Viral News: ಸಿಂಹದ ಹಿಂಡನ್ನೇ ಹಿಮ್ಮೆಟ್ಟಿಸಿದ ಕಾಡುಕೋಣಗಳು; ರೋಮಾಂಚನಕಾರಿ ವಿಡಿಯೊ ನೀವೂ ನೋಡಿ - Vistara News

ವೈರಲ್ ನ್ಯೂಸ್

Viral News: ಸಿಂಹದ ಹಿಂಡನ್ನೇ ಹಿಮ್ಮೆಟ್ಟಿಸಿದ ಕಾಡುಕೋಣಗಳು; ರೋಮಾಂಚನಕಾರಿ ವಿಡಿಯೊ ನೀವೂ ನೋಡಿ

Viral News: ಕಾಡುಕೋಣಗಳ ಹಿಂಡೊಂದು ದಾಳಿ ನಡೆಸಲು ಬರುವ ಸಿಂಹಗಳ ಗುಂಪನ್ನು ಬೆದರಿಸಿ ಓಡಿಸುವ ವಿಡಿಯೊ ವೈರಲ್‌ ಆಗಿದೆ. ಕೀನ್ಯಾದ ಮಸೈ ಮಾರ ರಾಷ್ಟ್ರೀಯ ಉದ್ಯಾನ (Masai mara national park)ದಲ್ಲಿ ಈ ಅಪರೂಪದ ಘಟನೆ ನಡೆದಿದೆ. ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಲಾದ ಈ ವಿಡಿಯೊವನ್ನು ಸದ್ಯ ಲಕ್ಷಾಂತರ ಮಂದಿ ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ. ಕಾಡುಕೋಣಗಳ ಧೈರ್ಯ, ಒಗ್ಗಟ್ಟನ್ನು ಹೊಗಳಿದ್ದಾರೆ.

VISTARANEWS.COM


on

Viral News
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ನವದೆಹಲಿ: ಪ್ರಾಣಿಗಳ ಪ್ರಪಂಚ ಸದಾ ಕುತೂಹಲಕಾರಿಯಾಗಿರುತ್ತದೆ. ಕೌತುಕ ಕಣ್ಣುಗಳಿಂದ ನೋಡುವಂತೆ ಮಾಡುತ್ತದೆ. ಪ್ರಾಣಿಗಳ ಚಲನವಲನ, ಬುದ್ಧಿವಂತಿಕೆ, ಬೇಟೆಯಾಡುವ ರೀತಿ ಇತ್ಯಾದಿ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತವೆ. ಸದ್ಯ ಅಂತಹದ್ದೇ ದೃಶ್ಯವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಕಾಡುಕೋಣಗಳ ಹಿಂಡೊಂದು ದಾಳಿ ನಡೆಸಲು ಬರುವ ಸಿಂಹಗಳ ಗುಂಪನ್ನು ಬೆದರಿಸಿ ಓಡಿಸುವ ವಿಡಿಯೊ ಇದಾಗಿದ್ದು, ನೆಟ್ಟಿಗರು ನೋಡಿ ರೋಮಾಂಚನಗೊಂಡಿದ್ದಾರೆ. ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವ ಗಾದೆಯನ್ನು ಉದ್ಘರಿಸಿದ್ದಾರೆ (Viral News).

ಕೀನ್ಯಾದ ಮಸೈ ಮಾರ ರಾಷ್ಟ್ರೀಯ ಉದ್ಯಾನ (Masai mara national park)ದಲ್ಲಿ ಈ ಅಪರೂಪದ ಘಟನೆ ನಡೆದಿದೆ. ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಲಾದ ಈ ವಿಡಿಯೊವನ್ನು ಸದ್ಯ ಲಕ್ಷಾಂತರ ಮಂದಿ ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ. ಕಾಡುಕೋಣಗಳ ಧೈರ್ಯ, ಒಗ್ಗಟ್ಟನ್ನು ಹೊಗಳಿದ್ದಾರೆ.

ವಿಡಿಯೊದಲ್ಲಿ ಏನಿದೆ?

ಹುಲ್ಲುಗಾವಲಿನಲ್ಲಿ ಕಾಡುಕೋಣವೊಂದು ಮೇಯುತ್ತಿರುತ್ತದೆ. ಆಗ ಅಲ್ಲಿಗೆ ಏಳೆಂಟು ಸಿಂಹಗಳ ಗುಂಪು ಲಗ್ಗೆ ಇಡುತ್ತದೆ. ಇಂದು ಭರ್ಜರಿ ಬೇಟೆ ಎಂದು ಲೆಕ್ಕ ಹಾಕುವ ಸಿಂಹಗಳ ಗುಂಪು ಕಾಡುಕೋಣವನ್ನು ಸುತ್ತುವರಿಯುತ್ತದೆ. ಕಾಡುಕೋಣ ಕಡಿಮೆ ಆಸಾಮಿಯೇನಲ್ಲ. ತನ್ನ ಬಳಿಗೆ ಬರುವ ಸಿಂಹಗಳನ್ನು ಬೆದರಿಸುತ್ತದೆ. ಅಲ್ಲಿಂದ ಓಡಿಸಲು ಯತ್ನಿಸುತ್ತದೆ.

ದೈತ್ಯದೇಹಿ ಕಾಡುಕೋಣವನ್ನು ಸುಲಭದಲ್ಲಿ ಸಿಂಹಗಳಿಗೆ ಮಣಿಸಲು ಸಾಧ್ಯವಾಗುವುದಿಲ್ಲ. ಅದು ಗುಟುರು ಹಾಕಿ ಒಂದು ಹೆಜ್ಜೆ ಮುಂದಿಟ್ಟಾಗ ಸಿಂಹಗಳು ಭಯದಿಂದ ಎರಡು ಹೆಜ್ಜೆ ಹಿಂದಿಡುತ್ತವೆ. ಕೊನೆ ಹೊಂಚು ಹಾಕಿ ಸಿಂಹವೊಂದು ಹಿಂದಿನಿಂದ ದಾಳಿ ನಡೆಸುತ್ತದೆ. ತನ್ನ ಮೇಲೆ ಎರಗಿದ ಶತ್ರುವನ್ನು ಕಾಡುಕೋಣ ಕೆಡವಲು ಯತ್ನಿಸುತ್ತದೆ. ಬಳಿಕ ಮೂರು ನಾಲ್ಕು ಸಿಂಹಗಳು ಒಮ್ಮೆಲೆ ದಾಳಿ ನಡೆಸಿದಾಗ ಕಾಡುಕೋಣ ತನ್ನ ಹಿಂಡಿನತ್ತ ಓಡುತ್ತದೆ. ಅಲ್ಲಿ ನೂರಾರು ಸಂಖ್ಯೆಯ ಕಾಡುಕೋಣಗಳು ಮೇಯುತ್ತಿರುತ್ತವೆ. ತಮ್ಮವನೊಬ್ಬ ಸಂಕಷ್ಟಕ್ಕೆ ಸಿಲುಕಿರುವುದನ್ನು ನೋಡಿ ಅವು ಓಡೋಡಿ ಬರುತ್ತವೆ.

ಕಾಡುಕೋಣಗಳ ಹಿಂಡನ್ನು ನೋಡಿ ಸಿಂಹದಂತಹ ಸಿಂಹಗಳಿಗೆ ನಡುಕ ಶುರುವಾಗುತ್ತದೆ. ಭರ್ಜರಿ ಬೇಟೆಯ ನಿರೀಕ್ಷೆಯಲ್ಲಿದ್ದ ಅವುಗಳು ಈಗ ಕಾಡುಕೋಣಗಳ ಸೈನ್ಯವನ್ನು ಕಂಡು ಭಯದಿಂದ ಒಂದೊಂದೆ ಹೆಜ್ಜೆ ಹಿಂದಿಡಲು ಆರಂಭಿಸುತ್ತವೆ. ಬಳಿಕ ಕಾಡುಕೋಣಗಳ ಗುಂಪು ಸಿಂಹಗಳನ್ನು ಅಟ್ಟಿಸಿಕೊಂಡು ಬರುತ್ತವೆ. ಬದುಕಿದ್ದರೆ ಬೇಡಿಯಾದರೂ ತಿನ್ನಬಹುದು ಎನ್ನುವಂತೆ ಜೀವ ಉಳಿಸಿಕೊಳ್ಳಲು ಸಿಂಹಗಳು ಅಲ್ಲಿಂದ ಜಾಗ ಖಾಲಿ ಮಾಡುತ್ತವೆ.

ನೆಟ್ಟಿಗರಿಂದ ಶಷಬ್ಬಾಸ್‌ಗಿರಿ

ವಿಡಿಯೊ ನೋಡಿದವರೆಲ್ಲ ಕಾಡುಕೋಣಗಳ ಒಗ್ಗಟ್ಟನ್ನು ಕೊಂಡಾಡುತ್ತಿದ್ದಾರೆ. ಈ ಮೂಕ ಪ್ರಾಣಿಗಳಿಂದ ನಾವು ನೋಡಿ ಕಲಿಯಬೇಕಾದದ್ದು ಬೇಕಾದಷ್ಟಿದೆ ಎಂದು ಕಮೆಂಟ್‌ ಮಾಡಿದ್ದಾರೆ. ʼʼಇಂತಹ ಒಗ್ಗಟ್ಟು ಮನುಷ್ಯರಲ್ಲಿ ಯಾಕಿಲ್ಲ?ʼʼ ಎಂದು ಒಬ್ಬರು ಕೇಳಿದ್ದಾರೆ.

ʼʼಅದೃಷ್ಟವಶಾತ್‌ ದಾಳಿಗೊಳಗಾದ ಈ ಎಳೆಯ ಕೋಣ ಹಿಂಡಿನಿಂದ ತುಂಬ ದೂರ ಹೋಗಿರಲಿಲ್ಲ. ಇಲ್ಲದಿದ್ದರೆ ಅದು ಸಿಂಹಗಳಿಗೆ ಆಹಾರವಾಗುತ್ತಿತ್ತುʼʼ ಎಂದು ಇನ್ನೊಬ್ಬರು ಹೇಳಿದ್ದಾರೆ. “ಸಾವು ಬದುಕಿನ ನಿರ್ಧರಿಸುವ ಈ ನಿರ್ಣಾಯಕ ಘಟ್ಟದಲ್ಲಿ ಕಾಡುಕೋಣ ಉತ್ತಮ ನಡೆ ತೋರಿದೆ. ತನ್ನವರ ಬಳಿಗೆ ಸಾರಿ ಜೀವ ಉಳಿಸಿಕೊಂಡಿದೆʼʼ ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ಈ ಮೂಕ ಪ್ರಾಣಿಗಳ ಸಹಬಾಳ್ವೆ ಹಲವರಲ್ಲಿ ಸಕಾರಾತ್ಮಕ ಭಾವನೆ ಹುಟ್ಟುಹಾಕಿದ್ದಂತೂ ನಿಜ.

ಇದನ್ನೂ ಓದಿ: Viral Video: ಹುಲಿ ಬೆಕ್ಕಿನ ಹಿರಿಯಣ್ಣ ಎನ್ನುವುದು ಇದಕ್ಕೆ; ನೆಟ್ಟಿಗರ ಮನಗೆದ್ದ ವಿಡಿಯೊ ಇಲ್ಲಿದೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ

Latest

ಶಿಸ್ತು ಮರೆತರಾ ರಿಯಾನ್ ಪರಾಗ್? ಕಾನೂನು ಸಂಕಷ್ಟಕ್ಕೆ ಸಿಲುಕುತ್ತಾರಾ ರಾಜಸ್ಥಾನ ರಾಯಲ್ಸ್ ಆಟಗಾರ?

VISTARANEWS.COM


on

ಶಿಸ್ತು ಮರೆತರಾ ರಿಯಾನ್ ಪರಾಗ್? ಕಾನೂನು ಸಂಕಷ್ಟಕ್ಕೆ ಸಿಲುಕುತ್ತಾರಾ ರಾಜಸ್ಥಾನ ರಾಯಲ್ಸ್ ಆಟಗಾರ?

ಪಂಜಾಬ್ ಕಿಂಗ್ಸ್ ವಿರುದ್ಧದ ಐಪಿಎಲ್ ಪಂದ್ಯದ ವೇಳೆ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ದೊಡ್ಡ ವಿವಾದಕ್ಕೆ ಸಿಲುಕಿದ್ದಾರೆ. ಪಂದ್ಯದ ನಡುವೆ ಡ್ರೆಸ್ಸಿಂಗ್ ರೂಮ್‌ನಲ್ಲಿ ಕುಳಿತಿದ್ದ ಪರಾಗ್ ‘ವೇಪಿಂಗ್’ (ಇ-ಸಿಗರೇಟ್) ಬಳಸುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಭಾರತದಲ್ಲಿ 2019 ರಿಂದಲೇ ಇ-ಸಿಗರೇಟ್ ಬಳಕೆಯನ್ನು ನಿಷೇಧಿಸಲಾಗಿದ್ದು, ಸಾರ್ವಜನಿಕವಾಗಿ ಮತ್ತು ಕ್ರೀಡಾಂಗಣದ ಶಿಸ್ತು ಉಲ್ಲಂಘಿಸಿ ಈ ರೀತಿ ನಡೆದುಕೊಂಡಿರುವುದು ಈಗ ಅವರಿಗೆ ಕಾನೂನು ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದ

ಈ ಜವಾಬ್ದಾರಿರಹಿತ ವರ್ತನೆಯಿಂದಾಗಿ ರಿಯಾನ್ ಪರಾಗ್ ಅವರಿಗೆ ಭಾರಿ ದಂಡ ಅಥವಾ ಪಂದ್ಯಗಳಿಂದ ನಿಷೇಧ ಹೇರುವ ಭೀತಿ ಎದುರಾಗಿದೆ. ಭಾರತೀಯ ಕಾನೂನಿನ ಪ್ರಕಾರ ಇ-ಸಿಗರೇಟ್ ಬಳಕೆಯ ಮೊದಲ ಅಪರಾಧಕ್ಕೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ಅಥವಾ ₹1 ಲಕ್ಷದವರೆಗೆ ದಂಡ ವಿಧಿಸಲು ಅವಕಾಶವಿದೆ. ಇದರ ಜೊತೆಗೆ ಬಿಸಿಸಿಐ (BCCI) ಕೂಡ ಕ್ರೀಡಾ ಶಿಸ್ತಿನ ಉಲ್ಲಂಘನೆಗಾಗಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಯುವಕರಿಗೆ ಮಾದರಿಯಾಗಬೇಕಾದ ಆಟಗಾರನ ಈ ವರ್ತನೆಯು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಹಾಗೂ ಐಪಿಎಲ್ ಆಡಳಿತ ಮಂಡಳಿಗೆ ಭಾರಿ ಮುಜುಗರ ತಂದಿದೆ.

Continue Reading

Latest

ಕಿಂಗ್ ಕೊಹ್ಲಿಗಾಗಿ ಪುಟಾಣಿ ಫ್ಯಾನ್ ಹಠ: ಹೋಟೆಲ್ ಸಿಬ್ಬಂದಿ ತಡೆದಿದ್ದಕ್ಕೆ ಕಣ್ಣೀರು ಹಾಕಿದ ಬಾಲಕ

VISTARANEWS.COM


on

ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರಿಗೆ ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಇತ್ತೀಚೆಗೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್‌ಸಿಬಿ ಜಯಗಳಿಸಿದ ನಂತರ, ಹೋಟೆಲ್‌ನಲ್ಲಿ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಕೊಹ್ಲಿ ಅವರ ಆಟೋಗ್ರಾಫ್ ಪಡೆಯಲು ಪುಟಾಣಿ ಬಾಲಕನೊಬ್ಬ ಬ್ಯಾಟ್ ಹಿಡಿದು ಬಹಳ ಹೊತ್ತು ಕಾತರದಿಂದ ಕಾಯುತ್ತಿದ್ದ. ಆದರೆ ಕೊಹ್ಲಿ ಹೋಟೆಲ್‌ಗೆ ಆಗಮಿಸಿದಾಗ ಭದ್ರತಾ ಸಿಬ್ಬಂದಿ ಬಾಲಕನನ್ನು ಹತ್ತಿರ ಹೋಗಲು ಬಿಡದೆ ತಡೆದಿದ್ದಾರೆ. ಇದರಿಂದ ಮನನೊಂದ ಬಾಲಕ ತನ್ನ ಕೈಯಲ್ಲಿದ್ದ ಬ್ಯಾಟನ್ನು ನೆಲಕ್ಕೆ ಎಸೆದು ಗಳಗಳನೇ ಅತ್ತಿದ್ದಾನೆ.

ಹೋಟೆಲ್ ಪ್ರವೇಶಿಸಿದ ವಿರಾಟ್ ಕೊಹ್ಲಿ ಸುತ್ತಲೂ ಸಿಬ್ಬಂದಿಗಳು ಬೌನ್ಸರ್‌ಗಳಂತೆ ನಿಂತು ಯಾರೂ ಹತ್ತಿರ ಸುಳಿಯದಂತೆ ನೋಡಿಕೊಳ್ಳುತ್ತಿದ್ದರು. ಈ ವೇಳೆ ಓಡೋಡಿ ಬಂದ ಬಾಲಕನನ್ನು ಸಿಬ್ಬಂದಿ ಬಲವಂತವಾಗಿ ತಡೆದಿದ್ದಾರೆ. ಇತ್ತ ಕೊಹ್ಲಿ ಕೂಡ ಬಾಲಕನತ್ತ ಗಮನ ಹರಿಸದೆ ನೇರವಾಗಿ ಮುಂದೆ ಸಾಗಿದ್ದಾರೆ. ತನ್ನ ನೆಚ್ಚಿನ ಕ್ರಿಕೆಟಿಗನನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ ಎಂಬ ನೋವಿನಿಂದ ಬಾಲಕ ಪೋಷಕರ ಬಳಿ ತೆರಳಿ ಜೋರಾಗಿ ಅಳಲಾರಂಭಿಸಿದನು. ಪೋಷಕರು ಎಷ್ಟೇ ಸಮಾಧಾನ ಪಡಿಸಿದರೂ ಆ ಪುಟ್ಟ ಅಭಿಮಾನಿಯ ಸಿಟ್ಟು ಮತ್ತು ಬೇಸರ ಮಾತ್ರ ಕಡಿಮೆಯಾಗಲಿಲ್ಲ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. “ಕೊಹ್ಲಿ ಕನಿಷ್ಠ ಪಕ್ಷ ಆ ಮಗುವಿಗೆ ಕೈಬೀಸಿ ವಿಶ್ ಮಾಡಬೇಕಿತ್ತು, ಆಗ ಆ ಮಗುವಿನ ಮುಖದಲ್ಲಿ ನಗು ಮೂಡುತ್ತಿತ್ತು” ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲವರು, “ಕೊಹ್ಲಿಗೆ ಆ ಸಮಯದಲ್ಲಿ ಬಾಲಕ ಅವರ ಗಮನಕ್ಕೆ ಬಂದಿರಲಿಕ್ಕಿಲ್ಲ” ಎಂದು ಸಮರ್ಥಿಸಿಕೊಂಡಿದ್ದಾರೆ. ಏನೇ ಇರಲಿ, ಕ್ರಿಕೆಟ್ ತಾರೆಗಳ ಮೇಲಿರುವ ಅಭಿಮಾನವು ಕೆಲವೊಮ್ಮೆ ಇಂತಹ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಗುವುದು ಸಹಜ ಎಂಬ ಚರ್ಚೆಗಳು ನಡೆಯುತ್ತಿವೆ.

Continue Reading

Latest

ಹಣ ಪಡೆಯಲು ಬ್ಯಾಂಕಿಗೆ ಸಹೋದರಿಯ ಅಸ್ಥಿಪಂಜರವನ್ನೇ ತಂದ ವ್ಯಕ್ತಿ!

VISTARANEWS.COM


on

ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ ಮಾನವೀಯತೆ ಮರೆತ ಬ್ಯಾಂಕ್ ಸಿಬ್ಬಂದಿಯ ನಡೆಗೆ ಇಡೀ ದೇಶವೇ ಮರುಗುವಂತಾಗಿದೆ. ಮೃತ ಸಹೋದರಿಯ ಹೆಸರಿನಲ್ಲಿದ್ದ ಠೇವಣಿ ಹಣವನ್ನು ಹಿಂಪಡೆಯಲು ಹೋದ ಜೀತು ಮುಂಡಾ ಎಂಬ ಅನಕ್ಷರಸ್ಥ ಬುಡಕಟ್ಟು ವ್ಯಕ್ತಿಗೆ, ಬ್ಯಾಂಕ್ ಸಿಬ್ಬಂದಿ ಪದೇ ಪದೇ “ಖಾತೆದಾರಳನ್ನು ಕರೆತನ್ನಿ” ಎಂದು ಕಿರುಕುಳ ನೀಡಿದ್ದಾರೆ. ಆಕೆ ನಿಧನಳಾಗಿದ್ದಾಳೆ ಎಂದು ಹೇಳಿದರೂ ಕೇಳದ ಸಿಬ್ಬಂದಿಯ ವರ್ತನೆಯಿಂದ ಹತಾಶರಾದ ಜೀತು, ಸಾವಿನ ಪುರಾವೆ ತೋರಿಸಲು ಸಮಾಧಿಯನ್ನು ಅಗೆದು ಸಹೋದರಿಯ ಅಸ್ಥಿಪಂಜರವನ್ನೇ ಬ್ಯಾಂಕಿಗೆ ಹೊತ್ತು ತಂದಿದ್ದಾರೆ.

ಈ ವಿಚಿತ್ರ ಮತ್ತು ಆಘಾತಕಾರಿ ಘಟನೆಯಿಂದ ಎಚ್ಚೆತ್ತ ಪೊಲೀಸರು ಹಾಗೂ ಸ್ಥಳೀಯ ಆಡಳಿತವು ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಜೀತು ಮುಂಡಾ ಅವರ ಸಹೋದರಿಯ ಖಾತೆಯಲ್ಲಿದ್ದ ನಾಮಿನಿ ಕೂಡ ಈಗಾಗಲೇ ಮೃತಪಟ್ಟಿದ್ದು, ಕಾನೂನಿನ ಪ್ರಕಾರ ಜೀತು ಅವರೇ ಈ ಹಣಕ್ಕೆ ಏಕೈಕ ಹಕ್ಕುದಾರರಾಗಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಮೃತ ವ್ಯಕ್ತಿಯ ಖಾತೆಯಿಂದ ಹಣ ಹಿಂಪಡೆಯುವ ಸರಳ ನಿಯಮಗಳನ್ನು ವಿವರಿಸುವಲ್ಲಿ ವಿಫಲರಾಗಿ, ಒಬ್ಬ ಅಮಾಯಕ ವ್ಯಕ್ತಿಯನ್ನು ಇಂತಹ ದಾರುಣ ಸ್ಥಿತಿಗೆ ತಳ್ಳಿದ್ದು ನಿಜಕ್ಕೂ ದುರದೃಷ್ಟಕರ.

ಸದ್ಯ ಪೊಲೀಸರ ಸಮ್ಮುಖದಲ್ಲಿ ಅಸ್ಥಿಪಂಜರವನ್ನು ಮರು ಅಂತ್ಯಕ್ರಿಯೆ ಮಾಡಲಾಗಿದ್ದು, ಜೀತು ಮುಂಡಾ ಅವರಿಗೆ ಬರಬೇಕಾದ ಹಣವನ್ನು ಶೀಘ್ರವಾಗಿ ವಿತರಿಸುವಂತೆ ಜಿಲ್ಲಾಡಳಿತವು ಬ್ಯಾಂಕ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಈ ಘಟನೆಯು ಸರ್ಕಾರಿ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸಾಮಾನ್ಯ ಜನರಿಗೆ, ಅದರಲ್ಲೂ ವಿಶೇಷವಾಗಿ ಅನಕ್ಷರಸ್ಥರಿಗೆ ಸಿಗಬೇಕಾದ ಕನಿಷ್ಠ ಗೌರವ ಮತ್ತು ಮಾರ್ಗದರ್ಶನದ ಕೊರತೆಯನ್ನು ಎತ್ತಿ ತೋರಿಸಿದೆ.

Continue Reading

Latest

ಮುಂದೆ ಕಾದಿದೆ ಘೋರ ವಿಪತ್ತು: ಹವಾಮಾನ ವೈಪರಿತ್ಯ, ಅನ್ನ-ನೀರಿಗೂ ಹಾಹಾಕಾರ! ಕೋಡಿ ಶ್ರೀಗಳ ಭಯಾನಕ ಭವಿಷ್ಯಕ್ಕೆ ನಡುಗಿದ ನಾಡು

VISTARANEWS.COM


on

ತಮ್ಮ ನಿಖರ ಭವಿಷ್ಯವಾಣಿಗಳಿಗೆ ಹೆಸರಾಗಿರುವ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು, ಇದೀಗ ದೇಶದ ಭವಿಷ್ಯದ ಕುರಿತು ಭಯಾನಕ ಮುನ್ಸೂಚನೆ ನೀಡಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಮಾತನಾಡಿದ ಶ್ರೀಗಳು, ಹವಾಮಾನ ವೈಪರಿತ್ಯದಿಂದ ಪ್ರಕೃತಿಯಲ್ಲಿ ಭಾರಿ ಏರುಪೇರು ಉಂಟಾಗಲಿದೆ ಎಂದು ಎಚ್ಚರಿಸಿದ್ದಾರೆ. ಈ ಹವಾಮಾನ ಬದಲಾವಣೆಯು ದೇಶದ ಹಲವು ಭಾಗಗಳಲ್ಲಿ ಅನ್ನ ಮತ್ತು ನೀರಿಗಾಗಿ ತೀವ್ರ ಹಾಹಾಕಾರ ಸೃಷ್ಟಿಸಲಿದ್ದು, ಅಪಮೃತ್ಯುಗಳ (ಅಕಾಲಿಕ ಮರಣ) ಸಂಖ್ಯೆ ಹೆಚ್ಚಾಗಲಿದೆ ಎಂಬ ಆಘಾತಕಾರಿ ಭವಿಷ್ಯ ನುಡಿದಿದ್ದಾರೆ.

ಜಾಗತಿಕ ಮಟ್ಟದಲ್ಲಿಯೂ ಭಾರಿ ಅಪಾಯಗಳು ಸಂಭವಿಸುವ ಲಕ್ಷಣಗಳಿವೆ ಎಂದು ಹೇಳಿರುವ ಶ್ರೀಗಳು, 2026ರ ಸಾಲಿನ ಬಗ್ಗೆ ಮಾರ್ಮಿಕವಾಗಿ ಮಾತನಾಡಿದ್ದಾರೆ. ಜಗತ್ತಿನಾದ್ಯಂತ ಜಲಪ್ರಳಯ ಹಾಗೂ ಅಗ್ನಿ ಅವಘಡಗಳಿಂದ ಲಕ್ಷಾಂತರ ಜನರು ಸಾವನ್ನಪ್ಪಿದ್ದಾರೆ, ಆದರೆ ಅತೃಪ್ತ ಆತ್ಮಗಳಿಗೆ ಸರಿಯಾದ ಸಂಸ್ಕಾರ ನಡೆಯದ ಕಾರಣ ಅವು ಮನುಕುಲಕ್ಕೆ ಕಂಟಕವಾಗಲಿವೆ ಎಂದು ಭೀತಿ ವ್ಯಕ್ತಪಡಿಸಿದ್ದಾರೆ. ಹವಾಮಾನ ವೈಪರಿತ್ಯದ ಈ ಭೀಕರತೆಯ ನಡುವೆ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿಯೂ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂದು ಅವರು ಮುನ್ಸೂಚನೆ ನೀಡಿದ್ದಾರೆ.

ಈ ಎಲ್ಲಾ ಆತಂಕಕಾರಿ ಬೆಳವಣಿಗೆಗಳ ನಡುವೆ ಕರ್ನಾಟಕದ ಜನತೆಗೆ ಶ್ರೀಗಳು ಸಮಾಧಾನದ ಸುದ್ದಿಯನ್ನೂ ನೀಡಿದ್ದಾರೆ. ದೇಶದ ಬೇರೆ ಭಾಗಗಳಲ್ಲಿ ಸಮಸ್ಯೆಗಳಿದ್ದರೂ, ಕರ್ನಾಟಕದಲ್ಲಿ ಜನರಿಗೆ ದೈವಾರಾಧನೆ ಮತ್ತು ಭಕ್ತಿಯ ಮೇಲಿನ ಶ್ರದ್ಧೆ ಹೆಚ್ಚಿರುವುದರಿಂದ ನಾಡಿನಲ್ಲಿ ಮಳೆ-ಬೆಳೆ ಸಮೃದ್ಧವಾಗಿರಲಿದೆ ಎಂದು ಅವರು ಹೇಳಿದ್ದಾರೆ. ರಾಜ್ಯದ ಜನರಲ್ಲಿ ಹೆಚ್ಚುತ್ತಿರುವ ಧಾರ್ಮಿಕ ಪ್ರಜ್ಞೆಯು ನಾಡನ್ನು ಬರಗಾಲದಿಂದ ರಕ್ಷಿಸಲಿದ್ದು, ಸಮೃದ್ಧ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದು ಕೋಡಿ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.

Continue Reading
Advertisement
ಪ್ರಮುಖ ಸುದ್ದಿ5 hours ago

ವಿಜಯ್‌ ಸಿಎಂ ಆಗಿದ್ದಕ್ಕೆ ನನಗೆ ಅಸೂಯೆ ಇಲ್ಲ – ರಜನೀಕಾಂತ್‌

Latest6 hours ago

ಕೇರಳಂ ಮುಖ್ಯಮಂತ್ರಿಯಾಗಿ ನಾಳೆ ವಿ.ಡಿ. ಸತೀಶನ್ ಪ್ರಮಾಣವಚನ

Latest2 days ago

ಅಬುಧಾಬಿಯಲ್ಲಿ ಮೋದಿ: ಯುಎಇ ಜೊತೆ ಮಹತ್ವದ ಒಪ್ಪಂದಕ್ಕೆ ಸಹಿ

Latest2 days ago

ವಾಹನ ಸವಾರರಿಗೆ ಶಾಕ್! ಪೆಟ್ರೋಲ್, ಡೀಸೆಲ್ ತಲಾ ₹3 ಏರಿಕೆ.

Latest2 days ago

ನಟ ದರ್ಶನ್‌ಗೆ ಸುಪ್ರೀಂ ಕೋರ್ಟ್ ಶಾಕ್‌, ಜಾಮೀನು ಅರ್ಜಿ ವಜಾ

Latest3 days ago

ಚೀನಾದಲ್ಲಿ ಟ್ರಂಪ್‌, ಶಿ ಜಿನ್‌‌ಪಿಂಗ್‌ ಹೈವೋಲ್ಟೇಜ್‌ ಮೀಟಿಂಗ್‌‌

Latest3 days ago

ಪಶ್ಚಿಮ ಬಂಗಾಳದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿ; ನಿಯಮ ಉಲ್ಲಂಘಿಸಿದ್ರೆ ಜೈಲು ಶಿಕ್ಷೆ, ದಂಡ

ಪ್ರಮುಖ ಸುದ್ದಿ3 days ago

ಕರ್ನಾಟಕ ಸೇರಿ 16 ರಾಜ್ಯ, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್‌

Latest3 days ago

ಹಿಜಾಬ್‌ ಓಕೆ, ಕೇಸರಿ ಶಾಲುಗೆ ನೋ: ಪರ- ವಿರೋಧ ಚರ್ಚೆ ಶುರು

Latest3 days ago

ವಿ.ಡಿ. ಸತೀಶನ್‌ ಸಿಎಂ ಆಗಿ ಆಯ್ಕೆ ಹಿಂದಿನ ರಿಯಲ್ ಸ್ಟೋರಿ

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌