21 historical places in Karnataka : ಕರ್ನಾಟಕದಲ್ಲಿನ ಈ ಪ್ರಸಿದ್ಧ ತಾಣಗಳನ್ನು ನೀವು ನೋಡಲೇಬೇಕು! - Vistara News

ಪ್ರವಾಸ

21 historical places in Karnataka : ಕರ್ನಾಟಕದಲ್ಲಿನ ಈ ಪ್ರಸಿದ್ಧ ತಾಣಗಳನ್ನು ನೀವು ನೋಡಲೇಬೇಕು!

ಕರ್ನಾಟಕದಲ್ಲಿ ಹಲವಾರು ಐತಿಹಾಸಿಕ ತಾಣಗಳಿವೆ. ಅವುಗಳಲ್ಲಿ 21 ಸ್ಥಳಗಳ ಬಗ್ಗೆ ಇಲ್ಲಿದೆ (21 historical places in Karnataka) ವಿಸ್ತೃತ ಮಾಹಿತಿ.

VISTARANEWS.COM


on

karnataka historical places
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕರ್ನಾಟಕ ಪ್ರಾಕೃತಿಕವಾಗಿ ಅದ್ಭುತವಾದ ರಾಜ್ಯ. ಕರಾವಳಿಯಿಂದ ಹಿಡಿದು ಸಹ್ಯಾದ್ರಿ ಬೆಟ್ಟಗಳ ಸಾಲಗಳವರೆಗೆ ಎಲ್ಲ ರೀತಿಯ ತಾಣಗಳೂ ನಮ್ಮ ರಾಜ್ಯದಲ್ಲಿವೆ. ಶ್ರೀಮಂತ ರಾಜವಂಶಗಳಿಗೆ ನೆಲೆಯಾದ ನಮ್ಮ ನಾಡಿನಲ್ಲಿ ಅಸಂಖ್ಯಾತ ಐತಿಹಾಸಿಕ ಸ್ಥಳಗಳಿವೆ. ಅತ್ಯದ್ಭುತವಾದ ಪುರಾತತ್ತ್ವ ಶಾಸ್ತ್ರದ ಸಂಪತ್ತಿದೆ. ನಂದ ಸಾಮ್ರಾಜ್ಯ, ಮೌರ್ಯ ಸಾಮ್ರಾಜ್ಯ, ಶಾತವಾಹನರು, ಕದಂಬರು, ಪಶ್ಚಿಮ ಗಂಗರು, ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟ ಸಾಮ್ರಾಜ್ಯ, ಚಾಲುಕ್ಯ ಸಾಮ್ರಾಜ್ಯ ಮತ್ತು ಚೋಳರು ಆಳಿದ ಕುರುಹುಗಳು ನಮ್ಮಲ್ಲಿವೆ. ಅಂತಹ ದಂತ ಕತೆಗಳನ್ನು ಸಾರುವ 21 ಐತಿಹಾಸಿಕ ತಾಣಗಳ ಬಗ್ಗೆ ಇಲ್ಲಿದೆ ಸಂಪೂರ್ಣ (21 historical places in Karnataka) ಮಾಹಿತಿ.

ಹಂಪಿ

ಹಂಪಿಯ ಕಲ್ಲಿನ ರಥ.


ಯುನೆಸ್ಕೋ ಹೆಸರಿಸಿರುವ ಐತಿಹಾಸಿಕ ತಾಣಗಳಲ್ಲಿ ಹಂಪಿಯೂ ಒಂದು. ಸುಮಾರು 500 ಪ್ರಾಚೀನ ದೇವಾಲಯಗಳನ್ನು ಹೊಂದಿರುವ ಈ ನಗರದಲ್ಲಿ ಪುರಾತತ್ತ್ವ ಶಾಸ್ತ್ರದ ಹಲವಾರು ಸ್ಮಾರಕಗಳನ್ನು ನೋಡಬಹುದು. ವಿರೂಪಾಕ್ಷ ದೇವಾಲಯ, ವಿಠಲ ದೇವಾಲಯ ಹಂಪಿಯ ಪ್ರಸಿದ್ಧ ಐತಿಹಾಸಿಕ ತಾಣಗಳು ಇಲ್ಲಿವೆ. ಇಲ್ಲಿನ ಹನುಮಾನ್‌ ದೇವಸ್ಥಾನ, ಹೇಮಕೂಟ ಬೆಟ್ಟದ ದೇವಸ್ಥಾನ ಸಂಕೀರ್ಣವನ್ನು ನೀವು ನೋಡಲೇಬೇಕು. ಇಲ್ಲಿ ನಿಮಗೆ ಟ್ರೆಕ್ಕಿಂಗ್‌ ಮಾಡುವುದುಕ್ಕೆ, ಕ್ಯಾಂಪಿಂಗ್‌ ಮಾಡುವುದಕ್ಕೂ ಅವಕಾಶವಿದೆ. ಇಲ್ಲಿನ ಸಂಪೂರ್ಣ ಐತಿಹಾಸಿಕ ತಾಣಗಳನ್ನು ನೋಡಲು ಒಂದು ದಿನ ಸಾಲದಾದ್ದರಿಂದ ಕನಿಷ್ಠ ಎರಡು ದಿನಗಳ ಮಟ್ಟಿಗೆ ಇಲ್ಲಿನ ಟ್ರಿಪ್‌ ಪ್ಲ್ಯಾನ್‌ ಮಾಡಿಕೊಳ್ಳಿ. ಬೇಸಿಗೆಯಲ್ಲಿ ಇಲ್ಲಿ ಹೆಚ್ಚಾದ ಬಿಸಿಲಿರುತ್ತದೆಯಾದ್ದರಿಂದ ಚಳಿಗಾಲದ ಸಮಯವಾದ ಅಕ್ಟೋಬರ್‌ನಿಂದ ಫೆಬ್ರವರಿಯವರೆಗೆ ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯ. ಹಂಪಿ ಹೊಸಪೇಟೆಯಿಂದ 13 ಕಿ.ಮೀ ದೂರದಲ್ಲಿರುವುದರಿಂದ ಹೊಸಪೇಟೆ ರೈಲ್ವೆ ನಿಲ್ದಾಣಕ್ಕೆ ತಲುಪಿ, ಅಲ್ಲಿಂದ ಹಂಪಿಗೆ ಪ್ರಯಾಣ ಬೆಳೆಸಬಹುದು.

ಮೈಸೂರು

ಮೈಸೂರು ಅರಮನೆಯ ನೋಟ.


ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರು. ಏಳು ಶತಮಾನಗಳ ಕಾಲ ಮೈಸೂರಿನ ರಾಜವಂಶ ಆಡಳಿತ ನಡೆಸಿದ ನಾಡಿದು. ಇದು ಕರ್ನಾಟಕದ ಅತಿ ಪ್ರಸಿದ್ಧ ಪ್ರವಾಸಿ ನಗರವಾಗಿದ್ದು, ಇಲ್ಲಿಗೆ ಪ್ರತಿ ವರ್ಷ 25 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುತ್ತಾರೆ. ಇಲ್ಲಿನ ಲಲಿತ ಮಹಲ್‌, ಜಗಮೋಹನ್‌ ಅರಮನೆ, ಬೃಂದಾವನ ಉದ್ಯಾನವನ, ಮೈಸೂರು ಗ್ರಂಥಾಲಯದ ಕರ್ನಾಟಕದಲ್ಲಿ ಪ್ರತಿವರ್ಷ ಅತಿಹೆಚ್ಚು ಪ್ರವಾಸಿಗರನ್ನು ಕಾಣುತ್ತದೆ. ಹಾಗೆಯೇ ಇಲ್ಲಿನ ಪ್ರಸಿದ್ಧ ಸಿಹಿಯಾದ ಮೈಸೂರು ಪಾಕ್‌ ಅನ್ನು ಸವಿದು ಹೋಗುತ್ತಾರೆ. ಇಲ್ಲಿನ ಅರಮನೆಯಲ್ಲಿ ನೀವು ರಾಜಮನೆತನದ ಅದ್ಧೂರಿತನವನ್ನು ಕಾಣಬಹುದು. ಪ್ರತಿವರ್ಷ ದಸರಾ ಸಮಯದಲ್ಲಿ ಇಲ್ಲಿ ಅದ್ಧೂರಿಯಾಗಿ ಉತ್ಸವ ನಡೆಸಲಾಗುತ್ತದೆ. ಆನೆ ಮೇಲಿನ ಬಂಗಾರದ ಅಂಬಾರಿಯಲ್ಲಿ ಮೈಸೂರಿನ ಚಾಮುಂಡೇಶ್ವರಿ ದೇವಿಯನ್ನು ಮೆರವಣಿಗೆ ಮಾಡಿಸಲಾಗುತ್ತದೆ.

ಬಿಜಾಪುರ

ಬಿಜಾಪುರದ ಗೋಲ್‌ ಗುಂಬಜ್‌.


ವಿಶ್ವಪ್ರಸಿದ್ಧ ಗೋಲ್‌ಗುಂಬಜ್‌ ಇರುವುದು ಬಿಜಾಪುರದಲ್ಲಿ. ಇದು ಉತ್ತರ ಕರ್ನಾಟಕದಲ್ಲಿ ಭೇಟಿ ನೀಡಲೇಬೇಕಾದ ಐತಿಹಾಸಿಕ ಸ್ಥಳವಾಗಿದೆ. ಇದು ಮೊಹಮ್ಮದ್‌ ಆದಿಲ್‌ ಷಾ ಅವರ ಸಮಾಧಿಯಾಗಿದೆ. ಭಾರತದಲ್ಲಿನ ಅತಿ ದೊಡ್ಡ ಗುಮ್ಮಟ ಈ ಗೋಲ್‌ಗುಂಬಜ್‌ನ ಗುಮ್ಮಟವಾಗಿದೆ. ಗೋಲ್‌ಗುಂಬಜ್‌ ಮಾತ್ರವಲ್ಲದೆ ನಗರದಲ್ಲಿ ಶಿವಗಿರಿ, ಜಾಮಾ ಮಸೀದಿ ಮತ್ತು ಬಾರಾ ಕಮಾನ್‌ನಂತಹ ಹಲವು ಐತಿಹಾಸಿಕ ತಾಣಗಳಿವೆ. ಈ ನಗರದಲ್ಲಿ ನೀವು ಉತ್ತರ ಕರ್ನಾಟಕದ ಜೀವನ ಶೈಲಿಯ ಪರಿಚಯವನ್ನೂ ಮಾಡಿಕೊಳ್ಳಬಹುದು. ಇಲ್ಲಿ ಸ್ಥಳೀಯವಾಗಿ ಅನೇಕ ಹೋಟೆಲ್‌ಗಳು, ರೆಸಾರ್ಟ್‌ಗಳಿದ್ದು, ನೀವು ಅವುಗಳಲ್ಲಿ ವಾಸ ಹೂಡಬಹುದು.

ಶಿವಮೊಗ್ಗ


ಶಿವಮೊಗ್ಗ ಅನೇಕ ರಾಜವಂಶಗಳಿಗೆ ಪ್ರಮುಖ ಸ್ಥಾನವಾಗಿದ್ದ ಜಿಲ್ಲೆ. ಇಲ್ಲಿ ವಿಶ್ವ ವಿಖ್ಯಾತ ಜೋಗ ಜಲಪಾತವೂ ಇದೆ. ಇಲ್ಲಿನ ಶಿವಪ್ಪ ನಾಯಕ ಅರಮನೆ, ಇಕ್ಕೇರಿ ದೇಗುಲ ಹಾಗೂ ಇನ್ನೂ ಹಲವು ದೇಗುಲಗಳು ಐತಿಹಾಸಿಕ ಪ್ರಾಮುಖ್ಯತೆ ಹೊಂದಿವೆ. ಸಾಗರ ತಾಲೂಕಿನ ಕೆಳದಿಯ ಶಿವಪ್ಪ ನಾಯಕ ಅರಮನೆಯ ಮುಂಭಾಗದಲ್ಲೇ ಅದರ ವಸ್ತು ಸಂಗ್ರಹಾಲಯವಿದ್ದು, ಅಲ್ಲಿ ನೀವು ಶಿವಪ್ಪ ನಾಯಕನ ಆಡಳಿತದ ಕಾಲದ ಹಲವು ವಸ್ತುಳನ್ನು ಕಾಣಬಹುದಾಗಿದೆ. ಇತಿಹಾಸ ಮಾತ್ರವಲ್ಲದೆ ನಿಸರ್ಗ ಸೌಂದರ್ಯದಲ್ಲೂ ಶಿವಮೊಗ್ಗ ಜಿಲ್ಲೆ ಸಂಪತ್‌ ಭರಿತ ಜಿಲ್ಲೆಯಾಗಿದೆ. ಇಲ್ಲಿ ನೀವು ಹಲವಾರು ಪ್ರಕೃತಿ ಸೌಂದರ್ಯವನ್ನು ವೀಕ್ಷಿಸಬಹುದು. ಹಾಗೆಯೇ ಧಾರ್ಮಿಕ ವಿಶೇಷತೆ ಹೊಂದಿರುವ ಸಿಗಂದೂರು, ವರದಳ್ಳಿಯಂತಹ ಹಲವು ಸ್ಥಾನಗಳಿಗೆ ಭೇಟಿ ನೀಡಬಹುದು.

ಬೆಂಗಳೂರು

ಬೆಂಗಳೂರಿನ ಟಿಪ್ಪು ಅರಮನೆ.


ಬೆಂಗಳೂರು ಭಾರತದ ಸಿಲಿಕಾನ್‌ ವ್ಯಾಲಿ ಆಗುವುದಕ್ಕೂ ಮೊದಲು ಕರ್ನಾಟಕದ ರಾಜಕೀಯ, ವಾಣಿಜ್ಯ ಮತ್ತು ವ್ಯಾಪಾರದ ಕೇಂದ್ರಬಿಂದು. ಇದು ನೋಡುವುದಕ್ಕೆ ಕಾಂಕ್ರಿಟ್‌ ಕಾಡಿನಂತೆ ಕಾಣುತ್ತದೆಯಾದರೂ ಇಲ್ಲಿ ಕೂಡ ಹಲವು ಐತಿಹಾಸಿಕ ಅರಮನೆಗಳು, ಕೋಟೆಗಳು ಇವೆ. ಇದೀಗ ಈ ಬೆಂಗಳೂರು ಆಸಕ್ತಿದಾಯಕ ಇತಿಹಾಸದ ಜತೆಯಲ್ಲಿ ಆಧುನಿಕತೆಯನ್ನೂ ಹೊತ್ತು ಮೆರೆಯುತ್ತಿರುವ ರಾಜ್ಯವಾಗಿದೆ. ಇಲ್ಲಿ ಐತಿಹಾಸಿಕ ಉಲ್ಲೇಖವನ್ನು ಹೊಂದಿರುವ ಬೆಂಗಳೂರು ಅರಮನೆ, ಟಿಪ್ಪು ಸುಲ್ತಾನರ ಬೇಸಿಗೆ ಅರಮನೆ, ನ್ಯಾಷನಲ್‌ ಗ್ಯಾಲರಿ ಆಫ್‌ ಮಾಡರ್ನ್‌ ಆರ್ಟ್‌ ಅನ್ನು ನೋಡಬಹುದು. ಹಾಗೆಯೇ ಈಗಿನ ಸರ್ಕಾರದ ಕೇಂದ್ರಬಿಂದುವಾಗಿರುವ ವಿಧಾನಸೌಧವನ್ನೂ ಕಾಣಬಹುದು.

ಬಾದಾಮಿ

ಬಾದಾಮಿಯ ಗುಹಾಂತರ ದೇವಾಲಯ.


ಭಾರತದ ಐತಿಹಾಸಿಕ ಸ್ಥಳಗಳಲ್ಲಿ ಒಂದು ಬಾದಾಮಿ. ಬಾದಾಮಿಯಲ್ಲಿ ನೀವು ಅತಿ ಸೊಗಸಾದ ದೇವಾಲಯಗಳು ಮತ್ತು ಐತಿಹಾಸಿಕ ಸ್ಮಾರಕಗಳನ್ನು ನೋಡಬಹುದಾಗಿದೆ. ಇಲ್ಲಿನ ಕಲ್ಲಿನ ದೇವಾಲಯ ಎಂಥವರನ್ನೂ ಕಣ್ಮನ ಸೆಳೆಯುತ್ತದೆ. ಇಲ್ಲಿನ ಕೆಂಪು ಮರಳುಗಲ್ಲಿನ ಬಂಡೆಗಳು, ಬಾದಾಮಿ ಕೋಟೆ, ಅಗಸ್ತ್ಯ ಸರೋವರವನ್ನು ನೀವು ನೋಡಿ ಬಂದು ವರ್ಷಗಳಾದರೂ ಮರೆಯುವುದಿಲ್ಲ. ರಾಕ್‌ ಕ್ಲೈಂಬಿಂಗ್‌ ಮಾಡಬೇಕು ಎನ್ನುವ ಆಸೆಯಿರುವವರು ಇಲ್ಲಿ ಆ ಆಸೆಯನ್ನು ನೆರವೇರಿಸಿಕೊಳ್ಳಬಹುದು. ಇಲ್ಲಿನ ಬಾದಾಮಿ ಗುಹೆ ದೇವಾಲಯ, ಭೂತನಾಥ ದೇವಾಲಯಗಳ ಸಂಕೀರ್ಣ, ಮಲ್ಲಿಕಾರ್ಜುನ ದೇವಾಲಯವನ್ನು ನೋಡಲು ಮರೆಯದಿರಿ.

ಹಳೇಬೀಡು

ಹಳೆಬೀಡಿನಲ್ಲಿ ನೋಡಲೇಬೇಕಾದ ದೇವಾಲಯ.


ಹಾಸನ ಜಿಲ್ಲೆಯಲ್ಲಿರುವ ಹಳೇಬೀಡು ಕರ್ನಾಟಕದ ಅತ್ಯಂತ ಪ್ರಸಿದ್ಧ ಐತಿಹಾಸಿಕ ಸ್ಥಳಗಳಲ್ಲಿ ಒಂದಾಗಿದೆ. ಈ ನಗರವು 12ನೇ ಶತಮಾನದಲ್ಲಿ ಹೊಯ್ಸಳ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಇಲ್ಲಿ ನೀವು ಅತ್ಯದ್ಭುತ ವಾಸ್ತುಶಿಲ್ಪ ಹೊಂದಿರುವ ದೇವಸ್ಥಾನಗಳನ್ನು ಕಾಣಬಹುದು. ಹೊಯ್ಸಳೇಶ್ವರ ಮತ್ತು ಕೇದಾರೇಶ್ವರ ದೇವಾಲಯ ಹಳೇಬೀಡಿನ ಅತ್ಯಂತ ಪ್ರಸಿದ್ಧ ದೇಗುಲಗಳಾಗಿವೆ. ಇದಲ್ಲದೆ ಇದಕ್ಕೆ ಕೆಲವು ಕಿ.ಮೀ ದೂರದಲ್ಲಿ ಬೇಲೂರು ಇದ್ದು, ಅಲ್ಲಿ ಕೂಡ ಹೊಯ್ಸಳರ ವಾಸ್ತುಶಿಲ್ಪದ ಉತ್ತಮ ಉದಾಹರಣೆ ಎನಿಸುವಂತಹ ದೇವಸ್ಥಾನವಿದೆ.

ಶ್ರೀರಂಗಪಟ್ಟಣ

ಶ್ರೀರಂಗಪಟ್ಟಣದ ಪ್ರಸಿದ್ಧ ದೇವಾಲಯ.


ಶ್ರೀರಂಗಪಟ್ಟಣವು ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ನದಿಯ ತಟದಲ್ಲಿರುವ ಊರಾಗಿದೆ. ವಿಶ್ವ ಪ್ರಸಿದ್ಧ ಮೈಸೂರಿನಿಂದ 15 ಕಿ.ಮೀ ದೂರದಲ್ಲಿ ಈ ಊರಿದೆ. ಶ್ರೀರಂಗಪಟ್ಟಣವು ವಿಜಯನಗರ ಮತ್ತು ಹೊಯ್ಸಳ ಸಾಮ್ರಾಜ್ಯದ ಕೆಲವು ಭವ್ಯವಾದ ವಾಸ್ತುಶಿಲ್ಪದ ಮೇರುಕೃತಿಗಳಿಗೆ ನೆಲೆಯಾಗಿದೆ. ಇಲ್ಲಿರುವ ರಂಗನಾಥಸ್ವಾಮಿ ದೇವಸ್ಥಾನ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರಿಂದ ತುಂಬಿರುತ್ತದೆ. ಇದು ವೈಷ್ಣವರ ಪ್ರಮುಖ ದೇವಾಲಯವಾಗಿದೆ. ಇಲ್ಲಿ ಸಮೀಪದಲ್ಲಿ ಕೆಲವು ಜಲಪಾತಗಳು, ಉದ್ಯಾನಗಳಿದ್ದು, ನೀವು ಅಲ್ಲಿಗೂ ಕೂಡ ಪ್ರಯಾಣ ಬೆಳೆಸಬಹುದು.

ಐಹೊಳೆ

ಐಹೊಳೆಯ ಐತಿಹಾಸಿಕ ಸ್ಥಳ.


ಐಹೊಳೆ ಕರ್ನಾಟಕದ ಅತ್ಯಂತ ಪ್ರಸಿದ್ಧ ಐತಿಹಾಸಿಕ ಸ್ಥಳಗಳಲ್ಲಿ ಒಂದಾಗಿದೆ. ಈ ಸ್ಥಳವು ಚಾಲುಕ್ಯ ಸಾಮ್ರಾಜ್ಯದ 100 ಕ್ಕೂ ಹೆಚ್ಚು ಕೆತ್ತಿದ ದೇವಾಲಯಗಳನ್ನು ಹೊಂದಿದೆ. ಇದರ ಪ್ರಾಮುಖ್ಯತೆಯಿಂದಾಗಿ ಯುನೆಸ್ಕೋ ಇದನ್ನು ಐತಿಹಾಸಿಕ ತಾಣ ಎಂದು ಗುರುತಿಸಿದೆ. ಇಲ್ಲಿನ ದೇವಾಲಯಗಳನ್ನು ನಿಮಗೆ ಒಂದು ದಿನ ಸಾಲದು. ಬಾಗಲಕೋಟೆ ರೈಲು ನಿಲ್ದಾಣದಿಂದ ಈ ಐಹೊಳೆ ಕೇವಲ 34 ಕಿ.ಮೀ. ದೂರದಲ್ಲಿದೆ. ಹಾಗಾಗಿ ನೀವು ಅರಾಮವಾಗಿ ಇಲ್ಲಿಗೆ ರೈಲು ಮೂಲಕ ಅಥವಾ ಬಸ್ಸಿನ ಮೂಲಕ ಪ್ರಯಾಣ ಮಾಡಬಹುದಾಗಿದೆ.

ದಾಂಡೇಲಿ

ದಾಂಡೇಲಿಯ ಪ್ರವಾಸಿ ತಾಣ.


ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ದಾಂಡೇಲಿಯು ಐತಿಹಾಸಿಕವಾಗಿಯೂ ಸಾಕಷ್ಟು ಮಹತ್ವದ ಸ್ಥಳವಾಗಿದೆ. ಇಲ್ಲಿ ಜ್ವಾಲಾಮುಖಿಯಿಂದಾಗಿ ರೂಪುಗೊಂಡ ಹಲವು ಗುಹೆಗಳನ್ನು ನೀವು ಕಾಣಬಹುದು. ಇಲ್ಲಿನ ಕವಾಲಾ ಗುಹೆ ತುಂಬಾ ದೊಡ್ಡದಾದ ಸುರಂಗವನ್ನು ಹೊಂದಿದೆ. ಈ ಗುಹೆಯಲ್ಲಿ 375 ಮೆಟ್ಟಿಲುಗಳಿದ್ದು, ಈ ಗುಹೆಯನ್ನು ನೋಡಲೆಂದೇ ಪ್ರತಿವರ್ಷ ಇಲ್ಲಿಗೆ ಸಾವಿರಾರು ಪ್ರವಾಸಿಗರು ಪ್ರವಾಸಕ್ಕೆ ಬರುತ್ತಾರೆ. ಅದಷ್ಟೇ ಅಲ್ಲದೆ ಕಾಳಿ ನದಿಯ ದಡದಲ್ಲಿರುವ ಈ ಊರು ನಿಸರ್ಗದ ವಿಚಾರದಲ್ಲೂ ಅತ್ಯಂತ ಪ್ರಸಿದ್ಧವಾಗಿದೆ. ಇಲ್ಲಿನ ಕಾಳಿ ನದಿಯಲ್ಲಿ ಹಲವಾರು ರೀತಿಯ ವಾಟರ್‌ ಗೇಮ್ಸ್‌ಗಳನ್ನು ನೀವು ಆಡಬಹುದು. ಹಾಗೆಯೇ ದಾಂಡೇಲಿ ವನ್ಯಜೀವಿ ಅಭಯಾರಣ್ಯಕ್ಕೂ ಭೇಟಿ ನೀಡಬಹುದು. ಇಲ್ಲಿ ಅನೇಕ ರೆಸಾರ್ಟ್‌ಗಳಿದ್ದು, ಅವುಗಳೇ ನಿಮಗೆ ಪ್ಯಾಕೇಜ್‌ ನೀಡಿ ಇಲ್ಲಿನ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಅವಕಾಶ ಮಾಡಿಕೊಡುತ್ತವೆ.

ರಾಮನಗರ

ರಾಮನಗರ ಬೆಟ್ಟ.


ಕರ್ನಾಟಕದ ಮತ್ತೊಂದು ಪ್ರಸಿದ್ಧ ಐತಿಹಾಸಿಕ ಸ್ಥಳವೆಂದರೆ ರಾಮನಗರ. ದೊಡ್ಡ ದೊಡ್ಡ ಕಲ್ಲಿನ ಬೆಟ್ಟಗಳ ನಡುವೆ ಇರುವ ಹಚ್ಚ ಹಸಿರಿನ ನಗರವಿದು. ಇದು ಬೆಂಗಳೂರಿಗರಿಗೆ ವಾರಾಂತ್ಯದ ಪ್ರವಾಸಕ್ಕೆ ಸೂಕ್ತವಾದ ಸ್ಥಳವಾಗಿದೆ. ಇದು ಗ್ರ್ಯಾನೈಟ್‌ ಬೆಟ್ಟಗಳಿಗೆ ಹೆಸರುವಾಸಿಯಾದ ನಗರ. ರೇಷ್ಮೆ ಉತ್ಪಾದನೆಗೆ ಪ್ರಸಿದ್ಧವಾದ ಈ ನಗರವನ್ನು ಭಾರತದ ರೇಷ್ಮೆ ನಗರ ಎಂದೂ ಕರೆಯಲಾಗುತ್ತದೆ. ಇಲ್ಲಿ ಉತ್ಪಾದನೆಯಾಗುವ ರೇಷ್ಮೆಯನ್ನು ಪ್ರಸಿದ್ಧ ಮೈಸೂರು ಸಿಲ್ಕ್‌ ಸೀರೆಗೆ ಬಳಕೆ ಮಾಡಿಕೊಳ್ಳಲಾಗುತ್ತದೆ.

ಹಾಸನ

ಹಾಸನಾಂಬಾ ದೇವಾಲಯ.


ಬೆಂಗಳೂರಿನಿಂದ 187 ಕಿ.ಮೀ ದೂರದಲ್ಲಿರುವ ಹಾಸನ ಕರ್ನಾಟಕದ ವಾಸ್ತುಶಿಲ್ಪದ ರಾಜಧಾನಿ ಎಂದೇ ಕರೆಸಿಕೊಳ್ಳುತ್ತದೆ. ಇದಕ್ಕೆ ಮುಖ್ಯ ಕಾರಣ ಹಾಸನಾಂಬ ದೇವಿ ದೇವಾಲಯ. ಹಾಸನಾಂಬ ಎಂದರೆ ನಗುತ್ತಿರುವ ತಾಯಿ ಎಂದರ್ಥ. ಹಾಸನಾಂಬ ದೇವಾಲಯ ಮಾತ್ರವಲ್ಲದೆ ಇತಿಹಾಸ ಪ್ರಸಿದ್ಧ ಶೆಟ್ಟಿಹಳ್ಳಿ ಚರ್ಚ್‌ ಹಾಗೂ ಜೈನ ದೇವಾಲಯಗಳನ್ನು ಈ ಜಿಲ್ಲೆಯಲ್ಲಿ ಕಾಣಬಹುದು. ಇಲ್ಲಿರುವ ಗೊರೂರು ಅಣೆಕಟ್ಟು ಕೂಡ ಪ್ರವಾಸಿಗರ ಗಮನ ಸೆಳೆಯುತ್ತದೆ. ಶ್ರವಣಬೆಳಗೊಳ ಕೂಡ ಜಿಲ್ಲೆಯ ಪ್ರಮುಖ ಐತಿಹಾಸಿಕ ತಾಣಗಳಲ್ಲಿ ಒಂದಾಗಿದೆ.

ಬೀದರ್‌

ಬೀದರ್‌ನ ಐತಿಹಾಸಿಕ ತಾಣ.


ಬೀದರ್‌ ಜಿಲ್ಲೆಯಾದ್ಯಂತ ಹಲವಾರು ಐತಿಹಾಸಿಕ ತಾಣಗಳನ್ನು ಹೊತ್ತಿರುವ ನಗರವಾಗಿದೆ. ಈ ನಗರ ಮೋಡಿ ಮಾಡುವ ವಾಸ್ತುಶಿಲ್ಪ, ಆಸಕ್ತಿದಾಯಕ ಇತಿಹಾಸ ಮತ್ತು ಪ್ರಾಚೀನ ಕಲಾಕೃತಿಗಳಿಗೆ ಹೆಸರುವಾಸಿಯಾಗಿದೆ. ಬೀದರ್ ಒಂದು ಕಾಲದಲ್ಲಿ ಚಾಲುಕ್ಯರು, ಅಲ್ಲಾವುದ್ದೀನ್ ಖಿಲ್ಜಿ ಮತ್ತು ಮುಹಮ್ಮದ್ ಬಿನ್ ತುಘಲಕ್ ಅವರಂತಹ ಅನೇಕರು ಆಳಿದ ಮಹಾನ್ ಸಾಮ್ರಾಜ್ಯಗಳಿಗೆ ಅಧಿಕಾರದ ಕೇಂದ್ರವಾಗಿತ್ತು. ಅವರೆಲ್ಲರೂ ಶ್ರೀಮಂತ ವಾಸ್ತುಶಿಲ್ಪದ ಪರಂಪರೆಯೊಂದಿಗೆ ಈ ನಗರಕ್ಕೆ ಶ್ರೇಷ್ಠ ಇತಿಹಾಸ ಮತ್ತು ಪರಂಪರೆಯನ್ನು ಬಿಟ್ಟಿದ್ದಾರೆ. ಇಲ್ಲಿ ಹಲವಾರು ದೇವಾಲಯಗಳು, ಮಸೀದಿಗಳು ಮತ್ತು ಸಮಾಧಿಗಳನ್ನು ನೀವು ನೋಡಬಹುದಾಗಿದೆ.

ತಲಕಾಡು

ತಲಕಾಡಿನ ದೇವಾಲಯ.


ಕರ್ನಾಟಕದ ಪ್ರಸಿದ್ಧ ಕಾವೇರಿ ನದಿಯ ದಡದಲ್ಲಿರುವ ಸ್ಥಳ ತಲಕಾಡು. ತಲಕಾಡು ಪಟ್ಟಣವು ಶ್ರೀಮಂತ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿದೆ. ಇಲ್ಲಿ ಪ್ರಮುಖವಾಗಿ ಶಿವನಿಗೆ ಅರ್ಪಿತವಾದ ವೈದ್ಯನಾಥೇಶ್ವರ ದೇಗುಲವನ್ನು ಕಾಣಬಹುದು. ಶಿವನ ಭಕ್ತರು ಹೆಚ್ಚಾಗಿ ಇಲ್ಲಿಗೆ ಭೇಟಿ ನೀಡುತ್ತಾರೆ. ದೇಶದ ಮೂಲೆಮೂಲೆಗಳಿಂದ ಇಲ್ಲಿಗೆ ಪ್ರವಾಸಿಗರು ಬರುತ್ತಾರೆ. ಇಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಪಂಚಲಿಂಗ ದರ್ಶನಕ್ಕಾಗಿ ಉತ್ಖನನ ಕಾರ್ಯ ಮಾಡಲಾಗುತ್ತದೆ. ಆ ರೀತಿ ಮಾಡಿದಾಗ ಇಲ್ಲಿ ಮರಳಿನ ಅಡಿಯಲ್ಲಿದ್ದ ಸಾಕಷ್ಟು ದೇವಾಲಯಗಳು ಹೊರಬಂದಿವೆ. ಮೈಸೂರಿನಿಂದ ಇಲ್ಲಿಗೆ 45 ಕಿ.ಮೀ ದೂರವಾಗುತ್ತದೆ.

ಮೇಲುಕೋಟೆ

ಮೇಲುಕೋಟೆಯ ಭವ್ಯ ಕಟ್ಟಡ.


ಮೇಲುಕೋಟೆ ದಕ್ಷಿಣ ಭಾರತದಲ್ಲಿ ಐತಿಹಾಸಿಕ ಪ್ರಾಮುಖ್ಯತೆ ಹೊಂದಿರುವ ಸ್ಥಳಗಳಲ್ಲಿ ಒಂದು. ಮಂಡ್ಯ ಜಿಲ್ಲೆಯಲ್ಲಿರುವ ಈ ಸ್ಥಳದಲ್ಲಿ ಅನೇಕ ದೇವಾಲಯಗಳಿವೆ. ಇಲ್ಲಿ ನಡೆಸಲಾಗುವ ವೈರಮುಡಿ ಉತ್ಸವಕ್ಕೆ ರಾಜ್ಯ ಮಾತ್ರವಲ್ಲದೆ ದೇಶದ ಹಲವು ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ಇಲ್ಲಿನ ಬೆಟ್ಟದ ತುದಿಯಲ್ಲಿರುವ ಶ್ರೀ ಯೋಗನರಸಿಂಹ ಸ್ವಾಮಿ ದೇವಸ್ಥಾನ ಮತ್ತು ಚೆಲುವನಾರಾಯಣ ಸ್ವಾಮಿ ದೇವಸ್ಥಾನ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ.

ಸೋಮನಾಥಪುರ

ಸೋಮನಾಥಪುರ ದೇಗುಲದ ದೃಶ್ಯ.


ಕಾವೇರಿ ನದಿಯ ದಡದಲ್ಲಿ ಸೋಮನಾಥಪುರ ದೇವಾಲಯವನ್ನು ಕಾಣಬಹುದು. ಈ ದೇವಾಲಯ ಹೊಯ್ಸಳರ ಅದ್ಭುತವ ವಾಸ್ತುಶಿಲ್ಪದ ಉದಾಹರಣೆಗಳಲ್ಲಿ ಒಂದಾಗಿದೆ. ಇದನ್ನು ಚೆನ್ನಕೇಶವ ದೇವಾಲಯ ಅಥವಾ ಕೇಶವ ದೇವಾಲಯ ಎಂದೂ ಕರೆಯಲಾಗುತ್ತದೆ. ಈ ದೇವಾಲಯವನ್ನು 1258 CE ವರ್ಷದಲ್ಲಿ ನಿರ್ಮಿಸಲಾಗಿದೆ. ಹೊಯ್ಸಳ ಸಾಮ್ರಾಜ್ಯದ ರಾಜರು ನಿರ್ಮಿಸಿದ 1500 ದೇವಾಲಯಗಳಲ್ಲಿ ಈ ದೇವಾಲಯವೂ ಒಂದಾಗಿದೆ. ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ನಾಮನಿರ್ದೇಶನಗೊಂಡಿರುವ ಈ ಸ್ಥಳವು ಕರ್ನಾಟಕದ ಪ್ರಸಿದ್ಧ ಸ್ಮಾರಕಗಳಲ್ಲಿ ಒಂದಾಗಿದೆ.

ಮಿರ್ಜಾನ್‌ ಕೋಟೆ

ಮಿರ್ಜಾನ್‌ ಕೋಟೆ.


ಅಘನಾಶಿನಿ ನದಿ ದಡದಲ್ಲಿ ಮಿರ್ಜಾನ್‌ ಕೋಟೆಯಿದೆ. ಕುಮಟಾ ಪಟ್ಟಣದಿಂದ 11 ಕಿ.ಮೀ ದೂರದಲ್ಲಿರುವ ಈ ಸ್ಥಳ 4.1 ಹೆಕ್ಟೇರ್‌ ಪ್ರದೇಶಕ್ಕೆ ಹಬ್ಬಿಕೊಂಡಿದೆ. ರಾಜಮನೆತನಗಳ ಇತಿಹಾಸ ಹೊಂದಿರುವ ಈ ಕೋಟೆ 16 ಮತ್ತು 17ನೇ ಶತಮಾನದಲ್ಲಿ ನಡೆದ ಯುದ್ಧಗಳಿಗೆ ಸಾಕ್ಷಿಯಾಗಿದೆ. ಹುಲ್ಲಿನಿಂದ ಆವರಿಸಿಕೊಂಡಿರುವ ಈ ಕೋಟೆ ನೋಡುವುದಕ್ಕೆ ಭವ್ಯವಾಗಿ ಕಾಣುತ್ತದೆ.

ಮಡಿಕೇರಿ ಕೋಟೆ


ಕರ್ನಾಟಕದ ಕೊಡಗು ಭಾಗದಲ್ಲಿ ಐತಿಹಾಸಿಕ ಪ್ರಾಮುಖ್ಯತೆ ಹೊಂದಿರುವ ಸ್ಥಳಗಳಲ್ಲಿ ಒಂದು ಮಡಿಕೇರಿ ಕೋಟೆ. ಇದು ಮಡಿಕೇರಿ ಪಟ್ಟಣದಲ್ಲಿಯೇ ಇದೆ. 17ನೇ ಶತಮಾನದಲ್ಲಿ ರಾಜ ಮುದ್ದುರಾಜ ಈ ಕೋಟೆಯನ್ನು ನಿರ್ಮಿಸಿದರು. ಈ ಕೋಟೆಯನ್ನು ಕರ್ನಾಟಕದ ಪ್ರಮುಖ ಐತಿಹಾಸಿಕ ಸ್ಮಾರಕಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ನೀವು ಇದನ್ನು ನೋಡಲೆಂದು ಕೊಡಗಿಗೆ ತೆರಳಿದರೆ ಅಲ್ಲಿ ನಿಮಗೆ ರಾಜಾ ಸೀಟ್‌, ಓಂಕಾರೇಶ್ವರ ದೇವಸ್ಥಾನ ಸೇರಿ ಅನೇಕ ಪ್ರಸಿದ್ಧ ಪ್ರವಾಸಿ ತಾಣಗಳಿದ್ದು, ಅವೆಲ್ಲಕ್ಕೂ ಭೇಟಿ ನೀಡಿ ಬರಬಹುದು. ಮಳೆಗಾಲದ ಸಮಯದಲ್ಲಿ ಕೊಡಗು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುತ್ತದೆಯಾದ್ದರಿಂದ ನಿಮ್ಮ ಮನಸ್ಸಿಗೂ ಉಲ್ಲಾಸವಾಗುತ್ತದೆ.

ಶೃಂಗೇರಿ

ಶೃಂಗೇರಿ ದೇಗುಲ.


ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಸಣ್ಣ ಗುಡ್ಡಗಾಡು ಪಟ್ಟಣ ಶೃಂಗೇರಿ. ಇಲ್ಲಿನ ದೇವಾಲಯವನ್ನು 9ನೇ ಶತಮಾನದಲ್ಲಿ ಆದಿ ಶಂಕರರು ನಿರ್ಮಿಸಿದರು. ಅವರು ಅದನ್ನು ಒಂದು ಯಾತ್ರಾ ಕೇಂದ್ರವಾಗಿ ಸ್ಥಾಪಿಸಿದರು. ದಾಖಲೆಗಳ ಪ್ರಕಾರ, ಆದಿ ಶಂಕರಾಚಾರ್ಯರು 12 ವರ್ಷಗಳ ಕಾಲ ಇಲ್ಲಿಯೇ ಇದ್ದು, ತಮ್ಮ ಶಿಷ್ಯರಿಗೆ ಬೋಧಿಸಿದರು ಎಂದು ಹೇಳಲಾಗುತ್ತದೆ. ಇಲ್ಲಿಂದ ನೀವು ಹತ್ತಿರದಲ್ಲೇ ಇರುವ ಬೇರೆ ಬೇರೆ ಧಾರ್ಮಿಕ ಸ್ಥಳಗಳಿಗೂ ಭೇಟಿ ನೀಡಬಹುದಾಗಿದೆ.

ಪಟ್ಟದಕಲ್

ಪಟ್ಟದಲ್ಲಿನ ಭವ್ಯ ನೋಟ.


ದಕ್ಷಿಣ ಭಾರತದ ಹಿಂದೂ ಮತ್ತು ಜೈನ ದೇವಾಲಯಗಳ ನಿಧಿ ಎಂದು ಪಟ್ಟದಕಲ್ಲನ್ನು ಕರೆಯಲಾಗುತ್ತದೆ. ಇದನ್ನು ಯುನೆಸ್ಕೋ ಪರಂಪರೆಯ ತಾಣವೆಂದು ಹೆಸರಿಸಲಾಗಿದೆ. ಮಲಪ್ರಭಾ ನದಿಯ ದಡದಲ್ಲಿರುವ ಈ ಸ್ಥಳವು 4ನೇ ಶತಮಾನದಷ್ಟು ಹಿಂದಿನ ಪರಂಪರೆಯನ್ನು ಹೊಂದಿದೆ. ಶಿವನಿಗೆ ಸಮರ್ಪಿತವಾಗಿರುವ ಈ ದೇವಾಲಯವು ಉತ್ತರ ಮತ್ತು ದಕ್ಷಿಣ ಭಾರತದ ವಾಸ್ತುಶಿಲ್ಪದ ಸುಂದರ ಮಿಶ್ರಣವನ್ನು ಪ್ರದರ್ಶಿಸುತ್ತದೆ.

ಕಾರ್ಕಳ

ಗೊಮ್ಮಟೇಶ್ವರ ಮೂರ್ತಿಯ ನೋಟ.


ಇದು ಐತಿಹಾಸಿಕ ಪ್ರಾಮುಖ್ಯತೆಗೆ ಹೆಸರುವಾಸಿಯಾದ ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿರುವ ಸ್ಥಳವಾಗಿದೆ. ಪುರಾತನ ದೇವಾಲಯಗಳು ಮತ್ತು ಜೈನ ಬಸದಿಗಳಿಗೆ ಹೆಸರುವಾಸಿಯಾಗಿರುವ ಈ ಸ್ಥಳಕ್ಕೆ ಹೆಸರು ಇಲ್ಲಿ ಅಪಾರ ಪ್ರಮಾಣದಲ್ಲಿರುವ ಕಪ್ಪು ಗ್ರಾನೈಟ್‌ನಿಂದಾಗಿ ಬಂದಿದೆ. ಕರ್ನಾಟಕದ ಪ್ರಸಿದ್ಧ ಐತಿಹಾಸಿಕ ಸ್ಥಳಗಳಲ್ಲಿ ಒಂದಾದ ಇದು ಯುನೆಸ್ಕೋದಿಂದ ವಿಶ್ವ ಪರಂಪರೆಯ ತಾಣವಾಗಿ ನಾಮನಿರ್ದೇಶನಗೊಂಡಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರವಾಸ

Summer Tour: ಬೇಸಿಗೆಯಲ್ಲಿ ಈ 8 ತಂಪು ಹಳ್ಳಿಗಳಿಗೆ ಪ್ರವಾಸ ಹೋಗಿ ಕೂಲ್ ಆಗಿ!

ಹಿಮಾಲಯದ ತಪ್ಪಲಿನ ಹಳ್ಳಿಗಳು ತಮ್ಮ ಪ್ರಕೃತಿ ಸೌಂದರ್ಯದಿಂದಲೂ, ಶಾಂತವಾದ ವಾತಾವರಣದಿಂದಲೂ ಇಂತಹ ಪ್ರವಾಸಿಗರನ್ನು ತಮ್ಮತ್ತ ಕೈಬೀಸಿ ಕರೆಯುತ್ತವೆ. ಬನ್ನಿ, ಯಾವೆಲ್ಲ ಮುದ್ದಾದ ಹಳ್ಳಿಗಳಿಗೆ ನೀವು ಈ ಬೇಸಿಗೆಯ ಬಿರುಬಿಸಿಲಿನಲ್ಲೂ ಪ್ರವಾಸ ಮಾಡಿ ತಂಪಾಗಿ, ಹಿತವಾಗಿ ಸಮಯ ಕಳೆಯಬಹುದು (Summer Tour) ಎಂಬುದನ್ನು ನೋಡೋಣ. ಈ ಎಂಟು ಅದ್ಭುತ ಹಳ್ಳಿಗಳ ಪರಿಚಯ ಇಲ್ಲಿದೆ.

VISTARANEWS.COM


on

Summer Tour
Koo

ಪ್ರವಾಸಗಳನ್ನು ಇಷ್ಟಪಡುವ ಮಂದಿಯಲ್ಲಿ ಎರಡು ಬಗೆಯ ಮಂದಿಯಿರುತ್ತಾರೆ. ಒಂದು ಬಗೆಯವರಿಗೆ ಪ್ರವಾಸವನ್ನು ಎಂಜಾಯ್‌ ಮಾಡಿ, ತಮ್ಮ ಪ್ರೀತಿಪಾತ್ರರ ಜೊತೆಗೆ ಸಂತೋಷವಾಗಿ ಕಾಲ ಕಳೆದು, ಐಷಾರಾಮಿ ಹೊಟೇಲುಗಳಲ್ಲಿ ಇದ್ದು, ರಿಲ್ಯಾಕ್ಸ್‌ ಆಗಿ ಸಮಯ ಕಳೆದುಕೊಂಡು ಮಜಾ ಮಾಡಿಕೊಂಡು ಬರುವವರಾದರೆ, ಇನ್ನೊಂದು ವರ್ಗ, ಜನಜಂಗುಳಿಯಿಂದ ದೂರವಿದ್ದು, ಶಾಂತವಾದ ನದೀತೀರದಲ್ಲೋ, ಬೆಟ್ಟದ ತಪ್ಪಲಲ್ಲೋ, ಪರ್ವತದ ಮೇಲಿನ ಒಂದು ಹಳ್ಳಿಯಲ್ಲೋ, ಒಂದಿಷ್ಟು ಸಮಾನ ಮನಸ್ಕರೊಂದಿಗೆ ಚಾರಣ ಮಾಡಿಯೋ ಸಮಯ ಕಳೆಯಲು ಇಷ್ಟ ಪಡುವ ಮಂದಿ. ಈ ಎರಡನೇ ವರ್ಗದ ಪ್ರವಾಸ ಪ್ರಿಯರಿಗೆ ಶಾಂತವಾಗಿ ಸಮಯ ಕಳೆಯಲು ಭಾರತದಲ್ಲಿ ಬೇಕಾದಷ್ಟು ಸ್ಥಳಗಳಿವೆ. ಹಿಮಾಲಯದ ತಪ್ಪಲಿನ ಹಳ್ಳಿಗಳು ತಮ್ಮ ಪ್ರಕೃತಿ ಸೌಂದರ್ಯದಿಂದಲೂ, ಶಾಂತವಾದ ವಾತಾವರಣದಿಂದಲೂ ಇಂತಹ ಪ್ರವಾಸಿಗರನ್ನು ತಮ್ಮತ್ತ ಕೈಬೀಸಿ ಕರೆಯುತ್ತವೆ. ಬನ್ನಿ, ಯಾವೆಲ್ಲ ಮುದ್ದಾದ ಹಳ್ಳಿಗಳಿಗೆ ನೀವು ಈ ಬೇಸಿಗೆಯ ಬಿರುಬಿಸಿಲಿನಲ್ಲೂ ಪ್ರವಾಸ ಮಾಡಿ ತಂಪಾಗಿ, ಹಿತವಾಗಿ ಸಮಯ ಕಳೆಯಬಹುದು (Summer Tour) ಎಂಬುದನ್ನು ನೋಡೋಣ.

Sikkim

ಝುಲುಕ್, ಸಿಕ್ಕಿಂ

ಪೂರ್ವ ಸಿಕ್ಕಿಂನ ಝುಲುಕ್‌ ಎಂಬ ಹಳ್ಳಿ ಭಾರತದ ಅತ್ಯಂತ ಪುರಾತನವಾದ ಸಿಲ್ಕ್‌ ರೂಟ್‌ ಹಾದಿಯಲ್ಲಿ ಸಿಗುವ ಹಳ್ಳಿಗಳಲ್ಲಿ ಒಂದು. ಮೇ ತಿಂಗಳಲ್ಲಿ ಆಗಸವೂ ತಿಳಿಯಾಗಿದ್ದು, ಹಿತವಾದ ಚಳಿಯೂ ಆವರಿಸಿರುವ, ಪ್ರವಾಸಕ್ಕೆ ಅತ್ಯಂತ ಯೋಗ್ಯವಾದ ಸಮಯ. ಸಾಲು ಸಾಲು ಹಿಮಬೆಟ್ಟಗಳಿಂದ ಆವೃತವಾದ ಹಿಮಾಲಯದ ಮನಮೋಹಕ ದೃಶ್ಯಗಳನ್ನು ಈ ಹಳ್ಳಿಯಲ್ಲಿದ್ದುಕೊಂಡು ಆಸ್ವಾದಿಸುತ್ತಾ ಸಮಯ ಕಳೆಯಬಹುದು.

Chitkool, Himachal Pradesh

ಚಿತ್ಕೂಲ್‌, ಹಿಮಾಚಲ ಪ್ರದೇಶ

ಭಾರತ ಚೀನಾ ಗಡಿಯಲ್ಲಿರುವ ಜನರ ವಸತಿಯಿರುವ ಕೊನೆಯ ಹಳ್ಳಿ ಚಿತ್ಕೂಲ್‌. ಕಿನೌರ್‌ ಜಿಲ್ಲೆಯ ಅತ್ಯಂತ ಸುಂದರವಾದ ಹಿಮಾಲಯದ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದಾದ ಜಾಗವಿದು. ಹಿಮಾಚಲ ಪ್ರದೇಶದ ಸಾಂಪ್ರದಾಯಿಕ ಆಚರಣೆಗಳು, ಅಲ್ಲಿನ ಜನಜೀವನ, ಆಹಾರ ಇತ್ಯಾದಿಗಳೆಲ್ಲವುಗಳ ಪರಿಚಯ ಮಾಡಿಕೊಂಡು, ಅದ್ಭುತ ದೃಶ್ಯಗಳನ್ನೂ ಕಂಡು ಆನಂದಿಸಬಹುದು.

Naggar, Himachal Pradesh

ನಗ್ಗರ್‌, ಹಿಮಾಚಲ ಪ್ರದೇಶ

ಹಳೆಯ ದೇವಸ್ಥಾನಗಳು, ಅರಮನೆಗಳು, ಕಟ್ಟಡಗಳು ಇತ್ಯಾದಿಗಳಿರುವ ನಗ್ಗರ್‌ ಎಂಬ ಹಳ್ಳಿ ಮನಾಲಿಯಂತಹ ಕಿಕ್ಕಿರಿದು ತುಂಬಿರುವ ಪ್ರವಾಸಿಗಳಿಂದ ಮುಕ್ತವಾಗಿದೆ. ಜೊತೆಗೆ ಇಲ್ಲಿಂದ ಕಾಣುವ ಹಿಮಾಲಯದ ಪರ್ವತಶ್ರೇಣಿಗಳ ಸುಂದರ ದೃಶ್ಯ ನೆಮ್ಮದಿಯನ್ನು ಅರಸಿ ಬರುವ ಮಂದಿಗೆ ಹೇಳಿ ಮಾಡಿಸಿದ್ದು.

Pelling, Sikkim

ಪೆಲ್ಲಿಂಗ್‌, ಸಿಕ್ಕಿಂ

ಕಾಂಚನಜುಂಗಾದ ಅದ್ಭುತ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಪೆಲ್ಲಿಂಗ್‌ ಎಂಬ ಸಿಕ್ಕಿಂನ ಪುಟ್ಟ ಊರು ಒಳ್ಳೆಯ ತಾಣ. ಶಾಂತಿಯುತವಾದ ಜಾಗವನ್ನರಸಿ ಬರುವ ಮಂದಿಗೆ ಪೆಲ್ಲಿಂಗ್‌ ಬಹಳ ಇಷ್ಟವಾಗಬಹುದು.

Malana, Himachal Pradesh

ಮಲಾನಾ, ಹಿಮಾಚಲ ಪ್ರದೇಶ

ಮಲಾನಾ ಎಂಬ ಪುಟ್ಟ ಹಳ್ಳಿ ಹಿಮಾಚಲ ಪ್ರದೇಶದ ಕಸೋಲ್‌ ಸಮೀಪದಲ್ಲಿರುವ ಹಳ್ಳಿ. ಇದು ತನ್ನ ವಿಶಿಷ್ಟ ಸಂಸೃತಿ ಹಾಗೂ ಆಚರಣೆಯ ವಿಶೇಷತೆಗಳನ್ನು ಹೊಂದಿರುವ ಸುಂದರ ತಾಣ. ಪಾರ್ವತಿ ಕಣಿವೆಯ ಮನಮೋಹಕ ಹಿಮಾಲಯದ ಸೌಂದರ್ಯವನ್ನು ಇದು ತನ್ನಲ್ಲಿ ಬಚ್ಚಿಟ್ಟುಕೊಂಡಿದೆ.

Zero, Arunachal Pradesh

ಝೀರೋ, ಅರುಣಾಚಲ ಪ್ರದೇಶ

ಅತ್ಯದ್ಭುತ ಪ್ರಕೃತಿ ಸೌಂದರ್ಯ, ಭತ್ತದ ಗದ್ದೆಗಳು, ಹಳೆಯ ಮರದ ಮನೆಗಳು ಇತ್ಯಾದಿಗಳಿಂದ ಮನಮೋಹಕವಾಗಿ ಕಾಣುವ ಝೀರೋ ಎಂಬ ಅರುಣಾಚಲ ಪ್ರದೇಶದ ಹಳ್ಳಿ ಪರಿಸರ ಪ್ರಿಯರು ಖಂಡಿತ ಇಷ್ಟಪಡಬಹುದಾದ ಹಾಗಿದೆ.

Mawlynnong, Meghalaya

ಮಾವ್ಲಿನಾಂಗ್‌, ಮೇಘಾಲಯ

ಪೂರ್ವ ಖಾಸಿ ಬೆಟ್ಟ ಪ್ರದೇಶಗಳಲ್ಲಿರುವ ಮೇಘಾಲಯದ ಈ ಪುಟ್ಟ ಹಳ್ಳಿಯ ಅಪರೂಪದ ಸಂಸ್ಕೃತಿ, ಶಿಸ್ತುಬದ್ಧ ಜೀವನ, ಸ್ವಚ್ಛತೆ ಎಲ್ಲವನ್ನೂ ನೋಡಲೇಬೇಕು. ನಗರದ ಮಂದಿ ಖಂಡಿತವಾಗಿಯೂ ಈ ಹಳ್ಳಿಯ ಜನರಿಂದ ಕಲಿಯಬೇಕಾದ್ದು ಬಹಳಷ್ಟಿದೆ. ಬೇರಿನಿಂದ ಮಾಡಲ್ಪಟ್ಟ ಸೇತುವೆಗಳು ಇಲ್ಲಿನ ವಿಶೇಷತೆ.

ಇದನ್ನೂ ಓದಿ: Summer Travel Fashion Tips: ಬೇಸಿಗೆ ಪ್ರವಾಸದ ವೇಳೆ ಯುವತಿಯರು ಗಮನಿಸಲೇಬೇಕಾದ 5 ಸಂಗತಿಗಳು

Continue Reading

ಪ್ರವಾಸ

Porbandar Tour: ಪೋರ್ ಬಂದರಿನಲ್ಲಿ ನೋಡಲೇಬೇಕಾದ ಅದ್ಭುತ ಸ್ಥಳಗಳಿವು

Porbandar Tour: ರಾಷ್ಟ್ರಪಿತ ಮಹಾತ್ಮಗಾಂಧಿಯವರ ಜನ್ಮಸ್ಥಳವಾಗಿರುವ ಪೋರ್ ಬಂದರ್ ಇತಿಹಾಸದ ಹಿನ್ನಲೆಯಿರುವ ಸ್ಥಳವಾಗಿದೆ. ಇದು ಗುಜರಾತ್ ರಾಜ್ಯದಲ್ಲಿದೆ. ರಜಾ ದಿನಗಳಲ್ಲಿ ಗುಜರಾತ್ ಗೆ ಪ್ರಯಾಣ ಮಾಡಬೇಕು ಎಂದು ಬಯಸುವವರು ಒಮ್ಮೆ ಪೋರ್ ಬಂದರಿಗೆ ಭೇಟಿ ನೀಡಿ. ಪೋರ್ ಬಂದರ್ ನ ಪ್ರಮುಖ ಸ್ಥಳಗಳ ಪರಿಚಯ ಇಲ್ಲಿದೆ.

VISTARANEWS.COM


on

Porbandar Tour
Koo

ಗುಜರಾತ್: ಕರಾವಳಿ ನಗರವಾದ ಪೋರ್ ಬಂದರ್ ರಾಷ್ಟ್ರಪಿತ ಮಹಾತ್ಮಗಾಂಧಿಯವರ ಜನ್ಮಸ್ಥಳವಾಗಿದೆ. ಇತಿಹಾಸದ ಹಿನ್ನೆಲೆಯಿರುವ ಈ ಸ್ಥಳ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತದೆ. ಇದು ಗುಜರಾತ್ ರಾಜ್ಯದಲ್ಲಿದೆ. ರಜಾ ದಿನಗಳಲ್ಲಿ ಗುಜರಾತ್ ಗೆ ಪ್ರಯಾಣ ಮಾಡಬೇಕು ಎಂದು ಬಯಸುವವರು ಒಮ್ಮೆ ಪೋರ್ ಬಂದರಿಗೆ (Porbandar Tour) ಭೇಟಿ ನೀಡಿ. ಇಲ್ಲಿನ ಅದ್ಭುತ ಸ್ಥಳಗಳನ್ನು ಆನಂದಿಸಿ.

Porbandar Tour

ಕೀರ್ತಿ ಮಂದಿರ

ಇದು ರಾಷ್ಟ್ರಪಿತ ಮಹಾತ್ಮಗಾಂಧಿಯವರ ನೆನಪಿಗಾಗಿ ನಿರ್ಮಿಸಿದ ಸ್ಮಾರಕವಾಗಿದೆ. ಇದು ಪೋರ್ ಬಂದರಿನಲ್ಲಿದೆ. ಇದು ಪೋರ್ ಬಂದರಿನ ಮೊದಲ ಹೆಗ್ಗುರುತಾಗಿದೆ. ಗಾಂಧೀಜಿಯವರ ಸೋದರಳಿಯನಿಂದ ನಿರ್ಮಿಸಲ್ಪಟ್ಟ ಈ ಸ್ಮಾರಕದಲ್ಲಿ ಗಾಂಧಿಯವರ ಅಸಾಧಾರಣ ಜೀವನವನ್ನು ವಿವರಿಸುವ ವಸ್ತು ಸಂಗ್ರಹಾಲಯ, ದೇವಾಲಯ, ಉದ್ಯಾನಗಳನ್ನು ಹೊಂದಿದೆ.

Porbandar Tour

ಪೋರ್ ಬಂದರ್ ಬೀಚ್

ವಿಶ್ರಾಂತಿ ಪಡೆಯಲು ಬಯಸುವವವರು ಈ ಸ್ಥಳಕ್ಕೆ ಭೇಟಿ ನೀಡಬಹುದು. ಇಲ್ಲಿ ಚಿನ್ನದಂತೆ ಹೊಳೆಯುವ ಮರಳುಗಳು, ಸೌಮ್ಯವಾದ ಅಲೆಗಳು ಮತ್ತು ಕಣ್ಮನ ಸೆಳೆಯುವ ಸೂರ್ಯೋದಯವನ್ನು ಇಲ್ಲಿ ಆನಂದಿಸಬಹುದು. ಇಲ್ಲಿ ನಡೆದಾಡುವ ಮೂಲಕ ತಾಜಾ ಗಾಳಿಯನ್ನು ಉಸಿರಾಡಬಹುದು. ಹಾಗೇ ಇಲ್ಲಿ ಮೀನುಗಾರರು, ಒಂಟೆಗಳು ಸುತ್ತಾಡುತ್ತಿರುತ್ತದೆ. ಡೌನ್ ಚೌಪಟ್ಟಿರಸ್ತೆಯ ಮಾದರಿ ಖಾದ್ಯಗಳಾದ ಮೆಥಿ ಗೋಟಾ ಬಜ್ಜಿಗಳನ್ನು ಬಣ್ಣ ಬಣ್ಣದ ಬಲ್ಪ್ ಗಳಿಂದ ಅಲಂಕರಿಸಿದ ಸ್ಟಾಲ್ ಗಳಲ್ಲಿ ಮಾರಾಟ ಮಾಡಲಾಗುತ್ತದೆ.

Porbandar Tour

ಸುದಾಮ ಮಂದಿರ

ಪೋರ್ ಬಂದರಿನ ಸಿಟಿ ಸೆಂಟರ್ ನಲ್ಲಿ ಕಂಡುಬರುವ ಈ ಪುರಾತನ ದೇವಾಲಯದಲ್ಲಿ ಹಿಂದೂ ದೇವರಾದ ಕೃಷ್ಣನ ಜೊತೆ ಆತನ ಬಾಲ್ಯದ ಸ್ನೇಹಿತ ಸುದಾಮನನ್ನು ಪೂಜಿಸಲಾಗುತ್ತದೆ. ಹಾಗೇ ಇಲ್ಲಿ ಕೃಷ್ಣ ಆತನ ಪತ್ನಿ ರುಕ್ಮಿಣಿ , ಸ್ನೇಹಿತ ಸುದಾಮ ಮತ್ತು ಸಹೋದರ ಬಲರಾಮನನ್ನು ಗೌರವಿಸಲಾಗುತ್ತದೆ. ಗುರುಕುಲದಲ್ಲಿ ಕೃಷ್ಣ –ಸುದಾಮರು ಒಟ್ಟಿಗೆ ಕಳೆದ ಸಮಯವನ್ನು ಚಿತ್ರಿಸುವ ಭಿತ್ತಿ ಚಿತ್ರಗಳನ್ನು ಗೋಡೆಗಳ ಮೇಲೆ ಬರೆಯಲಾಗಿದೆ.

Porbandar Tour

ಪೋರ್ ಬಂದರ್ ಚೌಪಟ್ಟಿ

ರೋಮಾಂಚಕವಾದ ಚೌಪಟ್ಟಿ ಬೀಚ್ ನಲ್ಲಿ ವಾಯು ವಿಹಾರ ಮಾಡುವಾಗ ಸ್ಥಳೀಯ ಖಾದ್ಯಗಳ ರುಚಿ ಮತ್ತು ಹಬ್ಬದ ಸಂಭ್ರಮವನ್ನು ನೀವು ಆನಂದಿಸದೆ ಇರಲಾಗುವುದಿಲ್ಲ. ದೀಪಗಳಿಂದ ಅಲಂಕಾರಗೊಂಡ ಮಳಿಗೆಗಳಲ್ಲಿ ಧೋಕ್ಲಾಗಳು, ಖಾಂಡ್ವಿಗಳು ಮತ್ತು ಹುರಿದ ಮಸಾಲೆಯುಕ್ತ ತಿಂಡಿಗಳಂತಹ ಪ್ರಮುಖ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ. ಚೌಪಟ್ಟಿ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತದೆ. ವಿಶೇಷವಾಗಿ ಇಲ್ಲಿ ಗಾಳಿಪಟವನ್ನು ಹಾರಿಸುವ ಉತ್ಸವ ನಡೆಯುತ್ತದೆ.

ತಾರಾ ಮಂದಿರ ತಾರಾಲಯ

1972ರಲ್ಲಿ ಪ್ರಧಾನಿ ಇಂದಿರಾ ಗಾಂಧಿಯವರು ಈ ತಾರಾಲಯವನ್ನು ಉದ್ಘಾಟಿಸಿದರು. ಇಲ್ಲಿ ಖಗೋಳಶಾಸ್ತ್ರ, ಪ್ರದರ್ಶನದ ಬಗ್ಗೆ ಉತ್ತಮ ಮಾಹಿತಿಯನ್ನು ನೀಡಲಾಗುತ್ತದೆ. ಇಲ್ಲಿ ಗ್ರಹಣದಿಂದ ನಕ್ಷತ್ರ ಪುಂಜಗಳವರೆಗೆ ಕಾಸ್ಮಿಕ್ ವಿದ್ಯಮಾನಗಳನ್ನು ವಿವರಿಸುವ ಪ್ರದರ್ಶನಗಳನ್ನು ಡಿಜಿಟಲ್ ಆಗಿ ಪ್ರದರ್ಶಿಸಲು ಸುಧಾರಿತ ತಂತ್ರಜ್ಞಾನವನ್ನು ಬಳಸಲಾಗುತ್ತದೆ.

Porbandar Tour

ಭಾರತ್ ಮಂದಿರ

19ನೇ ಶತಮಾನದ ಈ ದೇವಾಲಯವು ಭಾರತವನ್ನು ಗೌರವಿಸುತ್ತದೆ. ಪುರಾಣಗಳಲ್ಲಿ ಭಗವಾನ್ ರಾಮನ ಸದ್ಗುಣಗಳನ್ನು ಕಂಡು ಹಿಂದೂಗಳು ರಾಮನನ್ನು ಆದರ್ಶವಾಗಿ ಕಾಣುತ್ತಾರೆ. ಹಾಗಾಗಿ ಈ ದೇವಾಲಯದಲ್ಲಿ ರಾಮಾಯಣದ ದೃಶ್ಯಗಳನ್ನು ಕೆತ್ತಲಾಗಿದೆ. ಇಲ್ಲಿ ಸ್ವರ್ಣ ಲೇಪಿತ ಗುಮ್ಮಟಗಳು, ಲ್ಯಾಟಿಸ್ಡ್ ಗೋಡೆಗಳು ಮತ್ತು ಸ್ತಂಭದ ಮಂಟಪ ಸಭಾಂಗಣಗಳು ದೂರ ದೂರದಿಂದ ಭಕ್ತರನ್ನು ಆಕರ್ಷಿಸುತ್ತದೆ.

Porbandar Tour

ನೆಹರು ತಾರಾಲಯ

ಖಗೋಳಶಾಸ್ತ್ರದ ಬಗ್ಗೆ ಮನೋರಂಜನೆಯನ್ನು ನೀಡುವಂತಹ ಪೋರ್ ಬಂದರ್ ನ ಈ ತಾರಾಲಯ ನಕ್ಷತ್ರಾಕಾರದಲ್ಲಿದೆ. ಇಲ್ಲಿ ಭೂಮಿಯ ಆಚೆಗಿನ ರಹಸ್ಯಗಳನ್ನು ಅನ್ವೇಷಿಸುವ ಹೈಟೆಕ್ ಪ್ರದರ್ಶನಗಳನ್ನು ನೀಡುತ್ತದೆ. ಆಧುನಿಕ ಗ್ಯಾಜೆಟ್ರಿಯೊಂದಿಗೆ ಸುಸಜ್ಜಿತವಾದ 40 ಅಡಿಗಳ ಅರ್ಧಗೋಳದ ಥಿಯೇಟರ್ ಒಳಗೆ ಡಿಜಿಟೈಸ್ಡ್ ಆಕಾಶದಲ್ಲಿ ಶೂಟಿಂಗ್ ಸ್ಟಾರ್ ಗಳು ಪ್ರಜ್ವಲಿಸುತ್ತಿರುವುದನ್ನು ಇಲ್ಲಿ ನೋಡಬಹುದು.

Porbandar Tour

ಪೋರ್ ಬಂದರ್ ಪಕ್ಷಿಧಾಮ

ಅಪರೂಪದ ಜಲವಾಸಿಗಳನ್ನೊಳಗೊಂಡ ಈ ಅಭಯಾರಣ್ಯಕ್ಕೆ ಪ್ರಕೃತಿ ಪ್ರೇಮಿಗಳು ಭೇಟಿ ನೀಡಬಹುದು. ಪೋರ್ ಬಂದರ್ ನಿಂದ ಕೇವಲ 2ಕಿಮೀ ದೂರದಲ್ಲಿರುವ ಇದು ಮ್ಯಾಂಗ್ರೋವ್ ಗಳನ್ನು ರಕ್ಷಣೆ ನೀಡುತ್ತದೆ ಮತ್ತು ವರ್ಷದಲ್ಲಿ ಸುಮಾರು 200 ಪಕ್ಷಿ ಪ್ರಭೇದಗಳಿಗೆ ಆಶ್ರಯ ನೀಡುತ್ತದೆ. ಇಲ್ಲಿ ಸುಂದರವಾದ ಭೂದೃಶ್ಯಗಳು ಮತ್ತು ತಾಜಾ ಗಾಳಿಯು ನಿಮಗೆ ಹೆಚ್ಚು ಸಂತೋಷವನ್ನು ನೀಡುತ್ತದೆ.

Continue Reading

ಕರ್ನಾಟಕ

Wonderla Bengaluru: ಬೇಸಿಗೆ ರಜೆಯನ್ನು ಇನ್ನಷ್ಟು ಮಜವಾಗಿಸಲು ವಂಡರ್‌ಲಾದಲ್ಲಿ ʼಸಮ್ಮರ್‌ಲಾ ಫಿಯೆಸ್ಟಾ-2024ʼ: ಭರಪೂರ ಆಫರ್ಸ್‌

VISTARANEWS.COM


on

Wonderla Bengaluru
Koo

ಬೆಂಗಳೂರು: ಈ ಬೇಸಿಗೆಯ ಮಜವನ್ನು ಇನ್ನಷ್ಟು ಹೆಚ್ಚಿಸಲು ಭಾರತದ ಅತಿದೊಡ್ಡ ಅಮ್ಯೂಸ್‌ಮೆಂಟ್ ಪಾರ್ಕ್ ವಂಡರ್‌ಲಾ (Wonderla Bengaluru) ಬೆಂಗಳೂರು ಪಾರ್ಕ್‌ನಲ್ಲಿ ‘ಸಮ್ಮರ್‌ಲಾ ಫಿಯೆಸ್ಟಾ’ (Summer Fiesta 2024) ನಡೆಸುತ್ತಿದ್ದು, ಮೇ 31 ರವರೆಗೂ ಇರಲಿದೆ. ಸಮ್ಮರ್‌ಲಾ ಫಿಯೆಸ್ಟಾದಲ್ಲಿ ಸಾಕಷ್ಟು ಆಫರ್‌ಗಳು ನಿಮ್ಮನ್ನು ಕೈ ಬೀಸಿ ಕರೆಯುತ್ತಿದ್ದು, ಅನೇಕ ಮೋಜಿನ ರೈಡ್‌, ವಾಟರ್‌ ಗೇಮ್‌ಗಳು, ಫುಡ್‌-ಫೆಸ್ಟಿವಲ್‌, ಡಿಜೆ ಮ್ಯೂಸಿಕ್‌ ಸೇರಿದಂತೆ ಅನೇಕ ವಿಶೇಷತೆಗಳು ಈ ಸಮ್ಮರ್‌ಲಾದಲ್ಲಿ ಇರಲಿವೆ. ಇದಲ್ಲದೆ, ಡೊಳ್ಳು ಕುಣಿತ, ಚಿಂಗಾರಿ ಮೇಳಗಳಂತಹ ವಿಶೇಷ ಸಾಂಸ್ಕೃತಿಕ ಪ್ರದರ್ಶನ ಹಾಗೂ ಮೆರವಣಿಗೆ ಇರಲಿವೆ. ವಾರಾಂತ್ಯದಲ್ಲಿ ನಿಮ್ಮನ್ನು ಇನ್ನಷ್ಟು ಉತ್ಸಾಹಿಗಳನ್ನಾಗಿ ಮಾಡಲು ಡಿಜೆ ಮ್ಯೂಸಿಕ್‌ ಸಹ ಆಯೋಜಿಸಲಾಗುತ್ತಿದೆ.

ಇನ್ನು ಭಾನುವಾರದಂದು ವಂಡರ್‌ಲಾ ರೆಸಾರ್ಟ್‌ನಲ್ಲಿ ಬೇಸಿಗೆಯ ಬ್ರಂಚ್‌ ಸಹ ಇರಲಿದೆ. ಈ ಎಲ್ಲಾ ಮನರಂಜನೆಗಳ ಮೇಲೂ ಸಾಕಷ್ಟು ರಿಯಾಯಿತಿ ಹಾಗೂ ಆಫರ್‌ಗಳು ಇದ್ದು, ಆಸಕ್ತರು ಭಾಗಿಯಾಗಿ ಈ ಬೇಸಿಗೆ ರಜೆಯನ್ನು ಇನ್ನಷ್ಟು ಸಂತಸದಿಂದ ಕಳೆಯಬಹುದು. ಈ ಎಲ್ಲಾ ಇತರ ಕೊಡುಗೆಗಳು ಆನ್‌ಲೈನ್ ಮತ್ತು ಆಫ್‌ಲೈನ್ ಬುಕಿಂಗ್‌ಗಳಿಲ್ಲಿ ಲಭ್ಯವಿರಲಿದೆ. ಪಾರ್ಕ್‌ನಲ್ಲಿ ಈಗ ಲಭ್ಯವಿರುವ ಹೊಸ ವಿಶೇಷ ಪಾನೀಯ ಕೌಂಟರ್‌ಗಳೊಂದಿಗೆ ಈ ಬೇಸಿಗೆಯ ಶಾಖವನ್ನು ತಣಿಸಲು ತಾಜಾ ಹಣ್ಣಿನ ಜ್ಯೂಸ್‌ಗಳು, ಋತುವಿನ ಅತ್ಯುತ್ತಮ ಆಮ್ರಾಸ್‌, ತಂಪಾದ ಮಜ್ಜಿಗೆ ಮತ್ತು ಬೇಸಿಗೆಯ ಪಾನೀಯಗಳು ಲಭ್ಯವಿರಲಿದೆ.

ಇದನ್ನೂ ಓದಿ | E-Pass Mandatory: ಊಟಿ, ಕೊಡೈಕೆನಾಲ್‌ ಪ್ರವಾಸ ಹೊರಟಿದ್ದೀರಾ? ಹಾಗಿದ್ದರೆ ಗಮನಿಸಿ

ಆಫರ್‌ಗಳ ವಿವರ ಇಲ್ಲಿದೆ

  • ವಂಡರ್‌ಲಾಗೆ ಭೇಟಿ ನೀಡಲು ಬಯಸುವವರಿಗೆ Early Bird ಹೆಸರಿನಲ್ಲಿ ಶೇ. 10ರಷ್ಟು ರಿಯಾಯಿತಿ ಸಿಗಲಿದೆ. ಈ ಕೊಡುಗೆ(Offer) ಪಡೆಯಲು ಮೂರು ದಿನಗಳ ಮುಂಚಿತವಾಗಿ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬುಕ್‌ ಮಾಡಿಕೊಳ್ಳಬೇಕು.
  • ಜನ್ಮದಿನದ ಆಫರ್‌, ವಿಶೇಷವಾಗಿ ಮೇ ತಿಂಗಳಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವವರಿಗೆ 1 ಟಿಕೆಟ್‌ ಖರೀದಿಸಿದರೆ ಮತ್ತೊಂದು ಟಿಕೆಟ್‌ ಉಚಿತವಾಗಿ ಸಿಗಲಿದೆ.
  • ಇನ್ನು, ವಿದ್ಯಾರ್ಥಿಗಳಿಗಾಗಿ ಹಾಲ್ ಟಿಕೆಟ್ ಆಫರ್ ಸಹ ಚಾಲ್ತಿಯಲ್ಲಿದೆ. 2023-2024ರ ಶೈಕ್ಷಣಿಕ ವರ್ಷದ 10ನೇ, 11ನೇ ಮತ್ತು 12ನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ತಮ್ಮ ಮೂಲ ಪರೀಕ್ಷೆಯ ಹಾಲ್ ಟಿಕೆಟ್‌ಗಳನ್ನು ಪ್ರಸ್ತುತಪಡಿಸಿ ಪಾರ್ಕ್ ಪ್ರವೇಶ ಟಿಕೆಟ್‌ಗಳ ಮೇಲೆ ಶೇ. 35ರಷ್ಟು ರಿಯಾಯಿತಿಯನ್ನು ಪಡೆಯಬಹುದು.
  • ವಂಡರ್‌ಲಾ ಕಾಲೇಜು ವಿದ್ಯಾರ್ಥಿಗಳಿಗೆ (16-24 ವರ್ಷ ವಯಸ್ಸಿನವರು) ತಮ್ಮ ಕಾಲೇಜು ಐಡಿ ಕಾರ್ಡ್‌ಗಳನ್ನು ಪ್ರಸ್ತುತಪಡಿಸಿದರೆ ಶೇ. 25ರಷ್ಟು ರಿಯಾಯಿತಿ ಪಡೆಯಲಿದ್ದಾರೆ, ಜೊತೆಗೆ, ವಿದ್ಯಾರ್ಥಿಗಳು ಆಹಾರ ಆಯ್ಕೆಗಳನ್ನು ಒಳಗೊಂಡಿರುವ ಕಾಂಬೊ ಪ್ಯಾಕೇಜ್‌ಗಳನ್ನು ಸಹ ಪಡೆಯಬಹುದು. ಆರಂಭಿಕ ಅರ್ಲಿ ಬರ್ಡ್‌ ಕೊಡುಗೆಯನ್ನು ಹೊರತುಪಡಿಸಿ, ಎಲ್ಲಾ ಇತರ ಕೊಡುಗೆಗಳು ಆನ್‌ಲೈನ್ ಮತ್ತು ಆಫ್‌ಲೈನ್ ಬುಕಿಂಗ್‌ಗಳಿಗೆ ಮಾನ್ಯವಾಗಿರುತ್ತವೆ. ಅತಿಥಿಗಳು ತಮ್ಮ ವಂಡರ್ಲಾ ಸಮ್ಮರ್ಲಾ ಫಿಯೆಸ್ಟಾ ಭಾಗವಾಗಿ ಮೇ 31 ರವರೆಗೆ ಪ್ರತಿ ಶನಿವಾರ ನಡೆಯುವ ವಂಡರ್ಲಾ ವಿಶೇಷ ಪೂಲ್ ಪಾರ್ಟಿಗಳೊಂದಿಗೆ ಭಾಗವಹಿಸಬಹುದು.

ಈ ಕುರಿತು ಮಾತನಾಡಿದ ವಂಡರ್‌ಲಾ ಹಾಲಿಡೇಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆ. ಚಿಟ್ಟಿಲಪ್ಪಿಳ್ಳಿ, ಬೇಸಿಗೆ ರಜೆಯನ್ನು ಇನ್ನಷ್ಟು ಉತ್ಸಾಹ ಭರಿತವನ್ನಾಗಿದಲು ವಂಡರ್‌ಲಾ “ಸಮ್ಮರ್ಲಾ ಫಿಯೆಸ್ಟಾ’ ಆಯೋಜಿಸಿದೆ. ಈ ಸಮ್ಮರ್ಲಾದಲ್ಲಿ ಇಡೀ ಕುಟುಂಬಗಳು, ಕಾಲೇಜು ಸ್ನೇಹಿತರು, ಮಕ್ಕಳು ಎಲ್ಲರೂ ತಮ್ಮ ಪ್ರೀತಿಪಾತ್ರರೊಂದಿಗೆ ಆಗಮಿಸಿ, ಆನಂದಿಸಬಹುದು.

ಸಮ್ಮರ್‌ಲಾ ಭಾಗವಾಗಿ ಫುಡ್‌ಫೆಸ್ಟಿವಲ್‌, ಸಾಂಸ್ಕೃತಿಕ ಮೆರವಣಿಗೆ, ಡಿಜೆ ಮ್ಯೂಸಿಕ್‌ ಸೇರಿದಂತೆ ಇನ್ನೂ ಅನೇಕ ಮನರಂಜನೆಗಳು ಇರಲಿವೆ. ಈ ಎಲ್ಲಾ ಮನರಂಜನೆಯೊಂದಿಗೆ ನಿಮ್ಮ ಸವಿನೆನಪನ್ನು ಅಚ್ಚಳಿಯದಂತೆ ಮಾಡುವುದೇ ನಮ್ಮ ವಂಡರ್‌ಲಾದ ಪ್ರಮುಖ ಉದ್ದೇಶ ಎಂದು ಹೇಳಿದರು.

ವಂಡರ್‌ಲಾ ಆನ್‌ಲೈನ್ ಪೋರ್ಟಲ್ ಮೂಲಕ ಅಥವಾ ನೇರವಾಗಿ ಪಾರ್ಕ್ ಕೌಂಟರ್‌ಗಳಲ್ಲಿ ಟಿಕೆಟ್‌ಗಳನ್ನು ಮುಂಗಡವಾಗಿ ಬುಕ್ ಮಾಡುವ ಮೂಲಕ ಸಮ್ಮರ್ಲಾವನ್ನು ಆನಂದಿಸಿ.

ಇದನ್ನೂ ಓದಿ | Jammu Tour: ಜಮ್ಮುವಿಗೆ ಭೇಟಿ ನೀಡುವವರು ಈ ಸ್ಥಳಗಳನ್ನು ಮಿಸ್ ಮಾಡದೇ ನೋಡಿ!

ಹೆಚ್ಚಿನ ಮಾಹಿತಿ ಮತ್ತು ಬುಕಿಂಗ್‌ಗಳಿಗಾಗಿ, www.wonderla.com ಗೆ ಭೇಟಿ ನೀಡಿ ಅಥವಾ +91 80372 30333, +91 80350 73966 ಅನ್ನು ಸಂಪರ್ಕಿಸಿ.

Continue Reading

ಪ್ರವಾಸ

Summer Tour: ಕಾಶ್ಮೀರ ಪ್ರವಾಸ ಮಾಡಲೊಂದು ಚಾನ್ಸ್! ಐ ಆರ್ ಸಿ ಟಿ ಸಿಯಿಂದ ವಿಶೇಷ ಪ್ಯಾಕೇಜ್

Summer Tour: ಕಾಶ್ಮೀರಕ್ಕೆ ಭೇಟಿ ನೀಡಲು ಈಗ ಸೂಕ್ತ ಸಮಯ. ಹಿಮದಿಂದ ಆವೃತವಾದ ಸುಂದರ ಭೂದೃಶ್ಯಗಳನ್ನು ಈಗ ಇಲ್ಲಿ ಕಣ್ತುಂಬಿಕೊಳ್ಳಬಹುದು. ಇದಕ್ಕಾಗಿ ಐಆರ್ ಟಿಸಿ ಯು ‘ಕಾಶ್ಮೀರ್ ಹೆವೆನ್ ಆನ್ ಅರ್ಥ್ ಎಕ್ಸ್ ಮುಂಬೈ’ ಪ್ಯಾಕೇಜ್ ಘೋಷಿಸಿದೆ. ಆಸಕ್ತರು ಇದರ ಪ್ರಯೋಜನವನ್ನು ಪಡೆಯಬಹುದು. ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

By

Summer Tour
Koo

ಧರೆಯ ಮೇಲಿನ ಸ್ವರ್ಗ ಎಂದೇ ಕರೆಯಲ್ಪಡುವ ಕಾಶ್ಮೀರಕ್ಕೆ (kashmir) ಪ್ರವಾಸ (tour) ಹೊರಡಲು ಈಗ ಸೂಕ್ತ ಸಮಯ. ಬೇಸಿಗೆಯ ಬಿಸಿಲಿನಿಂದ (Summer Tour) ಕಂಗೆಟ್ಟ ಜನರು ತಂಪಾದ ಪ್ರದೇಶದಲ್ಲಿ ಹೋಗಿ ಕೆಲ ಕಾಲ ಇದ್ದು ಬರಬೇಕು ಎಂದು ಬಯಸಿದರೆ ಐಆರ್ ಟಿಸಿ (IRTC) ವತಿಯಿಂದ ಟೂರ್ ಪ್ಯಾಕೇಜ್ ಘೋಷಣೆಯಾಗಿದೆ. ಆಸಕ್ತರು ಬ್ಯಾಗ್ ಪ್ಯಾಕ್ ,ಮಾಡಿ ಹೊರಡಲು ಸಿದ್ಧತೆ ನಡೆಸಬಹುದು.

ಇತ್ತೀಚೆಗೆ ಕಾಶ್ಮೀರದಲ್ಲಿ ಸಂಭವಿಸಿದ ಹಿಮಪಾತವು ಕಣಿವೆ ಪ್ರದೇಶಕ್ಕೆ ಸಂಪೂರ್ಣವಾಗಿ ಬಿಳಿ ಬಣ್ಣ ಎರಕ ಹೊಯ್ದಂತೆ ಮಾಡಿದೆ. ಇದು ಪ್ರವಾಸೋದ್ಯಮ ಕ್ಷೇತ್ರದ ಉತ್ಸಾಹವನ್ನು ಪುನರುಜ್ಜೀವನಗೊಳಿಸಿದೆ. ಈಗಾಗಲೇ ಅನೇಕ ಪ್ರವಾಸಿಗರು ಕಾಶ್ಮೀರಕ್ಕೆ ಹೊರಡುವ ಯೋಜನೆ ಹಾಕಿಕೊಳ್ಳುತ್ತಿದ್ದಾರೆ. ಮೋಡಿ ಮಾಡುವ ಭೂದೃಶ್ಯಗಳನ್ನು ಕಣ್ತುಂಬಿ ಕೊಳ್ಳಲು ಪ್ರವಾಸಿಗರ ಆಗಮನಕ್ಕೆ ಕಾಶ್ಮೀರವೂ ಕಾಯುವಂತಿದೆ.

ಪ್ರವಾಸಿಗರ ಉತ್ಸಾಹವನ್ನು ಹೆಚ್ಚಿಸಲು ಭಾರತೀಯ ರೈಲ್ವೇ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC)ವು ‘ಕಾಶ್ಮೀರ್ ಹೆವೆನ್ ಆನ್ ಅರ್ಥ್ ಎಕ್ಸ್ ಮುಂಬೈ’ ಎಂಬ ಹೊಸ ಪ್ರವಾಸ ಪ್ಯಾಕೇಜ್ ಅನ್ನು ಹೊರತಂದಿದೆ.


ಇದನ್ನೂ ಓದಿ: Jammu Tour: ಜಮ್ಮುವಿಗೆ ಭೇಟಿ ನೀಡುವವರು ಈ ಸ್ಥಳಗಳನ್ನು ಮಿಸ್ ಮಾಡದೇ ನೋಡಿ!

ಈ ಪ್ಯಾಕೇಜ್ ಕಾಶ್ಮೀರದ ರಮಣೀಯ ಸೌಂದರ್ಯವನ್ನು ಅನ್ವೇಷಿಸಲು ಬಯಸುವವರಿಗೆ ಹೇಳಿ ಮಾಡಲ್ಪಟ್ಟಿದೆ. ಐದು ರಾತ್ರಿ ಮತ್ತು ಆರು- ದಿನಗಳ ಸಮಗ್ರ ಪ್ಯಾಕೇಜ್ ನಲ್ಲಿ ಶ್ರೀನಗರ, ದೂದ್ ಪೆಟ್ರಿ, ಗುಲ್ಮಾರ್ಗ್, ಪಹಲ್ಗಾಮ್ ಮೊದಲಾದ ಪ್ರಸಿದ್ಧ ಸ್ಥಳಗಳನ್ನು ಒಳಗೊಂಡಿದೆ. ಈ ಪ್ಯಾಕೇಜ್ ನಲ್ಲಿ ವಿಮಾನ ಟಿಕೆಟ್‌ಗಳು, ಹೊಟೇಲ್ ವಸತಿ, ಊಟ ಮತ್ತು ಪ್ರಯಾಣ ವಿಮೆಯನ್ನು ಒಳಗೊಂಡಿದೆ. ಪ್ರಯಾಣಿಕರ ಸಂಖ್ಯೆ ಮತ್ತು ಅವರೊಂದಿಗೆ ಬರುವ ಮಕ್ಕಳ ವಯಸ್ಸನ್ನು ಪರಿಗಣಿಸಿ ವಿಭಿನ್ನ ಪ್ರಯಾಣದ ಅನುಭವಕ್ಕೆ ಸರಿಹೊಂದಿಸಲು ಬೆಲೆಗಳನ್ನು ನಿಗದಿಪಡಿಸಲಾಗಿದೆ.


ಪ್ರವಾಸದ ದಿನ

ಮೇ ತಿಂಗಳಲ್ಲಿ 11, 15, 18, 25 ಜೂನ್ ತಿಂಗಳಲ್ಲಿ 1, 9, 15, 23, 26ರಂದು ಪ್ರವಾಸ ಹೊರಡುವ ಯೋಜನೆ ರೂಪಿಸಿಕೊಳ್ಳಬಹುದು. ಹೊಟೇಲ್ ವಾಸ್ತವ್ಯ ನಾಲ್ಕು ರಾತ್ರಿ ಶ್ರೀನಗರದಲ್ಲಿ ಮತ್ತು ಒಂದು ರಾತ್ರಿ ಪಹಲ್ಗಾಮ್ ನಲ್ಲಿ.

ದರ ಇಂತಿದೆ

ಒಬ್ಬರಿಗೆ 63,400 ರೂ., ಇಬ್ಬರಿಗೆ ಪ್ಯಾಕೇಜ್ ನಡಿಯಲ್ಲಿ ತಲಾ 54,100, ಮೂವರಿಗೆ ತಲಾ 50,700, 5 ರಿಂದ 11 ವರ್ಷದ ಒಳಗಿನ ಪ್ರತಿ ಮಕ್ಕಳಿಗೆ 48,400 ರೂ. ನಿಗದಿಪಡಿಸಲಾಗಿದೆ.

ಪ್ರವಾಸಿ ತಾಣಗಳು

ಟೂರ್ ಪ್ಯಾಕೇಜ್ ನಲ್ಲಿ ಶ್ರೀನಗರ, ದೂದ್ ಪೆಟ್ರಿ, ಗುಲ್ಮಾರ್ಗ್, ಪಹಲ್ಗಾಮ್ ಸುಪ್ರಸಿದ್ದ ತಾಣಗಳಿಗೆ ಭೇಟಿ ನೀಡಲಾಗುತ್ತದೆ. ಶ್ರೀನಗರ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬಳಿಕ ಪಹಲ್ಗಾಮ್ , ಬೇತಾಬ್ ವಾಲಿ, ಅರು ವಾಲಿ ಮತ್ತು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಮೊದಲ ದಿನ ಭೇಟಿ ನೀಡಲಾಗುತ್ತದೆ. ಎರಡನೇ ದಿನ ದಾಲ್ ಸರೋವರದ ದಡದಲ್ಲಿರುವ ಹಾಜ್ರತ್ ಬಾಲ್ ಶ್ರೀನಿ ಗೆ ಭೇಟಿ ನೀಡಲಾಗುತ್ತದೆ. ಮೂರನೇ ದಿನ ಅವಂತೀಪುರ್, ಮೊಘಲ್ ಗಾರ್ಡನ್, ಶಂಕರಾಚಾರ್ಯ ಟೆಂಪಲ್, ಶಿಖರ ರೈಡ್ ಅನ್ನು ಒಳಗೊಂಡಿರುತ್ತದೆ. ನಾಲ್ಕನೇ ದಿನ ದೂದ್ ಪೆಟ್ರಿಯಲ್ಲಿ , ಐದನೇ ದಿನ ಗುಲ್ಮಾರ್ಗ್ ನಲ್ಲಿ ಕಳೆಯಲಾಗುತ್ತದೆ. ಆರನೇ ದಿನ ವಿಮಾನದಲ್ಲಿ ಮುಂಬಯಿ ತಲುಪುವುದರೊಂದಿಗೆ ಪ್ರವಾಸ ಕೊನೆಗೊಳ್ಳುತ್ತದೆ.

Continue Reading
Advertisement
Mahanati Show Gagana Comedy About Rishi actor
ಕಿರುತೆರೆ47 seconds ago

Mahanati Show: ‘ಮಹಾನಟಿʼ ವೇದಿಕೆಯಲ್ಲಿ ನಟ ರಿಷಿ ಫೋನ್‌ ನಂಬರ್‌ ಕೇಳಿದ ಚಿತ್ರದುರ್ಗದ ಗಗನಾ!

amethi unrest
ದೇಶ15 mins ago

Amethi Unrest: ಕಾಂಗ್ರೆಸ್‌ ಕಚೇರಿ ಮೇಲೆ ಕಿಡಿಗೇಡಿಗಳಿಂದ ಅಟ್ಯಾಕ್‌; ಬಿಜೆಪಿಯ ದುಷ್ಕೃತ್ಯ ಎಂದು ಆರೋಪ

Paris Olympics
ಕ್ರೀಡೆ55 mins ago

Paris Olympics: ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ​ಭಾರತದ ಪುರುಷರ & ಮಹಿಳೆಯರ ರಿಲೇ ತಂಡ

Prajwal Revanna Case
ಕರ್ನಾಟಕ57 mins ago

Prajwal Revanna Case: ಗಂಡ, ಮಗನ ಕೇಸ್‌ನಿಂದ ಭವಾನಿ ರೇವಣ್ಣಗೂ ಕಾನೂನು ಕಂಟಕ?

Boat Capsize
ವೈರಲ್ ನ್ಯೂಸ್1 hour ago

Boat Capsizes: ಜಲಾವೃತ ಸೇತುವೆಗೆ ದೋಣಿ ಡಿಕ್ಕಿ; ಶಾಕಿಂಗ್‌ ವಿಡಿಯೋ ವೈರಲ್‌

T20 World Cup 2024
ಕ್ರೀಡೆ1 hour ago

T20 World Cup 2024: ಟಿ20 ವಿಶ್ವಕಪ್​ಗೆ ಪಾಕ್​ ಉಗ್ರರಿಂದ ಭಯೋತ್ಪಾದಕ ದಾಳಿಯ ಎಚ್ಚರಿಕೆ

Megha Dhade bigg boss marathi winner crptic post about rahul gandhi
ಸಿನಿಮಾ2 hours ago

Megha Dhade: ನಮ್ಮ ದೇಶ ಬಿಟ್ಟು ನರಕಕ್ಕೆ ಹೋಗಿ ಎಂದು ರಾಹುಲ್‌ ಗಾಂಧಿ ವಿರದ್ಧ ʻಬಿಗ್‌ ಬಾಸ್‌ʼ ವಿಜೇತೆ ಆಕ್ರೋಶ!

Prajwal Revanna Case
ಕರ್ನಾಟಕ2 hours ago

Prajwal Revanna Case: ಎಚ್‌.ಡಿ.ರೇವಣ್ಣರಿಗೆ ಇಂದು ಜಾಮೀನು ಸಿಗುತ್ತಾ?

Sunil Narine
ಕ್ರೀಡೆ2 hours ago

Sunil Narine: ಅತ್ಯಧಿಕ ಸಿಕ್ಸರ್​ ಸಾಧಕರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಸುನೀಲ್​ ನರೈನ್

Ranjani Raghavan Starrer Sathyam Kannada Movie Gets UA Certificate
ಸ್ಯಾಂಡಲ್ ವುಡ್2 hours ago

Ranjani Raghavan: ರಂಜನಿ ರಾಘವನ್ ಸಿನಿಮಾದಲ್ಲಿ ಇರಲಿದೆ ಪಂಜುರ್ಲಿ ದೈವದ ಕಥೆ! ಬಿಡುಗಡೆ ಯಾವಾಗ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina bhavishya
ಭವಿಷ್ಯ6 hours ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ15 hours ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ17 hours ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ17 hours ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ2 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ3 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ3 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ4 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ4 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

ಟ್ರೆಂಡಿಂಗ್‌