Viral Video: ನಡೆಯೋದನ್ನು ಕಲಿಯೋ ಎಂದರೆ ಡ್ಯಾನ್ಸ್ ಮಾಡಿ ತೋರಿಸಿದ ಪುಟಾಣಿ; ಈ ಮುದ್ದಾದ ವಿಡಿಯೋಗೆ ಮನಸೋಲದವರಿಲ್ಲ - Vistara News

ವೈರಲ್ ನ್ಯೂಸ್

Viral Video: ನಡೆಯೋದನ್ನು ಕಲಿಯೋ ಎಂದರೆ ಡ್ಯಾನ್ಸ್ ಮಾಡಿ ತೋರಿಸಿದ ಪುಟಾಣಿ; ಈ ಮುದ್ದಾದ ವಿಡಿಯೋಗೆ ಮನಸೋಲದವರಿಲ್ಲ

ನಡೆದಾಡುವುದಕ್ಕೆ ಕಲಿಯುವ ಮಗುವೊಂದು ನಡೆಯುವಾಗಲೇ ನೃತ್ಯ ಮಾಡುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಪುಟ್ಟ ಮಕ್ಕಳು ನಡೆದಾಡುವುದನ್ನು ಕಲಿಯುವ ಹಲವಾರು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗುತ್ತಿರುತ್ತದೆ. ಆದರೆ ಈ ವಿಡಿಯೊ ಎಲ್ಲಕ್ಕಿಂತ ವಿಶೇಷ. ಏಕೆಂದರೆ ಇಲ್ಲಿ ಮಗು ನಡೆಯೋದನ್ನು ಕಲಿಯುವುದು ಬಿಟ್ಟು ಮಾಡಿರುವ ಕೆಲಸವೇ ನಿಮಗೆ ನಗು ತರಿಸುತ್ತದೆ.

ಇದನ್ನೂ ಓದಿ: Viral News: ಬಹಳ ವಿಶೇಷವಾಗಿತ್ತು ಕರೀನಾ ಮಗನ ಬರ್ತ್ ಡೇ ಕೇಕ್; ಇಲ್ಲಿದೆ ನೋಡಿ ವಿಶೇಷ ಫೋಟೋ

ಮಹಿಳೆಯೊಬ್ಬರು ಮಗುವನ್ನು ಹಿಡಿದು ಕುಳಿತಿದ್ದಾರೆ. ನಡೆದಾಡುವುದಕ್ಕೆ ಕಲಿಯಲಿ ಎಂದು ಕೈ ಬಿಟ್ಟು ಮುಂದೆ ಕಳಿಸುತ್ತಾರೆ. ಒಂದೆರೆಡು ಹೆಜ್ಜೆ ಇಡುವ ಮಗು ಅಲ್ಲಿಯೇ ನಿಂತು ನೃತ್ಯ ಮಾಡುವುದಕ್ಕೆ ಆರಂಭಿಸಿಬಿಡುತ್ತದೆ. ಅದನ್ನು ಕಂಡು ಆ ಮಹಿಳೆ ಜೋರಾಗಿ ನಗಲಾರಂಭಿಸುತ್ತದೆ. ಇದು ವೈರಲ್ ವಿಡಿಯೊದಲ್ಲಿರುವ ದೃಶ್ಯ.

ಈ ವಿಡಿಯೊವನ್ನು ಆ ಮಗುವಿನ ತಾಯಿಯಾದ ಅಮಂಡಾ ರಸ್ಸೆಲ್ ಅವರು ಕಳೆದ ವರ್ಷವೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಆದರೆ ಇದೀಗ ಅದೇ ವಿಡಿಯೊವನ್ನು ಪತ್ರಕರ್ತೆ ಮೇರಿಯಾ ಶ್ರೈವರ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದ ತುಂಬೆಲ್ಲ ಹರಿದಾಡಿದ್ದು ವೈರಲ್ ಆಗಿದೆ. ಲಕ್ಷಾಂತರ ಮಂದಿ ವಿಡಿಯೊ ನೋಡಿ ಮೆಚ್ಚುಗೆ ವ್ಯಕ್ತಪಡಿಸಲಾರಂಭಿಸಿದ್ದಾರೆ.

ಇದನ್ನೂ ಓದಿ: Viral Video: ಇಂಗ್ಲಿಷ್‌ನಲ್ಲಿ ಮಾತನಾಡಿದ ರೈತನನ್ನು ತರಾಟೆಗೆ ತೆಗೆದುಕೊಂಡ ಬಿಹಾರ ಸಿಎಂ ನಿತೀಶ್ ಕುಮಾರ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Aadhaar Crads For Dog: ದೆಹಲಿಯಲ್ಲಿ ನಾಯಿಗಳಿಗೂ ಬಂತು ಆಧಾರ್ ಕಾರ್ಡ್!

Aadhaar Crads For Dog ಜನರು ತಮ್ಮ ಆಧಾರ್ ಕಾರ್ಡ್ ಗಳನ್ನು ಪಡೆಯಲು ಸೈಬರ್ ಸೆಂಟರ್, ಸರ್ಕಾರಿ ಕಚೇರಿಗಳ ಮುಂದೆ ಕ್ಯೂ ನಿಲ್ಲುತ್ತಾರೆ. ಆದರೆ ಇದೀಗ ನಾಯಿಗಳು ಆಧಾರ್ ಕಾರ್ಡ್ ಹೊಂದಿರಬೇಕು ಎಂಬ ನಿಯಮ ಜಾರಿಗೆ ಬಂದಿದೆ.

VISTARANEWS.COM


on

Aadhaar Crads For Dog
Koo

ದೆಹಲಿ: ಸಾಮಾನ್ಯವಾಗಿ ಜನಸಾಮಾನ್ಯರು ಆಧಾರ್ ಕಾರ್ಡ್ ಗಳನ್ನು ಕಡ್ಡಾಯವಾಗಿ ಹೊಂದಿರಲೇಬೇಕು ಎಂಬ ನಿಯಮ ದೇಶದಾದ್ಯಂತ ಜಾರಿಯಲ್ಲಿದೆ. ಹಾಗಾಗಿ ಜನರು ತಮ್ಮ ಆಧಾರ್ ಕಾರ್ಡ್ ಗಳನ್ನು ಪಡೆಯಲು ಸೈಬರ್ ಸೆಂಟರ್, ಸರ್ಕಾರಿ ಕಚೇರಿಗಳ ಮುಂದೆ ಕ್ಯೂ ನಿಲ್ಲುತ್ತಾರೆ. ಆದರೆ ಇದೀಗ ನಾಯಿಗಳು ಆಧಾರ್ ಕಾರ್ಡ್ (Aadhaar Crads For Dog) ಹೊಂದಿರಬೇಕು ಎಂಬ ನಿಯಮ ಜಾರಿಗೆ ಬಂದಿದೆ.

ಹೌದು. ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ನಾಯಿಗಳಿಗೂ ಆಧಾರ್ ಕಾರ್ಡ್ ಅನ್ನು ನೀಡಲಾಗಿದೆ. ದಾರಿತಪ್ಪಿದ ನಾಯಿಗಳನ್ನು ರಕ್ಷಿಸಲು ಮತ್ತು ಅವುಗಳನ್ನು ಸ್ಥಳಾಂತರ ಮಾಡಲು ಎನ್ ಜಿಓ ಈ ಕ್ರಮಗಳನ್ನು ಜಾರಿಗೆ ತಂದಿದೆ. ಈಗಾಗಲೇ ದೆಹಲಿಯಲ್ಲಿ 100 ನಾಯಿಗಳಿಗೆ ತಮ್ಮದೇ ಆದ ಆಧಾರ್ ಕಾರ್ಡ್ ಅನ್ನು ನೀಡಲಾಗಿದೆ ಎಂಬುದಾಗಿ ತಿಳಿದುಬಂದಿದೆ.

ಮಾಧ್ಯಮದ ವರದಿ ಪ್ರಕಾರ ಈ 100 ನಾಯಿಗಳು ದೆಹಲಿಯ ಟರ್ಮಿನಲ್ 1 ವಿಮಾನ ನಿಲ್ದಾಣ, ಇಂಡಿಯಾ ಗೇಟ್ ಮತ್ತು ಪ್ರಾಣಿ ಕಾರ್ಯಕರ್ತೆ ಮಾನವಿ ರೈ ನಡೆಸುತ್ತಿರುವ ದೆಹಲಿಯ ನಾಯಿ ಆಶ್ರಯ ಸೇರಿದಂತೆ ವಿವಿಧ ಸ್ಥಳಗಳಿಗೆ ಸೇರಿವೆ ಎನ್ನಲಾಗಿದೆ.

ಏಪ್ರಿಲ್ 27ರಂದು ನಾಯಿಗಳಿಗೆ ಆಧಾರ್ ಕಾರ್ಡ್ ನೀಡುವ ಕ್ರಮಕ್ಕೆ ಚಾಲನೆ ನೀಡಿದ್ದು, ಇಂದು ಮುಂಜಾನೆಯಿಂದ ಈ ಕೆಲಸ ಪ್ರಾರಂಭವಾಗಿದೆ. ಇದಕ್ಕೆ ಸಂಬಂಧಪಟ್ಟ ನಾಯಿಗಳಿಗೆ ಆಧಾರ್ ಕಾರ್ಡ್ ಟ್ಯಾಗ್ ಮಾಡಲಾಗಿದೆ. ಈ ಬಗ್ಗೆ ಮಾತನಾಡಿದ ಪ್ರಾಣಿ ಕಾರ್ಯಕರ್ತೆ ಮಾನವಿ ರೈ ಅವರು ನಾಯಿಗಳಿಗೆ ಈ ಆಧಾರ್ ಕಾರ್ಡ್ ಜೀವಸೆಲೆ ಎಂದು ತಿಳಿಸಿದ್ದಾರೆ. “ಇಂದು ಈ ಕ್ಯೂಆರ್ ಆಧಾರಿತ ಟ್ಯಾಗ್ ಗಳು ನಮ್ಮ ನಾಯಿಗಳಿಗೆ ವಿಶೇಷವಾಗಿ ಸಂಕಷ್ಟದ ಸಮಯದಲ್ಲಿ ಜೀವಸೆಲೆಯಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಲು ನನಗೆ ಖುಷಿಯಾಗುತ್ತಿದೆ” ಎಂದು ಅವರು ಹೇಳಿದ್ದಾರೆ.

ನಾಯಿಗಳಿಗೆ ನೀಡಿದ ಆಧಾರ್ ಕಾರ್ಡ್ ಕ್ಯೂ ಆರ್ ಆಧಾರಿತವಾಗಿದೆ. ಇದನ್ನು Pawfriend.in ಎಂಬ ಎನ್ ಜಿಒ ಆವಿಷ್ಕಾರ ಮಾಡಿದೆ. ಕಂಪೆನಿಯ ಪ್ರಕಾರ, ಬೀದಿ ನಾಯಿಗಳ ಆರೈಕೆಗೆ ಇದು ಉತ್ತಮ ಪರಿಹಾರವಾಗಿದೆ. ಇದು ಮೈಕ್ರೋಚಿಪ್ ಗಳನ್ನು ಒಳಗೊಂಡಿದ್ದು, ಈ ಟ್ಯಾಗ್ ನಲ್ಲಿರುವ ಕ್ಯೂಆರ್ ಕೋಡ್ ಅನ್ನು ಯಾರಾದರೂ ಸ್ಕ್ಯಾನ್ ಮಾಡಿದರೆ ಆ ನಾಯಿಗಳ ಬಗ್ಗೆ ವಿವರಗಳು ಮತ್ತು ತುರ್ತು ಸಂಪರ್ಕಗಳು ಸೇರಿದಂತೆ ಪ್ರಮುಖ ಮಾಹಿತಿಯನ್ನು ಬಹಿರಂಗಪಡಿಸುತ್ತದೆ. ಇದರಿಂದ ಕಳೆದುಹೋದ ನಾಯಿಗಳನ್ನು ಅವುಗಳ ಯಜಮಾನನೊಂದಿಗೆ ಸೇರಿಸಲು ಸಹಾಯ ಮಾಡುತ್ತದೆಯಂತೆ.

ಇದನ್ನೂ ಓದಿ:Wedding Eye Makeup Tips: ಮದುವೆಯಲ್ಲಿ ಮದುಮಗಳ ಐ ಮೇಕಪ್‌ಗೆ 5 ಸಿಂಪಲ್‌ ಸೂತ್ರ

Pawfriend.inನ ಸ್ಥಾಪಕ ಅಕ್ಷಯ್ ರಿದ್ಲಾನ್ , ತಮ್ಮ ವ್ಯಾಪ್ತಿಯನ್ನು ವಿಸ್ತರಿಸುವ ಸಂಸ್ಥೆಯ ಬದ್ಧತೆಯನ್ನು ಎತ್ತಿ ತೋರಿಸಿದರು. ಈ ಬಗ್ಗೆ ಮಾತನಾಡಿದ ಅವರು, “ನಾವು ಭಾರತದಾದ್ಯಂತ ಸರಿಸುಮಾರು 6350 ಟ್ಯಾಗ್ ಗಳನ್ನು ವಿತರಿಸಿದ್ದೇವೆ ಮತ್ತು ವರ್ಷದೊಳಗೆ ಇದನ್ನು ಹತ್ತು ಪಟ್ಟು ಹೆಚ್ಚಿಸುವ ಗುರಿ ಹೊಂದಿದ್ದೇವೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಬೀದಿ ನಾಯಿಗಳ ದಾಳಿ ಮಾತ್ರವಲ್ಲದೇ ಸಾಕು ನಾಯಿಗಳು ದಾಳಿ ಮಾಡುತ್ತಿವೆ. ಅಲ್ಲದೇ ದೆಹಲಿಯಲ್ಲಿ ಕೆಲವರು ಪಿಟ್ ಬುಲ್ಡಾ ಗ್ ಗಳನ್ನು ಸಾಕಿದ್ದು, ಅವುಗಳ ದಾಳಿ ಮಾಡುತ್ತಿರುವ ವಿಡಿಯೋ ನೋಡಿದ ಅಧಿಕಾರಿಗಳು ಇನ್ನು ಮುಂದೆ ಈ ತಳಿಯ ನಾಯಿಗಳನ್ನು ಸಾಕಬಾರದು ಎಂದು ಆದೇಶ ಹೊರಡಿಸಿದ್ದಾರೆ. ಹಾಗೇ ಇನ್ನೂ ಕೆಲವು ತಳಿಗಳ ನಾಯಿಗಳನ್ನು ಸಹ ನಿಷೇಧಿಸಿದ್ದಾರೆ.

Continue Reading

ದೇಶ

Vande Bharat Metro: ಮೊದಲ ವಂದೇ ಭಾರತ್‌ ಮೆಟ್ರೋ ಸಂಚಾರಕ್ಕೆ ಸಿದ್ಧ; ಇಲ್ಲಿದೆ ವಿಡಿಯೊ

Vande Bharat Metro: ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸದ್ಯ ಭಾರತದಲ್ಲಿ ಸಂಪರ್ಕ ಕ್ರಾಂತಿಯನ್ನೇ ಉಂಟು ಮಾಡಿದೆ. ಇದೀಗ ವಂದೇ ಭಾರತ್‌ ಮೆಟ್ರೋ ಸರದಿ. ಹೌದು ದೇಶೀಯವಾಗಿ ನಿರ್ಮಿಸಲಾಗುತ್ತಿರುವ ವಂದೇ ಭಾರತ್‌ ಮೆಟ್ರೋದ ಬೋಗಿಗಳನ್ನು ಪಂಜಾಬ್‌ನ ಕಪುರ್ಥಾಲಾ ದ ರೈಲ್ವೆ ಕೋಚ್ ಫ್ಯಾಕ್ಟರಿಯಲ್ಲಿ ನಿರ್ಮಿಸಲಾಗುತ್ತಿದೆ. ಜುಲೈಯಲ್ಲಿ ಈ ಮೆಟ್ರೋಸ ಪರೀಕ್ಷಾರ್ಥ ಸಂಚಾರ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಈ ಮೆಟ್ರೋದ ವಿಡಿಯೊ ಹೊರ ಬಿಡಲಾಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಮೆಟ್ರೋ ಹೇಗಿದೆ? ನೀವೂ ನೋಡಿ.

VISTARANEWS.COM


on

Vande Bharat Metro
Koo

ನವದೆಹಲಿ: ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು-ಇದು ಸದ್ಯ ಭಾರತದಲ್ಲಿ ಸಂಪರ್ಕ ಕ್ರಾಂತಿಯನ್ನೇ ಉಂಟು ಮಾಡಿದೆ. ಆರಂಭವಾಗಿ ಕೆಲವೇ ದಿನಗಳಲ್ಲಿ ಜನ ಮನ ಗೆದ್ದಿದೆ. ಇದೇ ಯಶಸ್ಸಿನಿಂದ ಸ್ಫೂರ್ತಿ ಪಡೆದು ವಂದೇ ಭಾರತ್‌ ಮೆಟ್ರೋ (Vande Bharat Metro) ಸಿದ್ಧಪಡಿಸಲಾಗುತ್ತಿದ್ದು, ಜುಲೈ ವೇಳೆಗೆ ಪರೀಕ್ಷಾರ್ಥ ಓಡಾಟ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಪಂಜಾಬ್‌ನ ಕಪುರ್ಥಾಲಾ (Punjab’s Kapurthala)ದ ರೈಲ್ವೆ ಕೋಚ್ ಫ್ಯಾಕ್ಟರಿಯಲ್ಲಿ ವಂದೇ ಭಾರತ್ ಮೆಟ್ರೋದ ಬೋಗಿಗಳನ್ನು ನಿರ್ಮಿಸಲಾಗುತ್ತದೆ. ಸದ್ಯ ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಗಮನ ಸೆಳೆಯುತ್ತಿದೆ (Viral Video).

ಮೊದಲ ಹಂತದಲ್ಲಿ 50 ವಂದೇ ಭಾರತ್ ಮೆಟ್ರೋ ರೈಲುಗಳನ್ನು ನಿರ್ಮಾಣ ಮಾಡಲಾಗುತ್ತದೆ ಮತ್ತು ಕ್ರಮೇಣ ಸಂಖ್ಯೆಯನ್ನು 400ಕ್ಕೆ ಏರಿಸಲಾಗುವುದು ಎಂದು ರೈಲ್ವೆ ಮೂಲಗಳು ತಿಳಿಸಿವೆ. ಭಾರತದಲ್ಲೇ ನಿರ್ಮಾಣವಾಗುತ್ತಿರುವ ಮೆಟ್ರೋ ರೈಲು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಇದು ದೊಡ್ಡ ನಗರಗಳಲ್ಲಿ ಮೆಟ್ರೋ ಸೇವೆಯನ್ನು ವಿಸ್ತರಣೆ ಮಾಡಲು ಸಹಾಯ ಮಾಡಲಿದೆ. ಅಲ್ಲದ ಮಹಾನಗರಗಳ ಅಕ್ಕಪಕ್ಕದ ನಗರಗಳಿಗೂ ಮೆಟ್ರೋ ಸೇವೆ ವಿಸ್ತರಿಸುವ ಯೋಜನೆಗೆ ಇದು ಉತ್ತೇಜನ ನೀಡಲಿದೆ.

ವಂದೇ ಭಾರತ್ ಮೆಟ್ರೋ 100 ಕಿ.ಮೀ.ನಿಂದ 250 ಕಿ.ಮೀ.ವರೆಗೆ ಪ್ರಯಾಣಿಸುವ ಸಾಮರ್ಥ್ಯ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಇದು 12 ಬೋಗಿಗಳನ್ನು ಹೊಂದಿದೆ. ಬೇಕಾದರೆ 16 ಬೋಗಿಗಳವರೆಗೆ ವಿಸ್ತರಿಸಬಹುದು ಎಂದು ಅವರು ಹೇಳಿದ್ದಾರೆ.

ಇರಲಿದೆ ಹಲವು ವೈಶಿಷ್ಟ್ಯ

ವಂದೇ ಭಾರತ್‌ ಮೆಟ್ರೋ ಅಸ್ತಿತ್ವದಲ್ಲಿರುವ ಹಳಿಗಳಲ್ಲಿ ಕಾರ್ಯನಿರ್ವಹಿಸಲಿದ್ದು, ಲಕ್ನೋ-ಕಾನ್ಪುರ, ಆಗ್ರಾ-ಮಥುರಾ ಮತ್ತು ತಿರುಪತಿ-ಚೆನ್ನೈನಂತಹ ಮಾರ್ಗಗಳಲ್ಲಿ ಸಂಚರಿಸಲಿದೆ. ಇದು ವಿಶಾಲವಾದ ಒಳಾಂಗಣ ಮತ್ತು ದೊಡ್ಡ ಸ್ವಯಂಚಾಲಿತ ಬಾಗಿಲುಗಳನ್ನು ಹೊಂದಿದೆ. ಜತೆಗೆ ಪ್ರಸ್ತುತ ಚಾಲನೆಯಲ್ಲಿರುವ ಮೆಟ್ರೋ ರೈಲುಗಳಲ್ಲಿ ಲಭ್ಯವಿಲ್ಲದ ಹಲವಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ ಎಂದು ಮೂಲಗಳು ತಿಳಿಸಿವೆ.‌ ಅಧಿಕಾರಿಗಳು ಈ ವರ್ಷವೇ ರೈಲು ಓಡಾಟ ಆರಂಭಿಸಲು ಸಾಧ್ಯವಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2019ರಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ಪ್ರಾರಂಭವಾದಾಗಿನಿಂದ ಭಾರತದ ಸೆಮಿ-ಹೈಸ್ಪೀಡ್ ರೈಲು ಪ್ರಯಾಣದಲ್ಲಿ ಹಲವು ಸುಧಾರಣೆ ಕಂಡು ಬಂದಿದೆ. ಸದ್ಯ ವಂದೇ ಭಾರತ್‌ ಮೆಟ್ರೋ ಕೂಡ ಈ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿದೆ ಎನ್ನುವ ನಿರೀಕ್ಷೆ ಇದೆ.

ಇದನ್ನೂ ಓದಿ: PM Narendra Modi: ಬೆಂಗಳೂರು- ಕಲಬುರಗಿ, ಮೈಸೂರು- ಚೆನ್ನೈ ಸೇರಿ 10 ವಂದೇ ಭಾರತ್‌ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ

ಪ್ರಯಾಣಿಕರ ಸುರಕ್ಷತೆಗೆ ಒತ್ತು ನೀಡಲು ಪ್ರಧಾನಿ ಸೂಚನೆ

ರೈಲು ಪ್ರಯಾಣದಲ್ಲಿನ ಸುರಕ್ಷತೆಯನ್ನು ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ 2014ರಿಂದ ಹಲವಾರು ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ರೈಲ್ವೆ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಸುರಕ್ಷತೆಗೆ ಸಂಬಂಧಿಸಿದ ಕೆಲಸಗಳಿಗಾಗಿ ಮೀಸಲಾದ ನಿಧಿಯನ್ನು ರಚಿಸುವುದು, ಮಾನವರಹಿತ ಲೆವೆಲ್ ಕ್ರಾಸಿಂಗ್‌ಗಳನ್ನು ತೆಗೆದು ಹಾಕುವುದು, ಹಳಿಗಳ ನವೀಕರಣಕ್ಕೆ ಹೆಚ್ಚಿನ ಒತ್ತು ನೀಡುವುದು ಮತ್ತು ಸುರಕ್ಷಿತ ಪ್ರಯಾಣಿಕರ ಬೋಗಿಗಳ ಟ್ರ್ಯಾಕ್ ರೋಲ್ ಔಟ್ ಅನ್ನು ಹೆಚ್ಚಿನ ವೇಗದಲ್ಲಿ ಆಧುನೀಕರಿಸುವುದು ಮುಂತಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದೆ.

Continue Reading

ದೇಶ

Adhir Ranjan: ಟಿಎಂಸಿ ಬದಲು ಬಿಜೆಪಿಗೆ ಮತ ಹಾಕೋದೇ ಬೆಸ್ಟ್‌ ಎಂದ ಕಾಂಗ್ರೆಸ್‌ ನಾಯಕ!

Adhir Ranjan: ಪಶ್ಚಿಮ ಬಂಗಾಳದಲ್ಲಿ ಜನರು ಟಿಎಂಸಿಗೆ ಮತ ನೀಡುವುದಕ್ಕಿಂತ ಬಿಜೆಪಿಗೆ ಮತ ಹಾಕುವುದೇ ಲೇಸು ಎಂಬುದಾಗಿ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಹೇಳಿದ್ದಾರೆ. ಈ ವಿಡಿಯೊ ವೈರಲ್‌ ಆಗುತ್ತಲೇ ಬಿಜೆಪಿ ನಾಯಕರು ಪ್ರತಿಕ್ರಿಯಿಸಿದ್ದಾರೆ. ಇದರ ಮಧ್ಯೆಯೇ ಕಾಂಗ್ರೆಸ್‌ ಸ್ಪಷ್ಟನೆ ನೀಡಿದೆ.

VISTARANEWS.COM


on

Adhir Ranjan
Koo

ಕೋಲ್ಕೊತಾ: ಬೇಸಿಗೆಯ ರಣಬಿಸಿಲಿಗಿಂತ ಲೋಕಸಭೆ ಚುನಾವಣೆ (Lok Sabha Election 2024) ಕಾವು ದಿನೇದಿನೆ ಜಾಸ್ತಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಸೇರಿ ನೂರಾರು ಗಣ್ಯರು ಚುನಾವಣೆ ಪ್ರಚಾರದಲ್ಲಿ ತೊಡಗಿದ್ದಾರೆ. ಅಬ್ಬರದ ಪ್ರಚಾರದ ಜತೆಗೆ ಭಾರಿ ಭಾಷಣವನ್ನೂ ಮಾಡುತ್ತಿದ್ದಾರೆ. ಒಂದು ಪಕ್ಷದ ಅಭ್ಯರ್ಥಿಗಳು, ನಾಯಕರು ಪ್ರತಿಸ್ಪರ್ಧಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ, “ಟಿಎಂಸಿಗೆ ಮತ ಹಾಕುವುದಕ್ಕಿಂತ ಬಿಜೆಪಿಗೆ ಮತ ನೀಡುವುದೇ ವಾಸಿ” ಎಂಬುದಾಗಿ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ (Adhir Ranjan) ಅವರು ಹೇಳಿರುವುದು ಅಚ್ಚರಿ ಮೂಡಿಸಿದೆ. ಹಾಗೆಯೇ, ಅವರು ಹೇಳಿದ ವಿಡಿಯೊ (Viral Video) ಭಾರಿ ವೈರಲ್‌ ಆಗಿದೆ.

ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಆಯೋಜಿಸಿದ್ದ ಚುನಾವಣೆ ರ‍್ಯಾಲಿಯಲ್ಲಿ ಅಧೀರ್‌ ರಂಜನ್‌ ಚೌಧರಿ ಮಾತನಾಡಿದ್ದಾರೆ. “ಲೋಕಸಭೆ ಚುನಾವಣೆಯಲ್ಲಿ 400ಕ್ಕಿಂತ ಅತಿ ಹೆಚ್ಚು ಸ್ಥಾನ ಗೆಲ್ಲಬೇಕು ಎಂಬ ಪ್ರಧಾನಿಯವರ ಕನಸು ನನಸಾಗುವುದಿಲ್ಲ. ಈಗಾಗಲೇ ಮೋದಿ ಅವರ ಕೈಯಿಂದ 100 ಕ್ಷೇತ್ರಗಳು ಹಾರಿ ಹೋಗಿವೆ. ಕಾಂಗ್ರೆಸ್‌ ಹಾಗೂ ಸಿಪಿಎಂ ಅಭ್ಯರ್ಥಿಗಳ ಗೆಲುವು ಮುಖ್ಯವಾಗಿದೆ. ಹಾಗೊಂದು ವೇಳೆ ನೀವು ಗೆಲ್ಲಿಸುವುದೇ ಆದರೆ, ಟಿಎಂಸಿಗಿಂತ ಬಿಜೆಪಿಗೇ ಮತ ಹಾಕುವುದು ಒಳಿತು” ಎಂದು ಹೇಳಿದ್ದಾರೆ.

ಅಧೀರ್‌ ರಂಜನ್‌ ಚೌಧರಿ ಅವರು ನೀಡಿದ ಹೇಳಿಕೆಯ ವಿಡಿಯೊ ವೈರಲ್‌ ಆಗುತ್ತಲೇ ಬಿಜೆಪಿ ನಾಯಕರು ವಿಡಿಯೊವನ್ನು ಹಂಚಿಕೊಂಡಿದ್ದಾರೆ. “ಪ್ರತಿಪಕ್ಷಗಳಿಗೆ ಗುರಿಯೂ ಇಲ್ಲ, ಉದ್ದೇಶವೂ ಇಲ್ಲ. ಇನ್ನು, ಇಂಡಿಯಾ ಒಕ್ಕೂಟಕ್ಕೆ ಜನರನ್ನು ಇಬ್ಭಾಗ ಮಾಡುವುದು, ಭ್ರಷ್ಟಾಚಾರ ಎಸಗುವುದು ಹಾಗೂ ಜನರಲ್ಲಿ ಗೊಂದಲ ಮೂಡಿಸುವುದೇ ಕಾಯಕವಾಗಿದೆ. ಇವರ ಮಧ್ಯೆಯೇ, ಬಿಜೆಪಿಗೆ ಮತ ನೀಡಿ ಎಂಬುದಾಗಿ ಕಾಂಗ್ರೆಸ್‌ ನಾಯಕ ತಿಳಿಸಿದ್ದಾರೆ. ಟಿಎಂಸಿಗೆ ಮತ ನೀಡುವ ಬದಲು ಬಿಜೆಪಿಯೇ ಬೆಸ್ಟ್‌ ಎಂಬುದಾಗಿ ಅವರು ಹೇಳಿದ್ದಾರೆ” ಎಂದು ಬಿಜೆಪಿ ನಾಯಕ ಶೆಹಜಾದ್‌ ಜೈ ಹಿಂದ್‌ ಪೋಸ್ಟ್‌ ಮಾಡಿದ್ದಾರೆ.

ಸ್ಪಷ್ಟನೆ ಕೊಟ್ಟ ಕಾಂಗ್ರೆಸ್‌

ಅಧೀರ್‌ ರಂಜನ್‌ ಚೌಧರಿ ನೀಡಿದ ಹೇಳಿಕೆ ಕುರಿತು ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಸ್ಪಷ್ಟನೆ ನೀಡಿದರು. “ಅಧೀರ್‌ ರಂಜನ್‌ ಚೌಧರಿ ಅವರು ಯಾವ ಅರ್ಥದಲ್ಲಿ ಹಾಗೆ ಹೇಳಿದ್ದಾರೋ ಗೊತ್ತಿಲ್ಲ ಹಾಗೂ ನಾನು ಆ ವಿಡಿಯೊವನ್ನು ನೋಡಿಲ್ಲ. ಆದರೆ, 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗಳಿಸಿದ ಸ್ಥಾನಗಳ ಸಂಖ್ಯೆಯು ಈ ಬಾರಿ ಗಣನೀಯವಾಗಿ ಕುಸಿಯುವಂತೆ ಮಾಡುವುದು ಕಾಂಗ್ರೆಸ್‌ನ ಗುರಿಯಾಗಿದೆ” ಎಂದು ಹೇಳಿದರು. ಪಶ್ಚಿಮ ಬಂಗಾಳದಲ್ಲಿ ಇಂಡಿಯಾ ಒಕ್ಕೂಟದ ಮೈತ್ರಿಯು ಫಲಿಸಿಲ್ಲ. ಟಿಎಂಸಿ ಏಕಾಂಗಿಯಾಗಿ ಸ್ಪರ್ಧಿಸಿದೆ.

ಇದನ್ನೂ ಓದಿ: Shyam Rangeela: ಮೋದಿಯನ್ನು ಮಿಮಿಕ್ರಿ ಮಾಡಿ ಖ್ಯಾತಿಯಾದ ಕಲಾವಿದ ಈಗ ಪ್ರಧಾನಿ ವಿರುದ್ಧವೇ ಕಣಕ್ಕೆ!

Continue Reading

ಕ್ರಿಕೆಟ್

Viral Video: ಕಾಲಿನ ಗಾಯವನ್ನು ಲೆಕ್ಕಿಸದೆ ರೋಲರ್ ಓಡಿಸಿ ಪಿಚ್​ ಸಿದ್ಧಪಡಿಸಿದ ಮೊಹಮ್ಮದ್​ ಶಮಿ

Viral Video: 2 ವಾರ ಹಿಂದೆ ಶಮಿ ಅವರು 2 ಸ್ಟಿಕ್​ ವಾಕರ್​ಗಳೊಂದಿಗೆ ಗಾರ್ಡನ್​ನಲ್ಲಿ ನಿಂತಿರುವ ಫೋಟೊವನ್ನು ಹಂಚಿಕೊಂಡು, ‘ಮತ್ತೆ ಟ್ರ್ಯಾಕ್‌ಗೆ ಮರಳುವ ಹಸಿದಿದೆ. ಈ ಹಾದಿ ಕಠಿಣವಾಗಿರಬಹುದು, ಆದರೆ ಇದನ್ನೇಲ್ಲ ಎದುರಿಸಿ ಶೀಘ್ರದಲ್ಲೇ ಕ್ರಿಕೆಟ್​ಗೆ ಮರಳುವ ವಿಶ್ವಾಸವಿದೆ’ ಎಂದು ಬರೆದುಕೊಂಡಿದ್ದರು.

VISTARANEWS.COM


on

Viral Video
Koo

ಲಕ್ನೋ: 2 ತಿಂಗಳ ಹಿಂದೆ ಲಂಡನ್​ನಲ್ಲಿ ಶಮಿ ಪಾದದ ಶಸ್ತ್ರಚಿಕಿತ್ಸೆಗೆ(mohammed shami injury update) ಒಳಗಾಗಿದ್ದ ಭಾರತ ಕ್ರಿಕೆಟ್​ ತಂಡದ ಪ್ರಧಾನ​ ವೇಗಿ ಮೊಹಮ್ಮದ್ ಶಮಿ(Mohammed Shami)ತಮ್ಮ ಕಾಲಿನ ಗಾಯದಿಂದ ಚೇತರಿಕೆ(Mohammed Shami injury update) ಕಾಣುತ್ತಿದ್ದಾರೆ. ಅಲ್ಲದೆ ಕ್ರಿಕೆಟ್​ಗೆ ಮರಳುವ ನಿಟ್ಟಿನಲ್ಲಿ ಪುನರ್ವಸತಿ ಆರಂಭಿಸಿದ್ದಾರೆ. ಇದೀಗ ಅವರು ತಮ್ಮ ನಿವಾಸದಲ್ಲೆ ನಿರ್ಮಾಣ ಮಾಡಿರುವ ಕ್ರಿಕೆಟ್​ ಪಿಚ್​ನಲ್ಲಿ ರೋಲರ್ ಓಡಿಸಿದ್ದಾರೆ. ಈ ವಿಡಿಯೊವನ್ನು ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ(Viral Video).

ಲಂಡನ್​ನಲ್ಲಿ ಶಮಿ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ವಿಶ್ರಾಂತಿಯಲ್ಲಿದ್ದ ಶಮಿ ಇದೀಗ ಮತ್ತೆ ಕ್ರಿಕೆಟ್​ಗೆ ಮರಳುವು ಸಿದ್ಧತೆಯಲ್ಲಿದ್ದಾರೆ. ನಿನ್ನೆಯಷ್ಟೇ(ಮಂಗಳವಾರ) ವಾಕಿಂಗ್​ ಸ್ಟಿಕ್​ಗಳೊಂದಿಗೆ ತಮ್ಮ ನಿವಾಸದಲ್ಲಿರುವ ಕಿಕೆಟ್​ ಪಿಚ್​ನಲ್ಲಿ ನಡೆದಾಡಿ ಕೆಲ ಕಾಲ ವ್ಯಾಯಾಮ ಕೂಡ ಮಾಡಿದ್ದರು. ಇದರ ಫೋಟೊ ಕೂಡ ಹಂಚಿಕೊಂಡಿದ್ದರು. ಇದೀಗ ಬುಧವಾರ ಪಿಚ್​ ಸಿದ್ಧತೆಯಲ್ಲಿ ತೊಡಗಿದ್ದಾರೆ. ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ಬಳಿಕ ಶಮಿ ಯಾವುದೇ ಕ್ರಿಕೆಟ್​ ಆಡಿಲ್ಲ.

2 ವಾರ ಹಿಂದೆ ಶಮಿ ಅವರು 2 ಸ್ಟಿಕ್​ ವಾಕರ್​ಗಳೊಂದಿಗೆ ಗಾರ್ಡನ್​ನಲ್ಲಿ ನಿಂತಿರುವ ಫೋಟೊವನ್ನು ಹಂಚಿಕೊಂಡು, ‘ಮತ್ತೆ ಟ್ರ್ಯಾಕ್‌ಗೆ ಮರಳುವ ಹಸಿದಿದೆ. ಈ ಹಾದಿ ಕಠಿಣವಾಗಿರಬಹುದು, ಆದರೆ ಇದನ್ನೇಲ್ಲ ಎದುರಿಸಿ ಶೀಘ್ರದಲ್ಲೇ ಕ್ರಿಕೆಟ್​ಗೆ ಮರಳುವ ವಿಶ್ವಾಸವಿದೆ’ ಎಂದು ಬರೆದುಕೊಂಡಿದ್ದರು. ಇದಕ್ಕೂ ಮುನ್ನ ಶಮಿ ತಮ್ಮ ಮನೆಯಲ್ಲಿ ಪಾದಕ್ಕೆ ಎಲೆಕ್ಟ್ರಿಕ್​ ಮಸಾಜ್​ ಮಾಡುತ್ತಿರುವ ಫೋಟೊವನ್ನು ಹಂಚಿಕೊಂಡಿದ್ದರು.

ಇದನ್ನೂ ಓದಿ Mohammed Shami: ಸ್ಟಿಕ್​ ವಾಕರ್ ಸಹಾಯದೊಂದಿಗೆ ವ್ಯಾಯಾಮ ಆರಂಭಿಸಿದ ಶಮಿ

ಚೇತರಿಕೆಯ ಹಾದಿಯಲ್ಲಿರುವ ಶಮಿ  ಈ ವರ್ಷದ ಕೊನೆಯಲ್ಲಿ ಬಾಂಗ್ಲಾದೇಶದ ವಿರುದ್ಧ ತವರಿನಲ್ಲಿ ನಡೆಯುವ ಟೆಸ್ಟ್ ಸರಣಿಗೆ ಪುನರಾಗಮನ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಗಾಯದಿಂದಾಗಿ ಶಮಿಗೆ ಈ ಬಾರಿ ಐಪಿಎಲ್​ ಸೇರಿ ಮಹತ್ವದ ಟಿ20 ವಿಶ್ವಕಪ್​ ಟೂರ್ನಿ ಕೈತಪ್ಪಿತು. ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ವೇಳೆ ಗಾಯಗೊಂಡಿದ್ದ ಶಮಿ, ಈ ಗಾಯವನ್ನು ಮರೆಮಾಚಿ ವಿಶ್ವಕಪ್​ನಲ್ಲಿ ಅಮೋಘ ಬೌಲಿಂಗ್​ ಪ್ರದರ್ಶನ ತೋರಿದ್ದರು.

ವಿಶ್ವಕಪ್​ ಟೂರ್ನಿಯಲ್ಲಿ ಶಮಿ ಅವರು ತಮ್ಮ ಮೊನಚಾದ ಬೌಲಿಂಗ್​ ದಾಳಿಯ ಮೂಲಕ ಟೂರ್ನಿಯಲ್ಲಿಯೇ ಅತ್ಯಧಿಕ ವಿಕೆಟ್​ ಪಡೆದ ಬೌಲರ್​ ಎನಿಸಿಕೊಂಡಿದ್ದರು. ಆಡಿದ 7 ಪಂದ್ಯಗಳಲ್ಲಿ 24 ವಿಕೆಟ್‌ ಉರುಳಿಸಿದ್ದರು. ಅವರ ಈ ಸಾಧನೆಯನ್ನು ಪರಿಗಣಿಸಿ ಅವರಿಗೆ ದೇಶದ ಎರಡನೇ ಅತ್ಯುನ್ನತ ಕ್ರೀಡಾ ಗೌರವವಾದ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಮೊಹಮ್ಮದ್ ಶಮಿ ಅರ್ಜುನ ಪ್ರಶಸ್ತಿ ಸ್ವೀಕರಿಸಿದ್ದರು. ಮೊಹಮ್ಮದ್ ಶಮಿ ಭಾರತ ಪರ 64 ಟೆಸ್ಟ್ ಪಂದ್ಯಗಳಲ್ಲಿ 229 ವಿಕೆಟ್ ಪಡೆದಿದ್ದಾರೆ. 101 ಏಕದಿನ ಪಂದ್ಯಗಳಲ್ಲಿ 195 ವಿಕೆಟ್ ಪಡೆದಿದ್ದಾರೆ. 23 ಟಿ20 ಪಂದ್ಯಗಳಲ್ಲಿ 24 ವಿಕೆಟ್ ಪಡೆದಿದ್ದಾರೆ.

Continue Reading
Advertisement
CoWin Certificates
ದೇಶ12 mins ago

CoWIN Certificates: ಕೋವಿಡ್‌ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಔಟ್‌; ಕೇಂದ್ರ ಹೇಳೋದೇನು?

PBKS vs CSK
ಕ್ರೀಡೆ15 mins ago

PBKS vs CSK: ಕೆಕೆಆರ್​ ದಾಖಲೆ ಹಿಂದಿಕ್ಕಿದ ಪಂಜಾಬ್​ ಕಿಂಗ್ಸ್

Parineeti Chopra husband Raghav Chadha doing well after eye surgery
ಬಾಲಿವುಡ್24 mins ago

Parineeti Chopra: ಪರಿಣಿತಿ ಚೋಪ್ರಾ ಪತಿ ಕಣ್ಣು ಕಳೆದುಕೊಳ್ಳುವ ಸಾಧ್ಯತೆ: ವೈದ್ಯರು ಹೇಳೋದೇನು?

Rahul Gandhi
ಪ್ರಮುಖ ಸುದ್ದಿ31 mins ago

Rahul Gandhi: ಇಂದು ಶಿವಮೊಗ್ಗದಲ್ಲಿ ರಾಹುಲ್‌ ಗಾಂಧಿ ಪ್ರಚಾರ; ಪ್ರಜ್ವಲ್‌ ರೇವಣ್ಣ ವಿಚಾರ ತೆಗೀತಾರಾ?

Job Alert
ಉದ್ಯೋಗ35 mins ago

Job Alert: ಗಮನಿಸಿ; ಹಟ್ಟಿ ಚಿನ್ನದ ಗಣಿ ಕಂಪನಿಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನ

After SSLC career options
ಶಿಕ್ಷಣ39 mins ago

Best Courses After SSLC: ವಿಜ್ಞಾನ, ವಾಣಿಜ್ಯ, ಕಲೆ; ಯಾವುದು ಉತ್ತಮ ಆಯ್ಕೆ?

Thomas Cup 2024
ಬ್ಯಾಡ್ಮಿಂಟನ್40 mins ago

Thomas Cup 2024: ಅಂತಿಮ ಲೀಗ್​ ಪಂದ್ಯದಲ್ಲಿ ಇಂಡೊನೇಷ್ಯಾಕ್ಕೆ ಮಣಿದ ಭಾರತ

Aadhaar Crads For Dog
ಪ್ರಮುಖ ಸುದ್ದಿ44 mins ago

Aadhaar Crads For Dog: ದೆಹಲಿಯಲ್ಲಿ ನಾಯಿಗಳಿಗೂ ಬಂತು ಆಧಾರ್ ಕಾರ್ಡ್!

Pushpa 2 The Rule Title track out
ಟಾಲಿವುಡ್56 mins ago

Pushpa 2: ‘ಪುಷ್ಪ 2’ ಟೈಟಲ್​ ಸಾಂಗ್ ಔಟ್‌: ಸ್ಟೈಲಿಶ್‌ ಆಗಿ ಎಂಟ್ರಿ ಕೊಟ್ಟ ಅಲ್ಲು ಅರ್ಜುನ್!

Congress Candidate List
Lok Sabha Election 202459 mins ago

Congress Candidate List: ಅಮೇಥಿ, ರಾಯ್‌ ಬರೇಲಿಯಿಂದ ರಾಹುಲ್‌, ಪ್ರಿಯಾಂಕಾ ಸ್ಪರ್ಧಿಸುತ್ತಾರಾ? ಕುತೂಹಲಕ್ಕೆ ಇಂದು ತೆರೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ5 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ2 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest4 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

ಟ್ರೆಂಡಿಂಗ್‌