Electric Car How is the electric car made by a 67-year-old man in Kerala for daily driving -Electric Car : ಕೇರಳದಲ್ಲಿ 67 ವರ್ಷದ ವ್ಯಕ್ತಿ ದಿನ ನಿತ್ಯದ ಓಡಾಟಕ್ಕೆ ತಯಾರಿಸಿದ ಎಲೆಕ್ಟ್ರಿಕ್‌ ಕಾರು ಹೇಗಿದೆ?

ಆಟೋಮೊಬೈಲ್

Electric Car : ಕೇರಳದಲ್ಲಿ 67 ವರ್ಷದ ವ್ಯಕ್ತಿ ದಿನ ನಿತ್ಯದ ಓಡಾಟಕ್ಕೆ ತಯಾರಿಸಿದ ಎಲೆಕ್ಟ್ರಿಕ್‌ ಕಾರು ಹೇಗಿದೆ?

Electric Car ಕೇರಳದ ಕೊಲ್ಲಂನಲ್ಲಿ 67 ವರ್ಷದ ನಾಗರಿಕ ಆ್ಯಂಟನಿ ಜಾನ್ ಎಂಬುವರು ತಮ್ಮ ದಿನ ನಿತ್ಯದ ಸಂಚಾರಕ್ಕೆ ಸ್ವತಃ ತಾವೇ ಎಲೆಕ್ಟ್ರಿಕ್‌ ಕಾರೊಂದನ್ನು ತಯಾರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ವಿವರ ಇಲ್ಲಿದೆ.

VISTARANEWS.COM


on

Electric Car How is the electric car made by a 67-year-old man in Kerala for daily driving
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ತಿರುವನಂತಪುರಂ: ಭಾರತದ ರಸ್ತೆಗಳಲ್ಲಿ ಈಗಾಗಲೇ ಎಲೆಕ್ಟ್ರಿಕ್‌ ಕಾರುಗಳ ಹವಾ ಆರಂಭವಾಗಿದೆ. ಪ್ರಮುಖ ನಗರಗಳ ರಸ್ತೆಗಳಲ್ಲಿ ಎಲೆಕ್ಟ್ರಿಕ್‌ ಕಾರುಗಳ ಸಂಚಾರ ಹೊಸತೇನಲ್ಲ. ಪ್ರಮುಖ ಆಟೊಮೊಬೈಲ್‌ ಕಂಪನಿಗಳೂ ಈಗ ಎಲೆಕ್ಟ್ರಿಕ್‌ ಕಾರು ತಯಾರಿಕೆಯಲ್ಲಿ ತೊಡಗಿಸಿವೆ. ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳೂ ಜನಪ್ರಿಯತೆ ಗಳಿಸಿವೆ. ಜಗತ್ತು ಎಲೆಕ್ಟ್ರಿಕ್‌ ವಾಹನಗಳ ಕ್ರಾಂತಿಗೆ ಅಣಿಯಾಗುತ್ತಿದೆ. ಹೊಸ ಸಂಶೋಧನೆಗಳೂ ನಡೆಯುತ್ತಿದೆ.

ಈ ನಡುವೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ 67 ವರ್ಷದ ಹಿರಿಯ ವ್ಯಕ್ತಿ ಆ್ಯಂಟನಿ ಜಾನ್ ಎಂಬುವರು ತಮ್ಮ ದಿನ ನಿತ್ಯದ ಸಂಚಾರಕ್ಕೆ ಸ್ವತಃ ತಾವೇ ಎಲೆಕ್ಟ್ರಿಕ್‌ ಕಾರೊಂದನ್ನು ತಯಾರಿಸಿ ಎಲ್ಲರ ಗಮನ ಸೆಳೆದಿದ್ದಾರೆ. village Vartha ಎಂಬ ಯೂಟ್ಯೂಬ್‌ ಚಾನೆಲ್‌ನಲ್ಲಿ ಈ ಕಾರಿನ ಬಗ್ಗೆ ಅಪ್‌ ಲೋಡ್‌ ಆಗಿದ್ದ ವೀಡಿಯೊ ಲಕ್ಷಾಂತರ ವೀಕ್ಷಕರ ಗಮನ ಸೆಳೆದಿದೆ.

ತಮ್ಮ ದಿನ ನಿತ್ಯದ ಓಡಾಟಕ್ಕೆ ಒಂದು ಎಲೆಕ್ಟ್ರಿಕ್‌ ಕಾರು ಬೇಕು ಎಂಬುದು ಆ್ಯಂಟನಿ ಜಾನ್ ಅವರ ಬಯಕೆಯಾಗಿತ್ತು. ಈ ಹಿಂದೆ ಅವರು ಎಲೆಕ್ಟ್ರಿಕ್‌ ಸ್ಕೂಟರ್‌ ಅನ್ನೂ ತಯಾರಿಸಿದ್ದರು. ಕೆಲ ವರ್ಷಗಳ ಹಿಂದೆ ಅವರು ಎಷ್ಟು ಹುಡುಕಿದರೂ ಅವರಿಗೆ ಬೇಕಾದ ಎಲೆಕ್ಟ್ರಿಕ್‌ ಕಾರು ಸಿಗಲಿಲ್ಲ. ಆಗ ತಾವೇ ಅದನ್ನು ತಯಾರಿಸಲು ನಿರ್ಧರಿಸಿದರು. ಸಂಶೋಧನೆ ನಡೆಸಿದರು. ಸ್ಥಳೀಯ ಗ್ಯಾರೇಜ್‌ ಜತೆ ಸಂಪರ್ಕ ಇಟ್ಟುಕೊಂಡರು. ಕೊನೆಗೆ ತಾವು ಅಂದುಕೊಂಡಂತೆಯೇ ಎಲೆಕ್ಟ್ರಿಕ್‌ ಕಾರನ್ನು ನಿರ್ಮಿಸಿಯೇ ಬಿಟ್ಟರು. ಕಾರಿನ ಎಲೆಕ್ಟ್ರಿಕಲ್‌ ಕೆಲಸಗಳನ್ನು ತಾವೇ ಖುದ್ದಾಗಿ ಮಾಡಿದ್ದರು ಆ್ಯಂಟನಿ ಜಾನ್.

ಆ್ಯಂಟನಿ ಜಾನ್ ಅವರು 2018ರಲ್ಲಿ ತಮ್ಮ ಎಲೆಕ್ಟ್ರಿಕ್‌ ಕಾರು ಯೋಜನೆಯನ್ನು ಆರಂಭಿಸಿದ್ದರು. ಬ್ಯಾಟರಿಗಳು, ಮೋಟಾರ್‌, ಮತ್ತು ಬಿಡಿಭಾಗಗಳನ್ನು ಸಂಗ್ರಹಿಸಿದ್ದರು. ಕೋವಿಡ್‌ ಸಂದರ್ಭ ವಿಳಂಬವಾಯಿತು. ಹೋಗಿದ್ದರೂ ಕೈಬಿಡದೆ ಮುಂದುವರಿಸಿ ಯಶಸ್ಸು ಗಳಿಸಿದರು. ಪ್ರತಿ ಗಂಟೆಗೆ 25 ಕಿ.ಮೀ ವೇಗದಲ್ಲಿ ಈ ಕಾರು ಸಂಚರಿಸುತ್ತದೆ. ಹೀಗಾಗಿ ಇದಕ್ಕೆ ರಿಜಿಸ್ಟ್ರೇಶನ್‌ ಪ್ಲೇಟ್ ಬೇಕಾಗುವುದಿಲ್ಲ.‌ ಆದರೂ ಆ್ಯಂಟನಿ ಜಾನ್ ಅವರು ವಾಹನ ಚಾಲನೆಯ ಪರವಾನಗಿ ಹೊಂದಿದ್ದಾರೆ.

ಈ ಎಲೆಕ್ಟ್ರಿಕ್‌ ಕಾರು ತಯಾರಿಸಲು 4.5 ಲಕ್ಷ ರೂ.ಗಳನ್ನು ಆ್ಯಂಟನಿ ಜಾನ್ ಅವರು ಖರ್ಚು ಮಾಡಿದ್ದಾರೆ. ಆದರೆ ಅವರಿಗೆ ಕಾರಿನ ಬಗ್ಗೆ ಹೆಮ್ಮೆ ಇದೆ. ಸ್ಥಳೀಯರೂ ಅಚ್ಚರಿಯಿಂದ ಗುರುತಿಸಿದ್ದಾರೆ. ಖುಶಿ ಪಟ್ಟಿದ್ದಾರೆ. ಬ್ಯಾಟರಿ ರಿಚಾರ್ಜ್‌ ಬಳಿಕ ಗರಿಷ್ಠ 60 ಕಿ.ಮೀ ತನಕ ಚಲಾಯಿಸಬಹುದು ಎನ್ನುತ್ತಾರೆ ಆ್ಯಂಟನಿ ಜಾನ್.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರಮುಖ ಸುದ್ದಿ

Xiaomi Car: ಎಲೆಕ್ಟ್ರಿಕ್​ ಕಾರು ಮಾರುಕಟ್ಟೆಗೆ ಇಳಿಸಿದ ಮೊಬೈಲ್ ಕಂಪನಿ ರೆಡ್​ಮಿ

Xiaomi Car: ಶಿಯೋಮಿ ತನ್ನ ಕೈಗೆಟುಕುವ ಸ್ಮಾರ್ಟ್​ಫೋನ್​ಗಳು ಮತ್ತು ಗೃಹೋಪಯೋಗಿ ವಸ್ತುಗಳಿಗೆ ಹೆಸರುವಾಸಿಯಾಗಿದೆ. ಇದೀಗ MI SU 7 ಇವಿಯೊಂದಿಗೆ ತನ್ನ ಖ್ಯಾತಿಯನ್ನು ಹೆಚ್ಚಿಸಲು ಮುಂದಾಗಿದೆ.

VISTARANEWS.COM


on

Xiaomi Car in China
Koo

ಬೀಜಿಂಗ್: ಕಡಿಮೆ ಬೆಲೆಯಲ್ಲಿ ಸ್ಮಾರ್ಟ್​ಫೋನ್​​​ಗಳನ್ನು ಮಾರಾಟ ಮಾಡುವ ಮೂಲಕ ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ್ದ ಶಿಯೋಮಿ (Xiaomi Car) ತನ್ನ ಮೊಟ್ಟ ಮೊದಲ ಎಲೆಕ್ಟ್ರಿಕ್​ ಕಾರನ್ನು (EV Car) ಮಾರುಕಟ್ಟೆಗೆ ಇಳಿಸಿದೆ. ಇದು ಮೊಬೈಲ್​ನಂತೆಯೇ (Smart Phoni) ಹಲವಾರು ಫ್ಯಾನ್ಸಿ ಫೀಚರ್​ಗಳನ್ನು ಹೊಂದಿರುವ ಕಾರು ಎಂದು ಹೇಳಲಾಗಿದೆ. ಆದರೆ, ಈ ಕಾರು ಸದ್ಯ ಬಿಡುಗಡೆಗೊಂಡಿರುವುದು ಚೀನಾದಲ್ಲಿ. ಭಾರತಕ್ಕೆ ಬರುವುದೇ ಎಂದು ಗೊತ್ತಿಲ್ಲ.

ಚೀನಾದ ಗ್ರಾಹಕ ಟೆಕ್ ದೈತ್ಯ ಶಿಯೋಮಿ ಗುರುವಾರ ಬೀಜಿಂಗ್ ನಲ್ಲಿ ಈ ಕಾರನ್ನು ಬಿಡುಗಡೆ ಮಾಡಿದೆ. ಅಲ್ಲದೆ ವಿಶ್ವದ ಅತಿದೊಡ್ಡ ಕಾರು ಮಾರುಕಟ್ಟೆಯಲ್ಲಿ ತೀವ್ರ ಸ್ಪರ್ಧೆಗೆ ಇಳಿದಿದೆ. ಚೀನಾದ ಇವಿ ವಲಯವು ಇತ್ತೀಚಿನ ವರ್ಷಗಳಲ್ಲಿ ವೇಗವಾಗಿ ಬೆಳೆಯುತ್ತಿದೆ. ಹೀಗಾಗಿ ಆ ಕ್ಷೇತ್ರಕ್ಕೆ ಎಂಟ್ರಿ ಪಡೆದಿದೆ. ಶಿಯೋಮಿ ತನ್ನ ಕೈಗೆಟುಕುವ ಸ್ಮಾರ್ಟ್​ಫೋನ್​ಗಳು ಮತ್ತು ಗೃಹೋಪಯೋಗಿ ವಸ್ತುಗಳಿಗೆ ಹೆಸರುವಾಸಿಯಾಗಿದೆ. ಇದೀಗ MI SU 7 ಇವಿಯೊಂದಿಗೆ ತನ್ನ ಖ್ಯಾತಿಯನ್ನು ಹೆಚ್ಚಿಸಲು ಮುಂದಾಗಿದೆ. ಚೀನಾದ ಕಾರು ಮಾರುಕಟ್ಟೆಯ ದೈತ್ಯ ಬಿವೈಡಿ ಮತ್ತು ಎಲೋನ್ ಮಸ್ಕ್ ಅವರ ಟೆಸ್ಲಾಗೆ ಸವಾಲು ಹಾಕುವುದು ಪಕ್ಕಾ.

ಮೂಲ ಎಸ್ ಯು 7 ಮಾದರಿಯ ಬೆಲೆ 215,900 ಯುವಾನ್ (24,90,198 ರೂಪಾಯಿ) ಎಂದು ಲೀ ಜುನ್ ಗುರುವಾರ ಸಂಜೆ ಬೀಜಿಂಗ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಸ್ಪೋರ್ಟಿ ಎಸ್ ಯು 7 ಒಂಬತ್ತು ಬಣ್ಣಗಳಲ್ಲಿ ಲಭ್ಯವಿರುತ್ತದೆ ಮತ್ತು “ಸೌಂಡ್ ಸಿಮ್ಯುಲೇಶನ್” ಅನ್ನು ಒಳಗೊಂಡಿರುತ್ತದೆ.

ಇದನ್ನೂ ಓದಿ: ಮೋದಿ ಅವರ ಡೀಸೆಲ್ ಚಾಲಿತ ವಿಶೇಷ ವಾಹನಗಳ ನೋಂದಣಿ ವಿಸ್ತರಣೆ ತಿರಸ್ಕರಿಸಿದ ಎನ್‌ಜಿಟಿ; ಕಾರಣವೇನು?

ಇದು ಕರೋಕೆ ಉಪಕರಣಗಳು ಮತ್ತು ಮಿನಿ-ಫ್ರಿಜ್ ನಂತಹ ಸಾಕಷ್ಟು ಇತರ ಆಕರ್ಷಕ ಫೀಚರ್​ಗಳನ್ನು ಹೊಂದಿದೆ. 500,000 ಯುವಾನ್ ಗಿಂತ ಕಡಿಮೆ ಬೆಲೆಯ “ಅತ್ಯುತ್ತಮವಾಗಿ ಕಾಣುವ, ಅತ್ಯುತ್ತಮವಾಗಿ ಚಲಿಸುವ ಮತ್ತು ಸ್ಮಾರ್ಟ್ ಕಾರು” ಎಂದು ಶಿಯೋಮಿ ಹೇಳಿದೆ. ಈ ಕಾರಿನ ಬೆಲೆಯು ಉಳಿದ ಕಾರಿಗಿಂತ ಹೆಚ್ಚು ಸ್ಪರ್ಧಾತ್ಮಕವಾಗಿದೆ.

ಟೆಸ್ಲಾಗೆ ಹೋಲಿಕೆ

ಲೀ ಜುನ್ ಗುರುವಾರದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಕಂಪನಿಯ ಚೊಚ್ಚಲ ವಾಹನವನ್ನು ಟೆಸ್ಲಾದ ಮಾಡೆಲ್ 3 ಗೆ ಹೋಲಿಸಬಹುದು ಮತ್ತು ಕೆಲವು ಅಂಶಗಳಲ್ಲಿ ಅಮೇರಿಕನ್ ತಯಾರಕರ ಸೆಡಾನ್ ಅನ್ನು ಮೀರಿಸಿದೆ ಎಂದು ಹೇಳಿಕೊಂಡಿದ್ದಾರೆ.

ಶಿಯೋಮಿ ವಿಶ್ವದ ಮೂರನೇ ಅತಿದೊಡ್ಡ ಸ್ಮಾರ್ಟ್​ಫೋನ್ ತಯಾರಕ ಕಂಪನಿಯಾಗಿದ್ದು, ಆ ವಲಯದಲ್ಲಿ ಅದರ ಅನುಭವವು ಅದರ ಇವಿ ಕಾರ್ಯತಂತ್ರವನ್ನು ರೂಪಿಸಲು ಸಹಾಯ ಮಾಡಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಕಟುವಾದ ಮಾರುಕಟ್ಟೆ

“ಪ್ರೀಮಿಯಂ ವಿಭಾಗವನ್ನು ಪ್ರವೇಶಿಸುವ ಮೂಲಕ, ಶಿಯೋಮಿ ಟೆಸ್ಲಾ ಮತ್ತು ನಿಯೋದಂತಹ ಸ್ಥಾಪಿತ ಬ್ರಾಂಡ್​ಗ ಳಿಗೆ ಪೈಪೋಟಿ ನೀಡಬಹುದು” ಎಂದು ರೈಸ್ಟಾಡ್ ಎನರ್ಜಿಯ ಹಿರಿಯ ಎಲೆಕ್ಟ್ರಿಕ್ ವಾಹನ ವಿಶ್ಲೇಷಕ ಅಭಿಷೇಕ್ ಮುರಳಿ ಎಎಫ್ಪಿಗೆ ತಿಳಿಸಿದರು.

ಚೀನಾ ವಿಶ್ವದಲ್ಲಿ ಅತಿ ಹೆಚ್ಚು ವಾಯು ಮಾಲಿನ್ಯ ಹೊಂದಿರುವ ದೇಶ. ಹೀಗಾಗಿ 2035 ರ ವೇಳೆಗೆ ಹೆಚ್ಚಿನ ದೇಶೀಯ ಕಾರು ಮಾರಾಟವನ್ನು ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಮಾದರಿಗಳಿಂದ ತಯಾರಿಸಲು ಯೋಜಿಸಿದ್ದಾರೆ. ಎಲೆಕ್ಟ್ರಿಕ್ ವಾಹನಗಳ ವಿಶ್ವದ ಅಗ್ರ ಮಾರಾಟಗಾರ ಬಿವೈಡಿ ದಾಖಲೆಯ ವಾರ್ಷಿಕ ಲಾಭವನ್ನು ದಾಖಲಿಸಿದ ಕೆಲವೇ ದಿನಗಳ ನಂತರ ಎಸ್ ಯು 7 ಬಿಡುಗಡೆಯಾಗಿದೆ, ಏಕೆಂದರೆ ಇದು ಆಗ್ನೇಯ ಏಷ್ಯಾದ ದೇಶಗಳಿಗೆ ಮತ್ತು ಲ್ಯಾಟಿನ್ ಅಮೆರಿಕ ಮತ್ತು ಯುರೋಪ್ ಗೆ ವಿಸ್ತರಣೆಗೊಳ್ಳಬಹುದು.

Continue Reading

ದೇಶ

ಮೋದಿ ಅವರ ಡೀಸೆಲ್ ಚಾಲಿತ ವಿಶೇಷ ವಾಹನಗಳ ನೋಂದಣಿ ವಿಸ್ತರಣೆ ತಿರಸ್ಕರಿಸಿದ ಎನ್‌ಜಿಟಿ; ಕಾರಣವೇನು?

Narendra Nodi: ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರ ಭದ್ರತೆಯ ಉದ್ದೇಶಕ್ಕಾಗಿ ಅಗತ್ಯವಿರುವ ಮೂರು ಡೀಸೆಲ್ ಚಾಲಿತ ವಿಶೇಷ ಶಸ್ತ್ರಸಜ್ಜಿತ ವಾಹನಗಳ ನೋಂದಣಿಯನ್ನು ವಿಸ್ತರಿಸುವಂತೆ ವಿಶೇಷ ಸಂರಕ್ಷಣಾ ಗುಂಪು ಸಲ್ಲಿಸಿದ್ದ ಮನವಿಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ತಿರಸ್ಕರಿಸಿದೆ. ಇದಕ್ಕೇನು ಕಾರಣ ಎನ್ನುವ ವಿವರ ಇಲ್ಲಿದೆ.

VISTARANEWS.COM


on

narendra modi
Koo

ನವದೆಹಲಿ: ಪ್ರಧಾನಿ ಮಂತ್ರಿ ನರೇಂದ್ರ ಮೋದಿ (Narendra Nodi) ಅವರ ಭದ್ರತೆಯ ಉದ್ದೇಶಕ್ಕಾಗಿ ಅಗತ್ಯವಿರುವ ಮೂರು ಡೀಸೆಲ್ ಚಾಲಿತ ವಿಶೇಷ ಶಸ್ತ್ರಸಜ್ಜಿತ ವಾಹನಗಳ ನೋಂದಣಿಯನ್ನು ವಿಸ್ತರಿಸುವಂತೆ ವಿಶೇಷ ಸಂರಕ್ಷಣಾ ಗುಂಪು (Special Protection Group) ಸಲ್ಲಿಸಿದ್ದ ಮನವಿಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (National Green Tribunal) ತಿರಸ್ಕರಿಸಿದೆ.

ದೆಹಲಿ ಎನ್‌ಸಿಆರ್‌ ರಸ್ತೆಗಳಲ್ಲಿ 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳನ್ನು ಓಡಿಸುವುದನ್ನು ನಿಷೇಧಿಸಿ ಸುಪ್ರೀಂ ಕೋರ್ಟ್ 2018ರಲ್ಲಿ ನೀಡಿದ ತೀರ್ಪನ್ನು ಉಲ್ಲೇಖಿಸಿ ಈ ಆದೇಶ ಹೊರಡಿಸಲಾಗಿದೆ.

“ಈ ಮೂರು ವಾಹನಗಳು ಸಾಮಾನ್ಯವಾಗಿ ಬಳಸಲ್ಪಡದ, ವಿಶೇಷ ಉದ್ದೇಶದ ವಾಹನಗಳಾಗಿವೆ. ಈ ವಾಹನಗಳು ಹತ್ತು ವರ್ಷಗಳಲ್ಲಿ ಬಹಳ ಕಡಿಮೆ ಚಲಿಸಿವೆ ಮತ್ತು ಪ್ರಧಾನಿ ಅವರ ಭದ್ರತೆಯ ನಿರ್ದಿಷ್ಟ ಉದ್ದೇಶಕ್ಕಾಗಿ ಅಗತ್ಯವಾಗಿವೆ. ಆದರೆ ಸುಪ್ರೀಂ ಕೋರ್ಟ್ 2018ರ ಅಕ್ಟೋಬರ್‌ 29ರಂದು ನೀಡಿದ ಆದೇಶದಂತೆ ಆ ವಾಹನಗಳಿಗೆ ಅನುಮತಿ ನೀಡಲು ಸಾಧ್ಯವಿಲ್ಲ. ಹೀಗಾಗಿ ಮನವಿಯನ್ನು ತಿರಸ್ಕರಿಸಲಾಗಿದೆ” ಎಂದು ಎನ್‌ಜಿಟಿ ಹೇಳಿದೆ.

ʼʼಎಸ್‌ಪಿಜಿ ಅರ್ಜಿಯನ್ನು ತಿರಸ್ಕರಿಸಿದ ಅಧ್ಯಕ್ಷ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಮತ್ತು ಸದಸ್ಯ ಡಾ.ಎ.ಸೆಂಥಿಲ್ ವೇಲ್ ಅವರನ್ನೊಳಗೊಂಡ ಎನ್‌ಜಿಟಿ ಪ್ರಧಾನ ಪೀಠವು ಮಾರ್ಚ್ 22ರ ಆದೇಶದಲ್ಲಿ, ದೆಹಲಿ ಎನ್‌ಸಿಆರ್‌ ರಸ್ತೆಗಳಲ್ಲಿ 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳನ್ನು ಓಡಿಸುವುದನ್ನು ನಿಷೇಧಿಸುವ ಸುಪ್ರೀಂ ಕೋರ್ಟ್‌ನ ಆದೇಶವನ್ನು ಉಲ್ಲೇಖಿಸಿ ತೀರ್ಪು ನೀಡಿದೆʼʼ ಎಂದು ಮೂಲಗಳು ತಿಳಿಸಿವೆ.

ಈ 3 ವಿಶೇಷ ಶಸ್ತ್ರಸಜ್ಜಿತ ವಾಹನಗಳ ನೋಂದಣಿ ಅವಧಿಯನ್ನು ಐದು ವರ್ಷಗಳವರೆಗೆ ಅಂದರೆ 2029ರ ಡಿಸೆಂಬರ್‌ 23ರವರೆಗೆ ವಿಸ್ತರಿಸಲು ಅನುಮತಿ ನೀಡುವಂತೆ ದೆಹಲಿಯ ಸಾರಿಗೆ ಇಲಾಖೆ, ನೋಂದಣಿ ಪ್ರಾಧಿಕಾರಕ್ಕೆ ನಿರ್ದೇಶನ ನೀಡುವಂತೆ ಎಸ್‌ಪಿಜಿಯು ಎನ್‌ಜಿಟಿಯನ್ನು ಸಂಪರ್ಕಿಸಿತ್ತು.

2013ರಲ್ಲಿ ತಯಾರಿಸಿದ ಮತ್ತು 2014ರ ಡಿಸೆಂಬರ್‌ನಲ್ಲಿ ನೋಂದಾಯಿಸಲಾದ ಮೂರು ರೆನಾಲ್ಟ್ ಎಂಡಿ -5 (Renault MD-5) ವಿಶೇಷ ಶಸ್ತ್ರಸಜ್ಜಿತ ವಾಹನಗಳು 9 ವರ್ಷಗಳಲ್ಲಿ ಕ್ರಮವಾಗಿ ಸುಮಾರು 6,000 ಕಿ.ಮೀ., 9,500 ಕಿ.ಮೀ. ಮತ್ತು 15,000 ಕಿ.ಮೀ. ಕ್ರಮಿಸಿವೆ. ಈ ವಾಹನಗಳನ್ನು ವಿಶೇಷ ಸಂದರ್ಭಗಳಲ್ಲಿ ಮಾತ್ರ ಬಳಸಲಾಗುತ್ತದೆ.

ಈ ವಾಹನಗಳನ್ನು 2029ರ ವರೆಗೆ 15 ವರ್ಷಗಳ ಅವಧಿಗೆ ನೋಂದಾಯಿಸಲಾಗಿದೆ. ಆದರೆ ಈ ವಾಹನಗಳು 10 ವರ್ಷಗಳನ್ನು ಪೂರ್ಣಗೊಳಿಸಿದ ನಂತರ ಸುಪ್ರೀಂ ಕೋರ್ಟ್‌ನ ಆದೇಶದ ಅನುಗುಣವಾಗಿ 2024ರ ಡಿಸೆಂಬರ್‌ನಲ್ಲಿ ನೋಂದಣಿಯನ್ನು ರದ್ದುಗೊಳಿಸಲಾಗುತ್ತದೆ.

ಇದನ್ನೂ ಓದಿ: Lok Sabha Election: ಬಿಜೆಪಿ ಸ್ಟಾರ್‌ ಪ್ರಚಾರಕರ ಪಟ್ಟಿ ಬಿಡುಗಡೆ; ಇವರೇ ನೋಡಿ ಆ ಸ್ಟಾರ್‌ಗಳು

ಎಸ್‌ಪಿಜಿ ಸಲ್ಲಿಸಿದ ಮನವಿಯಲ್ಲಿ ಏನಿದೆ?

ನೋಂದಣಿಯನ್ನು ವಿಸ್ತರಿಸುವಂತೆ ಮನವಿ ಸಲ್ಲಿಸಿದ ಎಸ್‌ಪಿಜಿ ಅದಕ್ಕೆ ಕಾರಣವನ್ನೂ ನೀಡಿದೆ. ʼʼಈ ವಾಹನಗಳು ವಿನ್ಯಾಸ ಮತ್ತು ತಾಂತ್ರಿಕ / ಕಾರ್ಯತಂತ್ರಗಳ ವಿಚಾರದಲ್ಲಿ ಬಹಳ ವಿಶೇಷವಾಗಿವೆ ಮತ್ತು ಈ ಅಗತ್ಯಗಳನ್ನು ಪೂರೈಸುವ ವಾಹನಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಾಗುವುದಿಲ್ಲʼʼ ಎಂದು ಎಸ್‌ಪಿಜಿ ತಿಳಿಸಿದೆ.

ಸುಪ್ರೀಂ ಕೋರ್ಟ್‌ನ 2018ರ ಆದೇಶಕ್ಕೆ ಮೊದಲು ಎನ್‌ಜಿಟಿ 2015ರ ಏಪ್ರಿಲ್‌ನಲ್ಲಿ ದೆಹಲಿ ಎನ್‌ಸಿಆರ್‌ ರಸ್ತೆಗಳಲ್ಲಿ 10 ವರ್ಷಕ್ಕಿಂತ ಹಳೆಯದಾದ ಎಲ್ಲ ಡೀಸೆಲ್ ವಾಹನಗಳನ್ನು ಓಡಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. 10 ವರ್ಷಕ್ಕಿಂತ ಹಳೆಯದಾದ ಯಾವುದೇ ಡೀಸೆಲ್ ವಾಹನವನ್ನು ನೋಂದಾಯಿಸದಂತೆ ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ದೆಹಲಿ ಎನ್‌ಸಿಆರ್‌ನಲ್ಲಿನ ಗಾಳಿಯ ಗುಣಮಟ್ಟವನ್ನು ಸುಧಾರಿಸುವ ಕ್ರಮವಾಗಿ ಎನ್‌ಜಿಟಿ ಮತ್ತು ಸುಪ್ರೀಂ ಕೋರ್ಟ್ ಈ ಆದೇಶಗಳನ್ನು ಹೊರಡಿಸಿದ್ದವು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಆಟೋಮೊಬೈಲ್

Bajaj CNG Bike:‌ ಜೂನ್‌ನಲ್ಲಿ ಬಜಾಜ್ ಸಿಎನ್‌ಜಿ ಬೈಕ್ ಬಿಡುಗಡೆ; ಇದರ ಬಗ್ಗೆ ನಿಮಗೆಷ್ಟು ಗೊತ್ತು?

Bajaj CNG Bike:‌ ಇದು ಬಜಾಜ್‌ ಕಂಪನಿಯು ಬಿಡುಗಡೆ ಮಾಡುತ್ತಿರುವ ಮೊದಲ ಸಿಎನ್‌ಜಿ ಮೋಟಾರ್‌ಸೈಕಲ್. ಈ ಬೈಕ್ ಅನ್ನು ಕಂಪನಿ ʼಬ್ರೂಜರ್’ ಎಂದು ಕರೆದಿದೆ ಎಂದು ಗೊತ್ತಾಗಿದೆ.

VISTARANEWS.COM


on

Bajaj CNG Bike
Koo

ಬೆಂಗಳೂರು: ಬಜಾಜ್ ಆಟೋ ತನ್ನ ಮುಂಬರುವ ಸಿಎನ್‌ಜಿ ಚಾಲಿತ ಬೈಕನ್ನು (Bajaj CNG Bike) ಜೂನ್‌ನಲ್ಲಿ ಬಿಡುಗಡೆ ಮಾಡಲಿದೆ. ಸಿಎನ್‌ಜಿ ಬೈಕ್ ಬಿಡುಗಡೆಯನ್ನು ಜೂನ್‌ನಲ್ಲಿ ನಿಗದಿಪಡಿಸಲಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ರಾಜೀವ್ ಬಜಾಜ್ (Rajiv Bajaj) ಅವರ ಇತ್ತೀಚಿನ ಪ್ರಕಟಣೆಗಳು ಖಚಿತಪಡಿಸಿವೆ.

ಇದು ಬಜಾಜ್‌ ಕಂಪನಿಯು ಬಿಡುಗಡೆ ಮಾಡುತ್ತಿರುವ ಮೊದಲ ಸಿಎನ್‌ಜಿ ಮೋಟಾರ್‌ಸೈಕಲ್. ಈ ಬೈಕ್ ಅನ್ನು ಕಂಪನಿ ʼಬ್ರೂಜರ್’ ಎಂದು ಕರೆದಿದೆ ಎಂದು ಗೊತ್ತಾಗಿದೆ.

CNG ಟ್ಯಾಂಕ್

ಪರೀಕ್ಷಾರ್ಥ ವೀಕ್ಷಣೆಯ ಆಧಾರದ ಮೇಲೆ ಈ ಬೈಕ್‌ನ ಕೆಲವು ಫೀಚರ್‌ಗಳನ್ನು ಊಹಿಸಲಾಗಿದೆ. ಈ ಬೈಕ್‌ನಲ್ಲಿ ಸಿಎನ್‌ಜಿ ಸಿಲಿಂಡರ್‌ ಅಸಾಂಪ್ರದಾಯಿಕ ರೀತಿಯಲ್ಲಿ ಸಂಯೋಜನೆ ಆಗಿದೆ. ಇದು ಉದ್ದವಾದ, ಸಮತಟ್ಟಾದ ಸೀಟಿನ ಕೆಳಗೆ ಅಡ್ಡಲಾಗಿ ಸಂಯೋಜಿಸಲ್ಪಟ್ಟಿರಬಹುದು ಹಾಗೂ ಬೈಕ್‌ನ ರಚನೆಯಲ್ಲಿ ಹದವಾಗಿ ಮಿಶ್ರಗೊಂಡಿರಬಹುದು. ಈ ನವೀನ ವಿನ್ಯಾಸವು ಸೀಟಿಂಗ್‌ ವ್ಯವಸ್ಥೆಯನ್ನು ಉತ್ತಮಗೊಳಿಸುವುದು ಮಾತ್ರವಲ್ಲದೆ ಬೈಕ್‌ನ ಸಪೂರವಾದ ನೋಟಕ್ಕೆ ಕೊಡುಗೆ ನೀಡುತ್ತದೆ. ಇದಲ್ಲದೆ, ಶ್ರೇಣಿ ಮತ್ತು ಅನುಕೂಲದ ಸಮಸ್ಯೆಗಳನ್ನು ನಿಭಾಯಿಸಲು, ಬೈಕ್ ತುರ್ತು ಬಳಕೆಗಾಗಿ ಕಾಂಪ್ಯಾಕ್ಟ್ ಪೆಟ್ರೋಲ್ ಟ್ಯಾಂಕ್ ಅನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗಿದೆ.

ವೈಶಿಷ್ಟ್ಯಗಳು

ಅದರ ಚಕ್ರದ ಗಾತ್ರ, ಡಿಸ್ಕ್ ಬ್ರೇಕ್ ಮತ್ತು ರೈಡರ್ ವ್ಯಾಪ್ತಿಯ ಪ್ರಯಾಣಿಕರ ವಿಭಾಗದಲ್ಲಿ ಗಮನ ಹರಿಸಿದರೆ, ಬಜಾಜ್ 100-160 ಸಿಸಿ ಶ್ರೇಣಿಯ ಖರೀದಿದಾರರನ್ನು ಗುರಿಯಾಗಿಸಿಕೊಂಡಿದೆ. ಎಲ್ಇಡಿ ದೀಪಗಳು, ಸಂಭವನೀಯ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಟೆಲಿಸ್ಕೋಪಿಕ್ ಫೋರ್ಕ್, ಮೊನೊಶಾಕ್ ಸಸ್ಪೆನ್ಷನ್ ಮತ್ತು 17 ಇಂಚಿನ ಮಿಶ್ರಲೋಹದ ಚಕ್ರಗಳಂತಹ ವೈಶಿಷ್ಟ್ಯಗಳ ಸೇರ್ಪಡೆಯಾಗಿದೆ.

ಬ್ರೇಕಿಂಗ್ ಮತ್ತು ಸೇಫ್ಟಿ ಫೀಚರ್ಸ್‌

ಸುರಕ್ಷತೆಯ ದೃಷ್ಟಿಯಿಂದ, ಬಜಾಜ್ ಸಿಎನ್‌ಜಿ ಬೈಕು ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅನ್ನು ಹೊಂದಿದ್ದು, ಸಾಕಷ್ಟು ನಿಲುಗಡೆ ಶಕ್ತಿ ಮತ್ತು ನಿಯಂತ್ರಣವನ್ನು ಖಾತ್ರಿಪಡಿಸುತ್ತದೆ.

ಉದ್ಯಮದ ಒಳನೋಟಗಳು ಮತ್ತು ಊಹಾಪೋಹಗಳ ಆಧಾರದ ಮೇಲೆ ಹೊಸ ಮಾದರಿಯ ಬೈಕ್‌ನ ನಿರೀಕ್ಷಿತ ಬೆಲೆ ಅಂದಾಜು 80,000 ರೂ (ಎಕ್ಸ್ ಶೋ ರೂಂ) ಎಂದು ಊಹಿಸಲಾಗಿದೆ. ಅಂತಿಮ ಉತ್ಪನ್ನವನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಮೊದಲು ಪೂರ್ವ-ಉತ್ಪಾದನಾ ಮಾದರಿಗಳು ಸಂಭಾವ್ಯ ಬದಲಾವಣೆಗಳಿಗೆ ಒಳಪಟ್ಟಿರುತ್ತವೆ ಎಂಬುದನ್ನು ನೆನಪಿನಲ್ಲಿಡುವುದು ಮುಖ್ಯ.

ಬಜಾಜ್ ತನ್ನ ಸಿಎನ್‌ಜಿ-ಚಾಲಿತ ಬೈಕ್‌ನ ಬಿಡುಗಡೆಗೆ ಸಜ್ಜಾಗುತ್ತಿದ್ದಂತೆ, ಮೋಟಾರ್‌ಸೈಕಲ್ ರೈಡರ್‌ಗಳಲ್ಲಿ ನಿರೀಕ್ಷೆ ಬೆಳೆಯುತ್ತಿದೆ. ಮೇಲೆ ಕೊಟ್ಟಿರುವ ವಿವರಗಳು ಆಗಾಗ ಕಂಪನಿಯು ನೀಡಿರುವ ಕೆಲವು ಮೂಲಭೂತ ಮಾಹಿತಿಗಳನ್ನು ಆಧರಿಸಿದೆ. ಬಿಡುಗಡೆಯ ತಿಂಗಳನ್ನು ಹೊರತುಪಡಿಸಿ ಬಜಾಜ್ ಇನ್ನೂ ಏನನ್ನೂ ಖಚಿತಪಡಿಸಿಲ್ಲ.

ಇದನ್ನೂ ಓದಿ: Bajaj Auto : ಮತ್ತೆ ರಸ್ತೆಗೆ ಇಳಿಯಲಿದೆ ಬಜಾಜ್ ಅವೆಂಜರ್ 220 ಸ್ಟ್ರೀಟ್

Continue Reading

ಪ್ರಮುಖ ಸುದ್ದಿ

Bajaj : ಜೂನ್​ನಲ್ಲಿ ಮಾರುಕಟ್ಟೆಗೆ ಇಳಿಯಲಿದೆ ಮೊಟ್ಟ ಮೊದಲ ಸಿಎನ್​ಜಿ ಬೈಕ್​

Bajaj : ಪರಿಸರ ಸ್ನೇಹಿ ಇಂಧನದ ಮೂಲಕ ಚಲಿಸುವ ಬೈಕ್ ಅನ್ನು ಮಾರುಕಟ್ಟೆಗೆ ತರಲು ಬಜಾಜ್ ಮುಂದಾಗಿದೆ.

VISTARANEWS.COM


on

Rajjiv Bajaj
Koo

ನವ ದೆಹಲಿ: ಭಾರತೀಯ ಮಾರುಕಟ್ಟೆಯಲ್ಲಿ ಸಿಎನ್​ಜಿ (CNG) ಇಂಧನ ಆಧಾರಿತ ತ್ರಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳು ಹೆಚ್ಚಾಗುತ್ತಿವೆ. ಹೆಚ್ಚು ಮೈಲೇಜ್ ಹಾಗೂ ಪರಿಸರ ಸ್ನೇಹಿ ಇಂಧನದ ಈ ವಾಹನಗಳಿಗೆ ಬೇಡಿಕೆಯೂ ಹೆಚ್ಚಾಗಿದೆ. ಇದೇ ನಿಟ್ಟಿನಲ್ಲಿ ಸಿಎನ್​ಜಿ ಬೈಕ್​​ಗಳನ್ನು ಮಾರುಕಟ್ಟೆಗೆ ಇಳಿಸಲು ಭಾರತದ ಮುಂಚೂಣಿ ದ್ವಿಚಕ್ರ ವಾಹನ ಕಂಪನಿಯಾಗಿರುವ ಬಜಾಜ್​ ಆಟೋ (Bajaj) ಮುಂದಾಗಿದೆ. ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬಜಾಜ್ (Rajeev Bajaj) ಅವರು ಈ ಘೋಷಣೆಯನ್ನು ಮಾಡಿದ್ದಾರೆ. ಬೈಕ್​ನ ಮೊದಲ ಮಾದರಿ ಜೂನ್ ನಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ವರದಿಯಾಗಿದೆ.

ಮುಂದಿನ ಐದು ವರ್ಷಗಳಲ್ಲಿ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಪ್ರಯತ್ನಗಳಲ್ಲಿ 5,000 ಕೋಟಿ ರೂ.ಗಳನ್ನು ಹೂಡಿಕೆ ಮಾಡುವ ಬಜಾಜ್ ಗ್ರೂಪ್​, ಆ ನಿಟ್ಟಿನಲ್ಲಿ ಸಿಎನ್​ಜಿ ಬೈಕ್​ಗಳನ್ನು ಮಾರುಕಟ್ಟೆಗೆ ಇಳಿಸಲಿದೆ.

ಮುಂಬರುವ ಬೈಕ್ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (ಸಿಎನ್ ಜಿ) ನಲ್ಲಿ ಕಾರ್ಯನಿರ್ವಹಿಸಲಿದ್ದು, ಪರಿಸರ ಪ್ರಜ್ಞೆಯುಳ್ಳ ಗ್ರಾಹಕರಿಗೆ ನೆರವಾಗಲಿದೆ. ಈ ಬೈಕ್​ಗಳು ಹೆಚ್ಚು ಮೈಲೇಜ್ ಕೂಡ ನೀಡುತ್ತದೆ. ಹೊಸ ಬೈಕ್ ಮೈಲೇಜ್ ಪ್ರಜ್ಞೆಯುಳ್ಳ ಸವಾರರನ್ನು ಆಕರ್ಷಿಸಲೂ ಸಾಧ್ಯವಿದೆ. ಬಜಾಜ್ ಈ ಬೈಕ್ ಅನ್ನು ವಿಭಿನ್ನ ಬ್ರಾಂಡ್ ಅಡಿಯಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಇದನ್ನೂ ಓದಿ : Viral News : ರೈಲಿನಲ್ಲಿ ಹುಟ್ಟಿದ ಹೆಣ್ಣು ಮಗುವಿಗೆ ರೈಲಿನದ್ದೇ ಹೆಸರಿಟ್ಟರು!

ಸಿಎನ್ ಜಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಹೆಚ್ಚಿದ ಉತ್ಪಾದನಾ ವೆಚ್ಚ ಮತ್ತು ಪೆಟ್ರೋಲ್ ಮತ್ತು ಸಿಎನ್ ಜಿ ಇಂಧನ ಆಯ್ಕೆಗಳನ್ನು ಸಕ್ರಿಯಗೊಳಿಸುವ ವಿಶೇಷ ಟ್ಯಾಂಕ್ ಅಳವಡಿಸಬೇಕಾಗುತ್ತದೆ. ಹೀಗಾಗಿ ಸಿಎನ್ ಜಿ ಮೋಟಾರ್ ಸೈಕಲ್ ಗಳು ಸಾಂಪ್ರದಾಯಿಕ ಪೆಟ್ರೋಲ್ ಮಾದರಿಗಳಿಗೆ ಹೋಲಿಸಿದರೆ ಹೆಚ್ಚಿನ ಬೆಲೆ ಹೊಂದಿರುತ್ತವೆ ಎಂದು ನಿರೀಕ್ಷಿಸಲಾಗಿದೆ.

ಅರ್ಥಪೂರ್ಣ ಯೋಜನೆಗಳ ಜಾರಿಗೆ

ಬಜಾಜ್ ಫಿನ್ ಸರ್ವ್ ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಬಜಾಜ್ ಮಾತನಾಡಿ, ಸಕಾರಾತ್ಮಕ ಸಾಮಾಜಿಕ ಪರಿಣಾಮವನ್ನು ಹೆಚ್ಚಿಸುವಲ್ಲಿ ಕೌಶಲ್ಯ ಅಭಿವೃದ್ಧಿಯ ಪ್ರಮುಖ ಪಾತ್ರವನ್ನು ಒತ್ತಿ ಹೇಳಿದರು. ವೇಗವಾಗಿ ವಿಸ್ತರಿಸುತ್ತಿರುವ ಹಣಕಾಸು ಸೇವಾ ವಲಯದಲ್ಲಿ ಉದ್ಯೋಗಾವಕಾಶಗಳಿಗಾಗಿ ಯುವಕರನ್ನು ಸಿದ್ಧಪಡಿಸುವ ಬ್ಯಾಂಕಿಂಗ್, ಹಣಕಾಸು ಮತ್ತು ವಿಮೆಯಲ್ಲಿ ಪ್ರಮಾಣಪತ್ರ ಕಾರ್ಯಕ್ರಮ (ಸಿಪಿಬಿಎಫ್ಐ) ನಂತಹ ಉಪಕ್ರಮಗಳ ಯಶಸ್ಸನ್ನು ಅವರು ಎತ್ತಿ ತೋರಿಸಿದರು.

Continue Reading
Advertisement
Mukthar Ansari
ಪ್ರಮುಖ ಸುದ್ದಿ18 mins ago

Mukhtar Ansari : ನಿಜಕ್ಕೂ ಗ್ಯಾಂಗ್ ಸ್ಟರ್ ಅನ್ಸಾರಿ ಸತ್ತಿದ್ದು ಹೇಗೆ? ಬಂತು ಪೋಸ್ಟ್ ಮಾರ್ಟಮ್ ರಿಪೋರ್ಟ್!

Parliament Flashback
ಕರ್ನಾಟಕ23 mins ago

Parliament Flashback: ದೇಶದಲ್ಲಿ ಇಂದಿರಾ ಗಾಂಧಿ ವಿರೋಧಿ ಅಲೆ ಇದ್ದಾಗಲೂ ಕರ್ನಾಟಕದಲ್ಲಿ ಕಾಂಗ್ರೆಸ್‌ ಜಯಭೇರಿ!

Satyendar Jain
ಪ್ರಮುಖ ಸುದ್ದಿ37 mins ago

Satyendar Jain : ಆಪ್​ಗೆ ಇನ್ನಷ್ಟು ಸಂಕಷ್ಟ; ಸತ್ಯೇಂದರ್​ ಜೈನ್ ವಿರುದ್ಧ ಸಿಬಿಐ ತನಿಖೆಗೆ ಆದೇಶ

Karnataka Weather
ಮಳೆ50 mins ago

Karnataka Weather : ಮುಂದಿನ 3 ದಿನ ಏರುತ್ತೆ ಟೆಂಪ್ರೇಚರು

Mussavir Hussain
ಪ್ರಮುಖ ಸುದ್ದಿ53 mins ago

Blast in Bangalore : ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತರ ಸುಳಿವು ಕೊಟ್ಟರೆ 10 ಲಕ್ಷ ರೂ. ಇನಾಮು; ಇಲ್ಲಿದೆ ಉಗ್ರರ ಪೋಟೊ ಸಮೇತ ವಿವರ

Provide infrastructure in polling booths says ZP Deputy Secretary Mallikarjuna thodalabagi
ಕೊಪ್ಪಳ55 mins ago

Koppala News: ಮತಗಟ್ಟೆಗಳಲ್ಲಿ ಮೂಲಸೌಕರ್ಯ ಕಲ್ಪಿಸಿ; ಜಿ.ಪಂ‌ ಉಪಕಾರ್ಯದರ್ಶಿ

18th CII ITC Sustainable Award Ceremony
ಬೆಂಗಳೂರು57 mins ago

Bengaluru News: ಸಿಎಸ್‌ಆರ್‌ ಮಹತ್ವದ ಸಾಧನೆಗಾಗಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ಗೆ ಪ್ರಶಂಸೆ

Car collided with electric pole The photographer died on the spot
ಕ್ರೈಂ59 mins ago

Road Accident: ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿ; ಫೋಟೋಗ್ರಾಫರ್‌ ಸ್ಥಳದಲ್ಲೇ ಸಾವು

Ash Gourd Juice Benefits
ಆರೋಗ್ಯ1 hour ago

Ash Gourd Juice Benefits: ಬೂದುಕುಂಬಳಕಾಯಿ ಜ್ಯೂಸ್‌ ಕುಡಿಯುವುದರಿಂದ ಆಗುವ 10 ಪ್ರಯೋಜನಗಳಿವು

Lok Sabha Election 2024
ಕರ್ನಾಟಕ1 hour ago

Lok Sabha Election 2024: ಜೆಡಿಎಸ್ ಪಟ್ಟಿ ಬಿಡುಗಡೆ; ಮಂಡ್ಯದಿಂದ ಎಚ್‌ಡಿಕೆ, ಕೋಲಾರ, ಹಾಸನಕ್ಕೆ ಯಾರು?

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ15 hours ago

Dina Bhavishya : ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ; ಈ ರಾಶಿಯವರು ಎಚ್ಚರಿಕೆ ವಹಿಸಿ

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 20241 day ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 20241 day ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ2 days ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20242 days ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20242 days ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20242 days ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ3 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು3 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ4 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

ಟ್ರೆಂಡಿಂಗ್‌