Viral Video | ರಿಸೆಪ್ಷನ್ ಸಮಯದಲ್ಲಿ ಕೂದಲು ಕತ್ತರಿಸಿಕೊಂಡ ವಧು! ಕುಟುಂಬಸ್ಥರೇಕೆ ಕಣ್ಣೀರಿಟ್ಟರು? - Vistara News

ವೈರಲ್ ನ್ಯೂಸ್

Viral Video | ರಿಸೆಪ್ಷನ್ ಸಮಯದಲ್ಲಿ ಕೂದಲು ಕತ್ತರಿಸಿಕೊಂಡ ವಧು! ಕುಟುಂಬಸ್ಥರೇಕೆ ಕಣ್ಣೀರಿಟ್ಟರು?

ವಧುವೊಬ್ಬಳು ತನ್ನ ರಿಸೆಪ್ಶನ್‌ ದಿನದಂದು ಕೂದಲು ಕತ್ತರಿಸಿ ಕ್ಯಾನ್ಸರ್‌ ಪೀಡಿತರಿಗೆ ದಾನ ಮಾಡಿದ್ದಾಳೆ. ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌(Viral Video) ಆಗಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಮದುವೆಯ ದಿನವನ್ನು ವಿಶೇಷವಾಗಿಟ್ಟುಕೊಳ್ಳಬೇಕೆಂದು ಏನೇನೋ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವವರನ್ನು ನೋಡಿರುತ್ತೀರಿ. ವಧು, ವರರು ಪರಸ್ಪರ ಸರ್ಪೈಸ್‌ ಕೊಟ್ಟುಕೊಳ್ಳುವುದು ಈಗಂತೂ ಸಾಮಾನ್ಯವಾಗಿಬಿಟ್ಟಿದೆ. ಅದೇ ರೀತಿ ಇಲ್ಲಿ ವಧು ಕೇವಲ ವರನಿಗೆ ಮಾತ್ರವಲ್ಲದೆ ಪೂರ್ತಿ ಕುಟುಂಬಕ್ಕೇ ಸರ್ಪೈಸ್‌ ಕೊಟ್ಟಿದ್ದಾಳೆ. ಆ ಸರ್ಪೈಸ್‌ ಕಂಡು ಕುಟುಂಬ (Viral Video) ಕಣ್ಣೀರಿಟ್ಟಿದೆ.

ಇದನ್ನೂ ಓದಿ: Cricket Viral Video | ಸಂಸ್ಕೃತದಲ್ಲಿ ಕ್ರಿಕೆಟ್ ಕಾಮೆಂಟರಿ; ವಿಡಿಯೊ ವೈರಲ್​​

ಹೆಣ್ಣು ಮಕ್ಕಳಿಗೆ ಕೂದಲೆಂದರೆ ಪ್ರೀತಿ. ಅದರಲ್ಲಿಯೂ ಮದುವೆ ಎಂದು ನಿಶ್ಚಯವಾದ ನಂತರವಂತೂ ಮದುವೆಗೆಂದೇ ಉದ್ದ ಕೂದಲನ್ನು ಬಿಡುವವರಿದ್ದಾರೆ. ಅದೇ ರೀತಿ ಮದುವೆಗಾಗಿ ಉದ್ದ ಕೂದಲು ಬಿಟ್ಟಿದ್ದ ವಧು, ರಿಸೆಪ್ಷನ್ ಸಮಯದಲ್ಲಿ ಅದೇ ಕೂದಲನ್ನು ಕತ್ತರಿಸಿದ್ದಾಳೆ. ರಿಸೆಪ್ಷನ್‌ಗೂ ಮೊದಲು ವರ ಮತ್ತು ಕುಟುಂಬಸ್ಥರೆಲ್ಲರನ್ನು ತನ್ನ ಕೋಣೆಗೆ ಕರೆದೊಯ್ದ ಆಕೆ ಎಲ್ಲರೆದುರು ಘೋಷಣೆಯೊಂದನ್ನು ಮಾಡಿದ್ದಾಳೆ. “ನನ್ನ ಈ ಉದ್ದ ಕೂದಲನ್ನು ಕ್ಯಾನ್ಸರ್‌ ಪೀಡಿತರಿಗಾಗಿ ದಾನ ಮಾಡಲಿದ್ದೇನೆ. ಈಗಲೇ ನನ್ನ ಕೂದಲು ಕತ್ತರಿಸಿ ದಾನ ಮಾಡುತ್ತಿದ್ದೇನೆ” ಎಂದು ಹೇಳಿ ಕೂದಲನ್ನು ಕತ್ತರಿಸಿದ್ದಾರೆ.


ವಧುವಿನ ಈ ಒಳ್ಳೆಯ ನಿರ್ಧಾರ ಕೇಳಿದಾಕ್ಷಣ ಆಕೆಯ ಪಕ್ಕದಲ್ಲೇ ಇದ್ದ ವಧು, ಆಕೆಗೆ ಚುಂಬಿಸಿದ್ದಾರೆ. ಅಲ್ಲಿದ್ದ ಕುಟುಂಬಸ್ಥರ ಕಣ್ಣಿನಲ್ಲೂ ನೀರು ಹರಿದಿದೆ. ಈ ವಿಡಿಯೋವನ್ನು ಮಿಚಿಗನ್‌ ದೇಶದ ವೆಡ್ಡಿಂಗ್‌ ಫೋಟೋಗ್ರಾಫರ್‌ ಆಗಿರುವ ಬ್ರಿಯನ್ನ ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ಡಿ.೯ರಂದು ಹಂಚಿಕೊಳ್ಳಲಾಗಿರುವ ಈ ವಿಡಿಯೊವನ್ನು ಈಗಾಗಲೇ ೩೪ ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಕ್ಯಾನ್ಸರ್‌ ಪೀಡಿತರು ಸೇರಿ ನೆಟ್ಟಿಗರೆಲ್ಲರು ಈ ವಧುವಿನ ನಿರ್ಧಾರಕ್ಕೆ ಮೆಚ್ಚಿ ಲೈಕ್‌ ಹಾಗೂ ಕಾಮೆಂಟ್‌ ಮಾಡಲಾರಂಭಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

Viral Video: ‘ಹಿಟ್​ ದಿ ಟಾರ್ಗೆಟ್’​ ಎಂದು ಬೌಲಿಂಗ್​ ಅಭ್ಯಾಸ ಆರಂಭಿಸಿದ ಮೊಹಮ್ಮದ್ ಶಮಿ

Viral Video: ಚೇತರಿಕೆಯ ಹಾದಿಯಲ್ಲಿರುವ ಶಮಿ  ಈ ವರ್ಷದ ಕೊನೆಯಲ್ಲಿ ಬಾಂಗ್ಲಾದೇಶದ ವಿರುದ್ಧ ತವರಿನಲ್ಲಿ ನಡೆಯುವ ಟೆಸ್ಟ್ ಸರಣಿಗೆ ಪುನರಾಗಮನ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಗಾಯದಿಂದಾಗಿ ಶಮಿಗೆ ಈ ಬಾರಿ ಐಪಿಎಲ್​ ಸೇರಿ ಮಹತ್ವದ ಟಿ20 ವಿಶ್ವಕಪ್​ ಟೂರ್ನಿ ಕೈತಪ್ಪಿತ್ತು.

VISTARANEWS.COM


on

Viral Video
Koo

ಲಕ್ನೋ: ಪಾದದ ಶಸ್ತ್ರಚಿಕಿತ್ಸೆಗೆ(mohammed shami injury update) ಒಳಗಾಗಿ ಚೇತರಿಕೆ ಕಾಣುತ್ತಿರುವ ಭಾರತ ಕ್ರಿಕೆಟ್​ ತಂಡದ ಪ್ರಧಾನ​ ವೇಗಿ ಮೊಹಮ್ಮದ್ ಶಮಿ(Mohammed Shami) ಕ್ರಿಕೆಟ್​ಗೆ ಮರಳುವು ಸಿದ್ಧತೆಯಲ್ಲಿದ್ದಾರೆ. ತಮ್ಮ ನಿವಾಸದಲ್ಲೇ ನಿರ್ಮಿಸಲಾಗಿರುವ ಕ್ರಿಕೆಟ್​ ಪಿಚ್​ನಲ್ಲಿ ಬೌಲಿಂಗ್​ ಅಭ್ಯಾಸ ಆರಂಭಿಸಿದ್ದು, ಈ ವಿಡಿಯೊವನ್ನು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊ ವೈರಲ್​(Viral Video) ಆಗಿದೆ.

ಫೆಬ್ರವರಿಯಲ್ಲಿ ಶಮಿ ಅವರು ಲಂಡನ್​ನಲ್ಲಿ ತಮ್ಮ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ಬಳಿಕ ಶಮಿ ಯಾವುದೇ ಕ್ರಿಕೆಟ್​ ಸರಣಿ ಆಡಿಲ್ಲ. ಇದೀಗ ಕ್ರಿಕೆಟ್​ಗೆ ಮರಳುವ ನಿಟ್ಟಿನಲ್ಲಿ ಪುನರ್ವಸತಿ ಆರಂಭಿಸಿದ್ದಾರೆ. ಬೌಲಿಂಗ್​ ಅಭ್ಯಾಸ ಆರಂಭಿಸಿರುವ ಶಮಿ ‘ಹಿಟ್​ ದಿ ಟಾರ್ಗೆಟ್​’ ಎಂದು ಬರೆದುಕೊಂಡಿದ್ದಾರೆ. ಶಮಿ ಅವರು ಬೌಲಿಂಗ್​ನಲ್ಲಿ ವಿಕೆಟ್​ ಉರುಳಿಸಿದ್ದು ಈ ವಿಡಿಯೊದಲ್ಲಿ ಕಾಣಬಹುದಾಗಿದೆ.

2 ವಾರ ಹಿಂದೆ ಶಮಿ ಅವರು 2 ಸ್ಟಿಕ್​ ವಾಕರ್​ಗಳೊಂದಿಗೆ ಗಾರ್ಡನ್​ನಲ್ಲಿ ನಿಂತಿರುವ ಫೋಟೊವನ್ನು ಹಂಚಿಕೊಂಡು, ‘ಮತ್ತೆ ಟ್ರ್ಯಾಕ್‌ಗೆ ಮರಳುವ ಹಸಿದಿದೆ. ಈ ಹಾದಿ ಕಠಿಣವಾಗಿರಬಹುದು, ಆದರೆ ಇದನ್ನೇಲ್ಲ ಎದುರಿಸಿ ಶೀಘ್ರದಲ್ಲೇ ಕ್ರಿಕೆಟ್​ಗೆ ಮರಳುವ ವಿಶ್ವಾಸವಿದೆ’ ಎಂದು ಬರೆದುಕೊಂಡಿದ್ದರು. ಇದಕ್ಕೂ ಮುನ್ನ ಶಮಿ ತಮ್ಮ ಮನೆಯಲ್ಲಿ ಪಾದಕ್ಕೆ ಎಲೆಕ್ಟ್ರಿಕ್​ ಮಸಾಜ್​ ಮಾಡುತ್ತಿರುವ ಫೋಟೊವನ್ನು ಹಂಚಿಕೊಂಡಿದ್ದರು.

ಬಾಂಗ್ಲಾ ಸರಣಿಯಲ್ಲಿ ಕಣಕ್ಕೆ?

ಚೇತರಿಕೆಯ ಹಾದಿಯಲ್ಲಿರುವ ಶಮಿ  ಈ ವರ್ಷದ ಕೊನೆಯಲ್ಲಿ ಬಾಂಗ್ಲಾದೇಶದ ವಿರುದ್ಧ ತವರಿನಲ್ಲಿ ನಡೆಯುವ ಟೆಸ್ಟ್ ಸರಣಿಗೆ ಪುನರಾಗಮನ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಗಾಯದಿಂದಾಗಿ ಶಮಿಗೆ ಈ ಬಾರಿ ಐಪಿಎಲ್​ ಸೇರಿ ಮಹತ್ವದ ಟಿ20 ವಿಶ್ವಕಪ್​ ಟೂರ್ನಿ ಕೈತಪ್ಪಿತ್ತು. ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ವೇಳೆ ಗಾಯಗೊಂಡಿದ್ದ ಶಮಿ, ಈ ಗಾಯವನ್ನು ಮರೆಮಾಚಿ ವಿಶ್ವಕಪ್​ನಲ್ಲಿ ಅಮೋಘ ಬೌಲಿಂಗ್​ ಪ್ರದರ್ಶನ ತೋರಿದ್ದರು.

ಇದನ್ನು ಓದಿ Anushka Sharma: ಕೊಹ್ಲಿಯಂತೆ ತಾಳ್ಮೆ ಕಳೆದುಕೊಂಡ ಪತ್ನಿ ಅನುಷ್ಕಾ; ವಿಡಿಯೊ ವೈರಲ್​

ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಶಮಿ ಅವರು ತಮ್ಮ ಮೊನಚಾದ ಬೌಲಿಂಗ್​ ದಾಳಿಯ ಮೂಲಕ ಟೂರ್ನಿಯಲ್ಲಿಯೇ ಅತ್ಯಧಿಕ ವಿಕೆಟ್​ ಪಡೆದ ಬೌಲರ್​ ಎನಿಸಿಕೊಂಡಿದ್ದರು. ಆಡಿದ 7 ಪಂದ್ಯಗಳಲ್ಲಿ 24 ವಿಕೆಟ್‌ ಉರುಳಿಸಿದ್ದರು. ಅವರ ಈ ಸಾಧನೆಯನ್ನು ಪರಿಗಣಿಸಿ ಅವರಿಗೆ ದೇಶದ ಎರಡನೇ ಅತ್ಯುನ್ನತ ಕ್ರೀಡಾ ಗೌರವವಾದ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಮೊಹಮ್ಮದ್ ಶಮಿ ಅರ್ಜುನ ಪ್ರಶಸ್ತಿ ಸ್ವೀಕರಿಸಿದ್ದರು. ಮೊಹಮ್ಮದ್ ಶಮಿ ಭಾರತ ಪರ 64 ಟೆಸ್ಟ್ ಪಂದ್ಯಗಳಲ್ಲಿ 229 ವಿಕೆಟ್ ಪಡೆದಿದ್ದಾರೆ. 101 ಏಕದಿನ ಪಂದ್ಯಗಳಲ್ಲಿ 195 ವಿಕೆಟ್ ಪಡೆದಿದ್ದಾರೆ. 23 ಟಿ20 ಪಂದ್ಯಗಳಲ್ಲಿ 24 ವಿಕೆಟ್ ಪಡೆದಿದ್ದಾರೆ.

Continue Reading

ವಿದೇಶ

ಹಿಂದೂಗಳ ಆಸ್ತಿ ಲೂಟಿ ಮಾಡಿ, ದೇವರ ವಿಗ್ರಹ ಕದ್ದು ಪಾಕಿಸ್ತಾನ ಸ್ಥಾಪನೆ; ಪಾಕ್‌ ಪತ್ರಕರ್ತನ ವಿಡಿಯೊ ವೈರಲ್‌

ಪಾಕಿಸ್ತಾನದ ಸೃಷ್ಟಿಯ ಮೂಲವನ್ನು ಟೀಕಿಸಿರುವ ಪಾಕಿಸ್ತಾನಿ ಪತ್ರಕರ್ತ ಇಮ್ರಾನ್ ಶಫ್ಕತ್ ಅವರ ಇತ್ತೀಚಿನ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ (Viral Video) ವ್ಯಾಪಕ ಚರ್ಚೆಯನ್ನು ಹುಟ್ಟು ಹಾಕಿದೆ. ಅವರು ಈ ವಿಡಿಯೋದಲ್ಲಿ ಇಸ್ಲಾಮಿಕ್ ತತ್ತ್ವಗಳ ಮೇಲೆ ಪಾಕಿಸ್ತಾನವನ್ನು ಸ್ಥಾಪಿಸಲಾಗಿದೆ ಎಂಬುದು ಸುಳ್ಳು ಎಂದ ಹೇಳಿದ್ದಾರೆ. ಅವರ ಈ ಹೇಳಿಕೆಗೆ ಭಾರತೀಯರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

VISTARANEWS.COM


on

By

Viral Video
Koo

ಪಾಕಿಸ್ತಾನದ (pakistan) ಹುಟ್ಟಿನ ಬಗ್ಗೆ ಅಲ್ಲಿನ ಹಿರಿಯ ಪತ್ರಕರ್ತ (journalist) ಇಮ್ರಾನ್ ಶಫ್ಕತ್ (Imran Shafqat ) ಹೇಳಿರುವ ಮಾತುಗಳು ಈಗ ಸಾಮಾಜಿಕ ಜಾಲತಾಣದಲ್ಲಿ (social media) ಭಾರೀ ವೈರಲ್ (Viral Video) ಆಗಿದ್ದು, ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ. ಪಾಕಿಸ್ತಾನ ಫಾರ್ ಇಸ್ಲಾಂ (Pakistan for Islam) ಎಂಬುದನ್ನು ಪ್ರಶ್ನಿಸಿರುವ ಅವರು, 1947ರಲ್ಲಿ ಹಿಂದೂಗಳ ದೇವಾಲಯಗಳನ್ನು ಲೂಟಿ ಮಾಡಿ, ಅವರ ಆಸ್ತಿಗಳನ್ನು ವಶಪಡಿಸಿಕೊಂಡು ಪಾಕಿಸ್ತಾನವನ್ನು ನಿರ್ಮಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಪಾಕಿಸ್ತಾನಿ ಪತ್ರಕರ್ತ ಇಮ್ರಾನ್ ಶಫ್ಕತ್ ಅವರ ಇತ್ತೀಚಿನ ವಿಡಿಯೋ ಇದಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ವಿವಾದ ಮತ್ತು ಚರ್ಚೆಯನ್ನು ಹುಟ್ಟುಹಾಕಿದೆ. ಅವರು ಪಾಕಿಸ್ತಾನದ ಸೃಷ್ಟಿಯ ಮೂಲವನ್ನು ಟೀಕಿಸಿದ್ದಾರೆ.
ಅವರ ಯೂಟ್ಯೂಬ್ ಚಾನೆಲ್ ‘ಟೆಲ್ಲಿಂಗ್ಸ್ ವಿತ್ ಇಮ್ರಾನ್ ಶಫ್ಕತ್’ನ ವಿಡಿಯೋ ಕ್ಲಿಪ್ ಅನ್ನು ಎಕ್ಸ್ ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಈ ವೈರಲ್ ಕ್ಲಿಪ್‌ನಲ್ಲಿ, ಶಫ್ಕತ್ ಗಮನಾರ್ಹ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನವನ್ನು ಸ್ಥಾಪನೆಯ ಐತಿಹಾಸಿಕ ಆಧಾರವನ್ನು ಪ್ರಶ್ನಿಸಿದ್ದಾರೆ.

ಪಾಕಿಸ್ತಾನದ ಆರಂಭದ ಬಗ್ಗೆ ಶಫ್ಕತ್ ಅನೇಕ ಆಶ್ಚರ್ಯಕರ ಹೇಳಿಕೆಗಳನ್ನು ನೀಡಿದ್ದಾರೆ. ಪಾಕಿಸ್ತಾನವನ್ನು ರಚಿಸಿದ ಮೊದಲ ದಿನ ಅದನ್ನು ಇಸ್ಲಾಂ ಹೆಸರಿನಲ್ಲಿ ಮಾಡಲಾಯಿತು ಎಂಬುದೆಲ್ಲ ಸುಳ್ಳು ಎಂದು ಅವರು ಆರೋಪಿದ್ದಾರೆ. ಪಾಕಿಸ್ತಾನದ ಸ್ಥಾಪಕರು ಸಲ್ಲಿಸಿದ ಆರಂಭಿಕ ದಾಖಲೆಗಳನ್ನು “ದೊಡ್ಡ ಸುಳ್ಳು” ಎಂದಿರುವ ಅವರು, ಕೇವಲ ಇಸ್ಲಾಮಿಕ್ ತತ್ತ್ವಗಳ ಮೇಲೆ ಪಾಕಿಸ್ತಾನವನ್ನು ಸ್ಥಾಪಿಸಲಾಗಿದೆ ಎಂಬ ನಿರೂಪಣೆಯು ತಪ್ಪುದಾರಿಗೆಳೆಯುತ್ತಿದೆ ಎಂದು ಹೇಳಿದ್ದಾರೆ.

ಸುಳ್ಳು ದಾಖಲೆ

ಇಸ್ಲಾಂ ಧರ್ಮದ ಹೆಸರಿನಲ್ಲಿ ಪಾಕಿಸ್ತಾನವನ್ನು ನಿರ್ಮಿಸಲಾಗಿದೆ ಎಂದು ಅವರು ನಮಗೆ ಹೇಳುತ್ತಿದ್ದದ್ದು ಒಂದು ದೊಡ್ಡ ಅಫೀಮ್. ದೇವರಿಗೆ ಗೊತ್ತು ಈ ದೇಶದ ಸೃಷ್ಟಿಕರ್ತರು ಸಲ್ಲಿಸಿದ ಮೊದಲ ದಾಖಲೆ ಒಂದು ದೊಡ್ಡ ಸುಳ್ಳು, ಹಲವಾರು ಸುಳ್ಳು ಹೇಳಿಕೆಗಳಿವೆ ಎಂದು ಅವರು ಹೇಳಿದರು.


ದೇವಸ್ಥಾನ ಲೂಟಿ, ಭೂಮಿ ವಶ

ಇತಿಹಾಸದಿಂದ ನಿರ್ದಿಷ್ಟ ಘಟನೆಗಳನ್ನು ಎತ್ತಿ ತೋರಿಸುತ್ತಾ, ಪಾಕಿಸ್ತಾನದ ರಚನೆಯಾದ ಸ್ವಲ್ಪ ಸಮಯದ ಅನಂತರ ಲಾಹೋರ್‌ನಲ್ಲಿ ಮುಸ್ಲಿಮರು ಬಲವಂತವಾಗಿ ದೇವಸ್ಥಾನವನ್ನು ಪ್ರವೇಶಿಸಿದರು. ವಿಗ್ರಹಗಳನ್ನು ಕದ್ದರು ಮತ್ತು ಹಿಂದೂ ಒಡೆತನದ ಅಂಗಡಿಗಳು ಮತ್ತು ಭೂಮಿಯನ್ನು ವಶಪಡಿಸಿಕೊಂಡರು ಎಂದು ಶಫ್ಕತ್ ಆರೋಪಿಸಿದ್ದಾರೆ.

ದೇವಾಲಯದ ಬೀಗಗಳನ್ನು ಒಡೆದು ವಿಗ್ರಹಗಳನ್ನು ಕದ್ದಿರುವ ಲಾಹೋರ್‌ನ ಮುಸ್ಲಿಮರು ಹಿಂದೂ ಅಂಗಡಿಗಳನ್ನು ಸಹ ವಶಪಡಿಸಿಕೊಂಡರು. ಅದನ್ನು ಮುರಿದು ಅವುಗಳ ಶೆಟರ್‌ಗಳನ್ನು ಎಳೆದಿದ್ದಾರೆ. ಇದು ಪಾಕಿಸ್ತಾನದ ಅಡಿಪಾಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ಮಗನಿಗೆ ಮುಸಲ್ಮಾನರ ಕ್ಯಾಪ್‌ ಹಾಕಿದ ನಟಿ; ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ!

ಶಫ್ಕತ್ ಮಾಡಿರುವ ಈ ಟೀಕೆಗಳು ಆನ್‌ಲೈನ್‌ನಲ್ಲಿ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ. ಒಬ್ಬ ಬಳಕೆದಾರರು, ಸತ್ಯವನ್ನು ಮಾತನಾಡುವ ಧೈರ್ಯ ಮತ್ತು ದೃಢತೆಯನ್ನು ಹೊಂದಿರುವ ನಿಮಗೆ ಹ್ಯಾಟ್ಸ್ ಆಫ್. ಈ ಜಗತ್ತನ್ನು ಉತ್ತಮ ಸ್ಥಳವಾಗಿಸಲು ನಿಮ್ಮಂತಹ ಹೆಚ್ಚು ಜನರು ಇರಬೇಕು ಎಂದು ಹೇಳಿದ್ದಾರೆ.

ಇನ್ನೊಬ್ಬ ಬಳಕೆದಾರ, ಎಚ್ಚರವಾಗಿರಿ. ನಿಮ್ಮನ್ನು ಕೊಲ್ಲಬಹುದು ಎಂದು ಹೇಳಿದ್ದಾರೆ. ಮತ್ತೊಬ್ಬರು ಶಫ್ಕತ್ ಅವರ ಸುರಕ್ಷತೆ ಬಗ್ಗೆ ಭಯಪಟ್ಟಿದ್ದಾರೆ. ಇನ್ನೊಬ್ಬರು ಸರಿಯಾಗಿ ಮಾತನಾಡಿದ್ದೀರಿ ಎಂದು ಹೇಳಿದ್ದಾರೆ.

Continue Reading

ವೈರಲ್ ನ್ಯೂಸ್

Giorgia Meloni: ಕೈ ಮುಗಿದು, ನಮಸ್ಕಾರ ಮಾಡಿ ಅತಿಥಿಗಳನ್ನು ಸ್ವಾಗತಿಸಿದ ಇಟಲಿ ಪ್ರಧಾನಿ ಮೆಲೋನಿ; ವೈರಲ್‌ ವಿಡಿಯೊ ಇಲ್ಲಿದೆ

Giorgia Meloni: ತನ್ನ ವಿಶಿಷ್ಟತೆಯಿಂದಲೇ ಭಾರತೀಯ ಸಂಸ್ಕೃತಿ ವಿದೇಶಿಗರನ್ನೂ ಸೆಳೆಯುತ್ತಿದೆ. ಅದಕ್ಕೆ ಉದಾಹರಣೆ ಎನ್ನುವಂತೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಭಾರತೀಯ ಸಂಸ್ಕೃತಿಯ ಪ್ರತೀಕವಾದ ಕೈ ಮುಗಿದು ನಮಸ್ಕಾರ ಮಾಡುವ ಮೂಲಕ ಜಿ7 ಶೃಂಗಸಭೆಗೆ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿದ್ದಾರೆ. ಸದ್ಯ ಅವರು ನಮಸ್ಕಾರ ಮಾಡುತ್ತಿರುವ ವಿಡಿಯೊ ವೈರಲ್‌ ಆಗಿದೆ. ಇಟಲಿಯ ಅಪುಲಿಯಾ ಪ್ರದೇಶದ ಐಷಾರಾಮಿ ರೆಸಾರ್ಟ್ ಬೊರ್ಗೊ ಎಗ್ನಾಜಿಯಾದಲ್ಲಿ ಜೂನ್‌ 13ರಿಂದ 15ರವರೆಗೆ ಜಿ 7 ಶೃಂಗಸಭೆಯನ್ನು ಆಯೋಜಿಸಲಾಗಿದೆ.

VISTARANEWS.COM


on

Giorgia Meloni
Koo

ರೋಮ್‌: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಅವರು ಭಾರತದೊಂದಿಗೆ ವಿಶೇಷ ನಂಟು ಹೊಂದಿದ್ದಾರೆ. ಈ ಹಿಂದೆ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ನಾಯಕತ್ವವನ್ನು ಹೊಗಳಿದ್ದರು. ಇದೀಗ ಭಾರತೀಯ ಸಂಸ್ಕೃತಿಯ ಪ್ರತೀಕವಾದ ಕೈ ಮುಗಿದು ನಮಸ್ಕಾರ ಮಾಡುವ ಮೂಲಕ ಜಿ7 ಶೃಂಗಸಭೆ (G7 Summit)ಗೆ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿದ್ದಾರೆ. ಸದ್ಯ ಅವರು ನಮಸ್ಕಾರ ಮಾಡುತ್ತಿರುವ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು ವೈರಲ್‌ ಆಗಿದೆ (Viral Video).

ಇಟಲಿಯ ಪುಗ್ಲಿಯಾದಲ್ಲಿ 50ನೇ ಆವೃತ್ತಿಯ ಜಿ 7 ಶೃಂಗಸಭೆ ಆರಂಭವಾಗಿದೆ. ಇಟಲಿಯ ಅಪುಲಿಯಾ ಪ್ರದೇಶದ ಐಷಾರಾಮಿ ರೆಸಾರ್ಟ್ ಬೊರ್ಗೊ ಎಗ್ನಾಜಿಯಾದಲ್ಲಿ ಜೂನ್‌ 13ರಿಂದ 15ರವರೆಗೆ ನಡೆಯಲಿರುವ ಜಿ 7 ಶೃಂಗಸಭೆಯಲ್ಲಿ ಭಾಗವಹಿಸಲು ವಿವಿಧ ದೇಶದ ನಾಯಕರು ಇಟಲಿಗೆ ಆಗಮಿಸಿದ್ದು, ಅವರನ್ನು ಆತ್ಮೀಯವಾಗಿ ಸ್ವಾಗತಿಸುವ ವೇಳೆ ಜಾರ್ಜಿಯಾ ಮೆಲೋನಿ ಅವರು ಕೈ ಮುಗಿದು ನಮಸ್ತೆ ಎಂದು ಹೇಳಿದ್ದಾರೆ. ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಯುರೋಪಿಯನ್ ಕಮಿಷನ್ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್ ಮತ್ತು ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರನ್ನು ಇಟಲಿಯ ಪ್ರಧಾನಿ ಮೆಲೋನಿ ಕೈ ಮುಗಿದು ಸ್ವಾಗತಿಸುತ್ತಿರುವ ವಿಡಿಯೊ ನೋಡಿದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಾರತೀಯ ಸಂಸ್ಕೃತಿಗೆ ಜಾಗತಿಕ ಮನ್ನಣೆ ಸಿಗುತ್ತಿದೆ ಎನ್ನುವುದಕ್ಕೆ ಇದು ಸಾಕ್ಷಿ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ನಮಸ್ತೆ ಇಂಡಿಯಾ ಎಂದು ಹಲವರು ಕಮೆಂಟ್‌ ಮಾಡಿದ್ದಾರೆ. ʼʼಮೋದಿ ಅವರೊಂದಿಗಿನ ಗೆಳೆತನದ ಪ್ರಭಾವ ಇದುʼʼ ಎಂದು ಒಬ್ಬರು ಹೇಳಿದ್ದಾರೆ. ʼʼಇದು ಮೋದಿಯ ಮ್ಯಾಜಿಕ್‌ʼʼ ಎಂದು ಇನ್ನೊಬ್ಬರು ಕಮೆಂಟ್‌ ಮಾಡಿದ್ದಾರೆ. ಮೋದಿ ಅವರಿಂದಲೇ ಇದು ಸಾಧ್ಯವಾಗಿದ್ದು ಎಂದು ಇನ್ನೂ ಹಲವರು ಹೇಳಿದ್ದಾರೆ. ʼʼಒಂದು ವೇಳೆ ಆತ್ಮೀಯರು ಸಿಕ್ಕಾಗ ಶೇಕ್‌ ಹ್ಯಾಂಡ್‌ ಮಾಡುತ್ತೇವೆ. ಇಲ್ಲವೆ ಕೈ ಮುಗಿದು ನಮಸ್ತೆ ಎನ್ನುತ್ತೇವೆ. ಆದರೆ ಮೆಲೋನಿ ಎರಡನ್ನೂ ಮಾಡಿದ್ದಾರೆʼʼ ಎಂದು ನೆಟ್ಟಿಗರೊಬ್ಬರು ತಮಾಷೆ ಮಾಡಿದ್ದಾರೆ. ವಿಶೇಷ ಎಂದರೆ ಪ್ರದಾನಿ ಮೋದಿ ಅವರೂ ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಈಗಾಗಲೇ ಇಟಲಿ ತಲುಪಿದ್ದಾರೆ.

ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಇಂಗ್ಲೆಂಡ್‌, ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ನಾಯಕರು ಮಾತ್ರವಲ್ಲದೆ ಉಕ್ರೇನ್, ಬ್ರೆಜಿಲ್, ಅರ್ಜೆಂಟೀನಾ, ಟರ್ಕಿ, ಯುನೈಟೆಡ್ ಅರಬ್ ಎಮಿರೇಟ್ಸ್, ಕೀನ್ಯಾ, ಅಲ್ಜೀರಿಯಾ, ಟುನೀಶಿಯಾ ಮತ್ತು ಮೌರಿಟಾನಿಯಾದ ಮುಖಂಡರು ಈ ಪ್ರತಿಷ್ಠಿತ ಜಾಗತಿಕ ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.

ಇದನ್ನೂ ಓದಿ: Narendra Modi: ಜಿ-7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಇಟಲಿಯ ಅಪುಲಿಯಾಗೆ ತಲುಪಿದ ಪ್ರಧಾನಿ ಮೋದಿ

ವಿಷಯಗಳು ಯಾವುವು?

ಶೃಂಗಸಭೆಯ ವಿದೇಶದ ಅಧಿವೇಶನದಲ್ಲಿ ಭಾರತವು ಕೃತಕ ಬುದ್ಧಿಮತ್ತೆ, ಇಂಧನ, ಆಫ್ರಿಕಾ ಮತ್ತು ಮೆಡಿಟರೇನಿಯನ್ ದೇಶಗಳ ಸಹಕಾರದ ಮೇಲೆ ಗಮನ ಹರಿಸಲಿದೆ ಎಂದು ಪ್ರಧಾನಿ ಹೇಳಿದ್ದಾರೆ. ಜಾಗತಿಕವಾಗಿ ನಿರ್ಣಾಯಕ ವಿಷಯಗಳ ಬಗ್ಗೆ ಚರ್ಚಿಸಲಾಗುವುದು ಎಂದು ಅವರು ಹೇಳಿದ್ದಾರೆ. ಜತೆಗೆ ಶೃಂಗಸಭೆಯಲ್ಲಿ ಉಕ್ರೇನ್ ನಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಗಾಝಾದಲ್ಲಿನ ಸಂಘರ್ಷದ ಕುರಿತು ಚರ್ಚೆ ನಡೆಯುವ ನಿರೀಕ್ಷೆಯಿದೆ.

Continue Reading

ವೈರಲ್ ನ್ಯೂಸ್

Italian Parliament: ಇಟಲಿ ಪಾರ್ಲಿಮೆಂಟ್‌ನಲ್ಲಿ ಸಂಸದರ ಮಾರಾಮಾರಿ! ವಿಡಿಯೊ ನೋಡಿ

Italian Parliament: ಇಟಲಿ ಪಾರ್ಲಿಮೆಂಟ್‌ನಲ್ಲಿ ಸಂಸದರು ಪರಸ್ಪರ ಕೈ ಕೈ ಮಿಲಾಯಿಸಿ ಮಾರಾಮಾರಿ ನಡೆಸಿದ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವೈರಲ್‌ ಆಗಿದೆ. ಪ್ರಾದೇಶಿಕ ಸ್ವಾಯತ್ತ ಅಧಿಕಾರಗಳನ್ನು ವಿಸ್ತರಿಸುವ ಉದ್ದೇಶ ಹೊಂದಿರುವ ವಿವಾದಾತ್ಮಕ ಕಾನೂನಿನ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಗದ್ದಲ ಆರಂಭವಾಯಿತು ಎನ್ನಲಾಗಿದೆ.

VISTARANEWS.COM


on

Italian Parliament
Koo

ರೋಮ್‌: ಇಟಲಿಯ ಪುಗ್ಲಿಯಾದಲ್ಲಿ 50ನೇ ಆವೃತ್ತಿಯ ಜಿ 7 ಶೃಂಗಸಭೆ (G7 Summit) ಆರಂಭವಾಗಿದೆ. ಈ ಮಧ್ಯೆ ಇಟಲಿ ಪಾರ್ಲಿಮೆಂಟ್‌ (Italian Parliament)ನಲ್ಲಿ ಸಂಸದರು ಪರಸ್ಪರ ಕೈ ಕೈ ಮಿಲಾಯಿಸಿ ಮಾರಾಮಾರಿ ನಡೆಸಿದ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವೈರಲ್‌ ಆಗಿದೆ (Viral Video).

ಕಾರಣವೇನು?

ಪ್ರಾದೇಶಿಕ ಸ್ವಾಯತ್ತ ಅಧಿಕಾರದ ವಿಷಯವಾಗಿ ಸಂಸದರು ಹೊಡೆದಾಡಿದ್ದಾರೆ ಎನ್ನಲಾಗಿದೆ. ಪ್ರಾದೇಶಿಕ ಸ್ವಾಯತ್ತ ಅಧಿಕಾರಗಳನ್ನು ವಿಸ್ತರಿಸುವ ಉದ್ದೇಶ ಹೊಂದಿರುವ ವಿವಾದಾತ್ಮಕ ಕಾನೂನಿನ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಗದ್ದಲ ಆರಂಭವಾಯಿತು. ಬಳಿಕ ಪ್ರತಿಪಕ್ಷದ ಸಂಸದರೊಬ್ಬರು ಇಟಲಿಯ ಧ್ವಜವನ್ನು ಹಿಡಿದುಕೊಂಡು ಬಂದಾಗ ಗಲಾಟೆ ತಾರಕಕ್ಕೇರಿತು. ಇದು ಆಡಳಿತ ಮತ್ತು ಪ್ರತಿಪಕ್ಷಗಳ ಸಂಸದರು ಪರಸ್ಪರ ಕೈ ಕೈ ಮಿಲಾಯಿಸುವ ಹಂತದವರೆಗೂ ಹೋಯಿತು.

ತಕ್ಷಣ ಸೆಕ್ಯುರಿಟಿ ಗಾರ್ಡ್‌ ಸಿಬ್ಬಂದಿ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಘರ್ಷಣೆಯಲ್ಲಿ ಗಾಯಗೊಂಡ ಸಂಸದ ಡೊನ್ನೊ ಅವರನ್ನು ಗಾಲಿಕುರ್ಚಿಯಲ್ಲಿ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಮೂಲಗಳು ತಿಳಿಸಿವೆ. ಸಂಸತ್‌ನಲ್ಲಿ ನಡೆದ ಈ ಗಲಾಟೆ ವ್ಯಾಪಕ ಚರ್ಚೆಯನ್ನು ಹುಟ್ಟು ಹಾಕಿದೆ. ಜತೆಗೆ ಸಂಸದರ ನಡೆಯನ್ನು ಹಲವರು ಟೀಕಿಸಿದ್ದಾರೆ. ಚುನಾಯಿತ ಜನಪ್ರತಿನಿಧಿಗಳು ಪ್ರದರ್ಶಿಸಿದ ನಡವಳಿಕೆಯನ್ನು ಸಾರ್ವಜನಿಕರು ಖಂಡಿಸಿದ್ದಾರೆ. ಸಂಸತ್‌ ಬಾಕ್ಸಿಂಗ್‌ ವೇದಿಯಂತೆ ಭಾಸವಾಯಿತು ಎಂದು ಹಲವರು ವ್ಯಂಗ್ಯವಾಡಿದ್ದಾರೆ. ಜಿ 7 ಶೃಂಗಸಭೆ ಜೂನ್‌ 13ರಂದು ಆರಂಭವಾಗಿದ್ದು ಜೂನ್‌ 11ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ.

ಇಟಲಿ ತಲುಪಿದ ಪ್ರಧಾನಿ ನರೇಂದ್ರ ಮೋದಿ

ಇಟಲಿಯ ಅಪುಲಿಯಾ ಪ್ರದೇಶದ ಐಷಾರಾಮಿ ರೆಸಾರ್ಟ್ ಬೊರ್ಗೊ ಎಗ್ನಾಜಿಯಾದಲ್ಲಿ ಜೂನ್‌ 13ರಿಂದ 15ರವರೆಗೆ ನಡೆಯಲಿರುವ ಜಿ 7 ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಇಟಲಿ ತಲುಪಿದ್ದಾರೆ. ಸತತ ಮೂರನೇ ಬಾರಿ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಮೋದಿ ಅವರ ಮೊದಲ ಅಂತಾರಾಷ್ಟ್ರೀಯ ಪ್ರವಾಸ ಇದು ಎನ್ನುವುದು ವಿಶೇಷ.

ಶುಕ್ರವಾರ ಇಟಲಿಯ ಅಪುಲಿಯಾ ಪ್ರದೇಶದ ಬೃಂಡಿಸಿ ವಿಮಾನ ನಿಲ್ದಾಣಕ್ಕೆ ತಲುಪಿದ ಮೋದಿ “ವಿಶ್ವ ನಾಯಕರೊಂದಿಗೆ ಉಪಯುಕ್ತ ಚರ್ಚೆಗಳಲ್ಲಿ ತೊಡಗಿಸಿಕೊಳ್ಳಲು ಎದುರು ನೋಡುತ್ತಿದ್ದೇನೆ. ಒಟ್ಟಾಗಿ ನಾವು ಜಾಗತಿಕ ಸವಾಲುಗಳನ್ನು ಎದುರಿಸುವ ಮತ್ತು ಉಜ್ವಲ ಭವಿಷ್ಯಕ್ಕಾಗಿ ಅಂತರರಾಷ್ಟ್ರೀಯ ಸಹಕಾರವನ್ನು ವೃದ್ಧಿಸುವ ಗುರಿಯನ್ನು ಹೊಂದಿದ್ದೇವೆ” ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Khalistan Terror: ಇಟಲಿಯಲ್ಲಿ ಮಹಾತ್ಮ ಗಾಂಧೀಜಿ ಪ್ರತಿಮೆ ವಿರೂಪಗೊಳಿಸಿದ ಖಲಿಸ್ತಾನಿಗಳು

ಶೃಂಗಸಭೆಯ ಸಮಯದಲ್ಲಿ ಮೋದಿ ಅವರಿ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಶೃಂಗಸಭೆಯ ಹೊರತಾಗಿ ಮೋದಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ ಎಂದು ಯುಎಸ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ತಿಳಿಸಿದ್ದಾರೆ. ಶೃಂಗಸಭೆಯಲ್ಲಿ ಪಾಲ್ಗೊಳ್ಳುವಂತೆ ಇಟಲಿ ಭಾರತಕ್ಕೆ ಆಹ್ವಾನ ನೀಡಿತ್ತು. ಇದು ಜಿ 7 ಶೃಂಗಸಭೆಯಲ್ಲಿ ಮೋದಿ ಅವರ ಸತತ ಐದನೇ ಭಾಗವಹಿಸುವಿಕೆಯಾಗಿದ್ದು, ಅವರು ಇಂದು ಸಂಜೆ ಭಾರತಕ್ಕೆ ಮರಳಲಿದ್ದಾರೆ.

Continue Reading
Advertisement
Petrodollar Deal
ವಿದೇಶ3 mins ago

Petrodollar Explainer: ಅಮೆರಿಕ ಜೊತೆಗಿನ 50 ವರ್ಷಗಳ ಪೆಟ್ರೊಡಾಲರ್‌ ಒಪ್ಪಂದ ಕೊನೆಗೊಳಿಸಿದ ಸೌದಿ ಅರೇಬಿಯಾ; ಡಾಲರ್‌ ಗರ್ವ ಭಂಗ?

Raaj Kumar Anand
ದೇಶ22 mins ago

Raaj Kumar Anand: ಆಪ್‌ ಮಾಜಿ ಸಚಿವ ರಾಜ್‌ ಕುಮಾರ್‌ ಆನಂದ್‌ ಶಾಸಕ ಸ್ಥಾನದಿಂದಲೂ ಅನರ್ಹ; ಕಾರಣ ಇಲ್ಲಿದೆ

Star Saree Fashion
ಫ್ಯಾಷನ್37 mins ago

Star Saree Fashion: ರೇಷ್ಮೆ ಸೀರೆಯಲ್ಲಿ ನಟಿ ಕೀರ್ತಿ ಸುರೇಶ್‌ರಂತೆ ಗ್ಲಾಮರಸ್‌ ಆಗಿ ಕಾಣಿಸಬೇಕೆ? 5 ಟಿಪ್ಸ್ ಫಾಲೋ ಮಾಡಿ!

Sonakshi Sinha
Latest40 mins ago

Sonakshi Sinha: ನಟಿ ಸೋನಾಕ್ಷಿ ಸಿನ್ಹಾ ಐಷಾರಾಮಿ ಅಪಾರ್ಟ್‌ಮೆಂಟ್ ಹೇಗಿದೆ? ವಿಡಿಯೊ ನೋಡಿ!

Karnataka Weather Forecast
ಮಳೆ45 mins ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Gangster Ravi Pujari
ಕರ್ನಾಟಕ48 mins ago

Gangster Ravi Pujari: ಭೂಗತ ಪಾತಕಿ ರವಿ ಪೂಜಾರಿಗೆ ಅನಾರೋಗ್ಯ; ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು

BS Yediyurappa
ಕರ್ನಾಟಕ52 mins ago

BS Yediyurappa: ಪೋಕ್ಸೊ ಕೇಸ್;‌ ಮಾಜಿ ಸಿಎಂಗೇ ಹೀಗಾದರೆ ಜನರ ಗತಿ ಏನು? ಸರ್ಕಾರಕ್ಕೆ ಕೋರ್ಟ್‌ ಚಾಟಿ!

Allergic Asthma
ಆರೋಗ್ಯ1 hour ago

Allergic Asthma: ಅಸ್ತಮಾ ಹೊಂದಿರುವ ವ್ಯಕ್ತಿಗಳು ಈ ಅಲರ್ಜಿಗಳಿಂದ ದೂರವಿರಬೇಕು

Due to heavy rain water entered the houses of Tharkas Pet village of Chittapur taluk
ಮಳೆ1 hour ago

Karnataka Rain: ಧಾರಾಕಾರ ಮಳೆ; ಚಿತ್ತಾಪುರ ತಾಲೂಕಿನ ತರ್ಕಸ್‌ಪೇಟೆ ಗ್ರಾಮ ತತ್ತರ

Pawan Kalyan
Latest2 hours ago

Akira Nandan: ಅಕಿರಾ ನಂದನ್‌; ಆರೂವರೆ ಅಡಿ ಎತ್ತರದ ಪವನ್ ಕಲ್ಯಾಣ್ ಪುತ್ರನಿಗೆ ಭಾರಿ ಡಿಮ್ಯಾಂಡ್‌!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ45 mins ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು2 hours ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು2 hours ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ3 hours ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ3 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ3 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ3 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ3 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

ಟ್ರೆಂಡಿಂಗ್‌