ಒಂದೋ ಆಡಳಿತ ಮಂಡಳಿ ಇರ್ಬೇಕು, ಇಲ್ಲಾ ನಾವಿರಬೇಕು! ಓಪನ್ಎಐ ಸಿಬ್ಬಂದಿ ಬೆದರಿಕೆ Vistara News

ಗ್ಯಾಜೆಟ್ಸ್

ಒಂದೋ ಆಡಳಿತ ಮಂಡಳಿ ಇರ್ಬೇಕು, ಇಲ್ಲಾ ನಾವಿರಬೇಕು! ಓಪನ್ಎಐ ಸಿಬ್ಬಂದಿ ಬೆದರಿಕೆ

OpenAI: ಓಪನ್ಎಐ ಸಿಇಒ ಆಗಿದ್ದ ಸ್ಯಾಮ್ ಆಲ್ಟ್‌ಮ್ಯಾನ್ ಅವರನ್ನು ಆಡಳಿತ ಮಂಡಳಿ ಕಿತ್ತು ಹಾಕಿತ್ತು. ಮಂಡಳಿಯ ಈ ನಡೆಗೆ ಸಿಬ್ಬಂದಿಯು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Openai Staff demands board Resign
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್‌ಜಿಪಿಟಿಯ (ChatGPT) ಮಾತೃಸಂಸ್ಥೆ ಓಪನ್‌ಎಐ ಸಿಇಒ ಸ್ಥಾನದಿಂದ ವಜಾಗೊಂಡ ಬೆನ್ನಲ್ಲೇ ಸ್ಯಾಮ್‌ ಆಲ್ಟ್‌ಮ್ಯಾನ್‌ (Sam Altman) ಅವರಿಗೆ ಭಾರೀ ಬೆಂಬಲ ವ್ಯಕ್ತವಾಗಿದೆ. ಮೈಕ್ರೋಸಾಫ್ಟ್ ಅವರಿಗೆ ನೀಡಲಾಗಿದ್ದರೆ, ಮತ್ತೊಂದೆಡೆ ಓಪನ್‌ಎಐನಲ್ಲಿ (openAi) ಸಿಬ್ಬಂದಿಯು ಸಂಸ್ಥೆಯನ್ನು ತೊರೆಯುವ ಬೆದರಿಕೆಯ ಪತ್ರವನ್ನು ಬರೆದಿದ್ದಾರೆ(Mass Resigns). ಓಪನ್ಎಐ ಸ್ಟಾರ್ಟ್‌ಅಪ್ ತೊರೆದು ಸ್ಯಾಮ್ ಆಲ್ಟ್‌ಮ್ಯಾನ್ ಜತೆ ಕೈಜೋಡಿಸುವುದಾಗಿ ಸಿಬ್ಬಂದಿಯು ಮ್ಯಾನೇಜ್ಮೆಂಟ್‌ಗೆ ಹೇಳಿದ್ದಾರೆ. ಆಡಳಿತ ಮಂಡಳಿ (Mangement Board) ರಾಜೀನಾಮೆ ನೀಡದಿದ್ದಲ್ಲೇ ಸಾಮೂಹಿಕ ರಾಜೀನಾಮೆಯ ಬೆದರಿಕೆಯ ಪತ್ರವನ್ನು ರವಾನಿಸಲಾಗಿದೆ.

ಮುಖ್ಯ ತಂತ್ರಜ್ಞಾನ ಅಧಿಕಾರಿ ಮೀರಾ ಮುರಾತಿ, ಮುಖ್ಯ ದತ್ತಾಂಶ ವಿಜ್ಞಾನಿ ಇಲ್ಯಾ ಸುಟ್‌ಸ್ಕೇವರ್ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಬ್ರಾಡ್ ಲೈಟ್‌ಕ್ಯಾಪ್ ಹೊರತುಪಡಿಸಿ, ಸುಮಾರು 500 ಓಪನ್‌ಎಐ ಸಿಬ್ಬಂದಿ ಸದಸ್ಯರು ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ ಎಂದು ಈ ವಿಷಯದ ಪರಿಚಯವಿರುವ ವ್ಯಕ್ತಿಯೊಬ್ಬರು ರಾಯಿಟರ್ಸ್‌ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಈ ಕುರಿತು ಓಪನ್ಎಐ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಮೈಕ್ರೋಸಾಫ್ಟ್‌ ಸೇರಲಿದ್ದಾರೆ ಓಪನ್‌ಎಐ ನಿರ್ಗಮಿತ ಸಿಇಒ ಸ್ಯಾಮ್‌ ಆಲ್ಟ್‌ಮ್ಯಾನ್‌

ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್‌ಜಿಪಿಟಿಯ (ChatGPT) ಮಾತೃಸಂಸ್ಥೆ ಓಪನ್‌ಎಐ ಸಿಇಒ ಸ್ಥಾನದಿಂದ ವಜಾಗೊಂಡ ಬೆನ್ನಲ್ಲೇ ಸ್ಯಾಮ್‌ ಆಲ್ಟ್‌ಮ್ಯಾನ್‌ (Sam Altman) ಅವರಿಗೆ ಭರ್ಜರಿ ಆಫರ್‌ ಬಂದಿದೆ. ಜಾಗತಿಕ ಐಟಿ ಕಂಪನಿಯಾದ ಮೈಕ್ರೋಸಾಫ್ಟ್‌ನಿಂದ ಸ್ಯಾಮ್‌ ಆಲ್ಟ್‌ಮ್ಯಾನ್‌ ಅವರಿಗೆ ಆಫರ್‌ ಬಂದಿದೆ. ಹಾಗೆಯೇ, ಶೀಘ್ರದಲ್ಲೇ ಸ್ಯಾಮ್‌ ಆಲ್ಟ್‌ಮ್ಯಾನ್‌ ಅವರು ಮೈಕ್ರೋಸಾಫ್ಟ್‌ ಸೇರಲಿದ್ದಾರೆ ಎಂದು ಸಿಇಒ ಸತ್ಯ ನಾಡೆಲ್ಲಾ (Satya Nadella) ಘೋಷಿಸಿದ್ದಾರೆ.

“ನಾವು ಓಪನ್‌ಎಐ ಜತೆ ಸಹಭಾಗಿತ್ವ ಮುಂದುವರಿಯಲು ಬಯಸುತ್ತೇವೆ. ಮೈಕ್ರೋಸಾಫ್ಟ್‌ ಕಂಪನಿಯು ನಾವೀನ್ಯತೆಯನ್ನು ಅಳವಡಿಸಿಕೊಳ್ಳಲು ಉತ್ಸುಕವಾಗಿರುತ್ತದೆ. ಅಷ್ಟೇ ಅಲ್ಲ. ಸ್ಯಾಮ್‌ ಆಲ್ಟ್‌ಮ್ಯಾನ್‌ ಹಾಗೂ ಗ್ರೆಗ್‌ ಬ್ರಾಕ್‌ಮ್ಯಾನ್‌ ಅವರು ಮೈಕ್ರೋಸಾಫ್ಟ್‌ ಕಂಪನಿ ಸೇರಲಿದ್ದಾರೆ. ಕೃತಕ ಬುದ್ಧಿಮತ್ತೆ ಸಂಶೋಧನಾ ತಂಡದಲ್ಲಿ ಅವರು ಭಾಗಿಯಾಗಲಿದ್ದಾರೆ. ಇದರೊಂದಿಗೆ ನಮ್ಮ ತಂಡ, ಸಂಪನ್ಮೂಲವು ವಿಸ್ತಾರವಾಗುತ್ತಿದೆ” ಎಂದು ಸತ್ಯ ನಾಡೆಲ್ಲಾ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದಾರೆ. ಆದಾಗ್ಯೂ, ಗ್ರೆಗ್‌ ಬ್ರಾಕ್‌ಮ್ಯಾನ್‌ ಕೂಡ ಓಪನ್‌ಎಐನಿಂದ ಹೊರಬಂದಿದ್ದರು.

ಓಪನ್‌ಎಐ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಯಾಮ್ ಆಲ್ಟ್‌ಮ್ಯಾನ್ ಅವರನ್ನು ಕಳೆದ ವಾರ ಆಡಳಿತ ಮಂಡಳಿ ಸಂಸ್ಥೆಯಿಂದ ಹೊರಹಾಕಿದೆ. 38 ವರ್ಷದ ಆಲ್ಟ್‌ಮ್ಯಾನ್ ಒಂದು ವರ್ಷದ ಹಿಂದೆ ಕೃತಕ ಬುದ್ಧಿಮತ್ತೆಯ ಚಾಟ್‌ಬಾಟ್ ʼಚಾಟ್‌ಜಿಪಿಟಿʼಯನ್ನು ಹೊರತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅದು ಅಭೂತಪೂರ್ವ ಜನಪ್ರಿಯತೆ ಗಳಿಸಿ ಮನೆಮಾತಾಗಿತ್ತು.

ಮತ್ತೊಂದು ಬೆಳವಣಿಗೆಯಲ್ಲಿ, ಓಪನ್‌ಎಐಯ ಸಹ-ಸಂಸ್ಥಾಪಕ ಮತ್ತು ಅಧ್ಯಕ್ಷ ಗ್ರೆಗ್ ಬ್ರಾಕ್‌ಮ್ಯಾನ್‌ ಅವರು ಕೂಡ ಸಂಸ್ಥೆಯಿಂದ ತಾವು ನಿರ್ಗಮಿಸುವುದಾಗಿ ಪ್ರಕಟಿಸಿದ್ದರು. ಆಲ್ಟ್‌ಮ್ಯಾನ್‌ ಅವರ ಪದಚ್ಯುತಿಯ ನಂತರದ ಕೆಲವೇ ಗಂಟೆಗಳಲ್ಲಿ ಅವರ ಈ ನಿರ್ಧಾರ ಪ್ರಕಟವಾಗಿತ್ತು. “8 ವರ್ಷಗಳ ಹಿಂದೆ ನನ್ನ ಅಪಾರ್ಟ್‌ಮೆಂಟ್‌ನಲ್ಲಿ ಸಂಸ್ಥೆ ಪ್ರಾರಂಭವಾದಾಗಿನಿಂದ ನಾವೆಲ್ಲರೂ ಒಟ್ಟಾಗಿ ನಿರ್ಮಿಸಿದ ಈ ಉತ್ಪನ್ನದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ನಾವು ಒಟ್ಟಿಗೆ ಉತ್ತಮ ಮತ್ತು ಕಠಿಣ ಸಮಯವನ್ನು ಎದುರಿಸಿದೆವು. ಇದನ್ನು ಸಾಧಿಸಿದ್ದೇವೆ. ಎಲ್ಲಾ ಕಾರಣಗಳ ಹೊರತಾಗಿಯೂ ಇನ್ನಷ್ಟು ಮುನ್ನಡೆ ಸಾಧ್ಯವಾಗಬೇಕಿತ್ತು. ಆದರೆ ಇಂದಿನ ಸುದ್ದಿಯ ಆಧಾರದ ಮೇಲೆ ನಾನು ಸಂಸ್ಥೆಯನ್ನು ತ್ಯಜಿಸಿದೆ” ಎಂದಿದ್ದರು.

ಈ ಸುದ್ದಿಯನ್ನೂ ಓದಿ: OpenAI: ಓಪನ್‌ಎಐ ಸಂಸ್ಥೆಯಲ್ಲಿ ಭಾರಿ ಬದಲಾವಣೆ, ಸಂಸ್ಥಾಪಕರಿಬ್ಬರ ನಿರ್ಗಮನ, ಮಿರಾ ನೂತನ ಸಿಇಒ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಗ್ಯಾಜೆಟ್ಸ್

ಗೂಗಲ್ ಕ್ರೋಮ್ ಅಪ್ಡೇಟ್ ಮಾಡದಿದ್ರೆ ನಿಮ್ಮ ಫೋನ್, ಲ್ಯಾಪ್‌ಟಾಪ್ ಹಾಳು!

Google Chrome: ಗೂಗಲ್ ಕ್ರೋಮ್ ಬ್ರೌಸರ್‌ನಲ್ಲಿ ಥ್ರೆಟ್ ಪತ್ತೆಯಾಗಿದ್ದು, ಕಂಪನಿಯು ಸೆಕ್ಯುರಿಟಿ ಅಪ್‌ಡೇಟ್ ಬಿಡುಗಡೆ ಮಾಡಿದೆ.

VISTARANEWS.COM


on

threat detected So Update you google chrome
Koo

ನವದೆಹಲಿ: ನೀವು ಗೂಗಲ್ ಕ್ರೋಮ್ ಬ್ರೌಸರ್ (Google Chrome) ಬಳಸುತ್ತಿದ್ದೀರಾ…? ಹಾಗಿದ್ದರೆ, ಕೂಡಲೇ ಅಪ್‌ಡೇಟ್ ಮಾಡಿಕೊಳ್ಳಿ(Chrome Update). ಇಲ್ಲದಿದ್ದರೆ, ನೀವು ಅಪಾಯಕ್ಕೆ ಸಿಕ್ಕಿಕೊಳ್ಳುವ ಸಾಧ್ಯತೆಗಳಿವೆ. ಈ ವಿಷಯವನ್ನು ಸ್ವತಃ ಗೂಗಲ್ ಎಚ್ಚರಿಸಿದೆ ಮತ್ತು ಮಹತ್ವದ ಸೆಕ್ಯುರಿಟಿ ಅಪ್‌ಡೇಟ್ (Security Update) ಕೂಡ ರಿಲೀಸ್ ಮಾಡಿದೆ. ಹಾಗಾಗಿ, ನೀವು ಕೂಡಲೇ ನಿಮ್ಮ ಗೂಗಲ್ ಕ್ರೋಮ್ ಅಪ್‌ಡೇಟ್ ಮಾಡಿಕೊಳ್ಳುವುದು ಒಳ್ಳೆಯದು.

ಮ್ಯಾಕ್ಒಎಸ್, ವಿಂಡೋಸ್ ಮತ್ತು ಲಿನುಕ್ಸ್ ಸಾಧನಗಳಿಗೆ ಸಂಬಂಧಿಸಿದಂತೆ ಗೂಗಲ್ ಕ್ರೋಮ್ ಬ್ರೌಸರ್‌ಗಳಿಗಾಗಿ ಭದ್ರತಾ ನವೀಕರಣವನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. CVE-2023-6345 ಎಂದು ಗುರುತಿಸಲಾದ ಥ್ರೆಟ್ ಪರಿಹರಿಸಲು ಈ ಅಪ್‌ಡೇಟ್ ಡಿಸೈನ್ ಮಾಡಲಾಗಿದೆ. ಈ ಥ್ರೆಟ್ ದಾಳಿಕೋರರಿಗೆ ಪೀಡಿತ ಸಾಧನಗಳ ನಿಯಂತ್ರಣವನ್ನು ಪಡೆಯಲು ಅನುಮತಿಸುತ್ತದೆ. ಎಲ್ಲಾ ಕ್ರೋಮ್ ಬಳಕೆದಾರರನ್ನು ತಕ್ಷಣವೇ ತಮ್ಮ ಬ್ರೌಸರ್‌ಗಳನ್ನು ನವೀಕರಿಸಲು ಗೂಗಲ್ ಒತ್ತಾಯಿಸಿದೆ.

CVE-2023-6345 ಯಾವ ರೀತಿಯ ಅಪಾಯವನ್ನುಂಟು ಮಾಡುತ್ತದೆ ಎಂಬ ಮಾಹಿತಿಯನ್ನು ಗೂಗಲ್ ನೀಡಿಲ್ಲ. ಗೂಗಲ್‌ನ ಥ್ರೆಟ್ ಅನಾಲಿಸಿಸ್ ಗ್ರೂಪ್, ಈ ಸಂಭಾವ್ಯ ಥ್ರೆಟ್ ಅನ್ನು ಪತ್ತೆ ಹಚ್ಚಿತ್ತು. ಈ ರೀತಿಯ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳುವುದು ಟೆಕ್ನಾಲಜಿ ಕಂಪನಿಗಳಲ್ಲಿ ಸಾಮಾನ್ಯವಾದ ಬೆಳವಣಿಗೆ ಎಂದು ಹೇಳಬಹುದು. ಈ ಕುರಿತಾದ ಹೆಚ್ಚಿನ ಮಾಹಿತಿಯನ್ನು ನೀಡುವುದರಿಂದ ದಾಳಿಕೋರರಿಗೆ ಮತ್ತಷ್ಟು ನೆರವು ನೀಡಿದಂತಾಗುತ್ತದೆ.

CVE-2023-6345 ಒಂದು ಪೂರ್ಣಾಂಕದ ಓವರ್‌ಫ್ಲೋ ದೌರ್ಬಲ್ಯವಾಗಿದ್ದು, ಇದು ಕ್ರೋಮ್ ಗ್ರಾಫಿಕ್ಸ್ ಎಂಜಿನ್‌ನಲ್ಲಿ ಎಂಬೆಡ್ ಮಾಡಲಾದ ಓಪನ್-ಸೋರ್ಸ್ 2ಡಿ ಗ್ರಾಫಿಕ್ಸ್ ಲೈಬ್ರರಿಯಾದ Skia ಮೇಲೆ ಪರಿಣಾಮ ಬೀರುತ್ತದೆ. ಮ್ಯಾಕ್ ಒಎಸ್ಅಪ್‌ಡೇಟ್ ಟಿಪ್ಪಣಿಗಳಲ್ಲಿ ವಿವರಿಸಿದಂತೆ, ಈ ಥ್ರೆಟ್ ದುರುದ್ದೇಶಪೂರಿತ ಫೈಲ್ ಮೂಲಕ ಸ್ಯಾಂಡ್‌ಬಾಕ್ಸ್ ತಪ್ಪಿಸಿಕೊಳ್ಳುವಿಕೆಯನ್ನು ಸಮರ್ಥವಾಗಿ ಕಾರ್ಯಗತಗೊಳಿಸಲು ಕನಿಷ್ಠ ದಾಳಿಯನ್ನು ಸಕ್ರಿಯಗೊಳಿಸುತ್ತದೆ. ಇದು ಅನಿಯಂತ್ರಿತ ಕೋಡ್ ಎಕ್ಸಿಕ್ಯೂಶನ್ ಮತ್ತು ಡೇಟಾ ಕಳ್ಳತನಕ್ಕೆ ಕಾರಣವಾಗಬಹುದು ಮತ್ತು ಕ್ರೋಮ್‌ ಬ್ರೌಸರ್‌ನ ಸುರಕ್ಷತೆ ಮತ್ತು ಬಳಕೆದಾರರ ಸೂಕ್ಷ್ಮ ಮಾಹಿತಿಯನ್ನು ರಾಜಿ ಮಾಡಿಕೊಳ್ಳಬಹುದು.

ಗೂಗಲ್ ಕ್ರೋಮ್ ಯಾಕೆ ಅಪ್‌ಡೇಟ್ ಮಾಡಿಕೊಳ್ಳಬೇಕು?

ಸ್ವತಃ ಗೂಗಲ್ ಕಂಪನಿಯೇ, ಗೂಗಲ್ ಕ್ರೋಮ್ ಬ್ರೌಸರ್ ಅಪ್‌ಡೇಟ್ ಮಾಡಿಕೊಳ್ಳಲು ಹೇಳಿದ ಮೇಲೂ ನಾವು ಮಾಡದಿದ್ದರೆ ಅಪಾಯ ತಪ್ಪಿದ್ದಲ್ಲ. ಸೈಬರ್ ವಂಚಕರು, ಈ ಥ್ರೆಟ್ ಮೂಲಕ ನಮ್ಮ ಖಾಸಗಿ ಮಾಹಿತಿಯನ್ನು ಬಳಸಿಕೊಳ್ಳುವ ಸಾಧ್ಯತೆಗಳಿರುತ್ತವೆ. 11 ತಿಂಗಳ ಹಿಂದೆ ಇದೇ ರೀತಿಯ ಮಾಹಿತಿ ಹೊರ ಬಿದ್ದಿತ್ತು. ಗೂಗಲ್‌ ಕ್ರೋಮ್‌ (Google Chrome) ವೆಬ್‌ ಬ್ರೌಸರ್‌ನ 250 ಕೋಟಿಗೂ ಅಧಿಕ ಜನರ ಮಾಹಿತಿ ಕಳ್ಳತನವಾಗಿದೆ (Google Chrome Data Breach) ಎಂದು ತಿಳಿದುಬಂದಿತ್ತು.

“ಗೂಗಲ್‌ ಕ್ರೋಮ್‌ ಹಾಗೂ ಕ್ರೋಮಿಯಮ್‌ ಬ್ರೌಸರ್‌ಗಳ 250 ಕೋಟಿಗೂ ಅಧಿಕ ಬಳಕೆದಾರರ ಮಾಹಿತಿಯು ಅಪಾಯದಲ್ಲಿದೆ. ಬಳಕೆದಾರರ ಸೂಕ್ಷ್ಮ ಮಾಹಿತಿ, ದಾಖಲೆ, ಕ್ರಿಪ್ಟೋ ವ್ಯಾಲೆಟ್‌ಗಳು ಹಾಗೂ ಕ್ಲೌಡ್‌ ಪ್ರೊವೈಡರ್‌ ಕ್ರೆಡೆನ್ಶಿಯಲ್‌ಗಳು ಸೋರಿಕೆಯಾಗಿರುವ ಸಾಧ್ಯತೆ ಇದೆ” ಎಂದು ಸೈಬರ್‌ ಸೆಕ್ಯುರಿಟಿ ಸಂಸ್ಥೆ ‘ಇಂಪರ್ವಾ ರೆಡ್’‌ (Imperva Red) ಮಾಹಿತಿ ನೀಡಿದೆ. ಇದು ಗೂಗಲ್‌ ಕ್ರೋಮ್‌ ಇತಿಹಾಸದಲ್ಲೇ ಬೃಹತ್‌ ಡೇಟಾ ಸೋರಿಕೆ ಪ್ರಕರಣ ಎಂದೇ ವಿಶ್ಲೇಷಿಸಲಾಗಿತ್ತು.

ಹ್ಯಾಕರ್‌ಗಳು ಸಿಮ್‌ಲಿಂಕ್‌ (SymLink Or Symbolic Link) ಮೂಲಕ ಬಳಕೆದಾರರ ಮಾಹಿತಿಯನ್ನು ಕದ್ದಿದ್ದಾರೆ ಎಂದು ಕಂಪನಿ ತಿಳಿಸಿತ್ತು. ಕ್ರೋಮಿಯಮ್‌ ವರ್ಷನ್‌ 107 ಹಾಗೂ ಕ್ರೋಮ್‌ ವರ್ಷನ್‌ 108ಅನ್ನು ಕಳೆದ ವರ್ಷ ಬಿಡುಗಡೆ ಮಾಡಿದ್ದು, ಇವುಗಳನ್ನು ಕಾಲಕಾಲಕ್ಕೆ ಅಪ್‌ಡೇಟ್‌ ಮಾಡುವ ಮೂಲಕ ಮಾಹಿತಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು ಎಂದು ಇಂಪರ್ವಾ ರೆಡ್‌ ಸಲಹೆ ನೀಡಿತ್ತು. ಹಾಗಾಗಿ, ನಾವು ನೀಡುವ ಎಚ್ಚರಿಕೆಗಳನ್ನು ನಿರ್ಲಕ್ಷ್ಯ ಮಾಡಬಾರದು. ಇಲ್ಲದಿದ್ದರೆ ನಾವೇ ನಷ್ಟವನ್ನು ಅನುಭವಿಸಬೇಕಾಗುತ್ತದೆ.

ಈ ಸುದ್ದಿಯನ್ನೂ ಓದಿ: WhatsApp: ವಾಟ್ಸಾಪ್‌ ಡೆಸ್ಕ್‌ಟಾಪ್ ಬಳಕೆದಾರರಿಗೆ ‘ಒಮ್ಮೆ ವೀಕ್ಷಣೆ’ ಫೀಚರ್ ವಾಪಸ್ ಬಂತು

Continue Reading

ಗ್ಯಾಜೆಟ್ಸ್

ಡಿ.1ರಿಂದ ಸಿಮ್‌ ಕಾರ್ಡ್‌ ಹೊಸ ರೂಲ್ಸ್; ನಿಯಮ ಮೀರಿದ್ರೆ 10 ಲಕ್ಷ ರೂ. ದಂಡ!

New SIM Card rules: ಹೆಚ್ಚುತ್ತಿರುವ ಸೈಬರ್‌ ವಂಚನೆಗಳನ್ನು ತಡೆಯುವುದಕ್ಕಾಗಿ ಕೇಂದ್ರ ಸರ್ಕಾರವು ಡಿಸೆಂಬರ್ 1ರಿಂದ ಸಿಮ್‌ ಕಾರ್ಡ್ ಖರೀದಿ ಮತ್ತು ಮಾರಾಟ ಸಂಬಂಧ ಹೊಸ ರೂಲ್ಸ್ ಜಾರಿ ಮಾಡುತ್ತಿದೆ.

VISTARANEWS.COM


on

New SIM Card rules from december 1 and Check details
Koo

ನವದೆಹಲಿ: ಸೈಬರ್ ವಂಚನೆಯನ್ನು (Cyber Fraud) ತಡೆಯುವುದಕ್ಕಾಗಿ ಕೇಂದ್ರ ಸರ್ಕಾರವು (Central Government) ಸಿಮ್ ಕಾರ್ಡ್‌ಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ರೂಪಿಸಿದ್ದು(New SIM Card rules), ಡಿಸೆಂಬರ್ 1ರಿಂದ ಜಾರಿಗೆ ಬರಲಿವೆ. ಸಿಮ್ ಮಾರಾಟ (SIM Selling) ಮತ್ತು ಖರೀದಿಗೆ (SIM Buying) ಸಂಬಂಧಿಸಿದಂತೆ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗುವುದು ಎಂದು ಕಳೆದ ಆಗಸ್ಟ್‌ ತಿಂಗಳಲ್ಲಿಯೇ ಕೇಂದ್ರ ಟೆಲಿಕಮ್ಯುನಿಕೇಷನ್ ಇಲಾಖೆಯು ಘೋಷಣೆ ಮಾಡಿತ್ತು. ವಂಚನೆಯ ಮೂಲಕ ಸಿಮ್ ಕಾರ್ಡ್ ಖರೀದಿ ಮತ್ತು ಬಳಕೆಯು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಈ ನಿಧಾರ್ವನ್ನು ಕೈಗೊಂಡಿದೆ. ಕೇಂದ್ರ ಸಂವಹನ ಸಚಿವ ಅಶ್ವಿನಿ ವೈಷ್ಣವ್ (Union Minister Ashwini Vaishnaw) ಅವರು, ವಂಚನೆಯ ಮೂಲಕ ಸಕ್ರಿಯವಾಗಿದ್ದ ಸುಮಾರು 52 ಲಕ್ಷ ಸಿಮ್ ಕಾರ್ಡ್‌ಗಳನ್ನು ಈಗಾಗಲೇ ನಿಷ್ಕ್ರಿಯಗೊಳಿಸಲಾಗಿದೆ ಎಂದು ನಿಯಮಗಳ ಘೋಷಣೆ ವೇಳೆ ಹೇಳಿದ್ದರು.

10 ಲಕ್ಷ ರೂ. ದಂಡ ಪಕ್ಕಾ

ಈ ಹೊಸ ನಿಯಮಗಳಡಿಯಲ್ಲಿ, ಸಿಮ್ ಮಾರಾಟ ಮಾಡುವ ಎಲ್ಲ ಡೀಲರ್‌ಗಳು ಕಡ್ಡಾಯವಾಗಿ ದೃಢೀಕರಣ ವ್ಯವಸ್ಥೆಗೆ ಒಳಪಡಬೇಕಾಗುತ್ತದೆ. ಒಂದು ವೇಳೆ, ಈ ನಿಮಯವನ್ನು ಪಾಲಿಸಲು ವಿಫಲರಾದರೆ ಸುಮಾರು 10 ಲಕ್ಷ ರೂ.ವರೆಗೂ ದಂಡವನ್ನು ತೆರಬೇಕಾಗುತ್ತದೆ.

ಸಿಮ್ ಕಾರ್ಡ್ ಡೀಲರ್‌ಗಳ ಪರಿಶೀಲನೆಯನ್ನು ಟೆಲಿಕಾಂ ಆಪರೇಟರ್‌ನಿಂದ ಕೈಗೊಳ್ಳಲಾಗುತ್ತದೆ. ಅಸ್ತಿತ್ವದಲ್ಲಿರುವ ಮಾರಾಟಗಾರರು ನೋಂದಣಿ ಮಾನದಂಡವನ್ನು ಅನುಸರಿಸಲು 12 ತಿಂಗಳ ಅವಧಿಯನ್ನು ಹೊಂದಿರುತ್ತಾರೆ. ಈ ರೀತಿಯ ದೃಢೀಕರಣ ಅಗತ್ಯದ ಬಗ್ಗೆ ವಿವರಿಸಿರುವ ಸರ್ಕಾರವು, ಈ ದೃಢೀಕರಣದ ಮೂಲಕ ವಂಚಕ ಸಿಮ್ ಮಾರಾಟಗಾರರನ್ನು ಗುರುತಿಸುವುದು, ಕಪ್ಪು ಪಟ್ಟಿಗೆ ಸೇರಿಸುವುದು ಮತ್ತು ಅವರನ್ನು ಸಿಸ್ಟಮ್‌ನಿಂದ ಕಿತ್ತು ಹಾಕುವುದು ಸಾಧ್ಯವಾಗಲಿದೆ.

ಬಲ್ಕ್ ಸಿಮ್ ಇಲ್ಲ

ಡಿಜಿಟಲ್ ಹಗರಣಗಳನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಬೃಹತ್ ಸಂಪರ್ಕಗಳ ವಿತರಣೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಆದಾಗ್ಯೂ, ಒಂದು ಗುರುತಿನ ಆಧಾರದ ಮೇಲೆ ವ್ಯಕ್ತಿಗಳು ಇನ್ನೂ ಒಂಬತ್ತು ಸಿಮ್ ಕಾರ್ಡ್‌ಗಳನ್ನು ತೆಗೆದುಕೊಳ್ಳಬಹುದು.

ಹೊಸ ಸಿಮ್‌ಗಳನ್ನು ಖರೀದಿಸುವ ಸಂದರ್ಭದಲ್ಲಿ ಅಥವಾ ಅಸ್ತಿತ್ವದಲ್ಲಿರುವ ಸಂಖ್ಯೆಯಲ್ಲಿ ಹೊಸದಕ್ಕೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ, ಕೆವೈಸಿ ಅಡಿಯಲ್ಲಿ ಗ್ರಾಹಕರು ಅಗತ್ಯ ಜನಸಂಖ್ಯಾ ವಿವರಗಳನ್ನು ಒದಗಿಸಬೇಕಾಗುತ್ತದೆ. ಮುದ್ರಿತ ಆಧಾರ್ ಕಾರ್ಡ್‌ನ ಕ್ಯೂಆರ್‌ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ವಿವರಗಳನ್ನು ಪಡೆಯಲಾಗುತ್ತದೆ.

90 ದಿನಗಳು ಬೇಕು

ಈ ಹಿಂದಿನ ಬಳಕೆದಾರರ ಮೊಬೈಲ್ ನಂಬರ್ ‌ನಿಷ್ಕ್ರಿಯಗೊಂಡ 90 ದಿನಗಳು ಅಂದರೆ 3 ತಿಂಗಳ ಬಳಿಕವಷ್ಟೇ, ಆ ನಂಬರ್ ಅನ್ನು ಹೊಸ ಗ್ರಾಹಕರಿಗೆ ನೀಡಲು ಅವಕಾಶವಿರುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಸಿಮ್ ಬದಲಿ ಸಂದರ್ಭದಲ್ಲಿ ಕೆವೈಸಿ ಪ್ರಕ್ರಿಯೆಯನ್ನು ಚಂದಾದಾರರು ಪೂರ್ಣಗೊಳಿಸಬೇಕು.

ಈ ವರ್ಷಾದರಂಭದಲ್ಲಿ ಸುಧಾರಣೆಯ ಭಾಗವಾಗಿ ಕೇಂದ್ರ ಸರ್ಕಾರವು ಸಂಚಾರಿ ಸಾಥಿ ವೆಬ್‌ಸೈಟ್ ಅನ್ನು ಆರಂಭಿಸಿತ್ತು. ಕಳ್ಳತನವಾದ ಅಥವಾ ಕಳೆದು ಹೋದ ಮೊಬೈಲ್‌ ಫೋನ್‌ಗಳ ಬಗ್ಗೆ ಈ ಪೋರ್ಟಲ್‌ನಲ್ಲಿ ಗ್ರಾಹಕರು ವರಿದ ಮಾಡಬಹುದು. ಅಕ್ರಮ ಮೊಬೈಲ್‌ ಸಂಪರ್ಕಗಳನ್ನು ಪತ್ತೆ ಹಚ್ಚುವ ಕೃತಕ ಬುದ್ಧಿಮತ್ತೆ ಆಧರಿತ ಸಾಫ್ಟ್‌ವೇರ್ ಅಸ್ತ್ರದ ಜತೆಗೆ ಈ ಪೋರ್ಟಲ್ ಕೂಡ ಆರಂಭಿಸಲಾಗಿತ್ತು.

ಈ ಸುದ್ದಿಯನ್ನೂ ಓದಿ: Digital KYC For SIM Cards: ಸಿಮ್‌ ಕಾರ್ಡ್‌ ಕೆವೈಸಿ ಆಗಲಿದೆ ಸಂಪೂರ್ಣ ಡಿಜಿಟಲ್‌, ಒಂದು ಐಡಿಗೆ ಸಿಗಲಿದೆ ಐದೇ ಸಿಮ್

Continue Reading

ಗ್ಯಾಜೆಟ್ಸ್

ವಾಟ್ಸಾಪ್‌ನಿಂದ ಚಾಟ್ ಅಷ್ಟೇ ಅಲ್ಲ, ಇಷ್ಟೆಲ್ಲ ಅದ್ಭುತ ಕೆಲಸ ಮಾಡಬಹುದು ನೋಡಿ!

WhatsApp: ತ್ವರಿತ ಸಂದೇಶ ಕಳುಹಿಸಲು ನೆರವು ನೀಡುವ ವಾಟ್ಸಾಪ್‌ನಿಂದ ಸಾಕಷ್ಟು ಇನ್ನಿತರ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ.

VISTARANEWS.COM


on

Not only chat you can do many more incredible things by whatsApp in India
Koo

ವಾಟ್ಸಾಪ್ (WhatsApp) ಎಂದರೆ ಕೇವಲ ಚಾಟ್ (WhatsApp Chat) ಮಾಡಲು, ಅಗತ್ಯ ಸಂದೇಶಗಳನ್ನು (WhatsApp Message) ತ್ವರಿತವಾಗಿ ಕಳುಹಿಸುವ ಆ್ಯಪ್ ಎಂದು ಕೊಂಡಿದ್ದೇವೆ. ಇವು ವಾಟ್ಸಾಪ್‌ನ ಪ್ರಾಥಮಿಕ ಕೆಲಸಗಳು ಎಂಬುದು ಹೌದು. ಆದರೆ, ಇವುಗಳ ಹೊರತಾಗಿಯೂ ವಾಟ್ಸಾಪ್‌ ನಾನಾ ರೀತಿಯಲ್ಲಿ ಬಳಕೆದಾರರಿಗೆ (WhatsApp Users) ನೆರವು ನೀಡುತ್ತದೆ. ಬೆರಳ ತುದಿಯಲ್ಲಿ ಅನೇಕ ಕೆಲಸಗಳನ್ನು ವಾಟ್ಸಾಪ್‌ಗಳನ್ನು ಬಳಸಿಕೊಂಡು ಮಾಡಬಹುದು. ಉಬರ್ ಬುಕ್(Uber Booking), ಮೆಟ್ರೋ ಟಿಕೆಟ್ ಖರೀದಿ (Metro Ticket), ದಿನಸಿ ಖರೀದಿ, ಹಣ ರವಾನೆ, ದಾಖಲೆ ಪತ್ರಗಳು ಮತ್ತು ಆರೋಗ್ಯ ಸೇವೆ ಸೇರಿದಂತೆ ಇನ್ನಿತರ ಸರ್ವೀಸ್‌ ಪಡೆದುಕೊಳ್ಳಬಹುದು. ಅಷ್ಟರ ಮಟ್ಟಿಗೆ ವಾಟ್ಸಾಪ್ ನಮಗೆ ಹೆಲ್ಪ್‌ಫುಲ್ ಆಗಿದೆ. ಆದರೆ, ಬಹಳಷ್ಟು ಜನರಿಗೆ ವಾಟ್ಸಾಪ್‌ನ ಉಪಯುಕ್ತತೆಯ ಬಗ್ಗೆ ಗೊತ್ತಿರುವುದಿಲ್ಲ. ಹಾಗಾಗಿ, ನೀವು ವಾಟ್ಸಾಪ್‌ನಿಂದ ಮಾಡಬಹುದು ಕೆಲವು ಕೆಲಸಗಳ ಬಗ್ಗೆ ಇಲ್ಲಿ ಮಾಹಿತಿ ನೀಡಿದ್ದೇವೆ. ಓದಿ.

ಉಬರ್ ಬುಕ್ ಮಾಡಬಹುದು

ಉಬರ್ ಬುಕ್ ಮಾಡಲು ನೀವು ಉಬರ್ ಆ್ಯಪ್‌ಗೆ ಹೋಗಬೇಕಾದ ಅಗತ್ಯವಿಲ್ಲ. ವಾಟ್ಸಾಪ್ ಮೂಲಕವೂ ಮಾಡಬಹುದು. ಇದ್ಕಕಾಗಿ ನೀವು, 7292000002 ನಂಬರ್ ಅನ್ನು ನಿಮ್ಮ ಮೊಬೈಲ್‌ನಲ್ಲಿ ಸೇವ್ ಮಾಡಿಕೊಟ್ಟುಕೊಳ್ಳಬೇಕು. ಬಳಿಕ, ವಾಟ್ಸಾಪ್ ಚಾಟ್ ಓಪನ್ ಮಾಡಿ ಮತ್ತು ಹಾಯ್ ಎಂದು ಟೈಪ್ ಮಾಡಿ. ಬಳಿಕ ನಿಮ್ಮ ಪಿಕ್ ಅಪ್ ಲೊಕೇಷನ್ ಮತ್ತು ನೀವು ಹೋಗುವ ಸ್ಥಳವನ್ನು ನಮೂದಿಸಿ. ತಕ್ಷಣವೇ ನಿಮಗೆ ನಿಮ್ಮ ಪ್ರಯಾಣಕ್ಕೆ ತಗಲುವ ವೆಚ್ಚ ಮತ್ತು ಡ್ರೈವರ್ ಮಾಹಿತಿ ದೊರೆಯುತ್ತದೆ.

ಮೆಟ್ರೋ ಟಿಕೆಟ್ ಖರೀದಿಸಬಹುದು!

ಹೌದು, ವಾಟ್ಸಾಪ್ ಮೂಲಕ ಮೆಟ್ರೋ ಟಿಕೆಟ್ ಕೂಡ ಖರೀದಿಸಬಹುದು. ಇದಕ್ಕಾಗಿ ನೀವು ಮೊಬೈಲ್ ಕಾಂಟಾಕ್ಟ್ ಲಿಸ್ಟ್‌ನಲ್ಲಿ 9650855800 ನಂಬರ್ ಸೇವ್ ಮಾಡಿಕೊಳ್ಳಬೇಕು. ಬಳಿಕ ಚಾಟ್ ಓಪನ್ ಮಾಡಿ ಹಾಯ್ ಎಂದು ಟೈಪ್ ಮಾಡಬೇಕು. ಬಳಿಕ ನಿಮಗೆ ಬೇಕಾದ ಭಾಷೆಯನ್ನು ಆಯ್ದುಕೊಳ್ಳಿ. ಇಷ್ಟಾದ ನಿಮ್ಮ ಸ್ಟೇಷನ್ ಸ್ಟಾಪ್ಸ್ ನಮೂದಿಸಿ ಮತ್ತು ಎಷ್ಟು ಟಿಕೆಟ್ ಬೇಕು ಎಂಬುದನ್ನು ನಮೂದಿಸಿ. ಜರ್ನಿ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿಕೊಳ್ಳಿ ಮತ್ತು ಮುಂದುವರಿಯರಿ. ಆಗ ನಿಮಗೆ ದೊರೆಯುವ ಕ್ಯೂಆರ್ ಟಿಕೆಟ್‌ ಅನ್ನು ಸೇವ್ ಮಾಡಿಟ್ಟುಕೊಳ್ಳಿ.

ಜಿಯೋ ಮಾರ್ಟ್ ಮೂಲಕ ಏನಾದರೂ ಖರೀದಿಸಿ

ಈಗಾಗಲೇ ನಿಮಗೆ ಗೊತ್ತಿರುವ ಸಂಗತಿ ಇದು. ರಿಲಯನ್ಸ್ ಇಂಡಸ್ಟ್ರೀಸ್‌ನ ಜಿಯೋ ಮಾರ್ಟ್ ಮತ್ತು ವಾಟ್ಸಾಪ್ ಈ ಕುರಿತು ಸಹಯೋಗವನ್ನು ಹೊಂದಿವೆ. ವಾಟ್ಸಾಪ್ ಮೂಲಕವೇ ಜಿಯೋ ಮಾರ್ಟ್‌ನಿಂದ ದಿನಸಿ ಪದಾರ್ಥಗಳನ್ನು ಖರೀದಿಸಬಹುದು. ಜಿಯೋ ಮಾರ್ಟ್‌ನಲ್ಲಿರುವ 50 ಸಾವಿರಕ್ಕೂ ಅಧಿಕ ಇರುವ ದಿನಸಿಗಳನ್ನು ಬ್ರೌಸ್ ಕೂಡ ಮಾಡಬಹುದು. ಜಿಯೋ ಮಾರ್ಟ್ ಡಿಸ್ಕೌಂಟ್ ಕೂಡ ನೀಡುತ್ತದೆ. ಇದಕ್ಕಾಗಿ ನೀವು ಜಿಯೋ ಮಾರ್ಟ್‌ನ 79770 79770 ನಂಬರ್ ಸೇವ್ ಮಾಡಿಕೊಳ್ಳಬೇಕು. ಚಾಟ್ ಬಾಕ್ಸ್‌ನಲ್ಲಿ ಹಾಯ್ ಟೈಪ್ ಮಾಡಿ. ಆಗ ದೊರೆಯುವ ವಸ್ತುಗಳ ಪಟ್ಟಿಯಲ್ಲಿ, ನಿಮಗೆ ಬೇಕಾದ ವಸ್ತುಗಳನ್ನು ಶೋಧ ಮಾಡಬಹುದು. ನಿಮ್ಮ ಆಯ್ಕೆಯಂತೆ ಬೇಕಾಗಿರುವ ವಸ್ತುಗಳನ್ನು ಕಾರ್ಟ್‌ಗೆ ಸೇರಿಸಿ. ವಾಟ್ಸಾಪ್ ಪೇ ಯುಪಿಐ ಮೂಲಕ ಹಣ ಪಾವತಿಸಿ ಆರ್ಡರ್ ಪೂರ್ತಿ ಮಾಡಿ.

ಹಣ ರವಾನೆ ಕೂಡ ಮಾಡಬಹುದು

ವಾಟ್ಸಾಪ್ ಹಣ ರವಾನೆ ಮತ್ತು ಸ್ವೀಕಾರಕ್ಕೂ ಅವಕಾಶ ಕಲ್ಪಿಸುತ್ತದೆ. ವಾಟ್ಸಾಪ್ ಪೇ ಮೂಲಕ ವಾಟ್ಸಾಪ್ ಬಳಕೆದಾರರು ಹಣದ ವ್ಯವಹಾರ ಮಾಡಬಹುದು. ಒಮ್ಮೆ ನೀವು ನಿಮ್ಮ ವಾಟ್ಸಾಪ್ ಪಾವತಿಗಳ ವ್ಯಾಲೆಟ್‌ಗೆ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿದ ನಂತರ, ಯಾವುದೇ ಶುಲ್ಕವಿಲ್ಲದೆ , ಯುಪಿಐ ಅಪ್ಲಿಕೇಶನ್‌ಗಳನ್ನು ಬಳಸುವ ಯಾರಿಗಾದರೂ ನೀವು ಸುರಕ್ಷಿತವಾಗಿ ಹಣವನ್ನು ಕಳುಹಿಸಬಹುದು ಮತ್ತು ಸ್ವೀಕರಿಸಬಹುದು.

ಮಹತ್ವದ ದಾಖಲೆ ಪತ್ರ ಪಡೆಯಿರಿ

ವಾಟ್ಸಾಪ್ ಮೂಲಕ ನಿಮ್ಮ ಮಹತ್ವದ ದಾಖಲೆಗಳನ್ನು ಪಡೆದುಕೊಳ್ಳಬಹುದು. ಅಂದರೆ, ಬಳೆಕದಾರರು ತಮ್ಮ ಪಾನ್ ಕಾರ್ಡ್, ಚಾಲನಾ ಪರವಾನಿಗಿ ಇತ್ಯಾದಿ ದಾಖಲೆಗಳನ್ನು ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಬೇಕು. ಬಳಕೆದಾರರು ಮೊದಲಿಗೆ ಡಿಜಿಲಾಕರ್‌ನಲ್ಲಿ ಅಧಿಕೃತ ಖಾತೆ ತೆರೆಯಬೇಕು. ಪಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಆರ್ ಸಿ ಇತ್ಯಾದಿ ದಾಖಲೆಗಳನ್ನು ಡಿಜಿಟಲ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಸೇವೆಯನ್ನು ವಾಟ್ಸಾಪ್ ಮೂಲಕ ಪಡೆದುಕೊಳ್ಳಲು 9013151515 ನಂಬರ್ ಸೇವ್ ಮಾಡಿ ಮತ್ತು ಚಾಟ್ ಓಪನ್ ಮಾಡಿ ಹಾಯ್ ಎಂದು ಟೈಪ್ ಮಾಡಿ. ಡಿಜಿಲಾಕರ್ ಡಾಕ್ಯುಮೆಂಟ್‌ಗಳನ್ನು ಪ್ರವೇಶಿಸಲು ಮೆನು ಪ್ರಾಂಪ್ಟ್‌ಗಳನ್ನು ಅನುಸರಿಸಿ.

ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳಿ

ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳುವುದು ಕಷ್ಟ. ಆದರೆ, ವಾಟ್ಸಾಪ್ ಮೂಲಕ ತುಂಬ ಸುಲಭವಾಗಿ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ಬಳಕೆದಾರರು +917290055552 ನಂಬರ್‌ ಸೇವ್ ಮಾಡಿಕೊಳ್ಳಬೇಕು ಮತ್ತು ಹಾಯ್ ಎಂದು ಟೈಪ್ ಮಾಡಿ ಸೆಂಡ್ ಮಾಡಬಹುದು. ಬಳಿಕ ಗೋಚರಿಸುವ ಮೆನುವಿನಲ್ಲಿ ನಿಮಗೆ ಬೇಕಾದ ಸೇವೆಗಳನ್ನು ಆಯ್ಕೆ ಮಾಡಿ. ಪ್ರಾಂಪ್ಟ್ ಅನುಸರಿಸಿ ಮತ್ತು ವೈದ್ಯರಿಗೆ ನಿಮ್ಮ ಅನಾರೋಗ್ಯದ ಮಾಹಿತಿಯನ್ನು ನೀಡಬೇಕು. ನಿಮಗೆ ಸೇವೆ ದೊರೆಯುತ್ತದೆ.

ಈ ಸುದ್ದಿಯನ್ನೂ ಓದಿ: WhatsApp: ವಾಟ್ಸಾಪ್‌ ಡೆಸ್ಕ್‌ಟಾಪ್ ಬಳಕೆದಾರರಿಗೆ ‘ಒಮ್ಮೆ ವೀಕ್ಷಣೆ’ ಫೀಚರ್ ವಾಪಸ್ ಬಂತು

Continue Reading

ಗ್ಯಾಜೆಟ್ಸ್

WhatsApp: ವಾಟ್ಸಾಪ್‌ ಡೆಸ್ಕ್‌ಟಾಪ್ ಬಳಕೆದಾರರಿಗೆ ‘ಒಮ್ಮೆ ವೀಕ್ಷಣೆ’ ಫೀಚರ್ ವಾಪಸ್ ಬಂತು

WhatsApp: ಒಮ್ಮೆ ವೀಕ್ಷಣೆ ಫೀಚರ್ ಅನ್ನು ವಾಟ್ಸಾಪ್ ಆ್ಯಪ್ ಕಳೆದ ವರ್ಷವಷ್ಟೇ ಹಿಂತೆಗೆದುಕೊಂಡಿತ್ತು. ಈ ಫೀಚರ್ ಅನ್ನು ಈಗ ಮತ್ತೆ ಪರಿಚಿಯಿಸುತ್ತಿದೆ.

VISTARANEWS.COM


on

WhatsApp will reintroduced vies once feature to desktop users
Koo

ನವದೆಹಲಿ: ವಾಟ್ಸಾಪ್‌ ಆ್ಯಪ್(WhatsApp), ಫೋಟೋ (photo) ಮತ್ತು ವಿಡಿಯೋಗಳಿಗಾಗಿ (Video) ವ್ಯೂ ಒನ್ಸ್ (ಒಮ್ಮೆ ವೀಕ್ಷಣೆ) ಫೀಚರ್ ಅನ್ನು ಡೆಸ್ಕ್‌ಟಾಪ್ ಬಳಕೆದಾರರಿಗೆ ಪರಿಚಯಿಸುತ್ತಿದೆ(Veiw once). ಕಳೆದ ವರ್ಷ ಮೆಟಾ-ಮಾಲೀಕತ್ವದ ತ್ವರಿತ ಸಂದೇಶ ಅಪ್ಲಿಕೇಶನ್ ವೆಬ್ ಆವೃತ್ತಿಯಿಂದ ಫೋಟೋಗಳು ಮತ್ತು ವೀಡಿಯೊಗಳನ್ನು ಒಮ್ಮೆ ವೀಕ್ಷಣೆ ಮತ್ತು ತೆರೆಯುವ ಸಾಮರ್ಥ್ಯವನ್ನು ಕಿತ್ತು ಹಾಕಿತ್ತು. ಕಂಪನಿಯ ಈ ನಿರ್ಧಾರವು ಕೆಲವು ಬಳಕೆದಾರರಿಂದ ಟೀಕೆಗಳನ್ನು ಎದುರಿಸಿತು. ಆದಾಗ್ಯೂ, ವಾಟ್ಸಾಪ್ ಈಗ ತನ್ನ ನಿರ್ಧಾರವನ್ನು ವಾಪಸ್ ಪಡೆದುಕೊಂಡಿದ್ದು, ಮತ್ತೆ ಸೆಂಡಿಂಗ್ ವ್ಯೂ ಒನ್ಸ್ ಫೀಚರ್ ಅನ್ನು ಮರಳಿ ಪರಿಚಯಿಸುತ್ತಿದೆ. ಬಳಕೆದಾರರ ಗೌಪ್ಯತೆಯನ್ನು ಹೆಚ್ಚಿಸಲು ಒಮ್ಮೆ ವೀಕ್ಷಣೆ ವೈಶಿಷ್ಟ್ಯದ ಪ್ರಾಮುಖ್ಯತೆಯನ್ನು ವಾಟ್ಸಾಪ್ ಗುರುತಿಸಿದೆ.

ಸ್ನ್ಯಾಪ್‌ಚಾಟ್ ಬಳಕೆದಾರರಂತೆ ವಾಟ್ಸಾಪ್‌ನ ಒಮ್ಮೆ ವೀಕ್ಷಣೆ ಫೀಚರ್ ಬಳಕೆದಾರರಿಗೆ ತಾತ್ಕಾಲಿಕ ಮಾಧ್ಯಮವನ್ನು ಸ್ವೀಕರಿಸುವವರ ಗ್ಯಾಲರಿಗೆ ಉಳಿಸದೆಯೇ ಕಳುಹಿಸಲು ಅನುಮತಿಸುತ್ತದೆ. ಈ ಫೀಚರ್ ಸೂಕ್ಷ್ಮ ಅಥವಾ ಗೌಪ್ಯ ಮಾಹಿತಿಯನ್ನು ಹಂಚಿಕೊಳ್ಳಲು ಹೆಚ್ಚು ಉಪಯುಕ್ತವಾಗಿದೆ. ಏಕೆಂದರೆ ಇದು ಮಾಧ್ಯಮವನ್ನು ಸೀಮಿತ ಸಮಯದವರೆಗೆ ಮಾತ್ರ ಪ್ರವೇಶಿಸಬಹುದು ಮತ್ತು ಸ್ವೀಕರಿಸುವವರ ಸಾಧನದಲ್ಲಿ ಶಾಶ್ವತವಾಗಿ ಸಂಗ್ರಹಿಸಲಾಗುವುದಿಲ್ಲ ಎಂದು ಖಚಿತಪಡಿಸುತ್ತದೆ.

Wabetainfo ಪ್ರಕಾರ, ವಾಟ್ಸಾಪ್ ಈಗ ಮತ್ತೆ, ಫೋಟೋ ಮತ್ತು ವಿಡಿಯೋಗಳಿಗಾಗಿ ವ್ಯೂ ಒನ್ಸ್ (ಒಮ್ಮೆ ವೀಕ್ಷಣೆ) ಫೀಚರ್ ಅನ್ನು ಡೆಸ್ಕ್‌ಟಾಪ್ ಬಳಕೆದಾರರಿಗೆ ಪರಿಚಯಿಸುತ್ತಿದೆ. ಈ ಫೀಚರ್ ವಿಂಡೋಸ್ ಮತ್ತು ಮ್ಯಾಕ್‌ಒಎಸ್ ಬಳಕೆದಾರರಿಗೆ ಲಭ್ಯವಾಗಲಿದೆ. ಈ ಫೀಚರ್ ಅನ್ವಯ ಬಳಕೆದಾರರು ತಾತ್ಕಾಲಿಕವಾಗಿ ಮೀಡಿಯಾ ಕಡತವನ್ನು ಕಳುಹಿಸಬಹುದು ಮತ್ತು ಅದು ಸ್ವೀಕರಿಸಿದವರು ವೀಕ್ಷಣೆ ಮಾಡಿದ ತಕ್ಷಣವೇ ಹೊರಟು ಹೋಗಲಿದೆ. ವಿಂಡೋಸ್‌ ಸಾಧನಗಳಲ್ಲಿ ಈ ಫೀಚರ್ ಅನ್ನು ಕ್ಯಾಪ್ಷನ್ ಬಾರ್‌ನಲ್ಲಿ ಕಾಣಿಸಿಕೊಳ್ಳಲಿದೆ ಮ್ತತು ಮ್ಯಾಕ್‌ಒಎಸ್ ಮತ್ತು ಸಂಪರ್ಕಿತ ಸಾಧನಗಳಲ್ಲಿ ಈ ಫೀಚರ್ ಲಭ್ಯವಾಗಲಿದೆ.

ವ್ಯೂ ಒನ್ಸ್ ಫೀಚರ್ ಬಳಸುವಾಗ, ಕಳುಹಿಸಿದ ಫೋಟೋಗಳು ಮತ್ತು ವೀಡಿಯೊಗಳನ್ನು ಫಾರ್ವರ್ಡ್ ಮಾಡಲು, ಉಳಿಸಲು, ಸ್ಟಾರ್ ಗುರುತು ಹಾಕಲು ಅಥವಾ ಹಂಚಿಕೊಳ್ಳಲು ಸಾಧ್ಯವಿಲ್ಲ. ಸ್ವೀಕರಿಸುವವರು ಓದುವ ರಸೀದಿಗಳನ್ನು ಸಕ್ರಿಯಗೊಳಿಸಿದ್ದರೆ ಸ್ವೀಕರಿಸುವವರು “ಒಮ್ಮೆ ವೀಕ್ಷಿಸಿ” ಫೋಟೋ ಅಥವಾ ವೀಡಿಯೊವನ್ನು ತೆರೆದಿದ್ದಾರೆಯೇ ಎಂಬುದನ್ನು ನಿರ್ಧರಿಸಲು ಕಳುಹಿಸುವವರ ಏಕೈಕ ವಿಧಾನವಾಗಿದೆ. ಸ್ವೀಕರಿಸುವವರು ಫೋಟೋ ಅಥವಾ ವೀಡಿಯೊವನ್ನು ಪ್ರಸಾರ ಮಾಡಿದ 14 ದಿನಗಳಲ್ಲಿ ತೆರೆಯಲು ವಿಫಲವಾದರೆ, ಮಾಧ್ಯಮವು ಸಂಭಾಷಣೆಯಿಂದ ಸ್ವಯಂಚಾಲಿತವಾಗಿ ಕಣ್ಮರೆಯಾಗಲಿದೆ.

“ಒಮ್ಮೆ ವೀಕ್ಷಿಸಿ” ಫೀಚರ್ ಬಳಸಿ ಮೀಡಿಯಾ ಫೈಲ್‌ ಕಳುಹಿಸುವವರು ಪ್ರತಿ ಬಾರಿ ಅವರು ಅಂತಹ ಮಾಧ್ಯಮವನ್ನು ಪ್ರಸಾರ ಮಾಡುವಾಗ “ಒಮ್ಮೆ ವೀಕ್ಷಿಸಿ” ಆಯ್ಕೆಯನ್ನು ಸ್ಪಷ್ಟವಾಗಿ ಕಡ್ಡಾಯವಾಗಿ ಆಯ್ಕೆ ಮಾಡಲೇಬೇಕಾಗುತ್ತದೆ. “ಒಮ್ಮೆ ವೀಕ್ಷಿಸಿ” ವೈಶಿಷ್ಟ್ಯವನ್ನು ಬಳಸಿಕೊಂಡು ಕಳುಹಿಸಲಾದ ವಿಷಯವು ಕೇವಲ ಒಂದು ವೀಕ್ಷಣೆಗಾಗಿ ಮಾತ್ರ ಸಕ್ರಿಯವಾಗಿರುತ್ತದೆ. ಅದನ್ನು ಉಳಿಸಲು, ಫಾರ್ವರ್ಡ್ ಮಾಡಲು ಅಥವಾ ಹಂಚಿಕೊಳ್ಳಲು ಸಾಧ್ಯವಿಲ್ಲ. ಸ್ವೀಕರಿಸುವವರು “ಒಮ್ಮೆ ವೀಕ್ಷಿಸಿ” ಫೋಟೋ ಅಥವಾ ವೀಡಿಯೊವನ್ನು ಒಮ್ಮೆ ತೆರೆದರೆ, ಅದು ಚಾಟ್‌ನಿಂದ ಕಣ್ಮರೆಯಾಗುತ್ತದೆ ಮತ್ತು ಸ್ವೀಕರಿಸುವವರಿಗೆ ಮತ್ತೆ ಆ ಫೈಲ್ ಅನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ಈ ಸುದ್ದಿಯನ್ನೂ ಓದಿ: WhatsApp: ವಾಟ್ಸಾಪ್‌ ಖಾತೆಗೆ ನಿಮ್ಮ ಇ ಮೇಲ್ ಅಡ್ರೆಸ್ ಲಿಂಕ್ ಮಾಡಬಹುದು! ಆದರೆ…?

Continue Reading
Advertisement
Mizoram Election Result
ದೇಶ27 mins ago

Mizoram Election Result: ಮಿಜೋರಾಂ ಫಲಿತಾಂಶಕ್ಕೆ ಕ್ಷಣಗಣನೆ; ಯಾರಿಗೆ ಗೆಲುವು?

4 state election results shows us that, freebies are not the way for win elections
ದೇಶ53 mins ago

ವಿಸ್ತಾರ ಸಂಪಾದಕೀಯ: ವಿಧಾನಸಭೆ ಚುನಾವಣೆ ಫಲಿತಾಂಶ; ‘ಗ್ಯಾರಂಟಿ’ಯೇ ಅಂತಿಮವಲ್ಲ!

ead your daily horoscope predictions for december 4th 2023
ಪ್ರಮುಖ ಸುದ್ದಿ2 hours ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Sphoorti Salu
ಸುವಚನ2 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Mizoram Election Result will be announced on December 4, 2023
ದೇಶ6 hours ago

Mizoram Election Result: ಇಂದು ಮಿಜೋರಾಂ ಎಲೆಕ್ಷನ್ ರಿಸಲ್ಟ್; ಮತ ಎಣಿಕೆ ಒಂದು ದಿನ ಮುಂದೂಡಿದ್ದೇಕೆ?

Congress delegation met Telangana Governor and stake claim to form govt
ದೇಶ7 hours ago

ತೆಲಂಗಾಣ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆ ಹಕ್ಕು ಮಂಡಿಸಿದ ಕಾಂಗ್ರೆಸ್

Crime news
ಕರ್ನಾಟಕ7 hours ago

ಧಾರವಾಡದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ

Top 10 news
ಟಾಪ್ 10 ನ್ಯೂಸ್7 hours ago

VISTARA TOP 10 NEWS : ಬಿಜೆಪಿಗೆ 4ನೇ ಮೂರು ಬಹುಮತ, ಸೈದ್ಧಾಂತಿಕ ಹೋರಾಟ ನಿರಂತರ ಎಂದ ರಾಹುಲ್​ ಮತ್ತಿತರ ದಿನದ ಪ್ರಮುಖ ಸುದ್ದಿಗಳು

with defeat of Rajasthan and Chhattisgarh Congress ruled states reduced to 3
ದೇಶ7 hours ago

ರಾಜಸ್ಥಾನ, ಛತ್ತೀಸ್‌ಗಢ ಸೋಲಿನೊಂದಿಗೆ 3 ರಾಜ್ಯಗಳಿಗೆ ಸೀಮಿತವಾದ ಕಾಂಗ್ರೆಸ್!

Bhavani Revanna
ಕರ್ನಾಟಕ8 hours ago

ತಮ್ಮ ಕಾರಿಗೆ ಡಿಕ್ಕಿ ಹೊಡೆದ ಬೈಕ್ ಸುಟ್ಟು ಹಾಕಿ ಎಂದ ಭವಾನಿ ರೇವಣ್ಣ! ವಿಡಿಯೊ ನೋಡಿ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

ead your daily horoscope predictions for december 4th 2023
ಪ್ರಮುಖ ಸುದ್ದಿ2 hours ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ19 hours ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ1 day ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ2 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ3 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ3 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ4 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ4 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

ಟ್ರೆಂಡಿಂಗ್‌