Viral Video : 90ರ ವಯಸ್ಸಿನ ಇವರು ವಿಶ್ವದ ಅತ್ಯಂತ ಹಿರಿಯ ಬಾಡಿ ಬಿಲ್ಡರ್‌! ಹೇಗಿದೆ ನೋಡಿ ಇವರ ವರ್ಕ್‌ಔಟ್‌ - Vistara News

ವೈರಲ್ ನ್ಯೂಸ್

Viral Video : 90ರ ವಯಸ್ಸಿನ ಇವರು ವಿಶ್ವದ ಅತ್ಯಂತ ಹಿರಿಯ ಬಾಡಿ ಬಿಲ್ಡರ್‌! ಹೇಗಿದೆ ನೋಡಿ ಇವರ ವರ್ಕ್‌ಔಟ್‌

ಅಮೆರಿಕದ ಜಿಮ್‌ ಹೆಸರಿನ ವ್ಯಕ್ತಿ 90ರ ವಯಸ್ಸಿನಲ್ಲೂ ಬಾಡಿ ಬಿಲ್ಡಿಂಗ್‌ ಮಾಡುತ್ತಿದ್ದಾರೆ. ಅವರ ಕುರಿತಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral Video) ಆಗಿದೆ.

VISTARANEWS.COM


on

Jim Arrington
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ವಯಸ್ಸು ಬರೀ ಸಂಖ್ಯೆಯಷ್ಟೇ ಎಂದು ಹೇಳಲಾಗುತ್ತದೆ. ಯಾವುದೇ ಸಾಧನೆ ಮಾಡುವುದಕ್ಕೆ ಯಾವ ವಯಸ್ಸಿನ ಮಿತಿಯೂ ಅಡ್ಡಬರಬಾರದು. ಆದರೆ ಇತ್ತೀಚಿನ ದಿನಗಳಲ್ಲಿ 20-30ರ ವಯಸ್ಸಿನವರೇ ಏನೇನೋ ಅನಾರೋಗ್ಯದಿಂದ ಬಳಲುವುದನ್ನು ನಾವು ಕಾಣುತ್ತಿದ್ದೇವೆ. ಆದರೆ ಅಮೆರಿಕದ ಈ ಒಬ್ಬ ವ್ಯಕ್ತಿ ಮಾತ್ರ 90ರ ವಯಸ್ಸಿನಲ್ಲಿದ್ದರೂ ಈಗಲೂ ಬಾಡಿ ಬಿಲ್ಡಿಂಗ್‌ ಮಾಡುತ್ತಾ, ಹಲವರಿಗೆ ಸ್ಫೂರ್ತಿಯಾಗಿದ್ದಾರೆ. ಅವರ ಬಗೆಗಿನ ವಿಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್‌ (Viral Video) ಆಗಿದೆ.

ಅಮೆರಿಕದ ಜಿಮ್‌ ಅರಿಂಗ್ಟನ್‌ ಅವರ ವಯಸ್ಸು 90. ಆದರೂ ಅವರು ಇಂದಿಗೂ ಪ್ರತಿನಿತ್ಯ ಜಿಮ್‌ಗೆ ಹೋಗಿ ವರ್ಕ್‌ಔಟ್‌ ಮಾಡುತ್ತಾರೆ. ಅಷ್ಟೇ ಏಕೆ, ಕಳೆದ ವರ್ಷ ನಡೆದ ಬಾಡಿ ಬಿಲ್ಡಿಂಗ್‌ ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದರು ಕೂಡ. ಇಳಿ ವಯಸ್ಸಿನಲ್ಲೂ ಸದೃಢ ದೇಹದೊಂದಿಗೆ ಬಾಡಿ ಬಿಲ್ಡರ್‌ ಆಗಿರುವ ಜಿಮ್‌ ಅವರ ಸಾಧನೆಯನ್ನು ಗುರುತಿಸಿ ಗಿನ್ನಿಸ್ ವರ್ಲ್ಡ್‌ ರೆಕಾರ್ಡ್‌ ಸಂಸ್ಥೆ ಅವರಿಗೆ ವಿಶ್ವದ ಅತ್ಯಂತ ಹಿರಿಯ ಬಾಡಿ ಬಿಲ್ಡರ್‌ ಎನ್ನುವ ದಾಖಲೆಯನ್ನೂ ನೀಡಿದೆ.

ಇದನ್ನೂ ಓದಿ: Viral Video : ಅಪ್ಪ ನಾನೀಗ ಡಾಕ್ಟರ್‌ ಎಂದ ಮಗಳು! ಭಾವುಕರಾದ ತಂದೆ!

ಜಿಮ್‌ ಅವರ ಬಗ್ಗೆ ಗಿನ್ನಿಸ್ ವರ್ಲ್ಡ್‌ ರೆಕಾರ್ಡ್‌ ಸಂಸ್ಥೆ ತನ್ನ ಯೂಟ್ಯೂಬ್‌ ಚಾನೆಲ್‌ನಲ್ಲಿ ವಿಡಿಯೊವನ್ನು ಹಂಚಿಕೊಂಡಿದೆ. ಅದರಲ್ಲಿ ಜಿಮ್‌ ಅವರು ತಮ್ಮ ಸಾಧನೆಯ ಕುರಿತಾಗಿ ಎಲ್ಲ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಹಾಗೆಯೇ ಅವರು ವರ್ಕ್‌ಔಟ್‌ ಮಾಡುವ ದೃಶ್ಯಗಳು, ಕಿರಿಯ ಬಾಡಿ ಬಿಲ್ಡರ್‌ಗಳಿಗೆ ಸಲಹೆ ನೀಡುವ ದೃಶ್ಯಗಳನ್ನೆಲ್ಲವನ್ನೂ ವಿಡಿಯೊದಲ್ಲಿ ಸೇರಿಸಲಾಗಿದೆ.


ಈ ವಿಡಿಯೊವನ್ನು ಜುಲೈ 19ರಂದು ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳಲಾಗಿದೆ. ಅಂದಿನಿಂದ ಇಂದಿನವರೆಗೆ ವಿಡಿಯೊ ಸಾವಿರಾರು ಜನರಿಂದ ವೀಕ್ಷಣೆ ಪಡೆದುಕೊಂಡಿದೆ. ನೂರಾರು ಮಂದಿ ವಿಡಿಯೊಗೆ ಲೈಕ್‌ ಮಾಡಿದ್ದಾರೆ. ಹಾಗೆಯೇ ಹಲವಾರು ಮಂದಿ ವಿಡಿಯೊಗೆ ಕಾಮೆಂಟ್‌ಗಳ ಮೂಲಕ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. “ನಾನು ಎಷ್ಟೋ ವರ್ಷಗಳಿಂದ ಈ ಜಿಮ್‌ ಅವರ ವಿಡಿಯೊ ನೋಡುತ್ತಿದ್ದೇನೆ. ನನಗೆ ಅವರೇ ಸ್ಫೂರ್ತಿ. ಸಾಧನೆಗೆ ವಯಸ್ಸಿನ ಮಿತಿ ಇಲ್ಲ ಎನ್ನುವುದನ್ನು ನಾನು ಅವರಿಂದ ಕಲಿತಿದ್ದೇನೆ”, “ಇವರು ಅದ್ಭುತ ವ್ಯಕ್ತಿ. ಇವರು ಈಗಿನ ಸಮಾಜದ ಅನೇಕರಿಗೆ ಸ್ಫೂರ್ತಿ” ಎನ್ನುವಂತಹ ಕಾಮೆಂಟ್‌ಗಳು ವಿಡಿಯೊಗೆ ಬಂದಿವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Viral Video: ಬಸ್‌ ಡ್ರೈವರ್‌ನ ರೀಲ್ಸ್‌ ಕ್ರೇಜ್‌ಗೆ 2 ಎತ್ತುಗಳು ಬಲಿ; ರೈತನ ಸ್ಥಿತಿ ಗಂಭೀರ

Viral Video: ಪ್ರಯಾಣಿಕರನ್ನು ಸುರಕ್ಷಿತವಾಗಿ ತಲುಪಿಸುವ ಜವಾಬ್ದಾರಿ ಇರುವ ಬಸ್ ಡ್ರೈವರ್‌ಗಳೂ ರೀಲ್ಸ್ ಕ್ರೇಜ್‌ಗೆ ಒಳಗಾಗಿರುವುದು ಆತಂಕ ಮೂಡಿಸಿದೆ. ಬಸ್ ಡ್ರೈವ್ ಮಾಡುತ್ತಾ ರೀಲ್ಸ್‌ನ ಗುಂಗಿನೊಳಗೆ ಬಿದ್ದ ಡ್ರೈವರ್‌ನೊಬ್ಬ ಮಾಡಿದ ಅವಾಂತರದಿಂದ ಒಂದು ಕುಟುಂಬವೇ ಸಂಕಷ್ಟಕ್ಕೆ ಸಿಲುಕಿದೆ. ಜೀವನ ನಡೆಸುವುದಕ್ಕೆ ಆಧಾರವಾಗಿದ್ದ ಎರಡು ಎತ್ತುಗಳನ್ನು ರೈತ ಕಳೆದುಕೊಂಡಿದ್ದಾನೆ. ಅಪಘಾತದಿಂದ ರೈತನ ಸ್ಥಿತಿ ಕೂಡ ಗಂಭೀರವಾಗಿದೆ.

VISTARANEWS.COM


on

Viral Video
Koo

ಹುಬ್ಬಳ್ಳಿ: ವಾಹನಗಳನ್ನು ವೇಗವಾಗಿ ಚಲಾಯಿಸುವುದರಿಂದ ಎಷ್ಟೊಂದು ಅಪಘಾತದ ಘಟನೆಗಳು ನಡೆದು ಅನೇಕ ಸಾವು ನೋವುಗಳಾದರೂ ಕೂಡ ಚಾಲಕರಿಗೆ ಇನ್ನೂ ಈ ಬಗ್ಗೆ ಅರಿವು ಮೂಡಿಲ್ಲ. ಇದೀಗ ಹುಬ್ಬಳ್ಳಿಯಲ್ಲಿ ಎತ್ತಿನ ಗಾಡಿಗೆ ಸರ್ಕಾರಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಎರಡು ಎತ್ತುಗಳು ಸ್ಥಳದಲ್ಲೇ ಮೃತಪಟ್ಟಿದೆ. ಅಲ್ಲದೇ ಎತ್ತಿನ ಗಾಡಿಯಯಲ್ಲಿದ್ದ ರೈತ ಕೂಡ ಗಂಭೀರವಾಗಿ ಗಾಯಗೊಂಡಿದ್ದಾನೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ವಿಡಿಯೊದಲ್ಲಿ, ಸಹಾಯಕ ರೀಲ್ ತಯಾರಿಸುವಾಗ ಬಸ್ ಚಾಲಕ ತನ್ನ ಸೀಟ್‌ನಲ್ಲಿ ಕುಳಿತು ಡ್ರೈವ್ ಮಾಡುತ್ತಿರುವುದನ್ನು ಕಾಣಬಹುದು. ಕೆಲವು ಕ್ಷಣಗಳ ನಂತರ, ಬಸ್ ಮುಂದೆ ಹೋಗುತ್ತಿದ್ದ ಎತ್ತಿನ ಗಾಡಿಗೆ ಹಿಂದಿನಿಂದ ಡಿಕ್ಕಿ ಹೊಡೆಯುವುದನ್ನು ವಿಡಿಯೊ ತೋರಿಸುತ್ತದೆ. ವರದಿ ಪ್ರಕಾರ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಬಾಗಲಕೋಟೆ ಕಡೆಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಎತ್ತುಗಳು ಕೆಳಗೆ ಬಿದ್ದು ರಕ್ತ ಸೋರಿ, ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿವೆ. ಎತ್ತಿನ ಗಾಡಿಯಲ್ಲಿದ್ದ ರೈತ ತೀವ್ರವಾಗಿ ಗಾಯಗೊಂಡಿದ್ದು, ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ರೈತನ ಸ್ಥಿತಿ ಗಂಭೀರವಾಗಿದೆ ಎಂಬುದಾಗಿ ತಿಳಿದು ಬಂದಿದೆ. ಈ ಸಂಬಂಧ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.

ಗಾಯಗೊಂಡ ರೈತ ಮಂಜುನಾಥ್ ಆರ್. ವಗ್ಗೇನವರ್ (40) ಎಂಬುದಾಗಿ ತಿಳಿದು ಬಂದಿದೆ. ಮಂಗಳವಾರ ರಾತ್ರಿ ಮಂಜುನಾಥ್ ಕೆರೆಸೂರು ಗ್ರಾಮದ ತನ್ನ ಕೃಷಿ ಭೂಮಿಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಎತ್ತಿನ ಗಾಡಿಗೆ ಡಿಕ್ಕಿ ಹೊಡೆದಾಗ ಬಸ್ ಚಾಲಕ ರೀಲ್ ತಯಾರಿಸುತ್ತಿದ್ದ. ತಂಬಾಕು ತಿನ್ನುತ್ತಿದ್ದ. ಹಾಗಾಗಿ ಚಾಲಕನಿಗೆ ತನ್ನ ಮುಂದೆ ಇದ್ದ ಗಾಡಿಯನ್ನು ನೋಡಲು ಸಾಧ್ಯವಾಗಲಿಲ್ಲ ಎಂದು ಕೆಲವು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ.

ಅಲ್ಲದೇ ಮಂಜುನಾಥ್ ಒಬ್ಬ ಬಡ ರೈತನಾಗಿದ್ದು, ಎರಡು ಎಕರೆ ಭೂಮಿಯಲ್ಲಿ ಯಾವುದೇ ಲಾಭಾಂಶ ಸಿಗುತ್ತಿರಲಿಲ್ಲ ಎಂದು ಸಂತ್ರಸ್ತ ರೈತನ ಸ್ನೇಹಿತರು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಇತ್ತೀಚೆಗೆ, ಮಂಜುನಾಥ್ ಸಾಲ ಪಡೆದು ಎರಡು ಎತ್ತುಗಳನ್ನು ಖರೀದಿಸಿ ಅದನ್ನು ಇತರ ಹೊಲಗಳಲ್ಲಿ ಉಳುಮೆ ಮಾಡಲು ಬಳಸುತ್ತಿದ್ದರು ಎಂಬುದಾಗಿ ತಿಳಿದು ಬಂದಿದೆ.

ಇದನ್ನೂ ಓದಿ: ಪುಟ್ಟ ಮಗುವನ್ನು ಮುಂದೆ ಕೂರಿಸಿಕೊಂಡು ಬೈಕ್‌ ಸ್ಟಂಟ್‌! ಒದ್ದು ಒಳಗೆ ಹಾಕಿ ಅಂತಿದ್ದಾರೆ ನೆಟ್ಟಿಗರು

Continue Reading

Latest

Lady Police Officer: ಗೂಂಡಾಗಿರಿ ಮಾಡಿದರೆ ಹುಷಾರ್‌! ಪುಂಡರಿಗೆ ಲೇಡಿ ಪೊಲೀಸ್ ವಾರ್ನಿಂಗ್‌; ವಿಡಿಯೊ ವೈರಲ್

Lady Police Officer: ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುವುದೇ ಈಗಿನವರ ಶೋಕಿ. ಎಲ್ಲಿದ್ದೇವೆ, ಇದು ತಪ್ಪಾ, ಸರಿನಾ ಒಂದೂ ಕೂಡ ಯೋಚಿಸದೇ ರೀಲ್ಸ್ ಮಾಡುತ್ತಾ ತಿರುಗುತ್ತಾರೆ. ಹೀಗೆ ಧಾರ್ಮಿಕ ಸ್ಥಳವೊಂದರಲ್ಲಿ ಕಾರಿನ ಸನ್‌ರೂಫ್‌ ತೆರೆದುಕೊಂಡು ರೀಲ್ಸ್ ಮಾಡುತ್ತಿದ್ದ ಗುಂಪೊಂದನ್ನು ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಸಖತ್ ಆಗಿ ಬೆಂಡೆತ್ತಿದ್ದಾರೆ. ಇನ್ನು ಮಹಿಳಾ ಅಧಿಕಾರಿಗೆ ಆಮಿಷವೊಡ್ಡಲು ಬಂದಾಗ ಅದಕ್ಕೆ ಸೊಪ್ಪು ಹಾಕದೇ, ವಾಹನವನ್ನು ವಶಪಡಿಸಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

VISTARANEWS.COM


on

Lady Police Officer
Koo

ಕೆಲವೊಂದು ಧಾರ್ಮಿಕ ಸ್ಥಳಗಳಲ್ಲಿ (Lady Police Officer) ಮೊಬೈಲ್ ಬಳಸಲು, ವಿಡಿಯೊ ಶೂಟ್ ಮಾಡಲು ಅನುಮತಿ ಇರುವುದಿಲ್ಲ. ಹಿಮಾಚಲ ಪ್ರದೇಶದ ಧಾರ್ಮಿಕ ಪ್ರದೇಶದಲ್ಲಿ ಪುರುಷರ ಗುಂಪೊಂದು ಅನುಮತಿಯಿಲ್ಲದೆ ಕಾರು ಚಲಾಯಿಸುತ್ತ, ಕಾರಿನ ಟಾಪ್‌ ಮೇಲಿಂದ ಕೈ ಬೀಸುತ್ತ ರೀಲ್ಸ್‌ (Reels Obesession) ಮಾಡಿದ್ದಾರೆ. ಆಗ ಮಹಿಳಾ ಪೊಲೀಸರೊಬ್ಬರು ಅವರನ್ನು ಸಖತ್ತಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಈ ವಿಡಿಯೊವನ್ನು ‘ಘರ್ ಕೆ ಕಾಲೇಶ್’ ಎಂಬ ಹೆಸರಿನಲ್ಲಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಈ ವಿಡಿಯೊ ಪೊಲೀಸರು ವಾಹನವನ್ನು ನಿಲ್ಲಿಸುವ ಮೂಲಕ ಪ್ರಾರಂಭವಾಗಿದೆ. ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರು ತಮ್ಮ ವಾಹನವನ್ನು ನಿಲ್ಲಿಸಿ ಇನ್ನೊಂದು ಕಾರಿನಲ್ಲಿದ್ದ ಇಬ್ಬರು ಪುರುಷರು ಸನ್ ರೂಫ್‌ನಿಂದ ಹೊರಬಂದು ನಿಂತಿರುವುದನ್ನು ತೋರಿಸಿದರು. ಹಾಗೇ ಅವರ ರೀಲ್ಸ್‌ ಮಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಸನ್ ರೂಫ್ ಅನ್ನು ಮುಚ್ಚಿ ಕಾರಿನೊಳಗೆ ಕುಳಿತುಕೊಳ್ಳುವಂತೆ ಅವರಿಗೆ ಪಾಠ ಹೇಳಿದ್ದಾರೆ.

ನಂತರ ಧಾರ್ಮಿಕ ಸ್ಥಳದ ಪಕ್ಕದ ಪ್ರದೇಶದಲ್ಲಿ ಶೂಟಿಂಗ್ ಮಾಡಲು ಅನುಮತಿ ನೀಡಲಾಗಿದೆಯೇ ಎಂದು ಅಧಿಕಾರಿ ಪುರುಷರ ಗುಂಪನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಅವರಲ್ಲಿ ಒಬ್ಬರು ಇದು ಶೂಟಿಂಗ್ ಅಲ್ಲ ಎಂದು ಉತ್ತರಿಸಿದ್ದಾರೆ. ಆದರೆ ಅವರು ಸೋಶಿಯಲ್ ಮೀಡಿಯಾಗಳಿಗಾಗಿ ರೀಲ್ಸ್ ಮಾಡುತ್ತಿರುವುದಾಗಿ ಹೇಳಿದ್ದಾರೆ.

ನಂತರ ಈ ವಿಷಯವನ್ನು ಪರಿಶೀಲಿಸಲು ಮಹಿಳಾ ಪೊಲೀಸ್ ಜೀಪಿನಿಂದ ಕೆಳಗಿಳಿದು ಇಡೀ ಘಟನೆಯನ್ನು ಕ್ಯಾಮೆರಾದಲ್ಲಿ ವಿಡಿಯೊ ಮಾಡಿದ್ದಾರೆ. ಗುಡ್ಡಗಾಡು ಪ್ರದೇಶದಲ್ಲಿ ತೆರೆದ ಸನ್ ರೂಫ್‌ನೊಂದಿಗೆ ಸವಾರಿ ಮಾಡುವುದು ಮಾತ್ರವಲ್ಲದೆ ನಂಬರ್ ಪ್ಲೇಟ್ ಇಲ್ಲದ ವಾಹನವನ್ನು ಓಡಿಸುವ ಮೂಲಕ ದುಷ್ಕರ್ಮಿಗಳು ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳನ್ನು ಹೇಗೆ ಉಲ್ಲಂಘಿಸಿದ್ದಾರೆ ಎಂಬುದನ್ನು ಅವರು ತೋರಿಸಿದರು.

ಕರ್ತವ್ಯದಲ್ಲಿದ್ದ ಪೋಲೀಸ್ ಅಧಿಕಾರಿ ಪುರುಷರನ್ನು ತಮ್ಮ ವಾಹನದೊಳಗೆ ಕುಳಿತು ಸುರಕ್ಷಿತವಾಗಿ ಪ್ರಯಾಣಿಸುವಂತೆ ಸೂಚಿಸಿದ್ದಾರೆ. “ಗೂಂಡಾಗಿರಿ ಮಾಡಬೇಡಿ. ಇದು ಧಾರ್ಮಿಕ ಸ್ಥಳವಾಗಿದೆ. ಪವಿತ್ರ ಸ್ಥಳಕ್ಕೆ ಸಂಬಂಧಿಸಿದ ಭಾವನೆಗಳನ್ನು ನೋಯಿಸಬೇಡಿ” ಎಂದು ಅವರು ಪುಂಡು ಪುರುಷರಿಗೆ ತಿಳಿ ಹೇಳಿದ್ದಾರೆ.

ಇದನ್ನೂ ಓದಿ:  ನೀತಾ ಅಂಬಾನಿ ಪ್ರಸ್ತುತಪಡಿಸಿದ್ದಾರೆ ವಿಷ್ಣುವಿನ ‘ದಶಾವತಾರ’ದ ಚಿತ್ರಣ; ವಿಡಿಯೊ ನೋಡಿ

ಅಲ್ಲದೇ ವಿಡಿಯೊದಲ್ಲಿ, ಅವರಲ್ಲಿ ಕೆಲವರು ಪೊಲೀಸ್ ಅಧಿಕಾರಿಗೆ ಲಂಚ ನೀಡಲು ಅಥವಾ ಕೆಲವು ಪ್ರಭಾವ ಬೀರುವ ಕಾರ್ಡ್ ಅನ್ನು ಪ್ರದರ್ಶಿಸಲು ಪ್ರಯತ್ನಿಸಿದ್ದು ಕಂಡು ಬಂದಿದೆ. ಆದರೆ ಪೊಲೀಸ್ ಅಧಿಕಾರಿ ಈ ರೀತಿ ಮಾಡಿದರೆ ವಾಹನವನ್ನು ವಶಪಡಿಸಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Continue Reading

Latest

Viral Video: ಗರ್ಭಗುಡಿಗೆ ನುಗ್ಗಿ ದೇವರ ಕಿರೀಟಕ್ಕೇ ಕನ್ನ ಹಾಕಿದ ಕಳ್ಳ! ಪರಾರಿಯಾಗುವಾಗ ಮಾಡಿದ್ದೇನು? ವಿಡಿಯೊ ನೋಡಿ!

Viral Video: ವ್ಯಕ್ತಿಯೊಬ್ಬ ಭಕ್ತನಂತೆ ಸೋಗು ಹಾಕಿಕೊಂಡು ದೇವಾಲಯಕ್ಕೆ ಪ್ರವೇಶಿಸಿ ದೇವರ ತಲೆಯಲ್ಲಿರುವ ಬೆಳ್ಳಿಯ ಕಿರೀಟಕ್ಕೆ ಕನ್ನ ಹಾಕಿದ್ದಾನೆ. ಕದ್ದು ಓಡಿಹೋಗುವ ಮೊದಲು ಅದನ್ನು ಚೀಲದಲ್ಲಿ ಇರಿಸಿ, ದೇವರ ವಿಗ್ರಹಕ್ಕೆ ಕೈಮುಗಿದು ಪ್ರಾರ್ಥಿಸುತ್ತಾ ಕ್ಷಮೆಯಾಚಿಸುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಶಂಕಿತನನ್ನು ಪತ್ತೆಹಚ್ಚಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

VISTARANEWS.COM


on

Viral Video
Koo

ಮುಂಬೈ: ಸಾಮಾನ್ಯವಾಗಿ ಕಳ್ಳರು ಕಳ್ಳತನ ಮಾಡಲು ಮನೆ, ಅಂಗಡಿಗಳನ್ನು ಆರಿಸಿಕೊಳ್ಳುತ್ತಾರೆ. ಆದರೆ ದೇವಸ್ಥಾನದಲ್ಲಿ ಕಳ್ಳತನ ಮಾಡಲು ಕೆಲವು ಕಳ್ಳರು ಹೆದರುತ್ತಾರೆ. ಯಾಕೆಂದರೆ ಇದರಿಂದ ದೇವರ ಶಾಪಕ್ಕೆ ಗುರಿಯಾಗಿ ಆಪತ್ತಾಗಬಹುದೆಂಬ ಭಯವಿರುತ್ತದೆ. ಆದರೆ ಇಲ್ಲೊಬ್ಬ ಕಳ್ಳ ಕಳ್ಳತನ ಮಾಡಲು ದೇವಸ್ಥಾನಕ್ಕೆ ನುಗ್ಗಿದಲ್ಲದೇ ಸೀದಾ ದೇವರ ಬೆಳ್ಳಿ ಕಿರೀಟಕ್ಕೆ ಕೈ ಹಾಕಿದ್ದಾನೆ. ಆತನ ಕಳ್ಳತನದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಮುಂಬೈನ ಬೋರಿವಲಿಯ ದತ್ತಪ್ಡಾ ಪ್ರದೇಶದ ವಿಠ್ಠಲ ದೇವಸ್ಥಾನದಲ್ಲಿ ಈ ಕಳ್ಳತನದ ಘಟನೆ ನಡೆದಿದ್ದು, ದೇವಸ್ಥಾನದ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ವಿಡಿಯೊದಲ್ಲಿ ವ್ಯಕ್ತಿಯೊಬ್ಬ ಭಕ್ತನಾಗಿ ದೇವಾಲಯಕ್ಕೆ ಪ್ರವೇಶಿಸಿ ದೇವರ ತಲೆಯಲ್ಲಿರುವ ಬೆಳ್ಳಿಯ ಕಿರೀಟಕ್ಕೆ ಕನ್ನ ಹಾಕಿದ್ದಾನೆ. ಕದ್ದು ಓಡಿಹೋಗುವ ಮೊದಲು ಅದನ್ನು ಚೀಲದಲ್ಲಿ ಇರಿಸಿ, ದೇವರ ವಿಗ್ರಹಕ್ಕೆ ಕೈಮುಗಿದು ಪ್ರಾರ್ಥಿಸುತ್ತಾ ಕ್ಷಮೆಯಾಚಿಸುವುದು ಕಂಡು ಬಂದಿದೆ. ವೈರಲ್ ಆಗಿರುವ ಸಿಸಿಟಿವಿ ವಿಡಿಯೊದಲ್ಲಿ, ಜುಲೈ 17ರ ಬುಧವಾರ ಬೆಳಗ್ಗೆ 10:07ರ ಸುಮಾರಿಗೆ ವ್ಯಕ್ತಿ ದೇವಾಲಯವನ್ನು ಪ್ರವೇಶಿಸುವುದನ್ನು ಕಾಣಬಹುದು. ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಶಂಕಿತನನ್ನು ಪತ್ತೆಹಚ್ಚಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

ದೇವಸ್ಥಾನದಲ್ಲಿ ಕಳ್ಳತನ ಪ್ರಕರಣ ಇದೇ ಮೊದಲಲ್ಲ. ಇದಕ್ಕೂ ಮೊದಲು ಹಲವು ಕಡೆ ದೇವಸ್ಥಾನದಲ್ಲಿ ಕಳ್ಳರು ದರೋಡೆ ಮಾಡಿದ್ದಾರೆ. ನವಿ ಮುಂಬೈನ ಐರೋಲಿ ಪ್ರದೇಶದ ದತ್ ಮಂದಿರದಲ್ಲಿ ಫೆಬ್ರವರಿ 21 ಮತ್ತು ಫೆಬ್ರವರಿ 22 ರ ಮಧ್ಯರಾತ್ರಿ ಕಳ್ಳರು ದೇವಾಲಯಕ್ಕೆ ನುಗ್ಗಿ ಆವರಣದಲ್ಲಿರುವ ದೇಣಿಗೆ ಪೆಟ್ಟಿಗೆಯಿಂದ 20,000 ರೂ.ಗಳನ್ನು ಕದ್ದ ನಂತರ ನವೀ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: 8 ವರ್ಷದ ಮಗನ ತಲೆ ನೆಲಕ್ಕೆ ಅಪ್ಪಳಿಸಿ, ಮೈಕೈಯೆಲ್ಲ ಕಚ್ಚಿದ ತಾಯಿ; ವಿಡಿಯೊ ನೋಡಿ ಜನಾಕ್ರೋಶ

ಅಲ್ಲದೇ ಜೂನ್ 20ರಂದು ಗರ್ಲದಿನ್ನೆ ಮಂಡಲದ ಕೋಟಂಕ ಗ್ರಾಮದ ಬಳಿಯ ಗುಂಟಿ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕಳ್ಳರು ದೇವಾಲಯದ ಬೀಗಗಳನ್ನು ಮುರಿದು 16 ಕೆಜಿ ಬೆಳ್ಳಿ ಆಭರಣಗಳು, 8 ತೊಲ ಚಿನ್ನದ ಆಭರಣಗಳು ಮತ್ತು 13 ಲಕ್ಷ ರೂ.ಮೌಲ್ಯದ ಎರಡು ಹುಂಡಿಗಳನ್ನು ಮುರಿದು 15,000 ರೂ. ನಗದು ದೋಚಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ನಾಲ್ವರು ಅಂತರರಾಜ್ಯ ಕಳ್ಳರ ಗುಂಪನ್ನು ಪೊಲೀಸರು ಬಂಧಿಸಿದ್ದರು.

Continue Reading

Latest

Dog Attacks: ಬಡಪಾಯಿ ಡೆಲಿವರಿ ಮ್ಯಾನ್‌ನನ್ನು ಭೀಕರವಾಗಿ ಕಚ್ಚಿದ ಶ್ರೀಮಂತರ ಮನೆಯ ನಾಯಿಗಳು; ವಿಡಿಯೊ ಇದೆ

Dog Attacks: ವೈದ್ಯರೊಬ್ಬರ ಮನೆಗೆ ಡೆಲಿವರಿ ಮಾಡಲು ಬಂದ ವ್ಯಕ್ತಿಯ ಮೇಲೆ ಅವರ ಮನೆಯಲ್ಲಿ ಸಾಕಿದ ಎರಡು ಪಿಟ್‌ಬುಲ್‌ ನಾಯಿಗಳು ಭೀಕರವಾಗಿ ದಾಳಿ ಮಾಡಿವೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಂಧ್ಯಾ ರಾವ್ ಎಂಬ ವೈದ್ಯರ ಮನೆಗೆ ಡೆಲಿವರಿ ನೀಡಲು ಡೆಲಿವರಿ ಮ್ಯಾನ್‌ ಆಟೋದಲ್ಲಿ ಬಂದಿದ್ದಾಗ ಈ ಘಟನೆ ನಡೆದಿದೆ.

VISTARANEWS.COM


on

Dog Attacks
Koo

ವೈದ್ಯರೊಬ್ಬರ ಮನೆಗೆ ಫುಡ್ ಡೆಲಿವರಿ ಮಾಡಲು ಬಂದ ಡೆಲಿವರಿ ಮ್ಯಾನ್ ಮೇಲೆ ಅವರ ಮನೆಯಲ್ಲಿ ಸಾಕಿದ ಎರಡು ಪಿಟ್‌ ಬುಲ್‌ ನಾಯಿಗಳು ದಾಳಿ ಮಾಡಿದ ಘಟನೆ ಛತ್ತೀಸ್‌ಗಢದ ರಾಯ್ಪುರದ ಖಮರ್ದಿಹ್ ಪೊಲೀಸ್ ಠಾಣೆ ವ್ಯಾಪ್ತಿಯ ಅನುಪಮ್ ನಗರದಲ್ಲಿ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Dog Attacks) ಆಗಿದೆ. ಇಷ್ಟಾಗಿಯೂ ಆ ನಾಯಿಗಳ ಮಾಲಕಿ, ಡೆಲಿವರ್‌ ಮ್ಯಾನ್‌ನದ್ದೇ ತಪ್ಪು ಎಂದು ಆರೋಪಿಸಿದ್ದಾಳೆ. ಇದು ಜನಾಕ್ರೋಶಕ್ಕೆ ಕಾರಣವಾಗಿದೆ.

ನಾಯಿಗಳ ದಾಳಿಗೆ ಒಳಗಾದ ಡೆಲಿವರಿ ಮ್ಯಾನ್ ಸಲ್ಮಾನ್ ಎಂಬುದಾಗಿ ತಿಳಿದು ಬಂದಿದೆ. ವಿಡಿಯೊದಲ್ಲಿ ಸಲ್ಮಾನ್‌ ಅನ್ನು ನಾಯಿಗಳು ಕಚ್ಚುತ್ತಿರುವುದು ಕಂಡುಬಂದಿದೆ. ಈ ವೇಳೆ ಅವನು ನೋವಿನಿಂದ ನರಳುತ್ತಿದ್ದು, ಹಾಗೂ ನಾಯಿಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ದುರದೃಷ್ಟವಶಾತ್, ಅಲ್ಲಿ ಯಾರೂ ಕೂಡ ಸಲ್ಮಾನ್‌ ಸಹಾಯಕ್ಕೆ ಬರಲಿಲ್ಲ. ಕೊನೆಗೆ ಬೇರೆ ದಾರಿ ಕಾಣದೇ ಹೊರಗೆ ಓಡಿ ನಾಯಿಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು ಅಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಹತ್ತಿ ಕುಳಿತು ಜೀವ ಉಳಿಸಿಕೊಂಡಿದ್ದಾನೆ. ನಾಯಿಗಳು ಹೊರಟುಹೋದ ನಂತರ, ಯಾರೋ ಒಬ್ಬ ವ್ಯಕ್ತಿ ಸಲ್ಮಾನ್‌ಗೆ ಕುಡಿಯಲು ನೀರಿನ ಬಾಟಲಿಯನ್ನು ನೀಡಿದ್ದಾರೆ. ಹಾಗೂ ನಂತರ ಸಲ್ಮಾನ್ ಅವರ ಕೈ ಮತ್ತು ಕಾಲುಗಳು ರಕ್ತಸಿಕ್ತವಾಗಿದ್ದು, ಅವರಿಗೆ ರಕ್ತವನ್ನು ಒರೆಸಿಕೊಳ್ಳುವಂತೆ ಮಹಿಳೆಯೊಬ್ಬರು ಬಟ್ಟೆ ತಂದು ಕೊಟ್ಟಿದ್ದಾರೆ.

ಈ ವಿಡಿಯೊ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕೆ ಹಲವರು ಕಾಮೆಂಟ್ ಮಾಡಿದ್ದಾರೆ. ನಾಯಿಯ ಮಾಲೀಕನನ್ನು ಜೈಲಿಗೆ ಕಳುಹಿಸಿಬೇಕೆಂದು ಒಬ್ಬರು ಹೇಳಿದ್ದಾರೆ. ಹಾಗೇ ಮತ್ತೊಬ್ಬರು ಅವರು ವೈದ್ಯಕೀಯ ಶುಲ್ಕಗಳನ್ನು ಡೆಲಿವರಿ ಮ್ಯಾನ್‌ಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ವರದಿ ಪ್ರಕಾರ, ಸಂಧ್ಯಾ ರಾವ್ ಎಂಬ ಮಹಿಳೆ ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. ಡಾ. ಸಂಧ್ಯಾ ರಾವ್ ಅವರು ತಮ್ಮ ಮನೆಯಲ್ಲಿ 3 ನಾಯಿಗಳನ್ನು ಸಾಕಿದ್ದಾರೆ. ಮೂರು ನಾಯಿಗಳಲ್ಲಿ ಎರಡು ಅಪಾಯಕಾರಿ ಪಿಟ್‌ ಬುಲ್‌ ತಳಿಯಾಗಿವೆ. ಶುಕ್ರವಾರ ಡೆಲಿವರಿ ಮ್ಯಾನ್ ಸಂಧ್ಯಾ ರಾವ್ ಅವರ ಮನೆಗೆ ಆಟೋದಲ್ಲಿ ಬಂದಿದ್ದಾಗ ಅವರು ಮನೆಯೊಳಗೆ ಹೋಗಲು ಬಾಗಿಲನ್ನು ತಲುಪಿದ ಕೂಡಲೇ 2 ಪಿಟ್ಬುಲ್ ನಾಯಿಗಳು ಸಲ್ಮಾನ್‌ ಮೇಲೆ ದಾಳಿ ಮಾಡಿದವು. ನಾಯಿಗಳು ಆತನ ಕೈ ಮತ್ತು ಕಾಲುಗಳನ್ನು ತೀವ್ರವಾಗಿ ಕಚ್ಚಿವೆ.

Dog Attacks

ಇದನ್ನೂ ಓದಿ: 8 ವರ್ಷದ ಮಗನ ತಲೆ ನೆಲಕ್ಕೆ ಅಪ್ಪಳಿಸಿ, ಮೈಕೈಯೆಲ್ಲ ಕಚ್ಚಿದ ತಾಯಿ; ವಿಡಿಯೊ ನೋಡಿ ಜನಾಕ್ರೋಶ

ದಾಳಿಯ ನಂತರ ನೆರೆಹೊರೆಯವರು ಸಲ್ಮಾನ್ ಅನ್ನು ಆಸ್ಪತ್ರೆಗೆ ಕರೆದೊಯ್ದರು ಎಂದು ವರದಿಗಳು ತಿಳಿಸಿವೆ. ಅಲ್ಲದೇ ನಾಯಿ ಮಾಲೀಕರು ತಮ್ಮನ್ನು ಕರೆಯದೇ ಒಳಗೆ ಬಂದಿದ್ದಕ್ಕೆ ಹೀಗೆ ಆಗಿರುವುದಾಗಿ ಸಲ್ಮಾನ್‌ ಅನ್ನೇ ದೂಷಿಸಿದ್ದಾರೆ! ಸಲ್ಮಾನ್ ಅವರ ದೂರಿನ ನಂತರ ಸೋಮವಾರ ಬೆಳಗ್ಗೆ ಮುನ್ಸಿಪಲ್ ಕಾರ್ಪೊರೇಷನ್ ತಂಡವು ವೈದ್ಯರ ಮನೆಗೆ ನಾಯಿಗಳನ್ನು ಹಿಡಿಯಲು ಬಂದಿದ್ದರು. ಆದರೆ ಬರಿಗೈಯಲ್ಲಿ ವಾಪಸ್‌ ಹೋಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

Continue Reading
Advertisement
Viral Video
Latest8 mins ago

Viral Video: ಬಸ್‌ ಡ್ರೈವರ್‌ನ ರೀಲ್ಸ್‌ ಕ್ರೇಜ್‌ಗೆ 2 ಎತ್ತುಗಳು ಬಲಿ; ರೈತನ ಸ್ಥಿತಿ ಗಂಭೀರ

Train Accident
ದೇಶ9 mins ago

Train Derail: ಹಳಿ ತಪ್ಪಿದ ರೈಲು; ಅಪಘಾತದ ಹಿಂದೆ ಇದ್ಯಾ ವಿಧ್ವಂಸಕ ಕೃತ್ಯ?

Crime News
ಪ್ರಮುಖ ಸುದ್ದಿ18 mins ago

Bangalore News : ಬೆಂಗಳೂರಲ್ಲಿ ಆಘಾತಕಾರಿ ಘಟನೆ; ಗಾಂಜಾ ನಶೆಯಲ್ಲಿ ಶಾಲೆ ಬಿಟ್ಟು ಮನೆಗೆ ಹೋಗುತ್ತಿದ್ದ ಬಾಲಕಿಯರನ್ನು ಬೆದರಿಸಿದ ಪುಂಡರು

Lady Police Officer
Latest30 mins ago

Lady Police Officer: ಗೂಂಡಾಗಿರಿ ಮಾಡಿದರೆ ಹುಷಾರ್‌! ಪುಂಡರಿಗೆ ಲೇಡಿ ಪೊಲೀಸ್ ವಾರ್ನಿಂಗ್‌; ವಿಡಿಯೊ ವೈರಲ್

kiccha sudeep‌ Fans
ಸಿನಿಮಾ55 mins ago

Kiccha Sudeep: ಸೆಲ್ಫಿಗಾಗಿ 2 ಗಂಟೆ ಕಾದ ಅಭಿಮಾನಿಗೆ ಕಿಚ್ಚ ಸುದೀಪ್ ಅವಮಾನ! ವಿಡಿಯೊ ನೋಡಿ

Ratna Bhandar
ದೇಶ1 hour ago

Ratna Bhandar: ಒಂದೇ ವಾರದಲ್ಲಿ ಎರಡನೇ ಬಾರಿ ತೆರೆದ ಪುರಿ ಜಗನ್ನಾಥನ ʼರತ್ನ ಭಂಡಾರʼ

GT World Mall
ಪ್ರಮುಖ ಸುದ್ದಿ1 hour ago

GT World Mall : ಜಿಟಿ ಮಾಲ್​ ಏಳು ದಿನಗಳ ಕಾಲ ಬಂದ್​, ಮಾಲೀಕರಿಂದಲೇ ಸ್ವಯಂಪ್ರೇರಿತ ಕ್ರಮ

Viral Video
Latest1 hour ago

Viral Video: ಗರ್ಭಗುಡಿಗೆ ನುಗ್ಗಿ ದೇವರ ಕಿರೀಟಕ್ಕೇ ಕನ್ನ ಹಾಕಿದ ಕಳ್ಳ! ಪರಾರಿಯಾಗುವಾಗ ಮಾಡಿದ್ದೇನು? ವಿಡಿಯೊ ನೋಡಿ!

Dog Attacks
Latest1 hour ago

Dog Attacks: ಬಡಪಾಯಿ ಡೆಲಿವರಿ ಮ್ಯಾನ್‌ನನ್ನು ಭೀಕರವಾಗಿ ಕಚ್ಚಿದ ಶ್ರೀಮಂತರ ಮನೆಯ ನಾಯಿಗಳು; ವಿಡಿಯೊ ಇದೆ

Kashmir Encounter
ದೇಶ2 hours ago

Kashmir Encounter: ಕಾಶ್ಮೀರದಲ್ಲಿ ಮತ್ತೆ ಎನ್‌ಕೌಂಟರ್‌; ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ3 hours ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ4 hours ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ2 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ3 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ3 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ4 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ4 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ4 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ4 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

ಟ್ರೆಂಡಿಂಗ್‌