Viral Video : ನ್ಯೂಯಾರ್ಕ್‌ನಲ್ಲಿ ಮಿಂಚಿತು ಕಿಶೋರ್‌ ಕುಮಾರ್‌ ಅವರ ನೀಲಿ ನೀಲಿ ಅಂಬರ್‌ ಹಾಡು! ವೈರಲ್‌ ಆಯ್ತು ವಿಡಿಯೊ Vistara News
Connect with us

ವೈರಲ್ ನ್ಯೂಸ್

Viral Video : ನ್ಯೂಯಾರ್ಕ್‌ನಲ್ಲಿ ಮಿಂಚಿತು ಕಿಶೋರ್‌ ಕುಮಾರ್‌ ಅವರ ನೀಲಿ ನೀಲಿ ಅಂಬರ್‌ ಹಾಡು! ವೈರಲ್‌ ಆಯ್ತು ವಿಡಿಯೊ

ನ್ಯೂಯಾರ್ಕ್‌ನಲ್ಲಿ ಬಾಲಿವುಡ್‌ನ ಕಿಶೋರ್‌ ಕುಮಾರ್‌ ಅವರ ಹಾಡೊಂದನ್ನು ಭಾರತ ಮೂಲದ ಕಲಾವಿದ ಹಾಗೂ ಅಮೆರಿಕದ ಕಲಾವಿದ ಹಾಡಿದ್ದಾರೆ. ಆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು (Viral Video) ಮಾಡುತ್ತಿದೆ.

VISTARANEWS.COM


on

Koo

ನ್ಯೂಯಾರ್ಕ್‌: ನಮ್ಮ ದೇಶದ ಹಾಡುಗಳೇ ಚಂದ. ಅದರಲ್ಲೂ ಆ ಹಾಡುಗಳನ್ನು ವಿದೇಶಿ ನೆಲದಲ್ಲಿ ಕೇಳುವುದೆಂದರೆ ಅದೊಂದು ಅದ್ಭುತವಿದ್ದಂತೇ ಸರಿ. ಹಾಗೆಯೇ ಬಾಲಿವುಡ್‌ನ ಮಾಂತ್ರಿಕ ಗಾಯಕ ಕಿಶೋರ್‌ ಕುಮಾರ್‌ ಅವರ ಹಾಡೊಂದು ಇತ್ತೀಚೆಗೆ ಅಮೆರಿಕದ ನ್ಯೂಯಾರ್ಕ್‌ನ ನಗರದ ಸಾರ್ವಜನಿಕ ಸ್ಥಳದಲ್ಲಿ ಕೇಳಿಬಂದಿದೆ. ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral Video) ಆಗಿದೆ.

ನ್ಯೂಯಾರ್ಕ್‌ನ ಯೂನಿಯನ್‌ ಸ್ಕ್ವೇರ್‌ ಪಾರ್ಕ್‌ ಬಳಿ ರೆಜ್ಜಿ ಹೆಸರಿನ ಗಿಟಾರ್‌ ಕಲಾವಿದ ಗಿಟಾರ್‌ ನುಡಿಸುತ್ತಿರುತ್ತಾರೆ. ʼಸಿಂಗ್‌ ವಿತ್‌ ಮಿ ಫಾರ್‌ ಫ್ರೀʼ ಎನ್ನುವ ವಿಶೇಷ ಪ್ರಯತ್ನವನ್ನು ಅವರು ಮಾಡುತ್ತಿರುತ್ತಾರೆ. ಅಲ್ಲಿರುವ ಜನರನ್ನು ಕರೆಸಿಕೊಂಡು, ಅವರಿಂದಲೇ ಹಾಡು ಹಾಡಿಸಿ, ಅದಕ್ಕೆ ಗಿಟಾರ್‌ ನುಡಿಸುವ ಪ್ರಯತ್ನ ಅದಾಗಿರುತ್ತದೆ.

ಇದನ್ನೂ ಓದಿ: Viral Post: ಸಾಮಾಜಿಕ ಜಾಲತಾಣದಲ್ಲಿ ಕೋಟಿಗಟ್ಟಲೆ ದುಡಿಯುವ ನಾಯಿಯಿದು!
ಹೀಗೆ ಕಾರ್ಯಕ್ರಮ ನಡೆಯುತ್ತಿರುವಾಗ ಅಲ್ಲಿ ಭಾರತದ ದೆಹಲಿಯವರಾದ ಲಕ್ಷ್‌ ಹೋಗುತ್ತಾರೆ. ಅವರನ್ನು ಕಂಡೊಡನೆ ರೆಜ್ಜಿ ಅವರನ್ನು ಕರೆದು, ಹಾಡು ಹೇಳಿ ಎಂದು ಹೇಳುತ್ತಾರೆ. ಲಕ್ಷ್‌ ಮೊದಲಿಗೆ ಸ್ವಲ್ಪ ಗಾಬರಿಯಾಗುತ್ತಾರಾದರೂ ರೆಜ್ಜಿ ತನಗೆ ಹಿಂದಿ ಹಾಡುಗಳು ಗೊತ್ತು ಎಂದು ಹೇಳಿದಾಗ ಹಾಡು ಹೇಳುವ ಧೈರ್ಯ ಮಾಡುತ್ತಾರೆ. ಹಾಗೆಯೇ ಬಾಲಿವುಡ್‌ನ ನೀಲಿ ನೀಲಿ ಅಂಬರ್‌ ಹಾಡನ್ನು ಹಾಡಲು ಮುಂದಾಗುತ್ತಾರೆ.


ಕಿಶೋರ್‌ ಕುಮಾರ್‌ ಅವರ ಹಾಡು ಎಂದು ತಿಳಿದ ತಕ್ಷಣ ರೆಜ್ಜಿ ಕಿಶೋರ್‌ ಕುಮಾರ್‌ ಬಗ್ಗೆ ತನಗೆ ಗೊತ್ತು ಎಂದು ಹೇಳುತ್ತಾರೆ. ಅವರು ಬಾಲಿವುಡ್‌ನ ಲೆಜೆಂಡ್‌ ಎಂದು ಬಣ್ಣಿಸುತ್ತಾರೆ. ನಂತರ ಇಬ್ಬರೂ ಸೇರಿಕೊಂಡು ಹಾಡು ಹಾಡಿ, ಅದಕ್ಕೆ ಗಿಟಾರ್‌ ನುಡಿಸುತ್ತಾರೆ.

ಇದನ್ನೂ ಓದಿ: Viral News : ನಿತ್ಯ ಶಾಪಿಂಗ್‌ಗೆಂದೇ 70 ಲಕ್ಷ ರೂ. ಖರ್ಚು ಮಾಡುತ್ತಾಳಂತೆ ಈ ಮಹಿಳೆ!
ಈ ಸುಂದರ ದೃಶ್ಯವಿರುವ ವಿಡಿಯೊವನ್ನು ರೆಜ್ಜಿ ತನ್ನ ಯೂಟ್ಯೂಬ್‌ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊವನ್ನು ತಿಂಗಳ ಹಿಂದೆ ಹಂಚಿಕೊಳ್ಳಲಾಗಿದ್ದು, ವಿಡಿಯೊ ಭಾರೀ ವೈರಲ್‌ ಆಗಿದೆ. ಇಂದಿಗೂ ಅನೇಕ ಜನರು ವಿಡಿಯೊಗೆ ಲೈಕ್‌, ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. “ಇಬ್ಬರು ಅದ್ಭುತ ಪ್ರತಿಭೆಗಳು ಒಟ್ಟಾಗಿ ಹಾಡು ಹಾಡಿವೆ” ಎಂದು ಕಾಮೆಂಟ್‌ಗಳು ಬಂದಿವೆ. ಹಾಡನ್ನು ಹಾಡಿರುವ ಲಕ್ಷ್‌ ಕೂಡ ವಿಡಿಯೊಗೆ ಕಾಮೆಂಟ್‌ ಮಾಡಿದ್ದು, ಹಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ರೆಜ್ಜಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಹಾಗೆಯೇ ಅದನ್ನು ವಿಡಿಯೊ ಮಾಡಿ ಅದ್ಭುತ ಅನುಭವವನ್ನು ನೆನಪಿನಲ್ಲಿಟ್ಟಿಕೊಳ್ಳುವಂತೆ ಮಾಡಿದ್ದಕ್ಕೂ ಕೃತಜ್ಞತೆ ತಿಳಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ

ಕರ್ನಾಟಕ

VISTARA TOP 10 NEWS: ನಾಳೆ ಬೆಂಗಳೂರು ಬಂದ್‌, ಶುಕ್ರವಾರ ಕರ್ನಾಟಕ ಬಂದ್‌, ಎಐಎಡಿಎಂಕೆ-ಬಿಜೆಪಿ ಮೈತ್ರಿಯೂ ಬಂದ್‌

VISTARA TOP 10 NEWS : ನಾಳೆ ಬೆಂಗಳೂರು ಬಂದ್‌, ಶುಕ್ರವಾರ ಕರ್ನಾಟಕ ಬಂದ್‌, ತಮಿಳುನಾಡಿನಲ್ಲಿ ಬಿಜೆಪಿ-ಎಐಎಡಿಎಂಕೆ ಬಂದ್‌! ಇನ್ನು ಪ್ರಧಾನಿ ಮೋದಿ ಅವರು ಅ. 1ರಂದು ಎಲ್ಲರೂ ಸೇರಿ ಕಸ ಗುಡಿಸೋಣ ಅಂದಿದ್ದಾರೆ. ಹೀಗೆ ಪ್ರಮುಖ ಸುದ್ದಿಗಳ ಗುಚ್ಛವೇ ವಿಸ್ತಾರ ಟಾಪ್‌ 10 ನ್ಯೂಸ್‌.

VISTARANEWS.COM


on

Edited by

Vistara Top 10 News 2509
Koo

1. ಕಾವೇರಿ ಕಿಚ್ಚು: ರಾಜ್ಯಕ್ಕೆ ಡಬಲ್‌ ಬಂದ್‌ ಶಾಕ್‌; ನಾಳೆ ಬೆಂಗಳೂರು, ಸೆ. 29 ಕರ್ನಾಟಕ ಬಂದ್‌
ಕರ್ನಾಟಕ ಜಲ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಕರೆ ನೀಡಲಾಗಿರುವ ಸೆ. 26ರ ಬೆಂಗಳೂರು ಬಂದ್‌ ಬೆನ್ನಿಗೇ ಕನ್ನಡ ಚಳವಳಿ ವಾಟಾಳ್‌ ಪಕ್ಷದ ನಾಯಕ ವಾಟಾಳ್‌ ನಾಗರಾಜ್‌ ಸೆ. 29ರಂದು ಅಖಿಲ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದಾರೆ. ಹೀಗಾಗಿ ವಾರದಲ್ಲಿ ಎರಡು ಬಂದ್‌ ನಡೆಯಲಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ವರದಿ : ನಾಯಕರ ಪ್ರತಿಷ್ಠೆಯಿಂದ ಬೆಂಗಳೂರಿಗೆ ಡಬಲ್‌ ಬಂದ್‌ ಬಿಸಿ, ಬೇಕಿತ್ತಾ ಎರಡೆರಡು ಬಂದ್‌?

2. ನಾಳೆ ಬೆಂಗಳೂರು ಬಂದ್‌: ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ; ಏನಿರುತ್ತೆ? ಏನಿರಲ್ಲ?
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ (Cauvery water Dispute) ಮಾಡಬಾರದು ಎಂದು ಆಗ್ರಹಿಸಿ ಜಲ ಸಂರಕ್ಷಣಾ ಸಮಿತಿ ಕರೆ ನೀಡಿರುವ ಸೆ. 26ರ ಬೆಂಗಳೂರು ಬಂದ್‌ (Bangalore bandh) ಮೊದಲು ಪ್ರಕಟಿಸಿದಂತೆ ಯಥಾವತ್ತಾಗಿ ನಡೆಯಲಿದೆ. ಹಾಗಿದ್ದರೆ ಏನಿರುತ್ತೆ? ಏನಿರಲ್ಲ? ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ಸುದ್ದಿ1: ಬಲವಂತದಿಂದ ಬಂದ್‌ ಮಾಡಿಸುವಂತಿಲ್ಲ; ಮೆರವಣಿಗೆಗೆ ಅವಕಾಶವಿಲ್ಲ ಎಂದ ಕಮಿಷನರ್‌
ಪೂರಕ ಸುದ್ದಿ2: ಬಂದ್‌ ಯಶಸ್ವಿ ಆಗಬೇಕು; ಹೋಟೆಲ್‌ ಓಪನ್‌ ಮಾಡ್ಬೇಡಿ, ಸಮಸ್ಯೆಗೆ ನೀವೇ ಹೊಣೆ: ಬಿಎಸ್‌ವೈ
ಪೂರಕ ಸುದ್ದಿ3: ಯಾವ ಬಂದ್‌ಗೂ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲ ಇಲ್ಲ; ನಾರಾಯಣ ಗೌಡ ಘೋಷಣೆ

3 .ಜಲಶಕ್ತಿ ಇಲಾಖೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕಲಿ, ಮೋದಿ ಮಧ್ಯಪ್ರವೇಶಿಸಲಿ: ದೇವೇಗೌಡ
ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯಕ್ಕೆ ಹಿನ್ನಡೆಯಾಗಿರುವುದಕ್ಕೆ ರಾಜ್ಯ ಸರ್ಕಾರದ ವೈಫಲ್ಯ ಎಂದು ಹೇಳಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಈ ಸಂಬಂಧ ಜಲ ಶಕ್ತಿ ಇಲಾಖೆಯಿಂದ ಅರ್ಜಿ ಸಲ್ಲಿಕೆ ಮಾಡಬೇಕು. ಇದಕ್ಕೆ ಪ್ರಧಾನಿ ಮೋದಿ ಮಧ್ಯ ಪ್ರವೇಶ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಈ ಸುದ್ದಿಯನ್ನೂ ಓದಿ: ಕಾವೇರಿ ನೆಪದಲ್ಲಿ ಬಿಜೆಪಿ-ಜೆಡಿಎಸ್‌ನಿಂದ ರಾಜಕೀಯ: ಸಿದ್ದರಾಮಯ್ಯ ಆರೋಪ

4. ಏಕಕಾಲಕ್ಕೆ ರಾಜ್ಯಾದ್ಯಂತ ದಾಖಲೆ ಬರೆದ ಜನತಾ ದರ್ಶನ: ಸಿದ್ದರಾಮಯ್ಯ ಚಿಂತನೆ ಕ್ಲಿಕ್‌
ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaih) ಅವರ ಸೂಚನೆಯಂತೆ ಇದೇ ಮೊಟ್ಟ ಮೊದಲ ಬಾರಿಗೆ ರಾಜ್ಯಾದ್ಯಂತ ಏಕ‌ಕಾಲಕ್ಕೆ ಎಲ್ಲಾ ಜಿಲ್ಲೆಗಳಲ್ಲಿ ಜನತಾ ದರ್ಶನ (Janata Darshana) ಕಾರ್ಯಕ್ರಮ ನಡೆದಿದ್ದು, ಸಾರ್ವಜನಿಕರಿಂದ ಅತ್ಯುತ್ತಮ ಸ್ಪಂದನೆ ಮತ್ತು ಪ್ರಶಂಸೆ ವ್ಯಕ್ತವಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5. ಏಷ್ಯನ್‌ ಗೇಮ್ಸ್‌: ಐತಿಹಾಸಿಕ ಚಿನ್ನ ಗೆದ್ದ ಭಾರತ ಮಹಿಳಾ ಕ್ರಿಕೆಟ್‌ ತಂಡ; ಲಂಕಾ ವಿರುದ್ಧ ರೋಚಕ ಜಯ
ಇದೇ ಮೊದಲ ಬಾರಿಗೆ ಏಷ್ಯನ್​ ಗೇಮ್ಸ್​(Asian Games 2023) ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ್ದ ಭಾರತ ಮಹಿಳಾ ಕ್ರಿಕೆಟ್​ ತಂಡ ಮೊದಲ ಪ್ರಯತ್ನದಲ್ಲೇ ಐತಿಹಾಸಿಕ ಚಿನ್ನದ ಪದಕ ಜಯಿಸಿ ಮರೆದಾಡಿದೆ. ಅಲ್ಪ ಮೊತ್ತದ ಪಂದ್ಯದಲ್ಲಿ ಲಂಕಾ ವಿರುದ್ಧ ರೋಚಕ 19 ರನ್​ಗಳ ಗೆಲುವು ಸಾಧಿಸಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6. ದೇಶಾದ್ಯಂತ ಅ.1ರಂದು 1 ಗಂಟೆ ಸ್ವಚ್ಛತಾ ಅಭಿಯಾನ: ಎಲ್ಲರೂ ಬನ್ನಿ ಎಂದು ಆಹ್ವಾನಿಸಿದ ಪ್ರಧಾನಿ ಮೋದಿ
ಗಾಂಧಿ ಜಯಂತಿಗೂ ಒಂದು ದಿನ ಮೊದಲು ಅಂದರೆ ಅಕ್ಟೋಬರ್‌ 1ರಂದು ದೇಶಾದ್ಯಂತ ಸ್ವಚ್ಛತಾ ಅಭಿಯಾನ ಕೈಗೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅಂದು ಒಂದು ಗಂಟೆ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳಿ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಈ ಸುದ್ದಿಯನ್ನೂ ಓದಿ: ಎಲ್ಲ ಗ್ಯಾರಂಟಿಗಳಿಗಳ ಜಾರಿಗೂ ಮೋದಿಯೇ ಗ್ಯಾರಂಟಿ; ಪ್ರಧಾನಿ ಅಬ್ಬರದ ಭಾಷಣ

7. ಭಾರತ ವಿಭಜಿಸಿ ಹಲವು ದೇಶ ಸೃಷ್ಟಿಸುವುದು ಖಲಿಸ್ತಾನಿ ಉಗ್ರ ಪನ್ನುನ್‌ ಗುರಿ; ಷಡ್ಯಂತ್ರ ಬಯಲು
ಕೆನಡಾದಲ್ಲಿ ಕುಳಿತು ಭಾರತ ವಿರೋಧಿ ಕೃತ್ಯಗಳಲ್ಲಿ ತೊಡಗಿರುವ ನಿಷೇಧಿತ ಸಿಖ್ಸ್‌ ಫಾರ್‌ ಜಸ್ಟಿಸ್‌ ಸಂಘಟನೆಯ ಗುರುಪತ್ವಂತ್‌ ಸಿಂಗ್‌ ಪನ್ನುನ್‌ (Gurpatwant Singh Pannun) ಆಸ್ತಿಗಳನ್ನು ಎನ್‌ಐಎ ಜಪ್ತಿ ಮಾಡಿದ ಬೆನ್ನಲ್ಲೇ ಉಗ್ರನ ಕುರಿತು ಸ್ಫೋಟಕ ಮಾಹಿತಿ ಲಭ್ಯವಾಗಿದೆ. “ಭಾರತವನ್ನು ವಿಭಜಿಸಿ, ಹಲವು ದೇಶಗಳನ್ನಾಗಿ ಸೃಷ್ಟಿಸುವುದು ಗುರುಪತ್ವಂತ್‌ ಸಿಂಗ್‌ ಪನ್ನುನ್‌ ಗುರಿಯಾಗಿದೆ” ಎನ್ನುವುದೇ ಆ ಮಾಹಿತಿ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

8. ಬಿಜೆಪಿ ಜತೆ ಮೈತ್ರಿ ಇಲ್ಲ; ಎಐಎಡಿಎಂಕೆ ಅಧಿಕೃತ ಘೋಷಣೆ! ಚುನಾವಣೆಯಲ್ಲಿ ಏಕಾಂಗಿ ಸ್ಪರ್ಧೆ
ತಮ್ಮ ಪಕ್ಷದ ನಾಯಕರನ್ನು ಅವಮಾನಿಸುತ್ತಿರುವ ಬಿಜೆಪಿ ಜತೆಗೆ ಸಖ್ಯವನ್ನು ಕಡಿದುಕೊಂಡಿರುವುದಾಗಿ ಇತ್ತೀಚೆಗಷ್ಟೇ ಎಐಎಡಿಎಂಕೆ ನಾಯಕರೊಬ್ಬರು ಹೇಳಿದ್ದರು. ಇದೀಗ, ಬಿಜೆಪಿ ಜತೆಗಿನ ಮೈತ್ರಿಯನ್ನು ಮುರಿದುಕೊಂಡಿರುವುದಾಗಿ ಎಐಎಡಿಎಂಕೆ ಅಧಿಕೃತವಾಗಿ ಘೋಷಿಸಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9. 9 ತಿಂಗಳೊಳಗೆ 2000 ಕೋಟಿ ರೂ. ಕೊಳ್ಳೆ ಹೊಡೆದ ಶಾರುಖ್;‌ ಜವಾನ್‌ ಹೊಸ ದಾಖಲೆ
ಶಾರುಖ್ ಖಾನ್‌ ಪ್ರಧಾನ ಪಾತ್ರದಲ್ಲಿರುವ ಜವಾನ್, ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 1000 ಕೋಟಿ ರೂ. ಗಳಿಸಿದೆ (Jawan box office collection).ಪಠಾಣ್‌ ಸಿನಿಮಾವೂ 1000 ಕೋಟಿ ದಾಟಿತ್ತು. ಹೀಗಾಗಿ ಒಂಬತ್ತು ತಿಂಗಳ ಅವಧಿಯಲ್ಲಿ ಶಾರುಖ್‌ 2000 ಕೋಟಿ ಕೊಳ್ಳೆ ಹೊಡೆದಂತಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10. 100 ಫ್ಯಾನ್‌ಗಳಲ್ಲಿ ಅರಳಿದ ಗಣಪ; ಹ್ಯಾವಲ್ಸ್‌ ಕಂಪನಿಯ ಕ್ರಿಯೆಟಿವಿಟಿಗೆ ನೆಟ್ಟಿಗರ ಮೆಚ್ಚುಗೆ
ದೇಶಾದ್ಯಂತ ಅದ್ಧೂರಿಯಾಗಿ ಆಚರಿಸುವ ಗಣೇಶ ಚತುರ್ಥಿ(Ganesh Chaturthi) ಹಬ್ಬವನ್ನು ಹ್ಯಾವಲ್ಸ್‌ ಕಂಪೆನಿ(Havells) ಕ್ರಿಯಾತ್ಮಕವಾಗಿ ಬರಮಾಡಿಕೊಂಡಿದೆ. 100 ಫ್ಯಾನ್‌ಗಳನ್ನು ಬಳಸಿಕೊಂಡು ಗಣೇಶನನ್ನು ರಚಿಸಿ ಗಮನ ಸೆಳೆದಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಮತ್ತಷ್ಟು ವೈರಲ್‌ ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ

Continue Reading

ದೇಶ

Ganesh Chaturthi: 100 ಫ್ಯಾನ್‌ಗಳಲ್ಲಿ ಅರಳಿದ ಗಣಪ; ಹ್ಯಾವಲ್ಸ್‌ ಕಂಪೆನಿಯ ಕ್ರಿಯೆಟಿವಿಟಿಗೆ ನೆಟ್ಟಿಗರ ಮೆಚ್ಚುಗೆ

Ganesh Chaturthi: ದೇಶಾದ್ಯಂತ ಅದ್ಧೂರಿಯಾಗಿ ಆಚರಿಸುವ ಗಣೇಶ ಚತುರ್ಥಿ(Ganesh Chaturthi) ಹಬ್ಬವನ್ನು ಹ್ಯಾವಲ್ಸ್‌ ಕಂಪೆನಿ(Havells) ಕ್ರಿಯಾತ್ಮಕವಾಗಿ ಬರಮಾಡಿಕೊಂಡಿದೆ. 100 ಫ್ಯಾನ್‌ಗಳನ್ನು ಬಳಸಿಕೊಂಡು ಗಣೇಶನನ್ನು ರಚಿಸಿ ಗಮನ ಸೆಳೆದಿದೆ.

VISTARANEWS.COM


on

Edited by

ganapa
Koo

ಮುಂಬಯಿ: ದೇಶದೆಲ್ಲೆಡೆ ಆಚರಿಸುವ ಹಬ್ಬಗಳಲ್ಲಿ ಗಣೇಶ ಚರ್ತುಥಿಯೂ(Ganesh Chaturthi) ಒಂದು. ಸಾಮಾನ್ಯವಾಗಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಿ ಬಳಿಕ ವಿಸರ್ಜಿಸುವುದು ವಾಡಿಕೆ. ಪ್ರಸಿದ್ಧ ಕಂಪೆನಿ ಹ್ಯಾವಲ್ಸ್‌(Havells) ಚೌತಿ ಸಂದರ್ಭದಲ್ಲಿ ಸೃಜನಾತ್ಮಕವಾಗಿ ಶುಭ ಹಾರೈಸಿದೆ. ಈ ವಿಡಿಯೊ ಇದೀಗ ವೈರಲ್‌ ಆಗಿದೆ. ʼಹ್ಯಾವಲ್ಸ್‌ ಕೆ ದೇವʼ(Havells Ke Deva) ಹೆಸರಿನಲ್ಲಿ ಕಂಪೆನಿ ಅಭಿಯಾನ ಆಯೋಜಿಸಿದ್ದು, ಇದರಲ್ಲಿ ಕಲೆ, ತಂತ್ರಜ್ಞಾನ ಮತ್ತು ಸಂಪ್ರದಾಯವನ್ನು ಸರಿಯಾದ ರೀತಿಯಲ್ಲಿ ಬೆರಸಿ ಶುಭಾಶಯ ಕೋರಿದೆ.

ಸುಮಾರು 100 ಫ್ಯಾನ್‌ಗಳನ್ನು ಉಪಯೋಗಿಸಿ ಗಣೇಶ ಮೂರ್ತಿಯನ್ನು ರಚಿಸಲಾಗಿದೆ. ಕಂಪೆನಿಯ ಈ ಸೃಜನಾತ್ಮಕ ಐಡಿಯಾಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಈ ಗಣೇಶ ಮೂರ್ತಿಯನ್ನೊಳಗೊಂಡ ಬೋರ್ಡ್‌ ಅನ್ನು ಕಂಪೆನಿಯು ಥಾಣೆಯ ಮಜಿವಾಡ ಫ್ಲೈಓವರ್‌ ಬಳಿ ಸ್ಥಾಪಿಸಿದೆ. ಇದನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮುಂಬಯಿ ಹೆರಿಟೇಜ್‌ ಪೇಜ್ ಹಂಚಿಕೊಂಡಿದೆ. ಈಗಾಗಲೇ ಈ ಚಿಕ್ಕ ವಿಡಿಯೊ ತುಣುಕನ್ನು 3 ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಿಸಿದ್ದಾರೆ. ʼಥಾಣೆಯ ಮಜಿವಾಡ ಫ್ಲೈಓವರ್‌ ಬಳಿ ಕಂಡು ಬಂದ 100 ಫ್ಯಾನ್ ಗಳಿಂದ ರಚಿಸಿದ ಗಣೇಶ ಮೂರ್ತಿ. ಇದು ಹ್ಯಾವೆಲ್ಸ್‌ನ ಅಭಿಯಾನʼ ಎಂದು ಮುಂಬಯಿ ಹೆರಿಟೇಜ್‌ ಬರೆದುಕೊಂಡಿದೆ.

ನೆಟ್ಟಿಗರ ಮೆಚ್ಚುಗೆ

ಕಂಪೆನಿಯ ಈ ಸೃಜನಶೀಲತೆಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಅನೇಕ ಮಂದಿ ಶ್ಲಾಘಿಸಿ ಕಮೆಂಟ್‌ ಮಾಡಿದ್ದಾರೆ. ಕಮೆಂಟ್‌ ಸೆಕ್ಷನ್‌ ತುಂಬಾ ಹೊಗಳಿಕೆಯ ಮಾತುಗಳೇ ಕಂಡುಬಂದಿದೆ. ಈ ಐಡಿಯಾ ಜನರ ಗಮನ ಸೆಳೆದಿದೆ ಎಂದು ಒಬ್ಬರು ಹೇಳಿದ್ದಾರೆ. ಇನ್ನೊಬ್ಬರಂತೂ ಕಂಪೆನಿಯ ಅಭಿಮಾನಿಯಾದೆ ಎಂದಿದ್ದಾರೆ. ಇನ್ನೊಬ್ಬರು ಕ್ರಿಯೇಟಿವ್‌ ಆಗಿದೆ ಎಂದು ಹೊಗಳಿದ್ದಾರೆ.

ಹ್ಯಾವೆಲ್ಸ್‌ನ ಇವಿಪಿ ರೋಹಿತ್‌ ಕಪೂರ್‌ ಈಗ್ಗೆ ಮಾತನಾಡಿ, ʼʼಗಣೇಶ ಚತುರ್ಥಿ ಹೊಸ ಸಂಶೋಧನೆ, ಪರಿವರ್ತನೆ ಮತ್ತು ಹೊಸ ಆರಂಭವನ್ನು ಗೌರವಿಸುವ ಹಬ್ಬ. ನಾವು ಹ್ಯಾವಲ್ಸ್ ದೇವ ಅಭಿಯಾನವನ್ನು ಪರಿಚಯಿಸಲು ಉತ್ಸುಕರಾಗಿದ್ದೇವೆ. ಹ್ಯಾವಲ್ಸ್ ಯಾವಾಗಲೂ ಜಾಹೀರಾತಿನ ಗಡಿಗಳನ್ನು ಮರುವ್ಯಾಖ್ಯಾನಿಸಲು ಶ್ರಮಿಸುತ್ತಿದೆ ಮತ್ತು ನಮ್ಮ ಇತ್ತೀಚಿನ ಅಭಿಯಾನದ ಮೂಲಕ, ನಾವು ಹಬ್ಬವನ್ನು ಆಚರಿಸುವುದು ಮಾತ್ರವಲ್ಲದೆ ನಾವೀನ್ಯತೆಗಾಗಿ ತೆರೆದುಕೊಳ್ಳುವ ಗುರಿಯನ್ನು ಹೊಂದಿದ್ದೇವೆʼʼ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Viral News: ಎಲ್​ಕೆಜಿ ಬಾಲಕನಿಗೆ ಕಾಲು ಮುರಿಯುವ ಹಾಗೆ ಬಡಿದ ಮೇಷ್ಟ್ರು ​, ಗಾಯಗಳನ್ನು ನೋಡಿ ಬೆಚ್ಚಿದ ಅಮ್ಮ

ಇದರ ಜೊತೆಗೆ ಹ್ಯಾವಲ್ಸ್‌ ಕಂಪೆನಿ ಗಣೇಶ ಚತುರ್ಥಿಯನ್ನು ಬರ ಮಾಡಿಕೊಳ್ಳುವ ಇನ್ನೊಂದು ವಿಡಿಯೊವನ್ನು ಬಿಡುಗಡೆ ಮಾಡಿದೆ. ನೆರಳು, ಬೆಳಕಿನ ಮೂಲಕ ಇದನ್ನು ತಯಾರಿಸಲಾಗಿದೆ. ಕಂಪೆನಿಯ ಉತ್ಪನ್ನಗಳನ್ನು ಬಳಸಿ ಗಣಪತಿಯನ್ನು ಪ್ರತಿನಿಧಿಸುವ ಆನೆಯನ್ನು ರಚಿಸಲಾಗಿದೆ. ಜೊತೆಗೆ ಹಬ್ಬದ ಸಂದರ್ಭದಲ್ಲಿ ಗ್ರಾಹಕರಿಗೆ ಕೆಲವು ಕೊಡುಗೆಗಳನ್ನೂ ಪ್ರಕಟಿಸಿದೆ. ರೇಡಿಯೋ ಒನ್‌ ಮತ್ತು ರೇಡಿಯೋ ಸಿಟಿ ಮಹಾರಾಷ್ಟ್ರದ ಜೊತೆ ಸೇರಿಕೊಂಡು ಗ್ರಾಹಕರಿಗೆ ಕೊಡುಗೆ ನೀಡುವ ಅಭಿಯಾನ ಪ್ರಕಟಿಸಿದೆ.

ಗಮನ ಸೆಳೆದ ಎಂಜಿ ಮೋಟಾರ್ಸ್

ಹ್ಯಾವಲ್ಸ್ ನಂತೆಯೇ ಎಂಜಿ ಮೋಟಾರ್ಸ್ ಕೂಡ ಗಣೇಶ ಚತುರ್ಥಿಯನ್ನು ತನ್ನದೇ ಆದ ವಿಶಿಷ್ಟ ಅಭಿಯಾನದ ಮೂಲಕ ಆಚರಿಸಿದೆ. ಇದಕ್ಕಾಗಿ ಆಧುನಿಕ ತಂತ್ರಜ್ಞಾನದ ಮೊರೆ ಹೋಗಲಾಗಿದೆ. ವಿವಿಧ ಸಂದರ್ಭಗಳಲ್ಲಿನ ಸಂಚಾರ ಪೊಲೀಸರ ಚಿತ್ರಗಳ ಸರಣಿಯನ್ನು ತಯಾರಿಸಲು ಕೃತಕ ಬುದ್ಧಿಮತ್ತೆ(AI)ಯನ್ನು ಬಳಸಿದೆ. ಭಾರಿ ಮಳೆಯಲ್ಲಿ ಕೆಲಸ ಮಾಡುವುದು, ದೊಡ್ಡ ಜನಸಂದಣಿಯನ್ನು ನಿರ್ವಹಿಸುವುದು, ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳುವುದು ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳುವುದು ಮುಂತಾದ ಚಿತ್ರಗಳನ್ನು ಬಳಸಲಾಗಿದೆ. ಗಣೇಶ ಚರ್ತುಥಿಯಂತಹ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರ ಸುರಕ್ಷತೆಯನ್ನು ನೋಡಿಕೊಳ್ಳುವ ಟ್ರಾಫಿಕ್‌ ಪೊಲೀಸರಿಗೆ ಈ ಮೂಲಕ ಗೌರವ ಸಲ್ಲಿಸಲಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Continue Reading

ದೇಶ

Lalbaugcha Raja: ಗಣಪತಿ ದರ್ಶನಕ್ಕೂ ಭೇದ ಭಾವ; ಜನಸಾಮಾನ್ಯರನ್ನು ತಳ್ಳುವ ದೃಶ್ಯ ವೈರಲ್

Lalbaugcha Raja: ಲಾಲ್‌ಬಾಗ್‌ಚ ರಾಜ ಎಂದೇ ಜನಪ್ರಿಯವಾಗಿರುವ ಮುಂಬಯಿಯ (Mumbai) ಗಣಪತಿ ಪೆಂಡಾಲ್‌ನಲ್ಲಿ ಭೇದ ಭಾವ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಕುರಿತಾದ ವಿಡಿಯೊ ವೈರಲ್‌ ಆಗಿದೆ.

VISTARANEWS.COM


on

Edited by

ganapathi
Koo

ಮುಂಬಯಿ: ಎಲ್ಲೆಡೆ ಬಹು ಅದ್ಧೂರಿಯಾಗಿ ಗಣೇಶ ಚತುರ್ಥಿ ಆಚರಿಸಲಾಗಿದೆ. ನಗರ, ಗ್ರಾಮೀಣ ಪ್ರದೇಶ ಎನ್ನುವ ಭಾವ ಭಾವ ಇಲ್ಲದೆ ಎಲ್ಲರೂ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ಮೆರವಣಿಗೆ ಮೂಲಕ ವಿಸರ್ಜಿಸಿದ್ದಾರೆ. ಈ ಮಧ್ಯೆ ಮುಂಬಯಿಯ(Mumbai) ಪ್ರಸಿದ್ಧ ʼಲಾಲ್‌ಬಾಗ್‌ಚ ರಾಜ ʼ(Lalbaugcha Raja) ಗಣೇಶ ಪೆಂಡಾಲ್‌ನಲ್ಲಿ ಜನ ಸಾಮಾನ್ಯರಿಗೆ ಮತ್ತು ಸೆಲೆಬ್ರಿಟಿಗಳಿಗೆ ಭೇದ ಭಾವ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಈ ಕುರಿತಾದ ವಿಡಿಯೊವೊಂದು ವೈರಲ್‌ ಆಗಿದೆ.

ಮುಂಬಯಿಯ ಲಾಲ್‌ಬಾಗ್‌ಚ ಪ್ರದೇಶದಲ್ಲಿ ಪ್ರತಿವರ್ಷ ಚೌತಿಯಂದು ಗಣಪತಿ ಮೂರ್ತಿಯನ್ನು ಕೂರಿಸಿ ಪೂಜಿಸಲಾಗುತ್ತದೆ. ಈ ಗಣೇಶನನ್ನು ʼಲಾಲ್‌ಬಾಗ್‌ನ ರಾಜʼ ಎಂದೇ ಕರೆಯಲಾಗುತ್ತದೆ. 11 ದಿನಗಳವರೆಗೆ ಪೂಜಿಸಿ ಬಳಿಕ ಈ ಮೂರ್ತಿಯನ್ನು ಅದ್ಧೂರಿ ಮೆರವಣಿಗೆ ಮೂಲಕ ಕರೆದುಕೊಂಡು ಹೋಗಿ ಅರಬಿ ಸಮುದ್ರದಲ್ಲಿ ವಿಸರ್ಜಿಸಲಾಗುತ್ತದೆ. ಈ ಗಣೇಶನ ದರ್ಶನಕ್ಕೆ ಬಾಲಿವುಡ್‌ ತಾರೆಯರು, ಉದ್ಯಮಿಗಳು ಸೇರಿದಂತೆ ಲಕ್ಷಾಂತರ ಮಂದಿ ಭೇಟಿ ನೀಡುತ್ತಾರೆ. ಸದ್ಯ ಈ ಗಣಪತಿ ಪೆಂಡಾಲ್‌ ಚರ್ಚೆಯ ಕೇಂದ್ರಬಿಂದು ಆಗಿದೆ.

ವಿಡಿಯೊದಲ್ಲೇನಿದೆ?

ಗಣಪತಿ ದರ್ಶನಕ್ಕೆ ಆಗಮಿಸಿದ ಸಾಮಾನ್ಯ ಜನರು ಒಂದು ಕ್ಷಣ ಕೂಡ ದೇವರ ಮುಂದೆ ನಿಲ್ಲಲು ಬಿಡದೆ ರಕ್ಷಣಾ ಸಿಬ್ಬಂದಿ ಮುಂದೆ ತಳ್ಳುತ್ತಾರೆ. ಸರಿಯಾಗಿ ಕೈ ಮುಗಿಯಲೂ ಅವರಿಗೆ ಅವಕಾಶ ಕೊಡುತ್ತಿಲ್ಲ. ಇತ್ತ ವಿಐಪಿಗಳು ಬಂದರೆ ಅವರಿಗೆ ದೇವರ ಮುಂದೆ ಸಮಯ ಕಳೆಯಲು ಸಾಕಷ್ಟು ಅವಕಾಶ ನೀಡಲಾಗುತ್ತದೆ. ಸದ್ಯ ಈ ವಿಡಿಯೊ ವೈರಲ್‌ ಆಗಿದ್ದು, ದೇವರ ಮುಂದೆ ಭೇದ-ಭಾವ ಸಲದು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಗಣಪತಿ ಮುಂದೆ ಕೈ ಮುಗಿಯಲೂ ಅವಕಾಶ ನೀಡದೆ ಅಮಾನುಷವಾಗಿ ಮುಂದಕ್ಕೆ ತಳ್ಳುತ್ತಿರುವ ಸೆಕ್ಯುರಿಟಿಗಳ ವರ್ತನೆಯನ್ನು ನೆಟ್ಟಿಗರು ಖಂಡಿಸಿದ್ದಾರೆ. ಅದೇ ವಿಡಿಯೊದ ಕೊನೆಗೆ ನಟಿ, ಬಾಲಿವುಡ್‌ ಸ್ಟಾರ್‌ ಶಿಲ್ಪಾ ಶೆಟ್ಟಿ ಸಾವಕಾಶವಾಗಿ ಕುಟುಂಬದ ಜತೆಗೆ ಕೈ ಮುಗಿಯುತ್ತಿರುವ ದೃಶ್ಯ ಕಾಣಿಸುತ್ತಿದೆ. ಇದನ್ನು ಉಲ್ಲೇಖಿಸಿರುವ ನೆಟ್ಟಿಗರೊಬ್ಬರು, ದೇವರ ದರ್ಶನಕ್ಕೂ ಎಷ್ಟೊಂದು ಬೇಧ-ಭಾವ ಎಂದು ಬರೆದುಕೊಂಡಿದ್ದಾರೆ,

ನೆಟ್ಟಿಗರು ಏನಂದ್ರು?

ಇಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೊವನ್ನು ಈಗಾಗಲೇ 90 ಸಾವಿರಕ್ಕಿಂತಲೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅನೇಕರು ಕಮೆಂಟ್‌ ಮೂಲಕ ಅಸಮಾಧಾನ ಸೂಚಿಸಿದ್ದಾರೆ. ʼʼಒಬ್ಬರು ಮಹಿಳೆಯನ್ನು ದಾರುಣವಾಗಿ ಮುಂದಕ್ಕೆ ತಳ್ಳಲಾಗಿದೆ. ಇದು ಅಮಾನವೀಯ. ಇಂತಹ ಅನುಭವ ಯಾರಿಗೂ ಆಗಬಾರದುʼʼ ಎಂದು ಒಬ್ಬರು ಹೇಳಿದ್ದಾರೆ. ʼʼದೇವರ ದರ್ಶನಕ್ಕಾಗಿ ಹಲವಾರು ಮಂದಿ 10ರಿಂದ 11 ಗಂಟೆ ಸರದಿಯಲ್ಲಿ ನಿಂತಿರುತ್ತಾರೆ, ಅವರಿಗೆ ಸ್ವಲ್ಪ ಸಮಯವೂ ಅವಕಾಶ ಕೊಡದಿದ್ದರೆ ಹೇಗೆ? ಇಂತಹ ವರ್ತನೆಯನ್ನು ನಿಲ್ಲಿಸಬೇಕಾಗಿದೆʼʼ ಎಂದು ಇನ್ನೊಬ್ಬರು ಸಲಹೆ ನೀಡಿದ್ದಾರೆ. ʼʼತುಂಬ ಬೇಸರ ಮೂಡಿಸುವ ದೃಶ್ಯ, ಗಣಪನಿಗೆ ಎಲ್ಲರೂ ಸಮಾನರು. ಆತ ಆಶೀರ್ವಾದ ಮಾಡುವಾಗ ಎಂದಿಗೂ ಭೇದ-ಭಾವ ಮಾಡುವುದಿಲ್ಲ. ಪ್ರತಿಯೊಬ್ಬರೂ ಒಂದೇ ಸಾಲು ಇರುವಂತಾಗಬೇಕುʼʼ ಎಂದು ಮತ್ತೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: Snake bite: ರಕ್ಷಿಸಿದವನ ಪ್ರಾಣಕ್ಕೆ ಎರವಾದ ನಾಗಪ್ಪ; ಹಾವು ಕಡಿದು ಉರಗ ಪ್ರೇಮಿ ಸಾಯುವ ವಿಡಿಯೊ ವೈರಲ್

ಈ ಬಾರಿಯ ಲಾಲ್‌ಬಾಗ್ ಗಣಪತಿಯ ದರ್ಶನಕ್ಕೆ ಶಿಲ್ಪಾ ಶೆಟ್ಟಿ ಕುಟುಂಬ ಮಾತ್ರವಲ್ಲದೆ ಬಾಲಿವುಡ್ ಸ್ಟಾರ್ ಗಳಾದ ಶಾರುಖ್‌ ಖಾನ್‌, ಐಶ್ವರ್ಯ ರೈ ಬಚ್ಚನ್‌, ಅಂಬಾನಿ ಕುಟುಂಬ ಸೇರಿದಂತೆ ಅನೇಕ ಪ್ರತಿಷ್ಠಿತರು ಆಗಮಿಸಿದ್ದರು.

Continue Reading

ಕರ್ನಾಟಕ

Assault Case : ಯುವತಿ ಸ್ನಾನ ಮಾಡುವಾಗ ವಿಡಿಯೊ ಮಾಡಿದ ಕಿರಾತಕ!

Assault Case : ಯುವತಿ ಸ್ನಾನ ಮಾಡುವಾಗ ಪಕ್ಕದ ಮನೆಯ ಯುವಕನೊಬ್ಬ ಮೊಬೈಲ್‌ ವಿಡಿಯೊ ಮಾಡಿಕೊಂಡ ಘಟನೆ ಕನಕಪುರದಲ್ಲಿ ನಡೆದಿದೆ.

VISTARANEWS.COM


on

Edited by

Girl Shower
ಸಾಂದರ್ಭಿಕ ಚಿತ್ರ
Koo

ರಾಮನಗರ: ರಾಮನಗರದ ಕನಕಪುರದದ ಬಸವೇಶ್ವರ ನಗರದಲ್ಲಿ ಯುವತಿ ಸ್ನಾನ ಮಾಡುತ್ತಿದ್ದಾಗ ದುಷ್ಟನೊಬ್ಬ ವಿಡಿಯೊ ರೆಕಾರ್ಡ್‌ (Assault Case) ಮಾಡಿದ್ದಾನೆ. ಪಕ್ಕದ‌ ಮನೆಯ ಯುವಕನ ಮೇಲೆ ಯುವತಿ ಕುಟುಂಬಸ್ಥರು ದೂರು ನೀಡಿದ್ದಾರೆ. ನಿತಿನ್ (25)‌ ವಿಡಿಯೊ ಮಾಡಿದ ಕಾಮುಕ.

ಬೆಂಗಳೂರಲ್ಲಿ ಇದ್ದ ನಳಿನಿ ಎಂಬಾಕೆ ತಾಯಿ ಮನೆಗೆ ಬಂದಿದ್ದರು. ಮಧ್ಯಾಹ್ನ ಸುಮಾರು 1.30ರ ಸುಮಾರಿಗೆ ಸ್ನಾನ ಮಾಡಲೆಂದು ಬಾತ್‌ ರೂಮಿಗೆ ಹೋಗಿದ್ದರು. ಸ್ನಾನಕ್ಕೂ ಮೊದಲು ಬಾತ್‌ರೂಮಿನ ಕಿಟಕಿಯನ್ನು ಮುಚ್ಚಿದ್ದರು. ಸ್ನಾನ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಬಾತ್ ರೂಮಿನ ಕಿಟಕಿ ತೆರದಿರುವುದು ಗಮನಕ್ಕೆ ಬಂದಿದೆ.

ಇದನ್ನೂ ಓದಿ: Belgavi News : ಸೇತುವೆ ಮೇಲಿಂದ ಮಲಪ್ರಭಾ ನದಿಗೆ ಹಾರಿದ ವಯೋವೃದ್ಧ!

ಕೂಡಲೇ ಗಾಬರಿಗೊಂಡ ನಳಿನಿ ಕಿಟಕಿ ಬಳಿ ಗಮನಿಸಿದಾಗ ಈ ಕಿರಾತಕ ನಿತಿನ್‌ ಮೊಬೈಲ್‌ ಹಿಡಿದು ರಿಕಾರ್ಡಿಂಗ್ ಮಾಡುತ್ತಿರುವುದು ಗೊತ್ತಾಗಿದೆ. ಕೂಡಲೇ ನಳಿನಿ ಚೀರಿಕೊಂಡಿದ್ದಾಳೆ. ಆಕೆಯ ಚೀರಾಟ ಕೇಳಿ ಓಡಿ ಬಂದ ಮನೆ ಸದಸ್ಯರಿಗೆ ವಿಷಯವನ್ನು ಮುಟ್ಟಿಸಿದ್ದಾರೆ.

ಓಡಿ ಹೋಗುತ್ತಿದ್ದ ನಿತಿನ್‌ನನ್ನು ಪೋಷಕರು ಹಿಡಿದು ಥಳಿಸಿದ್ದಾರೆ. ಈ ನಿತಿನ್‌ ಸಿಸಿಟಿವಿ ಅಳವಡಿಸುವ ಉದ್ಯೋಗ ಮಾಡಿಕೊಂಡಿದ್ದಾನೆ. ಸದ್ಯ ನಿತಿನ್‌ ವಿರುದ್ಧ ಯುವತಿ ಕುಟುಂಬಸ್ಥರು ದೂರು ನೀಡಿದ್ದಾರೆ. ಕನಕಪುರ ಪೊಲೀಸರು ನಿತಿನ್‌ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಇನ್ನು ವಿಚಾರಣೆ ವೇಳೆ ಸ್ನಾನ ಮಾಡುತ್ತಿರುವ ವಿಡಿಯೋವನ್ನು ಡಿಲೀಟ್ ಮಾಡಿರುವುದಾಗಿ ಹೇಳಿಕೆ ನೀಡಿದ್ದಾನೆ. ಈ ಸಂಬಂಧ ಕನಕಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Continue Reading
Advertisement
pakistan Team
ಕ್ರಿಕೆಟ್30 mins ago

Pakistan team: ಕೊನೆಗೂ ಬಗೆಹರಿದ ಪಾಕ್ ತಂಡದ​ ವೀಸಾ ಸಮಸ್ಯೆ; ಬುಧವಾರ ಭಾರತ ಪ್ರಯಾಣ

bus auto accident
ದಕ್ಷಿಣ ಕನ್ನಡ32 mins ago

Road Accident: ಆಟೋಗೆ ಶಾಲಾ ಬಸ್‌ ಡಿಕ್ಕಿ, ಐವರ ದುರ್ಮರಣ

home lizard
ಲೈಫ್‌ಸ್ಟೈಲ್53 mins ago

Lizards in home: ಹಲ್ಲಿಯನ್ನು ಮನೆಯಿಂದ ಓಡಿಸುವ ಕಲೆ ನಿಮಗೆ ಗೊತ್ತೇ? ಇಲ್ಲಿವೆ ಟಿಪ್ಸ್!

healthy children food
Relationship1 hour ago

Parenting Tips: ನಿಮ್ಮ ಮಕ್ಕಳು ಅಡ್ಡ ಬೆಳೆಯದೆ, ಉದ್ದ ಬೆಳೆಯಬೇಕೆಂದರೆ ಈ ಆಹಾರವನ್ನೇ ನೀಡಿ!

Reality Shows neads a break
ಅಂಕಣ2 hours ago

Raja Marga Column : ನಿಮ್ಮ ಮಕ್ಕಳನ್ನು ಸೂಪರ್‌ ಹೀರೊ ಮಾಡಲು ಹೋಗ್ಬೇಡಿ; ರಿಯಾಲಿಟಿ ಶೋಗಳಿಗೆ ಬೇಕು ಬ್ರೇಕ್!

bangalore bandh
Live News2 hours ago

Bangalore Bandh Live: ಬೆಂಗಳೂರು ಬಂದ್‌ ಆರಂಭ; ಎಲ್ಲೆಲ್ಲಿ ಏನೇನಾಗ್ತಿದೆ?

Vistara Editorial, Janata Darshan by CM must appreciated
ಕರ್ನಾಟಕ3 hours ago

ವಿಸ್ತಾರ ಸಂಪಾದಕೀಯ: ಜನತಾ ದರ್ಶನ ಪ್ರಶಂಸಾರ್ಹ, ಪರಿಹಾರವೂ ದೊರೆಯಲಿ

Dina Bhavishya
ಪ್ರಮುಖ ಸುದ್ದಿ4 hours ago

Dina Bhavishya : ಈ ರಾಶಿಯ ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿ

Pakistan Cricket Team Skipper Babaz azam fined exceeding speed limit
ಕ್ರಿಕೆಟ್9 hours ago

Babar Azam: ಆಡಿ ಕಾರ್ ಓವರ್‌ಸ್ಪೀಡ್ ಓಡಿಸಿ, ದಂಡ ಕಟ್ಟಿದ ಪಾಕ್ ಕ್ರಿಕೆಟ್ ಟೀಂ ನಾಯಕ ಬಾಬರ್ ಅಜಮ್!

Sara Sunny
ದೇಶ9 hours ago

Lawyer Sara Sunny: ಸುಪ್ರೀಂ ಕೋರ್ಟ್‌ನಲ್ಲಿ ಮೊದಲ ಬಾರಿಗೆ ಸಂಜ್ಞೆ ಭಾಷೆಯಲ್ಲಿ ವಾದ ಮಂಡನೆ! ಇತಿಹಾಸ ಸೃಷ್ಟಿಸಿದ ಸಾರಾ

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ4 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ8 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

kpsc recruitment 2023 pdo recruitment 2023
ಉದ್ಯೋಗ2 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Rajendra Singh Gudha
ದೇಶ3 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ7 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ9 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ11 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Dina Bhavishya
ಪ್ರಮುಖ ಸುದ್ದಿ4 hours ago

Dina Bhavishya : ಈ ರಾಶಿಯ ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿ

At the Janata Darshan event MP S Muniswamy MLA SN Narayanaswamy is fighting
ಕರ್ನಾಟಕ15 hours ago

Janata Darshan : ವೇದಿಕೆಯಲ್ಲಿ ಭೂ ಗಲಾಟೆ; ಹೊಡೆದಾಟಕ್ಕೆ ಮುಂದಾದ ಶಾಸಕ-ಸಂಸದ

Davanagere bandh
ಕರ್ನಾಟಕ17 hours ago

Davanagere bandh : ಭದ್ರಾ ನೀರಿಗಾಗಿ ಬೀದಿಗಿಳಿಯಲಿಲ್ಲ ಭತ್ತ ಬೆಳೆಗಾರರು!

HD Devegowda Press meet
ಕರ್ನಾಟಕ19 hours ago

Cauvery water dispute : ಜಲ ಶಕ್ತಿ ಇಲಾಖೆಯಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಲಿ, ಮೋದಿ ಮಧ್ಯ ಪ್ರವೇಶಿಸಲಿ: ಎಚ್.ಡಿ. ದೇವೇಗೌಡ

Farmers protest Mundargi bandh
ಕರ್ನಾಟಕ20 hours ago

Mundargi Bandh : ಬರ ಪೀಡಿತ ತಾಲೂಕು ಘೋಷಣೆಗೆ ಒತ್ತಾಯಿಸಿ ಮುಂಡರಗಿ ಬಂದ್!

Dina bhavishya
ಪ್ರಮುಖ ಸುದ್ದಿ1 day ago

Dina Bhavishya : ಈ ರಾಶಿಯವರಿಗೆ ಇಂದು ಹೂಡಿಕೆ ಬೇಡ! ಕೆಲ ವಿಷಯದಲ್ಲಿ ಇರಲಿ ಗೌಪ್ಯತೆ

Actor padhmini Kirk
ಕರ್ನಾಟಕ2 days ago

Viral News : ಕಿರುತೆರೆ ನಟಿ ಕಿರಿಕ್‌; ಕೆಲಸ ಕಳೆದುಕೊಂಡ ಓಲಾ ಆಟೋ ಡ್ರೈವರ್‌!

dina bhavishya
ಪ್ರಮುಖ ಸುದ್ದಿ2 days ago

Dina Bhavishya : ಈ ರಾಶಿಯವರಿಗೆ ಕೋಪವೇ ಮುಳುವು!

Dina bhavishya
ಪ್ರಮುಖ ಸುದ್ದಿ3 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಇಂದು ಬಾಸ್‌ನಿಂದ ಕಿರಿಕ್‌!

Dina Bhavishya
ಪ್ರಮುಖ ಸುದ್ದಿ4 days ago

Dina Bhavishya : ದಿನದ ಮಟ್ಟಿಗೆ ಈ ರಾಶಿಯವರು ಹೂಡಿಕೆ ಮಾಡ್ಬೇಡಿ!

ಟ್ರೆಂಡಿಂಗ್‌