ವಿಸ್ತಾರ ಮೀಡಿಯಾ: ಏನು, ಎತ್ತ? | ಸಿಇಒ, ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಮುಕ್ತ ಮಾತು - Vistara News

ಪ್ರಮುಖ ಸುದ್ದಿ

ವಿಸ್ತಾರ ಮೀಡಿಯಾ: ಏನು, ಎತ್ತ? | ಸಿಇಒ, ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಮುಕ್ತ ಮಾತು

ವಿಸ್ತಾರ ಮೀಡಿಯಾ ಪ್ರೈ. ಲಿ. ಸಂಸ್ಥೆಯ ಟಿವಿ ಚಾನೆಲ್‌ನ ಲೋಗೊ ಮತ್ತು ವಿಸ್ತಾರ ಡಿಜಿಟಲ್ ನ್ಯೂಸ್ ವೆಬ್‌ಸೈಟ್ ಅನಾವರಣಗೊಂಡಿದೆ. ಈ ಮಾಧ್ಯಮ ಸಂಸ್ಥೆ ಆರಂಭಿಸಿರುವ ಉದ್ದೇಶ ಏನು? ಇದರ ಗುರಿ ಏನು? ಧ್ಯೇಯ ಧೋರಣೆಗಳೇನು ಎಂಬ ಬಗ್ಗೆ ಸಂಸ್ಥೆಯ ಸಿಇಒ ಮತ್ತು ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಅವರು ಇಲ್ಲಿ ಮುಕ್ತವಾಗಿ ವಿವರಿಸಿದ್ದಾರೆ.

VISTARANEWS.COM


on

Hariprakash Konemane
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನಮಸ್ಕಾರ..
ನಾನು ಮಾಧ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಬರೊಬ್ಬರಿ ಇಪ್ಪತ್ತು ವರ್ಷಗಳಾದವು. ಇದುವರೆಗೆ ಹೆಚ್ಚು ಕಾಲ ಮುದ್ರಣ ಮಾಧ್ಯಮದಲ್ಲಿ, ಅಲ್ಪಕಾಲ ಟಿವಿ ಮಾಧ್ಯಮದಲ್ಲಿ ಕೆಲಸ ಮಾಡಿ ಇದೀಗ ಸಂಪೂರ್ಣವಾಗಿ ಡಿಜಿಟಲ್ ಮತ್ತು ಟಿವಿ ಮಾಧ್ಯಮದ ಕಡೆಗೆ ಮುಖ ಮಾಡಿದ್ದೇನೆ.

ಈ ಬದಲಾವಣೆ ಪರ್ವದಲ್ಲಿ ಅನೇಕರು ಅನೇಕ ತೆರನಾದ ಪ್ರಶ್ನೆಗಳನ್ನು ಕೇಳಿದ್ದಾರೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ, ಸಲಹೆ-ಸೂಚನೆಗಳನ್ನು ನೀಡಿದ್ದಾರೆ. ಆ ಎಲ್ಲ ಸಂಗತಿಗಳನ್ನು ಒಂದೆಡೆ ಕ್ರೋಡೀಕರಿಸಿ, ಹಲವು ವಿಚಾರಗಳಿಗೆ ಸಂಬಂಧಿಸಿದ ಅಭಿಪ್ರಾಯ / ನಿಲುವನ್ನು ಹಂಚಿಕೊಳ್ಳುವ ಪುಟ್ಟ ಯತ್ನ ನನ್ನದು. ಇದನ್ನು ನನ್ನೆಲ್ಲ ಓದುಗರು ಹಾಗೂ ವೀಕ್ಷಕರೊಂದಿಗಿನ ಮುಕ್ತ ಮಾತು ಎಂದರೆ ಚೆನ್ನ.

ಪ್ರಶ್ನೆ: ಮುದ್ರಣ ಮಾಧ್ಯಮ ಕ್ಷೇತ್ರದಲ್ಲೇ ಬಹುಕಾಲ ಇದ್ದವರು ನೀವು. ಈ ಹಿಂದೆ ವಿಜಯವಾಣಿ ಸಂಪಾದಕರಾಗಿದ್ದಿರಿ, ಇದೀಗ ವಿಜಯಕರ್ನಾಟಕ ಪತ್ರಿಕೆ ಸಂಪಾದಕ ಸ್ಥಾನ ತೊರೆದು ಡಿಜಿಟಲ್ ಮಾಧ್ಯಮ ಮತ್ತು ಟಿವಿಯತ್ತ ಬಂದಿದ್ದೀರಿ. ಈ ಮಹತ್ವದ ನಿರ್ಧಾರಕ್ಕೆ ಮುಖ್ಯ ಕಾರಣ ಏನು?

ಉತ್ತರ: ಒಟ್ಟಾರೆ ಮಾಧ್ಯಮ ಕ್ಷೇತ್ರವೇ ವೇಗವಾಗಿ ಬದಲಾಗುತ್ತಿದೆ. ಬದಲಾಗುತ್ತಿದೆ ಎಂದರೆ ತಪ್ಪಾಗಬಹುದು. ಅದಕ್ಕಿಂತ ಹೆಚ್ಚಾಗಿ Evolve ಆಗುತ್ತಿದೆ / ವಿಕಾಸವಾಗುತ್ತಿದೆ ಎಂಬುದು ಸರಿಯಾದ ಹೇಳಿಕೆ. ಸಂಘಜೀವಿಯಾದ ಮಾನವ ತನ್ನದೇ ಸ್ಥಳೀಯ ಜಗತ್ತಿನಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿಯಬೇಕೆಂಬುದರ ಜತೆಗೆ ಪ್ರಪಂಚದ ಬೇರೆಡೆಗಳಲ್ಲೂ ಏನಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಹಿಂದೆಂದಿಗಿಂತಲೂ ಇಂದು ಹೆಚ್ಚು ಕುತೂಹಲಿಯಾಗಿದ್ದಾನೆ. ಆ ಹಂಬಲದ ಜತೆಗೆ, ಇಂದು, ಆತನಿಗೆ ಅದರ ಅನಿವಾರ್ಯತೆಯೂ ಬಂದೊದಗಿದೆ.

ಕಾಲಾನುಕ್ರಮದಲ್ಲಿ, ತಂತ್ರಜ್ಞಾನ ವಿಕಾಸಗೊಂಡಂತೆ ಮಾಹಿತಿಯನ್ನು ಪಡೆಯುವ ಅಥವಾ ಆ ಮಾಹಿತಿಯನ್ನು Consumption ಮಾಡುವ ವಿಧಾನದಲ್ಲಿ ತೀವ್ರತರವಾದ ಬದಲಾವಣೆ ಆಗುತ್ತಿದೆ. ಜನರು ತಮ್ಮ ಕೈಲಿರುವ ಮೊಬೈಲ್ ಫೋನ್‌, ಲ್ಯಾಪ್ ಟಾಪ್, ಡೆಸ್ಕ್ ಟಾಪ್, ಟ್ಯಾಬ್‌ಗಳ ಮೂಲಕವೇ ಇಡೀ ಜಗತ್ತನ್ನು ನೋಡಲು, ತಿಳಿಯಲು ಬಯಸುತ್ತಿದ್ದಾರೆ. ಈ ಹಿಂದೆಲ್ಲ ಓದಲು ಪುಸ್ತಕಗಳು, ಪತ್ರಿಕೆಗಳು ಇತ್ಯಾದಿ; ಆಡಿಯೊ ಕೇಳಲು ರೇಡಿಯೊ; ವಿಡಿಯೊ ವೀಕ್ಷಿಸಲು ಟಿವಿ, ಸಿಡಿಗಳ ಮೊರೆ ಹೋಗಬೇಕಿತ್ತು. ಕೇವಲ ಸಂವಹನ, ಸಂಭಾಷಣೆಯ ಮಾಧ್ಯಮವಾಗಿ ಎಂಟ್ರಿ ಪಡೆದ ಮೊಬೈಲ್ ಲೆಕ್ಕ (Compute) ಮಾಡಲೆಂದು ಬಂದ ಕಂಪ್ಯೂಟರ್‌ಗಳು ಈಗ ಆ ಮೂರೂ ಅಂಶಗಳನ್ನು ಒಳಗೊಂಡಿವೆ. ಅಂದರೆ ಅಕ್ಷರ, ಆಡಿಯೊ, ವಿಡಿಯೊಗಳನ್ನು ಒಟ್ಟಿಗೇ ಒದಗಿಸುತ್ತಿದೆ. ಈ ಕ್ಷೇತ್ರದಲ್ಲಿ ಭವಿಷ್ಯದಲ್ಲೂ ಕೂಡ ಕ್ಷಿಪ್ರಗತಿಯ ಬದಲಾವಣೆ ಆಗುವುದಿದೆ. ಈ ವಾಸ್ತವದ ತಳಹದಿಯಲ್ಲಿ ಮಾಧ್ಯಮ ಸಂಸ್ಥೆ ಕಟ್ಟುವ ಬಯಕೆಯನ್ನು ನಾವು ಹೊಂದಿದ್ದೇವೆ.

ಪ್ರಶ್ನೆ: ಹಾಗಾದರೆ ಪ್ರಿಂಟ್ ಮಾಧ್ಯಮಕ್ಕೆ ಭವಿಷ್ಯವೇ ಇಲ್ಲವೇ?
ಉತ್ತರ: ಪ್ರಿಂಟ್ ಮಾಧ್ಯಮಕ್ಕೆ ಭವಿಷ್ಯ ಇದೆ ಅಥವಾ ಇಲ್ಲ ಎಂಬ ಎರಡೂ ವಾದಗಳು ಸತ್ಯ. ಹೌದು, ಈಗಿರುವ ಫಾರ್ಮೇಟ್‌ನಲ್ಲಿ ಮುಂದುವರಿದರೆ ಪ್ರಿಂಟ್ ಮಾಧ್ಯಮಕ್ಕೆ ಭವಿಷ್ಯ ಇಲ್ಲ. ಫಾರ್ಮೇಟ್ ಬದಲಿಸಿಕೊಂಡರೆ ಪ್ರಿಂಟ್ ಮಾಧ್ಯಮಕ್ಕೆ ಭವಿಷ್ಯ ಇದೆ. ನಿನ್ನೆ ಮೊನ್ನೆ ನಡೆದ ಹಳೆಯ ಘಟನೆಗಳನ್ನು ವರದಿ ಮಾಡುವುದಕ್ಕಷ್ಟೇ ಪತ್ರಿಕೆಗಳನ್ನು ಪ್ರಿಂಟ್ ಮಾಡುವುದು It is a national waste in my opinion! ಇದನ್ನು ಯಾರೂ ಅನ್ಯಥಾ ಭಾವಿಸಬಾರದು.

ಪ್ರಶ್ನೆ: ಈಗಾಗಲೇ ಡಿಜಿಟಲ್ ಮಾಧ್ಯಮದಲ್ಲಿ ಸಾಕಷ್ಟು ಪ್ಲೇಯರ್‌ಗಳಿದ್ದಾರೆ. ಡಿಜಿಟಲ್ ಮಾಧ್ಯಮ ಸಂಸ್ಥೆಗಳಿವೆ. ಟಿವಿ ಚಾನೆಲ್‌ಗಳೂ ಇವೆ. ಇಷ್ಟೆಲ್ಲದರ ನಡುವೆ ಹೊಸ ಮಾಧ್ಯಮಕ್ಕೆ ಸ್ಥಳಾವಕಾಶ (Space) ಇದೆಯೇ?

ಉತ್ತರ: ನೋಡಿ, ಯಾವುದಕ್ಕೂ, ಯಾರೊಬ್ಬರಿಗೂ ಎಲ್ಲೂ ಸ್ಪೇಸ್ ರಿಸರ್ವ್ ಆಗಿರುವುದಿಲ್ಲ. ಭಾರತದಂತಹ ಜನದಟ್ಟಣೆಯ ದೇಶದಲ್ಲಂತೂ ಸ್ಪೇಸ್ ರಿಸರ್ವ್ ಆಗಿರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆದರೆ ಅದನ್ನೇ ಪಾಸಿಟಿವ್ ಆಗಿ ನೋಡಿದರೆ, ಭಾರತದಂತಹ ದೇಶದಲ್ಲಿ ಅಗಾಧ ಜನಸಂಖ್ಯೆಯ ಅವಶ್ಯಕತೆಗಳನ್ನು ಪೂರೈಸಲು ಅದೆಷ್ಟೇ ಸೇವಾಕರ್ತರು ಬಂದರೂ ಎಲ್ಲ ಕ್ಷೇತ್ರಗಳಲ್ಲಿ ಸ್ಪೇಸ್ ಸಿಕ್ಕೇ ಸಿಗುತ್ತದೆ. ಅಂದರೆ ಎಷ್ಟೇ ಹೊಸ ಹೊಸ ಸಂಸ್ಥೆಗಳು ಬಂದರೂ ಎಲ್ಲರನ್ನೂ ತಲುಪಲಾಗದಷ್ಟು ದೊಡ್ಡ, ಸಂಕೀರ್ಣ, ವೈವಿಧ್ಯಮಯ ದೇಶ ನಮ್ಮದು. ನಾವು ಹೇಗೆ ವಿಚಾರಗಳನ್ನು ಗ್ರಹಿಸುತ್ತೇವೆ ಮತ್ತು ಪ್ರಸ್ತುತಪಡಿಸುತ್ತೇವೆ ಎಂಬುದರ ಮೇಲೆ ಸ್ಪೇಸ್ ಇದೆಯೇ ಇಲ್ಲವೇ ಎಂಬುದು ನಿರ್ಧರಿತವಾಗುತ್ತದೆ. ಉದಾ: ಕನ್ನಡ ಮಾಧ್ಯಮ ಲೋಕದಲ್ಲಿ ವಿಜಯ ಕರ್ನಾಟಕ ಪತ್ರಿಕೆ ಬರುವ ಮುನ್ನ ʼಮುದ್ರಣ ಮಾಧ್ಯಮದಲ್ಲಿ ಈಗಾಗಲೇ ದಿಗ್ಗಜರಿದ್ದಾರೆ ಎಲ್ಲಿ ಸ್ಪೇಸ್ ಇದೆ?ʼ ಎಂಬ ಪ್ರಶ್ನೆ ಇತ್ತು. ಅದರ ಬೆನ್ನಲ್ಲೇ ವಿಜಯವಾಣಿ ಪತ್ರಿಕೆ ಬಂದಾಗಲಂತೂ ಇದೇ ಪ್ರಶ್ನೆಯನ್ನು ಹೋದಲ್ಲಿ ಬಂದಲ್ಲಿ ಕೇಳುತ್ತಿದ್ದರು. ವಿಜಯ ಕರ್ನಾಟಕವನ್ನು ನಂಬರ್ ಒನ್ ಪತ್ರಿಕೆ ಮಾಡಲು ಆರೇಳು ವರ್ಷ ಹಿಡಿಯಿತು. ಆದರೆ ವಿಜಯವಾಣಿ ಪತ್ರಿಕೆ ಕೇವಲ 24 ತಿಂಗಳಲ್ಲಿ ನಂಬರ್ ಒನ್ ಪತ್ರಿಕೆಯಾಗಿ ದೇಶದ ಮಾಧ್ಯಮ ಇತಿಹಾಸದಲ್ಲಿ ಹೊಸ ದಾಖಲೆ ಬರೆಯಿತು. ಹೊಸ ಪತ್ರಿಕೆ ಆಗಮನದಿಂದ ಕನ್ನಡದ ಪತ್ರಕರ್ತರಿಗೆ, ಓದುಗರಿಗೆ, ವಿತರಕರಿಗೆ, ಜಾಹೀರಾತುದಾರರಿಗೆ ದೊಡ್ಡ ಲಾಭ ಆಯಿತು. ಕನ್ನಡ ಮಾಧ್ಯಮ ಅಗಾಧವಾಗಿ ವಿಸ್ತಾರವಾಯಿತು. ಆ ವಿಷಯದಲ್ಲಿ ಡಾ. ವಿಜಯ ಸಂಕೇಶ್ವರರಿಗೆ ನನ್ನದೊಂದು ದೊಡ್ಡ ಸಲಾಮು ಸದಾ ಇರುತ್ತದೆ. ಇನ್ನೂ ಒಂದು ವಿಚಾರ ಏನೆಂದರೆ ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು ಬರುವ ಪೂರ್ವದಲ್ಲಿ ಹಾಗೂ ಆನಂತರ ಅನೇಕ ಪತ್ರಿಕೆಗಳು ಬಂದಿದ್ದವು. ಅವೆಲ್ಲವೂ ಬದುಕಲಿಲ್ಲ, ಬಾಳಲಿಲ್ಲ. ವೆರಿ ಸಿಂಪಲ್ ಆಗಿ ಹೇಳಬೇಕೆಂದರೆ ಹುಟ್ಟುವ ಪ್ರತಿ ಮಗು ನನಗೆಲ್ಲಿ ಸ್ಪೇಸ್ ಎಂದು ಕೇಳಿದ್ದರೆ ಜಗತ್ತು ಏನಾಗುತ್ತಿತ್ತು? ಹುಟ್ಟಿದ ಮಕ್ಕಳೆಲ್ಲ ಬಾಳುತ್ತಾರಾ? ಈ ವಿಷಯದಲ್ಲಿ ಡಾರ್ವಿನ್ನನ ಥಿಯರಿ ಹೆಚ್ಚು ಪ್ರಸ್ತುತ. ಫಿಟ್ ಆ್ಯಂಡ್ ಫೈನ್ ಆಗಿರಬೇಕೆನ್ನುವವರಿಗೆ ಸ್ಪೇಸ್ ಸದಾ ಇದ್ದೇ ಇರುತ್ತದೆ.

ಪ್ರಶ್ನೆ: ಹಾಗಾದರೆ ಕರ್ನಾಟಕದ ಡಿಜಿಟಲ್ ಹಾಗೂ ಟಿವಿ ಕ್ಷೇತ್ರದಲ್ಲಿ ಓದುಗರು ಮತ್ತು ವೀಕ್ಷಕರನ್ನು ಪಡೆಯಲು ದೊಡ್ಡ ಹಗ್ಗ ಜಗ್ಗಾಟ ಶುರುವಾಗುತ್ತದೆಯೇ?

ಉತ್ತರ: ಖಂಡಿತ ಇಲ್ಲ, ಇದು ಒಬ್ಬರ ಗ್ರಾಹಕರನ್ನು ಇನ್ನೊಬ್ಬರು ಸೆಳೆಯುವ ಮಾತಲ್ಲ.

ನಾವು ಸ್ಪೇಸ್ ಪಡೆದುಕೊಳ್ಳಲು ಇನ್ನೊಬ್ಬರು ಕಳೆದುಕೊಳ್ಳಬೇಕೆಂದಿಲ್ಲ. ಒಬ್ಬರ ಬೆಳೆವಣಿಗೆಗೆ ಮತ್ತು ಇನ್ನೊಬ್ಬರ ಅವನತಿಗೆ ಅದರದ್ದೇ ಆದ ಕಾರ್ಯಕಾರಣಗಳಿರುತ್ತವೆ.

ಉದಾಹರಣೆಗೆ ನಾನು ಪ್ರಧಾನ ಸಂಪಾದಕನಾಗಿ ಕೆಲಸ ಮಾಡಿದ ವಿಜಯವಾಣಿ ಹಾಗೂ ವಿಜಯ ಕರ್ನಾಟಕ ಪತ್ರಿಕೆಗಳ ಸಫಲತೆಯಲ್ಲಿ ಒಬ್ಬರ ಗ್ರಾಹಕರನ್ನು ಇನ್ನೊಬ್ಬರು ಕಿತ್ತುಕೊಳ್ಳುವ ಆಟ ನಡೆಯಲೇ ಇಲ್ಲ. ಬದಲಾಗಿ ಸ್ಪರ್ಧಾತ್ಮಕತೆಯಲ್ಲಿ ಎಲ್ಲರೂ ಒಂದಿಷ್ಟು ಹೊಸತನ ಮತ್ತು ಹೊಸ ಗ್ರಾಹಕರನ್ನು ಪಡೆದರು. ಆ ಎರಡೂ ಸಂದರ್ಭಗಳಲ್ಲಿ ಕನ್ನಡ ಪತ್ರಿಕೆಗಳ ಓದುಗರ ಸಂಖ್ಯೆ ಹಿಗ್ಗಿತು. ಹೊಸ ಓದುಗರನ್ನು ಸೆಳೆಯುವ ಯತ್ನದಲ್ಲಿ ಯಶಸ್ಸು ಸಿಕ್ಕಿತು.

ಒಟ್ಟಿನಲ್ಲಿ, ಹೊಸತನ ತರಬಲ್ಲ ಮಾಧ್ಯಮಗಳು ಬಂದರೆ, ಮಾರುಕಟ್ಟೆ ತನ್ನಿಂತಾನೆ ವಿಸ್ತರಿಸುತ್ತದೆ ಎನ್ನುವುದು ಸ್ಥಾಪಿತವಾಗಿದೆ. ಇದರಿಂದ ಇಡೀ ಮಾಧ್ಯಮ ಲೋಕಕ್ಕೆ ಲಾಭವಾಗಿದೆ. ವಿಸ್ತಾರ, ಹೆಸರಿಗೆ ತಕ್ಕಂತೆ ಮಾಧ್ಯಮ ಜಗತ್ತನ್ನೂ, ಜನರ ಮನಸ್ಸನ್ನೂ ವಿಸ್ತರಿಸುವ ಪ್ರಯತ್ನ ಮಾಡಲಿದೆ.  ಇದುವರೆಗೆ ಯಾರೂ ತಲುಪದ ಗಮ್ಯವನ್ನು ತಲುಪಬೇಕೆಂಬ ಹಂಬಲ ಇದೆ, ಗುರಿ ಇದೆ. ಆ ನಿಟ್ಟಿನಲ್ಲಿ ಸ್ಪಷ್ಟವಾದ ಕಾರ್ಯಸೂಚಿಯನ್ನು ಸಿದ್ಧಪಡಿಸಿಕೊಂಡು ಹೆಜ್ಜೆ ಮುಂದಿಡುತ್ತಿದ್ದೇವೆ.

ಸಂಸ್ಥೆಯ ಚೇರ್ಮನ್‌ ಮತ್ತು ಎಂ.ಡಿ. ಎಚ್. ವಿ. ಧರ್ಮೇಶ್, ಸಂಸ್ಥೆಯ ನಿರ್ದೇಶಕರಾದ ಶ್ರೀನಿವಾಸ ಹೆಬ್ಬಾರ್ ಅವರ ಜತೆ ಸಿಇಒ ಮತ್ತು ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ

ಪ್ರಶ್ನೆ: ಮಾಧ್ಯಮ ಸಂಸ್ಥೆ ಆರಂಭಕ್ಕೆ ದೊಡ್ಡ ಮಟ್ಟದ ಹೂಡಿಕೆ ಬೇಕಾಗುತ್ತದಲ್ಲವೇ? ಬರೀ ಪತ್ರಕರ್ತರಾಗಿದ್ದ ನೀವು ಮಾಧ್ಯಮ ಸಂಸ್ಥೆ ಆರಂಭಿಸುವುದರ ಹಿಂದಿನ ಹೂಡಿಕೆದಾರರು ಯಾರು? ರಾಜಕೀಯದವರೇನಾದರೂ…

ಉತ್ತರ: ಪ್ರಸಕ್ತ ಸನ್ನಿವೇಶದಲ್ಲಿ ಇದು ಎಲ್ಲರೂ ಕೇಳುವ ಮತ್ತು ಉತ್ತರಿಸಲೇಬೇಕಾದ ಮುಖ್ಯ ವಿಚಾರ. ಮಾಧ್ಯಮವೂ ಸೇರಿದಂತೆ ಯಾವುದೇ ಸಂಸ್ಥೆಯನ್ನು ಆರಂಭಿಸಲು ಈಗ ಬಂಡವಾಳ ಅಥವಾ ಹೂಡಿಕೆ ಸಮಸ್ಯೆಯೇ ಅಲ್ಲ. ಶ್ರೀಮಂತರು ಮಾತ್ರ ಸಂಸ್ಥೆ ಕಟ್ಟಬಹುದು ಎಂಬ ಹಳೆಯ ಸೂತ್ರ ಈಗ ಬದಲಾಗಿದೆ. ಕೈಯಲ್ಲಿ ಒಂದು ರೂ. ಇಲ್ಲದಿದ್ದರೂ ಪ್ರತಿಭೆ, ಐಡಿಯಾ ಮತ್ತು ಕೌಶಲ ಇದ್ದರೆ ಈಗ ಯಾರು ಬೇಕಾದರು ಹೊಸ ಸಂಸ್ಥೆಯನ್ನು ಕಟ್ಟಿ ಬೆಳೆಸಬಹುದು. ಇಂಥ ಕಡೆ ಹಣ ಹೂಡಲು ದೇಶದಿಂದ ಮಾತ್ರವಲ್ಲ, ವಿದೇಶಗಳಿಂದಲೂ ಸಾಕಷ್ಟು ಉತ್ಸಾಹಿಗಳು ಮುಂದೆ ಬರುತ್ತಾರೆ. ವೃತ್ತಿಪರತೆ, ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ಈ ವ್ಯವಸ್ಥೆಯಲ್ಲಿನ ಮತ್ತೊಂದು ಹೆಚ್ಚುಗಾರಿಕೆ. ನಮ್ಮ ದೇಶದಲ್ಲಿ ಹಲವಾರು ಪ್ರತಿಭಾವಂತರು ಯಾವುದೇ ಸ್ವಂತ ಬಂಡವಾಳದ ಬಲ ಇಲ್ಲದೆ ಸ್ಟಾರ್ಟ್ಅಪ್ ಆರಂಭಿಸಿ ಸಾವಿರ ಕೋಟಿ ರೂ. ವಹಿವಾಟು ದಾಟಿರುವ ಸಾಧನೆ ನಮ್ಮ ಕಣ್ಣ ಮುಂದೆಯೇ ಇದೆ.

ಖಡಾಖಂಡಿತವಾಗಿ ಹೇಳಬೇಕಾದ ಸಂಗತಿಯೆಂದರೆ ನಮ್ಮ ಸಂಸ್ಥೆ ರಾಜಕೀಯದವರ ಹಣವನ್ನು ಇಲ್ಲಿಯವರೆಗೆ ಪಡೆದಿಲ್ಲ ಮತ್ತು ಮುಂದೆಯೂ ಪಡೆಯುವುದಿಲ್ಲ. ವಿಸ್ತಾರ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿ ಕೇಂದ್ರ ಸರ್ಕಾರದ ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯದಲ್ಲಿ ನೋಂದಾಯಿತ ಸಂಸ್ಥೆ. ಹೀಗಾಗಿ ನಮ್ಮ ಸಂಸ್ಥೆಯ ಪ್ರಮೋಟರ್, ಡೈರೆಕ್ಟರ್ ಮಂಡಳಿ, ಹೂಡಿಕೆ, ನೆಟ್‌ವರ್ತ್ , ಆಡಿಟ್ ರಿಪೋರ್ಟ್ ಎಲ್ಲವೂ ಆಸಕ್ತರ ವೀಕ್ಷಣೆಗೆ ಲಭ್ಯವಿದೆ. ಮುಖ್ಯವಾಗಿ ನಮ್ಮ ಸಂಸ್ಥೆಯ ಎಂ.ಡಿ. ಶ್ರೀ ಎಚ್. ವಿ. ಧರ್ಮೇಶ್ ಮೊದಲ ತಲೆಮಾರಿನ ಯಶಸ್ವೀ ಉದ್ಯಮಿ. ನಮ್ಮೊಂದಿಗೆ ಸೇರಿ ಈಗ ಮಾಧ್ಯಮ ಕ್ಷೇತ್ರದಲ್ಲಿ ಹೂಡಿಕೆ ಮಾಡಿದ್ದಾರೆ. ಅವರಿಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ರಾಜಕೀಯದ ಸಂಬಂಧ ಇಲ್ಲವೇ ಇಲ್ಲ. ನಮ್ಮ ಸಂಸ್ಥೆಯ ನಿರ್ದೇಶಕರಾದ ಶ್ರೀ ಶ್ರೀನಿವಾಸ ಹೆಬ್ಬಾರ್​ ಅವರು ಟ್ರಾನ್ಸ್​ಪೋರ್ಟ್​ ಉದ್ಯಮದ ಜತೆಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವವರು. ಪರಿಸರ ಸಂರಕ್ಷಣೆ, ಆರೋಗ್ಯ, ಶಿಕ್ಷಣ, ಗೋ ಸಂರಕ್ಷಣೆ, ಸ್ವಚ್ಛತೆ ಮೊದಲಾದ ಕ್ಷೇತ್ರಗಳಲ್ಲಿ ಕೊಡುಗೆ ಸಲ್ಲಿಸುತ್ತಿರುವವರು. ಇದೀಗ ನಾವು ಹೊಸ ಮಾಧ್ಯಮ ಸಂಸ್ಥೆ ಆರಂಭಿಸಿದ್ದೇವೆ. ಈ ಡಿಜಿಟಲ್ ಮಾಧ್ಯಮ ಕ್ಷೇತ್ರ ಅತ್ಯಂತ ಪಾರದರ್ಶಕತೆ ಬಯಸುತ್ತದೆ ಮತ್ತು ರಾಜಕೀಯ ಸತ್ಯನಿಷ್ಠುರತೆ ನಿರೀಕ್ಷಿಸುತ್ತದೆ ಎಂಬ ಅರಿವು ನಮಗಿದೆ.

ಪ್ರಶ್ನೆ: ನೀವು ಆರಂಭಿಸಿರುವ ಪತ್ರಿಕೋದ್ಯಮದ ಸ್ವರೂಪ ಹೇಗಿರುತ್ತದೆ? ನಿಮ್ಮ ವೈಚಾರಿಕ ನಿಲುವು ಯಾವುದು?

ಉತ್ತರ: ಕೆಲ ವರ್ಷಗಳಿಂದೀಚೆಗೆ ಮಾಧ್ಯಮ ಸಂಸ್ಥೆಗಳ ಸುತ್ತ ಅನುಮಾನದ ಹುತ್ತ ಆವರಿಸಿಕೊಳ್ಳುತ್ತಿರುವುದು ನಿಜ. ಕೆಲ ಮಾಧ್ಯಮ ಸಂಸ್ಥೆಗಳು ಪಕ್ಷಗಳ, ರಾಜಕಾರಣಿಗಳ ಪರ ಇದ್ದಾರೆ ಎಂಬ ಭಾವನೆ ಇದೆ. ಕೆಲ ಸಂದರ್ಭಗಳಲ್ಲಿ ಕೆಲವು ಪತ್ರಕರ್ತರೇ ಭ್ರಷ್ಟಾಚಾರದಂತಹ ಪ್ರಕರಣಗಳಲ್ಲಿ ಭಾಗಿಯಾದ ಆರೋಪಗಳೂ ಬಂದಿವೆ. ಆಗಲೇ ಪ್ರಸ್ತಾಪಿಸಿದಂತೆ, ನಾವು ಪ್ರಾರಂಭಿಸಿರುವ ಡಿಜಿಟಲ್ ಮಾಧ್ಯಮ ಕ್ಷೇತ್ರದ ಅತಿ ದೊಡ್ಡ ಗ್ರಾಹಕರು ಸಾಮಾಜಿಕ ಜಾಲತಾಣದ ಸಕ್ರಿಯ ಬಳಕೆದಾರರು. ಈ ಬಳಕೆದಾರರು ಜಗತ್ತಿನ ಎಲ್ಲರನ್ನೂ ಪ್ರಶ್ನಿಸಬಲ್ಲರು. ಅವರು ಮಾಧ್ಯಮ ಕ್ಷೇತ್ರವನ್ನೂ ಪ್ರಶ್ನಿಸುತ್ತಿದ್ದಾರೆ. ಅನೇಕ ಸಂದರ್ಭಗಳಲ್ಲಿ ಪ್ರಮಾದ, ಲೋಪಗಳನ್ನು ಬಯಲಿಗೆಳೆಯುತ್ತಿದ್ದಾರೆ. ಇದನ್ನು ನಾನು ಮುಕ್ತಮನಸ್ಸಿನಿಂದ ಸ್ವಾಗತಿಸುತ್ತೇನೆ. ಅಂತಹ ನಾಗರಿಕರ ಕಣ್ಣಲ್ಲಿ ಮಾಧ್ಯಮ ಘನತೆ ಕಳೆದುಕೊಳ್ಳುವಂತಾಗಿದೆ. ಅದಕ್ಕೆ ನಾನಾ ಕಾರಣಗಳಿವೆ. ಅದರ ಗೋಜಿಗೆ ನಾನು ಹೋಗುವುದಿಲ್ಲ. ಆದರೆ ನಮ್ಮ ಮುಖ್ಯ ಗಮನ ಮಾಧ್ಯಮಕ್ಕೆ ಘನತೆ ತಂದುಕೊಡುವುದರ ಕಡೆಗೆ ಮಾತ್ರ.

ಬಾಲಗಂಗಾಧರ ತಿಲಕರು, ಮಹಾತ್ಮಾ ಗಾಂಧೀಜಿ, ಡಾ. ಬಿ. ಆರ್. ಅಂಬೇಡ್ಕರ್, ಡಿ. ವಿ. ಗುಂಡಪ್ಪನವರೆಲ್ಲ ಪತ್ರಕರ್ತರಾಗಿದ್ದವರು. ಆ ನಂತರವೂ ಪತ್ರಿಕೋದ್ಯಮದ ಘನತೆಯ ತೇರನ್ನು ಅನೇಕ ಮಹನೀಯರು ಮುಂದಕ್ಕೆ ಎಳೆದಿದ್ದಾರೆ. ಅವರು ಹಾಕಿದ ಮಾರ್ಗದಲ್ಲಿ ಮುಂದೆ ಸಾಗಿ ಈ ಕ್ಷೇತ್ರದ ಘನತೆ, ಗೌರವ ಹಾಗೂ ಹೊಣೆಗಾರಿಕೆಯನ್ನು ಮೆರೆಯುವುದು ನಮ್ಮ ಪರಮ ಧ್ಯೇಯ.

ಈ ಕಾರಣಕ್ಕಾಗಿ ಮೊದಲಿಗೆ ನಾವು ಯಾವುದೇ ಪಕ್ಷ ಮತ್ತು ರಾಜಕಾರಣಿಗಳ ಪರ ವಹಿಸುವುದಿಲ್ಲ. ಯಾವುದೇ ಸಮುದಾಯದ ಪಕ್ಷಪಾತಿಗಳಾಗುವುದಿಲ್ಲ. ಸತ್ಯ ಹಾಗೂ ರಾಷ್ಟ್ರಹಿತದ ಪ್ರಶ್ನೆ ಬಂದಾದ ಯಾವುದೇ ಮುಲಾಜಿಗೆ ಒಳಗಾಗುವುದಿಲ್ಲ. ನಮಗೆ ದೇಶ ಮೊದಲೇ ಹೊರತು ಬೇರೇನೂ ಅಲ್ಲ. ಜನಪರ ಮತ್ತು ಜನಪ್ರಿಯತೆ ಈ ಎರಡರಲ್ಲಿ ಆಯ್ಕೆ ಪ್ರಶ್ನೆ ಬಂದಾಗ ಜನಪರವೇ ಮಿಗಿಲಾಗುತ್ತದೆ. ಮುಖ್ಯವಾಗಿ ನಾವು ಕಿರುಚಾಡುವುದಿಲ್ಲ. ನಮ್ಮ ಮಾಧ್ಯಮ ಸಂಸ್ಥೆಯ ಸುದ್ದಿಯಲ್ಲಿ ಸತ್ಯದ ಶಕ್ತಿ ಮತ್ತು ನಿಖರತೆ ಇರುತ್ತದೆ. ಸುದ್ದಿಯೇ ಮಾತನಾಡಿ, ಪತ್ರಕರ್ತ ಕಡಿಮೆ ಮಾತನಾಡುವಂತೆ ನೋಡಿಕೊಳ್ಳುತ್ತೇವೆ. ಹೀಗಾಗಿಯೇ, ನಿಖರ. ಜನಪರ. – ಇವೇ ಮೌಲ್ಯಗಳನ್ನು ನಮ್ಮ ಮಾಧ್ಯಮಸಂಸ್ಥೆಯ ಧ್ಯೇಯವಾಕ್ಯವಾಗಿಯೂ ನಮ್ಮ ವಿಸ್ತಾರ ಬ್ರ್ಯಾಂಡ್‌ನ ಟ್ಯಾಗ್‌ಲೈನ್‌ ಆಗಿಯೂ ಇಟ್ಟುಕೊಂಡಿದ್ದೇವೆ.

ಪ್ರಶ್ನೆ: ಕನ್ನಡ‌‌ ಭಾಷೆ, ನೆಲ, ಜಲ, ಸಂಸ್ಕೃತಿಯ ಹಿತರಕ್ಷಣೆಯ ವಿಚಾರದಲ್ಲಿ ನಮ್ಮ ನಿಲುವೇನು?
ಉತ್ತರ: ಈ‌ ವಿಷಯದಲ್ಲಿ ನಾವು ಅಪ್ಪಟ ಕನ್ನಡಿಗರು ಮತ್ತು ಕನ್ನಡಪರರು. ಭಾಷೆ, ನೆಲ, ಜಲ, ಸಂಸ್ಕೃತಿ ಹಿತದ ವಿಚಾರದಲ್ಲಿ ರಾಜಿಯೇ ಇಲ್ಲದ ಕಠಿಣ ನಿಲುವು ನಮ್ಮದು. ಈ ವಿಷಯದಲ್ಲಿ ನಾವೇ ಮುಂಚೂಣಿಯಲ್ಲಿ ನಿಲ್ಲುತ್ತೇವೆ. ಇನ್ನೂ ಸ್ಪಷ್ಟಪಡಿಸಬೇಕೆಂದರೆ ಕನ್ನಡ – ಕರ್ನಾಟಕದ ವಿಷಯದಲ್ಲಿ ರಾಷ್ಟ್ರಕವಿ ಕುವೆಂಪು ಅವರ ನಿಲುವೇ ನಮ್ಮ ನಿಲುವು. ಜೈ ಭಾರತ ಜನನಿಯ ತನುಜಾತೇ, ಜಯ ಹೇ ಕರ್ನಾಟಕ ಮಾತೆ. ಕರ್ನಾಟಕ ಮಾತೆ, ಆ ಮೂಲಕ ಭಾರತ ಮಾತೆ…

ಕರ್ನಾಟಕ ಇಲ್ಲದೇ ಭಾರತ ಇಲ್ಲ. ಭಾರತ ಇರದೇ ಕರ್ನಾಟಕ ಇರಲಾರದು. ರಾಜ್ಯ‌ ಮತ್ತು ರಾಷ್ಟ್ರದ ಸಂಬಂಧ ಎಂದೆಂದಿಗೂ ಅವಿನಾಭಾವ, ಅವಿಚ್ಛಿನ್ನ.  ಭಾಷೆಯ ವಿಚಾರದಲ್ಲೂ ನಮ್ಮ ನಿಲುವು ಅದೇ. ಕನ್ನಡದ‌ ಪರ ಸದಾ ಕೈ ಎತ್ತುತ್ತೇವೆ. ಧ್ವನಿ ಎತ್ತುತ್ತೇವೆ. ಕನ್ನಡಕ್ಕಾಗಿ ಬೇರೆ ಭಾಷೆಯನ್ನು ದ್ವೇಷಿಸುವುದಿಲ್ಲ. ಭಾಷೆ ಎಂದರೆ ಕೇವಲ ಸಂವಹನ ಸಾಧನ ಅಲ್ಲ, ಅದು ಸಂಸ್ಕೃತಿಯ ವಾಹಕ. ಅದು ಸಣ್ಣದೇ ಇರಲಿ, ದೊಡ್ಡದೇ ಇರಲಿ. ಭಾರತದ ಎಲ್ಲ ಭಾಷೆಗಳೂ ಸಮಾನ ಮತ್ತು ಸರ್ವಶಕ್ತ. ನಾವು ಮೊದಲು ಕನ್ನಡಪರರು.

ಪ್ರಶ್ನೆ: ಸಂಸ್ಥೆಯನ್ನು ಯಶಸ್ವಿಯಾಗಿ ಕಟ್ಟಿ ಬೆಳೆಸಲು ಉತ್ತಮ ತಂಡ ಬೇಕು. ‌ನಿಮ್ಮ ಜತೆ ಅಂತಹ ತಂಡ ಇದೆಯೆ?

ಉತ್ತರ: ನಮ್ಮ ಆಲೋಚನೆಗಳು ಎಷ್ಟೇ ಉದಾತ್ತವಾಗಿದ್ದರೂ, ಕಾರ್ಯಸಾಧುವಾಗಿದ್ದರೂ, ಅದನ್ನು ಕಾರ್ಯರೂಪಕ್ಕೆ ತರಲು ಉತ್ತಮ ಮಾನವ ಸಂಪನ್ಮೂಲ, ಅಂದರೆ ಪಕ್ವಗೊಂಡ ಮೆದುಳುಗಳು ಬೇಕು ಎಂಬುದು ನಮಗೆ ಚೆನ್ನಾಗಿ ತಿಳಿದಿದೆ. ಅತ್ಯಂತ ಸಂತೋಷದ ಸಂಗತಿ ಎಂದರೆ ನಾವು ನವ ಮಾಧ್ಯಮ ಸಂಸ್ಥೆ ಕಟ್ಟಲು ಮುಂದಾದಾಗ ಕನ್ನಡ ಪತ್ರಿಕೋದ್ಯಮದಲ್ಲಿ ಪಳಗಿದ, ಶುದ್ಧ ಮನಸ್ಸಿನ ಅತ್ಯುತ್ತಮ ಪತ್ರಕರ್ತರು ನಮ್ಮ ಜತೆಯಾದದ್ದು. ಹಿರಿಯರು, ಮಧ್ಯಮ ಅನುಭವಿಗಳು ಮತ್ತು ಯುವಕರು ಹೀಗೆ ಮೂರು ಜನರೇಶನ್ನಿಗೆ ಈ ಕಂಪನಿಯನ್ನು ಸದೃಢವಾಗಿ ಮುನ್ನಡೆಸಬಲ್ಲ ಬ್ಲೆಂಡೆಡ್ ಪತ್ರಕರ್ತರ ತಂಡ ನಮ್ಮ ಸಂಸ್ಥೆಯ ಭವಿಷ್ಯದ ಸೂಚನೆ. ಇಲ್ಲಿ ನಾವು ಡಿಜಿಟಲ್, ಪ್ರಿಂಟ್ ಹಾಗೂ ಟಿವಿ ಮಾಧ್ಯಮದಿಂದ ಆಯ್ದ ಪತ್ರಕರ್ತರ ಸಮತೋಲಿತ ತಂಡವನ್ನು ಕಟ್ಟಿದ್ದೇವೆ.

ಪ್ರಶ್ನೆ: ಎಲ್ಲ ಸುದ್ದಿ ಸಂಸ್ಥೆಗಳೂ ತಾವು ಜನಪರ, ಪಕ್ಷಪಾತ ರಹಿತ ಎಂದೇ ಕಾರ್ಯ ಆರಂಭಿಸುತ್ತವೆ. ಆದರೆ ಕಳೆದ ಕೆಲವು ವರ್ಷಗಳಲ್ಲಿ ಯಾವ ರೀತಿ ಬೆಳವಣಿಗೆಗಳಾಗಿವೆ ಎಂಬುದನ್ನು ನಾವು ನೋಡಿದ್ದೇವೆ. ನಿಮ್ಮ ಮೇಲೆ ಹೇಗೆ ನಂಬಿಕೆ ಇಡುವುದು?

ಉತ್ತರ: ಈಗಾಗಲೇ ಹೇಳಿದಂತೆ, ಕನ್ನಡದ ಅತ್ಯುತ್ತಮ, ಅನುಭವಿ ಹಾಗೂ ಗೌರವಯುತ ಪತ್ರಕರ್ತರ ತಂಡ ನಮ್ಮ ಜತೆಗಿದೆ. ಹೀಗಾಗಿ ಉತ್ತಮ ವಿಷಯ (Content) ನಮ್ಮಿಂದ ನಿಮಗೆ ದೊರಕುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಇದೇ ವಿಷಯ ವಸ್ತುವನ್ನು ಈಗಿನ ಕಾಲಕ್ಕೆ, ಜನರ ಅನುಕೂಲಕ್ಕೆ ತಕ್ಕಂತೆ ಪ್ರಸ್ತುತಪಡಿಸುವಲ್ಲೂ ನಾವು ಸಫಲರಾಗುತ್ತೇವೆ ಎಂಬ ನಂಬಿಕೆ ಮತ್ತು ಸ್ಪಷ್ಟತೆ ನಮಗಿದೆ. ಇನ್ನು ವಿಶ್ವಾಸ ಗಳಿಸುವುದು ಕಾಲಕ್ಕೆ ಬಿಟ್ಟ ವಿಚಾರ. ಯಾವುದೇ ವ್ಯಕ್ತಿ, ವಿಚಾರದ ಮೇಲೆ ನಂಬಿಕೆ, ವಿಶ್ವಾಸ ಮೂಡಲು ಅದರದ್ದೇ ಆದ ಸಮಯ ಬೇಕು. ಈ ಸಮಯದಲ್ಲಿ ನಮ್ಮ ನಡವಳಿಕೆಯನ್ನು ಸಮಾಜ ಅಳೆಯುತ್ತದೆ. ನಡೆ ಹಾಗೂ ನುಡಿಯಲ್ಲಿನ ವ್ಯತ್ಯಾಸವನ್ನು ಅದೇ ಸಮಾಜ ಅಳೆದು ನೋಡುತ್ತದೆ. ನಡೆ ಹಾಗೂ ನುಡಿಯಲ್ಲಿ ವ್ಯತ್ಯಾಸ ಇಲ್ಲದೇ ಇದ್ದಲ್ಲಿ ಮಾತ್ರ ಸಮಾಜ ನಮ್ಮನ್ನು ನಂಬುತ್ತದೆ. ಆ ವಿಶ್ವಾಸ ಗಳಿಸಲು ನಾವು ಪ್ರತಿ ಕ್ಷಣವೂ ಶ್ರಮಿಸುತ್ತೇವೆ. ಇಂದು ವಿಸ್ತಾರ ಡಿಜಿಟಲ್ ಆವೃತ್ತಿಯನ್ನು ಲೋಕಾರ್ಪಣೆ ಮಾಡಿದ್ದೇವೆ. ಇಷ್ಟರಲ್ಲೇ ಟಿವಿ ಮೂಲಕವೂ ನಿಮ್ಮ ಮನೆ ಹಾಗೂ ಮನವನ್ನು ತಲುಪುತ್ತೇವೆ.

ಪ್ರಶ್ನೆ: ಈಗಿನ ʼಸೋಷಿಯಲ್ ಮೀಡಿಯಾ ಜಮಾನಾʼದಲ್ಲಿ ಸಾಂಸ್ಥಿಕ ಡಿಜಿಟಲ್ ಮೀಡಿಯಾದ ಪ್ರಸ್ತುತತೆ ಏನು?
ಉತ್ತರ: ನಾವು ಡೆಮಾಕ್ರಟಿಕ್ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ. ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ  ಸಂವಿಧಾನಬದ್ಧ ಮಾನ್ಯತೆ ಇದೆ. ಅದೇ ಸಂದರ್ಭದಲ್ಲಿ ಸಾಂಸ್ಥಿಕ ವ್ಯವಸ್ಥೆಗೂ ಅದೇ ಸಂವಿಧಾನ ಅವಕಾಶ ನೀಡಿದೆ. ಸಾಮಾಜಿಕ ಮಾಧ್ಯಮದ ವಿಚಾರಕ್ಕೆ ಬರುವುದಾದರೆ, ವ್ಯಕ್ತಿ ತನ್ನ ಅನಿಸಿಕೆಯನ್ನು ಇತಿಮಿತಿಯಲ್ಲಿ ವ್ಯಕ್ತಪಡಿಸಬಹುದು. ಆದರೆ ಮಾಧ್ಯಮ ಸಂಸ್ಥೆಯಲ್ಲಿ ಅನಿಸಿಕೆ ಎನ್ನುವುದು ವಿವಿಧ ಹಂತಗಳಲ್ಲಿ ಪರಿಷ್ಕರಣೆಗೆ ಒಳಪಡುತ್ತದೆ.

ಅದಕ್ಕಿಂತ ಮುಖ್ಯವಾಗಿ ಸಾಂಸ್ಥಿಕ ವ್ಯವಸ್ಥೆಯಲ್ಲಿ ಒಡಮೂಡುವ ಸುದ್ದಿ ಹೊಣೆಗಾರಿಕೆಯಿಂದ ಕೂಡಿರುತ್ತದೆ. ಅಭಿಪ್ರಾಯ-ಕೇಂದ್ರಿತ ಸಾಮಾಜಿಕ ಮಾಧ್ಯಮಗಳ ಸಂಖ್ಯೆ ಹೆಚ್ಚಾದಷ್ಟೂ ಸಾಂಸ್ಥಿಕ ಮಾದ್ಯಮಗಳ ಈ ಹೊಣೆಗಾರಿಕೆ ಪ್ರಜ್ಞೆಯೂ‌ ಹೆಚ್ಚಾಗುತ್ತಲೇ ಹೋಗುತ್ತದೆ. ಎಲ್ಲರೂ ವಿಶ್ವಾಸಾರ್ಹ ಮಾಹಿತಿ / ಸುದ್ದಿ ಬಯಸುವ ಕಾಲಮಾನದಲ್ಲಿ, ಸಾಂಸ್ಥಿಕ ಮೀಡಿಯಾದ ಮಹತ್ವ ಮುಂಬರುವ ದಿನಗಳಲ್ಲಿ‌ ಇನ್ನಷ್ಟು ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನ ಬೇಡ.

ವಿಶ್ವಾಸವಿರಲಿ
ವಿಸ್ತಾರ ವೆಬ್‌ಸೈಟ್  : www.vistaranews.com
ಸೋಷಿಯಲ್ ಮೀಡಿಯಾ ವಿವರಗಳು:
Face book: www.facebook.com/vistaranews
Instagram: www.instagram.com/vistaranews/
Twitter: twitter.com/VistaraNews
Koo : www.kooapp.com/profile/vistaranews

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಭವಿಷ್ಯ

Dina Bhavishya : ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಶುಭ ಸುದ್ದಿ

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಕಾರ್ತಿಕ ಮಾಸ, ಶುಕ್ಲ ಪಕ್ಷದ ತದಿಗೆ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

dina bhavishya read your daily horoscope predictions for november 4 2024
Koo

ಚಂದ್ರನು ಸೋಮವಾರವೂ ವೃಶ್ಚಿಕ ರಾಶಿಯಲ್ಲೆ ನೆಲಸಲಿದ್ದಾನೆ. ಇದರಿಂದಾಗಿ ಮೇಷ, ವೃಷಭ, ಸಿಂಹ, ತುಲಾ, ಧನಸ್ಸು, ಮಕರ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Dina Bhavishya) ನೋಡುವುದಾದರೆ, ಮೀನ ರಾಶಿಯವರಿಗೆ ಒತ್ತಡದ ಕೆಲಸದಿಂದ ಮುಕ್ತಿ.ದೀರ್ಘಕಾಲದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ.ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ವಿವಾಹ ಅಪೇಕ್ಷಿತರಿಗೆ ಶುಭ ಸುದ್ದಿ ಸಿಗುವುದು.ಹಣಕಾಸು ವ್ಯವಹಾರದಲ್ಲಿ ಪ್ರಗತಿ.ಆರೋಗ್ಯ ಪರಿಪೂರ್ಣ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (4-11-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಕಾರ್ತಿಕ ಮಾಸ, ಶುಕ್ಲ ಪಕ್ಷ.
ತಿಥಿ: ತದಿಗೆ 23:23 ವಾರ: ಸೋಮವಾರ
ನಕ್ಷತ್ರ: ಅನುರಾಧ 08:03 ಯೋಗ: ಶೋಭನ 11:42
ಕರಣ: ತೈತುಲ 10:47 ಅಮೃತಕಾಲ: ಮಧ್ಯರಾತ್ರಿ 12:20 ರಿಂದ 02:03

ಸೂರ್ಯೋದಯ : 06:12   ಸೂರ್ಯಾಸ್ತ : 05:54

ರಾಹುಕಾಲ: ಬೆಳಗ್ಗೆ 7.30 ರಿಂದ 9.00
ಗುಳಿಕಕಾಲ: ಮಧ್ಯಾಹ್ನ
1.30 ರಿಂದ 3.00
ಯಮಗಂಡಕಾಲ: ಬೆಳಗ್ಗೆ 10.30 ರಿಂದ 12.00

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಆರ್ಥಿಕವಾಗಿ ಬಲಿಷ್ಠತೆ.ಹೂಡಿಕೆ ವ್ಯವಹಾರಗಳಲ್ಲಿ ಪ್ರಗತಿ.ಆರೋಗ್ಯ ಪರಿಪೂರ್ಣ.ಉದ್ಯೋಗಿಗಳಿಗೆ ಒತ್ತಡ.ಹಳೆಯ ಸ್ನೇಹಿತರ ಜತೆ ಕಾಲ ಕಳೆಯುವ ಸಾಧ್ಯತೆ.ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 3

Horoscope Today

ವೃಷಭ: ಪ್ರಯಾಣ ಮಾಡುವ ಸಾಧ್ಯತೆ.ಅನಿರೀಕ್ಷಿತ ಲಾಭಗಳನ್ನು ಪಡೆಯುವಿರಿ.ಕುಟುಂಬದ ಸದಸ್ಯರ ಬೆಂಬಲ ದೊರೆಯಲಿದೆ.ಸಂಗಾತಿಯೊಂದಿಗೆ ಮಾತಿಗೆ ಮಾತು ಬೆಳೆಸುವುದು ಬೇಡ.ಸಾಮಜಿಕ ಕಾರ್ಯಗಳಲ್ಲಿ ತೊಡಗುವ ಸಾಧ್ಯತೆ.ಉದ್ಯೋಗಿಗಳಿಗೆ ಒತ್ತಡ.ಆರೋಗ್ಯ ಪರಿಪೂರ್ಣ.ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 2

Horoscope Today

ಮಿಥುನ: ಬಲವಂತವಾಗಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಪ್ರಸಂಗ.ಇಂದಿನ ದಿವಸ ಗಾಬರಿಯಿಂದ ಇರುವ ಸಾಧ್ಯತೆ.ಅವಘಡ ಸಂಭವ ನಿಧಾನವಾಗಿ ವಾಹನ ಚಾಲನೆ ಮಾಡಿ.ಕುಟುಂಬದ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುವಿರಿ.ಉದ್ಯೋಗಿಗಳಿಗೆ ಶುಭ ಫಲ.ಆರೋಗ್ಯದ ಕುರಿತು ಕಾಳಜಿ ವಹಿಸಿ.ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 8

Horoscope Today

ಕಟಕ: ಒತ್ತಡದ ಜೀವನಕ್ಕೆ ವಿಶ್ರಾಂತಿ ಸಿಗಲಿದೆ.ಹಣಕಾಸಿನ ಸಮಸ್ಯೆಗಳು ಪರಿಹಾರವಾಗಲಿವೆ.ಅಗತ್ಯ ವಸ್ತುಗಳ ಖರೀದಿ.ಸಹದ್ಯೋಗಿಗಳ ಬೆಂಬಲ.ಆರೋಗ್ಯ ಪರಿಪೂರ್ಣ.ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

Horoscope Today

ಸಿಂಹ: ಹಣಕಾಸು ವ್ಯವಹಾರದಲ್ಲಿ ಪ್ರಗತಿ.ಮಾನಸಿಕ ಆರೋಗ್ಯ ಸದೃಢ.ಅತಿ ಅವಶ್ಯಕ ಕೆಲಸದ ಕಾರಣ ದೈಹಿಕ ಶ್ರಮ.ಉದ್ಯೋಗಿಗಳಿಗೆ ಸಹಕಾರ.ಆರೋಗ್ಯ ಉತ್ತಮ.ಕೌಟುಂಬಿಕ ಕಲಹಗಳಿಗೆ ದ್ವನಿ ಆಗುವುದು ಬೇಡ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 2

Horoscope Today

ಕನ್ಯಾ: ಅನಿರೀಕ್ಷಿತ ಲಾಭಗಳನ್ನು ನಿರೀಕ್ಷಿಸಬಹುದು. ದೀರ್ಘಕಾಲದ ಪ್ರಯಾಣ.ನಿರೀಕ್ಷೆಗೆ ತಕ್ಕಂತೆ ಫಲ ಸಿಗಲಿದೆ.ಆಪ್ತರೊಂದಿಗೆ ಸಮಯ ಹಂಚಿಕೊಳ್ಳುವ ಅವಕಾಶ.ಆರೋಗ್ಯದ ಕುರಿತು ಕಾಳಜಿ ಇರಲಿ.ಉದ್ಯೋಗಿಗಳಿಗೆ ಯಶಸ್ಸು.ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ದೀರ್ಘಕಾಲದ ಅನಾರೋಗ್ಯಕ್ಕೆ ಪರಿಹಾರ ಸಿಗಲಿದೆ.ಕುಟುಂಬದಲ್ಲಿನ ಹಿರಿಯರೊಂದಿಗೆ ವಾದಕ್ಕೆ ಇಳಿಯುವುದು ಬೇಡ.ಆರ್ಥಿಕ ಪ್ರಗತಿ ಸಾಧಾರಣ.ಹರಟೆಯಿಂದ ಕಾಲ ಹರಣ ಮಾಡುವುದು ಬೇಡ.ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 3

Horoscope Today

ವೃಶ್ಚಿಕ: ಬಾಕಿ ಇರುವ ಕೆಲಸ ಕಾರ್ಯಗಳು ಪೂರ್ಣವಾಗುವವು.ಸಕರಾತ್ಮಕ ಆಲೋಚನೆ.ವ್ಯಾಪರ ವ್ಯವಹಾರದಲ್ಲಿ ಪ್ರಗತಿ.ಉದ್ಯೋಗಿಗಳಿಗೆ ಕಿರಿಕಿರಿ ಸಾಧ್ಯತೆ.ಆರೋಗ್ಯ ಉತ್ತಮಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 5

Horoscope Today

ಧನಸ್ಸು: ಉತ್ತಮ ಫಲಿತಾಂಶ ದೊರೆಯಲಿದೆ. ಆತ್ಮವಿಶ್ವಾಸ ಹೆಚ್ಚಲಿದೆ. ಕುಟುಂಬದ ಸದಸ್ಯರ ಮೇಲೆ ಕೋಪಗೊಳ್ಳುವುದು ಬೇಡ.ಆರೋಗ್ಯ ಮಧ್ಯಮ.ಆರ್ಥಿಕ ಪ್ರಗತಿ ಸಾಧಾರಣ..ಉದ್ಯೋಗಿಗಳಿಗೆ ಉತ್ತಮ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

Horoscope Today

ಮಕರ: ಸಾಮಾಜಿಕ ಕಾರ್ಯಗಳಲ್ಲಿ ಬಾಗಿ, ಪ್ರಯಾಣ ಮಾಡುವ ಸಾಧ್ಯತೆ.ಆರ್ಥಿಕ ಪ್ರಗತಿ ಉತ್ತಮ.ಪ್ರಮುಖ ಯೋಜನೆ ಕೈಗೊಳ್ಳುವ ಸಾಧ್ಯತೆ.ಆರೋಗ್ಯ ಪರಿಪೂರ್ಣ.ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

Horoscope Today

ಕುಂಭ: ನಿಮ್ಮ ವರ್ತನೆ ಇತರರಿಗೆ ಮುಜುಗರ ಉಂಟು ಮಾಡುವ ಸಾಧ್ಯತೆ.ಯಾರೊಂದಿಗೂ ಅತಿಯಾದ ಸಲುಗೆ ಬೇಡ.ಆತುರದ ಮಾತುಗಳು ಅಪಾಯ ತರುವ ಸಾಧ್ಯತೆ.ಆರೋಗ್ಯದ ಕುರಿತು ಕಾಳಜಿ ಇರಲಿ.ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 8

Horoscope Today

ಮೀನ: ಒತ್ತಡದ ಕೆಲಸದಿಂದ ಮುಕ್ತಿ.ದೀರ್ಘಕಾಲದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ.ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ.ವಿವಾಹ ಅಪೇಕ್ಷಿತರಿಗೆ ಶುಭ ಸುದ್ದಿ ಸಿಗುವುದು.ಹಣಕಾಸು ವ್ಯವಹಾರದಲ್ಲಿ ಪ್ರಗತಿ.ಆರೋಗ್ಯ ಪರಿಪೂರ್ಣ.ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 6

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading

ಕೊಡಗು

Murder Case : ತೆಲಂಗಾಣ ಉದ್ಯಮಿ ಕೊಲೆ ಕೇಸ್‌; ಸ್ಥಳ ಮಹಜರು ವೇಳೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಕಾಲ್ಕಿತ್ತ ಆರೋಪಿ

Murder Case : ತೆಲಂಗಾಣ ಉದ್ಯಮಿ ಕೊಲೆ ಪ್ರಕರಣದ ಆರೋಪಿ ಸ್ಥಳ ಮಹಜರು ವೇಳೆ ಎಸ್ಕೇಪ್ ಆಗಿದ್ದು, ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

VISTARANEWS.COM


on

By

Murder Case
Koo

ಬೆಂಗಳೂರು: ಕೊಲೆ ಆರೋಪಿಯನ್ನು (Murder Case) ಮಹಜರು ನಡೆಸಲು ಕರೆದೊಯ್ಯುವ ವೇಳೆ ಪೊಲೀಸರ ಕಣ್ತಪ್ಪಿಸಿ ಎಸ್ಕೇಪ್ ಆಗಿರುವ ಘಟನೆ ತೆಲಂಗಾಣ ರಾಜ್ಯದ ಉಪ್ಪಳ್‌ನಲ್ಲಿ ನಡೆದಿದೆ. ತೆಲಂಗಾಣದಲ್ಲಿ ಉದ್ಯಮಿಯನ್ನು ಹತ್ಯೆ ನಡೆಸಿ ಬಳಿಕ ಕೊಡಗು ಜಿಲ್ಲೆಯ ಸುಂಟಿಕೊಪ್ಪದ ಪನ್ಯದ ಎಸ್ಟೇಟ್‌ನಲ್ಲಿ ಸುಟ್ಟುಹಾಕಿದ್ದರು. ಈ ಸಂಬಂಧ ಮೂವರು ಆರೋಪಿಗಳನ್ನು ಕೊಡಗು ಪೊಲೀಸರು ಬಂಧಿಸಿದ್ದರು.

ಓರ್ವ ನ್ಯಾಯಾಂಗ ಬಂಧನವಾಗಿದ್ದು, ಉಳಿದ ಇಬ್ಬರು ಆರೋಪಿಗಳ ಪೈಕಿ ಅಂಕುರ್ ರಾಣಾ ಠಾಕೂರ್‌ನನ್ನು ಎರಡು ದಿನಗಳ ಹಿಂದೆ ತೆಲಂಗಾಣಕ್ಕೆ ಮಹಜರು ನಡೆಸಲು ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಪೊಲೀಸರ ಕಣ್ತಪ್ಪಿಸಿ ಎಸ್ಕೇಪ್ ಆಗಿದ್ದಾನೆ. ಸದ್ಯ ಆರೋಪಿ ಪರಾರಿ ಸಂಬಂಧ ತೆಲಂಗಾಣ ಉಪ್ಪಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಹೆಚ್ಚುವರಿಯಾಗಿ ಕೊಡಗಿನ ಎರಡು ಎಕ್ಸ್ ಪರ್ಟ್ ಟೀಮ್ ಕೂಡ ತೆಲಂಗಾಣಕ್ಕೆ ತೆರಳಿದ್ದು ಹುಟುಕಾಟ ನಡೆಸುತ್ತಿದ್ದಾರೆ.

ಏನಿದು ಪ್ರಕರಣ?

ಕೊಡಗು: ಅಕ್ಟೋಬರ್ 8ರಂದು ಕೊಡಗಿನ ಸುಂಟಿಕೊಪ್ಪ ಸಮೀಪ ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ (Murder case) ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಪ್ರಕರಣವನ್ನು ಭೇದಿಸಿ ತೆಲಂಗಾಣ ಮೂಲದ ಮೂವರು ಆರೋಪಿಗಳನ್ನು ಬಂಧಿಸಿದ್ದರು. ಪ್ರಮುಖ ಆರೋಪಿ ನಿಹಾರಿಕ (29), ಪಶು ವೈದ್ಯ ನಿಖಿಲ್ ಹಾಗೂ ಹರಿಯಾಣದ ಅಂಕುರ್ ಎಂಬುವವರು ಬಂಧಿತರು.

ಈ ಮೂವರು ರಿಯಲ್ ಎಸ್ಟೇಟ್ ಉದ್ಯಮಿ ರಮೇಶ್ (54) ಎಂಬಾತನನ್ನು ತೆಲಂಗಾಣದಲ್ಲಿ ಕೊಲೆ ಮಾಡಿ, ಕೊಡಗಿನಲ್ಲಿ ಸುಟ್ಟು ಹಾಕಿ ಕಾಲ್ಕಿತ್ತಿದ್ದರು. ಆಸ್ತಿಗಾಗಿ ನಿಹಾರಿಕ ಪ್ರಿಯಕರರ ಜತೆ ಸೇರಿ ತನ್ನ ಪತಿಯನ್ನೇ ಹತ್ಯೆ ಮಾಡಿದ್ದಳು. ಹತ್ಯೆ ಮಾಡಿ ನಂತರ ಕೊಡಗಿನ ಸುಂಟಿಕೊಪ್ಪದಲ್ಲಿ ಸುಟ್ಟು ಹಾಕಿದ್ದರು. ಪ್ರಕರಣ ಸಂಬಂಧ ಪೊಲೀಸರು ಸಿಸಿ ಕ್ಯಾಮೆರಾ ಸುಳಿವು ಆಧಾರಿಸಿ, ರೆಡ್ ಕಲರ್ ಬೆಂಜ್ ಕಾರಿನ ಹಿಂದೆ ಬಿದ್ದಿದ್ದರು. ಕಾರುಪತ್ತೆ ಮಾಡಿ ಆರೋಪಿಯನ್ನು ಬಂಧಿಸಲಾಗಿತ್ತು.

Murder Case
ಬಂಧಿತ ಆರೋಪಿಗಳು

ನಿಹಾರಿಕ ತಾನು 10ನೇ ತರಗತಿಯಲ್ಲಿ ಇರುವಾಗಲೇ ಮದುವೆಯಾಗಿದ್ದಳು. ಎರಡು ಮಕ್ಕಳಾದ ಮೇಲೆ ಪತಿಗೆ ಡಿವೋಸ್‌ ಕೊಟ್ಟು ದೂರವಾಗಿದ್ದಳು. ಬಳಿಕ ಜೈಲಿನಲ್ಲಿದ್ದ ಅಂಕುರ್ ಎಂಬಾತನ ಪರಿಚಯವಾಗಿತ್ತು. ಈ ಅಂಕುರ್‌ ಮೂಲಕ ರಮೇಶ್‌ನ ಪರಿಚಯವಾಗಿ ಮದುವೆಯಾಗಿದ್ದಳು. ರಮೇಶ್‌ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡುತ್ತಿದ್ದರು. ಈ ನಡುವೆ ನಿಹಾರಿಕ, ನಿಖಿಲ್‌ ಜತೆಗೂ ಲಿವಿಂಗ್ ರಿಲೇಶನ್ ಶಿಪ್‌ನಲ್ಲಿ ಇದ್ದಳು.

ನಿಹಾರಿಕ ಅಂಕುರ್‌ನೊಂದಿಗೆ ಸೇರಿ ಆಸ್ತಿ ನೀಡುವಂತೆ ರಮೇಶ್‌ನಿಗೆ ಕಿರುಕುಳ ನೀಡುತ್ತಿದ್ದರು. ಆಸ್ತಿ ನೀಡದೇ ಇದ್ದದ್ದಕ್ಕೆ ಹೈದರಾಬಾದ್ ಸಮೀಪ ಹಗ್ಗದಿಂದ ಬಿಗಿದು ರಮೇಶ್‌ನ ಕೊಲೆ ಮಾಡಿದ್ದರು. ಕೊಲೆ ಮಾಡಿ ಬಳಿಕ ರಮೇಶ್‌ನ ಕಾರಿನಲ್ಲೇ ಆತನ ಅಪಾರ್ಟ್ಮೆಂಟ್‌ಗೆ ಹೋಗಿ ಹಣ, ಆಸ್ತಿ ದಾಖಲೆ ದೋಚಿದ್ದರು. ನಂತರ ಬೆಂಗಳೂರಿಗೆ ಬಂದು ಪೆಟ್ರೋಲ್ ಖರೀದಿಸಿ, ಕೊಡಗಿಗೆ ತಂದು ರಮೇಶ್‌ ಬಾಡಿಯನ್ನು ಸುಟ್ಟು ಹಾಕಿದ್ದರು. ಕೊಲೆ ಬಳಿಕ ಅಂಕುರ್ ದೆಹಲಿ, ಹರಿಯಾಣ ಅಂತ ಸುತ್ತಾಡಿದ್ದ.

Continue Reading

ಭವಿಷ್ಯ

Dina Bhavishya : ಒತ್ತಡದಿಂದ ವಿಮುಕ್ತಿ ಹೊಂದಿ ವಿರಾಮದ ಸಂತೋಷವನ್ನು ಅನುಭವಿಸುವಿರಿ

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಕಾರ್ತಿಕ ಮಾಸ, ಶುಕ್ಲ ಪಕ್ಷದ ಪಾಡ್ಯ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina Bhavishya
Koo

ಚಂದ್ರನು ಶನಿವಾರವೂ ವೃಶ್ಚಿಕ ರಾಶಿಯಲ್ಲೆ ನೆಲಸಲಿದ್ದಾನೆ. ಇದರಿಂದಾಗಿ ಮೇಷ, ವೃಷಭ, ಸಿಂಹ, ತುಲಾ, ಧನಸ್ಸು, ಮಕರ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Dina Bhavishya) ನೋಡುವುದಾದರೆ, ಮಿಥುನ ರಾಶಿಯವರು ಬೇರೆಯವರ ಮಾತನ್ನು ಕೇಳಿಕೊಂಡು ನಿಮ್ಮನ್ನು ಪ್ರೀತಿಯಿಂದ ಕಾಣುವ ವ್ಯಕ್ತಿಗಳನ್ನು ದ್ವೇಷಿಸುವುದು ಬೇಡ. ಇತರರ ಸಮಸ್ಯೆಗಳನ್ನು ಪರಿಹರಿಸಲು ನೀವು ಮಧ್ಯಪ್ರವೇಶ ಮಾಡುವ ಸಾಧ್ಯತೆ ಇದೆ. ದಿಢೀರ್ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಅನಾವಶ್ಯಕ ಖರ್ಚು ಇರಲಿದೆ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (2-11-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಕಾರ್ತಿಕ ಮಾಸ, ಶುಕ್ಲ ಪಕ್ಷ.
ತಿಥಿ: ಪಾಡ್ಯ 20:21 ವಾರ: ಶನಿವಾರ
ನಕ್ಷತ್ರ: ವಿಶಾಖಾ 29:57 ಯೋಗ: ಆಯುಷ್ಮಾನ್ 11:17
ಕರಣ: ಕಿಂಸ್ತುಘ್ನ 07:21 ಅಮೃತಕಾಲ: ರಾತ್ರಿ 08:16ರಿಂದ 10:02

ಸೂರ್ಯೋದಯ : 06:12   ಸೂರ್ಯಾಸ್ತ : 05:54

ರಾಹುಕಾಲ: ಬೆಳಗ್ಗೆ 9.00 ರಿಂದ 10.30
ಗುಳಿಕಕಾಲ: ಬೆಳಗ್ಗೆ
6.00 ರಿಂದ 7.30
ಯಮಗಂಡಕಾಲ: ಮಧ್ಯಾಹ್ನ 1.30 ರಿಂದ 3.00

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಕೆಲವು ನಿರ್ಧಾರಗಳು ಹತಾಶೆ ಮತ್ತು ಮಾನಸಿಕ ಪ್ರಕ್ಷುಬ್ಧತೆಗೆ ಕಾರಣವಾಗುತ್ತದೆ. ಆಪ್ತರಿಂದ ಸಹಾಯದ ಕೋರಿಕೆ ಬರುವುದು. ಒತ್ತಡದ ಕೆಲಸದಿಂದಾಗಿ ದೈಹಿಕವಾಗಿ ಬಳಲುವ ಸಾಧ್ಯತೆ ಇದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಆರ್ಥಿಕವಾಗಿ ಸದೃಢ ಇರಲಿದೆ. ಉದ್ಯೋಗಿಗಳಿಗೆ ಒತ್ತಡ ಹೆಚ್ಚಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 1

Horoscope Today

ವೃಷಭ:ಆಂತರಿಕ ಭಯ ನಿಮ್ಮ ಸಂತೋಷವನ್ನು ಹಾಳುಗೆಡವಬಹುದು. ನಕಾರಾತ್ಮಕ ಆಲೋಚನೆಗಳನ್ನು ಮಾಡದಿರಿ,ಆಗ ನಿಮ್ಮ ಹಾಸ್ಯದ ಪ್ರಕೃತಿ ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಬೆಳಗಿಸುತ್ತದೆ. ದಿನ ಕೊನೆಯ ಭಾಗದಲ್ಲಿ ಯಾವುದಾದರೂ ಶುಭ ಸುದ್ದಿ ಕೇಳುವ ಸಾಧ್ಯತೆ ಇದೆ. ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಆರ್ಥಿಕವಾಗಿ ಪ್ರಗತಿ. ಅದೃಷ್ಟ ಸಂಖ್ಯೆ: 9

Horoscope Today

ಮಿಥುನ: ಬೇರೆಯವರ ಮಾತನ್ನು ಕೇಳಿಕೊಂಡು ನಿಮ್ಮನ್ನು ಪ್ರೀತಿಯಿಂದ ಕಾಣುವ ವ್ಯಕ್ತಿಗಳನ್ನು ದ್ವೇಷಿಸುವುದು ಬೇಡ. ಇತರರ ಸಮಸ್ಯೆಗಳನ್ನು ಪರಿಹರಿಸಲು ನೀವು ಮಧ್ಯಪ್ರವೇಶ ಮಾಡುವ ಸಾಧ್ಯತೆ ಇದೆ. ದಿಢೀರ್ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಅನಾವಶ್ಯಕ ಖರ್ಚು ಇರಲಿದೆ. ಉದ್ಯೋಗಿಗಳಿಗೆ ಶುಭ ಫಲ.ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 7

Horoscope Today

ಕಟಕ: ಅನಿವಾರ್ಯ ಪ್ರಸಂಗಗಳು ನಿಮಗೆ ಕೋಪವನ್ನು ತರಿಸುವ ಸಾಧ್ಯತೆ ಇದೆ, ಭಾವನೆಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡರೆ ಉತ್ತಮ. ಕಠಿಣ ಪರಿಶ್ರಮ ನಿಮಗೆ ಫಲ ನೀಡಲಿದೆ. ಸಂಗಾತಿಯ ಸಂಪೂರ್ಣ ಬೆಂಬಲ ಸಿಗಲಿದೆ. ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ಆರ್ಥಿಕವಾಗಿ ಲಾಭ ಇರಲಿದೆ. ಉದ್ಯೋಗಿಗದ ಸ್ಥಳದಲ್ಲಿ ಒತ್ತಡ.ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 1

Horoscope Today

ಸಿಂಹ: ನಿಮ್ಮ ಸಭ್ಯ ನಡವಳಿಕೆ ಇತರರಿಂದ ಮೆಚ್ಚುಗೆ ಪಡೆಯುತ್ತದೆ. ಅನೇಕ ಜನರು ನಿಮ್ಮನ್ನು ಹೊಗಳುತ್ತಾರೆ. ದಿನದ ಆರಂಭದಲ್ಲಿ ಇಂದು ನೀವು ಯಾವುದೇ ಆರ್ಥಿಕ ನಷ್ಟವನ್ನು ಹೊಂದಬಹುದು.ಇದರಿಂದ ನಿಮ್ಮ ಪೂರ್ತಿ ದಿನ ಹದಗೆಡಬಹುದು. ಇತರರಿಗೆ ಪ್ರತಿಫಲಗಳು ತರುವ ನಿಮ್ಮ ಸಾಮರ್ಥ್ಯ ಪ್ರತಿಫಲ ತರುತ್ತದೆ.ಆರೋಗ್ಯ ಪರಿಪೂರ್ಣ.ಉದ್ಯೋಗಿಗಳಿಗೆ ಭರವಸೆ ಅವಕಾಶ ಸಿಗಲಿದೆ.ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 9

Horoscope Today

ಕನ್ಯಾ: ಒತ್ತಡದಿಂದ ವಿಮುಕ್ತಿ ಹೊಂದಿ ವಿರಾಮದ ಸಂತೋಷವನ್ನು ಅನುಭವಿಸಲಿದ್ದೀರಿ. ದೀರ್ಘಕಾಲದ ದೃಷ್ಟಿಕೋನದಿಂದ ಮಾಡಿದ ಹೂಡಿಕೆಯಿಂದ ಲಾಭ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕುಟುಂಬದ ಸಂಪೂರ್ಣ ಸಹಕಾರ ಸಿಗಲಿದೆ. ಉದ್ಯೋಗಿಗಳಿಗೆ ಅದೃಷ್ಟ ಖುಲಾಯಿಸಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 7

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ದಿಢೀರ್ ಧನಾಗಮನದಿಂದ ಸಂತೋಷ ಇಮ್ಮಡಿಯಾಗಲಿದೆ. ಅನೇಕ ಸಮಸ್ಯೆಗಳು ಇಂದು ಪರಿಹಾರವಾಗುವುದು. ಆರೋಗ್ಯ ಪರಿಪೂರ್ಣವಾಗಿರಲಿದೆ. ಬಹಳ ದಿನಗಳಿಂದ ಕಂಡ ಕನಸು ನನಸಾಗಲಿದೆ. ಉದ್ಯೋಗಿಗಳಿಗೆ ಶುಭ ಫಲ. ಅದೃಷ್ಟ ಸಂಖ್ಯೆ: 1

Horoscope Today

ವೃಶ್ಚಿಕ: ಇಂದು ಪ್ರಮುಖ ನಿರ್ಧಾರಗಳಿಂದಾಗಿ ಮಾನಸಿಕವಾಗಿ ನೀವು ಬಳಲುವ ಸಾಧ್ಯತೆ ಇದೆ. ಅನಾವಶ್ಯಕ ಖರ್ಚು ಮಾಡಿ ಕೊರಗುವ ಸಾಧ್ಯತೆ ಇದೆ. ಆದಷ್ಟು ನಿಯಂತ್ರಣದಲ್ಲಿರಿ. ಸಂಗಾತಿಯ ಆರೋಗ್ಯದ ಕುರಿತು ಕಾಳಜಿ ಇರಲಿ. ಉದ್ಯೋಗಿಗಳಿಗೆ ಶುಭಫಲ, ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 2

Horoscope Today

ಧನಸ್ಸು: ಆರೋಗ್ಯದ ಆರೈಕೆ ಇಂದು ಅಗತ್ಯವಿದೆ.ಆಪ್ತರೊಂದಿಗೆ ಸೇರಿಕೊಂಡು ಮಾಡುವ ವ್ಯಾಪಾರ ನಷ್ಟ ತಂದಿತು ಆದಷ್ಟು ಎಚ್ಚರಿಕೆಯಿಂದ ಹೆಜ್ಜೆ ಇಡಿ.ನಿಮ್ಮ ಆಂತರಿಕ ಶಕ್ತಿ ದಿನದ ಕೆಲಸವನ್ನು ಉತ್ತಮಗೊಳಿಸುವಲ್ಲಿ ನಿಮ್ಮನ್ನು ಬೆಂಬಲಿಸುತ್ತದೆ. ಉದ್ಯೋಗಿಗಳಿಗೆ ಮಧ್ಯಮ ಫಲ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 8

Horoscope Today

ಮಕರ: ಆಹಾರ ಕ್ರಮದ ವ್ಯತ್ಯಾಸದಿಂದಾಗಿ ಆರೋಗ್ಯದಲ್ಲಿ ಕೊಂಚ ಏರುಪೇರು ಸಾಧ್ಯತೆ, ಆದಷ್ಟು ಆಹಾರ ನಿಯಂತ್ರಣ ಮಾಡಿ. ಅನಿವಾರ್ಯ ಕಾರಣಗಳಿಂದ ಖರ್ಚು ಇರಲಿದೆ. ಕುಟುಂಬದ ಸದಸ್ಯರ ಮಧ್ಯೆ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಆದಷ್ಟು ಮಾತಿನಲ್ಲಿ ಹಿಡಿತವಿರಲಿ. ದಿಢೀರ್ ಪ್ರಯಾಣ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 8

Horoscope Today

ಕುಂಭ:ನಿಮ್ಮ ಸಾಧನೆಗೆ ಇಂದು ಪ್ರೋತ್ಸಾಹ ಸಿಗಲಿದೆ. ಅನೇಕ ಹಣಕಾಸಿನ ಸಮಸ್ಯೆಗಳು ಪರಿಹಾರವಾಗಲಿವೆ. ವ್ಯಾಪಾರದ ಉದ್ದೇಶಕ್ಕಾಗಿ ಕೈಕೊಂಡ ಪ್ರಯಾಣ ಲಾಭವನ್ನು ತಂದುಕೊಡಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಮಿಶ್ರ ಫಲ ,ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 6

Horoscope Today

ಮೀನ: ಅನಗತ್ಯ ಆಲೋಚನೆಗಳು ನಿಮ್ಮ ಮನಸ್ಸನ್ನು ಆವರಿಸಬಹುದು. ಆದಷ್ಟು ಸಕಾರಾತ್ಮಕವಾಗಿ ಆಲೋಚಿಸಿ. ಆರೋಗ್ಯದ ಕುರಿತು ಕಾಳಜಿ ಇರಲಿ. ಆರ್ಥಿಕವಾಗಿ ಪ್ರಗತಿ. ನಿಮ್ಮ ಸಹೋದ್ಯೋಗಿಗಳು ನಿಮ್ಮನ್ನು ಟೀಕಿಸುವ ಸಾಧ್ಯತೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 4.

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading

ಗದಗ

HK Patil : ಮುಖ್ಯಮಂತ್ರಿ ಸಿದ್ದರಾಮಯ್ಯ ಎನ್ನುವ ಬದಲಿಗೆ `ಡಿಕೆಶಿ’ ಎಂದು ಸಚಿವ ಎಚ್‌ಕೆ ಪಾಟೀಲ್‌ ಯಡವಟ್ಟು

HK Patil: ಕನ್ನಡ ರಾಜ್ಯೋತ್ಸವ ಪ್ರಯುಕ್ತ ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಹಿರಿಯ ರಾಜಕಾರಣಿ ಹಾಗೂ ಸಚಿವ ಎಚ್.ಕೆ.ಪಾಟೀಲ್‌ ತಮ್ಮ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎನ್ನುವ ಬದಲಿಗೆ ಡಿ.ಕೆ ಎಂದು ಹೇಳಿ ಕ್ಷಣಮಾತ್ರದಲ್ಲೆ ಸರಿಪಡಿಸಿಕೊಂಡ ಘಟನೆ ನಡೆದಿದೆ.

VISTARANEWS.COM


on

By

HK patil
Koo

ಗದಗ: ಕರ್ನಾಟಕದ ಕಾಂಗ್ರೆಸ್ ಆಡಳಿತದಲ್ಲಿ ಮುಖ್ಯಮಂತ್ರಿ ಸ್ಥಾನದ‌‌ ಮೇಲೆ ಎಲ್ಲರ ಕಣ್ಣಿದೆ. ಕಾರಣ ಮುಡಾ ಹಗರಣ‌‌ ಎದುರಿಸುತ್ತಿರುವ ಮುಖ್ಯಮಂತ್ರಿ‌ ಸಿದ್ದರಾಮಯ್ಯ ಅವರ ಸಿಎಂ ಕುರ್ಚಿ ಮುಡಾ ಹಗರಣದಿಂದ‌ ಖಾಲಿಯಾಗುತ್ತೆ ಅನ್ನೋ ಬಿಸಿ‌ಬಿಸಿ ಚರ್ಚೆ ಪ್ರಚಲಿತದಲ್ಲಿದೆ. ಇದಕ್ಕೆ ಪುಷ್ಟಿಕರೀಸುವಂತೆ ಗದಗದಲ್ಲಿ ಸಚಿವ ಎಚ್‌ಕೆ ಪಾಟೀಲ್‌ (HK Patil) ಮುಖ್ಯಮಂತ್ರಿ ಹೆಸರನ್ನು ಹೇಳುವ ಸಂದರ್ಭದಲ್ಲಿ ಸಿದ್ದರಾಮಯ್ಯ ಬದಲಿಗೆ ಡಿ.ಕೆ ಶಿವಕುಮಾರ್‌ ಹೆಸರು ಪ್ರಸ್ತಾಪಿಸಿ, ಕ್ಷಣಮಾತ್ರದಲ್ಲೆ ಸರಿಪಡಿಸಿಕೊಂಡಿದ್ದಾರೆ.

ಮುದ್ರಣ‌ ಕಾಶಿ ಗದಗ ಜಿಲ್ಲೆಯಲ್ಲಿ‌ ಶುಕ್ರವಾರ ಅದ್ಧೂರಿ 66ನೇ ಕನ್ನಡ ರಾಜ್ಯೋತ್ಸವ ಜರುಗಿತು. ‌ಈ ವೇಳೆ ಜಿಲ್ಲಾ ಉಸ್ತುವಾರಿ‌ ಸಚಿವ ಹಾಗೂ ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ವೇದಿಕೆ ಮೇಲೆ ಭಾಷಣದ‌ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಹೇಳುವ ಬದಲಾಗಿ, ಡಿಕೆ ಎಂದು ಪ್ರಸ್ತಾಪಿಸಿ, ತಕ್ಷಣ ಎಚ್ಚೆತ್ತು,‌ ಸಿದ್ಧರಾಮಯ್ಯ‌ ಎಂದು ಮುಂದುವರೆದು,‌ ಉಪಮುಖ್ಯಮಂತ್ರಿ‌ ಡಿ.ಕೆ. ಶಿವಕುಮಾರ್‌ ಅವರು ಎಂದೇಳಿ, ತಮ್ಮ ಭಾಷಣ ಮುಂದುವರೆಸಿದರು.

ಮೈಸೂರು ರಾಜ್ಯಕ್ಕೆ ಕರ್ನಾಟಕ‌ ನಾಮಕರಣದ ಐವತ್ತರ‌ ಸಂಭ್ರಮಾಚರಣೆಯನ್ನು ಕಳೆದ ವರ್ಷ 2023ರ ನವಂಬರ್, 1,2,3 ರಂದು ಮೂರು‌ ದಿನಗಳ‌ ಕಾಲ ಗದಗ ನಗರದ ಸೊಸೈಟಿಯ ಆವರಣದಲ್ಲಿ ನಡೆದಿತ್ತು.‌ ಗತವೈಭವ ಮರುಕಳಿಸುವ ಹಾಗೆ, ಐತಿಹಾಸಿಕ ಕಾರ್ಯಕ್ರಮಕ್ಕೆ ನಗರದ ಎಲ್ಲ ಜನತೆ‌ ಸಾಕ್ಷಿಯಾಗಿದ್ದೀರಿ. ನಾಡಿನ ಮುಖ್ಯಮಂತ್ರಿಗಳಾದ ಡಿ.ಕೆ (ತಕ್ಷಣ ಎಚ್ಚೆತ್ತು ಭಾಷಣದ ಪ್ರತಿ ತೀಕ್ಷ್ಣವಾಗಿ ವೀಕ್ಷಿಸಿ) ಮಾನ್ಯ‌ ಸಿದ್ಧರಾಮಯ್ಯನವರು,‌ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಸೇರಿದಂತೆ, ಸಚಿವ ಸಂಪುಟದ ಎಲ್ಲ‌ ಸಹೋದ್ಯೋಗಿಗಳು ಈ‌ ಐತಿಹಾಸಿಕ ಸಮಾರಂಭದಲ್ಲಿ ಭಾಗವಹಿಸಿದ್ದರು ಎಂದು ಪ್ರಸ್ತಾಪಿಸಿ, ಮುಂದೆ ತಮ್ಮ ಭಾಷಣದ ಸಂದೇಶವನ್ನು ಮುಂದುವರಿಸಿದ್ದಾರೆ.

ಸಿದ್ದರಾಮಯ್ಯನವರ ಸಂಪುಟದಲ್ಲಿ ‌ಅತ್ಯಂತ‌ ಹಿರಿಯ ಮತ್ತು ಅನುಭವಿ ರಾಜಕಾರಣಿಯಾಗಿರುವ ಎಚ್.ಕೆ.ಪಾಟೀಲ ಸಿದ್ದರಾಮಯ್ಯನವರ ಆಪ್ತ ಬಳಗದಲ್ಲಿಯೂ ಒಬ್ಬರಾಗಿದ್ದಾರೆ.‌ ದೀಪಾವಳಿ‌ ಶುಭ‌ ಸಂದರ್ಭದಲ್ಲಿ ಸಚಿವರ ಬಾಯಲ್ಲಿ, ಡಿಕೆಶಿ ಮುಖ್ಯಮಂತ್ರಿಯಾಗಿದ್ದು ಅಚಾನಕ್ ಆಗಿ ಆದ ಅಚಾತುರ್ಯವೋ,‌ ಅಥವಾ ಸಚಿವರ ಆಂತರ್ಯದ ನುಡಿಯೋ ಎಲ್ಲವೂ ಕಾಕತಾಳಿಯ‌ ಎಂಬಂತಿದೆ.

Continue Reading
Advertisement
Kodava Family Hockey Tournament Website Launched
ಕೊಡಗು1 ತಿಂಗಳು ago

Kodagu News : ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ವೈಬ್ ಸೈಟ್ ಲೋಕಾರ್ಪಣೆ

Bengaluru News
ಬೆಂಗಳೂರು1 ತಿಂಗಳು ago

Bengaluru News : ಮಾಡಲಿಂಗ್‌ನಲ್ಲಿ ಗಿನ್ನಿಸ್‌ ರೆಕಾರ್ಡ್‌ ಮಾಡಲು ಹೊರಟ ಹಳ್ಳಿಹೈದ

Dina Bhavishya
ಭವಿಷ್ಯ1 ತಿಂಗಳು ago

Dina Bhavishya : ಯಾವುದಾದರೂ ಪ್ರಸಂಗಗಳಿಂದ ನಿಮ್ಮ ಮೇಲೆ ಅಪವಾದ ಬರುವ ಸಾಧ್ಯತೆ ಎಚ್ಚರಿಕೆ ಇರಲಿ

Gadag News Father commits suicide by throwing three children into river
ಗದಗ1 ತಿಂಗಳು ago

Gadag News : ಮೂವರು ಮಕ್ಕಳನ್ನು ನದಿಗೆ ಎಸೆದು, ಆತ್ಮಹತ್ಯೆ ಮಾಡಿಕೊಂಡ ತಂದೆ!

Dina Bhavishya
ಭವಿಷ್ಯ1 ತಿಂಗಳು ago

Dina Bhavishya: ಪ್ರಯತ್ನದಲ್ಲಿ ನಂಬಿಕೆ ಇಟ್ಟು ಕಾರ್ಯದಲ್ಲಿ ಮುನ್ನುಗ್ಗಿ, ಯಶಸ್ಸು ಖಂಡಿತ

Dina Bhavishya
ಭವಿಷ್ಯ1 ತಿಂಗಳು ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗಲಿದೆ

Bengaluru airport
ಬೆಂಗಳೂರು1 ತಿಂಗಳು ago

Bengaluru Airport : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೈಗರ್‌ ವಿಂಗ್ಸ್‌; 2ನಲ್ಲಿ ಅತಿದೊಡ್ಡ ವರ್ಟಿಕಲ್‌ ಗಾರ್ಡನ್‌ ಅನಾವರಣ

Dina Bhavishya
ಭವಿಷ್ಯ1 ತಿಂಗಳು ago

Dina Bhavishya : ಈ ರಾಶಿಯವರು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಆಲೋಚಿಸಿ

Dina Bhavishya
ಭವಿಷ್ಯ1 ತಿಂಗಳು ago

Dina Bhavishya : ಸದಾ ಕಲ್ಪನೆಯಲ್ಲಿ ಕನಸುಗಳನ್ನು ಕಾಣುತ್ತಾ ಕಾಲಹರಣ ಮಾಡ್ಬೇಡಿ

dina bhavishya read your daily horoscope predictions for november 4 2024
ಭವಿಷ್ಯ2 ತಿಂಗಳುಗಳು ago

Dina Bhavishya : ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಶುಭ ಸುದ್ದಿ

galipata neetu
ಕಿರುತೆರೆ1 ವರ್ಷ ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ1 ವರ್ಷ ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ1 ವರ್ಷ ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ1 ವರ್ಷ ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ3 ತಿಂಗಳುಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್4 ತಿಂಗಳುಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್4 ತಿಂಗಳುಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ4 ತಿಂಗಳುಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ4 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ4 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ4 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು5 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ5 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ5 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌