Viral News: ಕೊಲೆಯಾಗಿದ್ದಾರೆ ಎನ್ನಲಾದ ಸಹೋದರಿಯರು ವರ್ಷದ ಬಳಿಕ ಪತ್ತೆ; ಯಾವ ಸಿನಿಮಾಕ್ಕೂ ಕಡಿಮೆ ಇಲ್ಲ ಈ ಘಟನೆ - Vistara News

ವೈರಲ್ ನ್ಯೂಸ್

Viral News: ಕೊಲೆಯಾಗಿದ್ದಾರೆ ಎನ್ನಲಾದ ಸಹೋದರಿಯರು ವರ್ಷದ ಬಳಿಕ ಪತ್ತೆ; ಯಾವ ಸಿನಿಮಾಕ್ಕೂ ಕಡಿಮೆ ಇಲ್ಲ ಈ ಘಟನೆ

Viral News: ಕೆಲವೊಮ್ಮೆ ನಿಜ ಜೀವನದಲ್ಲಿ ನಡೆಯುವ ಘಟನೆಗಳು ಯಾವ ಸಿನಿಮಾ ಕಥೆಗಳಿಗಿಂತ ಕಡಿಮೆ ಇರುವುದಿಲ್ಲ. ಜೀವನದಲ್ಲಿ ಘಟಿಸುವ ಕೆಲವು ಸನ್ನಿವೇಶಗಳು ನಾವು ಊಹಿಸದ ರೀತಿಯ ತಿರುವು ಪಡೆದುಕೊಳ್ಳುತ್ತವೆ. ಅದಕ್ಕೆ ಉತ್ತಮ ಉದಾಹರಣೆ ಇಲ್ಲಿದೆ. ಉತ್ತರ ಪ್ರದೇಶದ ಗೋರಖ್‌ಪುರ ಮೂಲದ, ದಿಲ್ಲಿಯಲ್ಲಿ ವಾಸವಾಗಿದ್ದ ಸೀತಾ-ಗೀತಾ ಎನ್ನುವ ಸಹೋದರಿಯರ ಜೀವನದ ಕಥೆ ಇದು. ಪಾಲಕರು ಮತ್ತು ಸಹೋದರನೊಂದಿಗೆ ವಾಸಿಸುತ್ತಿದ್ದ ಸೀತಾ (20) ಮತ್ತು ಗೀತಾ (21) ಇಬ್ಬರೂ 2023ರಲ್ಲಿ ನಾಪತ್ತೆಯಾಗಿದ್ದರು. ಈ ಬಗ್ಗೆ ಅವರ ಸಹೋದರ ಅಜಯ್ ಪ್ರಜಾಪತಿ ದೂರು ನೀಡಿದ್ದ. ತನ್ನ ಸಹೋದರಿಯನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದ. ಇದೀಗ ಸಹೋದರಿಯರು ಮನೆಗೆ ಮರಳಿದ್ದು ಪ್ರಕರಣ ಸುಖಾಂತ್ಯ ಕಂಡಿದೆ. ಈ ರೋಚಕ ಘಟನೆಯ ವಿವರ ಇಲ್ಲಿದೆ.

VISTARANEWS.COM


on

Viral News
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಕ್ನೋ: ಕೆಲವೊಮ್ಮೆ ನಿಜ ಜೀವನದಲ್ಲಿ ನಡೆಯುವ ಘಟನೆಗಳು ಯಾವ ಸಿನಿಮಾ ಕಥೆಗಳಿಗಿಂತ ಕಡಿಮೆ ಇರುವುದಿಲ್ಲ. ಜೀವನದಲ್ಲಿ ಘಟಿಸುವ ಕೆಲವು ಸನ್ನಿವೇಶಗಳು ನಾವು ಊಹಿಸದ ರೀತಿಯ ತಿರುವು ಪಡೆದುಕೊಳ್ಳುತ್ತವೆ. ಇಲ್ಲೂ ಆಗಿದ್ದು ಇದೇ. ಕೊಲೆಯಾಗಿದ್ದಾರೆ ಎಂದು ಮನೆಯವರು ಭಾವಿಸಿದ್ದ ಸಹೋದರಿಯರು ಒಂದು ವರ್ಷದ ಬಳಿಕ ಪತ್ತೆಯಾಗಿದ್ದಾರೆ. ಅದು ಕೂಡ ಅವರಿಗೆ ಮದುವೆಯಾಗಿ ಮಕ್ಕಳಿವೆ ಎನ್ನುವುದು ವಿಶೇಷ. ಸದ್ಯ ಈ ರೋಚಕ ಘಟನೆ ವೈರಲ್‌ ಆಗಿದೆ (Viral News).

ಉತ್ತರ ಪ್ರದೇಶದ ಗೋರಖ್‌ಪುರ ಮೂಲದ, ದಿಲ್ಲಿಯಲ್ಲಿ ವಾಸವಾಗಿದ್ದ ಸೀತಾ-ಗೀತಾ ಎನ್ನುವ ಸಹೋದರಿಯರ ಜೀವನದ ಕಥೆ ಇದು. ಪಾಲಕರು ಮತ್ತು ಸಹೋದರನೊಂದಿಗೆ ವಾಸಿಸುತ್ತಿದ್ದ ಸೀತಾ (20) ಮತ್ತು ಗೀತಾ (21) ಇಬ್ಬರೂ 2023ರಲ್ಲಿ ನಾಪತ್ತೆಯಾಗಿದ್ದರು. ಈ ಬಗ್ಗೆ ಅವರ ಸಹೋದರ ಅಜಯ್ ಪ್ರಜಾಪತಿ ದೂರು ನೀಡಿದ್ದ. ತನ್ನ ಸಹೋದರಿಯನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದ. ಇದೀಗ ಸಹೋದರಿಯರು ಮನೆಗೆ ಮರಳಿದ್ದು ಪ್ರಕರಣ ಸುಖಾಂತ್ಯ ಕಂಡಿದೆ.

ಘಟನೆಯ ವಿವರ

ಕಳೆದ ವರ್ಷ ಜನವರಿಯಲ್ಲಿ ಸೀತಾ-ಗೀತಾ ಇಬ್ಬರೂ ನಾಪತ್ತೆಯಾಗುವ ಮೂಲಕ ಕಥೆ ಆರಂಭವಾಗುತ್ತದೆ. ಸಹೋದರಿಯರಿಗಾಗಿ ಹುಡುಕಾಟ ನಡೆಸಿದ ಅಜಯ್ ಪ್ರಜಾಪತಿ ಅವರು ಎಲ್ಲೂ ಪತ್ತೆಯಾಗದಿದ್ದಾಗ ಆತಂಕಕ್ಕೆ ಒಳಗಾಗಿದ್ದ. ಹೀಗಾಗಿ ನಾಪತ್ತೆ ದೂರು ದಾಖಲಿಸಿದ್ದ. ಹೀಗಿದ್ದರೂ ತನ್ನ ಹುಡುಕಾಟವನ್ನು ನಿಲ್ಲಿಸಿರಲಿಲ್ಲ. ಈ ಮಧ್ಯೆ ಸಹೋದರಿಯರ ಪೈಕಿ ಒಬ್ಬಾಕೆಯೊಂದಿಗೆ ಗೆಳೆತನ ಬೆಳೆಸಿದ್ದ ಅದೇ ಗ್ರಾಮದ ಜಯಂತ್‌ ಮೌರ್ಯನನ್ನು ಅಜಯ್ ಪ್ರಜಾಪತಿ ಭೇಟಿಯಾಗಿದ್ದ. ತನ್ನ ಸಹೋದರಿಯರು ಎಲ್ಲಿದ್ದಾರೆಂದು ಪ್ರಶ್ನಿಸಿದಾಗ ರೊಚ್ಚಿಗೆದ್ದಿದ್ದ ಜಯಂತ್‌, ʼʼನಿನ್ನ ಸಹೋದರಿಯರಿಗಾದ ಗತಿ ನಿನಗೂ ಬರುತ್ತದೆʼʼ ಎಂದು ಬೆದರಿಕೆ ಹಾಕಿದ್ದ.

ಇದರಿಂದ ತನ್ನ ಸಹೋದರಿಯರ ಬಗ್ಗೆ ಆತಂಕಗೊಂಡ ಅಜಯ್ ಪ್ರಜಾಪತಿ ಪೊಲೀಸ್‌ ಠಾಣೆಗೆ ತೆರಳಿ ಜಯಂತ್‌ ಮೌರ್ಯ ವಿರುದ್ಧ ಕೊಲೆಯ ಕೇಸ್‌ ದಾಖಲಿಸಿದ್ದ. ಆದರೆ ಸಾಕ್ಷಿಯ ಕೊರತೆಯಿಂದ ಪೊಲೀಸರು ಜಯಂತ್‌ ಮತ್ತು ಆತನ ಮನೆಯವರ ವಿರುದ್ಧ ದೂರು ದಾಖಲಿಸಿರಲಿಲ್ಲ. ಹೀಗಾಗಿ ಅಜಯ್ ಕೋರ್ಟ್ ಮೆಟ್ಟಿಲೇರಿದ್ದ. ಇದಾಗಿ ಸುಮಾರು ಒಂದು ವರ್ಷದ ಬಳಿಕ 2024ರ ಜನವರಿ 8ರಂದು ಕೋರ್ಟ್ ಆದೇಶದ ತರುವಾಯ ಗೋರಖ್‌ಪುರದ ಬೆಲ್ಘಾಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ತನಿಖೆ ಆರಂಭಿಸಿ ನಾಲ್ಕು ತಿಂಗಳ ನಂತರ ಈ ಸಹೋದರಿಯರು ಜೀವಂತ ಇರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಈ ವೇಳೆ ಸಹೋದರಿಯರ ಕಣ್ಮರೆಯ ಹಿಂದಿನ ನಿಜ ಕಾರಣ ಬಯಲಾಗಿತ್ತು. ಸಹೋದರಿಯರಿಬ್ಬರು ತಮ್ಮ ಪ್ರೇಮಿಗಳನ್ನು ಮದುವೆಯಾಗಲು ಮನೆ ಬಿಟ್ಟು ಓಡಿ ಹೋಗಿದ್ದರು. ತಮ್ಮ ಸಹೋದರ ಕೊಲೆ ಪ್ರಕರಣ ದಾಖಲಿಸಿರುವುದನ್ನು ತಿಳಿದ ಇವರು ಅಮಾಯಕರು ಜೈಲು ಪಾಲಾಗುವುದನ್ನು ತಪ್ಪಿಸಲು ಪೊಲೀಸರನ್ನು ಸಂಪರ್ಕಿಸಿದ್ದರು.

ಇದನ್ನೂ ಓದಿ: ನೆಚ್ಚಿನ ಶ್ವಾನ ಮರಿ ನಾಪತ್ತೆಯಾದ ಕೊರಗಿನಿಂದ ಆತ್ಮಹತ್ಯೆಗೆ ಶರಣಾದ 12 ವರ್ಷದ ಬಾಲಕಿ

ಸೀತಾ ಹರಿಯಾಣದ ವಿಜೇಂದರ್ ಎಂಬಾತನನ್ನು ಮದುವೆಯಾಗಿದ್ದಾಳೆ. ತಮ್ಮಿಬ್ಬರಿಗೂ ಈಗ ಐದು ತಿಂಗಳ ಹೆಣ್ಣು ಮಗು ಇದ್ದು, ಸಂತೋಷದಿಂದ ಜೀವನ ನಡೆಸುತ್ತಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ. ಇನ್ನು ಗೀತಾ ಉತ್ತರಾಖಂಡದ ಅಲ್ಮೋರಾದ ನಿವಾಸಿ ಸುರೇಶ್ ರಾಮ್‌ನನ್ನು ಮದುವೆಯಾಗಿದ್ದು, ಈ ದಂಪತಿಗೆ ಆರು ತಿಂಗಳ ಹೆಣ್ಣು ಮಗು ಇದೆ. ಒಟ್ಟಿನಲ್ಲಿ ಕೊಲೆ ಎನ್ನಲಾಗಿದ್ದ ಪ್ರಕರಣ ಶುಭಂಗೊಂಡಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Sexual Assault: ಐಸ್‌ಕ್ರೀಂ ಕೊಳ್ಳಲು ಬಂದ ಬಾಲಕಿಯ ಗುಪ್ತಾಂಗ ಮುಟ್ಟಿ ದೌರ್ಜನ್ಯ; ಮೊಹಮ್ಮದ್ ಖಾನ್ ಬಂಧನ

ಭೋಪಾಲ್ ನಲ್ಲಿ ಐಸ್ ಕ್ರೀಮ್ ಮಾರಾಟಗಾರ ಬಾಲಕಿಯನ್ನು ಅನುಚಿತವಾಗಿ ಸ್ಪರ್ಶಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Sexual Assault) ಹಾಕಿದ ವ್ಯಕ್ತಿಯನ್ನು ಮತ್ತು ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಐಸ್ ಕ್ರೀಮ್ ಮಾರಾಟಗಾರನನ್ನು ಪೊಲೀಸರು ಬಂಧಿಸಿದ್ದಾರೆ. ಏನಿದು ಪ್ರಕರಣ? ಇಲ್ಲಿದೆ ವಿವರ.

VISTARANEWS.COM


on

By

Sexual Assault
Koo

ಭೋಪಾಲ್: ಐಸ್‌ಕ್ರೀಂ ಮಾರಾಟಗಾರನೊಬ್ಬ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ (Sexual Assault) ನೀಡಿದ ಘಟನೆ ಮಧ್ಯಪ್ರದೇಶದ (madhyapradesh) ಭೋಪಾಲ್‌ನಲ್ಲಿ (bhopal) ನಡೆದಿದ್ದು, ಇದರ ವಿಡಿಯೋ (video) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಎರಡು ವಾರಗಳ ಹಿಂದೆ ನಡೆದ ಘಟನೆ ಇದಾಗಿದೆ. ಐಸ್ ಕ್ರೀಮ್ ಮಾರಾಟಗಾರ ಬಾಲಕಿಯನ್ನು ಅನುಚಿತವಾಗಿ ಸ್ಪರ್ಶಿಸುತ್ತಿರುವುದು ಕೆಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಐಸ್ ಕ್ರೀಮ್ ಮಾರಾಟಗಾರ ಮೊಹಮ್ಮದ್ ಖಾಲಿದ್ ಖಾನ್ (52) ಎಂಬಾತನನ್ನು ಬಂಧಿಸಲಾಗಿದೆ.

ಪ್ಯಾರೆ ಎಂದು ಕರೆಯಲ್ಪಡುವ ಮೊಹಮ್ಮದ್ ಖಾಲಿದ್ ಖಾನ್ ಉತ್ತರ ಪ್ರದೇಶದ ಜಲೌನ್ ಜಿಲ್ಲೆಯ ನಿವಾಸಿ. ಜಹಾಂಗೀರಾಬಾದ್‌ನಲ್ಲಿ ರಾತ್ರಿ ವ್ಯಕ್ತಿಯೊಬ್ಬ ತನ್ನ ಬಾಲ್ಕನಿಯಲ್ಲಿ ಈ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ.

ಖಾಲಿದ್ 11 ವರ್ಷದ ಬಾಲಕಿಯ ಖಾಸಗಿ ಅಂಗಗಳನ್ನು ಸ್ಪರ್ಶಿಸುತ್ತಿರುವುದು ಕಂಡುಬಂದಿದ್ದು, ಬಾಲಕಿ ಐಸ್‌ಕ್ರೀಂ ಕಾರ್ಟ್‌ನಲ್ಲಿ ಐಸ್‌ಕ್ರೀಂ ಆಯ್ಕೆ ಮಾಡಿಕೊಳ್ಳುತ್ತಿದ್ದಳು. ಆರೋಪಿಯು ಬಾಲಕಿಯನ್ನು ಹಿಡಿದಿದ್ದು, ಆಕೆಯ ಹಿಡಿತದಿಂದ ತಪ್ಪಿಸಿಕೊಳ್ಳಲು ಬಾಲಕಿ ಪ್ರಯತ್ನಿಸುತ್ತಿರುವುದು ಕಂಡುಬಂದಿದೆ.

ಸ್ವಲ್ಪ ಸಮಯದ ಅನಂತರ ಹುಡುಗಿಗೆ ಐಸ್ ಕ್ರೀಂ ಅನ್ನು ಹಸ್ತಾಂತರಿಸುತ್ತಾನೆ. ಈ ವಿಡಿಯೋವನ್ನು ರಮೇಶ್ ಸಾಹು ಎಂಬಾತ ರೆಕಾರ್ಡ್ ಮಾಡಿದ್ದು, ಅದನ್ನು ವಾಟ್ಸಾಪ್ ನಲ್ಲಿ ಶೇರ್ ಮಾಡಿದ್ದಾನೆ. ಇದು ಸಾಕಷ್ಟು ವೈರಲ್ ಆಗಿದೆ.

ಸಂತ್ರಸ್ತೆಯ ತಾಯಿ ತನ್ನ ಮಗಳನ್ನು ಆಕೆಯ ಬಟ್ಟೆ ಮತ್ತು ವಿಡಿಯೋದಲ್ಲಿ ಸ್ವಲ್ಪ ಗೋಚರಿಸುವ ಮುಖದ ಭಾಗದಿಂದ ಗುರುತಿಸಿದ್ದಾರೆ. ಅನಂತರ ಮಹಿಳೆ ಪೊಲೀಸರನ್ನು ಸಂಪರ್ಕಿಸಿ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದಾರೆ.
ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಜಹಾಂಗೀರಾಬಾದ್ ಪೊಲೀಸ್ ಠಾಣೆಯಲ್ಲಿ ಘಟನೆ ವರದಿಯಾಗಿದೆ.

ಜೂನ್ 28ರಂದು ರಾತ್ರಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆಯ ತಾಯಿ ಎರಡು ದಿನಗಳ ಅನಂತರ ವಿಡಿಯೋವನ್ನು ನೋಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆದ ಬಳಿಕ ಆರೋಪಿ ತನ್ನ ಊರಿಗೆ ಪರಾರಿಯಾಗಿದ್ದ ಆರೋಪಿಯನ್ನು ಆತನ ಗ್ರಾಮವಾದ ಕಲ್ಪಿಯಿಂದ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: Viral Video: ಬೆಂಗಳೂರಿನ ಹೋಟೆಲ್‌ನಲ್ಲಿ ಫ್ಯಾನ್‌ ಬದಲು ಪುರಾತನ ಕಾಲದ ಬೀಸಣಿಕೆ! ವಿಡಿಯೊ ನೋಡಿ

ಅಪ್ರಾಪ್ತ ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸಿದ್ದಕ್ಕಾಗಿ ಪೋಲಿಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ವಿಡಿಯೋವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ ರಮೇಶ್ ಸಾಹು ಅವರನ್ನೂ ಬಂಧಿಸಿದ್ದಾರೆ ಎನ್ನಲಾಗಿದೆ.

Continue Reading

ಪ್ರಮುಖ ಸುದ್ದಿ

Viral News: ಮೃತ ಇಂಜಿನಿಯರ್‌ನನ್ನು ಟ್ರಾನ್ಸ್‌ಫರ್‌ ಮಾಡಿದ ನಗರಾಭಿವೃದ್ಧಿ ಇಲಾಖೆ!

Viral News: ಇದೀಗ ಜನವರಿಯಲ್ಲೇ ಮೃತಪಟ್ಟ ಇಂಜಿನಿಯರ್‌ನನ್ನು ಕೊಡಗು ಜಿಲ್ಲೆಗೆ ವರ್ಗಾವಣೆ ಮಾಡಿ ಜುಲೈ 9ರಂದು ಆದೇಶ ಹೊರಡಿಸಲಾಗಿದೆ. ಜನವರಿ 12ರಂದು ಅಶೋಕ ಪುಟಪಾಕ್ ಮೃತಪಟ್ಟಿದ್ದರು. ಸೇಡಂ ಪುರಸಭೆಯಿಂದ ಕೊಡಗು ಜಿಲ್ಲೆಯ ಮಡಿಕೇರಿ ನಗರಸಭೆಯ ಕಿರಿಯ ಎಂಜಿನಿಯರ್ ಹುದ್ದೆಗೆ ವರ್ಗಾವಣೆ ಮಾಡಿ ಆರ್ಡರ್‌ ಹೊರಡಿಸಲಾಗಿದೆ.

VISTARANEWS.COM


on

viral news dead engineer transfer
Koo

ಕಲಬುರಗಿ: ಮೃತ ಇಂಜಿನಿಯರ್ (Engineer Death) ಒಬ್ಬರನ್ನು ವರ್ಗಾವಣೆ (Transfer) ಮಾಡಿ ನಗರಾಭಿವೃದ್ಧಿ ಇಲಾಖೆ (Urban Development department) ಹಾಸ್ಯಾಸ್ಪದ ಎಡವಟ್ಟು (Viral news) ಮಾಡಿಕೊಂಡಿದೆ. ನಗರಾಭಿವೃದ್ಧಿ ಇಲಾಖೆಯ ಕಿರಿಯ ಎಂಜಿನಿಯರ್‌ ಅಶೋಕ ಪುಟಪಾಕ್‌ ಎಂಬವರನ್ನು ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಟ್ರಾನ್ಸ್‌ಫರ್‌ ಮಾಡಿದೆ. ವಾಸ್ತವವಾಗಿ, ಅವರು ಜನವರಿಯಲ್ಲೇ ಮೃತಪಟ್ಟಿದ್ದಾರೆ.

ಇದೀಗ ಜನವರಿಯಲ್ಲೇ ಮೃತಪಟ್ಟ ಇಂಜಿನಿಯರ್‌ನನ್ನು ಕೊಡಗು ಜಿಲ್ಲೆಗೆ ವರ್ಗಾವಣೆ ಮಾಡಿ ಜುಲೈ 9ರಂದು ಆದೇಶ ಹೊರಡಿಸಲಾಗಿದೆ. ಜನವರಿ 12ರಂದು ಅಶೋಕ ಪುಟಪಾಕ್ ಮೃತಪಟ್ಟಿದ್ದರು. ಸೇಡಂ ಪುರಸಭೆಯಿಂದ ಕೊಡಗು ಜಿಲ್ಲೆಯ ಮಡಿಕೇರಿ ನಗರಸಭೆಯ ಕಿರಿಯ ಎಂಜಿನಿಯರ್ ಹುದ್ದೆಗೆ ವರ್ಗಾವಣೆ ಮಾಡಿ ಆರ್ಡರ್‌ ಹೊರಡಿಸಲಾಗಿದೆ.

ಆರು ತಿಂಗಳ ಹಿಂದೆಯೇ ಮೃತಪಟ್ಟಿದ್ದರೂ ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಮಾಹಿತಿ ಇಲ್ಲ ಎಂಬುದು ಹಾಸ್ಯಾಸ್ಪದ ಎನಿಸಿಕೊಂಡಿದೆ. ಹಾಗಿದ್ದರೆ ಈ ಆರು ತಿಂಗಳು ಸಂಬಳವೂ ಅವರ ಖಾತೆಗೆ ಜಮೆ ಆಗುತ್ತಿತ್ತೇ? ಈ ಪ್ರಶ್ನೆಗೆ ಇಲಾಖೆ ಇನ್ನೂ ಉತ್ತರಿಸಿಲ್ಲ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರ ವಿಧಾನಸಭಾ ಕ್ಷೇತ್ರದಲ್ಲಿ ಸಂಭವಿಸಿರುವ ಈ ಎಡವಟ್ಟು ಇಲಾಖೆಗೂ ಸಚಿವರಿಗೂ ಇದೀಗ ಮುಜುಗರ ಸೃಷ್ಟಿಸಿದೆ.

ಮಾಜಿ ಸಚಿವ ನಾಗೇಂದ್ರ 5 ದಿನಗಳ ಕಾಲ ಇಡಿ ಕಸ್ಟಡಿಗೆ

ಬೆಂಗಳೂರು: ಮಾಜಿ ಸಚಿವ ಬಿ. ನಾಗೇಂದ್ರ (Ex minister B Nagendra) ಅವರನ್ನು ಐದು ದಿನಗಳ ಕಾಲ ಇಡಿ ಕಸ್ಟಡಿಗೆ ಒಪ್ಪಿಸಿ ನ್ಯಾಯಾಧೀಶರು ಆದೇಶ ನೀಡಿದ್ದಾರೆ. ಯಲಹಂಕದಲ್ಲಿ ನ್ಯಾಯಾಧೀಶರ ಮನೆಯಲ್ಲಿ ನಾಗೇಂದ್ರ ಅವರನ್ನು ಇಡಿ ಅಧಿಕಾರಿಗಳು (ED Officers) ಇಂದು ಮುಂಜಾನೆ ಹಾಜರು ಪಡಿಸಿದ್ದರು. ವಾಲ್ಮೀಕಿ ನಿಗಮ ಹಗರಣಕ್ಕೆ (Valmiki Corporation Scam) ಸಂಬಂಧಿಸಿ ಮೊನ್ನೆಯಿಂದ ನಾಗೇಂದ್ರ ಇಡಿ ದಾಳಿಗೆ (ED Raid) ಒಳಗಾಗಿದ್ದಾರೆ.

ನಾಗೇಂದ್ರರನ್ನು ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರ ಮುಂದೆ ಹಾಜರುಪಡಿಸಲಾಯಿತು. 5 ದಿನಗಳ ಕಾಲ ಕಸ್ಟಡಿಗೆ ನೀಡಿದ ನ್ಯಾಯಾಧೀಶರು, 18ನೇ ತಾರೀಖಿನಂದು ಬೆಳಿಗ್ಗೆ 11ಕ್ಕೆ ಮತ್ತೆ ಹಾಜರುಪಡಿಸುವಂತೆ ಸೂಚನೆ ನೀಡಿ ಆದೇಶಿಸಿದರು. ನ್ಯಾಯಾಧೀಶರ ಮುಂದೆ ತಮ್ಮ ಅನಾರೋಗ್ಯ ಸಮಸ್ಯೆಯನ್ನು ನಾಗೇಂದ್ರ ತಿಳಿಸಿದರು. ಬಿಪಿ, ಜೊತೆಗೆ ಸುಸ್ತು ಎಂದರು. ಪ್ರತಿ ದಿನ ಮೂರು ಗಂಟೆ ವಿಚಾರಣೆ ನಡೆಸಬಹುದು, ವಿಚಾರಣೆ ಬಳಿಕ 30 ನಿಮಿಷಗಳ ಕಾಲ ರೆಸ್ಟ್ ನೀಡಬೇಕು ಹಾಗೂ ಪ್ರತಿ ದಿನ ವೈದ್ಯಕೀಯ ತಪಾಸಣೆ ಮಾಡುವಂತೆ ನ್ಯಾಯಧೀಶರು ಸೂಚಿಸಿದರು.

ಜಡ್ಜ್ ಮುಂದೆ ನಾಗೇಂದ್ರ ಹೇಳಿಕೆ ನೀಡಿದ್ದು, ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ. ʼಇದು ಬೋರ್ಡ್ ಮಿಟೀಂಗ್ ಮೂಲಕ ಆಗಿರುವ ಹಣ ವರ್ಗಾವಣೆ. ನಾನು ಇಲಾಖೆ ಸಚಿವಾನಾಗಿದ್ದೆ ಅಷ್ಟೇ. ಅಕ್ರಮ ಹಣ ವರ್ಗಾವಣೆ ಬಗ್ಗೆ ನನಗೆ ಗೊತ್ತಿಲ್ಲ. ನನಗೆ ಆರೋಗ್ಯ ಸಮಸ್ಯೆ ಇದೆ. ನನಗೆ ಮೆಡಿಕಲ್ ನೆರವು ಅವಶ್ಯಕತೆ ಇದೆʼ ಎಂದು ನಾಗೇಂದ್ರ ಮನವಿ ಮಾಡಿದರು. ಅಹವಾಲು ಹಿನ್ನೆಲೆಯಲ್ಲಿ, 24 ಗಂಟೆಗೊಮ್ಮೆ ಆರೋಗ್ಯ ತಪಾಸಣೆಗೆ ಕರೆದೊಯ್ಯುವಂತೆ ಇಡಿಗೆ ಸೂಚನೆ ನೀಡಲಾಯಿತು.

ʼನಾಗೇಂದ್ರರನ್ನು ಹೆಚ್ಚಿನ ವಿಚಾರಣೆ ಮಾಡಬೇಕು. ಬಹುಕೋಟಿ ಹಗರಣ ಆಗಿದೆ. ಹಣ ವರ್ಗಾವಣೆ ಮಾಹಿತಿ ಕಲೆ ಹಾಕಬೇಕಿದೆ. ಫಲಾನುಭವಿಗಳನ್ನು ಪತ್ತೆ ಹಚ್ಚಬೇಕಿದೆ. ಅವ್ಯವಹಾರ ಯಾವ ರೀತಿ ಆಗಿದೆ ಅನ್ನುವ ವಿಚಾರಣೆ ನಡೆಸಬೇಕಿದೆ. ಇಲಾಖೆಗೆ ಸಚಿವರಾಗಿದ್ದರಿಂದ ಹೆಚ್ಚಿನ ವಿಚಾರಣೆ ಅಗತ್ಯ ಇದೆ. ಹೀಗಾಗಿ 14 ದಿನ ಕಸ್ಟಡಿಗೆ ಕೊಡಬೇಕು ಎಂದು ಪಬ್ಲಿಕ್‌ ಪ್ರಾಸಿಕ್ಯೂಟರ್‌ ಕೇಳಿದ್ದರು.

ನಿನ್ನೆ ಬೆಳಗ್ಗೆ 8 ಗಂಟೆ ಸುಮಾರಿಗೆ ನಾಗೇಂದ್ರ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಅದಕ್ಕೂ ಮುನ್ನ ಸತತ 40 ಗಂಟೆಗಳ ಕಾಲ ನಾಗೇಂದ್ರ ಅವರ ಮನೆ ಹಾಗೂ ಕಚೇರಿಯನ್ನು ತಪಾಸಣೆ ನಡೆಸಲಾಗಿತ್ತು.

ಇದನ್ನೂ ಓದಿ: Education News: ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ಕರ್ನಾಟಕದ 148 ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಎಬಿಬಿ ಇಂಡಿಯಾ ನೆರವು

Continue Reading

ವೈರಲ್ ನ್ಯೂಸ್

Viral Video: ಬೆಂಗಳೂರಿನ ಹೋಟೆಲ್‌ನಲ್ಲಿ ಫ್ಯಾನ್‌ ಬದಲು ಪುರಾತನ ಕಾಲದ ಬೀಸಣಿಕೆ! ವಿಡಿಯೊ ನೋಡಿ

ಆಧುನಿಕ ತಂತ್ರಜ್ಞಾನವನ್ನು ಬಳಸಿ ಸಾಂಪ್ರದಾಯಿಕ ಶೈಲಿಯ ಫ್ಯಾನ್ ಬೆಂಗಳೂರಿನ ಹೊಟೇಲ್ ನಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಇದರ ವೈರಲ್ ವಿಡಿಯೋ (Viral Video) ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ.

VISTARANEWS.COM


on

By

Viral Video
Koo

ಪ್ರಾಚೀನ ಕಾಲದ ಕೆಲವು ವಸ್ತುಗಳು ನಮ್ಮನ್ನು ಮೋಡಿ ಮಾಡುತ್ತವೆ. ಇದು ಸಾಕಷ್ಟು ಮಂದಿಯ ಗಮನವನ್ನೂ ಸೆಳೆಯುತ್ತದೆ. ಈ ನಿಟ್ಟಿನಲ್ಲಿ ಇದೀಗ ಬೆಂಗಳೂರಿನ (bengaluru) ಹೊಟೇಲ್‌ವೊಂದು (hotel) ಎಲ್ಲರ ಗಮನ ಸೆಳೆದಿದೆ. ಪುರಾತನ ಕಾಲದ ಫ್ಯಾನ್ (fan) ಬಳಸಿರುವ ಬೆಂಗಳೂರಿನ ಹೊಟೇಲ್ ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ (Viral Video) ಆಗಿದೆ.

ಆಧುನಿಕ ತಂತ್ರಜ್ಞಾನವನ್ನು ಬಳಸಿ ಸಾಂಪ್ರದಾಯಿಕ ಶೈಲಿಯ ಫ್ಯಾನ್ ಬೆಂಗಳೂರಿನ ಹೊಟೇಲ್ ನಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಇದರ ವೈರಲ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ.
ಪುರಾತನ ಯುಗವನ್ನು ನೆನಪಿಸುವ ಈ ಫ್ಯಾನ್‌ಗಳು ಮೋಟಾರೀಕೃತವಾಗಿದ್ದು, ಹಳೆಯ ಮತ್ತು ಹೊಸ ಫ್ಯಾಶನ್ ಮಿಶ್ರಣವನ್ನು ಸೃಷ್ಟಿಸುವ ವಿದ್ಯುತ್‌ನಲ್ಲಿ ಚಲಿಸುತ್ತವೆ.

ವೈರಲ್ ಫೂಟೇಜ್ ಹಲವಾರು ಅಭಿಮಾನಿಗಳನ್ನು ಒಳಗೊಂಡ ಆಕರ್ಷಕ ಸಾಂಪ್ರದಾಯಿಕ ಒಳಾಂಗಣದೊಂದಿಗೆ ರೆಸ್ಟೋರೆಂಟ್ ಅನ್ನು ತೋರಿಸುತ್ತದೆ. ಅಲಂಕಾರಿಕ ಆಫ್-ವೈಟ್ ಫ್ಯಾಬ್ರಿಕ್ ಮತ್ತು ಅದರ ಮೇಲೆ ಸಂಕೀರ್ಣವಾದ ಮೋಟಿಫ್‌ಗಳಿಂದ ಅಲಂಕರಿಸಲ್ಪಟ್ಟ ಫ್ಯಾನ್ ಗೆ ಸೊಗಸಾದ ಚಿನ್ನದ ಟಸೆಲ್‌ಗಳೂ ಇವೆ. ಆಯತಾಕಾರದ ಇದನ್ನು ವಿದ್ಯುಚ್ಛಕ್ತಿಯ ಸಹಾಯದಿಂದ ಸೀಲಿಂಗ್ ನಲ್ಲಿ ನಿಧಾನವಾಗಿ ತೂಗಾಡಿಸಲಾಗುತ್ತದೆ.

ಪ್ರಾಚೀನ ಕಾಲದಲ್ಲಿ ಈ ರೀತಿಯ ಆಯತಾಕಾರದ ಫ್ಯಾನ್ ಗಳು ಮುಖ್ಯವಾಗಿ ಗಾಳಿಯ ಹರಿವಿನಿಂದ ಅಥವಾ ಅವುಗಳನ್ನು ತೂಗಾಡುತ್ತಿರುವ ಪರಿಚಾರಕರ ಪ್ರಯತ್ನಗಳಿಂದ ಕೈಯಾರೆ ನಿರ್ವಹಿಸಲಾಗುತ್ತಿತ್ತು. ಎಕ್ಸ್‌ನಲ್ಲಿ ಬಳಕೆದಾರರು ವಿಡಿಯೊ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಬೆಂಗಳೂರಿನ ಹೊಟೇಲ್‌ನಲ್ಲಿ ಇತ್ತೀಚಿನ ಫ್ಯಾನ್‌ಗಳು ಜೀವನವು ಒಂದು ಚಕ್ರದಂತೆ ಸುತ್ತುತ್ತದೆ ಎಂದು ಬರೆದಿದ್ದಾರೆ.

ಇದನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ಅನಂತರ ಈ ಚಮತ್ಕಾರಿ ಮತ್ತು ನವೀನ ವಿಧಾನವು ಸಾಮಾಜಿಕ ಮಾಧ್ಯಮದಲ್ಲಿ ಉತ್ಸಾಹಭರಿತ ಚರ್ಚೆಯನ್ನು ಹುಟ್ಟುಹಾಕಿದೆ. ಸಾಕಷ್ಟು ಮಂದಿಯ ಮೆಚ್ಚುಗೆ ಮತ್ತು ಕುತೂಹಲವನ್ನು ಇದು ಸೆಳೆದಿದೆ. ಪುರಾತನ ಕಾಲದ ಛಾಯಾಚಿತ್ರವನ್ನು ಪೋಸ್ಟ್ ಮಾಡುವ ಒಬ್ಬ ಬಳಕೆದಾರ, ಬ್ರಿಟಿಷರ ಕಾಲದಲ್ಲಿ ನನಗೆ ಪಂಖಾವಾಲಾಗಳನ್ನು ನೆನಪಿಸುತ್ತದೆ ಎಂದು ಬರೆದರೆ, ಇನ್ನೊಬ್ಬರು, ಇದು ದೊಡ್ಡ ಗೊಂದಲವಲ್ಲವೇ? ಮೇಲಾಗಿ, ಅದು ಗಾಳಿಯನ್ನು ಸಾಕಷ್ಟು ಬೀಸುವುದಿಲ್ಲ ಎಂಬುದು ನನಗೆ ಖಾತ್ರಿಯಿದೆ. ಎಂದು ಹೇಳಿದ್ದಾರೆ.


ಇನ್ನೊಬ್ಬ ಬಳಕೆದಾರರು ಇದು ಕನಿಷ್ಠ 70 ವರ್ಷಗಳಷ್ಟು ಹಳೆಯದಾದ ತಂತ್ರಜ್ಞಾನ. ಆಗ ಸಹಜವಾಗಿ ಮೋಟಾರ್‌ಗಳು ಇರಲಿಲ್ಲ ಎಂದು ಎಲ್ಲರ ಗಮನ ಸೆಳೆದಿದ್ದಾರೆ. ಮತ್ತೊಬ್ಬರು ಕನಿಷ್ಠ ಇದು ಕೆಳಗೆ ಬಿದ್ದರೆ ಅದರ ಕೆಳಗೆ ಮಲಗಿರುವ ವ್ಯಕ್ತಿಗೆ ಹಾನಿಯಾಗುವುದಿಲ್ಲ. ಅವರು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Viral Video: ʼಡ್ಯೂಟಿ ಮುಗಿದ ಮೇಲೆ ಮನೆ ಬಾʼ ಎಂದು ಕರೆದ ASI; ಆಮೇಲೆ ಆಗಿದ್ದೇ ಬೇರೆ! ಸ್ಪೈಸ್‌ಜೆಟ್‌ ಸಿಬ್ಬಂದಿ ವಿಡಿಯೋ ವೈರಲ್‌

ಇಂದಿನ ಕಾಲದಲ್ಲಿ ಇದು ನಿಷ್ಪ್ರಯೋಜಕ ಉತ್ಪನ್ನ. ಯಾವುದೇ ಗಾಳಿಯ ಪ್ರಸರಣ ಮತ್ತು ಅವುಗಳಲ್ಲಿ ಹೆಚ್ಚಿನವು ಒಂದೇ ಕೋಣೆಯಲ್ಲಿ ಅಗತ್ಯವಿಲ್ಲ. ಹಾಗೆಯೇ ಹೊರಗಿನ ತಾಪಮಾನವು ನೀರಿನ ಕೂಲರ್‌ಗಳು ಸಹ ಕೆಲವೊಮ್ಮೆ ವಿಫಲಗೊಳ್ಳುತ್ತದೆ. ಆದ್ದರಿಂದ ಇವು ಕೇವಲ ಪ್ರದರ್ಶನ ಉದ್ದೇಶಕ್ಕಾಗಿ ಮತ್ತು ಬೇರೇನೂ ಅಲ್ಲ. ಉಪಯೋಗವಿಲ್ಲ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಸಾಕಷ್ಟು ಮಂದಿಯ ಗಮನ ಸೆಳೆದಿರುವ ಈ ಪೋಸ್ಟ್ ಇದುವರೆಗೆ 7.7 ಲಕ್ಷ ವೀಕ್ಷಣೆಗಳನ್ನು ಗಳಿಸಿದೆ.

Continue Reading

ವೈರಲ್ ನ್ಯೂಸ್

Viral Video: IAS ಅಧಿಕಾರಿ ತಾಯಿಯ ದರ್ಬಾರ್‌ ನೋಡಿ; ಪಿಸ್ತೂಲ್‌ ತೋರಿಸಿ ರೈತರಿಗೆ ಬೆದರಿಕೆ

Viral Video: 2023 ರ ಬ್ಯಾಚ್ ಅಧಿಕಾರಿಯಾಗಿರುವ ಪೂಜಾ ತನ್ನನ್ನು ತಾನು ದಿವ್ಯಾಂಗ ಮತ್ತು ಮಾನಸಿಕವಾಗಿ ಅಸ್ವಸ್ಥೆ ಎಂದು ಹೇಳಿಕೊಂಡಿದ್ದಳು. ಆದರೆ ಅದನ್ನು ದೃಢೀಕರಿಸಲು ಪರೀಕ್ಷೆಗೊಳಪಡಲು ಒಪ್ಪಿರಲಿಲ್ಲ. ಆ ಮೂಲಕ ಆಕೆ ವಿವಾದಕ್ಕೀಡಾಗಿದ್ದಳು. ಇದಾದ ಬಳಿಕ ಆಕೆಯ ತಾಯಿಯ ವಿಡಿಯೋ ವೈರಲ್‌ ಆಗಿರುವ ಬೆನ್ನಲ್ಲೇ ಪೂಜಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

VISTARANEWS.COM


on

Koo

ಹೊಸದಿಲ್ಲಿ: ಐಎಎಸ್‌ ಅಧಿಕಾರಿಯೊಬ್ಬರ ತಾಯಿ ಬಂದೂಕು ಹಿಡಿದು ಜನರನ್ನು ಹೆದರಿಸಿರುವ ಘಟನೆ ಪುಣೆಯಲ್ಲಿ ವರದಿಯಾಗಿದೆ. ಈ ಘಟನೆ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದ್ದು, ಇದು ಹಳೆಯ ವಿಡಿಯೋ ಎನ್ನಲಾಗಿದೆ. IAS ಅಧಿಕಾರಿ ಪೂಜಾ ಖೆಡ್ಗರ್‌ ಅವರ ತಾಯಿ ಬಂದೂಕು ಹಿಡಿದು ಜನರ ಗುಂಪೊಂದಕ್ಕೆ ಬೆದರಿಕೆ ಹಾಕುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

2023 ರ ಬ್ಯಾಚ್ ಅಧಿಕಾರಿಯಾಗಿರುವ ಪೂಜಾ ತನ್ನನ್ನು ತಾನು ದಿವ್ಯಾಂಗ ಮತ್ತು ಮಾನಸಿಕವಾಗಿ ಅಸ್ವಸ್ಥೆ ಎಂದು ಹೇಳಿಕೊಂಡಿದ್ದಳು. ಆದರೆ ಅದನ್ನು ದೃಢೀಕರಿಸಲು ಪರೀಕ್ಷೆಗೊಳಪಡಲು ಒಪ್ಪಿರಲಿಲ್ಲ. ಆ ಮೂಲಕ ಆಕೆ ವಿವಾದಕ್ಕೀಡಾಗಿದ್ದಳು. ಇದಾದ ಬಳಿಕ ಆಕೆಯ ತಾಯಿಯ ವಿಡಿಯೋ ವೈರಲ್‌ ಆಗಿರುವ ಬೆನ್ನಲ್ಲೇ ಪೂಜಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಘಟನೆ ವಿವರ:

ಪೂಜಾಳ ತಂದೆ ದಿಲೀಪ್‌ ಖೆಡ್ಕರ್‌ ಒಬ್ಬ ನಿವೃತ ಐಎಎಸ್‌ ಅಧಿಕಾರಿಯಾಗಿದ್ದು, ಕೋಟ್ಯಂತರ ರೂಗಳ ಆಸ್ತಿ ಪಾಸ್ತಿ ಹೊಂದಿದ್ದಾರೆ. ಪುಣೆ ಜಿಲ್ಲೆಯ ಮುಲ್ಶಿ ತಾಲೂಕು ಸೇರಿದಂತೆ ಬೇರೆ ಬೇರೆ ಜಾಗಗಳಲ್ಲಿ 25ಕ್ಕೂ ಹೆಚ್ಚು ಎಕರೆ ಭೂಮಿಯನ್ನು ಹೊಂದಿದ್ದಾರೆ. ಆದರೆ ಅಕ್ಕಪಕ್ಕದ ರೈತರ ಜಮೀನನ್ನೂ ಕಬಳಿಸಲು ಯತ್ನಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ರೈತರು ಇದನ್ನು ವಿರೋಧಿಸಿದಾಗ, ಎಂಎಸ್ ಖೇಡ್ಕರ್ ಅವರ ತಾಯಿ ಮನೋರಮಾ ಖೇಡ್ಕರ್ ತಮ್ಮ ಭದ್ರತಾ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಬಂದು ರೈತರನ್ನು ಬೆದರಿಸಲು ಯತ್ನಿಸಿದ್ದರು.

ಸ್ಥಳೀಯರೊಬ್ಬರು ರೆಕಾರ್ಡ್ ಮಾಡಿದ ಎರಡು ನಿಮಿಷಗಳ ವೀಡಿಯೊದಲ್ಲಿ, ಮನೋರಮಾ ಖೇಡ್ಕರ್ ಕೈಯಲ್ಲಿ ಪಾಕೆಟ್ ಪಿಸ್ತೂಲ್ ಹಿಡಿದು ವ್ಯಕ್ತಿಯೊಬ್ಬನ ಮೇಲೆ ಕೂಗಾಡುತ್ತಿರುವುದನ್ನು ಕಾಣಬಹುದು. ಅವಳು ಅವನ ಬಳಿಗೆ ಹೋಗುತ್ತಾಳೆ. ಬಳಿಕ ವ್ಯಕ್ತಿಗೆ ಪಿಸ್ತೂಲ್‌ ತೋರಿಸಿ ಮರಾಠಿಯಲ್ಲಿ ಹೆದರಿಸುತ್ತಾಳೆ. ನನಗೆ ಭೂಮಿಯ ದಾಖಲೆಗಳನ್ನು ತೋರಿಸಿ. ಜಮೀನಿನ ದಾಖಲೆಗಳು ನನ್ನ ಹೆಸರನ್ನು ಹೊಂದಿವೆ ಎಂದು ಹೇಳುತ್ತಾಳೆ. ಮರಾಠಿಯಲ್ಲಿ ವ್ಯಕ್ತಿಯನ್ನು ಎಚ್ಚರಿಸುತ್ತಾಳೆ. ಜಮೀನಿನ ದಾಖಲೆಯಲ್ಲಿ ತಮ್ಮ ಹೆಸರಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ ಎಂದು ಉತ್ತರಿಸುತ್ತಾರೆ. ನಂತರ ಅವಳು ನ್ಯಾಯಾಲಯದ ಆದೇಶವನ್ನು ತೋರಿಸಿ ಎಂದು ಕೇಳುತ್ತಾಳೆ ಮತ್ತು “ನನಗೆ ನಿಯಮಗಳನ್ನು ಕಲಿಸಬೇಡ” ಎಂದು ಆ ವ್ಯಕ್ತಿಗೆ ಎಚ್ಚರಿಕೆ ನೀಡುತ್ತಾಳೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಕಮೆಂಟ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ:John Cena: ಅನಂತ್‌ ಅಂಬಾನಿ-ರಾಧಿಕಾ ಮದುವೆಗೆ ಆಗಮಿಸಿದ ಖ್ಯಾತ ರಸ್ಲರ್​ ಜಾನ್ ಸೀನ; ವಿಡಿಯೊ ವೈರಲ್​

Continue Reading
Advertisement
Bagalkot news
ಕರ್ನಾಟಕ5 mins ago

Bagalkot News: ಭಕ್ತರಿಗೆ ಭಂಡಾರ ಹಚ್ಚಿ ಕೊಡಲಿ ಏಟು ನೀಡೋ ಪೂಜಾರಿ; ಮೌಢ್ಯ ನಿಷೇಧ ಕಾಯ್ದೆಯಡಿ ಬಂಧನ!

T20 World Cup 2024
ಕ್ರೀಡೆ14 mins ago

T20 World Cup 2024 : ವಿಶ್ವ ಕಪ್ ಆಯೋಜನೆಯಲ್ಲಿ ಐಸಿಸಿಗೆ ಸಿಕ್ಕಾಪಟ್ಟೆ ನಷ್ಟ ​; ತೆರೆಮರೆಯಲ್ಲಿ ಜೋರು ಚರ್ಚೆ

Anant Ambani Wedding
ಪ್ರಮುಖ ಸುದ್ದಿ34 mins ago

ಅಂಬಾನಿಯನ್ನು ಟೀಕಿಸುತ್ತಿದ್ದ ದೀದಿ, ಅಖಿಲೇಶ್‌, ಲಾಲು ಸೇರಿ ಹಲವು ರಾಜಕಾರಣಿಗಳು ಅನಂತ್‌ ಮದುವೆಯಲ್ಲಿ ಭಾಗಿ

Self Harming
ಬೆಂಗಳೂರು41 mins ago

Self Harming : ಪತಿ ಅಗಲಿಕೆಯ ನೋವು; ಖಿನ್ನತೆಗೊಳಗಾದ ತಾಯಿ ಮತ್ತು ಮಗ ಆತ್ಮಹತ್ಯೆ

Shiva Rajkumar 131 cinema Look out
ಸ್ಯಾಂಡಲ್ ವುಡ್56 mins ago

Shiva Rajkumar: ಶಿವರಾಜ್ ಕುಮಾರ್ ಜನುಮದಿನಕ್ಕೆ 131ನೇ ಸಿನಿಮಾದ ಮೊದಲ ಝಲಕ್ ರಿಲೀಸ್!

YouTuber Dhruv Rathee
ದೇಶ58 mins ago

YouTuber Dhruv Rathee: ಸ್ಪೀಕರ್‌ ಓಂ ಬಿರ್ಲಾ ಪುತ್ರಿ ಬಗ್ಗೆ ಪೋಸ್ಟ್‌; ಯೂಟ್ಯೂಬರ್‌ ಧೃವ್‌ ರಥೀ ವಿರುದ್ಧ FIR

Kapil Dev
ಪ್ರಮುಖ ಸುದ್ದಿ1 hour ago

Kapil Dev : ಅಂಶುಮಾನ್ ಗಾಯಕ್ವಾಡ್​ಗೆ ಕ್ಯಾನ್ಸರ್​, ಬೇಸರ ವ್ಯಕ್ತಪಡಿಸಿದ ಕಪಿಲ್​ ದೇವ್​

Smriti Singh
ದೇಶ1 hour ago

Smriti Singh: ಹುತಾತ್ಮ ಯೋಧನ ಪತ್ನಿ ಬಗ್ಗೆ ಅಶ್ಲೀಲ ಕಮೆಂಟ್;‌ ಅಹ್ಮದ್‌ ವಿರುದ್ಧ ಎಫ್‌ಐಆರ್

Murder case
ಹಾವೇರಿ2 hours ago

Murder case : ಪ್ರೀತಿ ವಿಷ್ಯಕ್ಕೆ ಯುವಕನಿಗೆ ಬೆಂಕಿ ಹಚ್ಚಿ ಕೊಂದವರ ವಿರುದ್ಧ ಚಾಜ್೯ ಶೀಟ್ ಸಲ್ಲಿಕೆ

Sexual Assault
ವೈರಲ್ ನ್ಯೂಸ್2 hours ago

Sexual Assault: ಐಸ್‌ಕ್ರೀಂ ಕೊಳ್ಳಲು ಬಂದ ಬಾಲಕಿಯ ಗುಪ್ತಾಂಗ ಮುಟ್ಟಿ ದೌರ್ಜನ್ಯ; ಮೊಹಮ್ಮದ್ ಖಾನ್ ಬಂಧನ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ4 hours ago

Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

Wild Animal Attack
ಹಾಸನ5 hours ago

Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

karnataka Rain Effect
ಮಳೆ2 days ago

Karnataka Rain : ಭಾರಿ ಮಳೆಗೆ ಕರೆಯಂತಾದ ರಸ್ತೆಯಲ್ಲಿ ಬೈಕ್‌ ಚಲಾಯಿಸಿ ಮುಗ್ಗರಿಸಿ ಬಿದ್ದ ಸವಾರರು; ನಾಳೆಗೂ ರೈನ್‌ ಅಲರ್ಟ್‌

Chikkamagaluru News Police detained youths for consuming liquor at tourist spot in Chikmagaluru
ಮಳೆ4 days ago

Chikkamagaluru News : ಚಿಕ್ಕಮಗಳೂರು ಚಳಿಗೆ ನಶೆ ಏರಿಸಿಕೊಳ್ಳುತ್ತಿದ್ದವರ ಕಿಕ್ಕಿಳಿಸಿದ ಬಣಕಲ್ ಪಿಎಸ್ಐ ರೇಣುಕಾ

karnataka Rain
ಮಳೆ4 days ago

Karnataka Rain : ಭಾರಿ ಮಳೆಯಲ್ಲಿ ದೇವರಮನೆಗುಡ್ಡದಲ್ಲಿ ಪ್ರವಾಸಿಗರ ಹುಚ್ಚಾಟ; ಕೇಸ್‌ ಜಡಿದ ಪೊಲೀಸರು!

karnataka weather Forecast
ಮಳೆ4 days ago

Karnataka Weather : 11 ಜಿಲ್ಲೆಗಳಲ್ಲಿ ರಣಮಳೆ; ಕರಾವಳಿಗೆ ರೆಡ್‌, ಮಲೆನಾಡಿಗೆ ಆರೆಂಜ್‌ ಅಲರ್ಟ್‌

Rain Effect
ಮಳೆ5 days ago

Rain Effect : ಭಾರಿ ಮಳೆಗೆ ನೀರಲ್ಲಿ ಕೊಚ್ಚಿ ಹೋದ ಪಾನ್‌ ಶಾಪ್‌, ಕಾರು! ಉಡುಪಿಯ ಶಾಲಾ-ಕಾಲೇಜುಗಳಿಗೆ ನಾಳೆಯೂ ರಜೆ

Karnataka Rain Effect
ಮಳೆ5 days ago

Karnataka Rain : ಮಳೆ ಅವಾಂತರ; ಮರ ಬಿದ್ದು ಕಾರು ಜಖಂ, ಕುಸಿದು ಬಿದ್ದ ಪಾವಂಜೆ ಮಹಾಗಣಪತಿ ದೇವಸ್ಥಾನದ ತಡೆಗೋಡೆ

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ; ಪ್ರಾಣದ ಹಂಗು ತೊರೆದು ಶಾಲೆಗೆ ಹೋಗಬೇಕು!

Karnataka weather Forecast
ಮಳೆ5 days ago

Karnataka Rain : ರಕ್ಕಸ ಅಲೆಗಳ ಮಧ್ಯೆ ಈಜಲು ಹೋದ ಪ್ರವಾಸಿಗರಿಗೆ ಬಿತ್ತು ಬಿಸಿ ಬಿಸಿ ಕಜ್ಜಾಯ‌!

ಟ್ರೆಂಡಿಂಗ್‌