IND vs SA | ನೀರಸ ಬ್ಯಾಟಿಂಗ್‌, ಕಳಪೆ ಫೀಲ್ಡಿಂಗ್‌; ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡಕ್ಕೆ 5 ವಿಕೆಟ್‌ ಸೋಲು - Vistara News

T20 ವಿಶ್ವಕಪ್

IND vs SA | ನೀರಸ ಬ್ಯಾಟಿಂಗ್‌, ಕಳಪೆ ಫೀಲ್ಡಿಂಗ್‌; ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡಕ್ಕೆ 5 ವಿಕೆಟ್‌ ಸೋಲು

ಟಿ20 ವಿಶ್ವ ಕಪ್‌ನಲ್ಲಿ ದಕ್ಷಿಣ ಆಫ್ರಿಕಾ (IND vs SA) ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಪ್ರಬಲ ಪ್ರದರ್ಶನ ನೀಡಲು ವಿಫಲಗೊಂಡು ಸೋಲಿಗೆ ಒಳಗಾಯಿತು.

VISTARANEWS.COM


on

IND VS SA
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪರ್ತ್‌: ಬ್ಯಾಟಿಂಗ್‌ ವಿಭಾಗದ ವೈಫಲ್ಯ ಹಾಗೂ ಪ್ರಮುಖ ಘಟ್ಟದಲ್ಲಿ ಕಳಪೆ ಫೀಲ್ಡಿಂಗ್‌ ಮಾಡಿದ ಭಾರತ ತಂಡ ಟಿ೨೦ ವಿಶ್ವ ಕಪ್‌ನ ಗುಂಪು ೨ರ ತನ್ನ ೩ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ (IND vs SA) ವಿರುದ್ಧ 5 ವಿಕೆಟ್‌ಗಳ ಸೋಲಿಗೆ ಒಳಗಾಯಿತು. ಈ ಮೂಲಕ ಸೂರ್ಯಕುಮಾರ್‌ ಯಾದವ್‌ ಅವರ ಏಕಾಂಗಿ ಹೋರಾಟ ವ್ಯರ್ಥಗೊಂಡಿತು. ಈ ಹಣಾಹಣಿ ಗೆದ್ದ ದಕ್ಷಿಣ ಆಫ್ರಿಕಾ ತಂಡ ಗುಂಪು ಹಂತದ ಅಂಕಪಟ್ಟಿಯಲ್ಲಿ ೫ ಅಂಕಗಳೊಂದಿಗೆ ಮೊದಲ ಸ್ಥಾನಕ್ಕೇರಿದರೆ, ಭಾರತ ೪ ಅಂಕಗಳೊಂದಿಗೆ ಅಗ್ರ ಸ್ಥಾನ ಕಳೆದುಕೊಂಡಿತು.

ಪರ್ತ್‌ ಕ್ರಿಕೆಟ್‌ ಸ್ಟೇಡಿಯಮ್‌ನಲ್ಲಿ ಭಾನುವಾರ ಸಂಜೆ (ಭಾರತೀಯ ಕಾಲಮಾನ) ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ ನಿಗದಿತ ೨೦ ಓವರ್‌ಗಳಲ್ಲಿ ೯ ವಿಕೆಟ್‌ ಕಳೆದುಕೊಂಡು ೧೩೩ ರನ್‌ ಬಾರಿಸಿತು. ಪ್ರತಿಯಾಗಿ ಆಡಿದ ದಕ್ಷಿಣ ಆಫ್ರಿಕಾ ಬಳಗ ೧೯.೪ ಓವರ್‌ಗಳಲ್ಲಿ ೫ ವಿಕೆಟ್‌ ಕಳೆದುಕೊಂಡು ೧೩೪ ರನ್‌ ಬಾರಿಸಿ ವಿಜಯ ಸಾಧಿಸಿತು. ದಕ್ಷಿಣ ಆಫ್ರಿಕಾ ಪರ ಏಡೆನ್‌ ಮಾರ್ಕ್ರಮ್‌ (೫೨) ಹಾಗೂ ಡೇವಿಡ್ ಮಿಲ್ಲರ್‌ (ಅಜೇಯ ೫೯) ಅರ್ಧ ಶತಕಗಳನ್ನು ಬಾರಿಸಿ ಗೆಲುವಿನ ರೂವಾರಿಗಳೆನಿಸಿಕೊಂಡರು.

ಭಾರತ ತಂಡ ಅತ್ಯಂತ ಕಳಪೆ ಫೀಲ್ಡಿಂಗ್ ಪ್ರದರ್ಶನ ನೀಡಿತು. ರೋಹಿತ್ ಶರ್ಮ ಅವರು ಸುಲಭ ರನ್‌ಔಟ್‌ ಮಾಡುವ ಅವಕಾಶ ನಷ್ಟಮಾಡಿಕೊಂಡಿದ್ದು ಸೇರಿದಂತೆ ಎದುರಾಳಿ ತಂಡದ ಬ್ಯಾಟರ್‌ಗಳು ಮೂರು ರನ್ಔಟ್‌ ಜೀವದಾನ ಪಡೆದರು. ಅಲ್ಲದೆ, ಅರ್ಧ ಶತಕ ಬಾರಿಸಿದ ಏಡೆನ್‌ ಮಾರ್ಕ್ರಮ್‌ ಅವರ ಸುಲಭ ಕ್ಯಾಚ್‌ ಅನ್ನು ವಿರಾಟ್‌ ಕೊಹ್ಲಿ ಕೈ ಚೆಲ್ಲಿದರು. ಇವೆಲ್ಲವೂ ಭಾರತದ ಸೋಲಿಗೆ ಕಾರಣಗಳಾದವು.

ಭಾರತ ನೀಡಿದ ಸಣ್ಣ ಮೊತ್ತದ ಗುರಿಯನ್ನೂ ಬೆನ್ನಟ್ಟಲು ಮುಂದಾದ ದಕ್ಷಿಣ ಆಫ್ರಿಕಾ ತಂಡದ ಆರಂಭವೂ ಉತ್ತಮವಾಗಿರಲಿಲ್ಲ. ಆರಂಭಿಕರಾದ ಕ್ವಿಂಟನ್‌ ಡಿ ಕಾಕ್‌ (೧), ತೆಂಬ ಬವುಮಾ (೧೦) ಬೇಗ ವಿಕೆಟ್‌ ಒಪ್ಪಿಸಿದರೆ, ಯುವ ಬ್ಯಾಟರ್‌ ರಿಲೀ ರೊಸ್ಸೊ ಶೂನ್ಯ ಸುತ್ತಿದರು. ಬಳಿಕ ಜತೆಯಾದ ಮಾರ್ಕ್ರಮ್‌ ಹಾಗೂ ಡೇವಿಡ್‌ ಮಿಲ್ಲರ್‌ ೭೬ ರನ್‌ಗಳ ಜತೆಯಾಟ ನೀಡಿದರು. ಭಾರತ ತಂಡದ ಬೌಲರ್‌ಗಳು ಕೊನೇ ತನಕ ಎದುರಾಳಿ ತಂಡದ ಬ್ಯಾಟರ್‌ಗಳ ನಿಯಂತ್ರಣ ಸಾಧಿಸಲು ಯತ್ನಿಸಿದರೂ ಅವರ ಪ್ರಯತ್ನಗಳು ವಿಫಲಗೊಂಡವು.

ಆರಂಭಿಕರ ವೈಫಲ್ಯ

ಅದಕ್ಕಿಂತ ಮೊದಲು ಬ್ಯಾಟ್‌ ಮಾಡಿದ ಭಾರತ ತಂಡದ ಬಹುತೇಕ ಬ್ಯಾಟರ್‌ಗಳು ಈ ಪಂದ್ಯದಲ್ಲಿ ವೈಫಲ್ಯ ಕಂಡರು. ಕೆ. ಎಲ್‌ ರಾಹುಲ್‌ (೯) ಮತ್ತೊಮ್ಮೆ ನಿರಾಶಾದಾಯಕ ಪ್ರದರ್ಶನ ನೀಡಿದರೆ, ರೋಹಿತ್ ಶರ್ಮ ೧೫ ರನ್‌ಗಳಿಗೆ ಸೀಮಿತಗೊಂಡರು. ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ೧೨ ರನ್‌ಗಳಿಗೆ ಔಟಾಗಿ ಮರಳಿದರು. ಹಾಲಿ ವಿಶ್ವ ಕಪ್‌ನಲ್ಲಿ ಮೊದಲ ಅವಕಾಶ ಪಡೆದ ದೀಪಕ್‌ ಹೂಡ ಶೂನ್ಯ ಸುತ್ತಿದರು.

ಸತತವಾಗಿ ವಿಕೆಟ್‌ ಉರುಳಿದ ಹೊರತಾಗಿಯೂ ಸೂರ್ಯಕುಮಾರ್‌ ಯಾದವ್‌ ಎದುರಾಳಿ ತಂಡದ ಬೌಲರ್‌ಗಳನ್ನು ನಿರಂತರವಾಗಿ ದಂಡಿದರು. ೩೦ ಎಸೆತಗಳಿಗೆ ೫೦ ರನ್ ಬಾರಿಸಿದ ಅವರು ೬೮ ರನ್‌ಗಳಿಗೆ ಪಾರ್ನೆಲ್‌ ಎಸೆತದಲ್ಲಿ ಕೇಶವ್‌ ಮಹಾರಾಜಾಗೆ ಕ್ಯಾಚ್‌ ನೀಡಿ ವಿಕೆಟ್ ಒಪ್ಪಿಸಿದರು. ಹಾರ್ದಿಕ್‌ ಪಾಂಡ್ಯ (೨), ದಿನೇಶ್‌ ಕಾರ್ತಿಕ್‌ (೬), ರವಿಚಂದ್ರನ್‌ ಅಶ್ವಿನ್‌ (೭) ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲುವ ಪ್ರಯತ್ನ ಮಾಡಲಿಲ್ಲ.

ಸ್ಕೋರ್‌ ವಿವರ

ಭಾರತ: ೨೦ ಓವರ್‌ಗಳಲ್ಲಿ ೯ ವಿಕೆಟ್‌ಗೆ ೧೩೩ (ಸೂರ್ಯಕುಮಾರ್‌ ಯಾದವ್‌ ೬೮, ರೋಹಿತ್‌ ಶರ್ಮ ೧೫; ಲುಂಗಿ ಎನ್‌ಗಿಡಿ ೨೯ಕ್ಕೆ೪; ವೇಯ್ನ್‌ ಪಾರ್ನೆಲ್‌ ೧೫ಕ್ಕೆ೩).

ದಕ್ಷಿಣ ಆಫ್ರಿಕಾ: ೧೯.೪ ಓವರ್‌ಗಳಲ್ಲಿ ೫ ವಿಕೆಟ್‌ಗೆ ೧೩೪ (ಏಡೆನ್‌ ಮಾರ್ಕ್ರಮ್‌ ೫೨, ಡೇವಿಡ್‌ ಮಿಲ್ಲರ್‌ ೫೯*; ಅರ್ಶ್‌ದೀಪ್‌ ಸಿಂಗ್ ೨೫ಕ್ಕೆ೨).

ಇದನ್ನೂ ಓದಿ | IND vs PAK | ಭಾರತದ ವಿರುದ್ಧದ ಸೋಲನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದ ಪಾಕ್‌ ಬ್ಯಾಟರ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

AFG vs SA: ಅಜೇಯ ದಕ್ಷಿಣ ಆಫ್ರಿಕಾಗೆ ಸವಾಲೊಡ್ಡೀತೇ ಆಫ್ಘನ್?​; ನಾಳೆ ಮೊದಲ ಸೆಮಿ ಫೈನಲ್​

AFG vs SA: ಅಫಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಇದುವರೆಗೂ ಟಿ20 ಕ್ರಿಕೆಟ್​ನಲ್ಲಿ 2 ಬಾರಿ ಮುಖಾಮುಖಿಯಾಗಿವೆ. ಈ ಎರಡೂ ಪಂದ್ಯಗಳನ್ನು ಕೂಡ ದಕ್ಷಿಣ ಆಫ್ರಿಕಾವೇ ಗೆದ್ದಿದೆ. ಈ ಲೆಕ್ಕಾಚಾರದಲ್ಲಿ ಹರಿಣ ಪಡೆಯೇ ಬಲಿಷ್ಠವಾಗಿ ಗೋಚರಿಸಿದೆ

VISTARANEWS.COM


on

AFG vs SA
Koo

ಟ್ರಿನಿಡಾಡ್: ಹಾಲಿ ಟಿ20 ವಿಶ್ವಕಪ್‌(T20 World Cup 2024) ಕ್ರಿಕೆಟ್‌ ಪಂದ್ಯಾವಳಿಯಲ್ಲಿ ನ್ಯೂಜಿಲ್ಯಾಂಡ್​, ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡಗಳಿಗೆ ಸೊಕ್ಕಡಗಿಸಿ ಕನಸಿನ ಓಟ ಬೆಳೆಸಿರುವ ಅಫಘಾನಿಸ್ತಾನ(AFG vs SA), ನಾಳೆ ನಡೆಯುವ ಮಹತ್ವದ ಸೆಮಿಫೈನಲ್​ ಪಂದ್ಯದಲ್ಲಿ ಕೂಟದ ಅಜೇಯ ತಂಡವಾದ ದಕ್ಷಿಣ ಆಫ್ರಿಕಾದ ಸವಾಲನ್ನು(South Africa vs Afghanistan Semi Final 1) ಎದುರಿಸಲಿದೆ. ಈ ಪಂದ್ಯ ಭಾರತದಲ್ಲಿ ಬೆಳಗಿನ ಜಾವ 6 ಗಂಟೆಗೆ ಪ್ರಸಾರಗೊಳ್ಳಲಿದೆ.

ಈ ಬಾರಿಯ ಟೂರ್ನಿಯಲ್ಲಿ ಇತ್ತಂಡಗಳಿಗೂ ಕೂಡ ಅದೃಷ್ಠ ಕೈ ಹಿಡಿದಿದೆ. ಲೀಗ್​ ಹಂತದಲ್ಲಿ ಸೋಲುವ ಪಂದ್ಯಗಳನ್ನು ಗೆದ್ದು ಸೂಪರ್​-8 ಹಂತಕ್ಕೇರಿತ್ತು. ಪ್ರತಿ ಐಸಿಸಿ ಟೂರ್ನಿಯಲ್ಲಿ ಗೆಲ್ಲುವ ಪಂದ್ಯಗಳನ್ನು ಸೋಲುವ ಮತ್ತು ಮಳೆಯಿಂದ ಹೊನ್ನಡೆ ಅನುಭವಿಸಿ ಚೋಕರ್ಸ್​ ಎನಿಸಿಕೊಳ್ಳುತ್ತಿದ್ದ ದಕ್ಷಿಣ ಆಫ್ರಿಕಾದ ನಸೀಬು ಈ ಬಾರಿ ಬದಲಾದಂತಿದೆ. ಲೀಗ್​ ಹಂತದಲ್ಲಿ ಬಾಂಗ್ಲಾ ವಿರುದ್ಧ 1 ರನ್​ ಅಂತರದಿಂದ ಗೆದ್ದದ್ದು, ಸೂಪರ್​-8 ಪಂದ್ಯದಲ್ಲಿ ವಿಂಡೀಸ್​ ಎದುರು ಮಳೆ ಪೀಡಿತ ಪಂದ್ಯವನ್ನು ಜಯಿಸಿದ್ದು ನೋಡುವಾಗ ಹರಿಣ ಪಡೆ ಈ ಬಾರಿ ಚೋಕರ್ಸ್​ ಹಣೆಪಟ್ಟಿಯನ್ನು ಕಳಚಿಕೊಳ್ಳುವ ಸಾಧ್ಯತೆಯೊಂದು ಕಂಡಿಬಂದಿದೆ.

ದಕ್ಷಿಣ ಆಫ್ರಿಕಾ ಪರ ಡಿ ಕಾಕ್​ ಹೊರತುಪಡಿಸಿ ಉಳಿದ ಯಾವುದೇ ಬ್ಯಾಟರ್​ ಇದುವರೆಗೂ ನಿರೀಕ್ಷತ ಬ್ಯಾಟಿಂಗ್​ ಪ್ರದರ್ಶನ ತೋರದಿದ್ದರು. ಕೂಡ ಬೌಲಿಂಗ್​ ಮತ್ತು ಫೀಲ್ಡಿಂಗ್​ನಲ್ಲಿ ಉತ್ಕೃಷ್ಟ ಮಟ್ಟದ ಪ್ರದರ್ಶನ ತೋರುವ ಮೂಲಕ ಪಂದ್ಯವನ್ನು ಗೆದ್ದಿದ್ದಾರೆ. ಆದರೆ, ಸೆಮಿಫೈನಲ್​ನಲ್ಲಿಯೂ ಇದೇ ರೀತಿಯಲ್ಲಿ ಪಂದ್ಯವನ್ನು ಗೆಲ್ಲಬಹುದು ಎಂದು ಯೋಚಿಸಿ ಕುಳಿತರೆ ಸೋಲು ಎದುರಾಗುವುದು ಖಚಿತ ಎನ್ನಲಡ್ಡಿಯಿಲ್ಲ. ಏಕೆಂದರೆ, ಅಫಘಾನಿಸ್ತಾನ 100 ರನ್​ ಬಾರಿಸಿದರೂ ಕೂಡ ಇದನ್ನು ಹಿಡಿದು ನಿಲ್ಲಿಸುವ ತಾಕತ್ತು ಈ ತಂಡದ ಬೌಲರ್​ಗಳಿಗಿದೆ. ಸ್ಪಿನ್​, ಸ್ಪೀಡ್​ ಎರಡೂ ವಿಭಾಗದಲ್ಲಿಯೂ ವೈವಿಧ್ಯಮಯವಾಗಿದೆ. ಬ್ಯಾಟಿಂಗ್​ನಲ್ಲಿ ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಜ್ ಪ್ರತಿ ಪಂದ್ಯದಲ್ಲಿಯೂ ಶ್ರೇಷ್ಠ ಬ್ಯಾಟಿಂಗ್​ ಪ್ರದರ್ಶನ ತೋರುವ ಮೂಲಕ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಮಧ್ಯಮ ವೇಗಿ ನವೀನ್​ ಉಲ್​ ಹಕ್​ ಕೂಡ ಘಾತಕ ಬೌಲಿಂಗ್​ ಪ್ರದರ್ಶನ ತೋರುವ ಮೂಲಕ ಪಂದ್ಯದ ಗತಿಯನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ.

ಇದನ್ನೂ ಓದಿ AFG vs BAN: ಕಾಬುಲ್​ನಲ್ಲಿ ಆಫ್ಘನ್ನರ ಮುಗಿಲು ಮುಟ್ಟಿದ ಸಂಭ್ರಮಾಚರಣೆ; ಗುಂಪು ಚದುರಿಸಲು ಜಲಫಿರಂಗಿ ಪ್ರಯೋಗ

ಮುಖಾಮುಖಿ


ಅಫಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಇದುವರೆಗೂ ಟಿ20 ಕ್ರಿಕೆಟ್​ನಲ್ಲಿ 2 ಬಾರಿ ಮುಖಾಮುಖಿಯಾಗಿವೆ. ಈ ಎರಡೂ ಪಂದ್ಯಗಳನ್ನು ಕೂಡ ದಕ್ಷಿಣ ಆಫ್ರಿಕಾವೇ ಗೆದ್ದಿದೆ. ಈ ಲೆಕ್ಕಾಚಾರದಲ್ಲಿ ಹರಿಣ ಪಡೆಯೇ ಬಲಿಷ್ಠವಾಗಿ ಗೋಚರಿಸಿದೆ. ಆದರೂ ಕೂಡ ಅಪಾಯಕಾರಿ ಆಫ್ಘನ್​ ಸವಾಲನ್ನು ಹಗುರವಾಗಿ ಕಾಣಬಾರದು. ಏಕೆಂದರೆ ಹೊಡಿ ಬಡಿ ಆಟವಾದ ಟಿ20 ಕ್ರಿಕೆಟ್​ನಲ್ಲಿ ಕೊನೆಯ ಎಸೆತದಲ್ಲಿಯೂ ಪಂದ್ಯದ ಫಲಿತಾಂಶ ಬದಲಾದ ನಿದರ್ಶನವಿದೆ.

ಹವಾಮಾನ ವರದಿ


ಸೂಪರ್​-8 ಪಂದ್ಯಕ್ಕೆ ಮಳೆ ಅಡ್ಡಿಯುಂಟು ಮಾಡಿದರೂ ಕೂಡ ನಾಳೆ(ಬುಧವಾರ) ನಡೆಯುವ ಸೆಮಿ ಫೈನಲ್​ ಪಂದ್ಯಕ್ಕೆ ಯಾವುದೇ ಮಳೆ ಭೀತಿ ಎದುರಾಗಿಲ್ಲ. ಹೀಗಾಗಿ ಪಂದ್ಯ ಸಂಪೂರ್ಣವಾಗಿ ನಡೆಯಲಿದೆ.

ಸಂಭಾವ್ಯ ತಂಡಗಳು


ದಕ್ಷಿಣ ಆಫ್ರಿಕಾ:
ಕ್ವಿಂಟನ್ ಡಿ ಕಾಕ್ (ವಿಕೆಟ್​ ಕೀಪರ್​), ರೀಜಾ ಹೆಂಡ್ರಿಕ್ಸ್, ಐಡೆನ್ ಮಾರ್ಕ್ರಾಮ್ (ನಾಯಕ), ಡೇವಿಡ್ ಮಿಲ್ಲರ್, ಹೆನ್ರಿಚ್ ಕ್ಲಾಸೆನ್, ಟ್ರಿಸ್ಟಾನ್ ಸ್ಟಬ್ಸ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಆನ್ರಿಚ್ ನಾರ್ಜೆ, ಒಟ್ನೀಲ್ ಬಾರ್ಟ್‌ಮನ್.

ಅಫಘಾನಿಸ್ತಾನ: ರಹಮಾನುಲ್ಲಾ ಗುರ್ಬಾಜ್ (ವಿಕೆಟ್​ ಕೀಪರ್​), ಇಬ್ರಾಹಿಂ ಜದ್ರಾನ್, ಗುಲ್ಬದಿನ್ ನೈಬ್, ಅಜ್ಮತುಲ್ಲಾ ಒಮರ್ಜಾಯ್, ಮೊಹಮ್ಮದ್ ನಬಿ, ಕರೀಂ ಜನತ್, ರಶೀದ್ ಖಾನ್ (ನಾಯಕ), ನಂಗೆಯಾಲಿಯಾ ಖರೋಟೆ, ನೂರ್ ಅಹ್ಮದ್, ನವೀನ್-ಉಲ್-ಹಕ್, ಫಜಲ್ಹಕ್ ಫಾರೂಕಿ.

Continue Reading

ಕ್ರೀಡೆ

David Warner Retirement: ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಡೇವಿಡ್ ವಾರ್ನರ್

David Warner Retirement: 37 ವರ್ಷದ ಡೇವಿಡ್​ ವಾರ್ನರ್​, 2009ರಲ್ಲಿ ಮೆಲ್ಬೋರ್ನ್​ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಆಡುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಆಸ್ಟ್ರೇಲಿಯಾ ಪರ ಒಟ್ಟು 110 ಪಂದ್ಯಗಳನ್ನು ಆಡಿ 3277 ರನ್​ ಬಾರಿಸಿದ್ದಾರೆ.

VISTARANEWS.COM


on

David Warner Retirement
Koo

ಸಿಡ್ನಿ: ಆಸ್ಟ್ರೇಲಿಯನ್ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಡೇವಿಡ್ ವಾರ್ನರ್(David Warner Retirement) ಅವರು ಟಿ20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸುವ ಮೂಲಕ 15 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ. ಹಾಲಿ ಆವೃತ್ತಿಯ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಭಾರತ ವಿರುದ್ಧ ಸೋಲು ಕಾಣುವ ಮೂಲಕ ಆಸ್ಟ್ರೇಲಿಯಾ ಹೊರಬಿದ್ದ ಬಳಿಕ ವಾರ್ನರ್​ ತಮ್ಮ ನಿವೃತ್ತಿ ಪ್ರಕಟಿಸಿದರು. ಈ ವರ್ಷದ ಜನವರಿಯಲ್ಲಿ ಟೆಸ್ಟ್‌ ಹಾಗೂ ಏಕದಿನ ಕ್ರಿಕೆಟ್‌ಗೂ ವಾರ್ನರ್‌ ವಿದಾಯ ಹೇಳಿದ್ದರು.

37 ವರ್ಷದ ಡೇವಿಡ್​ ವಾರ್ನರ್​, 2009ರಲ್ಲಿ ಮೆಲ್ಬೋರ್ನ್​ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಆಡುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಆಸ್ಟ್ರೇಲಿಯಾ ಪರ ಒಟ್ಟು 110 ಪಂದ್ಯಗಳನ್ನು ಆಡಿ 3277 ರನ್​ ಬಾರಿಸಿದ್ದಾರೆ. ಈ ವೇಳೆ 1 ಶತಕ ಮತ್ತು 28 ಅರ್ಧಶತಕ ಬಾರಿಸಿದ್ದಾರೆ. ವಿದಾಯ ಹೇಳಿದರೂ ಕೂಡ ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯುವ ಚಾಂಪಿಯನ್ಸ್​ ಟ್ರೋಫಿ ಟೂರ್ನಿಯಲ್ಲಿ ತಂಡ ಬಯಸಿದರೆ ಆಡಲು ಸಿದ್ಧ ಎಂದು ಹೇಳಿದ್ದಾರೆ. ಆಸ್ಟ್ರೇಲಿಯಾ ಪರ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

ರಿಕಿ ಪಾಂಟಿಂಗ್, ಆ್ಯಡಂ ಗಿಲ್ ಕ್ರಿಸ್ಟ್​, ಶೇನ್​ ವಾರ್ನ್​ ಅವರಂತಹ ದಿಗ್ಗಜ ಆಟಗಾರರೊಂದಿಗೆ ಆಡಿದ ಅನುಭವವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನನ್ನ ಕ್ರಿಕೆಟ್​ ವೃತ್ತಿಜೀವನದಲ್ಲಿ ಸಾಧಿಸುವುದು ಇನ್ನೂ ಯಾವುದೂ ಉಳಿದಿಲ್ಲ. ಮೂರು ಮಾದರಿಯ (ಏಕದಿನ, ಟೆಸ್ಟ್ ಮತ್ತು ಟಿ20) ವಿಶ್ವಕಪ್​ ತಂಡದ ಸದಸ್ಯ ಎನ್ನುವುದು ನಿಜಕ್ಕೂ ಹೆಮ್ಮೆಯ ಸಂಗತಿ. ನನ್ನ ಕ್ರಿಕೆಟ್​ ಜರ್ನಿಯಲ್ಲಿ ಸಹಕರಿಸಿದ ಎಲ್ಲ ಸಿಬ್ಬಂದಿ, ಸಹ ಆಟಗಾರರಿಗೆ ನಾನು ಚಿರಋಣಿ ಎಂದು ವಾರ್ನರ್​ ಹೇಳಿದ್ದಾರೆ. ​

ಇದನ್ನೂ ಓದಿ IND vs AUS: ಟೀಮ್​ ಇಂಡಿಯಾ ಆಟಗಾರರ ಮೇಲೆ ಹಿಟ್ ಅಂಡ್ ರನ್ ಗಂಭೀರ ಆರೋಪ ಮಾಡಿದ ದೆಹಲಿ ಪೊಲೀಸರು!

ವಾರ್ನರ್​ ಟೆಸ್ಟ್​ ಸಾಧನೆ


2011 ಜನವರಿ 4ರಂದು ಬ್ರಿಸ್ಬೇನ್‌ನಲ್ಲಿ ಕಿವೀಸ್​ ವಿರುದ್ಧದ ಪಂದ್ಯವನ್ನಾಡುವ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಡೇವಿಡ್ ವಾರ್ನರ್ ಒಟ್ಟು 205 ಇನಿಂಗ್ಸ್‌ಗಳಲ್ಲಿ 8,786 ರನ್ ಗಳಿಸಿದ್ದಾರೆ. 26 ಶತಕ ಹಾಗೂ 37 ಅರ್ಧಶತಕ ಬಾರಿಸಿದ್ದಾರೆ. ಅಜೇಯ 335 ಇವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. 4 ವಿಕೆಟ್​ ಕೂಡ ಪಡೆದಿದ್ದಾರೆ.

ಏಕದಿನ ಸಾಧನೆ


161 ಏಕದಿನ ಪಂದ್ಯಗಳನ್ನು ಆಡಿರುವ ವಾರ್ನರ್​ 159 ಇನಿಂಗ್ಸ್​ಗಳಿಂದ 6932 ರನ್​ ಬಾರಿಸಿದ್ದಾರೆ. 22 ಶತಕ ಮತ್ತು 33 ಅರ್ಧಶತಕ ಒಳಗೊಂಡಿದೆ. 179 ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ಕಳೆದ ವರ್ಷ ಭಾರತ ವಿರುದ್ಧ ಏಕದಿನ ವಿಶ್ವಕಪ್​ ಪಂದ್ಯವೇ ವಾರ್ನರ್​ಗೆ ಕೊನೆಯ ಏಕದಿನ ಪಂದ್ಯವಾಗಿತ್ತು.

Continue Reading

ಕ್ರೀಡೆ

AFG vs BAN: ಕಾಬುಲ್​ನಲ್ಲಿ ಆಫ್ಘನ್ನರ ಮುಗಿಲು ಮುಟ್ಟಿದ ಸಂಭ್ರಮಾಚರಣೆ; ಗುಂಪು ಚದುರಿಸಲು ಜಲಫಿರಂಗಿ ಪ್ರಯೋಗ

AFG vs BAN: ಅಫಘಾನಿಸ್ತಾನ(AFG vs BAN) ತಂಡ ಗೆಲುವು ಸಾಧಿಸುತ್ತಿದ್ದಂತೆ ಕಾಬುಲ್​ನಲ್ಲಿ(Celebrations in Kabul) ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಜನ ಸಾಗರವೇ ರಸ್ತೆಗಿಳಿದು ಪಟಾಕಿ, ಬಣ್ಣದೋಕುಳಿಯೊಂದಿಗೆ ಬೀದಿಗಳಲ್ಲಿ ಯುವಕ-ಯುವತಿಯರು ಕುಣಿದಾಡುತ್ತಾ ಸಂಭ್ರಮಿಸಿದ್ದಾರೆ. ಇದರ ವಿಡಿಯೊಗಳು ವೈರಲ್​ ಆಗಿವೆ.

VISTARANEWS.COM


on

AFG vs BAN
Koo

ಕಾಬುಲ್​: ಬಾಂಗ್ಲಾದೇಶ ವಿರುದ್ಧ ಮಂಗಳವಾರ ನಡೆದ ಟಿ20 ವಿಶ್ವಕಪ್​(T20 World Cup 2024) ಟೂರ್ನಿಯ ಸೂಪರ್​-8 ಪಂದ್ಯದಲ್ಲಿ ಅಫಘಾನಿಸ್ತಾನ(AFG vs BAN) ತಂಡ ರೋಚಕ 8 ರನ್​ಗಳ ಗೆಲುವು ಸಾಧಿಸಿ ಸೆಮಿಫೈನಲ್​ ಪ್ರವೇಶಿಸಿತು. ತಂಡ ಗೆಲುವು ಸಾಧಿಸುತ್ತಿದ್ದಂತೆ ಕಾಬುಲ್​ನಲ್ಲಿ(Celebrations in Kabul) ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಜನ ಸಾಗರವೇ ರಸ್ತೆಗಿಳಿದು ಪಟಾಕಿ, ಬಣ್ಣದೋಕುಳಿಯೊಂದಿಗೆ ಬೀದಿಗಳಲ್ಲಿ ಯುವಕ-ಯುವತಿಯರು ಕುಣಿದಾಡುತ್ತಾ ಸಂಭ್ರಮಿಸಿದರು. ಜನರ ಗುಂಪನ್ನು ಚದುರಿಸಲು ಪೊಲೀಸರು ಕೊನೆಗೆ ಜಲಫಿರಂಗಿ ಪ್ರಯೋಗ ಮಾಡಿದ ಘಟನೆಯೂ ಸಂಭವಿಸಿದೆ. ಇದರ ವಿಡಿಯೊಗಳು ವೈರಲ್​ ಆಗಿವೆ.

ಮಳೆಯಿಂದ ಅಡಚಣೆಯಾದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಅಫಘಾನಿಸ್ತಾನ ರಹಮಾನುಲ್ಲಾ ಗುರ್ಬಾಜ್(43) ಅವರ ಏಕಾಂಗಿ ಬ್ಯಾಟಿಂಗ್​ ಹೋರಾಟದ ನೆರವಿನಿಂದ 5 ವಿಕೆಟ್​ಗೆ 115 ರನ್​ ಬಾರಿಸಿತು. ಬಾಂಗ್ಲಾ ಬ್ಯಾಟಿಂಗ್​ ಸರದಿಯ ವೇಳೆ ಹಲವು ಬಾರಿ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತು. ಅಂತಿಮವಾಗಿ ಒಂದು ಓವರ್​ ಕಡಿತಗೊಳಿಸಿ 19 ಓವರ್​ಗೆ 114 ರನ್​ ಗೆಲುವಿನ ಗುರಿ ನೀಡಲಾಯಿತು. ಈ ಮೊತ್ತವನ್ನು ಬಾಂಗ್ಲಾ ಒಂದು ಹಂತದವರೆಗೆ ಯಶಸ್ವಿಯಾಗಿ ಬೆನ್ನಟ್ಟಿಕೊಂಡು ಬಂದರೂ ಕೂಡ ಅಂತಿಮ ಹಂತದಲ್ಲಿ ನಾಟಕೀಯ ಕುಸಿತ ಕಂಡು 17.5 ಓವರ್​ನಲ್ಲಿ 105 ರನ್​ಗೆ ಸರ್ವಪತನ ಕಂಡಿತು.

ರಸೆಯುದ್ದಕ್ಕೂ ನೆರದಿದ್ದ ಜನರನ್ನು ಚದುರಿಸಲು ಇಲ್ಲಿನ ಪೊಲೀಸರು ಹರ ಸಾಹಸ ಪಟ್ಟ ಘಟನೆಯೂ ನಡೆಯಿತು. ಕೆಲವು ಕಡೆ ಪೊಲೀಸರು ಲಘು ಲಾಠಿ ಚಾರ್ಜ್​ ಮತ್ತು ಜಲಫಿರಂಗಿ ಪ್ರಯೋಗ ಪ್ರಯೋಗ ನಡೆಸಿದರು. ಈ ಫೋಟೊಗಳು ವೈರಲ್​ ಆಗಿವೆ. ಅಫಘಾನಿಸ್ತಾನ ಜೂನ್​ 26ರಂದು(ನಾಳೆ) ನಡೆಯುವ ಸೆಮಿ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಡಲಿವೆ. ಗೆದ್ದರೆ ಚೊಚ್ಚಲ ಬಾರಿಗೆ ಫೈನಲ್​ ಪ್ರವೇಶಿಸಿದ ಸಾಧನೆ ಜತೆಗೆ ಕಪ್​ ಗೆದ್ದಷ್ಟೇ ಸಂಭ್ರಮ ಆಚರಿಸಲಿದೆ.

ಅಫಘಾನಿಸ್ತಾನ ಪರ ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಜ್ ಹೊರತುಪಡಿಸಿ ಉಳಿದ ಯಾವ ಬ್ಯಾಟರ್​ಗಳು ಕೂಡ ನಿರೀಕ್ಷಿತ ಬ್ಯಾಟಿಂಗ್​ ನಡೆಸುವಲ್ಲಿ ಯಶಸ್ಸು ಕಾಣಲಿಲ್ಲ. ಇಬ್ರಾಹಿಂ ಜದ್ರಾನ್(18),ಅಜ್ಮತುಲ್ಲಾ(10), ನಬಿ(1) ರನ್​ ಗಳಿಸಿ ವಿಕೆಟ್​ ಕೈಚೆಲ್ಲಿದರು. ರಹಮಾನುಲ್ಲಾ ಗುರ್ಬಾಜ್ 3 ಬೌಂಡರಿ ಮತ್ತು 1 ಸಿಕ್ಸರ್​ ನೆರವಿನಿಂದ 43 ರನ್​ ಬಾರಿಸಿದರು. ಇವರ ಈ ಬ್ಯಾಟಿಂಗ್​ ಹೋರಾಟದಿಂದ ತಂಡ 100ರ ಗಡಿ ದಾಟಿತು.  ಬೌಲಿಂಗ್​ನಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ ರಶೀದ್​ ಖಾನ್​ 4 ಓವರ್​ಗೆ 23 ರನ್​ ವೆಚ್ಚದಲ್ಲಿ 4 ವಿಕೆಟ್​ ಕಿತ್ತು ಮಿಂಚಿದರು. ಇವರಿಗೆ ಮಧ್ಯಮ ವೇಗಿ ನವೀನ್​ ಉಲ್​ ಹಕ್​ ಉತ್ತಮ ಸಾಥ್​ ನೀಡಿ 4 ವಿಕೆಟ್​ ಉರುಳಿಸಿದರು. ಜತೆಗೆ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.

ಇದನ್ನೂ ಓದಿ AFG vs BAN: ಆಫ್ಘನ್​ ತಂಡದ ಐತಿಹಾಸಿಕ ಸಾಧನೆಯನ್ನು ಕೊಂಡಾಡಿದ ಸಚಿನ್​ ತೆಂಡೂಲ್ಕರ್​

ಸಚಿನ್​ ಮೆಚ್ಚುಗೆ

ಐತಿಹಾಸಿಕ ಸಾಧನೆ ಮಾಡಿರುವ ಅಫಘಾನಿಸ್ತಾನ(Afghanistan vs Bangladesh) ತಂಡಕ್ಕೆ ಕ್ರಿಕೆಟ್​ ದೇವರು, ಸಚಿನ್​ ತೆಂಡೂಲ್ಕರ್(Sachin Tendulkar)​ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಟ್ವಿಟರ್​ ಎಕ್ಸ್​ನಲ್ಲಿ ಅಫಘಾನಿಸ್ತಾನ ತಂಡದ ಸಾಧನೆಯನ್ನು ಕೊಂಡಾಡಿದ ಸಚಿನ್​, ನ್ಯೂಜಿಲ್ಯಾಂಡ್​ ಮತ್ತು ಆಸ್ಟ್ರೇಲಿಯದಂತಹ ಬಲಿಷ್ಠ ತಂಡಗಳನ್ನು ಮಣಿಸಿ ಸೆಮಿಫೈನಲ್‌ ಪ್ರವೇಶಿಸಿರುವ ನಿಮ್ಮ ಗೆಲುವಿನ ಹಾದಿಯು ಅದ್ಭುತವಾಗಿದೆ. ಇಂದಿನ ಗೆಲುವು ನಿಮ್ಮ ಕಠಿಣ ಪರಿಶ್ರಮ ಮತ್ತು ಸಂಕಲ್ಪಕ್ಕೆ ಸಾಕ್ಷಿಯಾಗಿದೆ. ನಿಮ್ಮ ಪ್ರಗತಿಯ ಬಗ್ಗೆ ತುಂಬಾ ಹೆಮ್ಮೆ ಇದೆ. ಹೀಗೇ ಮುಂದುವರಿಯಿರಿ ಎಂದು ಶುಭ ಹಾರೈಸಿದ್ದಾರೆ.

Continue Reading

ಕ್ರೀಡೆ

AFG vs BAN: ಆಫ್ಘನ್​ ತಂಡದ ಐತಿಹಾಸಿಕ ಸಾಧನೆಯನ್ನು ಕೊಂಡಾಡಿದ ಸಚಿನ್​ ತೆಂಡೂಲ್ಕರ್​

AFG vs BAN: ಸೆಮಿಫೈನಲ್​ ಪ್ರವೇಶಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿರುವ ಅಫಘಾನಿಸ್ತಾನ(Afghanistan vs Bangladesh) ತಂಡಕ್ಕೆ ಸಚಿನ್​ ತೆಂಡೂಲ್ಕರ್(Sachin Tendulkar)​ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

VISTARANEWS.COM


on

AFG vs BAN
Koo

ಮುಂಬಯಿ: ಬಾಂಗ್ಲಾದೇಶವನ್ನು ಮಣಿಸಿ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಸೆಮಿಫೈನಲ್​ ಪ್ರವೇಶಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿರುವ ಅಫಘಾನಿಸ್ತಾನ(Afghanistan vs Bangladesh) ತಂಡಕ್ಕೆ ಕ್ರಿಕೆಟ್​ ದೇವರು, ಸಚಿನ್​ ತೆಂಡೂಲ್ಕರ್(Sachin Tendulkar)​ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಟ್ವಿಟರ್​ ಎಕ್ಸ್​ನಲ್ಲಿ ಅಫಘಾನಿಸ್ತಾನ ತಂಡದ ಸಾಧನೆಯನ್ನು ಕೊಂಡಾಡಿದ ಸಚಿನ್​, ನ್ಯೂಜಿಲ್ಯಾಂಡ್​ ಮತ್ತು ಆಸ್ಟ್ರೇಲಿಯದಂತಹ ಬಲಿಷ್ಠ ತಂಡಗಳನ್ನು ಮಣಿಸಿ ಸೆಮಿಫೈನಲ್‌ ಪ್ರವೇಶಿಸಿರುವ ನಿಮ್ಮ ಗೆಲುವಿನ ಹಾದಿಯು ಅದ್ಭುತವಾಗಿದೆ. ಇಂದಿನ ಗೆಲುವು ನಿಮ್ಮ ಕಠಿಣ ಪರಿಶ್ರಮ ಮತ್ತು ಸಂಕಲ್ಪಕ್ಕೆ ಸಾಕ್ಷಿಯಾಗಿದೆ. ನಿಮ್ಮ ಪ್ರಗತಿಯ ಬಗ್ಗೆ ತುಂಬಾ ಹೆಮ್ಮೆ ಇದೆ. ಹೀಗೇ ಮುಂದುವರಿಯಿರಿ ಎಂದು ಶುಭ ಹಾರೈಸಿದ್ದಾರೆ.

ಹಲವು ಬಾರಿ ಮಳೆಯಿಂದ ಅಡಚಣೆಯಾದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಅಫಘಾನಿಸ್ತಾನ ರಹಮಾನುಲ್ಲಾ ಗುರ್ಬಾಜ್(43) ಅವರ ಏಕಾಂಗಿ ಬ್ಯಾಟಿಂಗ್​ ಹೋರಾಟದ ನೆರವಿನಿಂದ 5 ವಿಕೆಟ್​ಗೆ 115 ರನ್​ ಬಾರಿಸಿತು. ಬಾಂಗ್ಲಾ ಬ್ಯಾಟಿಂಗ್​ ಸರದಿಯ ವೇಳೆ ಹಲವು ಬಾರಿ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತು. ಅಂತಿಮವಾಗಿ ಒಂದು ಓವರ್​ ಕಡಿತಗೊಳಿಸಿ 19 ಓವರ್​ಗೆ 114 ರನ್​ ಗೆಲುವಿನ ಗುರಿ ನೀಡಲಾಯಿತು. ಈ ಮೊತ್ತವನ್ನು ಬಾಂಗ್ಲಾ ಒಂದು ಹಂತದವರೆಗೆ ಯಶಸ್ವಿಯಾಗಿ ಬೆನ್ನಟ್ಟಿಕೊಂಡು ಬಂದರೂ ಕೂಡ ಅಂತಿಮ ಹಂತದಲ್ಲಿ ನಾಟಕೀಯ ಕುಸಿತ ಕಂಡು 17.5 ಓವರ್​ನಲ್ಲಿ 105 ರನ್​ಗೆ ಸರ್ವಪತನ ಕಂಡಿತು.

ಇದನ್ನೂ ಓದಿ AFG vs BAN: ‘ನಿಧಾನವಾಗಿ ಆಡಿ, ಮಳೆ ಬರುತ್ತೆ’; ಆಫ್ಘನ್​ ಆಟಗಾರರಿಗೆ ಸಲಹೆ ನೀಡಿದ ಕೋಚ್​; ವಿಡಿಯೊ ವೈರಲ್​

ಏಕದಿನ ವಿಶ್ವಕಪ್​ ವೇಳೆಯೂ ಪ್ರಶಂಸೆ ವ್ಯಕ್ತಪಡಿಸಿದ್ದ ಸಚಿನ್​

ಏಕದಿನ ವಿಶ್ವಕಪ್​ ಟೂರ್ನಿಯ ವೇಳೆಯೂ ಸಚಿನ್​ ತೆಂಡೂಲ್ಕರ್​ ಅವರು ಪಾಕಿಸ್ತಾನವನ್ನು ಮಣಿಸಿದ ಬಳಿ ಅಫಫಾನಿಸ್ತಾನ ತಂಡವನ್ನು ಹೊಗಳಿದ್ದರು. “ಈ ಬಾರಿಯ ಏಕದಿನ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನದ ಪ್ರದರ್ಶನವು ಅತ್ಯುತ್ತಮ ಗುಣಮಟ್ಟದಿಂದ ಕೂಡಿದೆ. ಆಟದಲ್ಲಿ ತೋರುತ್ತಿರುವ ಅವರ ಶಿಸ್ತು, ಮನೋಧರ್ಮ ಮತ್ತು ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿರುವ ಆಕ್ರಮಣಕಾರಿ ಓಟವು ಅವರ ಕಠಿಣ ಪರಿಶ್ರಮವನ್ನು ತೋರಿಸುತ್ತಿದೆ. ಬಹುಶಃ ಇದು ಶ್ರೀ ಅಜಯ್ ಜಡೇಜಾ ಅವರ ಪ್ರಭಾವದ ಕಾರಣದಿಂದಾಗಿರಬಹುದು. ಅಸಾಧಾರಣ ಪ್ರದರ್ಶನದೊಂದಿಗೆ ಬಲಿಷ್ಠ ಇಂಗ್ಲೆಂಡ್ ಮತ್ತು ಪಾಕಿಸ್ತಾನದಂತಹ ತಂಡಗಳ ಮೇಲೆ ಸವಾರಿ ಮಾಡಿದ ನಿಮ್ಮ ಈ ಸಾಹಸ ಹೀಗೆಯೇ ಮುಂದುವರಿಯಲಿ. ಇನ್ನೂ ಕೂಡ ಅಚ್ಚರಿಯ ಫಲಿತಾಂಶವನ್ನು ನಿಮ್ಮಿಂದ ನಿರೀಕ್ಷೆ ಮಾಡಿದ್ದೇವೆ” ಎಂದು ಬರೆದುಕೊಂಡಿದ್ದರು.

ಆಫ್ಘನ್​ನಲ್ಲಿ ಸಂಭ್ರಮಾಚರಣೆ


ಅಫಘಾನಿಸ್ತಾನ ತಂಡ ಐತಿಹಾಸಿಕ ಸಾಧನೆ ಮಾಡಿದ ಸಂತಸಲ್ಲಿ ಆಫ್ಘನ್ನರು ತಮ್ಮ ದೇಶದಲ್ಲಿ , ಪಟಾಕಿ ಸಿಡಿಸಿ ಈ ಗೆಲುವನ್ನು ಸಂಭ್ರಮಿಸಿದ್ದಾರೆ. ಸಂಭ್ರಮಾಚರಣೆಯ ಫೋಟೊ ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಕೆಲವು ಕಡೆ ಪೊಲೀಸರು ಲಘು ಲಾಠಿ ಚಾರ್ಜ್​ ಮತ್ತು ನೀರು ಬಿಟ್ಟು ಗುಂಪು ಗೂಡಿದ ಜನರನ್ನು ಚದುರಿಸಲು ಹರ ಸಾಹಸ ಪಟ್ಟ ಘಟನೆಯೂ ಸಂಭವಿಸಿದೆ.

ಅಫಘಾನಿಸ್ತಾನ ಜೂನ್​ 26ರಂದು(ನಾಳೆ) ನಡೆಯುವ ಸೆಮಿ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಡಲಿವೆ. ಗೆದ್ದರೆ ಚೊಚ್ಚಲ ಬಾರಿಗೆ ಫೈನಲ್​ ಪ್ರವೇಶಿಸಿದ ಸಾಧನೆ ಜತೆಗೆ ಕಪ್​ ಗೆದ್ದಷ್ಟೇ ಸಂಭ್ರಮ ಆಚರಿಸಲಿದೆ.

Continue Reading
Advertisement
David Warner
ಪ್ರಮುಖ ಸುದ್ದಿ8 mins ago

David Warner : ವಿಶ್ವ ಕಪ್​ನಿಂದ ಹೊರಬಿದ್ದ ಬೇಸರ; ಬಿಯರ್ ಕುಡಿತಾ ಕುಳಿತ ಆಸ್ಟ್ರೇಲಿಯಾದ ಆಟಗಾರರು

Fatty Lever Disease
ಆರೋಗ್ಯ8 mins ago

Fatty Lever Disease: ಎಚ್ಚರ ವಹಿಸಿ, ಮಕ್ಕಳನ್ನು ಸದ್ದಿಲ್ಲದೆ ಕಾಡುತ್ತಿದೆ ಫ್ಯಾಟಿ ಲಿವರ್‌ ಕಾಯಿಲೆ!

Karnataka Milk Federation
ಪ್ರಮುಖ ಸುದ್ದಿ1 hour ago

ವಿಸ್ತಾರ ಸಂಪಾದಕೀಯ: ಹಾಲು ದರ ಏರಿಕೆ ಬಳಕೆದಾರನಿಗೆ ಹೊರೆಯಾಗದಿರಲಿ

Dina Bhavishya
ಭವಿಷ್ಯ1 hour ago

Dina Bhavishya: ಈ ರಾಶಿಯವರಿಗೆ ದೀರ್ಘಕಾಲದ ಪ್ರಯತ್ನ ಇಂದು ಯಶಸ್ಸು ತಂದುಕೊಡಲಿದೆ

Women's Asia Cup
ಪ್ರಮುಖ ಸುದ್ದಿ7 hours ago

Women’s Asia Cup 2024 : ಮಹಿಳೆಯರ ಏಷ್ಯಾ ಕಪ್​ ಕ್ರಿಕೆಟ್​ನ ವೇಳಾಪಟ್ಟಿ ಬಿಡುಗಡೆ, ಜುಲೈ 19ಕ್ಕೆ ಭಾರತ- ಪಾಕ್ ಪಂದ್ಯ

minister mb patil visit japan and discuss about investment in Karnataka
ಕರ್ನಾಟಕ7 hours ago

Foreign Investment: 100 ಕೋಟಿ ರೂ. ವೆಚ್ಚದ ತ್ಯಾಜ್ಯ ನೀರು ನಿರ್ವಹಣಾ ಉಪಕರಣಗಳ ತಯಾರಿಕಾ ಘಟಕ ಸ್ಥಾಪನೆಗೆ ಒಪ್ಪಂದ

Arvind Kejriwal
ಪ್ರಮುಖ ಸುದ್ದಿ7 hours ago

Arvind Kejriwal : ಜಾಮೀನು ಅರ್ಜಿ ವಿಚಾರಣೆಗೂ ಮುನ್ನ ಅರವಿಂದ್ ಕೇಜ್ರಿವಾಲ್ ಬಂಧಿಸಿದ ಸಿಬಿಐ

Kodagu News
ಕೊಡಗು7 hours ago

Kodagu News: ಕಳೆದುಕೊಂಡಿದ್ದ ಚಿನ್ನದ ನಾಣ್ಯ ವಾರಸುದಾರನ ಕೈ ಸೇರುವಂತೆ ಮಾಡಿದ ಪೊಲೀಸರು!

Lok Sabha Speaker
ಪ್ರಮುಖ ಸುದ್ದಿ8 hours ago

Lok Sabha Speaker : ಸ್ಪೀಕರ್​ ಚುನಾವಣೆಯಲ್ಲಿ ವೈಎಸ್​ಆರ್​ ಪಕ್ಷದಿಂದ ಬಿಜೆಪಿಗೆ ಬೆಂಬಲ

Rahul Gandhi
ಪ್ರಮುಖ ಸುದ್ದಿ8 hours ago

Rahul Gandhi : ಲೋಕ ಸಭೆಯಲ್ಲಿ ಪ್ರತಿ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಆಯ್ಕೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ1 day ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ4 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ5 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ5 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 weeks ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌