Viral News: ಕಾಯಿಲೆ ಗುರುತು ಹಿಡಿಯಲು ಖ್ಯಾತ ವೈದ್ಯರ ತಿಣುಕಾಟ; ಹತ್ತೇ ಸೆಕೆಂಡ್ ನಲ್ಲಿ ಪತ್ತೆಹಚ್ಚಿದ ಕೆಲಸದ ಮಹಿಳೆ! - Vistara News

ವೈರಲ್ ನ್ಯೂಸ್

Viral News: ಕಾಯಿಲೆ ಗುರುತು ಹಿಡಿಯಲು ಖ್ಯಾತ ವೈದ್ಯರ ತಿಣುಕಾಟ; ಹತ್ತೇ ಸೆಕೆಂಡ್ ನಲ್ಲಿ ಪತ್ತೆಹಚ್ಚಿದ ಕೆಲಸದ ಮಹಿಳೆ!

ಖ್ಯಾತ ವೈದ್ಯರು ಪತ್ತೆ ಹಚ್ಚಲಾಗದ ಕಾಯಿಲೆಯನ್ನು ಮನೆ ಕೆಲಸದವಳು ಸುಲಭವಾಗಿ ಗುರುತಿಸಿದ್ದಾಳೆ ಎಂದು ಲಿವರ್ ಡಾಕ್ ಎಂದೇ ಜನಪ್ರಿಯವಾಗಿರುವ ಕೇರಳದ ಹೆಪಟಾಲಜಿಸ್ಟ್ ಸಿರಿಯಾಕ್ ಡಾ. ಅಬ್ಬಿ ಫಿಲಿಪ್ಸ್ ಎಕ್ಸ್ ನಲ್ಲಿ ಹೇಳಿಕೊಂಡಿದ್ದು ಭಾರಿ ವೈರಲ್ (Viral News) ಆಗಿದೆ. ಆ ರೋಗ ಯಾವುದು, ಅದರ ಲಕ್ಷಣಗಳು ಏನು ಗೊತ್ತೇ? ಇಲ್ಲಿದೆ ವರದಿ.

VISTARANEWS.COM


on

Viral news
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ತಿರುವನಂತಪುರಂ: ಕುಟುಂಬದ ಸದಸ್ಯರಿಗೆ ಇದ್ದ ರೋಗವನ್ನು ಗುರುತಿಸಲು ಮನೆಯ ಹಿರಿಯರು ಹೇಗೆ ಸಹಾಯ ಮಾಡಿದ್ದಾರೆ ಎಂಬುದನ್ನು ಕೇರಳದ (kerala) ಹೆಪಟಾಲಜಿಸ್ಟ್ (hepatologist) ಒಬ್ಬರು ಎಕ್ಸ್ ನಲ್ಲಿ (x) ಹಂಚಿಕೊಂಡಿದ್ದು, ಭಾರಿ ವೈರಲ್ (Viral News) ಆಗಿದೆ. ಈ ರೋಗ ನಿರ್ಣಯ (identify a disease) ಮಾಡಲು ಸ್ವತಃ ವೈದ್ಯರು ಹೆಣಗಾಡುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.

ಲಿವರ್ ಡಾಕ್ (Liver Doc) ಎಂದು ಜನಪ್ರಿಯವಾಗಿರುವ ಸಿರಿಯಾಕ್ ಅಬ್ಬಿ ಫಿಲಿಪ್ಸ್ ಅವರು ವಯಸ್ಕರೊಬ್ಬರಿಗೆ ಬಿಟ್ಟು ಬಿಟ್ಟು ಬರುತ್ತಿದ್ದ ಜ್ವರ, ಶೀತ, ಆಯಾಸ, ಸಂಧಿವಾತದಂತಹ ಲಕ್ಷಣಗಳನ್ನು ಕಂಡು ಎಲ್ಲ ಪರೀಕ್ಷೆಗಳನ್ನು ನಡೆಸಿದರು. ಆದರೆ ಎಲ್ಲವೂ ನಕಾರಾತ್ಮಕ ಫಲಿತಾಂಶ ನೀಡಿತ್ತು. ವೈರಲ್ ಹೆಪಟೈಟಿಸ್‌, ಕೋವಿಡ್ -19, ಇನ್ ಫ್ಲೂ ಯೆನ್ಸ್, ಡೆಂಗ್ಯೂ, ಎಬ್‌ಸ್ಟೈನ್ ಬಾರ್ ವೈರಸ್‌ ಎಲ್ಲವನ್ನೂ ಪರೀಕ್ಷಿಸಿದರು. ಆದರೆ ಎಲ್ಲವೂ ನೆಗೆಟಿವ್ ವರದಿ ನೀಡಿತ್ತು. ಇದರಿಂದ ಸ್ವತಃ ವೈದ್ಯರಿಗೆ ಹತಾಶೆ ಉಂಟಾಯಿತು. ಎಲ್ಲ ವೈದ್ಯಕೀಯ ಪುಸ್ತಕಗಳನ್ನು ನೋಡಿದರು. ಯಾವುದೇ ಪ್ರಯೋಜನವಾಗಲಿಲ್ಲ.

ಒಂದು ದಿನ ಮನೆಯ ಕೆಲಸದವಳು ಬಂದು ತಮ್ಮ ಮೊಮ್ಮಕ್ಕಳಲ್ಲಿ ಈ ದದ್ದು ಕಾಣಿಸಿಕೊಂಡಿದೆ. ಇದನ್ನು ಸ್ಥಳೀಯ ಭಾಷೆಯಲ್ಲಿ ‘ಅಂಜಂಪಣಿ’ ಎಂದು ಕರೆಯಲಾಗುತ್ತದೆ. ಈ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದಳು. ಬಳಿಕ ಪಾರ್ವೊವೈರಸ್ ಬಿ 19 ಗಾಗಿ ಪರಿಶೀಲಿಸಿದಾಗ ಅದು ಪಾಸಿಟಿವ್ ಬಂದಿದೆ ಎಂದು ಡಾ. ಫಿಲಿಪ್ಸ್ ಹೇಳಿದ್ದಾರೆ.

17 ವರ್ಷಗಳ ವೈದ್ಯಕೀಯ ವೃತ್ತಿಯಲ್ಲಿ ವಯಸ್ಸಾದ ಸೇವಕಿಯೊಬ್ಬರು 10 ಸೆಕೆಂಡುಗಳಲ್ಲಿ ರೋಗವನ್ನು ಗುರುತಿಸಿದ್ದು ಇದೇ ಮೊದಲು ಎಂದು ಅವರು ತಿಳಿಸಿದ್ದಾರೆ.

ಇದನ್ನು ಐದನೇ ರೋಗ ಎಂದು ಕರೆಯಲಾಗುತ್ತದೆ. ಇದು ಪಾರ್ವೊವೈರಸ್ B19 ನಿಂದ ಉಂಟಾಗುತ್ತದೆ. ಇದು ವಯಸ್ಕರಿಗಿಂತ ಮಕ್ಕಳಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಯಾರಾದರೂ ಕೆಮ್ಮಿದಾಗ ಅಥವಾ ಸೀನಿದಾಗ ಮೂಗು ಮತ್ತು ಬಾಯಿಯಲ್ಲಿರುವ ದ್ರವಗಳ ಮೂಲಕ ರೋಗ ಹರಡುತ್ತದೆ. ಕೆನ್ನೆಗಳ ಮೇಲೆ ಕೆಂಪು ದದ್ದುಗಳನ್ನು ಹೊಂದಿರುತ್ತದೆ. ದೇಹಕ್ಕೂ ಹರಡುತ್ತದೆ ಮತ್ತು ಇತರ ರೋಗಲಕ್ಷಣಗಳನ್ನು ಉಂಟುಮಾಡಬಹುದು.


ವೈರಲ್ ಆದ ಟ್ವೀಟ್

ಡಾ. ಫಿಲಿಪ್ ಅವರ ಈ ಟ್ವಿಟ್ ಭಾರೀ ವೈರಲ್ ಆಗಿದೆ. ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಇದು 4.18 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಸಾಕಷ್ಟು ಮಂದಿ ಇದಕ್ಕೆ ಕಾಮೆಂಟ್ ಕೂಡ ಮಾಡಿದ್ದಾರೆ.

ಒಬ್ಬರು ಕೆಲವೊಮ್ಮೆ ಪ್ರಯೋಗಿಕ ಜ್ಞಾನವನ್ನು ಸಾಂಪ್ರದಾಯಿಕ ಜ್ಞಾನ ಸೋಲಿಸುತ್ತದೆ ಎಂದು ಹೇಳಿದ್ದಾರೆ. ಇನ್ನೊಬ್ಬರು ಕಾಮೆಂಟ್ ನಲ್ಲಿ ಕೆಲವು ಸಂದರ್ಭದಲ್ಲಿ ವೈದ್ಯರಿಗಿಂತ ಹಿರಿಯರ ನಂಬಿಕೆಯೇ ನಿಜವಾಗುತ್ತದೆ ಎಂದು ತಿಳಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Viral Video: 13ನೇ ಮಹಡಿಯಿಂದ ಬಿದ್ದರೂ ಈಕೆಯ ಒಂದೇ ಒಂದು ಮೂಳೆ ಮುರಿದಿಲ್ಲ! ವಿಡಿಯೊ ನೋಡಿ

Viral Video: ಆಕಸ್ಮಾತ್ ಆಗಿ ಕಾಲು ಜಾರಿ ಬಿದ್ದು ಮೂಳೆ ಮುರಿದು ತಿಂಗಳಿಡೀ ನಡೆಯುವುದಕ್ಕೆ ಆಗದೇ ಒದ್ದಾಡುವವರನ್ನು ನೋಡಿರುತ್ತೇವೆ. ಆದರೆ ರಷ್ಯಾದಲ್ಲಿ ಮಹಿಳೆಯೊಬ್ಬರು 13ನೇ ಮಹಡಿಯಿಂದ ಬಿದ್ದರು ಏನೂ ಆಗದವರ ಹಾಗೇ ಎದ್ದು ಅಂಬ್ಯುಲೆನ್ಸ್ ಕಡೆಗೆ ನಡೆದುಕೊಂಡೇ ಹೋಗಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.ಮಹಿಳೆ ಎತ್ತರದ ಮಹಡಿಯಿಂದ ಮೈದಾನದಲ್ಲಿದ್ದ ಹುಲ್ಲುಗಾವಲಿನ ಮೇಲೆ ಬಿದ್ದು, ನಂತರ ತಾನಾಗಿಯೇ ಎದ್ದೇಳುವ ವಿಡಿಯೊ ಅಚ್ಚರಿ ಮೂಡಿಸಿದೆ.

VISTARANEWS.COM


on

Viral Video
Koo


ಮೊದಲ ಮಹಡಿಯಿಂದ ಬಿದ್ದವರ ಜೀವ ಉಳಿಯುವುದೇ ಕಷ್ಟ. ಅಂತಹದರಲ್ಲಿ ರಷ್ಯಾದಲ್ಲಿ 22 ವರ್ಷದ ಮಹಿಳೆಯೊಬ್ಬರು ಎತ್ತರದ ಕಟ್ಟಡದ 13ನೇ ಮಹಡಿಯಿಂದ ಬಿದ್ದರೂ ಆಕೆಗೆ ಸಣ್ಣಪುಟ್ಟ ಗಾಯಗಳಾಗಿ ಆಕೆ ಬದುಕುಳಿದಿದ್ದು ಪವಾಡ ಎನ್ನಲಾಗಿದೆ. ಈ ಆಘಾತಕಾರಿ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಆಶ್ಚರ್ಯವೆನೆಂದರೆ ಆಕೆಯ ಒಂದೇ ಒಂದು ಮೂಳೆ ಕೂಡ ಮುರಿತಕ್ಕೊಳಗಾಗಿಲ್ಲ.

ಮಹಿಳೆ ಎತ್ತರದ ಮಹಡಿಯಿಂದ ಮೈದಾನದಲ್ಲಿದ್ದ ಹುಲ್ಲುಗಾವಲಿನ ಮೇಲೆ ಬಿದ್ದು, ನಂತರ ತಾನಾಗಿಯೇ ಎದ್ದೇಳುವ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಕಾಣಿಸಿಕೊಂಡಿದೆ. ಅಲ್ಲದೇ ಮಹಿಳೆ ತಾನಾಗಿಯೇ ಆಂಬ್ಯುಲೆನ್ಸ್ ಕಡೆಗೆ ಆರಾಮವಾಗಿ ನಡೆದುಕೊಂಡು ಬಂದಿದ್ದಾಳೆ.

ಜುಲೈ 16ರಂದು ಮಹಾರಾಷ್ಟ್ರದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಮಹಾರಾಷ್ಟ್ರದ ಡೊಂಬಿವಲಿಯ ಕಾಂಪ್ಲೆಕ್ಸ್ ಒಂದರ ಮೂರನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿದ್ದರು. ಡೊಂಬಿವಿಲಿಯ ಪೂರ್ವ ಕಲ್ಯಾಣ್ ಶೀಲ್ ರಸ್ತೆಯ ವಿಕಾಸ್ ನಾಕಾ ಪ್ರದೇಶದ ಗ್ಲೋಬ್‌ಸ್ಟೇಟ್ ಎಂಬ ಸಂಕೀರ್ಣದಲ್ಲಿ ಈ ಘಟನೆ ನಡೆದಿತ್ತು.

ಇದನ್ನೂ ಓದಿ: 7 ಬಜೆಟ್‍ಗಳಲ್ಲಿ 7 ಬಣ್ಣದ ಸೀರೆ ಧರಿಸಿ ಮಿಂಚಿದ ನಿರ್ಮಲಾ ಸೀತಾರಾಮನ್!

ಮೃತರನ್ನು ನಾಗಿನಾದೇವಿ ಮಂಜಿರಾಮ್ ಎಂದು ಗುರುತಿಸಲಾಗಿದ್ದು, ಅಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದರು. ಅವರು ತಮ್ಮ ವಿರಾಮದ ಸಮಯದಲ್ಲಿ ಸಹೋದ್ಯೋಗಿಗಳೊಂದಿಗೆ ಸಂಕೀರ್ಣದ ಗೋಡೆಯ ಬಳಿ ನಿಂತು ತಮಾಷೆ ಮಾಡಿಕೊಳ್ಳುತ್ತಿದ್ದರು. ಆ ವೇಳೆ ನಾಗಿನಾದೇವಿಯನ್ನು ಬಂಟಿ ಎಂದು ಕರೆಯಲಾದ ವ್ಯಕ್ತಿ ತಮಾಷೆಗೆ ತಳ್ಳಿದ್ದಾನೆ. ಇದರಿಂದ ಆಕೆ ಆಯತಪ್ಪಿ ಮೂರನೇ ಮಹಡಿಯಿಂದ ಬಿದ್ದಿದ್ದಾಳೆ. ಇದರ ಪರಿಣಾಮ ಆಕೆ ಸ್ಥಳದಲ್ಲೇ ಸಾವನಪ್ಪಿದ್ದಾಳೆ ಎನ್ನಲಾಗಿದೆ.

Continue Reading

Latest

Viral News: ಸರ್ಕಾರಿ ಕಚೇರಿಯ ಶೌಚಾಲಯದಲ್ಲಿ ಕ್ಲಾಸ್‌ 1 ಅಧಿಕಾರಿಗಳಿಗೆ ಮೀಸಲು! ಫೋಟೊ ನೋಡಿ

Viral News: ಭಾರತದ ಪ್ರತಿಷ್ಠಿತ ಸರ್ಕಾರಿ ಕಚೇರಿಯಲ್ಲಿಯೂ ಕೂಡ ಉದ್ಯೋಗಿಗಳ ನಡುವೆ ತಾರತಮ್ಯ ಮಾಡಲಾಗಿದೆ. ಸರ್ಕಾರಿ ಹುದ್ದೆಗಳಲ್ಲಿ ಎಲ್ಲಾ ಉದ್ಯೋಗಿಗಳು ಸಮಾನರೆಂದು ಘೋಷಿಸಲಾಗುತ್ತದೆ. ಆದರೆ ಅಲ್ಲಿ ಕೆಲವು ಶೌಚಾಲಯ ಸ್ಥಳಗಳನ್ನು ಉನ್ನತ ದರ್ಜೆಯ ಅಧಿಕಾರಿಗಳಿಗೆ ಮಾತ್ರ ಕಾಯ್ದಿರಿಸಲಾಗಿದೆ. ಇದಕ್ಕೆ ಸಂಬಂಧಪಟ್ಟ ಪೋಟೊ ವೈರಲ್ ಆಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.

VISTARANEWS.COM


on

Viral News
Koo


ನವದೆಹಲಿ: ಕೆಲವೊಂದು ಖಾಸಗಿ ಸಂಸ್ಥೆಗಳಲ್ಲಿ ಉನ್ನತ ಹುದ್ದೆಯಲ್ಲಿರುವವರಿಗೆ ಶೌಚಾಲಯದ ವ್ಯವಸ್ಥೆ ಬೇರೆ ಕಡೆ ಮಾಡಲಾಗುತ್ತದೆ. ಉದ್ಯೋಗಿಗಳು ಬಳಸುವಂತಹ ಶೌಚಾಲಯಗಳನ್ನು ಕೆಲವು ಉನ್ನತ ಹುದ್ದೆಯವರು ಬಳಸುವುದಿಲ್ಲ. ಇದು ಎಲ್ಲ ಖಾಸಗಿ ಸಂಸ್ಥೆಗಳಿರುವ ಕಡೆ ಸರ್ವೇಸಾಮಾನ್ಯ. ಆದರೆ ಭಾರತದ ಪ್ರತಿಷ್ಠಿತ ಸರ್ಕಾರಿ ಕಚೇರಿಯಲ್ಲಿಯೂ ಕೂಡ ಉದ್ಯೋಗಿಗಳ ನಡುವೆ ತಾರತಮ್ಯ ಮಾಡಲಾಗಿದೆ. ಸರ್ಕಾರಿ ಹುದ್ದೆಗಳಲ್ಲಿ ಎಲ್ಲಾ ಉದ್ಯೋಗಿಗಳು ಸಮಾನರೆಂದು ಘೋಷಿಸಲಾಗುತ್ತದೆ. ಆದರೆ ಅಲ್ಲಿ ಕೆಲವು ಶೌಚಾಲಯ ಸ್ಥಳಗಳನ್ನು ಉನ್ನತ ದರ್ಜೆಯ ಅಧಿಕಾರಿಗಳಿಗೆ ಮಾತ್ರ ಕಾಯ್ದಿರಿಸಲಾಗಿದೆ. ಇದಕ್ಕೆ ಸಂಬಂಧಪಟ್ಟ ಪೋಟೊ ವೈರಲ್ (Viral News ) ಆಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಈಗ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಲಾದ ಮತ್ತು ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‍ಗಳಲ್ಲಿ ವೈರಲ್ ಆಗುತ್ತಿರುವ ಈ ಪೋಟೊದಲ್ಲಿ ಶೌಚಾಲಯದಲ್ಲಿ ಎರಡನ್ನು ಕ್ಲಾಸ್ -1 ಅಧಿಕಾರಿಗಳಿಗೆ ಕಾಯ್ದಿರಿಸಿದ್ದನ್ನು ತೋರಿಸುತ್ತದೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ಇದನ್ನು ತಾರತಮ್ಯಕ್ಕೆ ಉದಾಹರಣೆ ಎಂದು ಹಲವರು ಕರೆದಿದ್ದಾರೆ. ಇದು “ಸಂಪೂರ್ಣ ನಾಚಿಕೆಗೇಡು” ಎಂದು ಈ ಪೋಟೊವನ್ನು ತಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಂಡ ಮುದಿತ್ ಗುಪ್ತಾ ತಿಳಿಸಿದ್ದಾರೆ ಹಾಗೂ ಅವರು ಈ ಬೇಧಭಾವವನ್ನು ಖಂಡಿಸಲು ಚಿತ್ರವನ್ನು ಎಕ್ಸ್‌ನಲ್ಲಿ ಫಾರ್ವರ್ಡ್ ಮಾಡಿದರು. ಈ ಚಿತ್ರವನ್ನು ಮೂಲತಃ ರೆಡ್ಡಿಟ್ ಪುಟದಲ್ಲಿ ಅಪ್ಲೋಡ್ ಮಾಡಲಾಗಿದೆ. ಅಲ್ಲಿಯೂ ಇದು ಭಾರಿ ಆಕ್ರೋಶಕ್ಕೆ ಒಳಗಾಗಿದೆ ಎಂಬುದಾಗಿ ತಿಳಿದುಬಂದಿದೆ.

ವಿಶೇಷವೆಂದರೆ, ಶೌಚಾಲಯದಲ್ಲಿ ಮಾಡಿದ ಅಂತಹ ವಿಭಜನೆ ಮತ್ತು ಮೀಸಲಾತಿಗಳ ಬಗ್ಗೆ ಹೆಚ್ಚಿನ ಜನರು ಆಘಾತಕ್ಕೊಳಗಾಗಲಿಲ್ಲ. ಇದು ಹೊಸತೇನು ಅಲ್ಲ, ಇದು ಸಾಮಾನ್ಯ ಪ್ರಕರಣವಾಗಿದೆ ಎಂದು ಅನೇಕ ಜನರು ಹೇಳಿದ್ದಾರೆ. ಆದರೆ ಇದು ಬದಲಾಗಬೇಕು ಎಂದು ಹಲವರು ತಿಳಿಸಿದ್ದಾರೆ.

ಇದನ್ನೂ ಓದಿ: ಮದುವೆಯಾದ ಮೂರೇ ಮೂರು ನಿಮಿಷದೊಳಗೆ ವಿಚ್ಛೇದನ! ಕಾರಣ ವಿಚಿತ್ರ!

ಈ ಶೌಚಾಲಯದ ವಿಚಾರಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿರುತ್ತದೆ. ಶೌಚಾಲಯ ಸ್ವಚ್ಛಗೊಳಿಸಲು ವಿದ್ಯಾರ್ಥಿಗಳನ್ನು ಬಳಸುವುದನ್ನು ನಿಷೇಧಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ ನಂತರವೂ ಕೆಲವು ಸರ್ಕಾರಿ ಶಾಲೆಯಲ್ಲಿ ಶೌಚಾಲಯವನ್ನು ವಿದ್ಯಾರ್ಥಿಗಳು ಸ್ವಚ್ಛಗೊಳಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು, ಈ ಬಗ್ಗೆ ಶಿಕ್ಷಣ ಇಲಾಖೆ ತನಿಖೆ ನಡೆಸುವಂತೆ ಆದೇಶಿಸಿತ್ತು ಎನ್ನಲಾಗಿದೆ.

Continue Reading

ಕ್ರಿಕೆಟ್

Kuldeep Yadav: ಬಾಗೇಶ್ವರ್ ಬಾಬಾ ಆಶೀರ್ವಾದ ಪಡೆದ ಕುಲ್​ದೀಪ್​ ಯಾದವ್; ವಿಡಿಯೊ ವೈರಲ್​

Kuldeep Yadav: ಗುರು ಪೂರ್ಣಿಮ ದಿನದಂದು ಕುಲ್​ದೀಪ್​ ಬಾಗೇಶ್ವರ್ ಧಾಮ್​ಗೆ ಭೇಟಿ ನೀಡಿದ್ದರು. ಕುಲ್​ದೀಪ್​ ಆಶ್ರಮದಲ್ಲಿ ಕೆಲ ಕಾಲ ಧ್ಯಾನ ಮಾಡಿರುವ ವಿಡಿಯೊ ವೈರಲ್​ ಆಗಿದೆ.

VISTARANEWS.COM


on

Kuldeep Yadav
Koo

ಮಧ್ಯಪ್ರದೇಶ: ಟೀಮ್​ ಇಂಡಿಯಾದ ಸ್ಟಾರ್​ ಸ್ಪಿನ್ನರ್​ ಕುಲ್​ದೀಪ್​ ಯಾದವ್​ ಅವರು ಮಧ್ಯಪ್ರದೇಶದ ಛತ್ತರ್‌ಪುರ್(Chhatarpur) ಜಿಲ್ಲೆಯ ಬಾಗೇಶ್ವರ್ ಧಾಮ್ (Bageswhar Dham) ದೇಗುಲಕ್ಕೆ ಭೇಟಿ ನೀಡಿ ಪೀಠಾಧೀಶ್ವರ ಬಾಗೇಶ್ವರ್ ಬಾಬಾ(Baba Bageshwar) ಅವರ ಆಶೀರ್ವಾದ ಪಡೆದುಕೊಂಡಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಕುಲ್​ದೀಪ್​ ಬೌಲಿಂಗ್​ ಫಾರ್ಮ್​ ಕಳೆದುಕೊಂಡು ಹಲವು ವರ್ಷ ಭಾರತ ತಂಡದಲ್ಲಿ ಅವಕಾಶ ವಂಚಿತರಾಗಿದ್ದ ವೇಳೆ ಬಾಗೇಶ್ವರ್ ಧಾಮ್ (Bageswhar Dham) ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೋಜೆ ಸಲ್ಲಿಸಿದ್ದರು. ಈ ವೇಳೆ ಬಾಗೇಶ್ವರ್ ಬಾಬಾ ಕುಲ್​ದೀಪ್​ ಯಾದವ್ ಕೊರಳಿಗೆ ಹೂವಿನ ಹಾರ ಹಾಕುವ ಮೂಲಕ ಮತ್ತೆ ಭಾರತ ತಂಡದ ಪರ ಆಡಲಿದ್ದೀಯ ಎಂದು ಹಾರೈಸಿದ್ದರು. ಇದಾದ ಒಂದು ತಿಂಗಳ ಬಳಿಕ ಕುಲ್​ದೀಪ್​ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. ಏಕದಿನ ಸೇರಿ ಟಿ20 ವಿಶ್ವಕಪ್​ನಲ್ಲಿ ಪ್ರಧಾನ ಸ್ಪಿನ್ನರ್​ ಆಗಿ ಕಾಣಿಸಿಕೊಂಡಿದ್ದರು. ಅಂದಿನಿಂದ ಕುಲ್​ದೀಪ್​ ಬಾಗೇಶ್ವರ್ ಬಾಬಾ ಅವರ ಪರಮ ಭಕ್ತರಾಗಿದ್ದಾರೆ.

ಗುರು ಪೂರ್ಣಿಮ ದಿನದಂದು ಕುಲ್​ದೀಪ್​ ಬಾಗೇಶ್ವರ್ ಧಾಮ್​ಗೆ ಭೇಟಿ ನೀಡಿದ್ದರು. ಕುಲ್​ದೀಪ್​ ಆಶ್ರಮದಲ್ಲಿ ಕೆಲ ಕಾಲ ಧ್ಯಾನ ಮಾಡಿರುವ ವಿಡಿಯೊ ವೈರಲ್​ ಆಗಿದೆ. ಕೇವಲ 26 ವರ್ಷದ ಬಾಗೇಶ್ವರ್ ಬಾಬಾ ಅಲಿಯಾಸ್ ಶಾಸ್ತ್ರಿ ಅವರು ಸ್ವಯಂ ಘೋಷಿತ ದೇವಮಾನವ ಎನಿಸಿಕೊಂಡಿದ್ದಾರೆ. ಕಥಾ ಎಂಬ ಧಾರ್ಮಿಕ ಪ್ರವಚನ ನೀಡುವುದಕ್ಕಾಗಿ ಅವರು ದೇಶಾದ್ಯಂತ ಪ್ರವಾಸ ಕೈಗೊಳ್ಳುತ್ತಾರೆ. ಇತ್ತೀಚೆಗೆ, ಮಹಾರಾಷ್ಟ್ರ ಮೂಲದ ಮೂಢನಂಬಿಕೆ ವಿರೋಧಿ ಸಂಘಟನೆಯು ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ತಮಗಿರುವ ನಿಗೂಢ, ಪವಾಡ ಶಕ್ತಿಯನ್ನು ಪದರ್ಶಿಸುವಂತೆ ಸವಾಲು ಹಾಕಿದ್ದರು.

ಇದನ್ನೂ ಓದಿ Kuldeep Yadav: ಕುಲ್​ದೀಪ್ ಯಾದವ್​ರನ್ನು​ ಅಭಿನಂದಿಸಿದ ಯೋಗಿ ಆದಿತ್ಯನಾಥ್

ಕಥಾ ವಿಡಿಯೋ ವೈರಲ್

ಬಾಗೇಶ್ವರ್ ಬಾಬಾ ನಡೆಸುವ ಕಥಾ ವಿಡಿಯೋಗಳು ಸಾಕಷ್ಟು ವೈರಲ್ ಆಗಿವೆ. ಹೀಗೆ ವೈರಲ್ ಆದ ವಿಡಿಯೋವೊಂದರಲ್ಲಿ ಜನರ ಮಧ್ಯೆದಿಂದ ಪತ್ರಕರ್ತರೊಬ್ಬರನ್ನು ಬಾಬಾ ಕರೆಯುತ್ತಾರೆ. ಬಳಿಕ, ಅವರ ಕುಟುಂಬದ ಸದಸ್ಯರ ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ. ಬಾಬಾಗೆ, ತಮ್ಮ ಕುಟುಂಬದ ಸಂಪೂರ್ಣ ಮಾಹಿತಿ ತಿಳಿದಿರುವುದು ಅಸಾಧಾರಣ ಕಾರ್ಯವೆಂದು ಆ ಪತ್ರಕರ್ತರು ಘೋಷಿಸುತ್ತಾರೆ. ಆದರೆ, ಈ ಪತ್ರಕರ್ತನ ಬಗ್ಗೆ ಬಾಬಾ ಹೇಳಿದ ಮಾಹಿತಿ ಎಲ್ಲವೂ ಸೋಷಿಯಲ್ ಮೀಡಿಯಾಗಳಲ್ಲಿದೆ ಎಂದು ಜನರು ಹೇಳಿಕೊಂಡಿದ್ದಾರೆ.

ಬಿಜೆಪಿ ನಾಯಕರ ಬೆಂಬಲ

ಬಾಗೇಶ್ವರ್ ಬಾಬಾ ಅವರಿಗೆ ಬಿಜೆಪಿಯ ಅನೇಕ ನಾಯಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಪಕ್ಷದ ಹಿರಿಯ ನಾಯಕ ಕೈಲಾಶ್ ವಿಜಯವರ್ಗೀಯ ಅವರು ಬಹಿರಂವಾಗಿಯೇ ಬಾಬಾ ಅವರನ್ನು ಬೆಂಬಲಿಸಿದ್ದಾರೆ. ದ್ವೇಷ ಭಾಷಣದಿಂದಲೇ ಕುಖ್ಯಾತಿ ಗಳಿಸಿರುವ ಬಿಜೆಪಿಯ ಮತ್ತೊಬ್ಬ ನಾಯಕ ಕಪಿಲ್ ಮಿಶ್ರಾ ಅವರು, ಶಾಸ್ತ್ರಿ ಪರವಾಗಿ ದಿಲ್ಲಿಯಲ್ಲಿ ರ್ಯಾಲಿಯನ್ನು ನಡೆಸಿದ್ದಾರೆ. ಬಾಬಾ ಅವರು ಲವ್ ಜಿಹಾದ್ ವಿರುದ್ಧ ಮಾತನಾಡಿದ್ದಕ್ಕಾಗಿ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಯಾರು ಬಾಬಾ

ಬಾಗೇಶ್ವರ್ ಬಾಬಾ ಅವರು ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿರುವ ಬಾಗೇಶ್ವರ್ ಧಾಮ್ ಕ್ಷೇತ್ರದ ಧಾರ್ಮಿಕ ಮುಖಂಡರಾಗಿದ್ದಾರೆ. ಇವರ ಪೂರ್ತಿ ಹೆಸರು ಧೀರೇಂದ್ರ ಕೃಷ್ಣ ಶಾಸ್ತ್ರಿ. ಇವರು ಬಾಗೇಶ್ವರ ಬಾಬಾ ಎಂದೇ ಖ್ಯಾತರಾಗಿದ್ದಾರೆ. ಅವರ ಬೋಧಿಸುವ ಕಥಾಗಳು ಲಕ್ಷಾಂತರ ಭಕ್ತರನ್ನು ಸೆಳೆಯುತ್ತಿವೆ. ಜತೆಗೆ, ಪವಾಡಗಳನ್ನು ಮಾಡುತ್ತಿದ್ದಾರೆ. ಇದರಿಂದ ಸಾಕಷ್ಟು ಜನರು ಆಕರ್ಷಿತರಾಗುತ್ತಿದ್ದಾರೆ. ಆದರೆ, ಪವಾಡಗಳ ಮೂಲಕ ಇವರು ಜನರಲ್ಲಿ ಮೂಢನಂಬಿಕೆಗಳನ್ನು ಬಿತ್ತುತ್ತಿದ್ದಾರೆಂಬ ಆರೋಪವೂ ಕೇಳಿ ಬಂದಿತ್ತು.

Continue Reading

Latest

Viral Video: ಎರಡು ಮುಖ, ನಾಲ್ಕು ತೋಳು, ನಾಲ್ಕು ಕಾಲುಗಳ ಮಗು ಜನನ!

Viral Video: ಉತ್ತರ ಪ್ರದೇಶದ ಕಿರಾತಾಪುರ ಗ್ರಾಮದ ಕೊರಿಯನ್ ಪುರ್ವಾ ಮೂಲದ ರಮಾ ದೇವಿ ಎಂಬುವವರು ಅಪರೂಪದಲ್ಲಿ ಅಪರೂಪ ಎಂಬಂಥ ಮಗುವಿಗೆ ಜನ್ಮ ನೀಡಿದ್ದಾರೆ. ಗ್ರಾಮಸ್ಥರು ಪವಾಡಸದೃಶ ಮಗುವನ್ನು ನೋಡಲು ಭಾರೀ ಸಂಖ್ಯೆಯಲ್ಲಿ ಆಸ್ಪತ್ರೆಗೆ ಆಗಮಿಸಿದ್ದರು. ಆದರೆ ಈ ಮಗು ಹೆಚ್ಚು ಹೊತ್ತು ಬದುಕುಳಿಯಲಿಲ್ಲ.

VISTARANEWS.COM


on

Viral Video
Koo


ಸೀತಾಪುರ: ಹಿಂದೆಯೂ ವಿಚಿತ್ರ ಎನಿಸುವ ಆಕೃತಿಯ ಮಕ್ಕಳು ಜನಿಸುತ್ತಿದ್ದರು. ಆದರೆ ಇಂದು ತಂತ್ರಜ್ಞಾನ ಬಹಳ ಮುಂದುವರಿದ ಕಾರಣ ಇಂತಹ ಪ್ರಕರಣಗಳು ಬಹಳ ಕಡಿಮೆಯಾಗಿದೆ. ಆದರೆ ಇದೀಗ ಉತ್ತರ ಪ್ರದೇಶದ ಸೀತಾಪುರದ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ವಿಶಿಷ್ಟವಾದ ಮಗುವಿಗೆ ಜನ್ಮ ನೀಡಿದ್ದಾರೆ. ಆಕೆಯ ಮಗು ಹುಟ್ಟುವಾಗ ಎರಡು ಮುಖಗಳು, ನಾಲ್ಕು ತೋಳುಗಳು ಮತ್ತು ನಾಲ್ಕು ಕಾಲುಗಳೊಂದಿಗೆ ಜನಿಸಿದೆ. ಮಗುವಿನ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಈ ಅಸಾಧಾರಣ ಮಗುವನ್ನು ನೋಡಲು ಅನೇಕ ಜನರು ಆಸ್ಪತ್ರೆಗೆ ಬರುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಕ್ರಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಕಿರಾತಾಪುರ ಗ್ರಾಮದ ಕೊರಿಯನ್ ಪುರ್ವಾ ಮೂಲದ ರಮಾ ದೇವಿ (40) ಈ ವಿಶಿಷ್ಟವಾದ ಮಗುವಿಗೆ ಜನ್ಮ ನೀಡಿದ ತಾಯಿ. ಅವರಿಗೆ ತಡರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಪಿಎಚ್‍ಸಿ ರೇವಾನ್‍ಗೆ ಕರೆದೊಯ್ಯಲಾಯಿತು. ಮುಂಜಾನೆ 5 ಗಂಟೆ ಸುಮಾರಿಗೆ ಮಹಿಳೆ ಈ ಅಸಾಧಾರಣ ಮಗುವಿಗೆ ಜನ್ಮ ನೀಡಿದ್ದಾರೆ. ನಂತರ ಗ್ರಾಮಸ್ಥರು ಪವಾಡಸದೃಶ ಮಗುವನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗೆ ಬಂದರು. ಆದರೆ, ಸೋಮವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಮಗು ಮೃತಪಟ್ಟಿದೆ.

ಮಗುವಿನ ದೇಹವು ಮತ್ತೊಂದು ದೇಹಕ್ಕೆ ಅಂಟಿಕೊಂಡಿದೆ. ಅದರಲ್ಲಿ ಒಂದು ದೇಹವು ಅಭಿವೃದ್ಧಿಗೊಂಡಿದೆ ಮತ್ತು ಇನ್ನೊಂದು ದೇಹವು ಕಡಿಮೆ ಅಭಿವೃದ್ಧಿಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ದೇಹವು ಮತ್ತೊಂದು ದೇಹಕ್ಕೆ ಜೋಡಿಸಲ್ಪಟ್ಟಿದ್ದರಿಂದ, ಮಗುವಿಗೆ ಎರಡು ಮುಖಗಳು, ನಾಲ್ಕು ಕಾಲುಗಳು ಮತ್ತು ನಾಲ್ಕು ತೋಳುಗಳು ಇದ್ದವು.
ಆದರೆ ಈ ಅಸಾಧಾರಣ ಲಕ್ಷಣಗಳನ್ನು ಹೊಂದಿರುವ ಮಗುವನ್ನು ನೋಡಿ ಆಸ್ಪತ್ರೆಯ ಸಿಬ್ಬಂದಿ ಭಯಭೀತರಾಗಿದ್ದರು, ಆದ್ದರಿಂದ ಅವರು ಮಗುವನ್ನು ಹೊರಗೆ ಕರೆದೊಯ್ದರು, ಇದರಿಂದ ಆಸ್ಪತ್ರೆಯಲ್ಲಿ ಆಕ್ರೋಶ ಭುಗಿಲೆದ್ದಿತು. ಆದರೆ, ಮಗು ಜನಿಸಿದ ಐದು ಗಂಟೆಗಳ ನಂತರ ಸಾವನ್ನಪ್ಪಿದೆ.

ಇದನ್ನೂ ಓದಿ: ಅಂಬಾನಿ ಸ್ಕೂಲ್‌ನಲ್ಲಿ ಎಲ್‌ಕೆಜಿ ವಾರ್ಷಿಕ ಶುಲ್ಕವೇ 5 ಲಕ್ಷ ದಾಟುತ್ತದೆ!

ಮಗುವಿನ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಮತ್ತು ಮಗುವಿನ ಮುಖ ಮತ್ತು ಕೈಕಾಲುಗಳನ್ನು ನೋಡಿ ಜನರು ಆಘಾತಕ್ಕೊಳಗಾಗಿದ್ದಾರೆ. ಮಗು ಜನಿಸಿದ ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿದ್ದರಿಂದ ಆಸ್ಪತ್ರೆಯ ಅಧಿಕಾರಿಗಳಿಗೆ ಮಗುವನ್ನು ಉಳಿಸಲು ಸಾಧ್ಯವಾಗಲಿಲ್ಲ. ನವಜಾತ ಶಿಶುವನ್ನು ಕಳೆದುಕೊಂಡಿದ್ದರಿಂದ ಕುಟುಂಬ ವರ್ಗವು ದುಃಖಿತರಾಗಿದ್ದಾರೆ ಎನ್ನಲಾಗಿದೆ.

Continue Reading
Advertisement
Dina Bhavishya
ಭವಿಷ್ಯ10 mins ago

Dina Bhavishya : ಈ ರಾಶಿಯವರಿಗೆ ಸಂಗಾತಿಯ ಮಧುರ ಪ್ರೀತಿ ಸಿಗಲಿದೆ

INDIA Bloc To Protest
ದೇಶ6 hours ago

INDIA Bloc To Protest: ಬಜೆಟ್‌ ತಾರತಮ್ಯ ಖಂಡಿಸಿ ನಾಳೆ ಸಂಸತ್ತಿನಲ್ಲಿ ‘ಇಂಡಿಯಾ’ ಒಕ್ಕೂಟದಿಂದ ಪ್ರತಿಭಟನೆ

Paris Olympics
ಕ್ರೀಡೆ6 hours ago

Paris Olympics: ಪ್ಯಾರಿಸ್​ ಒಲಿಂಪಿಕ್ಸ್​ಗೂ ವಕ್ಕರಿಸಿದ ಕೊರೊನಾ ಸೋಂಕು; ಮೊದಲ ಪ್ರಕರಣ ಪತ್ತೆ

Union Minister Pralhad Joshi statement about Union Budget
ಕರ್ನಾಟಕ6 hours ago

Pralhad Joshi: ನವಭಾರತ ನಿರ್ಮಾಣಕ್ಕೆ ಅತ್ಯುತ್ತಮ ಬಜೆಟ್: ಸಚಿವ ಪ್ರಲ್ಹಾದ್‌ ಜೋಶಿ ಶ್ಲಾಘನೆ

The Kaftan kannada Album Song Release
ಕರ್ನಾಟಕ6 hours ago

The Kaptan Song: ‘ದ ಕಪ್ತಾನ್’ ಆಲ್ಬಂ ಸಾಂಗ್ ಬಿಡುಗಡೆ

kimberly cheatle
ವಿದೇಶ7 hours ago

Kimberly Cheatle: ಯುಎಸ್ ಸೀಕ್ರೆಟ್ ಸರ್ವೀಸ್ ಡೈರೆಕ್ಟರ್ ಹುದ್ದೆಗೆ ಕಿಂಬರ್ಲಿ ಚೀಟಲ್ ದಿಢೀರ್​ ರಾಜೀನಾಮೆ

Womens Asia Cup
ಕ್ರೀಡೆ7 hours ago

Womens Asia Cup: ಶಫಾಲಿ ಬ್ಯಾಟಿಂಗ್​ ಆರ್ಭಟ; ಭಾರತಕ್ಕೆ ಹ್ಯಾಟ್ರಿಕ್​ ಜಯ

Farmer commits suicide in Kenchanala village
ಕರ್ನಾಟಕ8 hours ago

Farmer Self Harming: ಕೆಂಚನಾಲ ಗ್ರಾಮದಲ್ಲಿ ಸಾಲ ಬಾಧೆಯಿಂದ ರೈತ ಆತ್ಮಹತ್ಯೆ

ಕರ್ನಾಟಕ8 hours ago

Assembly Session: ಕೆಳಮನೆಯಲ್ಲಿ ವಿಧಾನ ಮಂಡಲ ಅನರ್ಹತಾ‌ ನಿವಾರಣಾ 2ನೇ ತಿದ್ದುಪಡಿ ವಿಧೇಯಕ ಅಂಗೀಕಾರ

Viral Video
Latest8 hours ago

Viral Video: 13ನೇ ಮಹಡಿಯಿಂದ ಬಿದ್ದರೂ ಈಕೆಯ ಒಂದೇ ಒಂದು ಮೂಳೆ ಮುರಿದಿಲ್ಲ! ವಿಡಿಯೊ ನೋಡಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ11 hours ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

Udupi News
ಉಡುಪಿ12 hours ago

Udupi News : ಹಳೆ ಲಾರಿ ಚಾಸ್ಸಿಯಲ್ಲೇ ಕಿರು ಸೇತುವೆ ನಿರ್ಮಾಣ! ಬೈಂದೂರು ಶಾಸಕರ ಪರಿಕಲ್ಪನೆಗೆ ಜನರು ಫಿದಾ

murder case
ರಾಮನಗರ16 hours ago

Murder Case : ರಾಮನಗರದಲ್ಲೊಂದು ಪೈಶಾಚಿಕ ಕೃತ್ಯ; ಅತ್ಯಾಚಾರವೆಸಗಿ 4 ವರ್ಷದ ಬಾಲಕಿಯನ್ನು ಕೊಂದ ದುಷ್ಟ

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ4 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ5 days ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ5 days ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ6 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ6 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ1 week ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

ಟ್ರೆಂಡಿಂಗ್‌