Viral Video: ಉತ್ತಪ್ಪಮ್‌ ಮೇಲೆ ಮೂಡಿದ ಕಲಾಕೃತಿ; ತಿನ್ನಲು ಮನಸ್ಸೇ ಬರದು ಎಂದ ನೆಟ್ಟಿಗರು - Vistara News

ವೈರಲ್ ನ್ಯೂಸ್

Viral Video: ಉತ್ತಪ್ಪಮ್‌ ಮೇಲೆ ಮೂಡಿದ ಕಲಾಕೃತಿ; ತಿನ್ನಲು ಮನಸ್ಸೇ ಬರದು ಎಂದ ನೆಟ್ಟಿಗರು

Viral Video: ದಕ್ಷಿಣ ಭಾರತದ ಜನಪ್ರಿಯ ಖಾದ್ಯ ಉತ್ತಪ್ಪಮ್‌ ತಯಾರಿಸುತ್ತಿರುವ ವಿಧಾನ ಈಗ ವೈರಲ್‌ ಆಗುತ್ತಿದೆ. ಇದರಲ್ಲೇನು ವಿಶೇಷ ಎನ್ನುವುದನ್ನು ತಿಳಿಯಲು ಈ ವಿಡಿಯೊ ನೋಡಿ.

VISTARANEWS.COM


on

uttappam
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ದಕ್ಷಿಣ ಭಾರತದ ಉತ್ತಪ್ಪಮ್‌ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ತಮಿಳುನಾಡಿನ ಈ ಸಾಂಪ್ರದಾಯಿಕ ತಿಂಡಿ ಬಹು ಜನಪ್ರಿಯ. ವೃತ್ತಾಕಾರದ ಈ ತಿಂಡಿಯನ್ನು ದೋಸೆಗಿಂತ ಸ್ವಲ್ಪ ದಪ್ಪವಾಗಿ ಕಾವಲಿ ಮೇಲೆ ಹೊಯ್ಯಲಾಗುತ್ತದೆ. ಗರಿಗರಿಯಾದ ತಿಂಡಿಯನ್ನು ಕಾಯಿಚಟ್ನಿಯೊಂದಿಗೆ ಸೇವಿಸುವುದು ವಾಡಿಕೆ. ಆದರೆ ಈ ಉತ್ತಪ್ಪಮ್‌ ನೋಡಿದರೆ ಯಾರಿಗೂ ತಿನ್ನಲು ಮನಸ್ಸೇ ಬಾರದು. ಅಷ್ಟು ಸೊಗಸಾಗಿ ಅದರ ಮೇಲೆ ಡಿಸೈನ್‌ ರಚಿಸಲಾಗಿದೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ (Viral Video).

ದೆಹಲಿ ಮೂಲದ ಬಾಣಸಿಗರಾದ ಸುರಭಿ ಸೆಹಗಲ್ ಇತ್ತೀಚೆಗೆ ತಯಾರಿಸಿದ ಉತ್ತಪ್ಪಮ್‌ನ ವಿಡಿಯೊ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೊವನ್ನು ಈಗಾಗಲೇ 3 ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಿಸಿದ್ದಾರೆ. ಬೇಬಿ ಕಾರ್ನ್, ಹಸಿರು ಈರುಳ್ಳಿ, ಬೆಂಡೆ, ಉಪ್ಪಿನಕಾಯಿ ಮತ್ತು ಮೈಕ್ರೊಗ್ರೀನ್‌ನಂತಹ ತರಕಾರಿಗಳನ್ನು ಬಳಿಸಿ ಸುರಭಿ ಉತ್ತಪ್ಪಮ್‌ ಮೇಲೆ ಸುಂದರ ಕಲಾಕೃತಿ ಬಿಡಿಸಿದ್ದಾರೆ. ಈ ಸಾಂಪ್ರದಾಯಿಕ ಖಾದ್ಯದ ಮೇಲಿನಈ ನೂತನ ಪ್ರಯೋಗಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಡಿಯೊದಲ್ಲಿ ಏನಿದೆ?

ವಿಡಿಯೊದ ಆರಂಭದಲ್ಲಿ ಸುರಭಿ ತೆಳುವಾಗಿ ಕತ್ತರಿಸಿದ ಬೇಬಿ ಕಾರ್ನ್, ಈರುಳ್ಳಿ ಮತ್ತು ಬೆಂಡೆಕಾಯಿಯನ್ನು ಜೋಡಿಸುತ್ತಿರುವುದು ಕಂಡು ಬರುತ್ತದೆ. ಹೂವಿನ ವಿನ್ಯಾಸವನ್ನು ಅವರು ಈ ತರಕಾರಿಗಳಿಂದ ರಚಿಸುತ್ತಾರೆ. ಬಳಿಕ ಅವರು ಉತ್ತಪ್ಪಮ್‌ ಹಿಟ್ಟನ್ನು ತವಾ ಮೇಲೆ ಹರಡುತ್ತಾರೆ. ಬಳಿಕ ಹಿಟ್ಟಿನ ಮೇಲೆ ಹೂವಿನ ಮಾದರಿಗಳನ್ನು ಸೂಕ್ಷ್ಮವಾಗಿ ಇರಿಸುತ್ತಾರೆ. ಅಂತಿಮವಾಗಿ ಹಸಿರು ಈರುಳ್ಳಿ ಮತ್ತು ಮೈಕ್ರೊಗ್ರೀನ್ ಎಲೆಗಳನ್ನು ಸೇರಿಸಿ ಅವರು ಉತ್ತಪ್ಪಮ್‌ ಅನ್ನು ಬೇಯಿಸುತ್ತಾರೆ. ಎರಡೂ ಕಡೆ ಉತ್ತಮವಾಗಿ ಬೆಂದ ಉತ್ತಪ್ಪಮ್‌ ಅನ್ನು ತಟ್ಟೆಗೆ ವರ್ಗಾಯಿಸುತ್ತಾರೆ. ಇದು ಮೇಲ್ನೋಟಕ್ಕೆ ಕಲಾಕೃತಿ ಎಂದೇ ಭಾಸವಾಗುತ್ತದೆ. ʼʼನನ್ನ ನೆಚ್ಚಿನದುʼʼ ಎನ್ನುವ ಕ್ಯಾಪ್ಶನ್‌ನೊಂದಿಗೆ ಈ ವಿಡಿಯೊವನ್ನು ಅವರು ಪೋಸ್ಟ್‌ ಮಾಡಿದ್ದಾರೆ.

ನೆಟ್ಟಿಗರು ಏನಂದ್ರು?

ಸುರಭಿ ಅವರ ಈ ವಿಡಿಯೊಕ್ಕೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ʼʼಈ ಉತ್ತಪ್ಪಮ್‌ ತಿನ್ನಲು ಮನಸ್ಸೇ ಬರಲಾರದು. ಈ ಉತ್ತಮ ಕಲಾಕೃತಿಯನ್ನು ಸೇವಿಸುವುದಾದರೂ ಹೇಗೆ?ʼʼ ಎಂದು ಒಬ್ಬರು ಹೇಳಿದ್ದಾರೆ. ʼʼಬಟ್ಟೆಯ ಮೇಲಿನ ಎಂಬ್ರಾಯಿಡರಿಯನ್ನು ಇದು ಹೋಲುತ್ತದೆʼʼ ಎಂದು ಇನ್ನೊಬ್ಬರು ಹೇಳಿದ್ದಾರೆ. ʼʼಅದ್ಭುತ ಕಲೆʼʼ ಎಂದು ಮತ್ತೊಬ್ಬರು ಮೆಚ್ಚುಗೆ ಸೂಚಿಸಿದ್ದಾರೆ. ʼʼನಿಜವಾಗಿಯೂ ಇದು ಉತ್ತಮ ಕಲೆʼʼ ಎಂದು ಮಗದೊಬ್ಬರು ಹೊಗಳಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೊ ನೆಟ್ಟಿಗರ ಗಮನ ಸೆಳೆದಿರುವುದಂತು ಹೌದು.

ಇದಕ್ಕೂ ಮೊದಲು ಸುರಭಿ ಈ ವಿಶಿಷ್ಟ ಉತ್ತಪ್ಪಮ್‌ ಪಾಕವಿಧಾನದ ಹಿಂದಿನ ಸೃಜನಶೀಲ ಪ್ರಕ್ರಿಯೆಯನ್ನು ಹಂಚಿಕೊಂಡಿದ್ದರು. “ಉತ್ತಪ್ಪಮ್‌ ರೀಲ್‌ಗಾಗಿ ತೆಳುವಾದ ಕಾಂಡಗಳನ್ನು ಹೊಂದಿರುವ ಸುಂದರವಾದ ಈರುಳ್ಳಿಯನ್ನು ನಾನು ಮಾರುಕಟ್ಟೆಯಲ್ಲಿ ಕಂಡುಕೊಂಡೆ. ಈ ಪ್ರಕ್ರಿಯೆಯು ಚಿತ್ರಕಲೆಗೆ ಹೋಲುತ್ತದೆʼʼ ಎಂದು ಹೇಳಿದ್ದರು. ಈ ಹಿಂದೆ ಸುರಭಿ ವಿವಿಧ ವರ್ಣರಂಜಿತ ಪದಾರ್ಥಗಳನ್ನು ಬಳಸಿಕೊಂಡು ಇಡ್ಲಿ ತಯಾರಿಸುತ್ತಿರುವ ವಿಡಿಯೊ ಕೂಡ ವೈರಲ್‌ ಆಗಿತ್ತು.

ಇದನ್ನೂ ಓದಿ: Viral Video: ನೀಲಿ ದೋಸೆ ತಯಾರಿಸಿದ ಬಾಣಸಿಗ; ಹಿಟ್ಟಿಗೆ ಹಾರ್ಪಿಕ್‌ ಮಿಕ್ಸ್ ಅಂದ್ರು ನೆಟ್ಟಿಗರು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Vande Bharat Express: ಮತ್ತೆ ಸುದ್ದಿಯಾದ ವಂದೇ ಭಾರತ್‌ ರೈಲು; ಮಾಂಸಾಹಾರ ಸರ್ವ್‌ ಮಾಡಿದ ಸಿಬ್ಬಂದಿಗೆ ಕಪಾಳಮೋಕ್ಷ

Vande Bharat Express: ಊಟದ ಪ್ಯಾಕೆಟ್‌ನಲ್ಲಿನ ಲೇಬಲ್ ಅನ್ನು ಗಮನಿಸದ ಹಿರಿಯ ವ್ಯಕ್ತಿ ಮಾಂಸಾಹಾರಿ ಆಹಾರವನ್ನು ಸೇವಿಸಿದ್ದಾರೆ. ತಿಂದ ನಂತರ ಮಾಂಸಾಹಾರವೆಂದು ಗೊತ್ತಾಗಿದ್ದು, ಇದರಿಂದ ಕುಪಿತಗೊಂಡ ಅವರು ಆಹಾರ ವಿತರಿಸಿದ ಸಿಬ್ಬಂದಿಗೆ ಎರಡು ಬಾರಿ ಕಪಾಳಮೋಕ್ಷ ಮಾಡಿದ್ದಾರೆ.

VISTARANEWS.COM


on

Vande Bharat Express
Koo

ನವದೆಹಲಿ: ವಂದೇ ಭಾರತ್‌ ರೈಲು(Vande Bharat Express) ಶುರುವಾದ ನಂತರ ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಆಗುತ್ತಲೇ ಇದೆ. ಕೆಲವೊಮ್ಮೆ ರೈಲಿನ ಮೇಲೆ ಕಲ್ಲೆಸೆತ, ಇನ್ನು ಕೆಲವೊಮ್ಮೆ ರೈಲಿನಲ್ಲಿ ಸಿಗುವ ಕಳಪೆ ಊಟ ಹೀಗೆ ಸದಾ ಯಾವುದಾದರೂ ವಿವಾದಗಳು ಕೇಳಿ ಬರುತ್ತಲೇ ಇರುತ್ತದೆ. ಇದೀಗ ಅಂತಹದ್ದೇ ಮತ್ತೊಂದು ಘಟನೆ ವರದಿಯಾಗಿದೆ. ಹಿರಿಯ ಪ್ರಯಾಣಿಕರೊಬ್ಬರು (Elderly Passenger), ತಾವು ಕೇಳಿದ ಸಸ್ಯಾಹಾರದ (Vegetarian) ಬದಲಿಗೆ ಮಾಂಸಾಹಾರವನ್ನು (Non-Vegetarian Meal) ನೀಡಿದ್ದಾನೆಂದು ಆಹಾರ ವಿತರಕ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿರುವ ಘಟನೆ ವರದಿಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಘಟನೆ ವಿವರ:

ಹೌರಾದಿಂದ ರಾಂಚಿಗೆ (Ranchi) ತೆರಳುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಜುಲೈ 26 ರಂದು ನಡೆದ ಈ ಘಟನೆಯನ್ನು ಸಹ-ಪ್ರಯಾಣಿಕ ಕುನಾಲ್ ವರ್ಮಾ ಅವರು ವಿಡಿಯೋ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಊಟದ ಪ್ಯಾಕೆಟ್‌ನಲ್ಲಿನ ಲೇಬಲ್ ಅನ್ನು ಗಮನಿಸದ ಹಿರಿಯ ವ್ಯಕ್ತಿ ಮಾಂಸಾಹಾರಿ ಆಹಾರವನ್ನು ಸೇವಿಸಿದ್ದಾರೆ. ತಿಂದ ನಂತರ ಮಾಂಸಾಹಾರವೆಂದು ಗೊತ್ತಾಗಿದ್ದು, ಇದರಿಂದ ಕುಪಿತಗೊಂಡ ಅವರು ಆಹಾರ ವಿತರಿಸಿದ ಸಿಬ್ಬಂದಿಗೆ ಎರಡು ಬಾರಿ ಕಪಾಳಮೋಕ್ಷ ಮಾಡಿದ್ದಾರೆ. ಇದು ಇತರ ಪ್ರಯಾಣಿಕರಿಗೆ ಹಿಡಿಸಲಿಲ್ಲ, ಮಧ್ಯಪ್ರವೇಶಿಸಿದ ಪ್ರಯಾಣಿಕರು ಹಿರಿಯ ಪ್ರಯಾಣಿಕ ಆಹಾರ ವಿತರಕ ಸಿಬ್ಬಂದಿಯ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಹಿರಿಯ ಪ್ರಯಾಣಿಕನ ವರ್ತನೆಗೆ ಅಸಮಾಧಾನಗೊಂಡಿರುವ ಸಹ ಪ್ರಯಾಣಿಕರು ಆತನ ವಿರುದ್ಧ ಹರಿಹಾಯ್ದಿರುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ನೀವು ಏಕೆ ಅವರಿಗೆ ಹೊಡೆಯತ್ತಿದ್ದೀರಿ? ನಿಮ್ಮ ವಯಸ್ಸನ್ನು ನೋಡಿ. ವಯಸ್ಸಿಗೆ ತಕ್ಕಂತೆ ವರ್ತಿಸಿ ಎಂದು ಹೇಳಿದ್ದಾರೆ ಈ ವೇಳೆ ಆಹಾರ ವಿತರಿಸಿದ ಸಿಬ್ಬಂದಿ ಪದೇ ಪದೇ ಕ್ಷಮೆಯಾಚಿಸುವುದನ್ನು ಕಾಣಬಹುದು. ಇತರ ಪ್ರಯಾಣಿಕರು ಹಿರಿಯ ವ್ಯಕ್ತಿಯನ್ನು ಕ್ಷಮೆಯಾಚಿಸಿ ಎಂದು ಹೇಳುತ್ತಾರೆ.

ಇನ್ನು ಘಟನೆಯ ಬಗ್ಗೆ ಪೂರ್ವ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಕಾಶ್ ಚರಣ್ ಪ್ರತಿಕ್ರಿಯಿಸಿದ್ದು, ಘಟನೆ ಬಗ್ಗೆ ವರದಿಯಾಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ ಅದನ್ನು ಬಗೆಹರಿಸಲಾಗಿದೆ ಎಂದು ಹೇಳಿದ್ದಾರೆ. ಇನ್ನು ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ವೃದ್ಧನ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral News: ಕಾಲಿಗೆ ಕಬ್ಬಿಣದ ಸರಪಳಿ.. ಕೈಯಲ್ಲಿ ಅಮೆರಿಕ ಪಾಸ್‌ಪೋರ್ಟ್‌..ದಟ್ಟ ಕಾಡಿನಲ್ಲಿ ಮಹಿಳೆ ಪತ್ತೆ-ವಿಡಿಯೋ ವೈರಲ್‌

Continue Reading

Latest

Viral Video: ಮಲಗಿದ್ದ ಮಹಿಳೆಯ ತಲೆಕೂದಲಿನಲ್ಲಿ ಹರಿದಾಡಿದ ಹಾವು!

Viral Video: ಹಾವೆಂದರೆ ಎಲ್ಲರೂ ಬೆಚ್ಚಿಬೀಳುತ್ತಾರೆ. ಆದರೆ ಇಲ್ಲೊಬ್ಬಳು ಮಹಿಳೆಯ ತಲೆಯಿಂದ ಹಾವು ನಿಧಾನಕ್ಕೆ ತೆವಳುತ್ತ ಹೋಗುತ್ತಿರುವ ವಿಡಿಯೊವೊಂದು ಎಲ್ಲೆಡೆ ವೈರಲ್ ಆಗಿದೆ.ಮಲಗಿದ್ದ ಮಹಿಳೆಯ ಕೂದಲಿನ ಮೂಲಕ ಹಾವು ನಿಧಾನಕ್ಕೆ ತೆವಳಿ, ಆಕೆಯ ಕೂದಲನ್ನು ಸುತ್ತಿ, ಅವಳ ತಲೆಯ ಹಿಂಭಾಗಕ್ಕೆ ಹೋಗಿದೆ. ಮಹಿಳೆಗೆ ಪರಿಸ್ಥಿತಿಯ ಬಗ್ಗೆ ಸಂಪೂರ್ಣವಾಗಿ ತಿಳಿದಿಲ್ಲ ಎಂದು ತೋರುತ್ತದೆ.. ಇದು ಸಖತ್ ವೈರಲ್ ಆಗಿದೆ.

VISTARANEWS.COM


on

Viral Video
Koo


ನವದೆಹಲಿ: ಹಾವು ಮನೆಯ ಹಿತ್ತಲಿನಲ್ಲಿ, ರಸ್ತೆಯ ಬದಿಯಲ್ಲಿ ಹರಿದಾಡುವುದನ್ನು ನಾವು ನೋಡಿರುತ್ತೇವೆ. ಹಾಗೇ ಕೆಲವೊಮ್ಮೆ ಹಾವು ಮನೆಯೊಳಗೆ ಅಡುಗೆ ಮನೆಯಲ್ಲಿ, ಶೌಚಾಲಯದಲ್ಲಿ ಹರಿದಾಡುತ್ತವೆ. ಅದರಲ್ಲೂ ಮಹಿಳೆಯರು ಹಾವನ್ನು ನೋಡಿದರೆ ಭಯಭೀತರಾಗುತ್ತಾರೆ. ಆದರೆ ಇಲ್ಲೊಂದು ಹಾವು ಮಲಗಿದ್ದ ಮಹಿಳೆಯ ತಲೆಯ ಕೂದಲಿನಲ್ಲಿ ಹರಿದಾಡುತ್ತಿರುವುದು ಕಂಡುಬಂದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (Viral Video) ಆಗಿದೆ.

ವಿಡಿಯೊದಲ್ಲಿ ಮಲಗಿದ್ದ ಮಹಿಳೆಯ ಕೂದಲಿನ ಮೂಲಕ ಹಾವು ತೆವಳುತ್ತಿದೆ. ಹಾವು ಆಕೆಯ ಕೂದಲನ್ನು ಸುತ್ತಿ, ಅವಳ ತಲೆಯ ಹಿಂಭಾಗಕ್ಕೆ ಹೋಗಿದೆ. ಮಹಿಳೆಗೆ ಪರಿಸ್ಥಿತಿಯ ಬಗ್ಗೆ ಸಂಪೂರ್ಣವಾಗಿ ತಿಳಿದಿಲ್ಲ ಎಂದು ತೋರುತ್ತದೆ. @kashikyatra ಎಂಬ ಇನ್ಸ್ಟಾಗ್ರಾಮ್ ಬಳಕೆದಾರರು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಇದು ಸಖತ್ ವೈರಲ್ ಆಗಿದೆ. ಈ ವೈರಲ್ ವಿಡಿಯೊಗೆ “ಲೇಹ್ ಲಡಾಖ್ ಬೈಕ್ ರೈಡ್ ಟೂರ್ ಪ್ಯಾಕೇಜ್” ಎಂದು ಶೀರ್ಷಿಕೆ ನೀಡಲಾಗಿದೆ.

ಸುಮಾರು 2.1 ಮಿಲಿಯನ್ ಫಾಲೋವರ್ಸ್ ಹೊಂದಿರುವ ಈ ಬಳಕೆದಾರರು ತನ್ನ ಖಾತೆಯಲ್ಲಿ ಇಂತಹ ಅನೇಕ ಭಯಾನಕ ಹಾವಿನ ವಿಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಇದು ಒಂದು. ಈ ವಿಡಿಯೊ ಅನೇಕರ ಗಮನವನ್ನು ಸೆಳೆದಿದೆ ಮತ್ತು ಹಲವಾರು ನೆಟ್ಟಿಗರು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಈ ವಿಡಿಯೊವನ್ನು 226 ಸಾವಿರಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ ಮತ್ತು 128 ಸಾವಿರ ಜನರು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಗೆ ಸುಮಾರು 2,098 ಜನರು ಕಾಮೆಂಟ್ ಮಾಡಿದ್ದಾರೆ. ಇದನ್ನು ವೀಕ್ಷಿಸಿದವರಲ್ಲಿ ಹೆಚ್ಚಿನವರು ಆಘಾತಕ್ಕೊಳಗಾಗಿದ್ದಾರೆ ಮತ್ತು ಎಮೋಜಿಗಳ ಮೂಲಕ ಅದನ್ನು ವ್ಯಕ್ತಪಡಿಸಿದ್ದಾರೆ.

ಹಾವು ಮಹಿಳೆಯ ಕೂದಲನ್ನು ಸುರಕ್ಷಿತ ಮತ್ತು ಬೆಚ್ಚಗಿನ ಸ್ಥಳವೆಂದು ತಪ್ಪಾಗಿ ಭಾವಿಸಿರಬಹುದು ಎಂದು ಊಹಿಸಲಾಗಿದೆ. ಒಬ್ಬ ಬಳಕೆದಾರರು “ಹರ್ ಹರ್ ಮಹಾದೇವ್” ಎಂದು ಕಾಮೆಂಟ್ ಮಾಡಿದರೆ, ಇನ್ನೊಬ್ಬರು ಹಾವನ್ನು ಬಫ್ ಪಟ್ಟಿಯ ಕೀಲ್ಬ್ಯಾಕ್ ಎಂದು ಗುರುತಿಸಿದ್ದಾರೆ, ಬಿಹಾರದಲ್ಲಿ ಇದೇ ರೀತಿಯ ಹಾವುಗಳೊಂದಿಗೆ ಆಡಿದ ಬಾಲ್ಯದ ನೆನಪುಗಳನ್ನು ನೆನಪಿಸಿಕೊಂಡಿದ್ದಾರೆ. ಈ ರೀತಿಯ ಹಾವು ಹಾನಿಕಾರಕವಲ್ಲ ಎಂದು ಅವರು ಹೇಳಿದರು.

ಇದನ್ನೂ ಓದಿ: 115 ರೂ.ಗೆ ಚುಂಬನ, 11 ರೂ.ಗೆ ಬಿಸಿ ಅಪ್ಪುಗೆಯ ಸುಖ; ಸ್ಟ್ರೀಟ್‌ ಗರ್ಲ್‌ಫ್ರೆಂಡ್ ಟ್ರೆಂಡ್‌!

ವೈರಲ್ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಜನರ ಗಮನವನ್ನು ಸೆಳೆದಿದೆ, ಇದು ವನ್ಯಜೀವಿಗಳು ಮಾನವರೊಂದಿಗೆ ಸಂವಹನ ನಡೆಸುವ ಅನಿರೀಕ್ಷಿತ ವಿಧಾನವಾಗಿದೆ ಎನ್ನಲಾಗಿದೆ. ಒಬ್ಬ ವ್ಯಕ್ತಿಗೆ ತುಂಬಾ ಹತ್ತಿರದಲ್ಲಿ ಹಾವನ್ನು ನೋಡುವುದು ಭಯವನ್ನು ಹುಟ್ಟಿಸಿದರೂ ನಮ್ಮ ಪರಿಸರದೊಂದಿಗೆ ನಾವು ಹಂಚಿಕೊಳ್ಳುವ ಜೀವಿಗಳನ್ನು ಗೌರವಿಸುವ ಮತ್ತು ಅರ್ಥಮಾಡಿಕೊಳ್ಳುವ ಮಹತ್ವವನ್ನು ಇದು ಎತ್ತಿ ತೋರಿಸುತ್ತದೆ.

Continue Reading

Latest

Viral Video: ಹಾವನ್ನೇ ಮಣಿಸಿ ʼಸ್ನೇಹಿತʼನ ಜೀವ ಉಳಿಸಿದ ಹಲ್ಲಿ! ಅದ್ಭುತ ವಿಡಿಯೊ; ತಪ್ಪದೇ ನೋಡಿ!

Viral Video: ಹಲ್ಲಿಯೊಂದನ್ನು ಬಂಡೆಯ ಅಂಚಿನ ಮೇಲೆ ಹಾವೊಂದು ಹಿಡಿದು ಅದರ ದೇಹವನ್ನು ಸುತ್ತಿಕೊಂಡಿತ್ತು. ಹಾವಿನ ಬಿಗಿಯಾದ ಹಿಡಿತದಿಂದ ಒದ್ದಾಡುತ್ತಾ ಆ ಹಲ್ಲಿ ತನ್ನ ಜೀವಕ್ಕಾಗಿ ಹೋರಾಡುತ್ತಿತ್ತು. ಆದರೆ ಹಾವಿನ ಬಿಗಿಯಾದ ಹಿಡಿತದೊಂದಿಗೆ ಹೋರಾಡುತ್ತಿರುವ ಹಲ್ಲಿಗೆ ಇನ್ನು ಆಯುಷ್ಯವಿದ್ದಿರಬೇಕು. ಹಾಗಾಗಿ ಈ ಸಮಯದಲ್ಲಿ ಅಲ್ಲಿಗೆ ಬಂದ ಮತ್ತೊಂದು ಹಲ್ಲಿ ಧೈರ್ಯದಿಂದ ತನ್ನ ಸ್ನೇಹಿತನಿಗೆ ಸಹಾಯ ಮಾಡಲು ಮುಂದಾಗುವುದನ್ನು ನೋಡಿದರೆ ಎಂಥವರಿಗೂ ಆಶ್ಚರ್ಯವಾಗುವುದು ಖಂಡಿತ.

VISTARANEWS.COM


on

Viral Video
Koo


ಸಾಮಾನ್ಯವಾಗಿ ಮನುಷ್ಯರಲ್ಲಿ ಸ್ನೇಹಿತನೊಬ್ಬ ಸಂಕಷ್ಟದಲ್ಲಿದ್ದಾಗ ಮತ್ತೊಬ್ಬ ಸ್ನೇಹಿತ ಸಹಾಯಕ್ಕೆ ಬರುವುದನ್ನು ನಾವು ಹೆಚ್ಚಾಗಿ ನೋಡುತ್ತೇವೆ. ಹಾಗೇ ಪ್ರಾಣಿಗಳು ಸಹ ತಮ್ಮ ಸ್ನೇಹಿತನ ಮೇಲೆ ಆಕ್ರಮಣ ನಡೆದರೆ ಅದನ್ನು ಕಾಪಾಡಲು ಬರುವುದನ್ನು ನಾವು ಹಲವು ಬಾರಿ ನೋಡಿರುತ್ತೇವೆ. ಆದರೆ ಚಿಕ್ಕ ಪುಟ್ಟ ಜೀವಿಗಳು ಕೂಡ ತಮ್ಮ ಸಹಚರರು ಸಂಕಷ್ಟದಲ್ಲಿದ್ದಾಗ ಸಹಾಯಕ್ಕೆ ಬರುವುದನ್ನು ನೋಡಿದಾಗ ಆಶ್ಚರ್ಯವಾಗುವುದು ಖಂಡಿತ. ಇದೀಗ ಹಲ್ಲಿಯೊಂದು ಸಂಕಷ್ಟದಲ್ಲಿರುವ ತನ್ನ ಸ್ನೇಹಿತನ ಸಹಾಯಕ್ಕೆ ಬಂದು ಅದರ ಜೀವ ಉಳಿಸಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ. ಇದನ್ನು ಕಂಡು ಅನೇಕರು ಆಶ್ಚರ್ಯಚಕಿತರಾಗಿದ್ದಾರೆ.

ಹಲ್ಲಿಯೊಂದನ್ನು ಬಂಡೆಯ ಅಂಚಿನ ಮೇಲೆ ಹಾವೊಂದು ಹಿಡಿದು ಅದರ ದೇಹವನ್ನು ಸುತ್ತಿಕೊಂಡಿತ್ತು. ಹಾವಿನ ಬಿಗಿಯಾದ ಹಿಡಿತದಿಂದ ಒದ್ದಾಡುತ್ತಾ ಆ ಹಲ್ಲಿ ತನ್ನ ಜೀವಕ್ಕಾಗಿ ಹೋರಾಡುತ್ತಿತ್ತು. ಆದರೆ ಹಾವಿನ ಬಿಗಿಯಾದ ಹಿಡಿತದೊಂದಿಗೆ ಹೋರಾಡುತ್ತಿರುವ ಹಲ್ಲಿಗೆ ಇನ್ನು ಆಯುಷ್ಯವಿದ್ದಿರಬೇಕು. ಹಾಗಾಗಿ ಈ ಸಮಯದಲ್ಲಿ ಅಲ್ಲಿಗೆ ಬಂದ ಮತ್ತೊಂದು ಹಲ್ಲಿ ಧೈರ್ಯದಿಂದ ತನ್ನ ಸ್ನೇಹಿತನಿಗೆ ಸಹಾಯ ಮಾಡಲು ಮುಂದಾಗುವುದನ್ನು ನೋಡಿದರೆ ಎಂತವರಿಗೂ ಆಶ್ಚರ್ಯವಾಗುವುದು ಖಂಡಿತ.

ಹಲ್ಲಿ ಹಾವನ್ನು ಮುಖಾಮುಖಿಯಾಗಿ ಎದುರಿಸಿದೆ. ಹಾವು ಅದಕ್ಕೆ ಕಚ್ಚುತ್ತಿದ್ದರೂ ತನ್ನ ಸುರಕ್ಷತೆಯನ್ನು ಪಣಕ್ಕಿಟ್ಟು, ಸಿಕ್ಕಿಬಿದ್ದ ತನ್ನ ಸಹಚರನನ್ನು ಉಳಿಸಲು ಅದು ಧೈರ್ಯಶಾಲಿಯಾಗಿ ಹೋರಾಡಲು ಪ್ರಾರಂಭಿಸಿದೆ. ಆಗ ಹಾವು ತನ್ನ ಹಿಡಿತ ಕಳೆದುಕೊಂಡು ಕೆಳಗೆ ಬಿದ್ದಿದೆ. ಧೈರ್ಯಶಾಲಿ ಹಲ್ಲಿಯ ಪಟ್ಟುಬಿಡದ ದೃಢನಿಶ್ಚಯವು ಈ ಜಯಕ್ಕೆ ಕಾರಣವಾಗಿದೆ ಮತ್ತು ಇದರಿಂದ ಸ್ನೇಹಿತನ ಜೀವ ಉಳಿದಿದೆ. ಕೊನೆಗೂ ಸ್ನೇಹವು ಶತ್ರುವಿನ ಮೇಲೆ ಜಯ ಸಾಧಿಸಿದೆ.

ಇದನ್ನೂ ಓದಿ: ಕಚೇರಿಯ ಟೇಬಲ್‌ನೊಳಗೆ ಅಡಗಿದ್ದ ಬೃಹತ್‌ ಹಾವನ್ನು ಹಿಡಿದ ಮಹಿಳಾ ಸಿಬ್ಬಂದಿ! ವಿಡಿಯೊ ನೋಡಿ

ಈ ಅದ್ಭುತವಾದ ವಿಡಿಯೊವು ನಿಜವಾದ ಸ್ನೇಹಿತರು ಒಬ್ಬರಿಗೊಬ್ಬರು ಸಹಾಯ ಮಾಡಲು ಯಾವ ಮಟ್ಟಕ್ಕೂ ಬೇಕಾದರೂ ಹೋಗುತ್ತಾರೆ ಎಂಬುದನ್ನು ಸೂಚಿಸುತ್ತದೆ. ಸ್ನೇಹಕ್ಕಾಗಿ ಮನುಷ್ಯರು ಮಾತ್ರವಲ್ಲ ಪ್ರಾಣಿಗಳು ಹಾಗೂ ಇತರ ಜೀವಿಗಳು ಕೂಡ ಹೋರಾಡುತ್ತವೆ ಎಂಬುದನ್ನು ಈ ವಿಡಿಯೊದಲ್ಲಿ ನಾವು ಕಾಣಬಹುದು. ಅಲ್ಲದೇ ಈ ವಿಡಿಯೊದಲ್ಲಿ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದು ಸಹ ಸಾಬೀತಾಗಿದೆ. ಶತ್ರುವಿನ ಜೊತೆ ಜೊತೆಯಾಗಿ ನಿಂತು ಹೋರಾಡಿದರೆ ಅವರ ಮೇಲೆ ಜಯ ಸಾಧಿಸಬಹುದು ಎಂಬುದನ್ನು ಈ ವಿಡಿಯೊ ತಿಳಿಸುತ್ತದೆ.

Continue Reading

Latest

Street Girlfriends: 115 ರೂ.ಗೆ ಚುಂಬನ, 11 ರೂ.ಗೆ ಬಿಸಿ ಅಪ್ಪುಗೆಯ ಸುಖ; ಸ್ಟ್ರೀಟ್‌ ಗರ್ಲ್‌ಫ್ರೆಂಡ್ ಟ್ರೆಂಡ್‌!

Street Girlfriends: ಕೆಲವೊಮ್ಮೆ ಹೆಗಲ ಮೇಲೆ ಬಿದ್ದ ಜವಾಬ್ದಾರಿಗಳ ಹೊರೆ ಯಾವುದೇ ಕೆಲಸವಾದರೂ ಸೈ ಅನ್ನುವ ಹಾಗೇ ಮಾಡುತ್ತದೆ. ಇದಕ್ಕೆ ನಿದರ್ಶನವೆಂಬಂತೆ ಚೀನಾದಲ್ಲಿ ಈಗ ಸ್ಟ್ರೀಟ್ ಗರ್ಲ್‌ಫ್ರೆಂಡ್‌ ಟ್ರೆಂಡ್ ಹುಟ್ಟಿಕೊಂಡಿದೆ. ಚೀನಾದ ಯುವತಿಯರು ಹಣಕ್ಕಾಗಿ ಮುತ್ತು ಕೊಡುವುದು, ಅಪ್ಪಿಕೊಳ್ಳುವುದು, ಒಟ್ಟಿಗೆ ಸಿನಿಮಾ ನೋಡುವುದು, ಮನೆಗೆಲಸಕ್ಕೆ ಸಹಾಯ ಮಾಡುವುದು, ಒಟ್ಟಿಗೆ ಮದ್ಯಪಾನ ಮಾಡುವುದು ಮುಂತಾದವುಗಳ ಮೂಲಕ ಯುವಕರನ್ನು ಆಕರ್ಷಿಸುತ್ತಿದ್ದಾರೆ. ಆದರೆ ಇದರಲ್ಲಿ ಮಹಿಳೆಯರು ಯಾವುದೇ ರೀತಿಯ ದೈಹಿಕ ಸಂಬಂಧ ಹೊಂದುವುದಿಲ್ಲ ಎಂಬುದಾಗಿ ತಿಳಿಸಿದ್ದಾರೆ.

VISTARANEWS.COM


on

Viral News
Koo


ಕೆಲವು ಜನರ ಪರಿಸ್ಥಿತಿ ಹೇಗಿರುತ್ತದೆ ಅಂದರೆ ಜೀವನ ನಡೆಸಲು ಒಂದು ದಿನದ ಊಟಕ್ಕೂ ಪರದಾಡಬೇಕಾಗುತ್ತದೆ. ತಮ್ಮ ಜೊತೆಗೆ ತಮ್ಮ ಕುಟುಂಬದ ಜವಾಬ್ದಾರಿಯನ್ನು ತೆಗೆದುಕೊಂಡರ ಕತೆ ಇನ್ನೂ ಶೋಚನೀಯವಾಗಿದೆ. ಹಾಗಾಗಿ ಚೀನಾದಲ್ಲಿ ಕೆಲಸದ ಜೊತೆಗೆ ಕುಟುಂಬದ ಜವಾಬ್ದಾರಿಗಳನ್ನು ನಿಭಾಯಿಸುವ ಒತ್ತಡ ಚೀನಾದ ಯುವತಿಯರಿಗೆ ಹೆಚ್ಚಾಗಿದ್ದ ಪರಿಣಾಮ ಅವರು ಬೀದಿಯಲ್ಲಿ ಹೋಗುವ ದಾರಿಹೋಕರ ಜೊತೆ ಭಾವನಾತ್ಮಕ ಸಂಪರ್ಕಗಳನ್ನು ಬೆಳೆಸುವ ವ್ಯಾಪಾರ ಮಾಡುತ್ತಿದ್ದಾರೆ. ಹುಡುಗಿಯರು ಹಣಕ್ಕಾಗಿ ಇಂತಹ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Street Girlfriends) ಆಗಿದೆ.

Viral News
Viral News

ಚೀನಾದ ಯುವತಿಯರು ಹಣಕ್ಕಾಗಿ ಮುತ್ತು ಕೊಡುವುದು, ಅಪ್ಪಿಕೊಳ್ಳುವುದು, ಒಟ್ಟಿಗೆ ಸಿನಿಮಾ ನೋಡುವುದು, ಮನೆಗೆಲಸಕ್ಕೆ ಸಹಾಯ ಮಾಡುವುದು, ಒಟ್ಟಿಗೆ ಮದ್ಯಪಾನ ಮಾಡುವುದು ಮುಂತಾದವುಗಳ ಮೂಲಕ ಯುವಕರನ್ನು ಆಕರ್ಷಿಸುತ್ತಿದ್ದಾರೆ. ಆದರೆ ಇದರಲ್ಲಿ ಮಹಿಳೆಯರು ಯಾವುದೇ ರೀತಿಯ ದೈಹಿಕ ಸಂಬಂಧ ಹೊಂದುವುದಿಲ್ಲ ಎಂಬುದಾಗಿ ಖಡಕ್‌ ಹಾಕಿ ತಿಳಿಸುತ್ತಿದ್ದಾರೆ. ಬೀದಿಗಳಲ್ಲಿ ಕುಳಿತ ಯುವತಿಯರು ಒಂದು ಬೋರ್ಡ್‌ನಲ್ಲಿ ದರಗಳನ್ನು ಪಟ್ಟಿ ಮಾಡಿದ್ದಾರೆ ಮತ್ತು ಅದರ ಜೊತೆಗೆ ‘ನೋ ಸೆಕ್ಸ್’ ಎಂದು ಸ್ಪಷ್ಟವಾಗಿ ಬರೆದಿದ್ದಾರೆ. ಇವರದೇನಿದ್ದರೂ ʼಸ್ಪರ್ಶ ಸುಖʼದ ವ್ಯವಹಾರ ಮಾತ್ರ!

Viral News
Viral News

ಇತ್ತೀಚೆಗೆ, ಖ್ಯಾತ ಇಂಟರ್ನೆಟ್ ಬಳಕೆದಾರರು ಶೆನ್ಜೆನ್‍ನ ಗದ್ದಲದ ಬೀದಿಗಳಲ್ಲಿ ಯುವತಿಯರ ಈ ರೀತಿಯ ವ್ಯಾಪಾರವನ್ನು ನೋಡಿದ್ದಾರೆ. ಯುವತಿಯರು ಹಣಕ್ಕಾಗಿ ಬೀದಿಯಲ್ಲಿ ಅಪ್ಪುಗೆ, ಚುಂಬನ ಮುಂತಾದವುಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಡಿದ್ದು, ಚರ್ಚೆಗೆ ಕಾರಣವಾಗಿದೆ. ಶೆನ್ಜೆನ್‍ನ ಸುರಂಗಮಾರ್ಗ ನಿಲ್ದಾಣದ ಪಕ್ಕದಲ್ಲಿ, ಯುವತಿಯೊಬ್ಬಳು “ಅಪ್ಪುಗೆಗೆ ಒಂದು ಯುವಾನ್ (14 ಯುಎಸ್ ಸೆಂಟ್ಸ್), ಚುಂಬನಕ್ಕಾಗಿ 10 ಯುವಾನ್, ಒಟ್ಟಿಗೆ ಚಲನಚಿತ್ರವನ್ನು ವೀಕ್ಷಿಸಲು 15 ಯುವಾನ್, ಮನೆಕೆಲಸಗಳಲ್ಲಿ ಸಹಾಯ ಮಾಡಲು 20 ಯುವಾನ್ (ಯುಎಸ್ $ 2.8), ನಿಮ್ಮೊಂದಿಗೆ ಕುಡಿಯಲು ಗಂಟೆಗೆ 40 ಯುವಾನ್” ಎಂಬ ಫಲಕದೊಂದಿಗೆ ಸ್ಟಾಲ್ ಅನ್ನು ಹಾಕಿದ್ದಾಳೆ. ಆಕೆಯ ಜೊತೆಗೆ ಇತರ ಇಬ್ಬರು ಮಹಿಳೆಯರು ಈ ಫಲಕದೊಂದಿಗೆ ಪಾದಚಾರಿಗಳು ನಡೆದಾಡುವ ಬೀದಿ ಚೌಕದಲ್ಲಿ ಮಳಿಗೆಗಳನ್ನು ಸ್ಥಾಪಿಸಿದ್ದಾರೆ ಎನ್ನಲಾಗಿದೆ. ಇದರಿಂದ ಅವರು ದಿನಕ್ಕೆ 100 ಯುವಾನ್ ಗಳಿಸಬಹುದು ಎಂದು ವರದಿಯಾಗಿದೆ. 1 ಯುವಾನ್‌ ಅಂದರೆ 11.55 ರೂಪಾಯಿ.

Viral News
Viral News

ಸ್ಟ್ರೀಟ್ ಗರ್ಲ್‌ಫ್ರೆಂಡ್‌ ಸೋಶಿಯಲ್ ಮೀಡಿಯಾದಲ್ಲಿ ಜನರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. “ಇದರಿಂದ ಈ ಹುಡುಗಿಯರು ವಾರಾಂತ್ಯದಲ್ಲಿ ಸಮಯವನ್ನು ಕಳೆಯಬಹುದು ಮತ್ತು ಅನೇಕ ಆಸಕ್ತಿದಾಯಕ ಜನರನ್ನು ಭೇಟಿಯಾಗಬಹುದು. ನಾನು ಅವರೊಂದಿಗೆ ಚಾಟ್ ಮಾಡಲು ಪ್ರಯತ್ನಿಸಲು ಇಷ್ಟಪಡುತ್ತೇನೆ” ಎಂದು ಒಬ್ಬರು ಬರೆದಿದ್ದಾರೆ.

“ಸ್ಟ್ರೀಟ್ ಗರ್ಲ್‌ಫ್ರೆಂಡ್ ಚಟುವಟಿಕೆಯು ಗ್ರಾಹಕರು ಮತ್ತು ಹುಡುಗಿಯರಿಬ್ಬರಿಗೂ ಸ್ವಯಂಪ್ರೇರಿತವಾಗಿದೆ. ಅಲ್ಲದೆ, ಒತ್ತಡವನ್ನು ನಿವಾರಿಸಲು ಮತ್ತು ಸಾಮಾಜಿಕವಾಗಿ ಬೆರೆಯಲು ಇದನ್ನು ಒಂದು ಮಾರ್ಗವೆಂದು ಪರಿಗಣಿಸಬಹುದು” ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ. ಆದರೆ ಇನ್ನೊಬ್ಬರು “ಮಹಿಳೆಯರ ಒಡನಾಟಕ್ಕೆ ಬೆಲೆ ತೆರುವುದು ಅಗೌರವ ಮತ್ತು ಅವರ ಘನತೆಯನ್ನು ದುರ್ಬಲಗೊಳಿಸುತ್ತದೆ.” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ವಿಚ್ಛೇದನದ ಬಳಿಕ ಪತ್ನಿಗೆ ದುಬಾರಿ ʼಜೀವನಾಂಶʼ ನೀಡಿದ ಬಾಲಿವುಡ್ ಸ್ಟಾರ್‌ಗಳಿವರು!

“ಇದು ಕಾನೂನುಬಾಹಿರವಾಗಿರಬಹುದು. ಹುಡುಗಿಯರು ತಮ್ಮ ಸುರಕ್ಷತೆಯ ಬಗ್ಗೆ ಎಚ್ಚರಿಕೆ ವಹಿಸಬೇಕು” ಎಂದು ಇನ್ನೊಬ್ಬ ವ್ಯಕ್ತಿ ಹೇಳಿದ್ದಾರೆ. ಈ ಬಗ್ಗೆ ವಕೀಲರೊಬ್ಬರು ಪೋಸ್ಟ್ ಮಾಡಿ, “ಸ್ಟ್ರೀಟ್ ಗರ್ಲ್‍ಫ್ರೆಂಡ್’ ಸೇವೆಯು ಪ್ರಸ್ತುತ ಅಸ್ತಿತ್ವದಲ್ಲಿರುವ ಕಾನೂನುಗಳ ಚೌಕಟ್ಟಿನ ಹೊರಗೆ ಕಾರ್ಯನಿರ್ವಹಿಸುತ್ತದೆ ಮತ್ತು ಇದು ವೇಶ್ಯಾವಾಟಿಕೆ ಅಥವಾ ಲೈಂಗಿಕ ಸೇವಾ ವಹಿವಾಟುಗಳಾಗಿ ರೂಪಾಂತರಗೊಳ್ಳುವ ಅಪಾಯವನ್ನು ಹೊಂದಿದೆ ಎಂಬುದಾಗಿ ತಿಳಿಸಿದ್ದಾರೆ.

Continue Reading
Advertisement
Paris Olympics 2024
ಪ್ರಮುಖ ಸುದ್ದಿ4 mins ago

Paris Olympics 2024 : ಆರ್ಚರಿಯಲ್ಲಿ ಕ್ವಾರ್ಟರ್​ ಫೈನಲ್​ಗೇರಿದ 18 ವರ್ಷದ ಭಜನ್ ಕೌರ್​

Wayanad Landslide
EXPLAINER5 mins ago

Wayanad Landslide Explainer: ಪ್ರಕೃತಿ ಮೇಲೆ ಮಾನವನ ವಿಕೃತಿ; ವಯನಾಡು ಭೂಕುಸಿತಕ್ಕೆ ಇಲ್ಲಿದೆ ಕಾರಣಗಳ ಪಟ್ಟಿ

Union Minister Pralhad Joshi reaction about rahul gandhi statement
ದೇಶ14 mins ago

Pralhad Joshi: ಕಾಂಗ್ರೆಸ್‌ ಹಗರಣ, ಭ್ರಷ್ಟಾಚಾರದ ವಿರುದ್ಧ ಚಕ್ರವ್ಯೂಹ ರಚಿಸಲಾಗಿದೆ; ಪ್ರಲ್ಹಾದ್ ಜೋಶಿ

Raayan Movie
ಸಿನಿಮಾ18 mins ago

Raayan Movie: ಸೂಪರ್‌ ಹಿಟ್‌ ಚಿತ್ರಗಳನ್ನು ನಕಲಿಸಿ ಮಾರುವ ಕುಖ್ಯಾತ ಪೈರಸಿ ಗ್ಯಾಂಗ್‌ ರೂವಾರಿ ಬಂಧನ

Thyroid problem
ಆರೋಗ್ಯ31 mins ago

Thyroid Health Formulas: ನಿಮ್ಮ ಥೈರಾಯ್ಡ್‌ ನಿಮ್ಮ ಕೈಯಲ್ಲಿ! ಥೈರಾಯ್ಡ್‌ ಆರೋಗ್ಯಕ್ಕೆ ಇಲ್ಲಿವೆ ಆರು ಸೂತ್ರಗಳು

Physical abuse
ಕರ್ನಾಟಕ32 mins ago

Physical abuse: ಮಹಿಳೆ ಮೇಲೆ ಅತ್ಯಾಚಾರ; ಹಾಸನದ ಪ್ರಸಿದ್ಧ ದೇವಾಲಯದ ಪೂಜಾರಿ ಬಂಧನ

ಬೆಂಗಳೂರು50 mins ago

Sadhaka Ratna Award: ತೇಜೋಮಯಿ ಗದ್ದಿಗೆ ಸಾಧಕ ರತ್ನ ಪ್ರಶಸ್ತಿ ಪ್ರದಾನ

Wayanad Landslide
ಕರ್ನಾಟಕ1 hour ago

Wayanad Landslide: ಕೇರಳ ಭೂ ಕುಸಿತ; ಕನ್ನಡಿಗರಿಗೆ ನೆರವು ನೀಡಲು ಸಹಾಯವಾಣಿ

Monsoon Jacket Fashion
ಫ್ಯಾಷನ್1 hour ago

Monsoon Jacket Fashion: ಸ್ಟೈಲಿಶ್‌ ಜಾಕೆಟ್ ಸ್ಟೈಲಿಂಗ್‌ಗೆ ನಟ ದರ್ಶ್ ಚಂದ್ರಪ್ಪ ಸಿಂಪಲ್‌ ರೂಲ್ಸ್!

Paris Olympics 2024
ಪ್ರಮುಖ ಸುದ್ದಿ2 hours ago

Paris Olympics 2024 : ಜುಲೈ 31ರಂದು ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಭಾರತೀಯ ಸ್ಪರ್ಧಿಗಳ ವೇಳಾಪಟ್ಟಿ ಇಂತಿದೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ4 hours ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ8 hours ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ9 hours ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ1 day ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ1 day ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ1 day ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ2 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ2 days ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ2 days ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ2 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

ಟ್ರೆಂಡಿಂಗ್‌