Viral Video: ರಷ್ಯಾ ಯೂಟ್ಯೂಬರ್‌ಗೆ ದೆಹಲಿಯಲ್ಲಿ ಕಿರುಕುಳ; ಕ್ಷಮೆ ಯಾಚಿಸಿದ ನೆಟ್ಟಿಗರು Vistara News

ವೈರಲ್ ನ್ಯೂಸ್

Viral Video: ರಷ್ಯಾ ಯೂಟ್ಯೂಬರ್‌ಗೆ ದೆಹಲಿಯಲ್ಲಿ ಕಿರುಕುಳ; ಕ್ಷಮೆ ಯಾಚಿಸಿದ ನೆಟ್ಟಿಗರು

Viral Video: ರಷ್ಯಾ ಯೂಟ್ಯೂಬರ್‌ಗೆ ದೆಹಲಿಯ ಸರೋಜಿನಿ ನಗರ ಮಾರುಕಟ್ಟೆಯಲ್ಲಿ ವ್ಯಕ್ತಿಯೊಬ್ಬ ಕಿರುಕುಳ ನೀಡುತ್ತಿರುವ ವಿಡಿಯೊ ವೈರಲ್‌ ಆಗಿದೆ.

VISTARANEWS.COM


on

delhi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ʼಅತಿಥಿ ದೇವೋಭವʼ ಎಂದು ಪರಿಗಣಿಸುವ ಸಂಸ್ಕೃತಿ ನಮ್ಮದು. ಅಂದರೆ ಭಾರತೀಯರ ಪಾಲಿಗೆ ಅತಿಥಿಗಳು ದೇವರ ಸಮಾನ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಭಾರತಕ್ಕೆ ಆಮಿಸುವ ವಿದೇಶಿ ಪ್ರವಾಸಿಗರಿಗೆ ಕಿರುಕುಳ ನೀಡುವ ಘಟನೆ ಆಗಾಗ ವರದಿಯಾಗುತ್ತಲೇ ಇರುತ್ತವೆ. ಸದ್ಯ ಇಂತಹದ್ದೇ ಇನ್ನೊಂದು ಘಟನೆ ನವ ದೆಹಲಿಯಲ್ಲಿ ಇತ್ತೀಚೆಗೆ ಜರುಗಿದೆ. ಈ ಬಾರಿ ರಷ್ಯಾದ ಮಹಿಳಾ ಪ್ರವಾಸಿಗರೊಬ್ಬರು ವ್ಲಾಗ್‌ ಮಾಡುತ್ತಿದ್ದಾಗ ಸ್ಥಳೀಯ ವ್ಯಕ್ತಿಯೊಬ್ಬ ತೊಂದರೆ ನೀಡಿದ್ದಾನೆ. ಸದ್ಯ ಈ ದೃಶ್ಯ ಇದೀಗ ವೈರಲ್‌ (Viral Video) ಆಗಿದೆ ಮತ್ತು ಆ ವ್ಯಕ್ತಿಯ ವಿರುದ್ಧ ವ್ಯಾಪಕ ಆಕ್ರೋಶ ಕೇಳಿ ಬಂದಿದೆ.

ʼಕೊಕೊ ಇನ್‌ ಇಂಡಿಯಾʼ (Koko in India) ಹೆಸರಿನಿಂದ ಜನಪ್ರಿಯವಾಗಿರುವ ರಷ್ಯಾದ ಯೂಟ್ಯೂಬರ್‌ ದೆಹಲಿಯ ಪ್ರಸಿದ್ಧ ಸರೋಜಿನಿ ನಗರ ಮಾರುಕಟ್ಟೆಯಲ್ಲಿ ವಿಡಿಯೊ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಆಕೆ ವ್ಲಾಗ್‌ ಮಾಡುತ್ತಿದ್ದಾಗ ವ್ಯಕ್ತಿಯೊಬ್ಬ ಬಳಿಗೆ ಬರುತ್ತಾನೆ. ಬಳಿಕ ತನ್ನೊಂದಿಗೆ ಗೆಳೆತನ ಬೆಳೆಸುವಂತೆ ಕೇಳಿಕೊಳ್ಳುತ್ತಾನೆ. ಅದಕ್ಕೆ ಆಕೆ ನಿರಾಕರಿಸುತ್ತಾಳೆ. ಆದರೂ ಆಕೆಯನ್ನು ಆತ ಹಿಂಬಾಲಿಸುತ್ತಾನೆ. ಇದು ಆಕೆಗೆ ತೀವ್ರ ಮುಜುಗರ ತರಿಸುತ್ತದೆ. ಇದು ವಿಡಿಯೊದಲ್ಲಿ ದಾಖಲಾಗಿದೆ.

ಗೆಳೆತನ ಬೆಳೆಸಲು ಪಟ್ಟು ಹಿಡಿದ ವ್ಯಕ್ತಿ

ಮಾರುಕಟ್ಟೆಗೆ ಆಗಮಿಸಿದ ಕೊಕೊ ಅಲ್ಲಿಂದ ಲೈವ್‌ ವಿಡಿಯೊ ಆರಂಭಿಸುತ್ತಾಳೆ. ಆಗ ಆ ಯುವಕ “ನೀವು ನನ್ನ ಸ್ನೇಹಿತನಾಗಬಹುದೇ?” ಎಂದು ಕೇಳುತ್ತಾನೆ. ಜತೆಗೆ ರಷ್ಯಾದ ಹುಡುಗಿಯೊಂದಿಗೆ ಸ್ನೇಹ ಬೆಳೆಸುವುದು ತನ್ನ ಬಹು ದಿನಗಳ ಕನಸು ಎಂದು ಹೇಳುತ್ತಾನೆ. ಬಳಿಕ ಆಕೆಗೆ ಮುಜುಗರವಾಗುವಂತೆ ʼʼನೀವು ತುಂಬಾ ಸೆಕ್ಸಿ. ನನ್ನ ಸ್ನೇಹಿತೆಯಾಗುತ್ತೀರಾ?ʼʼ ಎನ್ನುತ್ತಾನೆ. ಕೊಕೊ ಇದಕ್ಕೆ ʼʼಆದರೆ ನೀನು ನನಗೆ ಅಪರಿಚಿತʼʼ ಎಂದು ನಿರ್ಲಕ್ಷಿಸಲು ಮುಂದಾಗುತ್ತಾಳೆ. ಪಟ್ಟು ಬಿಡದ ಆತ ʼʼನಾವು ಸ್ನೇಹಿತರಾದ ಬಳಿಕ ಒಬ್ಬರನ್ನೊಬ್ಬರು ತಿಳಿದುಕೊಳ್ಳಬಹುದುʼʼ ಎನ್ನುತ್ತಾನೆ. ಇದೆಲ್ಲ ಕೊಕೊ ಮಾಡುತ್ತಿದ್ದ ವಿಡಿಯೊದಲ್ಲಿ ಸೆರೆಯಾಗಿದ್ದು, ಆಕೆಯ ಯೂಟ್ಯೂಬ್‌ ಚಾನಲ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದೆ.

ಇದನ್ನೂ ಓದಿ: Viral Video: ದುಡ್ಡಿನ ಗಿಡ ನೆಟ್ಟಿದಿಯಾ ಎಂದವರಿಗೆ ಹೂಂ ಎಂದುಬಿಡಿ; ಯಾವುದಕ್ಕೂ ಈ ವಿಡಿಯೊ ನೋಡಿ

ನೆಟ್ಟಿಗರ ಆಕ್ರೋಶ

ರಷ್ಯಾ ಮಹಿಳೆಗೆ ಕಿರಿಕಿರಿ ಉಂಟುಮಾಡಿದ ಆ ವ್ಯಕ್ತಿಯ ವಿರುದ್ಧ ನೆಟ್ಟಿಗರು ಕೆಂಡ ಕಾರಿದ್ದಾರೆ. ʼʼಓರ್ವ ಭಾರತೀಯನಾಗಿ ನಾನು ಆ ವ್ಯಕ್ತಿಯ ವರ್ತನೆಗೆ ಕ್ಷಮೆ ಯಾಚಿಸುತ್ತೇನೆʼʼ ಎಂದು ಒಬ್ಬರು ಹೇಳಿದ್ದಾರೆ. ʼʼಭಾರತೀಯನಾಗಿ, ನಾಚಿಕೆ ಇಲ್ಲದ ಆ ಹತಾಶ ವ್ಯಕ್ತಿಗಾಗಿ ನಾನು ವಿಷಾದಿಸುತ್ತೇನೆ. ನಮ್ಮ ಸಮಾಜದಲ್ಲಿ ಇಂತಹ ವ್ಯಕ್ತಿಗಳಿದ್ದಾರೆ ಎನ್ನುವುದು ಅವಮಾನದ ಸಂಗತಿ. ನಿಮ್ಮ ಧೈರ್ಯಕ್ಕೆ ಮತ್ತು ನೀವು ಆ ವ್ಯಕ್ತಿಯನ್ನು ನಿರ್ಲಕ್ಷಿಸಿದ ರೀತಿಗೆ ನಾನು ನಮಸ್ಕರಿಸುತ್ತೇನೆʼʼ ಎಂದು ಮತ್ತೊಬ್ಬರು ಕೊಕೊ ಅವರಿಗೆ ಬೆಂಬಲ ಸೂಚಿಸಿದ್ದಾರೆ. ʼʼಅತಿಥಿಗಳನ್ನು ಗೌರವಿಸುವ ಸಂಸ್ಕೃತಿ ನಮ್ಮದು. ಅದಕ್ಕೆ ವಿರುದ್ಧವಾಗಿ ಈ ವ್ಯಕ್ತಿ ನಡೆದುಕೊಂಡಿದ್ದು, ಆತನಿಗೆ ಧಿಕ್ಕಾರʼʼ ಎಂದು ಮಗದೊಬ್ಬರು ಆಕ್ರೋಶಭರಿತವಾಗಿ ಕಮೆಂಟ್‌ ಮಾಡಿದ್ದಾರೆ. ಮಾತ್ರವಲ್ಲ ಇನ್ನೂ ಅನೇಕರು ಆ ವ್ಯಕ್ತಿಯ ವಿರುದ್ಧ ಹಾರಿ ಹಾಯ್ದಿದ್ದಾರೆ. ಸುಮಾರು 68,000ಕ್ಕೂ ಅಧಿಕ ಮಂದಿ ಈ ವಿಡಿಯೊವನ್ನು ವೀಕ್ಷಿಸಿದ್ದಾರೆ.

ಇನ್ನಷ್ಟು ವೈರಲ್‌ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Video Viral : ಬಸ್‌ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಕಾರು, ಪ್ರಾಣ ಉಳಿಸಿದ ಡ್ರೈವರ್‌; ವಿಡಿಯೊ ಇದೆ!

Video viral : ಬಸ್ಸಿಗೆ ಡಿಕ್ಕಿ ಹೊಡೆದ ಕಾರು ಹೊತ್ತಿ ಉರಿದಿದೆ. ಬಸ್‌ ಚಾಲಕ ಪ್ರಯಾಣಿಕರನ್ನು ರಕ್ಷಿಸಿದ್ದು ಮಾತ್ರವಲ್ಲ ಕಾರಿಗೆ ಅಂಟಿಕೊಂಡ ಬಸ್ಸನ್ನು ಬೇರ್ಪಡಿಸಲು ಮಾಡಿದ ಪ್ರಯತ್ನ ಮತ್ತು ಅದರಲ್ಲಿ ಯಶಸ್ವಿಯಾದ ಕಥೆ ಇಲ್ಲಿದೆ.

VISTARANEWS.COM


on

Car catches fire after hitting bus
Koo

ಬೆಂಗಳೂರು: ಕಾರೊಂದು ಬಿಎಂಟಿಸಿ ಬಸ್‌ಗೆ ಡಿಕ್ಕಿ ಹೊಡೆದು ಸುಟ್ಟು ಕರಕಲಾದ ಘಟನೆ (Car Hits bus and catches fire in Bangalore) ಬೆಂಗಳೂರಿನ ಚಂದ್ರಾ ಲೇಔಟ್‌ ಸಮೀಪದ ನಾಗರಬಾವಿ ರಿಂಗ್‌ ರಸ್ತೆಯಲ್ಲಿ (Nagarabavi Ring Road) ಸೋಮವಾರ ಬೆಳಗ್ಗೆ ನಡೆದಿದೆ. ಘಟನೆಯಲ್ಲಿ ಕಾರು ಬಸ್ಸಿಗೆ ಅಂಟಿಕೊಂಡು ಬಸ್‌ಗೂ ಬೆಂಕಿ ಹತ್ತಿಕೊಂಡಿತ್ತು (video Viral). ಆದರೆ, ಬಸ್‌ನ ಚಾಲಕ ಪ್ರಯಾಣಿಕರನ್ನು ಇಳಿಸಿ ರಕ್ಷಿಸಿದ್ದಲ್ಲದೆ, ಅತ್ಯಂತ ಚಾಲಾಕಿತನ ಮತ್ತು ಸಮಯಪ್ರಜ್ಞೆ ಮೆರೆದು (Time sense of driver) ಬಸ್‌ ನಿಂದ ಕಾರನ್ನು ಬೇರ್ಪಡಿಸಿದ್ದಾರೆ. ಬಸ್‌ ಕೂಡಾ ಸಂಪೂರ್ಣ ಸುಟ್ಟು ಹೋಗುವುದನ್ನು (Fire Accident) ತಪ್ಪಿಸಿದ್ದಾರೆ.

ಸೋಮವಾರ ಬೆಳಗ್ಗೆ 9 ಗಂಟೆಗೆ ಹೊತ್ತಿಗೆ ನಗರದ ಚಂದ್ರಾ ಲೇಔಟ್ ನಿಲ್ದಾಣದ ಬಳಿ ಘಟನೆ ನಡೆದಿದೆ. ಯಶವಂತಪುರದಿಂದ ನಾಯಂಡಹಳ್ಳಿ ಕಡೆ ತೆರಳುತ್ತಿದ್ದ ಬಸ್‌ ಚಂದ್ರಾ ಲೇಔಟ್ ಬಳಿ ನಿಂತಿತ್ತು. ಆಗ ಹಿಂಬದಿಯಿಂದ ವೇಗವಾಗಿ ಬಂದ ಕಾರೊಂದು ಬಸ್‌ಗೆ ಡಿಕ್ಕಿ ಹೊಡೆಯಿತು. ಅತ್ಯಂತ ರಭಸದಿಂದ ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಕ್ಷಣಾರ್ಧದಲ್ಲಿಯೇ ಬೆಂಕಿ ಹತ್ತಿಕೊಂಡಿದೆ. ಆಗ ಕಾರಿನ ಪ್ರಯಾಣಿಕರು ಕೂಡಲೇ ಇಳಿದು ಜೀವ ರಕ್ಷಿಸಿಕೊಂಡರು. (video Viral)

ಅದರ ಜತೆಗೆ ಬಸ್‌ ಚಾಲಕ ಕೂಡಾ ಎಲ್ಲ ಪ್ರಯಾಣಿಕರನ್ನು ಇಳಿಸಿದರು. ಇಷ್ಟರ ನಡುವೆ ಕಾರು ಬಸ್ಸಿಗೆ ಅಂಟಿಕೊಂಡು ಹೊತ್ತಿ ಉರಿಯತೊಡಗಿತ್ತು. ಬಸ್ಸನ್ನು ಸ್ವಲ್ಪ ಮಂದೆ ಕೊಂಡು ಹೋಗಲು ಪ್ರಯತ್ನಿಸಿದಾಗ ಅದು ಅಂಟಿಕೊಂಡಿದ್ದು ಗೊತ್ತಾಯಿತು. ಅದನ್ನು ಹೇಗಾದರೂ ಬೇರ್ಪಡಿಸಬೇಕು ಎಂದು ಯೋಚಿಸಿದ ಬಿಎಂಟಿಸಿ ಚಾಲಕ ಭಾರಿ ಡೇಂಜರಸ್‌ ಪ್ರಯೋಗಕ್ಕೆ ಮುಂದಾದರು.

ಕಾರು ಹೊತ್ತಿ ಉರಿಯುತ್ತಿದ್ದಂತೆಯೇ ಬಸ್ಸನ್ನು ಮುಂದಕ್ಕೆ ಚಲಾಯಿಸಿದರು ಚಾಲಕ. ಬಸ್ಸು ಮುಂದಕ್ಕೆ ಚಲಿಸಿದಾಗ ಕಾರು ಕಳಚಿಕೊಳ್ಳಬಹುದು ಎನ್ನುವುದು ಅವರ ಯೋಚನೆಯಾಗಿತ್ತು. ಆದರೆ, ಅದು ಕಳಚಿಕೊಳ್ಳಲಿಲ್ಲ. ಬದಲಾಗಿ ಗಾಳಿಯ ವೇಗಕ್ಕೆ ಬೆಂಕಿ ಇನ್ನಷ್ಟು ಧಗಧಗಿಸಿತು.

Car catches fire after hitting bus
ತಡೆಗೋಎಗೆ ಡಿಕ್ಕಿ ಹೊಡೆದು ಬಸ್ಸಿನಿಂದ ಕಾರನ್ನು ಬೇರ್ಪಡಿಸಲು ಪ್ರಯತ್ನ

ಈ ವೇಳೆ ಚಾಲಕ ಬಸ್ಸನ್ನು ಸ್ವಲ್ಪ ದೂರ ಹೋಗಿ ನಿಲ್ಲಿಸಿ ಇನ್ನೊಂದು ಪ್ಲ್ಯಾನ್‌ ಮಾಡಿದರು. ಇದೊಂದು ಡಬಲ್‌ ರೋಡ್‌ ಆಗಿದ್ದು, ಒಂದು ಭಾಗದಲ್ಲಿ ತಡೆಗೋಡೆ ಇದೆ. ಚಾಲಕ ಬಸ್ಸನ್ನು ಆ ತಡೆಗೋಡೆಗೆ ಡಿಕ್ಕಿ ಹೊಡೆಸಿ ಕಾರನ್ನು ಕದಲಿಸುವ ಪ್ರಯತ್ನವನ್ನು ಮಾಡಿದರು. ಆದರೆ, ಕಾರು ಬಿಡಿಸಿಕೊಳ್ಳಲೇ ಇಲ್ಲ.

ಇದನ್ನೂ ಓದಿ: ಮೈಚಾಂಗ್‌ ಚಂಡಮಾರುತ; ಭಾರಿ ಮಳೆಗೆ ತಮಿಳುನಾಡಿನಲ್ಲಿ ಇಬ್ಬರ ಸಾವು, ಬೆಂಗಳೂರಿಗೂ ಎಫೆಕ್ಟ್?

ಈ ನಡುವೆ, ಕಾರು ಸುಟ್ಟು ಹೋಗುವ ವೇಗ ಜಾಸ್ತಿಯಾಯಿತು. ಪೆಟ್ರೋಲ್‌ ಟ್ಯಾಂಕ್‌ ಕೂಡಾ ಸಿಡಿಯಿತು. ಬಸ್ಸಿಗೂ ಬೆಂಕಿ ಹತ್ತಿಕೊಳ್ಳುವ ವೇಗ ಜಾಸ್ತಿಯಾಯಿತು. ಇಷ್ಟಾದರೂ ಚಾಲಕ ತನ್ನ ಪ್ರಯತ್ನವನ್ನು ಬಿಡಲಿಲ್ಲ, ವ್ಯವಧಾನವನ್ನು ಕಳೆದುಕೊಳ್ಳಲಿಲ್ಲ.

ಇದು ಡಬಲ್‌ ರೋಡ್‌ ಆಗಿದ್ದರಿಂದ ನಡುವೆ ಸಣ್ಣ ರಸ್ತೆ ವಿಭಾಜಕ ಇತ್ತು. ಇತ್ತು. ಚಾಲಕ ಬಸ್ಸನ್ನು ತಿರುಗಿಸಿ ಆ ತಡೆಗೋಡೆಯ ಮೇಲೆ ಕಾರನ್ನು ಹಾರಿಸಿದ. ಆಗ ಅಂಟಿಕೊಂಡಿದ್ದ ಕಾರು ಕಳಚಿಕೊಂಡಿತು. ಈ ನಡುವೆ, ಕಾರು ಸಂಪೂರ್ಣ ಸುಟ್ಟು ಹೋದರೆ, ಬಸ್‌ ಗೆ ಅಲ್ಲಿದ್ದವರೆಲ್ಲ ಸ್ವಲ್ಪ ಸ್ವಲ್ಪ ನೀರು ತಂದೇ ಸಿಂಪಡಿಸಿ ಬೆಂಕಿ ಆರಿಸಿದರು.

Car catches fire after hitting bus
ರಸ್ತೆ ವಿಭಜಕವನ್ನು ಹಾಯಿಸಿ ಕಾರು ಬೇರ್ಪಡಿಸಿದ ಬಗೆ

ಬಸ್ಸಿನ ಹಿಂದಿನ ಎರಡು ಸೀಟುಗಳಿಗೆ ಸೀಮಿತವಾಗಿ ಬೆಂಕಿ ಹತ್ತಿಕೊಂಡಿದೆ. ಚಾಲಕನ ಸಮಯ ಪ್ರಜ್ಞೆಯಿಂದಾಗಿ ಇದು ಸಾಧ್ಯವಾಗಿದೆ. ಅಲ್ಲಿ ಸೇರಿದವರೆಲ್ಲ ಬೆಂಕಿ ಆರಿಸುವಲ್ಲಿ ಚಾಲಕನಿಗೆ ನೆರವಾಗಿದ್ದಲ್ಲದೆ, ಅವರನ್ನು ಹಾಡಿ ಹೊಗಳಿ ಬೆನ್ನು ತಟ್ಟಿದರು.

ಒಟ್ಟಾರೆ ಘಟನೆಯ ಫುಲ್‌ ವಿಡಿಯೊ ಇಲ್ಲಿದೆ.

Continue Reading

ಕರ್ನಾಟಕ

Viral News : ಚಾಲಕರ ನಡುವೆ ಕಿರಿಕ್‌;‌ ಇನೋವಾ ಕಾರನ್ನೇ ಇನ್ನೊಬ್ಬನ ಮೇಲೆ ಹರಿಸಲು ಯತ್ನಿಸಿದ ಡ್ರೈವರ್‌

Viral News : ಬೆಂಗಳೂರಿನ ಹೆಬ್ಬಾಳ ಫ್ಲೈ ಓವರ್‌ನಲ್ಲಿ ಕಾರು ಚಾಲಕನೊಬ್ಬ ಇನ್ನೊಬ್ಬ ಚಾಲಕನ ಮೇಲೆಯೇ ಕಾರು ಹಾಯಿಸಲು ಯತ್ನಿಸಿದ ಘಟನೆ ನಡೆದಿದೆ.

VISTARANEWS.COM


on

Drivers fight in Bangalore
Koo

ಬೆಂಗಳೂರು: ಈಗ ಸಣ್ಣ ಪುಟ್ಟ ಕಾರಣಕ್ಕಾಗಿ ಜಗಳಕ್ಕೆ ಇಳಿಯುವುದು, ಒಮ್ಮಿಂದೊಮ್ಮೆಗೇ ಮೈಮೇಲೆ ಬೀಳುವುದು, ದಾಳಿ ಮಾಡುವ ಘಟನೆಗಳು ಹೆಚ್ಚುತ್ತಿವೆ. ಅದರಲ್ಲೂ ಬೆಂಗಳೂರಿನ ಟ್ರಾಫಿಕ್‌ನಲ್ಲಿ (Bangalore Traffic) ಮನುಷ್ಯ ಕೆಲವೊಮ್ಮೆ ಪ್ರಾಣಿಗಳಿಗಿಂತಲೂ ಕಡೆಯಾಗಿ ವರ್ತಿಸುವುದು ಕಾಣುತ್ತಿದೆ. ಇಲ್ಲಿ ಚಾಲಕರಿಬ್ಬರು ಯಾವುದೋ ಕಾರಣಕ್ಕೆ ಜಗಳವಾಡಿಕೊಂಡಿದ್ದಾರೆ (Fight between drivers). ಆಗ ಸಿಟ್ಟಿಗೆದ್ದ ಒಬ್ಬ ಇನ್ನೊಬ್ಬನ ಮೇಲೆ ಕಾರನ್ನು ಹರಿಸುವ ರೀತಿಯಲ್ಲಿ ತಳ್ಳಿಕೊಂಡು ಹೋಗಿದ್ದಾನೆ. ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರೂ ಪ್ರಾಣವೇ ಹೋಗಬಹುದಾದ ರೀತಿಯಲ್ಲಿ ಕ್ರೌರ್ಯವನ್ನು ಮೆರೆದ ಚಾಲಕನನ್ನು ಪೊಲೀಸರು ಹುಡುಕುತ್ತಿದ್ದಾರೆ (viral News).

ಈ ಘಟನೆ ನಡೆದಿರುವುದು ಬೆಂಗಳೂರಿನ ಹೆಬ್ಬಾಳ ಫ್ಲೈ ಓವರ್ (Hebbala Fly over) ಮೇಲೆ. ಕಳೆದ ನವೆಂಬರ್‌ 29ರಂದು ಬೆಳಗ್ಗೆ 8.30ರಿಂದ 9 ಗಂಟೆಯ ನಡುವೆ ಘಟನೆ ನಡೆದಿದೆ. ಇಬ್ಬರು ಚಾಲಕರ ನಡುವೆ ಯಾವುದೇ ಕಾರಣಕ್ಕೆ ಕಿರಿಕ್ ಉಂಟಾಗಿದೆ. ಆಗ ಒಬ್ಬ ಚಾಲಕನನ್ನು ಇನ್ನೊಬ್ಬ ಚಾಲಕ ಬಾನೆಟ್ ಮೂಲಕ ತಳ್ಳಿಕೊಂಡೇ ಹೋಗಿದ್ದಾನೆ.

Drivers fight in Bangalore

ಇನೋವಾ ಚಾಲಕ ಹಾಗೂ ಇಟಿಯಾಸ್ ಚಾಲಕನ ನಡುವೆ ಫ್ಲೈ ಓವರ್ ಮೇಲೆ ಕಿರಿಕ್ ಉಂಟಾಗಿದೆ. ಆಗ ಇಟಿಯಾಸ್‌ ಚಾಲಕ ತನ್ನ ಕಾರಿನಿಂದ ಇಳಿದು ಇನೋವಾ ಡ್ರೈವರ್‌ ನನ್ನು ಪ್ರಶ್ನೆ ಮಾಡಿದ್ದಾನೆ. ಆಗ ಇನ್ನೊವಾ ಚಾಲಕ ಇದನ್ನು ಕೇರ್‌ ಮಾಡದೆ ಮುಂದೆ ಹೋಗಲು ನೋಡಿದ್ದಾನೆ. ಆತ ಇಟಿಯಾಸ್‌ ಚಾಲಕ ಕಾರಿಗೆ ಅಡ್ಡವಾಗಿ ನಿಂತಿದ್ದಾನೆ.

ಇದನ್ನು ಗಮನಿಸಿದ ಇನೊವಾ ಚಾಲಕ ಆತ ಎದುರು ನಿಂತಿದ್ದನ್ನು ಗಮನಿಸಿಯೂ ಕಾರನ್ನು ಮೂವ್‌ ಮಾಡಿದ್ದಾನೆ. ಎದುರು ಅಡ್ಡಲಾಗಿ ನಿಂತವನನ್ನು ತಳ್ಳಿಕೊಂಡೇ ಕಾರು ಮುಂದಕ್ಕೆ ಹೋಗಿದೆ. ತುಂಬ ದೂರದವರೆಗೆ ಈ ಜಗಳ ಮುಂದುವರಿದಿದೆ. ಕೆಎ 05 ಎಎಲ್ 7999 ಇನೊವಾ ಕಾರಿನ ಚಾಲಕನೇ ಈ ರೀತಿಯಾಗಿ ಅತಿರೇಕದ ವರ್ತನೆ ಮೆರೆದಿರುವುದು.

ಇದನ್ನೂ ಓದಿ: Murder Case : ಸರಿಯಾಗಿ ನೋಡಿಕೊಳ್ತಿಲ್ಲ ಎಂದು ಪತ್ನಿಯನ್ನೇ ಕೊಂದ ಮಧುಮೇಹ ರೋಗಿ!

ಈ ಎಲ್ಲ ಘಟನೆಗಳು ಮತ್ತೊಂದು ಕಾರಿನ ಡ್ಯಾಷ್‌ ಬೋರ್ಡ್‌ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಇವುಗಳನ್ನು ವ್ಯಕ್ತಿಯೊಬ್ಬರು ಎಕ್ಸ್‌ ನಲ್ಲಿ ಶೇರ್‌ ಮಾಡಿದ್ದಾರೆ. ಗಲಾಟೆಯಲ್ಲಿ ಪಾಲ್ಗೊಂಡ ಎರಡೂ ಕಾರುಗಳು ಹಳದಿ ಬೋರ್ಡ್‌ನ ಕಾರುಗಳಾಗಿದ್ದು, ವಾಹನದಲ್ಲಿ ಪ್ರಯಾಣಿಕರು ಕೂಡಾ ಇದ್ದರು. ಆದರೆ, ಇಬ್ಬರೂ ಚಾಲಕರು ಜಗಳಕ್ಕೆ ಇಳಿದು ಹಠ ಸಾಧಿಸಲು ಮುಂದಾಗಿದ್ದಾರೆ.

ಇದೀಗ ಪೊಲೀಸರು ಇಬ್ಬರೂ ಚಾಲಕರನ್ನು ಪತ್ತೆ ಹಚ್ಚಲು ಯತ್ನಿಸುತ್ತಿದ್ದಾರೆ. ವಾಹನದ ನಂಬರ್‌ ಸಿಕ್ಕಿರುವುದರಿಂದ ಮಾಲಕನನ್ನು ಪತ್ತೆ ಹಚ್ಚುವುದು ಕಷ್ಟದ ಕೆಲಸವೇನಲ್ಲ.

ಬೆಂಗಳೂರಿನಲ್ಲಿ ಸಣ್ಣ ಪುಟ್ಟ ಕಾರಣಗಳಿಗಾಗಿ ಈ ರೀತಿ ಅತಿರೇಕದಿಂದ ವರ್ತಿಸುವ ಘಟನೆಗಳು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿವೆ. ಇತ್ತೀಚೆಗೆ ಸಣ್ಣ ಜಗಳವೊಂದರ ಕಾರಣಕ್ಕೆ ವ್ಯಕ್ತಿಯೊಬ್ಬರನ್ನು ಸುಮಾರು ಒಂದು ಕಿ.ಮೀ. ದೂರದವರೆಗೆ ಕಾರಿನ ಬಾನೆಟ್‌ ಮೇಲೆ ಕುಳಿತಿದ್ದಾಗಲೇ ವಾಹನ ಚಲಾಯಿಸಿದ ಘಟನೆ ನಡೆದಿತ್ತು.

ಅದಕ್ಕಿಂತ ಮೊದಲು ಯಾವುದೋ ಕಾರಣಕ್ಕೆ ಸಂಶಯ ಬಂದು ಬೈಕನ್ನು ತಡೆದು ನಿಲ್ಲಿಸಲು ಯತ್ನಿಸಿ, ಎಳೆದು ನಿಲ್ಲಿಸಿದ ವ್ಯಕ್ತಿಯೊಬ್ಬರನ್ನು ಆ ಕಳ್ಳ ಸುಮಾರು ಒಂದು ಕಿಲೋಮೀಟರ್‌ ದೂರಕ್ಕೆ ರಸ್ತೆಯಲ್ಲಿ ದರದರನೆ ಎಳೆದುಕೊಂಡ ಹೋದ ಘಟನೆಯೂ ನಡೆದಿತು.

Continue Reading

ಕರ್ನಾಟಕ

Bhavani Revanna : ಸಾಯೋಕೆ ನನ್ನ 1.5 ಕೋಟಿ ಕಾರೇ ಬೇಕಾ?; ಭವಾನಿ ರೇವಣ್ಣ ದರ್ಪಕ್ಕೆ ಎಲ್ಲೆಡೆ ಆಕ್ರೋಶ

Bhavani Revanna : ಭವಾನಿ ರೇವಣ್ಣ ಅವರ ರೌದ್ರಾವತಾರಕ್ಕೆ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೈಕ್‌ ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದಾಗ ಸಂಯಮ ಕಳೆದುಕೊಂಡ ಅವರ ನಡೆ ಚರ್ಚೆಗೆ ಕಾರಣವಾಗಿದೆ.

VISTARANEWS.COM


on

Bhavani Revanna car
Koo

ಮೈಸೂರು: ಸಾಯಂಗಿದ್ರೆ ಬಸ್ಸಿಗೆ ಸಿಕ್ಕಿ ಸಾಯಬೇಕಿತ್ತು. ಸಾಯೋಕೆ ನನ್ ಕಾರೇ ಬೇಕಿತ್ತಾ? ಅವನು ಸತ್ತೋಗ್ತಾನೆ ಅಂತ ಅವನ ಬಗ್ಗೆ ಯಾಕೆ ಯೋಚನೆ ಮಾಡ್ತೀಯಾ? ಒಂದೂವರೆ ಕೋಟಿ ರೂಪಾಯಿ ಕಾರು ಬಗ್ಗೆ ಯೋಚನೆ ಮಾಡು: ಬೈಕೊಂದು ತಮ್ಮ ಕಾರಿಗೆ ಡಿಕ್ಕಿ ಹೊಡೆದ (Bike hits Car) ಸಂದರ್ಭದಲ್ಲಿ ಹಿರಿಯ ಜೆಡಿಎಸ್‌ ನಾಯಕಿ ಭವಾನಿ ರೇವಣ್ಣ (Bhavani Revanna) ಅವರು ಆಡಿದ ಮಾತುಗಳಿವು. ದೇವೇಗೌಡರ ಮನೆ ಸೊಸೆಯಾಗಿ (Daughter in law of HD Devegowda), ಸದಾ ಜನರೇ ನನ್ನ ದೇವರು ಎನ್ನುವ ಎಚ್‌.ಡಿ ರೇವಣ್ಣ (HD Revanna) ಅವರ ಪತ್ನಿಯಾಗಿ ಜನರ ಬಗ್ಗೆ ಕರುಣೆ ಹೊಂದಿರಬೇಕಾದ ಹೆಣ್ಮಗಳು ನಡು ರಸ್ತೆಯಲ್ಲಿ ಈ ರೀತಿ ದರ್ಪದ ಮಾತು ಆಡಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಜತೆಗೆ ಆಕ್ರೋಶವೂ ವ್ಯಕ್ತವಾಗಿದೆ.

ಈ ಘಟನೆ ನಡೆದಿರುವುದು ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮದ ಹೊರವಲಯದಲ್ಲಿ. ಹಾಸನ – ಕೆ.ಆರ್.ನಗರ ರಸ್ತೆಯಲ್ಲಿ ಬರುತ್ತಿದ್ದಾಗ ಭವಾನಿ ರೇವಣ್ಣ ಕಾರಿಗೆ ಬೈಕ್‌ ಸವಾರರೊಬ್ಬರು ಡಿಕ್ಕಿ ಹೊಡೆದಿದ್ದಾರೆ. ಇಬ್ಬರು ಸವಾರರಿದ್ದ ಬೈಕ್‌ ತಪ್ಪಾಗಿ ರಾಂಗ್‌ ಸೈಡಿನಲ್ಲಿ ಬಂದು ಕಾರಿಗೆ ಡಿಕ್ಕಿ ಹೊಡೆದಿದೆ. ಕಾರಿನ ಬಲಭಾಗಕ್ಕೆ ಸಣ್ಣ ಡೆಂಟ್‌ ಆಗಿದೆ. ಇದನ್ನು ಗಮನಿಸಿದ ಭವಾನಿ ರೇವಣ್ಣ ಅವರು ರೌದ್ರಾವತಾರ ತಾಳಿದ್ದಾರೆ. ಅಪಘಾತ ಸಣ್ಣ ಮಟ್ಟಕ್ಕೆ ಆಗಿ ಮುಗಿಯಿತಲ್ಲ ಎಂದು ಸಮಾಧಾನಪಟ್ಟುಕೊಳ್ಳದೆ ಬೈಕ್‌ ಸವಾರನನ್ನು ಸಂತೈಸುವುದು ಬಿಟ್ಟು ಹಿಗ್ಗಾಮುಗ್ಗಾ ಬೈದಿದ್ದಾರೆ. ಬೈಕ್‌ ಸುಟ್ಟು ಹಾಕಿ, ಅವನನ್ನು ಅರೆಸ್ಟ್‌ ಮಾಡಿ ಎಂದೆಲ್ಲ ಬೊಬ್ಬಿರಿದ ದೃಶ್ಯಗಳು ವೈರಲ್‌ ಆಗಿವೆ.

ಈ ನಡುವೆ ಯಾರೋ ಅಕ್ಕಾ ಕಾರು ಸೈಡಿಗೆ ಹಾಕಿ ಅಂದಿದ್ದಕ್ಕೆ ಸಿಟ್ಟಿಗೆದ್ದ ಭವಾನಿ ರೇವಣ್ಣ, ನನ್ನ ಕಾರಿಗೆ ಡ್ಯಾಮೇಜ್‌ ಆಗಿದೆ. ರಿಪೇರಿ ಮಾಡಿಸೋಕೆ 50 ಲಕ್ಷ ರೂ. ಹಣ ಬೇಕು. ಯಾರಾದರೂ ನ್ಯಾಯ ಮಾತನಾಡುವವರು ಐವತ್ತು ಲಕ್ಷ ಹಣ ಕೊಟ್ಟು ಮಾತನಾಡಿ. ಒಂದೂವರೆ ಕೋಟಿ ರೂಪಾಯಿ ಗಾಡಿ ಇದು ಎಂದು ದರ್ಪ ತೋರಿದ್ದಾರೆ.

ಸಾಲಿಗ್ರಾಮ ಠಾಣೆಯ ಇನ್ಸ್‌ಪೆಕ್ಟರ್‌ನ ಕರೀರಿ, ತಗೊಂಡು ಹೋಗಿ ಇವನನ್ನು ಒಳಗೆ ಹಾಕಲಿ, ಸಾಯಂಗಿದ್ರೆ ಬಸ್ಸಿಗೆ ಸಿಕ್ಕಿ ಸಾಯಬೇಕಿತ್ತು. ಸಾಯೋಕೆ ನನ್ ಕಾರೇ ಬೇಕಿತ್ತಾ? ಅವನು ಸತ್ತೋಗ್ತಾನೆ ಅಂತ ಅವನ ಬಗ್ಗೆ ಯಾಕೆ ಯೋಚನೆ ಮಾಡ್ತೀಯಾ? ಒಂದೂವರೆ ಕೋಟಿ ರೂಪಾಯಿ ಕಾರು ಬಗ್ಗೆ ಯೋಚನೆ ಮಾಡು ಎಂದಿರುವ ಭವಾನಿ ರೇವಣ್ಣ, ಬೈಕ್ ಸವಾರನ‌ನ್ನು ನಿಲ್ಲಿಸಿ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.

ಇದನ್ನೂ ಓದಿ | ಚಿಕ್ಕಮಗಳೂರು ಪೊಲೀಸ್-ವಕೀಲರ ಸಂಘರ್ಷ; ಪ್ರಕರಣದ ತನಿಖೆ ಸಿಐಡಿ ಹೆಗಲಿಗೆ

ಅಪಘಾತದಲ್ಲಿ ಗಾಯಗೊಂಡವನನ್ನು ಸಂತೈಸುವುದು ಬಿಟ್ಟು ಹಿಗ್ಗಾಮುಗ್ಗಾ ಬೈಯುವ ಮೂಲಕ ಭವಾನಿ ರೇವಣ್ಣ ಮಾನವೀಯತೆ ಮರೆತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಕಾರಿಗೆ ನಂಬರ್‌ ಪ್ಲೇಟೇ ಇಲ್ವಾ?

ಈ ನಡುವೆ ಭವಾನಿ ರೇವಣ್ಣ ಅವರ ಕಾರಿಗೆ ನಂಬರ್‌ ಪ್ಲೇಟೇ ಇರಲಿಲ್ಲ ಎಂದು ಹೇಳಲಾಗುತ್ತಿದೆ. ಚಿತ್ರದಲ್ಲಿ ಮತ್ತು ವಿಡಿಯೊದಲ್ಲಿ ಕಂಡುಬರುವ ದೃಶ್ಯಗಳಲ್ಲಿ ಕಾರಿನ ನಂಬರ್‌ ಪ್ಲೇಟ್‌ ತಾತ್ಕಾಲಿಕ ನಂಬರ್‌ ನಂತೆ ಕಾಣಿಸುತ್ತಿದೆ. ಮೊದಲು ಸರಿಯಾಗಿ ನಂಬರ್‌ ಪ್ಲೇಟ್‌ ಹಾಕಿ ಎಂದೂ ನೆಟ್ಟಿಗರು ಹೇಳಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

ತಮ್ಮ ಕಾರಿಗೆ ಡಿಕ್ಕಿ ಹೊಡೆದ ಬೈಕ್ ಸುಟ್ಟು ಹಾಕಿ ಎಂದ ಭವಾನಿ ರೇವಣ್ಣ! ವಿಡಿಯೊ ನೋಡಿ

ಅಪಘಾತ ನಡೆದಾಗ ಬೈಕ್‌ ಸವಾರನನ್ನು ಸಂತೈಸುವುದು ಬಿಟ್ಟು ಹಿಗ್ಗಾಮುಗ್ಗಾ ಬೈಯುವ ಮೂಲಕ ಮಾನವೀಯತೆ ಮರೆತ ಭವಾನಿ ರೇವಣ್ಣ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

VISTARANEWS.COM


on

Bhavani Revanna
Koo

ಮೈಸೂರು: ಕಾರಿಗೆ ಡಿಕ್ಕಿ ಹೊಡೆದ ಬೈಕ್ ಚಾಲಕನನ್ನು ಭವಾನಿ ರೇವಣ್ಣ (Bhavani Revanna) ತರಾಟೆಗೆ ತೆಗೆದುಕೊಂಡ ಘಟನೆ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮದ ಹೊರವಲಯದಲ್ಲಿ ನಡೆದಿದೆ. ಅಪಘಾತ ನಡೆದಾಗ ಬೈಕ್‌ ಸವಾರನನ್ನು ಸಂತೈಸುವುದು ಬಿಟ್ಟು ಹಿಗ್ಗಾಮುಗ್ಗಾ ಬೈದಿರುವ ಭವಾನಿ ರೇವಣ್ಣ, ಬೈಕ್‌ ಸುಟ್ಟು ಹಾಕಿ ಎಂದು ಆಕ್ರೋಶ ಹೊರಹಾಕಿರುವುದು ಕಂಡುಬಂದಿದೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮದ ಹೊರವಲಯದಲ್ಲಿ ಅಪಘಾತ ನಡೆದಿದೆ. ಹಾಸನ – ಕೆ.ಆರ್.ನಗರ ರಸ್ತೆಯಲ್ಲಿ ಬರುತ್ತಿದ್ದಾಗ ಭವಾನಿ ರೇವಣ್ಣ ಕಾರಿಗೆ ಬೈಕ್‌ ಸವಾರರೊಬ್ಬರು ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ಅಕ್ಕಾ ಕಾರು ಸೈಡಿಗೆ ಹಾಕಿ ಅಂದಿದ್ದಕ್ಕೆ ಕಿಡಿಕಾರಿರುವ ಭವಾನಿ ರೇವಣ್ಣ, ನನ್ನ ಕಾರಿಗೆ ಡ್ಯಾಮೇಜ್‌ ಆಗಿದೆ. ರಿಪೇರಿ ಮಾಡಿಸೋಕೆ 50 ಲಕ್ಷ ರೂ. ಹಣ ಬೇಕು. ಯಾರಾದರೂ ನ್ಯಾಯ ಮಾತನಾಡುವವರು ಐವತ್ತು ಲಕ್ಷ ಹಣ ಕೊಟ್ಟು ಮಾತನಾಡಿ. ಒಂದೂವರೆ ಕೋಟಿ ರೂಪಾಯಿ ಗಾಡಿ ಇದು ಎಂದು ದರ್ಪ ತೋರಿದ್ದಾರೆ.

ಸಾಲಿಗ್ರಾಮ ಠಾಣೆಯ ಇನ್ಸ್‌ಪೆಕ್ಟರ್‌ನ ಕರೀರಿ, ತಗೊಂಡು ಹೋಗಿ ಇವನನ್ನು ಒಳಗೆ ಹಾಕಲಿ, ಸಾಯಂಗಿದ್ರೆ ಬಸ್ಸಿಗೆ ಸಿಕ್ಕಿ ಸಾಯಬೇಕಿತ್ತು. ಸಾಯೋಕೆ ನನ್ ಕಾರೇ ಬೇಕಿತ್ತಾ? ಅವನು ಸತ್ತೋಗ್ತಾನೆ ಅಂತ ಅವನ ಬಗ್ಗೆ ಯಾಕೆ ಯೋಚನೆ ಮಾಡ್ತೀಯಾ? ಒಂದೂವರೆ ಕೋಟಿ ರೂಪಾಯಿ ಕಾರು ಬಗ್ಗೆ ಯೋಚನೆ ಮಾಡು ಎಂದಿರುವ ಭವಾನಿ ರೇವಣ್ಣ, ಬೈಕ್ ಸವಾರನ‌ನ್ನು ನಿಲ್ಲಿಸಿ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.

ಇದನ್ನೂ ಓದಿ | ಚಿಕ್ಕಮಗಳೂರು ಪೊಲೀಸ್-ವಕೀಲರ ಸಂಘರ್ಷ; ಪ್ರಕರಣದ ತನಿಖೆ ಸಿಐಡಿ ಹೆಗಲಿಗೆ

ಅಪಘಾತದಲ್ಲಿ ಗಾಯಗೊಂಡವನನ್ನು ಸಂತೈಸುವುದು ಬಿಟ್ಟು ಹಿಗ್ಗಾಮುಗ್ಗಾ ಬೈಯುವ ಮೂಲಕ ಭವಾನಿ ರೇವಣ್ಣ ಮಾನವೀಯತೆ ಮರೆತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
CP Yogeshwar brother in law Mahadevaiah
ಕರ್ನಾಟಕ4 mins ago

Murder Case: ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌ ಭಾವ ಮಹದೇವಯ್ಯ ಕೊಲೆ!

Foeticide case and pair of pink bunny figurines
ಕರ್ನಾಟಕ25 mins ago

Belagavi Winter Session: ಭ್ರೂಣ ಹತ್ಯೆ ಕೇಸ್‌; ಕೋರ್ಟ್‌ನಲ್ಲಿ ಕೇಸ್‌ ದಾಖಲಿಸಲು ಸದನದಲ್ಲಿ ಒತ್ತಾಯ

Narendra Modi With Women
EXPLAINER26 mins ago

ಚುನಾವಣೆಯಲ್ಲಿ ಹೆಣ್ಣುಮಕ್ಕಳ ಮತಗಳನ್ನು ಸೆಳೆದ ಬಿಜೆಪಿ; ‘ಕ್ವೀನ್ಸ್’‌ ಕಿಂಗ್‌ಮೇಕರ್ಸ್‌ ಆಗಿದ್ದು ಹೇಗೆ?

Foeticide arrest
ಕರ್ನಾಟಕ44 mins ago

Foeticide Case : ಮೈಸೂರಿನ ಮತ್ತೊಂದು ಆಸ್ಪತ್ರೆಯಲ್ಲೂ ಭ್ರೂಣ ಹತ್ಯೆ; ಹೆಡ್‌ ನರ್ಸ್‌ ಉಷಾರಾಣಿ ಬಂಧನ

Tukali imitate sangeetha sringeri
ಬಿಗ್ ಬಾಸ್50 mins ago

BBK SEASON 10: ನಾಯಿಯಾದ ಸಂಗೀತಾ; ಅನುಕರಣೆ ಮಾಡೋದ್ರಲ್ಲಿ ತುಕಾಲಿ ಎತ್ತಿದ ಕೈ!

Revenue Minister Krishna Byre Gowda making coffee
ಕರ್ನಾಟಕ1 hour ago

Belagavi Winter Session: ಕಾವೇರಿದ ಚರ್ಚೆ ನಡುವೆ ಬಿಸಿ ಬಿಸಿ ಕಾಫಿ ಮಾಡಿಕೊಂಡು ಕುಡಿದ ಕೃಷ್ಣ ಬೈರೇಗೌಡ

Car catches fire after hitting bus
ಕರ್ನಾಟಕ1 hour ago

Video Viral : ಬಸ್‌ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಕಾರು, ಪ್ರಾಣ ಉಳಿಸಿದ ಡ್ರೈವರ್‌; ವಿಡಿಯೊ ಇದೆ!

Michaung Cyclone
ಕರ್ನಾಟಕ2 hours ago

ಮೈಚಾಂಗ್‌ ಚಂಡಮಾರುತ; ಭಾರಿ ಮಳೆಗೆ ತಮಿಳುನಾಡಿನಲ್ಲಿ ಇಬ್ಬರ ಸಾವು, ಬೆಂಗಳೂರಿಗೂ ಎಫೆಕ್ಟ್?

Rishab rashmika
South Cinema2 hours ago

Rishab Shetty: ಪರೋಕ್ಷವಾಗಿ ರಶ್ಮಿಕಾ, ಪ್ರಶಾಂತ್‌ ನೀಲ್‌ಗೆ ತಿರುಗೇಟು ಕೊಟ್ರಾ ರಿಷಬ್‌! ಸ್ಪಷ್ಟನೆ ಏನು?

18 bills likely to be introduced in Belagavi Winter Session
ಕರ್ನಾಟಕ2 hours ago

Belagavi Winter Session: ಬೆಳಗಾವಿ ಅಧಿವೇಶನದಲ್ಲಿ ಈ 18 ಬಿಲ್ ಮಂಡನೆ ಸಾಧ್ಯತೆ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

ead your daily horoscope predictions for december 4th 2023
ಪ್ರಮುಖ ಸುದ್ದಿ11 hours ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ1 day ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ1 day ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ2 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ3 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ3 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ4 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ4 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

ಟ್ರೆಂಡಿಂಗ್‌