Republic Day 2023 : ಗಣರಾಜ್ಯೋತ್ಸವ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ - Vistara News

ಗಣರಾಜ್ಯೋತ್ಸವ

Republic Day 2023 : ಗಣರಾಜ್ಯೋತ್ಸವ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು 74ನೇ ಗಣರಾಜ್ಯೋತ್ಸವ ಪ್ರಯುಕ್ತ ಟ್ವೀಟ್‌ ಮೂಲಕ ಶುಭಾಶಯ (Republic Day 2023) ಕೋರಿದ್ದಾರೆ.

VISTARANEWS.COM


on

PM Modi pays tributes CRPF jawans Who lost their lives In Pulwama Attack
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು 74ನೇ ಗಣರಾಜ್ಯೋತ್ಸವದ (Republic Day 2023) ಶುಭಾಶಯಗಳನ್ನು ಕೋರಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭ ಗಣರಾಜ್ಯೋತ್ಸವ ಹೆಚ್ಚು ವಿಶೇಷವೆನ್ನಿಸಿದೆ. ರಾಷ್ಟ್ರದ ಏಳಿಗೆಗಾಗಿ ತ್ಯಾಗ ಬಲಿದಾನ ಮಾಡಿರುವ ಮಹಾತ್ಮರನ್ನು ಈ ಸಂದರ್ಭ ಸ್ಮರಿಸುವ ಜತೆಗೆ ಅವರ ಧ್ಯೇಯೋದ್ದೇಶಗಳನ್ನು ಮುಂದುವರಿಸಬೇಕು ಎಂದು ಪ್ರಧಾನಿಯವರು ಟ್ವೀಟ್‌ನಲ್ಲಿ ಶುಭಾಶಯ ಸಂದೇಶದಲ್ಲಿ ತಿಳಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಗಣರಾಜ್ಯೋತ್ಸವ

Republic Day: ಮಾಲ್ಡೀವ್ಸ್ ಮತ್ತು ಭಾರತದ್ದು ಶತಮಾನಗಳ ದೋಸ್ತಿ! ಮಾಲ್ಡೀವ್ಸ್ ಅಧ್ಯಕ್ಷನಿಗೆ ಬಂತಾ ಬುದ್ಧಿ?

Republic Day: ಪ್ರಧಾನಿ ಮೋದಿ ವಿರುದ್ಧ ಮಾಲ್ಡೀವ್ಸ್‌ ಸಚಿವರು ನಿಂದನಾತ್ಮಕ ಭಾಷೆ ಬಳಸಿದ ಹಿನ್ನೆಲೆಯಲ್ಲಿ ಭಾರತ ಮತ್ತು ಮಾಲ್ಡೀವ್ಸ್ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿಯಾಗಿದೆ.

VISTARANEWS.COM


on

Maldives Election
Koo

ನವದೆಹಲಿ: ಭಾರತ ವಿರೋಧಿ(Anti India), ಚೀನಾ ಸ್ನೇಹಿತ (Friend of China) ಅಧ್ಯಕ್ಷ ಎಂದು ಗುರುತಿಸಿಕೊಂಡಿರುವ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು (Maldives President Mohamed Muizzu)ಅವರು ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಶುಭಾಶಯ ಕೋರಿದ್ದಾರೆ. ಮಾಲ್ಡೀವ್ಸ್ ಮತ್ತು ಭಾರತದ್ದು ಶತಮಾನಗಳ ಸ್ನೇಹ (Centuries of Friendship) ಎಂದು ಹೇಳಿದ್ದಾರೆ. ಪರಸ್ಪರ ಗೌರವ ಮತ್ತು ರಕ್ತಸಂಬಂಧದ ಆಳವಾದ ಅರ್ಥದಲ್ಲಿ ಸ್ಥಾಪಿಸಲಾದ ಎರಡು ರಾಷ್ಟ್ರಗಳ ನಡುವಿನ ಶತಮಾನಗಳ ಹಳೆಯ ಸ್ನೇಹ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ(Republic Day).

ಭಾರತದ 75 ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿ ಮೊಹಮ್ಮದ್ ಮುಯಿಜ್ಜು ಅವರು ಭಾರತದ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳಿಗೆ ಶುಭಾಶಯಗಳನ್ನು ಕಳುಹಿಸಿದ್ದಾರೆ. ಅಧ್ಯಕ್ಷ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರತ್ಯೇಕ ಸಂದೇಶಗಳಲ್ಲಿ, ಅಧ್ಯಕ್ಷ ಮುಯಿಝು ಅವರು ಭಾರತದ 75 ನೇ ಗಣರಾಜ್ಯೋತ್ಸವವನ್ನು ಸ್ಮರಿಸಿದ್ದಾರೆ ಮತ್ತು ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ ಎಂದು ಮಾಲ್ಡೀವ್ಸ್ ಅಧ್ಯಕ್ಷ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

ಅಧ್ಯಕ್ಷ ಮುಯಿಜು ಅವರು ಸರ್ಕಾರ ಮತ್ತು ಮಾಲ್ಡೀವ್ಸ್ ಜನರಿಂದ ಭಾರತದ ಜನರಿಗೆ ಶುಭ ಹಾರೈಸಿದರು. ಅವರು ಶತಮಾನಗಳ ಸ್ನೇಹ, ಪರಸ್ಪರ ಗೌರವ ಮತ್ತು ರಕ್ತಸಂಬಂಧದ ಆಳವಾದ ಪ್ರಜ್ಞೆಯಿಂದ ಪೋಷಿಸಿದ ಮಾಲ್ಡೀವ್ಸ್-ಭಾರತದ ಬಾಂಧವ್ಯವನ್ನು ಒತ್ತಿಹೇಳಿದರು. ಮುಂಬರುವ ವರ್ಷಗಳಲ್ಲಿ ಭಾರತ ಸರ್ಕಾರ ಮತ್ತು ಜನರಿಗೆ ನಿರಂತರ ಶಾಂತಿ, ಪ್ರಗತಿ ಮತ್ತು ಸಮೃದ್ಧಿಯ ದೊರೆಯಲಿದೆ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಾಲ್ಡೀವ್ಸ್ ವಿದೇಶಾಂಗ ಸಚಿವ ಮೂಸಾ ಜಮೀರ್ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ, ಗಣರಾಜ್ಯೋತ್ಸವದ ಸಂದರ್ಭದಲ್ಲಿ ಭಾರತದ ಜನತೆಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವ ಡಾ ಎಸ್ ಜೈಶಂಕರ್ ಮತ್ತು ಭಾರತದ ಸ್ನೇಹಪರ ಜನರಿಗೆ ಹಾರ್ದಿಕ ಶುಭಾಶಯಗಳು. ಮುಂದಿನ ವರ್ಷಗಳಲ್ಲಿ ಮಾಲ್ಡೀವ್ಸ್ ಮತ್ತು ಭಾರತದ ನಡುವಿನ ಸ್ನೇಹ ಮತ್ತು ಸಹಕಾರದ ನಿಕಟ ಬಂಧಗಳು ಪ್ರವರ್ಧಮಾನಕ್ಕೆ ಬರುತ್ತವೆ ಎಂದು ನನಗೆ ವಿಶ್ವಾಸವಿದೆ ಎಂದು ಜಮೀರ್ ಹೇಳಿದ್ದಾರೆ.

ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿ, ಇದೊಂದು ಅತ್ಯುತ್ತಮ ಪ್ರವಾಸಿತಾಣವಾಗಲಿದೆ ಎಂದು ಹೇಳಿದ್ದರು. ಈ ಹೇಳಿಕೆ ಕುರಿತು ಮಾಲ್ಡೀವ್ಸ್ ಕೆಲವು ಸಚಿವರು ಮೋದಿ ಅವರು ವಿರುದ್ಧ ನಿಂದನಾತ್ಮಕ ಭಾಷೆ ಬಳಸಿ ಟೀಕಿಸಿದ್ದರು. ಇದರಿಂದಾಗಿ ಮಾಲ್ಡೀವ್ಸ್ ಮತ್ತು ಭಾರತದ ನಡುವೆ ರಾಜತಾಂತ್ರಿಕ ಸಂಘರ್ಷ ಏರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಮಾಲ್ಡೀವ್ಸ್‌ನ ಈ ಶತಮಾನದ ದೋಸ್ತಿ ಎಂಬ ಹೇಳಿಕೆ ಮಹತ್ವದ ಪಡೆದುಕೊಂಡಿದೆ.

ಈ ಸುದ್ದಿಯನ್ನೂ ಓದಿ: ಭಾರತದ ವಿಮಾನ ಬಳಸಲು ಮಾಲ್ಡೀವ್ಸ್‌ ಅಧ್ಯಕ್ಷ ನಕಾರ; 13 ವರ್ಷದ ಬಾಲಕ ಸಾವು

Continue Reading

ವಿಜಯನಗರ

Vijayanagara News: ಕೊಟ್ಟೂರಿನಲ್ಲಿ 75ನೇ ಗಣರಾಜ್ಯೋತ್ಸವ ದಿನ ಆಚರಣೆ

Vijayanagara News: ಕೊಟ್ಟೂರು ಪಟ್ಟಣದ ಶ್ರೀ ಕೊಟ್ಟೂರೇಶ್ವರ ಮಹಾವಿದ್ಯಾಲಯದಲ್ಲಿ ಶುಕ್ರವಾರ 75ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು.

VISTARANEWS.COM


on

75th Republic Day celebrations in Kottur
ಕೊಟ್ಟೂರು ಪಟ್ಟಣದ ಶ್ರೀ ಕೊಟ್ಟೂರೇಶ್ವರ ಮಹಾವಿದ್ಯಾಲಯದಲ್ಲಿ ಶುಕ್ರವಾರ 75ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು.
Koo

ಕೊಟ್ಟೂರು: ಪಟ್ಟಣದ ಶ್ರೀ ಕೊಟ್ಟೂರೇಶ್ವರ ಮಹಾವಿದ್ಯಾಲಯದಲ್ಲಿ ಶುಕ್ರವಾರ 75ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು (75th Republic Day) ಆಚರಿಸಲಾಯಿತು.

ಗಣರಾಜ್ಯೋತ್ಸವದ ಅಂಗವಾಗಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಂ. ರವಿಕುಮಾರ್‌, ಧ್ವಜಾರೋಹಣ ನೆರವೇರಿಸಿ, ಬಳಿಕ ಮಾತನಾಡಿದರು.

ಇದನ್ನೂ ಓದಿ: Karnataka Weather: ಕಡಿಮೆ ಆಯಿತೇ ಚಳಿ? ಯಾವ ಜಿಲ್ಲೆಯಲ್ಲಿ ಹೇಗಿದೆ ವಾತಾವರಣ?

ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಸಿದ್ದರಾಮ ಕಲ್ಮಠ, ಸದಸ್ಯರಾದ ಕೆ.ಬಿ. ಮಲ್ಲಿಕಾರ್ಜುನ್, ಅಡಿಕೆ ಮಂಜುನಾಥಯ್ಯ, ಡಿ.ಎಸ್. ಶಿವಮೂರ್ತಿ, ಪಿಯು ಕಾಲೇಜಿನ ಪ್ರಾಚಾರ್ಯ ಎಂ.ಎಚ್. ಪ್ರಶಾಂತ್ ಕುಮಾರ್, ಹಿರಿಯ ಉಪನ್ಯಾಸಕರಾದ ಡಿ. ರವೀಂದ್ರ ಗೌಡ, ಕೃಷ್ಣಪ್ಪ, ಜೆ.ಬಿ. ಸಿದ್ದನಗೌಡ, ಪೃಥ್ವಿರಾಜ್, ಡಾ. ಶಿವಕುಮಾರ್, ವಿಜಯಲಕ್ಷ್ಮಿ ಸಜ್ಜನ್, ಬಸವರಾಜ ಬಣಕಾರ್ ಉಮೇಶ್ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕುಮಾರಿ ಚೈತ್ರ ಪ್ರಾರ್ಥಿಸಿದರು. ಕೆ.ಎಂ. ಪ್ರಭಾಕರ್ ನಿರೂಪಿಸಿದರು.

Continue Reading

ವಿಜಯನಗರ

Vijayanagara News: ಕೂಡ್ಲಿಗಿಯಲ್ಲಿ 75ನೇ ಗಣರಾಜ್ಯೋತ್ಸವ ದಿನ ಆಚರಣೆ

Vijayanagara News: ಕೂಡ್ಲಿಗಿ ಪಟ್ಟಣದ ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಏರ್ಪಡಿಸಿದ್ದ 75ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ತಹಸೀಲ್ದಾರ್ ಎಂ. ರೇಣುಕಾ ಧ್ವಜಾರೋಹಣ ನಡೆಸಿದರು.

VISTARANEWS.COM


on

75th Republic Day celebration in Kudligi
ಕೂಡ್ಲಿಗಿ ಪಟ್ಟಣದ ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿ ನಡೆದ 75ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ತಹಸೀಲ್ದಾರ್ ಎಂ. ರೇಣುಕಾ ಧ್ವಜಾರೋಹಣ ನಡೆಸಿದರು.
Koo

ಕೂಡ್ಲಿಗಿ: ಪಟ್ಟಣದ ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿ ಶುಕ್ರವಾರ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ 75ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ (75th Republic Day) ತಹಸೀಲ್ದಾರ್ ಎಂ. ರೇಣುಕಾ ಧ್ವಜಾರೋಹಣ ನೆರವೇರಿಸಿದರು.

ಗಣರಾಜ್ಯೋತ್ಸವದಲ್ಲಿ ಧ್ವಜಾವಂದನೆ ಸ್ವೀಕರಿಸಿ ಮಾತನಾಡಿದ ಕೂಡ್ಲಿಗಿ ಶಾಸಕ ಡಾ.ಎನ್.ಟಿ. ಶ್ರೀನಿವಾಸ್, ಭಾರತದ ಇತಿಹಾಸದಲ್ಲೇ ಗಣರಾಜ್ಯೋತ್ಸವ ದಿನ ಮಹತ್ವದ ದಿನವಾಗಿದೆ ಎಂದು ತಿಳಿಸಿದರು.

ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಈಗಾಗಲೇ ಸುಮಾರು 400 ಕೋಟಿ ಅನುದಾನವನ್ನು ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಸಮ್ಮತಿ ನೀಡಿದೆ. ಶಿಕ್ಷಣ, ಆರೋಗ್ಯ ಸೇರಿದಂತೆ ಜನರಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ಈಗಾಗಲೇ ಕ್ಷೇತ್ರದ ಕಟ್ಟಕಡೆಯ ಹಳ್ಳಿಗೂ ಭೇಟಿ ನೀಡಿ ಸಮಸ್ಯೆಗಳನ್ನು ಅರಿತಿದ್ದು,ಅವರಿಗೆ ಅವಶ್ಯವಾದ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ: Karnataka Weather: ಕಡಿಮೆ ಆಯಿತೇ ಚಳಿ? ಯಾವ ಜಿಲ್ಲೆಯಲ್ಲಿ ಹೇಗಿದೆ ವಾತಾವರಣ?

ತುಂಗಭದ್ರಾ ನದಿಯಿಂದ ಪಾವಗಡಕ್ಕೆ ಕುಡಿಯುವ ನೀರಿನ ಬಹುಗ್ರಾಮ ಯೋಜನೆಯಿಂದ ಕೂಡ್ಲಿಗಿ ಪಟ್ಟಣ ಕೈಬಿಡಲಾಗಿತ್ತು, ಅದನ್ನ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಪಟ್ಟಣಕ್ಕೂ ಕುಡಿಯುವ ನೀರು ಒದಗಿಸಲು ಸುಮಾರು 68 ಕೋಟಿ ಅನುದಾನ ಈಗಾಗಲೇ ಬಿಡುಗಡೆ ಮಾಡಿ ಟೆಂಡರ್ ಮುಗಿದಿದೆ, ಶ್ರೀಘ್ರದಲ್ಲಿ ಕಾಮಾಗಾರಿ ಆರಂಭವಾಗಲಿದೆ ಎಂದರು.

ಇದೇ ಸಂಧರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರಿಗೆ ಶಾಸಕರು ಸನ್ಮಾನಿಸಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಇದನ್ನೂ ಓದಿ: Tea And Coffee With Meals: ಊಟ ತಿಂಡಿ ಜೊತೆಜೊತೆಗೆ ಚಹಾ ಕಾಫಿ ಹೀರುವ ಅಭ್ಯಾಸ ಒಳ್ಳೆಯದೇ, ಕೆಟ್ಟದ್ದೇ?

ಈ ವೇಳೆ ತಾಪಂ ಇಒ ವೈ. ರವಿಕುಮಾರ್, ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪೂರ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಪಿ.ಶಿವರಾಜ್, ಪಪಂ ಸದಸ್ಯರಾದ ಕಾವಲಿ ಶಿವಪ್ಪನಾಯಕ, ಪಿ.ಚಂದ್ರು, ಸಚಿನ್ ಕುಮಾರ್, ಕೆ.ಈಶಪ್ಪ, ಸಿರಬಿ ಮಂಜುನಾಥ, ಲಕ್ಷ್ಮೀದೇವಿ, ಚೌಡಮ್ಮ, ಸರಸ್ವತಿ, ರೇಣುಕಾ ದುರುಗೇಶ್, ಲೀಲಾವತಿ ಪ್ರಭಾಕರ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಇತರರು ಇದ್ದರು.

Continue Reading

ಉತ್ತರ ಕನ್ನಡ

Uttara Kannada News: ಯಲ್ಲಾಪುರದಲ್ಲಿ 75ನೇ ಗಣರಾಜ್ಯೋತ್ಸವ ದಿನಾಚರಣೆ

Uttara Kannada News: ಯಲ್ಲಾಪುರ ತಾಲೂಕಿನ ಕಾಳಮ್ಮ ನಗರದಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ 75ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣವನ್ನು ತಹಸೀಲ್ದಾರ್‌ ಗುರುರಾಜ್‌ ಎಂ. ನೆರವೇರಿಸಿದರು.

VISTARANEWS.COM


on

75th Republic Day celebration in Yallapur
ಯಲ್ಲಾಪುರ ತಾಲೂಕಿನ ಕಾಳಮ್ಮ ನಗರದಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ 75ನೇ ಗಣರಾಜ್ಯೋತ್ಸವ ದಿನಾಚರಣೆ ಆಚರಿಸಲಾಯಿತು.
Koo

ಯಲ್ಲಾಪುರ: ತಾಲೂಕಿನ ಕಾಳಮ್ಮ ನಗರದಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ 75ನೇ ಗಣರಾಜ್ಯೋತ್ಸವ ದಿನಾಚರಣೆ (75th Republic Day) ಅಂಗವಾಗಿ ಧ್ವಜಾರೋಹಣವನ್ನು ತಹಸೀಲ್ದಾರ್‌ ಗುರುರಾಜ್‌ ಎಂ. ನೆರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಶಿವರಾಮ ಹೆಬ್ಬಾರ್‌, ನಮ್ಮದು ಸಂಪೂರ್ಣ ವಿಶ್ವದಲ್ಲಿ ಅತ್ಯಂತ ಅಗ್ರಮಾನ್ಯದಲ್ಲಿರುವ ದೇಶವಾಗಿದೆ. ನಮ್ಮ ನೆಲ, ಜಲ, ಸಂಸ್ಕೃತಿಯನ್ನು ಗೌರವಿಸುವಂತ ಸಂಸ್ಕಾರ ನಮ್ಮ ದೇಶದ ಮಣ್ಣಿನ ಗುಣವಾಗಿದೆ. ಡಾ. ಬಿ.ಆರ್‌. ಅಂಬೇಡ್ಕರ್‌, ಮಹಾತ್ಮ ಗಾಂಧೀಜಿ ಅವರಂತಹ ಮಹನೀಯರ ಆದರ್ಶಗಳು ನಮಗೆ ಪ್ರೇರಣೆಯಾಗಲಿ ಎಂದು ತಿಳಿಸಿದರು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಹಸೀಲ್ದಾರ್‌ ಗುರುರಾಜ್‌ ಎಂ., ಜಗತ್ತಿನ ಅತ್ಯುನ್ನತ ಸಂವಿಧಾನವನ್ನು ನಮ್ಮ ದೇಶ ಹೊಂದಿದೆ. ಅನೇಕ ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ, ಶ್ರೇಷ್ಠ ಗುಣಗಳನ್ನು ಅಳವಡಿಸಿ ನಮ್ಮ ಸಂವಿಧಾನವನ್ನು ರೂಪಿಸಿದ ಡಾ. ಅಂಬೇಡ್ಕರ್‌ ಅವರನ್ನು ನಾವೆಲ್ಲ ಇಂದು ನೆನೆಯಲೇಬೇಕು ಎಂದು ತಿಳಿಸಿದರು.

ಇದನ್ನೂ ಓದಿ: Padma Shri: ಭತ್ತದ ತಳಿಯ ಸಂರಕ್ಷನನ್ನು ಅರಸಿ ಬಂತು ಪದ್ಮಶ್ರೀ ಗೌರವ

ಇದೇ ಸಂದರ್ಭದಲ್ಲಿ ತಾನ್‌ಸೇನ್‌ ಪ್ರಶಸ್ತಿ ಪುರಸ್ಕೃತ ಪಂಡಿತ್‌ ಗಣಪತಿ ಭಟ್‌ ಹಾಸಣಗಿ, ಗ್ರಾಮೀಣ ಭಾಗದಲ್ಲಿ ಸೇವೆಗಾಗಿ ಡಾ. ನಾಗರಾಜ್ ಬಿ.ಎಚ್‌. ಹಾಗೂ ನಾಟಿ ವೈದ್ಯ ನಾರಾಯಣ ಹೆಗಡೆ ಗವೇಗುಳಿ ಅವರಿಗೆ ನಾಗರಿಕ ಸನ್ಮಾನ ನೀಡಿ ಗೌರವಿಸಲಾಯಿತು. ಅಂತೆಯೇ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟು ಶ್ರೀದೇವಿ ಗಂಗಾ ನಾಯಕ ಹಾಗೂ ವಿಶೇಷ ಚೇತನರ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಜಯಶ್ರೀ ಮಂಜುನಾಥ ಮೈಲಾರ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸಾಂಕೇತಿಕವಾಗಿ ಲ್ಯಾಪ್‌ಟಾಪ್ ವಿತರಣೆ ಮಾಡಲಾಯಿತು.

ನಂತರ ನಡೆದ ಆಕರ್ಷಕ ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.

ವೇದಿಕೆಯಲ್ಲಿ ಪಂಚಾಯತ್‌ ರಾಜ್‌ ವಿಕೇಂದ್ರೀಕರಣ ಸಮಿತಿ ಉಪಾಧ್ಯಕ್ಷ ಪ್ರಮೋದ್ ಹೆಗಡೆ, ಸಿಪಿಐ ರಂಗನಾಥ ನೀಲಮ್ಮನವರ್, ಪಟ್ಟಣ ಪಂಚಾಯಿತಿ ಸದಸ್ಯರಾದ ಸುನಂದಾ ದಾಸ್ ಹಾಗೂ ಜ್ಯೋತಿ ನಾಯ್ಕ, ವಿವಿಧ ಇಲಾಖೆಯ ಅಧಿಕಾರಿಗಳು, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: Sachin Tendulkar: ಸಫಾರಿ ವೇಳೆ ಮೂರನೇ ತಲೆ ಮಾರಿನ ಹುಲಿಯನ್ನು ತೋರಿಸಿದ ಸಚಿನ್​ ತೆಂಡೂಲ್ಕರ್​

ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್. ಹೆಗಡೆ ಸ್ವಾಗತಿಸಿದರು. ಸಂಜೀವ್ ಕುಮಾರ್ ಹೊಸ್ಕೇರಿ ನಿರ್ವಹಿಸಿದರು. ಶಿಕ್ಷಣ ಸಂಯೋಜಕ ಸಂತೋಷ ಜಿಗಳೂರು ವಂದಿಸಿದರು.

Continue Reading
Advertisement
Darshanam Mogulaiah
ದೇಶ20 seconds ago

Darshanam Mogulaiah: 2 ವರ್ಷದ ಹಿಂದೆ ಪದ್ಮಶ್ರೀ ಪಡೆದ ಸಾಧಕ ಈಗ ಹೊಟ್ಟೆಪಾಡಿಗಾಗಿ ಕೂಲಿ ಕಾರ್ಮಿಕ!

Prajwal Revanna Case Who is the kingpin of Prajwal video pen drive HDK team is on its way
ಕ್ರೈಂ5 mins ago

Prajwal Revanna Case: ಪ್ರಜ್ವಲ್‌ ವಿಡಿಯೊ ಪೆನ್‌ಡ್ರೈವ್ ಕಿಂಗ್‌ಪಿನ್ ಯಾರು? ಬೆನ್ನತ್ತಿ ಹೊರಟಿದೆ ಎಚ್‌ಡಿಕೆ ಟೀಂ!

KL Rahul
ಕ್ರೀಡೆ16 mins ago

KL Rahul : ವಿಶ್ವ ಕಪ್​ ತಂಡಕ್ಕೆ ಕೆ. ಎಲ್​ ರಾಹುಲ್​ ಬೇಡ ಅಂದಿದ್ದು ರೋಹಿತ್ ಶರ್ಮಾ; ಆಂತರಿಕ ಮಾಹಿತಿ ಬಹಿರಂಗ

Physical Abuse
ಕರ್ನಾಟಕ32 mins ago

Physical Abuse: ದಲಿತ ಬಾಲಕಿಯನ್ನು ಗರ್ಭಿಣಿ ಮಾಡಿ ಎಸ್ಕೇಪ್ ಆಗಿದ್ದ ಸದ್ದಾಂ ಹುಸೇನ್ ಅರೆಸ್ಟ್‌

Rachita Taneja
ದೇಶ46 mins ago

Rachita Taneja: ಭಾರತದ ಕಾರ್ಟೂನಿಸ್ಸ್ ರಚಿತಾ ತನೇಜಾಗೆ ಕೋಫಿ ಅನ್ನಾನ್‌ ಪ್ರಶಸ್ತಿ ಗರಿ

Rahul Gandhi
ಪ್ರಮುಖ ಸುದ್ದಿ48 mins ago

Rahul Gandhi : ಮಹಾತ್ಮ ರಾಹುಲ್​, ಕುತಂತ್ರಿ ಗಾಂಧೀಜಿ; ಚರ್ಚೆಗೆ ಗ್ರಾಸವಾಯ್ತು​ ಕಾಂಗ್ರೆಸ್​ ನಾಯಕನ ಹೇಳಿಕೆ

Prajwal Revanna Case Kidnapping case filed against Revanna Anticipatory bail plea postponed
ಕ್ರೈಂ51 mins ago

Prajwal Revanna Case: ರೇವಣ್ಣ ಮೇಲೆ ಕಿಡ್ನ್ಯಾಪ್‌ ಕೇಸ್;‌ ನಿರೀಕ್ಷಣಾ ಜಾಮೀನು ಅರ್ಜಿ ಮುಂದೂಡಿಕೆ, ನಾಳೆ SIT ಮುಂದೆ ಹಾಜರ್‌?

Prajwal Revanna Case HD Revanna ready to leave the country SIT issues lookout notice
ಕ್ರೈಂ1 hour ago

Prajwal Revanna Case: ದೇಶ ಬಿಟ್ಟು ಹೋಗಲು ಸಜ್ಜಾದರೇ ಎಚ್.ಡಿ. ರೇವಣ್ಣ? ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಿದ SIT!

IPL 2024
Latest1 hour ago

IPL 2024 : ಕೊಹ್ಲಿಯ ಸ್ಟ್ರೈಕ್ ರೇಟ್ ಪ್ರಶ್ನಿಸುವವರಿಗೆ ತಕ್ಕ ಪಾಠ ಹೇಳಿದ ಕೈಫ್​, ಪಠಾಣ್​​

Faisal Raza Abidi
ದೇಶ1 hour ago

2026ರಲ್ಲಿ ಭಾರತ ಪೀಸ್‌ ಪೀಸ್‌ ಆಗುತ್ತದೆ ಎಂದ ಪಾಕ್‌ ಮಾಜಿ ಸಂಸದ; ಮೋದಿ ಹಿಂದುತ್ವವೂ ಪತನ ಎಂದು ಹೇಳಿಕೆ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Bengaluru Rains
ಮಳೆ5 hours ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ17 hours ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ1 day ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ2 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ4 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20244 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20244 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ5 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20245 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20245 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

ಟ್ರೆಂಡಿಂಗ್‌