Pro Kabaddi: ಜಿದ್ದಾಜಿದ್ದಿನ ಪಂದ್ಯದಲ್ಲಿ ಬೆಂಗಾಲ್​, ಹರ್ಯಾಣಗೆ ಒಲಿದ ಗೆಲುವು - Vistara News

ಕ್ರೀಡೆ

Pro Kabaddi: ಜಿದ್ದಾಜಿದ್ದಿನ ಪಂದ್ಯದಲ್ಲಿ ಬೆಂಗಾಲ್​, ಹರ್ಯಾಣಗೆ ಒಲಿದ ಗೆಲುವು

ಬೆಂಗಾಲ್​ ವಾರಿಯರ್ಸ್ ತಂಡ ತಮಿಳ್​ ತಲೈವಾಸ್​ ವಿರುದ್ಧ 48-38 ಅಂತರದಿಂದ ಗೆದ್ದರೆ, ಹರ್ಯಾಣ ಸ್ಟೀಲರ್ ಬಲಿಷ್ಠ ದಬಾಂಗ್​ ಡೆಲ್ಲಿಯನ್ನು 35-33 ಅಂಕದಿಂದ ಕೆಡವಿ ಹಾಕಿತು.

VISTARANEWS.COM


on

pro kabaddi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಭಾನುವಾರ ನಡೆದ ಪ್ರೊ ಕಬಡ್ಡಿ ಲೀಗ್​ನ(Pro Kabaddi) ಡಬಲ್​ ಹೆಡರ್​ ಪಂದ್ಯದಲ್ಲಿ ಬೆಂಗಾಲ್​ ವಾರಿಯರ್ಸ್​ ಮತ್ತು ಹರ್ಯಾಣ ಸ್ಟೀಲರ್ ಗೆಲುವುವಿನ ನಗೆ ಬೀರಿದೆ, ಬೆಂಗಾಲ್​ ವಾರಿಯರ್ಸ್ ತಂಡ ತಮಿಳ್​ ತಲೈವಾಸ್​ ವಿರುದ್ಧ 48-38 ಅಂತರದಿಂದ ಗೆದ್ದರೆ, ಹರ್ಯಾಣ ಸ್ಟೀಲರ್ ಬಲಿಷ್ಠ ದಬಾಂಗ್​ ಡೆಲ್ಲಿಯನ್ನು 35-33 ಅಂಕದಿಂದ ಕೆಡವಿ ಹಾಕಿತು. ದಿನದ ಎರಡು ಪಂದ್ಯಗಳು ಕೂಡ ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು.

ತೀವ್ರ ಪೈಪೋಟಿ ಏರ್ಪಟ್ಟ ಡೆಲ್ಲಿ-ಹರ್ಯಾಣ ​ ಪಂದ್ಯ

ಸತತ 2 ಗೆಲುವು ಸಾಧಿಸಿದ್ದ ದಬಾಂಗ್​ ಡೆಲ್ಲಿ ಮತ್ತು ಹರ್ಯಾಣ ಸ್ಟೀಲರ್ ನಡುವಣ 2ನೇ ಮೊದಲ ಪಂದ್ಯ ಕಬಡ್ಡಿ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು. ಕೊನೆಯ ಕ್ಷಣದವರೆಗೂ ಅಂಕ ಪಟ್ಟಿ ಹಾವು ಏಣಿ ಆಟದಂತೆ ಏರಿಳಿತ ಕಾಣುತ್ತಲ್ಲೇ ಸಾಗಿತು. ಡೆಲ್ಲಿ ಪರ ನವೀನ್​ ಸ್ಟೀಲರ್ ಪರ ಸಿದ್ದಾರ್ಥ್​ ದೇಸಾಯಿ ಜಿದ್ದಿಗೆ ಬಿದ್ದವರಂತೆ ರೇಡಿಂಗ್​ನಲ್ಲಿ ಅಂಕ ಗಳಿಸಿಸುತ್ತ ಪಂದ್ಯವನ್ನು ಅತ್ಯಂತ ರೋಚಕವಾಗುವಂತೆ ಮಾಡಿದರು. ಅಂತಿಮವಾಗಿ ಹರ್ಯಾಣ ಕೈ ಮೇಲಾಯಿತು. 2 ಅಂಕದ ಮುನ್ನಡೆ ಸಾಧಿಸಿ ಪಂದ್ಯವನ್ನು ಗೆದ್ದು ಬೀಗಿತು.

ಹರ್ಯಾಣ ತಂಡದ ಪರ ಸಿದ್ದಾರ್ಥ್​ ದೇಸಾಯಿ 15 ಬಾರಿ ಎದುರಾಳಿ ಕೋಟೆಗೆ ನುಗ್ಗಿ 10 ಅಂಕ ಗಳಿಸಿದರು. ಇವರಿಗೆ ಉತ್ತಮ ಸಾಥ್​ ನೀಡಿದ ನವೀನ್​ 5, ಅಭಿಷೇಕ್​ 7, ಮೋಹಿತ್​ 3 ಅಂಕ ಗಳಿಸಿ ಮಿಂಚಿದರು. ಡೆಲ್ಲಿ ಪರ ನವೀನ್​ ಕುಮಾರ್​ 16 ಅಂಕ ಗಳಿಸಿದರು. ಅಶು ಮಲಿಕ್​ ಅವರು ಈ ಪಂದ್ಯದಲ್ಲಿ ಕೇವಲ 4 ಅಂಕಕ್ಕೆ ಸೀಮಿತವಾದದ್ದು ಡೆಲ್ಲಿ ಸೋಲಿಗೆ ಕಾರಣವಾಯಿತು. ಈ ಹಿಂದಿನ 2 ಪಂದ್ಯಗಳಲ್ಲಿ ಅವರು ಉತ್ತಮ ರೇಡಿಂಗ್​ ನಡೆಸಿದ್ದರು.

ತಲೆಬಾಗಿದ ತಲೈವಾಸ್​

ಏಕಪಕ್ಷೀಯವಾಗಿ ಸಾಗಿದ ದಿನದ ಮೊದಲ ಪಂದ್ಯದಲ್ಲಿ ಬೆಂಗಾಲ್​ ವಾರಿಯರ್ಸ್​ ತಂಡ ತಮಿಳ್​ ತಲೈವಾಸ್​ ಎದುರು ಅಧಿಕಾರಯುತ ಗೆಲುವು ಸಾಧಿಸಿತು. ಬೆಂಗಾಲ್ ಪರ ಮಿಂಚಿನ ರೇಡಿಂಗ್​ ನಡೆಸಿದ ಮಣಿಂದರ್​ ಸಿಂಗ್​ ಬರೋಬ್ಬರಿ 16 ಅಂಕ ಗಳಿಸಿ ತಂಡದ ಗೆಲುವಿನ ರುವಾರಿ ಎನಿಸಿದರು. ಅವರ ರೇಡಿಂಗ್​ ಆರ್ಭಟವನ್ನು ತಡೆದು ನಿಲ್ಲಿಸುವಲ್ಲಿ ತಮಿಳ್​ ತಂಡದ ಡಿಫೆಂಡರ್​ಗಳು ಸಂಪೂರ್ಣ ವಿಫಲರಾದರು. ಬೆಂಗಾಲ್ ತಂಡದ ಡಿಫೆಂಡರ್​ ಶುಭಂ ಶಿಂಧೆ ಕೂಡ ಅಮೋಘ ಟ್ಯಾಕಲ್ ಮೂಲಕ 11 ಅಂಕ ಗಳಿಸಿದರು. ಉಳಿದಂತೆ ರೇಡರ್​ ನಿತಿನ್​ ಕುಮಾರ್​(7), ಶ್ರೀಕಾಂತ್​(2) ಅಂಕ ಕಲೆಹಾಕಿದರು. ತಲೈವಾಸ್​ ಪರ ನರೇಂದ್ರ ಅವರು 13 ಅಂಕ ಗಳಿಸಿದರೂ ಅವರಿಗೆ ಉಳಿದ ಆಟಗಾರರಿಂದ ಉತ್ತಮ ಬೆಂಬಲ ಸಿಗದ ಕಾರಣ ತಂಡ ಸೋಲು ಕಂಡಿತು.

ಇದನ್ನೂ ಓದಿ Pro Kabaddi: ಯೋಧಾಸ್​ ಆರ್ಭಟಕ್ಕೆ ಮುಳುಗಿದ ತೆಲುಗು ಟೈಟಾನ್ಸ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Paris Olympics 2024: ಕೊನೆಗೂ ಪ್ಯಾರಿಸ್​ ಒಲಿಂಪಿಕ್ಸ್​ ಟಿಕೆಟ್​ ಪಡೆದ ಬಾಕ್ಸರ್​ ಅಮಿತ್‌ ಪಂಘಲ್‌

Paris Olympics 2024: ಭಾನುವಾರ ನಡೆದ ಪುರುಷರ 51 ಕೆ.ಜಿ. ಸ್ಪರ್ಧೆಯಲ್ಲಿ ತಮ್ಮೆಲ್ಲಾ ಅನುಭವ ಬಳಸಿ ಬಾಕ್ಸಿಂಗ್​ ರಿಂಗ್​ಗಿಳಿದ ಅಮಿತ್‌ ಪಂಘಲ್‌ ಚೀನಾದ ಚುವಾಂಗ್ ಲಿಯು ವಿರುದ್ಧ 5-0 ಸರ್ವಾನುಮತದ ತೀರ್ಪಿನಲ್ಲಿ ಗೆದ್ದು ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಗಿಟ್ಟಿಸಿಕೊಂಡರು.

VISTARANEWS.COM


on

Paris Olympics 2024
Koo

ಬ್ಯಾಂಕಾಕ್‌: ಇಲ್ಲಿ ನಡೆಯುತ್ತಿರುವ 2ನೇ ವಿಶ್ವ ಅರ್ಹತಾ ಪಂದ್ಯಾವಳಿಯಲ್ಲಿ(2nd World Qualification Tournament) ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತ, ಭಾರತದ ಬಾಕ್ಸರ್ ಅಮಿತ್‌ ಪಂಘಲ್‌(Boxer Amit Panghal) ಅವರು ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್​ ಗೇಮ್ಸ್​ಗೆ(Paris Olympics 2024) ಅರ್ಹತೆ ಪಡೆದರು.

ಭಾನುವಾರ ನಡೆದ ಪುರುಷರ 51 ಕೆ.ಜಿ. ಸ್ಪರ್ಧೆಯಲ್ಲಿ ತಮ್ಮೆಲ್ಲಾ ಅನುಭವ ಬಳಸಿ ಬಾಕ್ಸಿಂಗ್​ ರಿಂಗ್​ಗಿಳಿದ ಅಮಿತ್‌ ಪಂಘಲ್‌ ಚೀನಾದ ಚುವಾಂಗ್ ಲಿಯು ವಿರುದ್ಧ 5-0 ಸರ್ವಾನುಮತದ ತೀರ್ಪಿನಲ್ಲಿ ಗೆದ್ದು ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಗಿಟ್ಟಿಸಿಕೊಂಡರು. ಈ ಮೂಲಕ ಭಾರತದಿಂದ 5 ಬಾಕ್ಸರ್​ಗಳು ಒಲಿಂಪಿಕ್ಸ್​ ಕೋಟಾ ಸಂಪಾದಿಸಿದಂತಾಗಿದೆ. ಇದಕ್ಕೂ ಮುನ್ನ ನಿಶಾಂತ್ ದೇವ್ (71 ಕೆಜಿ), ಮಹಿಳಾ ಬಾಕ್ಸರ್‌ಗಳಾದ ನಿಖತ್ ಜರೀನ್ (50 ಕೆಜಿ), ಪ್ರೀತ್ ಪವಾರ್ (54 ಕೆಜಿ) ಮತ್ತು ಲೊವ್ಲಿನಾ ಬೊರ್ಗೊಹೈನ್ (75 ಕೆಜಿ) ಈಗಾಗಲೇ ಪ್ಯಾರಿಸ್‌ಗೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಲೊವ್ಲಿನಾ ಬೊರ್ಗೊಹೈನ್ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದಿದ್ದರು.

ಇದನ್ನೂ ಓದಿ Paris Olympics 2024: ಒಲಿಂಪಿಕ್ಸ್‌ಗೆ‌ ಅರ್ಹತೆ ಪಡೆದ ಬಾಕ್ಸರ್ ನಿಶಾಂತ್ ದೇವ್

ಜೈಸ್ಮಿನ್ ಲಂಬೋರಿಯಾ (57 ಕೆಜಿ) ಮತ್ತು ಸಚಿನ್ ಸಿವಾಚ್ (57 ಕೆಜಿ) ಕೂಡ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದು ಇವರು ಕೂಡ ಗೆಲುವು ಸಾಧಿಸಿ ಒಲಿಂಪಿಕ್ಸ್​ ಕೋಟಾಗಳನ್ನು ಪಡೆಯಲು ಎದುರು ನೋಡುತ್ತಿದ್ದಾರೆ. ಕಳೆದ ವಾರ ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ನಡೆದಿದ್ದ ಬಾಕ್ಸಿಂಗ್ ಒಲಿಂಪಿಕ್ಸ್‌ ಅರ್ಹತಾ ಪಂದ್ಯದಲ್ಲಿ ಸೆಮಿಫೈನಲ್‌ ಪ್ರವೇಶಿಸುವ ಮೂಲಕ ನಿಶಾಂತ್ ದೇವ್ ಅವರು ಒಲಿಂಪಿಕ್ಸ್​ ಅರ್ಹತೆ ಪಡೆದುಕೊಂಡಿದ್ದರು. ಈ ವರೆಗೆ ಭಾರತದಿಂದ ಕೇವಲ ಪುರುಷ ಬಾಕ್ಸರ್​ ಮಾತ್ರ ಪ್ಯಾರಿಸ್​ ಟಿಕೆಟ್​ ಪಡೆದಿದ್ದಾರೆ.

ಚಿನ್ನ ಗೆದ್ದ ಬಾಕ್ಸರ್​ಗಳಿಗೆ ಭಾರೀ ನಗದು ಪ್ರಶಸ್ತಿ ಘೋಷಣೆ


ಕೆಲವು ತಿಂಗಳ ಹಿಂದೆ ವಿಶ್ವ ಅಥ್ಲೆಟಿಕ್ (ಡಬ್ಲ್ಯುಎ) ಸಂಸ್ಥೆ ಟ್ರ್ಯಾಕ್ ಮತ್ತು ಫೀಲ್ಡ್(track & field gold medallists) ವಿಭಾಗದಲ್ಲಿ ಚಿನ್ನ ಜಯಿಸುವ ಅಥ್ಲೀಟ್‌ಗಳಿಗೆ 41.60 ಲಕ್ಷ ನಗದು ಪ್ರಶಸ್ತಿ ನೀಡುವುದಾಗಿ ಪ್ರಕಟಿಸಿತ್ತು. ಇದೀಗ ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (International Boxing Association) ಕೂಡ ಮಹತ್ವದ ನಿರ್ಧಾರ ಕೈಗೊಂಡಿದ್ದು, ಚಿನ್ನ ಗೆಲ್ಲುವ ಪ್ರತಿಯೊಬ್ಬ ಬಾಕ್ಸರ್​ಗಳಿಗೆ 41.68 ಲಕ್ಷ ನಗದು ಬಹುಮಾನ ನೀಡುವುದಾಗಿ ಘೋಷಿಸಿದೆ. ಜತೆಗೆ ಕೋಚ್‌, ರಾಷ್ಟ್ರೀಯ ತಂಡಗಳಿಗೆ 10 ಲಕ್ಷ ನೀಡುವುದಾಗಿಯೂ ಪ್ರಕಟಿಸಿದೆ. ಆದರೆ, 2020ರ ಟೋಕಿಯೊ ಒಲಿಂಪಿಕ್ಸ್‌ ಬಾಕ್ಸಿಂಗ್ ಸ್ಪರ್ಧೆಗಳನ್ನು ಐಬಿಎ(IBA) ನೆರವಿಲ್ಲದೇ ಐಒಸಿಯೇ ಸಂಘಟಿಸಿತ್ತು. ಕ್ರೀಡಾ ಸಂಸ್ಥೆಗಳು ನೀಡುವ ಬಹುಮಾನ ಹಣಕ್ಕೂ ಐಒಸಿ ಸಮ್ಮತಿ ನೀಡಿಲ್ಲ.

Continue Reading

ಕ್ರೀಡೆ

KMF T20 World Cup: ಟಿ20 ವಿಶ್ವಕಪ್​ನಲ್ಲಿ ‘ನಂದಿನಿ’ ಲಾಂಛನ; ಹರ್ಷ ವ್ಯಕ್ತಪಡಿಸಿದ ಕೆಎಂಎಫ್‌

KMF T20 World Cup: “ನಾವೆಲ್ಲರೂ ಕಾಯುತ್ತಿದ್ದ ಐತಿಹಾಸಿಕ ಕ್ಷಣ ಕೊನೆಗೂ ಬಂದಿದೆ! ನಂದಿನಿ ಲಾಂಛನವು ಸ್ಕಾಟ್ಲೆಂಡ್ ಜರ್ಸಿ ಮತ್ತು ಐರ್ಲೆಂಡ್ ಜರ್ಸಿಯ ಪ್ರಮುಖ ತೋಳಿನ ಮೇಲೆ ಮೊದಲ ಬಾರಿಗೆ ದೊಡ್ಡ ಪಂದ್ಯಾವಳಿಯಲ್ಲಿ ಕಾಣಿಸಿಕೊಂಡಿದೆ” ಎಂದು ಕೆಎಂಎಫ್‌ ಟ್ವಿಟರ್​ ಎಕ್ಸ್​ನಲ್ಲಿ ಬರೆದುಕೊಂಡಿದೆ.

VISTARANEWS.COM


on

KMF T20 World Cup
Koo

ಬೆಂಗಳೂರು: ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ನಡೆಯುತ್ತಿರುವ ಐಸಿಸಿ ಪುರುಷರ ಟಿ–20 ಕ್ರಿಕೆಟ್‌ ವಿಶ್ವಕಪ್‌(T20 World Cup 2024) ಟೂರ್ನಿಯಲ್ಲಿ ಕರ್ನಾಟಕ ಹಾಲು ಮಹಾ ಮಂಡಳಿ(KMF) ಸ್ಕಾಟ್ಲೆಂಡ್(Scotland) ಮತ್ತು ಐರ್ಲೆಂಡ್(Ireland) ತಂಡಗಳ ಪ್ರಾಯೋಜಕತ್ವ ಪಡೆದಿದೆ. ‘ನಂದಿನಿ’ ಲಾಂಛನ(nandini milk logo) ಇರುವ ನೂತನ ಜೆರ್ಸಿಯನ್ನು ಕೂಡ ಉಭಯ ತಂಡಗಳು ಈಗಾಗಲೇ ಬಿಡುಗಡೆಗೊಳಿಸಿದೆ. ಇದೀಗ ಕೆಎಂಎಫ್‌ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಉಭಯ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳ ನಂದಿನಿ ಲೋಗೊ(KMF T20 World Cup) ಇರುವ ಫೋಟೊ ಹಂಚಿಕೊಂಡಿದೆ.

“ನಾವೆಲ್ಲರೂ ಕಾಯುತ್ತಿದ್ದ ಐತಿಹಾಸಿಕ ಕ್ಷಣ ಕೊನೆಗೂ ಬಂದಿದೆ! ನಂದಿನಿ ಲಾಂಛನವು ಸ್ಕಾಟ್ಲೆಂಡ್ ಜರ್ಸಿ ಮತ್ತು ಐರ್ಲೆಂಡ್ ಜರ್ಸಿಯ ಪ್ರಮುಖ ತೋಳಿನ ಮೇಲೆ ಮೊದಲ ಬಾರಿಗೆ ದೊಡ್ಡ ಪಂದ್ಯಾವಳಿಯಲ್ಲಿ ಕಾಣಿಸಿಕೊಂಡಿದೆ” ಎಂದು ಕೆಎಂಎಫ್‌ ಟ್ವಿಟರ್​ ಎಕ್ಸ್​ನಲ್ಲಿ ಬರೆದುಕೊಂಡಿದೆ.

ನಂದಿನಿ ಹೆಸರಿನಲ್ಲಿ ಡೈರಿ ಉತ್ಪನ್ನ ಮಾರಾಟ ಮಾಡುತ್ತಿರುವ ಕೆಎಂಎಫ್‌ ವಿಶ್ವಕಪ್​ನಂತ ಟೂರ್ನಿಯಲ್ಲಿ ತಂಡಗಳ ಪ್ರಾಯೋಜಕತ್ವ ಪಡೆದಿರುವುದು ನಿಜಕ್ಕೂ ಮಹತ್ವದ ಹೆಜ್ಜೆಯಾಗಲಿದೆ ಜತೆಗೆ ಕರ್ನಾಟಕದ ಪ್ರತಿಯೊಬ್ಬರಿಗೂ ಹೆಮ್ಮೆಯ ಕ್ಷಣವಾಗಿದೆ. ದೇಶೀಯ ಮಟ್ಟದ ಉತ್ಪನ್ನವೊಂದು ವಿದೇಶಿ ಮಟ್ಟದಲ್ಲಿಯೂ ಪರಿಚಿತಗೊಳ್ಳಲಿದೆ. ಜತೆಗೆ ಅಮೂಲ್‌ಗೆ ತೀವ್ರ ಪೈಪೋಟಿ ನೀಡಲಿದೆ. ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳ ಎಡಗೈ ಬ್ಯಾಟ್ಸ್‌ಮನ್‌ಗಳಿಗೆ ಬಲಗೈ ಮತ್ತು ಬಲಗೈ ಬ್ಯಾಟ್ಸ್‌ಮನ್‌ಗಳ ಎಡಗೈ ಮೇಲೆ ನಂದಿನಿ ಲೋಗೋ ಕಾಣಿಸಿಕೊಳ್ಳಲಿದೆ.

ಜೂನ್​ 4ರಂದು ಸ್ಕಾಟ್ಲೆಂಡ್ ತಂಡ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಇಂಗ್ಲೆಂಡ್​ ಎದುರಾಳಿ. ಐರ್ಲೆಂಡ್​ ಜೂನ್​ 5ರಂದು ಭಾರತ ವಿರುದ್ಧ ಆಡಲಿದೆ. ಈ ವೇಳೆ ಆಟಗಾರರ ಜೆರ್ಸಿಯಲ್ಲಿ ನಂದನಿ ಲೋಗ ರಾರಾಜಿಸಲಿದೆ. ಈಗಾಗಲೇ ಮಲೇಷ್ಯಾ, ವಿಯೆಟ್ನಾಂ, ಸಿಂಗಾಪುರ, ಅಮೆರಿಕ, ದುಬೈ, ಯುಎಇ ಸೇರಿ ಮುಂತಾದ ರಾಷ್ಟ್ರಗಳಲ್ಲಿ ಹೆಸರುವಾಸಿಯಾಗಿರುವ ಕರ್ನಾಟಕದ ಹೆಮ್ಮೆ.

ಇದನ್ನೂ ಓದಿ KMF Nandini Logo: ನಂದಿನಿಗೆ ಸ್ವಾಗತಿಸಿ ಟಿ20 ವಿಶ್ವಕಪ್​ ಜೆರ್ಸಿ ಬಿಡುಗಡೆಗೊಳಿಸಿದ ಐರ್ಲೆಂಡ್ ತಂಡ

ವಿರೋಧ ವ್ಯಕ್ತಪಡಿಸಿದ್ದ ಮೋಹನ್‌ದಾಸ್‌ ಪೈ


ಉದ್ಯಮಿ ಮೋಹನ್‌ದಾಸ್‌ ಪೈ (Mohandas Pai) ಅವರು ಸ್ಕಾಟ್ಲೆಂಡ್, ಐರ್ಲೆಂಡ್‌ ತಂಡಗಳಿಗೆ KMF ಪ್ರಾಯೋಜಕತ್ವ ಪಡೆದ ಕಾರಣ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಕೆಎಂಎಫ್‌ಗೆ ಕರ್ನಾಟಕ ರಣಜಿ ತಂಡ, ರಾಜ್ಯದ ಕ್ರೀಡಾಪಟುಗಳು, ಕಲಾವಿದರು, ರೈತರ ಮಕ್ಕಳು ಕಾಣುವುದಿಲ್ಲವೇ? ಇವುಗಳಿಗೇಕೆ ಪ್ರಾಯೋಜಕತ್ವ ನೀಡಿಲ್ಲ ಎಂದು ಪ್ರಶ್ನೆ ಮಾಡಿದ್ದರು.

ಕೆಎಂಎಫ್‌ನಿಂದ ವಿದೇಶಿ ಕ್ರಿಕೆಟ್ ತಂಡಗಳಿಗೆ ಪ್ರಾಯೊಜಕತ್ವ ಪಡೆದ ವಿಚಾರದ ಬಗ್ಗೆ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಮೋಹನ್‌ ದಾಸ್‌ ಪೈ, ಕರ್ನಾಟಕದ ರಣಜಿ ತಂಡ, ರಾಜ್ಯದ ಕ್ರೀಡಾಪಟುಗಳು, ಕಲಾವಿದರು, ರೈತರ ಮಕ್ಕಳು, ಬಡವರಿಗೆ ವಿದ್ಯಾರ್ಥಿ ವೇತನಗಳಿಗೆ ಏಕೆ ಕೆಎಂಎಫ್‌ ಪ್ರಾಯೋಜಕತ್ವವನ್ನು ನೀಡಬಾರದು? ಕೆಎಂಎಫ್ ಕನ್ನಡಿಗ ತೆರಿಗೆದಾರರ ಹಣ, ಸಬ್ಸಿಡಿ ಮತ್ತು ಬಜೆಟ್‌ನಿಂದ ಧನಸಹಾಯವನ್ನು ಪಡೆದುಕೊಳ್ಳುತ್ತದೆ. ಆದರೆ, ಯಾರಿಗೂ ಗೊತ್ತಿಲ್ಲದ ವಿದೇಶಿ ತಂಡಗಳಿಗೆ ಖರ್ಚು ಮಾಡಲು ಹೊರಟಿದೆ” ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಈ ಬಗ್ಗೆ ಟ್ಯಾಗ್‌ ಮಾಡಿ ತಮ್ಮ ಆಕ್ರೋಶ ಹೊರಹಾಕಿದ್ದರು.

Continue Reading

ಕ್ರೀಡೆ

Virat Kohli: ಸಿಕ್ಸ್​ ಪ್ಯಾಕ್​ ತೋರಿಸಿ ಡ್ಯಾನ್ಸ್​ ಮಾಡಿದ ವಿರಾಟ್​ ಕೊಹ್ಲಿ; ವಿಡಿಯೊ ವೈರಲ್​

Virat Kohli: ಭಾರತ ತಂಡ ತನ್ನ ಮೊದಲ ಲೀಗ್​ ಪಂದ್ಯವನ್ನು ಜೂನ್​ 5ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ಈ ಪಂದ್ಯಕ್ಕೆ ತಯಾರಿ ನಡೆಸುವ ವೇಳೆ ವಿರಾಟ್​ ತಮ್ಮ ಸಿಕ್ಸ್​ ಪ್ಯಾಕ್​ ತೋರಿಸಿ ತಾನೆಷ್ಟು ಬಲಿಷ್ಠ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

VISTARANEWS.COM


on

Virat Kohli
Koo

ನ್ಯೂಯಾರ್ಕ್: ವಿರಾಟ್‌ ಕೊಹ್ಲಿ(Virat Kohli) ಮೈದಾನದಲ್ಲಿ ಎಷ್ಟು ಬದ್ಧತೆ, ಗಮನ ಕೇಂದ್ರೀಕರಿಸಿ ಅಬ್ಬರಿಸುತ್ತಾರೋ, ಅಷ್ಟೇ ನಿಷ್ಠೆಯಿಂದ ಫಿಟ್‌ನೆಸ್‌ಗೂ(Virat Kohli Fitness) ಆದ್ಯತೆ ಕೊಡುತ್ತಾರೆ. ಅದರಲ್ಲೂ, ಯಾವುದಾದರೂ ಸರಣಿ, ವಿಶ್ವಕಪ್‌ ಆರಂಭವಾಗುವ ಕೆಲ ದಿನಗಳ ಮೊದಲಂತೂ ಅವರು ಹೆಚ್ಚು ಕ್ರಿಕೆಟ್‌ ಪ್ರಾಕ್ಟೀಸ್‌ ಮಾಡುತ್ತಾರೆ. ಹಾಗೆಯೇ, ಜಿಮ್‌ನಲ್ಲಿ ತಾಸುಗಟ್ಟಲೆ ವರ್ಕೌಟ್‌ ಮಾಡುವ ಮೂಲಕ ಹೆಚ್ಚು ಫಿಟ್‌ ಆಗಿರಲು, ಮೈದಾನದಲ್ಲಿ ಮಿಂಚಲು ಸಿದ್ಧರಾಗುತ್ತಾರೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಅಮೆರಿಕ ಮತ್ತು ವೆಸ್ಟ್​ ಇಂಡಿಸ್​ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್​ಗೂ(T20 World Cup 2024) ಮುನ್ನ ಕೊಹ್ಲಿ ಸಿಕ್ಸ್​ ಪ್ಯಾಕ್(Virat Kohli Six-Pack)​ ತೋರಿಸಿದ್ದಾರೆ.

ಭಾರತ ತಂಡ ತನ್ನ ಮೊದಲ ಲೀಗ್​ ಪಂದ್ಯವನ್ನು ಜೂನ್​ 5ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ಈ ಪಂದ್ಯಕ್ಕೆ ತಯಾರಿ ನಡೆಸುವ ವೇಳೆ ವಿರಾಟ್​ ತಮ್ಮ ಸಿಕ್ಸ್​ ಪ್ಯಾಕ್​ ತೋರಿಸಿ ತಾನೆಷ್ಟು ಬಲಿಷ್ಠ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಬಾಂಗ್ಲಾದೇಶ ವಿರುದ್ಧ ನಿನ್ನೆ(ಶನಿವಾರ) ನಡೆದಿದ್ದ ಅಭ್ಯಾಸ ಪಂದ್ಯ ಆಡಿರಲಿಲ್ಲ. ವಿಶ್ರಾಂತಿ ಪಡೆದಿದ್ದರು. ಅಭ್ಯಾಸದ ವೇಳೆ ನೃತ್ಯವೊಂದನ್ನು ಕೂಡ ಮಾಡಿ ಗಮನಸೆಳೆದರು. ಕೊಹ್ಲಿಗೆ ಡ್ಯಾನ್ಸ್​ ಎಂದರೆ ಅಚ್ಚುಮೆಚ್ಚು. ಪಂದ್ಯದ ವೇಳೆಯೂ ಅವರು ಹಲವು ಬಾರಿ ಡ್ಯಾನ್ಸ್​ ಮಾಡಿ ಪ್ರೇಕ್ಷಕರನ್ನು ರಂಜಿಸಿದ್ದಾರೆ.

ಹಲವರಿಗೆ ಸ್ಫೂರ್ತಿ

ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ ಅವರು ವಿಶ್ವ ಕ್ರಿಕೆಟ್​ನ ಅತ್ಯಂತ ಫಿಟ್​ ಆಗಿರುವ ಕ್ರಿಕೆಟಿಗ ಅವರ ಫಿಟ್​ನೆಸ್​ ಬಗ್ಗೆ ಬದ್ಧ ವೈರಿ ಪಾಕ್​ ತಂಡದ ಆಟಗಾರರು ಸೇರಿ ವಿಶ್ವದ ಅನೇಕರು ಸಲಾಂ ಹೊಡೆದಿದ್ದಾರೆ. ಅದೆಷ್ಟೋ ಕ್ರಿಕೆಟ್‌ ಆಟಗಾರರಿಗೆ ಅವರು ಫಿಟ್‌ನೆಸ್‌ ವಿಚಾರದಲ್ಲಿಯೂ ಸ್ಫೂರ್ತಿಯಾಗಿದ್ದಾರೆ. ಇತರ ಆಟಗಾರರಂತೆ ವಿರಾಟ್ ಕೊಹ್ಲಿ ಗಾಯಗೊಂಡು ತಂಡದಿಂದ ಹೊರಗುಳಿದ ನಿದರ್ಶನ ಇದುವರೆಗೂ ಕಂಡುಬಂದಿಲ್ಲ. ಕ್ರಿಕೆಟ್​ ಆಡಲು ಆರಂಭಿಸಿದ ದಿನದಿಂದಲೂ ಕೊಹ್ಲಿ ತಮ್ಮ ಫಿಟ್​ನೆಸ್​ ಬಗ್ಗೆ ವಿಶೇಷ ಕಾಳಜಿ ವಹಿಸಿಕೊಂಡು ಕ್ರಿಕೆಟ್​ನಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ Virat Kohli: ಐಸಿಸಿ ವರ್ಷದ ಏಕದಿನ ಆಟಗಾರ ಪ್ರಶಸ್ತಿ ಸ್ವೀಕರಿಸಿದ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ(Virat Kohli) ಅವರು ಐಸಿಸಿ ವರ್ಷದ(ICC ODI Player Of The Year 2023) ಏಕದಿನ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಭಾನುವಾರ ಕೊಹ್ಲಿ ಈ ಪ್ರಶಸ್ತಿ ಸ್ವೀಕರಿಸಿದರು. ಈ ಮೂಲಕ ವೃತ್ತಿಜೀವನದಲ್ಲಿ ಮತ್ತೊಂದು ಬೃಹತ್ ಉತ್ತುಂಗಕ್ಕೆ ಏರಿದ್ದಾರೆ. ಟಿ20 ವಿಶ್ವಕಪ್​ ಆಡುವ ಸಲುವಾಗಿ ನ್ಯೂಯಾರ್ಕ್​ನಲ್ಲಿರು ಕೊಹ್ಲಿ ಈ ಪ್ರಶಸ್ತಿಯನ್ನು ಇಲ್ಲಿಯೇ ಸ್ವೀಕರಿಸಿದ್ದಾರೆ. ಇದರ ವಿಡಿಯೊವನ್ನು ಐಸಿಸಿ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದೆ. 2012, 2017, 2018 ರಲ್ಲಿಯೂ ಕೊಹ್ಲಿ ಈ ಪ್ರಶಸ್ತಿ ಪಡೆದಿದ್ದರು.

35 ವರ್ಷದ ಕೊಹ್ಲಿ 2023 ರಲ್ಲಿ 27 ಏಕದಿನ ಪಂದ್ಯಗಳಿಂದ 24 ಇನ್ನಿಂಗ್ಸ್‌ಗಳಲ್ಲಿ ಆರು ಶತಕಗಳು ಮತ್ತು ಎಂಟು ಅರ್ಧಶತಕಗಳೊಂದಿಗೆ 72.47 ರ ಸರಾಸರಿ ಮತ್ತು 99.13 ರ ಸ್ಟ್ರೈಕ್ ರೇಟ್‌ನಲ್ಲಿ 1,377 ರನ್ ಗಳಿಸಿದ್ದಾರೆ. ಈ ಪೈಕಿ ಗರಿಷ್ಠ ಸ್ಕೋರ್ 166* ಆಗಿತ್ತು. ಏಷ್ಯಾ ಕಪ್ 2023 ರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಿರ್ಣಾಯಕ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 94 ಎಸೆತಗಳಲ್ಲಿ ಅಜೇಯ 122* ರನ್ ಗಳಿಸಿದ್ದರು.

ಕಳೆದ ವರ್ಷ ತವರಿನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ, ವಿರಾಟ್ 11 ಪಂದ್ಯಗಳಲ್ಲಿ 95.62 ಸರಾಸರಿಯಲ್ಲಿ 765 ರನ್‌ಗಳನ್ನು ಗಳಿಸಿದ್ದರು. ಇದರಲ್ಲಿ ಮೂರು ಶತಕಗಳು, ಆರು ಅರ್ಧ ಶತಕಗಳು ದಾಖಲಾಗಿತ್ತು. ಈ ಬಾರಿಯ ಐಪಿಎಲ್​ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದರು. ಇದೀಗ ಟಿ20 ವಿಶ್ವಕಪ್​ ಆಡಲು ಸಜ್ಜಾಗಿದ್ದಾರೆ.

Continue Reading

ಕ್ರೀಡೆ

Venkatesh Iyer Marriage: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ವೆಂಕಟೇಶ್​ ಅಯ್ಯರ್​

Venkatesh Iyer Marriage: ಕೆಕೆಆರ್​ ತಂಡದ ವೆಂಕಟೇಶ್​ ಅಯ್ಯರ್​(Venkatesh Iyer Marriage) ಅವರು ತಮ್ಮ ಬಹುಕಾಲದ ಗೆಳತಿ ಶೃತಿ ರಘುನಾಥನ್(Shruti Raghunathan) ಅವರೊಂದಿಗೆ ದಾಂಪತ್ಯ ಬದುಕಿಗೆ ಅಡಿಯಿರಿಸಿದ್ದಾರೆ.

VISTARANEWS.COM


on

Venkatesh Iyer Marriage
Koo

ಬೆಂಗಳೂರು​: ಟೀಮ್​ ಇಂಡಿಯಾದ ಕ್ರಿಕೆಟಿಗ, ಕೆಕೆಆರ್​ ತಂಡದ ಸೂಪರ್​ ಸ್ಟಾರ್​ ವೆಂಕಟೇಶ್​ ಅಯ್ಯರ್​(Venkatesh Iyer Marriage) ಅವರು ತಮ್ಮ ಬಹುಕಾಲದ ಗೆಳತಿ ಶೃತಿ ರಘುನಾಥನ್(Shruti Raghunathan) ಅವರೊಂದಿಗೆ ದಾಂಪತ್ಯ ಬದುಕಿಗೆ ಅಡಿಯಿರಿಸಿದರು. ಭಾನುವಾರ ಈ ಜೋಡಿಯ ವಿವಾಹ ಸಂಪ್ರದಾಯಬದ್ಧವಾಗಿ ನೆರವೇರಿತು. ಮದುವೆಯ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ಕೆಕೆಆರ್​ ಫ್ರಾಂಚೈಸಿ ಮತ್ತು ತಂಡದ ಸಹ ಆಟಗಾರರು ಸೇರು ಅನೇಕ ಮಾಜಿ ಮತ್ತು ಹಾಲಿ ಕ್ರಿಕೆಟಿಗರು ಈ ಜೋಡಿಗೆ ಶುಭ ಹಾರೈಸಿದ್ದಾರೆ.

ಕಳೆದ ವರ್ಷ ನವೆಂಬರ್ 21, 2023ರಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಸಪ್ತಪದಿ ತುಳಿದಿದ್ದಾರೆ. ವೆಂಕಟೇಶ್​ ಅಯ್ಯರ್ ಈ ಬಾರಿಯ ಐಪಿಎಲ್​ ಟೂರ್ನಿಯಲ್ಲಿ ಚಾಂಪಿಯನ್​ ಪಟ್ಟ ಅಲಂಕರಿಸಿದ ಕೆಕೆಆರ್ ತಂಡದ ಸದ್ಯನಾಗಿದ್ದಾರೆ. ಈ ಬಾರಿ 14 ಪಂದ್ಯಗಳನ್ನಾಡಿ 370 ರನ್​ ಬಾರಿಸಿದ್ದಾರೆ. ಫೈನಲ್​ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಇದನ್ನೂ ಓದಿ T20 World Cup 2024 : ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಕ್ರಿಕೆಟಿಗರು ಈಗ ಎಲ್ಲಿದ್ದಾರೆ?

ವರದಿಗಳ ಪ್ರಕಾರ ಶ್ರುತಿ ಅವರು ಪಿಎಸ್​ಜಿ ಕಾಲೇಜ್ ಆಫ್ ಆರ್ಟ್ಸ್ ಆ್ಯಂಡ್​ ಸೈನ್ಸ್‌ನಿಂದ ಬಿಕಾಂ ಪದವಿ ಪೂರ್ಣಗೊಳಿಸಿದ್ದಾರೆ. ಭಾರತದ NIFTನಿಂದ ಫ್ಯಾಷನ್ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿರುವ ಲೈಫ್‌ಸ್ಟೈಲ್ ಇಂಟರ್‌ನ್ಯಾಶನಲ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಮರ್ಚಂಡೈಸ್ ಪ್ಲಾನರ್ ಆಗಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.

29 ವರ್ಷದ ವೆಂಕಟೇಶ್​ ಅಯ್ಯರ್​ ಅವರು ಭಾರತ ಪರ 2 ಏಕದಿನ, 9 ಟಿ20 ಪಂದ್ಯಗಳನ್ನಾಡಿದ್ದಾರೆ. ಏಕದಿನದಲ್ಲಿ 24 ಮತ್ತು ಟಿ20ಯಲ್ಲಿ 133 ರನ್​ ಬಾರಿಸಿದ್ದಾರೆ. ಐಪಿಎಲ್​ನಲ್ಲಿ 50 ಪಂದ್ಯಗಳನ್ನು ಆಡಿ 1326 ರನ್​ ಗಳಿಸಿದ್ದಾರೆ. ಒಂದು ಶತಕ ಕೂಡ ಬಾರಿಸಿದ್ದಾರೆ. ಐಪಿಎಲ್​ನಲ್ಲಿ ಸಿಕ್ಕ ಯಶಸ್ಸು ಅವರಿಗೆ ಟೀಮ್​ ಇಂಡಿಯಾ ಪರ ಸಿಗಲಿಲ್ಲ. ಮಧ್ಯಮ ವೇಗಿಯಾಗಿರುವ ವೆಂಕಿ, ಐಪಿಎಲ್​ನಲ್ಲಿ 3, ಭಾರತ ಪರ ಟಿ20ಯಲ್ಲಿ 5 ವಿಕೆಟ್​ ಪಡೆದಿದ್ದಾರೆ.

Continue Reading
Advertisement
Bangalore Rural Lok Sabha Constituency
ಪ್ರಮುಖ ಸುದ್ದಿ5 mins ago

Bangalore Rural Lok Sabha Constituency : ಡಿ.ಕೆ ಸುರೇಶ್​​ ನಾಗಾಲೋಟಕ್ಕೆ ಡಾ. ಮಂಜುನಾಥ್​ ಅಡ್ಡಿಯಾಗುವ ಆತಂಕ

Arvind Kejriwal
ದೇಶ31 mins ago

Arvind Kejriwal: ಮಧ್ಯಂತರ ಜಾಮೀನು ಅವಧಿ ಮುಗಿದು ಜೈಲಿಗೆ ಮರಳಿದ ಅರವಿಂದ್‌ ಕೇಜ್ರಿವಾಲ್‌; ಜೂ. 5ರ ತನಕ ನ್ಯಾಯಾಂಗ ಬಂಧನ

Bangalore North Lok Sabha Constituency
ದೇಶ35 mins ago

Bangalore North Lok Sabha Constituency : ಕ್ಷೇತ್ರ ಬದಲಾಯಿಸಿದ ಶೋಭಾ ಕರಂದ್ಲಾಜೆಗೆ ಒಲಿಯವುದೇ ಬೆಂಗಳೂರು ಉತ್ತರ

Congress leader Celebration
ಕರ್ನಾಟಕ38 mins ago

Congress leader Celebration: ತಲ್ವಾರ್ ಹಿಡಿದು ಕೇಕ್ ಕಟ್ ಮಾಡಿದ ಕಾಂಗ್ರೆಸ್‌ ಮುಖಂಡ; ವಿಡಿಯೊ ವೈರಲ್‌

Karnataka Weather Forecast
ಮಳೆ1 hour ago

Karnataka Weather : ಕೋಲಾರದಲ್ಲಿ ಅಬ್ಬರಿಸಿದ ವರುಣ; ಒಳನಾಡಿನಲ್ಲಿ ತಾಪಮಾನ ಇಳಿಕೆ

Exit Polls
ವಾಣಿಜ್ಯ1 hour ago

Exit Polls: ಚುನಾವಣೋತ್ತರ ಸಮೀಕ್ಷೆ ಪ್ರಕಟವಾದ ಬೆನ್ನಲ್ಲೇ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಜಿಗಿತ ಸಾಧ್ಯತೆ

Raichur Lok Sabha Constituency
ರಾಯಚೂರು2 hours ago

Raichur Lok Sabha Constituency: ರಾಯಚೂರಿನಲ್ಲಿ ನಾಯಕರ ನಡುವಿನ ಕಾಳಗದಲ್ಲಿ ಯಾರು ರಾಜ?

Accident Case
ಕ್ರೈಂ2 hours ago

Accident Case : ಕರೆಂಟ್‌ ಶಾಕ್‌ಗೆ ಕಂಬದಲ್ಲೇ ಕಾರ್ಮಿಕನ ನರಳಾಟ; ಭೀಕರ ಅಪಘಾತಕ್ಕೆ ಇಬ್ಬರು ಬಲಿ

Lok Sabha Election 2024
ಕರ್ನಾಟಕ2 hours ago

Lok Sabha Election 2024: ಮೈಸೂರು ಕ್ಷೇತ್ರದಲ್ಲಿ ಗೆಲುವು ಯಾರಿಗೆ? ಶ್ವಾನದಿಂದ ಅಚ್ಚರಿಯ ಭವಿಷ್ಯ!

Aam Panna Recipe
ಆಹಾರ/ಅಡುಗೆ2 hours ago

Aam Panna Recipe: ಆಮ್‌ ಪನ್ನಾ! ಮಾವಿನಕಾಯಿಯ ಅದ್ಭುತ ಪೇಯ ಇದು; ನೀವೂ ಮಾಡಿ ನೋಡಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ9 hours ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 day ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ3 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ5 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು5 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ6 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 week ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ2 weeks ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

ಟ್ರೆಂಡಿಂಗ್‌