Viral Video: ವಂದೇ ಮಾತರಂ ಗೀತೆಗೆ ಮೊಹಮ್ಮದ್ ಶಮಿ ಮಗಳ ಮುದ್ದಾದ ನೃತ್ಯ! ವಿಡಿಯೊ ನೋಡಿ - Vistara News

ವೈರಲ್ ನ್ಯೂಸ್

Viral Video: ವಂದೇ ಮಾತರಂ ಗೀತೆಗೆ ಮೊಹಮ್ಮದ್ ಶಮಿ ಮಗಳ ಮುದ್ದಾದ ನೃತ್ಯ! ವಿಡಿಯೊ ನೋಡಿ

ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಮತ್ತು ಅವರ ಮಾಜಿ ಪತ್ನಿ ಹಸಿನ್ ಜಹಾನ್ ಅವರ ಮಗಳು ಐರಾ ಅವರ ಮುದ್ದಾದ ಅಭಿನಯದ ವಿಡಿಯೋ ತ್ವರಿತವಾಗಿ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ (Viral Video) ಆಗಿದ್ದು, ಸಾಕಷ್ಟು ಮೆಚ್ಚುಗೆಯೂ ಬಂದಿದೆ. ವಂದೇ ಮಾತರಂ ಗೀತೆ ಶಮಿ ಮಗಳು ಎಷ್ಟು ಮುದ್ದಾಗಿ ನೃತ್ಯ ಮಾಡಿದ್ದಾಳೆ ನೋಡಿ.

VISTARANEWS.COM


on

Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಭಾರತೀಯ ಕ್ರಿಕೆಟ್ ತಂಡದ ವೇಗದ (Indian cricket team senior pacer) ಬೌಲರ್ ಮೊಹಮ್ಮದ್ ಶಮಿ (Mohammed Shami) ಅವರ ಮಗಳು ಐರಾ ಅವರು ಸ್ವಾತಂತ್ರ್ಯ ದಿನಾಚರಣೆಯ (Independence Day 2024) ಸಂಭ್ರಮದಲ್ಲಿ ದೇಶಭಕ್ತಿ ಗೀತೆ “ವಂದೇ ಮಾತರಂ” ಗೆ (Vande Mataram) ಆಕರ್ಷಕವಾದ ನೃತ್ಯವನ್ನು ಪ್ರದರ್ಶಿಸಿರುವ ವಿಡಿಯೋ ಇನ್ ಸ್ಟಾ ಗ್ರಾಮ್ ನಲ್ಲಿ ವೈರಲ್ (Viral Video) ಆಗಿದೆ.

ಐರಾ ಮೊಹಮ್ಮದ್ ಶಮಿ ಮತ್ತು ಅವರ ಮಾಜಿ ಪತ್ನಿ ಹಸಿನ್ ಜಹಾನ್ ಅವರು ಮಗಳು. ಐರಾ ಅವರ ಮುದ್ದಾದ ಅಭಿನಯದ ವಿಡಿಯೋ ತ್ವರಿತವಾಗಿ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದ್ದು, ಸಾಕಷ್ಟು ಮೆಚ್ಚುಗೆಯೂ ಬಂದಿದೆ.


ಬಿಳಿ ಬಣ್ಣದ ಸೀರೆಯಲ್ಲಿ “ವಂದೇ ಮಾತರಂ” ಗೀತೆಗೆ ಆಕೆ ಮುದ್ದಾಗಿ ನೃತ್ಯ ಮಾಡಿದ್ದಾಳೆ. ಅವಳು ಧರಿಸಿದ್ದ ಬಿಳಿ ಸೀರೆ ತ್ರಿವರ್ಣ ಥೀಮ್‌ಗೆ ಸುಂದರವಾಗಿ ಪೂರಕವಾಗಿದೆ.

2014 ರಲ್ಲಿ ಹಸಿನ್ ಜಹಾನ್ ಅವರನ್ನು ವಿವಾಹವಾದ ಮೊಹಮ್ಮದ್ ಶಮಿ ಅವರಿಗೆ ಮಗಳು ಐರಾ 2015 ರಲ್ಲಿ ಜನಿಸಿದಳು. ಶಮಿ ಮತ್ತು ಜಹಾನ್ ಈಗ ಬೇರ್ಪಟ್ಟಿದ್ದಾರೆ.

ಭಾರತದ ಹಿರಿಯ ವೇಗಿ ಮೊಹಮ್ಮದ್ ಶಮಿ ನವೆಂಬರ್ 2023ರಲ್ಲಿ ಒಡಿಐ ವಿಶ್ವಕಪ್‌ನಲ್ಲಿ ಗಾಯಗೊಂಡ ಅನಂತರ ಕ್ರಿಕೆಟ್‌ನಿಂದ ಹೊರಗುಳಿದಿದ್ದಾರೆ. ಪಾದದ ಶಸ್ತ್ರಚಿಕಿತ್ಸೆಗೆ ಒಳಗಾದ ಅನಂತರ ಅವರು ಈಗ ಚೇತರಿಕೆಯ ಹಾದಿಯಲ್ಲಿದ್ದಾರೆ. ಬಾಂಗ್ಲಾದೇಶದೊಂದಿಗಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಸಮಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವ ನಿರೀಕ್ಷೆಯಿದೆ.

ಮೊಹಮ್ಮದ್ ಶಮಿ ಅವರು ಅಂತಾಷ್ಟ್ರೀಯ ಪುನರಾಗಮನದ ಮೊದಲು ದುಲೀಪ್ ಟ್ರೋಫಿ 2024ರಲ್ಲಿ ಕಾಣಿಸಿಕೊಳ್ಳಬಹುದು ಎಂದು ಸೂಚಿಸುವ ವರದಿಗಳಿದ್ದರೂ ಅವರು ಬುಧವಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಕಟಿಸಿದ ತಂಡಗಳಲ್ಲಿ ಅವರು ಪಾಲ್ಗೊಂಡಿರಲಿಲ್ಲ.

ಇದನ್ನೂ ಓದಿ: Viral Video: ಹಳೆಯ ವಿದ್ಯಾರ್ಥಿಗಳನ್ನು ಸಾಲಾಗಿ ಕರೆಸಿ ಬೆತ್ತದಿಂದ ಹೊಡೆದ ಪ್ರಾಂಶುಪಾಲರು! ಅಪರೂಪದ ವಿಡಿಯೊ

ನಾನು ಯಾವಾಗ ಹಿಂತಿರುಗುತ್ತೇನೆ ಎಂದು ಹೇಳುವುದು ಕಷ್ಟ. ನಾನು ಕಷ್ಟಪಟ್ಟು ಪ್ರಯತ್ನಿಸುತ್ತಿದ್ದೇನೆ. ಆದರೆ ನಾನು ಮತ್ತೊಮ್ಮೆ ಇಂಡಿಯಾ ಜೆರ್ಸಿಯನ್ನು ಧರಿಸುವ ಮೊದಲು ನೀವು ನನ್ನನ್ನು ಬಂಗಾಳದ ಬಣ್ಣಗಳಲ್ಲಿ ನೋಡುತ್ತೀರಿ ಎಂದು ನಾನು ಭಾವಿಸುತ್ತೇನೆ. ನಾನು ಬಂಗಾಳಕ್ಕಾಗಿ ಎರಡು ಅಥವಾ ಮೂರು ಪಂದ್ಯಗಳನ್ನು ಆಡಲು ಬರುತ್ತೇನೆ. ಅದಕ್ಕೆ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಮೊಹಮ್ಮದ್ ಶಮಿ ತಿಂಗಳ ಹಿಂದೆ ಮಾಧ್ಯಮವೊಂದಕ್ಕೆ ಹೇಳಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Viral News: ಮಹಿಳೆಯ ದೈವ ನರ್ತನಕ್ಕೆ ಭಾರಿ ಆಕ್ರೋಶ; ಕದ್ರಿ ಮಂಜುನಾಥನ ಸನ್ನಿಧಿಯಲ್ಲಿ ಕ್ಷಮೆಯಾಚನೆ

Viral News: ಮಂಗಳೂರಿನಲ್ಲಿ ನಡೆದ ‘ಆಟಿದ ಕೂಟ’ ಕಾರ್ಯಕ್ರಮವೊಂದರಲ್ಲಿ ದೈವ ನೃತ್ಯವನ್ನು ಅನುಕರಣೆ ಮಾಡಿ ಕುಣಿದ ಮಹಿಳೆ ಇದೀಗ ತಪ್ಪೊಪ್ಪಿಕೊಂಡು ಮಂಗಳೂರಿನ ಕದ್ರಿ ದೇವಸ್ಥಾನಕ್ಕೆ ತೆರಳಿ ಮಂಜುನಾಥ ದೇವರ ಸನ್ನಿಧಿಯಲ್ಲಿ ಮಂಡಿಯೂರಿ ಕ್ಷಮೆಯಾಚಿಸಿದ್ದಾರೆ. ಮಹಿಳೆ ದೈವ ನೃತ್ಯವನ್ನು ಅನುಕರಣೆ ಮಾಡುತ್ತಿರುವ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು.

VISTARANEWS.COM


on

Viral News
Koo

ಮಂಗಳೂರು: ತುಳುನಾಡಿನ ವಿಶಿಷ್ಟ ಆಚರಣೆ ದೈವಾರಾಧನೆಗೆ ಅದರದ್ದೇ ಆದ ಮಹತ್ವವಿದೆ, ಪಾವಿತ್ರ್ಯವಿದೆ. ಆದರೆ ಇದನ್ನೆಲ್ಲ ಮರೆತು ಮಂಗಳೂರಿನಲ್ಲಿ ನಡೆದ ‘ಆಟಿದ ಕೂಟ’ ಕಾರ್ಯಕ್ರಮವೊಂದರಲ್ಲಿ ದೈವ ನೃತ್ಯವನ್ನು ಅನುಕರಣೆ ಮಾಡಿ ಕುಣಿದ ಮಹಿಳೆ ಇದೀಗ ತಪ್ಪೊಪ್ಪಿಕೊಂಡು ಮಂಗಳೂರಿನ ಕದ್ರಿ ದೇವಸ್ಥಾನಕ್ಕೆ ತೆರಳಿ ಮಂಜುನಾಥ ದೇವರ ಸನ್ನಿಧಿಯಲ್ಲಿ ಮಂಡಿಯೂರಿ ಕ್ಷಮೆಯಾಚಿಸಿದ್ದಾರೆ. ಮಹಿಳೆ ದೈವ ನೃತ್ಯವನ್ನು ಅನುಕರಣೆ ಮಾಡುತ್ತಿರುವ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಅವರು ದೇವರ ಸನ್ನಿದಿಗೆ ಆಗಮಿಸಿ ಕಣ್ಣೀರಿಟ್ಟು ಕ್ಷಮೆಯಾಚಿಸಿದ್ದಾರೆ (Viral News).

ಇತ್ತೀಚೆಗೆ ಮಂಗಳೂರಿನ ಯೆಯ್ಯಾಡಿಯಲ್ಲಿ ನಡೆದಿದ್ದ ‘ಆಟಿದ ಕೂಟ’ ಕಾರ್ಯಕ್ರಮದಲ್ಲಿ ಕವಿತಾ ಎನ್ನುವ ಮಹಿಳೆ ದೈವ ನರ್ತನ ಮಾಡಿದ್ದರು. ಈ ವಿಡಿಯೊ ವೈರಲ್ ಆಗಿ ಕವಿತಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಬುಧವಾರ ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಆಗಮಿಸಿ ಕ್ಷಮೆಯಾಚಿಸಿದ್ದಾರೆ. ದೈವರಾಧಕ ಸಮ್ಮುಖದಲ್ಲಿ ಬಂದು ದೇವರ ಮುಂದೆ ದೇವರ ಮುಂದೆ ಕಣ್ಣೀರು ಹಾಕಿ ಕ್ಷಮಾಪಣೆ ಕೇಳಿದ್ದಾರೆ. ಜತೆಗೆ ತಪ್ಪು ಕಾಣಿಕೆ ಹಾಕಿ ರುದ್ರಾಭಿಷೇಕ ಸೇವೆ ಮಾಡಿಸಿದ್ದಾರೆ.

ದೇವರ ಮುಂದೆ ಕಣ್ಣೀರು

ʼʼನಿತ್ಯ ದೈವಗಳ ಆರಾಧನೆ, ದೇವರ ಪೂಜೆ ಮಾಡಿಕೊಂಡು ಬಂದವಳು ನಾನು. ಆದರೆ ಸಂಗೀತ ಮತ್ತು ನೃತ್ಯದಲ್ಲಿ ಅಪಾರ ಆಸಕ್ತಿಯ ಕಾರಣದಿಂದ ತಪ್ಪಾಗಿದೆ. ಮಂಜುನಾಥನ ಬಳಿ ಕ್ಷಮೆ ಕೇಳಿ ತಪ್ಪು ಕಾಣಿಕೆ ಹಾಕಿದ್ದೇನೆ. ಇನ್ನು ಮುಂದೆ ಇಂತಹ ತಪ್ಪು ಮಾಡುವುದಿಲ್ಲ. ʼವಾ ಪೊರ್ಲುಯಾʼ ತುಳು ಹಾಡು ಮೊಳಗಿದಾಗ ಮೈಮರೆತು ನರ್ತಿಸಿದ್ದೇನೆ. ನಾನು ದೈವವನ್ನು ಅಪಹಾಸ್ಯ ಮಾಡಿಲ್ಲ. ಯಾರೂ ಇದನ್ನು ಅನುಕರಿಸಬೇಡಿ. ನಾನು ತಿಳಿಯದೇ ತಪ್ಪು ಮಾಡಿದ್ದೇನೆ. ಇದಕ್ಕಾಗಿ ನನ್ನನ್ನು ಕ್ಷಮಿಸಿʼʼ ಎಂದು ಅತ್ತು ಬಿಟ್ಟಿದ್ದಾರೆ. ಕವಿತಾ ಅವರೊಂದಿಗೆ ಆಗಮಿಸಿದ ದೈವಾರಾಧಕ ದಯಾನಂದ ಕತ್ತಲ್‌ಸಾರ್, ಬುದ್ದಿಮಾತು ಹೇಳಿ ಇಂಥ ಘಟನೆ ಮರುಕಳಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಭಾರಿ ಆಕ್ರೋಶ

ಕರಾವಳಿಯಲ್ಲಿ ದೈವಾರಾಧನೆಗೆ ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಮಹತ್ತರ ಸ್ಥಾನವಿದೆ. ಅನೇಕ ಮಂದಿ ಶ್ರದ್ಧಾ ಭಕ್ತಿಯಿಂದ ತಲೆ ತಲಾಂತರಗಳಿಂದ ದೈವವನ್ನು ಆರಾಧಿಸಿಕೊಂಡು ಬರುತ್ತಿದ್ದಾರೆ. ಆದರೆ ಕವಿತಾ ಎನ್ನುವ ಈ ಮಹಿಳೆ ʼಆಟಿದ ಕೂಟʼ ಕಾರ್ಯಕ್ರಮದಲ್ಲಿ ಅದೆಲ್ಲವನ್ನೂ ಮರೆತು ತುಳು ಹಾಡಿಗೆ ದೈವದಂತೆ ಹೆಜ್ಜೆ ಹಾಕಿದ್ದು ಅನೇಕರನ್ನು ಕೆರಳಿಸಿತ್ತು. ಆಕೆ ದೈವದಂತೆ ಹೆಜ್ಜೆ ಹಾಕುತ್ತಿದ್ದರೆ ನೆರೆದಿದ್ದವರು ಚಪ್ಪಾಳೆ ತಟ್ಟಿ ಪ್ರೋತ್ಸಾಹ ನೀಡುತ್ತಿರುವುದೂ ವಿಡಿಯೊದಲ್ಲಿ ಕಂಡು ಬಂದಿತ್ತು.

ಕವಿತಾಳ ಈ ದೈವ ನರ್ತನದ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿ ಭಕ್ತರನ್ನು ಕೆರಳಿಸಿತ್ತು. ಜತೆಗೆ ಭಾರಿ ಚರ್ಚೆಯನ್ನೇ ಹುಟ್ಟು ಹಾಕಿತ್ತು. ಕಾರ್ಯಕ್ರಮ ಆಯೋಜಕರಿಗೆ ಕರೆ ಮಾಡಿ ಅನೇಕರು ತರಾಟೆಗೆ ತೆಗೆದುಕೊಂಡಿದ್ದರು. ಕವಿತಾ ದೈವದ ಎದುರು ನಿಂತು ಕ್ಷಮೆ ಯಾಚಿಸುವಂತೆ ಆಗ್ರಹಿಸಿದ್ದರು. ಅದರಂತೆ ಇದೀಗ ಅವರು ಕ್ಷಮೆಯಾಚಿಸಿದ್ದಾರೆ.

ಇದನ್ನೂ ಓದಿ: Rishab Shetty: ಕಾಂತಾರ 2ನಲ್ಲಿ ದೈವಾರಾಧನೆ ಪ್ರದರ್ಶಿಸಿದರೆ ಉಗ್ರ ಹೋರಾಟ: ರಿಷಬ್‌ಗೆ ವಾರ್ನಿಂಗ್‌!

Continue Reading

Latest

Viral Video: ಮನೆಯ ಗೇಟ್ ಬಳಿ ಸಿಂಹಗಳು ಮತ್ತು ಸಾಕು ನಾಯಿಗಳ ಕಾದಾಟ; ಎದೆ ನಡುಗಿಸುವ ವಿಡಿಯೊ

Viral Video: ಎರಡು ಸಿಂಹಗಳು ಮತ್ತು ಸಾಕು ನಾಯಿಗಳ ನಡುವಿನ ಜಗಳದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ಅವುಗಳನ್ನು ನಡುವೆ ಗೇಟ್ ಇದ್ದ ಕಾರಣ ಸಿಂಹಗಳು ನಾಯಿಗಳನ್ನು ಸುಮ್ಮನೆ ಬಿಟ್ಟು ಆ ಸ್ಥಳದಿಂದ ಹೋಗಿವೆ ಎನ್ನಲಾಗಿದೆ. ಈ ಪ್ರದೇಶ ಗಿರ್ ರಾಷ್ಟ್ರೀಯ ಉದ್ಯಾನವನದಿಂದ ಸುಮಾರು 76 ಕಿ.ಮೀ ದೂರದಲ್ಲಿದೆ.

VISTARANEWS.COM


on

Viral Video
Koo


ಸಿಂಹ ತುಂಬಾ ಕ್ರೂರ ಪ್ರಾಣಿಗಳು. ಎದುರಿಗೆ ಬಂದರೆ ಎಂತಹ ಗಟ್ಟಿ ಹೃದಯದವರಾದರೂ ಒಂದು ಕ್ಷಣ ನಡುಗುತ್ತಾರೆ. ಅಂತಹದರಲ್ಲಿ ಸಾಕು ನಾಯಿಯೊಂದು ಸಿಂಹಗಳ ಜೊತೆ ಹೋರಾಟಕ್ಕೆ ಮುಂದಾಗಿದೆ. ಎರಡು ಸಿಂಹಗಳು ಮತ್ತು ಸಾಕು ನಾಯಿಗಳ ನಡುವಿನ ಜಗಳ ನಡೆದಿದೆ. ಸುಮಾರು ಒಂದು ನಿಮಿಷದವರೆಗೆ ನಡೆದ ಜಗಳದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗುತ್ತಿದೆ. ಆದರೆ ಅವುಗಳನ್ನು ನಡುವೆ ಗೇಟ್ ಇದ್ದ ಕಾರಣ ಸಿಂಹಗಳು ನಾಯಿಗಳನ್ನು ಸುಮ್ಮನೆ ಬಿಟ್ಟು ಆ ಸ್ಥಳದಿಂದ ಹೋಗಿವೆ.

ಈ ದೃಶ್ಯ ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಈ ಆಘಾತಕಾರಿ ಘಟನೆ ಗುಜರಾತ್‍ನ ಅಮ್ರೇಲಿ ಜಿಲ್ಲೆಯ ಸಾವರ್ಕುಂಡ್ಲಾದಲ್ಲಿ ನಡೆದಿದೆ ಎಂಬುದಾಗಿ ತಿಳಿದುಬಂದಿದೆ. ಈ ಪ್ರದೇಶ ಗಿರ್ ರಾಷ್ಟ್ರೀಯ ಉದ್ಯಾನವನದಿಂದ ಸುಮಾರು 76 ಕಿ.ಮೀ ದೂರದಲ್ಲಿದೆ. ವಿಡಿಯೊದಲ್ಲಿ, ಸಿಂಹವು ಹೊರಗಿನಿಂದ ಗೇಟ್ ಕಡೆಗೆ ಬರುತ್ತಿದೆ. ಆಗ ನಾಯಿಗಳು ಇದ್ದಕ್ಕಿದ್ದಂತೆ ಗೇಟ್‍ನೊಳಗಿನಿಂದ ಸಿಂಹದ ಮೇಲೆ ದಾಳಿ ಮಾಡುವಂತೆ ಬೊಗಳುತ್ತಾ ಗೇಟ್ ಕಡೆಗೆ ಬರುತ್ತಿದೆ. ನಂತರ ಮತ್ತೊಂದು ಸಿಂಹ ಬಂದು ಮತ್ತೆ ನಾಯಿ ಜೊತೆ ಕೆಲವು ಸೆಕೆಂಡುಗಳ ಕಾಲ ಜಗಳವಾಡುತ್ತದೆ. ಅವುಗಳ ಜಗಳದಿಂದ ಗೇಟ್ ಮುರಿದು ಬೀಳುತ್ತದೆಯೇ ಎಂದು ಅನಿಸುತ್ತದೆ.

ಕೊನೆಗೆ ಗೇಟ್ ತೆರೆದುಕೊಂಡಿದ್ದರಿಂದ ನಾಯಿ ಹಿಂದೆ ಸರಿದಿದೆ. ಆದರೆ, ಸಿಂಹಗಳು ಹತ್ತಿರದ ಪೊದೆಯಲ್ಲಿ ಕಣ್ಮರೆಯಾಗಿವೆ. ನಂತರ ನಾಯಿ ಹೊರಗೆ ಬರುತ್ತದೆ. ಹಾಗೇ ಅದರ ಜೊತೆ ಟಾರ್ಚ್ ಲೈಟ್ ಹಿಡಿದಿರುವ ವ್ಯಕ್ತಿಯೊಬ್ಬರು ಹೊರಗೆ ಬಂದು ಅಲ್ಲಿ ಹುಡುಕಾಡತೊಡಗಿದ್ದಾರೆ. ನಂತರ ಒಳಗೆ ಹೋಗಿ ಗೇಟ್ ಅನ್ನು ಲಾಕ್ ಮಾಡಿದ್ದಾರೆ.

ಇದನ್ನೂ ಓದಿ:ಒಂದು ಹಾವು, ಮೂರು ಮುಂಗುಸಿ; ಏರ್‌ಪೋರ್ಟ್‌ ರನ್‌ವೇಯಲ್ಲೇ ಫೈಟ್‌! ಸೋತಿದ್ಯಾರು? ವಿಡಿಯೊ ನೋಡಿ

ನಾಯಿಗಳು ಸಿಂಹಗಳು ಮತ್ತು ಚಿರತೆಗಳಂತಹ ಇತರ ಕಾಡು ಪ್ರಾಣಿಗಳನ್ನು ಎದುರಿಸುತ್ತಿರುವುದು ಇದೇ ಮೊದಲಲ್ಲ. ಗಿರ್ ರಾಷ್ಟ್ರೀಯ ಉದ್ಯಾನ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಇಂತಹ ಕೆಲವು ಘಟನೆಗಳು ಈ ಹಿಂದೆಯೂ ವರದಿಯಾಗಿವೆ. ಹಾಗಾಗಿ ಗುಜರಾತ್‍ನಲ್ಲಿ ಸಿಂಹಗಳ ಹಾವಳಿ ಸರ್ವೇಸಾಮಾನ್ಯ. 2020ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ 674 ಏಷ್ಯಾಟಿಕ್ ಸಿಂಹಗಳಿವೆ. ಏಷ್ಯಾಟಿಕ್ ಸಿಂಹವು ಪೂರ್ವದಲ್ಲಿ ಪಶ್ಚಿಮ ಬಂಗಾಳ ಮತ್ತು ಭಾರತದ ಮಧ್ಯ ಭಾಗದಲ್ಲಿ ಮಧ್ಯಪ್ರದೇಶದವರೆಗೆ ಹರಡಿದೆ ಎಂದು ತಿಳಿದುಬಂದಿದೆ.

Continue Reading

ಬೆಂಗಳೂರು

Physical Abuse : ಭೀಮಾ ಸಿನಿಮಾ ನೋಡಲು ಬಂದು ಲೇಡಿಸ್‌ ವಾಶ್‌ ರೂಂನಲ್ಲಿ ಮೊಬೈಲ್ ಇಟ್ಟ ಅಪ್ರಾಪ್ತ!

Physical Abuse : ಬೆಂಗಳೂರಿನ ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಹೋಟೆಲ್‌, ಕಾಫಿ ಶಾಪ್‌, ಶಾಪಿಂಗ್‌ ಮಾಲ್‌ನ ಟ್ರಯಲ್‌ ರೂಮ್‌ನಿಂದ ಹಿಡಿದು ವಾಶ್‌ ರೂಮ್‌ನಲ್ಲಿ ಹಿಡನ್‌ ಕ್ಯಾಮೆರಾಗಳನ್ನು (Hidden Camera) ಇಟ್ಟು, ಹೆಣ್ಮಕ್ಕಳ ವಿಡಿಯೊ ಮಾಡಿಕೊ‌ಳ್ಳುವ ಚಳಿ ಶುರುವಾಗಿದೆ. ಸದ್ಯ ಭೀಮಾ ಸಿನಿಮಾ ನೋಡಲು ಹೋದ ಅಭಿಮಾನಿಗೂ ಇಂತಹದ್ದೇ ಅನುಭವ ಕಸಿವಿಸಿ ಮಾಡಿದೆ.

VISTARANEWS.COM


on

By

ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಮೊನ್ನೆಯಷ್ಟೇ ಬೆಂಗಳೂರಿನ ಥರ್ಡ್ ವೇವ್ ಕಾಫಿ ಕೆಫೆಯ (Third Wave Coffee cafe) ಲೇಡಿಸ್‌ ವಾಶ್‌ ರೂಮ್‌ನ ಕಸದ ಬುಟ್ಟಿಯಲ್ಲಿ ಮೊಬೈಲ್‌ ಪತ್ತೆಯಾಗಿತ್ತು. ಸುಮಾರು 2 ಗಂಟೆಗಳ ಕಾಲ ಮೊಬೈಲ್‌ ಕ್ಯಾಮೆರಾದಲ್ಲಿ ವಿಡಿಯೊ ರೆಕಾರ್ಡ್‌ ಆಗಿತ್ತು. ಕೆಫೆಯ ಸಿಬ್ಬಂದಿಯೇ ಮೊಬೈಲ್‌ ಇಟ್ಟು ಮಹಿಳೆಯರ ವಿಡಿಯೊ ಸೆರೆಹಿಡಿದಿದ್ದ. ಈ ಘಟನೆ ಮಾಸುವ ಮುನ್ನವೇ ಇದೀಗ ಭೀಮಾ ಸಿನಿಮಾ ನೋಡಲು ಬಂದ ವ್ಯಕ್ತಿಯೊಬ್ಬ ಲೇಡಿಸ್‌ ವಾಶ್‌ರೂಮ್‌ನಲ್ಲಿ ಯುವತಿಯ ವಿಡಿಯೋ ರೆಕಾರ್ಡ್‌ (Physical Abuse) ಮಾಡಿದ್ದಾನೆ.

ಭೀಮಾ ಸಿನಿಮಾ ವೀಕ್ಷಣೆಗೆ ಬಂದಿದ್ದ ಮಹಿಳಾ ಅಭಿಮಾನಿಗೆ ಫಿಲ್ಮಂ ಥಿಯೇಟರ್‌ನಲ್ಲಿ ಕಾಮುಕನೊಬ್ಬ ಕಾಟ ಕೊಟ್ಟಿದ್ದಾನೆ. ಬೆಂಗಳೂರಿನ ಊರ್ವಶಿ ಥಿಯೇಟರ್‌ನ ಲೇಡಿಸ್ ವಾಶ್ ರೂಂನಲ್ಲಿ ಯುವತಿಯ ವಿಡಿಯೋ ರೆಕಾರ್ಡ್‌ ಮಾಡಿದ್ದಾನೆ. 23 ವರ್ಷದ ಯುವತಿಯೊಬ್ಬಳು ಕಳೆದ ಆಗಸ್ಟ್‌ 10 ರಂದು ಊರ್ವಶಿ ಥಿಯೇಟರ್‌ನಲ್ಲಿ ಸಿನಿಮಾ ವೀಕ್ಷಣೆಗೆ ಬಂದಿದ್ದಳು. ರಾತ್ರಿ 9:30ರ ಶೋನ ಇಂಟರ್ ವೆಲ್‌ನಲ್ಲಿ ವಾಶ್ ರೂಂಗೆ ತೆರಳಿದ್ದಾಳೆ. ಈ ವೇಳೆ ಸಿನಿಮಾ ನೋಡಲು ಬಂದಿದ್ದ ಕಿರಾತಕನೊಬ್ಬ ಕಿಟಕಿಯಿಂದ ಮೊಬೈಲ್ ಇಟ್ಟು ವಿಡಿಯೋ ಚಿತ್ರಿಕರಿಸಿದ್ದಾನೆ.

ಇದು ಗಮನಕ್ಕೆ ಬರುತ್ತಿದ್ದಂತೆ ಯುವತಿ ಹೊರಗೆ ಓಡಿ ಬಂದಿದ್ದಾಳೆ. ಸದ್ಯ ಯುವತಿ ಕೊಟ್ಟ ದೂರಿನನ್ವಯ ಅಪ್ರಾಪ್ತ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Honey trap : ಮಿಸ್ ಕಾಲ್‌ನಲ್ಲೇ ಹುಡುಗರನ್ನು ಪಟಾಯಿಸುತ್ತಾಳೆ! ಮನೆಗೆ ಬಾ ಅಂತಾಳೆ ಸುಲಿಗೆ ಮಾಡ್ತಾಳೆ

ಮಗಳೊಂದಿಗೆ ಹೇಮಾವತಿ ನಾಲೆಗೆ ಹಾರಿ ದಂಪತಿ ಆತ್ಮಹತ್ಯೆ

ಹಾಸನ: ಸಾಲಭಾದೆ ತಾಳಲಾರದೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ (Self Harming) ಶರಣಾಗಿದ್ದಾರೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಕೆರೆಬೀದಿಯಲ್ಲಿ ಘಟನೆ ನಡೆದಿದೆ. 13 ವರ್ಷದ ಮಗಳೊಂದಿಗೆ ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆ ದಂಪತಿ ಮೃತಪಟ್ಟಿದ್ದಾರೆ. ಶ್ರೀನಿವಾಸ್ (43), ಶ್ವೇತಾ (36) ಹಾಗೂ ನಾಗಶ್ರೀ (13) ಮೃತ ದುರ್ದೈವಿಗಳು.

ಶ್ರೀನಿವಾಸ್‌ ಕಾರು ಚಾಲಕರಾಗಿದ್ದರೆ, ಶ್ವೇತಾ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಶ್ರೀನಿವಾಸ್‌ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಕಳೆದ ಮಂಗಳವಾರ ಈ ಮೂವರು ಏಕಾಏಕಿ ಕಾಣಿಯಾಗಿದ್ದರು. ಸಂಬಂಧಿಗಳು ಎಲ್ಲೆಡೆ ಹುಡುಕಾಟ ನಡೆಸಿದ್ದರು. ಆದರೆ ಇವರ ಸುಳಿವು ಸಿಕ್ಕಿರಲಿಲ್ಲ.

ಕುಟುಂಬಸ್ಥರು ನಂತರ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಿನ್ನೆ ಬುಧವಾರ ಸಂಜೆ ಬಾಗೂರು ಹೋಬಳಿ, ಮುದ್ಲಾಪುರ ಬಳಿಯ ನಾಲೆಯಲ್ಲಿ ಶ್ರೀನಿವಾಸ್, ಶ್ವೇತಾ ಶವ ಪತ್ತೆಯಾಗಿದೆ. ಹೇಮಾವತಿ ನಾಲೆಗೆ ಹಾರಿ ಮೂವರು ಆತ್ಮಹತ್ಯೆಗೆ ಶರಣಾಗಿರುವುದು ಗೊತ್ತಾಗಿದೆ.

ಅಗ್ನಿಶಾಮಕ ದಳದ‌ ಸಿಬ್ಬಂದಿ ಹಾಗೂ ಪೊಲೀಸರು ದಂಪತಿಯ ಶವವನ್ನು ಹೊರ ತೆಗೆದಿದ್ದಾರೆ. ಸದ್ಯ ಬಾಲಕಿ ನಾಗಶ್ರೀ ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರಿದಿದೆ. ಸ್ಥಳಕ್ಕೆ ಎಸ್‌ಪಿ ಮಹಮದ್ ಸುಜೀತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನುಗ್ಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

Latest

Viral Video: ಪಿಸ್ತೂಲ್ ಹಿಡಿದು ಚಿನ್ನ ದೋಚಲು ಬಂದವರನ್ನು ಕೋಲು ಹಿಡಿದು ಓಡಿಸಿದ ಅಂಗಡಿ ಮಾಲೀಕ!

Viral Video: ಇತ್ತೀಚೆಗೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿನ ಚಿನ್ನದ ಅಂಗಡಿಯ ಮೇಲೆ ನಡೆದ ಪ್ರಕರಣದಲ್ಲಿ ಮಾಲೀಕನ ಧೈರ್ಯ, ಸಾಹಸದಿಂದ ಕಳ್ಳರ ದರೋಡೆ ಪ್ರಯತ್ನ ವಿಫಲವಾಗಿದೆ ಎಂಬುದಾಗಿ ತಿಳಿದುಬಂದಿದೆ. ಮಾಲೀಕ ಬಂದೂಕು ಹಿಡಿದ ನಾಲ್ವರು ಕಳ್ಳರನ್ನು ನೋಡಿ ಹೆದರದೆ ಧೈರ್ಯಮಾಡಿ ಅವರ ಮೇಲೆ ಮರದ ಕೋಲಿನಿಂದ ಹಲ್ಲೆ ನಡೆಸಿದ ಕಾರಣ ಕಳ್ಳರು ಬಂದ ದಾರಿಗೆ ಸುಂಕವಿಲ್ಲ ಎಂದು ಓಡಿಹೋಗಿದ್ದಾರೆ. ಈ ಘಟನೆಗೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

VISTARANEWS.COM


on

Viral Video
Koo


ಇತೀಚಿಗೆ ದರೋಡೆಕೋರರ ಹಾವಳಿ ಹೆಚ್ಚಾಗಿದ್ದು, ಹಾಡಹಗಲಿನಲ್ಲಿಯೇ ಚಿನ್ನದ ಅಂಗಡಿಗಳಿಗೆ ನುಗ್ಗಿ ದರೋಡೆ ಮಾಡುತ್ತಿದ್ದಾರೆ. ಈ ಹಿಂದೆ ಅನೇಕ ಬಾರಿ ಚಿನ್ನದ ಅಂಗಡಿಗಳ ಮೇಲೆ ದಾಳಿ ಮಾಡಿ ಪಿಸ್ತೂಲ್ ತೋರಿಸಿ ದರೋಡೆ ಮಾಡಿದ ಪ್ರಕರಣಗಳು ಹಲವು ಬೆಳಕಿಗೆ ಬಂದಿದ್ದವು. ಆದರೆ ಇತ್ತೀಚೆಗೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿನ ಚಿನ್ನದ ಅಂಗಡಿಯ ಮೇಲೆ ನಡೆದ ಪ್ರಕರಣದಲ್ಲಿ ಮಾಲೀಕನ ಧೈರ್ಯ, ಸಾಹಸದಿಂದ ಕಳ್ಳರ ದರೋಡೆ ಪ್ರಯತ್ನ ವಿಫಲವಾಗಿದೆ ಎಂಬುದಾಗಿ ತಿಳಿದುಬಂದಿದೆ. ಮಾಲೀಕ ಬಂದೂಕು ಹಿಡಿದ ನಾಲ್ವರು ಕಳ್ಳರನ್ನು ನೋಡಿ ಹೆದರದೆ ಧೈರ್ಯಮಾಡಿ ಅವರ ಮೇಲೆ ಮರದ ಕೋಲಿನಿಂದ ಹಲ್ಲೆ ನಡೆಸಿದ ಕಾರಣ ಕಳ್ಳರು ಬಂದ ದಾರಿಗೆ ಸುಂಕವಿಲ್ಲ ಎಂದು ಓಡಿಹೋಗಿದ್ದಾರೆ. ಈ ಘಟನೆಗೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.

ಪೊಲೀಸ್ ಮಾಹಿತಿ ಪ್ರಕಾರ, ತಮ್ಮ ಗುರುತನ್ನು ಮರೆಮಾಚಲು ಮುಖವಾಡ ಮತ್ತು ಹೆಲ್ಮೆಟ್ ಧರಿಸಿದ ನಾಲ್ವರು ಕಳ್ಳರು ಬುಧವಾರ ಬೆಳಿಗ್ಗೆ ಥಾಣೆಯ ಕಪುರ್ಬಾವಾಡಿ ಪ್ರದೇಶದ ಆಭರಣ ಅಂಗಡಿಗೆ ಪ್ರವೇಶಿಸಿದರು. ದರೋಡೆಕೋರರು ಬಂದೂಕುಗಳನ್ನು ಹೊಂದಿದ್ದು, ಅದರಿಂದ ಅಂಗಡಿ ಮಾಲೀಕರನ್ನು ಬೆದರಿಸಲು ಮತ್ತು ಚಿನ್ನದ ಆಭರಣಗಳನ್ನು ಕದಿಯಲು ಪ್ರಯತ್ನಿಸಿದರು.

ಆದರೆ, ಅಂಗಡಿ ಮಾಲೀಕರು ಧೈರ್ಯದಿಂದ ಬಿದಿರಿನ ಕೋಲನ್ನು ಹಿಡಿದು ಹಲ್ಲೆಕೋರರ ಮೇಲೆ ದಾಳಿ ಮಾಡಿದ್ದಾರೆ. ಬೆಳಿಗ್ಗೆ 11:30 ರ ಸುಮಾರಿಗೆ ಅಂಗಡಿ ಮಾಲೀಕರು ಅಂಗಡಿಯಲ್ಲಿ ಒಬ್ಬರೇ ಇದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ದರೋಡೆಕೋರರನ್ನು ಹೆದರಿಸುವುದನ್ನು ಬಿಟ್ಟು ಅಂಗಡಿ ಮಾಲೀಕನಿಗೆ ಬೇರೆ ದಾರಿ ಕಾಣಲಿಲ್ಲ. ಹಾಗಾಗಿ ಧೈರ್ಯಮಾಡಿ ಈ ಕೆಲಸಕ್ಕೆ ಮುಂದಾದ ಕಾರಣ ಅದರಿಂದ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ:ದಲಿತ ಬಾಲಕಿಯನ್ನು ಅಪಹರಿಸಿ ಇಸ್ಲಾಂಗೆ ಮತಾಂತರ; ಮುಸ್ಲಿಂ ಧರ್ಮಗುರು ಬಂಧನ

ಇಡೀ ಘಟನೆ ಅಂಗಡಿಯಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಹಿಡಿಯಲಾಗಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈಗ ಪೊಲೀಸರು ಈ ವಿಷಯದ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಥಾಣೆ ಜಿಲ್ಲಾ ಪೊಲೀಸ್ ಮತ್ತು ಅಪರಾಧ ವಿಭಾಗವು ಶಂಕಿತರನ್ನು ಪತ್ತೆಹಚ್ಚಲು ಈ ವಿಷಯದಲ್ಲಿ ಕೆಲಸ ಮಾಡುತ್ತಿದೆ.

ಇಲ್ಲಿಯವರೆಗೆ, ಯಾರನ್ನೂ ಬಂಧಿಸಲಾಗಿಲ್ಲ, ಆದರೆ ದರೋಡೆ ಪ್ರಯತ್ನಕ್ಕೆ ಕಾರಣರಾದವರನ್ನು ಬಂಧಿಸಲು ಪೊಲೀಸರು ಸುಳಿವುಗಳನ್ನು ಪತ್ತೆ ಮಾಡುತ್ತಿದ್ದಾರೆ ಎನ್ನಲಾಗಿದೆ.

Continue Reading
Advertisement
Benefits Of Onion Hair Oil
ಆರೋಗ್ಯ4 mins ago

Benefits Of Onion Hair Oil: ಕೂದಲು ಬಿಳಿಯಾಗುತ್ತಿದೆಯೆ? ಈರುಳ್ಳಿ ತೈಲವನ್ನು ಈ ರೀತಿ ಬಳಸಿ

Aman Sehrawat
ಕ್ರೀಡೆ32 mins ago

Aman Sehrawat : ಒಲಿಂಪಿಕ್ಸ್​ನಲ್ಲಿ ಕಂಚು ಗೆದ್ದ ಅಮನ್ ಸೆಹ್ರಾವತ್​ಗೆ ರೈಲ್ವೆ ಇಲಾಖೆಯಲ್ಲಿ ಭರ್ಜರಿ ಬಡ್ತಿ

Job Alert
ಉದ್ಯೋಗ56 mins ago

Job Alert: ಹೆಸ್ಕಾಂನ 338 ಹುದ್ದೆಗಳಿಗೆ ಅರ್ಜಿ ಆಹ್ವಾನ

Vicky Kaushal Chhava teaser released
ಟಾಲಿವುಡ್57 mins ago

Vicky Kaushal: ವಿಕ್ಕಿ ಕೌಶಲ್ `ಛಾವಾ’ ಟೀಸರ್‌ ಔಟ್‌!

Hyena Movie
ಬೆಂಗಳೂರು59 mins ago

Hyena Movie: ಹೈನಾ ಚಿತ್ರದ ಫಸ್ಟ್‌ ಲುಕ್‌ ರಿಲೀಸ್‌

Happy Independence Day
ಪ್ರಮುಖ ಸುದ್ದಿ59 mins ago

Happy Independence Day : ನೀರಜ್​ನಿಂದ ಹಿಡಿದು ರೋಹಿತ್​ ಶರ್ಮಾ ; ಭಾರತೀಯ ಅಥ್ಲೀಟ್​​ಗಳ ಸ್ವಾತಂತ್ರ್ಯೋತ್ಸವ ಆಚರಣೆಯ ಪೋಸ್ಟ್​ಗಳು ಇಲ್ಲಿವೆ…

ದೇಶ1 hour ago

Indian Flag: ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ಧ್ವಜಾರೋಹಣಗಳ ಪ್ರಕ್ರಿಯೆ ಬೇರೆ ಬೇರೆ ಅನ್ನೋದು ಗೊತ್ತಾ?

Independence Day 2024
ಕರ್ನಾಟಕ1 hour ago

Independence Day 2024: ಹಾಸನದಲ್ಲಿ 2500 ಅಡಿ ಉದ್ದದ ತ್ರಿವರ್ಣ ಧ್ವಜ ಪ್ರದರ್ಶನ

Bomb threat
ದೇಶ1 hour ago

Bomb Threat: ಅಸ್ಸಾಂನ 19 ಕಡೆಗಳಲ್ಲಿ ಬಾಂಬ್‌ ಇರಿಸಿ, ಬಳಿಕ ನಿಷ್ಕ್ರೀಯಗೊಳಿಸುವಂತೆ ಮನವಿ ಮಾಡಿದ ಉಲ್ಫಾ ಉಗ್ರರು

Sangolli Rayanna Jayanthi
ಬೆಂಗಳೂರು1 hour ago

Sangolli Rayanna Jayanthi: ಮುಂದಿನ ವರ್ಷ ಅದ್ಧೂರಿಯಾಗಿ ಸಂಗೊಳ್ಳಿ ರಾಯಣ್ಣ ಜಯಂತ್ಯುತ್ಸವ; ಸಿದ್ದರಾಮಯ್ಯ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 week ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 week ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 week ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 week ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 week ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌