Robot Suicide: ದ. ಕೊರಿಯಾದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೋಬೋಟ್! ಕೆಲಸದ ಹೊರೆ ಕಾರಣ? - Vistara News

ತಂತ್ರಜ್ಞಾನ

Robot Suicide: ದ. ಕೊರಿಯಾದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೋಬೋಟ್! ಕೆಲಸದ ಹೊರೆ ಕಾರಣ?

ಗುಮಿ ಸಿಟಿ ಕೌನ್ಸಿಲ್ ನ ಸೈಬೋರ್ಗ್ ಎಂಬ ರೋಬೋಟ್ ಜೂನ್ 26ರಂದು ಆರೂವರೆ ಅಡಿ ಮೆಟ್ಟಿಲಿನಿಂದ ಕೆಳಗೆ ಹಾರಿ ಆತ್ಮಹತ್ಯೆ (Robot Suicide) ಮಾಡಿಕೊಂಡಿದೆ. ಬಳಿಕ ಅದನ್ನು ಪರೀಕ್ಷಿಸಿದ ಪ್ರಧಾನ ಆಡಳಿತ ಅಧಿಕಾರಿ ರೋಬೋಟ್ ಸತ್ತಿದೆ ಎಂದು ಘೋಷಿಸಿದರು. ರೋಬೋಟ್ ದೈನಂದಿನ ದಾಖಲೆಗಳ ವಿತರಣೆ, ನಗರ ಪ್ರಚಾರ ಮತ್ತು ಸ್ಥಳೀಯ ನಿವಾಸಿಗಳಿಗೆ ಮಾಹಿತಿಯನ್ನು ತಲುಪಿಸಲು ಸಹಾಯ ಮಾಡುತಿತ್ತು. ಇದು ಅಧಿಕೃತವಾಗಿ ಸಿಟಿ ಹಾಲ್‌ನ ಒಂದು ಭಾಗವಾಗಿತ್ತು. ನಮ್ಮಲ್ಲಿ ಒಬ್ಬರಾಗಿತ್ತು ಎಂದು ಗುಮಿ ಸಿಟಿ ಕೌನ್ಸಿಲ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

VISTARANEWS.COM


on

Robot Suicide
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದಕ್ಷಿಣ ಕೊರಿಯಾದ ನಾಗರಿಕ ಸೇವಕ ರೋಬೋಟ್ ಆತ್ಮಹತ್ಯೆ (Robot Suicide) ಮಾಡಿಕೊಂಡಿದೆ. ಮೆಟ್ಟಿಲಿನಿಂದ ಹಾರಿ ಅದು ಆತ್ಮಹತ್ಯೆ ಮಾಡಿಕೊಂಡಿದ್ದು, ಮೆಟ್ಟಿಲುಗಳಿಂದ ಕೆಳಗೆ ಬಿದ್ದ ಬಳಿಕ ಅದು ನಿಷ್ಕ್ರಿಯವಾಗಿದೆ. ವಿಶ್ವದ ಮೊದಲ ರೋಬೋಟ್ ಆತ್ಮಹತ್ಯೆ (Suicide) ಬಳಿಕ ದಕ್ಷಿಣ ಕೊರಿಯಾ (South Korea) ನಗರದ ಜನತೆ ಶೋಕ ವ್ಯಕ್ತಪಡಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಮಿ ಸಿಟಿ ಕೌನ್ಸಿಲ್ ನ ( Gumi City Council ) ಸೈಬೋರ್ಗ್ ಎಂಬ ರೋಬೋಟ್ ಜೂನ್ 26ರಂದು ಆರೂವರೆ ಅಡಿ ಮೆಟ್ಟಿಲಿನಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದೆ. ಬಳಿಕ ಅದನ್ನು ಪರೀಕ್ಷಿಸಿದ ಪ್ರಧಾನ ಆಡಳಿತ ಅಧಿಕಾರಿ ರೋಬೋಟ್ ಸತ್ತಿದೆ ಎಂದು ಘೋಷಿಸಿದರು.

ರೋಬೋಟ್ ಒಂದು ಸ್ಥಳದಲ್ಲಿ ‘ಏನೋ ಇದ್ದಂತೆ’ ಎಂಬಂತೆ ತಿರುಗುತ್ತಿತ್ತು. ಆದರೆ ಆತ್ಮಹತ್ಯೆಗೆ ನಿಖರವಾದ ಕಾರಣವನ್ನು ತನಿಖೆ ಮಾಡಲಾಗುತ್ತಿದೆ. ರೋಬೋಟ್ ನ ತುಂಡುಗಳನ್ನು ಸಂಗ್ರಹಿಸಲಾಗಿದೆ. ಕಂಪನಿಯು ಈ ಬಗ್ಗೆ ವಿಶ್ಲೇಷಿಸುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ.

ರೋಬೋಟ್ ದೈನಂದಿನ ದಾಖಲೆಗಳ ವಿತರಣೆ, ನಗರ ಪ್ರಚಾರ ಮತ್ತು ಸ್ಥಳೀಯ ನಿವಾಸಿಗಳಿಗೆ ಮಾಹಿತಿಯನ್ನು ತಲುಪಿಸಲು ಸಹಾಯ ಮಾಡುತಿತ್ತು. ಇದು ಅಧಿಕೃತವಾಗಿ ಸಿಟಿ ಹಾಲ್‌ನ ಒಂದು ಭಾಗವಾಗಿತ್ತು. ನಮ್ಮಲ್ಲಿ ಒಬ್ಬರಾಗಿತ್ತು ಎಂದು ಗುಮಿ ಸಿಟಿ ಕೌನ್ಸಿಲ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರೋಬೋಟ್ ಶ್ರದ್ಧೆಯಿಂದ ಸೇವೆ ಸಲ್ಲಿಸಿತ್ತು. ಈ ರೀತಿಯಲ್ಲಿ ಬಳಸಲಾದ ಮೊದಲ ರೋಬೋಟ್ ಇದಾಗಿದೆ ಮತ್ತು ಇದನ್ನು ಅಕ್ಟೋಬರ್ 2023 ರಲ್ಲಿ ನೇಮಿಸಲಾಗಿತ್ತು ಎನ್ನುತ್ತಾರೆ ಅಧಿಕಾರಿಗಳು.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಸಾಕಷ್ಟು ಮಂದಿ ನೆಟ್ಟಿಗರು ಈಗ ರೋಬೋಟ್‌ಗೆ ನಿಭಾಯಿಸಲು ಕೆಲಸದ ಹೊರೆ ಹೆಚ್ಚು ಎಂದು ಹೇಳಿದ್ದಾರೆ.


ಕೆಲಸದ ಹೊರೆ ಜಾಸ್ತಿಯಾಗಿ ತುಂಬಾ ಹೊತ್ತು ತಿರುಗಿ ಮೆಟ್ಟಿಲಿನಿಂದ ಹಾರಿತು ಎಂದು ಒಬ್ಬರು ಹೇಳಿದ್ದರೆ ಇನ್ನೊಬ್ಬರು ಸ್ಕ್ರಾಪ್ ಮೆಟಲ್ ಶಾಂತಿಯಿಂದ ವಿಶ್ರಾಂತಿ ಪಡೆಯಲಿ ಎಂದು ಹೇಳಿದ್ದಾರೆ. ಮತ್ತೊಬ್ಬರು ವಿರಾಮಗಳಿಲ್ಲ, ರಜೆಗಳಿಲ್ಲ, ಪ್ರಯೋಜನಗಳಿಲ್ಲ. ರೋಬೋಟ್‌ಗಳಿಗೆ ಒಕ್ಕೂಟದ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ರೋಬೋಟಿಕ್ ಸಹಾಯಕವನ್ನು ಕ್ಯಾಲಿಫೋರ್ನಿಯಾ ಮೂಲದ ಬೇರ್ ರೋಬೋಟಿಕ್ಸ್ ಎಂಬ ಸ್ಟಾರ್ಟಪ್ ತಯಾರಿಸಿದೆ. ಅದು ಉದ್ಯೋಗಿ ಕಾರ್ಡ್ ಅನ್ನು ಹೊಂದಿತ್ತು. ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ಕೆಲಸ ಮಾಡುತ್ತಿತ್ತು. ಇತರ ರೋಬೋಟ್‌ಗಳಿಗಿಂತ ಭಿನ್ನವಾಗಿ ಸಾಮಾನ್ಯವಾಗಿ ಒಂದು ಮಹಡಿಯನ್ನು ಮಾತ್ರ ಬಳಸುತ್ತಿತ್ತು. ಸದ್ಯಕ್ಕೆ ಹೊಸ ರೋಬೋಟ್ ಅನ್ನು ಅಳವಡಿಸಿಕೊಳ್ಳುವ ಯಾವುದೇ ಯೋಜನೆ ಇಲ್ಲ. ದಕ್ಷಿಣ ಕೊರಿಯಾವು ವಿವಿಧ ವೃತ್ತಿಗಳಲ್ಲಿ ರೋಬೋಟ್‌ಗಳನ್ನು ಬಳಸುವುದಕ್ಕಾಗಿ ವ್ಯಾಪಕವಾಗಿ ಹೆಸರುವಾಸಿಯಾಗಿದೆ.

ಇದನ್ನೂ ಓದಿ: PM Modi Russia Visit: ಜುಲೈ 8ರಿಂದ ಮೋದಿ ರಷ್ಯಾ ಪ್ರವಾಸ; ಉಕ್ರೇನ್‌ ಆಕ್ರಮಣದ ಬಳಿಕ ಮೊದಲ ಭೇಟಿ

ಈ ಹಿಂದೆ ವಾಷಿಂಗ್ಟನ್ ಡಿಸಿಯ ನೀರಿನ ಕಾರಂಜಿಯಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿರುವ ಭದ್ರತಾ ರೋಬೋಟ್ ಸ್ಟೀವ್ ಎಂದು ಕರೆಯಲಾಗುತ್ತಿತ್ತು. ಆದರೆ ಅದು ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Password Leak: 995 ಕೋಟಿ ಪಾಸ್‌ವರ್ಡ್‌ಗಳು ಲೀಕ್;‌ ನಿಮ್ಮ ಪಾಸ್‌ವರ್ಡ್‌ ಕೂಡ ಕಳ್ಳತನ ಆಗಿದೆಯೇ?

Password Leak: ಸೈಬರ್‌ ನ್ಯೂಸ್‌ ಪ್ರಕಾರ, ರಾಕ್‌ಯು2024.txt ಎಂಬ ಫೈಲ್‌ನಲ್ಲಿರುವ ಸುಮಾರು 9,948,575,739 ಪಾಸ್‌ವರ್ಡ್‌ಗಳು ಸೋರಿಕೆಯಾಗಿದೆ. ಹ್ಯಾಕರ್‌ಗಳು ಇಷ್ಟೆಲ್ಲ ಪಾಸ್‌ವರ್ಡ್‌ಗಳನ್ನು ಕಳ್ಳತನ ಮಾಡಲಾಗಿದೆ. ಇದರಿಂದ ಭಾರತ ಸೇರಿ ಜಗತ್ತಿನಾದ್ಯಂತ ಕೋಟ್ಯಂತರ ಜನರ ಪಾಸ್‌ವರ್ಡ್‌ ಸೋರಿಕೆಯಾದಂತಾಗಿದ್ದು, ಇಷ್ಟೇ ಜನರಿಗೆ ಆತಂಕ ಎದುರಾಗಿದೆ.

VISTARANEWS.COM


on

Password Leak
Koo

ನವದೆಹಲಿ: ಅನಾಮಧೇಯ ವ್ಯಕ್ತಿಗಳಿಂದ ಬರುವ ಕರೆಗಳಿಗೆ ಒಟಿಪಿ ನೀಡಬಾರದು, ಕ್ರೆಡಿಟ್‌ ಕಾರ್ಡ್‌, ಎಟಿಎಂ ಕಾರ್ಡ್‌ಗಳ ವಿವರ ನೀಡಬಾರದು ಎಂದು ಜಾಗೃತಿ ಮೂಡಿಸಿದರೂ ಜನ ಲಕ್ಷಾಂತರ ರೂ. ಕಳೆದುಕೊಳ್ಳುತ್ತಾರೆ. ಪಾಸ್‌ವರ್ಡ್‌ಗಳ (Password) ಜಮಾನದಲ್ಲಿ ನಮ್ಮ ಪಾಸ್‌ವರ್ಡ್‌ (Password Leak) ಪ್ರಮುಖವಾಗಿರುತ್ತದೆ. ಆದರೆ, ಜಗತ್ತಿನಾದ್ಯಂತ ಸುಮಾರು 995 ಕೋಟಿ ಪಾಸ್‌ವರ್ಡ್‌ಗಳ ಮಾಹಿತಿ ಸೋರಿಕೆಯಾಗಿದ್ದು, ಇದು ಇತಿಹಾಸದಲ್ಲಿಯೇ ಬೃಹತ್‌ ಪಾಸ್‌ವರ್ಡ್‌ ಲೀಕ್‌ ಎಂಬ ಕುಖ್ಯಾತಿ ಗಳಿಸಿದೆ.

ಸೈಬರ್‌ ನ್ಯೂಸ್‌ ಪ್ರಕಾರ, ರಾಕ್‌ಯು2024.txt ಎಂಬ ಫೈಲ್‌ನಲ್ಲಿರುವ ಸುಮಾರು 9,948,575,739 ಪಾಸ್‌ವರ್ಡ್‌ಗಳು ಸೋರಿಕೆಯಾಗಿದೆ. ಹ್ಯಾಕರ್‌ಗಳು ಇಷ್ಟೆಲ್ಲ ಪಾಸ್‌ವರ್ಡ್‌ಗಳನ್ನು ಕಳ್ಳತನ ಮಾಡಲಾಗಿದೆ. ಇದರಿಂದ ಭಾರತ ಸೇರಿ ಜಗತ್ತಿನಾದ್ಯಂತ ಕೋಟ್ಯಂತರ ಜನರ ಪಾಸ್‌ವರ್ಡ್‌ ಸೋರಿಕೆಯಾದಂತಾಗಿದ್ದು, ಇಷ್ಟೇ ಜನರಿಗೆ ಆತಂಕ ಎದುರಾಗಿದೆ.

Gmail

2021ರಲ್ಲಿಯೂ ರಾಕ್‌ಯು2021 ಎಂಬ ಫೈಲ್‌ ಮೂಲಕ ಸುಮಾರು 840 ಕೋಟಿ ಪಾಸ್‌ವರ್ಡ್‌ಗಳ ಸೋರಿಕೆಯಾಗಿತ್ತು. ಇದಕ್ಕೂ ಕೆಲ ದಿನಗಳ ಮೊದಲು 150 ಕೋಟಿ ಪಾಸ್‌ವರ್ಡ್‌ಗಳ ಸೋರಿಕೆಯಾಗಿತ್ತು. ಆದರೆ, ಇದುವರೆಗೆ ಪಾಸ್‌ವರ್ಡ್‌ ಸೋರಿಕೆಯಿಂದ ಏನೆಲ್ಲ ನಕಾರಾತ್ಮಕ ಪರಿಣಾಮ ಆಗಿದೆ, ಯಾರಿಗೆಲ್ಲ ನಷ್ಟವಾಗಿದೆ ಎಂಬುದರ ಮಾಹಿತಿ ಲಭ್ಯವಾಗಿಲ್ಲ.

“ಜಗತ್ತಿನಾದ್ಯಂತ ಜನರು ವೈಯಕ್ತಿಕ ಕಾರಣಗಳಿಗಾಗಿ ಬಳಸುವ ಪಾಸ್‌ವರ್ಡ್‌ಗಳು ರಾಕ್‌ಯು2024 ಫೈಲ್‌ನಲ್ಲಿವೆ. ಸೈಬರ್‌ ಹ್ಯಾಕ್‌ ಮೂಲಕ ಇವುಗಳನ್ನು ಸೋರಿಕೆ ಮಾಡಲಾಗಿದೆ. ಯಾರು ಹ್ಯಾಕ್‌ ಮಾಡಿದ್ದಾರೆ ಎಂಬುದರ ಕುರಿತು ಮಾಹಿತಿ ಲಭ್ಯವಾಗಿಲ್ಲ. ಇವುಗಳು ಸೈಬರ್‌ ಅಟ್ಯಾಕ್‌ ಸೇರಿ ಹಲವು ರೀತಿಯಲ್ಲಿ ಅಪಾಯಕಾರಿಯಾಗಿವೆ” ಎಂಬುದಾಗಿ ಸೈಬರ್‌ ನ್ಯೂಸ್‌ ಸಂಶೋಧಕರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: NTA Website: ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಮಾಡಲು ಎನ್‌ಟಿಎ ವೆಬ್‌ಸೈಟ್‌ ಹ್ಯಾಕ್‌? ಸಂಸ್ಥೆ ಹೇಳೋದಿಷ್ಟು

Continue Reading

ಪ್ರಮುಖ ಸುದ್ದಿ

Car price Discounts: ರಿನೊ ಕೈಗರ್, ಕ್ವಿಡ್, ಟ್ರೈಬರ್ ಕಾರುಗಳಿಗೆ 40,000 ರೂ. ತನಕ ರಿಯಾಯಿತಿ

Car price Discounts: ಈ ತಿಂಗಳು ಹೊಸ ರಿನೊ ಎಸ್ ಯುವಿ ಅಥವಾ ಕಾರಿನಲ್ಲಿ ನೀವು ಎಷ್ಟು ಉಳಿಸಬಹುದು ಎಂಬುದನ್ನು ತಿಳಿಯಲು ಈ ಕೆಳಗಿನ ಲೇಖನಗಳನ್ನು ಓದಿ. ಎಲ್ಲಾ ಮೂರು ಮಾದರಿಗಳಲ್ಲಿ ಎಂಟ್ರಿ ಲೆವೆಲ್ ಆಎಕ್ಸ್​ಇ ವೇರಿಯೆಂಟ್​ಗಳು ಲಾಯಲ್ಟಿ ಬೋನಸ್ ಅನ್ನು ಮಾತ್ರ ಪಡೆಯುತ್ತವೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು.

VISTARANEWS.COM


on

Car price Discounts
Koo

ಬೆಂಗಳೂರು: ರಿನೊ ಇಂಡಿಯಾ ಕಂಪನಿಯು ಈ ತಿಂಗಳು ಕೈಗರ್ ಕಾಂಪ್ಯಾಕ್ಟ್ ಎಸ್ ಯುವಿ ಕೈಗರ್​ (Renault Kiger) , ಕ್ವಿಡ್ ಹ್ಯಾಚ್ ಬ್ಯಾಕ್ (Renault Kwid) ಮತ್ತು ಟ್ರೈಬರ್ 7 (Renault Triber) ಸೀಟರ್​ ಸೇರಿದಂತೆ ತನ್ನ ಎಲ್ಲಾ ಶ್ರೇಣಿಯ ಕಾರುಗಳ ಮೇಲೆ ರಿಯಾಯಿತಿ (Car price Discounts: ) ಘೋಷಿಸಿದೆ. ನಗದು ರಿಯಾಯಿತಿಗಳು, ಎಕ್ಸ್​ಚೇಂಜ್​ ಪ್ರಯೋಜನಗಳು ಮತ್ತು ಲಾಯಲ್ಟಿ ಬೋನಸ್ ಗಳ ಜೊತೆಗೆ, ಆಯ್ದ ಖರೀದಿದಾರರು ಹೆಚ್ಚುವರಿ ರೆಫರಲ್, ಕಾರ್ಪೊರೇಟ್ ಮತ್ತು ಲಾಯಲ್ಟಿ ರಿಯಾಯಿತಿಗಳನ್ನೂ ಪಡೆಯಬಹುದು. ಹೆಚ್ಚುವರಿಯಾಗಿ, ಬ್ರಾಂಡ್ ನ ವಾಹನ ಸ್ಕ್ರ್ಯಾಪೇಜ್ ಯೋಜನೆಯನ್ನು ಆರಿಸಿಕೊಳ್ಳುವ ಗ್ರಾಹಕರಿಗೆ ಕಂಪನಿಯು ಹೆಚ್ಚುವರಿ ವಿನಿಮಯ ರಿಯಾಯಿತಿ ಒದಗಿಸುತ್ತಿದೆ.

ಈ ತಿಂಗಳು ಹೊಸ ರಿನೊ ಎಸ್ ಯುವಿ ಅಥವಾ ಕಾರಿನಲ್ಲಿ ನೀವು ಎಷ್ಟು ಉಳಿಸಬಹುದು ಎಂಬುದನ್ನು ತಿಳಿಯಲು ಈ ಕೆಳಗಿನ ಲೇಖನಗಳನ್ನು ಓದಿ. ಎಲ್ಲಾ ಮೂರು ಮಾದರಿಗಳಲ್ಲಿ ಎಂಟ್ರಿ ಲೆವೆಲ್ ಆಎಕ್ಸ್​ಇ ವೇರಿಯೆಂಟ್​ಗಳು ಲಾಯಲ್ಟಿ ಬೋನಸ್ ಅನ್ನು ಮಾತ್ರ ಪಡೆಯುತ್ತವೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು.

ರಿನೊ ಕೈಗರ್​ ಕಾರಿಗೆ ಸಿಗುವ ರಿಯಾಯಿತಿಗಳು

ಕೈಗರ್ ಕಾರಿನಲ್ಲಿ 40,000 ರೂ.ಗಳವರೆಗೆ ಪ್ರಯೋಜನ ಸಿಗುತ್ತದೆ. ಇದರಲ್ಲಿ 15,000 ರೂ.ಗಳ ನಗದು ರಿಯಾಯಿತಿ, 15,000 ರೂ.ಗಳ ಎಕ್ಸ್​ಚೇಂಜ್ ಬೋನಸ್​ ಮತ್ತು 10,000 ರೂ.ಗಳ ಲಾಯಲ್ಟಿ ಬೋನಸ್ ಸೇರಿಕೊಂಡಿವೆ. ಇದರ ಬೆಲೆಯು ರೂ.6.00 ಲಕ್ಷದಿಂದ ರೂ.11.23 ಲಕ್ಷ ರೂಪಾಯಿ. ನಾಲ್ಕು ಸಿಲಿಂಡರ್​ ಎಂಜಿನ್ ಮತ್ತು ಗೇರ್ ಬಾಕ್ಸ್ ಸಂಯೋಜನೆಗಳನ್ನು ಇ ಕಾರು ಹೊಂದಿದೆ. 1.0-ಲೀಟರ್ ಪೆಟ್ರೋಲ್ ಎಂಜಿನ್​ 72 ಬಿಹೆಚ್ ಪಿ ಪವರ್​ ಅನ್ನು ಮ್ಯಾನುವಲ್ ಮತ್ತು ಎಎಂಟಿ ವೇರಿಯೆಂಟ್​ನಲ್ಲಿ ಬಿಡುಗಡೆ ಮಾಡುತ್ತದೆ. ಟರ್ಬೊ 1.0 ಪೆಟ್ರೊಲ್​ ಎಂಜಿನ್​ 100 ಬಿಹೆಚ್ ಪಿ ಪವರ್ ಬಿಡಗಡೆ ಮಾಡುತ್ತದೆ. ಇದರಲ್ಲಿ ಸಿವಿಟಿ ಆಯ್ಕೆಯೂ ಇದೆ.

ಇದನ್ನೂ ಓದಿ: Maruti Brezza Urbano : ಬ್ರೆಜಾ ಎಸ್​​ಯುವಿಯಲ್ಲಿ ಹೊಸ ವೇರಿಯೆಂಟ್ ಬಿಡುಗಡೆ ಮಾಡಿದ ಮಾರುತಿ ಸುಜುಕಿ

ರಿನೊ ಟ್ರೈಬರ್ ಡಿಸ್ಕೌಂಟ್​ಗಳು

ರಿನೊ ಟ್ರೈಬರ್ ಏಳು ಸೀಟ್​ಗಳ ಕಾರಾಗಿದ್ದು 40,000 ರೂ.ಗಳವರೆಗೆ ರಿಯಾಯಿತಿ ಇದೆ. ಇದು ನಗದು ರಿಯಾಯಿತಿ, ವಿನಿಮಯ ಪ್ರಯೋಜನಗಳು ಮತ್ತು ಕೈಗರ್​ನಂತೆಯೇ ಲಾಯಲ್ಟಿ ಬೋನಸ್ ಕೂಡ ಪಡೆಯುತ್ತದೆ. ಇದರ ಬೆಲೆ 6.00 ಲಕ್ಷ ರೂಪಾಯಿಯಿಂದ ಆರಂಭಗೊಂಡು ರೂ.8.98 ಲಕ್ಷ ರೂಪಾಯಿ ತನಕ ಇದೆ. ಅದೇ 72 ಬಿಹೆಚ್ ಪಿ, 1.0-ಲೀಟರ್ ಪೆಟ್ರೋಲ್ ಎಂಜಿನ್​ ಮ್ಯಾನುವಲ್ ಮತ್ತು ಎಎಂಟಿ ಆಯ್ಕೆಗಳೊಂದಿಗೆ ಬರುತ್ತದೆ.

ರೆನಾಲ್ಟ್ ಕ್ವಿಡ್ ಕಾರಿಗೆ ಸಿಗುವ ರಿಯಾಯಿತಿಗಳು

ಕ್ವಿಡ್ ಎಂಟ್ರಿ ಲೆವೆಲ್ ಹ್ಯಾಚ್ ಬ್ಯಾಕ್ ಅನ್ನು ಜುಲೈನಲ್ಲಿ ಕೈಗರ್​ ಮತ್ತು ಟ್ರೈಬರ್ ನಂತೆಯೇ ರಿಯಾಯಿತಿ ಹೊಂದಿದೆ. 4.70 ಲಕ್ಷ ರೂ.ಗಳಿಂದ 6.45 ಲಕ್ಷ ರೂ.ಗಳ ನಡುವೆ ಬೆಲೆಯನ್ನು ಹೊಂದಿರುವ ಇದು ಮಾರುತಿ ಸುಜುಕಿ ಆಲ್ಟೋ ಕೆ 10 ಗೆ ಪೈಪೋಟಿ ನೀಡುತ್ತದೆ. ಇದು 68 ಬಿಹೆಚ್ ಪಿ, 1.0-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ, ಇದು ಮ್ಯಾನುವಲ್ ಗೇರ್ ಬಾಕ್ಸ್ ಮತ್ತು ಎಎಂಟಿ ಆಯ್ಕೆಯೊಂದಿಗೆ ಬರುತ್ತದೆ.

Continue Reading

ಪ್ರಮುಖ ಸುದ್ದಿ

Maruti Brezza Urbano : ಬ್ರೆಜಾ ಎಸ್​​ಯುವಿಯಲ್ಲಿ ಹೊಸ ವೇರಿಯೆಂಟ್ ಬಿಡುಗಡೆ ಮಾಡಿದ ಮಾರುತಿ ಸುಜುಕಿ

Maruti Brezza Urbano : ಅರ್ಬನೊ ಕಾರು ಪೆಟ್ರೋಲ್ ಮತ್ತು ಸಿಎನ್ ಜಿ ಪವರ್ ಟ್ರೇನ್ ಆಯ್ಕೆಗಳಲ್ಲಿ ದೊರೆಯುತ್ತದೆ. ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್​ಬಾಕ್ಸ್​ಗಳಿವೆ. ಬ್ರೆಝಾ ಪ್ರಸ್ತುತ 8.34 ಲಕ್ಷ ರೂ.ಗಳಿಂದ 14.14 ಲಕ್ಷ ರೂ.ಗಳವರೆಗೆ ಬೆಲೆ ಹೊಂದಿದೆ. ಜುಲೈನಲ್ಲಿ 25,000 ರೂ.ಗಳವರೆಗೆ ರಿಯಾಯಿತಿಗಳಿವೆ.

VISTARANEWS.COM


on

Maruti Brezza Urbano
Koo

ಬೆಂಗಳೂರು: ಮಾರುತಿ ಸುಜುಕಿ ಕಂಪನಿಯು ಬ್ರೆಜಾ ಕಾಂಪ್ಯಾಕ್ಟ್ ಎಸ್​​ಯುವಿಯ ಅರ್ಬನೊ ಎಡಿಷನ್ (Maruti Brezza Urbano) ಎಂಬ ವಿಶೇಷ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ಹೊಸ ಮಾದರಿಯ ಬೆಲೆಯು .8.49 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗಿದ್ದು ರಿಯಾಯಿತಿ ಬೆಲೆಯಲ್ಲಿ ಹಲವಾರು ಆಕ್ಷೆಸರಿಗಳನ್ನು ಹೊಂದಿದೆ.

ಅರ್ಬಾನೊ ಎಡಿಷನ್ ಅನ್ನು ಎಂಟ್ರಿ ಲೆವೆಲ್ ಎಲ್ಎಕ್ಸ್ಐ ಮತ್ತು ಮಿಡ್-ಲೆವೆಲ್ ವಿಎಕ್ಸ್ಐ ವೇರಿಯೆಂಟ್​ಗಳಲ್ಲಿ ತಮ್ಮ ಆಕ್ಸೆಸರಿಗಳನ್ನು ಪಟ್ಟಿಯನ್ನು ಸುಧಾರಿಸಲೆಂದೇ ಪರಿಚಯಿಸಲಾಗಿದೆ. ಬ್ರೆಝಾ ಎಲ್ ಎಕ್ಸ್ ಐ ಅರ್ಬನೊ ಎಡಿಷನ್ ಕಾರಿನಲ್ಲಿ ರಿಯರ್ ಪಾರ್ಕಿಂಗ್ ಕ್ಯಾಮೆರಾ, ಟಚ್ ಸ್ಕ್ರೀನ್, ಸ್ಪೀಕರ್ ಗಳು, ಫ್ರಂಟ್ ಫಾಗ್ ಲ್ಯಾಂಪ್ ಕಿಟ್, ಫಾಗ್ ಲ್ಯಾಂಪ್ ಗಾರ್ನಿಷ್, ಫ್ರಂಟ್ ಮತ್ತು ರಿಯರ್ ಸ್ಕಿಡ್ ಪ್ಲೇಟ್ ಗಳು, ಫ್ರಂಟ್ ಗ್ರಿಲ್ ಕ್ರೋಮ್ ಗಾರ್ನಿಷ್, ಬಾಡಿ ಸೈಡ್ ಮೌಲ್ಡಿಂಗ್ ಮತ್ತು ವ್ಹೀಲ್ ಆರ್ಚ್ ಕಿಟ್ ಅನ್ನು ನೀಡಲಾಗಿದೆ. ಈ ಆಕ್ಸೆಸರಿಗಳನ್ನು ಸ್ವತಂತ್ರವಾಗಿ ಖರೀದಿಸಿದಾಗ 52,370 ರೂಪಾಯಿ ಬೆಲೆಯಾದರೆ ಕಿಟ್ ರೂಪದಲ್ಲಿ ಖರೀದಿಸಿದರೆ 42,000 ರೂಪಾಯಿಗೆ ದೊರೆಯುತ್ತದೆ. ಅರ್ಬಾನೊ ಎಡಿಷನ್ ಎಲ್ಎಕ್ಸ್ಐ ವೇರಿಯೆಂಟ್​ಗಳಲ್ಲಿ ಇದರ ಬೆಲೆ ಕೇವಲ 15,000 ರೂಪಾಯಿ.

ವಿಎಕ್ಸ್ಐ ವೇರಿಯೆಂಟ್​​ನ ಅರ್ಬಾನೊ ಆವೃತ್ತಿಯು ಹಿಂಭಾಗದ ಕ್ಯಾಮೆರಾ, ಫಾಗ್ ಲ್ಯಾಂಪ್​​ಗಳು ವಿಶೇಷ ಡ್ಯಾಶ್​ಬೋರ್ಡ್​​ ಟ್ರಿಮ್, ಬಾಡಿ ಸೈಡ್ ಮೌಲ್ಡಿಂಗ್, ವೀಲ್ ಆರ್ಚ್ ಕಿಟ್, ಮೆಟಲ್ ಸಿಲ್ ಗಾರ್ಡ್​ಗಳು , ನಂಬರ್​ ಪ್ಲೇಟ್ ಫ್ರೇಮ್ ಮತ್ತು 3 ಡಿ ಫ್ಲೋರ್ ಮ್ಯಾಟ್​ಗಳು ಸಿಗುತ್ತವೆ. ಈ ಎಲ್ಲಾ ಆಕ್ಸೆಸರಿಗಳನ್ನು ಪ್ರತ್ಯೇಕವಾಗಿ ಖರೀದಿಸಿದಾಗ 26,149 ರೂ ಮತ್ತು ಕಿಟ್ ಆಗಿ ಖರೀದಿಸಿದರೆ 18,500 ರೂಪಾಯಿಗೆ ದೊರೆಯುತ್ತದೆ. ಉರ್ಬಾನೊ ಆವೃತ್ತಿಯು ಬೆಲೆಯನ್ನು 3,500 ರೂಪಾಯಿ ಕಡಿಮೆಯಾಗಿದೆ.

ಇದನ್ನೂ ಓದಿ: Mahindra Marazzo : ಈ 7 ಸೀಟರ್​ ಕಾರಿನ ಉತ್ಪಾದನೆ ನಿಲ್ಲಿಸಿದ ಮಹೀಂದ್ರಾ

ಅರ್ಬನೊ ಕಾರು ಪೆಟ್ರೋಲ್ ಮತ್ತು ಸಿಎನ್ ಜಿ ಪವರ್ ಟ್ರೇನ್ ಆಯ್ಕೆಗಳಲ್ಲಿ ದೊರೆಯುತ್ತದೆ. ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್​ಬಾಕ್ಸ್​ಗಳಿವೆ. ಬ್ರೆಝಾ ಪ್ರಸ್ತುತ 8.34 ಲಕ್ಷ ರೂ.ಗಳಿಂದ 14.14 ಲಕ್ಷ ರೂ.ಗಳವರೆಗೆ ಬೆಲೆ ಹೊಂದಿದೆ. ಜುಲೈನಲ್ಲಿ 25,000 ರೂ.ಗಳವರೆಗೆ ರಿಯಾಯಿತಿಗಳಿವೆ.

ಅರ್ಬಾನೊ ಆವೃತ್ತಿಯ ಪರಿಚಯವು ಇತ್ತೀಚೆಗೆ ಬಿಡುಗಡೆಯಾದ ಡ್ರೀಮ್ ಸೀರಿಸ್ ನಂತೆಯೇ ಇದೆ. ಇದು ಮಾರಾಟವನ್ನು ಸುಧಾರಿಸುವ ಪ್ರಯತ್ನದಲ್ಲಿ ಆಲ್ಟೋ ಕೆ 10, ಎಸ್ ಪ್ರೆಸ್ಸೊ ಮತ್ತು ಸೆಲೆರಿಯೊ ರೀತಿಯೇ ಹೆಚ್ಚುವರಿ ಫೀಚರ್​ಗಳನ್ನು ನೀಡಲಾಗಿದೆ.

ಮಾರುತಿ ಬ್ರೆಝಾ ಪವರ್ ಟ್ರೇನ್

ಬ್ರೆಝಾ 103 ಬಿಹೆಚ್ ಪಿ, 137 ಎನ್ಎಂ 1.5-ಲೀಟರ್, ನಾಲ್ಕು ಸಿಲಿಂಡರ್ ಎನ್ಎ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದ್ದು, 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಯ್ಕೆ ಮಾಡಲಾಗಿದೆ. ಟಾಟಾ ನೆಕ್ಸಾನ್, ಕಿಯಾ ಸೊನೆಟ್, ಹ್ಯುಂಡೈ ವೆನ್ಯೂ ಮತ್ತು ಮಹೀಂದ್ರಾ ಎಕ್ಸ್ ಯುವಿ 3 ಎಕ್ಸ್ ಒ ಸೇರಿದಂತೆ ಇತರ ಸಮಾನ ಬೆಲೆಯ ಎಸ್ ಯುವಿಗಳು ಪ್ರತಿಸ್ಪರ್ಧಿಗಳಾಗಿವೆ.

Continue Reading

ಕರ್ನಾಟಕ

Foreign Investment: ರಾಜ್ಯದಲ್ಲಿ ಸ್ಮಾರ್ಟ್ ಫೋನ್ ಕ್ಯಾಮೆರಾ ಬಿಡಿಭಾಗ ತಯಾರಿಕೆ ಘಟಕ; ದ.ಕೊರಿಯಾ ಜತೆ ಕರ್ನಾಟಕ ಒಪ್ಪಂದ

Foreign Investment: ರಾಜ್ಯದಲ್ಲಿ ಸ್ಮಾರ್ಟ್‌ಫೋನ್‌ಗಳ ಕ್ಯಾಮೆರಾ ಪರೀಕ್ಷಿಸುವ ಯಂತ್ರಗಳನ್ನು ತಯಾರಿಸುವ ಘಟಕ ಆರಂಭಿಸುವ ಯೋಜನೆಯ ಒಪ್ಪಂದಕ್ಕೆ ದಕ್ಷಿಣ ಕೊರಿಯಾದ ಹೈವಿಷನ್ ಕಂಪನಿಯು ಕರ್ನಾಟಕ ಸರ್ಕಾರದ ಜತೆ ಶುಕ್ರವಾರ ಸೋಲ್‌ನಲ್ಲಿ ಒಪ್ಪಂದಕ್ಕೆ ಸಹಿ ಹಾಕಿದೆ. ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ನೇತೃತ್ವದಲ್ಲಿನ ರಾಜ್ಯದ ಉನ್ನತ ಮಟ್ಟದ ನಿಯೋಗವು ಹೈವಿಷನ್‌ ಸಿಇಒ ಚೋಯಿ ಡೂ-ವನ್‌ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.

VISTARANEWS.COM


on

A high level delegation of the state led by Minister MB Patil
Koo

ಬೆಂಗಳೂರು: ರಾಜ್ಯದಲ್ಲಿ ಸ್ಮಾರ್ಟ್‌ಫೋನ್‌ಗಳ ಕ್ಯಾಮೆರಾ ಪರೀಕ್ಷಿಸುವ ಯಂತ್ರಗಳನ್ನು ತಯಾರಿಸುವ ಘಟಕ ಆರಂಭಿಸುವ ಯೋಜನೆಯ ಒಪ್ಪಂದಕ್ಕೆ ದಕ್ಷಿಣ ಕೊರಿಯಾದ ಹೈವಿಷನ್ ಕಂಪನಿಯು ಕರ್ನಾಟಕ ಸರ್ಕಾರದ ಜತೆ ಶುಕ್ರವಾರ ಸೋಲ್‌ನಲ್ಲಿ ಒಪ್ಪಂದಕ್ಕೆ ಸಹಿ (Foreign Investment) ಹಾಕಿದೆ.

ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ನೇತೃತ್ವದಲ್ಲಿನ ರಾಜ್ಯದ ಉನ್ನತ ಮಟ್ಟದ ನಿಯೋಗವು ಹೈವಿಷನ್‌ ಸಿಇಒ ಚೋಯಿ ಡೂ-ವನ್‌ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಕ್ಯಾಮೆರಾ ಇನ್‌ಸ್ಪೆಕ್ಷನ್‌ ಮಷಿನ್ಸ್‌ ತಯಾರಿಕಾ ಘಟಕವು ಫಾಕ್ಸ್‌ಕಾನ್‌ನ ತಯಾರಿಕಾ ಘಟಕದ ಸಮೀಪ ಕಾರ್ಯಾರಂಭ ಮಾಡಲಿದೆ. ಇದರಿಂದ ರಾಜ್ಯದ ಎಲೆಕ್ಟ್ರಾನಿಕ್ಸ್‌ ತಯಾರಿಕಾ ಉದ್ಯಮದ ಬೆಳವಣಿಗೆಗೆ ನೆರವಾಗಲಿದೆ.

ಎಲೆಕ್ಟ್ರಾನಿಕ್ಸ್‌ ವಲಯಕ್ಕೆ ದೇಶದಲ್ಲಿಯೇ ಗರಿಷ್ಠ ಮಟ್ಟವಾಗಿರುವ ಶೇ 30-35ರಷ್ಟು ಸಬ್ಸಿಡಿಯನ್ನು ಕರ್ನಾಟಕ ಸರ್ಕಾರ ನೀಡುತ್ತಿರುವುದನ್ನು ಸಚಿವ ಎಂ.ಬಿ. ಪಾಟೀಲ ಅವರು, ಹೈವಿಷನ್‌ ಕಂಪನಿಯ ಮುಖ್ಯಸ್ಥರ ಗಮನಕ್ಕೆ ತಂದರು.

ರಾಜ್ಯದ ಉನ್ನತ ಮಟ್ಟದ ನಿಯೋಗವು ಎಲ್ಎಕ್ಸ್ ಇಂಟರ್‌ನ್ಯಾಷನಲ್ ಕಾರ್ಪ್‌, ಸ್ಯಾಮ್‌ಸಂಗ್‌ ಎಲೆಕ್ಟ್ರಾನಿಕ್ಸ್‌ ಮುಖ್ಯಸ್ಥರನ್ನೂ ಭೇಟಿಯಾಗಿ ಮಾತುಕತೆ ನಡೆಸಿತು.

ಇದನ್ನೂ ಓದಿ: Bengaluru News: ಬೆಂಗಳೂರಿನಲ್ಲಿ ಜು. 6,7ರಂದು ʼನಟನ ತರಂಗಿಣಿʼ 20ನೇ ವರ್ಷೋತ್ಸವ

ಎಲ್ಎಕ್ಸ್ ಇಂಟರ್‌ನ್ಯಾಷನಲ್ ಕಾರ್ಪ್‌ ಮುಖ್ಯಸ್ಥರ ಭೇಟಿ ಸಂದರ್ಭದಲ್ಲಿ ವಿದ್ಯುತ್‌ ಚಾಲಿತ ವಾಹನ, ಬ್ಯಾಟರಿ ತಯಾರಿಕೆ ಸಾಧ್ಯತೆ ಮತ್ತು ವಹಿವಾಟು ವಿಸ್ತರಣೆ ಅವಕಾಶಗಳ ಬಗ್ಗೆ ಸಚಿವ ಎಂ.ಬಿ. ಪಾಟೀಲ ಚರ್ಚೆ ನಡೆಸಿದರು.

ಎಲ್‌ಜಿ ಕಾರ್ಪ್‌ನ ಪ್ರತ್ಯೇಕ ಕಂಪನಿಯಾಗಿರುವ ಎಲ್‌ಎಕ್ಸ್‌ ಇಂಟರ್‌ನ್ಯಾಷನಲ್‌ ಕಾರ್ಪ್‌ನ ವಿಭಿನ್ನ ವಹಿವಾಟುಗಳಾದ ಎಲ್‌ಎಕ್ಸ್‌ ಸೆಮಿಕಾನ್‌, ಎಲ್‌ಎಕ್ಸ್‌ ಗ್ಲಾಸ್‌, ಎಲ್‌ಎಕ್ಸ್‌ ಪ್ಲಾಸ್ಟಿಕ್‌ ಮತ್ತು ಎಲ್‌ಎಕ್ಸ್‌ ಹೌಸಸ್‌ ವಹಿವಾಟು ಮತ್ತು ಎಲ್‌ಜಿ ಎನರ್ಜಿ ಸೊಲುಷನ್ಸ್‌ ಜತೆಗಿನ ಸಹಯೋಗದ ಬಗ್ಗೆ ಚರ್ಚೆ ನಡೆಸಲಾಯಿತು.

ಸ್ಯಾಮ್‌ಸಂಗ್‌ ಎಲೆಕ್ಟ್ರಾನಿಕ್ಸ್‌ ಮುಖ್ಯಸ್ಥರ ಜತೆಗಿನ ಭೇಟಿ ಸಂದರ್ಭದಲ್ಲಿ ಸ್ಮಾರ್ಟ್‌ಫೋನ್‌, ಎಲೆಕ್ಟ್ರಾನಿಕ್ಸ್‌, ಬ್ಯಾಟರಿ ಸೆಲ್‌ ತಯಾರಿಕೆಗೆ ಕರ್ನಾಟಕದಲ್ಲಿ ಇರುವ ಅನುಕೂಲತೆಗಳನ್ನು ನಿಯೋಗವು ಮನವರಿಕೆ ಮಾಡಿಕೊಟ್ಟಿತು. ಸೆಮಿಕಂಡಕ್ಟರ್, ವಿದ್ಯುತ್‌ಚಾಲಿತ ವಾಹನ, ಜೈವಿಕ ತಂತ್ರಜ್ಞಾನ ವಲಯಗಳಲ್ಲಿ ಕರ್ನಾಟಕವು ಉತ್ಕೃಷ್ಟ ಮೂಲಸೌಲಭ್ಯ, ಪರಿಣತ ತಂತ್ರಜ್ಞರು, ಪೂರಕ ಪರಿಸರದ ನೆರವಿನಿಂದ ಜಾಗತಿಕ ಆವಿಷ್ಕಾರದಲ್ಲಿ ಮುನ್ನಡೆ ಸಾಧಿಸುತ್ತಿರುವುದನ್ನು ವಿವರಿಸಲಾಗಿದೆ.

ಇದನ್ನೂ ಓದಿ: Namma Metro: ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌; ನಾಳೆಯಿಂದ ನೇರಳೆ ಮಾರ್ಗದಲ್ಲಿ ಹೆಚ್ಚುವರಿ ರೈಲು ಸೇವೆ

ಭಾರತದ ರಾಯಭಾರಿಗೆ ಕೃತಜ್ಞತೆ ಸಲ್ಲಿಕೆ

ವಿವಿಧ ಕಂಪನಿಗಳ ಜತೆಗಿನ ಭೇಟಿ ಮತ್ತು ಸೋಲ್‌ನಲ್ಲಿ ಏರ್ಪಡಿಸಿದ್ದ ರೋಡ್‌ಷೋದ ಯಶಸ್ಸಿಗೆ ಸಹಕರಿಸಿದ ದಕ್ಷಿಣ ಕೊರಿಯಾದಲ್ಲಿನ ಭಾರತದ ರಾಯಭಾರಿ ಅಮಿತ್‌ ಕುಮಾರ್‌ ಅವರಿಗೆ ಸಚಿವ ಎಂ.ಬಿ. ಪಾಟೀಲ್‌ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

Continue Reading
Advertisement
Gautam Gambhir
ಕ್ರೀಡೆ13 mins ago

Gautam Gambhir: ಕೆಕೆಆರ್ ತಂಡದ ಮೆಂಟರ್​ ಸ್ಥಾನಕ್ಕೆ ಗಂಭೀರ್​ ರಾಜೀನಾಮೆ?; ಕೋಚ್​ ಆಗುವುದು ಖಚಿತ

Wild Animals Attack
ವಿಜಯನಗರ18 mins ago

Wild Animals Attack: ವಿಜಯನಗರ: ನಾಡಿಗೆ ನುಗ್ಗಿದ ಕರಡಿಯನ್ನು ರಾತ್ರೋರಾತ್ರಿ ಕಾಡಿಗೆ ಅಟ್ಟಿದ ಅರಣ್ಯ ಇಲಾಖೆ ಸಿಬ್ಬಂದಿ

Actor Darshan case Fingerprint match of accused in Renukaswamy case
ಸ್ಯಾಂಡಲ್ ವುಡ್26 mins ago

Actor Darshan: ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಗಳ ಫಿಂಗರ್ ಪ್ರಿಂಟ್ ಮ್ಯಾಚ್; ಸ್ಫೋಟಕ ಮಾಹಿತಿ ಬಹಿರಂಗ!

Gold Rate Today
ಕರ್ನಾಟಕ27 mins ago

Gold Rate Today: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ; ಸ್ವರ್ಣ ಪ್ರಿಯರಿಗೆ ಕೊಂಚ ನಿರಾಳ

Short Circuit
ಕರ್ನಾಟಕ42 mins ago

Short Circuit: ಮೈಸೂರು ವಿವಿ ಸಂಶೋಧಕರ ವಿದ್ಯಾರ್ಥಿ ನಿಲಯದಲ್ಲಿ ವಿದ್ಯುತ್‌ ಶಾರ್ಟ್ ಸರ್ಕ್ಯೂಟ್‌

IND vs ZIM
ಕ್ರೀಡೆ1 hour ago

IND vs ZIM: ಗೆಲುವಿನ ಹಾದಿಗೆ ಮರಳುವುದೇ ಶುಭಮನ್​ ಗಿಲ್​ ಪಡೆ?; ಇಂದು ದ್ವಿತೀಯ ಟಿ20

Raj Tarun’s Heroine Malvi Malhotra Files Complaint
ಟಾಲಿವುಡ್1 hour ago

Raj Tarun: ಯುವ ನಟ ರಾಜ್ ತರುಣ್ ಮಾಜಿ ಪ್ರೇಯಸಿ ವಿರುದ್ಧ ದೂರು ದಾಖಲಿಸಿದ ನಟಿ!

CBI Arrest
ದೇಶ2 hours ago

CBI Arrest: ರೈಲ್ವೇ ಟೆಂಡರ್‌ನಲ್ಲಿ ಭಾರೀ ಗೋಲ್‌ಮಾಲ್;‌ ಸರ್ಕಾರಿ ಅಧಿಕಾರಿಗಳು ಸಿಬಿಐ ಬಲೆಗೆ

Rain News
ಮಳೆ2 hours ago

Rain News: ಕರಾವಳಿಯಲ್ಲಿ ಮುಂದುವರಿದ ವರುಣನ ಅಬ್ಬರ; ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ

ಕ್ರೀಡೆ2 hours ago

John Cena: ‘ನೆವರ್‌ ಗೀವ್‌ ಅಪ್‌’ ಎಂದಿದ್ದ ಜಾನ್ ಸೀನ ರಸ್ಲಿಂಗ್ ವೃತ್ತಿಜೀವನಕ್ಕೆ ದಿಢೀರ್​ ವಿದಾಯ ಘೋಷಣೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ6 hours ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ18 hours ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Murder case
ಯಾದಗಿರಿ21 hours ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

karnataka Rain
ಮಳೆ22 hours ago

Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

Food Poisoning
ರಾಯಚೂರು1 day ago

Food Poisoning : ಮೊರಾರ್ಜಿ ವಸತಿ ಶಾಲೆ ಅವ್ಯವಸ್ಥೆ; ಊಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

Wild Animal Attack Elephant attack
ರಾಮನಗರ1 day ago

Wild Animal Attack : ತೋಟದಲ್ಲಿ ನೀರು ಹಾಯಿಸುತ್ತಿದ್ದವನ ತುಳಿದು ಸಾಯಿಸಿದ ಆನೆ

karnataka Weather Forecast
ಮಳೆ1 day ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಇಂದು ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಹೇಗೆ?

karnataka Weather Forecast
ಮಳೆ2 days ago

Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

Lovers Fighting
ಚಿಕ್ಕಬಳ್ಳಾಪುರ2 days ago

Lovers Fighting: ಪ್ರೀತಿಸಿ ಕೈಕೊಟ್ಟವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಗರ್ಭಿಣಿ

Medical negligence
ದಾವಣಗೆರೆ2 days ago

Medical negligence: ಸಿಸೇರಿಯನ್ ಮಾಡುವಾಗ ಶಿಶುವಿನ ಮರ್ಮಾಂಗವನ್ನೇ ಕತ್ತರಿಸಿ ಸಾಯಿಸಿದ ವೈದ್ಯ!

ಟ್ರೆಂಡಿಂಗ್‌