Viral News : ಸರ್ಕಾರಿ ಶಾಲೆಯ ಬಿಸಿಯೂಟದಲ್ಲಿ ಸಿಕ್ಕಿತು ಹಾವು! ಹಲವು ಮಕ್ಕಳು ಅಸ್ವಸ್ಥ - Vistara News

ವೈರಲ್ ನ್ಯೂಸ್

Viral News : ಸರ್ಕಾರಿ ಶಾಲೆಯ ಬಿಸಿಯೂಟದಲ್ಲಿ ಸಿಕ್ಕಿತು ಹಾವು! ಹಲವು ಮಕ್ಕಳು ಅಸ್ವಸ್ಥ

ಸರ್ಕಾರಿ ಶಾಲೆಯಲ್ಲಿ ಕೊಡಲಾಗುವ ಬಿಸಿಯೂಟದಲ್ಲಿ ಹಾವು ಸಿಕ್ಕಿರುವ ಘಟನೆ ಬಿಹಾರದಲ್ಲಿ (Viral News) ನಡೆದಿದೆ. ಊಟ ಸೇವಿಸಿರುವ ಹಲವಾರು ಮಕ್ಕಳು ಅಸ್ವಸ್ಥರಾಗಿದ್ದಾರೆ.

VISTARANEWS.COM


on

Snake Found In Mid Day Meal
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪಾಟ್ನಾ: ಸರ್ಕಾರಿ ಶಾಲೆಯ ಮಕ್ಕಳಿಗೆಂದು ಸರ್ಕಾರ ಬಿಸಿಯೂಟ ಯೋಜನೆ ನಡೆಸುತ್ತಿದೆ. ಆದರೆ ಅದೇ ಊಟದಲ್ಲಿ ಹಾವು (Snake Found In Mid-Day Meal) ಸಿಕ್ಕಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಅಲ್ಲಿನ ಅರಾರಿಯಾ ಜಿಲ್ಲೆಯ ಫೋರ್ಬ್ಸ್‌ಗಂಜ್ ನಗರದಲ್ಲಿ ಈ ಘಟನೆ ನಡೆದಿದೆ. ಬಿಸಿಯೂಟ ಮಾಡಿರುವ ಅನೇಕ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸುದ್ದಿ ಈಗ ಭರ್ಜರಿ ವೈರಲ್ ((Viral News) ಆಗುತ್ತಿದೆ.

ಎನ್‌ಜಿಒ ಒಂದು ತಯಾರಿಸಿದ್ದ ಕಿಚಡಿಯನ್ನು ಶಾಲೆಯ ಮಕ್ಕಳಿಗೆ ಬಡಿಸಲಾಗಿತ್ತು. ಅದರಲ್ಲಿ ವಿದ್ಯಾರ್ಥಿಯೊಬ್ಬರಿಗೆ ಸತ್ತು ಬಿದ್ದಿರುವ ಹಾವು ಸಿಕ್ಕಿದೆ. ಅದು ಕಂಡೊಡನೆ ಗಾಬರಿಗೊಂಡ ಶಿಕ್ಷಕರು ಬಿಸಿಯೂಟ ಹಾಕುವುದನ್ನು ನಿಲ್ಲಿಸುವಂತೆ ತಿಳಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಹಲವು ಮಕ್ಕಳು ಊಟ ಮಾಡಿಬಿಟ್ಟಿದ್ದರು. ಅವರಿಗೆ ಕೆಲ ಸಮಯದಲ್ಲೇ ವಾಂತಿ ಸೇರಿ ಕೆಲವು ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ಫೋರ್ಬ್ಸ್‌ಗಂಜ್‌ನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ.

ಇದನ್ನೂ ಓದಿ: Viral Video: ಸಲ್ಮಾನ್ ಖಾನ್​ರನ್ನು ಮಾತಾಡಿಸಲು ಬಂದ ವಿಕ್ಕಿ ಕೌಶಲ್​​ಗೆ ಅವಮಾನ?-ಬಾಡಿಗಾರ್ಡ್ಸ್ ಮಾಡಿದ್ದೇನು?
ಶಾಲೆಯಲ್ಲಿ ಈ ರೀತಿಯ ಘಟನೆ ನಡೆದಿರುವುದು ತಿಳಿಯುತ್ತಿದ್ದಂತೆಯೇ ಎಸ್‌ಡಿಎಂ, ಎಸ್‌ಡಿಒ ಮತ್ತು ಡಿಎಸ್‌ಪಿ ಸೇರಿದಂತೆ ಅನೇಕ ಅಧಿಕಾರಿಗಳು ಶಾಲೆಗೆ ಹಾಗೂ ಅಸ್ವಸ್ಥ ವಿದ್ಯಾರ್ಥಿಗಳನ್ನು ದಾಖಲಿಸಲಾಗಿರುವ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಹಾಗೆಯೇ ಈ ಘಟನೆಯ ಬಗ್ಗೆ ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ. ಘಟನೆಯ ಬಗ್ಗೆ ಹೆಚ್ಚಿನ ವರದಿ ಇನ್ನೂ ಬರಬೇಕಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ವೈರಲ್ ನ್ಯೂಸ್

Video Viral: ಜಲ ತರಂಗ್‌ನಲ್ಲಿ ಮಹಿಳೆ ನುಡಿಸಿದ ಐಗಿರಿ ನಂದಿನಿ ವಿಡಿಯೋ ವೈರಲ್

Video Viral ಮಹಿಳೆಯೊಬ್ಬರು ಜಲ ತರಂಗ್ ನ ಮೂಲಕ ಜನಪ್ರಿಯ ಭಕ್ತಿಗೀತೆ ಐಗಿರಿ ನಂದಿನಿ ಎಂಬ ಮಹಿಷಾಮರ್ದಿನಿ ಸ್ತೋತ್ರವನ್ನು ನುಡಿಸಿ ಸಂಗೀತ ಪ್ರಿಯರಿಗೆ ರಸದೌತಣ ಉಣಬಡಿಸಿದ್ದಾರೆ.

VISTARANEWS.COM


on

Viral Video
Koo

ಬೆಂಗಳೂರು: ಸುಮಧುರವಾದ ಸಂಗೀತದ ಗಾನ ಕಿವಿಯ ಮೇಲೆ ಬಿದ್ದರೆ ಎಷ್ಟೇ ಒತ್ತಡದಲ್ಲಿ ಇದ್ದರೂ ಒಮ್ಮೆ ಹಾಯ್ ಅನಿಸುತ್ತದೆ. ಸಂಗೀತಕ್ಕಿರುವ ಶಕ್ತಿಯೇ ಅಂಥದ್ದು. ಸಂಗೀತಗಾರರು ಸಂಗೀತದ ಉಪಕರಣಗಳನ್ನು ಬಳಸಿ ಸಂಗೀತವನ್ನು ನುಡಿಸುತ್ತಾರೆ. ಇಂತಹ ಸಂಗೀತ ಹೆಚ್ಚಿನ ಜನರ ಮನಸೆಳೆಯುತ್ತದೆ. ಆದರೆ ಇಲ್ಲೊಬ್ಬ ಮಹಿಳೆ ಜಲ ತರಂಗ್ ನ ಮೂಲಕ ಜನಪ್ರಿಯ ಭಕ್ತಿಗೀತೆ ಐಗಿರಿ ನಂದಿನಿ ಎಂಬ ಮಹಿಷಾಮರ್ದಿನಿ ಸ್ತೋತ್ರವನ್ನು ನುಡಿಸಿ ಸಂಗೀತ ಪ್ರಿಯರಿಗೆ ರಸದೌತಣ ಉಣಬಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಖತ್ ವೈರಲ್ (Video Viral) ಆಗಿದ್ದು ಜನ ಮೆಚ್ಚುಗೆ ಸೂಚಿಸಿದ್ದಾರೆ.

ಮಹಿಳೆ ಜಲ ತರಂಗ್ ಮೂಲಕ ಐಗಿರಿ ನಂದಿನಿ ಸ್ತೋತ್ರ ನುಡಿಸಿದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ 32 ಲಕ್ಷ ವ್ಯೂಸ್ ಬಂದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಮಹಿಳೆಯ ಸಂಗೀತಕ್ಕೆ ಹಾಗೂ ಆಕೆ ಅದಕ್ಕಾಗಿ ಬಳಸಿದ ವಾದ್ಯಕ್ಕೆ ಜನರು ತಮ್ಮ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೊದಲ್ಲಿ ಮಹಿಳೆ ನೀರು ತುಂಬಿದ ಕಪ್ ಗಳನ್ನು ಬಳಸಿಕೊಂಡು ಸಂಗೀತ ನುಡಿಸಿದ್ದಾರೆ. ಈ ಜಲತರಂಗ್ ನೀರು ತುಂಬಿದ ಬಟ್ಟಲುಗಳನ್ನೊಳಗೊಂಡ ವಿಶಿಷ್ಟವಾದ ತಾಳವಾದ್ಯವಾಗಿದೆ. ಈ ವಾದ್ಯ 17ನೇ ಶತಮಾನದಲ್ಲಿ ಭಾರತದಲ್ಲಿ ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ. ನೀರಿನಲ್ಲಿ ಶಬ್ದ ಉತ್ಪತ್ತಿಯಾಗುವ ಮೂಲಕ ಉತ್ತಮ ಸ್ವರಗಳನ್ನು ರೂಪಿಸುವುದು ಈ ಉಪಕರಣದ ಸಾಮರ್ಥ್ಯವಾಗಿದೆ.

ಐಗಿರಿ ನಂದಿನಿ ಎನ್ನುವುದು ಬಹಳ ಹಿಂದಿನ ಕಾಲದಿಂದಲೂ ಕೇಳಿ ಬರುತ್ತಿದ್ದ ಭಕ್ತಿಗೀತೆಯಾಗಿದೆ. ಇದು ದುರ್ಗಾದೇವಿಗೆ ಸಮರ್ಪಿತವಾದ ಸ್ತೋತ್ರವಾಗಿದೆ, ದುರ್ಗಾದೇವಿಯ ಸ್ವರೂಪಗಳ ಬಗ್ಗೆ ಗುಣಗಾನ ಮಾಡಿದ ಈ ಕಠಿಣ ಸ್ತೋತ್ರವನ್ನು ಮಹಿಳೆ ಜಲತರಂಗ್ ನ ಮೂಲಕ ನುಡಿಸಿದ್ದು ಜನರ ಮನಸೆಳೆದಿದೆ.

ಸೋಷಿಯಲ್ ಮೀಡಿಯಾದಲ್ಲಿ ಮಹಿಳೆಯ ಈ ಪ್ರದರ್ಶನಕ್ಕೆ ವೀಕ್ಷಕರು ವಿಸ್ಮಯಗೊಂಡಿದ್ದಾರೆ. ಅನೇಕರು ಆಕೆಯ ಸಂಗೀತ ಕೌಶಲ್ಯವನ್ನು ಹೊಗಳಿದ್ದಾರೆ. ಹಾಗೇ ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ಅದರ ವಿಶಿಷ್ಟ ವಾದ್ಯಗಳನ್ನು ಮಹಿಳೆಯು ಈ ವಿಡಿಯೋ ಎತ್ತಿ ತೋರಿಸಿದ್ದಾರೆ. ಹಾಗಾಗಿ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಎನ್ನಲಾಗಿದೆ.

ಹಾಗೇ ಇಂತಹ ಸಂಗೀತ ಕಲೆಗಳನ್ನು ಪ್ರತಿ ಸಂಗೀತ ಶಾಲೆಯಲ್ಲಿ ಮಕ್ಕಳಿಗೆ ಕಲಿಸಬೇಕು ಎಂದು ಜನರು ಸಲಹೆ ನೀಡಿದ್ದಾರೆ. ಪರಿಪೂರ್ಣ ಸಿಂಕ್ರೊನೈಸೇಶನ್ ಅನ್ನು ಸಮತೋಲನಗೊಳಿಸುವಾಗ ನಿಮ್ಮ ಮುಖದ ಮೇಲಿನ ನಗು ಒಂದು ಶತಕೋಟಿಗೂ ಹೆಚ್ಚಿನ ಪ್ರಯತ್ನಗಳಿಗೆ ಸಮಾನವಾಗಿದೆ ಎಂದು ಇನ್ನೊಬ್ಬ ವೀಕ್ಷಕರು ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ಅಂಗಡಿಯಲ್ಲಿ ಮೊಟ್ಟೆ ಕದ್ದು ಸಿಕ್ಕಿಬಿದ್ದ ಕಳ್ಳಿ, ವೈರಲ್ ಆದ ವಿಡಿಯೊ

ಸೋಷಿಯಲ್ ಮೀಡಿಯಾಗಳಲ್ಲಿ ಇದೇ ರೀತಿಯ ಹಲವು ವಿಡಿಯೋಗಳು ಹರಿದಾಡುತ್ತವೆ. ಸೋಷಿಯಲ್ ಮೀಡಿಯಾಗಳು ಒಂದು ಪ್ರಕಾರದಲ್ಲಿ ಜನರಿಗೆ ಕೆಟ್ಟದನ್ನು ಉಂಟುಮಾಡಿದರೆ , ಇನ್ನೊಂದು ಪ್ರಕಾರದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಉತ್ತಮ ಪ್ರತಿಭೆಗಳನ್ನು ಗುರುತಿಸುವಂತಾಗಿದೆ. ಹಾಗಾಗಿ ಈ ಸೋಷಿಯಲ್ ಮೀಡಿಯಾದಲ್ಲಿ ಇಂತಹ ಹಲವಾರು ಪ್ರತಿಭೆಗಳು ಹೊರಬರುವಂತಾಗಲಿ ಮತ್ತು ಜನರು ಅದನ್ನು ಒಳ್ಳೆಯದಕ್ಕೆ ಬಳಸಿಕೊಳ್ಳಲಿ ಎಂಬುದು ನಮ್ಮ ಆಶಯ.

Continue Reading

ಕ್ರೀಡೆ

IPL 2024: ಕ್ಯಾಚ್​ ಬಿಟ್ಟ ಹೂಡಾಗೆ ಬೆಸ್ಟ್​ ಫೀಲ್ಡರ್ ಅವಾರ್ಡ್​​; ಇದರ ಹಿಂದಿದೆ ಬಲವಾದ ಕಾರಣ

IPL 2024: ಫೀಲ್ಡಿಂಗ್ ಪ್ರಶಸ್ತಿಯು ಕೇವಲ ಅದ್ಭುತ ಪ್ರದರ್ಶನಗಳಲಿಗೆ ಮಾತ್ರವಲ್ಲ. ಗೆಲುವಿಗಾಗಿ ಕಲೆ ಕೆಟ್ಟ ಫೀಲ್ಡಿಂಗ್ ತಂತ್ರ ಕೂಡ ಮಾಡಬೇಕು. ಇದನ್ನು ಹೂಡಾ ಮಾಡಿದ್ದಾರೆ. ಧೋನಿ ಬೇಗನೇ ಕ್ರೀಸ್​ಗೆ ಬರುತ್ತಿದ್ದರೆ ಇನ್ನೂ ಹೆಚ್ಚಿನ ಎಸೆತಗಳು ಅವರಿಗೆ ಲಭಿಸುತ್ತಿತ್ತು. ಜತೆಗೆ ದೊಡ್ಡ ಮೊತ್ತದ ಗುರಿ ಕೂಡ ಲಭಿಸುತ್ತಿತ್ತು. ಇದನ್ನು ಹೂಡಾ ತಪ್ಪಿಸಿದ್ದಾರೆ. ಇದು ನಿಜವಾಗಿಯೂ ಅವರ ಬುದ್ಧಿವಂತ ನಿರ್ಧಾರ ಎಂದು ಲಕ್ನೋ ತಂಡ ಫೀಲ್ಡಿಂಗ್​ ಕೋಚ್​ ಜಾಂಟಿ ರೋಡ್ಸ್‌ ಮೆಚ್ಚುಗೆ ಸೂಚಿಸಿದ್ದಾರೆ.

VISTARANEWS.COM


on

IPL 2024
Koo

ಲಕ್ನೋ: ಎಲ್ಲ ತಂಡದ ಕೋಚ್​ಗಳು ಪಂದ್ಯವೊಂದರಲ್ಲಿ ಉತ್ತಮವಾಗಿ ಬ್ಯಾಟಿಂಗ್​, ಬೌಲಿಂಗ್​ ಮತ್ತು ಫೀಲ್ಡಿಂಗ್​ ನಡೆಸಿದರೆ ಅಂತಹ ಆಟಗಾರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅವರನ್ನು ಶ್ಲಾಘಿಸುವುದು ವಾಡಿಕೆ. ಆದರೆ, ಲಕ್ನೋ ತಂಡ ಫೀಲ್ಡಿಂಗ್​ ಕೋಚ್​ ಜಾಂಟಿ ರೋಡ್ಸ್‌(Jonty Rhodes) ಅವರು ಕ್ಯಾಚ್​ ಕೈಚೆಲ್ಲಿದ ದೀಪಕ್​ ಹೂಡಾಗೆ(Deepak Hooda) ಮೆಚ್ಚುಗೆ ಜತೆಗೆ ಬೆಸ್ಟ್​ ಫೀಲ್ಡರ್​ ಅವಾರ್ಡ್ ನೀಡಿ(IPL 2024) ಗೌರವಿಸಿದ್ದಾರೆ. ಹೌದು, ಇದಕ್ಕೆ ಕಾರಣ ಧೋನಿ ಅವರ ಬ್ಯಾಟಿಂಗ್​ ಭಯ.

ರವೀಂದ್ರ ಜಡೇಜಾ ಅವರ ಸುಲಭದ ಕ್ಯಾಚ್ ಅನ್ನು ದೀಪಕ್ ಹೂಡಾ ಬೌಂಡರಿ ಲೈನ್​ನಲ್ಲಿ ಕೈ ಚೆಲ್ಲಿ ಸಿಕ್ಸರ್​ ನೀಡಿದ್ದರು. ಪ್ರತಿ ಪಂದ್ಯದಲ್ಲಿಯೂ ಬೆಸ್ಟ್​ ಫೀಲ್ಡಿಂಗ್​ ನಡೆಸಿದ ಲಕ್ನೋ ತಂಡದ ಆಟಗಾರನಿಗೆ ಡ್ರೆಸಿಂಗ್​ ರೂಮ್​ನಲ್ಲಿ ಜಾಂಟಿ ರೋಡ್ಸ್‌ ಅವರು ಮ್ಯಾಜಿಕ್ ಮೈಕ್ ಎನ್ನುವ ಹೆಸರಿನ ಗೊಂಬೆಯೊಂದನ್ನು ನೀಡಿ ಗೌರವಿಸುತ್ತಾರೆ. ಚೆನ್ನೈ ವಿರುದ್ಧದ ಪಂದ್ಯದ ಬಳಿಕ ಜಾಂಟಿ ಈ ಪ್ರಶಸ್ತಿಯನ್ನು ಕ್ಯಾಚ್​ ಬಿಟ್ಟ ದೀಪಕ್​ ಹೂಡಾಗೆ ನೀಡಿದರು. ಈ ವೇಳೆ ಸಹ ಆಟಗಾರರು ಸೇರಿ ಹೂಡಾಗೂ ಒಂದು ಕ್ಷಣ ಆಶ್ಚರ್ಯವಾಯಿತು.

ಇದನ್ನೂ ಓದಿ IPL 2024: ‘ಕ್ಯಾಚ್ ಆಫ್ ದಿ ಐಪಿಎಲ್ 2024’; ಜಡೇಜಾ ಫ್ಲೈಯಿಂಗ್ ಕ್ಯಾಚ್​ಗೆ ಶಬ್ಬಾಶ್ ಎಂದ ರವಿಶಾಸ್ತ್ರಿ

ದೀಪಕ್​ ಹೂಡಾಗೆ ಈ ಪ್ರಶಸ್ತಿಯನ್ನು ನೀಡುತ್ತಿರುವುದು ಏಕೆಂದು ಕೂಡ ಜಾಂಟಿ ವಿವರಿಸಿದರು. ಒಂದೊಮ್ಮೆ ಹೂಡಾ ಅವರು ಜಡೇಜಾ ಕ್ಯಾಚ್​ ಹಿಡಿಯುತ್ತಿದ್ದರೆ ಧೋನಿ ಬೇಗನೆ ಕ್ರೀಸ್​ಗೆ ಆಗಮಿಸುತ್ತಿದ್ದರು. ಇದನ್ನು ಹೂಡಾ ತಡೆದಿದ್ದಾರೆ. ಇದಕ್ಕಾಗಿ ಅವರಿಗೆ ಈ ಪ್ರಶಸ್ತಿ ನೀಡುತ್ತೇನೆ ಎಂದರು.

“ಫೀಲ್ಡಿಂಗ್ ಪ್ರಶಸ್ತಿಯು ಕೇವಲ ಅದ್ಭುತ ಪ್ರದರ್ಶನಗಳಲಿಗೆ ಮಾತ್ರವಲ್ಲ. ಗೆಲುವಿಗಾಗಿ ಕಲೆ ಕೆಟ್ಟ ಫೀಲ್ಡಿಂಗ್ ತಂತ್ರ ಕೂಡ ಮಾಡಬೇಕು. ಇದನ್ನು ಹೂಡಾ ಮಾಡಿದ್ದಾರೆ. ಧೋನಿ ಬೇಗನೇ ಕ್ರೀಸ್​ಗೆ ಬರುತ್ತಿದ್ದರೆ ಇನ್ನೂ ಹೆಚ್ಚಿನ ಎಸೆತಗಳು ಅವರಿಗೆ ಲಭಿಸುತ್ತಿತ್ತು. ಜತೆಗೆ ದೊಡ್ಡ ಮೊತ್ತದ ಗುರಿ ಕೂಡ ಲಭಿಸುತ್ತಿತ್ತು. ಇದನ್ನು ಹೂಡಾ ತಪ್ಪಿಸಿದ್ದಾರೆ. ಇದು ನಿಜವಾಗಿಯೂ ಅವರ ಬುದ್ಧಿವಂತ ನಿರ್ಧಾರ ಎಂದು ನಾನು ಭಾವಿಸುತ್ತೇನೆ” ಎಂದು ರೋಡ್ಸ್ ಹೇಳಿದರು. ಈ ವಿಡಿಯೊ ವೈರಲ್​ ಆಗಿದೆ.

ಇಲ್ಲಿನ ಭಾರತ ರತ್ನ ಶ್ರೀ ಅಟಲ್​ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೊ ತಂಡ ಮೊದಲು ಫೀಲ್ಡಿಂಗ್ ಮಾಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡ ಆರಂಭಿಕ ವಿಕೆಟ್​ಗಳ ನಷ್ಟದ ಹೊರತಾಗಿಯೂ ಕೊನೇ ಹಂತದಲ್ಲಿ ಉತ್ತಮವಾಗಿ ಆಡಿ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 176 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಲಕ್ನೊ ತಂಡ 19 ಓವರ್​ಗಳಲ್ಲಿ 2ವಿಕೆಟ್ ನಷ್ಟಕ್ಕೆ 180 ರನ್​ ಬಾರಿಸಿ ಗೆಲುವು ಸಾಧಿಸಿತು.

Continue Reading

ಕ್ರೀಡೆ

IPL 2024: ‘ಕ್ಯಾಚ್ ಆಫ್ ದಿ ಐಪಿಎಲ್ 2024’; ಜಡೇಜಾ ಫ್ಲೈಯಿಂಗ್ ಕ್ಯಾಚ್​ಗೆ ಶಬ್ಬಾಶ್ ಎಂದ ರವಿಶಾಸ್ತ್ರಿ

IPL 2024: ರವೀಂದ್ರ ಜಡೇಜಾ ಅವರು ಈ ಪಂದ್ಯದಲ್ಲಿ 40 ಎಸೆತ ಎದುರಿಸಿ ಅಜೇಯ 57 ರನ್​ ಬಾರಿಸಿದರು. ಈ ಇನಿಂಗ್ಸ್​ನಲ್ಲಿ 1 ಸಿಕ್ಸರ್​ ಮತ್ತು 5 ಬೌಂಡರಿ ಸಿಡಿಸಿದರು. ಬೌಲಿಂಗ್​ನಲ್ಲಿ 3 ಓವರ್​ ಎಸೆದು 32 ರನ್​ ಬಿಟ್ಟುಕೊಟ್ಟರು. ರಾಹುಲ್​ 53 ಎಸೆತಗಳಿಂದ 9 ಬೌಂಡರಿ ಮತ್ತು 3 ಸಿಕ್ಸರ್​ ನೆರವಿನಿಂದ 82 ರನ್​ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

VISTARANEWS.COM


on

IPL 2024
Koo

ಲಕ್ನೋ: ರವೀಂದ್ರ ಜಡೇಜಾ(Ravindra Jadeja) ಎಂದರೆ ನೆನಪಾಗುವುದೇ ಚುರುಕಿನ ಫೀಲ್ಡಿಂಗ್. ಮೈದಾನದಲ್ಲಿ ಪಾದರಸದಂತೆ ಓಡಾಡಿ ಅಸಾಧ್ಯವಾದದನ್ನು ಸಾಧ್ಯವಾಗಿಸುವ ತಾಕತ್ತು ಅವರಿಗಿದೆ. ಸೋಮವಾರ ನಡೆದ ಲಕ್ನೋ ಸೂಪರ್​ ಜೈಂಟ್ಸ್​ ವಿರುದ್ಧದ(IPL 2024) ಪಂದ್ಯದಲ್ಲಿಯೂ ಜಡೇಜಾ ಒನ್ ಹ್ಯಾಂಡೆಡ್​ ಕ್ಯಾಚ್(Jadeja’s One-Handed Catch)​ ಹಿಡಿದು ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಈ ಪಂದ್ಯದಲ್ಲಿ ಅತ್ಯತ್ತಮ ಬ್ಯಾಟಿಂಗ್​ ನಡೆಸುತ್ತಿದ್ದ ಲಕ್ನೋ ತಂಡದ ನಾಯಕ ಕೆ.ಎಲ್​ ರಾಹುಲ್​ ಅವರು ಆಫ್​ ಸೈಡ್​ನಲ್ಲಿ ಬೌಂಡರಿ ಬಾರಿಸುವ ಪ್ರಯತ್ನದಲ್ಲಿ ಜಡೇಜಾಗೆ ಕ್ಯಾಚ್​ ನೀಡಿ ವಿಕೆಟ್​ ಕೈಚೆಲ್ಲಿದರು. ಜಡೇಜಾ ಅವರು ಹಿಡಿದ ಈ ಕ್ಯಾಚ್​ ಕಂಡು ಒಂದು ಕ್ಷಣ ಸಹ ಆಟಗಾರರೇ ನಿಬ್ಬೆರಗಾದರು. ಅತ್ತ ಕಾಮೆಂಟ್ರಿ ಮಾಡುತ್ತಿದ್ದ ರವಿಶಾಸ್ತ್ರಿ ‘ಕ್ಯಾಚ್​ ಆಫ್​ ದಿ ದಿಸ್​ ಸೀಸನ್​’. ಬುಲೆಟ್​ ವೇಗದಲ್ಲಿ ಸಾಗಿದ ಚೆಂಡನ್ನು ಲೀಲಾಜಾಲವಾಗಿ ಹಿಡಿಯುವಲ್ಲಿ ಯಶಸ್ಸಿಯಾದರು. ನಿಜಕ್ಕೂ ಇದು ಅದ್ಭುತ” ಎಂದು ವರ್ಣಿಸಿದರು.

ರವೀಂದ್ರ ಜಡೇಜಾ ಅವರು ಈ ಪಂದ್ಯದಲ್ಲಿ 40 ಎಸೆತ ಎದುರಿಸಿ ಅಜೇಯ 57 ರನ್​ ಬಾರಿಸಿದರು. ಈ ಇನಿಂಗ್ಸ್​ನಲ್ಲಿ 1 ಸಿಕ್ಸರ್​ ಮತ್ತು 5 ಬೌಂಡರಿ ಸಿಡಿಸಿದರು. ಬೌಲಿಂಗ್​ನಲ್ಲಿ 3 ಓವರ್​ ಎಸೆದು 32 ರನ್​ ಬಿಟ್ಟುಕೊಟ್ಟರು. ರಾಹುಲ್​ 53 ಎಸೆತಗಳಿಂದ 9 ಬೌಂಡರಿ ಮತ್ತು 3 ಸಿಕ್ಸರ್​ ನೆರವಿನಿಂದ 82 ರನ್​ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇಲ್ಲಿನ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡ 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ. 176 ರನ್​ಗಳ ಗುರಿ ಬೆನ್ನತ್ತಿದ ಕೆ. ಎಲ್​ ರಾಹುಲ್ (KL Rahul) 53 ಎಸೆತಗಳಲ್ಲಿ 82 ರನ್ ಸಿಡಿಸಿ ಔಟಾದರು. ಈ ಮೂಲಕ ಐಪಿಎಲ್​ನಲ್ಲಿ ಹೊಸ ದಾಖಲೆ ಮಾಡಿದರು. ಅವರು ಅತಿ ಹೆಚ್ಚು 50+ ರನ್ ಗಳಿಸಿದ ವಿಕೆಟ್ ಕೀಪರ್ ಆಗಿ ಎಂಎಸ್ ಧೋನಿಯ (MS Dhoni) ದಾಖಲೆಯನ್ನು ಮುರಿದಿದ್ದಾರೆ.

ಇದನ್ನೂ ಓದಿ IPL 2024 : ಡಿಆರ್​ಎಸ್ ಅಕ್ರಮ; ಟಿಮ್ ಡೇವಿಡ್, ಕೀರನ್ ಪೊಲಾರ್ಡ್​ಗೆ ದಂಡ

ಧೋನಿ ಹಿಂದಿಕ್ಕಿದ ರಾಹುಲ್​

ಕೆಎಲ್ ರಾಹುಲ್ ಐಪಿಎಲ್​​ನಲ್ಲಿ ಹೆಚ್ಚು 50+ ಸ್ಕೋರ್​ಗಳನ್ನು ಗಳಿಸಿದ ವಿಕೆಟ್ ಕೀಪರ್ ಆಗಿ ಸಿಎಸ್​ಕೆ ಮಾಜಿ ನಾಯಕನನ್ನು ಹಿಂದಿಕ್ಕಿದರು. ಇದು ಕೆ.ಎಲ್.ರಾಹುಲ್ ಅವರ 25ನೇ ಅರ್ಧಶತಕ. ಧೋನಿ ಈವರೆಗೆ 24 ಅರ್ಧಶತಕಗಳನ್ನು ಬಾರಿಸಿದ್ದಾರೆ. ಕೆಎಲ್ ರಾಹುಲ್ ಅವರ ಆರಂಭಿಕ ಪಾಲುದಾರ ಕ್ವಿಂಟನ್ ಡಿ ಕಾಕ್ 23 50+ ಸ್ಕೋರ್​​ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

Continue Reading

ವೈರಲ್ ನ್ಯೂಸ್

Viral Video: ಯುವತಿ ತಲೆಗೆ ಬಲವಂತವಾಗಿ ಹಿಜಾಬ್‌ ಹಾಕಿದ ಪಾಕ್‌ ಯುವಕ; ಮುಂದೇನಾಯ್ತು?

Viral Video: ಪಾಕಿಸ್ತಾನದಲ್ಲಿ ಮಹಿಳೆಯರು ಹೇಗಿರಬೇಕು, ಯಾವ ರೀತಿ ಉಡುಗೆಗಳನ್ನು ಧರಿಸಬೇಕು ಎಂದು ಹೇಳಲು ಮುಂದಾದ ವ್ಯಕ್ತಿಗೆ ಯೂಟ್ಯೂಬರ್ ಮಹಿಳೆ ನೀಡಿದ ದಿಟ್ಟ ಉತ್ತರವೇನು ಗೊತ್ತೇ?

VISTARANEWS.COM


on

By

Viral Video
Koo

ಇಸ್ಲಾಮಾಬಾದ್: ಯೂಟ್ಯೂಬರ್ (YouTuber) ಮಹಿಳೆಗೆ ಪಾಕಿಸ್ತಾನದ (Pakistan) ಯುವಕನೊಬ್ಬ ಬಲವಂತವಾಗಿ ತಲೆಗೆ ಸ್ಕಾರ್ಫ್ (scarf) ಹೊದಿಸಲು ಪ್ರಯತ್ನಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (viral video) ಆಗಿದ್ದು, ಲಕ್ಷಾಂತರ ಮಂದಿ ಇದನ್ನು ವೀಕ್ಷಿಸಿ ಯೂಟ್ಯೂಬರ್ ಶೈಲಾ ಖಾನ್ ನ (YouTuber Shaila Khan) ದಿಟ್ಟತನದ ಮಾತಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಯೂಟ್ಯೂಬರ್ ಶೈಲಾ ಖಾನ್ ದಾರಿಹೋಕರನ್ನು ಸಂದರ್ಶನ ಮಾಡುತ್ತಿರುತ್ತಾರೆ. ಈ ವೇಳೆ ವ್ಯಕ್ತಿಯೊಬ್ಬ ಆಕೆಗೆ ಎದುರಾಗಿ ಇಸ್ಲಾಮಿಕ್ ದೇಶದಲ್ಲಿ ಮಾಡಬೇಕಾದ ಸರಿಯಾದ ಕೆಲಸವನ್ನು ಹೇಳಲು ನಿರ್ಧರಿಸುತ್ತಾನೆ.

ಆತ ಯೂಟ್ಯೂಬರ್ ಶೈಲಾ ಖಾನ್ ಶಾಲು, ಸ್ಕಾರ್ಫ್ ಅನ್ನು ತಲೆಗೆ ಸುತ್ತಿಕೊಳ್ಳದೆ ತನ್ನ ಮುಂದೆ ನಿಂತಿರುವುದು ಆಕೆ ಮಾಡಿರುವ “ಅಪರಾಧ” ಎನ್ನುವಂತ ಮಾತನಾಡುತ್ತಾನೆ. ಮಹಿಳೆ ಹೇಗೆ ಡ್ರೆಸ್ ಮಾಡಿಕೊಳ್ಳಬೇಕು ಎಂಬ ಬಗ್ಗೆ ಆತ ಟೀಕೆಗಳನ್ನು ಮುಂದುವರಿಸುತ್ತಾನೆ. ಅಷ್ಟೇ ಅಲ್ಲದೇ ತನ್ನ ಕುತ್ತಿಗೆಯಲ್ಲಿದ್ದ ಶಾಲ್ ನಿಂದ ಆಕೆಯ ತಲೆಯನ್ನು ಮುಚ್ಚಲು ಪ್ರಯತ್ನಿಸುತ್ತಾನೆ. ಎಕ್ಸ್ ನಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ಯೂಟ್ಯೂಬರ್ ಶೈಲಾ ಖಾನ್ ಬೀದಿಯಲ್ಲಿ ನಿಂತಿದ್ದ ಕೆಲವು ಜನರಲ್ಲಿ ಸಂದರ್ಶಿಸುತ್ತಿರುತ್ತಾರೆ. ಇರಾನ್-ಇಸ್ರೇಲ್ ಸಂಘರ್ಷದ ಬಗ್ಗೆ ಅವರ ಅಭಿಪ್ರಾಯಗಳನ್ನು ಕೇಳುತ್ತಿರುತ್ತಾರೆ. ಕೆಲವು ಸೆಕೆಂಡುಗಳ ಬಳಿಕ ವ್ಯಕ್ತಿಯೊಬ್ಬ ಆಕೆಯ ಬಳಿ ಮಾತನಾಡಲು ಮುಂದಾಗಿದ್ದಾನೆ. ನೀನು ಇಸ್ಲಾಮಿಕ್ ರಾಷ್ಟ್ರದಲ್ಲಿರುವೆ. ಅಲ್ಲಾನ ಆದೇಶಗಳನ್ನು ಅನುಸರಿಸಬೇಕು ಎಂದು ಹೇಳುತ್ತಾನೆ.

ನೀವು ನಿಮ್ಮ ತಲೆಯನ್ನು ಮುಚ್ಚಿಕೊಳ್ಳದೆ ಇಸ್ಲಾಮಿಕ್ ದೇಶದಲ್ಲಿ ನನ್ನ ಮುಂದೆ ನಿಂತಿದ್ದೀರಿ ಎಂದು ಆ ವ್ಯಕ್ತಿ ಯೂಟ್ಯೂಬರ್‌ ಶೈಲಾ ಖಾನ್ ಗೆ ಹೇಳುತ್ತಾನೆ. ಅನಂತರ, ಅವನು ಅವಳ ತಲೆಗೆ ಶಾಲನ್ನು ಸುತ್ತಲು ಪ್ರಯತ್ನಿಸುತ್ತಿರುವಾಗ ಶೈಲಾ ಖಾನ್ ಅದನ್ನು ತೀವ್ರವಾಗಿ ವಿರೋಧಿಸುತ್ತಾರೆ ಮತ್ತು ತಕ್ಷಣವೇ ಅವನಿಗೆ ತನ್ನ ಒಪ್ಪಿಗೆ ಇದಕ್ಕೆ ಎಷ್ಟು ಮುಖ್ಯ ಎಂಬುದನ್ನು ಹೇಳುತ್ತಾಳೆ. ಆತನ ಕೃತ್ಯವನ್ನು ಖಂಡಿಸಿದ ಆಕೆ, ಇಸ್ಲಾಮಿಕ್ ನಂಬಿಕೆಗಳು ಮತ್ತು ನೈತಿಕತೆಗಳು ಯಾವಾಗಲೂ ದುಪಟ್ಟಾ ಧರಿಸಲು ಏಕೆ ಸೀಮಿತವಾಗಿದೆ ಎಂದು ಪ್ರಶ್ನಿಸಿದ್ದಾಳೆ.


ಶಾಲನ್ನು ಆತನಿಗೆ ಹಿಂದಿರುಗಿಸುತ್ತಾ, ಅವಳು ತನ್ನದೇ ಆದ ಶಿರಸ್ತ್ರಾಣವನ್ನು ಹೊಂದಿದ್ದಾಳೆ ಎಂದು ಪ್ರತಿಪಾದಿಸುತ್ತಾಳೆ. ಅವಳು ತನ್ನ ತಲೆಯನ್ನು ಮುಚ್ಚಲು ಬಯಸುತ್ತಾಳೆಯೇ ಎಂಬುದಕ್ಕೆ ಅದು ತನ್ನ “ನಿರ್ಧಾರ” ಎಂದು ಹೇಳುತ್ತಾಳೆ. ಅವಳ ಅನುಮತಿಯಿಲ್ಲದೆ ಅವನು ಅವಳನ್ನು ಮುಟ್ಟಿದ್ದೇ ದೊಡ್ಡ ಪಾಪ ಎಂದು ಅವಳು ಅವನಿಗೆ ಹೇಳುತ್ತಾಳೆ. ಇಸ್ಲಾಂ ನಿಮಗೆ ಕಲಿಸುವುದು ಇದನ್ನೇ? ಎಂದು ಅವಳು ಆತನನ್ನು ಪ್ರಶ್ನಿಸಿದ್ದಾಳೆ.

ಸಾಮಾಜಿಕ ಕಿರುಕುಳದ ಆಧಾರದ ಮೇಲೆ ತನ್ನ ನಡವಳಿಕೆಗಾಗಿ ಆತನನ್ನು ಬಂಧಿಸಬಹುದು ಎಂದು ಯೂಟ್ಯೂಬರ್ ಶೈಲಾ ಖಾನ್ ಆತನನ್ನು ಎಚ್ಚರಿಸುತ್ತಾಳೆ. ಆದರೆ ಆತ ತಾನು ಮಾಡಿರುವುದು ತಪ್ಪು ಎಂದು ಒಪ್ಪಿಕೊಳ್ಳಲು ನಿರಾಕರಿಸುತ್ತಾನೆ ಮತ್ತು ತನ್ನದೇ ಸರಿ ಎಂದು ಅಭಿಪ್ರಾಯ ಮಂಡಿಸುತ್ತಾನೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋ ಗೆ ಹಲವಾರು ಮಂದಿ ಕಾಮೆಂಟ್ ಮಾಡಿದ್ದಾರೆ. ಮತಾಂಧ ವ್ಯಕ್ತಿಯ ವಿರುದ್ಧ ದಿಟ್ಟವಾಗಿ ಮಾತನಾಡಿದ ಯೂಟ್ಯೂಬರ್ ಮಹಿಳೆಯನ್ನು ಸಾಕಷ್ಟು ಮಂದಿ ಹೊಗಳಿದ್ದಾರೆ.

ಒಬ್ಬ ಬಳಕೆದಾರ “ಬ್ರೇವ್ ಪಾಕಿಸ್ತಾನಿ ಗರ್ಲ್ ಯೂಟ್ಯೂಬರ್” ಎಂದು ಹೇಳಿದ್ದು, ಮತ್ತೊಬ್ಬ “ತಮ್ಮ ಪರವಾಗಿ ನಿಂತಿರುವ ಹುಡುಗಿಗೆ ಹ್ಯಾಟ್ಸ್ ಆಫ್!! ಅಂತಹ ದೇಶದಲ್ಲಿ ಹಾಗೆ ಮಾಡಲು ಧೈರ್ಯ ಬೇಕು!! ಎಂದು ಕಾಮೆಂಟ್ ಮಾಡಿದ್ದಾನೆ. ಪಾಕಿಸ್ತಾನದಲ್ಲಿ ಈ ವ್ಯಕ್ತಿಯ ವರ್ತನೆ ಎಲ್ಲಿಯವರೆಗೆ ವ್ಯಾಪಕವಾಗಿದೆಯೋ ಅಲ್ಲಿಯವರೆಗೆ ಅದು ಕೆಳಗಿಳಿಯುತ್ತದೆ ಮತ್ತು ಹೊರಗಿರುತ್ತದೆ ಎಂದು ಮತ್ತೊಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾನೆ.

ಇದನ್ನೂ ಓದಿ: Viral Video: ಎಸಿ ಕೋಚ್ ಸಿಗದಕ್ಕೆ ಸಿಟ್ಟಿಗೆದ್ದು ರೈಲಿನ ಬಾಗಿಲಿನ ಗಾಜನ್ನೇ ಪುಡಿ ಪುಡಿ ಮಾಡಿದ!

Continue Reading
Advertisement
SRH vs DC
ಕ್ರೀಡೆ20 mins ago

SRH vs DC: ವಿಸ್ಫೋಟಕ ಬ್ಯಾಟಿಂಗ್​ ಮೂಲಕ ದಾಖಲೆ ಬರೆದ ಸನ್​ರೈಸರ್ಸ್ ತಂಡ

Lok Sabha Election
Lok Sabha Election 202422 mins ago

Lok Sabha Election: ಕೇರಳದಲ್ಲಿ 2 ಲಕ್ಷಕ್ಕಿಂತ ಅಧಿಕ ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ದೂರು ದಾಖಲು

Viral Video
ವೈರಲ್ ನ್ಯೂಸ್34 mins ago

Video Viral: ಜಲ ತರಂಗ್‌ನಲ್ಲಿ ಮಹಿಳೆ ನುಡಿಸಿದ ಐಗಿರಿ ನಂದಿನಿ ವಿಡಿಯೋ ವೈರಲ್

ಹರಿಹರಪುರ ಧರ್ಮಸಭೆ
ಚಿಕ್ಕಮಗಳೂರು35 mins ago

ಹರಿಹರಪುರ ಧರ್ಮಸಭೆ; ಸನಾತನ ಹಿಂದು ಸಮಾಜ ಕಟ್ಟುವುದು ನಮ್ಮೆಲ್ಲರ ಧ್ಯೇಯ ಎಂದ ತ್ರಯಾಚಾರ್ಯರು

Kunwar Sarvesh Singh
ದೇಶ48 mins ago

Kunwar Sarvesh: ಮತದಾನ ನಡೆದ ಮರುದಿನವೇ ಬಿಜೆಪಿ ಅಭ್ಯರ್ಥಿ ಹೃದಯಾಘಾತಕ್ಕೆ ಬಲಿ!

IPL 2024
ಕ್ರೀಡೆ1 hour ago

IPL 2024: ಟಿ20 ಕ್ರಿಕೆಟ್​ನಲ್ಲೇ ನೂತನ ದಾಖಲೆ ಬರೆದ ಸನ್​ರೈರ್ಸ್​ ಹೈದರಾಬಾದ್

Prajadhwani 2 Lok Sabha election campaign meeting at KR Nagar
ಮಂಡ್ಯ1 hour ago

Lok Sabha Election 2024: ನನ್ನನ್ನು ಗೆಲ್ಲಿಸಿ, ಕಾಂಗ್ರೆಸ್‌ಗೆ ಶಕ್ತಿ ತುಂಬಿ: ವೆಂಕಟರಮಣೇಗೌಡ ಮನವಿ

Uttara Kannada Lok Sabha Constituency BJP Candidate Vishweshwara Hegde Kageri latest Statement
ಉತ್ತರ ಕನ್ನಡ1 hour ago

Sirsi News: ಕಾಂಗ್ರೆಸ್ ಸರ್ಕಾರದ ಮತಾಂಧರ ಓಲೈಕೆಯೇ ನೇಹಾ ಹತ್ಯೆಗೆ ಕಾರಣ: ಕಾಗೇರಿ ಖಂಡನೆ

Narendra Modi
ಪ್ರಮುಖ ಸುದ್ದಿ1 hour ago

ಚಾಯ್‌ವಾಲಾ ಮೋದಿ ಐಐಟಿ ಬಗ್ಗೆ ಹೇಗೆ ಮಾತನಾಡುತ್ತಾರೆ ಎಂದ ಕಾಂಗ್ರೆಸ್ ನಾಯಕ; ಭುಗಿಲೆದ್ದ ವಿವಾದ

House roof collapsed due to heavy rain at ripponpet
ಶಿವಮೊಗ್ಗ1 hour ago

Karnataka Weather: ಭಾರಿ ಮಳೆಗೆ ಕುಸಿದು ಬಿದ್ದ ಮನೆ ಚಾವಣಿ; ಅಪಾರ ಹಾನಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ5 hours ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20245 hours ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20247 hours ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

Rain News
ಮಳೆ9 hours ago

Rain News : ಸಿಡಿಲಿಗೆ ವ್ಯಕ್ತಿ ಸೇರಿ ಜಾನುವಾರುಗಳು ಮೃತ್ಯು; ವ್ಯಾಪಕ ಮಳೆಗೆ ಜನರು ಕಂಗಾಲು

Neha Murder Case
ಹುಬ್ಬಳ್ಳಿ10 hours ago

Neha Murder Case : ನನ್ನ ಮಗನಿಗೆ ಶಿಕ್ಷೆ ಆಗಲಿ; ಇಬ್ಬರೂ ಲವ್‌ ಮಾಡ್ತಿದ್ದರು ಅನ್ನೋದು ಸತ್ಯ ಎಂದ ಫಯಾಜ್‌ ತಾಯಿ

Dina Bhavishya
ಭವಿಷ್ಯ17 hours ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಕೂಡಿಬರಲಿದೆ ಶುಭ ಘಳಿಗೆ

Neha Murder Case
ಹುಬ್ಬಳ್ಳಿ1 day ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ2 days ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ4 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ5 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

ಟ್ರೆಂಡಿಂಗ್‌