Viral Video : ಎಣ್ಣೆ ಕದಿಯಲು ಹೋದವನ ಎಡವಟ್ಟು! ಬಂದ ದಾರಿಗೆ ಸುಂಕವಿಲ್ಲದೆ ವಾಪಸು ಹೋದ ಕಳ್ಳ - Vistara News

ವೈರಲ್ ನ್ಯೂಸ್

Viral Video : ಎಣ್ಣೆ ಕದಿಯಲು ಹೋದವನ ಎಡವಟ್ಟು! ಬಂದ ದಾರಿಗೆ ಸುಂಕವಿಲ್ಲದೆ ವಾಪಸು ಹೋದ ಕಳ್ಳ

ಕಳ್ಳನೊಬ್ಬ ಮದ್ಯದಂಗಡಿಯಲ್ಲಿ ಕಳ್ಳತನ ಮಾಡಲು ಹೋಗಿ ಸೋತ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್‌ ಆಗಿದೆ.

VISTARANEWS.COM


on

thief tries to steal liquor
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕಳ್ಳರು ಒಂದಿಲ್ಲೊಂದು ಸುಳಿವು ಬಿಟ್ಟೇ ಹೋಗಿರುತ್ತಾರೆ ಎನ್ನುವ ಮಾತಿದೆ. ಆದರೆ ಇಲ್ಲಿ ಕಳ್ಳ ತಾನು ಕಳ್ಳತನ ಮಾಡಿದ ಮದ್ಯದ ಬಾಟಲಿಗಳನ್ನೇ ಬಿಟ್ಟು ಹೋಗಬೇಕಾಗಿ ಬಂದಿದೆ. ಕಳ್ಳ ಜಾಣ್ಮೆ ತೋರಿಸಲು ಹೋಗಿ ಮೂರ್ಖನಾದ ವಿಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ (Viral Video) ಆಗುತ್ತಿದೆ.

ಕಳ್ಳನೊಬ್ಬ ಮದ್ಯದ ಅಂಗಡಿಗೆ ಸಾಮಾನ್ಯ ಗ್ರಾಹಕನಂತೆ ಹೋಗುತ್ತಾನೆ. ತನಗೆ ಬೇಕಾದ ದೊಡ್ಡದೊಂದು ಮದ್ಯದ ಬಾಟಲಿಯನ್ನು ಎತ್ತಿಕೊಳ್ಳುತ್ತಾನೆ. ಅಲ್ಲಿಂದ ನೇರವಾಗಿ ಬಿಲ್ಲಿಂಗ್‌ ಕೌಂಟರ್‌ನತ್ತ ಹೋಗುವಂತೆ ಮಾಡುವ ಆತ ಅಲ್ಲಿ ಬಿಲ್‌ ಮಾಡಿಸದೆಯೇ ಮುಖ್ಯ ದ್ವಾರದ ಕಡೆ ಓಡುತ್ತಾನೆ.

ಇದನ್ನೂ ಓದಿ: Viral Video : ಗಡಿ ದಾಟಿ ಭಾರತಕ್ಕೆ ನುಗ್ಗಿದ ಬಾಂಗ್ಲಾ ಯೋಧರು! ಅಟ್ಟಾಟಿಸಿಕೊಂಡು ಒದ್ದೋಡಿಸಿದ ಹಳ್ಳಿಗರು
ಮುಖ್ಯ ದ್ವಾರ ಮುಚ್ಚಿರುವುದು ಆತನಿಗೆ ಅಲ್ಲಿಗೆ ಹೋದ ನಂತರವೇ ತಿಳಿಯುತ್ತದೆ. ಅದನ್ನು ತೆರೆಯಲೆಂದು ಸಾಕಷ್ಟು ಪ್ರಯತ್ನ ಮಾಡುತ್ತಾನಾದರೂ ಅದರ ರಿಮೋಟ್‌ ಬಿಲ್ಲಿಂಗ್‌ ಮಾಡಿಸುವ ಸಿಬ್ಬಂದಿ ಬಳಿ ಇರುತ್ತದೆಯಾದ್ದರಿಂದ ಬಾಗಿಲನ್ನು ತೆರೆಯಲು ಸಾಧ್ಯವಾಗುವುದಿಲ್ಲ. ಸಿಟ್ಟು ಮತ್ತು ಬೇಜಾರಿನಿಂದ ಕಳ್ಳ ಕದ್ದ ಮದ್ಯವನ್ನು ವಾಪಸು ಬಿಲ್ಲಿಂಗ್‌ ಕೌಂಟರ್‌ ಬಳಿ ತಂದಿರಿಸುತ್ತಾನೆ. ನಂತರ ಮುಖ್ಯ ಬಾಗಿಲ ಬಳಿ ಹೋದಾಗ ಸಿಬ್ಬಂದಿ ಅದರ ಲಾಕ್‌ ತೆಗೆಯುತ್ತಾಳೆ. ಆತ ನಿರಾಸೆಯಿಂದ ಹೊರ ನಡೆಯುತ್ತಾನೆ.

ಈ ವಿಡಿಯೊವನ್ನು ದಿ ಬಾಟೆಲ್‌ ಒ ಬೀಚ್‌ಬೋರೊ ಹೆಸರಿನ ಮದ್ಯದಂಗಡಿ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದೆ. ಯಾರಿಗಾದರೂ ಈತ ಗೊತ್ತೇ ಎಂದು ವಿಡಿಯೊದಲ್ಲಿ ಕೇಳಲಾಗಿದೆ. ಈ ವಿಡಿಯೊ ಈಗಾಗಲೇ ಫೇಸ್‌ಬುಕ್‌ನಲ್ಲಿ 25 ಸಾವಿರಕ್ಕೂ ಅಧಿಕ ಮಂದಿಯಿಂದ ವೀಕ್ಷಣೆಗೊಂಡಿದೆ. ಸಾವಿರಾರು ಮಂದಿ ವಿಡಿಯೊಗೆ ಲೈಕ್‌ ಮಾಡಿದ್ದಾರೆ. ಹಾಗೆಯೇ ತರೇವಾರು ಕಾಮೆಂಟ್‌ಗಳನ್ನೂ ಮಾಡಿದ್ದಾರೆ. ಕಳ್ಳ ಸೋತಿದ್ದರ ಬಗ್ಗೆ ಅನೇಕರು ಮಾತನಾಡಿದ್ದರೆ, ಸಿಬ್ಬಂದಿಯ ರಕ್ಷಣೆ ಬಗ್ಗೆ ಅನೇಕರು ಕಾಳಜಿ ವ್ಯಕ್ತಪಡಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral News: ವಾಟರ್‌ ಪ್ಯೂರಿಫೈಯರ್‌ನಿಂದ ನೀರು ಕುಡಿದ ಬುದ್ಧಿವಂತ ಮಂಗ; ವಿಡಿಯೊ ನೀವೂ ನೋಡಿ

Viral News: ದಿನದಿಂದ ದಿನಕ್ಕೆ ವಾತಾವರಣದ ಉಷ್ಣತೆ ಹೆಚ್ಚಾಗುತ್ತಿದೆ. ಜತೆಗೆ ಬೆಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ ಆರಂಭವಾಗಿದೆ. ಈ ಬಿಸಿ ಪ್ರಾಣಿಗಳಿಗೂ ತಟ್ಟಿದೆ. ದಾಹದಿಂದ ಕುಡಿಯುವ ನೀರನ್ನು ಅರಸಿಕೊಂಡು ಬಂದ ಮಂಗವೊಂದು ಮನೆಯೊಂದಕ್ಕೆ ನುಗ್ಗಿ ಅಡುಗೆ ಮನೆಗೆ ತೆರಳಿದೆ. ಅಲ್ಲಿ ವಾಟರ್‌ ಪ್ಯೂರಿಫೈಯರ್‌ನಿಂದ ನೀರು ಕುಡಿಯಲು ಪ್ರಯತ್ನಿಸುತ್ತಿರುವ ದೃಶ್ಯ ಸೆರೆಯಾಗಿದೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ. ಕೋತಿಯ ಬುದ್ಧಿವಂತಿಕೆಗೆ ಅನೇಕರು ತಲೆ ತೂಗಿದ್ದಾರೆ.

VISTARANEWS.COM


on

Viral News
Koo

ಬೆಂಗಳೂರು: ಬಾಯಾರಿದ ಕಾಗೆಯೊಂದು ಬುದ್ಧಿವಂತಿಕೆಯಿಂದ ಪಾತ್ರೆಯ ತಳ ಭಾಗದಲ್ಲಿದ್ದ ನೀರು ಕುಡಿದ ಕಥೆಯನ್ನು ನಾವೆಲ್ಲ ಕೇಳಿದ್ದೇವೆ. ಕಾಗೆ ಚಿಕ್ಕ ಚಿಕ್ಕ ಕಲ್ಲುಗಳನ್ನು ತಂದು ಹಾಕಿ ನೀರು ಪಾತ್ರೆಯಿಂದ ಮೇಲೆ ಬರುವಂತೆ ಮಾಡಿ ದಾಹ ನೀಗಿಸಿಕೊಂಡಿತ್ತು ಎನ್ನುವುದು ಕಥೆ. ಬಾಲ್ಯದಲ್ಲಿ ಶಾಲೆಯಲ್ಲಿ, ಅಜ್ಜಿಯ ಬಳಿ ಈ ಕಥೆ ಕೇಳಿ ನಾವೆಲ್ಲ ಕಾಗೆಯ ಬುದ್ಧಿವಂತಿಕೆಗೆ ತಲೆ ಆಡಿಸಿದ್ದೇವೆ. ಆದರೆ ಅದು ಕಥೆ. ನಿಜವಾಗಿಯೂ ಹೀಗೆ ನಡೆಯಬಹುದಾ? ಎಂಬ ಪ್ರಶ್ನೆಗೆ ಹೌದು ಎನ್ನುತ್ತದೆ ಈ ದೃಶ್ಯ. ಆದರೆ ಇಲ್ಲಿ ಪಾತ್ರ ಕೊಂಚ ಬದಲಾಗಿದೆ. ಕಾಗೆಯ ಬದಲು ಮಂಗವೊಂದು ಬಂದಿದೆ. ಏನಿದು ಘಟನೆ? ನಿಮ್ಮ ಪ್ರಶ್ನೆಗೆ ಈ ವೈರಲ್‌ ವಿಡಿಯೊದಲ್ಲಿದೆ (Viral News) ಉತ್ತರ. ಅದೇನು ಎನ್ನುವುದನ್ನು ತಿಳಿದುಕೊಳ್ಳಲು ಮುಂದೆ ಓದಿ.

ಹೇಳಿ ಕೇಳಿ ಇದು ಬಿರು ಬೇಸಗೆಯ ಕಾಲ. ವಾತಾವಣದ ತಾಪಮಾನ ಸಿಕ್ಕಾಪಟ್ಟೆ ಏರಿಕೆಯಾಗಿದೆ. ಜತೆಗೆ ಬೆಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ ಎದ್ದಿದೆ. ಯಾಕೋ ವರುಣ ದೇವ ಬೆಂಗಳೂರಿನ ಮೇಲೆ ಮುನಿದಿದ್ದಾನೆ. ಹೀಗಾಗಿ ಹನಿ ನೀರಿಗಾಗಿ ಪರದಾಡುವ ಸ್ಥಿತಿ ಎದುರಾಗಿದೆ. ನಮಗೇ ಹೀಗಾದರೆ ಪಾಪ ಪ್ರಾಣಿ-ಪಕ್ಷಿಗಳ ಮೂಕ ವೇದನೆ ಯಾರಿಗೂ ಬೇಡ. ಈ ಮಧ್ಯೆ ದಾಹದಿಂದ ಕಂಗೆಟ್ಟ ಮಂಗವೊಂದು ಪ್ರದರ್ಶಿಸಿದ ಚಾಣಾಕ್ಷ ನಡೆ ನೆಟ್ಟಿಗರ ಗಮನ ಸೆಳೆದಿದೆ. ಮನೆಯೊಂದರ ಅಡುಗೆ ಕೋಣೆಗೆ ನುಗ್ಗಿದ ಮಂಗವೊಂದು ವಾಟರ್‌ ಪ್ಯೂರಿಫೈಯರ್‌ನಿಂದ ನೀರು ಕುಡಿಯಲು ಪ್ರಯತ್ನಿಸಿದೆ. ಸದ್ಯ ಇದರ ಸಾಹಸದ ವಿಡಿಯೊ ನೆಟ್ಟಿಗರ ಗಮನ ಸೆಳೆದಿದೆ.

ಬೆಂಗಳೂರಿನ ಅಕ್ಷತ್ ಎನ್ನುವವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಅಪರೂಪದ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ ಮಂಗಗಳನ್ನು ಬುದ್ಧಿವಂತ ಪ್ರಾಣಿ ಎಂದೇ ಕರೆಯಲಾಗುತ್ತದೆ. ಪ್ರವಾಸಿ ತಾಣ, ದೇವಸ್ಥಾನದ ಪರಿಸರ ಮುಂತಾದೆಡೆ ಇರುವ ಕೋತಿಗಳು ಪ್ರವಾಸಿಗರ ಬಾಟಲಿ ಕಸಿದು ಮುಚ್ಚಳ ತೆರೆದು ನೀರು, ಜ್ಯೂಸ್‌ ಕುಡಿಯುವುದನ್ನು ನೋಡಿದ್ದೇವೆ. ಆದರೆ ಇಲ್ಲಿ ಅದಕ್ಕಿಂತ ಭಿನ್ನವಾಗಿ ವಾಟರ್‌ ಪ್ಯೂರಿಫೈಯರ್‌ನಿಂದ ನೀರು ಕುಡಿಯಲು ಪ್ರಯತ್ನಿಸುತ್ತಿರುವುದು ಕಂಡು ಬಂದಿದೆ.

ವಿಡಿಯೊದಲ್ಲಿ ಏನಿದೆ?

ನೀರು ಹುಡುಕಿಕೊಂಡು ಕಿಟಕಿ ಮೂಲಕ ಅಡುಗೆ ಕೋಣೆಗೆ ಮಂಗವೊಂದು ಬಂದಿತ್ತು. ಬಳಿಕ ಅದು ನೇರ ವಾಟರ್‌ ಪ್ಯೂರಿಫೈಯರ್‌ ಬಳಿಗೆ ತೆರಳಿತು. ಅದರ ಕೆಳಗೆ ಕುಳಿತು ನಳ‍್ಳಿಗೆ ಬಾಯಿ ಇಟ್ಟಿತು. ನೀರು ಬರದೆ ಇದ್ದಾಗ ಆನ್‌ ಮಾಡಲು ಪ್ರಯತ್ನಿಸಿತು. ಈ ದೃಶ್ಯವನ್ನು ಮನೆಯವರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ತನ್ನ ಸರದಿಗಾಗಿ ನಿರೀಕ್ಷೆಯಿಂದ ಕಿಟಕಿಯಲ್ಲಿ ಕಾಯುತ್ತ ಕುಳಿತ ಇನ್ನೊಂದು ಮಂಗವನ್ನೂ ವಿಡಿಯೊದಲ್ಲಿ ಕಾಣಬಹುದು. ಸದ್ಯ ಈ ವಿಡಿಯೊ ನೋಡಿದವರ ಹೃದಯ ತುಂಬಿ ಬಂದಿದೆ. ನೀರಿಗಾಗಿ ಮಂಗ ಪಡುತ್ತಿರುವ ಕಷ್ಟ ನೋಡಿ ಅನೇಕರು ಮರುಗಿದ್ದಾರೆ.

ಇದನ್ನೂ ಓದಿ: Viral Video: ವಿಷ ಸೇವಿಸಿ ವಿಡಿಯೊ ರೆಕಾರ್ಡ್ ಮಾಡಿ ಯುವಕ ಆತ್ಮಹತ್ಯೆ; ಸಾವಿಗೆ ಕಾರಣವೇನು?

ʼʼಕೋತಿಗಳಿಗೆ ಬಾಯಾರಿಕೆ: ನೀರಿಗಾಗಿ ಅಡುಗೆ ಮನೆಯ ಕಿಟಕಿಗಳ ಮೂಲಕ ಮಂಗಗಳು ಲಗ್ಗೆ ಇಡುತ್ತಿವೆ. ಬೆಂಗಳೂರು ನೀರಿನ ಬಿಕ್ಕಟ್ಟು ಮನುಷ್ಯರಿಗಿಂತ ಪ್ರಾಣಿಗಳಿಗೆ ಹೆಚ್ಚು ಹೊಡೆತ ನೀಡಿದೆ. ಪ್ರಾಣಿ-ಪಕ್ಷಿಗಳಿಗೆ ಸಹಾಯ ಮಾಡಲು ನೀರನ್ನು ಸಂರಕ್ಷಿಸೋಣ” ಎಂಬ ಕ್ಯಾಪ್ಶನ್‌ ನೀಡಿ ವಿಡಿಯೊ ಶೇರ್‌ ಮಾಡಲಾಗಿದೆ. ಸದ್ಯ ಈ ಪೋಸ್ಟ್‌ ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.

Continue Reading

ವೈರಲ್ ನ್ಯೂಸ್

Viral Video: ಮಕ್ಕಳ ಮುಗ್ಧ ನಗುವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಶಿಕ್ಷಕಿ ಏನು ಮಾಡಿದ್ದಾರೆ ನೋಡಿ…

Viral Video: ಮಕ್ಕಳ ಮುಗ್ದ ನಗು ಯಾರಿಗೆ ಇಷ್ಟವಾಗಲ್ಲ ಹೇಳಿ. ಆ ನಗುವನ್ನು ಮೊಬೈಲ್ ಕೆಮರಾದಲ್ಲಿ ಸೆರೆ ಹಿಡಿಯಲು ತಮಿಳುನಾಡಿನ ಶಿಕ್ಷಕಿಯೊಬ್ಬರು ಮಾಡಿದ ಪ್ರಯತ್ನಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಹಾಗಿದ್ದರೆ ಆ ಟೀಚರ್ ಏನು ಮಾಡಿದ್ದಾರೆ ಎಂಬುದನ್ನು ನೀವು ನೋಡಿ.

VISTARANEWS.COM


on

By

Viral Video
Koo

ಸೇಲಂ: ಮಕ್ಕಳ ಮುಗ್ಧ ನಗುವನ್ನು ಸೆರೆ ಹಿಡಿಯಲು ಶಿಕ್ಷಕಿಯೊಬ್ಬರು (Teacher’s) ಮಾಡಿದ ಪ್ರಯತ್ನದ ವಿಡಿಯೊವೊಂದು (Viral Video) ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗಿದೆ. ಶಿಕ್ಷಕಿಯ ಕಾರ್ಯಕ್ಕೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ ಕೇಳಿ ಬಂದಿದೆ. ತಮಿಳುನಾಡಿನ (Tamilnadu) ಮಾಂಟೆಸ್ಸರಿ ಶಾಲೆಯ (Montessori school) ಶಿಕ್ಷಕಿಯೊಬ್ಬರು ತಮ್ಮ ತರಗತಿಯ ಮಕ್ಕಳ ವಿಡಿಯೊವನ್ನು ವಿಶಿಷ್ಟ ರೀತಿಯಲ್ಲಿ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸರಳ ಮತ್ತು ಸ್ಪರ್ಶದ ಶೀರ್ಷಿಕೆಯೊಂದಿಗೆ ಹಂಚಿಕೊಂಡಿರುವ ವಿಡಿಯೊದಲ್ಲಿ “ಈ ಮುದ್ದಾದ ಸ್ಮೈಲ್‌ಗಳಿಗಾಗಿ ಮಾತ್ರ” ಎಂದು ಹೇಳಲಾಗಿದೆ. ವಿಡಿಯೊದಲ್ಲಿ ಸಣ್ಣ ಮೆಟ್ಟಿಲುಗಳ ಮೇಲೆ ಪುಟ್ಟಪುಟ್ಟ ಮಕ್ಕಳು ಮತ್ತು ಶಿಕ್ಷಕರು ಕುಳಿತುಕೊಂಡಿರುತ್ತಾರೆ. ಈ ಅಮೂಲ್ಯ ಕ್ಷಣವನ್ನು ಸೆರೆಹಿಡಿಯಲು ಮತ್ತೊಬ್ಬ ಶಿಕ್ಷಕಿ ಬಳಸಿದ ಚತುರ ವಿಧಾನವೇ ಈ ವಿಡಿಯೊವನ್ನು ಮತ್ತಷ್ಟು ವಿಶೇಷಗೊಳಿಸಿದೆ.

ಸಾಂಪ್ರದಾಯಿಕ ವಿಧಾನದ ಬದಲಿಗೆ ಶಿಕ್ಷಕಿ ನೆಲದ ಮೇಲೆ ಮಲಗುತ್ತಾರೆ. ಇನ್ನೊಬ್ಬ ಶಿಕ್ಷಕಿ ಅವರನ್ನು ಎಳೆಯುತ್ತಾರೆ. ಇದನ್ನು ನೋಡಿ ಮಕ್ಕಳು ಸಂತೋಷದಿಂದ ನಗುತ್ತಾರೆ. ಮಕ್ಕಳ ಮುಗ್ದ ನಗುವನ್ನು ಸೆರೆ ಹಿಡಿಯಲು ಶಿಕ್ಷಕಿ ಸ್ವತಃ ಕ್ಯಾಮೆರಾ ಮೆನ್‌ನ ಕೆಲಸ ಮಾಡಿರುವುದು ಭಾರೀ ಶ್ಲಾಘನೆಗೆ ಕಾರಣವಾಗಿದೆ.

ಇದನ್ನೂ ಓದಿ: Viral Video: ವಿಷ ಸೇವಿಸಿ ವಿಡಿಯೊ ರೆಕಾರ್ಡ್ ಮಾಡಿ ಯುವಕ ಆತ್ಮಹತ್ಯೆ; ಸಾವಿಗೆ ಕಾರಣವೇನು?

ಕೆಲವು ದಿನಗಳ ಹಿಂದೆ ಈ ವಿಡಿಯೊವನ್ನು ಪೋಸ್ಟ್ ಮಾಡಿದ್ದು, ಅಂದಿನಿಂದ ಸುಮಾರು 19.2 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಸಾಕಷ್ಟು ಮಂದಿ ಪ್ರೀತಿ ತುಂಬಿದ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ.

ನೆಟ್ಟಿಗರೊಬ್ಬರು, ಶಿಕ್ಷಕರಿಗೆ ಹ್ಯಾಟ್ಸ್ ಆಫ್. ಮಕ್ಕಳ ನಗುವಿಗಾಗಿ ಮಾಡಿರುವ ಒಂದು ಸೆಕೆಂಡಿನ ಈ ವಿಡಿಯೊ ತುಂಬಾ ಸುಂದರವಾಗಿದೆ. ಶಿಕ್ಷಕರನ್ನು ನೋಡಿದ ಮಕ್ಕಳ ನಗು ಈ ವಿಡಿಯೊವನ್ನು ಮತ್ತಷ್ಟು ಸುಂದರಗೊಳಿಸಿದೆ ಎಂದು ಹೇಳಿದ್ದಾರೆ.


ಶೂಟಿಂಗ್ ಮಾಡುತ್ತಿರುವ ಮಹಿಳೆ ನಿಜವಾಗಿಯೂ ಶಿಕ್ಷಕಿಯೇ? ಹೌದಾದರೆ ನೀವೊಬ್ಬ ಸ್ವೀಟ್ ಟೀಚರ್ ಎಂದು ಮತ್ತೊಬ್ಬರು ಹೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಶಿಕ್ಷಕಿ, ಹೌದು, ನಾನೇ. ತುಂಬಾ ಧನ್ಯವಾದಗಳು ಎಂದು ಹೇಳಿದ್ದಾರೆ.
ಮತ್ತೊಬ್ಬರು ಕಾಮೆಂಟ್ ಮಾಡಿ, ನಾನು ಅಂತಹ ಶಿಕ್ಷಕರನ್ನು ಎಲ್ಲಿ ಪಡೆಯಬಹುದು ಎಂದು ಹೇಳಿದ್ದಾರೆ. ವರ್ಷದ ಅತ್ಯುತ್ತಮ ಶಿಕ್ಷಕ ಎಂದು ಇನ್ನೊಬ್ಬರು ಹೇಳಿದ್ದಾರೆ.

ಶಿಕ್ಷಕಿ ತಮಿಳುನಾಡಿನ ಸೇಲಂ ಮೂಲದವರಾಗಿದ್ದು, ವೃಕ್ಷ ಮಾಂಟೆಸ್ಸರಿ ಇಂಟರ್‌ನ್ಯಾಶನಲ್‌ನಲ್ಲಿ ಬೋಧಿಸುತ್ತಿದ್ದಾರೆ. ಅವರು ನಿಯಮಿತವಾಗಿ ತಮ್ಮ ವೈಯಕ್ತಿಕ ಇನ್ ಸ್ಟಾ ಗ್ರಾಮ್ ಮತ್ತು ಫೇಸ್ ಬುಕ್ ಪುಟಗಳಲ್ಲಿ ವಿವಿಧ ಮೆಹೆಂದಿ ವಿನ್ಯಾಸಗಳನ್ನು ಚಿತ್ರಿಸುತ್ತಿರುವ ವಿಡಿಯೊಗಳನ್ನು ಹಂಚಿಕೊಳ್ಳುತ್ತಾರೆ.

Continue Reading

ವೈರಲ್ ನ್ಯೂಸ್

Viral Video: ಸ್ಕೂಟರ್‌ನಲ್ಲೇ ಆನ್‌ಲೈನ್‌ ಮೀಟಿಂಗ್‌ ನಡೆಸಿದ ಮಹಿಳೆ; ಇದು ವರ್ಕ್‌ ಫ್ರಮ್‌ ಟ್ರಾಫಿಕ್‌ ಬ್ರೋ!

Viral Video: ಬೆಂಗಳೂರು ಟ್ರಾಫಿಕ್‌ ಎಂಬ ಹೆಸರು ಕೇಳಿದರೆ ಸಾಕು ಹಲವರ ಕುತೂಹಲ ಗರಿಗೆದರುತ್ತದೆ. ಯಾಕೆಂದರೆ ಬೆಂಗಳೂರು ಟ್ರಾಫಿಕ್‌ನಲ್ಲಿ ಹಲವು ಆಸಕ್ತಿದಾಯಕ ಸಂಗತಿಗಳು ಜರಗುತ್ತವೆ. ಒಂದಲ್ಲ ಒಂದು ವಿಶಿಷ್ಟ ಘಟನೆಗೆ ಬೆಂಗಳೂರು ಟ್ರಾಫಿಕ್‌ ಸಾಕ್ಷಿಯಾಗುತ್ತದೆ. ಇದೂ ಕೂಡ ಅಂತಹದ್ದೆ ಆಸಕ್ತಿದಾಯಕ ಘಟನೆ. ಟ್ರಾಫಿಕ್‌ನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಸ್ಕೂಟರ್‌ ಸವಾರ ಮಹಿಳೆಯೊಬ್ಬರು ಆನ್‌ಲೈನ್‌ ಮೀಟಿಂಗ್‌ ಅಟೆಂಡ್‌ ಆಗುತ್ತಾರೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

VISTARANEWS.COM


on

Viral Video
Koo

ಬೆಂಗಳೂರು: ಸಿಲಿಕಾನ್‌ ಸಿಟಿ, ಗಾರ್ಡನ್‌ ಸಿಟಿ, ಐಟಿ ಸಿಟಿ ಎಂದೆಲ್ಲ ಕರೆಯಿಸಿಕೊಳ್ಳುವ ಬೆಂಗಳೂರು ಬಹುತೇಕ ಎಲ್ಲರಿಗೂ ಪ್ರಿಯ. ಹೀಗೆ ಎಲ್ಲರ ನೆಚ್ಚಿನ ನಮ್ಮ ಬೆಂಗಳೂರು ಬಗ್ಗೆ ಹಲವರ ಆಕ್ಷೇಪ ಇರುವುದು ಟ್ರಾಫಿಕ್‌ ವಿಚಾರದಲ್ಲಿ. ಟ್ರಾಫಿಕ್‌ ಸಮಸ್ಯೆ ಬೆಂಗಳೂರಿಗರನ್ನು ಹೆಚ್ಚಿನ ಸಂದರ್ಭಗಳಲ್ಲಿ ಹೈರಾಣಾಗಿಸುತ್ತದೆ (Bengaluru Traffic). ಬೆಂಗಳೂರಿನ ಈ ಟ್ರಾಫಿಕ್‌ ಸಮಸ್ಯೆಗೆ ಪರಿಹಾರವೇ ಇಲ್ಲ ಎನ್ನುವಂತಾಗಿದೆ. ಬೆಂಗಳೂರು ಟ್ರಾಫಿಕ್‌ ಬಗ್ಗೆ ತಹೇವಾರಿ ಕಥೆ ಹುಟ್ಟಿಕೊಳ್ಳುತ್ತದೆ. ಟ್ರಾಫಿಕ್‌ಗೆ ಸಿಲುಕಿ ಅನೇಕ ವಿಶಿಷ್ಟ ಸಂಗತಿ ಜರಗುತ್ತವೆ. ಅದಕ್ಕೆ ತಕ್ಕ ಉದಾಹರಣೆ ಎನ್ನುವಂತಿದೆ ಈ ವೈರಲ್‌ ವಿಡಿಯೊ (Viral Video). ಅಷ್ಟಕ್ಕೂ ಈ ವಿಡಿಯೊದಲ್ಲಿ ಏನಿದೆ? ಇಲ್ಲಿದೆ ವಿವರ.

ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಂಡ ಸ್ಕೂಟರ್‌ ಚಲಾಯಿಸುತ್ತಿದ್ದ ಮಹಿಳೆಯೊಬ್ಬರು ಅಲ್ಲೇ ಆನ್‌ಲೈನ್‌ ಮೀಟಿಂಗ್‌ನಲ್ಲಿ ಭಾಗಿಯಾಗುತ್ತಾರೆ. ʼವರ್ಕ್‌ ಫ್ರಮ್‌ ಟ್ರಾಫಿಕ್‌ʼ ಎನ್ನುವ ಶೀರ್ಷಿಕೆಯಡಿ ವಿಡಿಯೊವನ್ನು ಶೇರ್‌ ಮಾಡಲಾಗಿದೆ. ಬೆಂಗಳೂರಿನಲ್ಲಿ ಇದು ಸಾಮಾನ್ಯ ಎಂದೂ ಬರೆಯಲಾಗಿದೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೊ ನೆಟ್ಟಿಗರ ಗಮನ ಸೆಳೆದಿದೆ.

ವಿಡಿಯೊದಲ್ಲಿ ಏನಿದೆ?

ಟ್ರಾಫಿಕ್‌ನಲ್ಲಿ ಸಿಲುಕಿಕೊಂಡ ಮಹಿಳೆ ಸ್ಕೂಟರ್‌ ಅನ್ನು ಒಂದು ಬದಿಗೆ ನಿಲ್ಲಿಸಿ ಆನ್‌ಲೈನ್‌ ಮೀಟಿಂಗ್‌ಗೆ ಹಾಜರಾಗುತ್ತಾರೆ. ಕ್ಯಾಮೆರಾವನ್ನು ಮಹಿಳೆಯ ಮೊಬೈಲ್‌ಗೆ ಝೂಮ್‌ ಮಾಡಿದಾಗ ಅವರು ಮೀಟಿಂಗ್‌ನಲ್ಲಿ ಭಾಗವಹಿಸಿರುವುದು ಸ್ಪಷ್ಟವಾಗುತ್ತದೆ. ಜತೆಗೆ ವಿಡಿಯೊ ಹಲವು ವಾಹನಗಳು ಸಾಲುಗಟ್ಟಿ ನಿಂತು ಟ್ರಾಫಿಕ್‌ ಜಾಮ್‌ ಆಗಿರುವುದನ್ನು ತೋರಿಸುತ್ತದೆ. ಮಹಿಳೆಗೆ ಕರ್ತವ್ಯ ಪ್ರಜ್ಞೆಗೆ ಹಲವರು ಶಬ್ಬಾಶ್‌ಗಿರಿ ತಿಳಿಸಿದ್ದಾರೆ.

ಆಧುನಿಕ ಯುಗದಲ್ಲಿ ವೈಯಕ್ತಿಕ ಬದುಕು ಮತ್ತು ಉದ್ಯೋಗವನ್ನು ಸಮತೋಲನಗೊಳಿಸಲೇಬೇಕಾದ ಅನಿವಾರ್ಯತೆಯನ್ನು ಇದು ಒತ್ತಿ ಹೇಳುತ್ತದೆ. ಜತೆಗೆ ಡಿಜಿಟಲ್‌ ಫ್ಲಾಟ್‌ಫಾರ್ಮ್‌ಗಳ ಮೇಲೆ ಹೆಚ್ಚುತ್ತಿರುವ ಅವಲಂಬನೆಯನ್ನೂ ಇದು ಪ್ರತಿನಿಧಿಸುತ್ತದೆ.

ಸ್ಕೂಟರ್‌ ರೈಡಿಂಗ್‌ ಮಾಡ್ತಾ ಲ್ಯಾಪ್‌ಟಾಪ್‌ನಲ್ಲಿ ವಿಡಿಯೊ ಕಾಲ್‌

ಈ ರೀತಿಯ ಘಟನೆ ಹಿಂದೆಯೂ ನಡೆದಿತ್ತು. ಕೆಲವು ದಿನಗಳ ಹಿಂದೆ ವ್ಯಕ್ತಿಯೊಬ್ಬರು ಸ್ಕೂಟರ್‌ ಓಡಿಸುತ್ತ ಲ್ಯಾಪ್‌ಟಾಪ್‌ನಲ್ಲಿ ವಿಡಿಯೊ ಕಾಲ್‌ ಮಾಡುತ್ತಿರುವ ವಿಡಿಯೊ ವೈರಲ್‌ ಆಗಿತ್ತು. ಟೆಕ್ಕಿಯಂತೆ ಕಾಣುವ ವ್ಯಕ್ತಿಯೊಬ್ಬರು ಬೆಂಗಳೂರಿನ ರಸ್ತೆಯಲ್ಲಿ ಸ್ಕೂಟರ್‌ ಓಡಿಸುತ್ತಿದ್ದಾರೆ. ಅವರ ಮುಂದುಗಡೆ ಲ್ಯಾಪ್‌ಟಾಪ್‌ ಓಪನ್‌ ಆಗಿದ್ದು, ವಿಡಿಯೊ ಕಾನ್ಫರೆನ್ಸ್‌ ನಡೆಯುತ್ತಿದೆ. ಅದರಲ್ಲಿ ಈ ವ್ಯಕ್ತಿಯೂ ಭಾಗಿಯಾಗಿದ್ದಾರೆ ಎಂಬುದು ಗೊತ್ತಾಗುತ್ತದೆ. ಬೆಂಗಳೂರಿನ ವಾಹನನಿಬಿಡ ರಸ್ತೆಯಲ್ಲಿ ಸ್ಕೂಟರ್‌ ಚಲಾವಣೆಯನ್ನೂ ಕಚೇರಿ ಕೆಲಸವನ್ನೂ ಬ್ಯಾಲೆನ್ಸ್‌ ಮಾಡುತ್ತಿರುವ ಈ ವ್ಯಕ್ತಿಯ ಚಾಕಚಕ್ಯತೆ ಹಲವರಲ್ಲಿ ಬೆರಗು ಮೂಡಿಸಿತ್ತು. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಉಲ್ಲಾಸದ, ಟೀಕೆಯ, ವಿನೋದದ ಪ್ರತಿಕ್ರಿಯೆಗಳನ್ನು ಹುಟ್ಟು ಹಾಕಿತ್ತು. ಕೆಲವು ಬಳಕೆದಾರರು ರಸ್ತೆ ಸುರಕ್ಷತೆ ಮತ್ತು ಕೆಲಸದ ಒತ್ತಡದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: Bengaluru Traffic: ಟ್ರಾಫಿಕ್‌ ಚಕ್ರವ್ಯೂಹಕ್ಕೆ ಸಿಲುಕಿ 12 ಕಿ.ಮೀ ನಡೆದು ಮನೆ ತಲುಪಿದ ವ್ಯಕ್ತಿ!

ಅದಕ್ಕೂ ಹಿಂದೆ ಆನ್‌ಲೈನ್‌ ಫುಡ್‌ ಡೆಲಿವರಿ ಮಾಡುವವರು ಬೆಂಗಳೂರಿನ ಟ್ರಾಫಿಕ್‌ನಲ್ಲೇ ಆರ್ಡರ್‌ ಮಾಡಿದ ವ್ಯಕ್ತಿಗೆ ಆಹಾರ ವಿತರಿಸಿ ಸುದ್ದಿಯಾಗಿದ್ದರು. ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿಕೊಂಡಿದ್ದ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ರಿಶಿವತ್ಸ್‌ ಡೊಮಿನೋಸ್‌ನಿಂದ ಆಹಾರ ಆರ್ಡರ್‌ ಮಾಡಿದ್ದರು. ಅವರ ಲೈವ್‌ ಲೊಕೇಷನ್‌ ಟ್ರ್ಯಾಕ್‌ ಮಾಡಿದ ಫುಡ್‌ ಡೆಲಿವರಿ ಏಜೆಂಟ್‌ಗಳು ಕಾರಿನ ಬಳಿಗೇ ಬಂದು ಡೆಲಿವರಿ ಮಾಡಿದ್ದರು. ರಿಶಿವತ್ಸ್‌ ಟ್ರಾಫಿಕ್‌ ಜಾಮ್‌ನಲ್ಲಿ ಸಿಕ್ಕಿ ಹಾಕಿಕೊಂಡಾಗ ಡೊಮಿನೋಸ್‌ನ ಏಜೆಂಟ್‌ಗಳಿಬ್ಬರು ಸ್ಕೂಟರ್‌ನಲ್ಲಿ ಆಗಮಿಸಿದ್ದರು. ಬಳಿಕ ಅವರು ತಮ್ಮ ವಾಹನವನ್ನು ರಸ್ತೆ ಬದಿ ನಿಲ್ಲಿ ಕಾರಿನ ಬಳಿಗೆ ಬಂದು ಆರ್ಡರ್‌ ನೀಡಿದ್ದರು. ಈ ದೃಶ್ಯ ವೈರಲ್‌ ಆಗಿತ್ತು.

Continue Reading

ವೈರಲ್ ನ್ಯೂಸ್

Viral Video: ವಿಷ ಸೇವಿಸಿ ವಿಡಿಯೊ ರೆಕಾರ್ಡ್ ಮಾಡಿ ಯುವಕ ಆತ್ಮಹತ್ಯೆ; ಸಾವಿಗೆ ಕಾರಣವೇನು?

Viral Video: ಹಿಮಾಚಲ ಪ್ರದೇಶದ ಹಮೀರ್ಪುರದಲ್ಲಿ ಯುವಕನೊಬ್ಬ ವಿಷಯುಕ್ತ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾಯುವ ಮುನ್ನ ಘಟನೆಯನ್ನು ಚಿತ್ರೀಕರಿಸಿ ಆತ್ಮಹತ್ಯೆಯ ಕಾರಣವನ್ನು ವಿವರಿಸಿದ್ದಾನೆ. ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಗ್ರಾಮದ ಮುಖ್ಯಸ್ಥ ಮತ್ತು ಆತನ ಸಹಚರರ ಕಿರುಕುಳಕ್ಕೆ ಹೇಗೆ ಬಲಿಯಾದೆ ಎನ್ನುವುದನ್ನು ವಿವರಿಸಿದ್ದಾನೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

VISTARANEWS.COM


on

Viral Video
Koo

‍ಧರ್ಮಶಾಲಾ: ಬೆಚ್ಚಿ ಬೀಳಿಸುವ ಘಟನೆಯೊಂದರಲ್ಲಿ ಯುವಕನೊಬ್ಬ ವಿಷಯುಕ್ತ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾಯುವ ಮುನ್ನ ಘಟನೆಯನ್ನು ಚಿತ್ರೀಕರಿಸಿ ಆತ್ಮಹತ್ಯೆಯ ಕಾರಣವನ್ನು ವಿವರಿಸಿದ್ದಾನೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ (Viral Video). ಹಿಮಾಚಲ ಪ್ರದೇಶದ ಹಮೀರ್ಪುರದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಮೃತನನ್ನು 22 ವರ್ಷದ ಸುನಿಲ್ ತಿವಾರಿ ಅಲಿಯಾಸ್ ಛೋಟು ಎಂದು ಗುರುತಿಸಲಾಗಿದೆ.

ಸಾಯುವ ಮೊದಲು ಸುನಿಲ್ ತಿವಾರಿ 1 ನಿಮಿಷ 22 ಸೆಕೆಂಡುಗಳ ವಿಡಿಯೊ ರೆಕಾರ್ಡ್ ಮಾಡಿದ್ದಾನೆ. ಅದರಲ್ಲಿ ಆತ ಗ್ರಾಮದ ಮುಖ್ಯಸ್ಥ ಮತ್ತು ಆತನ ಸಹಚರರ ಕಿರುಕುಳಕ್ಕೆ ಹೇಗೆ ಬಲಿಯಾದೆ ಎನ್ನುವುದನ್ನು ವಿವರಿಸಿದ್ದಾನೆ. ಸದ್ಯ ಈ ವಿಡಿಯೊ ನೋಡಿದ ನೆಟ್ಟಿಗರು ಆಘಾತ ವ್ಯಕ್ತಪಡಿಸಿದ್ದಾರೆ.

ವಿಡಿಯೊದಲ್ಲಿ ಏನಿದೆ?

ಹೊಲದಲ್ಲಿ ಕುಳಿತಿರುವ ಸುನಿಲ್ ತಿವಾರಿಯನ್ನು ತೋರಿಸುವ ಮೂಲಕ ವಿಡಿಯೊ ಆರಂಭವಾಗುತ್ತದೆ. ಬಳಿಕ ಆತ ವಿಷದ ಬಾಟಲಿಯನ್ನು ಕ್ಯಾಮೆರಾದ ಎದುರು ಹಿಡಿಯುತ್ತ, ಅಳುತ್ತ ಮಾತನಾಡುತ್ತಾನೆ. ಗ್ರಾಮದ ಮುಖ್ಯಸ್ಥ ಮತ್ತು ಅವನ ಸಹಚರರು ಹೇಗೆ ಕಿರುಕುಳ ನೀಡಿದರು ಎನ್ನುವುದನ್ನು ವಿವರಿಸುತ್ತಾನೆ. ಜತೆಗೆ ವಿಷದ ಮಾತ್ರೆ ಸೇವಿಸಿರುವುದಾಗಿ ತಿಳಿಸಿದ್ದಾನೆ. ಸಾಯಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದರ ಬಗ್ಗೆ ಗೊತ್ತಿಲ್ಲ ಎಂದೂ ಹೇಳುತ್ತಾನೆ.

“ಗ್ರಾಮದ ಮುಖ್ಯಸ್ಥ ಮತ್ತು ಅವನ ಸಹಚರರು ನನಗೆ ಚಿತ್ರಹಿಂಸೆ ನೀಡಿದ್ದಾರೆ ಮತ್ತು ಅದಕ್ಕಾಗಿಯೇ ಇಂದು ನಾನು ನನ್ನ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದ್ದೇನೆ. ನಾನು ಈ ವಿಷವನ್ನು ಸೇವಿಸಿದ್ದೇನೆ ಮತ್ತು ನಾನು ಎಷ್ಟು ಹೊತ್ತು ಬದುಕುತ್ತೇನೆ ಎಂಬುದು ನನಗೆ ತಿಳಿದಿಲ್ಲ. ನಾನು 5 ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದೇನೆ. ನಾನು ಇಂದು ಹೊರಡುತ್ತಿದ್ದೇನೆ. ನಿಮ್ಮ ಪ್ರಾರ್ಥನೆಯಲ್ಲಿ ನನ್ನನ್ನು ನೆನಪಿಸಿಕೊಳ್ಳಿ. ನಾನು ನಿಮ್ಮನ್ನು ಮತ್ತೆ ಎಂದಿಗೂ ಭೇಟಿಯಾಗುವುದಿಲ್ಲʼʼ ಎಂದು ಸುನಿಲ್‌ ಹೇಳಿದ್ದಾನೆ. ಈ ವಿಡಿಯೊವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಲಾಗಿದೆ.

ವರದಿಗಳ ಪ್ರಕಾರ, ಸುನಿಲ್ ಅವರನ್ನು ಬುಧವಾರ ಸಂಜೆ ಗಂಭೀರ ಸ್ಥಿತಿಯಲ್ಲಿ ಝಾನ್ಸಿಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ. ʼʼಕೆಲವು ವ್ಯಕ್ತಿಗಳೊಂದಿಗಿನ ವಿವಾದದ ನಂತರ ನನ್ನ ಸಹೋದರ ಸುನಿಲ್ ವಿಷ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆʼʼ ಎಂದು ಆರೋಪಿಸಿ ಸುನಿಲ್ ಸಹೋದರ ಶೀತಲ್ ಬುಧವಾರ ಮಜ್ಗವಾನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: Viral News: ತಂಗಿಗೆ ಟಿವಿ ಗಿಫ್ಟ್‌ ಕೊಡಲು ಮುಂದಾದ ಪತಿಯನ್ನು ಕೊಲ್ಲಿಸಿದ ಪತ್ನಿ!

ಇಬ್ಬರ ಬಂಧನ

ಸೋಷಿಯಲ್‌ ಮೀಡಿಯಾದಲ್ಲಿ ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸುನಿಲ್‌ ತನ್ನ ವಿಡಿಯೊದಲ್ಲಿ ಉಲ್ಲೇಖಿಸಿರುವ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬರೈಲ್ ಗ್ರಾಮದ ಮುಖ್ಯಸ್ಥ ದಿನೇಶ್, ರಾಜ್ ಕುಮಾರ್, ಪ್ರಶಾಂತ್, ಧನ್ನಿ ಮತ್ತು ಆಯುಷ್ ವಿರುದ್ಧ ಐಪಿಸಿ ಸೆಕ್ಷನ್ 30 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಏಪ್ರಿಲ್ 18ರಂದು ಹರಿದ್ವಾರ ಬಾಬಾ ಗ್ರಾಮದ ಹೊರಗೆ ಸುನಿಲ್ ಮತ್ತು ಧನ್ನಿ ನಡುವೆ ವಾಗ್ವಾದ ನಡೆದಿತ್ತು. ಪೊಲೀಸರು ಘಟನಾ ಸ್ಥಳಕ್ಕೆ ಬಂದಾಗ ಸುನಿಲ್ ತನ್ನ ಸಂಬಂಧಿಕರೊಂದಿಗೆ ಹೊರಟು ಹೋಗಿದ್ದ. ಬಳಿಕ ಎರಡೂ ಕಡೆಯವರಿಗೆ ಠಾಣೆಗೆ ಬರಲು ತಿಳಿಸಲಾಗಿತ್ತು. ಆದರೆ ಹಾಜರಾಗಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

Continue Reading
Advertisement
Lok sabha Election
ಪ್ರಮುಖ ಸುದ್ದಿ2 hours ago

ವಿಸ್ತಾರ ಸಂಪಾದಕೀಯ: ಈ ದಿನ ನಮ್ಮದು, ನಮ್ಮ ಅಧಿಕಾರ ಚಲಾಯಿಸೋಣ

food
ಕರ್ನಾಟಕ2 hours ago

Food Poisoning : ಮದುವೆ ಮನೆ ಊಟ ತಿಂದ ನೂರಾರು ಮಂದಿ ಅಸ್ವಸ್ಥ; ಆಸ್ಪತ್ರೆಯಲ್ಲಿ ಹಾಹಾಕಾರ

PM Narendra Modi will visit Sirsi on April 28
ಉತ್ತರ ಕನ್ನಡ2 hours ago

Lok Sabha Election 2024: ಶಿರಸಿಯಲ್ಲಿ ಏಪ್ರಿಲ್‌ 28ರಂದು ಪ್ರಧಾನಿ ನರೇಂದ್ರ ಮೋದಿ ಸಮಾವೇಶ

Bus Driver attacked
ಕರ್ನಾಟಕ2 hours ago

Bus driver Attacked : ಮುಸ್ಲಿಮ್ ಯುವಕರಿಂದ ಬಸ್​ ಚಾಲಕನ ಮೇಲೆ ಹಲ್ಲೆ, ನೌಕರರಿಂದ ​ ಠಾಣೆ ಮುಂಭಾಗ ಧರಣಿ

IPL 2024
ಪ್ರಮುಖ ಸುದ್ದಿ3 hours ago

IPL 2024 : ಆರ್​​ಸಿಬಿಗೆ ಸಿಕ್ಕಿತು ಕೊನೆಗೂ ಒಂದು ವಿಜಯ; ಎಸ್​ಆರ್​ಎಚ್​ ವಿರುದ್ಧ 35 ರನ್ ಗೆಲುವು

Viral News
ವೈರಲ್ ನ್ಯೂಸ್3 hours ago

Viral News: ವಾಟರ್‌ ಪ್ಯೂರಿಫೈಯರ್‌ನಿಂದ ನೀರು ಕುಡಿದ ಬುದ್ಧಿವಂತ ಮಂಗ; ವಿಡಿಯೊ ನೀವೂ ನೋಡಿ

lok sabha Election
ಪ್ರಮುಖ ಸುದ್ದಿ3 hours ago

lok sabha election : ಒಂದು ವರ್ಷದ ಕೂಸಿನೊಂದಿಗೆ ಚುನಾವಣಾ ಕರ್ತವ್ಯಕ್ಕೆ ಬಂದ ಪೊಲೀಸ್​​!

Car Accident
ಪ್ರಮುಖ ಸುದ್ದಿ3 hours ago

Car Accident : ಟೈರ್​ ಬ್ಲಾಸ್ಟ್​ ಆಗಿ ಬೈಕ್​ಗೆ ಗುದ್ದಿ ಪಲ್ಟಿಯಾದ ಕಾರು; ಇಬ್ಬರ ದುರ್ಮರಣ

Narendra Modi
ದೇಶ3 hours ago

Narendra Modi: ಪ್ರಧಾನಿ ಮೋದಿಗೆ ಜಿ 7 ಶೃಂಗಸಭೆಯ ಆಹ್ವಾನ ನೀಡಿದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ

khalistan movement
ಪ್ರಮುಖ ಸುದ್ದಿ4 hours ago

khalistan Movement : ಲಂಡನ್​ ಭಾರತ ಹೈಕಮಿಷನ್​ ಮೇಲೆ ದಾಳಿ ಮಾಡಿದ್ದ ಖಲಿಸ್ತಾನಿ ಉಗ್ರ ಎನ್​ಐಎ ವಶಕ್ಕೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder Case in hubblli
ಹುಬ್ಬಳ್ಳಿ10 hours ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ10 hours ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ13 hours ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 202415 hours ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ2 days ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು3 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ3 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು4 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET 2024 Exam
ಬೆಂಗಳೂರು4 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

ಟ್ರೆಂಡಿಂಗ್‌