Viral Video: ಹುಲಿಯ ಕಿವಿಗೆ ಮಸಾಜ್‌ ಮಾಡಿದರೆ ಏನಾಗುತ್ತೆ? ವೈರಲ್‌ ವಿಡಿಯೊ ಇಲ್ಲಿದೆ ನೋಡಿ - Vistara News

ವೈರಲ್ ನ್ಯೂಸ್

Viral Video: ಹುಲಿಯ ಕಿವಿಗೆ ಮಸಾಜ್‌ ಮಾಡಿದರೆ ಏನಾಗುತ್ತೆ? ವೈರಲ್‌ ವಿಡಿಯೊ ಇಲ್ಲಿದೆ ನೋಡಿ

ಹುಲಿಯ ಕಿವಿಗೆ ವ್ಯಕ್ತಿಯೊಬ್ಬ ಮಸಾಜ್‌ ಮಾಡುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್‌ (Viral Video) ಆಗಿದೆ.

VISTARANEWS.COM


on

massage to tiger
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ವನ್ಯ ಮೃಗಗಳಿಂದ ಯಾವಾಗಲೂ ದೂರವೇ ಇರಬೇಕು. ಅದರಲ್ಲಿ ಹುಲಿ, ಸಿಂಹದಂತಹ ಪ್ರಾಣಿಗಳೆಂದರೆ ಪ್ರತಿಯೊಬ್ಬರಿಗೂ ಭಯ ಇದ್ದೇ ಇರುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿ ಅದೇ ಹುಲಿಯೊಂದಿಗೆ ಆಟವಾಡುತ್ತಿದ್ದಾನೆ. ಹುಲಿಯ ಕಿವಿಗೇ ಮಸಾಜ್‌ ಮಾಡಿರುವ ವಿಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಭಾರೀ ವೈರಲ್‌ (Viral Video) ಆಗಿದೆ.

ಕೋಡಿ ಅಂಟ್ಲೆ ಹೆಸರಿನ ವ್ಯಕ್ತಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಇಂಥದ್ದೊಂದು ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಮಿರ್ಟಲ್ ಬೀಚ್ ಸಫಾರಿಯಲ್ಲಿ ಪ್ರಾಣಿಗಳನ್ನು ನೋಡಿಕೊಳ್ಳುವವನೊಬ್ಬ ಹುಲಿಯನ್ನು ಅಲ್ಲಿನ ಸರೋವರದ ಬಳಿ ಕರೆದುಕೊಂಡು ಹೋಗುತ್ತಾನೆ. ಅಲ್ಲಿಗೆ ತೆರಳಿದ ತಕ್ಷಣ ಆತ ಹುಲಿಯ ಎರಡೂ ಕಿವಿಗಳಿಗೆ ಹಿಂಬದಿಯಿಂದ ಕೈ ಹಾಕಿ ಮಸಾಜ್‌ ಮಾಡಲಾರಂಭಿಸುತ್ತಾನೆ. ಅದನ್ನು ತುಂಬಾನೇ ಇಷ್ಟ ಪಡುವ ಹುಲಿ ಎರಡೂ ಕಣ್ಣುಗಳನ್ನು ಮುಚ್ಚಿಕೊಂಡು ಮಸಾಜ್‌ ಅನ್ನು ಆನಂದಿಸುತ್ತದೆ!

ಇದನ್ನೂ ಓದಿ: Viral Video : ದೆಹಲಿ ಮೆಟ್ರೋದಲ್ಲೇ ಹೇರ್ ಸ್ಟ್ರೈಟ್​ನರ್​ ಬಳಸಿದ ಯುವತಿ, ವಿಡಿಯೊ ವೈರಲ್​!
ಹುಲಿ ಈ ರೀತಿ ಮಸಾಜ್‌ ಅನ್ನು ಆನಂದಿಸುವಾಗ ಮುದ್ದಾಗಿ ಕಾಣಿಸಿಕೊಳ್ಳುತ್ತದೆ. ಯಾರಿಗಾದರೂ ಒಮ್ಮೆ ಅದನ್ನು ಎತ್ತಿಕೊಂಡು ಮುದ್ದಾಡೋಣ ಎನ್ನಿಸುವಷ್ಟು ಸುಂದರವಾಗಿ ಕಾಣಿಸುತ್ತದೆ. ಆತ ಮಸಾಜ್‌ ಮಾಡುವುದನ್ನು ನಿಲ್ಲಿಸಿದ ತಕ್ಷಣ ಹುಲಿ ತಲೆಯನ್ನೊಮ್ಮೆ ಕೊಡವಿಕೊಂಡು ನೀರು ಕುಡಿಯಲು ಮುಂದಾಗುತ್ತದೆ.


ಏಪ್ರಿಲ್‌ 19ರಂದು ಈ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಅಂದಿನಿಂದ ಇಂದಿನವರೆಗೆ ವಿಡಿಯೊ 102 ಮಿಲಿಯನ್‌ಗೂ ಅಧಿಕ ಮಂದಿಯಿಂದ ವೀಕ್ಷಣೆಗೊಂಡಿದೆ. 7.5 ಮಿಲಿಯನ್‌ಗೂ ಅಧಿಕ ಮಂದಿ ವಿಡಿಯೊಗೆ ಲೈಕ್‌ ಮಾಡಿದ್ದಾರೆ. ಹಾಗೆಯೇ ಲಕ್ಷಾಂತರ ಮಂದಿ ವಿಡಿಯೊಗೆ ಕಾಮೆಂಟ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. “ಅಬ್ಬಾ, ಹುಲಿ ಕೂಡ ಮುದ್ದಾಡುವ ಪ್ರಾಣಿಯಂತೆ ಕಂಡಿದ್ದು ಇದೊಂದೇ ವಿಡಿಯೊದಲ್ಲಿ”, “ಮುಂದೆ ಏನಾದರೂ ಹುಲಿ ನಮ್ಮ ಮೇಲೆ ಅಟ್ಯಾಕ್‌ ಮಾಡಿದರೆ ನಾವೇನು ಮಾಡಬೇಕು ಎನ್ನುವುದು ಗೊತ್ತಾಯಿತು” ಎನ್ನುವಂತಹ ಹಲವಾರು ಕಮೆಂಟ್‌ಗಳು ವಿಡಿಯೊಗೆ ಬಂದಿವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

RCB vs CSK: ಧೋನಿ ವರ್ತನೆಗೆ ‘ಇಟ್‌ ಹರ್ಟ್ಸ್‌​’ ಎಂದ ಆರ್​ಸಿಬಿ ಅಭಿಮಾನಿಗಳು; ಧೋನಿ ಮಾಡಿದ ತಪ್ಪೇನು?

RCB vs CSK: ಪಂದ್ಯದ ಮುಕ್ತಾಯದ ಬಳಿಕ ವಾಡಿಕೆಯಂತೆ ಉಭಯ ತಂಡಗಳ ಆಟಗಾರರು ಪರಸ್ಪರ ಹಸ್ತಲಾಘವ ಮಾಡಬೇಕು. ಅದರಂತೆ ಚೆನ್ನೈ ತಂಡದ ಆಟಗಾರರೆಲ್ಲ ಸರದಿ ಸಾಲಿನಲ್ಲಿ ನಿಂತು ಸಿದ್ಧರಾಗಿದ್ದರು. ಆದರೆ ಆರ್​ಸಿಬಿ ಆಟಗಾರರು ಮೈದಾನದಲ್ಲೇ ಗೆಲುವಿನ ಸಂಭ್ರಮಾಚರಣೆ ಮಾಡುತ್ತಿದ್ದರು. ಕೆಲ ಕಾಲ ಕಾದ ಧೋನಿ ಆರ್​ಸಿಬಿ ಆಟಗಾರರು ಬರದೇ ಇದದ್ದನ್ನು ನೋಡಿ ಪೆವಿಲಿಯನ್​ನತ್ತ ಮರಳಿದ್ದಾರೆ.

VISTARANEWS.COM


on

RCB vs CSK
Koo

ಬೆಂಗಳೂರು: ಮಹೇಂದ್ರ ಸಿಂಗ್‌ ಧೋನಿ(MS Dhoni) ಕ್ರಿಕೆಟ್‌ ಮೈದಾನದಲ್ಲಿ ಶಾಂತಿಯಿಂದ ವ‌ರ್ತಿಸುತ್ತಾರೆ. ಬ್ಯಾಟಿಂಗ್‌, ವಿಕೆಟ್‌ ಕೀಪಿಂಗ್‌ ಅಥವಾ ನಾಯಕನಾಗೇ ಇರಲಿ ಶಾಂತಚಿತ್ತ ಅವರ ಮುಖ್ಯ ಗುಣ. ಎಂತಹ ಸನ್ನಿವೇಶವಿದ್ದರೂ ಧೋನಿ(MS Dhoni leaves without shaking hands) ತಾಳ್ಮೆ ಕಳೆದುಕೊಳ್ಳುವುದು ವಿರಳ. ಇದೇ ಕಾರಣಕ್ಕೆ ಅವರಿಗೆ ಕ್ಯಾಪ್ಟನ್‌ ಕೂಲ್‌ ಎಂಬ ಹೆಸರು ಕೂಡ ಇದೆ. ಆದರೆ ನಿನ್ನೆ(ಶನಿವಾರ) ನಡೆದ ಆರ್​ಸಿಬಿ(RCB vs CSK) ವಿರುದ್ಧದ ಪಂದ್ಯದಲ್ಲಿ ಧೋನಿ ತೋರಿದ ವರ್ತನೆಗೆ ಎದುರಾಳಿ ತಂಡದ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಮಳೆ ಪೀಡಿತ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 218 ರನ್​ ಬಾರಿಸಿತು. ಜವಾಬಿತ್ತ ಚೆನ್ನೈ ಈ ಬೃಹತ್​ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ಹಲವು ಏರಿಳಿತ ಕಂಡು ಕೊನೆಗೆ ತನ್ನ ಪಾಲಿನ ಆಟದಲ್ಲಿ 7 ವಿಕೆಟ್​ಗೆ 191 ರನ್​ ಗಳಿಸಲಷ್ಟೇ ಶಕ್ತವಾಗಿ ಸೋಲಿಗೆ ಶರಣಾಯಿತು. ಜತೆಗೆ ಟೂರ್ನಿಯಿಂದಲೂ ಹೊರಬಿದ್ದು ಮಾಜಿ ಚಾಂಪಿಯನ್​ ಎನಿಸಿಕೊಂಡಿತು.

ಇದನ್ನೂ ಓದಿ RCB vs CSK: ಚೆನ್ನೈ ಸೋಲಿಗೆ ಧೋನಿ ಬಾರಿಸಿದ ಔಟ್​ ಆಫ್​ದಿ ಸ್ಟೇಡಿಯಂ ಸಿಕ್ಸರ್​ ಕಾರಣ

ಪಂದ್ಯದ ಮುಕ್ತಾಯದ ಬಳಿಕ ವಾಡಿಕೆಯಂತೆ ಉಭಯ ತಂಡಗಳ ಆಟಗಾರರು ಪರಸ್ಪರ ಹಸ್ತಲಾಘವ ಮಾಡಬೇಕು. ಅದರಂತೆ ಚೆನ್ನೈ ತಂಡದ ಆಟಗಾರರೆಲ್ಲ ಸರದಿ ಸಾಲಿನಲ್ಲಿ ನಿಂತು ಸಿದ್ಧರಾಗಿದ್ದರು. ಆದರೆ ಆರ್​ಸಿಬಿ ಆಟಗಾರರು ಮೈದಾನದಲ್ಲೇ ಗೆಲುವಿನ ಸಂಭ್ರಮಾಚರಣೆ ಮಾಡುತ್ತಿದ್ದರು. ಕೆಲ ಕಾಲ ಕಾದ ಧೋನಿ ಆರ್​ಸಿಬಿ ಆಟಗಾರರು ಬರದೇ ಇದದ್ದನ್ನು ನೋಡಿ ಪೆವಿಲಿಯನ್​ನತ್ತ ಮರಳಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಆರ್​ಸಿಬಿ ಅಭಿಮಾನಿಗಳು ಚೆನ್ನೈ ವಿರೋದಿಯಾಗಿದ್ದರೂ ಕೂಡ ನಿನ್ನೆ ಧೋನಿಗೆ ಸಂಪೂರ್ಣ ಬೆಂಬಲ ಸೂಚಿಸಿದ್ದರು. ಅಲ್ಲದೆ ಧೋನಿಯ ಜೆರ್ಸಿ ತೊಟ್ಟು, ದೊಡ್ಡ ಬ್ಯಾನರ್​ ಮೂಲಕ ನೀವು ವಿದಾಯ ಹೇಳಬೇಡಿ ಇದು ಆರ್​ಸಿಬಿ ಮತ್ತು ಕೊಹ್ಲಿ ಅಭಿಮಾನಿಗಳ ಬೇಡಿಕೆ ಎಂದು ಮನವಿ ಮಾಡಿದ್ದರು. ಈ ಮೂಲಕ ಧೋನಿಗೆ ಸಪೋರ್ಟ್​ ಮಾಡಿದ್ದರು. ಆದರೆ ಧೋನಿ ಆರ್​ಸಿಬಿ ಆಟಗಾರರಿಗೆ ಹಸ್ತಲಾಘವ ಮಾಡದೆ ತೆರಳಿದ್ದು ಮಾತ್ರ ಬೇಸರ ತಂದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ‘ಇಟ್‌ ಹರ್ಟ್ಸ್‌​’ ಎಂದ ಹ್ಯಾಶ್​ ಟ್ಯಾಗ್​ನೊಂದಿಗೆ ಬರೆದುಕೊಂಡಿದ್ದಾರೆ.

ಧೋನಿ ಮೈದಾನದಲ್ಲಿದ ಆರ್​ಸಿಬಿ ಆಟಗಾರರಿಗೆ ಹಸ್ತಲಾಘವ ಮಾಡದಿದ್ದರೂ ಕೂಡ ತಾವು ಪೆವಿಲಿಯನ್​ ಕಡೆಗೆ ಹೋಗುವಾಗ ಎದುರಿಗೆ ಸಿಕ್ಕ ಆರ್​ಸಿಬಿ ಸಿಬ್ಬಂದಿಗಳಿಗೆ ಹಸ್ತಲಾಘವ ನೀಡಿದ್ದಾರೆ. ಯಶ್​ ದಯಾಳ್​ ಎಸೆತ ಅಂತಿಮ ಓವರ್​ನ ಮೊದಲ ಎಸೆತವನ್ನೇ ಧೋನಿ ಔಟ್​ ಆಫ್​ದಿ ಸ್ಟೇಡಿಯಂಗೆ ಸಿಕ್ಸರ್ ಬಾರಿಸಿದರು. ಈ ಸಿಕ್ಸರ್​ 110 ಮೀ. ದೂರ ಚಿಮ್ಮಿತು. ಮುಂದಿನ ಎಸೆತದಲ್ಲಿಯೂ ಧೋನಿ ಸಿಕ್ಸರ್​ ಬಾರಿಸುವ ಪ್ರಯತ್ನದಲ್ಲಿ ಬೌಂಡರಿ ಲೈನ್​ನಲ್ಲಿ ಕ್ಯಾಚ್​ ನೀಡಿ ವಿಕೆಟ್​ ಕಳೆದುಕೊಂಡರು. ಧೋನಿ ವಿಕೆಟ್​ ಪತನಗೊಳ್ಳುತ್ತಿದ್ದಂತೆ ಚೆನ್ನೈ ಸೋಲು ಕೂಡ ಖಚಿತಗೊಂಡಿತು.

Continue Reading

ವೈರಲ್ ನ್ಯೂಸ್

Viral News: ಬಾಯ್‌ಫ್ರೆಂಡ್‌ನ ಗುಪ್ತಾಂಗವನ್ನೇ ಕಟ್‌ ಮಾಡಿ ಕಸದ ಬುಟ್ಟಿಗೆ ಎಸೆದ ಮಹಿಳೆ

Viral News:ವುಡ್‌ಸ್ಪ್ರಿಂಗ್‌ ಸೂಟ್ಸ್‌ ಹೊಟೇಲ್‌ನಲ್ಲಿ ಘಟನೆ ನಡೆದಿದ್ದು, ಶೆಂಟಿಂಗ್‌ ಗೋ ಎಂಬ 32ವರ್ಷದ ಮಹಿಳೆ ತನ್ನ ಬಾಯ್‌ಫ್ರೆಂಡ್‌ ಅನ್ನು ಹಲವು ಬಾರಿ ಚುಚ್ಚಿದ್ದಾಳೆ. ಬಳಿಕ ಅವನ ಗುಪ್ತಾಂಗವನ್ನು ಕಟ್‌ ಮಾಡಿ ಎಸೆದಿದ್ದಾಳೆ. ಈ ವಿಚಾರ ತಿಳಿದ ಹೊಟೇಲ್‌ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸ್‌ ಸ್ಥಳಕ್ಕೆ ಬಂದು ನೋಡಿದಾಗ ಯುವಕ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಆತನ ಗುಪ್ತಾಂಗವನ್ನು ಕತ್ತರಿಸಲಾಗಿತ್ತು. ಕತ್ತರಿಸಿಲಾಗಿದ್ದ ಗುಪ್ತಾಂಗ ಬೆಡ್‌ ಪಕ್ಕದಲ್ಲೇ ಇದ್ದ ಕಸದ ಬುಟ್ಟಿಯಲ್ಲಿ ಸಿಕ್ಕಿತ್ತು.

VISTARANEWS.COM


on

Viral News
Koo

ನವದೆಹಲಿ: ಗಾಢನಿದ್ದೆಯಲ್ಲಿದ್ದ ಬಾಯ್‌ಫ್ರೆಂಡ್‌ನ ಗುಪ್ತಾಂಗವನ್ನೇ ಮಹಿಳೆಯೊಬ್ಬಳು ಕತ್ತರಿಸಿ ಎಸೆದಿರುವ ಘಟನೆ(Viral News) ಅಮೆರಿಕದ(America) ಕೊಲೋರಡೋ ಪ್ರದೇಶದಲ್ಲಿ ನರೆದಿದೆ. ತನ್ನನ್ನು ನೆಮ್ಮದಿಯಿಂದ ಮಲಗುವುದಕ್ಕೆ ಬಿಡದಿದ್ದ ಕಾರಣ ಮತ್ತು ಆತ ಮತ್ತೆ ತನ್ನನ್ನು ಗರ್ಭಿಣಿ(Pregnant)ಯನ್ನಾಗಿ ಮಾಡಿದ್ದಾನೆಂಬ ಕಾರಣಕ್ಕೆ ಕೋಪಗೊಂಡ ಮಹಿಳೆ ಬಾಯ್‌ಫ್ರೆಂಡ್‌ನ ಗುಪ್ತಾಂಗವನ್ನೇ ಕತ್ತರಿಸಿದ್ದಾಳೆ.

ಘಟನೆ ವಿವರ

ವುಡ್‌ಸ್ಪ್ರಿಂಗ್‌ ಸೂಟ್ಸ್‌ ಹೊಟೇಲ್‌ನಲ್ಲಿ ಘಟನೆ ನಡೆದಿದ್ದು, ಶೆಂಟಿಂಗ್‌ ಗೋ ಎಂಬ 32ವರ್ಷದ ಮಹಿಳೆ ತನ್ನ ಬಾಯ್‌ಫ್ರೆಂಡ್‌ ಅನ್ನು ಹಲವು ಬಾರಿ ಚುಚ್ಚಿದ್ದಾಳೆ. ಬಳಿಕ ಅವನ ಗುಪ್ತಾಂಗವನ್ನು ಕಟ್‌ ಮಾಡಿ ಎಸೆದಿದ್ದಾಳೆ. ಈ ವಿಚಾರ ತಿಳಿದ ಹೊಟೇಲ್‌ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸ್‌ ಸ್ಥಳಕ್ಕೆ ಬಂದು ನೋಡಿದಾಗ ಯುವಕ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಆತನ ಗುಪ್ತಾಂಗವನ್ನು ಕತ್ತರಿಸಲಾಗಿತ್ತು. ಕತ್ತರಿಸಿಲಾಗಿದ್ದ ಗುಪ್ತಾಂಗ ಬೆಡ್‌ ಪಕ್ಕದಲ್ಲೇ ಇದ್ದ ಕಸದ ಬುಟ್ಟಿಯಲ್ಲಿ ಸಿಕ್ಕಿತ್ತು.

ಮತ್ತೆ ಗರ್ಭಿಯಾಗಿದ್ದ ಮಹಿಳೆ

ಕೊಲೆಯಾದ ವ್ಯಕ್ತಿ , ಶೆಂಟಿಂಗ್‌ ಗೋ ಇಚ್ಛೆಗೆ ವಿರುದ್ಧವಾಗಿ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿ ಎರಡನೇ ಬಾರಿ ಗರ್ಭಿಣಿಯನ್ನಾಗಿ ಮಾಡಿದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೆ ಭಾರೀ ಗಲಾಟೆಯಾಗಿತ್ತು. ಆಕೆಯನ್ನು ಮಲಗಲೂ ಬಿಡದೇ ವ್ಯಕ್ತಿ ಬಹಳಷ್ಟು ಕಿರಿ ಕಿರಿ ಮಾಡುತ್ತಿದ್ದ. ಇದರಿಂದ ಕೋಪಕೊಂಡ ಶೆಂಟಿಂಗ್‌ ಗೋ ಚಾಕುವಿನಿಂದ ಆತನನ್ನು ಚುಚ್ಚಿದ್ದಾಳೆ. ಬಳಿಕ ಆತನ ಗುಪ್ತಾಂಗ ಕಿತ್ತು ಕಸದ ಬುಟ್ಟಿಗೆ ಹಾಕಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಪೊಲೀಸರು ಶೆಂಟಿಂಗ್‌ ಗೋಳನ್ನು ಅರೆಸ್ಟ್‌ ಮಾಡಿದ್ದು, ಮೃತ ವ್ಯಕ್ತಿಯ ಗುರುತು ಬಹಿರಂಗ ಪಡಿಸಿಲ್ಲ.

ಮಹಾರಾಷ್ಟ್ರದ ಪುಣೆಯಲ್ಲೂ ಇಂತಹದ್ದೇ ಒಂದು ಘಟನೆ ವರದಿಯಾಗಿದೆ. ವ್ಯಕ್ತಿಯೊಬ್ಬ ತನ್ನ ಪತಿಯ ಶೀಲ ಶಂಕಿಸಿ, ಆಕೆ ಗುಪ್ತಾಂಗಕ್ಕೆ ಮೊಳೆ ಜಡಿದು, ಬೀಗ ಹಾಕುವ ಮೂಲಕ ರಕ್ಕಸ ಕೃತ್ಯ ಎಸಗಿದ್ದಾನೆ. ಪುಣೆಯ ವಾಕಡ್‌ ಪ್ರದೇಶದಲ್ಲಿ ಮೇ 11ರಂದು ಪತಿಯು ಮೃಗದಂತೆ ವರ್ತಿಸಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯು ದೂರು ದಾಖಲಿಸಿದ ಬಳಿಕ ಪೊಲೀಸರು ದುಷ್ಟನನ್ನು ಬಂಧಿಸಿದ್ದಾರೆ. ಗುಪ್ತಾಂಗಕ್ಕೆ ಮೊಳೆ ಹೊಡೆದು, ಬೀಗ ಜಡಿದ ಪರಿಣಾಮ ಮಹಿಳೆಗೆ ತುರ್ತಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸದ್ಯ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಮಾರಣಾಂತಿಕವಾಗಿ ಹಲ್ಲೆ ನಡೆಸಿದವನನ್ನು ನೇಪಾಳದ ಮೂಲದ, ಸದ್ಯ ಪಿಂಪ್ರಿ-ಚಿಂಚ್ವಾಡ್‌ನ ವಾಕಡ್‌ನಲ್ಲಿ ನೆಲೆಸಿದ ಉಪೇಂದ್ರ ಹುಡಕೆ (30) ಎಂಬುದಾಗಿ ಗುರುತಿಸಲಾಗಿದೆ.

ಇದನ್ನೂ ಓದಿ: Electric shock : ಮಳೆಗೆ ತುಂಡಾಗಿ ಬಿದ್ದ ವಿದ್ಯುತ್ ತಂತಿ; ಶಾಕ್‌ನಿಂದ ವ್ಯಕ್ತಿ ಸ್ಪಾಟ್‌ ಡೆತ್‌

ಪ್ರಕರಣದ ಕುರಿತು ತನಿಖಾಧಿಕಾರಿ ಬಾಲಾಜಿ ಮೆತೆ ಅವರು ಮಾಹಿತಿ ನೀಡಿದ್ದಾರೆ. “ಗಂಡ ಹಾಗೂ ಹೆಂಡತಿ ನೇಪಾಳದವರು. ಉದ್ಯೋಗ ಅರಸಿ ಅವರು ಮೇ ತಿಂಗಳ ಮೊದಲ ವಾರದಲ್ಲಿ ವಾಕಡ್‌ಗೆ ಬಂದು ನೆಲೆಸಿದ್ದರು. ಮೇ 11ರಂದು ಪಾನಮತ್ತನಾಗಿ ಬಂದ ವ್ಯಕ್ತಿಯು ಪತಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಆಕೆಯ ಶೀಲ ಶಂಕಿಸಿದ ಆತನು ಒದ್ದು, ಆಕೆಯ ಕೈಕಾಲು ಕಟ್ಟಿ, ಗುಪ್ತಾಂಗಕ್ಕೆ ಮೊಳೆ ಜಡಿದು, ಚಾಕುವಿನಿಂದ ಹಲ್ಲೆ ನಡೆಸಿ, ಬೀಗ ಹಾಕಿದ್ದಾನೆ. ಮಹಿಳೆಯು ಅಂಗಲಾಚಿದರೂ ಆತನು ಬಿಟ್ಟಿಲ್ಲ” ಎಂದು ತಿಳಿಸಿದ್ದಾರೆ. ಮಹಿಳೆ ಅರಚುವ ಧ್ವನಿ ಕೇಳಿ ಪಕ್ಕದ ಮನೆಯ ಲಲಿತ್‌ ಪರಿಹಾರ್‌ ಎಂಬುವರು ಮನೆಗೆ ತೆರಳಿ ನೋಡಿದಾಗ, ಮಹಿಳೆಯು ರಕ್ತದ ಮಧ್ಯೆ ಬಿದ್ದಿರುವುದು ಕಂಡಿದೆ. ಕೂಡಲೇ ಅವರು ಸುತ್ತಮುತ್ತಲಿವರನ್ನು ಕರೆದ ಅವರು ಮಹಿಳೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಜ್ಞೆ ಕಳೆದುಕೊಂಡಿದ್ದ ಮಹಿಳೆಗೆ ಆಸ್ಪತ್ರೆಯಲ್ಲಿ ತುರ್ತು ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇದಾದ ಬಳಿಕ ಅವರು ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Continue Reading

ಬೆಂಗಳೂರು

Yelahanka flyover : ಯುವತಿಯನ್ನು ತೊಡೆ ಮೇಲೆ ಕೂರಿಸಿಕೊಂಡು ಯುವಕನ ಡೆಡ್ಲಿ ಬೈಕ್‌ ರೈಡಿಂಗ್‌!

Yelahanka flyover : ಬೆಂಗಳೂರಿನ ಯಲಹಂಕ ಫ್ಲೈಓವರ್‌ನಲ್ಲಿ ಜೋಡಿಯೊಂದರ ಡೆಡ್ಲಿ ಬೈಕ್ ರೈಡಿಂಗ್ (Bike Riding) ವಿಡಿಯೊ ವೈರಲ್‌ ಆಗಿದೆ. ಯುವತಿಯನ್ನು ತೊಡೆಯ ಮೇಲೆ ಕೂರಿಸಿಕೊಂಡ ಯುವಕ ಫ್ಲೈಓವರ್‌ನಲ್ಲಿ ಜಾಲಿ ರೈಡ್‌ ಮಾಡಿದ್ದಾನೆ. ಇದನ್ನೂ ಇತರೆ ಸವಾರರು ತಮ್ಮ ಮೊಬೈಲ್‌ನಲ್ಲಿ ಸೆರೆಯಿಡಿದ್ದಾರೆ.

VISTARANEWS.COM


on

By

yelahanka flyover
Koo

ಬೆಂಗಳೂರು: ಇತ್ತೀಚೆಗೆ ಜೋಡಿಗಳು ಬೈಕ್​ನಲ್ಲಿ ಹೋಗುತ್ತಲೇ ರೊಮ್ಯಾನ್ಸ್ (Romance in bike riding) ಮಾಡುವ ಪ್ರಕರಣಗಳು ಹೆಚ್ಚಾಗುತ್ತಿದೆ. ಹುಚ್ಚು ಸಾಹಸವೂ, ಪ್ರೇಮದ ಉನ್ಮಾದವೋ ಗೊತ್ತಿಲ್ಲ. ಇದು ಅಪಾಯಕಾರಿ ಎಂದು ಗೊತ್ತಿದ್ದರೂ ಪರಸ್ಪರ ಎದುರುಬದುರು ಕುಳಿತುಕೊಂಡು ಮುದ್ದಾಡಿಕೊಂಡು ಹೋಗುವುದು, ಯುವತಿಯನ್ನು ತೊಡೆ ಮೇಲೆ ಕೂರಿಸಿಕೊಂಡು ಡೆಡ್ಲಿ ರೈಡಿಂಗ್‌ ಮಾಡುವುದು ಹೆಚ್ಚುತ್ತಿದೆ. ಸದ್ಯ ಬೆಂಗಳೂರಲ್ಲಿ (Yelahanka flyover) ಜೋಡಿಯೊಂದರ ಬೈಕ್ ರೈಡಿಂಗ್ (Bike Riding ವಿಡಿಯೊ ವೈರಲ್‌ ಆಗಿದೆ.

ಯುವತಿಯನ್ನು ತೊಡೆಯ ಮೇಲೆ ಕೂರಿಸಿಕೊಂಡು ಯುವಕ ಬೈಕ್‌ ರೈಡ್ ಮಾಡಿದ್ದಾನೆ. ಬೆಂಗಳೂರಿನ ಏರ್‌ಪೋರ್ಟ್ ರಸ್ತೆಯ ಯಲಹಂಕ ಫ್ಲೈ‌ಓವರ್‌ನಲ್ಲಿ ಮೇ 17ರ ರಾತ್ರಿ‌ ಈ ಘಟನೆ ನಡೆದಿದೆ. ಯುವ ಜೋಡಿಗಳು ಹೆಲ್ಮೆಟ್ ಧರಿಸದೇ ಅಜಾಗರೂಕತೆಯಿಂದ ಬೈಕ್ ಚಾಲನೆ ಮಾಡಿದ್ದಾರೆ. ಜೋಡಿಗಳ ಜಾಲಿ‌ ರೈಡ್‌ನ ದೃಶ್ಯ ಕಾರಿನಲ್ಲಿ ಹೋಗುತ್ತಿದ್ದ ಪ್ರಯಾಣಿಕರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಿಡಿದ್ದಾರೆ.

ಇದನ್ನೂ ಓದಿ: Viral Video: ಐಸ್ ಕ್ರೀಮ್‌ನಲ್ಲಿ ಚಿನ್ನದ ಉಂಗುರ ಅಡಗಿಸಿಕೊಟ್ಟ ಪ್ರಿಯತಮ! ಮುಂದೇನಾಯ್ತು?

ಇತ್ತ ಸೋಶಿಯಲ್‌ ಮೀಡಿಯಾದಲ್ಲಿ ಈ ವಿಡಿಯೊ ವೈರಲ್‌ ಆಗಿದ್ದು, ಸಾರ್ವಜನಿಕ ಸುರಕ್ಷತೆ ಅಪಾಯಗಳ ಬಗ್ಗೆ ವ್ಯಾಪಕ ಕಳವಳ ಹುಟ್ಟುಹಾಕಿದೆ. ಹೆಲ್ಮೆಟ್ ಧರಿಸದೆ ಇರುವುದು ಜತೆಗೆ ಯುವತಿ ಪೆಟ್ರೋಲ್‌ ಟ್ಯಾಂಕ್ ಮೇಲೆ ಕುಳಿತು ತನ್ನ ಸಂಗಾತಿಯನ್ನು ಅಪ್ಪಿಕೊಂಡಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ಅಜಾಗರೂಕ ಮತ್ತು ಅನುಚಿತ ವರ್ತನೆಗಾಗಿ ದಂಡ ವಿಧಿಸಿ ಎಂದು ನೆಟ್ಟಿಗರು ಕಾಮೆಂಟ್‌ ಹಾಕಿದ್ದಾರೆ. ರಸ್ತೆ ಸುರಕ್ಷತೆಯ ಬಗ್ಗೆ ಮತ್ತು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಅಗತ್ಯತೆಯ ಬಗ್ಗೆ ಚರ್ಚಿಸಿದ್ದಾರೆ. ಯಲಹಂಕ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Murder Case : ಕಲ್ಲಿನಿಂದ ಜಜ್ಜಿ ಯುವಕನ ಬರ್ಬರ ಹತ್ಯೆ; ಕೆಆರ್‌ ಮಾರ್ಕೆಟ್‌ನಲ್ಲಿ ಶವ ಪತ್ತೆ

ಛೀ…ಈತನೆಂಥಾ ಕಾಮುಕ! ಸಾರ್ವಜನಿಕ ಸ್ಥಳದಲ್ಲಿ ಈ ಪಾಪಿ ಬಾಲಕಿಗೆ ಮಾಡಿದ್ದೇನು ಗೊತ್ತಾ?

ನವದೆಹಲಿ: ಕಾಮುಕನೋರ್ವ ಸಾರ್ವಜನಿಕ ಸ್ಥಳದಲ್ಲಿ ಅಪ್ರಾಪ್ತ ಬಾಲಕಿ(Minor Girl)ಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣ(Social Media)ದಲ್ಲಿ ವೈರಲ್‌ (Viral Video) ಆಗಿದ್ದು, ಈ ಹೇಯ ಕೃತ್ಯಕ್ಕೆ ನೆಟ್ಟಿಗರು ಕಿಡಿ ಕಾರಿದ್ದಾರೆ. ಜನನಿಬಿಡ ಪ್ರದೇಶದಲ್ಲಿ ತನ್ನ ತಾಯಿಯೊಂದಿಗೆ ನಿಂತಿದ್ದ ಬಾಲಕಿಯ ಹಿಂದೆ ಹೋಗಿ ನಿಲ್ಲುವ ಕಾಮುಕ ತನ್ನ ಕುಚೇಷ್ಠೆ ಶುರು ಮಾಡುತ್ತಾನೆ. ಆಕೆಯ ಹಿಂಬಂದಿಯನ್ನು ಅನುಚಿತವಾಗಿ ಮುಟ್ಟಿ ವಿಕೃತಿ ಮೆರೆಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ದೆಹಲಿಯ ಸಾದರ್‌ ಬಜಾರ್‌ನಲ್ಲಿ ಈ ಘಟನೆ ನಡೆದಿದ್ದು, ಕಾಮುಕನ ಕುಚೇಷ್ಠೆಯನ್ನು ಅಲ್ಲೇ ಇದ್ದ ವ್ಯಕ್ತಿಯೊಬ್ಬ ರೆಕಾರ್ಡ್‌ ಮಾಡಿದ್ದಾನೆ. ವಿಡಿಯೋ ಮಾಡುತ್ತಿರುವುದು ಗೊತ್ತಾಗುತ್ತಿದ್ದಂತೆ ಆ ವ್ಯಕ್ತಿ ಸ್ಥಳದಿಂದ ಎಸ್ಕೇಪ್‌ ಆಗಿದ್ದಾನೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್‌ ವೈರಲ್‌ ಆಗಿದ್ದು, ಪೊಲೀಸರು ಸ್ವಯಂಪ್ರೇರಿತ ಕೇಸ್‌ ದಾಖಲಿಸಿಕೊಂಡು ತನಿಖೆ ನಡೆಸಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ.

ಇನ್ನು ಪತ್ತೆಯಾಗದ ಕಿಡಿಗೇಡಿ

ಇನ್ನು ಘಟನೆಗೆ ಸಂಬಂಧಿಸಿದಂತೆ ಈ ನೀಚ ಕೃತ್ಯ ಎಸಗಿರುವ ಕಾಮುಕ ಇನ್ನೂ ಪತ್ತೆಯಾಗಿಲ್ಲ. ಪೊಲೀಸ್‌ ದೂರು ಕೂಡ ದಾಖಲಾಗಿಲ್ಲ. ಇನ್ನು ಅಪ್ರಾಪ್ತ ಬಾಲಕಿಗೆ ಈ ನೀಚ ಕೃತ್ಯದ ಬಗ್ಗೆ ಅರಿವಾಗಿಲ್ಲ ಎಂಬಂತೆ ವಿಡಿಯೋದಲ್ಲಿ ಭಾಸವಾಗುತ್ತಿದೆ. ಇನ್ನು ಮತ್ತೊಂದು ವರದಿ ಪ್ರಕಾರ ಪೊಲೀಸರಿಗೆ ಈ ಬಗ್ಗೆ ದೂರು ನೀಡಲಾಗಿದ್ದು, ಕಿಡಿಗೇಟಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿಗಾಗಿ ಪೊಲೀಸರ ತೀವ್ರ ಶೋಧ ನಡೆಸುತ್ತಿದ್ದಾರೆ ಎನ್ನಲಾಗಿದೆ.

ನೆಟ್ಟಿಗರಿಂದ ಆಕ್ರೋಶ:

ಇನ್ನು ಈ ಹೇಯ ಕೃತ್ಯದ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದ್ದಂತೆ ನೆಟ್ಟುಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕ್ರಿಮಿನಲ್ ಬಾಲಕಿ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಈತ ನಿಮ್ಮ ಕಣ್ಣಿಗೆ ಬಿದ್ದರೆ ಪೊಲೀಸರಿಗೆ ಒಪ್ಪಿಸಬೇಡಿ..ನಿಮಗೇನು ಮಾಡಬೇಕು ಅಂತ ಅನಿಸುತ್ತದೆಯೋ ಅದನ್ನೇ ಮಾಡಿ ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. ಇವರೆಲ್ಲ ಅತ್ಯಾಚಾರಿಗಳು..ಇವರು ಅಷ್ಟು ಸುಲಭವಾಗಿ ಕೈಗೆ ಸಿಗುವುದಿಲ್ಲ. ಇವನನ್ನು ತಕ್ಷಣ ಅರೆಸ್ಟ್‌ ಮಾಡಿ, ಕಠಿಣ ಶಿಕ್ಷೆ ವಿಧಿಸಿ ಎಂದು ಬರೆದುಕೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ವೈರಲ್ ನ್ಯೂಸ್

Viral Video: ಅಬ್ಬಾ..ಹಸುಗಳ ಫೈಟ್‌ಗೆ ಬಾಲಕಿ ಅಪ್ಪಚ್ಚಿ! ಶಾಕಿಂಗ್‌ ವಿಡಿಯೋ ವೈರಲ್‌

Viral Video:ಒಂದು ಅಂಗಡಿ ಎದುರು ಮೂವರು ಬಾಲಕಿಯರು ತಿಂಡಿ ತಿನ್ನುತ್ತಿರುತ್ತಾರೆ. ಇಬ್ಬರು ಹುಡುಗಿಯರು ಬೆಂಚ್‌ ಮೇಲೆ ಕುಳಿತುಕೊಂಡು ಇನ್ನಿಬ್ಬರು ಪಕ್ಕದಲ್ಲೇ ನಿಂತು ಫ್ರೆಂಚ್‌ ಫ್ರೈಸ್‌ ಸವಿಯುತ್ತಿರುತ್ತಾರೆ. ಕುಳಿತಿದ ಹುಡುಗಿ ಇದ್ದಕ್ಕಿದ್ದಂತೆ ಆ ಏನೋ ಬರುತ್ತಿರುವುದನ್ನು ಗಮನಿಸುತ್ತಾರೆ. ಇನ್ನೇನು ಎದ್ದು ಓಡಬೇಕು ಅನ್ನೊವಷ್ಟರಲ್ಲಿ ಎಲ್ಲಿಂದಲೋ ಓಡಿ ಬಂದ ಎರಡು ದರನಗಳು ಏಕಾಏಕಿ ಹುಡುಗಿಯರ ಮೇಲೆ ಎರಗಿವೆ. ದನಗಳ ನಡುವಿನ ಫೈಟ್‌ಗೆ ಒಬ್ಬಳು ಹುಡುಗಿ ಕೆಳಗೆ ಬಿದ್ದು ಅಪ್ಪಚ್ಚಿಯಾದರೆ ಮತ್ತೊಬ್ಬಳು ದೂರ ಹೋಗಿ ಬಿದ್ದಿದ್ದಾಳೆ.

VISTARANEWS.COM


on

viral video
Koo

ನವದೆಹಲಿ: ಕೆಲವೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಆಗುವ ವಿಡಿಯೋ(Viral video) ಬೆಚ್ಚಿ ಬೀಳಿಸುತ್ತೆ. ಇದೀಗ ಅಂತಹದ್ದೇ ಒಂದು ಘಟನೆ ದೆಹಲಿ(Delhi)ಯಲ್ಲಿ ನಡೆದಿದ್ದು, ಎರಡು ಹಸುಗಳ ನಡುವಿನ ಬಿಗ್‌ ಫೈಟ್‌(Cow fight)ನಿಂದಾಗಿ ಇಬ್ಬರು ಬಾಲಕಿಯರು ಗಂಭೀರವಾಗಿ ಗಾಯಗೊಂಡಿದ್ದರು. ಈ ಶಾಕಿಂಗ್‌ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ವಿಡಿಯೋದಲ್ಲಿ ಏನಿದೆ?

ಒಂದು ಅಂಗಡಿ ಎದುರು ಮೂವರು ಬಾಲಕಿಯರು ತಿಂಡಿ ತಿನ್ನುತ್ತಿರುತ್ತಾರೆ. ಇಬ್ಬರು ಹುಡುಗಿಯರು ಬೆಂಚ್‌ ಮೇಲೆ ಕುಳಿತುಕೊಂಡು ಇನ್ನಿಬ್ಬರು ಪಕ್ಕದಲ್ಲೇ ನಿಂತು ಫ್ರೆಂಚ್‌ ಫ್ರೈಸ್‌ ಸವಿಯುತ್ತಿರುತ್ತಾರೆ. ಕುಳಿತಿದ ಹುಡುಗಿ ಇದ್ದಕ್ಕಿದ್ದಂತೆ ಆ ಏನೋ ಬರುತ್ತಿರುವುದನ್ನು ಗಮನಿಸುತ್ತಾರೆ. ಇನ್ನೇನು ಎದ್ದು ಓಡಬೇಕು ಅನ್ನೊವಷ್ಟರಲ್ಲಿ ಎಲ್ಲಿಂದಲೋ ಓಡಿ ಬಂದ ಎರಡು ದರನಗಳು ಏಕಾಏಕಿ ಹುಡುಗಿಯರ ಮೇಲೆ ಎರಗಿವೆ. ದನಗಳ ನಡುವಿನ ಫೈಟ್‌ಗೆ ಒಬ್ಬಳು ಹುಡುಗಿ ಕೆಳಗೆ ಬಿದ್ದು ಅಪ್ಪಚ್ಚಿಯಾದರೆ ಮತ್ತೊಬ್ಬಳು ದೂರ ಹೋಗಿ ಬಿದ್ದಿದ್ದಾಳೆ. ಅಲ್ಲೇ ಇದ್ದ ಮೂರನೇ ಹುಡುಗಿ ಜಸ್ಟ್‌ ಮಿಸ್‌ ಆಗಿದ್ದಾಳೆ. ಕೆಳಗೆ ಬಿದ್ದಿದ್ದ ಬಾಲಕಿಗೆ ಹಸುವಿನ ಕಾಲಿನಡಿಗೆ ಬಿದ್ದು, ತುಳಿಯಲ್ಪಟ್ಟಿದ್ದಾಳೆ. ಆಕೆ ಗಂಭೀರವಾಗಿ ಗಾಯಗೊಂಡಿದ್ದಾಳೆ.

ತಕ್ಷಣ ಅಲ್ಲಿದ್ದ ಜನ ಓಡಿ ಬಂದು ಬಾಲಕಿಯನ್ನು ಹಿಡಿದೆಳೆದು ರಕ್ಷಿಸಿ, ಹಸುಗಳನ್ನು ಓಡಿಸಿದ್ದಾರೆ. ಘಟನೆಯಲ್ಲಿ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, 1.1 ಮಿಲಿಯನ್‌ಗೂ ಅಧಿಕ ವೀಕ್ಷಣೆ ಗಳಿಸಿದೆ. ಕೆಲವು ದಿನಗಳ ಹಿಂದೆ ದಿಲ್ಲಿಯಲ್ಲಿ ಮೊಬೈಲ್‌ ಅಂಗಡಿಗೆ ನುಗ್ಗಿದ್ದ ಗೂಳಿಯೊಂದು ದಾಂಧಲೆ ಎಬ್ಬಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ಇದನ್ನೂ ಓದಿ: Viral Video: ಛೀ…ಈತನೆಂಥಾ ಕಾಮುಕ! ಸಾರ್ವಜನಿಕ ಸ್ಥಳದಲ್ಲಿ ಈ ಪಾಪಿ ಬಾಲಕಿಗೆ ಮಾಡಿದ್ದೇನು ಗೊತ್ತಾ?

ಕೆಲವು ತಿಂಗಳ ಹಿಂದೆ ಯುವಕನೊಬ್ಬ ಅದೇ ರೀತಿ ಗೂಳಿಯೊಂದಿಗೆ ಕಾದಾಡಿದ ವಿಡಿಯೊ ವೈರಲ್‌ (Viral Video) ಆಗಿತ್ತು. ತನ್ನ ಪಾಡಿಗೆ ತಾನು ನಡೆದು ಹೋಗುತ್ತಿದ್ದ ಗೂಳಿಯ ಬಳಿ ಕಾಲು ಕೆದರಿಕೊಂಡು ಜಗಳಕ್ಕೆ ನಿಂತ ಯುವಕನ ಪಾಡು ಅಧೋಗತಿಯಾಗಿತ್ತು. ರಸ್ತೆ ಮಧ್ಯೆ ಗೂಳಿಯೊಂದು ಸುಮ್ಮನೆ ನಿಂತಿತ್ತು. ಅಲ್ಲಿಗೆ ಯುವಕನೊಬ್ಬ ಬರುತ್ತಾನೆ. ಅವನು ಮದ್ಯ ಸೇವಿಸಿ ನಶೆಯಲ್ಲಿರುವುದು ವಿಡಿಯೊದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಗೂಳಿ ಎದುರು ನಿಂತು ಅದನ್ನು ಕೆಣಕುತ್ತಾನೆ. ಗೂಳಿ ಸುಮ್ಮನಿರುತ್ತದೆ. ಬಳಿಕ ಮುಖ ತಿರುಗಿಸುತ್ತದೆ. ಆದರೂ ಆತ ಸುಮ್ಮನಿರುವುದುಲ್ಲ. ಫೈಟ್‌ ಮಾಡುವಂತೆ ಎರಡೂ ಕೈಗಳನ್ನು ಅದರ ಕೊಂಬಿನ ಬಳಿ ಚಾಚುತ್ತಾನೆ. ಅದುವರೆಗೆ ತಾಳ್ಮೆಯಿಂದ ಇದ್ದ ಗೂಳಿ ಒಮ್ಮೆಲೆ ಕೊಂಬಿನಿಂದ ಎತ್ತಿ ಗಾಳಿಯಲ್ಲಿ ಅಲ್ಲಾಡಿಸಿ ಆತನನ್ನು ಬೀಳಿಸುತ್ತದೆ. ಅದೃಷ್ಟವಶಾತ್‌ ಅವನಿಗೆ ಹೆಚ್ಚಿನ ಏಟಾಗಿರಲಿಲ್ಲ. ಆಗ ಬುದ್ಧಿ ಕಲಿತ ಆತ ʼಮಾಡಿದ್ದುಣ್ಣೋ ಮಹಾರಾಯʼ ಎನ್ನುವಂತೆ ಮೈ ಕೈ ಉಜ್ಜಿಕೊಂಡು ಅಲ್ಲಿಂದ ತೆರಳುತ್ತಾನೆ.

Continue Reading
Advertisement
RCB vs CSK
ಕ್ರೀಡೆ14 mins ago

RCB vs CSK: ಆನ್​ಲೈನ್​ ವೀಕ್ಷಣೆಯಲ್ಲೂ ದಾಖಲೆ ಬರೆದ ಆರ್​ಸಿಬಿ-ಚೆನ್ನೈ ಪಂದ್ಯ

Rain News
ಕರ್ನಾಟಕ27 mins ago

Rain News: ಕುಷ್ಟಗಿಯಲ್ಲಿ ಸಿಡಿಲು ಬಡಿದು ರೈತ ಸಾವು, ಯುವಕನಿಗೆ ಗಂಭೀರ ಗಾಯ

Prajwal Revanna Case
ಕರ್ನಾಟಕ42 mins ago

ದೇವೇಗೌಡ ಇನ್ನೂ ಆತ್ಮಹತ್ಯೆ ಮಾಡಿಕೊಂಡಿಲ್ವಲ್ಲ; ಹೊಸ ಆಡಿಯೊದಲ್ಲಿ ಶಿವರಾಮೇಗೌಡ ಸ್ಫೋಟಕ ಹೇಳಿಕೆ

Rohit Sharma
ಕ್ರೀಡೆ55 mins ago

Rohit Sharma: ಐಪಿಎಲ್ ಪ್ರಸಾರಕರ ವಿರುದ್ಧ ಕಿಡಿ ಕಾರಿದ ಹಿಟ್​ಮ್ಯಾನ್​ ರೋಹಿತ್​

R Ashok
ರಾಜಕೀಯ1 hour ago

R Ashok: ರಾಜ್ಯದಲ್ಲಿ ಮಳೆಗಿಂತ ಹೆಚ್ಚಾಗಿ ಕೊಲೆಗಳೇ ನಡೆಯುತ್ತಿವೆ: ಆರ್‌.ಅಶೋಕ್‌ ಕಿಡಿ

Thailand Open 2024
ಬ್ಯಾಡ್ಮಿಂಟನ್2 hours ago

Thailand Open 2024: ಥಾಯ್ಲೆಂಡ್‌ ಓಪನ್‌ ಗೆದ್ದ ಭಾರತದ ಚಿರಾಗ್‌-ಸಾತ್ವಿಕ್‌ ಜೋಡಿ

Prajwal Revanna Case
ಕರ್ನಾಟಕ2 hours ago

Prajwal Revanna Case: ಪೆನ್‌ಡ್ರೈವ್‌ ಕೇಸ್‌ಗೆ ಟ್ವಿಸ್ಟ್;‌ ದೇವರಾಜೇಗೌಡ, ಡಿಕೆಶಿ ಆಡಿಯೊ ಬಯಲು, ಇಲ್ಲಿದೆ ಸ್ಫೋಟಕ ಮಾಹಿತಿ

Money Guide
ಮನಿ-ಗೈಡ್2 hours ago

Money Guide: ಪ್ಯಾನ್‌ ಕಾರ್ಡ್‌ ಇಲ್ಲದೆಯೂ ಸಿಬಿಲ್‌ ಸ್ಕೋರ್‌ ಪರಿಶೀಲಿಸಬೇಕೆ? ಈ ಟಿಪ್ಸ್‌ ಫಾಲೋ ಮಾಡಿ

Road Accident
ಕ್ರೈಂ2 hours ago

Road Accident: ಬೆಂಗಳೂರು, ಗದಗದಲ್ಲಿ ಸರಣಿ ಅಪಘಾತ; ಗ್ಯಾಸ್ ಟ್ಯಾಂಕರ್ ಸ್ಫೋಟಕ್ಕೆ ಮನೆಗಳೇ ಭಸ್ಮ

Janhvi Kapoor felt sexualised at the age of 12
ಬಾಲಿವುಡ್2 hours ago

Janhvi Kapoor: 12ನೇ ವಯಸ್ಸಿನಲ್ಲಿಯೇ ಅಶ್ಲೀಲ ವೆಬ್‌ಸೈಟ್‌ನಲ್ಲಿ ನನ್ನ ಫೋಟೊ ಅಪ್‌ಲೋಡ್‌ ಆಗಿತ್ತು ಎಂದ ಶ್ರೀದೇವಿ ಮಗಳು!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ3 hours ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ3 hours ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ5 hours ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ2 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ3 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ3 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು3 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ4 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

ಟ್ರೆಂಡಿಂಗ್‌