Viral Video : ವೇದಿಕೆ ಮೇಲೆ ಧೂಳೆಬ್ಬಿಸಿದ ಭಲೇ ಜೋಡಿ; ಸಕತ್‌ ಆಗಿದೆ ಈ ಸೆನೋರಿಟಾ ಡ್ಯಾನ್ಸ್‌ - Vistara News

ವೈರಲ್ ನ್ಯೂಸ್

Viral Video : ವೇದಿಕೆ ಮೇಲೆ ಧೂಳೆಬ್ಬಿಸಿದ ಭಲೇ ಜೋಡಿ; ಸಕತ್‌ ಆಗಿದೆ ಈ ಸೆನೋರಿಟಾ ಡ್ಯಾನ್ಸ್‌

ವೃದ್ಧ ಜೋಡಿ ವೇದಿಕೆ ಮೇಲೆ ಸೆನೋರಿಟಾ ಹಾಡಿಗೆ ನೃತ್ಯ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral Video) ಆಗಿದೆ.

VISTARANEWS.COM


on

old pair dance
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮದುವೆ ಕಾರ್ಯಕ್ರಮ ಎಂದ ಮೇಲೆ ಅಲ್ಲಿ ಸಂಭ್ರಮವೋ ಸಂಭ್ರಮ. ಮನೆಯ ಪ್ರತಿಯೊಬ್ಬ ಸದಸ್ಯರೂ ಹಾಡಿ, ಕುಣಿದು, ಕುಪ್ಪಳಿಸುವುದಕ್ಕೆ ಸಿಗುವ ಅವಕಾಶವೇ ಮದುವೆ. ಈ ಸಂಭ್ರಮದ ಹಲವಾರು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್‌ ಆಗುತ್ತಿರುತ್ತವೆ. ಅದೇ ರೀತಿಯ ಮತ್ತೊಂದು ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಕತ್‌ ಸದ್ದು (Viral Video) ಮಾಡುತ್ತಿದೆ.

ವೇದಿಕೆಯ ಮೇಲೆ ವೃದ್ಧ ದಂಪತಿ ನಿಂತಿದ್ದಾರೆ. ಹಿಂದಿನಿಂದ 2011ರ ಜಿಂದಗಿ ನಾ ಮಿಲೇಗಿ ದುಬಾರಾ ಸಿನಿಮಾದ ಸೆನೋರಿಟಾ ಹಾಡು ತೇಲಿಬರುತ್ತಿದೆ. ಈ ಹಾಡು ತಮ್ಮದೇ ಎನ್ನುವ ರೀತಿಯಲ್ಲಿ ವೇದಿಕೆ ಮೇಲಿದ್ದ ಜೋಡಿ ಕುಣಿಯಲಾರಂಭಿಸುತ್ತದೆ. ಒಂದು ಸೆಕೆಂಡ್‌ ಕೂಡ ಬಿಡುವು ಕೊಡದೆ ಇಬ್ಬರೂ ಹೊಂದಾಣಿಕೆಯೊಂದಿಗೆ ಹಾಡಿಗೆ ಹೆಜ್ಜೆ ಹಾಕುತ್ತಾರೆ.

ಇದನ್ನೂ ಓದಿ: Viral News: ಪಲ್ಟಿಯಾದ ಬಿಯರ್‌ ತುಂಬಿದ ಲಾರಿ, ಸಿಕ್ಕಿದ್ದೇ ಚಾನ್ಸು ಅಂತ ಬಾಟಲಿ ಎತ್ತಿಕೊಂಡು ಕುಡುಕರು ಪರಾರಿ
ಈ ರೀತಿಯಲ್ಲಿ ಜೋಡಿ ಯುವಕರೂ ನಾಚುವಂತೆ ಹೆಜ್ಜೆ ಹಾಕುತ್ತಿದ್ದರೆ ವೇದಿಕೆಯ ಕೆಳಗಿರುವ ಜನರು ಜೋರಾಗಿ ಚೀರುತ್ತಾ, ಚಪ್ಪಾಳೆ ತಟ್ಟುತ್ತಾ ಜೋಡಿಗೆ ಪ್ರೋತ್ಸಾಹಿಸುತ್ತಾರೆ. ಕ್ಯಾಮರಾಮೆನ್‌ ಕೂಡ ಎಲ್ಲ ರೀತಿಯ ಭಂಗಿಯಲ್ಲಿ ಈ ಜೋಡಿಯ ನೃತ್ಯವನ್ನು ಸೆರೆಹಿಡಿದಿದ್ದಾನೆ.

ಈ ವಿಡಿಯೊವನ್ನು sikhlens ಹೆಸರಿನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದೆ. ಮೇ 16ರಂದು ಹಂಚಿಕೊಳ್ಳಲಾದ ಈ ವಿಡಿಯೊ ಈಗಾಗಲೇ 2.1 ಮಿಲಿಯನ್‌ಗೂ ಅಧಿಕ ಮಂದಿಯಿಂದ ವೀಕ್ಷಣೆಗೊಂಡಿದೆ. ಸಾವಿರಾರು ಮಂದಿ ವಿಡಿಯೊವನ್ನು ಲೈಕ್‌ ಮಾಡಿದ್ದಾರೆ. ಹಾಗೆಯೇ ಮೆಚ್ಚುಗೆಯ ಕಾಮೆಂಟ್‌ಗಳ ಸುರಿಮಳೆಯೇ ವಿಡಿಯೊಗೆ ಸುರಿದಿದೆ.

ಇದನ್ನೂ ಓದಿ: Video Viral: ಉಚಿತ ಗ್ಯಾರಂಟಿ ಯೋಜನೆ ಚುನಾವಣೆಯ ಚೀಪ್‌ ಗಿಮಿಕ್‌ ಎಂದ ಕೃಷಿ ಸಚಿವ ಚಲುವರಾಯಸ್ವಾಮಿ!
“ಅಬ್ಬಾ, ಲವ್ಲಿ ಜೋಡಿಯಿದು. ಇವರು ಹಲವಾರು ಕಾರ್ಯಕ್ರಮಗಳಲ್ಲಿ ಕುಣಿದಿರುವ ವಿಡಿಯೊವನ್ನು ನಾನು ನೋಡಿದ್ದೇನೆ”, “ಇದು ಅತ್ಯದ್ಭುತ ವಿಡಿಯೊ”, “ಇವರು ನಿಜವಾಗಿಯೂ ಸಾಕಷ್ಟು ಜನರಿಗೆ ಸ್ಫೂರ್ತಿ” ಎನ್ನುವ ಹಲವಾರು ಕಾಮೆಂಟ್‌ಗಳು ಈ ವಿಡಿಯೊಗೆ ಬಂದಿವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Virat Kohli: ಧೋನಿಯ ಹೇರ್‌ಸ್ಟೈಲ್‌ ಕಾಪಿ ಮಾಡಿದ ವಿರಾಟ್​ ಕೊಹ್ಲಿ

17ನೇ ಆವೃತ್ತಿಯ ಐಪಿಎಲ್(IPL 2024)​ ಟೂರ್ನಿಯಲ್ಲಿ ವಿರಾಟ್​ ಕೊಹ್ಲಿ ನೂತನ ಹೇರ್​ ಸ್ಟೈಲ್​ ಮೂಲಕ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ

VISTARANEWS.COM


on

Virat Kohli's new look
Koo

ಬೆಂಗಳೂರು: ಪ್ರತಿ ಬಾರಿಯ ಐಪಿಎಲ್(IPL 2024)​ ಟೂರ್ನಿಯಲ್ಲಿ ಆಟಗಾರರು ಒಂದಲ್ಲ ಒಂದು ವಿಭಿನ್ನ ಶೈಲಿಯ ಗಡ್ಡ, ಹೇರ್​ ಸ್ಟೈಲ್​ಗಳನ್ನು ಮಾಡಿ ಹೊಸ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಾರೆ. ಇದೀಗ 17ನೇ ಆವೃತ್ತಿಯಲ್ಲಿ ವಿರಾಟ್​ ಕೊಹ್ಲಿ ಕೂಡ ನೂತನ ಹೇರ್​ ಸ್ಟೈಲ್​ ಮೂಲಕ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಕೊಹ್ಲಿಯ ಹೊಸ ಲುಕ್​ಗೆ(Virat Kohli’s new look) ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೆ, ನೆಟ್ಟಿಗರು ಮಾತ್ರ ಕೊಹ್ಲಿಯ ಕಾಲೆಳೆದಿದ್ದಾರೆ. ಇದು ಧೋನಿ(ms dhoni hairstyle) ಹಾಗೂ ಇಶಾನ್​ ಕಿಶನ್​ ಅವರ ಕಾಪಿ ಎಂದು ಕಮೆಂಟ್​ ಮಾಡಿದ್ದಾರೆ.

ಧೋನಿ ಶೈಲಿ ಅನುಕರಣೆ ಮಾಡಿದ್ದ ಇಶಾನ್‌


ಐಪಿಎಲ್‌ನಲ್ಲಿ ಮಹೇಂದ್ರ ಸಿಂಗ್‌ ಧೋನಿ ಅವರು ಇದೇ ರೀತಿಯ ಶೈಲಿಯಲ್ಲಿ ಹೇರ್‌ಸ್ಟೈಲ್‌ ಮಾಡಿದ್ದರು. ಧೋನಿ ಅವರ ಶೈಲಿ ಕೊಂಚ ಸಿಂಪಲ್‌ ಆಗಿತ್ತು. ಇದೇ ರೀತಿಯಲ್ಲಿ ಕಳೆದ ವರ್ಷ ಇಶಾನ್‌ ಕಿಶನ್​ ಕೂಡ ಹೇರ್‌ಸ್ಟೈಲ್‌ ಮಾಡಿದ್ದರು. ಇಶಾನ್ದ ಅವರ ಈ ಹೊಸ ಲುಕ್​ ಕಂಡು ಸೂರ್ಯಕುಮಾರ್‌ ಯಾದವ್‌ ಅವರ ಪತ್ನಿ ದೇವಿಶಾ ಶೆಟ್ಟಿ ಇದು ಮುಳ್ಳು ಹಂದಿ ತರ ಕಾಣುತ್ತಿದೆ ಎಂದು ಕಮೆಂಟ್‌ ಮಾಡಿದ್ದರು. ಇದೀಗ ಕೊಹ್ಲಿಯ ಲುಕ್​​ ಕೂಡ ಧೋನಿ ಮತ್ತು ಇಶಾನ್ ಅವರ ಹೇರ್‌ಸ್ಟೈಲ್​ ನಂತೆ ಕಾಣಿಸಿದೆ. ಹಲವು ನೆಟ್ಟಿಗರು ಕಮೆಂಟ್‌ ಮಾಡಿದ್ದು ಇದು ಧೋನಿಯಿಂದ ಪಡೆದ ಪ್ರೇರಣೆಯಾಗಿದೆ ಎಂದಿದ್ದಾರೆ. ಧೋನಿ ಈ ಬಾರಿ ರೆಟ್ರೊ ಶೈಲಿಯ ಉದ್ದನೆಯ ಕೂದಲಿನ ಮೂಲಕ ಕಾಣಿಸಿಕೊಳ್ಳಲಿದ್ದಾರೆ. ಅವರು ಭಾರತ ತಂಡಕ್ಕೆ ಪದಾರ್ಪಣೆ ಮಾಡುವ ಸಂದರ್ಭದಲ್ಲಿ ಇದೇ ಶೈಲಿಯಲ್ಲಿ ಕಾಣಿಸಿಕೊಳಡಿದ್ದರು.

ಇದನ್ನೂ ಓದಿ IPL 2024: ರೋಹಿತ್ ಬ್ಯಾಟಿಂಗ್​​ ಅಭ್ಯಾಸದ ವಿಡಿಯೊ ಹಂಚಿಕೊಂಡ ಮುಂಬೈ ಇಂಡಿಯನ್ಸ್

ಮಾರ್ಚ್ 22ರಂದು ಲೀಗ್​ನ ಸಾಂಪ್ರದಾಯಿಕ ಬದ್ದ ಎದುರಾಳಿಗಳಾದ ಆರ್‌ಸಿಬಿ(Royal Challengers Bangalore) ಮತ್ತು ಸಿಎಸ್‌ಕೆ(rcb vs csk) ಮುಖಾಮುಖಿಯಾಗುವ ಮೂಲಕ ಟೂರ್ನಿಗೆ ಚಾಲನೆ ಸಿಗಲಿದೆ. ಈ ಪಂದ್ಯಕ್ಕೆ ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂ ಅಣಿಯಾಗಿದೆ. ಪಂದ್ಯವನ್ನು ಕಣ್ತುಂಬಿಕೊಳ್ಳಲು ಈಗಾಗಲೇ ಉಭಯ ತಂಡಗಳ ಅಭಿಮಾನಿಗಳು ದುಬಾರಿ ಬೆಲೆ ನೀಡಿ ಟಿಕೆಟ್​ ಖರೀದಿಸಿದ್ದಾರೆ. 

ವಿರಾಟ್‌ ಕೊಹ್ಲಿ ಸೋಮವಾರ ಬೆಂಗಳೂರಿನಲ್ಲಿ ಆರ್‌ಸಿಬಿ ತಂಡವನ್ನು ಸೇರಿಕೊಂಡು ಅಭ್ಯಾಸ ಆರಂಭಿಸಿದ್ದಾರೆ. ಅಕಾಯ್‌ ಜನನವಾದ ಬಳಿಕ ಭಾನುವಾರವಷ್ಟೇ ಕೊಹ್ಲಿ ಭಾರತಕ್ಕೆ ಮರಳಿದ್ದರು. ವಿರಾಟ್‌ ಕೊಹ್ಲಿ ಕಳೆದ ಐಪಿಎಲ್‌ನಲ್ಲಿ 2 ಶತಕ ಸೇರಿದಂತೆ 639 ರನ್‌ ಪೇರಿಸಿ ಭರ್ಜರಿ ಫಾರ್ಮ್ ಪ್ರದರ್ಶಿಸಿದ್ದರು. ಈ ಬಾರಿಯೂ ಶ್ರೇಷ್ಠ ಬ್ಯಾಟಿಂಗ್​ ಪ್ರದರ್ಶನ ತೋರುವ ನಿರೀಕ್ಷೆಯಲ್ಲಿದ್ದಾರೆ. ವಿರಾಟ್ ಕೊಹ್ಲಿ ಇದುವರೆಗೆ 237 ಐಪಿಎಲ್ ಮ್ಯಾಚ್​ಗಳಲ್ಲಿ ಕಣಕ್ಕಿಳಿದಿದ್ದಾರೆ. ಈ ವೇಳೆ 7 ಶತಕ ಹಾಗೂ 50 ಅರ್ಧಶತಕಗಳೊಂದಿಗೆ ಒಟ್ಟು 7263 ರನ್ ಕಲೆಹಾಕಿದ್ದಾರೆ.

ಆರ್​ಸಿಬಿ ತಂಡ


ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್​ವೆಲ್​, ವಿರಾಟ್ ಕೊಹ್ಲಿ, ಕ್ಯಾಮರಾನ್ ಗ್ರೀನ್, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಾಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಯಾಂಕ್ ದಾಗರ್, ಮಹಿಪಾಲ್ ಲೊಮ್ರೊರ್, ಕರಣ್ ಶರ್ಮಾ, ಮನೋಜ್ ಭಾಂಡಗೆ, ವೈಶಾಕ್ ವಿಜಯ್ ಕುಮಾರ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟಾಪ್ಲೆ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಟಾಮ್ ಕರ್ರನ್, ಲಾಕಿ ಫರ್ಗುಸನ್, ಸ್ವಪ್ನಿಲ್ ಸಿಂಗ್.

Continue Reading

ಕ್ರೀಡೆ

Imad Wasim: ಡ್ರೆಸ್ಸಿಂಗ್‌ ರೂಮ್​ನಲ್ಲೇ ರಾಜಾರೋಷವಾಗಿ ಸಿಗರೇಟ್‌ ಸೇದಿದ ಪಾಕ್​ ಆಟಗಾರ

ಇಮಾದ್ ವಾಸಿಂ(Imad Wasim) ಅವರು ಡ್ರೆಸ್ಸಿಂಗ್‌ ರೂಮ್‌ ನಲ್ಲಿ ಸಿಗರೇಟ್‌ ಸೇದುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಅವರ ಈ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

VISTARANEWS.COM


on

viral video
Koo

ಕರಾಚಿ: ಪಾಕಿಸ್ತಾನ್ ಸೂಪರ್ ಲೀಗ್ (PSL) ಫೈನಲ್(PSL Final)​ ಪಂದ್ಯದ ವೇಳೆ ಇಮಾದ್ ವಾಸಿಂ(Imad Wasim) ಅವರು ಡ್ರೆಸ್ಸಿಂಗ್‌ ರೂಮ್‌ ನಲ್ಲಿ ಸಿಗರೇಟ್‌ ಸೇದುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಅವರ ಈ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ʼಪಾಕಿಸ್ತಾನ್‌ ಸ್ಮೋಕಿಂಗ್‌ ಲೀಗ್‌ʼ(Pakistan Smoking League) ಎಂದು ಹಲವರು ಕಮೆಂಟ್‌ ಮಾಡಿದ್ದಾರೆ.

ಇಸ್ಲಾಮಾಬಾದ್ ಯುನೈಟೆಡ್ ತಂಡದ ಆಲ್​ರೌಂಡರ್​ ಆಟಗಾರನಾಗಿರುವ ಇಮಾದ್ ವಾಸಿಂ ಅವರು ಫೈನಲ್​ ಪಂದ್ಯದಲ್ಲಿ 4 ಓವರ್​ ಎಸೆದು ಕೇವಲ 23 ರನ್​ ವೆಚ್ಚದಲ್ಲಿ 5 ವಿಕೆಟ್​ ಕಿತ್ತು ತಂಡ ಚಾಂಪಿಯನ್​ ಆಗುವಲ್ಲಿ ಪ್ರಮುಖ ಪಾತ್ರಬಹಿಸಿದ್ದರು. ಗೆಲುವಿನ ಹೀರೊ ಎನಿಸಿದ್ದ ಅವರು ಈ ಒಂದು ಘಟನೆಯಿಂದ ನೆಟ್ಟಗರ ಪಾಲಿಗೆ ವಿಲನ್ ಆಗಿದ್ದಾರೆ. ಡ್ರೆಸಿಂಗ್​ ರೂಮ್​ನಲ್ಲಿ ರಾಜಾರೋಷವಾಗಿ ಸಿಗರೇಟ್​ ಸೇದಿರುವ ಬಗ್ಗೆ ಪಾಕ್​ ತಂಡದ ಹಲವು ಹಾಲಿ ಮತ್ತು ಮಾಜಿ ಆಟಗಾರರು ಕೂಡ ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ IPL 2024: ರೋಹಿತ್ ಬ್ಯಾಟಿಂಗ್​​ ಅಭ್ಯಾಸದ ವಿಡಿಯೊ ಹಂಚಿಕೊಂಡ ಮುಂಬೈ ಇಂಡಿಯನ್ಸ್

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಮೊಹಮ್ಮದ್​ ರಿಜ್ವಾನ್‌ ಸಾರಥ್ಯದ ಮುಲ್ತಾನ್ ಸುಲ್ತಾನ್‌ 9 ವಿಕೆಟ್‌ ವಿಕೆಟ್​​ಗೆ 159 ರನ್‌ ಬಾರಿಸಿತು. ಗುರಿ ಬೆನ್ನಟ್ಟಿದ ಇಸ್ಲಾಮಾಬಾದ್ ಯುನೈಟೆಡ್ 8 ವಿಕೆಟ್​ಗೆ 163 ರನ್​ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು. ಆದರೆ ಈ ಗೆಲುವಿಗಾಗಿ ಅಂತಿಮ ಎಸೆತದ ವರೆಗೂ ಹೋರಾಟ ನಡೆಸಿತು. ತಂಡದ ಪರ ಮಾರ್ಟಿನ್ ಗಪ್ಟಿಲ್(50) ಅರ್ಧಶತಕ ಬಾರಿಸಿ ಮಿಂಚಿದರು. ಅಜಂ ಖಾನ್(30) ಬಾರಿಸಿದರು. ಇಮಾದ್ ವಾಸಿಂ ಅಜೇಯ 19 ರನ್​ ಹೊಡೆದರು.

ಬಾಂಗ್ಲಾದೇಶ ಪ್ರೀಮಿಯರ್ ಲೀಗ್​ನಲ್ಲೂ ನಡೆದಿತ್ತು


ಬಾಂಗ್ಲಾದೇಶ ಪ್ರೀಮಿಯರ್ ಲೀಗ್​ನಲ್ಲಿಯೂ ಇಂತಹದ್ದೇ ಘಟನೆ ನಡೆದಿತ್ತು. ಅಫಫ್ಘಾನಿಸ್ತಾನ ತಂಡದ ವಿಕೆಟ್ ಕೀಪರ್ ಬ್ಯಾಟರ್​ ಮೊಹಮ್ಮದ್ ಶಹಜಾದ್​ ಮೈದಾನದಲ್ಲಿ ಸಿಗರೇಟ್​ ಸೇದಿ ಶಿಕ್ಷೆಗೂ ಗುರಿಯಾಗಿದ್ದರು. ಜತೆಗೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯಿಂದಲೂ ಛೀಮಾರಿಗೊಳಗಾಗಿದ್ದರು.


ಮಳೆಯ ಕಾರಣ ಪಂದ್ಯ ಆರಂಭ ತಡವಾಗಿತ್ತು. ಈ ವೇಳೆ ಮೈದಾನದಕ್ಕೆ ಇತರೆ ಆಟಗಾರರ ಜತೆ ಆಗಮಿಸಿದ್ದ ಶಹಜಾದ್​​ ಸಿಗರೇಟ್​ ಸೇದಿದ್ದರು. ಈ ಫೋಟೋ ಹಲವು ಸಾಮಾಜಿಕ ಜಾಲಾತಾಣದಲ್ಲಿ ಚರ್ಚೆಯಾಗಿತ್ತು. ಮೈದಾನದಲ್ಲಿ ಧೂಮಪಾನ ಮಾಡುವ ಮೂಲಕ ಬಿಸಿಬಿ ನೀತಿ ಸಂಹಿತೆ ಆರ್ಟಿಕಲ್​ 2.20 ಅನ್ನು ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿತ್ತು. ಶಹಜಾದ್​ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರು. ಅವರ ಈ ವರ್ತನೆಗೆ ಒಂದು ಡಿಮೆರಿಟ್​ ಅಂಕವನ್ನು ಸೇರಿಸಲಾಗಿತ್ತು.

Continue Reading

ವೈರಲ್ ನ್ಯೂಸ್

Pralhad Joshi : ಸಂತೋಷ್‌ ಲಾಡ್‌ ದಿನಾ ಮೋದಿಗೆ ಬಯ್ಯೋದ್ಯಾಕೆ: ರಹಸ್ಯ ಬಿಚ್ಚಿಟ್ಟ ಜೋಶಿ!

Pralhad Joshi : ಸಂತೋಷ್‌ ಲಾಡ್‌ ಅವರು ದಿನವೂ ಮೋದಿಯನ್ನು ಬೈಯೋದ್ಯಾಕೆ: ಈ ಪ್ರಶ್ನೆಗೆ ಹಾಸ್ಯಮಯ ಉತ್ತರ ನೀಡಿದ್ದಾರೆ ಪ್ರಹ್ಲಾದ್‌ ಜೋಶಿ.. ಏನಂತಾರೆ ಕೇಳಿ!

VISTARANEWS.COM


on

Pralhad Joshi Santhosh lad
Koo

ಹುಬ್ಬಳ್ಳಿ: ರಾಜ್ಯದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ (Minister Santhosh Lad) ಅವರು ಇತ್ತೀಚೆಗೆ ಪ್ರಬಲ ಮೋದಿ ಟೀಕಾಕಾರನಾಗಿ (Critic of Narendra Modi) ಬದಲಾಗಿದ್ದಾರೆ. ತುಂಬ ಅಧ್ಯಯನ ಮಾಡಿ, ಮೋದಿ ಅವರನ್ನು ಪ್ರಶ್ನೆ ಮಾಡುತ್ತಿದ್ದಾರೆ. ಚರ್ಚೆಗಳಲ್ಲಿ, ಸಭೆಗಳಲ್ಲಿ, ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಮೋದಿ ಅವರನ್ನು ಟೀಕಿಸುತ್ತಿದ್ದಾರೆ. ಹಾಗಿದ್ದರೆ ಸಂತೋಷ್‌ ಲಾಡ್‌ ಒಮ್ಮಿಂದೊಮ್ಮೆಗೆ ಹೀಗೆ ಪ್ರಖರ ಟೀಕಾಕಾರನಾಗಿ ಬದಲಾಗಿದ್ದು ಹೇಗೆ? ಇದಕ್ಕೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ಅವರಿಗೆ ಸ್ಪಷ್ಟ ಉತ್ತರ ಸಿಕ್ಕಿದೆಯಂತೆ!

ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಪ್ರಹ್ಲಾದ್‌ ಜೋಶಿ ಅವರು ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಸಂತೋಷ್‌ ಲಾಡ್‌ ಬೈಗುಳದ ರಹಸ್ಯ ತೆರೆದಿಟ್ಟಿದ್ದಾರೆ.

ಸಂತೋಷ್‌ ಲಾಡ್‌ ಅವರು ಇತ್ತೀಚೆಗೆ ನನ್ನನ್ನು ಮತ್ತು ಮೋದಿಯವರನ್ನು ನಿರಂತರವಾಗಿ ಬಯ್ಯುತ್ತಿದ್ದಾರೆ, ಟೀಕೆ ಮಾಡುತ್ತಿದ್ದಾರೆ. ಅವರು ಈ ರೀತಿಯ ಟೀಕೆ ಮಾಡುತ್ತಿರುವುದು ತಮ್ಮ ಸಚಿವ ಪದವಿ ಉಳಿಸಿಕೊಳ್ಳಲು. ಇದನ್ನು ಸ್ವತಃ ಅವರೇ ನನ್ನ ಬಳಿ ಹೇಳಿಕೊಂಡಿದ್ದಾರೆ ಎಂದು ಜೋಶಿ ಹೇಳಿದರು.

ನಾನು ಮತ್ತು ಲಾಡ್‌ ಆಗಾಗ ಫ್ಲೈಟ್‌ನಲ್ಲಿ ಸಿಗ್ತಾ ಇರುತ್ತೇವೆ. ದಿಲ್ಲಿಯಿಂದ ಬರುವಾಗ, ಬೆಂಗಳೂರಿನಿಂದ ಬರುವಾಗ ಸಿಗುತ್ತೇವೆ. ಮಾತಾಡಿಕೊಳ್ತೇವೆ. ಒಂದು ದಿನ ನಾನು ಕೇಳಿದೆ. ನೀವು ನನ್ನ ಮೇಲೆ ನಿರಂತರವಾಗಿ ಟೀಕೆ ಮಾಡ್ತಾ ಇರ್ತೀರಿ. ಅದೇನೂ ತೊಂದರೆ ಇಲ್ಲ. ನಾನು ಸಣ್ಣವನು. ಆದರೆ, ಮೋದಿ ಅವರ ಮೇಲೂ ದಾಳಿ ಮಾಡ್ತೀರಲ್ಲಾ, ನಿಮ್ಮ ಪರಿಸ್ಥಿತಿ ಏನು? ಎಂದು ಕೇಳಿದೆ.

ನಾನು ಮತ್ತು ಸಂತೋಷ್‌ ಲಾಡ್‌ ಹಿಂದಿಯಲ್ಲಿ ಮಾತಾಡೋದು ಜಾಸ್ತಿ. ಅವರು ಹಿಂದಿಯಲ್ಲಿ ಹೇಳಿದರು: ಕ್ಯಾ ಕರೂ ಸಾಬ್‌, ಊಪರ್‌ ಸೇ ಇನ್‌ಸ್ಟ್ರಕ್ಷನ್‌ ಹೈ, ಮೈ ಡೈಲಿ ಗಾಲಿ ನಹೀ ದಿಯಾ ತೋ ನೌಕರಿ ಚಲೀ ಜಾತೀ ಹೈ! (ಏನು ಮಾಡಲಿ ಸಾಹೇಬ್ರೆ.. ಮೇಲಿನಿಂದ ನನಗೆ ಸೂಚನೆ ಇದೆ. ದಿನಾ ಬಯ್ಯದೆ ಹೋದರೆ ನನ್ನ ಕೆಲಸವೇ ಹೋಗಿ ಬಿಡ್ತದೆ) ಎಂದು ಹೇಳಿದೆ.

ಆಗಿಂದ ನಾನು ತಲೆ ಕೆಡಿಸಿಕೊಂಡಿಲ್ಲ, ನೀವು ತಲೆ ಕೆಡಿಸಿಕೊಳ್ಳಬೇಡಿ. ಉತ್ತರ ಕೊಡುವಾಗ ಕೊಡ್ತೀನಿ ಎಂದು ಜೋಶಿಯವರು ಸಭೆಯಲ್ಲಿ ಹೇಳುವ ವಿಡಿಯೊ ಈಗ ಎಲ್ಲೆಡೆ ವೈರಲ್ ಆಗಿದೆ.

ಇದನ್ನೂ ಓದಿ : Lok Sabha Election 2024: ಈಶ್ವರಪ್ಪ ಬದಲಾಗುತ್ತಾರೆಂದ ಜೋಶಿ; ಕ್ಷೇತ್ರ ಬದಲಾವಣೆ ಆಗಲ್ಲ ಎಂದ ಬೊಮ್ಮಾಯಿ

Pralhad Joshi : ಸಂತೋಷ್‌ ಲಾಡ್‌ ಮಾಡಿದ ಪ್ರಮುಖ ಟೀಕೆಗಳೇನು?

  1. ಮೋದಿಯವರು ಅವರು ಯಾವುದೇ ಪತ್ರಿಕಾಗೋಷ್ಠಿ ಎದುರಿಸಲ್ಲ. ಎಲ್ಲವೂ ಪೂರ್ವ ನಿರ್ಧರಿತ ಮಾತು ಮಾತ್ರ. ಅವರು ನೇರ ಪ್ರಶ್ನೆಗೆ ಉತ್ತರ ನೀಡಿದರೆ ಅವರ ಬಂಡವಾಳ ಬಯಲಾಗುತ್ತದೆ.
  2. ಕಳೆದ ಬಾರಿ ಪುಲ್ವಾಮ ದಾಳಿಯಿಟ್ಟುಕೊಂಡು ಚುನಾವಣೆ ಎದುರಿಸಿದ ಬಿಜೆಪಿ, ಬಳಿಕ ಆ ಕುರಿತ ಚರ್ಚೆಯನ್ನೇ ಮಾಡಲಿಲ್ಲ.
  3. ಕಳೆದ 9 ವರ್ಷಗಳ ಕಾಲ ಶ್ರೀರಾಮಮಂದಿರ ನಿರ್ಮಾಣದ ಬಗ್ಗೆ ಮಾತನಾಡಲಿಲ್ಲ. ಇದೀಗ ನಾವೇ ಮಾಡಿದ್ದು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ
  4. ದೇಶದ ಬಹುತೇಕ ಬಿಜೆಪಿ ನಾಯಕರು ಹಿಂದೂ -ಮುಸ್ಲಿಂ ಎಂದು ಮಾತನಾಡುತ್ತಿದ್ದಾರೆಯೇ ವಿನಃ ದೇಶದ ಸಮಸ್ಯೆಗಳ ಬಗ್ಗೆ ಚಕಾರ ಎತ್ತುತ್ತಿಲ್ಲ.
  5. ಬುಲೆಟ್ ಟ್ರೇನ್ ಬಿಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಈ ವರೆಗೂ ಬುಲೆಟ್ ಟ್ರೇನ್ ಬರಲಿಲ್ಲ. ನಾವು ಟಿಕೆಟ್ ತೆಗೆದುಕೊಂಡು ಕಾಯುತ್ತಿದ್ದೇವೆ.
  6. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಕರ್ನಾಟಕವನ್ನು ತಾಲಿಬಾನ್‌ಗೆ ಹೋಲಿಸಿದ್ದರು. ಆಗ ಯಾರೂ ಖಂಡಿಸಲಿಲ್ಲ. ಕಾಂಗ್ರೆಸ್ ಎಂದಾಕ್ಷಣ ಮಾಧ್ಯಮಗಳ ಎದುರು ಬಿಜೆಪಿ ನಾಯಕರು ಪ್ರತ್ಯಕ್ಷವಾಗಿಬಿಡುತ್ತಾರೆ.
Continue Reading

ವೈರಲ್ ನ್ಯೂಸ್

Bengaluru News : ಕರುವಿನ ಮೇಲೆ ಕಾರು ಹತ್ತಿಸಿದ; ಚಕ್ರಕ್ಕೆ ಸಿಕ್ಕಿ ನರಳಾಡಿದರೂ ಬಿಡಲಿಲ್ಲ ಕಲಿಯುಗದ ಈ ರಾಕ್ಷಸ

ಮೂಕಪ್ರಾಣಿಗಳ ಮೇಲೆ ದೌರ್ಜನ್ಯ ಹೆಚ್ಚಾಗುತ್ತಲೇ ಇದೆ. ರಾಜಧಾನಿ ಬೆಂಗಳೂರಲ್ಲಿ (Bengaluru News ) ಮತ್ತೊಂದು ಅಮಾನವೀಯ ಘಟನೆಗೆ ಸಾಕ್ಷಿ ಆಗಿದೆ.

VISTARANEWS.COM


on

By

Bengaluru News Animals Assault
Koo

ಬೆಂಗಳೂರು: ಬೆಂಗಳೂರಿನಲ್ಲಿ ಹಿಂದೊಮ್ಮೆ (Bengaluru News) ಮುತ್ತುರಾಯ ನಗರದ ಸಪ್ತಗಿರಿ ಲೇಔಟ್‌ ಹಾಗೂ ಯುನಿಟಿ ಬಿಲ್ಡಿಂಗ್‌ನ ಸಿಲ್ವರ್ ಜೂಬ್ಲಿ ಬ್ಲಾಕ್ ಮಿಷನ್ ರೋಡ್‌ನಲ್ಲಿ ರಸ್ತೆ ಬದಿಯಲ್ಲಿ ಮಲಗಿದ್ದ ನಾಯಿ ಮೇಲೆ ಕಾರು ಹತ್ತಿಸಿ (Animal Assault) ಕೊಂದಿದ್ದರು. ಇದೀಗ ದೇವರ ಸ್ವರೂಪದಂತೆ ಕಾಣುವ ಹಸುವಿನ ಮೇಲೆ ಕಾರು ಹತ್ತಿಸಿ ನಿರ್ದಯಿಯೊಬ್ಬ ಕ್ರೌರ್ಯ ಮೆರೆದಿದ್ದಾನೆ.

ಕಲಿಯುಗದ ರಾಕ್ಷಸನೊಬ್ಬ ಮೂಕ ಪ್ರಾಣಿಯ ಮೇಲೆ ದರ್ಪ ತೋರಿದ್ದಾನೆ. ಕಾರಲ್ಲಿ ಬಂದ ಹಂತಕ ಕರುವಿಗೆ ಡಿಕ್ಕಿ ಹೊಡೆದು ನಂತರ ಕಾರು ಹತ್ತಿಸಿದ್ದಾನೆ. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಠಾಣೆಯ ಹಿಂಭಾಗದ ರಸ್ತೆಯಲ್ಲಿ ಘಟನೆ ನಡೆದಿದೆ. ಕರು ಚಕ್ರದಡಿ ಸಿಲುಕಿ ಕೂಗುತ್ತಿದ್ದರೂ ಕರುಣೆ ತೋರದ ಪಾಪಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಮರಣ ವೇದನೆಯಿಂದ ನರಳಾಡಿದ ಕರುವಿನ ಹೊಟ್ಟೆಹಾಗೂ ಕಾಲಿನ ಭಾಗಕ್ಕೆ ಗಂಭೀರ ಸ್ವರೂಪದ ಗಾಯವಾಗಿದೆ. ವಾರದ ಹಿಂದೆ ನಡೆದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಪಾಪಿಯ ಕ್ರೌರ್ಯವು ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ. ಈ ಕೃತ್ಯಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಮೂಕಜೀವಿಗಳ ಮೇಲೆ ಇಂತಹ ಕ್ರೌರ್ಯ ತೋರಿಸುವುದು ಸರಿಯಲ್ಲ ಎಂದಿದ್ದಾರೆ. ಪ್ರಾಣಿಗಳ ಮೇಲೆ ದರ್ಪ ತೋರುವವರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Love Failure: ಮದುವೆ ಆಗದಿದ್ದರೆ ಬಿಲ್ಡಿಂಗ್ ಮೇಲಿಂದ ಬಿದ್ದು ಸಾಯ್ತೀನಿ ಎಂದಳು ಇನ್ಸ್ಟಾಗ್ರಾಮ್ ಚೆಲುವೆ

ಮಲಗಿದ್ದ ನಾಯಿ ಮೇಲೆ ಕಾರು ಹತ್ತಿಸಿದ ನಿರ್ದಯಿ

ಬೆಂಗಳೂರು: ರಾಜಧಾನಿ ಬೆಂಗಳೂರು (Bengaluru News ) ಅಮಾನವೀಯ ಘಟನೆಗೆ ಸಾಕ್ಷಿ ಆಗಿತ್ತು.

Bengaluru News
ರಸ್ತೆಯಲ್ಲಿ ಮಲಗಿರುವ ಶ್ವಾನ

ನಿರ್ದಯಿಯೊಬ್ಬ ಮನೆ ಮುಂದೆ ಮಲಗಿದ್ದ ನಾಯಿ ಮೇಲೆ ಕಾರು ಚಲಾಯಿಸಿಕೊಂಡು ಹೋಗಿದ್ದ. ಉದ್ದೇಶ ಪೂರ್ವಕವಾಗಿಯೇ ನಾಯಿ ಮೇಲೆ ಕಾರು ಚಾಲನೆ ಮಾಡಲಾಗಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು

Bengaluru News
ಕಾರಿನಲ್ಲಿ ಬಂದ ನಿರ್ದಯಿ

ಕಾರು ಬರುವುದು ಅರಿವಿಗೆ ಬರುತ್ತಿದ್ದಂತೆ ಬೀದಿಯಲ್ಲಿ ಮಲಗಿದ್ದ ಶ್ವಾನ ಜಾಗ ಬಿಡಲು ಮುಂದಾಗಿತ್ತು. ಆದರೆ ನಾಯಿ ಏಳುವುದು ಕಾಣುತ್ತಿದ್ದಂತೆ ಕಾರಿನ ವೇಗ ಹೆಚ್ಚಿಸಿದ ದುಷ್ಕರ್ಮಿ ನಾಯಿ ಮೇಲೆ ಹರಿಸಿಕೊಂಡು ಹೋಗಿದ್ದ. ಕಾರಿಗೆ ಸಿಕ್ಕು ಒದ್ದಾಡಿದ ನಾಯಿ ಕ್ಷಣ ಮಾತ್ರದಲ್ಲಿಯೇ ಪ್ರಾಣ ಬಿಟ್ಟಿತ್ತು.

Bengaluru News
ಮಲಗಿದ್ದ ಶ್ವಾನದ ಮೇಲೆ ಕಾರು ಚಲಾಯಿಸಿಕೊಂಡು ಹೋದ ಪಾಪಿ

ಮುತ್ತುರಾಯ ನಗರದ ಸಪ್ತಗಿರಿ ಲೇಔಟ್‌ ಜನವರಿ 7ರಂದು ಬೆಳಗ್ಗೆ 11.10ರ ವೇಳೆಗೆ ಈ ದುರ್ಘಟನೆ ಸಂಭವಿಸಿತ್ತು. ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Bengaluru News
ಚೀರಾಡಿದ ಶ್ವಾನ

ಜಿ ಸುಬ್ರಹ್ಮಣ್ಯ ಎಂಬುವವರ ಹೆಸರಲ್ಲಿ ರಿಜಿಸ್ಟರ್ ಆಗಿರುವ KA 05 MP 5836 ಸಂಖ್ಯೆಯ ಮಾರುತಿ ಸ್ವಿಫ್ಟ್ ಕಾರು ಎಂದು ತಿಳಿದು ಬಂದಿತ್ತು.

Bengaluru News
ಒದ್ದಾಡುತ್ತಲೆ ಮೃತಪಟ್ಟ ಶ್ವಾನ
Bengaluru News
ಶ್ವಾನದ ಕೂಗಾಟ ಕೇಳಿ ಓಡಿ ಬಂದ ಸ್ಥಳೀಯರು
Bengaluru News

ಇತ್ತ ಈ ಕೃತ್ಯಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಮೂಕಜೀವಿಗಳ ಮೇಲೆ ಇಂತಹ ಕ್ರೌರ್ಯ ತೋರಿಸುವುದು ಸರಿಯಲ್ಲ ಎಂದಿದ್ದರು.

ಬೆಂಗಳೂರು: ಮಲಗಿದ್ದ ಬೀದಿ ನಾಯಿಯ ಮೇಲೆ ಕಾರು ಹತ್ತಿಸಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ (Bengaluru News) ಯುನಿಟಿ ಬಿಲ್ಡಿಂಗ್‌ನ ಸಿಲ್ವರ್ ಜೂಬ್ಲಿ ಬ್ಲಾಕ್ ಮಿಷನ್ ರೋಡ್ ಬಳಿ ನಡೆದಿತ್ತು.

ಕಳೆದ ಜ. 25ರಂದು ಅಮಾನವೀಯ ಘಟನೆ ನಡೆದಿದ್ದು, ನಾಯಿ ಮೇಲೆ ಕಾರು ಹತ್ತಿಸುವ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪಾರ್ಕಿಂಗ್‌ ಜಾಗದಲ್ಲಿ ನಾಲ್ಕೈದು ಶ್ವಾನಗಳು ಒಂದೆಡೆ ಇದ್ದರೆ, ಇನ್ನೊಂದು ಶ್ವಾನವು ಮಲಗಿತ್ತು. ಪಾರ್ಕಿಂಗ್‌ನಿಂದ ಕಾರು ತೆಗೆದ ಚಾಲಕ ಏಕಾಏಕಿ ಮಲಗಿದ್ದ ಶ್ವಾನದ ಸಮೀಪ ಬಂದಿದ್ದಾನೆ. ಕಾರಿನ ಶಬ್ಧಕ್ಕೆ ಎದ್ದೇಳಲು ಮುಂದಾಗುವಷ್ಟರಲ್ಲಿ ನಾಯಿ ಮೇಲೆ ಕಾರನ್ನು ಹಾಯಿಸಿದ್ದಾನೆ.

ನಾಯಿ ಮೇಲೆ ಕಾರಿನ ಮುಂದಿನ ಟಯರ್ ಹರಿದ ಪರಿಣಾಮ ನರಳಾಡಿ ನರಳಾಡಿ ಸಾವನ್ನಪ್ಪಿತ್ತು. ಸದ್ಯ ಘಟನೆ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಇದು ಚಾಲಕನ ಅರಿವಿಗೆ ಬಾರದೆ ಸಂಭವಿಸಿದ ಘಟನೆಯಾ ಅಥವಾ ಬೇಕಂತಲೇ ಮಲಗಿದ್ದ ನಾಯಿ ಮೇಲೆ ಕಾರನ್ನು ಹತ್ತಿಸಿದ್ದನ್ನಾ? ಎಂಬುದು ತನಿಖೆಯಿಂದ ತಿಳಿಯಬೇಕಿದೆ. ಸಿಸಿ ಟಿವಿಯಲ್ಲಿ ಸೆರೆಯಾಗಿರುವ ದೃಶ್ಯವು ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
MS Dhoni
ಕ್ರೀಡೆ8 mins ago

IPL 2024: ಐಪಿಎಲ್​ ವೇಳೆ ತಾಳ್ಮೆ ಕಳೆದುಕೊಂಡಿದ್ದ ಧೋನಿಗೂ ಬಿದ್ದಿತ್ತು ದಂಡದ ಬರೆ

Amit Mishara
ಕ್ರೀಡೆ10 mins ago

IPL 2024 : ಐಪಿಎಲ್​ನಲ್ಲಿ ಹ್ಯಾಟ್ರಿಕ್​ ವಿಕೆಟ್ ಸಾಧನೆ ಮಾಡಿದ ಬೌಲರ್​ಗಳ ವಿವರ ಇಲ್ಲಿದೆ

Sudha Kongara
ಕಾಲಿವುಡ್14 mins ago

Actor Suriya: `ಸುಧಾ ಕೊಂಗರ’ ನಿರ್ದೇಶನದ ಸಿನಿಮಾ ಇನ್ನೂ ಸೆಟ್ಟೇರಲೇ ಇಲ್ಲ! ಸೂರ್ಯ ಹೇಳಿದ್ದೇನು?

Pralhad Joshi attack on Karnataka Congress Government for Nagarthapet assault case
ಬೆಂಗಳೂರು16 mins ago

Hanuman Chalisa: ನಗರ್ತಪೇಟೆ ಹಲ್ಲೆ ಕೇಸ್‌; ರಾಜ್ಯದಲ್ಲಿ ಹೆಚ್ಚಿದ ಹಿಂದೂ ವಿರೋಧಿ ನಡೆ: ಪ್ರಲ್ಹಾದ್‌ ಜೋಶಿ ಆಕ್ರೋಶ

CAA Supreme court
ದೇಶ16 mins ago

‌CAA: ಸಿಎಎಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಣೆ, ಸರ್ಕಾರಕ್ಕೆ ಸ್ಪಂದಿಸಲು 3 ವಾರ ಗಡುವು

uniliver
ವಾಣಿಜ್ಯ25 mins ago

Unilever Comapny: ಐಸ್‌ಕ್ರೀಮ್‌ ಉದ್ಯಮದಿಂದ ಹಿಂದೆ ಸರಿದ ಯೂನಿಲಿವರ್ ಕಂಪೆನಿ; 7,500 ಉದ್ಯೋಗ ಕಡಿತದ ಸೂಚನೆ

MP Tejaswi surya participate at Nagarthapet protest and KPCC Legal Cell complaint against him
ಬೆಂಗಳೂರು40 mins ago

Hanuman Chalisa: ನಗರ್ತಪೇಟೆ ಹಲ್ಲೆ ಕೇಸ್‌; ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್‌ ದೂರು!

IND vs PAK
ಕ್ರೀಡೆ43 mins ago

Champions Trophy: ಪಾಕಿಸ್ತಾನದಲ್ಲೇ ಚಾಂಪಿಯನ್ಸ್​ ಟ್ರೋಫಿ; ಪಿಸಿಬಿ ಅಧ್ಯಕ್ಷ ನಖ್ವಿ ವಿಶ್ವಾಸ

Hanuman Chalisa Warning
ಪ್ರಮುಖ ಸುದ್ದಿ46 mins ago

Hanuman Chalisa : ಇವತ್ತು ಜೈಲ್, ನಾಳೆ ಬೇಲ್, ಮತ್ತೆ ಅದೇ ಖೇಲ್‌; ನಗರ್ತ ಪೇಟೆ ಕಿರಾತಕರ ಸ್ಟೇಟಸ್‌

Hanuman Chalisa Prakash Raj reacted to the attack on a Hindu youth in Nagarthapet
ಬೆಂಗಳೂರು47 mins ago

Hanuman Chalisa: ನಗರ್ತಪೇಟೆಯಲ್ಲಿ ಹಿಂದೂ ಯುವಕನ ಮೇಲಿನ ಹಲ್ಲೆಗೆ ಪ್ರಕಾಶ್ ರೈ ಪ್ರತಿಕ್ರಿಯೆ ಹೀಗಿದೆ!

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Nagarthpet protest by BJP
ಬೆಂಗಳೂರು3 hours ago

Hanuman Chalisa: ನಗರ್ತಪೇಟೆ ಉದ್ವಿಗ್ನ; ಜೈಶ್ರೀರಾಮ್‌ ಕೂಗಿದ ಹಿಂದು ಕಾರ್ಯಕರ್ತರು, ಶೋಭಾ ಕರಂದ್ಲಾಜೆ ಪೊಲೀಸ್‌ ವಶಕ್ಕೆ

dina Bhavishya
ಭವಿಷ್ಯ11 hours ago

Dina Bhavishya : ಈ ರಾಶಿಯವರು ಎಚ್ಚರ ವಹಿಸಿ; ಅಮೂಲ್ಯವಾದ ವಸ್ತುವೊಂದು ಕೈ ತಪ್ಪಬಹುದು

Tejaswi Surya About Hanuman Chalisa Issue
ಬೆಂಗಳೂರು22 hours ago

ಹನುಮಾನ್‌ ಚಾಲೀಸಾ ಕೇಸ್‌; ಆರೋಪಿಗಳು ಅರೆಸ್ಟ್ ಆಗದಿದ್ದರೆ ಪ್ರತಿಭಟನೆ- ತೇಜಸ್ವಿ ಸೂರ್ಯ ಎಚ್ಚರಿಕೆ

read your daily horoscope predictions for march 18 2024
ಭವಿಷ್ಯ1 day ago

Dina Bhavishya : ಈ ದಿನ ನೀವೂ ಮೋಸ ಹೋಗುವುದು ಗ್ಯಾರಂಟಿ; ಬೆನ್ನ ಹಿಂದೆಯೇ ನಡೆಯುತ್ತೆ ಪಿತೂರಿ

Lok Sabha Election 2024 Congress finalises list of 13 seats
Lok Sabha Election 20242 days ago

Lok Sabha Election 2024: ಕಾಂಗ್ರೆಸ್‌ನಲ್ಲಿ 13 ಕ್ಷೇತ್ರಗಳ ಪಟ್ಟಿ ಫೈನಲ್!‌ ಸಂಭಾವ್ಯ ಅಭ್ಯರ್ಥಿಗಳ ಲಿಸ್ಟ್‌ ಇಲ್ಲಿದೆ

dina Bhvishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಅತ್ತೆ ಮನೆಯಿಂದ ಸಿಗಲಿದೆ ಭರಪೂರ ಉಡುಗೊರೆ

Dina Bhavishya
ಭವಿಷ್ಯ3 days ago

Dina Bhavishya : ಇವತ್ತು ಈ ರಾಶಿಯವರು ಮೌನದಿಂದ ಇರುವುದು ಒಳಿತು

Lok Sabha Election 2024 Is Operation JDS Worker Behind DK Brothers Breakfast Meeting
Lok Sabha Election 20244 days ago

Lok Sabha Election 2024: ಡಿಕೆ ಬ್ರದರ್ಸ್‌ ಬ್ರೇಕ್‌ಫಾಸ್ಟ್‌ ಮೀಟಿಂಗ್ ಹಿಂದೆ ‘ಆಪರೇಷನ್‌ ಜೆಡಿಎಸ್‌ ಕಾರ್ಯಕರ್ತ’?

read your daily horoscope predictions for march 15 2024
ಭವಿಷ್ಯ4 days ago

Dina Bhavishya : ಕೆಲವು ರಹಸ್ಯ ವಿಷಯಗಳು ಈ ರಾಶಿಯವರಿಗೆ ಅಚ್ಚರಿ ತರಲಿದೆ

Lok Sabha Election 2024 Yaduveer talks about entering politics and Yaduveer Krishnadatta Chamaraja Wadiyar meets BY Vijayendra
ಕರ್ನಾಟಕ5 days ago

‌Lok Sabha Election 2024: ಮೆಣಸಿನಕಾಯಿಯನ್ನು ಜೀರ್ಣಿಸಿಕೊಳ್ತೇನೆ; ನನ್ನ ಮೇಲೆ ರಾಜಸ್ಥಾನದ ಪ್ರಭಾವ ಇಲ್ಲ: ಯದುವೀರ್

ಟ್ರೆಂಡಿಂಗ್‌