CWG- 2022 | ಪಾನ್‌ ಅಂಗಡಿಯವರ ಮಗ ಭಾರತಕ್ಕೆ ರಜತದ ಖುಷಿ ತಂದ - Vistara News

ಕಾಮನ್​ವೆಲ್ತ್​ ಗೇಮ್ಸ್​

CWG- 2022 | ಪಾನ್‌ ಅಂಗಡಿಯವರ ಮಗ ಭಾರತಕ್ಕೆ ರಜತದ ಖುಷಿ ತಂದ

ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ CWG- 2022 ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ವೇಟ್‌ಲಿಫ್ಟರ್‌ ಸಂಕೇತ್‌ ಸರ್ಗರ್‌ ಪಾನ್‌ ಅಂಗಡಿಯ ಮಾಲೀಕರೊಬ್ಬರ ಮಗ.

VISTARANEWS.COM


on

CWG-2022
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಬರ್ಮಿಂಗ್‌ಹ್ಯಾಮ್‌ ಕಾಮನ್ವೆಲ್ತ್‌ ಗೇಮ್ಸ್‌ನ ವೇಟ್‌ಲಿಫ್ಟಿಂಗ್‌ನಲ್ಲಿ (CWG- 2022) ಭಾರತಕ್ಕೆ ಬೆಳ್ಳಿಯ ಪದಕ ಗೆದ್ದುಕೊಟ್ಟ ೨೧ ವರ್ಷದ ಸಂಕೇತ್‌ ಮಹಾದೇವ್‌ ಸರ್ಗರ್‌, ಸಾಂಗ್ಲಿ ಪಟ್ಟಣದಲ್ಲಿ ಪಾನ್‌ ಬೀಡಾ ಮಾರುತ್ತಿರುವ ಶ್ರಮಿಕರೊಬ್ಬರ ಪುತ್ರ. ಸಂಕೇತ್‌ ಬಂಗಾರ ಗೆಲ್ಲುತ್ತಿದ್ದಂತೆ ಪಾನ್‌ ಬೀಡಾ ಅಂಗಡಿ ಮುಂದೆ ಕ್ರೀಡಾಭಿಮಾನಿಗಳ ದಂಡೇ ಸೇರಿಕೊಂಡಿತ್ತು. ಜತೆಗೆ ಸಾಂಗ್ಲಿ ಪಟ್ಟಣದ ನಿವಾಸಿಗಳೂ ನಮ್ಮೂರ ಹುಡುಗ ಹೆಮ್ಮೆ ತಂದ ಎಂದು ಖುಷಿಯಿಂದ ಬೀಗಿದರು.

ಹಳ್ಳಿಯಿಂದ ಕೆಲಸ ಹುಡುಕಿಕೊಂಡು ಸಾಂಗ್ಲಿ ಪಟ್ಟಣ ಸೇರಿದ್ದ ಮಹಾದೇವ್‌ ಅವರು ಜೀವನೋಪಾಯಕ್ಕೆ ತಳ್ಳು ಗಾಡಿಯಲ್ಲಿ ಹಣ್ಣುಗಳನ್ನು ಮಾರಲು ಅರಂಭಿಸಿದ್ದರು. ಬಳಿಕ ಪಾನ್‌ ಬೀಡಾ ಅಂಗಡಿಯೊಂದನ್ನು ಇಟ್ಟಿದ್ದರು. ಅಲ್ಲೂ ಸ್ವಲ್ಪ ದುಡ್ಡು ಮಾಡಿದ ತಳ್ಳು ಗಾಡಿಯಲ್ಲಿ ಸಣ್ಣ ಹೋಟೆಲ್‌ ಕೂಡ ತೆರೆದಿದ್ದರು. ಇಷ್ಟೆಲ್ಲ ಆಗುವಾಗ ಸಂಕೇತ್‌ ಸರ್ಗರ್‌ ಬೆಳೆದು ನಿಂತಿದ್ದ. ಆತನೂ ತಂದೆಗೆ ಸಹಾಯ ಮಾಡಲು ಪಾನ್‌ ಬೀಡಾ ಅಂಗಡಿಗೆ ಬರುತ್ತಿದ್ದ.

ಜಿಮ್‌ ಸೇರಿದ ಸಂಕೇತ್‌

ಮಗನನ್ನು ಹೇಗಾದರೂ ಮಾಡಿದ ಕ್ರೀಡಾ ಕ್ಷೇತ್ರಕ್ಕೆ ಸೇರಿಸಬೇಕು ಎಂಬ ಅಭಿಲಾಷೆ ಹೊಂದಿದ್ದ ಮಹಾದೇವ್‌ ಅವರ ಕಣ್ಣಿಗೆ ಬಿದ್ದಿದ್ದು ಪಾನ್‌ ಬೀಡಾ ಅಂಗಡಿಯ ಪಕ್ಕದ ಜಿಮ್‌. ಅಲ್ಲಿಗೆ ಹೋಗಿ ವೇಟ್‌ ಲಿಫ್ಟಿಂಗ್‌ ತರಬೇತಿಗೆ ಸೇರಿಸಿದ್ದರು. ಆ ದಿನದಿಂದ ಕಾಮನ್ವೆಲ್ತ್‌ ರಜತ ಪದಕಧಾರಿಯ ಸಾಧನೆಯ ಹಾದಿ ಆರಂಭಗೊಂಡಿತ್ತು. ಅಂಗಡಿಯಲ್ಲಿ ತಂದೆಗೆ ನೆರವು ನೀಡುತ್ತಿದ್ದ ಜತೆಗೆ ಮುಂಜಾನೆದ್ದು ಜಿಮ್‌ಗೆ ಹೋಗಿ ವೇಟ್‌ಲಿಫ್ಟಿಂಗ್‌ ಕೂಡ ಅಭ್ಯಾಸ ಮಾಡಲು ಆರಂಭಿಸಿದರು ರಜತ ಪದಕ ವಿಜೇತ ಸಂಕೇತ್‌.

ಅಭ್ಯಾಸದ ಜತೆಗೆ ಅವರು ಜಿಲ್ಲಾಮಟ್ಟದ ಸ್ಪರ್ಧೆಗಳಲ್ಲೂ ಭಾಗವಹಿಸಲು ಆರಂಭಿಸಿದ್ದರು. ಆದರೆ, ಅಲ್ಲೆಲ್ಲ ಉತ್ತಮ ಫಲಿತಾಂಶ ಬರುತ್ತಿರಲಿಲ್ಲ. ಈ ವೇಳೆ ತಂದೆ ಮಹಾದೇವ್‌ ಅವರು “ಸಾಧನೆ ಮಾಡಬೇಕಾದರೆ ಇನ್ನಷ್ಟು ಪ್ರಯತ್ನ ಹಾಕಬೇಕು. ಇಲ್ಲದಿದ್ದರೆ ಅಂಗಡಿಯಲ್ಲಿ ಕುಳಿತು ವ್ಯಾಪಾರ ಮಾಡುವುದೇ ಉತ್ತಮ,” ಎಂದು ಹೇಳಿದ್ದರು. ಈ ಮಾತನ್ನು ಸವಾಲಾಗಿ ಸ್ವೀಕರಿಸಿ ಸತತ ಅಭ್ಯಾಸ ಮಾಡಿ ಒಂದೊಂದೇ ಹಂತ ಮೇಲಕ್ಕೇರಿದ್ದ.

೨೦೨೦ರಲ್ಲಿ ಹಿರಿಯರ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು. ಮುಂದಿನ ವರ್ಷವೂ ಅವರೇ ಚಾಂಪಿಯನ್‌ ಆದರು. ಆದರೆ, ೨೦೨೧ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿ ಆರನೇ ಸ್ಥಾನಕ್ಕೆ ತೃಪ್ತಿಪಟ್ಟರು. ಹೀಗಾಗಿ ಕಾಮನ್ವೆಲ್ತ್‌ಗೆ ಅವಕಾಶ ಪಡೆಯುವುದೇ ಕಷ್ಟ ಎಂದೆನಿಸಿತ್ತು. ಆದರೆ, ೨೦೨೨ರಲ್ಲಿ ನಡೆದ ಸಿಂಗಾಪುರ ಓಪನ್‌ನಲ್ಲಿ ಒಟ್ಟಾರೆ ೨೫೬ ಕೆ. ಜಿ ಭಾರ ಎತ್ತಿದ ಸಂಕೇತ್‌ ರಾಷ್ಟ್ರೀಯ ದಾಖಲೆ ಸೃಷ್ಟಿಸುವ ಜತೆಗೆ ಕಾಮನ್ವೆಲ್ತ್‌ಗೆ ಟಿಕೆಟ್‌ ಗಿಟ್ಟಿಸಿಕೊಂಡರು.

೨೦೧೮ರಲ್ಲಿ ಕಂಡ ಕನಸು

೨೦೧೮ರ ಏಪ್ರಿಲ್‌ನಲ್ಲಿ ಗೋಲ್ಡ್‌ ಕೋಸ್ಟ್‌ನಲ್ಲಿ ನಡೆದ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಗುರುರಾಜ್‌ ಅವರು ೫೬ ಕೆ.ಜಿ ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದರು. ಈ ವೇಳೆ ಸಂಕೇತ್‌ ಗಿರಾಕಿಯೊಬ್ಬರಿಗೆ ಪಾನ್‌ ಕಟ್ಟುತ್ತಿದ್ದರು. ಗುರುರಾಜ್‌ ಅವರ ಸಾಧನೆಯನ್ನು ನೋಡಿದ್ದ ಸಂಕೇತ್‌, ಮುಂದಿನ ಸಲ ನಾನು ಆ ವೇದಿಕೆಯನ್ನೇರುವೆ ಎಂದಿದ್ದರು. ಆ ಮಾತನ್ನು ಸಂಕೇತ್‌ ಮಹಾದೇವ್‌ ಸರ್ಗರ್‌ ಉಳಿಸಿಕೊಂಡಿದ್ದಾರೆ.

ಇದನ್ನೂ ಓದಿ | CWG- 2022 | ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ, ಬೆಳ್ಳಿ ಗೆದ್ದ ಸಂಕೇತ್‌ ಸಾಗರ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕಾಮನ್​ವೆಲ್ತ್​ ಗೇಮ್ಸ್​

Wrestler | ಆಪ್‌ ನಾಯಕನ ಹೇಳಿಕೆಗೆ ತಿರುಗೇಟು ಕೊಟ್ಟ ಕಾಮನ್ವೆಲ್ತ್‌ ಪದಕ ವಿಜೇತೆ ದಿವ್ಯಾ ಕಾಕ್ರನ್‌

ಕುಸ್ತಿಪಟು ದಿವ್ಯಾ ಕಾಕ್ರನ್‌ ದಿಲ್ಲಿಯ ಆಪ್‌ ಶಾಸಕ ಸೌರಭ್‌ ಭಾರದ್ವಾಜ್‌ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ.

VISTARANEWS.COM


on

wrestling
Koo

ನವ ದೆಹಲಿ : ಕಾಮನ್ವೆಲ್ತ್‌ ಗೇಮ್ಸ್‌ ಕಂಚಿನ ಪದಕ ವಿಜೇತೆ ಕುಸ್ತಿಪಟು ದಿವ್ಯಾ ಕಾಕ್ರನ್‌, ದಿಲ್ಲಿ ಆಪ್‌ ಪಕ್ಷದ ಶಾಸಕನೊಬ್ಬನ ಹೇಳಿಕೆಗೆ ತಿರುಗೇಟು ಕೊಟ್ಟಿದ್ದು, ತಾವು ದಿಲ್ಲಿಯ ಪರವಾಗಿಯೇ ಸ್ಪರ್ಧಿಸಿರುವ ಬಗ್ಗೆ ದಾಖಲೆ ಬಿಡುಗಡೆ ಮಾಡಿದ್ದಾರೆ. ಜತೆಗೆ ದಿಲ್ಲಿ ಸರಕಾರ ತಮಗೆ ಯಾವುದೇ ಆರ್ಥಿಕ ನೆರವು ನೀಡಿಲ್ಲ ಎಂಬ ತಮ್ಮ ಹೇಳಿಕೆಯನ್ನು ಸಮರ್ಧಿಸಿಕೊಂಡಿದ್ದಾರೆ.

ಆಗಸ್ಟ್‌ ೬ರಂದು ಕಾಮನ್ವೆಲ್ತ್‌ ಗೇಮ್ಸ್‌ನ ೬೮ ಕೆ.ಜಿ ಮಹಿಳೆಯರ ಕುಸ್ತಿ ಸ್ಪರ್ಧೆಯಲ್ಲಿ ದಿವ್ಯಾ ಕಾಕ್ರನ್‌ ಅವರು ಕಂಚಿನ ಪದಕ ಗೆದ್ದುಕೊಂಡಿದ್ದರು. ಈ ಸಾಧಕಿ ಇದೀಗ ಭಾರತಕ್ಕೆ ವಾಪಸಾಗಿದ್ದು, ಭರ್ಜರಿ ಸ್ವಾಗತ ಪಡೆದುಕೊಂಡಿದ್ದಾರೆ. ಈ ವೇಳೆ ಅವರು ಮಾಧ್ಯಮಗಳ ಮುಂದೆ ಮಾತನಾಡಿದ ದಿವ್ಯಾ ಅವರು ತಮಗೆ ದಿಲ್ಲಿ ಸರಕಾರದಿಂದ ಯಾವುದೇ ಆರ್ಥಿಕ ನೆರವು ನೀಡಿಲ್ಲ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ದಿಲ್ಲಿಯ ಆಪ್‌ ಶಾಸಕ ಸೌರಭ್‌ ಭಾರದ್ವಾಜ್‌ ಅವರು ಪ್ರತಿಕ್ರಿಯಿಸಿ, ದಿವ್ಯಾ ಅವರ ದಿಲ್ಲಿ ಪರವಾಗಿ ಅಡಿವುದು ಕಡಿಮೆ. ಉತ್ತರ ಪ್ರದೇಶವನ್ನು ಪ್ರತಿನಿಧಿಸುತ್ತಿದ್ದರು ಎಂದು ಹೇಳಿಕೆ ನೀಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ದಿವ್ಯಾ ಅವರು ೨೦೧೧ರಿಂದ ೨೦೧೭ರವರೆಗೆ ತಾವು ದಿಲ್ಲಿ ಪರವಾಗಿ ಆಡುತ್ತಿದ್ದೆ. ಸಾಕ್ಷಿಯಾಗಿ ಇಲ್ಲಿದೆ ನೋಡಿ ಪ್ರಮಾಣಪತ್ರ ಎಂದು ಟ್ವೀಟ್‌ ಮಾಡಿದ್ದಾರೆ. ಜತೆಗೆ ಇನ್ನೂ ನಿಮಗೆ ನೆನಪಾಗದಿದ್ದರೆ ದಿಲ್ಲಿ ಪರವಾಗಿ ೧೭ ಬಂಗಾರದ ಪದಕ ಗೆದ್ದಿರುವ ಪ್ರಮಾಣಪತ್ರವನ್ನು ಇಲ್ಲಿ ಲಗತ್ತಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ | CWG-2022 | ಮಹಿಳೆಯರ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದ ದಿವ್ಯಾ ಕಾಕ್ರನ್‌

Continue Reading

ಕಾಮನ್​ವೆಲ್ತ್​ ಗೇಮ್ಸ್​

CWG- 2022 | ಬರ್ಮಿಂಗ್ಹಮ್‌ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳ ಸಾಧನೆಗಳೇನು?

ಬರ್ಮಿಂಗ್ಹಮ್‌ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ (CWG-2022) ಭಾರತದ ಕ್ರೀಡಾಪುಟುಗಳು ಮಾಡಿರುವ ಸಾಧನೆಗಳು ಕುರಿತು ಸಂಕ್ಷಿಪ್ತ ವಿವರ ಇಲ್ಲಿದೆ

VISTARANEWS.COM


on

CWG-2022
Koo

ನವ ದೆಹಲಿ : ಕಾಮನ್ವೆಲ್ತ್‌ ಒಕ್ಕೂಟಗಳ ಮಹಾ ಕ್ರೀಡಾ ಸಂಗ್ರಾಮ ಕಾಮನ್ವೆಲ್ತ್‌ ಗೇಮ್ಸ್‌ ಸೋಮವಾರ ಸಮಾಪ್ತಿಗೊಂಡಿದೆ. ಇಂಗ್ಲೆಂಡ್‌ನ ಬರ್ಮಿಂಗ್ಹಮ್ ನಗರದಲ್ಲಿ ಉದ್ಘಾಟನಾ ಸಮಾರಂಭ ಸೇರಿ ಒಟ್ಟು ೧೧ ದಿನಗಳ ಕಾಲ ಈ ಪ್ರತಿಷ್ಠಿತ ಕ್ರೀಡಾಕೂಟ ನಡೆಯಿತು. ವಿಶ್ವದ ೫೦೫೪ ಕ್ರೀಡಾಪಟುಗಳು ಭಾಗವಹಿಸಿದ್ದ ಈ ಕ್ರೀಡಾ ಜಾತ್ರೆಗೆ ಭಾರತವೂ ೧೦೬ ಪುರುಷರ ಹಾಗೂ ೧೦೪ ಮಹಿಳೆಯರು ಸೇರಿ ೨೧೦ ಕ್ರೀಡಾಪಟುಗಳನ್ನು ಕಳುಹಿಸಿತ್ತು. ಇವರೆಲ್ಲರ ಸಾಧನೆಯ ಹಿನ್ನೆಲೆಯಲ್ಲಿ ಭಾರತಕ್ಕೆ ೬೧ ಪದಕಗಳು ಸಿಕ್ಕಿವೆ. ೨೨ ಚಿನ್ನದ ಪದಕ, ೧೬ ರಜತ ಪದಕ, ೨೩ ಕಂಚಿನ ಪದಕಗಳು ಭಾರತೀಯರ ಮುಡಿಗೇರಿಗೆ. ಅಂಕಪಟ್ಟಿಯಲ್ಲೂ ಭಾರತಕ್ಕೆ ೪ನೇ ಸ್ಥಾನ ದೊರಕಿದ್ದು ಕೂಡ ಕಡಿಮೆ ಸಾಧನೆಯೇನು ಅಲ್ಲ.

ಕ್ರೀಡಾಕೂಟದ ಸಮಾರೋಪ ಸಮಾರಂಭದ ದೃಶ್ಯಗಳು

೨೦೧೮ಕ್ಕೆ ಹೋಲಿಸಿದರೆ ಭಾರತದ ಸಾಧನೆ ಸ್ವಲ್ಪ ಪ್ರಮಾಣದಲ್ಲಿ ಮಂಕಾಗಿದೆ. ಅದಕ್ಕೆ ಶೂಟಿಂಗ್‌ ಸ್ಪರ್ಧೆಯನ್ನು ಕ್ರೀಡಾಕೂಟದಿಂದ ಹೊರಗಿಟ್ಟಿರುವುದೇ ಕಾರಣ ಎಂಬುದರಲ್ಲಿ ಅನುಮಾನವೇ ಇಲ್ಲ. ಯಾಕೆಂದರೆ, ಕಳೆದ ಆವೃತ್ತಿಯಲ್ಲಿ ಭಾರತದ ಶೂಟರ್‌ಗಳು ಏಳು ಚಿನ್ನ ಸೇರಿದಂತೆ ೧೬ ಪದಕಗಳನ್ನು ಗೆದ್ದಿದ್ದರು. ಇಷ್ಟೊಂದು ಪದಕಗಳು ಹಾಲಿ ಪಟ್ಟಿಗೆ ಸೇರ್ಪಡೆಯಾಗಿದ್ದರೆ ಭಾರತದ ಕ್ರೀಡಾ ಕ್ಷೇತ್ರದ ಸುಧಾರಣೆ ಎಲ್ಲರ ಅರಿವಿಗೆ ಬಂದಿರುತ್ತಿತ್ತು. ಆದರೆ, ವಾಸ್ತವನ್ನು ಒಪ್ಪಿಕೊಳ್ಳಲೇಬೇಕು. ಆದರೆ, ಲಾನ್‌ಬೌಲ್ಸ್‌ ಎಂಬ ಕ್ರೀಡೆಯಲ್ಲಿ ಭಾರತ ಒಂದು ಚಿನ್ನ ಹಾಗೂ ಒಂದು ಬೆಳ್ಳಿ ಗೆದ್ದಿರುವುದು ಆಶಾದಾಯಕ. ಅಂತೆಯೇ ಅಥ್ಲೆಟಿಕ್ಸ್‌ನಲ್ಲೂ ಸಾಕಷ್ಟು ಸುಧಾರಣೆ ಕಂಡಿದೆ. ಕೆಲವೊಬ್ಬರು ಪದಕ ಗೆದ್ದಿದ್ದರೆ, ಇನ್ನೂ ಕೆಲವರು ಮಿಲಿ ಸೆಕೆಂಡ್‌ಗಳ ಅಂತರದಿಂದ ಪದಕ ಕಳೆದುಕೊಂಡಿದ್ದರು. ಹಿಮಾ ದಾಸ್‌ ಇದಕ್ಕೆ ಸ್ಪಷ್ಟ ಉದಾಹರಣೆ. ಅದೇನೆ ಇದ್ದರೂ, ದಿನದಿಂದ ದಿನಕ್ಕೆ ಬೆಳಗುತ್ತಿರುವ ಭಾರತದ ಕ್ರೀಡಾ ಕ್ಷೇತ್ರದ ಸಾಧನೆ ಬಗ್ಗೆ ಹೆಮ್ಮೆ ಪಡಲೇಬೇಕು. ಅದಕ್ಕಾಗಿ, ೨೦೨೨ರ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತ ಗೆದ್ದಿರುವ ಪದಕಗಳ ಪಟ್ಟಿಯ ಮೇಲೆ ಕಣ್ಣು ಹಾಯಿಸೋಣ.

ಕುಸ್ತಿ: ಭಾರತಕ್ಕೆ ಹೆಚ್ಚು ಚಿನ್ನದ ಪದಕಗಳನ್ನು ತಂದುಕೊಟ್ಟಿರುವುದು ಕುಸ್ತಿ. ಈ ಕ್ರೀಡೆಯ ಸಾಧಕರ ಪಟ್ಟಿ ಇಂತಿದೆ.

ಸಾಕ್ಷಿ ಮಲಿಕ್‌

ಚಿನ್ನ ಗೆದ್ದವರು: ಬಜರಂಗ್ ಪುನಿಯಾ (ಪುರುಷರ 65 ಕೆ.ಜಿ), ಸಾಕ್ಷಿ ಮಲಿಕ್‌ (ಮಹಿಳೆಯರ 62 ಕೆ.ಜಿ), ದೀಪಕ್ ಪುನಿಯಾ (ಪುರುಷರ86 ಕೆ.ಜಿ), ರವಿ ಕುಮಾರ್ ದಹಿಯಾ (ಪುರುಷರ 57 ಕೆ.ಜಿ) ವಿನೇಶ್ ಫೋಗಾಟ್‌ (ಮಹಿಳೆಯರ 53 ಕೆ.ಜಿ) ನವೀನ್ ಕುಮಾರ್‌ (ಪುರುಷರ 74 ಕೆ.ಜಿ). ಬೆಳ್ಳಿ ಗೆದ್ದವರು: ಅಂಶು ಮಲಿಕ್ (ಮಹಿಳೆಯರ 57 ಕೆ.ಜಿ), ಕಂಚು ಗೆದ್ದವರು: ದಿವ್ಯಾ ಕಾಕ್ರನ್‌ (ಮಹಿಳೆಯರ 68 ಕೆ.ಜಿ), ಮೋಹಿತ್ ಗ್ರೇವಾಲ್ (ಪುರುಷರ 125 ಕೆ.ಜಿ) , ಪೂಜಾ ಗೆಹ್ಲೋಟ್ (ಮಹಿಳೆಯರ 50 ಕೆ.ಜಿ), ಪೂಜಾ ಸಿಹಾಗ್ (ಮಹಿಳೆಯರ 76 ಕೆ.ಜಿ)

ಅಥ್ಲೆಟಿಕ್ಸ್: ಅಥ್ಲೆಟಿಕ್ಸ್‌ನಲ್ಲಿ ಭಾರತ ಈ ಸಲ ಸುಧಾರಣೆ ಕಂಡಿದ್ದು, ಭವಿಷ್ಯದಲ್ಲಿ ಇನ್ನಷ್ಟು ಪದಕಗಳನ್ನು ಗೆಲ್ಲುವ ಭರವಸೆ ಮೂಡಿಸಿದೆ.

ಎಲ್ದೋಸ್‌ ಪಾಲ್‌

ಚಿನ್ನ ಗೆದ್ದವರು: ಎಲ್ದೋಸ್ ಪಾಲ್(ಪುರುಷರ ಟ್ರಿಪಲ್ ಜಂಪ್). ಬೆಳ್ಳಿ ಗೆದ್ದವರು: ಅಬ್ದುಲ್ಲಾ ಅಬೂಬಕರ್ಪು (ಪುರುಷರ ಟ್ರಿಪಲ್ ಜಂಪ್), ಅವಿನಾಶ್ ಸಾಬ್ಲೆ (ಪುರುಷರ 3000ಮೀ ಸ್ಟೀಪಲ್‌ಚೇಸ್), ಪ್ರಿಯಾಂಕಾ ಗೋಸ್ವಾಮಿ (ಮಹಿಳೆಯರ 10 ಕಿಮೀ ರೇಸ್‌ವಾಕ್‌), ಎಂ ಶ್ರೀಶಂಕರ್ (ಪುರುಷರ ಲಾಂಗ್ ಜಂಪ್), ತೇಜಸ್ವಿನ್ ಶಂಕರ್ (ಪುರುಷರ ಹೈ ಜಂಪ್). ಕಂಚು ಗೆದ್ದವರು: ಅನ್ನು ರಾಣಿ (ಮಹಿಳೆಯರ ಜಾವೆಲಿನ್ ಥ್ರೋ), ಸಂದೀಪ್ ಕುಮಾರ್ (ಪುರುಷರ 10 ಕಿ.ಮೀ ರೇಸ್‌ ವಾಕ್‌_

ಬ್ಯಾಡ್ಮಿಂಟನ್: ಭಾರತದ ಜನಪ್ರಿಯ ಆಟ. ಈ ಕ್ಷೇತ್ರದ ಕ್ರೀಡಾಪಟುಗಳು ವಿಶ್ವ ಮಟ್ಟದಲ್ಲಿ ತಮ್ಮ ಸಾಮರ್ಥ್ಯ ಸಾಬೀತು ಮಾಡುತ್ತಿದ್ದು, ಇದೀಗ ಕಾಮನ್ವೆಲ್ತ್‌ನಲ್ಲೂ ಮಿಂಚಿದ್ದಾರೆ.

ಪಿ ವಿ ಸಿಂಧೂ

ಬಂಗಾರ ಗೆದ್ದವರು : ಪಿ. ವಿ ಸಿಂಧೂ (ಮಹಿಳೆಯರ ಸಿಂಗಲ್ಸ್) , ಲಕ್ಷ್ಯ ಸೇನ್ (ಪುರುಷರ ಸಿಂಗಲ್ಸ್), ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ (ಪುರುಷರ ಡಬಲ್ಸ್). ಬೆಳ್ಳಿ ಗೆದ್ದವರು : ಕಿಡಂಬಿ ಶ್ರೀಕಾಂತ್ (ಪುರುಷರ ಸಿಂಗಲ್ಸ್‌), ಸಾತ್ವಿಕ್ ಸಾಯಿರಾಜ್, ಬಿ ಸುಮೀತ್ ರೆಡ್ಡಿ, ಲಕ್ಷ್ಯ ಸೇನ್, ಚಿರಾಗ್ ಶೆಟ್ಟಿ, ತ್ರಿಸಾ ಜೊಲ್ಲಿ, ಆಕರ್ಷಿ ಕಶ್ಯಪ್, ಅಶ್ವಿನಿ ಪೊನ್ನಪ್ಪ, ಗಾಯತ್ರಿ ಗೋಪಿಚಂದ್, ಪಿ.ವಿ ಸಿಂಧೂ (ಮಿಶ್ರ ತಂಡ). ಕಂಚು ಗೆದ್ದವರು: ತ್ರಿಸಾ ಜೊಲ್ಲಿ ಮತ್ತು ಗಾಯತ್ರಿ ಗೋಪಿಚಂದ್ (ಮಹಿಳೆಯರ ಡಬಲ್ಸ್) ಕಿಡಂಬಿ ಶ್ರೀಕಾಂತ್ (ಪುರುಷರ ಸಿಂಗಲ್ಸ್).

ಬಾಕ್ಸಿಂಗ್: ಭಾರತಕ್ಕೆ ಪದಕಗಳ ಸುರಿಮಳೆಗೈದ ಇನ್ನೊಂದು ಸ್ಪರ್ಧೆ ಬಾಕ್ಸಿಂಗ್‌. ಕುಸ್ತಿಯಂತೆ ಬಾಕ್ಸಿಂಗ್‌ನಲ್ಲೂ ಭಾರತ ಆಟಗಾರ ವಿಶ್ವ ಮಟ್ಟದಲ್ಲಿ ಪ್ರಭಾವ ಬೀರುತ್ತದೆ.

ನಿಖತ್‌ ಜರೀನ್‌


ಬಂಗಾರ ಗೆದ್ದವರು: ನಿಖತ್ ಜರೀನ್ (ಮಹಿಳೆಯರ 50 ಕೆ.ಜಿ), ನೀತೂ ಗಂಗಾಸ್‌ (ಮಹಿಳೆಯರ 48 ಕೆ.ಜಿ), ಅಮಿತ್ ಪಂಘಾಲ್‌ (ಪುರುಷರ 51 ಕೆ.ಜಿ), ಬೆಳ್ಳಿ ಗೆದ್ದವರು: ಸಾಗರ್ ಅಹ್ಲಾವತ್ (ಪುರುಷರ 92 ಕೆ.ಜಿ). ಕಂಚು ಗೆದ್ದವರು: ರೋಹಿತ್ ಟೋಕಸ್‌ (ಪುರುಷರ 67 ಕೆ.ಜಿ), ಜಾಸ್ಮಿನ್‌ (ಮಹಿಳೆಯರ 60 ಕೆ.ಜಿ), ಮೊಹಮ್ಮದ್ ಹುಸಾಮುದ್ದೀನ್ (ಪುರುಷರ 57 ಕೆ.ಜಿ).

ವೇಟ್​ಲಿಫ್ಟಿಂಗ್: ಈ ಸ್ಪರ್ಧೆಯಲ್ಲಿ ಹಲವು ಪದಕಗಳು ಭಾರತಕ್ಕೆ ಬರಲಿವೆ ಎಂದು ಮೊದಲೇ ನಿರೀಕ್ಷಿಸಲಾಗಿತ್ತು. ಅದು ನಿಜವಾಗಿದೆ. ಬರ್ಮಿಂಗ್ಹಮ್‌ನಲ್ಲಿ ಈ ಕ್ರೀಡೆಯ ಸಾಧಕರು ಇವರು.

ಮೀರಾ ಬಾಯಿ ಚಾನು

ಚಿನ್ನ ಗೆದ್ದವರು : ಮೀರಾಬಾಯಿ ಚಾನು–(ಮಹಿಳೆಯರ 49 ಕೆ.ಜಿ), ಜೆರೆಮಿ ಲಾಲ್‌ರಿನುಂಗಾ (ಪುರುಷರ 67 ಕೆ.ಜಿ), ಅಚಿಂತಾ ಶೆಯುಲಿ (ಪುರುಷರ 73 ಕೆ.ಜಿ) ಬೆಳ್ಳಿ ಗೆದ್ದವರು: ಸಂಕೇತ್ ಮಹದೇವ್‌ ಸರ್ಗರ್ (ಪುರುಷರ 55 ಕೆ.ಜಿ), ಬಿಂದ್ಯಾರಾಣಿ ದೇವಿ (ಮಹಿಳೆಯರ 55 ಕೆ.ಜಿ), ವಿಕಾಸ್ ಠಾಕೂರ್ (ಪುರುಷರ 96 ಕೆ.ಜಿ) ಕಂಚು ಗೆದ್ದವರು: ಗುರುರಾಜ ಪೂಜಾರಿ (ಪುರುಷರ 61 ಕೆ.ಜಿ), ಹರ್ಜಿಂದರ್ ಕೌರ್–(ಮಹಿಳೆಯರ 71 ಕೆ.ಜಿ),–ಲವ್‌ಪ್ರೀತ್‌ ಸಿಂಗ್‌ (ಪುರುಷರ 109 ಕೆ.ಜಿ), ಗುರುದೀಪ್ ಸಿಂಗ್ (ಪುರುಷರ 109 ಕೆ.ಜಿ).

ಕ್ರಿಕೆಟ್ ತಂಡಕ್ಕೆ ಬೆಳ್ಳಿ : ಆಸ್ಟ್ರೇಲಿಯಾ ವಿರುದ್ಧ ಫೈನಲ್‌ನಲ್ಲಿ ಸೋತು ರಜತ ಪದಕ ಗೆದ್ದ ಮಹಿಳೆಯರ ಟಿ೨೦ ಸದಸ್ಯರು ಇವರು..

ಮಹಿಳೆಯರ ಟಿ೨೦ ತಂಡ

ಹರ್ಮನ್​ಪ್ರೀತ್ ಕೌರ್, ಸ್ಮೃತಿ ಮಂಧಾನಾ, ತಾನಿಯಾ ಭಾಟಿಯಾ, ಯಸ್ತಿಕಾ ಭಾಟಿಯಾ, ಹರ್ಲೀನ್ ದೇವಲ್, ರಾಜೇಶ್ವರಿ ಗಾಯಕ್ವಾಡ್, ಸಬ್ಬಿನೇನಿ ಮೇಘನಾ, ಸ್ನೇಹ್‌ ರಾಣಾ, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ, ಮೇಘನಾ ಸಿಂಗ್, ರೇಣುಕಾ ಸಿಂಗ್ ಠಾಕೂರ್, ಪೂಜಾ ವಸ್ತ್ರಾಕರ್, ರಾಧಾ ಯಾದವ್‌.

ಪುರುಷರ ಹಾಕಿ ತಂಡಕ್ಕೆ ಬೆಳ್ಳಿ : ಆಸ್ಟ್ರೇಲಿಯಾ ವಿರುದ್ಧ ಫೈನಲ್‌ನಲ್ಲಿ ೦-೭ ಗೋಲ್‌ಗಳಿಂದ ಸೋತು ರಜತ ಪದಕ ತಮ್ಮದಾಗಿಸಿಕೊಂಡ ಭಾರತ ಹಾಕಿ ತಂಡದ ಸದಸ್ಯರು ಇವರು…

ಪುರುಷರ ಹಾಕಿ ತಂಡ

ಮನ್‌ಪ್ರೀತ್ ಸಿಂಗ್, ಹರ್ಮನ್‌ಪ್ರೀತ್ ಸಿಂಗ್, ಜರ್ಮನ್‌ಪ್ರೀತ್ ಸಿಂಗ್, ಅಭಿಷೇಕ್ ನೈನ್, ಸುರೇಂದರ್ ಕುಮಾರ್, ಹಾರ್ದಿಕ್ ಸಿಂಗ್, ಗುರ್ಜಂತ್ ಸಿಂಗ್, ಮನದೀಪ್ ಸಿಂಗ್, ಕ್ರಿಶನ್ ಬಹದ್ದೂರ್ ಪಾಠಕ್, ಲಲಿತ್ ಕುಮಾರ್ ಉಪಾಧ್ಯಾಯ, ಪಿ.ಆರ್ ಶ್ರೀಜೇಶ್, ನೀಲಕಂಠ ಶರ್ಮಾ, ಶಂಶೇರ್ ಸಿಂಗ್, ವರುಣ್ ಕುಮಾರ್, ಆಕಾಶದೀಪ್ ಸಿಂಗ್, ಅಮಿತ್ ರೋಹಿದಾಸ್, ಜಿಗರಾಜ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್.

ಕಂಚು ಗೆದ್ದ ಮಹಿಳಾ ಹಾಕಿ ತಂಡ : ಕಂಚಿನ ಪದಕದ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡವನ್ನು ಪೆನಾಲ್ಟಿ ಶೂಟೌಟ್‌ ಗೋಲ್‌ ಮೂಲಕ ಸೋಲಿಸಿ ಕಂಚು ಗೆದ್ದ ಭಾರತ ಮಹಿಳೆಯರ ತಂಡದ ಸದಸ್ಯರು ಇವರು…

ಮಹಿಳೆಯರ ಹಾಕಿ ತಂಡ

ಸವಿತಾ ಪುನಿಯಾ, ಗುರ್ಜಿತ್ ಕೌರ್, ದೀಪ್ ಗ್ರೇಸ್ ಎಕ್ಕಾ, ಮೋನಿಕಾ, ಸೋನಿಕಾ, ಶರ್ಮಿಳಾ ದೇವಿ, ನಿಕ್ಕಿ ಪ್ರಧಾನ್, ರಜನಿ ಎಟಿಮಾರ್ಪು, ಸಂಗೀತಾ ಕುಮಾರಿ, ನಿಶಾ, ವಂದನಾ ಕಟಾರಿಯಾ, ಉದಿತಾ, ಲಾಲ್‌ರೆಮ್ಸಿಯಾಮಿ, ಜ್ಯೋತಿ, ನವನೀತ್ ಕೌರ್, ಸುಶೀಲಾ ಚಾನು, ಸಲಿಮಾ ಟೆಟೆ.

ಜುಡೊ: ಮಾರ್ಷಲ್‌ ಆರ್ಟ್‌ ಗುಂಪಿಗೆ ಸೇರಿದ ಈ ಕ್ರೀಡೆಯಲ್ಲೂ ಭಾರತ ಭರವಸೆ ಮೂಡಿಸಿದೆ.

ಸುಶೀಲಾ ದೇವಿ

ಬೆಳ್ಳಿ ಗೆದ್ದವರು: ಸುಶೀಲಾ ದೇವಿ ಲಿಕ್ಮಾಬಮ್ (ಮಹಿಳೆಯರ 48 ಕೆ.ಜಿ), ತುಲಿಕಾ ಮಾನ್ (ಮಹಿಳೆಯರ 78 ಕೆ.ಜಿ) ಕಂಚು ಗೆದ್ದವರು: ವಿಜಯ್ ಕುಮಾರ್ ಯಾದವ್ (ಪುರುಷರ 60 ಕೆ.ಜಿ)

ಲಾನ್ ಬೌಲ್ಸ್: ಮೊಟ್ಟ ಮೊದಲ ಬಾರಿಗೆ ಈ ಕ್ರೀಡೆಯಲ್ಲಿ ಭಾರತ ಸಾಧನೆ ಮಾಡಿದೆ. ಸಾಧಕರು ಇವರು..

ಲಾನ್‌ ಬೌಲ್ಸ್‌ ಮಹಿಳೆಯರ ತಂಡ

ಚಿನ್ನ ಗೆದ್ದವರು : ಮಹಿಳೆಯರ ಫೋರ್‌ ತಂಡದ ಸದಸ್ಯರಾದ ಲವ್ಲಿ ಚೌಬೆ, ರೂಪಾ ರಾಣಿ ಟಿರ್ಕಿ, ನೈನ್ಮೋನಿ ಸೈಕಿಯಾ, ಪಿಂಕಿ. ಬೆಳ್ಳಿ ಗೆದ್ದವರು : ಪುರುಷರ ಫೋರ್‌ ತಂಡದ ಸದಸ್ಯರಾದ ಚಂದನ್ ಕುಮಾರ್ ಸಿಂಗ್, ದಿನೇಶ್ ಕುಮಾರ್, ನವನೀತ್ ಸಿಂಗ್, ಸುನಿಲ್ ಬಹದ್ದೂರ್.

ಪವರ್ಲಿಫ್ಟಿಂಗ್: ಇಲ್ಲೂ ಒಂದು ಚಿನ್ನ ಗೆದ್ದ ಭಾರತ ಹೊಸ ಸಂಚಲನ ಮೂಡಿಸಿದೆ.
ಚಿನ್ನ ಗೆದ್ದವರು: ಸುಧೀರ್‌ (ಪುರುಷರ ಹೆವಿವೇಟ್)

ಸ್ಕ್ವ್ಯಾಷ್: ಭಾರತ ಈ ಕ್ರೀಡೆಯಲ್ಲಿ ಸ್ವಲ್ಪ ಮಟ್ಟಿಗೆ ಪ್ರಭಾವ ಹೊಂದಿದೆ. ಹೊಸ ಪೀಳಿಗೆಯ ಕ್ರೀಡಾಪಟುಗಳು ಈ ಮಾದರಿಯನ್ನು ಅಪ್ಪಿಕೊಳ್ಳುತ್ತಿದ್ದಾರೆ.

ದೀಪಿಕಾ ಪಲ್ಲಿಕಲ್‌ ಮತ್ತು ಸೌರವ್‌ ಘೋಷಾಲ್‌

ಕಂಚು ಗೆದ್ದವರು : ಸೌರವ್ ಘೋಷಾಲ್‌ (ಪುರುಷರ ಸಿಂಗಲ್ಸ್) ದೀಪಿಕಾ ಪಲ್ಲಿಕಲ್ ಮತ್ತು ಸೌರವ್ ಘೋಷಾಲ್‌ (ಮಿಶ್ರ ಡಬಲ್ಸ್).

ಟೇಬಲ್ ಟೆನಿಸ್ ಮತ್ತು ಪ್ಯಾರಾ ಟೇಬಲ್ ಟೆನಿಸ್: ಹಿಂದಿನ ಹಲವು ಕಾಮನ್ವೆಲ್ತ್‌ನಲ್ಲಿ ಭಾರತದ ಟಿಟಿ ಪಟುಗಳು ಸಾಧನೆ ಮಾಡಿದ್ದಾರೆ. ಅಂತೆಯೇ ಈ ಬಾರಿಯೂ ಉತ್ತಮ ಫಲಿತಾಂಶ ದೊರಕಿದೆ. ಈ ಕ್ರೀಡೆಯ ಸಾಧಕರು ಇಂತಿದ್ದಾರೆ.

ಶ್ರೀಜಾ ಅಕುಲಾ ಮತ್ತು ಅಚಂತಾ ಶರತ್‌ ಕಮಲ್‌

ಚಿನ್ನ ಗೆದ್ದವರು : ಅಚಂತ ಶರತ್ ಕಮಲ್ ಮತ್ತು ಶ್ರೀಜಾ ಅಕುಲಾ (ಮಿಶ್ರ ಡಬಲ್ಸ್), ಅಚಂತ ಶರತ್ ಕಮಲ್, ಸತ್ಯನ್ ಜ್ಞಾನಶೇಖರನ್, ಹರ್ಮೀತ್ ದೇಸಾಯಿ, ಸನಿಲ್ ಶೆಟ್ಟಿ (ಪುರುಷರ ತಂಡ) ಭಾವಿನಾ ಪಟೇಲ್–(ಮಹಿಳೆಯರ ಪ್ಯಾರಾ ಸಿಂಗಲ್ಸ್‌), ಅಚಂತ ಶರತ್ ಕಮಲ್ (ಪುರುಷರ ಸಿಂಗಲ್ಸ್). ಬೆಳ್ಳಿ ಗೆದ್ದವರು: ಅಚಂತ ಶರತ್ ಕಮಲ್ ಮತ್ತು ಸತ್ಯನ್ ಜ್ಞಾನಶೇಖರನ್ (ಪುರುಷರ ಡಬಲ್ಸ್). ಕಂಚು ಗೆದ್ದವರು : ಸತ್ಯನ್ ಜ್ಞಾನಶೇಖರನ್–(ಪುರುಷರ ಸಿಂಗಲ್ಸ್), ಸೋನಾಲ್ ಪಟೇಲ್ (ಮಹಿಳೆಯರ ಪ್ಯಾರಾ ಸಿಂಗಲ್ಸ್).

Continue Reading

ಕಾಮನ್​ವೆಲ್ತ್​ ಗೇಮ್ಸ್​

CWG- 2022 | ಕಾಮನ್ವೆಲ್ತ್‌ ಪದಕ ವಿಜೇತ ಕನ್ನಡಿಗನಿಗೆ ಕೊಲ್ಲೂರು ದೇಗುಲದಲ್ಲಿ ಪುಷ್ಟ ವೃಷ್ಟಿ

ಕೊಲ್ಲೂರು ದೇಗುಲಕ್ಕೆ ಹೋದ ಕಾಮನ್ವೆಲ್ತ್‌ ಗೇಮ್ಸ್‌ ಕಂಚಿನ ವಿಜೇತ ವೇಟ್‌ಲಿಫ್ಟರ್‌ ಗುರುರಾಜ ಪೂಜಾರಿಗೆ ಅವರಿಗೆ ಭಕ್ತರಿಂದ ಪುಷ್ಪವೃಷ್ಟಿ ಮಾಡಿಸಲಾಯಿತು.

VISTARANEWS.COM


on

CWG-2022
Koo

ಕೊಲ್ಲೂರು (ಉಡುಪಿ) : ಬರ್ಮಿಂಗ್ಹಮ್‌ ಕಾಮನ್ವೆಲ್ತ್‌ ಗೇಮ್ಸ್‌ನ ವೇಟ್‌ ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದ ಕನ್ನಡಿಗ ಗುರುರಾಜ ಪೂಜಾರಿ ಅವರು ಸೋಮವಾರ ಕೊಲ್ಲೂರಿನ ಮೂಕಾಂಬಿಕಾ ದೇಗುಲಕ್ಕೆ ಬೇಟಿ ನೀಡಿದ್ದ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ಅವರಿಗೆ ಪುಷ್ಪ ವೃಷ್ಟಿ ಮಾಡಿ ಅಭಿನಂದಿಸಿದರು.

ಗುರುರಾಜ ಪೂಜಾರಿ ಅವರು ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಎರಡನೇ ಪದಕ ತಂದುಕೊಟ್ಟವರು. ಅಂತೆಯೇ ಅವರು ೨೦೧೮ರ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿಯೂ ಬೆಳ್ಳಿಯ ಪದಕ ಗೆದ್ದುಕೊಂಡಿದ್ದರು. ಹೀಗೆ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸುತ್ತಿರುವ ಕನ್ನಡಿಗನಿಗೆ ಕೊಲ್ಲೂರಿನ ಜನತೆ ಅಕ್ಕರೆ ತೋರಿದರು.

ಗುರುರಾಜ ಅವರು ದೇವಳದ ಒಳಾಂಗಣ ಪ್ರವೇಶ ಮಾಡಿದಾಗ ಜೈಕಾರ ಕೂಗಿದರಲ್ಲದೆ, ಪುಷ್ಪ ವೃಷ್ಟಿ ಮಾಡಿ ಅಭಿನಂದಿಸಿದರು. ಬಳಿಕ ದೇಗುಲದ ವತಿಯಿಂದ ಕಾಮನ್ವೆಲ್ತ್‌ ವೀರನಿಗೆ ಅಭಿನಂದನೆ ಮಾಡಲಾಯಿತು.

ಗುರುರಾಜ ಪೂಜಾರಿ ಕುಂದಾಪುರ ಸಮೀಪದ ಚಿತ್ತೂರಿನ‌ ನಿವಾಸಿ. ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿಯಾಗಿರುವ ಅವರು ಬಾಲ್ಯದಿಂದಲೇ ಕ್ರೀಡೆಯ ಕಡೆಗೆ ಒಲವು ಹೊಂದಿದ್ದರು.

ಇದನ್ನೂ ಓದಿ | CWG-2022 | ಕಂಚು ಗೆದ್ದ ಗುರುರಾಜ ಪೂಜಾರಿ ಮನೆಯಲ್ಲಿ ಸಂಭ್ರಮ

Continue Reading

ಕಾಮನ್​ವೆಲ್ತ್​ ಗೇಮ್ಸ್​

CWG- 2022 | ಆಸ್ಟ್ರೇಲಿಯಾ ತಂಡಕ್ಕೆ ಶರಣಾದ ಭಾರತ ತಂಡಕ್ಕೆ ಬೆಳ್ಳಿ ಪದಕ

ಆಸ್ಟ್ರೇಲಿಯಾ ತಂಡದ ವಿರುದ್ಧ ಫೈನಲ್‌ ಪಂದ್ಯದಲ್ಲಿ 0-7 ಗೋಲ್‌ಗಳಿಂದ ಸೋತ ಭಾರತ ತಂಡ ಬೆಳ್ಳಿ ಪದಕವನ್ನು ಗೆದ್ದುಕೊಂಡಿದೆ.

VISTARANEWS.COM


on

CWG-2022
Koo

ಬರ್ಮಿಂಗ್ಹಮ್‌ : ಕಾಮನ್ವೆಲ್ತ್‌ ಗೇಮ್ಸ್‌ನ ಪುರುಷರ ಹಾಕಿಯ ಫೈನಲ್‌ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ೭-೦ ಗೋಲ್‌ಗಳ ಹೀನಾಯ ಸೋಲಿಗೆ ಒಳಗಾಗಿದೆ. ಇದರೊಂದಿಗೆ ಮನ್‌ಪ್ರೀತ್‌ ಬಳಗ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿತು. ಬರ್ಮಿಂಗ್ಹಮ್‌ನಲ್ಲಿ ಭಾರತದ ಪಾಲಿನ ಕೊನೇ ಸ್ಪರ್ಧೆ ಇದಾಗಿತ್ತು. ಹೀಗಾಗಿ ರಜತ ಪದಕದೊಂದಿಗೆ ಭಾರತದ ಅಥ್ಲೀಟ್‌ಗಳು ಅಭಿಯಾನ ಮುಗಿಸಿದ್ದಾರೆ.

೧೯೯೮ರಿಂದ ಸತತವಾಗಿ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಬಂಗಾರದ ಪದಕ ಗೆಲ್ಲುತ್ತಿರುವ ಆಸ್ಟ್ರೇಲಿಯಾ ತಂಡದ ವಿರುದ್ಧ ಭಾರತ ಹೀನಾಯ ಪ್ರದರ್ಶನ ನೀಡಿತು. ೦-೭ ಅಂತರದಿಂದ ಸೋಲು ಕಾಣುವ ಮೂಲಕ ಬೆಳ್ಳಿಯ ಪದಕವನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಯಿತು. ಗುಂಪು ಹಂತದಲ್ಲಿ ಗರ್ಜಿಸಿದ್ದ ಭಾರತದ ಆಟಗಾರರು ಪ್ರಶಸ್ತಿ ಸುತ್ತಿನಲ್ಲಿ ಕನಿಷ್ಠ ಪ್ರತಿರೋಧ ಒಡ್ಡಲಿಲ್ಲ. ಹೀಗಾಗಿ ಏಳು ಬಾರಿಯ ಚಾಂಪಿಯನ್‌ ಆಸ್ಟ್ರೇಲಿಯಾ ಸುಲಭವಾಗಿ ಪ್ರಶಸ್ತಿ ಗೆದ್ದುಕೊಂಡಿತು.

ಇದನ್ನೂ ಓದಿ | CWG- 2022 | ಬ್ಯಾಡ್ಮಿಂಟನ್‌ ಡಬಲ್ಸ್‌ನಲ್ಲಿ ಬಂಗಾರ ಗೆದ್ದ ಚಿರಾಗ್‌- ಸಾತ್ವಿಕ್‌ ಜೋಡಿ

Continue Reading
Advertisement
Mureder Case
ಪ್ರಮುಖ ಸುದ್ದಿ20 mins ago

Murder Case : ಕೊಡಗಿನಲ್ಲಿ ಮದುವೆ ಕ್ಯಾನ್ಸಲ್ ಆದ ಕೋಪಕ್ಕೆ ಬಾಲಕಿಯ ರುಂಡ ಕತ್ತರಿಸಿ ಕೊಂದ ಪ್ರೇಮಿ

Akshaya Tritiya Bala Rama Silver Idol gift from Sri Sai Gold Palace in bengaluru
ಬೆಂಗಳೂರು2 hours ago

Sri Sai Gold Palace: ಅಕ್ಷಯ ತೃತೀಯ; ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನಿಂದ ಶ್ರೀ ಬಾಲ ರಾಮನ ಬೆಳ್ಳಿ ವಿಗ್ರಹ ಉಡುಗೊರೆ

IPL 2024
ಪ್ರಮುಖ ಸುದ್ದಿ3 hours ago

IPL 2024 : ಆರ್​ಸಿಬಿಗೆ ಐದನೇ ವಿಜಯ, ಪಂಜಾಬ್​ ವಿರುದ್ಧ 60 ರನ್ ಭರ್ಜರಿ ಗೆಲುವು

Padma Awards 2024
ಪ್ರಮುಖ ಸುದ್ದಿ3 hours ago

Padma Awards 2024 : ವೈಜಯಂತಿಮಾಲಾ, ಚಿರಂಜೀವಿ ಸೇರಿದಂತೆ ಹಲವು ಗಣ್ಯರಿಗೆ ಪದ್ಮ ಪ್ರಶಸ್ತಿ ಪ್ರದಾನ

Prajwal Revanna Case
ಪ್ರಮುಖ ಸುದ್ದಿ4 hours ago

Prajwal Revanna Case : ಬಿಜೆಪಿ ಮುಖಂಡ ದೇವರಾಜೇಗೌಡ ವಿರುದ್ಧ ಲೈಂಗಿಕ ಕಿರುಕುಳ ಕೇಸ್​ ದಾಖಲು

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ5 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

T20 World Cup 2024
ಪ್ರಮುಖ ಸುದ್ದಿ5 hours ago

T20 World Cup : ವಿಶ್ವ ಕಪ್​ಗೆ ತಂಡ ಪ್ರಕಟಿಸಿದ ಶ್ರೀಲಂಕಾ, ಸಿಎಸ್​​ಕೆ ಆಟಗಾರನಿಗೂ ಚಾನ್ಸ್​​

ಉತ್ತರ ಕನ್ನಡ5 hours ago

SSLC Result 2024: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾರ್ವಭೌಮ ಗುರುಕುಲಕ್ಕೆ ಶೇ.100 ಫಲಿತಾಂಶ

Yallapur Vishwadarshana Group of institutions performed well in SSLC Result 2024
ಉತ್ತರ ಕನ್ನಡ5 hours ago

SSLC Result 2024: ಯಲ್ಲಾಪುರದ ವಿಶ್ವದರ್ಶನ ಶಿಕ್ಷಣ ಸಮೂಹ ಪ್ರೌಢಶಾಲೆಗಳ ಉತ್ತಮ ಸಾಧನೆ

women's Cricket team
ಕ್ರೀಡೆ5 hours ago

Womens Cricket Team : ಬಾಂಗ್ಲಾ ವಿರುದ್ಧ 5-0 ಕ್ಲೀನ್​ ಸ್ವೀಪ್ ಸಾಧನೆ ಮಾಡಿದ ಭಾರತದ ವನಿತೆಯರು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ5 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ6 hours ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ7 hours ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

SSLC Result 2024 what is the reason for most of the students fail in SSLC
ಕರ್ನಾಟಕ13 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ13 hours ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

SSLC Result 2024 secret behind 20 percent grace marks
ಕರ್ನಾಟಕ14 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

SSLC Result 2024 78 schools get zero results in SSLC exams
ಬೆಂಗಳೂರು14 hours ago

SSLC Result 2024: ಎಸ್‌ಎಸ್‌ಎಲ್‌ಸಿ ಎಕ್ಸಾಂನಲ್ಲಿ ಸಿಕ್ಸರ್‌ ಬಾರಿಸಿದ ಗ್ರಾಮೀಣ ಪ್ರತಿಭೆಗಳು; 78 ಶಾಲೆಗಳಲ್ಲಿ ಶೂನ್ಯ ರಿಸಲ್ಟ್‌!

SSLC Result 2024 SSLC students get 20 percent grace marks but result is very poor
ಶಿಕ್ಷಣ14 hours ago

SSLC Result 2024: ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಸಿಕ್ತು 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌! ಆದ್ರೂ ಫಲಿತಾಂಶ ತೀರಾ ಕಳಪೆ

SSLC Exam Result 2024 Announce
ಬೆಂಗಳೂರು16 hours ago

SSLC Result 2024: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಶೇ. 73.40 ವಿದ್ಯಾರ್ಥಿಗಳು ಪಾಸ್‌, ಉಡುಪಿ ಫಸ್ಟ್‌, ಯಾದಗಿರಿ ಲಾಸ್ಟ್‌

Dina Bhavishya
ಭವಿಷ್ಯ2 days ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

ಟ್ರೆಂಡಿಂಗ್‌