Viral Video: ಕಾಳಿಂಗ ಸರ್ಪಕ್ಕೇ ಸ್ನಾನ ಮಾಡಿಸಿದ ರಣಧೀರ! - Vistara News

ವೈರಲ್ ನ್ಯೂಸ್

Viral Video: ಕಾಳಿಂಗ ಸರ್ಪಕ್ಕೇ ಸ್ನಾನ ಮಾಡಿಸಿದ ರಣಧೀರ!

Viral Video: ಬೆಂಕಿಯೊಡನೆ ಸರಸವಾಡುವುದು ಎನ್ನುವ ಮಾತನ್ನು ಕೇಳಿದ್ದೀರಾ? ಬಹುಶಃ ಅದಕ್ಕೆ ತಕ್ಕ ಉದಾಹರಣೆ ಈ ವಿಡಿಯೊ. ವ್ಯಕ್ತಿಯೊಬ್ಬರು ಕಾಳಿಂಗ ಸರ್ಪಕ್ಕೆ ಸ್ನಾನ ಮಾಡಿಸುವ ಈ ದೃಶ್ಯ ನಿಮ್ಮ ಎದೆ ಬಡಿತ ಹೆಚ್ಚಿಸಲಿದೆ.

VISTARANEWS.COM


on

cobra
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ʼಹಾವುʼ ಎಂಬ ಪದ ಕೇಳಿದರೆ ಸಾಕು ಬೆಚ್ಚಿ ಬೀಳುವವರೇ ಅಧಿಕ. ಅದರಲ್ಲೂ ಕಾಳಿಂಗ ಸರ್ಪವನ್ನು ಫೋಟೊದಲ್ಲಿ ನೋಡಿದರೂ ಭಯಪಡುವವರಿದ್ದಾರೆ. ಈ ಎಲ್ಲರ ಮಧ್ಯೆ ಈ ವ್ಯಕ್ತಿಯೊಬ್ಬರು ಭಿನ್ನವಾಗಿ ನಿಲ್ಲುತ್ತಾರೆ. ಕಾಳಿಂಗ ಸರ್ಪವನ್ನು ಮಗುವಿನಂತೆ ಸ್ನಾನ ಮಾಡಿಸುವುದನ್ನು ನೀವು ಊಹಿಸಿಕೊಳ್ಳಲು ಸಾಧ್ಯವೆ? ಆದರೆ ಈ ವ್ಯಕ್ತಿ ಅದನ್ನು ಮಾಡಿ ತೋರಿಸಿದ್ದಾರೆ. ಸದ್ಯ ಈ ವಿಡಿಯೊ ಇದೀಗ ವೈರಲ್‌ (Viral Video) ಆಗಿದೆ.

ಕೇವಲ 19 ಸೆಕೆಂಡ್‌ನ ಈ ವಿಡಿಯೊ ಹಲವರ ಗಮನ ಸೆಳೆದಿದೆ. ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದಾ ಈ ವಿಡಿಯೊವನ್ನು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ʼʼಕಾಳಿಂಗ ಸರ್ಪಕ್ಕೆ ಸ್ನಾನ. ಹಾವುಗಳು ತಮ್ಮನ್ನು ರಕ್ಷಿಸಿಕೊಳ್ಳಲು ಮತ್ತು ಸ್ವಚ್ಛವಾಗಿಟ್ಟುಕೊಳ್ಳಲು ನಿಯಮಿತವಾಗಿ ಪೊರೆಯನ್ನು ಕಳಚುತ್ತವೆ. ಹಾಗಿದ್ದೂ ಬೆಂಕಿಯೊಡನೆ ಸರಸವಾಡುವ ಪ್ರಯತ್ನವೇಕೆ?ʼʼ ಎಂದು ಅವರು ಬರೆದುಕೊಂಡಿದ್ದಾರೆ.

ವಿಡಿಯೊದಲ್ಲೇನಿದೆ?

ಯುವಕನೊಬ್ಬ ಯಾವುದೇ ಅಂಜಿಕೆ ಇಲ್ಲದೆ, ಧೈರ್ಯದಿಂದ ಕಾಳಿಂಗ ಸರ್ಪಕ್ಕೆ ಸ್ನಾನ ಮಾಡಿಸುವ ದೃಶ್ಯ ಈ ವಿಡಿಯೊದಲ್ಲಿ ಸೆರೆಯಾಗಿದೆ. ಆ ವ್ಯಕ್ತಿಯು ಬಕೆಟ್‌ನಿಂದ ಹಾವಿನ ಮೇಲೆ ಪದೇಪದೆ ನೀರನ್ನು ಸುರಿಯುತ್ತಾರೆ. ಮಾತ್ರವಲ್ಲ ಒಂದು ಹಂತದಲ್ಲಿ ಅವರು ಆ ಅಪಾಯಕಾರಿ ಹಾವಿನ ತಲೆಯನ್ನೂ ಸವರಿ ಅದರ ದೇಹವನ್ನು ಸ್ವಚ್ಛಗೊಳಿಸುತ್ತಾರೆ. ಸದ್ಯ ಈ ವಿಡಿಯೊವನ್ನು 20 ಸಾವಿರಕ್ಕಿಂತ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅನೇಕರು ವ್ಯಕ್ತಿಯ ಧೈರ್ಯವನ್ನು ಮೆಚ್ಚಿದ್ದರೆ, ಇನ್ನು ಕೆಲವರು ಹುಚ್ಚು ಸಾಹಸ ಎಂದು ಕರೆದಿದ್ದಾರೆ.

ನೆಟ್ಟಿಗರು ಏನಂದ್ರು?

“ಸೆರೆಯಲ್ಲಿರುವಾಗ ಕೆಲವೊಮ್ಮೆ ಹಾವುಗಳಿಗೆ ತಮ್ಮ ಪೊರೆಯನ್ನು ಸಂಪೂರ್ಣವಾಗಿ ಕಳಚಲು ಸಾಧ್ಯವಾಗುವುದಿಲ್ಲ. ಹಳೆಯ ಪೊರೆಯ ಸಣ್ಣ ಭಾಗವು ಚರ್ಮಕ್ಕೆ ಅಂಟಿಕೊಳ್ಳುತ್ತದೆ ಮತ್ತು ಅದನ್ನು ಸಂಪೂರ್ಣವಾಗಿ ತೆಗೆದುಹಾಕಲು ಮಾನವ ಹಸ್ತಕ್ಷೇಪದ ಅಗತ್ಯವಿರುತ್ತದೆ. ಆದರೆ ಅದಕ್ಕಾಗಿ ಸ್ನಾನ ಮಾಡಿಸುವುದು ಸರಿಯಾದ ಮಾರ್ಗವಲ್ಲʼʼ ಎಂದು ಒಬ್ಬರು ತಿಳಿಸಿದ್ದಾರೆ. ʼʼಹಾವಿನ ಹಲ್ಲು ಕಿತ್ತು ಹಾಕಿರುವ ಹಾಗಿದೆʼʼ ಎಂದು ಇನ್ನೊಬ್ಬರು ಊಹಿಸಿದ್ದಾರೆ. “ಈ ಹಾವು ಥಾಯ್ ಕೋಬ್ರಾ ಪ್ರದರ್ಶನದ್ದಾಗಿರಬೇಕು. ಅವರು ಹಾವುಗಳನ್ನು ಸಾಕುಪ್ರಾಣಿಗಳಾಗಿ ಬೆಳೆಸುತ್ತಾರೆ” ಎಂದು ಮತ್ತೊಬ್ಬರು ಮಾಹಿತಿ ನೀಡಿದ್ದಾರೆ. ʼʼಸಾಕು ಪ್ರಾಣಿಗಳು ಯಾವತ್ತೂ ಸ್ವಚ್ಛವಾಗಿರಬೇಕುʼʼ ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. ʼʼಬಹುಶಃ ಇದು ಕೊನೆಯ ಸ್ನಾನ ಇರಬೇಕುʼʼ ಎಂದು ಮಗದೊಬ್ಬರು ಹೇಳಿದ್ದಾರೆ. ʼʼಇದು ಸೋಪ್‌ನ ಜಾಹೀರಾತುʼʼ ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೊ ಚರ್ಚೆ ಹುಟ್ಟು ಹಾಕಿದೆ.

ಇದೇ ರೀತಿಯ ಮತ್ತೊಂದು ವಿಡಿಯೊ

ವ್ಯಕ್ತಿಯೊಬ್ಬ ಎರಡು ನಾಗರ ಹಾವುಗಳನ್ನು ಏಕ ಕಾಲಕ್ಕೆ ಸ್ನಾನ ಮಾಡಿಸುವ ಇದೇ ರೀತಿಯ ವಿಡಿಯೊವೊಂದು ಆಗಸ್ಟ್‌ನಲ್ಲಿ ವೈರಲ್‌ ಆಗಿತ್ತು. ಈ ಪೈಕಿ ಒಂದು ನಾಗರಹಾವು ತನ್ನ ಮೇಲೆ ನೀರನ್ನು ಸುರಿದಾಗ ಮಿಸುಕಾಡುತ್ತಿದ್ದರೆ ಇನ್ನೊಂದು ಶಾಂತವಾಗಿ ವರ್ತಿಸುತ್ತಿರುವುದು ವಿಡಿಯೊದಲ್ಲಿ ಕಂಡು ಬರುತ್ತದೆ. ಇಲ್ಲೂ ಆ ವ್ಯಕ್ತಿ ಯಾವುದೇ ಅಂಜಿಕೆ, ಭಯವಿಲ್ಲದೆ ಹಾವುಗಳ ಸ್ನಾನ ಮಾಡಿಸುತ್ತಿರುವುದು ಕಂಡು ಬಂದಿದೆ. ವೃತ್ತಿಪರ ಪ್ರಾಣಿ ರಕ್ಷಕ ಮತ್ತು ಸಾಮಾಜಿಕ ಕಾರ್ಯಕರ್ತ ಸಿಂಟು ಸ್ನೇಕ್ ಸೇವರ್ ಎಂಬ ಬಳಕೆದಾರರು ಈ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಒಂದೇ ಬಾರಿ ಎರಡೆರಡು ಹಾವು ನೋಡಿ ಅನೇಕರು ಬೆಚ್ಚಿ ಬಿದ್ದಿದ್ದರು.

ಇದನ್ನೂ ಓದಿ: Viral Video: ಶ್‌! ಯಾರೂ ಡಿಸ್ಟರ್ಬ್‌ ಮಾಡಬೇಡಿ; ಕಡತ ನೋಡುವುದರಲ್ಲೇ ನಿರತವಾದ ಕೋತಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Haveri Doctor: ಈತ ಹೊಡೆದ್ರೆ ಸಾಕು ಕಾಯಿಲೆ ಮಾಯ; ಇದು ಚಡ್ಡಿ ಸ್ವಾಮಿ ಪವಾಡ!

Haveri Doctor: 1, 2, 3 ಎಂದು ಹೇಳಿ ಹೊಡೆದು ಕಾಯಿಲೆ ವಾಸಿ ಮಾಡುವ ಈ ವೈದ್ಯನಿಗೆ ಹಾವೇರಿ ಜಿಲ್ಲೆಯ ಗುತ್ತಲ ಸುತ್ತಮುತ್ತ ಬಹು ಬೇಡಿಕೆ ಉಂಟಾಗಿದೆ. ಮೈಗೆ ಹೊಡೆದ ನಂತರ ಅನಾರೋಗ್ಯ ಸರಿಯಾಯ್ತು ಎಂದು ಜನ ಹೇಳುತ್ತಿದ್ದಾರೆ.

VISTARANEWS.COM


on

Haveri Doctor
Koo

ಹಾವೇರಿ:‌ ಕಾಯಿಲೆ ವಾಸಿ ಮಾಡಿಕೊಳ್ಳಲು ಜನರು ವಿವಿಧ ರೀತಿಯ ವೈದ್ಯ ಪದ್ಧತಿ ಮೊರೆ ಹೋಗುತ್ತಾರೆ. ಆದರೆ ಇಲ್ಲೊಂದು ಕಡೆ, ವೈದ್ಯ ಮುಟ್ಟಿದರೆ ಸಾಕು ಅನಾರೋಗ್ಯ ಮಾಯವಾಯಿತು (Viral Video) ಎಂದು ಜನ ಹೇಳುತ್ತಿದ್ದಾರೆ. ಕಲಿಯುಗದಲ್ಲೂ ಮೈ ಮುಟ್ಟಿ ಅನಾರೋಗ್ಯ ದೂರ ಮಾಡುವ ಈ ಚಡ್ಡಿ ಸ್ವಾಮಿ ಪವಾಡ (Haveri Doctor) ಕಂಡು ಜನರು ಅಚ್ಚರಿಗೊಂಡಿದ್ದಾರೆ.

ಹೌದು, ಹಾವೇರಿ ಜಿಲ್ಲೆಗೆ ಆರೋಗ್ಯ ಭಗವಂತ ಬಂದಿದ್ದು, ಈತ ಮುಟ್ಟಿದ್ರೆ ಸಾಕು ಅನಾರೋಗ್ಯ ಮಾಯವಾಗುತ್ತೆ ಎಂದು ಜನ ನಂಬಿದ್ದಾರೆ. ಹೀಗಾಗಿ ಜನ ಮರಳೊ ಜಾತ್ರೆ ಮರಳೊ ಎಂಬಂತೆ ವೈದ್ಯನ ಕೈಯಿಂದ ಹೊಡೆಸಿಕೊಳ್ಳಲು ಜನ ಮುಗಿಬೀಳುತ್ತಿದ್ದಾರೆ.

1, 2, 3, ಎಂದು ಹೊಡೆದು ಕಾಯಿಲೆ ವಾಸಿ ಮಾಡುವ ಈ ವೈದ್ಯನಿಗೆ ಹಾವೇರಿ ಜಿಲ್ಲೆಯ ಗುತ್ತಲ ಸುತ್ತಮುತ್ತ ಬಹು ಬೇಡಿಕೆ ಉಂಟಾಗಿದೆ. ಟಾನಿಕ್ ಇಲ್ಲ, ಮಾತ್ರೆ ಇಲ್ಲ, ಜ್ಯೂಸ್ ಕುಡಿಸಿ ಈತ ಅನಾರೋಗ್ಯ ದೂರ ಮಾಡುತ್ತಾರೆ. ಮೈಗೆ ಹೊಡೆದ ನಂತರ ಅನಾರೋಗ್ಯ ಸರಿಯಾಯ್ತು ಎಂದು ಜನ ಹೇಳುತ್ತಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಬೀದಿಯಲ್ಲಿ ವೈದ್ಯ ಬರುತ್ತಿದ್ದಂತೆ ಗುಂಪು ಗುಂಪಾಗಿ ಚಡ್ಡಿ ಸ್ವಾಮಿ ಬಳಿ ಜನ ಬರುತ್ತಿದ್ದಾರೆ. ಕೈ, ಕಾಲು, ತಲೆ ಹೀಗೆ ನೋವು ಇರುವ ಕಡೆ ವೈದ್ಯ ಮುಟ್ಟಿದರೆ ಸಮಸ್ಯೆ ಸರಿಯಾಯ್ತು ಎಂದು ಜನ ಹೇಳುತ್ತಿರುವುದು ಕಂಡುಬಂದಿದೆ.

ಇದನ್ನೂ ಓದಿ | Viral Video: ಸಫಾರಿ ಕೇಂದ್ರದಲ್ಲಿ ಮಾವುತನನ್ನು ಬರ್ಬರವಾಗಿ ತುಳಿದು ಸಾಯಿಸಿದ ಆನೆ

Viral Video: ನಾಗರಹಾವು ಟಾಯ್ಲೆಟ್ ಕಮೋಡ್ ನೊಳಗೂ ಇರಬಹುದು, ಹುಷಾರ್! ಈ ವಿಡಿಯೊ ನೋಡಿ

Viral video

ಇಂದೋರ್: ಟಾಯ್ಲೆಟ್ ಕಮೋಡ್ ನಲ್ಲಿ (toilet commode) ನಾಗರಹಾವು (cobra) ಪತ್ತೆಯಾದ ಘಟನೆ ಇಂದೋರ್ ನಲ್ಲಿ (Indore) ನಡೆದಿದ್ದು, ಭಯ ಹುಟ್ಟಿಸುವ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ (social media) ಇನ್ ಸ್ಟಾಗ್ರಾಮ್ ನಲ್ಲಿ (Instagram) ಹಾವು ರಕ್ಷಕ ರಾಜೇಶ್ ಜಾಟ್ ಅವರು ಹಂಚಿಕೊಂಡಿದ್ದಾರೆ. ಈ ವಿಡಿಯೊ ಭಾರೀ ವೈರಲ್ (Viral Video) ಆಗಿದೆ.

ಇಂದೋರ್‌ನ ವಾಯ್ಸ್ 4 ವೈಲ್ಡ್‌ಲೈಫ್ ಫೌಂಡೇಶನ್‌ನ ( Voice4Wildlife Foundation) ನಿರ್ದೇಶಕ ಮತ್ತು ಸಂಸ್ಥಾಪಕ ಜಾಟ್ ಅವರು ತಮ್ಮ ಫೌಂಡೇಶನ್ ನಗರಕ್ಕೆ ಬರುವ ವನ್ಯಜೀವಿ ಪ್ರಾಣಿಗಳಾದ ವಿಷಕಾರಿ ಹಾವು ಮತ್ತು ಉಡ ವನ್ನು ರಕ್ಷಿಸುತ್ತಿದೆ. ಗೂಗಲ್ ನಲ್ಲಿ ನಮ್ಮ ಫೌಂಡೇಶನ್ ಮಾಹಿತಿ ಇದೆ. ಇಂತಹ ಸಂದರ್ಭದಲ್ಲಿ ಜನರು ನಮ್ಮ ವೆಬ್‌ಸೈಟ್ ‘voice4wildlife.in’ ಮೂಲಕ ನಮ್ಮನ್ನು ಸಂಪರ್ಕಿಸಬಹುದು ಎಂದು ಅವರು ಹೇಳಿದ್ದಾರೆ.

ಏಪ್ರಿಲ್ 1ರಂದು ಮಧ್ಯರಾತ್ರಿ ವನ್ಯಜೀವಿಯೊಂದು ನಗರಕ್ಕೆ ಬಂದಿರುವುದಾಗಿ ಫೌಂಡೇಷನ್ ಗೆ ಕರೆ ಬಂದಿತ್ತು. ಇಂದೋರ್‌ನ ನಿವಾಸಿಯೊಬ್ಬರು ತಮ್ಮ ಮನೆಯಲ್ಲಿ ಹಾವನ್ನು ನೋಡಿ ಕರೆ ಮಾಡಿದ್ದರು ಎಂದು ರಾಜೇಶ್ ಜಾಟ್ ಹೇಳಿದ್ದಾರೆ. ಕೂಡಲೇ ಹಾವಿನ ಮೇಲೆ ನಿಗಾ ಇಡಲು ಮತ್ತು ಅಂತರವನ್ನು ಕಾಯ್ದುಕೊಳ್ಳಲು ನಾನು ಅವರನ್ನು ಕೇಳಿದೆ. ಆದರೆ ಅವರು ಹೆದರಿದರು ಮತ್ತು ಹೊರಗಿನಿಂದ ಬಾಗಿಲು ಹಾಕಿದರು. ನಾನು ಬಂದಾಗ ನನಗೆ ಹಾವು ಕಾಣಿಸಲಿಲ್ಲ. ಅನಂತರ ಕಮೋಡ್ ಒಳಗೆ ನೋಡಿದೆ. ಕಪ್ಪು ಬಣ್ಣದ, ಹೆಚ್ಚು ವಿಷಪೂರಿತ ನಾಗರ ಹಾವಿನಂತೆ ಕಾಣುತ್ತಿತ್ತು ಎಂದರು. ಜಾಟ್ ಅವರು ಇದರ ವಿಡಿಯೋ ಹಂಚಿಕೊಂಡಿದ್ದು, ಐದು ಮಿಲಿಯನ್ ಗೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಸಾಕಷ್ಟು ಮಂದಿ ಇದನ್ನು ಭಯಾನಕ ಎಂದು ಪ್ರತಿಕ್ರಿಯಿಸಿದ್ದಾರೆ.

ಒಬ್ಬ ಬಳಕೆದಾರ ನನ್ನ ಬಾಲ್ಯದಿಂದಲೂ ಹಾವಿಗೆ ಹೆದರುತ್ತಿದ್ದೆ ಎಂದು ಬರೆದಿದ್ದಾರೆ. ಮತ್ತೊಬ್ಬರು ನನ್ನ ಭಯವು ಈಗ ವಾಸ್ತವವಾಗಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು ಹೊಸ ಭಯವನ್ನು ಅನ್ಲಾಕ್ ಮಾಡಲಾಗಿದೆ ಎಂದು ಹೇಳಿದರು. ಕೆಲವು ಬಳಕೆದಾರರು ಜಾಟ್ ಅವರ ಕೆಲಸವನ್ನು ಶ್ಲಾಘಿಸಿದ್ದು, ನಿಮ್ಮ ಕೆಲಸವು ಪ್ರಶಂಸನೀಯವಾಗಿದೆ ಎಂದು ಹೇಳಿದ್ದಾರೆ. ಸಾಮಾನ್ಯವಾಗಿ ನಗರಗಳಲ್ಲಿನ ಒಳಚರಂಡಿ ವ್ಯವಸ್ಥೆಯ ಮೂಲಕ ಹಾವುಗಳು ಸ್ನಾನಗೃಹದೊಳಗೆ ಬರುತ್ತವೆ ಎಂದು ಜಾಟ್ ವಿವರಿಸಿದರು. ಈ ಸನ್ನಿವೇಶದಲ್ಲಿ ಇಂದೋರ್‌ನಲ್ಲಿನ ಹೆಚ್ಚಿನ ತಾಪಮಾನ ಮತ್ತು ಇಲಿಗಳು ಒಳಚರಂಡಿ ಪೈಪ್‌ಗಳಲ್ಲಿ ರಂಧ್ರಗಳನ್ನು ಅಗೆಯುವುದರಿಂದ, ಹಾವುಗಳು ಈ ಪೈಪ್‌ಗಳ ಮೂಲಕ ಚಲಿಸುತ್ತವೆ ಮತ್ತು ಟಾಯ್ಲೆಟ್ ಕಮೋಡ್‌ಗಳು ಮತ್ತು ಅಡುಗೆ ಮನೆಯ ಪೈಪ್‌ಗಳನ್ನು ಸಹ ತಲುಪುತ್ತವೆ ಎಂದು ಜಾಟ್ ಹೇಳಿದರು.

ಬಿಸಿ ವಾತಾವರಣದಿಂದಾಗಿ ಅವು ಹಗಲಿನಲ್ಲಿ ಡ್ರೈನೇಜ್ ಪೈಪ್‌ಗಳೊಳಗೆ ಅಡಗಿಕೊಳ್ಳುತ್ತವೆ ಮತ್ತು ರಾತ್ರಿಯಲ್ಲಿ ತಂಪಾಗಿರುವಾಗ ಹೊರಬರುತ್ತವೆ. ಇದರ ಚಲನವಲನವನ್ನು ಪತ್ತೆಹಚ್ಚಿದ ತಕ್ಷಣ ಅದು ಮತ್ತೆ ಅಡಗಿಕೊಳ್ಳುವುದರಿಂದ ಅವುಗಳನ್ನು ಹಿಡಿದು ರಕ್ಷಿಸುವುದು ಸವಾಲಾಗಿದೆ ಎಂದು ಅವರು ತಿಳಿಸಿದ್ದಾರೆ. ಕಮೋಡ್ ನೊಳಗೆ ಸೇರಿದ್ದ ಹಾವನ್ನು ರಕ್ಷಿಸಲು, ನಾವು ಕಮೋಡ್‌ಗೆ ನೀರು ಹಾಕಿದ್ದೇವೆ. ಡ್ರೈನೇಜ್ ಪೈಪ್‌ನೊಳಗೆ ನಿರಂತರ ನೀರು ಹರಿಯುವುದರಿಂದ ಹಾವು ಆಮ್ಲಜನಕದ ಕೊರತೆಯನ್ನು ಅನುಭವಿಸಿ ಹೊರಗೆ ಬರಲು ಪ್ರಯತ್ನಿಸುತ್ತದೆ. ಅದು ಆಮ್ಲಜನಕಕ್ಕಾಗಿ ಹೊರಬಂದ ತಕ್ಷಣ ನಾನು ಬಾಯಿಗೆ ನೀರು ಸುರಿಯಲು ಪ್ರಾರಂಭಿಸಿದೆ ಮತ್ತು ಅದನ್ನು ಹಿಡಿದು ರಕ್ಷಿಸಿದೆ ಎಂದು ಅವರು ತಿಳಿಸಿದರು. ಪ್ರತಿಯೊಂದು ಹಾವನ್ನು ಹಿಡಿಯುವುದು ಸುಲಭವಲ್ಲ. ಇದನ್ನು 15 ನಿಮಿಷಗಳಲ್ಲಿ ಹಿಡಿಯಲಾಗಿದೆ. ಕೆಲವೊಮ್ಮೆ ಸ್ನಾನಗೃಹದಲ್ಲಿ ಅವಿತುಕೊಳ್ಳುವ ಹಾವುಗಳು ಮೂರು ದಿನಗಳವರೆಗೆ ಇರುತ್ತದೆ. ಹಾವು ಯಾವ ಮಹಡಿಯಲ್ಲಿ ಕಾಣಿಸುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ. ಅವು ನೆಲಮಹಡಿಗೆ ಮಾತ್ರ ಬರುತ್ತವೆ ಎಂಬುದು ತಪ್ಪು ಕಲ್ಪನೆ. ಯಾವುದೇ ಮಹಡಿಗೆ ಅವು ಬಹಳ ಸುಲಭವಾಗಿ ಪ್ರಯಾಣಿಸಬಲ್ಲವು ಎಂದು ಜಾಟ್ ತಿಳಿಸಿದರು.

ಇದನ್ನೂ ಓದಿ: Viral Video: ತಲೆ ಮೇಲೆ ಎರಡು ಗ್ಯಾಸ್ ಸಿಲಿಂಡರ್, ಅದರ ಮೇಲೆ ಬಿಂದಿಗೆ! ಅಬ್ಬಾ ಎಂಥ ಅದ್ಭುತ!

ಇಂತಹ ಘಟನೆಗಳನ್ನು ತಡೆಗಟ್ಟಲು ಸಲಹೆ ನೀಡಿದ ಅವರು, ಒಳಚರಂಡಿ ಪೈಪ್‌ಗಳ ಸುತ್ತಲಿನ ಪ್ರದೇಶವನ್ನು ತೆರೆದಿಡಬಾರದು ಅಥವಾ ಅವುಗಳ ಬಳಿ ಕಸವನ್ನು ಎಸೆಯಬಾರದು. ಇದು ಇಲಿಗಳು ಪೈಪ್‌ಗಳ ಒಳಗೆ ರಂಧ್ರಗಳನ್ನು ಅಗೆಯಲು ಕಾರಣವಾಗುತ್ತದೆ. ಹಾವುಗಳಿಗೆ ಮಾರ್ಗವನ್ನು ಸೃಷ್ಟಿಸುತ್ತದೆ. ತೆರೆದ ಒಳಚರಂಡಿ ಪೈಪ್ ಅನ್ನು ಕಂಡುಕೊಂಡರೆ, ಅಂತಹ ಘಟನೆಗಳನ್ನು ತಡೆಗಟ್ಟಲು ನಗರದ ಪುರಸಭೆಯನ್ನು ಸಂಪರ್ಕಿಸಿ ಮತ್ತು ಅದಕ್ಕೆ ಸಿಮೆಂಟ್ ಹಾಕಿಸಿ ಎಂದರು.

ಇದನ್ನೂ ಓದಿ | Viral Video: ಅಪ್ರಾಪ್ತೆಯನ್ನು ಕಿಡ್ನಾಪ್ ಮಾಡಿ ಲೈವ್ ವಿಡಿಯೊ ಮೂಲಕ ಧಮ್ಕಿ; ಕಾಮುಕನ ಅಟ್ಟಹಾಸಕ್ಕೆ ನೆಟ್ಟಿಗರು ಆಕ್ರೋಶ

ವಾಯ್ಸ್ 4 ವೈಲ್ಡ್‌ಲೈಫ್ ಫೌಂಡೇಶನ್‌ ಇಂದೋರ್ ಮತ್ತು ಹತ್ತಿರದ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಜಾಟ್ ಐದರಿಂದ ಆರು ಸದಸ್ಯರ ತಂಡವನ್ನು ಮುನ್ನಡೆಸುತ್ತಿದ್ದಾರೆ. ನಮ್ಮಲ್ಲಿ ನಾಲ್ಕು ಜನರು ಮಾತ್ರ ಪೂರ್ಣ ಸಮಯ ಲಭ್ಯವಿರುತ್ತಾರೆ. ಉಳಿದ ಇಬ್ಬರು ಅವರ ಬಿಡುವಿನ ಸಮಯದಲ್ಲಿ ಮಾತ್ರ ಸಿಗುತ್ತಾರೆ. ಪ್ರತಿ ನಗರದಲ್ಲಿ ಹೆಚ್ಚಿನ ರಕ್ಷಣಾ ತಂಡಗಳನ್ನು ಸ್ಥಾಪಿಸುವ ಗುರಿಯನ್ನು ಜಾಟ್ ಹೊಂದಿರುವುದಾಗಿ ಹೇಳಿದ್ದಾರೆ.

Continue Reading

ವೈರಲ್ ನ್ಯೂಸ್

Viral Video: ಸಫಾರಿ ಕೇಂದ್ರದಲ್ಲಿ ಮಾವುತನನ್ನು ಬರ್ಬರವಾಗಿ ತುಳಿದು ಸಾಯಿಸಿದ ಆನೆ

ಸಾಕಾನೆಯೊಂದು ಮಾವುತನನ್ನು ತುಳಿದು ಕೊಂದು ಹಾಕಿರುವ ಘಟನೆ ಕೇರಳದ ಇಡುಕ್ಕಿಯಲ್ಲಿ ನಡೆದಿದ್ದು, ಇದರ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. ಮಾವುತನ್ನು ಸೊಂಡಿಲಿನಿಂದ ಬೀಳಿಸಿ, ಎರಡು ಕಾಲುಗಳನ್ನು ಆತನ ಮೇಲಿಟ್ಟು ನಿರ್ದಯವಾಗಿಯೂ ಹತ್ಯೆ ಮಾಡಿದೆ. ಇದರ ವಿಡಿಯೊ ಇಲ್ಲಿದೆ.

VISTARANEWS.COM


on

By

Viral Video
Koo

ತಿರುವನಂತಪುರ: ಮಾವುತನನ್ನು ಸಾಕಾನೆಯೊಂದು (Elephant) ತುಳಿದು ಕೊಂದು ಹಾಕಿರುವ ಭಯಾನಕ ಘಟನೆಯ ವಿಡಿಯೋ ಸಿಸಿ ಕೆಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ (Viral Video) ಆಗಿದೆ. ಈ ಘಟನೆ ಕೇರಳದ (kerala) ಇಡುಕ್ಕಿಯಲ್ಲಿ (Idukki) ನಡೆದಿದೆ.

ಮಾವುತನ್ನು ಸೊಂಡಿಲಿನಿಂದ ಬೀಳಿಸಿ, ಎರಡು ಕಾಲುಗಳನ್ನು ಆತನ ಮೇಲಿಟ್ಟು ನಿರ್ದಯ

ವಾಗಿ ಮಾವುತನನ್ನು ಕೊಂದಿರುವ ಎಲ್ಲಾ ದೃಶ್ಯಗಳು ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿವೆ. ಮೊದಲು ಮಾವುತನನ್ನು ಸೊಂಡಿಲಿನಿಂದ ಬೀಳಿಸಿದ ಆನೆ ಬಳಿಕ ಆತನನ್ನು ಕಾಲಿನಿಂದ ತುಳಿದು ಕೊಂದು ಹಾಕಿದೆ.

ಬಾಲಕೃಷ್ಣ (62) ಮೃತ ಮಾವುತ. ಬಾಲಕೃಷ್ಣ ನೀಲೇಶ್ವರಂ ನಿವಾಸಿಯಾಗಿದ್ದು, ಕೇರಳದ ಅಡಿಮಲಿ ಸಮೀಪದ ಕಲ್ಲರ್ ಬಳಿಯ ಖಾಸಗಿ ಫಾರ್ಮ್‌ನಲ್ಲಿ ಕೆಲಸ ಮಾಡುತ್ತಿದ್ದರು.

ಪ್ರವಾಸಿಗರನ್ನು ಸಫಾರಿಗೆ ಕರೆದುಕೊಂಡು ಹೋಗಲು ಸಿದ್ಧತೆ ನಡೆಸಿದ್ದ ಮಾವುತನ ಮೇಲೆ ಆನೆ ದಾಳಿ ನಡೆಸಿದೆ.
ಇಡುಕ್ಕಿಯಲ್ಲಿರುವ ಸಫಾರಿಯ ಎಂಟು ಕೇಂದ್ರಗಳಲ್ಲಿ 35 ಆನೆಗಳನ್ನು ಸಾಕಲಾಗುತ್ತಿದೆ. ಕೇವಲ ನಾಲ್ಕು ಕೇಂದ್ರಗಳು ಮಾತ್ರ ನೋಂದಾಯಿಸಲ್ಪಟ್ಟಿದೆ. ಮಾವುತ ಬಾಲಕೃಷ್ಣನನ್ನು ಕೊಂದಿರುವ ಆನೆ ಈ ಹಿಂದೆಯೂ ಹಲವು ಬಾರಿ ಆಕ್ರಮಣಕ್ಕೆ ಮುಂದಾಗಿತ್ತು ಎನ್ನಲಾಗಿದೆ.


ಈ ಸಫಾರಿ ಕೇಂದ್ರಕ್ಕೆ ಜಿಲ್ಲಾಡಳಿತದಿಂದ ಯಾವುದೇ ಅನುಮತಿ ಪಡೆದಿಲ್ಲ. ಅರಣ್ಯ ಇಲಾಖೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಿದೆ. ಅಕ್ರಮ ಸಫಾರಿ ಬಗ್ಗೆ ಮಾಹಿತಿ ಇದ್ದರೆ ಸಾರ್ವಜನಿಕರು ಅಧಿಕಾರಿಗಳ ಗಮನಕ್ಕೆ ತರುವಂತೆ ಇಡುಕ್ಕಿ ಜಿಲ್ಲಾಧಿಕಾರಿ ಶೀಬಾ ಜಾರ್ಜ್ ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ಮಹಿಳೆ ಮೇಲೆ 15 ಬೀದಿ ನಾಯಿಗಳ ದಾಳಿ; ಆಕೆ ಪಾರಾಗಿದ್ದು ಹೇಗೆ ನೋಡಿ

ಈ ಆನೆ ಕೇಂದ್ರವನ್ನು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿಲ್ಲ. ಮಾವುತನ ಮೇಲೆ ದಾಳಿ ನಡೆಸಿರುವ ಆನೆಯನ್ನು ಕೊಟ್ಟಾಯಂಗೆ ಸ್ಥಳಾಂತರಿಸುವಂತೆ ಇಡುಕ್ಕಿಯ ಅರಣ್ಯಾಧಿಕಾರಿ ಡಿಎಫ್‌ಓ ವಿಪಿನ್‌ದಾಸ್‌ ಪಿ.ಕೆ, ಮಾಲೀಕರಿಗೆ ಸೂಚಿಸಿದ್ದಾರೆ. ಈ ಕುರಿತು ಪ್ರಕರಣವನ್ನೂ ದಾಖಲಿಸಲಾಗಿದೆ.

ಮಾವುತ ಬಾಲಕೃಷ್ಣ ಸಾವಿಗೆ ಸಂಬಂಧಿಸಿ ಸಫಾರಿ ಕೇಂದ್ರಕ್ಕೆ ಅರಣ್ಯ ಇಲಾಖೆ ನೊಟೀಸ್ ನೀಡಿದೆ. ಮೃತ ಮಾವುತನ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

Continue Reading

ವೈರಲ್ ನ್ಯೂಸ್

Viral Video: ಮಹಿಳೆ ಮೇಲೆ 15 ಬೀದಿ ನಾಯಿಗಳ ದಾಳಿ; ಆಕೆ ಪಾರಾಗಿದ್ದು ಹೇಗೆ ನೋಡಿ

ವಾಕಿಂಗ್ ಹೋಗುತ್ತಿದ್ದ ಮಹಿಳೆ ಮೇಲೆ ಸುಮಾರು 15 ಬೀದಿ ನಾಯಿಗಳು ದಾಳಿ ಮಾಡಿದ್ದು, ಸಾಕಷ್ಟು ಹೊತ್ತು ಮಹಿಳೆ ಅವುಗಳೊಂದಿಗೆ ಹೋರಾಟ ನಡೆಸಿದ್ದಾರೆ. ಕೊನೆಗೆ ಬೈಕ್ ಸವಾರನೊಬ್ಬನ ಸಹಾಯದಿಂದ ಅಪಾಯದಿಂದ ಪಾರಾಗಿದ್ದು, ಈ ಭಯಾನಕ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ (Viral Video) ಆಗಿದೆ.

VISTARANEWS.COM


on

By

Viral Video
Koo

ಹೈದರಾಬಾದ್: ವಾಕಿಂಗ್ ಗೆ ತೆರಳುತ್ತಿದ್ದ ಮಹಿಳೆಯೊಬ್ಬರ ಮೇಲೆ ಬೀದಿ ನಾಯಿಗಳು ದಾಳಿ (dog attack) ನಡೆಸಿರುವ ಭೀಕರ ಘಟನೆ ಹೈದರಾಬಾದ್ ನ (Hyderabad) ಮಣಿಕೊಂಡದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ಈ ದೃಶ್ಯ ಕೆಮರಾದಲ್ಲಿ ಸೆರೆಯಾಗಿದ್ದು ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (social media) ವೈರಲ್ (Viral Video) ಆಗಿದೆ.

ಬೆಳಗ್ಗೆ 6 ಗಂಟೆ ಸುಮಾರಿಗೆ ಮಣಿಕೊಂಡ ಪ್ರದೇಶದ ಚಿತ್ರಪುರಿ ಹಿಲ್ಸ್‌ನಲ್ಲಿ ಮಹಿಳೆ ತನ್ನ ನಿವಾಸದಿಂದ ಬೆಳಗಿನ ವಾಕಿಂಗ್‌ಗೆ ಬಂದಾಗ ಈ ಘಟನೆ ಸಂಭವಿಸಿದೆ. ಸುಮಾರು 15 ನಾಯಿಗಳು ಮಹಿಳೆಯ ಮೇಲೆ ದಾಳಿ ಮಾಡಿದ್ದು, ಮಹಿಳೆ ಭಯಭೀತರಾಗಿ ನಾಯಿಗಳ ಗುಂಪಿನಿಂದ ತನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.

ಮಹಿಳೆ ಕೈಗಳನ್ನು ಎತ್ತಿ, ಚಪ್ಪಲಿಯನ್ನು ಬಳಸಿ ನಾಯಿಗಳನ್ನು ದೂರವಿರಿಸಲು ಪ್ರಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಮಹಿಳೆ ತನ್ನ ಒಂದು ಕೈಯಲ್ಲಿ ಚಪ್ಪಲಿಯನ್ನು ಹಿಡಿದುಕೊಂಡು ನಾಯಿಗಳನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸಿದ್ದು, ಒಂದು ನಿಮಿಷಕ್ಕೂ ಹೆಚ್ಚು ಕಾಲ ಜೀವನ್ಮರಣ ಹೋರಾಟ ನಡೆಸಿದರು. ಮಹಿಳೆಗೆ ಸಹಾಯ ಮಾಡಲು ಸ್ಥಳದಲ್ಲಿ ಯಾರೂ ಇರಲಿಲ್ಲ. ನಾಯಿಗಳನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸಿದ ಮಹಿಳೆ ಸುಸ್ತಾಗಿ ಒಂದು ಹಂತದಲ್ಲಿ ನೆಲಕ್ಕೆ ಬಿದ್ದರು.


ಆದರೂ ಎದ್ದು ನಿಂತ ಮಹಿಳೆ ಮತ್ತೆ ನಾಯಿಗಳಿಂದ ಎದುರಿಸಲು ಮುಂದಾದರು. ಸ್ವಲ್ಪ ಸಮಯದ ಅನಂತರ ಮಹಿಳೆ ಸೊಸೈಟಿಯ ಗೇಟ್ ಬಳಿ ತೆರಳಿದ್ದು, ವ್ಯಕ್ತಿಯೊಬ್ಬರು ಸ್ಕೂಟರ್‌ನಲ್ಲಿ ಸ್ಥಳಕ್ಕೆ ಆಗಮಿಸಿ ಮಹಿಳೆಯನ್ನು ಹಿಂಬಾಲಿಸುತ್ತಿದ್ದ ಎಲ್ಲಾ ನಾಯಿಗಳನ್ನು ಓಡಿಸಿದರು. ಮಹಿಳೆ ತುಂಬಾ ಕಷ್ಟಪಟ್ಟು ನಾಯಿಗಳ ಗುಂಪಿನಿಂದ ತನ್ನನ್ನು ರಕ್ಷಿಸಿಕೊಳ್ಳಲು ಸಾಧ್ಯವಾಯಿತು. ಆದರೂ ಅವರಿಗೆ ಗಂಭೀರ ಗಾಯಗಳಾಗಿವೆ.

ಇದನ್ನೂ ಓದಿ: Road Accident : ವೇಗವಾಗಿ ಬಂದು ಬೈಕ್‌ಗೆ ರಭಸವಾಗಿ ಗುದ್ದಿದ ಬಸ್‌; ನಜ್ಜುಗುಜ್ಜಾದ ಸವಾರ

ಮಹಿಳೆಯ ಪತಿ ಈ ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಪ್ರದೇಶದಲ್ಲಿ ನಾಯಿಗಳ ಹಾವಳಿ ಹೆಚ್ಚುತ್ತಿದೆ ಮತ್ತು ಇತ್ತೀಚಿನ ದಿನಗಳಲ್ಲಿ ಅನೇಕ ಮಕ್ಕಳು ಸಹ ನಾಯಿಗಳ ದಾಳಿಗೆ ಬಲಿಯಾಗಿದ್ದಾರೆ ಎಂದು ಹೇಳಿದ್ದಾರೆ.

ಈ ಪ್ರದೇಶದಲ್ಲಿನ ನಾಯಿಗಳಿಗೆ ಆಹಾರ ನೀಡದಂತೆ ಸ್ಥಳೀಯರು ಒತ್ತಾಯಿಸಿದ್ದು, ಇದರಿಂದ ಈ ಪ್ರದೇಶದ ಜನರಿಗೆ ಅನಗತ್ಯ ತೊಂದರೆ ಉಂಟಾಗುತ್ತಿದೆ. ಅದೃಷ್ಟವಶಾತ್ ಮಹಿಳೆ ನಾಯಿಗಳ ದಾಳಿಯಿಂದ ಪಾರಾಗಿದ್ದಾರೆ.

Continue Reading

ಕ್ರೀಡೆ

AFG vs AUS: ಆಸೀಸ್​ ವಿರುದ್ಧದ ಐತಿಹಾಸಿಕ ಗೆಲುವನ್ನು ಪಟಾಕಿ ಸಿಡಿಸಿ ಸಂಭ್ರಮಿಸಿದ ಆಫ್ಘನ್ನರು; ವಿಡಿಯೊ ವೈರಲ್​

AFG vs AUS: ಪಂದ್ಯ ಗೆದ್ದು ಹೋಟೆಲ್​ಗೆ ತೆರಳುವ ವೇಳೆ ಅಫಘಾನಿಸ್ತಾನ ತಂಡದ ಆಟಗಾರರು ತಮ್ಮ ಬಸ್​ನಲ್ಲಿ ಡ್ವೇನ್​ ಬ್ರಾವೊ ಹಾಡಿದ ಡೀಜೆ….ಬ್ರಾವೊ…ಚಾಂಪಿಯನ್​…ಚಾಂಪಿಯನ್​ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಬ್ರಾವೊ ಕೂಡ ಆಟಗಾರರೊಂದಿಗೆ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಬ್ರಾವೊ ಅಫಘಾನಿಸ್ತಾನ ತಂಡ ಬೌಲಿಂಗ್​ ಕೋಚ್​ ಆಗಿದ್ದಾರೆ.

VISTARANEWS.COM


on

AFG vs AUS
Koo

ಕಿಂಗ್‌ಸ್ಟೌನ್ (ಸೇಂಟ್ ವಿನ್ಸೆಂಟ್): ಇಂದು (ಭಾನುವಾರ) ನಡೆದ ಸೂಪರ್​-8(T20 World Cup 2024) ಪಂದ್ಯದಲ್ಲಿ ಅಫಘಾನಿಸ್ತಾನ(AFG vs AUS) ಬಲಿಷ್ಠ ಆಸ್ಟ್ರೇಲಿಯಾವನ್ನು 21 ರನ್​ಗಳಿಂದ ಮಗುಚಿ ಹಾಕಿ ಐತಿಹಾಸಿಕ ಗೆಲುವು ತನ್ನದಾಗಿಸಿಕೊಂಡಿತು. ಆಸೀಸ್​ ವಿರುದ್ಧದ ಈ ಗೆಲುವನ್ನು ಆಟಗಾರರು ಮಾತ್ರವಲ್ಲದೆ ಆಫ್ಘನ್ನರು(Afghanistan) ಕೂಡ​ ಈ ಗೆಲುವನ್ನು ಸಂಭ್ರಮಿಸಿದ್ದಾರೆ. ಅಫಘಾನಿಸ್ತಾನದ ಬೀದಿ ಬೀದಿಗಳಲ್ಲಿ ಸಿಹಿ ಹಂಚಿ ಪಟಾಕಿ ಸಿಡಿಸುವ ಮೂಲಕ ಸಂಭ್ರಮಾಚರಣೆ ಮಾಡಿದ್ದಾರೆ. ಈ ವಿಡಿಯೊ ವೈರಲ್(viral video)​ ಆಗಿದೆ.

ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಅಫಘಾನಿಸ್ತಾನ ತಂಡ ಕಮಿನ್ಸ್​ ಅವರ ಬೌಲಿಂಗ್​ ದಾಳಿಯ ಮಧ್ಯೆಯೂ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 148 ರನ್​ ಬಾರಿಸಿತು. ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ಗ್ಲೆನ್​ ಮ್ಯಾಕ್ಸ್​ವೆಲ್​ ಅವರ ಅರ್ಧಶತಕದ ಹೊರತಾಗಿಯೂ 127 ರನ್​ಗೆ ಸರ್ವಪತನ ಕಂಡು ಸೋಲಿಗೆ ತುತ್ತಾಯಿತು. ಈ ಗೆಲುವಿನೊಂದಿಗೆ ಆಫ್ಘಾನ್​ ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ಸೋಲಿಗೆ ಇಲ್ಲಿ ಸೇಡು ತೀರಿಸಿಕೊಂಡಿತು.

ಚಾಂಪಿಯನ್​ ಹಾಡಿಗೆ ಕುಣಿದು ಕುಪ್ಪಳಿಸಿದ ಆಟಗಾರರು


ಪಂದ್ಯ ಗೆದ್ದು ಹೋಟೆಲ್​ಗೆ ತೆರಳುವ ವೇಳೆ ಅಫಘಾನಿಸ್ತಾನ ತಂಡದ ಆಟಗಾರರು ತಮ್ಮ ಬಸ್​ನಲ್ಲಿ ಡ್ವೇನ್​ ಬ್ರಾವೊ ಹಾಡಿದ ಡೀಜೆ….ಬ್ರಾವೊ…ಚಾಂಪಿಯನ್​…ಚಾಂಪಿಯನ್​ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಬ್ರಾವೊ ಕೂಡ ಆಟಗಾರರೊಂದಿಗೆ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಬ್ರಾವೊ ಅಫಘಾನಿಸ್ತಾನ ತಂಡ ಬೌಲಿಂಗ್​ ಕೋಚ್​ ಆಗಿದ್ದಾರೆ.

ಇದನ್ನೂ ಓದಿ AUS vs AFG: ಆಸ್ಟ್ರೇಲಿಯಾಕ್ಕೆ ಆಘಾತವಿಕ್ಕಿದ ಆಫ್ಘಾನ್​; 21 ರನ್​ ಸೋಲು ಕಂಡ ಆಸೀಸ್​

ಅಫಘಾನಿಸ್ತಾನ ಪರ ಘಾತಕ ಬೌಲಿಂಗ್​ ದಾಳಿ ನಡೆಸಿದ ಗುಲ್ಬದಿನ್ ನೈಬ್​ 2 ಓವರ್​ಗೆ 20 ರನ್​ ನೀಡಿ 4 ವಿಕೆಟ್​ ಕಿತ್ತರು. ಇವರಿಗೆ ಉತ್ತಮ ಸಾಥ್​ ನೀಡಿದ ನವೀನ್​ ಉಲ್​ ಹಕ್​ 4 ಓವರ್​ಗೆ 20 ರನ್​ ಬಿಟ್ಟುಕೊಟ್ಟು 3 ವಿಕೆಟ್​ ಉರುಳಿಸಿದರು. ನಾಯಕ ರಶೀದ್​ ಖಾನ್​ ಮತ್ತು ಮೊಹಮ್ಮದ್​ ನಬಿ ತಲಾ ಒಂದು ವಿಕೆಟ್​ ಪೆಡೆದರು.

ನಾಳೆ ನಡೆಯುವ ಭಾರತ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೋಲು ಕಂಡು, ಅಂತಿಮ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಅಫಘಾನಿಸ್ತಾನ ಗೆದ್ದರೆ ಸೆಮಿಫೈನಲ್​ ಪ್ರವೇಶಿಸಲಿದೆ. ಗ್ರಾಸ್​ ಐಲೆಟ್​ನಲ್ಲಿ(Saint Lucia latest weather) ನಡೆಯಲಿರುವ ಭಾರತ-ಆಸೀಸ್​(Australia vs India) ನಡುವಿನ ಹೈವೋಲ್ಟೇಜ್​ ಪಂದ್ಯಕ್ಕೆ ಭಾರೀ ಮಳೆಯಾಗಿ ಪಂದ್ಯ ರದ್ದಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಒಂದೊಮ್ಮೆ ಮಳೆಯಿಂದ ಪಂದ್ಯ ರದ್ದಾದರೆ ಇತ್ತಂಡಗಳಿಗೂ ತಲಾ ಒಂದು ಅಂಕ ನೀಡಲಾಗುತ್ತದೆ. ಪಂದ್ಯ ರದ್ದಾದರೆ ಭಾರತಕ್ಕೆ ಲಾಭವಾಗಲಿದೆ. ಆದರೆ ಆಸೀಸ್​ಗೆ ಇದು ಭಾರೀ ನಷ್ಟವಾಗಲಿದೆ. ಬಾಂಗ್ಲಾ ವಿರುದ್ಧ ಅಫಘಾನಿಸ್ತಾನ ಗೆದ್ದರೆ, ಆಸೀಸ್​ ತಂಡ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ.

Continue Reading
Advertisement
Surrogacy Leaves
ಪ್ರಮುಖ ಸುದ್ದಿ47 mins ago

Surrogacy Leaves: ಬಾಡಿಗೆ ತಾಯ್ತನದ ನಿಯಮ ಬದಲಿಸಿದ ಕೇಂದ್ರ; ಇನ್ನು ಸಿಗಲಿದೆ 6 ತಿಂಗಳು ರಜೆ!

T20 world Cup 2024
ಕ್ರೀಡೆ1 hour ago

T20 World Cup 2024 : ಇಂಗ್ಲೆಂಡ್ ವಿರುದ್ಧ ಯುಎಸ್​​ಎ ತಂಡಕ್ಕೆ 10 ವಿಕೆಟ್​ ಹೀನಾಯ ಸೋಲು

SBI
ದೇಶ2 hours ago

SBI: ನಿಮ್ಮೂರಿಗೂ ಬರಲಿದೆ ಎಸ್‌ಬಿಐ ಹೊಸ ಬ್ರ್ಯಾಂಚ್;‌ 400 ಶಾಖೆ ತೆರೆಯಲು ಬ್ಯಾಂಕ್‌ ನಿರ್ಧಾರ

IND vs SA
ಪ್ರಮುಖ ಸುದ್ದಿ2 hours ago

IND VS SA : ದಕ್ಷಿಣ ಆಫ್ರಿಕಾ ವಿರುದ್ಧ 3-0 ಕ್ಲೀನ್ ಸ್ವೀಪ್ ಸಾಧನೆ ಮಾಡಿದ ಭಾರತದ ವನಿತೆಯರ ಕ್ರಿಕೆಟ್ ತಂಡ

T20 world cup 2024
ಪ್ರಮುಖ ಸುದ್ದಿ2 hours ago

T20 World Cup 2024 : ಅಮೆರಿಕ ವಿರುದ್ಧವೂ ಸೋತ್ರಲ್ಲೋ… ಪಾಕ್​ ಪಾರ್ಲಿಮೆಂಟ್​ನಲ್ಲೂ ವಿಶ್ವ ಕಪ್ ಸೋಲಿನ ಚರ್ಚೆ!

Rahul Gandhi
ದೇಶ3 hours ago

Rahul Gandhi: ಎಲ್ಲರೂ ಬೈಯುವಾಗ ನೀವು ಪ್ರೀತಿ ಕೊಟ್ರಿ; ವಯನಾಡು ಜನತೆಗೆ ರಾಹುಲ್‌ ಗಾಂಧಿ ಭಾವುಕ ಪತ್ರ

Babar Azam
ಪ್ರಮುಖ ಸುದ್ದಿ3 hours ago

Babar Azam: ಮ್ಯಾಚ್​ ಫಿಕ್ಸಿಂಗ್ ಆರೋಪ ಮಾಡಿದವನ ಮೇಲೆ 1 ಕೋಟಿ ರೂ. ಮಾನನಷ್ಠ ಮೊಕದ್ದಮೆ ಹೂಡಿದ ಬಾಬರ್ ಅಜಮ್​

Abbi Falls
ಕರ್ನಾಟಕ4 hours ago

Abbi Falls: ಅಬ್ಬಿ ಫಾಲ್ಸ್ ಬಳಿ ಸೆಲ್ಫಿ ಕ್ರೇಜ್‌ಗೆ ಯುವಕ ಬಲಿ; ಕೊಡಗಿನಲ್ಲಿ ಮತ್ತೆ ಪ್ರವಾಸಿಗರ ಮೇಲೆ ಹಲ್ಲೆ

Shakib Al Hasan
ಪ್ರಮುಖ ಸುದ್ದಿ4 hours ago

Shakib Al Hasan : ನಿವೃತ್ತಿಯಾಗು ಶಕಿಬ್…, ಬಾಂಗ್ಲಾ ಮಾಜಿ ನಾಯಕನ ಮೇಲೆ ಮತ್ತೆ ಗುಡುಗಿದ ಸೆಹ್ವಾಗ್​

Vashu Bhagnani
ಸಿನಿಮಾ4 hours ago

Vashu Bhagnani: ‘ಬೆಲ್ ಬಾಟಮ್’ ಚಿತ್ರದ ನಿರ್ಮಾಪಕ ದಿವಾಳಿ; ಕಚೇರಿ ಕಟ್ಟಡ ಸೇಲ್!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ2 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ3 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ3 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು6 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು7 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 week ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ1 week ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

ಟ್ರೆಂಡಿಂಗ್‌