ವೈರಲ್ ನ್ಯೂಸ್
Viral News : ಈಗಲೂ ಬಡತನದಲ್ಲೇ ಬೇಯುತ್ತಿದ್ದಾರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ತಂದು ಕೊಟ್ಟ ʼಸ್ಮೈಲ್ ಪಿಂಕಿʼ
ಆಸ್ಕರ್ ಪ್ರಶಸ್ತಿ ಖ್ಯಾತಿಯ ಸ್ಮೈಲ್ ಪಿಂಕಿ ಡಾಕ್ಯುಮೆಂಟರಿ ಸಿನಿಮಾದ ಬಾಲಕಿ ಪಿಂಕಿ ಇಂದಿಗೂ ಬಡತನದ ಬೇಗೆಯಲ್ಲೇ (Viral News) ಇದ್ದಾರೆ.
ಲಕ್ನೋ: ಅದು 2009ರ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ. ಆ ದಿನ ಪೂರ್ತಿ ಭಾರತವೇ ಖುಷಿಯಿಂದ ಕುಣಿದಿತ್ತು. ಏಕೆಂದರೆ ʼಸ್ಲಂ ಡಾಗ್ ಮಿಲಿಯನಿಯರ್ʼ ಸಿನಿಮಾ ಅತ್ಯುತ್ತಮ ಚಿತ್ರ ಪ್ರಶಸ್ತಿ ಗೆಲ್ಲುವುದರ ಜತೆ ಉತ್ತರ ಪ್ರದೇಶದ ಬಾಲಕಿ ಪಿಂಕಿ ಕುರಿತಾಗಿ ಮಾಡಲಾದ ಡಾಕ್ಯುಮೆಂಟರಿ ಸಿನಿಮಾ ʼಸ್ಮೈಲ್ ಪಿಂಕಿʼ ಅತ್ಯುತ್ತಮ ಡಾಕ್ಯುಮೆಂಟರಿ ಸಿನಿಮಾ ಪ್ರಶಸ್ತಿಯನ್ನು (Viral News) ಗೆದ್ದುಕೊಂಡಿತ್ತು.
ಮೇಗನ್ ಮೈಲಾನ್ ನಿರ್ದೇಶಿಸಿದ್ದ ಸಿನಿಮಾದಲ್ಲಿ ಸೀಳು ತುಟಿ ಹೊಂದಿದ್ದ ಆರು ವರ್ಷದ ಪಿಂಕಿ ಕಥೆಯನ್ನು ತೋರಿಸಿಕೊಡಲಾಗಿತ್ತು. ಆಕೆಗೆ ವಾರಾಣಸಿಯಲ್ಲಿ ಸುಬೋಧ್ ಕುಮಾರ್ ಸಿಂಗ್ ಹೆಸರಿನ ಸರ್ಜನ್ ಶಸ್ತ್ರಚಿಕಿತ್ಸೆ ಮಾಡಿ ಸೀಳುತುಟಿ ಸರಿಮಾಡಿಕೊಟ್ಟಿದ್ದರು. ಈ ಕಥೆ 2009ರಲ್ಲಿ ಅಮೆರಿಕದಲ್ಲಿ ಆಸ್ಕರ್ ಗೆದ್ದಿದ್ದಷ್ಟೇ ಅಲ್ಲದೆ ನಾಲ್ಕು ವರ್ಷಗಳ ನಂತರ ಲಂಡನ್‌ನಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಪಿಂಕಿ ಮತ್ತು ಆಕೆಯ ತಂದೆ ಸೊಂಕರ್ ಅವರು ಅಮೆರಿಕಕ್ಕೆ ತೆರಳಿ ಅಲ್ಲಿ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಕಣ್ತುಂಬಿಸಿಕೊಂಡು ಬಂದಿದ್ದರು.
ಇದನ್ನೂ ಓದಿ: Viral Video : ಇದು ಹುಡುಗಿಯಲ್ಲ ಸ್ವಾಮಿ! ಈ ಬೈಕ್‌ನಲ್ಲಿರುವವರು ತುಂಬಾನೇ ವಿಶೇಷ, ಯಾರಿವರು?
ಇದೀಗ ಆ ಪಿಂಕಿಗೆ 20 ವರ್ಷ ವಯಸ್ಸು. ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಅಹಿರೌರಾ ಬಳಿಯ ಸಣ್ಣ ಹಳ್ಳಿಯೊಂದರಲ್ಲಿ ಈ ಕುಟುಂಬವಿದೆ. ಪಿಂಕಿ ಅಹಿರೌರಾದ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಅಧ್ಯಯನ ಮಾಡುತ್ತಿದ್ದಾಳೆ. ಆಕೆಯ ತಂದೆ ಪಿಂಕಿ ಚಿಕ್ಕವಳಿದ್ದಾಗ ಹಣ್ಣು ಮತ್ತು ತರಕಾರಿ ಮಾರಾಟ ಮಾಡುತ್ತಿದ್ದರು. ಈಗಲೂ ಅದೇ ಕೆಲಸ ಅವರಿಗೆ ಹೊತ್ತಿನ ಊಟಕ್ಕೆ ಹಣ ತಂದುಕೊಡುತ್ತಿದೆ.
ಪಿಂಕಿ ಮತ್ತು ಆಕೆಯ ಕುಟುಂಬ ಈಗಲೂ ನೀರಿಗೋಸ್ಕರ ನೂರು ಮೀಟರ್ ದೂರಕ್ಕೆ ತೆರಳಿ ಹೊತ್ತು ತರಬೇಕು. ಎರಡು ರೂಮುಗಳಿರುವ ಮನೆಯಲ್ಲಿ ಈಗಲೂ ಒಂದು ರೂಮಿಗೆ ಬಾಗಿಲು ಇಲ್ಲ. ಪಿಂಕಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಸರು ಕೇಳಿಬರುವಂತೆ ಮಾಡಿದಳಾದರೂ ಇಂದಿಗೂ ಆಕೆ ಬಡತನದ ಬೇಗೆಯಲ್ಲೇ ಬೇಯುತ್ತಿದ್ದಾಳೆ.
ಇದನ್ನೂ ಓದಿ: Viral Photo : ನಾಯಿಗಳ ಗ್ರೂಪ್ ಫೋಟೋ! ಇದು ಮತ್ತಾರಿಂದಲೂ ಸಾಧ್ಯವಾಗದ ಕೆಲಸ
ಅಂದ ಹಾಗೆ ಪಿಂಕಿಯ ತಂದೆಗೆ ಮನೆಯ ಖರ್ಚನ್ನು ನಿಭಾಯಿಸುವುದೇ ದೊಡ್ಡ ಸವಾಲಾಗಿದೆ. ಹೀಗಿರುವಾಗ ಪಿಂಕಿಯ ವಿದ್ಯಾಭ್ಯಾಸ ಅವರಿಂದ ಅಸಾಧ್ಯವಾದದ್ದು. ಆಕೆಯ ಸೀಳು ತುಟಿ ಸರಿಮಾಡಲು ಸಹಾಯ ಮಾಡಿದ್ದ ಸ್ಮೈಲ್ ಟ್ರೈನ್ ಸಂಸ್ಥೆಯ ಉಪಾಧ್ಯಕ್ಷರಾಗಿರುವ ಮಮತಾ ಕರ್ರೋಲ್ ಅವರೇ ಪಿಂಕಿಯ ಸಹಾಯಕ್ಕೆ ಈಗಲೂ ನಿಂತಿದ್ದಾರೆ. ಪ್ರತಿ ತಿಂಗಳು ಪಿಂಕಿಯ ವಿದ್ಯಾಭ್ಯಾಸಕ್ಕೆಂದು ಮಮತಾ ಅವರು ಹಣ ಕಳುಹಿಸುತ್ತಿದ್ದು, ಅದರಿಂದಾಗಿಯೇ ವಿದ್ಯಾಭ್ಯಾಸ ನಡೆಯುತ್ತಿರುವುದಾಗಿ ಹೇಳಿದ್ದಾರೆ ಪಿಂಕಿ.
ವೈರಲ್ ನ್ಯೂಸ್
Viral News : ನಿತ್ಯ ಶಾಪಿಂಗ್‌ಗೆಂದೇ 70 ಲಕ್ಷ ರೂ. ಖರ್ಚು ಮಾಡುತ್ತಾಳಂತೆ ಈ ಮಹಿಳೆ!
ದುಬೈನಲ್ಲಿ ಸೌದಿ ಹೆಸರಿನ ಮಹಿಳೆ ತಾನು ಒಮ್ಮೆ ಶಾಪಿಂಗ್‌ಗೆ ಹೋದರೆ 70 ಲಕ್ಷ ರೂ.ವರೆಗೆ ಖರ್ಚು ಮಾಡುವುದಾಗಿ ಹೇಳಿಕೊಂಡಿದ್ದಾರೆ. ಆಕೆಯ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು (Viral News) ಮಾಡುತ್ತಿವೆ.
ದುಬೈ: ಶಾಪಿಂಗ್ ಎಂದರೆ ಹೆಣ್ಣು ಮಕ್ಕಳಿಗೆ ಪ್ರೀತಿ. ಒಮ್ಮೆ ಶಾಪಿಂಗ್ ಹೋದರೆ ದುಡ್ಡಿನ ಲೆಕ್ಕಾಚಾರ ಮರೆತೇ ಹೋಗುವಂತೆ ಶಾಪಿಂಗ್ ಮಾಡಿಬಿಡುತ್ತಾರೆ. ಆದರೆ ಈ ಮಹಿಳೆಯ ಕಥೆ ಕೇಳಿಬಿಟ್ಟರೆ ಎಲ್ಲೆ ಮೀರಿ ಖರ್ಚು ಮಾಡುವ ಹೆಣ್ಣು ಮಕ್ಕಳೂ ಕೂಡ ಬಾಯಿ ಮೇಲೆ ಬೆರಳಿಡುತ್ತಾರೆ. ಏಕೆಂದರೆ ಈ ಮಹಿಳೆ ಒಮ್ಮೆ ಶಾಪಿಂಗ್‌ಗೆಂದು ಹೋದರೆ ಖರ್ಚು ಮಾಡುವುದು ಬರೋಬ್ಬರಿ 70 ಲಕ್ಷ ರೂ. (Viral News) ಅಂತೆ!
ಹೌದು ದುಬೈನ ಇನ್‌ಫ್ಲೂಯೆನ್ಸರ್ ಆಗಿರುವ ಸೌದಿ ಈ ರೀತಿಯಲ್ಲಿ ಹೇಳಿಕೊಂಡಿದ್ದಾಳೆ. ಆಕೆಯ ಗಂಡ ಜಮಾಲ್ ದುಬೈನ ಶ್ರೀಮಂತರಲ್ಲಿ ಒಬ್ಬನಂತೆ. ಹಾಗಾಗಿ ಆಕೆ ಒಮ್ಮೆ ಶಾಪಿಂಗ್‌ಗೆಂದು ಹೋದರೆ 70 ಲಕ್ಷ ರೂ.ವರೆಗೂ ಖರ್ಚು ಮಾಡಿ ಬರುತ್ತಾಳಂತೆ. ಅಂದ ಹಾಗೆ ಆಕೆ ಮಾಮೂಲಿ ವಸ್ತುಗಳನ್ನು ಮುಟ್ಟುವುದೇ ಇಲ್ಲವಂತೆ. ಆಕೆ ಬಳಸುವ ಪ್ರತಿ ವಸ್ತುವೂ ಬ್ರ್ಯಾಂಡೆಡ್ ವಸ್ತುವಂತೆ.
ಇದನ್ನೂ ಓದಿ: Viral News : ಸರ್ಕಾರಿ ಶಾಲೆಯ ಬಿಸಿಯೂಟದಲ್ಲಿ ಸಿಕ್ಕಿತು ಹಾವು! ಹಲವು ಮಕ್ಕಳು ಅಸ್ವಸ್ಥ
ಈ ಸೌದಿ ಟಿಕ್‌ಟಾಕ್‌ನಲ್ಲಿ ತನ್ನ ಬಗ್ಗೆ ಸಾಕಷ್ಟು ವಿಡಿಯೊಗಳನ್ನು ಮಾಡಿ ಬಿಟ್ಟಿದ್ದಾಳೆ. ಪ್ರತಿ ದಿನ ರಾತ್ರಿ ಆಕೆಯ ಪತಿ ಆಕೆಗೆ ಸರ್ಪೈಸ್ ಕೊಟ್ಟೇ ಮಲಗಿಸುವುದಂತೆ. ಹಾಗೆಯೇ ಒಮ್ಮೊಮ್ಮೆ ಲಕ್ಷಗಟ್ಟಲೆ ಹಣ ಕೊಟ್ಟು ಪೂರ್ತಿ ರೆಸ್ಟೋರೆಂಟ್ ಅನ್ನೇ ಬುಕ್ ಮಾಡಿಬಿಡುತ್ತಾನಂತೆ. ಆ ದಿನಕ್ಕೆ ಯಾವ ಬಟ್ಟೆ ಹಾಕಬೇಕು ಎಂದು ನಿರ್ಧರಿಸಿ ಅದನ್ನು ಕಳುಹಿಸಿಕೊಟ್ಟು ರೆಡಿಯಾಗುವುದಕ್ಕೆ ಹೇಳುತ್ತಾನಂತೆ.
ಈ ಜೋಡಿ ಈಗಾಗಲೇ ಸಾಕಷ್ಟು ದೇಶಗಳನ್ನು ಪ್ರವಾಸ ಮಾಡಿದೆಯಂತೆ. ಮೂರ್ನಾಲ್ಕು ತಿಂಗಳಿಗೆ ಒಮ್ಮೆಯಾದರೂ ಲಂಡನ್‌ಗೆ ಹೋಗುತ್ತಿರುತ್ತಾರಂತೆ. ಎಲ್ಲಿಗೇ ಹೋದರೂ ಲಕ್ಷಗಟ್ಟಲೆ ಹಣ ಖರ್ಚಾಗುತ್ತದೆಯಂತೆ. ಇತ್ತೀಚೆಗೆ ಮಾಲ್ಡೀವ್ಸ್ ಪ್ರಯಾಣ ಮಾಡಿದ್ದಾರಂತೆ. ಅದಕ್ಕೆಂದು ಅವರಿಗೆ 13 ಲಕ್ಷ ರೂ. ಖರ್ಚಾಗಿದೆಯಂತೆ. ಹಾಗೆಯೇ ಸೌದಿ ಬಳಿ ಕೆಜಿಗಟ್ಟಲೆ ಚಿನ್ನಾಭರಣವಿದ್ದು, ಅದನ್ನೂ ಆಕೆ ವಿಡಿಯೊ ಮಾಡಿ ಹಂಚಿಕೊಂಡಿದ್ದಾರೆ.
ವೈರಲ್ ನ್ಯೂಸ್
Viral News : ಸರ್ಕಾರಿ ಶಾಲೆಯ ಬಿಸಿಯೂಟದಲ್ಲಿ ಸಿಕ್ಕಿತು ಹಾವು! ಹಲವು ಮಕ್ಕಳು ಅಸ್ವಸ್ಥ
ಸರ್ಕಾರಿ ಶಾಲೆಯಲ್ಲಿ ಕೊಡಲಾಗುವ ಬಿಸಿಯೂಟದಲ್ಲಿ ಹಾವು ಸಿಕ್ಕಿರುವ ಘಟನೆ ಬಿಹಾರದಲ್ಲಿ (Viral News) ನಡೆದಿದೆ. ಊಟ ಸೇವಿಸಿರುವ ಹಲವಾರು ಮಕ್ಕಳು ಅಸ್ವಸ್ಥರಾಗಿದ್ದಾರೆ.
ಪಾಟ್ನಾ: ಸರ್ಕಾರಿ ಶಾಲೆಯ ಮಕ್ಕಳಿಗೆಂದು ಸರ್ಕಾರ ಬಿಸಿಯೂಟ ಯೋಜನೆ ನಡೆಸುತ್ತಿದೆ. ಆದರೆ ಅದೇ ಊಟದಲ್ಲಿ ಹಾವು (Snake Found In Mid-Day Meal) ಸಿಕ್ಕಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಅಲ್ಲಿನ ಅರಾರಿಯಾ ಜಿಲ್ಲೆಯ ಫೋರ್ಬ್ಸ್‌ಗಂಜ್ ನಗರದಲ್ಲಿ ಈ ಘಟನೆ ನಡೆದಿದೆ. ಬಿಸಿಯೂಟ ಮಾಡಿರುವ ಅನೇಕ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸುದ್ದಿ ಈಗ ಭರ್ಜರಿ ವೈರಲ್ ((Viral News) ಆಗುತ್ತಿದೆ.
ಎನ್‌ಜಿಒ ಒಂದು ತಯಾರಿಸಿದ್ದ ಕಿಚಡಿಯನ್ನು ಶಾಲೆಯ ಮಕ್ಕಳಿಗೆ ಬಡಿಸಲಾಗಿತ್ತು. ಅದರಲ್ಲಿ ವಿದ್ಯಾರ್ಥಿಯೊಬ್ಬರಿಗೆ ಸತ್ತು ಬಿದ್ದಿರುವ ಹಾವು ಸಿಕ್ಕಿದೆ. ಅದು ಕಂಡೊಡನೆ ಗಾಬರಿಗೊಂಡ ಶಿಕ್ಷಕರು ಬಿಸಿಯೂಟ ಹಾಕುವುದನ್ನು ನಿಲ್ಲಿಸುವಂತೆ ತಿಳಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಹಲವು ಮಕ್ಕಳು ಊಟ ಮಾಡಿಬಿಟ್ಟಿದ್ದರು. ಅವರಿಗೆ ಕೆಲ ಸಮಯದಲ್ಲೇ ವಾಂತಿ ಸೇರಿ ಕೆಲವು ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ಫೋರ್ಬ್ಸ್‌ಗಂಜ್‌ನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ.
ಇದನ್ನೂ ಓದಿ: Viral Video: ಸಲ್ಮಾನ್ ಖಾನ್ರನ್ನು ಮಾತಾಡಿಸಲು ಬಂದ ವಿಕ್ಕಿ ಕೌಶಲ್ಗೆ ಅವಮಾನ?-ಬಾಡಿಗಾರ್ಡ್ಸ್ ಮಾಡಿದ್ದೇನು?
ಶಾಲೆಯಲ್ಲಿ ಈ ರೀತಿಯ ಘಟನೆ ನಡೆದಿರುವುದು ತಿಳಿಯುತ್ತಿದ್ದಂತೆಯೇ ಎಸ್‌ಡಿಎಂ, ಎಸ್‌ಡಿಒ ಮತ್ತು ಡಿಎಸ್‌ಪಿ ಸೇರಿದಂತೆ ಅನೇಕ ಅಧಿಕಾರಿಗಳು ಶಾಲೆಗೆ ಹಾಗೂ ಅಸ್ವಸ್ಥ ವಿದ್ಯಾರ್ಥಿಗಳನ್ನು ದಾಖಲಿಸಲಾಗಿರುವ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಹಾಗೆಯೇ ಈ ಘಟನೆಯ ಬಗ್ಗೆ ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ. ಘಟನೆಯ ಬಗ್ಗೆ ಹೆಚ್ಚಿನ ವರದಿ ಇನ್ನೂ ಬರಬೇಕಿದೆ.
ದೇಶ
96 ಸಾವಿರ ರೂ.ಮೌಲ್ಯದ ಮೊಬೈಲ್ಗಾಗಿ 21 ಲಕ್ಷ ಲೀಟರ್ ನೀರು ಖಾಲಿ ಮಾಡಿಸಿದ ಸರ್ಕಾರಿ ಅಧಿಕಾರಿ
ಸೋಮವಾರದಿಂದ ಶುರುವಾದ ನೀರು ಖಾಲಿ ಮಾಡುವ ಕಾರ್ಯ ಗುರುವಾರದವರೆಗೆ ಅಂದರೆ ಮೂರು ದಿನಗಳ ಕಾಲ ನಡೆಯಿತು. ನೀರು ಸಂಪೂರ್ಣವಾಗಿ ಖಾಲಿಯಾಗುವ ಹಂತದಲ್ಲಿ ಇದ್ದಾಗ ಅಲ್ಲಿಗೆ ಧಾವಿಸಿದ ನೀರಾವರಿ ಇಲಾಖೆ ಅಧಿಕಾರಿಯೊಬ್ಬರು ಸ್ವಲ್ಪ ಕಠಿಣವಾಗಿ ಬೈದು ಪಂಪ್ಸೆಟ್ಗಳನ್ನೆಲ್ಲ ಆಫ್ ಮಾಡಿಸಿದ್ದಾರೆ.
ಈಗಿನ ಕಾಲದಲ್ಲಿ ಮನುಷ್ಯನಿಗೆ ಮೊಬೈಲ್ನಷ್ಟು ‘ಅಮೂಲ್ಯ’ ವಸ್ತು ಇನ್ನೊಂದು ಇರಲಿಕ್ಕೆ ಇಲ್ಲ ಬಿಡಿ !. ಏನಿರತ್ತದೆಯೋ ಬಿಡುತ್ತದೆಯೋ ಕೈಯಲ್ಲಿ ಮೊಬೈಲ್ ಅಂತೂ ಇರಲೇಬೇಕು. ಅದು ಕಳೆದು ಹೋದರೆ, ಕೆಟ್ಟು ಹೋದರೆ ಆಗುವ ಚಡಪಡಿಕೆ ಅಷ್ಟಿಷ್ಟಲ್ಲ. ಒಟ್ನಲ್ಲಿ ಮೊಬೈಲ್ ಅನ್ನೋದು ಜೀವನದ ಬೇಸಿಕ್ ಅವಶ್ಯಕತೆ ಎಂಬಂತಾಗಿದೆ. ಅಂಥ ಅಮೂಲ್ಯವಾದ ಮೊಬೈಲ್ನ್ನು ಕಳೆದುಕೊಂಡ ಛತ್ತೀಸ್ಗಢ ಸರ್ಕಾರಿ ಆಸ್ಪತ್ರೆ ಅಧಿಕಾರಿಯೊಬ್ಬ, ಜಲಾಶಯದಲ್ಲಿದ್ದ 21 ಲಕ್ಷ ಲೀಟರ್ ನೀರನ್ನು ಖಾಲಿ ಮಾಡಿಸಿ (Drains 21 Lakh Litres Water), ಈಗ ಅಮಾನತುಗೊಂಡಿದ್ದಾರೆ !
ಛತ್ತೀಸ್ಗಢ್ನ ಕೋಯಾಲಿಬೇಡಾ ಬ್ಲಾಕ್ನ ಆಹಾರ ಅಧಿಕಾರಿ (Food Inspector) ರಾಜೇಶ್ ವಿಶ್ವಾಸ್ ಈಗ ತಮ್ಮ ಮೂರ್ಖತನದ ನಿರ್ಧಾರದಿಂದಾಗಿ ಅಮಾನತುಗೊಂಡಿದ್ದಾರೆ. ಇವರು ಭಾನುವಾರ ರಜಾದಿನ ಕಳೆಯಲು ಖೇರ್ಕಟ್ಟಾ ಪರಕೋಟ್ ಎಂಬ ಜಲಾಶಯದ ಬಳಿ, ಸ್ನೇಹಿತರೊಟ್ಟಿಗೆ ಹೋಗಿದ್ದರು. ಆಗ ಅವರ ಕೈಯಲ್ಲಿದ್ದ 96 ಸಾವಿರ ರೂಪಾಯಿ ಮೌಲ್ಯದ ಸ್ಯಾಮ್ಸಂಗ್ ಎಸ್23 ಮೊಬೈಲು ಜಲಾಶಯದ ನೀರಲ್ಲಿ, 15 ಅಡಿ ಆಳಕ್ಕೆ ಬಿದ್ದು ಹೋಯಿತು.
ಮೊಬೈಲ್ ಬೀಳುತ್ತಿದ್ದಂತೆ ರಾಜೇಶ್ ವಿಶ್ವಾಸ್ ಗಾಬರಿಗೊಂಡರು. ಸ್ಥಳೀಯರು ಕೆಲವರು ಈಜು ಬರುವವರು ಜಲಾಶಯಕ್ಕೆ ಧುಮುಕಿ ಹುಡುಕಿದ್ದಾರೆ. ಆದರೆ ಎಷ್ಟೇ ಹುಡುಕಿದರೂ ಮೊಬೈಲ್ ಸಿಗಲಿಲ್ಲ. 96 ಸಾವಿರ ಮೊಬೈಲ್ ಅದು. ಹೀಗಾಗಿ ಅದನ್ನು ನೀರಿನಲ್ಲಿ ಬಿಟ್ಟು ಹೋಗಲೂ ರಾಜೇಶ್ಗೆ ಇಷ್ಟವಿರಲಿಲ್ಲ. ಕೂಡಲೇ ನೀರಾವರಿ ಇಲಾಖೆ ಕಚೇರಿಗೆ ಭೇಟಿ ಕೊಟ್ಟು, ಮೊಬೈಲ್ ಹೇಗೆ ಪಡೆಯಬಹುದು ಎಂಬ ಬಗ್ಗೆ ಚರ್ಚೆ ನಡೆಸಿದರು. ಜಲಾಶಯದ ನೀರು ಖಾಲಿ ಮಾಡಿಸಿಕೊಡುವಂತೆ ಮನವಿಯನ್ನೂ ಮಾಡಿದರು. ಆದರೆ ನೀರಾವರಿ ಇಲಾಖೆಯವರು ಈ ಸಮಸ್ಯೆ ಬಗ್ಗೆ ಏನೂ ಸ್ಪಂದಿಸಲಿಲ್ಲ. ಅದಾದ ಬಳಿಕ ರಾಜೇಶ್ ವಿಶ್ವಾಸ್ ಅವರೇ ಖುದ್ದಾಗಿ 30 ಎಚ್ಪಿ ಡೀಸೆಲ್ ಪಂಪ್ಗಳನ್ನು ಜಲಾಶಯಕ್ಕೆ ತರಿಸಿ, ಅದರಲ್ಲಿದ್ದ ಅಷ್ಟೂ ನೀರನ್ನೂ ಖಾಲಿ ಮಾಡಿಸಿದ್ದಾರೆ.
ಇದನ್ನೂ ಓದಿ: Honnavara News: ಸಣ್ಣ ನೀರಾವರಿ ಇಲಾಖೆಯ ಭ್ರಷ್ಟಾಚಾರದಿಂದ ರೈತರಿಗೆ ಸಂಕಟ: ಅನಂತ ನಾಯ್ಕ ಆರೋಪ
ಸೋಮವಾರದಿಂದ ಶುರುವಾದ ನೀರು ಖಾಲಿ ಮಾಡುವ ಕಾರ್ಯ ಗುರುವಾರದವರೆಗೆ ಅಂದರೆ ಮೂರು ದಿನಗಳ ಕಾಲ ನಡೆಯಿತು. ನೀರು ಸಂಪೂರ್ಣವಾಗಿ ಖಾಲಿಯಾಗುವ ಹಂತದಲ್ಲಿ ಇದ್ದಾಗ ಅಲ್ಲಿಗೆ ಧಾವಿಸಿದ ನೀರಾವರಿ ಇಲಾಖೆ ಅಧಿಕಾರಿಯೊಬ್ಬರು ಸ್ವಲ್ಪ ಕಠಿಣವಾಗಿ ಬೈದು ಪಂಪ್ಸೆಟ್ಗಳನ್ನೆಲ್ಲ ಆಫ್ ಮಾಡಿಸಿದ್ದಾರೆ. ಅಷ್ಟರಲ್ಲಿ 21 ಲಕ್ಷ ಅಂದರೆ 41,104 ಕ್ಯೂಬಿಕ್ ಮೀಟರ್ಗಳಷ್ಟು ನೀರು ಒಣ ಹೊಲಗಳಿಗೆ ಹರಿದುಹೋಗಿತ್ತು. ನೀರು ದುರ್ಬಳಕೆಯಾಗಿತ್ತು. ಇನ್ನು ಮೊಬೈಲ್ ಕೂಡ ಸಿಕ್ಕಿದೆ. ಆದರೆ ಪ್ರಯೋಜನವೇನು? ಮೂರು ದಿನ ನೀರಿನಲ್ಲಿಯೇ ಇದ್ದ 96ಸಾವಿರ ರೂ.ಮೌಲ್ಯದ ಮೊಬೈಲ್ ಸಂಪೂರ್ಣ ಹಾಳಾಗಿದೆ. ಆದರೆ ಈ ಜಲಾಶಯದಿಂದ ಸುತ್ತಮುತ್ತ 1500 ಎಕರೆ ಕೃಷಿ ಭೂಮಿಗೆ ನೀರು ಸರಬರಾಜು ಆಗುತ್ತದೆ. ಆದರೆ ಒಂದು ಮೊಬೈಲ್ಗಾಗಿ ಅಷ್ಟೂ ನೀರನ್ನು ವ್ಯರ್ಥ ಮಾಡಿದ್ದು ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ. ಯಾವುದೇ ಮೊಬೈಲ್ ಆದರೂ ನೀರಿನಲ್ಲಿ ಮುಳುಗಿ ಬಹುಕಾಲ ಇದ್ದರೆ ಅದು ಹಾಳಾಗುತ್ತದೆ ಎಂಬ ಕಾಮನ್ ಸೆನ್ಸ್ ಕೂಡ ಆ ಅಧಿಕಾರಿಗೆ ಇಲ್ಲವಲ್ಲ. ಅದಕ್ಕಾಗಿ ಇಷ್ಟು ನೀರನ್ನು ಖಾಲಿ ಮಾಡಿಸಬೇಕಿತ್ತಾ? ಎಂದು ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಮರ್ಥನೆ ಮಾಡಿಕೊಂಡ ಅಧಿಕಾರಿ?!
ಇಷ್ಟೆಲ್ಲ ಆದ ಮೇಲೆ ರಾಜೇಶ್ ವಿಶ್ವಾಸ್ ಅವರು ತಮ್ಮ ಕೆಲಸವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಜಲಾಶಯದಲ್ಲಿ ಇದ್ದ ಆ ನೀರು ಕೃಷಿ ಭೂಮಿ ನೀರಾವರಿಗಾಗಿ ಇದ್ದಿದ್ದಲ್ಲ. ಅದು ತ್ಯಾಜ್ಯದ ನೀರಾಗಿತ್ತು. ಇನ್ನು ಮೊಬೈಲ್ನಲ್ಲಿ ಮಹತ್ವದ ದಾಖಲೆಗಳು, ಅನೇಕರ ಸಂಪರ್ಕ ನಂಬರ್ಗಳು ಇದ್ದವು. 3-4 ಅಡಿ ನೀರನ್ನು ಖಾಲಿ ಮಾಡಲು ಕಂಕೇರ್ ನೀರಾವರಿ ಡಿಪಾರ್ಟ್ಮೆಂಟ್ನ ಮುಖ್ಯಾಧಿಕಾರಿ ಅನುಮತಿ ಕೊಟ್ಟಿದ್ದರು. ಡೀಸೆಲ್ ಪಂಪ್ನಿಂದ ನೀರು ಖಾಲಿ ಮಾಡಿದ್ದೇವೆ. ಇದಕ್ಕೆ 7000 ರೂ.-8000 ರೂ.ವರೆಗೆ ಖರ್ಚು ಆಗಿದೆ. ಯಾವುದೇ ರೈತರಿಗೂ ತೊಂದರೆಯಾಗಿಲ್ಲ ಎಂದಿದ್ದಾರೆ. ಆದರೆ ಈ ವಿಷಯ ಮಾಧ್ಯಮಗಳಲ್ಲಿ ದೊಡ್ಡದಾಗುತ್ತಿದ್ದಂತೆ ರಾಜೇಶ್ ವಿಶ್ವಾಸ್ ಅಮಾನತುಗೊಂಡಿದ್ದಾರೆ.
ವೈರಲ್ ನ್ಯೂಸ್
Viral News: ಆಗಸದಲ್ಲೇ ತೆಗೆದುಕೊಂಡಿತು ವಿಮಾನದ ಬಾಗಿಲು! ಭಯಾನಕ ದೃಶ್ಯದ ವಿಡಿಯೊ ಸೆರೆ
ಆಗಸದಲ್ಲಿ ಹಾರುತ್ತಿದ್ದ ಏಷಿಯನ್ ಏರ್‌ಲೈನ್ ವಿಮಾನದ ಬಾಗಿಲು ತೆರೆದುಕೊಂಡ ಘಟನೆ ದಕ್ಷಿಣ ಕೋರಿಯಾದಲ್ಲಿ ನಡೆದಿದೆ. 194 ಮಂದಿ ಇದ್ದ ವಿಮಾನ ಸುರಕ್ಷಿತವಾಗಿ ಭೂಸ್ಪರ್ಶ (Viral News) ಮಾಡಿದೆ.
ದಕ್ಷಿಣ ಕೋರಿಯಾ: ಇತ್ತೀಚೆಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ವಿಮಾನದ ಎಮರ್ಜೆನ್ಸಿ ಎಕ್ಸಿಟ್ ಡೋರ್ ತೆಗೆಯಲು ಪ್ರಯತ್ನಿಸಿದ್ದರು ಎಂಬ ಸುದ್ದಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಈಗ ಅಂಥದ್ದೇ ಒಂದು ಘಟನೆ ದಕ್ಷಿಣ ಕೊರಿಯಾದಲ್ಲಿ ನಡೆದಿದೆ. ಶುಕ್ರವಾರ ಏಷಿಯನ್ ಏರ್‌ಲೈನ್‌ನ ವಿಮಾನ ಡಯೆಗು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡುವ ಸಮಯದಲ್ಲಿ ಈ ಘಟನೆ ನಡೆದಿದ್ದಾಗಿ (Viral News) ವರದಿಯಾಗಿದೆ.
ವಿಮಾನದಲ್ಲಿ ಒಟ್ಟು 194 ಮಂದಿ ಪ್ರಯಾಣಿಸುತ್ತಿದ್ದು, ಈ ಘಟನೆಯಿಂದ ಯಾರಿಗೂ ಯಾವುದೇ ತೊಂದರೆಯಾಗಿಲ್ಲ ಎಂದು ಹೇಳಲಾಗಿದೆ. ವಿಮಾನವನ್ನು ಸುರಕ್ಷಿತವಾಗಿ ಭೂಸ್ಪರ್ಶ ಮಾಡಿಸಲಾಗಿದೆ. ಬಾಗಿಲ ಬಳಿ ಕುಳಿತಿದ್ದ ಆರು ಮಂದಿಗೆ ಉಸಿರಾಟ ತೊಂದರೆಯುಂಟಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಾಗಿ ಗಾಳಿ ನುಗ್ಗಿದ್ದರಿಂದ ಅವರಿಗೆ ಸಮಸ್ಯೆಯಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: Viral News : ಈಗಲೂ ಬಡತನದಲ್ಲೇ ಬೇಯುತ್ತಿದ್ದಾರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ತಂದು ಕೊಟ್ಟ ʼಸ್ಮೈಲ್ ಪಿಂಕಿʼ
ಬಾಗಿಲ ಬಳಿ ಕುಳಿತಿದ್ದ 30 ವರ್ಷ ಆಸುಪಾಸಿನ ವ್ಯಕ್ತಿಯೊಬ್ಬರು ಬಾಗಿಲನ್ನು ಕಾಲಿನಿಂದ ಒತ್ತಿದ್ದರಿಂದಾಗಿ ಬಾಗಿಲು ತೆರೆದುಕೊಂಡಿದೆ ಎನ್ನಲಾಗಿದೆ. ಈ ಸಂಬಂಧ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಆತನ ಈ ನಡವಳಿಕೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ.
#ÚLTIMAHORA
— 𝙈𝙖𝙧𝙞𝙤 𝙈𝙤𝙧𝙖𝙮 (@Mario_Moray) May 26, 2023
La puerta de un #avión de #AsianaAirlines se abrió en el aire antes de aterrizar. Seis pasajeros sufrieron dificultad para respirar, informó Noticias Yonhap.
El avión de Asiana Airlines aterrizó de forma segura en el Aeropuerto Internacional de #Daegu. pic.twitter.com/hfnDsNrTDk
ವಿಮಾನದ ಬಾಗಿಲು ತೆರೆದಾಗ ಗಾಳಿ ಒಳಗೆ ನುಗ್ಗಿದ್ದನ್ನು ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ವಿಡಿಯೊ ಮಾಡಿದ್ದಾರೆ. ಅದರಲ್ಲಿ ಗಾಳಿಯ ಎಷ್ಟು ರಭಸದಲ್ಲಿ ನುಗ್ಗಿದೆ ಎನ್ನುವುದನ್ನು ಕಾಣಬಹುದಾಗಿದೆ. ವಿಡಿಯೊದ ಕೊನೆಯಲ್ಲಿ ವಿಮಾನ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದೆ ಎಂದು ತೋರಿಸುವ ನಿಟ್ಟಿನಲ್ಲಿ ವಿಮಾನ ನಿಲ್ದಾಣದ ವಿಡಿಯೊವನ್ನು ತೋರಿಸಲಾಗಿದೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡುತ್ತಿದ್ದು, ವೈರಲ್ ಆಗಿದೆ.
-
ಸುವಚನ18 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕರ್ನಾಟಕ9 hours ago
ವಿಸ್ತಾರ ಯುಗಾದಿ ಕಥಾ ಸ್ಪರ್ಧೆ ಬಹುಮಾನ: ಚಂದ್ರಶೇಖರ್ ಡಿ.ಆರ್ ಪ್ರಥಮ, ದಾದಾಪೀರ್ ಜೈಮನ್ ದ್ವಿತೀಯ, ಪೂರ್ಣಿಮಾ ಮಾಳಗಿಮನಿ ತೃತೀಯ
-
ಕರ್ನಾಟಕ12 hours ago
Karnataka Cabinet Expansion Live : 34 ಸಚಿವರಿಗೆ ಖಾತೆ ಹಂಚಿಕೆ; ಬಯಸಿದ ಖಾತೆ ಪಡೆದ ಡಿ ಕೆ ಶಿವಕುಮಾರ್
-
ಕರ್ನಾಟಕ24 hours ago
RP Ashok: ಇನ್ಸ್ಪೆಕ್ಟರ್ ಆರ್.ಪಿ.ಅಶೋಕ್ಗೆ ಆರ್ಯಭಟ ಪ್ರಶಸ್ತಿ ಪ್ರದಾನ
-
ಉತ್ತರ ಕನ್ನಡ23 hours ago
Honnavar News: ಕಾರಿಗೆ ಡಿಕ್ಕಿ ಹೊಡೆದು ಖಾಸಗಿ ಬಸ್ ಪಲ್ಟಿ, 30 ಮಂದಿಗೆ ಗಾಯ
-
ಪ್ರಮುಖ ಸುದ್ದಿ23 hours ago
ವಿಸ್ತಾರ ಸಂಪಾದಕೀಯ: ರಾಜ್ಯಾದ್ಯಂತ ಗ್ಯಾರಂಟಿ ಭರವಸೆಯ ಗದ್ದಲ, ಹೊಸ ಸರ್ಕಾರ ಗೊಂದಲ ನಿವಾರಿಸಲಿ
-
ಕರ್ನಾಟಕ9 hours ago
Karnataka Cabinet Expansion: ಪ್ರಮಾಣ ವಚನ ಸಮಾರಂಭ ಬಹಿಷ್ಕಾರ; ಊರಿಗೆ ಹೊರಟ ಒಂದೇ ಜಿಲ್ಲೆಯ 5 ಶಾಸಕರು!
-
ಕ್ರಿಕೆಟ್23 hours ago
IPL 2023: ಟೈಟನ್ಸ್ ರನ್ ಮಳೆಗೆ ಮುಳುಗಿದ ಮುಂಬೈ; ಫೈನಲ್ಗೆ ಹಾರ್ದಿಕ್ ಪಡೆ