Viral Video: ಇದು ಕೆನ್ನೆಗೆ ಮುತ್ತನ್ನಿಟ್ಟು ಮುದ್ದಾಡುವ ಬೆಕ್ಕು; ವೈರಲ್‌ ಆಗ್ತಿದೆ ಈ ವಿಡಿಯೊ - Vistara News

ವೈರಲ್ ನ್ಯೂಸ್

Viral Video: ಇದು ಕೆನ್ನೆಗೆ ಮುತ್ತನ್ನಿಟ್ಟು ಮುದ್ದಾಡುವ ಬೆಕ್ಕು; ವೈರಲ್‌ ಆಗ್ತಿದೆ ಈ ವಿಡಿಯೊ

ಬೆಕ್ಕೊಂದು ತನ್ನನ್ನು ಸಾಕಿದ ಯಜಮಾನನ ಕೆನ್ನೆಗೆ ಮುತ್ತನ್ನಿಡುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಆ ವಿಡಿಯೊ ವೈರಲ್‌ (Viral Video) ಆಗಿದೆ.

VISTARANEWS.COM


on

cat video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಾಯಿಗಳು ಸಾಕಿದವರ ಮೇಲೆ ಪ್ರೀತಿ ತೋರುತ್ತವೆ. ಆದರೆ ಬೆಕ್ಕುಗಳು ಹಾಗಲ್ಲ. ಅವುಗಳು ಯಾರ ಮೇಲೂ ಪ್ರೀತಿಯನ್ನು ತೋರಲು ಹೋಗುವುದಿಲ್ಲ. ಆದರೆ ಇಲ್ಲೊಂದು ಬೆಕ್ಕು ಮಾತ್ರ ತನ್ನನ್ನು ಸಾಕಿದವನಿಗೆ ಪ್ರೀತಿಯಿಂದ ಮುತ್ತನ್ನಿಡುತ್ತಿದೆ. ಈ ರೀತಿಯ ವಿಶೇಷ ದೃಶ್ಯವಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್‌ (Viral Video) ಆಗಿದೆ.

ರೆಡ್ಡಿಟ್‌ ಆಪ್‌ನಲ್ಲಿ ಇಂತದ್ದೊಂದು ವಿಡಿಯೊ ಹರಿದಾಡುತ್ತಿದೆ. ವ್ಯಕ್ತಿಯೊಬ್ಬ ಸೋಫಾದ ಮೇಲೆ ಮಲಗಿದ್ದಾನೆ. ಅವನ ಎದೆ ಮೇಲೆ ಕುಳಿತುಕೊಂಡಿರುವ ಬೆಕ್ಕು ನಿಧಾನವಾಗಿ ಆತನ ಕೆನ್ನೆಯ ಬಳಿ ಮುಖ ತಂದು, ಕೆನ್ನೆಗೆ ಮುತ್ತನ್ನು ಕೊಟ್ಟು ಹಿಂದ ಸರಿದುಕೊಳ್ಳುತ್ತದೆ. ಈ ದೃಶ್ಯವನ್ನು ಆ ವ್ಯಕ್ತಿ ವಿಡಿಯೊ ಮಾಡಿಕೊಂಡಿದ್ದು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾನೆ.

ಇದನ್ನೂ ಓದಿ: Viral Video: ಬಿಜೆಪಿ ‘ಭ್ರಷ್ಟಾಚಾರ’ ಪಟ್ಟಿ ಓದಲು ತಡಕಾಡಿದ ಪ್ರಿಯಾಂಕಾ ವಾದ್ರಾ; ಅಂಕಿ-ಅಂಶ ಹೇಳುವಾಗಲೂ ಎಡವಟ್ಟು

“ನನ್ನ ಪ್ರೀತಿಯ ಬೆಕ್ಕು ಯಾವಾಗಲೂ ಹೀಗೇ ಮಾಡುತ್ತದೆ. ಆದರೆ ಇದೇ ಮೊದಲನೇ ಬಾರಿಗೆ ನಾನು ಈ ದೃಶ್ಯವನ್ನು ವಿಡಿಯೊ ಮಾಡಿಕೊಂಡಿದ್ದೇನೆ” ಎಂದು ಕ್ಯಾಪ್ಶನ್‌ನಲ್ಲಿ ತಿಳಿಸಲಾಗಿದೆ. ಈ ವಿಡಿಯೊವನ್ನು ಒಂದು ದಿನದ ಮೊದಲು ಹಂಚಿಕೊಳ್ಳಲಾಗಿದೆ. ಅಂದಿನಿಂದ ಇಂದಿನವರೆಗೆ ವಿಡಿಯೊವನ್ನು ನೂರಾರು ಮಂದಿ ನೋಡಿದ್ದಾರೆ. 250ಕ್ಕೂ ಅಧಿಕ ಮಂದಿ ವಿಡಿಯೊಗೆ ಅಪ್‌ವೋಟ್‌ ಮಾಡಿದ್ದಾರೆ. ಹಾಗೆಯೇ ಹತ್ತಾರು ಮಂದಿ ವಿಡಿಯೊ ಬಗ್ಗೆ ಹಲವಾರು ರೀತಿಯ ಕಾಮೆಂಟ್‌ಗಳನ್ನು ಮಾಡಿದ್ದಾರೆ.

My cat gave me a kiss
by u/LuckSavings4495 in cat

“ನಮ್ಮ ಮನೆಯ ಬೆಕ್ಕು ನಮಗೆ ಪ್ರೀತಿಯನ್ನೇ ತೋರಿಸುವುದಿಲ್ಲ. ಸುಮ್ಮನೆ ಮೈಯೆಲ್ಲ ಪರಚುತ್ತದೆಯಷ್ಟೇ. ಆದರೆ ನೀವೆಷ್ಟು ಅದೃಷ್ಟವಂತರು. ಎಷ್ಟೊಂದು ಮುದ್ದಾಗಿ ಆ ಬೆಕ್ಕು ಮುತ್ತು ಕೊಡುತ್ತಿದೆ” ಎನ್ನುವ ಕಾಮೆಂಟ್‌ ಕೂಡ ವಿಡಿಯೊಗೆ ಬಂದಿವೆ. ಹಾಗೆಯೇ, “ವಾವ್‌”, “ಕ್ಯೂಟ್‌”, “ಸೂಪರ್‌” ಎನ್ನುವಂತಹ ಹಲವಾರು ಕಾಮೆಂಟ್‌ಗಳನ್ನು ಕಾಮೆಂಟ್‌ ವಿಭಾಗದಲ್ಲಿ ನೋಡಬಹುದಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

10 ರೂ.ಗಾಗಿ ಎಲ್ಲರ ಮುಂದೆ ಪ್ಯಾಂಟ್‌ ಬಿಚ್ಚಿ, ಆಟೋ ಡ್ರೈವರ್‌ ಮೇಲೆ ಮಂಗಳಮುಖಿ ಹಲ್ಲೆ; Video ಇಲ್ಲಿದೆ

ಇ-ರಿಕ್ಷಾದಿಂದ ಚಾಲಕನನ್ನು ಇಳಿಸಿ, ಆತನ ಕೊರಳಪಟ್ಟಿ ಹಿಡಿದು, ಎಳೆದಾಡಿ ಹಲ್ಲೆ ನಡೆಸಿದ್ದಾರೆ. ಇದೇ ವೇಳೆ, ಆಟೋ ಚಾಲಕನು ಕೂಡ ಮಂಗಳಮುಖಿಗೆ ಹೊಡೆದಿದ್ದಾನೆ. ಇದೇ ವೇಳೆ, ಮಂಗಳಮುಖಿಗೆ ಏನು ಅನಿಸಿತೋ ಏನೋ, ಕೂಡಲೇ ತಮ್ಮ ಪ್ಯಾಂಟ್‌ ಬಿಚ್ಚಿ, ಬೆತ್ತಲೆಯಾಗಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

VISTARANEWS.COM


on

Viral Video
Koo

ನವದೆಹಲಿ: ರೈಲುಗಳಲ್ಲಿ, ಬಸ್‌ ಸ್ಟ್ಯಾಂಡ್‌ಗಳು, ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ಮಂಗಳಮುಖಿಯರು (Transgenders) ಜನರಿಂದ 5-10 ರೂ. ಪಡೆಯುತ್ತಾರೆ. ಜನರೂ ಕರುಣೆ ತೋರಿಸಿ ಅವರಿಗೆ ಹಣ ನೀಡುತ್ತಾರೆ. ಕೆಲವೊಮ್ಮೆ ಕಾಡಿ-ಬೇಡಿ ಮಂಗಳಮುಖಿಯರು ಜನರಿಂದ ಹಣ ಪಡೆಯುತ್ತಾರೆ. ಇದರಿಂದ ಜಗಳಗಳೂ ನಡೆದಿರುವ ಉದಾಹರಣೆಗಳು ಇವೆ. ಇದಕ್ಕೆ ತಾಜಾ ನಿದರ್ಶನ ಎಂಬಂತೆ, ಮಂಗಳಮುಖಿಯೊಬ್ಬರು 10 ರೂ.ಗಾಗಿ ಎಲ್ಲರ ಮುಂದೆಯೇ ಪ್ಯಾಂಟ್‌ ಬಿಚ್ಚಿಕೊಂಡು, ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವಿಡಿಯೊ (Viral Video) ಈಗ ಭಾರಿ ವೈರಲ್‌ ಆಗಿದೆ.

ವ್ಯಕ್ತಿಯು ಇ-ರಿಕ್ಷಾವನ್ನು ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದು, ಈತನ ರಿಕ್ಷಾವನ್ನು ಮಂಗಳಮುಖಿ ಹತ್ತಿದ್ದಾರೆ. ಮಂಗಳಮುಖಿಯು ಇಳಿಯುವಾಗ ಎಂದಿನಂತೆ ಇ-ರಿಕ್ಷಾ ಚಾಲಕನು 10 ರೂ. ಬಾಡಿಗೆ ಕೊಡಿ ಎಂದಿದ್ದಾನೆ. ಇದರಿಂದ ಕುಪಿತಗೊಂಡ ಮಹಿಳೆಯು ಆತನ ಜತೆ ಜಗಳಕ್ಕೆ ನಿಂತಿದ್ದಾರೆ. ಯಾವುದೇ ಕಾರಣಕ್ಕೂ ಬಾಡಿಗೆ ಕೊಡುವುದಿಲ್ಲ ಎಂದು ಹೇಳುವ ಜತೆಗೆ ಬೈದಿದ್ದಾರೆ. ಇದಾದ ನಂತರ ಆಟೋ ಚಾಲಕನು ಕೂಡ ಗದರಿದ್ದಾನೆ. ಆಗ ಮಂಗಳಮುಖಿಯ ಕೋಪ ದ್ವಿಗುಣಗೊಂಡಿದೆ. ಕೂಡಲೇ ಆಟೋ ಚಾಲಕನ ಮೇಲೆ ದಾಳಿ ನಡೆಸಿದ್ದಾರೆ.‌ ಘಟನೆಯು ಎಲ್ಲಿ ನಡೆದಿದೆ ಎಂಬುದರ ಕುರಿತು ನಿಖರ ಮಾಹಿತಿ ಲಭ್ಯವಾಗಿಲ್ಲ.

ಇ-ರಿಕ್ಷಾದಿಂದ ಚಾಲಕನನ್ನು ಇಳಿಸಿ, ಆತನ ಕೊರಳಪಟ್ಟಿ ಹಿಡಿದು, ಎಳೆದಾಡಿ ಹಲ್ಲೆ ನಡೆಸಿದ್ದಾರೆ. ಇದೇ ವೇಳೆ, ಆಟೋ ಚಾಲಕನು ಕೂಡ ಮಂಗಳಮುಖಿಗೆ ಹೊಡೆದಿದ್ದಾನೆ. ಇದೇ ವೇಳೆ, ಮಂಗಳಮುಖಿಗೆ ಏನು ಅನಿಸಿತೋ ಏನೋ, ಕೂಡಲೇ ತಮ್ಮ ಪ್ಯಾಂಟ್‌ ಬಿಚ್ಚಿ, ಬೆತ್ತಲೆಯಾಗಿದ್ದಾರೆ. ಪ್ಯಾಂಟ್‌ ಬಿಚ್ಚಿ ಬೆತ್ತಲೆಯಾದ ಬಳಿಕವೂ ಅವರು ಮತ್ತೆ ಚಾಲಕನ ಮೇಳೆ ಹಲ್ಲೆ ನಡೆಸಿದ್ದಾರೆ. ಕೇವಲ 10 ರೂ.ಗಾಗಿ ಇಬ್ಬರೂ ರಸ್ತೆ ಮಧ್ಯೆ ಕಾದಾಡಿಕೊಂಡಿರುವ ವಿಡಿಯೊ ಭಾರಿ ಸದ್ದು ಮಾಡುತ್ತಿದೆ.

ವಿಡಿಯೊ ವೈರಲ್‌ ಆಗುತ್ತಲೇ ಹತ್ತಾರು ಅಭಿಪ್ರಾಯಗಳು ವ್ಯಕ್ತವಾಗಿವೆ. “ಆಟೋ ಚಾಲಕರು 10 ರೂ.ಗಾಗಿ ದುಡಿಯುತ್ತಾರೆ. ಮಂಗಳಮುಖಿಯರು ಅವರಿಗೆ ಬಾಡಿಗೆ ಕೊಡಬೇಕು. ಅವರು ಬೇಕಾದರೆ ಶ್ರೀಮಂತರ ಬಳಿ ಹಣ ಪಡೆಯಲಿ” ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ, “ಮಂಗಳಮುಖಿಯರು ಕೆಲಸ ಮಾಡುತ್ತೇವೆ ಎಂದರೆ ಯಾರೂ ಕೆಲಸ ಕೊಡಲ್ಲ. ಅವರಿಗೆ ಮಾನವೀಯತೆ ಆಧಾರದ ಮೇಲೆ ಜನ ನೆರವು ನೀಡಬೇಕು” ಎಂಬುದಾಗಿ ಹೇಳಿದ್ದಾರೆ. ಹೀಗೆ ಪರ-ವಿರೋಧಗಳ ಚರ್ಚೆಯಾಗಿದೆ.

ಇದನ್ನೂ ಓದಿ: Assault Case: ಸಾಲ ವಾಪಸ್‌ ಕೇಳಿದ್ದಕ್ಕೆ ಮಾರಣಾಂತಿಕ ಹಲ್ಲೆ ಮಾಡಿದ ಬಿಜೆಪಿ ಕಾರ್ಯಕರ್ತ

Continue Reading

ದೇಶ

Hathras Stampede: ಕಾಲ್ತುಳಿತದ ಬಳಿಕ ಕಾಲ್ಕಿತ್ತಿದ್ದ ಡೋಂಗಿ ಬಾಬಾ- ವೈರಲ್‌ ಆಯ್ತು ವಿಡಿಯೋ

Hathras Stampede:ಘಟನೆ ಬಳಿಕ ನಾರಾಯಣ ಸಾಕರ್‌ ಹರಿ ಅಲಿಯಾಸ್‌ ಭೋಲೆ ಬಾಬಾ ತನ್ನ ಬೆಂಬಲಿಗರೊಂದಿಗೆ ಸ್ಥಳದಿಂದ ಎಸ್ಕೇಪ್‌ ಆಗುತ್ತಿರುವ ದೃಶ್ಯ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ. ಈ ದೃಶ್ಯ ಪೆಟ್ರೋಲ್‌ ಪಂಪ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

VISTARANEWS.COM


on

Hatras Stampede
Koo

ಲಖನೌ: ಉತ್ತರಪ್ರದೇಶದ ಹತ್ರಾಸ್‌ನಲ್ಲಿ ನಡೆದ ಕಾಲ್ತುಳಿತ(Hathras Stampede) ದುರ್ಘಟನೆಗೆ ಸಂಬಂಧಿಸಿದ ಕೆಲವೊಂದು ಸಿಸಿಟಿವಿ ದೃಶ್ಯಾವಳಿಗಳು ಇದೀಗ ವೈರಲ್‌ ಆಗುತ್ತಿದೆ. ಅದರಲ್ಲಿ ಪ್ರಮುಖವಾಗಿ ಘಟನೆ ಬಳಿಕ ನಾರಾಯಣ ಸಾಕರ್‌ ಹರಿ ಅಲಿಯಾಸ್‌ ಭೋಲೆ ಬಾಬಾ(Bhole Baba) ತನ್ನ ಬೆಂಬಲಿಗರೊಂದಿಗೆ ಸ್ಥಳದಿಂದ ಎಸ್ಕೇಪ್‌ ಆಗುತ್ತಿರುವ ದೃಶ್ಯ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ. ಈ ದೃಶ್ಯ ಪೆಟ್ರೋಲ್‌ ಪಂಪ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನಾರಾಯಣ ಸಕಾರ್‌ ಹರಿ (Narayan Sakaar Hari) ಅಥವಾ ಸಕಾರ್‌ ವಿಶ್ವ ಹರಿ ಅಥವಾ ಭೋಲೆ ಬಾಬಾ (Bhole Baba) ಅವರು ಸತ್ಸಂಗ ನೆರವೇರಿಸಿದ ಬಳಿಕ ಉಂಟಾದ ಕಾಲ್ತುಳಿತವು ನೂರಾರು ಜನರ ಸಾವಿಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ತನಿಖೆ ಆರಂಭಿಸಿರುವ ಉತ್ತರ ಪ್ರದೇಶ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ಹಾಗೆಯೇ, ಪ್ರಮುಖ ಆರೋಪಿಯ ಕುರಿತು ಸುಳಿವು ನೀಡಿದವರಿಗೆ 1 ಲಕ್ಷ ರೂ. ಬಹುಮಾನವನ್ನೂ ಘೋಷಿಸಿದ್ದಾರೆ.

“ಹತ್ರಾಸ್‌ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಹಾಗೂ ನಾಲ್ವರು ಪುರುಷರು ಸೇರಿ ಒಟ್ಟು ಆರು ಮಂದಿಯನ್ನು ಇದುವರೆಗೆ ಬಂಧಿಸಲಾಗಿದೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆ ಮಾಡಲಾಗುತ್ತಿದೆ. ಇದುವರೆಗೆ 121 ಮಂದಿ ಮೃತಪಟ್ಟಿದ್ದು, ಎಲ್ಲರ ಶವಗಳನ್ನು ಗುರುತಿಸಲಾಗಿದೆ. ಮರಣೋತ್ತರ ಪರೀಕ್ಷೆ ಪ್ರಕ್ರಿಯೆಯೂ ಮುಕ್ತಾಯಗೊಂಡಿದೆ” ಎಂದು ಅಲಿಗಢ ಐಜಿ ಶಾಲಾಭ್‌ ಮಾಥುರ್‌ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಘಟನೆ ಬಳಿಕ ನಾಪತ್ತೆಯಾಗಿದ್ದ ಭೋಲೆ ಬಾಬಾ ನಂತರ ಪ್ರತ್ಯಕ್ಷರಾಗಿದ್ದು, “ನಾನು ಸತ್ಸಂಗ ಮುಗಿಸಿ ತೆರಳಿದ ಬಳಿಕ ಘಟನೆ ನಡೆದಿದೆ. ಇದು ಸಮಾಜಘಾತುಕ ಶಕ್ತಿಗಳ ಕೃತ್ಯ” ಎಂದಿದ್ದಾರೆ. ಕಾಲ್ತುಳಿತದ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರವು ಎಸ್‌ಐಟಿ ರಚಿಸಿದೆ.

ಹತ್ರಾಸ್‌ ಕಾಲ್ತುಳಿತ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿದ್ದು, ಈಗಾಗಲೇ ಮೃತರ ಸಂಬಂಧಿಕರಿಗೆ ರಾಜ್ಯ ಸರ್ಕಾರ ತಲಾ 2 ಲಕ್ಷ ರೂ., ಕೇಂದ್ರ ಸರ್ಕಾರ ತಲಾ 2 ಲಕ್ಷ ರೂ. ಘೋಷಿಸಿದೆ. ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ತನಿಖೆಗಾಗಿ ಎಸ್‌ಐಟಿಯನ್ನೂ ರಚಿಸಲಾಗಿದೆ. ಮತ್ತೊಂದೆಡೆ, ನೂರಾರು ಜನರ ಸಾವಿನ ಬಳಿಕ ಭೋಲೆ ಬಾಬಾ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:BJP Muslim Candidate: ಉತ್ತರ ಪ್ರದೇಶದಲ್ಲಿ ಮೊದಲ ಬಾರಿಗೆ ಮುಸ್ಲಿಂ ಅಭ್ಯರ್ಥಿಗೆ ಬಿಜೆಪಿ ಟಿಕೆಟ್? ಏನಿದರ ಗುಟ್ಟು?

Continue Reading

Latest

Viral Video: ನೀರು ತುಂಬಿದ್ದ ರಸ್ತೆ ಗುಂಡಿಗೆ ಬಿದ್ದ ಬಾಲಕಿ; ಜೀವ ಉಳಿಸಿದ ಹುಡುಗ

Viral Video: ಮಧ್ಯಪ್ರದೇಶದ ಇಂದೋರ್‌ನಲ್ಲಿ ಭಾರೀ ಮಳೆಯ ಕಾರಣ ಅಲ್ಲಲ್ಲಿ ರಸ್ತೆ ಹಾಳಾಗಿತ್ತು. ಅದನ್ನು ರಿಪೇರಿ ಮಾಡದೇ ರಸ್ತೆ ಪ್ರಾಧಿಕಾರ ಕೂಡ ನಿರ್ಲಕ್ಷ್ಯ ತೋರಿತ್ತು. ಇದು ಬಾಲಕಿಯೊಬ್ಬಳ ಜೀವವನ್ನೇ ಅಪಾಯದಂಚಿಗೆ ದೂಡಿದ ಘಟನೆ ಇದು. ಇಂದೋರ್‌ನ ಅಮ್ಮರ್ ನಗರದಲ್ಲಿ ರಸ್ತೆ ದಾಟಲು ಪ್ರಯತ್ನಿಸುವಾಗ ಹನ್ನೆರಡು ವರ್ಷದ ಬಾಲಕಿಯೊಬ್ಬಳು 4 ಅಡಿ ಆಳದ ನೀರಿನ ಗುಂಡಿಗೆ ಬಿದ್ದಿದ್ದಾಳೆ. ನಂತರ ನೀರಿನಲ್ಲಿ ಒದ್ದಾಡುತ್ತಿದ್ದ ಬಾಲಕಿಯನ್ನು ಅಲ್ಲಿಗೆ ಬಂದ ಹುಡುಗನೊಬ್ಬ ಕಾಪಾಡಿದ್ದಾನೆ. ಈ ವಿಡಿಯೊ ಸಿಸಿಟಿವಿಯಲ್ಲಿ ಸೆರೆಯಾಗಿದೆ.

VISTARANEWS.COM


on

Viral Video
Koo

ಇಂದೋರ್: ಮಳೆಗಾಲದಲ್ಲಿ ರಸ್ತೆಗಳಲ್ಲಿ ಹೊಂಡಗಳ ಸಮಸ್ಯೆ ಸಾಮಾನ್ಯ ಎನ್ನುವಂತಾಗಿದೆ. ರಸ್ತೆಗಳಲ್ಲಿ ಅಲ್ಲಲ್ಲಿ ಹೊಂಡಗಳು, ಚರಂಡಿಗಳನ್ನು ತೆರೆದಿಡುವುದರಿಂದ ಮಳೆಗಾಲದಲ್ಲಿ ಪ್ರಾಣಕ್ಕೇ ಕುತ್ತು ಬರುವಂತಾಗುತ್ತದೆ. ಇದೀಗ ಅಂತಹದೊಂದು ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಮಧ್ಯಪ್ರದೇಶದ ಇಂದೋರ್‌ನಲ್ಲಿ ಭಾರೀ ಮಳೆಯ ಕಾರಣ ಅಲ್ಲಲ್ಲಿ ರಸ್ತೆ ಹಾಳಾಗಿತ್ತು. ಅದನ್ನು ರಿಪೇರಿ ಮಾಡದೇ ರಸ್ತೆ ಪ್ರಾಧಿಕಾರ ಕೂಡ ನಿರ್ಲಕ್ಷ್ಯ ತೋರಿತ್ತು. ಇದು ಬಾಲಕಿಯೊಬ್ಬಳ ಜೀವವನ್ನೇ ಅಪಾಯದಂಚಿಗೆ ದೂಡಿದ ಸನ್ನಿವೇಶವದು. ಇಂದೋರ್‌ನ ಅಮ್ಮರ್ ನಗರದಲ್ಲಿ ರಸ್ತೆ ದಾಟಲು ಪ್ರಯತ್ನಿಸುವಾಗ ಹನ್ನೆರಡು ವರ್ಷದ ಬಾಲಕಿಯೊಬ್ಬಳು 4 ಅಡಿ ಆಳದ ನೀರಿನ ಗುಂಡಿಗೆ ಬಿದ್ದಿದ್ದಾಳೆ. ನಂತರ ನೀರಿನಲ್ಲಿ ಒದ್ದಾಡುತ್ತಿದ್ದ ಬಾಲಕಿಯನ್ನು ಅಲ್ಲಿಗೆ ಬಂದ ಹುಡುಗನೊಬ್ಬ ಕಾಪಾಡಿದ್ದಾನೆ. ಈ ವಿಡಿಯೊ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬಾಲಕಿ ಅಜ್ಜಿಯ ಜೊತೆಗೆ ರಸ್ತೆ ದಾಟಲು ಮುಂದಾಗಿದ್ದಾಳೆ. ಅಜ್ಜಿ ಮುಂದೆ ಹೋಗಿದ್ದು, ಹಿಂದಿನಿಂದ ಬಂದ ಹುಡುಗಿ ರಸ್ತೆಯಲ್ಲಿ ಸಣ್ಣ ಹೊಂಡವೆಂದು ನೀರಿಗೆ ಕಾಲಿಡಲು ಪ್ರಯತ್ನಿಸಿದ್ದಾಳೆ. ಆಗ ಬ್ಯಾಲೆನ್ಸ್ ತಪ್ಪಿ ಬಾಲಕಿ 4 ಅಡಿ ಆಳದ ನೀರಿನ ಗುಂಡಿಗೆ ಬಿದ್ದಿದ್ದಾಳೆ. ಆಕೆ ಮುಳುಗಿ ನಂತರ ಸಮತೋಲನ ಮಾಡಿ ಗುಂಡಿಯ ಬದಿಗೆ ಬಂದಿದ್ದಾಳೆ. ಆಕೆ ಗುಂಡಿಯಿಂದ ಹೊರಗೆ ಬರಲು ಹೆಣಗಾಡುತ್ತಿರುವಾಗ ಅಲ್ಲಿಗೆ ಬಂದ ಹುಡುಗನೊಬ್ಬ ಆಕೆಯನ್ನು ಮೇಲಕ್ಕೆ ಎತ್ತಿದ್ದಾನೆ. ಇದರಿಂದ ಆಕೆಯ ಜೀವ ಉಳಿದಿದೆ.

ಇದನ್ನೂ ಓದಿ: ಹೆಂಡತಿಯನ್ನು ಯಾಮಾರಿಸಿ ಪ್ರೇಯಸಿಯನ್ನು ಮನೆಗೆ ಕರೆಸಬಾರದಿತ್ತು! ಗೂಸಾ ತಿಂದವನ ಪ್ರತಿಕ್ರಿಯೆ!

ಮಾಹಿತಿಯ ಪ್ರಕಾರ, ನಿರ್ಮಾಣ ಕಾರ್ಯಕ್ಕಾಗಿ ರಸ್ತೆ ಪ್ರಾಧಿಕಾರದ ಅಧಿಕಾರಿಗಳು ಗುಂಡಿಯನ್ನು ಅಗೆದಿದ್ದರು ಆದರೆ ಅದನ್ನು ಮುಚ್ಚದೆ ಹಾಗೇ ಬಿಟ್ಟಿದ್ದರು. ಅದು ಮಳೆಯ ಸಮಯದಲ್ಲಿ ತುಂಬಿದ್ದರಿಂದ ಈ ಘಟನೆ ಸಂಭವಿಸಿದೆ. ಚಂದನ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅಮ್ಮರ್ ನಗರದ ವಾರ್ಡ್ ನಂ.1ರಲ್ಲಿ ಜೂನ್ 29ರಂದು ಈ ಘಟನೆ ನಡೆದಿದೆ. ಇಡೀ ಘಟನೆಯನ್ನು ಅಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ಅದು ಬುಧವಾರ ವೈರಲ್ ಆಗಿದೆ. ಆದರೆ ಈ ಘಟನೆಯ ಬಗ್ಗೆ ಯಾವುದೇ ಮಾಹಿತಿ ಅಥವಾ ದೂರು ದಾಖಲಾಗಿಲ್ಲ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.

Continue Reading

Latest

Viral Video: ಬುಲೆಟ್‌ ಮೇಲೆ ಬಂದ ಹುಡುಗಿ ಆಟೊ ಚಾಲಕನ ಬುರುಡೆ ಒಡೆದಳು!

Viral Video: ದೆಹಲಿಯ ನಿಹಾಲ್ ವಿಹಾರ್‌ ರಸ್ತೆಯೊಂದರಲ್ಲಿ ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ಆಟೋ ಚಾಲಕ ಟ್ರಾಫಿಕ್‌ನಿಂದಾಗಿ ತನ್ನ ವಾಹನವನ್ನು ನಿಲ್ಲಿಸಿದಾನೆ. ಆಗ ಹಿಂದೆ ಬುಲೆಟ್‌ನಲ್ಲಿ ಬಂದ ಯುವತಿ ಆಟೋ ಚಾಲಕನಿಗೆ ಹಾರ್ನ್ ಮಾಡಿದ್ದಾಳೆ. ಆದರೆ ಆತನಿಗೆ ವಾಹನವೊಂದು ರಸ್ತೆಗೆ ತಡಲಾಗಿ ನಿಂತಿದ್ದರಿಂದ ತನ್ನ ಆಟೋವನ್ನು ಮುಂದೆ ಸಾಗಿಸಲು ಸಾಧ್ಯವಾಗಲಿಲ್ಲ. ನಂತರ ಯುವತಿ ತಾಳ್ಮೆ ಕಳೆದುಕೊಂಡು ಆಟೊ ಚಾಲಕನೊಂದಿಗೆ ಗಲಾಟೆಗೆ ಇಳಿದಿದ್ದಾಳೆ, ಆಟೋ ಚಾಲಕನ ಮೇಲೆ ಕಬ್ಬಿಣದ ಉಪಕರಣದಿಂದ ಹಲ್ಲೆ ಮಾಡಿದ್ದಾಳೆ.

VISTARANEWS.COM


on

Viral Video
Koo

ಟ್ರಾಫಿಕ್ ಸಮಸ್ಯೆ ಎಲ್ಲೆಂದರಲ್ಲಿ ಕಂಡುಬರುವುದು ಸಾಮಾನ್ಯ. ಕೆಲವೊಂದು ಕಡೆ ರಸ್ತೆಗಳ ಸಮಸ್ಯೆಯಿಂದಾಗಿ ವಾಹನಗಳು ಮುಂದೆ ಚಲಾಯಿಸಲಾಗದೆ ಗಂಟೆಗಟ್ಟಲೆ ಅಲ್ಲೇ ನಿಂತು ಕಾಯುವಂತಾಗುತ್ತದೆ. ಇದರಿಂದ ಕೆಲಸಕ್ಕೆ ಹೋಗುವವರು, ಶಾಲಾ ಮಕ್ಕಳಿಗೆ ತುಂಬಾ ಸಮಸ್ಯೆಯಾಗುತ್ತದೆ. ದೆಹಲಿ, ಬೆಂಗಳೂರಿನಂತಹ ಸಿಟಿಗಳಲ್ಲಿ ಈ ಸಮಸ್ಯೆ ಸಾಮಾನ್ಯ. ಇದೀಗ ಇಂತಹ ಟ್ರಾಫಿಕ್‌ನಿಂದಾಗಿ ರೊಚ್ಚಿಗೆದ್ದ ಯುವತಿಯೊಬ್ಬಳು ಆಟೋ ಚಾಲಕನ ಮೇಲೆ ಕಬ್ಬಿಣದ ಉಪಕರಣದಿಂದ ಹಲ್ಲೆ ಮಾಡಿದ ಘಟನೆ ದೆಹಲಿಯ ನಿಹಾಲ್ ವಿಹಾರ್‌ನಲ್ಲಿ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದ ಪೋಸ್ಟ್ ಆಗಿದ್ದು, ಸಖತ್ ವೈರಲ್ (Viral Video) ಆಗಿ ಚರ್ಚೆಗೆ ಕಾರಣವಾಗಿದೆ.

ದೆಹಲಿಯ ನಿಹಾಲ್ ವಿಹಾರ್‌ನ ರಸ್ತೆಯೊಂದರಲ್ಲಿ ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ಆಟೋ ಚಾಲಕ ಟ್ರಾಫಿಕ್‍ನಿಂದಾಗಿ ತನ್ನ ವಾಹನವನ್ನು ನಿಲ್ಲಿಸಿದಾನೆ. ಆಗ ಹಿಂದೆ ಬುಲೆಟ್‍ನಲ್ಲಿ ಬಂದ ಯುವತಿ ಆಟೋ ಚಾಲಕನಿಗೆ ಹಾರ್ನ್ ಮಾಡಿದ್ದಾಳೆ. ಆದರೆ ಆತನಿಗೆ ವಾಹನವೊಂದು ರಸ್ತೆಗೆ ತಡಲಾಗಿ ನಿಂತಿದ್ದರಿಂದ ತನ್ನ ಆಟೋವನ್ನು ಮುಂದೆ ಸಾಗಿಸಲು ಸಾಧ್ಯವಾಗಲಿಲ್ಲ. ನಂತರ ಯುವತಿ ತಾಳ್ಮೆ ಕಳೆದುಕೊಂಡು ಆಟೊ ಚಾಲಕನೊಂದಿಗೆ ಗಲಾಟೆಗೆ ಇಳಿದಿದ್ದಾಳೆ, ನಂತರ ಕೋಪಗೊಂಡು ಕಬ್ಬಿಣದ ಉಪಕರಣದಿಂದ ಆಟೋ ಚಾಲಕನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾಳೆ. ಇದರಿಂದ ಆತನ ತಲೆಗೆ ಗಾಯವಾಗಿ ರಕ್ತ ಸೋರಿದೆ.

ವಿಡಿಯೊದಲ್ಲಿ ಯುವತಿ ಕಬ್ಬಿಣದ ಉಪಕರಣದಿಂದ ಆಟೋ ಚಾಲಕನನ್ನು ಅಟ್ಟಾಡಿಸಿಕೊಂಡು ಹೊಡೆಯುವುದನ್ನು ಕಾಣಬಹುದು. ಅಲ್ಲಿದ್ದವರು ಆಕೆಯನ್ನು ತಡೆದರೂ ಕೇಳದ ಯುವತಿ ಮತ್ತೆ ಆತನಿಗೆ ಹೊಡೆದಿದ್ದಾಳೆ. ಚಾಲಕನ ತಲೆಯಲ್ಲಿ ರಕ್ತ ಸೋರುತ್ತಿರುವುದು ಕಂಡುಬಂದಿದೆ. ಇಷ್ಟಾದರೂ ಯುವತಿ ವಾಗ್ದಾಳಿ ನಡೆಸುವುದನ್ನು ನಿಲ್ಲಿಸಿಲ್ಲ. ಈ ಘಟನೆಯನ್ನು ನೋಡುಗರು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದು ಜನರ ಗಮನ ಸೆಳೆದಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ನಡುರಸ್ತೆಯಲ್ಲೇ ಕಳ್ಳರು ಬ್ಯಾಗ್‌ ಕಸಿದು ಓಡುತ್ತಾರೆ! ಪೋಲಿಸ್ರು ಏನ್‌ ಮಾಡ್ತಿದ್ದಾರೋ!

ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ರಸ್ತೆ ಶಿಷ್ಟಾಚಾರ, ಸುರಕ್ಷತೆ ಮತ್ತು ಅಂತಹ ಘರ್ಷಣೆಗಳನ್ನು ತಡೆಗಟ್ಟುವಲ್ಲಿ ಕಾನೂನು ಜಾರಿಯ ಪಾತ್ರದ ಬಗ್ಗೆ ಜನರು ಚರ್ಚೆ ಮಾಡಿದ್ದಾರೆ. ದೆಹಲಿಯಂತಹ ಮೆಟ್ರೋಪಾಲಿಟನ್ ಪ್ರದೇಶಗಳಲ್ಲಿ ರಸ್ತೆ ಮೂಲಸೌಕರ್ಯಗಳಲ್ಲಿ ಸಮಸ್ಯೆ ಎದುರಿಸುತ್ತಿರುವುದನ್ನು ಕಂಡು ಆಶ್ವರ್ಯವಾಗಿದೆ. ಕಿಕ್ಕಿರಿದ ರಸ್ತೆಗಳಲ್ಲಿ ಸಂಚರಿಸುವಾಗ ಸುರಕ್ಷತೆ ಮತ್ತು ಪರಸ್ಪರ ಗೌರವಕ್ಕೆ ಆದ್ಯತೆ ನೀಡುವಂತೆ ಚಾಲಕರಿಗೆ ಮನದಟ್ಟು ಮಾಡಲಾಗಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ತಡೆಯಲು ರಸ್ತೆ ಸುರಕ್ಷತೆ ಮತ್ತು ಜವಾಬ್ದಾರಿಯುತ ಚಾಲನೆಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಗಳು ನಡೆಯಬೇಕಿದೆ ಎಂದು ಹೇಳಲಾಗಿದೆ.

Continue Reading
Advertisement
Paris Olympics 2024
ಕ್ರೀಡೆ3 mins ago

Paris Olympics 2024: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ದೇಶದ ಕ್ರೀಡಾಪಟುಗಳ ಶ್ರೇಷ್ಠ ಪ್ರದರ್ಶನ; ಮೋದಿ ವಿಶ್ವಾಸ

Prajwal Devaraj New Movie Rakshasa
ಸ್ಯಾಂಡಲ್ ವುಡ್10 mins ago

Prajwal Devaraj: ಮೊದಲ ಬಾರಿಗೆ ಹಾರರ್ ಸಿನಿಮಾದಲ್ಲಿ ಡೈನಾಮಿಕ್‌ ಪ್ರಿನ್ಸ್ `ಪ್ರಜ್ವಲ್ ದೇವರಾಜ್`

Hathras Stampede
ದೇಶ26 mins ago

Hathras Stampede: ಇಂದು ಹತ್ರಾಸಕ್ಕೆ ರಾಹುಲ್‌ ಗಾಂಧಿ; ಕಾಲ್ತುಳಿತ ಸಂತ್ರಸ್ತರ ಭೇಟಿ

Sleep Apnea
ಆರೋಗ್ಯ27 mins ago

Sleep Apnea: ಗೊರಕೆಯೆಂದು ನಿರ್ಲಕ್ಷಿಸಬೇಡಿ, ಇದು ಜೀವಕ್ಕೂ ಎರವಾದೀತು!

Job Interview
Latest27 mins ago

Job Interview: ಉದ್ಯೋಗ ಸಂದರ್ಶನವನ್ನು ಹೇಗೆ ಎದುರಿಸಬೇಕು? ಈ ಟಿಪ್ಸ್‌ ಫಾಲೋ ಮಾಡಿ

chemicals in food
ಕೋಲಾರ34 mins ago

Chemicals in Food: ಕ್ಯಾನ್ಸರ್​ ಕಾರಕ ಅಂಶವಿರುವ ರಾಸಾಯನಿಕ ಕಲರ್ ಬಳಸಿದ ಸ್ವೀಟ್​ ವಶಕ್ಕೆ

dengue fever hassan news
ಹಾಸನ55 mins ago

Dengue Fever: ಹಾಸನದಲ್ಲಿ ಶಂಕಿತ ಡೆಂಗ್ಯು ಜ್ವರದಿಂದ ನಾಲ್ಕನೇ ಬಾಲಕಿ ಬಲಿ

Hot Corn Recipe
ಆಹಾರ/ಅಡುಗೆ1 hour ago

Hot Corn Recipe: ಮಳೆಗಾಲದಲ್ಲಿ ಬಿಸಿಬಿಸಿಯಾದ ಜೋಳವನ್ನು ಮನೆಯಲ್ಲೇ ಮಾಡುವುದು ಹೇಗೆ?

karnataka Weather Forecast Rain
ಮಳೆ2 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ; ಇಲ್ಲೆಲ್ಲ ಕಾದಿದೆ ಗಂಡಾಂತರ

Vastu Tips
ಧಾರ್ಮಿಕ2 hours ago

Vastu Tips: ಉದ್ಯೋಗದಲ್ಲಿ ಪ್ರಗತಿ ಸಾಧಿಸಬೇಕೆ? ಹೀಗೆ ಮಾಡಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast Rain
ಮಳೆ2 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ; ಇಲ್ಲೆಲ್ಲ ಕಾದಿದೆ ಗಂಡಾಂತರ

karnataka Weather Forecast
ಮಳೆ14 hours ago

Karnataka Weather : ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

karnataka Rain
ಮಳೆ16 hours ago

Karnataka Rain : ಮಳೆಗೆ ಜಾರಿ ಮುಖಾಮುಖಿ ಡಿಕ್ಕಿಯಾದ ಲಾರಿಗಳು; ಕಾರಿನ ಮೇಲೆ ಬಿದ್ದ ಬೃಹತ್‌ ಮರ

wild animal attack
ಬೆಂಗಳೂರು ಗ್ರಾಮಾಂತರ17 hours ago

Wild Animal Attack : ಮಾಗಡಿಯಲ್ಲಿ ರೈತನ ತಲೆ ಬಗೆದ ಕರಡಿ; ಮಲೆನಾಡಿನಲ್ಲಿ ಆನೆಗಳ ಹಾವಳಿ

Chikkaballapura News
ಚಿಕ್ಕಬಳ್ಳಾಪುರ18 hours ago

Chikkaballapura News : ಒಂದು ವರ್ಷದ ಮಗು ಬಿಟ್ಟು ಕ್ಷಣಾರ್ಧದಲ್ಲಿ ತಾಯಿ ಎಸ್ಕೇಪ್!

karnataka Rain
ಮಳೆ19 hours ago

Karnataka Rain : ಧಾರಾಕಾರ ಮಳೆಗೆ ಗುಡ್ಡ ಕುಸಿತ; ಹೊನ್ನಾವರ-ಬೆಂಗಳೂರು ಹೆದ್ದಾರಿ ಬಂದ್

Karnataka Rain
ಮಳೆ20 hours ago

Karnataka Rain : ಉಕ್ಕಿ ಹರಿದ ಚಂಡಿಕಾ ಹೊಳೆಯಲ್ಲಿ ಸಿಲುಕಿಕೊಂಡ ಬಸ್‌; ಪ್ರಯಾಣಿಕರು ಕಂಗಾಲು

Tornado Effect in Udupi
ಉಡುಪಿ21 hours ago

Tornado Effect : ಉಡುಪಿಯ ರಟ್ಟಾಡಿಯಲ್ಲಿ ಭಾರಿ ಶಬ್ದದೊಂದಿಗೆ ಅಪ್ಪಳಿಸಿದ ಸುಂಟರಗಾಳಿ

karnataka weather Forecast
ಮಳೆ3 days ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ4 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ಟ್ರೆಂಡಿಂಗ್‌