ತಂತ್ರಜ್ಞಾನ
ChatGPT: ಚಾಟ್‌ಜಿಪಿಟಿ ಮೂಲಕ ಬರ್ಲಿನ್ ನಗರದಲ್ಲಿ ಬಾಡಿಗೆ ಮನೆ ಹುಡುಕಿದ ಯುವಕ!
ChatGPT: ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ದಿಮತ್ತೆ ಆಧರಿತ ಚಾಟ್‌ಜಿಪಿಟಿ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಈ ಚಾಟ್‌ಜಿಪಿಟಿಯ ಬಳಕೆಯ ಸಾಧ್ಯತೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ.
ನವದೆಹಲಿ: ಬೃಹತ್ ನಗರಗಳಲ್ಲಿ ಬಾಡಿಗೆ ಮನೆ ಹುಡುಕುವುದು ಸರಳವಲ್ಲ. ತುಂಬಾ ಕಷ್ಟಪಡಬೇಕಾಗುತ್ತದೆ. ಇದಕ್ಕಾಗಿ ಸಾಕಷ್ಟು ಆ್ಯಪ್‌ಗಳಿವೆ. ಆದರೂ, ಬಾಡಿಗೆ ಮನೆ ಹುಡುಕುವುದು ಹರಸಾಹಸದ ಕೆಲಸವೇ ಸರಿ. ಆದರೆ, ಎಐ ಆಧರಿತ ಚಾಟ್‌ಜಿಪಿಟಿ ನಿಮ್ಮ ಕೆಲಸವನ್ನು ಹಗುರ ಮಾಡುತ್ತಿದೆ. ಹೌದು, 28 ವರ್ಷದ ಯುವಕನೊಬ್ಬ ಜರ್ಮನಿಯ ಬರ್ಲಿನ್ (Berlin) ನಗರದಲ್ಲಿ ಬಾಡಿಗೆ ಮನೆ ಹುಡುಕಿ ಸುಸ್ತಾಗಿದ್ದ. ಆದರೂ ಸಿಕ್ಕಿರಲಿಲ್ಲ. ಕೊನೆಗೆ ಚಾಟ್‌ಜಿಪಿಟಿ (ChatGPT) ಮೂಲಕ ಎರಡೇ ವಾರದಲ್ಲಿ ಆತನಿಗೆ ಮನೆ ಸಿಕ್ಕಿದೆ!(Viral News)
ಇಡಬ್ಲ್ಯೂಒಆರ್ ಎಂಬ ಸಾಹಸೋದ್ಯಮ ಬಂಡವಾಳ ಸಂಸ್ಥೆಯನ್ನು ನಡೆಸುತ್ತಿರುವ 28 ವರ್ಷದ ಉದ್ಯಮಿ ಡೇನಿಯಲ್ ಡಿಪೋಲ್ಡ್ ಮತ್ತು ಅವನ ಗೆಳತಿ ಬರ್ಲಿನ್ ನಗರದಲ್ಲಿ ಅಪಾರ್ಟ್‌ಮೆಂಟ್ ಬಾಡಿಗೆ ಪಡೆಯಲು ಭಾರೀ ಕಷ್ಟಪಟ್ಟಿದ್ದರು. ಆದರೂ ಸಿಕ್ಕಿರಲಿಲ್ಲ. ಸುಮಾರು ನಾಲ್ಕು ತಿಂಗಳುಗಳ ಕಾಲ ಹುಡುಕಿದರು. ಜತೆಗೆ Immo Scout24, immowelt ಮತ್ತು Immonet ಜನಪ್ರಿಯ ರಿಯಾಲ್ಟಿ ವೆಬ್‌ಸೈಟ್‌ಗಳ ಮೂಲಕ ಹುಡುಕಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ತಮಗೆ ಪರಿಚಯದವರ ಮೂಲಕವೂ ಬಾಡಿಗೆ ಮನೆಗೆ ಪ್ರಯತ್ನಿಸಿದರೂ ಏನೂ ಲಾಭವಾಗಲಿಲ್ಲ.
ತಿಂಗಳುಗಟ್ಟಲೆ ಬಾಡಿಗೆ ಮನೆ ಪಡೆಯಲು ಕಷ್ಟಪಟ್ಟ ನಂತರ ಡಿಪೋಲ್ಡ್ ಅವರು ಚಾಟ್‌ಜಿಪಿಟಿ ಮೊರೆ ಹೋದರು. ಬುದ್ಧಿವಂತ ಮತ್ತು ತಂತ್ರಜ್ಞಾನ-ಕೇಂದ್ರಿತ ವಿಧಾನವನ್ನು ಬಳಸಿಕೊಂಡು ಅಪಾರ್ಟ್‌ಮೆಂಟ್ ಹೇಗೆ ಕಂಡುಹಿಡಿಯುವುದು ಎಂಬುದರ ಕುರಿತು 20 ಐಡಿಯಾಗಳನ್ನು ಒದಗಿಸುವಂತೆ ಅವರು ಚಾಟ್‌ಬಾಟ್‌ಗೆ ಕೇಳಿದರು. ಹೌಸಿಂಗ್ ವೆಬ್‌ಸೈಟ್‌ಗಳಲ್ಲಿ ಸ್ವಯಂಚಾಲಿತ ಎಚ್ಚರಿಕೆಗಳನ್ನು ಹೊಂದಿಸುವುದು ಮತ್ತು ಉತ್ತಮ ವ್ಯವಹಾರಗಳೊಂದಿಗೆ ಪ್ರದೇಶಗಳನ್ನು ನಿರ್ಧರಿಸಲು ಮಷಿನ್ ಲರ್ನಿಂಗ್ ಸಿಸ್ಟಮ್ ರಚಿಸುವಂತಹ ವಿವಿಧ ಸಲಹೆಗಳೊಂದಿಗೆ ಚಾಟ್‌ಬಾಟ್ ಉತ್ತರಗಳನ್ನು ನೀಡಿತು.
ಇದನ್ನೂ ಓದಿ: Apple employees : ಆ್ಯಪಲ್ ಉದ್ಯೋಗಿಗಳಿಗೆ ಚಾಟ್‌ಜಿಪಿಟಿ ಬ್ಯಾನ್, ಕಾರಣವೇನು?
ಚಾಟ್‌ಜಿಪಿಟಿ ನೀಡಿದ ಕೆಲವು ಸಲಹೆಗಳು ಡಿಪೋಲ್ಡ್‌ನಲ್ಲಿ ಆಸಕ್ತಿ ಹುಟ್ಟು ಹಾಕಿದರೂ, ಬಹಳಷ್ಟು ಸಲಹೆಗಳು ಪ್ರಾಯೋಗಿಕವಾಗಿರಲಿಲ್ಲ ಎಂಬುದನ್ನು ಅವರು ಕಂಡುಕೊಂಡರು. ಹಾಗಾಗಿ, ಮತ್ತೆ ಸಲಹೆ ನೀಡುವಂತೆ ಚಾಟ್‌ಜಿಪಿಟಿಗೆ ಕೇಳಿಕೊಂಡರು. ಆಗ ಬಂದ ಕೆಲವು ಸಲಹೆಗಳ ಪೈಕಿ ಕೆಲವು ತುಂಬಾ ಚೆನ್ನಾಗಿದ್ದವು. ಈ ಪೈಕಿ ಒಂದು ಸಲಹೆಯಲ್ಲಿ, ಬರ್ಲಿನ್‌ನಲ್ಲಿರುವ ಎಲ್ಲ ಖಾಸಗಿ ಮತ್ತು ಸಾರ್ವಜನಿಕ ಆಸ್ತಿಗಳ ವ್ಯವಸ್ಥಾಪಕರ ಮಾಹಿತಿಯನ್ನು ಒಳಗೊಂಡ ಡೇಟಾ ಬೇಸ್ ರಚಿಸುವುದು ಮತ್ತು ಅದರಿಂದ ಸಂಭಾವ್ಯ ಬಾಡಿಗೆ ಆಯ್ಕೆಗಳನ್ನು ಗುರುತಿಸುವುದಾಗಿತ್ತು. ಈ ಮಾರ್ಗದ ಮೂಲಕ ಅವರು ಕೊನೆಗೂ ಬಾಡಿಗೆ ಅಪಾರ್ಟ್‌ಮೆಂಟ್ ಪಡೆದುಕೊಂಡರು.
ಇನ್ನಷ್ಟು ಕುತೂಹಲಕರ ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಆಟೋಮೊಬೈಲ್
Maruti Suzuki : ಮಾರುತಿಯ 5 ಡೋರ್ ಜಿಮ್ನಿ ಬಿಡುಗಡೆ, ಮಹೀಂದ್ರಾ ಥಾರ್ಗೆ ಪೈಪೋಟಿ ಖಚಿತ
ಎಂಟ್ರಿ ಲೆವೆಲ್ ಜಿಮ್ನಿ (Jimny) ಝೀಟಾ ವೇರಿಯೆಂಟ್ನ ಬೆಲೆಯು ಭಾರತದ ಎಕ್ಸ್ ಶೋರೂಂ ರೂ.12.74 ಲಕ್ಷ ರೂಪಾಯಿಗಳಾಗಿದ್ದರೆ ಟಾಪ್ ಎಂಡ್ ಕಾರಿನ ಬೆಲೆಯು 15.5 ಲಕ್ಷ ರೂಪಾಯಿ .
ನವ ದೆಹಲಿ: ಮಾರುತಿ ಸುಜು (Maruti Suzuki)ಕಿ ಕಂಪನಿಯು ತನ್ನ ಬಹುನಿರೀಕ್ಷಿತ ಜಿಮ್ನಿ ಎಸ್ಯುವಿಯನ್ನು (Jimny) ಭಾರತದಲ್ಲಿ ಬಿಡುಗಡೆಗೊಳಿಸಿದೆ. ಎಂಟ್ರಿ ಲೆವೆಲ್ ಝೀಟಾ ವೇರಿಯೆಂಟ್ನ ಬೆಲೆಯು ಭಾರತದ ಎಕ್ಸ್ ಶೋರೂಂ ರೂ.12.74 ಲಕ್ಷ ರೂಪಾಯಿಗಳಾಗಿದ್ದರೆ ಟಾಪ್ ಎಂಡ್ ಕಾರಿನ ಬೆಲೆಯು 15.5 ಲಕ್ಷ ರೂಪಾಯಿ . ಆಟೋ ಎಕ್ಸ್ ಪೋ 2023ರಲ್ಲಿ ಬಿಡುಗಡೆಯಾದಾಗಿನಿಂದ ಜಿಮ್ನಿಯ ಬುಕಿಂಗ್ ನಡೆಯುತ್ತಿದೆ ಮತ್ತು ಕಂಪನಿಯು ಈಗಾಗಲೇ 30,000ಕ್ಕೂ ಹೆಚ್ಚು ಬುಕಿಂಗ್ ಪಡೆದುಕೊಂಡಿದೆ. ಡೀಲರ್ ಮೂಲಗಳ ಪ್ರಕಾರ ಜೂನ್ ಮಧ್ಯದಿಂದ ಹಂತಹಂತವಾಗಿ ವಿತರಣೆಗಳು ಪ್ರಾರಂಭವಾಗುತ್ತವೆ.
ನಮ್ಮ ಮಾರುಕಟ್ಟೆಗಾಗಿ ನಿರ್ದಿಷ್ಟವಾಗಿ ಅಭಿವೃದ್ಧಿಪಡಿಸಲಾಗಿದೆ. ಇದು ಐದು ಡೋರ್ಗಳ ಜಿಮ್ನಿಯನ್ನು ಪಡೆದ ಮೊದಲ ದೇಶ ಭಾರತ. ಜಿಮ್ನಿಯನ್ನು ಮಾರುತಿಯ ಗುರುಗ್ರಾಮ್ ಘಟಕದಲ್ಲಿ ಉತ್ಪಾದಿಸಲಾಗುತ್ತಿದೆ. ಅಲ್ಲಿಂದಲೇ ಇತರ ದೇಶಗಳಿಗೆ ರಫ್ತು ಮಾಡಲಾಗುವುದು. ಗ್ರಾಹಕರು ಮಾಸಿಕ 33,550 ರೂಪಾಯಿ ಚಂದಾದಾರಿಕೆ ಮೂಲಕ ಜಿಮ್ನಿಯನ್ನು ತಮ್ಮದಾಗಿಸಿಕೊಳ್ಳಬಹುದು ಎಂದ ಕಂಪನಿ ಹೇಳಿದೆ.
ಮಾರುತಿ ಸುಜುಕಿ ಜಿಮ್ನಿ ಪವರ್ ಟ್ರೇನ್
ಜಿಮ್ನಿ ಎಸ್ಯುವಿಯಲ್ಲಿ 1.5 ಲೀಟರಿನ 4 ಸಿಲಿಂಡರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಇದೆ. ಇಉ 105 ಬಿಎಚ್ಪಿ ಪವರ್, ಹಾಗೂ 134 ಎನ್ಎಂ ಟಾರ್ಕ್ ಬಿಡುಗಡೆ ಮಾಡುತ್ತದೆ. 5 ಸ್ಪೀಡ್ನ ಮ್ಯಾನುಯಲ್ ಅಥವಾ 4 ಸ್ಪೀಡಿನ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಆಯ್ಕೆಯಿದೆ. ಮಾರುತಿ ತನ್ನೆಲ್ಲ ಕಾರುಗಳಿಗೆ ಕೆ15 ಸಿ ಎಂಜಿನ್ ಬಳಸುತ್ತಿರುವ ನಡುವೆಯೇ ಜಿಮ್ನಿಯಲ್ಲಿ ಹಳೆಯ ಕೆ 15ಬಿ ಎಂಜಿನ್ ಅನ್ನು ಬಳಸುತ್ತದೆ. ಜಿಮ್ನಿ ಮ್ಯಾನುವಲ್ ಗೇರ್ಬಾಕ್ಸ್ ಹೊಂದಿರುವ ಕಾರು 16.94 ಕಿ.ಮೀ ಮೈಲೇಜ್ ಕೊಟ್ಟರೆ, ಆಟೋಮ್ಯಾಟಿಕ್ ಗೇರ್ಬಾಕ್ಸ್ ಹೊಂದಿರುವ ಕಾರು 16.39 ಕಿ.ಮೀ ಮೈಲೇಜ್ ನೀಡುತ್ತದೆ.
ಜಿಮ್ನಿಯ ಆಫ್ರೋಡ್ಗೆ ಸಂಬಂಧಿಸಿ ಹೇಳುವುದಾದರೆ ಆಲ್ಗ್ರಿಪ್ ಪ್ರೊ 4ಡಬ್ಲ್ಯೂಡಿ ಸಿಸ್ಟಂ ಅನ್ನು ಮ್ಯಾನುವಲ್ ಗೇರ್ಬಾಕ್ಸ್ನಲ್ಲಿ ನೀಡಲಾಗಿದೆ. ಅದೇ ರೀತಿ 2WD-ಹೈ, 4WD-ಹೈ ಮತ್ತು 4WD-ಲೊ ಮೋಡ್ನೊಂದಿಗೆ ನೀಡಲಾಗಿದೆ. ಲ್ಯಾಡರ್ ಫ್ರೇಮ್ ಚಾಸಿಸ್ ಅನ್ನು ಇದು ಹೊಂದಿ್ದು. 3ಲಿಂಕ್ ಬಲಿಷ್ಠ ಆಕ್ಸಲ್ ಸಸ್ಪೆನ್ಷನ್ ಎಲೆಕ್ಟ್ರಾನಿಕ್ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ ಕೊಡಲಾಗಿದೆ. ಜಿಮ್ನಿ 5 ಡೋರ್ ಕಾರು 210 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.
ಮಾರುತಿ ಸುಜುಕಿ ಜಿಮ್ನಿಯ ವೈಶಿಷ್ಟ್ಯಗಳು
ಸ್ವಯಂಚಾಲಿತ ಎಲ್ಇಡಿ ಹೆಡ್ ಲ್ಯಾಂಪ್ಗಳು, 9.0 ಇಂಚಿನ ಸ್ಮಾರ್ಟ್ ಪ್ಲೇ ಪ್ರೊ + ಇನ್ಫೋಟೈನ್ಮೆಂಟ್ ಸಿಸ್ಟಮ್, ಸ್ವಯಂಚಾಲಿತ ಕ್ಲೈಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಕೀಲೆಸ್ ಎಂಟ್ರ, ವೈರ್ ಲೆಸ್ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸೇರಿದಂತೆ ಜಿಮ್ನಿಯ ಆಲ್ಫಾ ಟ್ರಿಮ್ ಗರಿಷ್ಠ ಫೀಚರ್ಗಳನ್ನು ಪಡೆದುಕೊಂಡಿವೆ. ಆರು ಏರ್ ಬ್ಯಾಗ್ಗಳು, ಇಎಸ್ಪಿ ಮತ್ತು ಹಿಲ್-ಹೋಲ್ಡ್ ಅಸಿಸ್ಟ್ ಅನ್ನು ಒಳಗೊಂಡಿರುವ ಸುರಕ್ಷತಾ ಫೀಚರ್ಗಳನ್ನು ಎಲ್ಲ ವೇರಿಯೆಂಟ್ಗಳಲ್ಲಿ ನೀಡಲಾಗಿದೆ.
ಜಿಮ್ನಿ ಒಟ್ಟು ಏಳು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ, ಅವುಗಳಲ್ಲಿ ಎರಡು ಡ್ಯುಯಲ್ ಟೋನ್. ಐದು ಬಾಗಿಲುಗಳ ಹೊರತಾಗಿಯೂ, ಜಿಮ್ನಿ ಇನ್ನೂ ನಾಲ್ಕು ಆಸನಗಳ ಮಾದರಿಯಾಗಿದೆ.
ಇಂಟೀರಿಯರ್ ವಿಚಾರಕ್ಕೆ ಬಂದರೆ ಡ್ಯಾಶ್ಬೋರ್ಡ್ ಸಂಪೂರ್ಣ ಕಪ್ಪು ಥೀಮ್ ಅನ್ನು ಹೊಂದಿದೆ. ಪ್ರಯಾಣಿಕರ ಸೀಟಿನ ಬದಿಯಲ್ಲಿ ಡ್ಯಾಶ್ಬೋರ್ಡ್ ಮೌಂಟೆಡ್ ಗ್ರಾಬ್ ಹ್ಯಾಂಡಲ್ಗಳಿವೆ. ಮಾರುತಿ ಸ್ವಿಫ್ಟ್ನಲ್ಲಿರುವ ಕೆಲವೊಂದು ಫೀಚರ್ಗಳನ್ನು ಇಲ್ಲಿ ಅಳವಡಿಸಿಕೊಳ್ಳಲಾಗಿದೆ. ಥಾರ್ ನಲ್ಲಿರುವಂತೆ, ಪವರ್ ವಿಂಡೋಗಳನ್ನು ನಿರ್ವಹಿಸುವ ಬಟನ್ ಗಳು ಮುಂಭಾಗದ ಎರಡು ಆಸನಗಳ ನಡುವೆ ಇವೆ.
ಮಾರುತಿ ಸುಜುಕಿ ಜಿಮ್ನಿ ವಿನ್ಯಾಸ
ಮಾರುತಿ ಜಿಮ್ನಿ 5 ಓಡರ್ 3,985 ಎಂಎಂ ಉದ್ದ ಮತ್ತು 2,590 ಎಂಎಂ ವೀಲ್ಬೇಸ್ ಹೊಂದಿದೆ. ಇದು 3 ಡೋರ್ ಜಿಮ್ನಿಗಿಂತ ಮಾದರಿಗಿಂತ 340 ಎಂಎಂ ಉದ್ದವಾಗಿದೆ. 1,645 ಎಂಎಂ ಅಗಲ ಮತ್ತು 1,720 ಎಂಎಂ ಎತ್ತರ ಹೊಂದಿದೆ. ನೇರವಾದ ಪಿಲ್ಲರ್ಗಳು , ಕ್ಲೀನ್ ಸರ್ಫೇಸಿಂಗ್, ವೃತ್ತಾಕಾರದ ಹೆಡ್ ಲ್ಯಾಂಪ್ಗಳು, ಸ್ಲ್ಯಾಟೆಡ್ ಗ್ರಿಲ್, ಚಂಕಿ ಆಫ್-ರೋಡ್ ಟೈರ್ಗಳು, ಫ್ಲೇರ್ಡ್ ವ್ಹೀಲ್ ಕಮಾನುಗಳು ಮತ್ತು ಟೈಲ್ ಗೇಟ್- ಮೌಂಟೆಡ್ ಸ್ಪೇರ್ ಟೈರ್ ಜಿಮ್ನಿಯ ನೋಟವನ್ನು ಹೆಚ್ಚಿಸಿದೆ. ಜಿಮ್ನಿ 5 ಡೋರ್ ಕಾರು 15 ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದ್ದು, 195/80 ಸೆಕ್ಷನ್ ಟೈರ್ಗಳನ್ನು ಬಳಸಲಾಗಿದೆ.
ಮಾರುತಿ ಸುಜುಕಿ ಜಿಮ್ನಿ ಪ್ರತಿಸ್ಪರ್ಧಿ
ಜಿಮ್ನಿ ಭಾರತದಲ್ಲಿ ಆಫ್-ರೋಡರ್ಗಳ ಆಕರ್ಷಣೆಗೆ ಪೂರಕವಾಗಿದೆ. ನೇರ ಪ್ರತಿಸ್ಪರ್ಧಿ ಅಲ್ಲದಿದ್ದರೂ ಬೆಲೆ ಮತ್ತು ವಿನ್ಯಾಸದ ಕಾರಣಕ್ಕೆ ಮಹೀಂದ್ರಾ ಥಾರ್ (10.54 ಲಕ್ಷ – ರೂ. 16.77 ಲಕ್ಷ ರೂಪಾಯಿ ಬೆಲೆ) ಮತ್ತು ಫೋರ್ಸ್ ಗೂರ್ಖಾ (15.10 ಲಕ್ಷ ರೂಪಾಯಿ ಬೆಲೆ) ಜಿಮ್ನಿಯ ಪ್ರತಿಸ್ಪರ್ಧಿ ಕಾರುಗಳು.
ತಂತ್ರಜ್ಞಾನ
ಸ್ವಂತ ಬ್ರಾಡ್‌ಬ್ಯಾಂಡ್ K-FON ಆರಂಭಿಸಿದ ಕೇರಳ! ಇದು ನಿಜವಾದ ‘ಕೇರಳ ಸ್ಟೋರಿ’ ಅಂದ್ರು ಸಿಎಂ ಪಿಣರಾಯಿ
ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಕೆ ಫಾನ್ ಬ್ರಾಡ್ ಬ್ಯಾಂಡ್ (K-FON) ಸೇವೆಗೆ ಚಾಲನೆ ನೀಡಿದರು. ಸ್ವಂತ ಬ್ರಾಡ್‌ಬ್ಯಾಂಡ್ ಹೊಂದಿದ ದೇಶದ ಮೊದಲ ರಾಜ್ಯ ಎಂಬ ಕೀರ್ತಿಗೆ ಕೇರಳ ಪಾತ್ರವಾಗಿದೆ.
ನವದೆಹಲಿ: ನಮ್ಮ ನೆರೆಯ ಕೇರಳ ರಾಜ್ಯವು ಮತ್ತೊಂದು ಸಾಹಸವನ್ನು ಮೆರೆದಿದೆ. ದೇವರ ನಾಡು ಎಂದು ಕರೆಯಿಸಿಕೊಳ್ಳುವ ಕೇರಳವು ಸ್ವಂತ ಬ್ರಾಡ್‌ಬ್ಯಾಂಡ್ ಹೊಂದಿದ ದೇಶದ ಮೊದಲ ರಾಜ್ಯ ಎಂಬ ಕೀರ್ತಿಗೆ ಪಾತ್ರವಾಗಿದೆ. ಕೇರಳವು ಮಂಗಳವಾರದಿಂದ ತನ್ನದೇ ಆದ ಕೆ ಫಾನ್ (Kerala Fibre Optic Network K-FON) ಆರಂಭಿಸಿದೆ. ಜನರಿಗೆ ಇಂಟರ್ನೆಟ್ ಲಭ್ಯತೆಯನ್ನು ಹೆಚ್ಚಿಸುವುದಕ್ಕಾಗಿ ಈ ಸ್ವಂತ ಬ್ರಾಡ್‌ಬ್ಯಾಂಡ್ ಸೇವೆ ಆರಂಭಿಸಲಾಗಿದೆ ಎಂದು ಕೇರಳ ಸರ್ಕಾರ ಹೇಳಿಕೊಂಡಿದೆ.
ಕೆ ಫಾನ್ ಬ್ರಾಡ್ ಬ್ಯಾಂಡ್ ಸೇವೆಯನ್ನು ಉದ್ಘಾಟಿಸಿ ಮಾತನಾಡಿದ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು, ಎಲ್ಲರಿಗೂ ಇಂಟರ್ನೆಟ್ ಲಭ್ಯವಾಗಬೇಕು ಎಂದು ಹೇಳಿದರು. ಕೇರಳವನ್ನು ಜ್ಞಾನದ ಆರ್ಥಿಕತೆಯಾಗಿ ಪರಿವರ್ತಿಸುವ ಮತ್ತು ನಾವೀನ್ಯತೆಯಿಂದ ಕೂಡಿದ ಸಮಾಜವನ್ನು ಬೆಳೆಸುವ ಪ್ರಮುಖ ಹೆಜ್ಜೆ ಎಂದು ಶ್ಲಾಘಿಸಿದರು. ಅರಣ್ಯದ ಒಳಭಾಗದಲ್ಲಿರುವ ಇಡಮಲಕುಡಿ ಸೇರಿದಂತೆ ಕೆ-ಫಾನ್ ಮೂಲಕ ಎಲ್ಲ ಸ್ಥಳಗಳಲ್ಲಿ ಸಂಪರ್ಕವನ್ನು ಖಾತ್ರಿಪಡಿಸುವ ಮೂಲಕ, ಯಾರೂ ಹಿಂದೆ ಉಳಿಯುವುದಿಲ್ಲ ಮತ್ತು ಎಲ್ಲರೂ ನಿಜವಾದ ಕೇರಳ ಕಥೆಯ ಭಾಗವಾಗುತ್ತಾರೆ ಎಂದು ಸಿಎಂ ಪಿಣರಾಯಿ ವಿಜಯನ್ ಅವರು ಹೇಳಿದರು.
ಕಾರ್ಪೊರೇಟ್ ನಡೆಸುವ ಟೆಲಿಕಾಂ ಸೆಕ್ಟರ್‌ಗೆ ಪರ್ಯಾಯ ಮಾದರಿಯಾಗಿ ಕೇರಳ ಸರ್ಕಾರವು K-FON ಬ್ರಾಡ್ ಬ್ಯಾಂಡ್ ಸೇವೆಯನ್ನು ಪರಿಚಯಿಸಿದೆ. ಕೇರಳ ಸರ್ಕಾರದ ಈ ಉಪಕ್ರಮವು ಖಾಸಗಿ ವಲಯದ ಕೇಬಲ್ ನೆಟ್‌ವರ್ಕ್‌ಗಳು ಮತ್ತು ಮೊಬೈಲ್ ಸೇವಾ ಪೂರೈಕೆದಾರರ ಶೋಷಣೆಯಿಂದ ಜನರನ್ನು ಮುಕ್ತಗೊಳಿಸುವ ಮೂಲಕ ಡಿಜಿಟಲ್ ವಿಭಜನೆಯನ್ನು ಕಡಿಮೆ ಮಾಡುವ ಪ್ರಯತ್ನವಾಗಿದೆ ಎಂದು ಸಿಎಂ ಪಿಣರಾಯಿ ವಿಜಯನ್ ಅವರು ಹೇಳಿದರು.
ಇದನ್ನೂ ಓದಿ: Reliance Jio | ಜಿಯೋ, ಏರ್ಟೆಲ್‌ಗೆ ಹೆಚ್ಚಿದ ಗ್ರಾಹಕರು, ವೋಡಾಫೋನ್ ತೊರೆದರು ಬಹುತೇಕರು!
ಕೇರಳ ಸರ್ಕಾರದ ಈ ಬ್ರಾಡ್ ಬ್ಯಾಂಡ್ ಇತರ ಖಾಸಗಿ ಸಂಸ್ಥೆಗಳ ಬ್ರಾಡ್‌ಬ್ಯಾಂಡ್‌ಗಳಿಗಿಂತ ಯಾವದರಲ್ಲೂ ಕಡಿಮೆ ಇಲ್ಲ. ಸ್ಪೀಡ್ ಮತ್ತು ಕ್ವಾಲಿಟಿಯಲ್ಲಿ ಸರಿ ಸಮಾನವಾದ ಸ್ಪರ್ಧೆಯನ್ನು ನೀಡಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕೈಗೆಟುಕುವ ದರದಲ್ಲಿ ಸೇವೆ ದೊರೆಯಲಿದೆ. ಕೆ ಫಾನ್ ಬ್ರಾಡ್ ಬ್ಯಾಂಡ್ ಸೇವೆ ಆರಂಭಿ ಪ್ಲ್ಯಾನ್ 299 ರೂ.ನಿಂದ ಆರಂಭವಾಗಿ, ಗರಿಷ್ಠ 20 Mbps ಸ್ಪೀಡ್ ದೊರೆಯಲಿದೆ. ಜತೆಗೆ ತಿಂಗಳಿಗೆ 3000 ಜಿಬಿವರೆಗೂ ಡೌನ್‌ಲೋಡ್ ಮಾಡಿಕೊಳ್ಳಬಹುದು. ಗರಿಷ್ಠ ಪ್ಲ್ಯಾನ್ 250 Mbps ವೇಗದೊಂದಿಗೆ 1,249 ರೂ. ಬೆಲೆ ಹೊಂದಿದೆ. ಈ ಪ್ಲ್ಯಾನ್‌ನಲ್ಲಿ ಬಳಕೆದಾರರು ತಿಂಗಳಿಗೆ5,000 ಜಿಬಿ ಉಚಿತ ಡೌನ್‌ಲೋಡ್ ಮಾಡಿಕೊಳ್ಳಬಹುದು.
ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಗ್ಯಾಜೆಟ್ಸ್
WWDC 2023: 15 ಇಂಚಿನ ಮ್ಯಾಕ್‌ಬುಕ್ ಏರ್ ಅನಾವರಣಗೊಳಿಸಿದ ಆಪಲ್, ಬೆಲೆ ಎಷ್ಟು?
ಹೊಸ ಮ್ಯಾಕ್‌ಬುಕ್ ಏರ್ ತೆಳುವಾದ ಮತ್ತು ಹಗುರವಾದ ವಿನ್ಯಾಸವನ್ನು ಹೊಂದಿದೆ. 11.5 ಮಿಮೀ ದಪ್ಪವಿದೆ. 3 ಪೌಂಡ್ ತೂಕವಿದೆ. MagSafe, ಎರಡು TB ಪೋರ್ಟ್‌ಗಳನ್ನು ಹೊಂದಿದೆ. ಸ್ಟ್ಯಾಂಡರ್ಡ್ ಮ್ಯಾಕ್‌ಬುಕ್ ಏರ್‌ನಂತೆ ನಾಲ್ಕು ಬಣ್ಣಗಳಲ್ಲಿದ್ದು, ಮ್ಯಾಕ್‌ಬುಕ್ ಪ್ರೊ M2 ಅಲ್ಟ್ರಾ ಚಿಪ್‌ನಿಂದ ಚಾಲಿತವಾಗಿದೆ.
ನ್ಯೂಯಾರ್ಕ್: ಆಪಲ್ ಸಂಸ್ಥೆ (Apple) ಸೋಮವಾರ 15 ಇಂಚಿನ ಮ್ಯಾಕ್‌ಬುಕ್ ಏರ್ (MacBook Air) ಅನ್ನು ವರ್ಲ್ಡ್‌ವೈಡ್ ಡೆವಲಪರ್‌ಗಳ ಸಮ್ಮೇಳನದಲ್ಲಿ (WWDC 2023) ಅನಾವರಣಗೊಳಿಸಿದೆ. ಈ ಲ್ಯಾಪ್‌ಟಾಪ್‌ನ ಬೆಲೆ $1299 (₹ 1.07 ಲಕ್ಷ).
ಹೊಸ ಮ್ಯಾಕ್‌ಬುಕ್ ಏರ್ ತೆಳುವಾದ ಮತ್ತು ಹಗುರವಾದ ವಿನ್ಯಾಸವನ್ನು ಹೊಂದಿದೆ. 11.5 ಮಿಮೀ ದಪ್ಪವಿದೆ. 3 ಪೌಂಡ್ ತೂಕವಿದೆ. MagSafe, ಎರಡು TB ಪೋರ್ಟ್‌ಗಳನ್ನು ಹೊಂದಿದೆ. ಸ್ಟ್ಯಾಂಡರ್ಡ್ ಮ್ಯಾಕ್‌ಬುಕ್ ಏರ್‌ನಂತೆ ನಾಲ್ಕು ಬಣ್ಣಗಳಲ್ಲಿದ್ದು, ಮ್ಯಾಕ್‌ಬುಕ್ ಪ್ರೊ M2 ಅಲ್ಟ್ರಾ ಚಿಪ್‌ನಿಂದ ಚಾಲಿತವಾಗಿದೆ.
ಆಪಲ್‌ನ ಮ್ಯಾಕ್ ತಂಡವು 2020ರಲ್ಲಿ ತನ್ನದೇ ಆದ ಚಿಪ್‌ಗಳನ್ನು ಬಳಸಲು ಪ್ರಾರಂಭಿಸಿತು. ಆಗಿನಿಂದ ಅದರ ಲ್ಯಾಪ್‌ಟಾಪ್ ಮಾರುಕಟ್ಟೆ ಸುಧಾರಿಸಿದೆ. ಹೊಸ ಉತ್ಪನ್ನದಲ್ಲಿ ಅದು ತನ್ನ ಮ್ಯಾಕ್ ಸ್ಟುಡಿಯೋ ಡೆಸ್ಕ್‌ಟಾಪ್ ಯಂತ್ರವನ್ನು ನವೀಕರಿಸಿದೆ. ಇದರ ಹೊಸ M2 ಅಲ್ಟ್ರಾ ಚಿಪ್, ಕೃತಕ ಬುದ್ಧಿಮತ್ತೆಯ ಕೆಲಸವನ್ನು ವೇಗಗೊಳಿಸಿದೆ. ಇದರ ಪ್ರತಿಸ್ಪರ್ಧಿ ಸಂಸ್ಥೆಗಳ ಚಿಪ್‌ಗಳು ಈ ಕೆಲಸ ನಿರ್ವಹಿಸಲು ಬೇಕಾದ ಮೆಮೊರಿ ಹೊಂದಿಲ್ಲ ಎನ್ನಲಾಗಿದೆ.
ಕ್ಯುಪರ್ಟಿನೊ ಮೂಲದ ತಂತ್ರಜ್ಞಾನ ದೈತ್ಯ ಸಂಸ್ಥೆ ಆಪಲ್, ಹೊಸ ಮ್ಯಾಕ್ ಪ್ರೊ ಅನ್ನು ಕೂಡ ಡೆವಲಪರ್‌ಗಳ ಸಮ್ಮೇಳನದಲ್ಲಿ ಅನಾವರಣಗೊಳಿಸಿದೆ. ಇದರ ಬೆಲೆ 6,999 ಡಾಲರ್. ಮ್ಯಾಕ್ ಪ್ರೊದಲ್ಲಿ ಆರು ತೆರೆದ ವಿಸ್ತರಣೆ ಸ್ಲಾಟ್‌ಗಳಿವೆ, ಆಡಿಯೋ, ನೆಟ್‌ವರ್ಕಿಂಗ್, ವೀಡಿಯೊ ಮತ್ತು ಸ್ಟೋರೇಜ್ ಕಾರ್ಡ್‌ಗಳೊಂದಿಗೆ ಸಂಪೂರ್ಣವಾಗಿ ಸಜ್ಜಾಗಿದೆ. ಇಂಟೆಲ್-ಚಾಲಿತ ಮ್ಯಾಕ್‌ಗಳಿಗಿಂತ ಮೂರು ಪಟ್ಟು ವೇಗವಾಗಿ ಕಾರ್ಯನಿರ್ವಹಿಸುತ್ತದೆ.
ಆಪಲ್ ಮಿಶ್ರ-ರಿಯಾಲಿಟಿ ಹೆಡ್‌ಸೆಟ್ ಅನ್ನು ಅನಾವರಣಗೊಳಿಸಲಿದೆ. ಒಂಬತ್ತು ವರ್ಷಗಳ ಹಿಂದೆ ಆಪಲ್ ವಾಚ್ ಅನ್ನು ಪರಿಚಯಿಸಿದ ನಂತರ ಹೊಸ ಬಗೆಯ ಉತ್ಪನ್ನಗಳ ವರ್ಗಕ್ಕೆ ಇದು ಇನ್ನೊಂದು ಸೇರ್ಪಡೆ. ಇದರೊಂದಿಗೆ ಆಪಲ್ ಗ್ರಾಹಕರೊಂದಿಗೆ ಇನ್ನಷ್ಟು ಉತ್ಪನ್ನಗಳ ಸಂಬಂಧ ಸಾಧಿಸಿದೆ. ಫೇಸ್‌ಬುಕ್ ಮಾಲೀಕರಾದ ಮೆಟಾ ಪ್ಲಾಟ್‌ಫಾರ್ಮ್‌ನೊಂದಿಗೆ ಈಗ ಇದು ನೇರ ಸ್ಪರ್ಧೆಯಲ್ಲಿದೆ.
ಮೆಟಾದಿಂದ ಕಳೆದ ವರ್ಷ ಬಂದಿರುವ ಕ್ವೆಸ್ಟ್ ಪ್ರೊ ಮತ್ತು ಕಳೆದ ವಾರ ಬಂದ ಕ್ವೆಸ್ಟ್ 3 ಸಾಧನಗಳಂತೆ ಆಪಲ್‌ನ ಈ ಸಾಧನವೂ ಹೆಡ್‌ಸೆಟ್‌ನೊಳಗಿನ ಪರದೆಯ ಮೇಲೆ ಪ್ರದರ್ಶಿಸಲಾದ ವರ್ಚುವಲ್ ಪ್ರಪಂಚದೊಂದಿಗೆ ಹೊರಗಿನ ಪ್ರಪಂಚದ ವೀಡಿಯೊ ಫೀಡ್ ಅನ್ನು ಸಂಯೋಜಿಸುವ ಕೆಲಸ ಮಾಡುತ್ತದೆ.
ಇದನ್ನೂ ಓದಿ: ಗ್ಲೋಕಲ್ ಲೋಕ ಅಂಕಣ | ಮೆಟಾವರ್ಸ್ ಮುಂದಿರುವ ಸವಾಲುಗಳು
ಆಟೋಮೊಬೈಲ್
Hero MotoCorp 2023ರ ಹೀರೋ ಎಚ್ಎಫ್ ಡಿಲಕ್ಸ್ ಬೈಕ್ ಬಿಡುಗಡೆ, ರೇಟ್ ಕೊಂಚ ಏರಿಕೆ!
2023ರ ಹೀರೋ ಎಚ್ಎಫ್ ಡಿಲಕ್ಸ್ ಬೈಕ್ ಸೆಲ್ಫ್ ಸ್ಟಾರ್ಟ್ ಮತ್ತು ಐ3ಎಸ್ ವೇರಿಯೆಂಟ್ ಹಾಗೂ ಟ್ಯೂಬ್ ಲೆಸ್ ಟೈರ್ನೊಂದಿಗೆ ರಸ್ತೆಗಿಳಿದಿದೆ.
ನವ ದೆಹಲಿ: ಹೀರೋ ತನ್ನ ಎಂಟ್ರಿ ಲೆವೆಲ್ 100 ಸಿಸಿ ಕಮ್ಯೂಟರ್ ಬೈಕ್ ಎಚ್ಎಫ್ ಡೀಲಕ್ಸ್ನ 2023ನೇ ಮಾಡೆಲ್ ಅನ್ನು ಮಾರುಕಟ್ಟೆಗೆ ಬಿಡಗುಡೆ ಮಾಡಿದೆ. ಹಲವಾರು ಸುಧಾರಣೆಗಳೊಂದಿಗೆ ಈ ಬೈಕ್ ಅನ್ನು ಪರಿಚಯಿಸಿರುವ ಕಂಪನಿ ದರವನ್ನು ಸ್ವಲ್ಪ ಮಟ್ಟಿಗೆ ಏರಿಕೆ ಮಾಡಿದೆ. ಅತ್ಯಾಧುನಿಕ ಫೀಚರ್ಗಳನ್ನು ನೀಡುವ ಮೂಲಕ ಹೆಚ್ಚು ಗ್ರಾಮೀಣ ಪ್ರದೇಶದ ಗ್ರಾಹಕರನ್ನು ಖುಷಿ ಪಡಿಸಲು ಮುಂದಾಗಿದೆ. ಈ ಬೈಕ್ನ ಎಕ್ಸ್ ಶೋರೂಮ್ ಬೆಲೆ 60,760 ರೂಪಾಯಿಂದ ಆರಂಭಗೊಂಡು 67,208 ರೂಪಾಯಿ ತನಕ ಇದೆ.
2023ರ ಎಚ್ಎಫ್ ಡೀಲಕ್ಸ್ ಬೈಕಿನಲ್ಲಿ ಟ್ಯೂಬ್ಲೆಸ್ ಟೈರ್ಗಳನ್ನು ನೀಡಲಾಗಿದೆ. ಐ3ಎಸ್ (ಸ್ಟಾರ್ಟ್/ಸ್ಟಾಪ್ ಟೆಕ್ನಾಲಜಿ) ಬೈಕಿನಲ್ಲಿ ಅಳವಡಿಸಲಾಗಿದೆ. ಇದು ಆರಂಭಿಕ ಶ್ರೇಣಿಯಿಂದ ಲಭ್ಯವಿದೆ. ಯುಎಸ್ಬಿ ಚಾರ್ಜರ್ ಅನ್ನು ಆಯ್ಕೆಯಾಗಿ ಹೆಚ್ಚುವರಿಯಾಗಿ ನೀಡಲಾಗಿದೆ. ಈ ಬೈಕ್ಗೆ 5 ವರ್ಷಗಳ ವಾರಂಟಿ ಮತ್ತು ಐದು ಉಚಿತ ಸರ್ವಿಸ್ ಸಿಗಲಿದೆ.
ಇದನ್ನೂ ಓದಿ : MotoGp : ಭಾರತದಲ್ಲಿ ನಡೆಯಲಿರುವ ಬೈಕ್ ರೇಸ್ ನೋಡುವ ಆಸೆಯೇ? ಟಿಕೆಟ್ ರೇಟ್ ಕೇಳಿದ್ರೆ ಗಾಬರಿ ಗ್ಯಾರಂಟಿ!
ಹೀರೋ ಎಚ್ಎಫ್ ಡಿಲಕ್ಸ್ ಬೈಕಿನಲ್ಲಿ ಏರ್ ಕೂಲ್ಡ್, 97 ಸಿಸಿ, ಸಿಂಗಲ್ ಸಿಲಿಂಡರ್ ‘ಸ್ಲೋಪರ್’ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 8 ಬಿಎಚ್ಪಿ ಪವರ್ ಮತ್ತು 8.05 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ದೀರ್ಘಕಾಲ ಸೇವೆ ಸಲ್ಲಿಸುವ ಈ ಎಂಜಿನ್ ಈಗ ಒಬಿಡಿ -2 ಕಾಂಪ್ಲೈಂಟ್ ಹಾಗೂ ಇ20 ಪೆಟ್ರೋಲ್ಗೆ ಸಿದ್ಧಗೊಂಡಿದೆ. 4 ಸ್ಪೀಡ್ನ ಗೇರ್ ಬಾಕ್ಸ್ ಇದೆ. ಈ ಎಂಜಿನ್ ಅನ್ನು ಬೇಸಿಕ್ ಡಬಲ್ ಕ್ರೇಡಲ್ ಫ್ರೇಮ್ ಒಳಗೆ ಇರಿಸಲಾಗಿದ್ದು, ಸರಳ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಎರಡು ಸ್ಟೆಪ್ ಅಡ್ಜಸ್ಟ್ ಮಾಡಬಹುದಾದ ಟ್ವಿನ್ ಶಾಕ್ ಅಬ್ಸಾರ್ಬರ್ ಸೆಟಪ್ ಮೂಲಕ ಜೋಡಿಸಲಾಘಿದೆ. 9.6 ಲೀಟರ್ ಸಾಮರ್ಥ್ಯದ ಟ್ಯಾಂಕ್ ಹೊಂದಿರುವ ಎಚ್ ಎಫ್ ಡಿಲಕ್ಸ್ 112 ಕೆ.ಜಿ ತೂಕವಿದೆ.
ವೇರಿಯೆಂಟ್ಗಳು ಯಾವುವು?
ಹೀರೋ ಎಚ್ಎಫ್ ಡಿಲಕ್ಸ್ ಬೈಕ್ ಡ್ರಮ್ ಕಿಕ್ ಕಾಸ್ಟ್, ಡ್ರಮ್ ಸೆಲ್ಫ್ ಕಾಸ್ಟ್ ಮತ್ತು ಐ3ಎಸ್ ಡ್ರಮ್ ಸೆಲ್ಫ್ ಕಾಸ್ಟ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಬೆಲೆಗಳು 60,760 ರೂ.ಗಳಿಂದ ಪ್ರಾರಂಭವಾಗಿ 67,208 ರೂ.ಗಳವರೆಗೆ (ಎಕ್ಸ್ ಶೋ ರೂಂ, ದೆಹಲಿ) ಇದೆ. ಹೀರೋ ಎಚ್ಎಫ್ ಡಿಲಕ್ಸ್ ಹೋಂಡಾ ಶೈನ್ 100 (ರೂ.64,900, ಪರಿಚಯಾತ್ಮಕ, ಎಕ್ಸ್ ಶೋರೂಂ, ಮುಂಬೈ) ಮತ್ತು ಬಜಾಜ್ ಪ್ಲಾಟಿನಾ 100 (ರೂ.67,475) ಬೈಕುಗಳಿಗೆ ಪೈಪೋಟಿ ನೀಡಲಿದೆ.
-
ಸುವಚನ16 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ11 hours ago
EPF e-passbook : UMANG ಆ್ಯಪ್ನಲ್ಲಿ ನಿಮ್ಮ ಪಿಎಫ್ ಪಾಸ್ಬುಕ್ ಸುಲಭವಾಗಿ ಪರಿಶೀಲಿಸಿ
-
ಪ್ರಮುಖ ಸುದ್ದಿ13 hours ago
Apply for ration card : ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸುವುದು ಹೇಗೆ?
-
ಅಂಕಣ24 hours ago
ವಿಧಾನಸೌಧ ರೌಂಡ್ಸ್: ರೌಂಡ್ ಟೇಬಲ್ ಸ್ನೇಹಿತರು ಮತ್ತು ವಿಧಾನಸೌಧದಲ್ಲಿ ಬದಲಾಗದ 40 % ಬ್ರಾಂಡ್!
-
ಉತ್ತರ ಕನ್ನಡ21 hours ago
Karwar News: ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ: ಇಬ್ಬರು ಅಧಿಕಾರಿಗಳಿಗೆ 2 ವರ್ಷ ಜೈಲು
-
ಪ್ರಮುಖ ಸುದ್ದಿ16 hours ago
Horoscope Today : ಈ ರಾಶಿಯವರಿಗೆ ಇಂದು ಪ್ರೀತಿ ಅಂಕುರವಾಗಲಿದೆಯಂತೆ!
-
ಉತ್ತರ ಕನ್ನಡ22 hours ago
Karwar Accident: ಬೈಕ್ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಸವಾರರ ಸಾವು
-
ಪ್ರಮುಖ ಸುದ್ದಿ22 hours ago
ವಿಸ್ತಾರ ಸಂಪಾದಕೀಯ: ಶಾಲಾ ಬಾಲಕಿಯರಿಗೆ ವಿಷ: ಅಫಘಾನಿಸ್ತಾನದಲ್ಲಿ ಮನುಷ್ಯತ್ವ ಮರುಕಳಿಸುವುದು ಯಾವಾಗ?