IPL 2023: ರಾಯಲ್ಸ್​ ಮೇಲೆ ಸವಾರಿ ಮಾಡಿದ ಪಂಜಾಬ್​ ಕಿಂಗ್ಸ್​; 5 ರನ್ ರೋಚಕ​ ಗೆಲುವು - Vistara News

ಕ್ರಿಕೆಟ್

IPL 2023: ರಾಯಲ್ಸ್​ ಮೇಲೆ ಸವಾರಿ ಮಾಡಿದ ಪಂಜಾಬ್​ ಕಿಂಗ್ಸ್​; 5 ರನ್ ರೋಚಕ​ ಗೆಲುವು

ಅತ್ಯಂತ ರೋಚಕವಾಗಿ ಸಾಗಿದ ಬುಧವಾರದ ಐಪಿಎಲ್​ನ(IPL 2023) 8ನೇ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್(Punjab Kings)​ ತಂಡ ರಾಜಸ್ಥಾನ್​ ರಾಯಲ್ಸ್ ವಿರುದ್ಧ 5 ರನ್​ ಗೆಲುವು ಸಾಧಿಸಿದೆ.

VISTARANEWS.COM


on

ipl-18th-match-between-gujarat-and-punjab-kings
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಗುವಾಹಟಿ: ಅತ್ಯಂತ ರೋಚಕವಾಗಿ ನಡೆದ ಬುಧವಾರದ ಐಪಿಎಲ್​ನ(IPL 2023) ಹಾವು ಏಣಿ ಆಟದಲ್ಲಿ ಕೊನೆಗೂ ಪಂಜಾಬ್​ ಕಿಂಗ್ಸ್(Punjab Kings)​ ಕೈ ಮೇಲಾಗಿದೆ. ರಾಜಸ್ಥಾನ್​ ರಾಯಲ್ಸ್​(Rajasthan Royals) ವಿರುದ್ಧ 5 ರನ್ ಅಂತರದಿಂದ ಗೆದ್ದು ಬೀಗಿದೆ. ಶಿಖರ್​ ಧವನ್​ ಪಡೆಗೆ ಇದು ಟೂರ್ನಿಯಲ್ಲಿ ಸತತ ಎರಡನೇ ಗೆಲುವಾಗಿದೆ.

ಗುವಾಹಟಿಯ(Guwahati) ಬರ್ಸಾಪರ ಕ್ರಿಕೆಟ್ ಸ್ಟೇಡಿಯಂನಲ್ಲಿ(Barsapara Cricket Stadium) ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಪಂಜಾಬ್​ ಕಿಂಗ್ಸ್(Punjab Kings) ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ಗೆ 197 ರನ್​ ಗಳಿಸಿತು. ಜವಾಬಿತ್ತ ರಾಜಸ್ಥಾನ್​ ರಾಯಲ್ಸ್​ 20 ಓವರ್​ಗಳಲ್ಲಿ 7 ವಿಕೆಟ್​ಗೆ 192 ರನ್​ ಗಳಿಸಲಷ್ಟೇ ಶಕ್ತವಾಯಿತು. ಕೇವಲ 5 ರನ್​ ಗಳ ಅಂತರದಿಂದ ಸೋಲು ಕಂಡಿತು.

ದೊಡ್ಡ ಮೊತ್ತವನ್ನು ಗುರಿ ಬೆನ್ನಟ್ಟುವ ವೇಳೆ ಆರ್​. ಅಶ್ವಿನ್​ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸಿ ಪ್ರಯೋಗ ನಡೆಸಿದ ರಾಜಸ್ಥಾನ್​ ಕೈ ಸುಟ್ಟುಕೊಂಡಿತು. ಅಶ್ವಿನ್​ ನಾಲ್ಕು ಎಸೆತ ಎದುರಿಸಿ ಶೂನ್ಯ ಸುತ್ತಿದರು. ವನ್​ಡೌನ್​ನಲ್ಲಿ ಕ್ರೀಸ್​ಗಿಳಿದ ಜಾಸ್​ ಬಟ್ಲರ್​ ಕೂಡ 19 ರನ್​ಗೆ ಆಟ ಮುಗಿಸಿದರು. ಇದರ ಬೆನ್ನಲ್ಲೇ ಯಶಸ್ವಿ ಜೈಸ್ವಾಲ್(11)​ ಕೂಡ ವಿಕೆಟ್​ ಕೈಚೆಲ್ಲಿದರು. ಅರ್ಶ್​ದೀಪ್​ ಸಿಂಗ್​ ಆರಂಭಿಕರಿಬ್ಬರ ವಿಕೆಟ್​ ಕಿತ್ತರೆ ನಥಾನ್​ ಎಲ್ಲಿಸಿ ಬಟ್ಲರ್​ ವಿಕೆಟ್​ ಉಡಾಯಿಸಿದರು. ಇಲ್ಲಿಂದ ರಾಜಸ್ಥಾನ್​ ಕುಸಿತವು ಆರಂಭಗೊಂಡಿತು.

ತಂಡದ ವಿಕೆಟ್​ ಉರುಳುತ್ತಿದ್ದರು ಮತ್ತೊಂದು ಬದಿಯಲ್ಲಿ ನಾಯಕ ಸಂಜು ಸ್ಯಾಮ್ಸನ್​ ಏಕಾಂಗಿ ಹೋರಾಟ ನಡೆಸುತ್ತಿದ್ದರು. ಆದರೆ ಅವರ ಆಟವೂ 42 ರನ್​ಗೆ ಅಂತ್ಯ ಕಂಡಿತು. ಸಂಜು ಬಳಿಕ ತಂಡವನ್ನು ಆಧರಿಸಿದವರೆಂದರೆ ದೇವದತ್ತ ಪಡಿಕ್ಕಲ್​ ಮತ್ತು ರಿಯಾನ್​ ಪರಾಗ್​ ಸೇರಿಕೊಂಡು ಆಕ್ರಮಣದ ಸೂಚನೆ ನೀಡಿದರೂ ಇನ್ನಿಂಗ್ಸ್‌ ಬೆಳೆಸಲು ವಿಫ‌ಲರಾದರು. ಪರಾಗ್​ ಗಳಿಕೆ 12 ಎಸೆತಗಳಿಂದ 20 ರನ್‌ (2 ಸಿಕ್ಸರ್‌, ಒಂದು ಬೌಂಡರಿ). ಪಡಿಕ್ಕಲ್​ 21 ರನ್‌ ಮಾಡಿದರೂ ಇದಕ್ಕೆ 26 ಎಸೆತ ತೆಗೆದುಕೊಂಡರು. ಹೊಡೆದದ್ದು ಒಂದೇ ಬೌಂಡರಿ. ಅಂತಿಮ ಹಂತದಲ್ಲಿ ಹೆಟ್​ಮೈರ್(35)​ ಮತ್ತು ಧ್ರುವ್ ಜುರೆಲ್(ಅಜೇಯ 32) ಸಿಡಿದು ನಿಂತರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಅಂತಿಮ ಓವರ್​ನಲ್ಲಿ ಗೆಲುವಿಗೆ 16 ರನ್​ ತೆಗೆಯುವ ಸವಾಲಿನಲ್ಲಿ ಹೆಟ್​ಮೈರ್​ ರನೌಟ್​ ಆದರು. ಪಂಜಾಬ್​ ಪರ ಬೌಲಿಂಗ್​ನಲ್ಲಿ ನಥಾನ್​ ಎಲ್ಲಿಸ್​ 30 ರನ್​ಗೆ 4 ವಿಕೆಟ್​ ಕಿತ್ತು ಮಿಂಚಿದರು. ಅರ್ಶ್​ದೀಪ್​ ಸಿಂಗ್ 2 ವಿಕೆಟ್​ ಪಡೆದರು.​

ಇದು ಗುವಾಹಟಿಯಲ್ಲಿ ನಡೆದ ಮೊದಲ ಐಪಿಎಲ್​ ಪಂದ್ಯವಾಗಿದೆ. ಹೀಗಾಗಿ ಅಸ್ಸಾಂ ಕ್ರಿಕೆಟ್‌ ಮಂಡಳಿ ಪಂದ್ಯದ ಆರಂಭಕ್ಕೂ ಮುನ್ನ ಲೇಸರ್‌ ಶೋ, ಜಾನಪದ ನೃತ್ಯದೊಂದಿಗೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿತ್ತು.

ಇದನ್ನೂ ಓದಿ IPL 2023: ಗುಜರಾತ್ ಟೈಟಾನ್ಸ್ ಸೇರಿಕೊಂಡ ದಸುನ್ ಶನಕ

ಅರ್ಧಶತಕ ಬಾರಿಸಿ ಮಿಂಚಿದ ಪ್ರಭಾಸಿಮ್ರಾನ್ ಸಿಂಗ್, ಶಿಖರ್​ ಧವನ್​

ಇದಕ್ಕೂ ಮುನ್ನ ಬ್ಯಾಟಿಂಗ್​ ನಡೆಸಿದ ಪಂಜಾಬ್​ ಕಿಂಗ್ಸ್​ಗೆ ಆರಂಭಿಕರಾದ ಪ್ರಭಾಸಿಮ್ರಾನ್ ಸಿಂಗ್(Prabhsimran Singh) ಮತ್ತು ನಾಯಕ ಶಿಖರ್ ಧವನ್(Shikhar Dhawan) ಉತ್ತಮ ಆರಂಭ ಒದಗಿಸಿದರು. ಜಿದ್ದಿಗೆ ಬಿದ್ದವರಂತೆ ಬ್ಯಾಟ್​ ಬೀಸಿದ ಯುವ ಆಟಗಾರ ಪ್ರಭಾಸಿಮ್ರಾನ್ ಸಿಂಗ್ ರಾಜಸ್ಥಾನ್​ ಬೌಲರ್​ಗಳಿಗೆ ಸತತ ಸಿಕ್ಸರ್​ ಮತ್ತು ಬೌಂಡರಿಗಳ ರುಚಿ ತೋರಿಸಿದರು. ಇನ್ನೊಂದು ಬದಿಯಲ್ಲಿ ಶಿಖರ್​ ಧವನ್​ ನಿಧಾನಗತಿಯಲ್ಲಿ ಆಡುತ್ತಾ ಪ್ರಭಾಸಿಮ್ರಾನ್ ಸಿಂಗ್​ ಉತ್ತಮ ಸಾಥ್​ ನೀಡುತ್ತಿದ್ದರು. ಪವರ್​ ಪ್ಲೇ ಮುಕ್ತಾಯಕ್ಕೆ ಈ ಜೋಡಿ 10ರ ಸರಾಸರಿಯಲ್ಲಿ ಬ್ಯಾಟ್​ ಬೀಸಿ 63 ರನ್​ ರಾಶಿ ಹಾಕಿತು.

ಇದನ್ನೂ ಓದಿ IPL 2023: ಶ್ರೇಯಸ್​ ಅಯ್ಯರ್​ ಬದಲು ಕೆಕೆಆರ್​ ತಂಡ ಸೇರಿದ ಜೇಸನ್​​ ರಾಯ್

ಪವರ್​ ಪ್ಲೇ ಬಳಿಕವೂ ಬಿರುಸಿನ ಬ್ಯಾಟಿಂಗ್​ ನಡೆಸಿದ ಪ್ರಭಾಸಿಮ್ರಾನ್ ಸಿಂಗ್ ಅರ್ಧಶತಕ ಬಾರಿಸಿ ಮಿಂಚಿದರು. ಒಂದು ಹಂತದಲ್ಲಿ ಇವರ ಬ್ಯಾಟಿಂಗ್​ ವೇಗವನ್ನು ನೋಡುವಾಗ ಶತಕ ಬಾರಿಸುತ್ತಾರೆ ಎಂದು ಊಹಿಸಲಾಗಿತ್ತು. ಆದರೆ ಜೇಸನ್​ ಹೋಲ್ಡರ್​ ಅವರ ಎಸೆತಕ್ಕೆ ಸಿಕ್ಸರ್ ಬಾರಿಸುವ ಪ್ರಯತ್ನದಲ್ಲಿ ಜಾಸ್​ ಬಟ್ಲರ್​ಗೆ ಕ್ಯಾಚ್​ ನೀಡಿ ವಿಕೆಟ್​ ಕೈಚೆಲ್ಲಿದರು. ಬೌಂಡರಿ ಲೈನ್​ನಿಂದ ಓಡಿಬಂದ ಜಾಸ್​ ಬಟ್ಲರ್​ ಚಿರತೆಯಂತೆ ಜಿಗಿದು ಈ ಕ್ಯಾಚ್​ ಪಡೆದರು. ಧವನ್​ ಮತ್ತು ಪ್ರಭಾಸಿಮ್ರಾನ್ ಸಿಂಗ್ ಜೋಡಿ ಮೊದಲ ವಿಕೆಟ್​ಗೆ ಬರೋಬ್ಬರಿ 90 ರನ್​ ಜತೆಯಾಟ ನಡೆಸಿತು. ಪ್ರಭಾಸಿಮ್ರಾನ್ ಸಿಂಗ್ ಕೇವಲ 34 ಎಸೆತ ಎದುರಿಸಿ 60 ರನ್​ ಬಾರಿಸಿದರು. ಈ ಸ್ಫೋಟಕ ಬ್ಯಾಟಿಂಗ್​ ವೇಳೆ 7 ಬೌಂಡರಿ ಮತ್ತು 3 ಸಿಕ್ಸರ್​ ಸಿಡಿಯಿತು.

ಚಹಲ್​ಗೆ ಚಳಿ ಬಿಡಿಸಿದ ಧವನ್​

ಪ್ರಭಾಸಿಮ್ರಾನ್ ಸಿಂಗ್ ವಿಕೆಟ್​ ಪತನದ ಬಳಿಕ ಧವನ್ ಕೂಡ ಹೊಡಿ ಬಡಿ ಆಟಕ್ಕೆ ಮುಂದಾದರು. ಇದೇ ವೇಳೆ ಅವರು ಆರ್​. ಅಶ್ವಿನ್ ಅವರ ಓವರ್​ನಲ್ಲಿ ನೇರವಾಗಿ ಹೊಡೆದ ಚೆಂಡು ಭಾನುಕಾ ರಾಜಪಕ್ಸ ಅವರ ಕೈಗೆ ತಗುಲಿತು. ನೋವಿನಿಂದ ಬಳಲಿದ ಅವರು ಅರ್ಧಕ್ಕೆ ಆಟ ನಿಲ್ಲಿಸಿ ಮೈದಾನ ತೊರೆದರು. ಅವರು ಒಂದು ಎಸೆತ ಎದುರಿಸಿ ಒಂದು ರನ್​ ಗಳಿಸಿದ್ದರು. ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ಉತ್ತಮ ಬೌಲಿಂಗ್​ ದಾಳಿ ನಡೆಸಿದ್ದ ಚಹಲ್​ ಅವರಿಗೆ ಧವನ್​ ಈ ಪಂದ್ಯದಲ್ಲಿ ಚಳಿ ಬಿಡಿಸಿದರು. ಒಂದೇ ಓವರ್​ನಲ್ಲಿ ಸತತ ಎರಡು ಬೌಂಡರಿ ಮತ್ತು ಸಿಕ್ಸರ್​ ಚಚ್ಚಿದರು. ಚಹಲ್​ ಅವರ ಈ ಓವರ್​ನಲ್ಲಿ 18 ರನ್​ ಸೋರಿಕೆಯಾ​​ಯಿತು.

ಬೆನ್ನು ಬಿಡದ ಬೇತಾಳನಂತೆ ಕಾಡಿದ ಧವನ್​ ಅವರು ಚಹಲ್​ ಅವರ ದ್ವಿತೀಯ ಓವರ್​ನಲ್ಲಿಯೂ ಬೌಂಡರಿಗಳ ಸುರಿಮಳೆ ಸುರಿಸಿ ಅರ್ಧಶತಕ ಪೂರ್ತಿಗೊಳಿಸಿದರು. ಧವನ್​ ಅವರು ಇದೇ ಓವರ್​ನಲ್ಲಿ ಒಂದು ಜೀವದಾನ ಕೂಡ ಪಡೆದರು. ಚಹಲ್​ ಅವರೇ ಕ್ಯಾಚ್​ ಬಿಟ್ಟು ಈ ಜೀವದಾನ ನೀಡಿದರು. ಧವನ್​ ಜತೆ ಜಿತೇಶ್​ ಶರ್ಮಾ ಕೂಡ ಸ್ಫೋಟಕ ಆಟಕ್ಕೆ ಒಗ್ಗಿಕೊಂಡರು. 14 ಓವರ್​ ಆಗುವ ವೇಳೆ ತಂಡ ಒಂದು ವಿಕೆಟ್​ಗೆ 141 ರನ್​​ ಗಳಿಸಿತು. ಸಂಜು ಸ್ಯಾಮ್ಸನ್​ ಅವರ ಬೌಲಿಂಗ್​ ಆಯ್ಕೆಯನ್ನು ಬೌಲರ್​ಗಳು ಹುಸಿಯಾಗಿಸಿದರು. ಪ್ರತಿ ಓವರ್​ಗೆ 10ರಂತೆ ರನ್​ ಬಿಟ್ಟು ಕೊಟ್ಟು ದುಬಾರಿಯಾಗಿ ಪರಿಣಮಿಸಿದರು. ಬೌಲ್ಟ್​, ಆಸೀಫ್​ ಬೌಲಿಂಗ್​ ಮರೆತವರಂತೆ ಬೌಲಿಂಗ್​ ನಡೆಸಿದರು.

ಧವನ್​ ಅವರಿಂದ ಸತತ ಬೌಂಡರಿ ಹೊಡೆಸಿಕೊಂಡು ಬೆಂಡಾಗಿದ್ದ ಚಹಲ್ ಕೊನೆಗೂ ಜಿತೇಶ್​ ಶರ್ಮ ರೂಪದಲ್ಲಿ ಒಂದು ವಿಕೆಟ್​ ಕಿತ್ತರು. ಜಿತೇಶ್​ ಶರ್ಮಾ 16 ಎಸೆತಗಳಿಂದ 27 (2 ಬೌಂಡರಿ, ಒಂದು ಸಿಕ್ಸರ್​) ರನ್​ ಕೊಡುಗೆ ನೀಡಿದರು. ಧವನ್​ ಜತೆಗೂಡಿ 2ನೇ ವಿಕೆಟ್​ಗೆ 60 ರನ್​ ಜತೆಯಾಟ ನಡೆಸಿದರು. ಬಳಿಕ ಬಂದ ಜಿಂಬಾಬ್ವೆಯ ಹಿರಿಯ ಆಟಗಾರ ಸಿಕಂದರ್​ ರಾಜಾ 1 ರನ್​ಗೆ ಸೀಮಿತರಾದರು. ಧವನ್​ 56 ಎಸೆತಗಳಿಂದ 86 ರನ್​ ಬಾರಿಸಿ ಅಜೇಯರಾಗಿ ಉಳಿದರು. ಧವನ್​ ಅವರ ಈ ಮನಮೋಹಕ ಇನಿಂಗ್ಸ್​ನಲ್ಲಿ 9 ಬೌಂಡರಿ ಮತ್ತು ಮೂರು ಸಿಕ್ಸರ್​ ದಾಖಲಾಯಿತು. ರಾಯಲ್ಸ್​ ಪರ ಜೇಸನ್​ ಹೋಲ್ಡರ್​ 29 ರನ್​ಗೆ 2 ವಿಕೆಟ್​ ಉರುಳಿಸಿದರು.

ಸಂಕ್ಷಿಪ್ತ ಸ್ಕೋರ್​: ಪಂಜಾಬ್​ ಕಿಂಗ್ಸ್​ 20 ಓವರ್​ಗಳಲ್ಲಿ 4 ವಿಕೆಟ್​ಗೆ 197, (ಶಿಖರ್​ ಧವನ್​ ಅಜೇಯ 86, ಪ್ರಭಾಸಿಮ್ರಾನ್ ಸಿಂಗ್ 60, ಜಿತೇಶ್​ ಶರ್ಮಾ 27, ಜೇಸನ್​ ಹೋಲ್ಡರ್​ 29ಕ್ಕೆ 2).

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Mayank Agarwal: ಕುಕ್ಕೆಯಲ್ಲಿ ಸರ್ಪಸಂಸ್ಕಾರ ಸೇವೆ ನೆರವೇರಿಸಿದ ಕ್ರಿಕೆಟಿಗ ಮಯಾಂಕ್‌ ಅಗರ್ವಾಲ್‌

Mayank Agarwal: ಅಗರ್ವಾಲ್‌ ಅವರು ಕುಟುಂಬ ಸಮೇತರಾಗಿ ಮಂಗಳವಾರ ರಾತ್ರಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಮತ್ತು ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು.

VISTARANEWS.COM


on

mayank agarwal
Koo

ಮಂಗಳೂರು: ಟೀಮ್​ ಇಂಡಿಯಾ ಕ್ರಿಕೆಟಿಗ, ಕನ್ನಡಿಗ ಮಯಾಂಕ್‌ ಅಗರ್ವಾಲ್‌(Mayank Agarwal) ಅವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ(Kukke Shri Subrahmanya) ದೇವಸ್ಥಾನದಲ್ಲಿ ಇಂದು(ಬುಧವಾರ) ಸರ್ಪಸಂಸ್ಕಾರ ಸೇವೆಯನ್ನು ನೆರವೇರಿಸಿದ್ದಾರೆ. ಸೋಮವಾರದಂದು ಅಗರ್ವಾಲ್‌ ಅವರು ಪತ್ನಿ ಆಶಿತಾ ಸೂದ್‌(Aashita Sood) ಮತ್ತು ಕುಟುಂಬದೊಂದಿಗೆ ಇಲ್ಲಿಗೆ ಆಗಮಿಸಿ ಖಾಸಗಿ ಹೊಟೇಲ್‌ನಲ್ಲಿ ತಂಗಿದ್ದರು. ಈ ವೇಳೆ ಅವರನ್ನು ಹೊಟೇಲ್‌ನಲ್ಲಿ ಆರತಿ ಬೆಳಗಿ ತಿಲಕವಿಟ್ಟು ಸ್ವಾಗತಿಸಲಾಗಿತ್ತು.

ಮಂಗಳವಾರ ಬೆಳಗ್ಗೆ ಕುಟುಂಬ ಸಮೇತರಾಗಿ ದೇವಳದಲ್ಲಿ ಸರ್ಪಸಂಸ್ಕಾರ ಸೇವೆ ಆರಂಭಿಸಿದ್ದರು. ಅಲ್ಲದೇ, ಸೇವೆಯ ವೈದಿಕ ವಿಧಿ-ವಿಧಾನಗಳನ್ನು ನೆರವೇರಿಸಿದ್ದರು. ಬುಧವಾರ ಗೋಪೂಜೆ, ಬ್ರಹ್ಮಚಾರಿ ಆರಾಧನೆ ಮತ್ತು ನಾಗಪ್ರತಿಷ್ಠೆ ನೆರವೇರಿಸಿ ಸರ್ಪಸಂಸ್ಕಾರ ಸೇವೆಯನ್ನು ಸಮಾಪ್ತಿಗೊಳಿಸಲಿ ದೇವರ ದರ್ಶನ ಪಡೆದು ದೇವಾಲಯದಲ್ಲಿ ಭೋಜನ ಸ್ವೀಕರಿಸಿದ್ದಾರೆ.

ಇದಕ್ಕೂ ಮುನ್ನ ಅಗರ್ವಾಲ್‌ ಅವರು ಕುಟುಂಬ ಸಮೇತರಾಗಿ ಮಂಗಳವಾರ ರಾತ್ರಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಮತ್ತು ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಜೂನ್​ 9 ರಂದು ಅಗರ್ವಾಲ್​ ಕುಟುಂಬ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿತ್ತು.

ಅಗರ್ವಾಲ್ ದೇಶಿಯ ಕ್ರಿಕೆಟ್​ನಲ್ಲಿ ಉತ್ತಮ ಸಾಧನೆ ತೋರಿದರೂ ಅವರಿಗೆ ಭಾರತ ತಂಡದಲ್ಲಿ ಸರಿಯಾದ ಅವಕಾಶ ಸಿಗಲೇ ಇಲ್ಲ. ಈಗಾಗಲೇ ಹಲವು ಬಾರಿ ಭಾರತ ಟೆಸ್ಟ್​ ತಂಡದ ಪರ ಮಯಾಂಕ್​ ಆಡಿದ್ದರೂ ಅವರ ಸ್ಥಾನ ಮಾತ್ರ ಗಟ್ಟಿಯಾಗಿರಲಿಲ್ಲ. ಆರಂಭಿಕ ಆಟಗಾರರು ಗಾಯಗೊಂಡರೆ ಮಾತ್ರ ಅವರಿಗೆ ಅವಕಾಶ ನೀಡಲಾಗುತ್ತಿತ್ತು. ಆದರೆ ಅವರು ಸಿಕ್ಕ ಅನೇಕ ಅವಕಾಶದಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ತಂಡಕ್ಕೆ ಕೊಡುಗೆ ನೀಡಿದ್ದಾರೆ. ಅವರು ಇದುವರೆಗೆ 21 ಟೆಸ್ಟ್​ ಪಂದ್ಯಗಳನ್ನು ಆಡಿದ್ದು 4 ಶತಕ, 2 ದ್ವಿಶತಕ ಮತ್ತು 6 ಅರ್ಧಶತಕ ಬಾರಿಸಿದ್ದಾರೆ. 243 ರನ್​ ಅವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.

ಇದನ್ನೂ ಓದಿ Mayank Agarwal: ನೀರಿನ ಬಾಟಲ್ ಫೋಟೊ ಹಂಚಿಕೊಂಡು ರಿಸ್ಕ್​​ ತೆಗೆದುಕೊಳ್ಳಲಾರೆ ಎಂದ ​​ ಅಗರ್ವಾಲ್

ಇತ್ತೀಗೆಚೆ ಅಗರ್ವಾಲ್​ ಅವರು ರಣಜಿ ಕ್ರಿಕೆಟ್ ಪಂದ್ಯವನ್ನಾಡಲು ಅಗರ್ತಲಾದಿಂದ ಸೂರತ್‌ಗೆ ವಿಮಾನದಲ್ಲಿ ತೆರಳುವಾಗ ನೀರು ಎಂದು ಭಾವಿಸಿ ರಾಸಾಯನಿಕ ದ್ರಾವಣವೊಂದನ್ನು ಸೇವಿಸಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ತಮ್ಮ ಸೀಟಿನ ಮುಂಭಾಗದಲ್ಲಿದ್ದ ಬಾಟಲಿಯೊಂದನ್ನು ತೆಗೆದು, ಅದರಲ್ಲಿದ್ದ ಪಾನೀಯವನ್ನು ನೀರು ಎಂದು ಭಾವಿಸಿ ಕುಡಿದಿದ್ದರು. ಅದು ಶೌಚಾಲಯವನ್ನು ಸ್ವತ್ಛಗೊಳಿಸುವ ದ್ರಾವಣವಾಗಿತ್ತು. ವಿಮಾನ ಟೇಕ್‌ ಆಫ್ ಆಗದ ಕಾರಣ ಅಗರ್ವಾಲ್‌ ಅವರನ್ನು ತುರ್ತಾಗಿ ಆಸ್ಪತ್ರೆಗೆ ದಾಖಲಿಸಲು ಸಾಧ್ಯವಾಗಿತ್ತು. ಆರಂಭದಲ್ಲಿ ಅಗರ್ವಾಲ್​ಗೆ ವಿಶಪ್ರಾಶನ ಮಾಡಲಾಗಿದೆ ಎಂದು ವರದಿಯಾಗಿತ್ತು. ಬಳಿಕ ಸತ್ಯಾಂಶ ಬೆಳಕಿಗೆ ಬಂದಿತ್ತು.

Continue Reading

ಕ್ರಿಕೆಟ್

IND vs USA: ಇಂದಿನ ಪಂದ್ಯಕ್ಕೆ ಟೀಮ್​ ಇಂಡಿಯಾದಲ್ಲಿ 2 ಮಹತ್ವದ ಬದಲಾವಣೆ; ಯಾರಿಗೆ ಕೊಕ್​?

IND vs USA: ಕಳೆದೆರಡು ಪಂದ್ಯಗಳಲ್ಲಿ ಆರಂಭಿಕನಾಗಿ ಆಡಿದ ಕಿಂಗ್​ ಖ್ಯಾತಿಯ ವಿರಾಟ್​​ ಕೊಹ್ಲಿ ನಿರೀಕ್ಷಿತ ಬ್ಯಾಟಿಂಗ್​ ನಡೆಸುವಲ್ಲಿ ಮಂಕಾಗಿದ್ದರು. ಒಂದಂಕಿಗೆ ಸೀಮಿತರಾಗಿ ಘೋರ ಬ್ಯಾಟಿಂಗ್​ ವೈಫಲ್ಯ ಎದುರಿಸಿದ್ದರು. ಇಂದಿನ ಪಂದ್ಯದಲ್ಲಿ ಜೈಸ್ವಾಲ್​ಗೆ ಅವಕಾಶ ನೀಡಿದ್ದೇ ಆದರೆ, ರೋಹಿತ್​ ಜತೆ ಜೈಸ್ವಾಲ್​ ಇನಿಂಗ್ಸ್​ ಆರಂಭಿಸಬಹುದು.

VISTARANEWS.COM


on

IND vs USA
Koo

ನ್ಯೂಯಾರ್ಕ್: ಅಮೆರಿಕ(IND vs USA) ವಿರುದ್ಧ ಇಂದು(ಬುಧವಾರ) ನಡೆಯುವ ಟಿ20 ವಿಶ್ವಕಪ್​ ಲೀಗ್(T20 World Cup 2024) ಪಂದ್ಯದಲ್ಲಿ ಟೀಮ್​ ಇಂಡಿಯಾ ತನ್ನ ಆಡುವ ಬಳಗಲ್ಲಿ 2 ಮಹತ್ವದ ಬದಲಾವಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಆಲ್​ರೌಂಡರ್​ಗಳಾದ ಶಿವಂ ದುಬೆ(Shivam Dube) ಮತ್ತು ರವೀಂದ್ರ ಜಡೇಜಾ(Ravindra Jadeja) ಅವರನ್ನು ಕೈಬಿಡಲಾಗುವುದು ಎಂಬ ಮಾತುಗಳು ಕೇಳಿಬಂದಿವೆ.

​ಶಿವಂ ದುಬೆ ಆಲ್​ರೌಂಡರ್​ ಕೋಟದಲ್ಲಿ ಕಳೆದ 2 ಪಂದ್ಯಗಳಲ್ಲಿ ಆಡಿದ್ದರೂ ಕೂಡ ಬೌಲಿಂಗ್​ ನಡೆಸಿರಲಿಲ್ಲ. ಅಲ್ಲದೆ ಪಾಕ್​ ವಿರುದ್ಧ ಬ್ಯಾಟಿಂಗ್​ ಅವಕಾಶ ಸಿಕ್ಕರೂ ಇದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದರು. ಕೇವಲ 3 ರನ್​ ಗಳಿಸಿದ್ದರು. ಜತೆಗೆ ಕಳಪೆ ಫೀಲ್ಡಿಂಗ್​ ಮೂಲಕ ಕ್ಯಾಚ್​ ಒಂದನ್ನು ಕೂಡ ಕೈಚೆಲ್ಲಿದ್ದರು. ಜಡೇಜಾ ಕೂಡ ಆಡಿದ 2 ಪಂದ್ಯಗಳಲ್ಲಿಯೂ ವಿಕೆಟ್​ ಲೆಸ್​ ಎನಿಸಿಕೊಂಡಿದ್ದಾರೆ. ಹೀಗಾಗಿ ಉಭಯ ಆಟಗಾರರನ್ನು ಕೈ ಬಿಟ್ಟು ಇವರ ಸ್ಥಾನದಲ್ಲಿ ಯಶಸ್ವಿ ಜೈಸ್ವಾಲ್​ ಮತ್ತು ಕುಲ್​ದೀಪ್​ ಯಾದವ್​ ಅವರನ್ನು ಆಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಜೈಸ್ವಾಲ್​ ಓಪನಿಂಗ್​?


ಕಳೆದೆರಡು ಪಂದ್ಯಗಳಲ್ಲಿ ಆರಂಭಿಕನಾಗಿ ಆಡಿದ ಕಿಂಗ್​ ಖ್ಯಾತಿಯ ವಿರಾಟ್​​ ಕೊಹ್ಲಿ ನಿರೀಕ್ಷಿತ ಬ್ಯಾಟಿಂಗ್​ ನಡೆಸುವಲ್ಲಿ ಮಂಕಾಗಿದ್ದರು. ಒಂದಂಕಿಗೆ ಸೀಮಿತರಾಗಿ ಘೋರ ಬ್ಯಾಟಿಂಗ್​ ವೈಫಲ್ಯ ಎದುರಿಸಿದ್ದರು. ಈಗಾಗಲೇ ಕೊಹ್ಲಿಯನ್ನು ಆರಂಭಿಕನಾಗಿ ಆಡಿಸಿದ್ದಕ್ಕೆ ಹಲವು ಮಾಜಿ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ದ್ವಿತೀಯ ಕ್ರಮಾಂಕದಲ್ಲಿ ಆಡಿದರೇ ಸೂಕ್ತ ಎಂದಿದ್ದಾರೆ. ಇಂದಿನ ಪಂದ್ಯದಲ್ಲಿ ಜೈಸ್ವಾಲ್​ಗೆ ಅವಕಾಶ ನೀಡಿದ್ದೇ ಆದರೆ, ರೋಹಿತ್​ ಜತೆ ಜೈಸ್ವಾಲ್​ ಇನಿಂಗ್ಸ್​ ಆರಂಭಿಸಬಹುದು.

ಇದನ್ನೂ ಓದಿ AUS vs NAM: 17 ವರ್ಷಗಳ ಹಿಂದಿನ ಅನಗತ್ಯ ಟಿ20 ದಾಖಲೆ ಮುರಿದ ಗೆರ್ಹಾರ್ಡ್ ಎರಾಸ್ಮಸ್

ಅಮೆರಿಕ ತಂಡ ಕ್ರಿಕೆಟ್​ ಶಿಶು ಆಗಿದ್ದರೂ ಕೂಡ ತಂಡದಲ್ಲಿ ಆಡುವ ಆಟಗಾರರಿಗೆ ಕ್ರಿಕೆಟ್​ ಹೊಸದಲ್ಲ. ಎಲ್ಲರು ಅನುಭವಿ ಆಟಗಾರರು. ಈ ತಂಡದ ವಿಶೇಷವೆಂದರೆ ಭಾರತ, ಪಾಕಿಸ್ತಾನ, ನ್ಯೂಜಿಲ್ಯಾಂಡ್​, ಕೆನಡಾ ಸೇರಿ ಹಲವು ದೇಶಗಳ ಕ್ರಿಕೆಟಿಗರು ಈ ತಂಡದಲ್ಲಿ ಕಾಣಿಸಿಕೊಂಡಿರುವುದು. ಬಹುಪಾಲು ಭಾರತೀಯ ಆಟಗಾರರೇ ನೆಚ್ಚಿಕೊಂಡಿದ್ದಾರೆ. ಕನ್ನಡಿಗ ನಾಸ್ತುಷ್‌ ಕೆಂಜಿಗೆ, 2010ರಲ್ಲಿ ಭಾರತ ಪರ 19 ವಿಶ್ವಕಪ್​ ಆಡಿದ್ದ ಎಡಗೈ ವೇಗದ ಬೌಲರ್ ಸೌರಭ್ ನೇತ್ರವಲ್ಕರ್, ನಾಯಕ ಮೊನಾಂಕ್ ಪಟೇಲ್ ತಂಡದ ಪ್ರಮುಖ ಆಟಗಾರರಾಗಿದ್ದಾರೆ. ಹೀಗಾಗಿ ಭಾರತ ಯಾವುದೇ ಕಾರಣಕ್ಕೂ ಎದುರಾಳಿಗಳನ್ನು ಕಡೆಗಣಿಸುವಂತಿಲ್ಲ.

ಸಂಭಾವ್ಯ ತಂಡ


ಭಾರತ:
 ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್​, ವಿರಾಟ್ ಕೊಹ್ಲಿ, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ಕುಲ್​ದೀಪ್​ ಯಾದವ್​, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.

ಅಮೆರಿಕ: ಸ್ಟೀವನ್ ಟೇಲರ್, ಮೊನಾಂಕ್ ಪಟೇಲ್ (ನಾಯಕ), ಆಂಡ್ರೀಸ್ ಗೌಸ್, ಆರನ್ ಜೋನ್ಸ್, ನಿತೀಶ್ ಕುಮಾರ್, ಕೋರಿ ಆಂಡರ್ಸನ್, ಹರ್ಮೀತ್ ಸಿಂಗ್, ಜಸ್ದೀಪ್ ಸಿಂಗ್, ನಾಸ್ತುಷ್‌ ಕೆಂಜಿಗೆ, ಸೌರಭ್ ನೇತ್ರವಲ್ಕರ್, ಅಲಿ ಖಾನ್.

Continue Reading

ಕ್ರೀಡೆ

AUS vs NAM: 17 ವರ್ಷಗಳ ಹಿಂದಿನ ಅನಗತ್ಯ ಟಿ20 ದಾಖಲೆ ಮುರಿದ ಗೆರ್ಹಾರ್ಡ್ ಎರಾಸ್ಮಸ್

AUS vs NAM: ಗೆರ್ಹಾರ್ಡ್ ಎರಾಸ್ಮಸ್ ಅವರು ಖಾತೆ ತೆರೆಯಲು ಬರೋಬ್ಬರಿ 17 ಎಸೆತಗಳನ್ನು ತೆಗೆದುಕೊಂಡರು. ಈ ವೇಳೆ ಟಿ20 ಕ್ರಿಕೆಟ್​ ಇತಿಹಾಸದಲ್ಲಿ ಮೊದಲ ರನ್​ ಗಳಿಸಲು ಅತಿ ಹೆಚ್ಚು ಎಸೆತಗಳನ್ನು ಎದುರಿಸಿ ಮೊದಲ ಬ್ಯಾಟರ್​ ಎನ್ನುವ ಕೆಟ್ಟ ಹಣೆಪಟ್ಟಿಯನ್ನು ತಮ್ಮ ಹೆಸರಿಗೆ ಸೇರಿಕೊಂಡರು

VISTARANEWS.COM


on

AUS vs NAM
Koo

ಆಂಟಿಗುವಾ: ಆಸ್ಟ್ರೇಲಿಯಾ(Australia vs Namibia) ವಿರುದ್ಧ ನಡೆದ ಪಂದ್ಯದಲ್ಲಿ ನಮೀಬಿಯಾ(AUS vs NAM) ತಂಡದ ನಾಯಕ ಗೆರ್ಹಾರ್ಡ್ ಎರಾಸ್ಮಸ್(Gerhard Erasmus) 17 ವರ್ಷಗಳ ಹಿಂದಿನ ಅನಗತ್ಯ ದಾಖಲೆಯೊಂದನ್ನು ಮುರಿದಿದ್ದಾರೆ. ಮೊದಲ ರನ್​ ಗಳಿಸಲು ಅತ್ಯಧಿಕ ಎಸೆತ ಎದುರಿಸಿದ ಬ್ಯಾಟರ್​ ಎನ್ನುವ ಕೆಟ್ಟ ದಾಖಲೆಯನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.

ಗೆರ್ಹಾರ್ಡ್ ಎರಾಸ್ಮಸ್ ಅವರು ಖಾತೆ ತೆರೆಯಲು ಬರೋಬ್ಬರಿ 17 ಎಸೆತಗಳನ್ನು ತೆಗೆದುಕೊಂಡರು. ಈ ವೇಳೆ ಟಿ20 ಕ್ರಿಕೆಟ್​ ಇತಿಹಾಸದಲ್ಲಿ ಮೊದಲ ರನ್​ ಗಳಿಸಲು ಅತಿ ಹೆಚ್ಚು ಎಸೆತಗಳನ್ನು ಎದುರಿಸಿ ಮೊದಲ ಬ್ಯಾಟರ್​ ಎನ್ನುವ ಕೆಟ್ಟ ಹಣೆಪಟ್ಟಿಯನ್ನು ತಮ್ಮ ಹೆಸರಿಗೆ ಸೇರಿಕೊಂಡರು. ಇದಕ್ಕೂ ಮುನ್ನ ಈ ಕೆಟ್ಟ ದಾಖಲೆ ಕೀನ್ಯಾ ತಂಡದ ತನ್ಮಯ್ ಮಿಶ್ರಾ(Tanmay Mishra) ಹೆಸರಿನಲ್ಲಿತ್ತು. 2007ರಲ್ಲಿ ನಡೆದಿದ್ದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ತನ್ಮಯ್ ಮಿಶ್ರಾ 16 ಎಸೆತಗಳನ್ನು ಎದುರಿಸಿ ಖಾತೆ ತೆರೆದಿದ್ದರು. ಇದೀಗ ಈ ದಾಖಲೆ ಪತನಗೊಂಡಿದೆ.

ಆರಂಭಿಕ ರನ್​ ಗಳಿಸಲು 17 ಎಸೆತ ಎದುರಿಸಿದರೂ ಆ ಬಳಿಕ ಎರಾಸ್ಮಸ್ ಉತ್ತಮ ಬ್ಯಾಟಿಂಗ್​ ನಡೆಸಿದರು. 4 ಬೌಂಡರಿ ಮತ್ತು 1 ಸಿಕ್ಸರ್​ ಸಿಡಿಸಿ 36 ರನ್​ ಬಾರಿಸಿ ತಂಡದ ಪರ ಗರಿಷ್ಠ ಸ್ಕೋರ್​ ಗಳಿಸಿ ಆಟಗಾರನಾಗಿ ಮೂಡಿಬಂದರು.

ಟೂರ್ನಿಯಿಂದ ಹೊರಬಿದ್ದ ನಮೀಬಿಯಾ


ಪಂದ್ಯದಲ್ಲಿ ಹೀನಾಯ ಸೋಲು ಕಂಡ ನಮೀಬಿಯಾ ಟೂರ್ನಿಯಿಂದ ಹೊರಬಿದ್ದ ಸಂಕಟಕ್ಕೆ ಸಿಲುಕಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನಮೀಬಿಯಾ 17 ಓವರ್​ಗೆ ಕೇವಲ 72 ರನ್ ಗಳಿಸಿ ಆಲೌಟ್ ಆಯಿತು. ಮಾರಕ ಸ್ಪಿನ್​ ದಾಳಿ ನಡೆಸಿದ ಆ್ಯಡಂ ಝಂಪಾ 4 ವಿಕೆಟ್ ಕಬಳಿಸಿದರೆ ಜೋಶ್ ಹೇಝಲ್ ವುಡ್, ಮಾರ್ಕಸ್​ ಸ್ಟೋಯಿನಿಸ್​ ತಲಾ 2 ವಿಕೆಟ್ ತಮ್ಮದಾಗಿಸಿಕೊಂಡರು.

ಇದನ್ನೂ ಓದಿ IND vs USA: ಪಂದ್ಯಕ್ಕೆ ಮಳೆ ಭೀತಿ; ಪಂದ್ಯ ರದ್ದಾದರೆ ಉಭಯ ತಂಡಗಳು ಸೂಪರ್​-8 ಪ್ರವೇಶ

ಸಣ್ಣ ಮೊತ್ತವನ್ನು ಬೆನ್ನತ್ತಿದ ಆಸ್ಟ್ರೇಲಿಯಾ ಕೇವಲ 5.4 ಓವರ್​ಗಳಲ್ಲಿ ಒಂದು ವಿಕೆಟ್​ ನಷ್ಟಕ್ಕೆ 74 ರನ್​ ಬಾರಿಸಿ 9 ವಿಕೆಟ್​ ಅಂತರದ ಗೆಲುವು ತನ್ನದಾಗಿಸಿಕೊಂಡಿತು. ಆರಂಭಿಕ ಆಟಗಾರ ಡೇವಿಡ್​ ವಾರ್ನರ್​ 20 ರನ್​ ಗಳಿಸಿ ಔಟಾದರು. ಬಳಿಕ ಬಂದ ಮಿಚೆಲ್ ಮಾರ್ಷ್ 18* ಹಾಗೂ ಟ್ರಾವಿಸ್ ಹೆಡ್ 34* ರನ್​ ಬಾರಿಸಿ ಅಜೇಯರಾಗಿ ಉಳಿದರು.

ಆ್ಯಡಂ ಝಂಪಾ 4 ವಿಕೆಟ್​ ಕೀಳುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ 100 ವಿಕೆಟ್​ಗಳ ಮೇಲುಗಲ್ಲು ತಲುಪಿದರು. ಆಸ್ಟ್ರೇಲಿಯಾ ‘ಬಿ’ ಗುಂಪಿನಲ್ಲಿ ಆಡಿದ ಎಲ್ಲ ಮೂರು ಪಂದ್ಯಗಳನ್ನು ಗೆದ್ದು ಅಗ್ರಸ್ಥಾನಿಯಾಗಿ ಸೂಪರ್​-8 ಪ್ರವೇಶ ಪಡೆಯಿತು. ಇನ್ನೊಂದು ಸ್ಥಾನಕ್ಕಾಗಿ ಸ್ಕಾಟ್ಲೆಂಡ್​ ಮತ್ತು ಇಂಗ್ಲೆಂಡ್​ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಒಂದೊಮ್ಮೆ ಸ್ಕಾಟ್ಲೆಂಡ್​ ಮುಂದಿನ ಪಂದ್ಯದಲ್ಲಿ ಗೆದ್ದರೆ ಇಂಗ್ಲೆಂಡ್​ ಟೂರ್ನಿಯಿಂದ ಹೊರಬೀಳಲಿದೆ. ಅಥವಾ ಇಂಗ್ಲೆಂಡ್​ ಇನ್ನುಳಿದ 2 ಪಂದ್ಯಗಳ ಪೈಕಿ ಒಂದು ಪಂದ್ಯ ಸೋತರೂ ಹೋರಬೀಳಲಿದೆ. ಒಟ್ಟಾರೆಯಾಗಿ ಇಂಗ್ಲೆಂಡ್​ ಉಭಯ ಸಂಕಟಕ್ಕೆ ಸಿಲುಕಿದೆ.

Continue Reading

ಕ್ರೀಡೆ

IND vs USA: ಪಂದ್ಯಕ್ಕೆ ಮಳೆ ಭೀತಿ; ಪಂದ್ಯ ರದ್ದಾದರೆ ಉಭಯ ತಂಡಗಳು ಸೂಪರ್​-8 ಪ್ರವೇಶ

IND vs USA: ಅಕ್ಯುವೆದರ್‌ನ ಮುನ್ಸೂಚನೆಯ ಪ್ರಕಾರ ಅಮೆರಿಕದ ಕಾಲಮಾನದ ಪ್ರಕಾರ ಮಧ್ಯಾಹ್ನದ ವೇಳೆ ಶೇ. 40 ಪ್ರತಿಶತದಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ. ಭಾರತದಲ್ಲಿ ಈ ಪಂದ್ಯ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತದೆ. 

VISTARANEWS.COM


on

IND vs USA
Koo

ನ್ಯೂಯಾರ್ಕ್​: ಸೂಪರ್​-8 ಪ್ರವೇಶದ ಇರಾದೆಯೊಂದಿಗೆ ಭಾರತ(IND vs USA) ಮತ್ತು ಅಮೆರಿಕ ಇಂದು ನಡೆಯುವ ಟಿ20 ವಿಶ್ವಕಪ್​ನ(T20 World Cup 2024) 25ನೇ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಯಾರೇ ಗೆದ್ದರೂ ‘ಎ’ ವಿಭಾಗದಿಂದ ಮೊದಲ ತಂಡವಾಗಿ ಸೂಪರ್​-8 ಟಿಕೆಟ್​ ಗಿಟ್ಟಿಸಿಕೊಳ್ಳಲಿದ್ದಾರೆ. ಪಂದ್ಯಕ್ಕೆ ಮಳೆ ಭೀತಿ ಕೂಡ ಎದುರಾಗಿದೆ. ಪಂದ್ಯ ಮಳೆಯಿಂದ ರದ್ದಾದರೆ ಉಭಯ ತಂಡಗಳು ಕೂಡ ಸೂಪರ್​-8ಗೆ ಪ್ರವೇಶಪಡೆಯಲಿದೆ. ಆಗ ಪಾಕಿಸ್ತಾನ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ.

ಹವಾಮಾನ ವರದಿ


ಅಕ್ಯುವೆದರ್‌ನ ಮುನ್ಸೂಚನೆಯ ಪ್ರಕಾರ ಅಮೆರಿಕದ ಕಾಲಮಾನದ ಪ್ರಕಾರ ಮಧ್ಯಾಹ್ನದ ವೇಳೆ ಶೇ. 40 ಪ್ರತಿಶತದಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ. ಭಾರತದಲ್ಲಿ ಈ ಪಂದ್ಯ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತದೆ. 

ಪಿಚ್​ ರಿಪೋರ್ಟ್​


ಸಂಪೂರ್ಣ ಬೌಲಿಂಗ್​ ಟ್ರ್ಯಾಕ್ ಆಗಿರುವ ನಸ್ಸೌ ಪಿಚ್​ನಲ್ಲಿ ಬ್ಯಾಟಿಂಗ್​ ನಡೆಸುವುದು ಅಷ್ಟು ಸುಲಭವಲ್ಲ. 100 ರನ್​ ಬಾರಿಸಿದರೂ ಇದನ್ನು ತಡೆದು ನಿಲ್ಲಿಸುವ ಸಾಮರ್ಥ್ಯ ಬೌಲರ್​ಗಳಿಗಿದೆ. ಪಿಚ್​ನಲ್ಲಿ ಬಿರುಕು ಇರುವ ಕಾರಣ ಚೆಂಡಿನ ಚಲನೆ ಯಾವ ರೀತಿ ಇರುತ್ತದೆ ಎನ್ನುವುದನ್ನು ಅರಿತುಕೊಳ್ಳುವಲ್ಲಿ ಬ್ಯಾಟರ್​ಗಳು ವಿಫಲರಾಗುತ್ತಿದ್ದಾರೆ. ಇದುವರೆಗೂ ಇಲ್ಲಿ ನಡೆದ ಪಂದ್ಯದಲ್ಲಿ 120 ರನ್​ಗಳ ಗಡಿ ದಾಟಿಲ್ಲ.

ಅಮೆರಿಕ ತಂಡ ಕ್ರಿಕೆಟ್​ ಶಿಶು ಆಗಿದ್ದರೂ ಕೂಡ ತಂಡದಲ್ಲಿ ಆಡುವ ಆಟಗಾರರಿಗೆ ಕ್ರಿಕೆಟ್​ ಹೊಸದಲ್ಲ. ಎಲ್ಲರು ಅನುಭವಿ ಆಟಗಾರರು. ಈ ತಂಡದ ವಿಶೇಷವೆಂದರೆ ಭಾರತ, ಪಾಕಿಸ್ತಾನ, ನ್ಯೂಜಿಲ್ಯಾಂಡ್​, ಕೆನಡಾ ಸೇರಿ ಹಲವು ದೇಶಗಳ ಕ್ರಿಕೆಟಿಗರು ಈ ತಂಡದಲ್ಲಿ ಕಾಣಿಸಿಕೊಂಡಿರುವುದು. ಬಹುಪಾಲು ಭಾರತೀಯ ಆಟಗಾರರೇ ನೆಚ್ಚಿಕೊಂಡಿದ್ದಾರೆ. ಕನ್ನಡಿಗ ನಾಸ್ತುಷ್‌ ಕೆಂಜಿಗೆ, 2010ರಲ್ಲಿ ಭಾರತ ಪರ 19 ವಿಶ್ವಕಪ್​ ಆಡಿದ್ದ ಎಡಗೈ ವೇಗದ ಬೌಲರ್ ಸೌರಭ್ ನೇತ್ರವಲ್ಕರ್, ನಾಯಕ ಮೊನಾಂಕ್ ಪಟೇಲ್ ತಂಡದ ಪ್ರಮುಖ ಆಟಗಾರರಾಗಿದ್ದಾರೆ.

ಇದನ್ನೂ ಓದಿ T20 World Cup : ಕೊನೆಗೂ ದುರ್ಬಲ ಕೆನಾಡ ತಂಡದ ವಿರುದ್ಧ ಜಯ ಗಳಿಸಿದ ಪಾಕಿಸ್ತಾನ

ವಿಸ್ಫೋಟಕ ಬ್ಯಾಟಿಂಗ್​ಗೆ ಹೆಸರುವಾಸಿಯಾದ ಆರನ್ ಜೋನ್ಸ್ ಕೂಡ ಉತ್ತಮ ಬ್ಯಾಟಿಂಗ್​ ಫಾರ್ಮ್​ನಲ್ಲಿದ್ದಾರೆ. ಹೀಗಾಗಿ ಭಾರತ ಯಾವುದೇ ಕಾರಣಕ್ಕೂ ಎದುರಾಳಿಗಳನ್ನು ಕಡೆಗಣಿಸುವಂತಿಲ್ಲ. ಈಗಾಗಲೇ ಪಾಕಿಸ್ತಾನಕ್ಕೂ ಅಮೆರಿಕ ನೀರು ಕುಡಿಸಿದೆ. ಹೀಗಾಗಿ ಅತಿಯಾದ ಆತ್ಮವಿಶ್ವಾಸದಿಂದ ಈ ಸವಾಲನ್ನು ಹಗುರವಾಗಿ ಕಂಡೆರೆ ಭಾರತಕ್ಕೂ ಸೋಲು ಕಟ್ಟಿಟ್ಟ ಬುತ್ತಿ! ಎನ್ನಲಡ್ಡಿಯಿಲ್ಲ.

ಸಂಭಾವ್ಯ ತಂಡ


ಅಮೆರಿಕ:
 ಸ್ಟೀವನ್ ಟೇಲರ್, ಮೊನಾಂಕ್ ಪಟೇಲ್ (ನಾಯಕ), ಆಂಡ್ರೀಸ್ ಗೌಸ್, ಆರನ್ ಜೋನ್ಸ್, ನಿತೀಶ್ ಕುಮಾರ್, ಕೋರಿ ಆಂಡರ್ಸನ್, ಹರ್ಮೀತ್ ಸಿಂಗ್, ಜಸ್ದೀಪ್ ಸಿಂಗ್, ನಾಸ್ತುಷ್‌ ಕೆಂಜಿಗೆ, ಸೌರಭ್ ನೇತ್ರವಲ್ಕರ್, ಅಲಿ ಖಾನ್.

ಭಾರತ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.

Continue Reading
Advertisement
Actor Darshan
ಕರ್ನಾಟಕ13 mins ago

Actor Darshan: ದರ್ಶನ್ ಮೇಲೆ ಮತ್ತೊಂದು ಗಂಭೀರ ಆರೋಪ; ವನ್ಯಜೀವಿ ಧಾಮದಲ್ಲಿ ಖಾಸಗಿ ವಾಹನ ಬಳಕೆ, ಬಾಡೂಟ, ಎಣ್ಣೆ ಪಾರ್ಟಿ!

Kiran Bedi announces her biopic by director Kushaal Chawla
ಬಾಲಿವುಡ್21 mins ago

Kiran Bedi: ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಬಯೋಪಿಕ್ ಅನೌನ್ಸ್‌: ಕುಶಾಲ್ ಚಾವ್ಲಾ ಆ್ಯಕ್ಷನ್‌ ಕಟ್‌!

mayank agarwal
ಕ್ರೀಡೆ22 mins ago

Mayank Agarwal: ಕುಕ್ಕೆಯಲ್ಲಿ ಸರ್ಪಸಂಸ್ಕಾರ ಸೇವೆ ನೆರವೇರಿಸಿದ ಕ್ರಿಕೆಟಿಗ ಮಯಾಂಕ್‌ ಅಗರ್ವಾಲ್‌

Rahul Gandhi
ದೇಶ22 mins ago

Rahul Gandhi: ನನ್ನ ಮೇಲೆ ಮೋದಿಗಿರುವಷ್ಟು ದೇವರ ಕೃಪೆ ಇಲ್ಲ ಎಂದ ರಾಹುಲ್‌ ಗಾಂಧಿ; ಏಕಿಂಥ ಮಾತು?

Narendra Modi
ದೇಶ49 mins ago

Narendra Modi: ಜೂನ್‌ 21ರ ಯೋಗ ದಿನದಂದು ವಿಶೇಷ ಸ್ಥಳದಲ್ಲಿ ಮೋದಿ ಯೋಗ; ಯಾವುದದು?

Kuwait fire
ಪ್ರಮುಖ ಸುದ್ದಿ57 mins ago

Kuwait fire : ಕುವೈತ್ ನಲ್ಲಿ ಅಗ್ನಿ ಅವಘಡ: 5 ಭಾರತೀಯರು ಸೇರಿ 35 ಮಂದಿ ಸಾವು

IND vs USA
ಕ್ರಿಕೆಟ್59 mins ago

IND vs USA: ಇಂದಿನ ಪಂದ್ಯಕ್ಕೆ ಟೀಮ್​ ಇಂಡಿಯಾದಲ್ಲಿ 2 ಮಹತ್ವದ ಬದಲಾವಣೆ; ಯಾರಿಗೆ ಕೊಕ್​?

Kathua Terror Attack
ದೇಶ1 hour ago

Kathua Terror Attack: ಯೋಧನ ಹತ್ಯೆಗೆ ಪ್ರತಿಕಾರ; ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ

Teachers Recruitment
ಪ್ರಮುಖ ಸುದ್ದಿ1 hour ago

Teachers Recruitment: ಪ್ರಾಥಮಿಕ, ಪ್ರೌಢಶಾಲಾ ಸಹ ಶಿಕ್ಷಕರು, ಮುಖ್ಯ ಶಿಕ್ಷಕರ ನೇಮಕಾತಿ: ಕೌನ್ಸೆಲಿಂಗ್‌ಗೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ

Dolly Dhananjay mana manakke Kotee Movie release
ಸ್ಯಾಂಡಲ್ ವುಡ್1 hour ago

Dolly Dhananjay: ಬಿಡುಗಡೆಗೂ ಮುನ್ನ ‘ಕೋಟಿ’ ಪೇಯ್ಡ್ ಪ್ರೀಮಿಯರ್ ಶೋ: ಜೂನ್‌ 14ಕ್ಕೆ ತೆರೆಗೆ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ23 hours ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ1 day ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ1 day ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ1 day ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ1 day ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ5 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ5 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌