Viral News: ಗೂಗಲ್‌ ಉದ್ಯೋಗ ತೊರೆದು ಉಬರ್‌ ಚಾಲಕನಾದ; ಇದರ ಹಿಂದಿದೆ ಅಚ್ಚರಿಯ ಕಾರಣ - Vistara News

ವೈರಲ್ ನ್ಯೂಸ್

Viral News: ಗೂಗಲ್‌ ಉದ್ಯೋಗ ತೊರೆದು ಉಬರ್‌ ಚಾಲಕನಾದ; ಇದರ ಹಿಂದಿದೆ ಅಚ್ಚರಿಯ ಕಾರಣ

Viral News: ಗೂಗಲ್‌ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ ವ್ಯಕ್ತಿ ಇದೀಗ ಬೆಂಗಳೂರಿನಲ್ಲಿ ಉಬರ್‌ ಚಾಲಕನಾಗಿದ್ದಾನೆ. ಇದರ ಹಿಂದಿದೆ ಇಂಟ್ರೆಸ್ಟಿಂಗ್‌ ಕಾರಣ.

VISTARANEWS.COM


on

uber
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸಿಲಿಕಾನ್‌ ಸಿಟಿ (Silicon City) ಬೆಂಗಳೂರು ತನ್ನ ಒಡಲಲ್ಲಿ ಅನೇಕ ಅಚ್ಚರಿಗಳನ್ನು ಹುದುಗಿಟ್ಟಿದೆ. ಇಲ್ಲಿ ದಿನಕ್ಕೊಂದು ಆಸಕ್ತಿದಾಯಕ ಕಥೆ, ಅಚ್ಚರಿಯ ಘಟನೆ ಹುಟ್ಟಿಕೊಳ್ಳುತ್ತದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದ ಇಂತಹ ಅಪರೂಪದ ಘಟನೆ ನಿಮ್ಮನ್ನೂ ಆಶ್ಚರ್ಯಚಕಿತಗೊಳಿಸಲಿದೆ. ಪ್ರತಿಷ್ಠಿತ ಗೂಗಲ್‌ (Google) ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ವ್ಯಕ್ತಿಯೊಬ್ಬ ಉಬರ್ ಮೋಟೋ ಡ್ರೈವರ್​ ಆಗಿರುವ ಘಟನೆ ಇದು. ರಾಘವ್ ದುವಾ ಎನ್ನುವವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡ ಈ ಪೋಸ್ಟ್‌ ಇದೀಗ ವೈರಲ್‌ (Viral news) ಆಗಿದೆ.

ಗೂಗಲ್‌ ಉದ್ಯೋಗಿ ಡ್ರೈವರ್‌ ಆಗಿದ್ದು ಯಾಕೆ?

ಆ ಡ್ರೈವರ್‌ ಗೂಗಲ್‌ನಂತಹ ಪ್ರತಿಷ್ಠಿತ ಸಂಸ್ಥೆಯ ಉದ್ಯೋಗ ತೊರೆದಿದ್ಯಾಕೆ ಎನ್ನುವುದರ ಕಾರಣ ತಿಳಿದರೆ ನೀವು ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಡುವುದು ಖಚಿತ. ಆತ ಬೆಂಗಳೂರು ನಗರವನ್ನು ಸುತ್ತಾಡಬೇಕು ಎನ್ನುವ ಉದ್ದೇಶದಿಂದ ಗೂಗಲ್‌ನ ಕೆಲಸವನ್ನು ತೊರೆದಿದ್ದಾನಂತೆ. ʼʼನನ್ನ ಉಬರ್‌ ಮೋಟೊ ಚಾಲಕ ಗೂಗಲ್‌ನ ಮಾಜಿ ಉದ್ಯೋಗಿ. ಆತ ಹೈದರಾಬಾದ್‌ನಿಂದ 20 ದಿನಗಳ ಹಿಂದೆ ನಗರಕ್ಕೆ ಬಂದಿದ್ದಾನೆ. ಬೆಂಗಳೂರನ್ನು ಸುತ್ತಾಡುವ ಉದ್ದೇಶದಿಂದ ಹಿಂದಿನ ಕೆಲಸವನ್ನು ತೊರೆದಿದ್ದಾಗಿ ತಿಳಿಸಿದ್ದಾನೆʼʼ ಎಂದು ರಾಘವ್ ಬರೆದಿದ್ದಾರೆ. ಜತೆಗೆ ರೈಡಿಂಗ್‌ ವಿಡಿಯೊ ಪೋಸ್ಟ್‌ ಮಾಡಿದ್ದಾರೆ.‌

ನೆಟ್ಟಿಗರು ಏನಂದ್ರು?

ಸದ್ಯ ಈ ಪೋಸ್ಟ್‌ ಹಲವರ ಗಮನ ಸೆಳೆದಿದೆ. ಈಗಾಗಲೇ 67 ಸಾವಿರಕ್ಕಿಂತ ಅಧಿಕ ಮಂದಿ ಇದನ್ನು ವೀಕ್ಷಿಸಿದ್ದಾರೆ. ಕೆಲವರು ಇದನ್ನು ‘ಪೀಕ್ ಬೆಂಗಳೂರು’ ಕ್ಷಣ ಎಂದು ಕರೆದಿದ್ದಾರೆ. ಒಬ್ಬರು ಕಮೆಂಟ್‌ ಮಾಡಿ, “ಇದು ನಿಜವಾಗಿಯೂ ಗಮನ ಸೆಳೆಯುವಂತಿದೆ. ಪಯಣದ ಸಮಯದಲ್ಲಿ ನೀವು ಆಸಕ್ತಿದಾಯಕ ಸಂಭಾಷಣೆ ನಡೆಸಿದ್ದೀರಿ ಎಂದು ನಾನು ಭಾವಿಸುತ್ತೇನೆ!” ಎಂದಿದ್ದಾರೆ. ಇನ್ನೊಬ್ಬರು ಇದೇ ರೀತಿಯ ಅನುಭವ ತಮಗಾಗಿರುವ ಕುರಿತು ಮಾಹಿತಿ ನೀಡಿದ್ದಾರೆ. “ನಿಜ, ನಾನು ವಿಶಾಖಪಟ್ಟಣಂನ 53 ವರ್ಷದ ಮಾಜಿ ಬ್ಯಾಂಕ್ ವ್ಯವಸ್ಥಾಪಕರನ್ನು ಭೇಟಿಯಾದೆ. ಅವರು ಈಗ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ರ್‍ಯಾಪಿಡೊ ಸವಾರಿ ಮಾಡುವ ಮೂಲಕ ಅವರು ವಿವಿಧ ಜನರನ್ನು ಭೇಟಿಯಾಗಲು ಮತ್ತು ನಗರದ ಎಲ್ಲ ಸ್ಥಳಗಳನ್ನು ನೋಡಲು ಬಯಸುತ್ತಾರೆ. ಮಾತ್ರವಲ್ಲ ಆ ಬಗ್ಗೆ ಸಾಕ್ಷ್ಯಚಿತ್ರವನ್ನು ಮಾಡುವ ಯೋಜನೆಯಲ್ಲಿದ್ದಾರೆʼʼ ಎಂದು ತಿಳಿಸಿದ್ದಾರೆ. ʼʼಹೌದು ನಾನು ಕೂಡ ಹೀಗೆ ಡ್ರೈವರ್​ಗಳೊಂದಿಗೆ ಮಾತನಾಡುತ್ತ ಹೋಗುತ್ತೇನೆ. ಕೆಲವೊಮ್ಮೆ ಅವರು ತಮ್ಮ ಕಥೆಗಳನ್ನು ಹೇಳಿಕೊಳ್ಳುತ್ತಾರೆʼʼ ಎಂದಿದ್ದಾರೆ ಇನ್ನೊಬ್ಬರು. ಒಟ್ಟಿನಲ್ಲಿ ಬೆಂಗಳೂರು ನಗರದೆಡೆಗಿನ ಚಾಲಕನ ಕುತೂಹಲ, ಆಸಕ್ತಿ ಹಲವರ ಗಮನ ಸೆಳೆದಿದೆ.

ಇದನ್ನೂ ಓದಿ: Viral News: ಮ್ಯಾನ್ಮಾರ್‌ನಲ್ಲಿ ಹೊಸ ಪ್ರಭೇದದ ಹಾವು ಪತ್ತೆ; ಏನಿದರ ವೈಶಿಷ್ಟ್ಯ?

ಇದೇ ಮೊದಲ ಸಲವಲ್ಲ

ಇಂತಹ ಅಚ್ಚರಿಯ ಘಟನೆ ಬೆಂಗಳೂರಿನಲ್ಲಿ ನಡೆಯುತ್ತಿರುವುದು ಇದು ಮೊದಲನೆಯ ಸಲವಲ್ಲ. ನಿಶಿತ್ ಪಟೇಲ್ ಕೆಲವು ತಿಂಗಳ ಹಿಂದೆ ತಮಗಾದ ಅನುಭವವನ್ನು ಎಕ್ಸ್‌ ಮೂಲಕ ಹಂಚಿಕೊಂಡಿದ್ದರು. ʼʼನಾನು ಕುಬೇರ್ನೆಟ್ಸ್ ಮೀಟಪ್‌ಗೆ ಹೋಗಲು ರ್‍ಯಾಪಿಡೊ ಬುಕ್‌ ಮಾಡಿದ್ದೆ. ಡ್ರೈವರ್‌ ರಾಯಲ್ ಎನ್‌ಫೀಲ್ಡ್‌ ಬೈಕ್‌ನಲ್ಲಿ ಆಗಮಿಸಿದ್ದರು. ಅವರು ಕುಬರ್ನೆಟ್ಸ್ ಕಂಪೆನಿಯಲ್ಲಿ ಎಂಜಿನಿಯರ್ ಎಂದು ಆಮೇಲೆ ತಿಳಿಯಿತು. ಇದು ಟೆಕ್‌ ರಾಜಧಾನಿಯ ವೈಶಿಷ್ಟ್ಯʼʼ ಎಂದು ಬರೆದುಕೊಂಡಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಚಿಕ್ಕಬಳ್ಳಾಪುರ

Baby Girl : ಹೆಣ್ಣು ಮಗುವೆಂದು ಗಂಡನ ತಾತ್ಸಾರ; ದಾನ ಮಾಡಲು ಮುಂದಾದ ನತದೃಷ್ಟ ತಾಯಿ

Baby Girl : ಎರಡನೇ ಬಾರಿಯೂ ಹೆಣ್ಣು ಮಗುವಿಗೆ ಜನ್ಮ ನೀಡಿದಳೆಂದು ಪತಿಯೊಬ್ಬ ಕಿರುಕುಳ ನೀಡಿದ್ದಕ್ಕೆ, ಪತ್ನಿ ಹೆತ್ತ ಮಗುವನ್ನೇ ದಾನ ಮಾಡಲು ಮುಂದಾಗಿದ್ದಾಳೆ.

VISTARANEWS.COM


on

By

Man harasses Wife for giving birth to girl child
Koo

ಚಿಕ್ಕಬಳ್ಳಾಪುರ: ಎರಡನೇ ಬಾರಿಯೂ ಹೆಣ್ಣು ಮಗುವನ್ನೇ (Baby Girl) ಹೆತ್ತಳೆಂದು ಸಿಟ್ಟಾದ ಪಾಪಿ ಪತಿಯೊಬ್ಬ ಪತ್ನಿಗೆ ಕಿರುಕುಳ ನೀಡಿದ್ದಾನೆ. ಪತಿ ಕುಟುಂಬಸ್ಥರ ಕಿರುಕುಳಕ್ಕೆ (Husband assaulted) ಬೇಸತ್ತ ನತದೃಷ್ಟ ತಾಯಿ, ಹೆಣ್ಣು ಮಗುವನ್ನು ದಾನ ಮಾಡಲು ಮುಂದಾಗಿದ್ದಾಳೆ. ಚಿಕ್ಕಬಳ್ಳಾಪುರ (chikkabalapura News) ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಮರಸನಪಲ್ಲಿ ಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿದೆ.

ರಾಜಮ್ಮ ಎಂಬಾಕೆ ಹೆತ್ತ ಮಗುವನ್ನು ದಾನ ಮಾಡಲು ಮುಂದಾದ ನತದೃಷ್ಟ ತಾಯಿ ಆಗಿದ್ದಾಳೆ. ರಾಜಮ್ಮ ಮರಸನಪಲ್ಲಿ ಗ್ರಾಮದ ಲಕ್ಷ್ಮೀನಾರಾಯಣ ಎಂಬಾತನನ್ನು ಮದುವೆ ಆಗಿದ್ದರು. ಮೊದಮೊದಲು ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಆದರೆ ಯಾವಾಗ ರಾಜಮ್ಮರಿಗೆ ಇಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳೋ ಆಗಲಿದ್ದ ಅಸಡ್ಡೆ ತೋರಲು ಮುಂದಾಗಿದ್ದರು.

ಗಂಡು ಮಗುವಿಗೆ ಜನ್ಮ ನೀಡದ ಕಾರಣಕ್ಕೆ ಪತಿ ಲಕ್ಷ್ಮೀನಾರಾಯಣ ಕುಟುಂಬದವರು ರಾಜಮ್ಮರಿಗೆ ಹಾಗೂ ಹೆಣ್ಮಕ್ಕಳಿಗೆ ಕಿರುಕುಳ ನೀಡುತ್ತಿದ್ದಾರೆ. ರಾಜಮ್ಮ ಗರ್ಭಿಣಿಯಾಗಿದ್ದಾಗ ಆರೈಕೆ ಮಾಡುತ್ತಿದ್ದ ಕುಟುಂಬ, 2ನೇ ಬಾರಿಯೂ ಹೆಣ್ಣು ಮಗು ಹುಟ್ಟಿದಾಕ್ಷಣ ನಿರ್ಲಕ್ಷ್ಯ ತೋರಿದ್ದಾರೆ. ರಾಜಮ್ಮ ಚಿಕಿತ್ಸೆಗೆಂದು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆ ಬಂದಾಗ ಈ ನೋವಿನ ಪ್ರಕರಣವು ಬೆಳಕಿಗೆ ಬಂದಿದೆ.

ತಂದೆ- ತಾಯಿ ಕಳೆದುಕೊಂಡಿರುವ ರಾಜಮ್ಮರಿಗೆ ಅತ್ತ ತವರು ಮನೆ ಇಲ್ಲದೇ ಇತ್ತ ಗಂಡನ ಆಸರೆಯು ಇಲ್ಲದಂತಾಗಿದೆ. ಹೆತ್ತ ಮಗುವಿನ ಆರೈಕೆ ಮಾಡಲು ಆಗದ ಕಾರಣಕ್ಕೆ ಹುಟ್ಟಿದ ಹೆಣ್ಣು ಮಗುವನ್ನು ದಾನ ಮಾಡಲು ರಾಜಮ್ಮ ಮುಂದಾಗಿದ್ದಾರೆ. ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಕ್ಕೆ ಪತಿ ಲಕ್ಷ್ಮೀನಾರಾಣ ಪತ್ನಿ ರಾಜಮ್ಮ ಎಂದರೆ ತಾತ್ಸಾರ ಮನೋಭಾವ ತೋರುತ್ತಿದ್ದಾನೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಹಾವೇರಿ

Boar Attack : ಹಂದಿಗಳ ಕಾಟಕ್ಕೆ ಮನೆ ಬಿಟ್ಟು ಹೋದ್ರು ಹೆಂಡ್ತಿ-ಮಕ್ಕಳು!

Boar Attack : ಹಂದಿಗಳ ಕಾಟಕ್ಕೆ ಗೃಹಿಣಿಯೊಬ್ಬಳು ಮಕ್ಕಳ ಸಮೇತ ತವರು ಮನೆ ಸೇರಿದ್ದಾರೆ. ಹೆಂಡತಿ, ಮಕ್ಕಳು ಮನೆ ಬಿಟ್ಟು ಹೋಗಿದ್ದಾರೆ ಎಂದು ಗೋಳಾಡುತ್ತಿರುವ ಪತಿ ಅರೆಬೆತ್ತಲಾಗಿ ಪ್ರತಿಭಟನೆ ಮಾಡಿದ್ದಾರೆ.

VISTARANEWS.COM


on

By

Wife And children leave home to be fear by pigs
ಹಂದಿಗಳ ಕಾಟಕ್ಕೆ ಬೇಸತ್ತು ಅರೆ ಬೆತ್ತಲಾಗಿ ಪ್ರತಿಭಟಿಸುತ್ತಿರುವ ವಿರೇಶ್‌
Koo

ಹಾವೇರಿ: ಆ ದಂಪತಿ ಮಧ್ಯೆ ಸಣ್ಣ ವಿಷಯಕ್ಕೂ ಜಗಳವಾಗಿರಲಿಲ್ಲ. ಖುಷಿ ಖುಷಿಯಾಗಿದ್ದ ಪತಿ-ಪತ್ನಿ ಇದೀಗ ದೂರವಾಗಿದ್ದಾರೆ. ಅವರಿಬ್ಬರ ಅನ್ಯೋನ್ಯ ಸಂಸಾರಕ್ಕೆ ಅಡ್ಡಗಾಲು ಹಾಕಿ, ದೂರ ಮಾಡಿದ್ದು ಆ ಏರಿಯಾದ (Boar Attack) ಹಂದಿಗಳು.. ಇದು ಅಚ್ಚರಿ ಆದರೂ ನಿಜ.

ಹಾವೇರಿಯ ಹಿರೆಕೇರೂರು ತಾಲೂಕಿನ ರಟ್ಟಿಹಳ್ಳಿಯಲ್ಲಿ ಹಂದಿಗಳ ಕಾಟಕ್ಕೆ ಹೆಂಡತಿ- ಮಕ್ಕಳು ಮನೆ ಬಿಟ್ಟು ಹೋಗಿರುವ ಘಟನೆ ನಡೆದಿದೆ. ಗ್ರಾಮದಲ್ಲಿ ಹಂದಿಗಳ ಕಾಟ ವಿಪರೀತವಾಗಿದೆ. ಮಕ್ಕಳು ಹೊರ ಹೋದರೂ ಅಂದರೆ ಪೋಷಕರು ಮನೆಯಲ್ಲಿ ಭಯದಲ್ಲೇ ಕಾಲಕಳೆಯುವಂತಾಗಿದೆ. ಈ ಹಂದಿಗಳ ಕಾಟಕ್ಕೆ ಬೇಸತ್ತು ಮಹಿಳೆಯೊಬ್ಬರು ಮಕ್ಕಳ ಸಮೇತ ತವರು ಮನೆ ಸೇರಿದ್ದಾರೆ.

ಹೀಗಾಗಿ ಪಟ್ಟಣ ಪಂಚಾಯ್ತಿ ಅಧಿಕಾರಿಗಳ ವಿರುದ್ಧ ವಿರೇಶ್‌ ಎಂಬುವವರು ಅರೆ ಬೆತ್ತಲೆ ಪ್ರತಿಭಟನೆ ಮಾಡಿದ್ದಾರೆ. ವಿರೇಶ್‌ ಅವರು ಮನೆಯ ಅಕ್ಕಪಕ್ಕ ಹಂದಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರು. ಆದರೆ ಇವರ ಮನವಿಗೆ ಅಧಿಕಾರಿಗಳು ಸ್ಪಂದಿಸಿಲ್ಲ.

ಇದನ್ನೂ ಓದಿ: Namma Metro: ನಮ್ಮ ಮೆಟ್ರೋ ಬೋಗಿಗೆ ಎಂಟ್ರಿ ಕೊಟ್ಟ ಕರಿಮಣಿ ಮಾಲೀಕ!

ಮನೆ ಹತ್ತಿರ ಹಂದಿಗಳು ಹೆಚ್ಚಾಗಿದ್ದು, ಇಬ್ಬರು ಮಕ್ಕಳು ಆಚೆ ಬರಲು ಹೆದರುತ್ತಿದ್ದಾರೆ ಎಂದು ವಿರೇಶ್‌ ಪತ್ನಿ ಮಕ್ಕಳನ್ನು ಕರೆದುಕೊಂಡು ತವರು ಮನೆ ಸೇರಿಕೊಂಡಿದ್ದಾರೆ. ಇತ್ತ ಪತ್ನಿಗೆ ಮರಳಿ ಬರಲು ವಿರೇಶ್‌ ಅವರು ಕರೆದರೆ, ಮೊದಲು ಹಂದಿಗಳನ್ನು ಹಿಡಿಸಿ ನಂತರ ಬರುತ್ತೆ ಎನ್ನುತ್ತಿದ್ದರಂತೆ.

ಹೀಗಾಗಿ ಹಂದಿಗಳು ನನ್ನಿಂದ ಹೆಂಡತಿ ಮಕ್ಕಳನ್ನು ದೂರ ಮಾಡಿದೆ. ಜತೆಗೆ ಶಾಲೆಗೆ ಹೋಗದೇ ತಿಂಗಳು ಕಳೆದಿದೆ. ಕೂಡಲೇ ಹಂದಿಗಳನ್ನು ಹಿಡಿದು ಸ್ಥಳಾಂತರ ಮಾಡಿ ಎಂದು ವಿರೇಶ್‌ ಅವರು ಪಟ್ಟಣ ಪಂಚಾಯ್ತಿ ಮುಂದೆ ಅರೆ ಬೆತ್ತಲಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಮುಂಜಾನೆಯಿಂದ ನೀರನ್ನು ಕುಡಿಯದೆ ಅರೆ ಬೆತ್ತಲೆಯಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹಂದಿ ಹಿಡಿಸದ ಅಧಿಕಾರಿಗಳಿಗೆ ಧಿಕ್ಕಾರವನ್ನು ಎಂದು ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಒಂದು ವೇಳೆ ಹಂದಿಯನ್ನು ಹಿಡಿಯದೇ ಇದ್ದರೆ ವಿಷ ಕುಡಿದು ಇಲ್ಲೇ ಸಾಯಿಸುತ್ತೇನೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೀಡೆ

Rohit Sharma: ಕೆಜಿಎಫ್ ಶೈಲಿಯಂತೆ ಹೆಲಿಕಾಪ್ಟರ್​ನಲ್ಲಿ ಧರ್ಮಶಾಲಾಕ್ಕೆ ಬಂದಿಳಿದ ರೋಹಿತ್​; ವಿಡಿಯೊ ವೈರಲ್​

ರೋಹಿತ್​ ಶರ್ಮ(Rohit Sharma) ಅವರು ಇಂದು(ಮಂಗಳವಾರ) ತಂಡವನ್ನು ಸೇರಿಕೊಂಡಿದ್ದಾರೆ. ಕೆಜಿಎಫ್ ಶೈಲಿಯಲ್ಲಿ ಯಶ್​ ಬಂದಂತೆ ರೋಹಿತ್​ ಅವರು ಖಾಸಗಿ ಹೆಲಿಕಾಪ್ಟರ್‌ ಮೂಲಕ ಧರ್ಮಶಾಲಾಕ್ಕೆ ಬಂದಿಳಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

VISTARANEWS.COM


on

Rohit Sharma
Koo

ಧರ್ಮಶಾಲಾ: ಭಾರತ ಮತ್ತು ಇಂಗ್ಲೆಂಡ್​ ನಡುವಣ ಅಂತಿಮ ಟೆಸ್ಟ್(IND vs ENG 5th Test)​ ಪಂದ್ಯ ಮಾರ್ಚ್​ 7ರಿಂದ ಆರಂಭಗೊಳ್ಳಲಿದೆ. 2 ದಿನಗಳ ಮೊದಲೇ ಉಭಯ ತಂಡಗಳ ಆಟಗಾರರು ಕೂಡ ಧರ್ಮಶಾಲಾ ತಲುಪಿದ್ದಾರೆ. ರೋಹಿತ್​ ಶರ್ಮ(Rohit Sharma) ಅವರು ಇಂದು(ಮಂಗಳವಾರ) ತಂಡವನ್ನು ಸೇರಿಕೊಂಡಿದ್ದಾರೆ. ಕೆಜಿಎಫ್ ಶೈಲಿಯಲ್ಲಿ ಯಶ್​ ಬಂದಂತೆ ರೋಹಿತ್​ ಅವರು ಖಾಸಗಿ ಹೆಲಿಕಾಪ್ಟರ್‌ ಮೂಲಕ ಧರ್ಮಶಾಲಾಕ್ಕೆ ಬಂದಿಳಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ರೋಹಿತ್​ ಶರ್ಮ ಅವರು ಗುಜರಾತ್‌ನ ಜಾಮ್‌ನಗರದಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ (Mukesh Ambani) ಪುತ್ರ ಅನಂತ್‌ ಅಂಬಾನಿ (Anant Ambani) ಹಾಗೂ ಉದ್ಯಮಿ ವಿರೇನ್‌ ಮರ್ಚಂಟ್‌ ಪುತ್ರಿ ರಾಧಿಕಾ ಮರ್ಚಂಟ್‌ (Radhika Merchant) ಅವರ ವಿವಾಹಪೂರ್ವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಾರಣ ತಡವಾಗಿ ತಂಡ ಸೇರಿದ್ದಾರೆ. ಅವರು ಹೆಲಿಕಾಪ್ಟರ್‌ ಮೂಲಕ ಬಂದಿರುವುದನ್ನು ಕಂಡು ಅವರ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಈ ಖಾಸಗಿ ಹೆಲಿಕಾಪ್ಟರ್‌ ರೋಹಿತ್​ ಶರ್ಮ ಅವರದ್ದೋ ಎನ್ನುವುದು ಮಾತ್ರ ತಿಳಿದುಬಂದಿಲ್ಲ.

ಪಂದ್ಯ ನಡೆಯುವುದು ಅನುಮಾನ


ಪಂದ್ಯ ನಡೆಯುವ ಹಿಮಾಚಲ ಪ್ರದೇಶದ ಧರ್ಮಶಾಲಾ(Dharamshala)ದಲ್ಲಿ ಭಾರಿ ಮಂಜಿನ ಮತ್ತು ಮಳೆಯ ಸಮಸ್ಯೆ ಎದುರಾಗಿದೆ. ಪಂದ್ಯದ ಸಮಯದಲ್ಲಿ ತಾಪಮಾನವು 1 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ. ಹೀಗಾಗಿ ಪಂದ್ಯ ನಡೆಯುವುದು ಬಹುತೇಕ ಅನುಮಾನ ಎನ್ನಲಾಗಿದೆ.

ಇದನ್ನೂ ಓದಿ WPL 2024: ಗೆಲುವಿನೊಂದಿಗೆ ತವರಿನ ಅಭಿಯಾನ ಮುಗಿಸಿದ ಆರ್​ಸಿಬಿ; ಯುಪಿ ವಿರುದ್ಧ 23 ರನ್​ ಜಯ

ಇಲ್ಲಿ ನಡೆಯುತ್ತಿರುವ 2 ಟೆಸ್ಟ್‌ ಪಂದ್ಯ ಇದಾಗಿದೆ. ಇಲ್ಲಿ ಮೊದಲ ಟೆಸ್ಟ್​ ನಡೆದದ್ದು 2017ರಲ್ಲಿ. ಭಾರತ-ಆಸ್ಟೇಲಿಯಾ ನಡುವೆ. ಹಿಮಾಲಯ ಶ್ರೇಣಿಯಲ್ಲಿ ತಲೆಯೆತ್ತಿ ನಿಂತಿರುವ ಈ ಸ್ಟೇಡಿಯಂ ಪ್ರಕೃತಿಗೆ ತೆರೆದುಕೊಂಡಿರುವುದರಿಂದ ಇಲ್ಲಿ ಸದಾ ಗಾಳಿ ಬೀಸುತ್ತಲೇ ಇರುತ್ತದೆ. ಈ ಕಾರಣಕ್ಕಾಗಿಯೇ ಇದು ಪೇಸ್‌ ಬೌಲಿಂಗ್‌ ಸ್ವರ್ಗವೆನಿಸಿದೆ.

ಹಿಮಾಚಲ ಪ್ರದೇಶ ಕ್ರಿಕೆಟ್‌ ಅಸೋಸಿಯೇಶನ್‌ ಸ್ಟೇಡಿಯಂ (ಎಚ್‌ಪಿಸಿಎ) ಪ್ರಕೃತಿಯ ಅತ್ಯಂತ ರಮಣೀಯ ಸ್ಟೇಡಿಯಂ ಆಗಿದ್ದು, ಹಿಮಾಲಯ ಶ್ರೇಣಿಯಲ್ಲಿ ತಲೆಯೆತ್ತಿ ನಿಂತಿದೆ. ಸಮುದ್ರ ಮಟ್ಟದಿಂದ 1,317 ಮೀ. ಎತ್ತರದಲ್ಲಿದೆ. ಅಡಿಲೇಡ್‌ ಓವಲ್‌, ನ್ಯೂಲ್ಯಾಂಡ್ಸ್‌ ಸ್ಟೇಡಿಯಂಗಳಂತೆ ಇದು ಕೂಡ ಚಿತ್ರಸದೃಶವಾಗಿದೆ. 23 ಸಾವಿರದಷ್ಟು ವೀಕ್ಷಕರ ಸಾಮರ್ಥ್ಯ ಹೊಂದಿದೆ.

ಈಗಾಗಲೇ ಸರಣಿಯನ್ನು 3-1 ಅಂತರದಿಂದ ಗೆದ್ದಿರುವ ಭಾರತ ತಂಡಕ್ಕೆ ಐಪಿಎಲ್​ ಟೂರ್ನಿಗೂ ಮುನ್ನ ನಡೆಯುವ ಅಭ್ಯಾಸ ಪಂದ್ಯ ಎಂದರೂ ತಪ್ಪಾಗಲಾರದು. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ನಿಟ್ಟಿನಲ್ಲಿ ನೋಡುವುದಾದರೆ ಈ ಪಂದ್ಯ ಇತ್ತಂಡಗಳಿಗೂ ಮಹತ್ವದಾಗುತ್ತದೆ. ಏಕೆಂದರೆ ಫೈನಲ್​ ಪ್ರವೇಶ ಪಡೆಯಬೇಕಾದರೆ ಅಂಕಪಟ್ಟಿಯಲ್ಲಿ ಅಂತಿಮವಾಗಿ ಮೊದಲ ಎರಡು ಸ್ಥಾನ ಪಡೆಯಬೇಕಾಗುತ್ತದೆ.​

Continue Reading

ಬೆಂಗಳೂರು

Namma Metro: ನಮ್ಮ ಮೆಟ್ರೋ ಬೋಗಿಗೆ ಎಂಟ್ರಿ ಕೊಟ್ಟ ಕರಿಮಣಿ ಮಾಲೀಕ!

Karimani Malika Ninalla: ತುಂಬಿ ತುಳುಕುತ್ತಿದ್ದ ಮೆಟ್ರೋ ರೈಲಿನಲ್ಲಿ ಯುವಕರ ಗುಂಪೊಂದು ಓ ನಲ್ಲ ನೀನಲ್ಲ ಕರಿಮಣಿ ಮಾಲೀಕ ನೀನಲ್ಲ ಎಂದು ಹಾಡಿದ್ದಾರೆ. ಇದು ಸಹ ಪ್ರಯಾಣಿಕರ ಆಕ್ರೋಶಕ್ಕೆ (Namma Metro) ಕಾರಣವಾಗಿದೆ.

VISTARANEWS.COM


on

By

Karimani Malika Ninalla Song viral in Namma metro
Koo

ಬೆಂಗಳೂರು: ರಿಯಲ್‌ ಸ್ಟಾರ್‌ ಉಪೇಂದ್ರ (Upendra Movie) ನಟನೆಯ “ಉಪೇಂದ್ರʼ ಸಿನಿಮಾದ ʻಕರಿಮಣಿ ಮಾಲೀಕ ನೀನಲ್ಲʼ (Karimani Malika Ninalla) ಸಾಂಗ್‌ನ ಕ್ರೇಜ್‌ ವಾರಗಳೇ ಕಳೆದರೂ ಹವಾ ಇನ್ನೂ ಕಡಿಮೆ ಆಗಿಲ್ಲ. ಉಪೇಂದ್ರ ಸಿನಿಮಾದ ಓ ನಲ್ಲ.. ಹಾಡು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿದೆ. ಸದ್ಯ ನಮ್ಮ ಮೆಟ್ರೋ ರೈಲಿನಲ್ಲೂ ಕರಿಮಣಿ ಮಾಲೀಕ ಎಂಟ್ರಿ ಆಗಿದ್ದಾನೆ.

ನಮ್ಮ ಮೆಟ್ರೋ ರೈಲಿನಲ್ಲಿ ನಿನ್ನೆ ಸೋಮವಾರ ಪೀಕ್‌ ಟೈಂನಲ್ಲಿ ಪ್ರಯಾಣಿಕರಿಂದ ತುಂಬಿ ಹೋಗಿತ್ತು. ಈ ವೇಳೆ ಬೋಗಿಯಲ್ಲಿದ್ದ ಯುವಕರ ಗುಂಪೊಂದು ಓ ನಲ್ಲ ನೀನಲ್ಲ ಕರಿಮಣಿ ಮಾಲೀಕ ನೀನಲ್ಲ ಎಂದು ಜೋರಾಗಿ ಹಾಡನ್ನು ಹಾಡಿದ್ದಾರೆ. ಯುವಕರ ನಡೆಯಿಂದ ಸಹ ಪ್ರಯಾಣಿಕರಿಗೆ ಕೊಂಚ ಕಿರಿಕಿರಿಯಾಗಿತ್ತು.

ಕರಿಮಣಿ ಮಾಲೀಕ ಹಾಡಿಗೆ ರೀಲ್ಸ್‌ ಮಾಡಿ ಜೋರಾಗಿ ಕಿರುಚಾಡಿದ್ದಾರೆ. ಯುವಕರು ಏಕಾಏಕಿ ಕಿರುಚಾಡಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇತರೆ ಪ್ರಯಾಣಿಕರು ಏನು ಆಯಿತು ಎಂದು ಗಾಬರಿಗೊಂಡಿದ್ದರು. ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವಾಗ ಫೋನ್‌ನಲ್ಲಿ ಜೋರಾಗಿ ಮಾತಾಡುವುದು, ಮೊಬೈಲ್‌ನಲ್ಲಿ ಸಾಂಗ್‌ ಹಾಕುವುದು ಮಾಡುವಂತಿಲ್ಲ ಎಂಬ ನಿಯಮವಿದೆ.

ನಮ್ಮ ಮೆಟ್ರೋ ರೈಲಿನಲ್ಲಿ ರೀಲ್ಸ್‌ ಮಾಡುವುದು, ಮೊಬೈಲ್‌ನಲ್ಲಿ ಜೋರಾಗಿ ಸಾಂಗ್‌ ಹಾಕುವುದು ಸೇರಿದಂತೆ ತಿಂಡಿ ತಿನ್ನುವುದನ್ನೂ ನಿಷೇಧಿಸಿದೆ. ಹಿಂದೊಮ್ಮೆ ಯುವಕನೊಬ್ಬ ಬೋಗಿಯೊಳಗೆ ರೀಲ್ಸ್‌ ಮಾಡಿದ್ದಕ್ಕೆ ದಂಡವನ್ನು ವಿಧಿಸಿತ್ತು. ಇದೀಗ ನಿಯಮವನ್ನೆಲ್ಲ ಗಾಳಿಗೆ ತೂರಿ ಜೋರಾಗಿ ಕಿರುಚಾಡುತ್ತಾ ಹಾಡನ್ನು ಹಾಡಿದ್ದಾರೆ. ಯುವಕರ ರೀಲ್ಸ್‌ ಹುಚ್ಚಾಟಕ್ಕೆ ಸಹ ಪ್ರಯಾಣಿಕರಿಂದ ಆಕ್ರೋಶ ಕೇಳಿ ಬಂದಿದೆ.

ಇದನ್ನೂ ಓದಿ: Mysuru News : ಪತ್ನಿ ಜತೆಗೆ ವಿಡಿಯೊ ಕಾಲ್‌; ಮಾತಲ್ಲಿ ಮೈಮರೆತಾಗ ಬಡಿಯಿತು ರೈಲು

ಮೆಟ್ರೋ ಸಂಚಾರ ಶೀಘ್ರವೇ ನಾಗಸಂದ್ರದಿಂದ ಮಾದಾವರಕ್ಕೆ ವಿಸ್ತರಣೆ

ಸದ್ಯ ಹಸಿರು ಮಾರ್ಗದಲ್ಲಿ (Namma Metro Green Line) ರೇಷ್ಮೆ ಸಂಸ್ಥೆಯಿಂದ ನಾಗಸಂದ್ರದಿಂದ ಓಡುತ್ತಿರುವ ನಮ್ಮ ಮೆಟ್ರೋ (Namma Metro) ರೈಲು ಅತಿ ಶೀಘ್ರದಲ್ಲೇ ಮಾದಾವರ ವರೆಗೆ ವಿಸ್ತರಣೆಯಾಗಲಿದೆ. ಕಳೆದ ಆರು ವರ್ಷಗಳಿಂದ ನಡೆಯುತ್ತಿರುವ ಮೆಟ್ರೋ ಕಾಮಗಾರಿ ಇದೀಗ ಅಂತಿಮ ಹಂತಕ್ಕೆ ತಲುಪಿದ್ದು ಕೆಲವೇ ತಿಂಗಳ ಒಳಗೆ ಓಡಾಟ ಶುರುವಾಗಲಿದೆ (Metro Operation) ಎಂಬ ನಿರೀಕ್ಷೆ ಇದೆ.

ನಾಗಸಂದ್ರದಿಂದ ಮಾದಾವರ ನಿಲ್ದಾಣಗಳ ನಡುವೆ 3.31 ಕಿಲೋ ಮೀಟರ್‌ ಅಂತರವಿದ್ದು, ಮೂರು ನಿಲ್ದಾಣಗಳಿವೆ. ಈ ಮಾರ್ಗದಲ್ಲಿ ಈಗ ಹಳಿ ಜೋಡಣೆ ಮಾಡುವ ಕಾರ್ಯ ನಡೆಯುತ್ತಿದೆ. ತುಮಕೂರು ರಸ್ತೆಯಲ್ಲಿ ಸಾಗುತ್ತಿರುವ ಕಾಮಗಾರಿಯನ್ನು Texmaco Rail and Engineering ಸಂಸ್ಥೆ ನಡೆಸುತ್ತಿದೆ.

ನಮ್ಮ ಮೆಟ್ರೋ 2ನೇ ಹಂತದ 73.92 ಕಿ.ಮೀ. ಮಾರ್ಗವನ್ನು ವಿಸ್ತರಣೆ ಮಾಡುವ ಪ್ರಮುಖ ಕಾಮಗಾರಿ ಇದಾಗಿದೆ ಎಂದು ಹೇಳಲಾಗಿದೆ.. ಹಳಿ ಜೋಡಣೆ ಕಾರ್ಯ ಪೂರ್ಣಗೊಂಡಿದ್ದು, ಕೆಲವು ಚಿಕ್ಕಪುಟ್ಟ ಕಾಮಗಾರಿಗಳು ಪೂರ್ಣಗೊಂಡ ಬಳಿಕ ನಮ್ಮ ಮೆಟ್ರೋ ಪ್ರಾಯೋಗಿಕ ರೈಲು ಸಂಚಾರ ಆರಂಭವಾಗಲಿದೆ. ಬಳಿಕ ರೈಲು ಓಡಾಟ ಶುರುವಾಗಲಿದೆ.

Namma Metro Nagasandra Madavara

ಇದನ್ನೂ ಓದಿ : Namma Metro : ಬಟ್ಟೆ ಗಲೀಜು ಎಂದು ರೈತನಿಗೆ ಅಪಮಾನ; ಸರ್ಕಾರ, ಬಿಎಂಆರ್‌ಸಿಎಲ್‌ಗೆ ಚಾಟಿ ಬೀಸಿದ ಎನ್‌ಎಚ್‌ಆರ್‌ಸಿ

ಕೆಲವೇ ತಿಂಗಳಲ್ಲಿ ಸಂಚಾರ ಆರಂಭ ಸಾಧ್ಯತೆ

ನಾಗಸಂದ್ರ-ಮಾದವರ ನಡುವಿನ ಮಾರ್ಗದ ಕಾಮಗಾರಿಯನ್ನು 2024ರ ಡಿಸೆಂಬರ್‌ ಒಳಗೆ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈಗ ಹಳಿ ಜೋಡಣೆ ಕಾರ್ಯ ಪೂರ್ಣಗೊಂಡಿದೆ. ಇನ್ನು ಕೆಲವೇ ಸಮಯದಲ್ಲಿ ರೈಲುಗಳ ಪ್ರಾಯೋಗಿಕ ಸಂಚಾರ ನಡೆಯಲಿದೆ.

ಮುಂದೆ ಸಿಗ್ನಲ್ ಅಳವಡಿಕೆ, ಸಿಗ್ನಲ್ ಪರೀಕ್ಷೆ, ಹಳಿಗಳ ಸಾಮರ್ಥ್ಯ ಪರೀಕ್ಷೆ, ಓಪನ್ ವೆಬ್ ಗರ್ಡರ್ ಪರೀಕ್ಷೆ ಸಹಿತ ವಿವಿಧ ತಾಂತ್ರಿಕ ಪರೀಕ್ಷೆಗಳು ಪೂರ್ಣಗೊಂಡ ಬಳಿಕ ರೈಲ್ವೆ ಸುರಕ್ಷತಾ ಆಯುಕ್ತರು ಹಸಿರು ನಿಶಾನೆ ತೋರಲಿದ್ದಾರೆ.

Namma Metro Nagasandra Madavara

ರೈಲು ಮಾರ್ಗ ವಿಸ್ತರಣೆಯಿಂದ ಯಾರಿಗೆಲ್ಲ ಅನುಕೂಲ?

ನಾಗಸಂದ್ರ-ಮಾದಾವರ ನಡುವಿನ ಅಂತರ 3.1 ಕಿ.ಮೀ. ಈ ಮಾರ್ಗದಲ್ಲಿ ಮಂಜುನಾಥನಗರ, ಚಿಕ್ಕಬಿದರಕಲ್ಲು (ಜಿಂದಾಲ್), ಮಾದವರ ನಿಲ್ದಾಣಗಳಿವೆ. ಬೆಂಗಳೂರು-ತುಮಕೂರು ರಸ್ತೆಯಲ್ಲಿ ಭಾರಿ ವಾಹನ ದಟ್ಟಣೆ ಇದೆ.

ನೆಲಮಂಗಲ ಕಡೆಯಿಂದ ಪೀಣ್ಯ ಕೈಗಾರಿಕಾ ವಲಯ ಸೇರಿ ನಗರಕ್ಕೆ ಬರುವ ಜನರು, ಉದ್ಯೋಗಿಗಳು ಈಗ ನಾಗಸಂದ್ರ ತನಕ ಬಂದು ಅಲ್ಲಿಂದ ಮೆಟ್ರೋ ಮೂಲಕ ನಗರಕ್ಕೆ ಆಗಮಿಸುತ್ತಾರೆ. ಹಸಿರು ಮಾರ್ಗದಲ್ಲಿ ಈಗಾಗಲೇ ನಾಗಸಂದ್ರ ತನಕ ನಮ್ಮ ಮೆಟ್ರೋ ರೈಲು ಸಂಚಾರ ನಡೆಸುತ್ತಿದೆ. ಈಗ ರೈಲು ಮಾರ್ಗ ವಿಸ್ತರಣೆಯಿಂದ ಈ ಭಾಗದ ಜನರಿಗೆ ಭಾರಿ ಅನುಕೂಲವಾಗಲಿದೆ. ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾದರೆ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ (ಬಿಐಇಸಿ)ಗೆ ಸಂಚಾರ ನಡೆಸುವ ಜನರಿಗೆ ಅನುಕೂಲವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Shubman Gill
ಕ್ರೀಡೆ10 mins ago

Shubman Gill: 5ನೇ ಟೆಸ್ಟ್​ಗೂ ಮುನ್ನ ಬೌದ್ಧ ಸನ್ಯಾಸಿಗಳ ಆಶೀರ್ವಾದ ಪಡೆದ ಗಿಲ್

Mohammed Shafi Nashipudi (1)
ಕರ್ನಾಟಕ13 mins ago

Sedition Case: ಬಂಧಿತ ಮೊಹಮ್ಮದ್‌ ಶಫಿ ನಾಶಿಪುಡಿ ಕೋಟ್ಯಂತರ ರೂ. ಆಸ್ತಿ ಒಡೆಯ; ಈತನ ಹಿನ್ನೆಲೆ ಏನು?

692 farmers commit suicide is Siddaramaiah achievement says HD DeveGowda
ಕರ್ನಾಟಕ20 mins ago

HD Devegowda: 692 ರೈತರು ಆತ್ಮಹತ್ಯೆಯೇ ಸಿದ್ದರಾಮಯ್ಯ ಸಾಧನೆಯ ಕಿರುನೋಟ: ಎಚ್‌.ಡಿ. ದೇವೇಗೌಡ ವ್ಯಂಗ್ಯ

HD DeveGowda reveals the reality of Karnataka drought
ರಾಜಕೀಯ28 mins ago

Water Crisis: ಬೆಂಗಳೂರಲ್ಲಿ ಹಾಲಿನ ಟ್ಯಾಂಕರ್ ಮೂಲಕ ನೀರು ಪೂರೈಕೆ; ಬರದ ವಾಸ್ತವ ಬಿಚ್ಚಿಟ್ಟ ಎಚ್.ಡಿ. ದೇವೇಗೌಡ!

ED Raid Bangalore
ಬೆಂಗಳೂರು29 mins ago

ED Raid : ಬೆಂಗಳೂರಿನ 8 ಕಡೆ ಇ.ಡಿ ದಾಳಿ, 11.5 ಕೋಟಿ ನಗದು, 120 ಕೋಟಿಯ ದಾಖಲೆ ವಶ

PM Narendra Modi
ದೇಶ35 mins ago

ದೇಶದ ಮೊದಲ ಅಂಡರ್‌ ವಾಟರ್‌ ಮೆಟ್ರೋ ಸೇವೆಗೆ ಮೋದಿ ನಾಳೆ ಚಾಲನೆ; ಏನೆಲ್ಲ ವೈಶಿಷ್ಟ್ಯ?

kiara adwani
ಬಾಲಿವುಡ್51 mins ago

Kiara Advani: ‘ಡಾನ್‌ 3’ ಚಿತ್ರಕ್ಕಾಗಿ ದುಬಾರಿ ಸಂಭಾವನೆ ಪಡೆದ ಕಿಯಾರಾ ಅಡ್ವಾಣಿ

Residential School
ಕರ್ನಾಟಕ1 hour ago

Chikkamagaluru News: ವಸತಿ ಶಾಲೆ ಶಿಕ್ಷಕಿಯಿಂದ ವಿದ್ಯಾರ್ಥಿನಿಯರಿಗೆ ಚಿತ್ರಹಿಂಸೆ; ಕ್ರಮಕ್ಕೆ ಪೋಷಕರ ಆಗ್ರಹ

HD Deve Gowda lashes out at CM Siddaramaiah and Nikhil Kumaraswamy with him
ರಾಜಕೀಯ1 hour ago

HD Devegowda: ಮೋದಿ ಬಗ್ಗೆ ಮಾತನಾಡಲು ನೀವು ಯಾರು? ಸಿಎಂ ಸಿದ್ದರಾಮಯ್ಯಗೆ ಎಚ್‌.ಡಿ. ದೇವೇಗೌಡ ಪ್ರಶ್ನೆ

Expensive Celebrity Saree Draper
ಫ್ಯಾಷನ್1 hour ago

Expensive Celebrity Saree Draper: ಸ್ಟಾರ್‌ಗಳಿಗೆ ಸೀರೆ ಉಡಿಸಿದರೆ ಇವರ ಚಾರ್ಜ್ 2 ಲಕ್ಷ ರೂ.! ಯಾರಿವರು ಡಾಲಿ ಜೈನ್‌?

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

BJP JDS alliance to finalise seats for Lok Sabha polls this week HD DeveGowda
ರಾಜಕೀಯ1 day ago

HD Devegowda: ಈ ವಾರದಲ್ಲಿ ಲೋಕಸಭೆಗೆ ಬಿಜೆಪಿ-ಜೆಡಿಎಸ್‌ ಮೈತ್ರಿ ಸೀಟು ಅಂತಿಮ: ಎಚ್‌.ಡಿ. ದೇವೇಗೌಡ

Elephant attacks in Sakaleshpur workers escaped
ಹಾಸನ1 day ago

Elephant Attack : ಆನೆ ಅಟ್ಯಾಕ್‌ಗೆ ಬಾಯಿಗೆ ಬಂತು ಜೀವ; ಜಸ್ಟ್‌ ಎಸ್ಕೇಪ್‌ ಆಗಿದ್ದು ಹೀಗೆ..

dina bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ಇಂದು ಗಾಬರಿಯಲ್ಲೇ ದಿನ ಕಳೆಯುವಿರಿ

read your daily horoscope predictions for march 3rd 2024
ಭವಿಷ್ಯ3 days ago

Dina Bhavishya : ಈ ರಾಶಿಯವರು ಆತುರದಲ್ಲಿ ಇಂದು ಈ ನಿರ್ಧಾರವನ್ನು ತೆಗೆದುಕೊಳ್ಳಬೇಡಿ!

Rameswaram cafe bomb blast case Accused caught on CCTV
ಬೆಂಗಳೂರು3 days ago

Blast In Bengaluru: ಸನ್ನೆ ಮಾಡಿ ಪೊಲೀಸರಿಗೆ ಶಂಕಿತನ ಚಾಲೆಂಜ್! ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಏನು

Rameswaram Cafe Blast Suspected travels in BMTC Volvo bus
ಬೆಂಗಳೂರು3 days ago

Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ವೋಲ್ವೋ ಬಸ್‌ನಲ್ಲಿ ಬಾಂಬರ್ ಸಂಚಾರ, ಸಿಸಿಟಿವಿಯಲ್ಲಿ ಸೆರೆ

Blast in Bengaluru Time bomb planted in rameshwaram cafe Important evidence found
ಬೆಂಗಳೂರು4 days ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

rameshwaram cafe bengaluru incident
ಬೆಂಗಳೂರು4 days ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ4 days ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ5 days ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

ಟ್ರೆಂಡಿಂಗ್‌