ಗ್ಯಾಜೆಟ್ಸ್
WhatsApp Channel: ‘ವಾಟ್ಸಾಪ್ ಚಾನೆಲ್’ಗೆ ಎಂಟ್ರಿ ಕೊಟ್ಟ ಮೋದಿ! ಪಿಎಂ ಫಾಲೋ ಮಾಡಲು ಹೀಗೆ ಮಾಡಿ…
WhatsApp Channel: ಮೊನ್ನೆಯಷ್ಟೇ ವಾಟ್ಸಾಪ್, ಚಾನೆಲ್ ಎಂಬ ಹೊಸ ಫೀಚರ್ ಪರಿಚಯಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಹೊಸ ಫೀಚರ್ ಬಳಸಲಾರಂಭಿಸಿದ್ದಾರೆ.
ನವದೆಹಲಿ: ಬುಧವಾರವಷ್ಟೇ ಮೆಟಾ ಕಂಪನಿ(Meta) ಲಾಂಚ್ ಮಾಡಿದ್ದ ವಾಟ್ಸಾಪ್‌ನ ಹೊಸ ಫೀಚರ್ ‘ಚಾನೆಲ್’ (WhatsApp Channel) ಈಗ ಜನಪ್ರಿಯವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರೂ ಈಗ ವಾಟ್ಸಾಪ್ ಚಾನೆಲ್ ಆರಂಭಿಸಿದ್ದಾರೆ. ವಾಟ್ಸಾಪ್ ಚಾನೆಲ್‌ನಲ್ಲಿ ಅಡ್ಮಿನ್‌ಗಳು (WhatsApp Channel Admin), ತಮ್ಮ ಫಾಲೋವರ್ಸ್‌ಗೆ ಪಠ್ಯ, ಟೆಕ್ಸ್ಟ್, ಫೋಟೋ, ವಿಡಿಯೋ, ಸ್ಟಿಕರ್ಸ್ ಷೇರ್ ಮಾಡಬಹುದು. ಜತೆಗೆ ಸಮೀಕ್ಷೆ ಕೂಡ ಕೈಗೊಳ್ಳಬಹುದು.
ಏನಿದು ವಾಟ್ಸಾಪ್ ಚಾನೆಲ್?
ವಾಟ್ಸಾಪ್ ಚಾನೆಲ್, ಇದು ಒನ್ ವೇ ಬ್ರಾಡಕಾಸ್ಟರ್ ಸಾಧನವಾಗಿದೆ. ಅಡ್ಮಿನ್‌ಗಳು ಫಾಲೋವರ್ಸ್‌ಗಳೊಂದಿಗೆ ಪಠ್ಯದಿಂದ ಮಲ್ಟಿಮೀಡಿಯಾ ಮತ್ತು ಸಮೀಕ್ಷೆಗಳವರೆಗೆ ವಿವಿಧ ರೀತಿಯ ವಿಷಯವನ್ನು ಹಂಚಿಕೊಳ್ಳಲು ಇದು ಅನುಮತಿಸುತ್ತದೆ. ವ್ಯಕ್ತಿಗತ ಬಳಕೆದಾರರು ತಮ್ಮ ನೆಚ್ಚಿನ ವ್ಯಕ್ತಿಗಳು ಮತ್ತು ಸಂಸ್ಥೆಗಳ ಚಟುವಟಿಕೆಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿ ಇರಲು ಇದರಿಂದ ಸಾಧ್ಯವಾಗಲಿದೆ. ಕುಟುಂಬ, ಸ್ನೇಹಿತರು ಮತ್ತು ಸಮುದಾಯಗಳೊಂದಿಗೆ ನಿಮ್ಮ ನಿಯಮಿತ ಚಾಟ್‌ಗಳಿಂದ ಭಿನ್ನವಾಗಿರುವ “ಅಪ್‌ಡೇಟ್‌ಗಳು” ಹೆಸರಿನ ಮೀಸಲಾದ ಟ್ಯಾಬ್ ಮೂಲಕ ವಾಟ್ಸಾಪ್ ಚಾನೆಲ್ ಪ್ರವೇಶಿಸಬಹುದಾಗಿದೆ.
ವಾಟ್ಸಾಪ್ ಚಾನೆಲ್ ಕಾರ್ಯ ಹೇಗೆ?
ಚಾನೆಲ್‌ಗಳು ಒನ್‌ವೇ ಬ್ರಾಡ್‌ಕಾಸ್ಟ್ ಆಗಿರುವುದರಿಂದ ಅಡ್ಮಿನ್‌ಗೆ ಮಾತ್ರ ಷೇರ್ ಮಾಡುವ ಹಕ್ಕಿರುತ್ತದೆ. ಬಳಕೆದಾರರು ಎಮೋಜಿಗಳ ಮೂಲಕ ಮಾತ್ರವೇ ಪ್ರತಿಕ್ರಿಯೆ ನೀಡಬಹುದು. ಹಾಗೆಯೇ, ಚಾನೆಲ್ ಪೋಸ್ಟ್‌ಗೆ ಎಷ್ಟು ರಿಯಾಕ್ಷನ್‌ಗಳು ಬಂದಿವೆ ಎಂಬುದನ್ನು ಲೆಕ್ಕ ಹಾಕಬಹುದು.
30 ದಿನಗಳವರೆಗೆ ಮಾತ್ರ ಅಡ್ಮಿನ್‌ಗಳಿಗೆ ತಮ್ಮ ಕಂಟೆಂಟ್ ಅಪ್‌ಡೇಟ್ ಮಾಡುವ ಇಲ್ಲವೇ ಬದಲಾವಣೆ ಮಾಡುವ ಅವಕಾಶವನ್ನು ಈ ಹೊಸ ಫೀಚರ್ ಒದಗಿಸುತ್ತದೆ. ಅದರ ವಾಟ್ಸಾಪ್, ತನ್ನ ಪ್ಲಾಟ್‌ಫಾರ್ಮ್ ಸರ್ವರ್‌ಗಳಿಂದ ಹಳೆಯ ಅಪ್‌ಡೇಟ್‌ಗಳನ್ನು ಸ್ವಯಂಚಾಲಿತವಾಗಿ ಡಿಲಿಟ್ ಮಾಡುತ್ತದೆ.
ಇದಲ್ಲದೆ, ನೀವು ಚಾಟ್‌ಗಳು ಅಥವಾ ಗ್ರೂಪ್‌ಗಳಿಗೆ ಅಪ್‌ಡೇಟ್ಸ್ ಫಾರ್ವರ್ಡ್ ಮಾಡಿದಾಗ, ಅದು ಸ್ವಯಂಚಾಲಿತವಾಗಿ ಮೂಲ ಚಾನಲ್‌ಗೆ ಲಿಂಕ್ ಒಳಗೊಂಡಿರುತ್ತದೆ. ಇದರಿಂದಾಗಿ ಚಾನೆಲ್‌ನ ಕಂಟೆಂಟ್ ಹುಡುಕುವ ಇತರರಿಗೆ ಸುಲಭ ಪ್ರವೇಶ ಒದಗಿಸಲು ಸಾಧ್ಯವಾಗುತ್ತದೆ.
ಈ ಸುದ್ದಿಯನ್ನೂ ಓದಿ: WhatsApp Channels: ವಾಟ್ಸ್ಯಾಪ್ ಹೊಸ ಫೀಚರ್ ʼಚಾನೆಲ್ʼ ಈಗ ಭಾರತದಲ್ಲೂ ಲಭ್ಯ; ಏನಿದು, ಸೇರೋದು ಹೇಗೆ?
ನರೇಂದ್ರ ಮೋದಿ ವಾಟ್ಸಾಪ್ ಚಾನೆಲ್ ಫಾಲೋ ಮಾಡುವುದು ಹೇಗೆ?
ಮೊದಲಿಗೆ ನಿಮ್ಮ ವಾಟ್ಸಾಪ್ ಅಪ್‌ಡೇಟ್ ಆಗಿದೆಯಾ ಚೆಕ್ ಮಾಡಿಕೊಳ್ಳಿ. ಒಂದೊಮ್ಮೆ ಆಗಿರದಿದ್ದರೆ ಗೂಗಲ್ ಪ್ಲೇಸ್ಟೋರ್‌ಗೆ ಹೋಗಿ, ವಾಟ್ಸಾಪ್ ಅಪ್‌ಡೇಟ್ ಮಾಡಿಕೊಳ್ಳಿ. ಇಷ್ಟಾದ ಮೇಲೆ ಮೊದಲಿಗೆ ವಾಟ್ಸಾಪ್ ತೆರೆಯಿರಿ ಮತ್ತು ಅಪ್‌ಡೇಟ್‌ಗೆ ನ್ಯಾವಿಗೇಟ್ ಮಾಡಿ. ಬಳಿಕ, ನಿಮ್ಮ ಸ್ಕ್ರೀನ್‌ನ ಕೆಳಭಾಗದಲ್ಲಿ, ನೀವು “Find Channels” ಆಯ್ಕೆಯನ್ನು ಕಾಣುತ್ತೀರಿ. ಅದರ ಮೇಲೆ ಟ್ಯಾಪ್ ಮಾಡಿ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಲಭ್ಯವಿರುವ ಚಾನೆಲ್‌ಗಳ ಪಟ್ಟಿ ನಿಮ್ಮ ಮುಂದೆ ಗೋಚರವಾಗುತ್ತದೆ. ಚಾನೆಲ್ ಸೇರಲು, ಚಾನೆಲ್ ಮುಂದೆ ಇರುವ plus icon ಮೇಲೆ ಟ್ಯಾಪ್ ಮಾಡಿ. ಮತ್ತೊಂದು ರೀತಿಯಲ್ಲೂ ನೀವು ಚಾನೆಲ್ ಜಾಯಿನ್ ಆಗಬಹುದು. ಇದಕ್ಕಾಗಿ ನೀವು, ನಿಮ್ಮ ಪರದೆಯ ಮೇಲಿನ ಬಲ ಮೂಲೆಯಲ್ಲಿರುವ ಹುಡುಕಾಟ ಐಕಾನ್ ಅನ್ನು ನೀವು ಬಳಸಬಹುದು ಅಥವಾ ಕ್ಲಿಕ್ ಮಾಡಿ ಮತ್ತು ಹುಡುಕಿ.
ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಗ್ಯಾಜೆಟ್ಸ್
WhatsApp update: ಈ ಹಳೇ ಫೋನ್‌ಗಳಲ್ಲಿ ಇನ್ನು ವಾಟ್ಸ್ಯಾಪ್ ಸಿಗೋಲ್ಲ! ನಿಮ್ಮ ಫೋನ್ ಕೂಡ ಇದೆಯಾ ನೋಡಿಕೊಳ್ಳಿ
ಇತ್ತೀಚಿನ ಪ್ರಕಟಣೆಯಲ್ಲಿ WhatsApp ಅಕ್ಟೋಬರ್ 24ರ ನಂತರ ಆಂಡ್ರಾಯ್ಡ್ ಆವೃತ್ತಿ 4.1 (Android OS version 4.1) ಮತ್ತು ಅದಕ್ಕಿಂತ ಹಳೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಕಾರ್ಯಾಚರಣೆ ನಿಲ್ಲಿಸುವುದಾಗಿ ತಿಳಿಸಿದೆ.
ಹೊಸದಿಲ್ಲಿ: ಹಲವಾರು ಹಳೆಯ ಆಂಡ್ರಾಯ್ಡ್ (Android) ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸ್ಯಾಪ್ ಸದ್ಯದಲ್ಲಿಯೇ ಕಾರ್ಯನಿರ್ವಹಣೆ ನಿಲ್ಲಿಸಲಿದೆ.
ಇತ್ತೀಚಿನ ಪ್ರಕಟಣೆಯಲ್ಲಿ WhatsApp ಅಕ್ಟೋಬರ್ 24ರ ನಂತರ ಆಂಡ್ರಾಯ್ಡ್ ಆವೃತ್ತಿ 4.1 (Android OS version 4.1) ಮತ್ತು ಅದಕ್ಕಿಂತ ಹಳೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಕಾರ್ಯಾಚರಣೆ ನಿಲ್ಲಿಸುವುದಾಗಿ ತಿಳಿಸಿದೆ.
ಬಳಕೆದಾರರ ಅನುಭವ, ಖಾಸಗಿತನ ಮತ್ತು ಸುರಕ್ಷತೆಯನ್ನು ಸುಧಾರಿಸಲು WhatsApp ನಿಯಮಿತವಾಗಿ ತನ್ನ ಆಫ್ ಅನ್ನು ಹೊಸ ಫೀಚರ್‌ಗಳು ಮತ್ತು ಸೆಕ್ಯುರಿಟಿ ವ್ಯವಸ್ಥೆಗಳೊಂದಿಗೆ ನವೀಕರಿಸುತ್ತದೆ. Android, iOS ಮತ್ತು ವೆಬ್ ಸೇರಿದಂತೆ ಎಲ್ಲಾ WhatsApp ಆವೃತ್ತಿಗಳು ಹೊಸ ಆಪರೇಟಿಂಗ್ ಸಿಸ್ಟಮ್‌ಗಳಿಗೆ ಹೊಂದಿಕೊಳ್ಳಲು ಪ್ರತಿ ತಿಂಗಳು ಹೊಸ ಅಪ್‌ಡೇಟ್‌ಗಳನ್ನು ಸ್ವೀಕರಿಸುತ್ತವೆ. ಇದರೊಂದಿಗೆ, ಹಳೆಯ ಕೆಲವು ಆಪರೇಟಿಂಗ್ ಸಿಸ್ಟಮ್‌ಗಳಿಗೆ ಸಪೋರ್ಟ್ ತೆಗೆದುಹಾಕುತ್ತದೆ.
“ಏನನ್ನು ಬೆಂಬಲಿಸುವುದನ್ನು ನಿಲ್ಲಿಸಬೇಕು ಎಂಬುದನ್ನು ಆಯ್ಕೆ ಮಾಡಲು,
ʼʼಪ್ರತಿ ವರ್ಷ ನಾವು ಇತರ ಟೆಕ್ ಕಂಪನಿಗಳಂತೆ, ಯಾವ ಸಾಧನಗಳು ಮತ್ತು ಸಾಫ್ಟ್‌ವೇರ್ ಹಳೆಯದು ಮತ್ತು ಅವುಗಳನ್ನು ಎಷ್ಟು ಜನ ಇನ್ನೂ ಬಳಸುತ್ತಿದ್ದಾರೆ ಎಂಬುದನ್ನು ನೋಡುತ್ತೇವೆ. ಈ ಸಾಧನಗಳು ಇತ್ತೀಚಿನ ಸೆಕ್ಯುರಿಟಿ ವ್ಯವಸ್ಥೆಗಳನ್ನು ಹೊಂದಿಲ್ಲ. ಅಥವಾ ಅವುಗಳಲ್ಲಿ ಇರಬಹುದು ವಾಟ್ಸ್ಯಾಪ್ ನಡೆಸಲು ಅಗತ್ಯವಿರುವ ಕ್ರಿಯಾಶೀಲತೆಯ ಕೊರತೆಯಿದೆ” ಎಂದು WhatsApp ತಿಳಿಸಿದೆ.
Android OS ಆವೃತ್ತಿ 4.1 ಮತ್ತು ಅದಕ್ಕಿಂತ ಹಳೆಯದಾದ ಕೆಲವು ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಕೆಲಗೆ ನೀಡಲಾಗಿದೆ. ಇವುಗಳಲ್ಲಿ ಅಕ್ಟೋಬರ್ 24ರ ನಂತರ ವಾಟ್ಸ್ಯಾಪ್ ಸಿಗುವುದಿಲ್ಲ.
ನೆಕ್ಸಸ್ 7 (ಆಂಡ್ರಾಯ್ಡ್ 4.2ಗೆ ಅಪ್‌ಗ್ರೇಡ್ ಮಾಡಬಹುದು)
ಸ್ಯಾಮ್ಸಂಗ್ ಗ್ಯಾಲಾಕ್ಸಿ ನೋಟ್ 2
ಎಚ್‌ಟಿಸಿ ಒನ್
ಸೋನಿ ಎಕ್ಸ್‌ಪೀರಿಯಾ ಝಡ್
ಎಲ್ಜಿ ಆಪ್ಟಿಮಸ್ ಜಿ ಪ್ರೊ
ಸ್ಯಾಮ್ಸಂಗ್ ಗ್ಯಾಲಾಕ್ಸಿ ಎಸ್2
ಸ್ಯಾಮ್ಸಂಗ್ ಗ್ಯಾಲಾಕ್ಸಿ ನೆಕ್ಸಸ್
ಎಚ್‌ಟಿಸಿ ಸೆನ್ಸೇಶನ್
ಮೊಟರೋಲಾ ಡ್ರಾಯ್ಡ್ ರೇಝರ್
ಸೋನಿ ಎಕ್ಸ್‌ಪೀರಿಯಾ ಎಸ್2
ಮೋಟರೋಲಾ ಜೂಮ್
ಸ್ಯಾಮ್ಸಂಗ್ ಗ್ಯಾಲಾಕ್ಸಿ ಟ್ಯಾಬ್ 10.1
ಏಸಸ್ ಈ ಪ್ಯಾಡ್ ಟ್ರಾನ್ಸ್ಫಾರ್ಮರ್
ಏಸರ್ ಐಕೋನಿಯಾ ಟ್ಯಾಬ್ ಎ5003
ಸ್ಯಾಮ್ಸಂಗ್ ಗ್ಯಾಲಾಕ್ಸಿ ಎಸ್
ಎಚ್‌ಟಿಸಿ ಡಿಸೈರ್ ಎಚ್‌ಡಿ
ಎಲ್‌ಜಿ ಒಪ್ಟಿಮಸ್ 2ಎಕ್ಸ್
ಸೋನಿ ಎರಿಕ್ಸನ್ ಎಕ್ಸ್‌ಪೀರಿಯಾ ಆರ್ಕ್3
ಈ ಪಟ್ಟಿಯಲ್ಲಿರುವ ಹೆಚ್ಚಿನ ಫೋನ್‌ಗಳು ಇಂದು ಹೆಚ್ಚಿನ ಜನರು ಬಳಸದ ಹಳೆಯ ಮಾದರಿಗಳಾಗಿವೆ. ಆದಾಗ್ಯೂ ನೀವು ಇನ್ನೂ ಈ ಫೋನ್‌ಗಳಲ್ಲಿ ಒಂದನ್ನು ಹೊಂದಿದ್ದರೆ, ನೀವು ಹೊಸ ಸಾಧನಕ್ಕೆ ಅಪ್‌ಗ್ರೇಡ್ ಮಾಡಬೇಕಾದೀತು. ಏಕೆಂದರೆ ವಾಟ್ಸ್ಯಾಪ್ ಮಾತ್ರವಲ್ಲದೆ ಇತರ ಹಲವು ಆ್ಯಪ್‌ಗಳು ಕೂಡ ಈ ಹಳತಾದ ಆಪರೇಟಿಂಗ್ ಸಿಸ್ಟಂಗಳಿಗೆ ತಮ್ಮ ಬೆಂಬಲವನ್ನು ನಿಲ್ಲಿಸುತ್ತಿವೆ. ಜತೆಗೆ ಸೆಕ್ಯುರಿಟಿ ಅಪ್‌ಡೇಟ್ ಕೂಡ ಇಲ್ಲದ್ದರಿಂದ ನಿಮ್ಮ ಫೋನ್ ಸೈಬರ್ ಬೆದರಿಕೆಗಳಿಗೆ ಗುರಿಯಾಗಬಹುದು.
ನಿಮ್ಮ ಸ್ಮಾರ್ಟ್‌ಫೋನ್ Android OS ಆವೃತ್ತಿ 4.1 ಅಥವಾ ಅದಕ್ಕಿಂತ ಹಳೆಯದಾ ಎಂದು ನಿಮಗೆ ಖಚಿತವಿಲ್ಲದಿದ್ದರೆ, ನಿಮ್ಮ ಸಾಧನದಲ್ಲಿನ ಸೆಟ್ಟಿಂಗ್‌ಗಳ ಮೆನುವನ್ನು ಪರಿಶೀಲಿಸಬಹುದು. ಸೆಟ್ಟಿಂಗ್‌ಗಳು > ಅಬೌಟ್ ಫೋನ್ > ಸಾಫ್ಟ್‌ವೇರ್ ಮಾಹಿತಿಗೆ ಹೋಗಿ. ಅದರಲ್ಲಿ ನಿಮ್ಮ Android ಆವೃತ್ತಿ ನಮೂದಿಸಿರುತ್ತದೆ.
WhatsApp ಕಾರ್ಯಾಚರಣೆ ನಿಲ್ಲಿಸಿದರೆ?
ವಾಟ್ಸ್ಯಾಪ್ ಬಳಕೆದಾರರಿಗೆ ಮುಂಚಿತವಾಗಿ ತಿಳಿಸುತ್ತದೆ ಮತ್ತು ಅಪ್‌ಗ್ರೇಡ್ ಮಾಡಲು ಹಲವು ಬಾರಿ ನೆನಪಿಸುತ್ತದೆ. ಗ್ಯಾಜೆಟ್ ಅನ್ನು ನವೀಕರಿಸದಿದ್ದರೆ WhatsApp ಮುಂದೆ ಆ ಸಾಧನದಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಬಳಕೆದಾರರು ಸಂದೇಶ ಕಳುಹಿಸಲು ಅಥವಾ ಸ್ವೀಕರಿಸಲು, ಕರೆ ಮಾಡಲು ಅಥವಾ ಸ್ವೀಕರಿಸಲು ಸಾಧ್ಯವಿಲ್ಲ.
WhatsApp ಯಾವುದರಲ್ಲೆಲ್ಲಾ ಲಭ್ಯ?
ಅಕ್ಟೋಬರ್ 24ರ ನಂತರ WhatsApp ಅನ್ನು ಬೆಂಬಲಿಸುವ ಸಾಫ್ಟ್‌ವೇರ್ ಇರುವ ಗ್ಯಾಜೆಟ್‌ಗಳ ಪಟ್ಟಿ ಇಲ್ಲಿದೆ.
- Android OS ಆವೃತ್ತಿ 5.0 ಮತ್ತು ಹೊಸದು
- ಐಒಎಸ್ 12 ಮತ್ತು ಹೊಸದರಲ್ಲಿ ಚಾಲನೆಯಲ್ಲಿರುವ ಐಫೋನ್
- JioPhone ಮತ್ತು JioPhone 2 ಸೇರಿದಂತೆ KaiOS 2.5.0 ಮತ್ತು ಹೊಸದು
ಗ್ಯಾಜೆಟ್ಸ್
Reliance Jio: ಅಬ್ಬಬ್ಬಾ ಲಾಟರಿ..! ಐಫೋನ್ 15 ಖರೀದಿಸಿದರೆ 6 ತಿಂಗಳು ರಿಲಯನ್ಸ್ ಜಿಯೋ ಫ್ರೀ ಪ್ಲಾನ್
Reliance Jio: ಹೊಸದಾಗಿ ಲಾಂಚ್ ಆಗಿರುವ ಆ್ಯಪಲ್ ಐಫೋನ್ 15 ಖರೀದಿಯ ಮೇಲೆ ರಿಲಯನ್ಸ್ ಜಿಯೋ ಬಂಪರ್ ಆಫರ್ ಘೋಷಣೆ ಮಾಡಿದೆ.
ಮುಂಬೈ, ಮಹಾರಾಷ್ಟ್ರ: ರಿಲಯನ್ಸ್ ರಿಟೇಲ್ ಸ್ಟೋರ್‌ಗಳು (Reliance Retail), ರಿಲಯನ್ಸ್ ಡಿಜಿಟಲ್ ಆನ್‌ಲೈನ್ (Reliance Digital Online) ಅಥವಾ ಜಿಯೋಮಾರ್ಟ್‌ನಲ್ಲಿ (Jio Mart) ಜಿಯೋ ಐಫೋನ್ 15 (iPhone 15) ಖರೀದಿ ಮಾಡಿದರೆ 2,394 ರೂ. ಮೌಲ್ಯದ ಆರು ತಿಂಗಳ ಪ್ಲಾನ್ (Reliance Jio) ಅನ್ನು ಉಚಿತವಾಗಿ ಬಳಕೆದಾರರಿಗೆ ನೀಡಲಿದೆ. ಭಾರತೀಯ ಮಾರುಕಟ್ಟೆಯಲ್ಲಿ ಬಳಕೆದಾರರ ನಾಡಿ ಮಿಡಿತವನ್ನು ಅರಿತು ಕೊಂಡಿರುವ ರಿಲಯನ್ಸ್ ಜಿಯೋ, ಆಪಲ್ ಐಫೋನ್ 15 ಖರೀದಿಸುವವರಿಗೆ 399 ರೂ. ಪ್ಲಾನ್ ಅನ್ನು ಆರು ತಿಂಗಳುಗಳ ವರೆಗೆ ಉಚಿತವಾಗಿ ನೀಡಲಿದೆ. ಇದರ ಒಟ್ಟು ಮೌಲ್ಯ 2,394 ರೂ.ಗಳಾಗಲಿದ್ದು, ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲಿದೆ.
ರಿಲಯನ್ಸ್ ಜಿಯೋ, ಆಪಲ್ ಐಫೋನ್ 15 ಖರೀದಿಸುವವರಿಗೆ ನೀಡುತ್ತಿರುವ ರೂ. 399 ಪ್ಲಾನ್ ನಲ್ಲಿ ಬಳಕೆದಾರರಿಗೆ ಪ್ರತಿ ನಿತ್ಯ 3 ಜಿಬಿ ಹೈ ಸ್ಪೀಡ್ ಡೇಟಾ ಬಳಕೆಗೆ ದೊರೆಯಲಿದ್ದು, ಜೊತೆಗೆ ಸಂಪೂರ್ಣ ಅನ್ ಲಿಮಿಟೆಡ್ ಕಾಲಿಂಗ್ ಸಹ ಸಿಗಲಿದೆ. ಅಲ್ಲದೇ ಪ್ರತಿನಿತ್ಯ 100 ಎಸ್ಎಂಎಸ್ ಗಳನ್ನು ಸಹ ಉಚಿತವಾಗಿ ಕಳುಹಿಸಬಹುದಾಗಿದೆ.
ಆದರೆ ರಿಲಯನ್ಸ್ ರಿಟೇಲ್ ಸ್ಟೋರ್‌ಗಳು, ರಿಲಯನ್ಸ್ ಡಿಜಿಟಲ್ ಆನ್‌ಲೈನ್ ಅಥವಾ ಜಿಯೋಮಾರ್ಟ್ ನಲ್ಲಿ ಜಿಯೋ ಐಫೋನ್ 15 ಖರೀದಿ ಮಾಡಿದರೆ ಮಾತ್ರವೇ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.
ಈ ಸುದ್ದಿಯನ್ನೂ ಓದಿ: Apple iPhone : ಭಾರತದಲ್ಲಿ ಐಫೋನ್ 3ಜಿಯಿಂದ ಮೊದಲ ರಿಟೇಲ್ ಸ್ಟೋರ್ ತನಕ ಆ್ಯಪಲ್‌ನ 15 ವರ್ಷಗಳ ಯಾತ್ರೆ ಹೇಗಿತ್ತು?
ಜಿಯೋ ಬಳಕೆದಾರರಲಲ್ಲದವರಿಗೂ ಈ ಯೋಜನೆಯ ಲಾಭವು ದೊರೆಯಲಿದ್ದು, ಇದಕ್ಕಾಗಿ ಅವರು ಹೊಸ ಜಿಯೋ ಸಿಮ್ ಖರೀದಿ ಮಾಡಬೇಕು ಇಲ್ಲವೇ ಮೊಬೈಲ್ ನಂಬರ್ ಪೊರ್ಟಬಲಿಟಿ ಆಯ್ಕೆಯನ್ನು ತಮ್ಮದಾಗಿಸಿಕೊಳ್ಳಬೇಕಾಗಿದೆ.
ಈ ಪ್ಲಾನ್ ಸೆಪ್ಟೆಂಬರ್ 22ರಿಂದ ಆರಂಭವಾಗಲಿದ್ದು, ಐಫೋನ್ 15 ಖರೀದಿ ಮಾಡಿ ಜಿಯೋ ಸಿಮ್ ಅನ್ನು ಆಕ್ಟಿವ್ ಮಾಡಿದರೆ ಈ ಹೊಸ ಯೋಜನೆಯು 72 ಗಂಟೆಗಳ ಒಳಗೆ ನಿಮ್ಮ ಬಳಕೆಗೆ ಲಭ್ಯವಾಗಲಿದೆ. ಈ ಯೋಜನಯೂ ಕೇವಲ ಐಫೋನ್ 15 ನಲ್ಲಿ ಮಾತ್ರವೇ ಕಾರ್ಯನಿರ್ವಹಿಸಲಿದೆ.
ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಗ್ಯಾಜೆಟ್ಸ್
YouTube: ಯುಟ್ಯೂಬ್ ವಿಡಿಯೋ ಮಾಡುವುದು ಇನ್ನೂ ಸುಲಭ! ಹೊಸ ಎಡಿಟಿಂಗ್ ಆ್ಯಪ್ ಲಾಂಚ್
YouTube: ಮೇಡ್ ಆನ್ ಯುಟ್ಯೂಬ್ ಇವೆಂಟ್‌ನಲ್ಲಿ ಕಂಪನಿಯು ಹೊಸ ಎಡಿಟಿಂಗ್ ಆ್ಯಪ್ ಲಾಂಚ್ ಮಾಡಿದೆ.
ನವದೆಹಲಿ: ಜನಪ್ರಿಯ ವಿಡಿಯೋ ಸ್ಟ್ರೀಮಿಂಗ್ (Video Streaming) ವೇದಿಕೆಯಾಗಿರುವ ಯುಟ್ಯೂಬ್ (YouTube) ಹೊಸ ವಿಡಿಯೋ ಎಡಿಟಿಂಗ್ ಆ್ಯಪ್ (Editing App) ಯುಟ್ಯೂಬ್ ಕ್ರಿಯೇಟ್ (YouTube Create) ಘೋಷಿಸಿದೆ. ಈ ಮೂಲಕ ಬಳಕೆದಾರರಿಗೆ ವಿಡಿಯೋ ಕ್ರಿಯೇಟ್ ಮತ್ತು ಷೇರ್ ಮಾಡಲು ಅನುಮತಿಸಲಿದೆ. ಗುರುವಾರ ನಡೆದ ಮೇಡ್ ಆನ್ ಯುಟ್ಯೂಬ್ ಇವೆಂಟ್‌ನಲ್ಲಿ ಈ ಹೊಸ ಆ್ಯಪ್ ಕುರಿತು ಘೋಷಣೆ ಮಾಡಲಾಗಿದೆ. ಸದ್ಯ ಈ ಆ್ಯಪ್ ಬೀಟಾ ವರ್ಷನ್‌ನಲ್ಲಿದ್ದು, ಭಾರತ, ಅಮೆರಿಕ, ಜಮರ್ಮನಿ, ಫ್ರಾನ್ಸ್, ಇಂಗ್ಲೆಂಡ್, ಇಂಡೋನೇಷ್ಯಾ, ಕೋರಿಯಾ, ಸಿಂಗಾಪುರ್ ಮಾರುಕಗಳಲ್ಲಿ ಲಭ್ಯವಾಗಲಿದೆ. 2024ರಲ್ಲಿ ಐಒಎಸ್‌ಗೆ ಅಪ್‌ಡೇಟ್ ದೊರೆಯಲಿದೆ.
ವಿಡಿಯೋಗಳ ಉತ್ಪಾದನಾ ಪ್ರಕ್ರಿಯೆಯು ಕಷ್ಟಕರವಾಗಿರುತ್ತದೆ ಎಂದು ನಮಗೆ ತಿಳಿದಿದೆ. ಇದರಿಂದಾಗಿ ಮೊದಲ ಬಾರಿಗೆ ವಿಡಿಯೋ ಮಾಡುವವರು ತಮ್ಮ ಮೊದಲ ವೀಡಿಯೊವನ್ನು ಅಪ್‌ಲೋಡ್ ಮಾಡುವುದಕ್ಕೆ ತುಂಬ ಕಷ್ಟಪಡುತ್ತಾರೆ. ಈ ಪ್ರಕ್ರಿಯೆಯನ್ನು ಸರಳೀಕರಿಸಲು ಮತ್ತು ಯುಟ್ಯೂಬ್‌ನಲ್ಲಿ ವಿಡಿಯೋಗಳನ್ನು ರಚಿಸಲು ಮತ್ತು ಹಂಚಿಕೊಳ್ಳಲು ಅನುಮತಿಸಲು ನಾವು ಯುಟ್ಯೂಬ್ ಕ್ರಿಯೇಟ್ ಎಂಬ ಹೊಸ ಮೊಬೈಲ್ ಅಪ್ಲಿಕೇಷನ್ ಆರಂಭಿಸುತ್ತಿದ್ದೇವೆ ಎಂದು ಕಂಪನಿಯು ಮೇಡ್ ಆನ್ ಯುಟ್ಯೂಬ್ ಇವೆಂಟ್‌ನಲ್ಲಿ ಹೇಳಿದೆ.
ಯೂಟ್ಯೂಬ್ ಕ್ರಿಯೇಟ್ ಎನ್ನುವುದು ಕಿರುಚಿತ್ರಗಳು ಮತ್ತು ದೀರ್ಘವಾದ ವೀಡಿಯೊಗಳೆರಡಕ್ಕೂ ವಿಡಿಯೋ ನಿರ್ಮಾಣವನ್ನು ಸರಳ ಮತ್ತು ಸುಲಭ ಮಾಡಲು ವಿನ್ಯಾಸಗೊಳಿಸಿದ ಉಚಿತ ಅಪ್ಲಿಕೇಶನ್ ಎಂದು ಕಂಪನಿಯು ಹೇಳಿದೆ. ಆ ಆ್ಯಪ್ ಸಹಾಯದಿಂದ ವಿಡಿಯೋ ಕ್ರಿಯೇಟರ್ಸ್, ಇತರ ಕೆಲಗಳ ಮೇಲೆ ಹೆಚ್ಚು ಗಮನವನ್ನು ಕೇಂದ್ರೀಕರಿಸುವ ಬದಲು ತಮ್ಮ ಸೃಜನಾತ್ಮಕವಾಗಿ ರೂಪಿಸಲು ನೆರವು ಸಾಧ್ಯವಾಗುತ್ತದೆ.
ಈ ಸುದ್ದಿಯನ್ನು ಓದಿ: YouTube New Feature: ನಿಮ್ಮಿಷ್ಟದ ಹಾಡು ಗುನುಗಿದ್ರೂ ಸಾಕು ಯುಟ್ಯೂಬ್ ಆ ಹಾಡನ್ನು ಹೆಕ್ಕಿ ತೆಗೆಯುತ್ತದೆ!
ಹೊಸ ಜನರೇಟಿವ್ ಕೃತಕ ಬುದ್ಧಿಮತ್ತೆ ಚಾಲಿತ ಅಪ್ಲಿಕೇಶನ್ ನಿಖರವಾದ ಎಡಿಟಿಂಗ್ ಟ್ರಿಮ್ಮಿಂಗ್, ಸ್ವಯಂಚಾಲಿತ ಶೀರ್ಷಿಕೆ, ವಾಯ್ಸ್‌ಓವರ್ ಮತ್ತು ಪರಿವರ್ತನೆಗಳಂತಹ ಫೀಚರ್‌ಗಳನ್ನು ಒಳಗೊಂಡಿರುತ್ತದೆ. ಟಿಕ್‌ಟಾಕ್‌ನಂತೆಯೇ ಬೀಟ್-ಮ್ಯಾಚಿಂಗ್ ತಂತ್ರಜ್ಞಾನದೊಂದಿಗೆ ರಾಯಲ್ಟಿ-ಮುಕ್ತ ಸಂಗೀತದ ಶ್ರೇಣಿಯನ್ನು ಆಯ್ಕೆ ಮಾಡಲು ಅಪ್ಲಿಕೇಶನ್ ಬಳಕೆದಾರರಿಗೆ ಅವಕಾಶ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಸುಮಾರು ಮೂರು ಸಾವಿರ ಜನರಿಂದ ಫೀಡ್‌ಬ್ಯಾಕ್ ಪಡೆದುಕೊಂಡ ಬಳಿಕ ಈ ಹೊಸ ಆ್ಯಪ್ ರೂಪಿಸಲಾಗಿದೆ. ಅಲ್ಲದೇ, ಮುಂದಿನ ದಿನಗಳಲ್ಲಿ ಈ ಆ್ಯಪ್‌ಗೆ ಇನ್ನಷ್ಟು ಹೊಸ ಫೀಚರ್‌ಗಳು ಸೇರಲಿವೆ. ಬಳಕೆದಾರರು ಈ ಆ್ಯಪ್ ಬಳಸಿಕೊಂಡು ಎಐ ಸೃಜಿತ ಬ್ಯಾಕ್‌ಗ್ರೌಂಡ್ ಕೂಡ ಬಳಸಿಕೊಳ್ಳಬಹುದು.
ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಗ್ಯಾಜೆಟ್ಸ್
WhatsApp Business: ವಾಟ್ಸಾಪ್ ಬಿಸಿನೆಸ್‌ಗೆ ಹೊಸ ಫೀಚರ್ಸ್, ಸಖತ್ ಲಾಭಗಳಂಟು!
Whatsapp Business: ಮಾರ್ಕ್ ಜುಕರ್‌ಬರ್ಗ್ ಅವರು ವಾಟ್ಸಾಪ್ ಬಿಸಿನೆಸ್ ಆ್ಯಪ್‌ಗೆ ಹೊಸ ಫೀಚರ್‌ಗಳನ್ನು ಲಾಂಚ್ ಮಾಡುವ ಮೂಲಕ ಬಳಕೆದಾರರ ಅನುಭವವನ್ನು ಹೆಚ್ಚಿಸುವ ಪ್ರಯತ್ನ ಮಾಡಿದ್ದಾರೆ.
ಮುಂಬೈ, ಮಹಾರಾಷ್ಟ್ರ: ಮುಂಬೈನಲ್ಲಿ (Mumbai) ನಡೆದ ಎರಡನೇ ವಾರ್ಷಿಕ ಸಂವಾದ ಸಮ್ಮೇಳನದಲ್ಲಿ ಮೆಟಾದ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಜುಕರ್‌ಬರ್ಗ್ (Meta CEO Mark Zukerberg) ಅವರು, ವಾಟ್ಸಾಪ್ ಬಿಸಿನೆಸ್‌ಗೆ (WhatsApp Business) ಕೆಲವು ಹೊಸ ಫೀಚರ್‌ಗಳನ್ನು ಘೋಷಣೆ ಮಾಡಿದ್ದಾರೆ(WhatsApp News Feature). ಬಿಸಿನೆಸ್ ಮತ್ತು ಬಳಕೆದಾರರ ಅನುಭವವನ್ನು ಹೆಚ್ಚಿಸುವ ಸರಣಿ ಫೀಚರ್‌ಗಳನ್ನು ಪ್ರಕಟಿಸಿದರು. ಈ ಪೈಕಿ ವಾಟ್ಸಾಪ್ ಫ್ಲೋಸ್ ಹೊಸ ಫೀಚರ್ ಪ್ರಮುಖವಾಗಿದ್ದು, ಚಾಟ್ ಥ್ರೆಡ್‌ನಲ್ಲಿ ಗ್ರಾಹಕರೊಂದಿಗೆ ಬಿಸಿನೆಸ್ ಕೈಗೊಳ್ಳುವ ರೀತಿಯನ್ನು ಬದಲಿಸಲಿದೆ ಎಂದು ಹೇಳಿದ್ದಾರೆ(WhatsApp Flows).
ಮೆಟಾ ಸಿಇಒ ಪ್ರಕಾರ, ‘ವಾಟ್ಸಾಪ್ ಫ್ಲೋಸ್’ ಫೀಚರ್, ಚಾಟ್ ಸಂಭಾಷಣೆಗಳಲ್ಲಿ ಸೂಕ್ತವಾದ ಮತ್ತು ತಡೆರಹಿತ ಸಂವಹನಗಳನ್ನು ರಚಿಸಲು ಅಧಿಕಾರ ನೀಡುತ್ತದೆ. ಉದಾಹರಣೆಗೆ, ಹೊಸ ಖಾತೆಗಳನ್ನು ತೆರೆಯಲು ಅಪಾಯಿಂಟ್‌ಮೆಂಟ್‌ಗಳನ್ನು ನಿಗದಿಪಡಿಸಲು ಬ್ಯಾಂಕ್‌ಗಳು ಗ್ರಾಹಕರನ್ನು ಸಕ್ರಿಯಗೊಳಿಸಬಹುದು, ಆಹಾರ ವಿತರಣಾ ಸೇವೆಗಳು ಪಾಲುದಾರ ರೆಸ್ಟೋರೆಂಟ್‌ಗಳಿಂದ ಆರ್ಡರ್‌ಗಳನ್ನು ಸುಗಮಗೊಳಿಸಬಹುದು ಮತ್ತು ಏರ್‌ಲೈನ್‌ಗಳು ಫ್ಲೈಟ್ ಚೆಕ್-ಇನ್ ಮತ್ತು ಸೀಟ್ ಆಯ್ಕೆಯನ್ನು ಸುಗಮಗೊಳಿಸಬಹುದು.. ಈ ರೀತಿಯ ಯಾವುದೇ ಚಟುವಟಿಕೆಯನ್ನು ಬಳಕೆದಾರರು ಚಾಟ್ ಥ್ರೆಡ್ ತೊರೆಯದೆಯೇ ಮಾಡಬಹುದಾಗಿದೆ.
ಇದಲ್ಲದೆ, ಇನ್-ಚಾಟ್ ವಹಿವಾಟುಗಳನ್ನು ಇನ್ನಷ್ಟು ಸರಳಗೊಳಿಸಲು, ಮೆಟಾ ತನ್ನ ಪಾವತಿ ಸಾಮರ್ಥ್ಯಗಳನ್ನು ವಿಸ್ತರಿಸುತ್ತಿದೆ. ಬ್ರೆಜಿಲ್ ಮತ್ತು ಸಿಂಗಾಪುರದಲ್ಲಿ ತನ್ನ ಪಾವತಿ ಸೇವೆಯನ್ನು ಯಶಸ್ವಿಯಾಗಿ ಆರಂಭಿಸಿದ ಬಳಿಕ ಆ ಸೇವೆಯನ್ನು ಭಾರತಕ್ಕೆ ವಿಸ್ತರಿಸುವುದಾಗಿ ಘೋಷಿಸಿದೆ.
ಈ ಸುದ್ದಿಯನ್ನೂ ಓದಿ: ಫೇಸ್ಬುಕ್ ಮಾತೃಸಂಸ್ಥೆ ಮೆಟಾದಲ್ಲಿ 11 ಸಾವಿರ ಉದ್ಯೋಗಿಗಳ ವಜಾಗೊಳಿಸಲು ನಿರ್ಧಾರ; Sorry ಎಂದ ಮಾರ್ಕ್ ಜುಕರ್‌ಬರ್ಗ್
ಭಾರತದಲ್ಲಿ ಬಳಕೆದಾರರು ಮೆಟಾದ ಪಾವತಿ ಪ್ಲಾಟ್‌ಫಾರ್ಮ್‌ಗೆ ಪ್ರವೇಶ ಪಡೆಯುವುದು ಮಾತ್ರವಲ್ಲದೇ, ಯುಪಿಐ ಅಪ್ಲಿಕೇಶನ್‌ಗಳನ್ನು ಒಳಗೊಂಡಂತೆ ಇತರ ಜನಪ್ರಿಯ ಪಾವತಿ ವಿಧಾನಗಳನ್ನು ಬಳಸುವ ಅವಕಾಶವನ್ನೂ ಪಡೆಯಲಿದ್ದಾರೆ. ಈ ಸಮಗ್ರ ವಿಧಾನವು ಬಳಕೆದಾರರು ಮತ್ತು ಭಾರತೀಯ ವ್ಯವಹಾರಗಳ ನಡುವೆ ತಡೆರಹಿತ ಹಣಕಾಸಿನ ವಹಿವಾಟುಗಳನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದೆ ಎಂದು ಮಾರ್ಕ್ ಜುಕರ್‌ಬರ್ಗ್ ಹೇಳಿದ್ದಾರೆ.
ಮೆಟಾ ಕಂಪನಿಯು, ವಾಟ್ಸಾಪಪ್, ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ಗಳಲ್ಲಿ ಮೆಟಾ ವೆರಿಫೈಡ್ ಫೀಚರ್ ಲಾಂಚ್ ಮಾಡುತ್ತಿದೆ. ಈ ಮೂಲಕ ಗ್ರಾಹಕರಿಗೆ ತಾವು ವ್ಯವಹಾರ ಮಾಡುತ್ತಿರುವ ಕಂಪನಿಯು ನೈಜವಾಗಿದ್ದು, ನಂಬಿಕೆಗೆ ಅರ್ಹವಾಗಿದೆ ಎಂಬುದನ್ನು ಖಾತ್ರಿಪಡಿಸುತ್ತದೆ. ಬಿಸಿನೆಸ್‌ಗೆ ಚಂದಾದಾರರಾಗುವರರು ಪರಿಶೀಲಿಸಿದ ಬ್ಯಾಡ್ಜ್ ಅನ್ನು ಸ್ವೀಕರಿಸುತ್ತಾರೆ. ಅವರ ಖಾತೆಗಳಿಗೆ ಬೆಂಬಲ, ನಕಲಿ ವ್ಯವಹಾರದಿಂದ ರಕ್ಷಣೆ ಮತ್ತು ಹೆಚ್ಚುವರಿ ವೈಶಿಷ್ಟ್ಯಗಳನ್ನು ಪಡೆಯುತ್ತಾರೆ.
ತಂತ್ರಜ್ಞಾನದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
-
Live News5 hours ago
Bangalore Bandh Live: ಬೆಂಗಳೂರು ಬಂದ್; ಪ್ರತಿಭಟನಾಕಾರರ ಬಂಧನ, ಆತ್ಮಹತ್ಯೆ ಯತ್ನ, ಎಲ್ಲೆಲ್ಲಿ ಏನೇನಾಗ್ತಿದೆ?
-
ವಿದೇಶ22 hours ago
Akshardham : ವಿದೇಶದಲ್ಲಿನ ಅತೀ ದೊಡ್ಡ ದೇವಾಲಯ ಉದ್ಘಾಟನೆಗೆ ಸಜ್ಜು; ಏನಿದರ ವಿಶೇಷ?
-
ಕರ್ನಾಟಕ20 hours ago
PSI Scam : ಪಿಎಸ್ಐ ನೇಮಕಾತಿ ಅಕ್ರಮ; ಕೊನೆಗೂ ಅಮೃತ್ ಪಾಲ್ಗೆ ಜಾಮೀನು
-
ದೇಶ14 hours ago
Swara Bhasker: ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಸ್ವರಾ ಭಾಸ್ಕರ್, ಮಗಳ ಹೆಸರು ‘ರಾಬಿಯಾ’
-
ದೇಶ12 hours ago
Lawyer Sara Sunny: ಸುಪ್ರೀಂ ಕೋರ್ಟ್ನಲ್ಲಿ ಮೊದಲ ಬಾರಿಗೆ ಸಂಜ್ಞೆ ಭಾಷೆಯಲ್ಲಿ ವಾದ ಮಂಡನೆ! ಇತಿಹಾಸ ಸೃಷ್ಟಿಸಿದ ಸಾರಾ
-
ಕರ್ನಾಟಕ15 hours ago
Weather Update: ಭಾರತದಲ್ಲಿ ಮುಗೀತು ಮಳೆಗಾಲ! ಎಷ್ಟು ಮಳೆ ಕೊರತೆ, ಬರಗಾಲ ಪಕ್ಕಾ?
-
South Cinema18 hours ago
Darshan Thoogudeepa: ನಟ ದರ್ಶನ್ ವಿರುದ್ಧ ಮಂಡ್ಯದಲ್ಲಿ ರೈತರ ಆಕ್ರೋಶ; ಕ್ಷಮೆಗೆ ಆಗ್ರಹ
-
ದೇಶ20 hours ago
Army Jawan: ಯೋಧನ ಮೇಲೆ ಹಲ್ಲೆ ನಡೆಸಿ, ಬೆನ್ನಿನ ಮೇಲೆ ‘ಪಿಎಫ್ಐ’ ಎಂದು ಬರೆದ ದುರುಳರು!