರ್ಕ್(NEW YORK) ಹೊರವಲಯದಲ್ಲಿ 34,000 ಆಸನ ಸಾಮರ್ಥ್ಯವುಳ್ಳ ತಾತ್ಕಾಲಿಕ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ. ಭಾರತ ಮತ್ತು ಪಾಕ್​ ನಡುವಣ ಪಂದ್ಯ ನ್ಯೂಯಾರ್ಕ್‌ನಲ್ಲಿಯೇ ನಡೆಸಲು ಕಾರಣವೂ ಕೂಡ ಇದೆ. ಏಕೆಂದರೆ ಈ ಪ್ರದೇಶದಲ್ಲಿ 7,11,000 ಭಾರತೀಯ ಮತ್ತು ಸುಮಾರು 1,00,000 ಪಾಕಿಸ್ತಾನ ಮೂಲದ ಜನರು ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಪಂದ್ಯ ಇಲ್ಲಿ ಏರ್ಪಡಿಸಲಾಗಿದೆ ಎನ್ನಲಾಗಿದೆ.

ಟಿ20 ಮುಖಾಮುಖಿ

ಉಭಯ ತಂಡಗಳು ಇದುವರೆಗೆ ಟಿ20 ಮಾದರಿಯಲ್ಲಿ 12 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ಗರಿಷ್ಠ 9 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಪಾಕಿಸ್ತಾನ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಭಾರತಕ್ಕೆ ಇದರಲ್ಲೊಂದು ಸೋಲು 2021ರಲ್ಲಿ ನಡೆದಿದ್ದ ವಿಶ್ವಕಪ್​ನಲ್ಲಿ ಎದುರಾಗಿತ್ತು. ಅದು ಕೂಡ 10 ವಿಕೆಟ್​ ಅಂತರದ ಹೀನಾಯ ಸೋಲಾಗಿತ್ತು.

Continue Reading
Advertisement
Stray dogs attack in Shira 4 children one woman injured
ಪ್ರಮುಖ ಸುದ್ದಿ3 hours ago

Stray Dogs Attack: ಶಿರಾದಲ್ಲಿ ಬೀದಿ ನಾಯಿಗಳ ದಾಳಿ: 4 ಮಕ್ಕಳು, ಒಬ್ಬ ಮಹಿಳೆಗೆ ಗಂಭೀರ ಗಾಯ

Somnath Bharti
ದೇಶ3 hours ago

Somnath Bharti: ಮೋದಿ 3ನೇ ಸಲ ಪ್ರಧಾನಿಯಾದರೆ ತಲೆ ಬೋಳಿಸಿಕೊಳ್ಳುವೆ ಎಂದ ಆಪ್‌ ನಾಯಕ!

T 20 world cup
ಕ್ರೀಡೆ3 hours ago

T20 World Cup : ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 60 ರನ್​ ಭರ್ಜರಿ ವಿಜಯ ಸಾಧಿಸಿದ ಭಾರತ

Exit Poll
ಪ್ರಮುಖ ಸುದ್ದಿ4 hours ago

Exit Poll 2024 : ಆ್ಯಕ್ಸಿಸ್​ ಮೈ ಇಂಡಿಯಾ ಪ್ರಕಾರ ಎನ್​ಡಿಎಗೆ 401 ಸೀಟು

Poll Of Polls
ದೇಶ4 hours ago

Poll Of Polls: ಎನ್‌ಡಿಎಗೆ 350+ ಸೀಟು, ದಕ್ಷಿಣದಲ್ಲೂ ಬಿಜೆಪಿಗೆ ಸ್ವೀಟು, ಇಂಡಿಯಾ ‌ಕೂಟಕ್ಕೆ ಹಿನ್ನಡೆಯ ಏಟು!

Exit Poll 2024
ಪ್ರಮುಖ ಸುದ್ದಿ5 hours ago

Exit Poll 2024 : ಟಿಎಂಸಿಯ ಭದ್ರಕೋಟೆಗೆ ಕಮಲ ಪಕ್ಷದ ಲಗ್ಗೆ; ಮಮತಾ ಬ್ಯಾನರ್ಜಿಗೆ ಮುಖಭಂಗ?

Bangalore rain
ಪ್ರಮುಖ ಸುದ್ದಿ6 hours ago

Bangalore Rain: ರಾಜಧಾನಿಯಲ್ಲಿ ಮಳೆ ಆರ್ಭಟ; ಬೆಂಗಳೂರು-ಹೊಸೂರು ಹೆದ್ದಾರಿ ಜಲಾವೃತ, ಮನೆಗಳಿಗೆ ನುಗ್ಗಿದ ನೀರು

Dinesh Karthik
ಪ್ರಮುಖ ಸುದ್ದಿ6 hours ago

Dinesh Karthik: ಜನ್ಮದಿನದಂದೇ ಕ್ರಿಕೆಟ್‌ ಬದುಕಿಗೆ ದಿನೇಶ್‌ ಕಾರ್ತಿಕ್‌ ಭಾವುಕ ವಿದಾಯ; ಕೊಡುಗೆ ನೆನೆದ ಆರ್‌ಸಿಬಿ ಫ್ಯಾನ್ಸ್

Exit Poll
ಪ್ರಮುಖ ಸುದ್ದಿ6 hours ago

Exit Poll 2024 : ಭರ್ಜರಿ ಗೆಲುವಿನ ಮುನ್ಸೂಚನೆ ಸಿಕ್ಕಿದ ತಕ್ಷಣ ಮತದಾರರಿಗೆ ಧನ್ಯವಾದ ತಿಳಿಸಿದ ಮೋದಿ

Exit Poll 2024
ದೇಶ6 hours ago

Exit Poll 2024 : ಮತಗಟ್ಟೆ ಸಮೀಕ್ಷೆಗಳನ್ನು ನಾವು ನಂಬಲ್ಲ; ಡಿಕೆಶಿ, ಎಂಬಿ ಪಾಟೀಲ್ ಸ್ಪಷ್ಟ ನುಡಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Liquor ban
ಬೆಂಗಳೂರು10 hours ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ3 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ4 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು5 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ5 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ6 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು6 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ2 weeks ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

ಟ್ರೆಂಡಿಂಗ್‌