Pro Kabaddi | ಯು ಮುಂಬಾ ಆರ್ಭಟಕ್ಕೆ ಮಂಕಾದ ತೆಲುಗು ಟೈಟಾನ್ಸ್​ - Vistara News

ಪ್ರೊ ಕಬಡ್ಡಿ

Pro Kabaddi | ಯು ಮುಂಬಾ ಆರ್ಭಟಕ್ಕೆ ಮಂಕಾದ ತೆಲುಗು ಟೈಟಾನ್ಸ್​

ರೇಡಿಂಗ್​ ಮತ್ತು ಡಿಫೆಂಡಿಂಗ್​ನಲ್ಲಿ ಸರ್ವಾಂಗೀಣ ಪ್ರದರ್ಶನ ತೋರಿದ ಯು ಮುಂಬಾ ತಂಡ ತೆಲುಗು ಟೈಟಾನ್ಸ್​ ತಂಡವನ್ನು 40-37 ಅಂಕದಿಂದ ಮಣಿಸಿದೆ.

VISTARANEWS.COM


on

mumba
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ರೇಡಿಂಗ್​ ಮತ್ತು ಡಿಫೆಂಡಿಂಗ್​ನಲ್ಲಿ ಸರ್ವಾಂಗೀಣ ಪ್ರದರ್ಶನ ತೋರಿದ ಯು ಮುಂಬಾ ತಂಡ ತೆಲುಗು ಟೈಟಾನ್ಸ್ (Pro Kabaddi)​ ವಿರುದ್ಧ 40-37 ಅಂಕಗಳ ಅಂತರದಿಂದ ಗೆಲುವು ಸಾಧಿಸಿದೆ. ಮುಂಬಾ ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಸದ್ಯ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

ಶ್ರೀ ಛತ್ರಪತಿ ಶಿವಾಜಿ ಸ್ಪೋರ್ಟ್ಸ್​ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಬುಧವಾರದ ಈ ಮುಖಾಮುಖಿಯಲ್ಲಿ ಪಂದ್ಯದ ಮೊದಲಾರ್ಥದಲ್ಲಿ ಮುಂಬಾ 18-14 ಅಂತರದ ಮುನ್ನಡೆ ಸಾಧಿಸಿತು. ಬಳಿಕ ದ್ವಿತೀಯಾರ್ಧದಲ್ಲಿಯೂ ಮಿಂಚಿದ ಮುಂಬಾ 3 ಅಂಕದ ಮುನ್ನಡೆಯಿಂದ ಮೇಲುಗೈ ಸಾಧಿಸಿತು. ಮುಂಬಾ ಪರ ಆಶೀಸ್​(12), ಸುರೀಂದರ್​(4), ಹೈದರ್​ ಅಲಿ (4) ಉತ್ತಮ ಪ್ರದರ್ಶನ ತೋರಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ತೆಲುಗು ಪರ ಬಾಹುಬಲಿ ಖ್ಯಾತಿಯ ಸಿದ್ಧಾರ್ಥ್ ದೇಸಾಯಿ(18) ಏಕಾಂಗಿ ಹೋರಾಟ ನಡೆಸಿದರು. ಇವರಿಗೆ ಪರ್​ವೇಶ್​(8) ಉತ್ತಮ ಬೆಂಬಲ ನೀಡಿದರೂ ತಂಡದ ಉಳಿದ ಆಟಗಾರರಿಂದ ನಿರೀಕ್ಷಿತ ಪ್ರದರ್ಶನ ಕಂಡು ಬಂದಿಲ್ಲ. ಇದರಿಂದ ತಂಡ ಸೋಲಿನ ಸುಳಿಗೆ ಸಿಲುಕಿತು.

ಇದನ್ನೂ ಓದಿ | Pro Kabaddi | ಬೆಂಗಾಲ್​ ವಾರಿಯರ್ಸ್ ಮತ್ತು ತಮಿಳ್​ ತಲೈವಾಸ್​ ಪಂದ್ಯ ಟೈ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

Latest

Pro Kabaddi Final: ಚೊಚ್ಚಲ ಟ್ರೋಫಿ ಗೆದ್ದ ಪುಣೇರಿ ಪಲ್ಟಾನ್‌

10ನೇ ಆವೃತ್ತಿ ಪ್ರೊ ಕಬಡ್ಡಿಯ ಫೈನಲ್(Pro Kabaddi Final)​ ಪಂದ್ಯದಲ್ಲಿ ಪುಣೇರಿ ಪಲ್ಟಾನ್‌ ಗೆದ್ದು ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿದೆ.

VISTARANEWS.COM


on

Puneri Paltan vs Haryana Steelers
Koo

ಹೈದರಾಬಾದ್​: ಹಾವು-ಏಣಿ ಆಟದಂತೆ ಅತ್ಯಂತ ಜಿದ್ದಾಜಿದ್ದಿನಿಂದ ಸಾಗಿದ 10ನೇ ಆವೃತ್ತಿ ಪ್ರೊ ಕಬಡ್ಡಿಯ ಫೈನಲ್(Pro Kabaddi Final)​ ಪಂದ್ಯದಲ್ಲಿ ಪುಣೇರಿ ಪಲ್ಟಾನ್‌(Puneri Paltan) 28-25 ಅಂಕಗಳ ಅಂತರದಿಂದ ಹರಿಯಾಣ ಸ್ಟೀಲರ್ಸ್‌(Haryana Steelers) ತಂಡವನ್ನು ಮಣಿಸಿ ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿದೆ. ಪ್ರಶಸ್ತಿ ಮೊತ್ತವಾಗಿ 3 ಕೋಟಿ ರೂ. ನಗದು ಪುರಸ್ಕಾರ ಬಾಚಿಕೊಂಡಿದೆ. ರನ್ನರ್ ಅಪ್​ ಹರಿಯಾಣ ತಂಡಕ್ಕೆ 1.8 ಕೋಟಿ ರೂ. ಬಹುಮಾನ ಲಭಿಸಿತು.

ಹೈದರಾಬಾದ್‌ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಉಭಯ ತಂಡಗಳ ಈ ಫೈನಲ್​ ಫೈಟ್​ ಆರಂಭದಿಂದ ಹಿಡಿದು ಕೊನೆಯ ತನಕವೂ ರೋಚಕತೆ ಮತ್ತು ಕುತೂಹಲಕ್ಕೆ ಸಾಕ್ಷಿಯಾಯಿತು. ಇತ್ತಂಡಗಳ ಆಟಗಾರರು ಕೂಡ ಅಂಕ ಗಳಿಕೆಗಾಗಿ ತೀವ್ರ ಪೈಪೋಟಿ ನಡೆಸಿದರು. ಇವರ ಜತೆಗೆ ಕೋಚ್​ಗಳು ಕೂಡ ಅಗ್ರೆಸಿವ್​ ಆಗಿ ಕಂಡುಬಂದರು.

ಟರ್ನಿಂಗ್​ ಪಾಯಿಂಟ್​


ಮೊದಲಾರ್ಧದ 20 ನಿಮಿಷದ ಆಟದಲ್ಲಿ ಕೊನೆಯ 1.28 ನಿಮಿಷದವರೆಗೂ ಪುಣೆ ತಂಡ ಹಿನ್ನಡೆಯಲ್ಲಿತ್ತು. ಆದರೆ, ಈ ವೇಳೆ ಡು ಆರ್​ ಡೈ ರೇಟ್​ನಲ್ಲಿ ಪಂಕಜ್​ ಮೋಹಿತೆ ಅವರು ಪಾದರಸದಂತಹ ರೇಡಿಂಗ್​ ದಾಳಿ ನಡೆಸಿ ಒಂದೇ ಬಾರಿಗೆ 5 ಅಂಕ ಕಲೆಹಾಕಿ ಪಂದ್ಯದ ಗತಿಯನ್ನೇ ಬದಲಿಸಿದರು. ಇದು ಪಂದ್ಯ ಟರ್ನಿಂಗ್​ ಪಾಯಿಂಟ್​ ಕೂಡ ಆಯಿತು. ಅವರ ಈ ರೇಡಿಂಗ್​ ಸಾಹಸದಿಂದ ಪುಣೆ ಭರ್ಜರಿ ಲೀಡ್​ ಪಡೆಯಿತು. ಮೊದಲಾರ್ಧ ಮುಕ್ತಾಯಕ್ಕೆ 13-10 ಅಂಕದ ಮುನ್ನಡೆ ಸಾಧಿಸಿತು. ಇದೇ ಮುನ್ನಡೆಯನ್ನು ಪಂದ್ಯದಕ್ಕೂ ಕಾಯ್ದುಕೊಂಡು ಪ್ರಶಸ್ತಿ ಎತ್ತಿಹಿಡಿಯಿತು.

ಕನ್ನಡಿಗ ಕೋಚ್‌ ಬಿ.ಸಿ. ರಮೇಶ್‌ ಮಾರ್ಗದರ್ಶನ


ಕನ್ನಡಿಗ ಕೋಚ್‌ ಬಿ.ಸಿ. ರಮೇಶ್‌ ಮಾರ್ಗದರ್ಶನದಲ್ಲಿ ಪುಣೇರಿ ತಂಡ ಈ ಆವೃತ್ತಿಯ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿ ಆಡಿದ 22 ಪಂದ್ಯಗಳಲ್ಲಿ 17 ಗೆಲುವುಗಳೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿತ್ತು. ತನ್ನ ಖ್ಯಾತಿಗೆ ತಕ್ಕಂತೆ ಫೈನಲ್​ನಲ್ಲಿಯೂ ಇದೇ ಪ್ರದರ್ಶನ ತೋರುವ ಮೂಲಕ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಕಳೆದ ಬಾರಿಯೂ ಪುಣೇರಿ ತಂಡ ಫೈನಲ್​ ಆಡಿತ್ತು. ಆದರೆ ಅಲ್ಲಿ ಜೈಪುರ ವಿರುದ್ಧ ಸೋತು ರನ್ನರ್​ ಅಪ್​ ಸ್ಥಾನ ಪಡೆದಿತ್ತು. ಈ ಬಾರಿ ಪ್ರಶಸ್ತಿಗೆಲ್ಲುವಲ್ಲಿ ಯಶಸ್ಸು ಕಂಡಿತು.

ಖ್ಯಾತ ಡಿಫೆಂಡರ್‌​ ಮೊಹಮ್ಮದ್ರೇಜಾ ಚಿಯಾನೆಹ್ ಅವರು ಮೊದಲಾರ್ಧದ ಆಟದಲ್ಲಿ ವಿಫಲಗೊಂಡರೂ ಕೂಡ ದ್ವಿತೀಯಾರ್ಧದಲ್ಲಿ ಶ್ರೇಷ್ಠ ಆಟ ಪ್ರದರ್ಶಿಸಿ ತಂಡಕ್ಕೆ ನೆರವಾದರು. ಮೋಹಿತ್​ ಗೋಯತ್​ ಅವರು ಪ್ರೊ ಕಬಡ್ಡಿ ಆವೃತ್ತಿಯಲ್ಲಿ 400 ರೇಡಿಂಗ್​ ಅಂಕಗಳನ್ನು ಪೂರ್ತಿಗೊಳಿಸಿದ ದಾಖಲೆಯನ್ನು ಕೂಡ ಈ ಪಂದ್ಯದಲ್ಲಿ ಬರೆದರು.

ಹರ್ಯಾಣ ಪರ ರೇಡರ್​ ಶಿವಂ ತಕ್ಕ ಮಟ್ಟಿನ ಆಟ ಪ್ರದರ್ಶಿಸಿದರು. ಅವರು 6 ಅಂಕ ಗಳಿಸಿದರು. ನಾಯಕ ವಿನಯ್​ ಕೇವಲ 3 ಅಂಕಕ್ಕೆ ಸೀಮಿತರಾದರು. ಅವರ ವೈಫಲ್ಯ ತಂಡಕ್ಕೆ ಭಾರೀ ಹಿನ್ನಡೆ ಉಂಟುಮಾಡಿತು. ಪುಣೇರಿ ಪರ ನಾಯಕ ಅಸ್ಲಾಂ ಇನಾಮ್ದಾರ್‌ 4, ಪಂಕಜ್​ ಮೋಹಿತೆ 9 ಅಂಕ ಗಳಿಸಿ ಗೆಲುವಿನ ಹೀರೊ ಎನಿಸಿದರು.

Continue Reading

ಕ್ರೀಡೆ

Pro Kabaddi Final: ಕೆಲವೇ ಕ್ಷಣದಲ್ಲಿ ಫೈನಲ್; ಚೊಚ್ಚಲ ಪ್ರಶಸ್ತಿಗಾಗಿ ಪುಣೇರಿ-ಹರಿಯಾಣ ಫೈಟ್​

ಹೈದರಾಬಾದ್‌ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ಪ್ರಶಸ್ತಿ ಕಾಳಗದಲ್ಲಿ ಪುಣೇರಿ ಪಲ್ಟಾನ್‌(Puneri Paltan) ಮತ್ತು ಹರಿಯಾಣ ಸ್ಟೀಲರ್ಸ್‌(Haryana Steelers) ಕಾದಾಟ ನಡೆಸಲಿದೆ.

VISTARANEWS.COM


on

Pro Kabaddi Final
Koo

ಹೈದರಾಬಾದ್​: 10ನೇ ಆವೃತ್ತಿ ಪ್ರೊ ಕಬಡ್ಡಿಯ ಫೈನಲ್(Pro Kabaddi Final)​ ಪಂದ್ಯ ಇನ್ನೇನು ಕೆಲವೇ ಕ್ಷಣದಲ್ಲಿ ಆರಂಭಗೊಳ್ಳಲಿದೆ. ಹೈದರಾಬಾದ್‌ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ಪ್ರಶಸ್ತಿ ಕಾಳಗದಲ್ಲಿ ಪುಣೇರಿ ಪಲ್ಟಾನ್‌(Puneri Paltan) ಮತ್ತು ಹರಿಯಾಣ ಸ್ಟೀಲರ್ಸ್‌(Haryana Steelers) ಕಾದಾಟ ನಡೆಸಲಿದೆ. ಇಲ್ಲಿ ಯಾರೇ ಗೆದ್ದರು ಕೂಡ ಚೊಚ್ಚಲ ಪ್ರಶಸ್ತಿ ಗೆದ್ದ ಸಾಧನೆ ಮಾಡಲಿದ್ದಾರೆ.

ಬುಧವಾರ ನಡೆದಿದ್ದ 2 ಸೆಮಿಫೈನಲ್‌ನಲ್ಲಿ ಪುಣೆ ತಂಡ 3 ಬಾರಿ ಚಾಂಪಿಯನ್ ಪಾಟ್ನಾ ಪೈರೇಟ್ಸ್‌ ವಿರುದ್ಧ 37-21 ಅಂಕಗಳಿಂದ, ಹರ್ಯಾಣ ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ 31-27 ಅಂಕಗಳಿಂದ ಗೆಲುವು ಸಾಧಿಸಿ ಪ್ರಶಸ್ತಿ ಸುತ್ತಿಗೇರಿದವು.

ಪುಣೇರಿ ತಂಡ ಈ ಆವೃತ್ತಿಯ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿ ಆಡಿದ 22 ಪಂದ್ಯಗಳಲ್ಲಿ 17 ಗೆಲುವುಗಳೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿತ್ತು. ಕನ್ನಡಿಗ ಕೋಚ್‌ ಬಿ.ಸಿ. ರಮೇಶ್‌ ಮಾರ್ಗ ದರ್ಶನವೂ ಕೂಡ ಈ ತಂಡದ ಯಶಸ್ಸಿಗೆ ಪ್ರಮುಖ ಕಾರಣ. ನಾಯಕ ಅಸ್ಲಾಂ ಇನಾಮ್ದಾರ್‌, ಪಂಕಜ್​ ಅಭಿನೇಶ್​, ಮೊಹಮ್ಮದ್ರೇಜಾ ಚಿಯಾನೆಹ್ ಮತ್ತು ಮೋಹಿತ್​ ತಂಡದ ಪ್ರಮುಖ ಆಟಗಾರರಾಗಿದ್ದಾರೆ.

ಇದನ್ನೂ ಓದಿ Pro Kabaddi: ಹಾಲಿ ಚಾಂಪಿಯನ್​ ಜೈಪುರಕ್ಕೆ ಸೋಲು; ಪುಣೇರಿ-ಹರ್ಯಾಣ ಫೈನಲ್​ ಫೈಟ್​

ಹರಿಯಾಣ ತಂಡ ಇದೇ ಮೊದಲ ಬಾರಿಗೆ ಫೈನಲ್​ ಪಂದ್ಯ ಆಡುತ್ತಿದೆ. ಜತೆಗೆ ಹಾಲಿ ಚಾಂಪಿಯನ್​ ಜೈಪುರಕ್ಕೆ ಸೋಲುಣಿಸಿದ್ದು ಕೂಡ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಪುಣೇರಿ ಪಲ್ಟಾನ್​ಗೆ ಇದು ಸತತ ಎರಡನೇ ಫೈನಲ್​ ಪಂದ್ಯ. ಕಳೆದ ಬಾರಿಯೂ ಫೈನಲ್​ ಪ್ರವೇಶಿಸಿತ್ತು. ಆದರೆ ಇಲ್ಲಿ ಸೋತು ರನ್ನರ್​ ಅಪ್​ ಸ್ಥಾನಕ್ಕೆ ತೃತ್ತಿಪಟ್ಟಿತ್ತು. ಫೈನಲ್‌ನಲ್ಲಿ ಪ್ರಶಸ್ತಿ ಗೆದ್ದ ತಂಡ 3 ಕೋಟಿ ರೂ. ನಗದು ಪುರಸ್ಕಾರ ಬಾಚಿಕೊಳ್ಳಲಿದೆ. ರನ್ನರ್‌ ಅಪ್‌ ತಂಡಕ್ಕೆ 1.8 ಕೋಟಿ ರೂ. ಬಹುಮಾನ ಲಭಿಸಲಿದೆ.

ಮುಖಾಮುಖಿ


ಒಟ್ಟು ಪಂದ್ಯಗಳು 14

ಪುಣೇರಿ ಜಯ 8

ಹರಿಯಾಣ ಜಯ 5

ಪಂದ್ಯ ಟೈ 1

Continue Reading

ಕ್ರೀಡೆ

Pro Kabaddi: ಹಾಲಿ ಚಾಂಪಿಯನ್​ ಜೈಪುರಕ್ಕೆ ಸೋಲು; ಪುಣೇರಿ-ಹರ್ಯಾಣ ಫೈನಲ್​ ಫೈಟ್​

ಮಾರ್ಚ್​ 1ರಂದು ನಡೆಯುವ 10ನೇ ಆವೃತ್ತಿ ಪ್ರೊ ಕಬಡ್ಡಿ(Pro Kabaddi) ಲೀಗ್‌ನ ಫೈನಲ್ ಕಾಳಗದಲ್ಲಿ ಪುಣೇರಿ ಪಲ್ಟನ್‌(Puneri Paltan) ಮತ್ತು ಇದೇ ಮೊದಲ ಬಾರಿಗೆ ಫೈನಲ್​ ಪ್ರವೇಶಿಸಿದ ಹರ್ಯಾಣ ಸ್ಟೀಲರ್ಸ್(Haryana Steelers) ಪ್ರಶಸ್ತಿಗಾಗಿ ಸೆಣಸಾಡಲಿದೆ.

VISTARANEWS.COM


on

Puneri Paltan vs Haryana Steelers
Koo

ಹೈದರಾಬಾದ್‌: 10ನೇ ಆವೃತ್ತಿ ಪ್ರೊ ಕಬಡ್ಡಿ(Pro Kabaddi) ಲೀಗ್‌ನ ಫೈನಲ್(Pro Kabaddi Final)​ ಪಂದ್ಯಕ್ಕೆ ವೇದಿಕೆ ಸಿದ್ದಗೊಂಡಿದೆ. ಮಾರ್ಚ್​ 1ರಂದು ನಡೆಯುವ ಪ್ರಶಸ್ತಿ ಕಾಳಗದಲ್ಲಿ ಪುಣೇರಿ ಪಲ್ಟನ್‌(Puneri Paltan) ಮತ್ತು ಇದೇ ಮೊದಲ ಬಾರಿಗೆ ಫೈನಲ್​ ಪ್ರವೇಶಿಸಿದ ಹರ್ಯಾಣ ಸ್ಟೀಲರ್ಸ್(Haryana Steelers) ಸೆಣಸಾಡಲಿದೆ.

ಬುಧವಾರ ಇಲ್ಲಿನ ಗಚ್ಚಿಬೌಲಿಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮೊದಲ ಸೆಮಿ ಫೈನಲ್​ ಪಂದ್ಯದಲ್ಲಿ ಆಡಲಿಳಿದ ಪುಣೇರಿ ಪಲ್ಟನ್‌ ತಂಡ ಪಾಟ್ನಾ ಪೈರೇಟ್ಸ್‌(Patna Pirates) ತಂಡವನ್ನು 37-21 ಅಂಕಗಳ ಅಂತರದಿಂದ ಮಣಿಸಿ ಸತತ 2ನೇ ಬಾರಿಗೆ ಫೈನಲ್​ ಪ್ರವೇಶಿಸಿದ ಸಾಧನೆ ಮಾಡಿತು. ದ್ವಿತೀಯ ಸೆಮಿಫೈನಲ್​ನಲ್ಲಿ ಹಾಲಿ ಚಾಂಪಿಯನ್​ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡವನ್ನು 31-27 ಅಂತರದಿಂದ ಕೆಡವಿ ಹಾಕಿದ ಹರ್ಯಾಣ ಫೈನಲ್​ ಟಿಕೆಟ್​ ಗಿಟ್ಟಿಸಿಕೊಂಡಿತು.

3 ಬಾರಿ ಪ್ರಶಸ್ತಿ ಗೆದ್ದಿರುವ ಪಾಟ್ನಾ ಈ ಬಾರಿ 5ನೇ ಫೈನಲ್‌ ತವಕದಲ್ಲಿತ್ತು. ಆದರೆ ಸೆಮಿಯಲ್ಲಿ ಸೋತು ನಿರಾಸೆ ಅನುಭವಿಸಿತು. ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡು ಸೆಮಿಫೈನಲ್​ ತಲುಪಿದ್ದ ಪುಣೇರಿ ಪಲ್ಟನ್‌ ತನ್ನ ಖ್ಯಾತಿಗೆ ತಕ್ಕ ಪ್ರದರ್ಶನ ನೀಡಿ ಗಮನ ಸೆಳೆಯಿತು. ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದು ಸೆಮಿ ತಲುಪಿದ್ದ ಜೈಪುರ ತಂಡ ಎಲಿಮಿನೇಟರ್​ ಪಂದ್ಯವಾಡಿ ಬಂದಿದ್ದ ಹರ್ಯಾಣದ ಮುಂದೆ ತನ್ನ ಪ್ರರಾಕ್ರಮ ತೋರ್ಪಡಿಸುವಲ್ಲಿ ಎಡವಿತು. ಚೊಚ್ಚಲ ಫೈನಲ್‌ ಪ್ರವೇಶಿಸಿದ ಹರ್ಯಾಣ ಮೊದಲ ಕಪ್​ಗಾಗಿ ತವಕಿಸುತ್ತಿದೆ.

ಜಿದ್ದಾಜಿದ್ದಿನಿಂದ ಪೈಪೋಟಿ ಕಂಡ ದ್ವಿತೀಯ ಸೆಮಿ ಪಂದ್ಯದಲ್ಲಿ ಮೊದಲ ಅವಧಿಯಲ್ಲಿ ಹರ್ಯಾಣ 18-13 ಅಂಕದ ಮುನ್ನಡೆ ಸಾಧಿಸಿತು. ದ್ವಿತಿಯಾರ್ಧದಲ್ಲಿ ತಿರುಗಿ ಬಿದ್ದ ಜೈಪುರ ಸತತವಾಗಿ ಅಂಕಗಳಿಸಿ ತಿರುಗೇಟು ನೀಡಿತು. ಆದರೆ ಅಂತಿಮ ಮೂರು ನಿಮಿಷದ ಆಟದಲ್ಲಿ ತನ್ನ ತಪ್ಪನ್ನು ತಿದ್ದಿಕೊಂಡು ಎಚ್ಚೆತ್ತುಕೊಂಡ ಹರ್ಯಾಣ ಆಟಗಾರರು ರಕ್ಷಣಾತ್ಮ ಆಟದ ಮೂಲಕ ತಮ್ಮ ಮುನ್ನಡೆಯನ್ನು ಪಂದ್ಯದ ಕೊನೆಯವರೆಗೂ ಕಾಪಾಡಿಕೊಂಡು ಪಂದ್ಯದಲ್ಲಿ ಮೇಲುಗೈ ಸಾಧಿಸಿದರು. ಹರ್ಯಾಣ ಪರ ರೇಡರ್​ ವಿನಯ್​ 11 ಅಂಕ ಕಲೆಹಾಕಿ ಗೆಲುವಿನ ಹೀರೊ ಎನಿಸಿಕೊಂಡರು. ಇವರಿಗೆ ಮತ್ತೊಂದು ತುದಿಯಲ್ಲಿ ಶಿವಂ ಪತಾರೆ(7 ಅಂಕ) ಉತ್ತಮ ಬೆಂಬಲ ನೀಡಿದರು. ಜೈಪುರ ಪರ ಏಕಾಂಗಿಯಾಗಿ ಹೋರಾಟ ನಡೆಸಿದ ಅರ್ಜುನ್​ ದೇಸ್ವಾಲ್​ 14 ಅಂಕ ಗಳಿಸಿದರು. ಆದರೆ ಇವರಿಗೆ ಸಹ ಆಟಗಾರರಿಂದ ಉತ್ತಮ ಸಾಥ್​ ಸಿಗದ ಕಾರಣ ಇವರ ಈ ಆಟ ವ್ಯರ್ಥವಾಯಿತು.

ಇದನ್ನೂ ಓದಿ WPL 2024: ಬಲಿಷ್ಠ ಮುಂಬೈಗೆ ಸೋಲುಣಿಸಿ ಗೆಲುವಿನ ಖಾತೆ ತೆರೆದ ಯುಪಿ ವಾರಿಯರ್ಸ್

ಆಕ್ರಮಣಕಾರಿ ಆಟವಾಡಿದ ಪುಣೇರಿ


ಮೊದಲ ಸೆಮಿ ಪಂದ್ಯವಾದ ಪುಣೇರಿ ಪಲ್ಟನ್‌ ಮತ್ತು ಪಾಟ್ನಾ ಪೈರೇಟ್ಸ್‌ ನಡುವಣ ಪಂದ್ಯ ಮೊದಲಾರ್ಧದ ಅಂತಿಮ 8 ನಿಮಿಷದ ಆಟ ಬಾಕಿ ಇರುವವರೆಗೆ ಜಿದ್ದಾಜಿದ್ದಿನಿಂದ ಕೂಡಿತ್ತು. ಉಭಯ ತಂಡಗಳು ತೀವ್ರ ಪೈಪೋಟಿ ನಡೆಸಿ ಕೇವಲ ಒಂದು ಅಂಕದ ಮುನ್ನಡೆಯೊಂದಿಗೆ ಆಟವಾಡಿತ್ತು. ಆದರೆ, ಇನ್ನೇನು ಮೊದಲ ಅವಧಿಯ ಆಟ ಮುಕ್ತಾಯಗೊಳ್ಳುತ್ತದೆ ಎನ್ನುವಷ್ಟರಲ್ಲಿ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ ಪುಣೇರಿ ತಂಡದ ಆಟಗಾರರು 20-11 ಅಂತರದ ಅಂಕ ಕಲೆ ಹಾಕಿ 9 ಅಂಕದ ಮುನ್ನಡೆ ಸಾಧಿಸಿದರು.

ದ್ವಿತಿಯಾರ್ಧದಲ್ಲಿಯೂ ಇದೇ ಲಯವನ್ನು ಮುಂದುವರಿಸಿದ ಪುಣೇರಿ ಆಟಗಾರರು ಸತತವಾಗಿ ಅಂಕ ಗಳಿಸಿ ಎದುರಾಳಿ ಆಟಗಾರರಿಗೆ ಇನ್ನಿಲ್ಲದ ಒತ್ತಡ ಹೇರಿದರು. ಆಲ್‌ರೌಂಡರ್ ಅಸ್ಲಾಂ ಮುಸ್ತಫಾ ತಮ್ಮ ಆಲ್​ರೌಂಡರ್​ ಶೋ ನಿಂದ 7 ಪಾಯಿಂಟ್ ಕಲೆ ಹಾಕಿದರು. ಇವರಿಗೆ ರೇಡರ್​ ಪಂಕಜ್​ ಮೋಹಿತ್(7)​ ಮತ್ತು ಮತೋರ್ವ ಆಲ್​ರೌಂಡರ್​ ಮೊಹಮ್ಮದ್ರೇಜಾ ಚಿಯಾನೆಹ್(5) ಅಂಕ ಗಳಿಸಿ ಉತ್ತಮ ಸಾಥ್​ ನೀಡಿದರು.

ಉಳಿದಂತೆ ಮೋಹಿತ್​ ಗೋಯತ್​(4), ​ಅಭಿನೇಶ್ ನಾಡರಾಜನ್(3), ಸಂಕೇತ್ ಸಾವಂತ್(3) ಅಂಕ ಕಲೆ ಹಾಕಿ ತಂಡದ ಗೆಲುವಿನಲ್ಲಿ ತಮ್ಮ ಕೊಡುಗೆ ನೀಡಿದರು. ಪಾಟ್ನಾ ಪರ ತಾರಾ ರೇಡರ್​ಗಳಾದ​ ಸಚಿನ್(5) ಮತ್ತು ಮಂಜಿತ್(4)​​ ಅವರು ಈ ಪಂದ್ಯದಲ್ಲಿ ವೈಫಲ್ಯ ಕಂಡದ್ದು ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು.

Continue Reading

ಕ್ರೀಡೆ

Pro Kabaddi: ಪೈರೇಟ್ಸ್‌ ಮಣಿಸಿ ಫೈನಲ್​ ಪ್ರವೇಶಿಸಿದ ಪುಣೇರಿ ಪಲ್ಟನ್‌

10ನೇ ಆವೃತ್ತಿಯ ಪ್ರೊ ಕಬಡ್ಡಿ(Pro Kabaddi) ಲೀಗ್‌ನ ಸೆಮಿಫೈನಲ್​ ಪಂದ್ಯದಲ್ಲಿ ಪುಣೇರಿ ಪಲ್ಟನ್‌(Puneri Paltan) ತಂಡ ಪಾಟ್ನಾ ಪೈರೇಟ್ಸ್‌(Patna Pirates) ತಂಡವನ್ನು 37-21 ಅಂಕಗಳ ಅಂತರದಿಂದ ಮಣಿಸಿ ಸತತ 2ನೇ ಬಾರಿಗೆ ಫೈನಲ್​ ಪ್ರವೇಶಿಸಿದೆ.

VISTARANEWS.COM


on

Puneri Paltan vs Patna Pirates (1)
Koo

ಹೈದರಾಬಾದ್‌: 10ನೇ ಆವೃತ್ತಿ ಪ್ರೊ ಕಬಡ್ಡಿ(Pro Kabaddi) ಲೀಗ್‌ನಲ್ಲಿ ಪುಣೇರಿ ಪಲ್ಟನ್‌(Puneri Paltan) ಮೊದಲ ತಂಡವಾಗಿ ಫೈನಲ್​ಗೆ ಲಗ್ಗೆಯಿಟ್ಟಿದೆ. ಇಂದು(ಬುಧವಾರ) ನಡೆದ ಮೊದಲ ಸೆಮಿಫೈನಲ್​ ಕಾದಾಟದಲ್ಲಿ ಪಾಟ್ನಾ ಪೈರೇಟ್ಸ್‌(Patna Pirates) ತಂಡವನ್ನು 37-21 ಅಂಕಗಳ ಅಂತರದಿಂದ ಮಣಿಸಿ ಸತತ 2ನೇ ಬಾರಿಗೆ ಫೈನಲ್​ ಪ್ರವೇಶಿಸಿದ ಸಾಧನೆ ಮಾಡಿತು. ಕಳೆದ ಬಾರಿ ಜೈಪುರ ವಿರುದ್ಧದ ಫೈನಲ್​ನಲ್ಲಿ ಸೋತು ರನ್ನರ್‌ ಅಪ್​ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಫೈನಲ್​ನಲ್ಲಿ ಪುಣೇರಿ 2ನೇ ಸೆಮಿಫೈನಲ್‌ ಪಂದ್ಯವಾದ ಜೈಪುರ ಪಿಂಕ್‌ ಪ್ಯಾಂಥರ್ಸ್‌ ಹಾಗೂ ಹರ್ಯಾಣ ಸ್ಟೀಲರ್ಸ್‌ ತಂಡಗಳ ನಡುವಣ ವಿಜೇತರನ್ನು ಎದುರಿಸಲಿದೆ.

ಇಲ್ಲಿನ ಗಚ್ಚಿಬೌಲಿಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮೊದಲ ಸೆಮಿ ಪಂದ್ಯದಲ್ಲಿ ಆಡಲಿಳಿದ ಪುಣೇರಿ ಪಲ್ಟನ್‌ ಮತ್ತು ಪಾಟ್ನಾ ಪೈರೇಟ್ಸ್‌ ಮೊದಲಾರ್ಧದ ಅಂತಿಮ 8 ನಿಮಿಷದ ಆಟ ಬಾಕಿ ಇರುವವರೆಗೆ ಜಿದ್ದಾಜಿದ್ದಿನ ಪೈಪೋಟಿ ನಡೆಸಿ ಕೇವಲ ಒಂದು ಅಂಕದ ಮುನ್ನಡೆಯೊಂದಿಗೆ ಆಟವಾಡಿತ್ತು. ಆದರೆ, ಇನ್ನೇನು ಮೊದಲ ಅವಧಿಯ ಆಟ ಮುಕ್ತಾಯಗೊಳ್ಳುತ್ತದೆ ಎನ್ನುವಷ್ಟರಲ್ಲಿ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ ಪುಣೇರಿ ತಂಡದ ಆಟಗಾರರು 20-11 ಅಂತರದ ಅಂಕ ಕಲೆ ಹಾಕಿ 9 ಅಂಕದ ಮುನ್ನಡೆ ಸಾಧಿಸಿದರು.

ದ್ವಿತಿಯಾರ್ಧದಲ್ಲಿಯೂ ಇದೇ ಲಯವನ್ನು ಮುಂದುವರಿಸಿದ ಪುಣೇರಿ ಆಟಗಾರರು ಸತತವಾಗಿ ಅಂಕ ಗಳಿಸಿ ಎದುರಾಳಿ ಆಟಗಾರರಿಗೆ ಇನ್ನಿಲ್ಲದ ಒತ್ತಡ ಹೇರಿದರು. ಆಲ್‌ರೌಂಡರ್ ಅಸ್ಲಾಂ ಮುಸ್ತಫಾ ತಮ್ಮ ಆಲ್​ರೌಂಡರ್​ ಶೋ ನಿಂದ 7 ಪಾಯಿಂಟ್ ಕಲೆ ಹಾಕಿದರು. ಇವರಿಗೆ ರೇಡರ್​ ಪಂಕಜ್​ ಮೋಹಿತ್(7)​ ಮತ್ತು ಮತೋರ್ವ ಆಲ್​ರೌಂಡರ್​ ಮೊಹಮ್ಮದ್ರೇಜಾ ಚಿಯಾನೆಹ್(5) ಅಂಕ ಗಳಿಸಿ ಉತ್ತಮ ಸಾಥ್​ ನೀಡಿದರು. ಉಳಿದಂತೆ ಮೋಹಿತ್​ ಗೋಯತ್​(4), ​ಅಭಿನೇಶ್ ನಾಡರಾಜನ್(3), ಸಂಕೇತ್ ಸಾವಂತ್(3) ಅಂಕ ಕಲೆ ಹಾಕಿ ತಂಡದ ಗೆಲುವಿನಲ್ಲಿ ತಮ್ಮ ಕೊಡುಗೆ ನೀಡಿದರು.

3 ಬಾರಿ ಪ್ರಶಸ್ತಿ ಗೆದ್ದಿರುವ ಪಾಟ್ನಾ ಈ ಬಾರಿ 5ನೇ ಫೈನಲ್‌ ತವಕದಲ್ಲಿತ್ತು. ಆದರೆ ಸೆಮಿಯಲ್ಲಿ ಸೋತು ನಿರಾಸೆ ಅನುಭವಿಸಿತು. ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡು ಸೆಮಿಫೈನಲ್​ ತಲುಪಿದ್ದ ಪುಣೇರಿ ಪಲ್ಟನ್‌ ತನ್ನ ಖ್ಯಾತಿಗೆ ತಕ್ಕ ಪ್ರದರ್ಶನ ನೀಡಿ ಗಮನ ಸೆಳೆಯಿತು. ಪಾಟ್ನಾ ಪರ ತಾರಾ ರೇಡರ್​ಗಳಾದ​ ಸಚಿನ್(5) ಮತ್ತು ಮಂಜಿತ್(4)​​ ಅವರು ಈ ಪಂದ್ಯದಲ್ಲಿ ವೈಫಲ್ಯ ಕಂಡದ್ದು ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು.

Continue Reading
Advertisement
Water crisis Youth climbs mobile tower in Vijayapura
ವಿಜಯಪುರ3 mins ago

Water Crisis: ವಿಜಯಪುರದ ಗ್ರಾಮದಲ್ಲಿ ಕುಡಿಯುವ ನೀರಿಲ್ಲವೆಂದು ಮೊಬೈಲ್‌ ಟವರ್‌ ಏರಿದ ಯುವಕ!

Priyamani donate mechanical elephant
ಸಿನಿಮಾ3 mins ago

Actress Priyamani: ಕೇರಳದ ದೇವಾಲಯವೊಂದಕ್ಕೆ `ಯಾಂತ್ರಿಕ ಆನೆ’ ಉಡುಗೊರೆ ಕೊಟ್ಟ ಪ್ರಿಯಾಮಣಿ!

Murder Case Haveri newsMurder Case Haveri news
ಹಾವೇರಿ10 mins ago

Murder Case : ತನ್ನನ್ನು ಮದುವೆಯಾಗಲು ನಿರಾಕರಿಸಿದ ಸೊಸೆಯನ್ನೇ ಕೊಂದ ಮಾವ!

Illicit relationship Murder Case
ಕ್ರೈಂ18 mins ago

Illicit Relationship : ವಿಜಯಪುರದಲ್ಲಿ ಜೋಡಿ ಕೊಲೆ; ಅಕ್ರಮ ಸಂಬಂಧಕ್ಕಾಗಿ ನಡೆಯಿತಾ ಹತ್ಯೆ?

gold in hand
ಚಿನ್ನದ ದರ20 mins ago

Gold Rate Today: ಬಿಸಿಲಿನಂತೆ ಏರತೊಡಗಿದೆ ಚಿನ್ನದ ಬೆಲೆ ! ಇಂದು ಎಷ್ಟಿದೆ ನೋಡಿ

rohit sharma
ಕ್ರೀಡೆ29 mins ago

IPL 2024: ರೋಹಿತ್ ಬ್ಯಾಟಿಂಗ್​​ ಅಭ್ಯಾಸದ ವಿಡಿಯೊ ಹಂಚಿಕೊಂಡ ಮುಂಬೈ ಇಂಡಿಯನ್ಸ್

John Abraham Vedaa teaser out
ಬಾಲಿವುಡ್43 mins ago

Vedaa teaser out: ಜಾನ್ ಅಬ್ರಹಾಂ ನಟನೆಯ ಆ್ಯಕ್ಷನ್-ಪ್ಯಾಕ್ಡ್ ‘ವೇದಾ’ ಟೀಸರ್ ಔಟ್‌

Harassment Case obscene video
ಬೆಂಗಳೂರು48 mins ago

Harassment Case : ಹೆಂಡತಿಗೆ ಅಶ್ಲೀಲ ವಿಡಿಯೊ ಕಳುಹಿಸಿದ ಗಂಡನಿಗೆ 1 ತಿಂಗಳ ಜೈಲು ಶಿಕ್ಷೆ!

Mukesh Khanna rejects Ranveer Singh as Shaktimaan
ಬಾಲಿವುಡ್59 mins ago

Mukesh Khanna: ʻಶಕ್ತಿಮಾನ್ʼ ಆಗುವ ಯೋಗ್ಯತೆ ರಣವೀರ್‌ಗೆ ಇಲ್ಲ ಎಂದ ಮಹಾಭಾರತದ ʻಭೀಷ್ಮʼ!

narendra modi rumen radev
ದೇಶ1 hour ago

PM Narendra Modi: ಮೋದಿಗೆ ಥ್ಯಾಂಕ್ಸ್‌ ಹೇಳಿದ ಬಲ್ಗೇರಿಯಾ ಅಧ್ಯಕ್ಷ, ಮೋದಿ ಉತ್ತರ ಹೀಗಿತ್ತು

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina Bhavishya
ಭವಿಷ್ಯ7 hours ago

Dina Bhavishya : ಈ ರಾಶಿಯವರು ಎಚ್ಚರ ವಹಿಸಿ; ಅಮೂಲ್ಯವಾದ ವಸ್ತುವೊಂದು ಕೈ ತಪ್ಪಬಹುದು

Tejaswi Surya About Hanuman Chalisa Issue
ಬೆಂಗಳೂರು18 hours ago

ಹನುಮಾನ್‌ ಚಾಲೀಸಾ ಕೇಸ್‌; ಆರೋಪಿಗಳು ಅರೆಸ್ಟ್ ಆಗದಿದ್ದರೆ ಪ್ರತಿಭಟನೆ- ತೇಜಸ್ವಿ ಸೂರ್ಯ ಎಚ್ಚರಿಕೆ

read your daily horoscope predictions for march 18 2024
ಭವಿಷ್ಯ1 day ago

Dina Bhavishya : ಈ ದಿನ ನೀವೂ ಮೋಸ ಹೋಗುವುದು ಗ್ಯಾರಂಟಿ; ಬೆನ್ನ ಹಿಂದೆಯೇ ನಡೆಯುತ್ತೆ ಪಿತೂರಿ

Lok Sabha Election 2024 Congress finalises list of 13 seats
Lok Sabha Election 20242 days ago

Lok Sabha Election 2024: ಕಾಂಗ್ರೆಸ್‌ನಲ್ಲಿ 13 ಕ್ಷೇತ್ರಗಳ ಪಟ್ಟಿ ಫೈನಲ್!‌ ಸಂಭಾವ್ಯ ಅಭ್ಯರ್ಥಿಗಳ ಲಿಸ್ಟ್‌ ಇಲ್ಲಿದೆ

dina Bhvishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಅತ್ತೆ ಮನೆಯಿಂದ ಸಿಗಲಿದೆ ಭರಪೂರ ಉಡುಗೊರೆ

Dina Bhavishya
ಭವಿಷ್ಯ3 days ago

Dina Bhavishya : ಇವತ್ತು ಈ ರಾಶಿಯವರು ಮೌನದಿಂದ ಇರುವುದು ಒಳಿತು

Lok Sabha Election 2024 Is Operation JDS Worker Behind DK Brothers Breakfast Meeting
Lok Sabha Election 20244 days ago

Lok Sabha Election 2024: ಡಿಕೆ ಬ್ರದರ್ಸ್‌ ಬ್ರೇಕ್‌ಫಾಸ್ಟ್‌ ಮೀಟಿಂಗ್ ಹಿಂದೆ ‘ಆಪರೇಷನ್‌ ಜೆಡಿಎಸ್‌ ಕಾರ್ಯಕರ್ತ’?

read your daily horoscope predictions for march 15 2024
ಭವಿಷ್ಯ4 days ago

Dina Bhavishya : ಕೆಲವು ರಹಸ್ಯ ವಿಷಯಗಳು ಈ ರಾಶಿಯವರಿಗೆ ಅಚ್ಚರಿ ತರಲಿದೆ

Lok Sabha Election 2024 Yaduveer talks about entering politics and Yaduveer Krishnadatta Chamaraja Wadiyar meets BY Vijayendra
ಕರ್ನಾಟಕ5 days ago

‌Lok Sabha Election 2024: ಮೆಣಸಿನಕಾಯಿಯನ್ನು ಜೀರ್ಣಿಸಿಕೊಳ್ತೇನೆ; ನನ್ನ ಮೇಲೆ ರಾಜಸ್ಥಾನದ ಪ್ರಭಾವ ಇಲ್ಲ: ಯದುವೀರ್

Different Danny Filed Case Against Ravi Varma
ಬೆಂಗಳೂರು5 days ago

Different Danny : ಫೈಟ್‌ ಮಾಸ್ಟರ್ಸ್‌ ಫೈರ್‌ ಫೈಟಿಂಗ್‌; ರವಿವರ್ಮ ವಿರುದ್ಧ ಡಿಫರೆಂಟ್‌ ಡ್ಯಾನಿ ಸಮರ

ಟ್ರೆಂಡಿಂಗ್‌