Rahul Dravid: ಮತ್ತೆ ಐಪಿಎಲ್​ ಕೋಚಿಂಗ್​ನತ್ತ ಮುಖ ಮಾಡಿದ ರಾಹುಲ್‌ ದ್ರಾವಿಡ್‌! - Vistara News

ಕ್ರಿಕೆಟ್

Rahul Dravid: ಮತ್ತೆ ಐಪಿಎಲ್​ ಕೋಚಿಂಗ್​ನತ್ತ ಮುಖ ಮಾಡಿದ ರಾಹುಲ್‌ ದ್ರಾವಿಡ್‌!

ಎರಡು ವರ್ಷಗಳ ಕಾಲ ಟೀಮ್ ಇಂಡಿಯಾಗೆ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಇನ್ನು ಮುಂದೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಕೋಚ್ ಆಗಲು ಉತ್ಸುಕರಾಗಿದ್ದಾರೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ

VISTARANEWS.COM


on

Rahul Dravid
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಬೆಂಗಳೂರು: ಭಾರತ ಕ್ರಿಕೆಟ್‌ ತಂಡವು ಏಕದಿನ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಸೋಲುಂಡ ಬೆನ್ನಲ್ಲೇ ರಾಹುಲ್‌ ದ್ರಾವಿಡ್‌(Rahul Dravid) ಅವರು ತಂಡದ ಮುಖ್ಯ ಕೋಚ್‌ (Head Coach) ಹುದ್ದೆಯಲ್ಲಿ ಮುಂದುವರಿಯದಿರಲು ತೀರ್ಮಾನಿಸಿದ್ದಾರೆ ಎಂದು ಗುರುವಾರ ವರದಿಯಾಗಿತ್ತು. ಅಲ್ಲದೆ ವಿವಿಎಸ್‌ ಲಕ್ಷ್ಮಣ್‌(VVS Laxman) ಅವರು ತಂಡದ ನೂತನ ಕೋಚ್‌ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ದ್ರಾವಿಡ್​ ಅವರು ಐಪಿಎಲ್​ನಲ್ಲಿ ಕೋಚಿಂಗ್​ ನಡಸಲು ಆಸಕ್ತಿ ತೋರಿದ್ದಾರೆ ಎಂದು ವರದಿಯಾಗಿದೆ.

ರಾಹುಲ್‌ ದ್ರಾವಿಡ್‌ ಅವರು 2021ರ ಟಿ-20 ವಿಶ್ವಕಪ್‌ ಬಳಿಕ ಅಂದರೆ, ನವೆಂಬರ್‌ನಲ್ಲಿ ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಇವರ ಅವಧಿಯಲ್ಲಿ ಭಾರತ ತಂಡವು 2023ರ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌, ಏಕದಿನ ವಿಶ್ವಕಪ್‌ ಫೈನಲ್‌ ಪ್ರವೇಶಿಸಿತ್ತು. ಕೆಲ ತಿಂಗಳ ಹಿಂದೆ ನಡೆದ ಏಷ್ಯಾಕಪ್‌ನಲ್ಲಿ ಭಾರತ ತಂಡ ಚಾಂಪಿಯನ್‌ ಆಗಿತ್ತು. ಆದರೆ, ವಿಶ್ವಕಪ್‌ ಫೈನಲ್‌ ಸೋಲಿನ ಬಳಿಕ ರಾಹುಲ್‌ ದ್ರಾವಿಡ್‌ ಅವರು ಕೋಚ್‌ ಹುದ್ದೆಯಲ್ಲಿ ಮುಂದುವರಿಯಲು ಇಷ್ಟಪಡುತ್ತಿಲ್ಲ. ಈಗಾಗಲೇ ಅವರ ಗುತ್ತಿಗೆ ಅವಧಿ ಮುಗಿದಿದ್ದು, ಹೊಸ ಅವಧಿಯ ಕಾಂಟ್ರ್ಯಾಕ್ಟ್‌ಗೆ ಸಹಿ ಹಾಕಲು ಇಚ್ಛಿಸುತ್ತಿಲ್ಲ ಎಂದು ವರದಿಯೊಂದು ತಿಳಿಸಿದೆ.

ಇದನ್ನೂ ಓದಿ Rahul Dravid: ಕೋಚ್‌ ಹುದ್ದೆಗೆ ದ್ರಾವಿಡ್‌ ವಿದಾಯ; ಹೊಸ ತರಬೇತುದಾರ ಇವರೇನಾ?

ಐಪಿಎಲ್​ ಕೋಚಿಂಗ್​

ಎರಡು ವರ್ಷಗಳ ಕಾಲ ಟೀಮ್ ಇಂಡಿಯಾಗೆ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಇನ್ನು ಮುಂದೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಕೋಚ್ ಆಗಲು ಉತ್ಸುಕರಾಗಿದ್ದಾರೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. ಅಲ್ಲದೆ ದ್ರಾವಿಡ್​ ಅವರು ಈಗಾಗಲೇ ಎರಡು ವರ್ಷಗಳ ಒಪ್ಪಂದಕ್ಕಾಗಿ ಐಪಿಎಲ್ ಫ್ರಾಂಚೈಸಿಯೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿ ಹೇಳಿದೆ.

“ರಾಹುಲ್​ ದ್ರಾವಿಡ್​ ಅವರು ಎರಡು ವರ್ಷಗಳ ಒಪ್ಪಂದಕ್ಕಾಗಿ ಐಪಿಎಲ್ ತಂಡದೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ ಒಂದು ಸುತ್ತಿನ ಮಾತುಕತೆ ಕೂಡ ನಡೆದಿದೆ” ಎಂದು ಕ್ರಿಕ್​ಬಜ್​ ವರದಿ ಮಾಡಿದೆ. ರಾಹುಲ್ ದ್ರಾವಿಡ್ ಅವರು ಈ ಹಿಂದೆ ಐಪಿಎಲ್​ನಲ್ಲಿ ರಾಜಸ್ಥಾನ ರಾಯಲ್ಸ್​ ತಂಡದ ಕೋಚ್​ ಆಗಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಅವರು ಅಂಡರ್​-19 ಮತ್ತು ಎನ್​ಸಿಎಯಲ್ಲಿ ಕಾರ್ಯನಿರ್ವಹಿಸಿದ್ದರು.

ವಿವಿಎಸ್‌ ಲಕ್ಷ್ಮಣ್‌ ಹೊಸ ಕೋಚ್?‌

ರಾಹುಲ್‌ ದ್ರಾವಿಡ್‌ ಅವರು ಮುಖ್ಯ ತರಬೇತುದಾರರಾಗಿ ಮುಂದುವರಿಯಲು ಇಚ್ಛಿಸದಿದ್ದರೆ ಟೆಸ್ಟ್‌ ಸ್ಪೆಷಲಿಸ್ಟ್‌ ವಿವಿಎಸ್‌ ಲಕ್ಷ್ಮಣ್‌ ಅವರೇ ಹೆಡ್‌ ಕೋಚ್‌ ಆಗಲಿದ್ದಾರೆ ಎಂದು ತಿಳಿದುಬಂದಿದೆ. ಆಸ್ಟ್ರೇಲಿಯಾ ವಿರುದ್ಧ ನಡೆಯುವ ಐದು ಪಂದ್ಯಗಳ ಸರಣಿ ಆರಂಭಕ್ಕೂ ಮುನ್ನವೇ ಲಕ್ಷ್ಮಣ್‌ ಅವರು ಮುಖ್ಯ ತರಬೇತುದಾರರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ ಬಳಿಕ ಲಕ್ಷ್ಮಣ್‌ ಅವರು ನ್ಯಾಷನಲ್‌ ಕ್ರಿಕೆಟ್‌ ಅಕಾಡೆಮಿ (NCA) ಮುಖ್ಯಸ್ಥರಾಗಿದ್ದರು. ಇದಕ್ಕೂ ಮೊದಲು ಅವರು ಐಪಿಎಲ್‌ನಲ್ಲಿ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡದ ಮೆಂಟರ್‌ ಆಗಿದ್ದರು.

ಯೋಚನೆ ಇಲ್ಲ ಎಂದಿದ್ದ ದ್ರಾವಿಡ್‌

ವಿಶ್ವಕಪ್‌ ಸೋಲಿನ ಬಳಿಕ ಮಾಧ್ಯಮದವರ ಜತೆ ಮಾತನಾಡಿದ್ದ ರಾಹುಲ್‌ ದ್ರಾವಿಡ್‌, “ಕೋಚ್‌ ಹುದ್ದೆಯಲ್ಲಿ ಮುಂದುವರಿಯುವ ಅಥವಾ ತೊರೆಯುವ ಕುರಿತು ಇನ್ನೂ ಯೋಚಿಸಿಲ್ಲ” ಎಂದು ಹೇಳಿದ್ದರು.

ಮುಂದಿನ ವರ್ಷದ ಜೂನ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾರತ ಆಡಬೇಕಾಗಿದೆ. ಈ ಟೂರ್ನಿಯವರೆಗೂ ಟೀಮ್ ಇಂಡಿಯಾದ ಕೋಚ್ ಆಗಿ ಉಳಿಯಲು ಬಯಸುತ್ತೀರಾ? ಎಂದು ದ್ರಾವಿಡ್ ಅವರನ್ನು ಮಾಧ್ಯಮದವರು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ದ್ರಾವಿಡ್​, “ನಾನು ಇದರ ಬಗ್ಗೆ ಇನ್ನೂ ಯೋಚಿಸಿಲ್ಲ. ಸಮಯ ಸಿಕ್ಕಾಗ ನಿರ್ಧಾರ ಮಾಡುತ್ತೇನೆ” ಎಂದಷ್ಟೇ ಹೇಳಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

Latest

ಹೋಮ್‌ಗ್ರೌಂಡ್‌ನಲ್ಲಿ ಆರ್‌ಸಿಬಿಗಿಂದು ಕೊನೆ ಲೀಗ್‌ ಪಂದ್ಯ! ಗುಜರಾತ್ ಟೈಟನ್ಸ್ ಸವಾಲಿಗೆ ಸಜ್ಜಾದ ವಿರಾಟ್‌ ಪಡೆ

VISTARANEWS.COM


on

ಬೆಂಗಳೂರು: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಈ ಬಾರಿಯ ಐಪಿಎಲ್ ಸೀಸನ್‌ನಲ್ಲಿ ತನ್ನ ತವರು ಮೈದಾನವಾದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಅಂತಿಮ ಲೀಗ್ ಪಂದ್ಯವನ್ನು ಆಡಲಿದೆ. ಶುಭ್‌ಮನ್ ಗಿಲ್ ನೇತೃತ್ವದ ಗುಜರಾತ್ ಟೈಟನ್ಸ್ ವಿರುದ್ಧ ನಡೆಯಲಿರುವ ಈ ಹಣಾಹಣಿಯಲ್ಲಿ ಗೆಲುವಿನ ಮೂಲಕ ತವರಿನ ಪ್ರೇಕ್ಷಕರಿಗೆ ಸ್ಮರಣೀಯ ವಿದಾಯ ಹೇಳಲು ಬೆಂಗಳೂರು ಪಡೆ ಸಜ್ಜಾಗಿದೆ. ಈ ಪಂದ್ಯದ ನಂತರ ಆರ್‌ಸಿಬಿ ತನ್ನ ಮುಂದಿನ ಪಂದ್ಯಗಳಿಗಾಗಿ ರಾಯ್ಪುರಕ್ಕೆ ಪ್ರಯಾಣ ಬೆಳೆಸಲಿದೆ. ಪ್ರಸ್ತುತ ಅಂಕಪಟ್ಟಿಯಲ್ಲಿ ಭದ್ರ ನೆಲೆ ಕಂಡುಕೊಳ್ಳಲು ಈ ಗೆಲುವು ಉಭಯ ತಂಡಗಳಿಗೂ ಅತ್ಯಂತ ನಿರ್ಣಾಯಕವಾಗಿದೆ.

ಆರ್‌ಸಿಬಿ ಈ ವರ್ಷ ಚಿನ್ನಸ್ವಾಮಿ ಮೈದಾನದಲ್ಲಿ ಆಡಿದ 4 ಪಂದ್ಯಗಳ ಪೈಕಿ 3ರಲ್ಲಿ ಜಯ ಸಾಧಿಸಿ ಭರ್ಜರಿ ಫಾರ್ಮ್‌ನಲ್ಲಿದೆ. ಕಳೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಅನುಭವಿಸಿದ ಸೋಲಿನ ಆಘಾತದಿಂದ ಹೊರಬಂದು, ಮತ್ತೆ ಗೆಲುವಿನ ಹಳಿಗೆ ಮರಳುವ ವಿಶ್ವಾಸದಲ್ಲಿ ರಜತ್ ಪಾಟೀದಾರ್ ಸೈನ್ಯವಿದೆ. ಬ್ಯಾಟಿಂಗ್ ವಿಭಾಗದಲ್ಲಿ ವಿರಾಟ್ ಕೊಹ್ಲಿ, ನಾಯಕ ರಜತ್ ಪಾಟೀದಾರ್ ಮತ್ತು ಫಿಲ್ ಸಾಲ್ಟ್ ಅಬ್ಬರಿಸುತ್ತಿದ್ದು, ತಂಡಕ್ಕೆ ಬಲಿಷ್ಠ ಅಡಿಪಾಯ ಹಾಕುತ್ತಿದ್ದಾರೆ. ವಿಶೇಷವಾಗಿ ಟಿಮ್ ಡೇವಿಡ್ ಅವರ 203.52 ರ ಸ್ಟ್ರೈಕ್ ರೇಟ್ ತಂಡದ ಮಧ್ಯಮ ಕ್ರಮಾಂಕಕ್ಕೆ ಹೆಚ್ಚಿನ ಬಲ ತಂದಿದೆ. ಬೌಲಿಂಗ್‌ನಲ್ಲಿ ಹೇಜಲ್‌ವುಡ್ ಮತ್ತು ಭುವನೇಶ್ವರ್ ಕುಮಾರ್ ಜೋಡಿ ಎದುರಾಳಿಗಳನ್ನು ಕಟ್ಟಿಹಾಕಲು ಸನ್ನದ್ಧವಾಗಿದೆ.

ಇನ್ನೊಂದೆಡೆ, ಗುಜರಾತ್ ಟೈಟನ್ಸ್ ತಂಡವು ಸ್ಥಿರ ಪ್ರದರ್ಶನದ ಹುಡುಕಾಟದಲ್ಲಿದ್ದು, ಪ್ರಬಲ ಬೌಲಿಂಗ್ ಪಡೆಯನ್ನು ನೆಚ್ಚಿಕೊಂಡಿದೆ. ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್ ಮತ್ತು ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವರನ್ನೊಳಗೊಂಡ ವೇಗದ ಪಡೆ ಆರ್‌ಸಿಬಿಯ ಸ್ಫೋಟಕ ಬ್ಯಾಟರ್‌ಗಳಿಗೆ ಬ್ರೇಕ್ ಹಾಕಲು ಮಾಸ್ಟರ್ ಪ್ಲ್ಯಾನ್ ರೂಪಿಸಿದೆ. ಅದರಲ್ಲೂ ಪ್ರಸಿದ್ಧ್ ಕೃಷ್ಣ ತಮ್ಮ ತವರು ಮೈದಾನದಲ್ಲಿ ಹಳೆಯ ತಂಡದ ವಿರುದ್ಧ ಹೇಗೆ ಮಿಂಚಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಉಭಯ ತಂಡಗಳ ನಡುವೆ ಇದುವರೆಗೆ ನಡೆದ 6 ಮುಖಾಮುಖಿಗಳಲ್ಲಿ ಎರಡೂ ತಂಡಗಳು ತಲಾ 3 ಪಂದ್ಯಗಳನ್ನು ಗೆದ್ದು ಸಮಬಲ ಸಾಧಿಸಿರುವುದರಿಂದ, ಇಂದಿನ ಪಂದ್ಯವು ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡುವುದರಲ್ಲಿ ಸಂಶಯವಿಲ್ಲ.

Continue Reading

Latest

ತಾಯಿ ನಿಧನದ ಶೋಕದಲ್ಲೂ ತಂಡಕ್ಕಾಗಿ ಕಣಕ್ಕಿಳಿದ ಮುಖೇಶ್ ಚೌಧರಿ! ಗೆಲುವನ್ನು ಅರ್ಪಿಸಿ ಮಾನವೀಯತೆ ಮೆರೆದ ನಾಯಕ ಗಾಯಕ್ವಾಡ್

VISTARANEWS.COM


on

ವಾಂಖೆಡೆ ಮೈದಾನದಲ್ಲಿ ಏಪ್ರಿಲ್ 23ರಂದು ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ರೋಚಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 103 ರನ್‌ಗಳ ಬೃಹತ್ ಜಯ ದಾಖಲಿಸಿದೆ. ಈ ಗೆಲುವಿಗಿಂತಲೂ ಮಿಗಿಲಾಗಿ ಅಭಿಮಾನಿಗಳ ಗಮನ ಸೆಳೆದಿದ್ದು ವೇಗಿ ಮುಖೇಶ್ ಚೌಧರಿ ಅವರ ಅಪ್ರತಿಮ ವೃತ್ತಿಧರ್ಮ. ತಮ್ಮ ತಾಯಿ ಪ್ರೇಮಾ ದೇವಿ ನಿಧನರಾದ ಕೇವಲ ಎರಡೇ ದಿನಕ್ಕೆ, ತಾಯಿಯ ಅಂತ್ಯಕ್ರಿಯೆ ಮುಗಿಸಿ ಮೈದಾನಕ್ಕಿಳಿದ ಮುಖೇಶ್, ತಂಡದ ಗೆಲುವಿಗಾಗಿ ಸರ್ವಸ್ವವನ್ನೂ ಧಾರೆ ಎರೆದರು. ಅವರ ಈ ಬದ್ಧತೆ ಕ್ರೀಡಾ ಜಗತ್ತಿನಲ್ಲಿ ಹೊಸ ಸಂಚಲನ ಮೂಡಿಸಿದೆ.

ಪಂದ್ಯದ ನಿರ್ಣಾಯಕ ಹಂತದಲ್ಲಿ ಕ್ವಿಂಟನ್ ಡಿ ಕಾಕ್ ಅವರ ವಿಕೆಟ್ ಪಡೆದ ಮುಖೇಶ್, ಯಾವುದೇ ಅಬ್ಬರದ ಸಂಭ್ರಮಾಚರಣೆ ಮಾಡದೆ ಮೌನವಾಗಿ ಆಕಾಶದತ್ತ ಕೈ ತೋರಿಸಿ “ಅಮ್ಮ ಇದು ನಿನಗಾಗಿ” ಎಂದು ತಮ್ಮ ಪ್ರದರ್ಶನವನ್ನು ಸಮರ್ಪಿಸಿದ ಕ್ಷಣ ಭಾವುಕವಾಗಿತ್ತು. ಸುಮಾರು ಒಂದು ವರ್ಷದಿಂದ ಅನಾರೋಗ್ಯದ ವಿರುದ್ಧ ಹೋರಾಡುತ್ತಿದ್ದ ತಾಯಿಯನ್ನು ಕಳೆದುಕೊಂಡ ನೋವಿನ ನಡುವೆಯೂ, ತಂಡಕ್ಕೆ ತನ್ನ ಅವಶ್ಯಕತೆ ಇದೆ ಎಂದು ಅರಿತು ಮೈದಾನಕ್ಕೆ ಮರಳಿದ ಅವರ ಸ್ಥೈರ್ಯಕ್ಕೆ ಕ್ರಿಕೆಟ್ ಲೋಕವೇ ಶರಣಾಗಿದೆ. ಮುಖೇಶ್ ಅವರ ಶಿಸ್ತುಬದ್ಧ ಬೌಲಿಂಗ್ ಮುಂಬೈ ಪಡೆಯನ್ನು ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿತು.

ಇನ್ನು ಪಂದ್ಯ ಮುಗಿದ ಬಳಿಕ ಸಿಎಸ್‌ಕೆ ನಾಯಕ ರುತುರಾಜ್ ಗಾಯಕ್ವಾಡ್ ಅವರು ಮುಖೇಶ್ ಅವರನ್ನು ಅಪ್ಪಿಕೊಂಡು ಸಾಂತ್ವನ ಹೇಳುವ ಮೂಲಕ ಮಾನವೀಯತೆ ಮೆರೆದರು. ಇಂತಹ ಕಠಿಣ ಪರಿಸ್ಥಿತಿಯಲ್ಲೂ ತಂಡಕ್ಕಾಗಿ ಮರಳಿದ ಮುಖೇಶ್ ಅವರ ಮಾನಸಿಕ ಶಕ್ತಿಯನ್ನು ಶ್ಲಾಘಿಸಿದ ಗಾಯಕ್ವಾಡ್, ಈ ಭರ್ಜರಿ ಗೆಲುವನ್ನು ಮುಖೇಶ್ ಮತ್ತು ಅವರ ತಾಯಿಗೆ ಅರ್ಪಿಸುವುದಾಗಿ ಘೋಷಿಸಿದರು. ನಾಯಕನ ಈ ನಿರ್ಧಾರ ಮತ್ತು ಮುಖೇಶ್ ಅವರ ಕರ್ತವ್ಯ ಪ್ರಜ್ಞೆ ಸಿಎಸ್‌ಕೆ ತಂಡದ ಒಗ್ಗಟ್ಟನ್ನು ಸಾಬೀತುಪಡಿಸಿದೆ.

Continue Reading

Latest

ಹಾರ್ದಿಕ್ ವಿರುದ್ಧ ಅಸಮಾಧಾನ: ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಸಹೋದರ ಕೃನಾಲ್ ಪಾಂಡ್ಯ.

VISTARANEWS.COM


on

ಭಾರತೀಯ ಕ್ರಿಕೆಟ್ ಲೋಕದ ಫೇಮಸ್ ‘ಪಾಂಡ್ಯ ಬ್ರದರ್ಸ್’ ನಡುವೆ ಎಲ್ಲವೂ ಸರಿಯಿಲ್ಲ ಎಂಬ ವದಂತಿಗಳು ಇತ್ತೀಚಿನ ದಿನಗಳಲ್ಲಿ ಜೋರಾಗಿ ಕೇಳಿಬರುತ್ತಿವೆ. ಈ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿರುವ ದೊಡ್ಡಣ್ಣ ಕೃನಾಲ್ ಪಾಂಡ್ಯ, ಆರ್‌ಸಿಬಿ ಇನ್‌ಸೈಡರ್ ಮಿಸ್ಟರ್ ನ್ಯಾಗ್ಸ್ ಜೊತೆಗಿನ ಸಂದರ್ಶನದಲ್ಲಿ ಮಾರ್ಮಿಕವಾಗಿ ಉತ್ತರಿಸಿದ್ದಾರೆ. ತಮ್ಮ ಸಹೋದರ ಹಾರ್ದಿಕ್ ಪಾಂಡ್ಯ ಅವರೊಂದಿಗಿನ ಭಿನ್ನಾಭಿಪ್ರಾಯದ ಬಗ್ಗೆ ನೇರವಾದ ಉತ್ತರ ನೀಡದಿದ್ದರೂ, “ಕುಟುಂಬದಲ್ಲಿ ಹಲವು ಸದಸ್ಯರಿರುತ್ತಾರೆ, ಕೆಲವೊಮ್ಮೆ ಕೆಲವರನ್ನು ಮಿಸ್ ಮಾಡಿಕೊಳ್ಳಬೇಕಾಗುತ್ತದೆ” ಎಂದು ಹೇಳುವ ಮೂಲಕ ಇಬ್ಬರ ನಡುವೆ ಬಿರುಕು ಮೂಡಿರುವ ಸುಳಿವು ನೀಡಿದ್ದಾರೆ.

ಒಂದು ಕಾಲದಲ್ಲಿ ಮುಂಬೈ ಇಂಡಿಯನ್ಸ್ ಪರ ಒಟ್ಟಾಗಿ ಕಣಕ್ಕಿಳಿಯುತ್ತಿದ್ದ ಈ ಸಹೋದರರು ಈಗ ಬೇರೆ ಬೇರೆ ತಂಡಗಳಲ್ಲಿದ್ದಾರೆ. ಹಾರ್ದಿಕ್ ಮುಂಬೈ ತಂಡವನ್ನು ಮುನ್ನಡೆಸುತ್ತಿದ್ದರೆ, ಕೃನಾಲ್ ಬೆಂಗಳೂರು ತಂಡದ ಪರ ಆಡುತ್ತಿದ್ದಾರೆ. ಆದರೆ ಇತ್ತೀಚೆಗೆ ಹಾರ್ದಿಕ್ ಅವರು ನತಾಶಾ ಅವರಿಂದ ವಿಚ್ಛೇದನ ಪಡೆದ ಬಳಿಕ ಮಹಿಕಾ ಶರ್ಮಾ ಜೊತೆಗಿನ ಒಡನಾಟ ಬೆಳೆಸಿಕೊಂಡಿರುವುದು ಮತ್ತು ಆ ನಂತರ ಹಾರ್ದಿಕ್ ವರ್ತನೆಯಲ್ಲಿ ಬದಲಾವಣೆ ಆಗಿರುವುದು ಈ ಸಹೋದರರ ನಡುವಿನ ಕಿರಿಕ್‌ಗೆ ಮುಖ್ಯ ಕಾರಣ ಎಂಬ ಚರ್ಚೆಗಳು ನಡೆಯುತ್ತಿವೆ. ಈ ಹಿಂದೆ ಮುಂಬೈ ಮತ್ತು ಆರ್‌ಸಿಬಿ ಪಂದ್ಯದಲ್ಲಿ ಹಾರ್ದಿಕ್ ವಿಕೆಟ್ ಬಿದ್ದಾಗ ಕೃನಾಲ್ ಅತಿಯಾಗಿ ಸಂಭ್ರಮಿಸಿದ್ದು ಕೂಡ ಈ ವದಂತಿಗಳಿಗೆ ಪುಷ್ಟಿ ನೀಡುವಂತಿದೆ.

ಸಂದರ್ಶನದ ವೇಳೆ ಮಿಸ್ಟರ್ ನ್ಯಾಗ್ಸ್ ಅವರು ಡಬ್ಲ್ಯೂಡಬ್ಲ್ಯೂಇ (WWE) ಖ್ಯಾತಿಯ ಕೇನ್ ಮತ್ತು ಅಂಡರ್‌ಟೇಕರ್ ಅವರ ಉದಾಹರಣೆ ನೀಡಿ, “ನಿಮ್ಮಿಬ್ಬರ ಮಧ್ಯೆ ಫೈಟ್ ನಡೆಯುತ್ತಿದೆಯೇ?” ಎಂದು ಕೇಳಿದಾಗ ಕೃನಾಲ್ “ಆಲ್ ಓಕೆ” ಎಂದು ನಗುತ್ತಲೇ ಉತ್ತರಿಸಿದ್ದಾರೆ. ಆದರೆ ಅವರ ನಗು ಮತ್ತು ಮಾತುಗಳ ಹಿಂದೆ ಅಸಮಾಧಾನದ ಛಾಯೆ ಇರುವುದು ಅಭಿಮಾನಿಗಳ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಮಾತಿಗಷ್ಟೇ ಕೃನಾಲ್ ಎಲ್ಲವೂ ಸರಿಯಿದೆ ಎಂದಿದ್ದಾರೋ ಅಥವಾ ನಿಜವಾಗಿಯೂ ಇಬ್ಬರ ನಡುವಿನ ಮನಸ್ತಾಪ ಬಗೆಹರಿದಿದೆಯೋ ಎಂಬ ಕುತೂಹಲ ಈಗ ಕ್ರಿಕೆಟ್ ವಲಯದಲ್ಲಿ ತೀವ್ರವಾಗಿದೆ.

Continue Reading

ಬೆಂಗಳೂರು

KVS Sports Meet : 53ನೇ ಕೆವಿಎಸ್ ರಾಷ್ಟ್ರೀಯ ಕ್ರೀಡಾಕೂಟ; ಫೈನಲ್‌ ಮ್ಯಾಚ್‌ ಗೆದ್ದ ಕೊಲ್ಕತ್ತಾ ರೀಜನ್‌ ಶಾಲೆ ಮಕ್ಕಳು

ಬೆಂಗಳೂರಿನ ಯಲಹಂಕದ ಕೇಂದ್ರೀಯ ವಿದ್ಯಾಲಯ ಆರ್‌ಡಬ್ಲ್ಯೂ ಎಫ್‌ನಲ್ಲಿ 53ನೇ ಕೆವಿಎಸ್ ರಾಷ್ಟ್ರೀಯ ಕ್ರೀಡಾಕೂಟ 2024-25ರ (KVS Sports Meet) ಮುಕ್ತಾಯಗೊಂಡಿದೆ. ಬಾಲಕರ ರೋಚಕ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಕೊಲ್ಕತ್ತಾ ರೀಜನ್‌ ಶಾಲೆ ಮಕ್ಕಳು ಮೊದಲ ಸ್ಥಾನ ಗಳಿಸಿದ್ದಾರೆ.

VISTARANEWS.COM


on

53rd KVS National Games Kolkata Region School children win final match

ಬೆಂಗಳೂರು: ಬೆಂಗಳೂರಿನ ಯಲಹಂಕ ಕೇಂದ್ರೀಯ ವಿದ್ಯಾಲಯದಲ್ಲಿ ಸೆ. 30 ರಿಂದ ಅ. 6 ರವರೆಗೆ 53ನೇ ರಾಷ್ಟ್ರೀಯ ಕ್ರೀಡಾಕೂಟ ನಡೆಸಲಾಯಿತು. ಕ್ರೀಡೆಯಲ್ಲಿ ಹಲವಾರು ಆಟಗಳಿವೆ. ಅದರಲ್ಲಿ ಕ್ರಿಕೆಟ್ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ದೇಶದ ನಾನಾ ರಾಜ್ಯಗಳಿಂದ ಅಂದರೆ ಒಟ್ಟು 18 ರಾಜ್ಯಗಳಿಂದ ಮಕ್ಕಳು ಕ್ರಿಕೆಟ್ ಆಡಲು ಕೆ .ವಿ .ಆರ್ ಡಬ್ಲ್ಯೂ ಎಫ್‌ಗೆ ಬಂದಿದ್ದರು. ಒಟ್ಟು 269 ಶಾಲೆಯ ಮಕ್ಕಳು ನಾಲ್ಕು ವಿವಿಧ ಆಟದ ಮೈದಾನದಲ್ಲಿ ತಮ್ಮ ಉತ್ತಮ ಪ್ರದರ್ಶನವನ್ನು ಪ್ರದರ್ಶಿಸಿದರು. ಅ.6 ರಂದು ಫೈನಲ್ ಮ್ಯಾಚ್‌ ನಡೆಸಲಾಯಿತು.

ಪ್ರಥಮ ಸ್ಥಾನವನ್ನು ಕೊಲ್ಕತ್ತಾ ರೀಜನ್ ಶಾಲೆ ಮಕ್ಕಳು ಮತ್ತು ದ್ವಿತೀಯ ಸ್ಥಾನವನ್ನು ಜಬಲ್ ಪುರ್ ರೀಜನ್ ಶಾಲೆ ಮಕ್ಕಳು ಗಳಿಸಿಕೊಂಡರು. ನಂತರ ಶಾಲೆ ಆವರಣದಲ್ಲಿ ಮಧ್ಯಾಹ್ನ 12 ಗಂಟೆಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಾ ಪಿ. ದೇವಕುಮಾರ್(ಜಂಟಿ ಆಯುಕ್ತ ಕೆ ವಿ ಎಸ್ ಪ್ರಧಾನ ಕಛೇರಿ) ಹಾಗೂ ವಿಶೇಷ ಅತಿಥಿಗಳಾಗಿ ಧರ್ಮೇಂದ್ರ ಪಟ್ಲೆ. (ಉಪ ಆಯುಕ್ತ ಕೆ ವಿ ಎಸ್ ಬೆಂಗಳೂರು), ಆರ್ ಪ್ರಮೋದ್.(ಸಹಾಯಕ ಆಯುಕ್ತ ಕೆ ವಿ ಎಸ್ ಬೆಂಗಳೂರು), ಹೇಮಾ ಕೆ( ಸಹಾಯಕ ಆಯುಕ್ತ ) ಆಗಮಿಸಿದ್ದರು.

ಅತಿಥಿಗಳಿಗೆ ಶಾಲೆಯ ವರ್ಣ ರಂಜಿತಾ NCC ಬ್ಯಾಂಡ್ ತಂಡದ ಮಕ್ಕಳು ಸ್ವಾಗತ ಕೋರಿದರು. ಗಾಯನ ತಂಡದಿಂದ ಸ್ವಾಗತ ಗಾಯನವನ್ನು ಹಾಡಿದರು ನಂತರ ಸ್ವಾಗತ ಭಾಷಣವನ್ನು ಧರ್ಮೇಂದ್ರ ಪಟ್ಲೆ ಮಾಡಿದರು. ನೃತ್ಯ ತಂಡದಿಂದ ಮಕ್ಕಳು ಸ್ವಾಗತ ನೃತ್ಯವನ್ನು ಮಾಡಿದರು.

Continue Reading
Advertisement
Latest1 hour ago

ಮಹಿಳಾ ಮೀಸಲಾತಿ ವಿರೋಧಿಸಿದ ಕಾಂಗ್ರೆಸ್‌ ವಿರುದ್ಧ ಸಚಿವೆ ಶೋಭಾ ಕರಂದ್ಲಾಜೆ ಆಕ್ರೋಶ

Latest2 hours ago

ಟೆಹರಾನ್‌ನಲ್ಲಿ ವಿಮಾನ ಹಾರಾಟ ಪುನರಾರಂಭ: ಪಾಕ್‌ಗೆ ಆಗಮಿಸಿದ ಇರಾನ್‌ ನಿಯೋಗ: ಯುದ್ಧದ ಅಂತ್ಯದ ಮುನ್ಸೂಚನೆಯೇ ?

Latest3 hours ago

ಪರಮಾಣು ಶಸ್ತ್ರಾಸ್ತ್ರಗಳು ಶಾಂತಿಯ ಉದ್ದೇಶಕ್ಕೆ ಬಳಕೆಯಾಗಲಿ: ವಿಶ್ವಸಂಸ್ಥೆ ಕಳಕಳಿ

Latest3 hours ago

ರಾಜಕುಮಾರ್‌ ಸಮಾಧಿಗೆ ಭೂಮಿ: ವಿವಾದ ಹುಟ್ಟು ಹಾಕಿದ ನಟ ಚೇತನ್‌ ವಿರುದ್ಧ ಅಭಿಮಾನಿಗಳ ಆಕ್ರೋಶ; ದೂರು ದಾಖಲು

Latest4 hours ago

ಯೋಗೇಶ್‌ ಗೌಡ ಕೊಲೆ ಪ್ರಕರಣ: ಅನರ್ಹತೆ ಭೀತಿ; ಶಿಕ್ಷೆ ರದ್ದುಕೋರಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ ಶಾಸಕ ವಿನಯ್‌ ಕುಲಕರ್ಣಿ

Latest4 hours ago

ಕಲಬುರಗಿ ಜಿಲ್ಲೆಯ ಮಕ್ಕಳನ್ನು ಅವಮಾನಿಸಬೇಡಿ, ಅವರೂ ಬುದ್ದಿವಂತರು; ಬಿಜೆಪಿ ಮುಖಂಡರಿಗೆ ಸಚಿವ ಪ್ರಿಯಾಂಕ್‌ ಖರ್ಗೆ ತಿರುಗೇಟು

Latest4 hours ago

ಕಾಂತಾರ ಚಾಪ್ಟರ್‌-1 ಮಿಮಿಕ್ರಿ: ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಮೇಲಿನ ಪ್ರಕರಣ ಇತ್ಯರ್ಥ; ಕೋರ್ಟ್‌ ಆದೇಶವೇನು?

Latest5 hours ago

ಒಳಮೀಸಲಾತಿ ಜಾರಿ: ಕೊಟ್ಟ ಮಾತು ಈಡೇರಿಸಿದ ದಲಿತರಾಮಯ್ಯ; ಸಚಿವ ಆರ್.ಬಿ. ತಿಮ್ಮಾಪುರ

Latest5 hours ago

ಒಳ ಮೀಸಲಾತಿಯಿಂದ ಅನ್ಯಾಯ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಹೋರಾಟ; ಬಿಜೆಪಿ ಘೋಷಣೆ

Latest6 hours ago

ದೆಹಲಿಯಲ್ಲಿ ಬೀಡುಬಿಟ್ಟ ಡಿಕೆ ಶಿವಕುಮಾರ್;‌ ಪ್ರತಿತಂತ್ರ ಹೆಣೆಯುತ್ತಿರುವ ಸಿದ್ದರಾಮಯ್ಯ ಟೀಂ; ಮುಂದುವರೆದ ಹಾವು ಏಣಿಯಾಟ

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ2 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌