IPL 2024: ಸಿಎಸ್‌ಕೆ ತಂಡವನ್ನು ಸೋಲಿಸಿದ ಆರ್‌ಸಿಬಿ; ಪ್ಲೇ ಆಫ್‌ನಲ್ಲಿ ಯಾರು ಯಾರಿಗೆ ಎದುರಾಳಿ? ಇಲ್ಲಿದೆ ವೇಳಾಪಟ್ಟಿ - Vistara News

ಐಪಿಎಲ್ 2024

IPL 2024: ಸಿಎಸ್‌ಕೆ ತಂಡವನ್ನು ಸೋಲಿಸಿದ ಆರ್‌ಸಿಬಿ; ಪ್ಲೇ ಆಫ್‌ನಲ್ಲಿ ಯಾರು ಯಾರಿಗೆ ಎದುರಾಳಿ? ಇಲ್ಲಿದೆ ವೇಳಾಪಟ್ಟಿ

IPL 2024: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್ 2024ರ 68ನೇ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ (CSK) ವಿರುದ್ಧ 27 ರನ್‌ಗಳಿಂದ ಜಯಗಳಿಸಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) 4ನೇ ತಂಡವಾಗಿ ಪ್ಲೇ ಆಫ್‌ ಪ್ರವೇಶಿಸಿದೆ. ಇದೀಗ ಪ್ಲೇ ಆಫ್‌ ಪಂದ್ಯಗಳ ಲೆಕ್ಕಾಚಾರ ಆರಂಭವಾಗಿದೆ. ಹಾಗಾದರೆ ಯಾರು ಯಾರನ್ನು ಎದುರಿಸುತ್ತಾರೆ? ಪಂದ್ಯ ಯಾವಾಗ? ಮುಂತಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

VISTARANEWS.COM


on

IPL 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್ 2024ರ 68ನೇ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ (CSK) ವಿರುದ್ಧ 27 ರನ್‌ಗಳಿಂದ ಜಯಗಳಿಸಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) 4ನೇ ತಂಡವಾಗಿ ಪ್ಲೇ ಆಫ್‌ ಪ್ರವೇಶಿಸಿದೆ. ಈಗಾಗಲೇ ಕೋಲ್ಕತ್ತಾ ನೈಟ್ ರೈಡರ್ಸ್ (KKR), ರಾಜಸ್ಥಾನ್ ರಾಯಲ್ಸ್ (RR) ಮತ್ತು ಸನ್‌ ರೈಸರ್ಸ್‌ ಹೈದರಾಬಾದ್ (SRH) ಪ್ಲೇ ಆಫ್‌ನಲ್ಲಿ ಸ್ಥಾನ ಪಡೆದಿವೆ. ಹಾಗಾದರೆ ಪ್ಲೇ ಆಫ್‌ ಯಾವಾಗ ಎಲ್ಲಿ ನಡೆಯಲಿದೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಪ್ಲೇ ಆಫ್‌ ವೇಳಾಪಟ್ಟಿ

ದಿನಾಂಕ ಪ್ಲೇ ಆಫ್‌ತಂಡಸಮಯ (ರಾತ್ರಿ)ಸ್ಥಳ
ಮೇ 21ಕ್ವಾಲಿಫೈರ್‌ 1ಕೋಲ್ಕತ್ತಾ ನೈಟ್‌ ರೈಡರ್ಸ್‌ ಮತ್ತು ರಾಜಸ್ಥಾನ್​ ರಾಯಲ್ಸ್​ / ಸನ್​ರೈಸರ್ಸ್​ ಹೈದರಾಬಾದ್​7.30ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್​
ಮೇ 22ಎಲಿಮಿನೇಟರ್‌ ರಾಜಸ್ಥಾನ್​ ರಾಯಲ್ಸ್​ / ಸನ್​ರೈಸರ್ಸ್​ ಹೈದರಾಬಾದ್ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು7.30ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್​
ಮೇ 24ಕ್ವಾಲಿಫೈರ್‌ 2ಎಲಿಮಿನೇಟರ್‌ನ ವಿಜೇತರು ಮತ್ತು ಕ್ವಾಲಿಫೈರ್‌ 1ರ ಸೋತ ತಂಡ7.30ಎಂ.ಎ.ಚಿದಂಬರಂ ಸ್ಟೇಡಿಯಂ, ಚೆನ್ನೈ
ಮೇ 26ಫೈನಲ್‌ಕ್ವಾಲಿಫೈರ್‌ 1ರ ವಿಜೇತರು ಮತ್ತು ಕ್ವಾಲಿಫೈರ್‌ 2ರ ವಿಜೇತರು7.30ಎಂ.ಎ.ಚಿದಂಬರಂ ಸ್ಟೇಡಿಯಂ, ಚೆನ್ನೈ

ಕ್ವಾಲಿಫೈರ್‌ ಪಂದ್ಯಗಳು

ಕ್ವಾಲಿಫೈರ್‌ 1ರಲ್ಲಿ ಅಗ್ರ ಎರಡು ತಂಡಗಳ ನಡುವೆ ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೇ 21ರ ರಾತ್ರಿ 7.30ಕ್ಕೆ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದೆ. ಮೇ 22ರ ರಾತ್ರಿ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಎಲಿಮಿನೇಟರ್‌ ಪಂದ್ಯದಲ್ಲಿ ಮೂರನೇ ಮತ್ತು ನಾಲ್ಕನೇ ತಂಡದ ನಡುವೆ ಜಿದ್ದಾಜಿದ್ದು ನಡೆಯಲಿದೆ. ಇದರಲ್ಲಿ ಗೆದ್ದವರು ಮೇ 24ರಂದು ಚೆನ್ನೈ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಕ್ವಾಲಿಫೈರ್‌ 2ರ ಪಂದ್ಯದಲ್ಲಿ ಕ್ವಾಲಿಫೈರ್‌ 1ರ ಸೋತ ತಂಡದೊಂದಿಗೆ ಸೆಣಸಾಡಲಿದ್ದಾರೆ. ಈ ಪಂದ್ಯ ರಾತ್ರಿ 7.30ಕ್ಕೆ ನಡೆಯಲಿದೆ. ಇದರಲ್ಲಿ ಗೆದ್ದವರು ಫೈನಲ್‌ನಲ್ಲಿ ಕ್ವಾಲಿಫೈರ್‌ 1ರ ವಿಜೇತರೊಂದಿಗೆ ಕಪ್‌ಗಾಗಿ ಹೋರಾಡಲಿದ್ದಾರೆ. ಫೈನಲ್‌ ಪಂದ್ಯ ಚೆನ್ನೈಯ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ಮೇ 26ರ ರಾತ್ರಿ 7.30ಕ್ಕೆ ಆಯೋಜಿಸಲಾಗಿದೆ.

ಲೀಗ್‌ ಹಂತದಲ್ಲಿ ಇನ್ನೂ ಕೆಲವು ಪಂದ್ಯ ಬಾಕಿ ಇರುವುದರಿಂದ ಅಂಕಪಟ್ಟಿ ಬದಲಾಗುವ ಸಾಧ್ಯತೆ ಇದೆ. ಅಗ್ರ ಮೂರು ಸ್ಥಾನಗಳಲ್ಲಿ ಇರುವ ಕೆಕೆಆರ್‌, ಆರ್‌ಆರ್‌ ಮತ್ತು ಎಸ್‌ಆರ್‌ಎಚ್‌ ತಂಡಗಳಿಗೆ ಇನ್ನು ತಲಾ 1 ಪಂದ್ಯಗಳಿವೆ. ಎಸ್‌ಆರ್‌ಎಚ್‌-ಪಂಜಾಬ್‌, ರಾಜಸ್ಥಾನ-ಕೋಲ್ಕತ್ತಾ ಪರಸ್ಪರ ಸೆಣಸಾಡಲಿರುವುದರಿಂದ ಪ್ಲೇ ಆಫ್‌ಗೆ ಅರ್ಹತೆ ಪಡೆದ ತಂಡಗಳ ಸ್ಥಾನಗಳಲ್ಲಿ ಏರುಪೇರಾಗಲಿದೆ. ಅದಾಗ್ಯೂ ಸೋತರೂ ಕೋಲ್ಕತ್ತಾ ಅಗ್ರ ಸ್ಥಾನದಲ್ಲೇ ಮುಂದುವರಿಯಲಿದ್ದು, ಆರ್‌ಸಿಬಿಗೆ ನಾಲ್ಕನೇ ಸ್ಥಾನ ಫಿಕ್ಸ್‌. ಎರಡು ಮತ್ತು ಮೂರನೇ ಸ್ಥಾನಗಳ ಸ್ಪಷ್ಟ ಚಿತ್ರಣ ಪಂದ್ಯದ ಬಳಿಕವಷ್ಟೇ ದೊರೆಯಲಿದೆ.

ಇದನ್ನೂ ಓದಿ: IPL 2024 : ಗೆಲುವೊಂದೇ ಗುರಿ; ಅಂಪೈರ್​ಗಳ ಜತೆ ಮತ್ತೆ ವಾಗ್ವಾದ ನಡೆಸಿದ ಕೊಹ್ಲಿ

ಸಿಎಸ್‌ಕೆ ಸೋಲಿಸಿ ಪ್ಲೇ ಆಫ್‌ಗೆ ಏರಿದ ಬೆಂಗಳೂರು

ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಶನಿವಾರ ನಡೆದ ಮಳೆ ಪೀಡಿತ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಆರ್​ಸಿಬಿ ವಿರಾಟ್​ ಕೊಹ್ಲಿ ಮತ್ತು ಫಾಫ್​ ಡುಪ್ಲೆಸ್​ ಮೊದಲ ವಿಕೆಟ್​ಗೆ ನಿರ್ಮಿಸಿದ ಭದ್ರ ಅಡಿಪಾಯದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 218 ರನ್​ ಬಾರಿಸಿತು. ಈ ಬೃಹತ್​ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ಹಲವು ಏರಿಳಿತ ಕಂಡು ಕೊನೆಗೆ ತನ್ನ ಪಾಲಿನ ಆಟದಲ್ಲಿ 7 ವಿಕೆಟ್​ಗೆ 191 ರನ್​ ಗಳಿಸಲಷ್ಟೇ ಶಕ್ತವಾಗಿ ಸೋಲಿಗೆ ಶರಣಾಯಿತು. ಜತೆಗೆ ಟೂರ್ನಿಯಿಂದಲೂ ಹೊರಬಿದ್ದು ಮಾಜಿ ಚಾಂಪಿಯನ್​ ಎನಿಸಿಕೊಂಡಿತು. ಒಂದೊಮ್ಮೆ ಚೆನ್ನೈ 201 ರನ್​ ಬಾರಿಸುತ್ತಿದ್ದರೂ ಆರ್​ಸಿಬಿ ಪ್ಲೇ ಆಫ್​ನಿಂದ ಹೊರ ಬೀಳುತ್ತಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕ್ರೀಡೆ

RCB vs RR: ಆರ್​ಸಿಬಿ-ರಾಜಸ್ಥಾನ್ ತಂಡಗಳ​ ಐಪಿಎಲ್​ ​ಪ್ಲೇ ಆಫ್/ನಾಕೌಟ್ ದಾಖಲೆ ಹೇಗಿದೆ?

RCB vs RR: ಆರ್​ಸಿಬಿ ಮತ್ತು ರಾಜಸ್ಥಾನ್​ ತಂಡಗಳು ಇದುವರೆಗಿನ ಐಪಿಎಲ್​ ಆವೃತ್ತಿಯಲ್ಲಿ ಒಟ್ಟು 31 ಬಾರಿ(RR vs RCB Head To Head Record) ಮುಖಾಮುಖಿಯಾಗಿವೆ. ಈ ಪೈಕಿ ಆರ್​ಸಿಬಿ 15, ರಾಜಸ್ಥಾನ್​ 13 ಗೆಲುವು ಸಾಧಿಸಿದೆ. 3 ಪಂದ್ಯಗಳು ಫಲಿತಾಂಶ ಕಂಡಿಲ್ಲ.

VISTARANEWS.COM


on

RCB vs RR
Koo

ಅಹಮದಾಬಾದ್​: ಐಪಿಎಲ್​ ಆವೃತ್ತಿಯ ಚೊಚ್ಚಲ ಚಾಂಪಿಯನ್​ ರಾಜಸ್ಥಾನ್​ ರಾಯಲ್ಸ್​(RCB vs RR) ಮತ್ತು ಮೂರು ಬಾರಿ ಫೈನಲ್​ ಪ್ರವೇಶಿಸಿದರೂ ಕಪ್​ ಗೆಲ್ಲದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು(Royal Challengers Bengaluru) ತಂಡಗಳು ನಾಳೆ(ಬುಧವಾರ) ನಡೆಯುವ ಎಲಿಮಿನೇಟರ್​ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಇತ್ತಂಡಗಳ ಇದುವರೆಗಿನ ಐಪಿಎಲ್​ನ ಸಾಧನೆಗಳ ಹಿನ್ನೋಟ ಇಂತಿದೆ.

ಸೇಡು ತೀರಿಸಿಕೊಂಡೀತೇ ಆರ್​ಸಿಬಿ?


ರಾಜಸ್ಥಾನ್​ ರಾಯಲ್ಸ್​ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ 2022ರಲ್ಲಿ ನಡೆದಿದ್ದ ಐಪಿಎಲ್​ ಟೂರ್ನಿಯ ಕ್ವಾಲಿಫೈಯರ್​-2 ಪಂದ್ಯದಲ್ಲಿ ಮುಖಾಮುಖಿಯಾಗಿತ್ತು. ಈ ಪಂದ್ಯ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದಿತ್ತು. ಪಂದ್ಯದಲ್ಲಿ ರಾಜಸ್ಥಾನ್​ 7 ವಿಕೆಟ್​ ಅಂತರದ ಭರ್ಜರಿ ಗೆಲುವು ಸಾಧಿಸಿ ಫೈನಲ್​ ಪ್ರವೇಶಿಸಿತ್ತು. ಇದೀಗ ಅಂದಿನ ಈ ಸೋಲಿಗೆ ಆರ್​ಸಿಬಿ ಈ ಬಾರಿಯ ಎಲಿಮಿನೇಟರ್​ ಪಂದ್ಯದಲ್ಲಿ ಸೇಡು ತೀರಿಸಿಕೊಂಡೀತೇ? ಎಂದು ಕಾದು ನೋಡಬೇಕಿದೆ.

ಆರ್​ಸಿಬಿ ನಾಕೌಟ್​/ ಪ್ಲೇ ಆಫ್​ ಸಾಧನೆ


2009ರಲ್ಲಿ ಲೀಗ್​ನಲ್ಲಿ ಮೊದಲ ಸ್ಥಾನ. ಫೈನಲ್​ನಲ್ಲಿ ಸೋಲು (ರನ್ನರ್​ ಅಪ್​)

201ರಲ್ಲಿ ಲೀಗ್​ನಲ್ಲಿ ಮೂರನೇ ಸ್ಥಾನ. ಪ್ಲೇ ಆಫ್​ನಲ್ಲಿ ಸೋಲು

2011ರಲ್ಲಿ ಲೀಗ್​ನಲ್ಲಿ ಮೊದಲ ಸ್ಥಾನ. ಫೈನಲ್​ನಲ್ಲಿ ಸೋಲು (ರನ್ನರ್​ ಅಪ್​)

2015ರಲ್ಲಿ ಲೀಗ್​ನಲ್ಲಿ ಮೂರನೇ ಸ್ಥಾನ. ಪ್ಲೇ ಆಫ್​ನಲ್ಲಿ ಸೋಲು

2016ರಲ್ಲಿ ಲೀಗ್​ನಲ್ಲಿ ಮೊದಲ ಸ್ಥಾನ. ಫೈನಲ್​ನಲ್ಲಿ ಸೋಲು (ರನ್ನರ್​ ಅಪ್​)

2020ರಲ್ಲಿ ಲೀಗ್​ನಲ್ಲಿ 4ನೇ ಸ್ಥಾನ. ಪ್ಲೇ ಆಫ್​ನಲ್ಲಿ ಸೋಲು

2021ರಲ್ಲಿ ಲೀಗ್​ನಲ್ಲಿ 3ನೇ ಸ್ಥಾನ. ಪ್ಲೇ ಆಫ್​ನಲ್ಲಿ ಸೋಲು

2022ರಲ್ಲಿ ಲೀಗ್​ನಲ್ಲಿ 4ನೇ ಸ್ಥಾನ. ಪ್ಲೇ ಆಫ್​ನಲ್ಲಿ ಸೋಲು

ರಾಜಸ್ಥಾನ್​ ನಾಕೌಟ್​/ ಪ್ಲೇ ಆಫ್​ ಸಾಧನೆ


2008ರಲ್ಲಿ ಲೀಗ್​ನಲ್ಲಿ ಮೊದಲ ಸ್ಥಾನ. ಚಾಂಪಿಯನ್​

2013ರಲ್ಲಿ ಲೀಗ್​ನಲ್ಲಿ ಮೂರನೇ ಸ್ಥಾನ. ಪ್ಲೇ ಆಫ್​ನಲ್ಲಿ ಸೋಲು

2015ರಲ್ಲಿ ಲೀಗ್​ನಲ್ಲಿ 4ನೇ ಸ್ಥಾನ. ಪ್ಲೇ ಆಫ್​ನಲ್ಲಿ ಸೋಲು

2018ರಲ್ಲಿ ಲೀಗ್​ನಲ್ಲಿ 4ನೇ ಸ್ಥಾನ. ಪ್ಲೇ ಆಫ್​ನಲ್ಲಿ ಸೋಲು

2022ರಲ್ಲಿ ಲೀಗ್​ನಲ್ಲಿ 2ನೇ ಸ್ಥಾನ. ಫೈನಲ್​ನಲ್ಲಿ ಸೋಲು (ರನ್ನರ್​ ಅಪ್​)

ಇದನ್ನೂ ಓದಿ RCB IPL Records: ಕಳೆದ 16 ಆವೃತ್ತಿಯ ಐಪಿಎಲ್​ನಲ್ಲಿ ಆರ್​ಸಿಬಿ ಎಷ್ಟು ಬಾರಿ ಪ್ಲೇ ಆಫ್​ಪ್ರವೇಶಿಸಿದೆ?: ತಂಡದ ದಾಖಲೆ ಹೇಗಿದೆ?

ಮುಖಾಮುಖಿ


ಆರ್​ಸಿಬಿ ಮತ್ತು ರಾಜಸ್ಥಾನ್​ ತಂಡಗಳು ಇದುವರೆಗಿನ ಐಪಿಎಲ್​ ಆವೃತ್ತಿಯಲ್ಲಿ ಒಟ್ಟು 31 ಬಾರಿ(RR vs RCB Head To Head Record) ಮುಖಾಮುಖಿಯಾಗಿವೆ. ಈ ಪೈಕಿ ಆರ್​ಸಿಬಿ 15, ರಾಜಸ್ಥಾನ್​ 13 ಗೆಲುವು ಸಾಧಿಸಿದೆ. 3 ಪಂದ್ಯಗಳು ಫಲಿತಾಂಶ ಇಲ್ಲದೆ ಕೊನೆಗೊಂಡಿದೆ. ಈ ಲೆಕ್ಕಾಚಾರದಲ್ಲಿ ಆರ್​ಸಿಬಿ ಬಲಿಷ್ಠ ಎನ್ನಲಡ್ಡಿಯಿಲ್ಲ. ಈ ಬಾರಿಯ ಮುಖಾಮುಖಿಯಲ್ಲಿ ರಾಜಸ್ಥಾನ್​ ಗೆಲುವು ಸಾಧಿಸಿತ್ತು.

ಸಂಭಾವ್ಯ ತಂಡಗಳು


ಆರ್​ಸಿಬಿ:
ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ರಜತ್ ಪಾಟಿದಾರ್, ಕ್ಯಾಮರೂನ್​ ಗ್ರೀನ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್ (ವಿಕೆ), ಕರ್ಣ್ ಶರ್ಮಾ, ಯಶ್ ದಯಾಳ್, ಲಾಕಿ ಫರ್ಗುಸನ್, ಮೊಹಮ್ಮದ್ ಸಿರಾಜ್.

ರಾಜಸ್ಥಾನ್​ ರಾಯಲ್ಸ್​: ಯಶಸ್ವಿ ಜೈಸ್ವಾಲ್, ಟಾಮ್ ಕೊಹ್ಲರ್-ಕಾಡ್ಮೋರ್, ಸಂಜು ಸ್ಯಾಮ್ಸನ್ (ನಾಯಕ), ರಿಯಾನ್ ಪರಾಗ್, ಧ್ರುವ್ ಜುರೆಲ್, ರೋವ್ಮನ್ ಪೊವೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಅವೇಶ್ ಖಾನ್, ನಾಂದ್ರೆ ಬರ್ಗರ್.

Continue Reading

ಕ್ರೀಡೆ

IPL 2024: ಪ್ಲೇ ಆಫ್ ಪಂದ್ಯಗಳಿಗೆ ಮೀಸಲು ದಿನ ಇದೆಯೇ? ಮಳೆ ಬಂದರೆ ಫಲಿತಾಂಶ ನಿರ್ಧಾರ ಹೇಗೆ?

IPL 2024: ಒಂದು ವೇಳೆ ಮೀಸಲು ದಿನದಂದೂ ಕೂಡ ಮಳೆ ಅಡ್ಡಿ ಪಡಿಸಿದರೆ ಸೂಪರ್ ಓವರ್​ಗೆ ಅವಕಾಶವಿದೆ. ಇದಕ್ಕೂ ಕೂಡ ಮಳೆ ಅನುವು ಮಾಡಿಕೊಡದೇ ಇದ್ದಾಗ ಅಂತಿಮವಾಗಿ ಲೀಗ್​ ಹಂತದ ಅಂಕಪಟ್ಟಿಯಲ್ಲಿ ಯಾರು ಮುಂದಿರುತ್ತಾರೋ ಆ ತಂಡವನ್ನು ವಿಜಯೀ ಎಂದು ಘೋಷಿಸಲಾಗುತ್ತದೆ.

VISTARANEWS.COM


on

IPL 2024
Koo

ಬೆಂಗಳೂರು: 17ನೇ ಆವೃತ್ತಿಯ ಐಪಿಎಲ್​(IPL 2024) ಟೂರ್ನಿ ಕೊನೆಯ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಲೀಗ್​ ಹಂತದ ಪಂದ್ಯಗಳು ಮುಕ್ತಾಯಕಂಡಿದ್ದು ಇನ್ನು ಕ್ವಾಲಿಫೈಯರ್​ ಮತ್ತು ಎಲಿಮಿನೇಟರ್​ ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ಮೊದಲ ಕ್ವಾಲಿಫೈಯರ್​ ಪಂದ್ಯ ನಾಳೆ(ಮಂಗಳವಾರ) ಅಹಮದಾಬಾದ್​ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಕೆಕೆಆರ್​ ಮತ್ತು ಸನ್​ರೈಸರ್ಸ್​ ಹೈದರಾಬಾದ್​ ಮುಖಾಮುಖಿಯಾಗಲಿವೆ. ಆದರೆ, ಪ್ಲೇ ಆಫ್​ ಪಂದ್ಯಗಳಿಗೂ ಹವಾಮಾನ ಇಲಾಖೆ ಭಾರೀ ಮಳೆಯ ಮುನ್ಸೂಚನೆ ನೀಡಿದೆ. ಈಗಾಗಲೇ ಲೀಗ್​ ಅಹಮದಾಬಾದ್​ ಸೇರಿ ಕೆಲವು ಕಡೆ ನಿಗದಿಯಾಗಿದ್ದ ಲೀಗ್​ ಪಂದ್ಯಗಳು ಮಳೆಯಿಂದ ರದ್ದಾದ ನಿದರ್ಶನವೂ ನಮ್ಮ ಕಣ್ಣ ಮುಂದಿದೆ. ಇದೀಗ ಪ್ಲೇ ಆಫ್​ ಪಂದ್ಯಗಳಿಗೆ(ipl playoffs rain rules) ಮಳೆ ನಿಯಮ ಹೇಗಿದೆ ಎಂಬ ಮಾಹಿತಿ ಇಂತಿದೆ.

ಮಳೆ ಬಂದರೆ?


ಐಪಿಎಲ್​ ಆಡಳಿತ ಮಂಡಳಿ ಮತ್ತು ಬಿಸಿಸಿಐ ಟೂರ್ನಿ ಆರಂಭಕ್ಕೂ ಮುನ್ನವೇ ಲೀಗ್​ ಪಂದ್ಯಗಳಿಗೆ ಯಾವುದೇ ಮೀಸಲು ದಿನ ಇಲ್ಲ ಎಂದು ಸ್ಪಷ್ಟಪಡಿಸಿತ್ತು. ಅದರಂತೆ ಮಳೆಯಿಂದ ಪಂದ್ಯ ರದ್ದುಗೊಂಡರೆ ಉಭಯ ತಂಡಗಳಿಗೂ ತಲಾ ಒಂದು ಅಂಕ ನಿಗದಿಪಡಿಸಿತ್ತು. ಆದರೆ, ನಾಕೌಟ್ ಹಂತಕ್ಕೆ ಮೀಸಲು ದಿನವನ್ನು (Reserve day) ಇರಿಸಿದೆ. ಪೂರ್ಣ ಪಂದ್ಯ ನಡೆಸಲು ಹೆಚ್ಚುವರಿ 120 ನಿಮಿಷಗಳನ್ನು ನೀಡಲಾಗಿದೆ. ಈ ಸಮಯದಲ್ಲಿಯೂ ಪಂದ್ಯ ನಡೆಯದೇ ಹೋದರೆ ಆಗ ಡಕ್​ವರ್ತ್​ ನಿಯದ ಅನುಸಾರ ಓವರ್​ ಕಡಿತಗೊಳಿಸಿ ಪಂದ್ಯ ನಡೆಸುವ ನಿರ್ಣಾಯಕ್ಕೆ ಬರಲಾಗುತ್ತದೆ. ಈ ವೇಳೆಯೂ ಪಂದ್ಯ ನಡೆಯದೇ ಇದ್ದರೆ ಪಂದ್ಯವನ್ನು ಮೀಸಲ ದಿನಕ್ಕೆ ಮುಂದೂಡಲಾಗುತ್ತದೆ. ಒಂದೊಮ್ಮೆ ಮೀಸಲು ದಿನದ ಮೊದಲಿನ ದಿನ ಪಂದ್ಯ ಅರ್ಧಕ್ಕೆ ನಿಂತಿದ್ದರೆ, ಅಲ್ಲಿಂದಲೇ ಮರುದಿನ ಪಂದ್ಯ ಆರಂಭಿಸಲಾಗುತ್ತದೆ.

ಇದನ್ನೂ ಓದಿ IPL 2024 Eliminator: ಎಲಿಮಿನೇಟರ್​ ಪಂದ್ಯಕ್ಕೂ ಮುನ್ನ ಆರ್​ಸಿಬಿಗೆ ಆಘಾತ; ಇಬ್ಬರು ಸ್ಟಾರ್​ ಆಟಗಾರರು ಅಲಭ್ಯ!

ಮೀಸಲು ದಿನಕ್ಕೂ ಮಳೆ ಬಂದರೆ?

ಮೀಸಲು ದಿನವೂ ಮಳೆ ಬಂದರೆ ಫಲಿತಾಂಶ ಹೇಗೆ ನಿರ್ಧರಿಸಲಾಗುತ್ತದೆ ಎನ್ನುವ ಪ್ರಶ್ನೆ ಕ್ರಿಕೆಟ್​ ಅಭಿಮಾನಿಗಳಿಗೆ ಕಾಡುವುದು ಸಹಜ. ಇದಕ್ಕೂ ಬಿಸಿಸಿಐ ಉತ್ತರ ನೀಡಿದೆ. ಒಂದು ವೇಳೆ ಮೀಸಲು ದಿನದಂದೂ ಕೂಡ ಮಳೆ ಅಡ್ಡಿ ಪಡಿಸಿದರೆ ಸೂಪರ್ ಓವರ್​ಗೆ ಅವಕಾಶವಿದೆ. ಇದಕ್ಕೂ ಕೂಡ ಮಳೆ ಅನುವು ಮಾಡಿಕೊಡದೇ ಇದ್ದಾಗ ಅಂತಿಮವಾಗಿ ಲೀಗ್​ ಹಂತದ ಅಂಕಪಟ್ಟಿಯಲ್ಲಿ ಯಾರು ಮುಂದಿರುತ್ತಾರೋ ಆ ತಂಡವನ್ನು ವಿಜಯೀ ಎಂದು ಘೋಷಿಸಲಾಗುತ್ತದೆ. ಈ ನಿಯಮ ಫೈನಲ್​ ಪಂದ್ಯಕ್ಕೂ ಅನ್ವಯವಾಗುತ್ತದೆ. ಒಂದೊಮ್ಮೆ ಮಳೆಯಿಂದ ಎಲ್ಲ ಪಂದ್ಯಗಳು ರದ್ದಾದದರೆ ಆಗ ಅಗ್ರಸ್ಥಾನಿ ಕೆಕೆಆರ್​ ಈ ಬಾರಿಯ ಚಾಂಪಿಯನ್​ ಪಟ್ಟ ಅಲಂಕರಿಸಲಿದೆ. ಏಕೆಂದರೆ ಕೆಕೆಆರ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದೆ.​

Continue Reading

ರಾಯಚೂರು

IPL 2024 : ಐಪಿಎಲ್‌ ಬೆಟ್ಟಿಂಗ್‌ಗಾಗಿ ಮೈ ತುಂಬಾ ಸಾಲ; ನೇಣಿಗೆ ಶರಣಾದ ಯುವಕ

IPL 2024 : ಐಪಿಎಲ್ ಬೆಟ್ಟಿಂಗ್ (IPL Betting) ದಂಧೆಗೆ ಯುವಕನೊಬ್ಬ ಬಲಿಯಾಗಿದ್ದಾನೆ. ಐಪಿಎಲ್‌ ಮ್ಯಾಚ್‌ಗೆ ಬೆಟ್ಟಿಂಗ್‌ ಕಟ್ಟಲು ವಿಪರೀತ ಸಾಲ ಮಾಡಿಕೊಂಡಿದ್ದ. ಆದರೆ ಮಾಡಿಕೊಂಡ ಸಾಲವನ್ನು ತೀರಿಸಲು ಆಗದೆ ನೇಣು ಬಿಗಿದುಕೊಂಡು (Self Harming) ಮೃತಪಟ್ಟಿದ್ದಾನೆ.

VISTARANEWS.COM


on

By

IPL 2024 Man commits suicide after taking loan for IPL betting
Koo

ರಾಯಚೂರು: ಐಪಿಎಲ್‌ (IPL 2024) ಬೆಟ್ಟಿಂಗ್‌ನಲ್ಲಿ (IPL Betting) ಲಕ್ಷ ಲಕ್ಷ ಕಳೆದುಕೊಂಡ ಯುವಕನೊಬ್ಬ ಲಾಡ್ಜ್‌ನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾನೆ. ರಾಯಚೂರಿನ ಸಿಂಧನೂರು ನಗರದಲ್ಲಿ ಘಟನೆ ನಡೆದಿದೆ.

ಮಸ್ಕಿ ತಾಲೂಕಿನ ಉದ್ಬಾಳ ಗ್ರಾಮದ ಮುದಿಬಸವ (29) ಎಂಬಾತ ಆತ್ಮಹತ್ಯೆ ಮಾಡಿಕೊಂಡವರು. ಮುದಿಬಸವ ಐಪಿಎಲ್ ಬೆಟ್ಟಿಂಗ್‌ಗಾಗಿ ಸಾಕಷ್ಟು ಸಾಲವನ್ನು ಮಾಡಿಕೊಂಡಿದ್ದ. ಆದರೆ ಬೆಟ್ಟಿಂಗ್‌ ಕಟ್ಟಿದ ಎಲ್ಲ ಮ್ಯಾಚ್‌ಗಳು ಸೋತಿದ್ದವು. ಸಾಲದಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ. ಸಾಲಗಾರರ ಕಾಟಕ್ಕೆ ಬೇಸತ್ತ ಮುದಿಬಸವ ಲಾಡ್ಜ್‌ವೊಂದರ ರೂಮಿನಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ರೂಮಿನ ಬಾಗಿಲು ತೆರೆಯದೆ ಇದ್ದಾಗ ಅನುಮಾನಗೊಂಡು ಲಾಡ್ಜ್‌ ಸಿಬ್ಬಂದಿ ಒಳಹೊಕ್ಕಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಸಿಂಧನೂರು ನಗರ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಸಿಂಧನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: IPL 2024: ರಾಯಲ್‌ ಆಗಿ ಪ್ಲೇ ಆಫ್‌ ಪ್ರವೇಶಿಸಿದ ಬೆಂಗಳೂರು; ಮುಗಿಲು ಮುಟ್ಟಿದ ಸಂಭ್ರಮ

IPL 2024 : ಕ್ಯಾಚ್​ ಆಫ್​​ ದಿ ಸೀಸನ್​, ಫಾಫ್​ ಡು ಪ್ಲೆಸಿಸ್​ ಹಿಡಿದ ಅದ್ಭುತ್​ ಕ್ಯಾಚ್​​ನ ವಿಡಿಯೊ ಇಲ್ಲಿದೆ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಮಾಡು ಇಲ್ಲವೇ ಮಡಿ ಐಪಿಎಲ್​ (IPL 2024) ಪಂದ್ಯದಲ್ಲಿ ಆರ್​ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ (Faf du pelssis) ಹಿಡಿದ ಕ್ಯಾಚ್​ ಈ ಋತುವಿನ ಅದ್ಭುತ ಕ್ಯಾಚ್​ ಎನಿಸಿಕೊಂಡಿದೆ. ಪಂದ್ಯದ ಆರಂಭದಲ್ಲಿ ಅದ್ಭುತ ಅರ್ಧಶತಕ ಗಳಿಸಿದ ನಂತರ, ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಮಿಚೆಲ್ ಸ್ಯಾಂಟ್ನರ್ ಅವರನ್ನು ಪೆವಿಲಿಯನ್​ಗೆ ಕಳುಹಿಸಲು ಅದ್ಭುತ ಕ್ಯಾಚ್​ ಹಿಡಿದರು. 15ನೇ ಓವರ್​ನ ಕೊನೆಯ ಎಸೆತದಲ್ಲಿ ಮೊಹಮ್ಮದ್ ಸಿರಾಜ್ ಆಫ್ ಸ್ಟಂಪ್ನಲ್ಲಿ ಲೊ ಫುಲ್ ಟಾಸ್ ಎಸೆದರು. ಚೆಂಡು ಫಾಫ್ ಡು ಪ್ಲೆಸಿಸ್ ಅವರ ತಲೆಯ ಮೇಲಿಂದ ಹಾರಿ ಹೋಗುತ್ತಿತ್ತು. ಆದಾಗ್ಯೂ, ಆರ್​ಸಿಬಿ ನಾಯಕನಿಗೆ ಬೇರೆ ಆಲೋಚನೆಗಳು ಇರಲಿಲ್ಲ. ವಿಶ್ವದ ಅತ್ಯುತ್ತಮ ಫೀಲ್ಡರ್​ಗಳಲ್ಲಿ ಒಬ್ಬರಾದ ಅವರು ಸಮಯೋಚಿತವಾಗಿ ಜಿಗಿದು ಒಂದು ಕೈಯಿಂದ ಚೆಂಡನ್ನು ಹಿಡಿದರು.

ಈ ಪಂದ್ಯದ ಆರಂಭದಲ್ಲಿ, ಫಾಫ್ ಡು ಪ್ಲೆಸಿಸ್ ಆರ್​ಸಿಬಿಯನ್ನು ಮುನ್ನಡೆಸಿದರು. ಅವರ ತಂಡದ ಪರ ಗರಿಷ್ಠ ಸ್ಕೋರ್ ಗಳಿಸಿದರು. ಅವರು 54 ರನ್ ಗಳಿಸಿ ಆರ್​ಸಿಬಿಗೆ ಮಾಡು ಇಲ್ಲವೇ ಮಡಿ ಹೋರಾಟದಲ್ಲಿ ಉತ್ತಮ ಆರಂಭವನ್ನು ನೀಡಿದರು. ವಿರಾಟ್ ಕೊಹ್ಲಿ (47), ರಜತ್ ಪಾಟಿದಾರ್ (41) ಮತ್ತು ಕ್ಯಾಮರೂನ್ ಗ್ರೀನ್ (38*) ಕೂಡ ನಿರ್ಣಾಯಕ ಶತಕಗಳ ನೆರವಿನಿಂದ ಆರ್ಸಿಬಿ 5 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತು.

ಡ್ಯಾರಿಲ್​ ಮಿಚೆಲ್ ಕ್ಯಾಚ್ ಹಿಡಿದ ಬಳಿಕ ಕೊಹ್ಲಿಯ ಆಕ್ರಮಣಕಾರಿ ಸಂಭ್ರಮ ಹೀಗಿತ್ತು

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024 ರಲ್ಲಿ (IPL 2024)ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಮೈದಾನದಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಉಭಯ ತಂಡಗಳ ನಡುವಿನ 69ನೇ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದೆ. ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ (Virat kohli) ತಮ್ಮ ತಂಡದ ಪರವಾಗಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅಂತೆಯೇ ಸಿಎಸ್​ಕೆ ಬ್ಯಾಟರ್​ಗಳು ಔಟಾಗುತ್ತಿದ್ದಂತೆ ಅವರ ಅಬ್ಬರವೂ ಜೋರಾಗಿತ್ತು.

ಡ್ಯಾರಿಲ್ ಮಿಚೆಲ್ ಕ್ಯಾಚ್ ಪಡೆದ ನಂತರ ವಿರಾಟ್ ಕೊಹ್ಲಿ ಆಕ್ರಮಣಕಾರಿ ಸಂಭ್ರಮವನ್ನು ಆಚರಿಸಿದರು. ಮೂರನೇ ಯಶ್ ದಯಾಳ್ ಎಸೆತದ ತಮ್ಮ ಓವರ್​ನ ಎರಡನೇ ಎಸೆತದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟ್ಸ್ಮನ್ ದೊಡ್ಡ ಹೊಡೆತ ಹೊಡೆದರು. ಚೆಂಡು ಗಾಳಿಯಲ್ಲಿ ಹಾರಿತು. ಅಲ್ಲಿ ನಿಂತಿದ್ದ ವಿರಾಟ್ ಕೊಹ್ಲಿ ವೇಗವಾಗಿ ಓಡಿ ಸುರಕ್ಷಿತ ಕ್ಯಾಚ್ ಪಡೆದರು. ಬಳಿಕ ಜೋರಾಗಿ ಕಿರುಚಿದರು. ಆದರೆ, ಅನೇಕರ ಗಮನ ಸೆಳೆದದ್ದು ಕೊಹ್ಲಿಯ ಸಂಭ್ರಮಾಚರಣೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟರ್​ ಆಕ್ರಮಣಕಾರಿಯಾಗಿ ಸಂಭ್ರಮಿಸಿದರು.

ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಎರಡನೇ ವಿಕೆಟ್ ಪಡೆದಾಗ ಬಾಲಿವುಡ್ ನಟಿ ತನ್ನ ಸೀಟಿನಲ್ಲಿ ಎದ್ದು ನಿಂತು ಸಂತೋಷ ವ್ಯಕ್ತಪಡಿಸಿದ್ದು ಕೂಡ ಕ್ಯಾಮೆರಾ ಕಣ್ಣಿಗೆ ಬಿತ್ತು. ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಎರಡನೇ ವಿಕೆಟ್ ಪಡೆದಾಗ ಬಾಲಿವುಡ್ ನಟಿ ತನ್ನ ಸೀಟಿನಲ್ಲಿ ಎದ್ದು ನಿಂತು ಸಂತೋಷ ವ್ಯಕ್ತಪಡಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಐಪಿಎಲ್ 2024

IPL 2024: ರಾಯಲ್‌ ಆಗಿ ಪ್ಲೇ ಆಫ್‌ ಪ್ರವೇಶಿಸಿದ ಬೆಂಗಳೂರು; ಮುಗಿಲು ಮುಟ್ಟಿದ ಸಂಭ್ರಮ

IPL 2024: ಶನಿವಾರ ನಡೆದ ಐಪಿಎಲ್‌ 2024 (IPL 2024)ರ ಹೈವೋಲ್ಟೇಜ್‌ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡವನ್ನು ಮಣಿಸಿ ಆರ್‌ಸಿಬಿ ಪ್ಲೇ ಆಫ್‌ ಪ್ರವೇಶಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೊನೆಗೂ ಹಾಲಿ ಚಾಂಪಿಯನ್‌ ಚೆನ್ನೈಯನ್ನು 27 ರನ್‌ಗಳ ಅಂತರದಿಂದ ಸೋಲಿಸುವುದರೊಂದಿಗೆ ಆರ್‌ಸಿಬಿ ಅಭಿಮಾನಿಗಳ ಜೈಕಾರ ಮುಗಿಲು ಮುಟ್ಟಿತು. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸಂಭ್ರಮಾಚರಣೆ ಕಂಡು ಬಂತು.

VISTARANEWS.COM


on

IPL 2024
Koo

ಬೆಂಗಳೂರು: ಆರ್‌ಸಿಬಿ (RCB) ಅಭಿಮಾನಿಗಳು ಗೆಲುವಿನ ನಿಟ್ಟುಸಿರು ಬಿಟ್ಟಿದ್ದಾರೆ. ಶನಿವಾರ ನಡೆದ ಐಪಿಎಲ್‌ 2024 (IPL 2024)ರ ಹೈವೋಲ್ಟೇಜ್‌ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ (CSK)​ ತಂಡವನ್ನು ಮಣಿಸಿ ಆರ್‌ಸಿಬಿ ಪ್ಲೇ ಆಫ್‌ ಪ್ರವೇಶಿಸಿದೆ. ಅಭಿಮಾನಿಗಳು ಈ ಪಂದ್ಯವನ್ನು ಅಕ್ಷರಶಃ ಫೈನಲ್‌ ಎಂದೇ ಪರಿಗಣಿಸಿದ್ದರು. ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೊನೆಗೂ ಹಾಲಿ ಚಾಂಪಿಯನ್‌ ಚೆನ್ನೈಯನ್ನು 27 ರನ್‌ಗಳ ಅಂತರದಿಂದ ಸೋಲಿಸುವುದರೊಂದಿಗೆ ಆರ್‌ಸಿಬಿ ಅಭಿಮಾನಿಗಳ ಜೈಕಾರ ಮುಗಿಲು ಮುಟ್ಟಿತು. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸಂಭ್ರಮಾಚರಣೆ ಕಂಡು ಬಂತು.

ಪಂದ್ಯ ಮುಕ್ತಾಯವಾದಾಗ ತಡರಾತ್ರಿಯಾಗಿದ್ದರೂ ಅಭಿಮಾನಿಗಳ ಸಡಗರಕ್ಕೆ ಕೊರತೆ ಇರಲಿಲ್ಲ. ಪುಟ್ಟ ಮಕ್ಕಳು ಸೇರಿದಂತೆ ಆರ್‌ಸಿಬಿ ಫ್ಯಾನ್ಸ್‌ ರಸ್ತೆಯಲ್ಲೇ ಕುಣಿದು ಕುಪ್ಪಳಿಸಿದರು. ಮಕ್ಕಳಂತೂ ಈ ಸಲ ಕಪ್ ನಮ್ದೆ ಎನ್ನುವ ಘೋಷಣೆ ಕೂಗುತ್ತಿರುವುದು ಕಂಡು ಬಂತು. ಚಿನ್ನಸ್ವಾಮಿ ಕ್ರೀಡಾಂಗಣದ ಎದುರಿನ ರಸ್ತೆ ಬ್ಲಾಕ್ ಮಾಡಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದರು. ಇದು ನಿಜವಾದ ಹೊಸ ಅಧ್ಯಾಯ ಎನ್ನುವ ಮಾತು ಎಲ್ಲೆಡೆ ಕೇಳಿ ಬಂದಿದೆ.

ಸೋಷಿಯಲ್‌ ಮೀಡಿಯಾದಲ್ಲಿ ಆರ್‌ಸಿಬಿಯದ್ದೇ ಹವಾ

ಇನ್ನು ಸೋಷಿಯಲ್‌ ಮೀಡಿಯಾದಲ್ಲಂತೂ ಆರ್‌ಸಿಬಿ ಹವಾ ಕಂಡು ಬಂದಿದೆ. ಸತತ ಸೋಲಿನ ಬಳಿಕ ಗ್ರೇಟ್‌ ಕಂಬ್ಯಾಕ್‌ ಎಂದೆಲ್ಲ ಫ್ಯಾನ್ಸ್‌ ಹೊಗಳುತ್ತಿದ್ದಾರೆ. ಮೊದಲ 8 ಪಂದ್ಯಗಳ ಪೈಕಿ 1ರಲ್ಲಿ ಮಾತ್ರ ಗೆಲುವು ಒಲಿದಿತ್ತು. ಆದರೆ ಬಳಿಕದ 6 ಪಂದ್ಯಗಳ ಪೈಕಿ 6ರಲ್ಲಿಯೂ ಗೆಲುವು ಸಾಧಿಸಿದ್ದೇವೆ. ಇದು ನಿಜವಾದ ಹೊಸ ಅಧ್ಯಾಯ ಎಂದು ಅಭಿಮಾನಿಗಳು ಹೇಳಿಕೊಂಡಿದ್ದಾರೆ. ನಿಜವಾಗಿಯೂ ಒಂದು ಥ್ರಿಲ್ಲರ್‌ ಸಿನಿಮಾ ನೋಡಿದ ಅನುಭವವಾಯಿತು ಎಂದು ಪಂದ್ಯ ಮುಗಿದ ಬಳಿಕ ರೋಮಾಂಚಿತರಾದ ಆರ್‌ಸಿಬಿಯ ಕಟ್ಟಾ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. 6 ಸತತ ಗೆಲುವಿನ ಮೂಲಕ ಪ್ಲೇ ಆಫ್‌ ಪ್ರವೇಶಿಸುವುದು ಸುಲಭದ ಮಾತಲ್ಲ. ಅತ್ಯುತ್ತಮ ಪ್ರದರ್ಶನ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.

ಮತ್ತೆ ಸದ್ದು ಮಾಡುತ್ತಿದೆ ಈ ಸಲ ಕಪ್‌ ನಮ್ದೆ

ಬ್ಯಾಕ್‌ ಟು ಬ್ಯಾಕ್‌ ಗೆಲುವಿನ ಮೂಲಕ ರಾಯಲ್‌ ಆಗಿಯೇ ಪ್ಲೇ ಆಫ್‌ ಪ್ರವೇಶಿಸಿದ ಬೆಂಗಳೂರು ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಜತೆಗೆ ಈ ಸಲ ಜಪ್‌ ನಮ್ದೆ ಘೋಷ ವಾಕ್ಯ ಮತ್ತೆ ಮೊಳಗತೊಡಗಿದೆ. ಈ ಹಿಂದೆ ಆರ್‌ಸಿಬಿ ಮಹಿಳಾ ತಂಡ ಕಪ್‌ ಜಯಿಸಿತ್ತು. ಇದೀಗ ಪುರುಷರ ತಂಡದ ಸರದಿ ಎಂಬ ಲೆಕ್ಕಾಚಾರವೂ ಶುರುವಾಗಿದೆ.

ಇದನ್ನೂ ಓದಿ: RCB vs CSK: ಇದು ಆರ್​ಸಿಬಿಯ ಹೊಸ ಅಧ್ಯಾಯ; ಹಾಲಿ ಚಾಂಪಿಯನ್​ ಚೆನ್ನೈ ಮಣಿಸಿ ಪ್ಲೇ ಆಫ್​ಗೆ ಲಗ್ಗೆ

ಹೊರ ಬಿದ್ದ ಚೆನ್ನೈ

ಇಲ್ಲಿನ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಶನಿವಾರ ನಡೆದ ಮಳೆ ಪೀಡಿತ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಆರ್​ಸಿಬಿ ವಿರಾಟ್​ ಕೊಹ್ಲಿ ಮತ್ತು ಫಾಫ್​ ಡುಪ್ಲೆಸ್​ ಮೊದಲ ವಿಕೆಟ್​ಗೆ ನಿರ್ಮಿಸಿದ ಭದ್ರ ಅಡಿಪಾಯದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 218 ರನ್​ ಬಾರಿಸಿತು. ಈ ಬೃಹತ್​ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ಹಲವು ಏರಿಳಿತ ಕಂಡು ಕೊನೆಗೆ ತನ್ನ ಪಾಲಿನ ಆಟದಲ್ಲಿ 7 ವಿಕೆಟ್​ಗೆ 191 ರನ್​ ಗಳಿಸಲಷ್ಟೇ ಶಕ್ತವಾಗಿ ಸೋಲಿಗೆ ಶರಣಾಯಿತು. ಜತೆಗೆ ಟೂರ್ನಿಯಿಂದಲೂ ಹೊರಬಿದ್ದು ಮಾಜಿ ಚಾಂಪಿಯನ್​ ಎನಿಸಿಕೊಂಡಿತು. ಒಂದೊಮ್ಮೆ ಚೆನ್ನೈ 201 ರನ್​ ಬಾರಿಸುತ್ತಿದ್ದರೂ ಆರ್​ಸಿಬಿ ಪ್ಲೇ ಆಫ್​ನಿಂದ ಹೊರ ಬೀಳುತ್ತಿತ್ತು.

Continue Reading
Advertisement
Michel Phelps ರಾಜಮಾರ್ಗ ಅಂಕಣ
ಅಂಕಣ37 seconds ago

ರಾಜಮಾರ್ಗ ಅಂಕಣ: 28 ಒಲಿಂಪಿಕ್ ಪದಕಗಳ ವಿಶ್ವದಾಖಲೆ- ಮೈಕೆಲ್ ಫೆಲ್ಪ್ಸ್

Aadhaar Update
ವಾಣಿಜ್ಯ14 mins ago

Aadhaar Update: ಹೊಸ ನಿಯಮ ಪ್ರಕಾರ ಆಧಾರ್ ವಿಳಾಸ ನವೀಕರಣಕ್ಕೆ ಯಾವ ದಾಖಲೆ ಬಳಸಬಹುದು?

Health Tips Kannada
ಆರೋಗ್ಯ29 mins ago

Health Tips Kannada: ಚಹಾ, ಕಾಫಿಯನ್ನು ಯಾವ ಸಮಯದಲ್ಲಿ ಕುಡಿಯಬಾರದು ಗೊತ್ತೇ?

Vastu Tips
ಧಾರ್ಮಿಕ1 hour ago

Vastu Tips: ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಬೇಕೆಂದರೆ ಅಡುಗೆ ಮನೆ ಹೀಗಿರಬೇಕು!

Remedies For Fatty Liver
ಆರೋಗ್ಯ1 hour ago

Remedies For Fatty Liver: ಲಿವರ್‌ನ ಕೊಬ್ಬನ್ನು ನೈಸರ್ಗಿಕವಾಗಿ ಹೀಗೆ ಕರಗಿಸಲು ಸಾಧ್ಯ!

Shravan Month 2024
ಧಾರ್ಮಿಕ1 hour ago

Shravan 2024: ಶ್ರಾವಣ ಮಾಸದಲ್ಲಿ ಯಾವ ಆಹಾರ ತಿನ್ನಬೇಕು, ಯಾವುದನ್ನು ತಿನ್ನಬಾರದು?

karnataka Weather Forecast
ಮಳೆ1 hour ago

Karnataka Weather : ಕರಾವಳಿ-ಮಲೆನಾಡಿನಲ್ಲಿ ಮುಂದುವರಿಯಲಿದೆ ಮಳೆ ಅಬ್ಬರ- ಇರಲಿ ಎಚ್ಚರ

dina bhavishya
ಭವಿಷ್ಯ2 hours ago

Dina Bhavishya : ಈ ರಾಶಿಯವರಿಗೆ ಮಾತೇ ಮೃತ್ಯು, ಮೌನಕ್ಕೆ ಶರಣಾಗಿ

Paris Olympics 2024
ಪ್ರಮುಖ ಸುದ್ದಿ7 hours ago

Paris Olympics 2024 : ಪ್ರಣಯ ನಗರಿ ಪ್ಯಾರಿಸ್​ನಲ್ಲಿ ಒಲಿಂಪಿಕ್ಸ್​ ಕ್ರೀಡಾಕೂಟಕ್ಕೆ ಅದ್ಧೂರಿ ಚಾಲನೆ

Mumbai Spa
ಪ್ರಮುಖ ಸುದ್ದಿ7 hours ago

ಕೊಲೆಯಾದ ರೌಡಿಯ ಮೈಮೇಲಿದ್ದ ಟ್ಯಾಟೂ ನೆರವಿನಿಂದ ಆರೋಪಿಗಳ ಬಂಧನ; ಹೇಗಂತೀರಾ? ಇಲ್ಲಿದೆ ರೋಚಕ ಕತೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Ankola landslide
ಉತ್ತರ ಕನ್ನಡ12 hours ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ13 hours ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ14 hours ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ15 hours ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ2 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್2 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ2 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ2 days ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ3 days ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ4 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

ಟ್ರೆಂಡಿಂಗ್‌