ಎಲ್‌ ಪಿಜಿ ಬಿಕ್ಕಟ್ಟು; ಬೆಂಗಳೂರಿನಲ್ಲಿ ನಾಯಿಗಳ ಊಟಕ್ಕೂ ಕುತ್ತು - Vistara News

ಅವಿಭಾಗೀಕೃತ

ಎಲ್‌ ಪಿಜಿ ಬಿಕ್ಕಟ್ಟು; ಬೆಂಗಳೂರಿನಲ್ಲಿ ನಾಯಿಗಳ ಊಟಕ್ಕೂ ಕುತ್ತು

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಬೆಂಗಳೂರು: ಅಮೆರಿಕ- ಇಸ್ರೇಲ್‌ ಮತ್ತು ಇರಾನ್‌ ನಡುವಿನ ಯುದ್ಧದಿಂದ ಕೇವಲ ತೈಲ ಮತ್ತು ಅಡುಗೆ ಅನಿಲ ಪೂರೈಕೆಯಲ್ಲಿ ಮಾತ್ರ ವ್ಯತ್ಯಯವಾಗಿ. ಬೆಂಗಳೂರು ಮಹಾನಗರದಲ್ಲಿ ಮಾತೇ ಬಾರದ ಶ್ವಾನಗಳೂತೊಂದರೆಗೆ ಸಿಲುಕಿವೆ. ಪ್ರಾಣಿ ವಿಮೋಚನಾ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಪ್ರಾಣಿಗಳು ದಿನನಿತ್ಯದ ಊಟಕ್ಕೆ ಪರದಾಡುತ್ತಿವೆ.ಇದೇ ಕೇಂದ್ರದಲ್ಲಿ 777 ಚಾರ್ಲೀ ಸಿನಿಮಾ ಚಿತ್ರೀಕರಣಗೊಂಡಿತ್ತು.
ಮನೆ ಹೋಟೆಲ್‌ ಗಳು ಮಾತ್ರವಲ್ಲದೆ ಇಂತಹ ಆಶ್ರಯತಾಣಗಳೂ ಸಹ ಅಡುಗೆ ತಯಾರಿಸಲು ಎಲ್‌ ಪಿಜಿ ಸಿಲಿಂಡರ್‌ ಗಳನ್ನೇ ನೆಚ್ಚಿಕೊಂಡಿವೆ. ಈ ಪ್ರಾಣಿಗಳಿಗೆ ಭಾರಿ ಪ್ರಮಾಣದಲ್ಲಿ ಅಡುಗೆಯನ್ನು ತಯಾರಿಸಬೇಕಾಗುತ್ತದೆ. ಆದರೆ ಆಶ್ರಯ ತಾಣಗಳು ಈಗ ಕಷ್ಟದ ಪರಿಸ್ಥಿತಿಗೆ ಸಿಲುಕಿವೆ. ಪರ್ಯಾಯ ಮಾರ್ಗವಿಲ್ಲದೆ ಈ ಕೇಂದ್ರಗಳ ಅಡುಗೆ ತಯಾರಕರು ವಿಧಿ ಇಲ್ಲದೆ ಸೌದೆಯಿಂದ ಅಡುಗೆ ತಯಾರಿಸಲು ಆರಂಭಿಸಿದ್ದಾರೆ. ಆದರೂ ಪ್ರಾಣಿಗಳಿಗೆ ಸಮರ್ಪಕ ಅಡುಗೆ ಪೂರೈಸಲು ಪರದಾಡುವ ಪರಿಸ್ಥಿತಿ ಎದುರಾಗಿದ್ದು, ಸಮಯಕ್ಕೆ ಸರಿಯಾಗಿ ಪ್ರಾಣಿಗಳಿಗೆ ಊಟ ಒದಗಿಸಲು ಕಷ್ಟ ಸಾಧ್ಯವಾಗಿದೆ.
ಪ್ರಾಣಿ ದಯಾಸಂಘಗಳ ನೌಕರರ ಪ್ರಕಾರ ಹಸಿವು ಮಾತ್ರವಷ್ಟೇ ಕಾರಣ ಅಲ್ಲ, ಕಾಲ ಕಾಲಕ್ಕೆ ಊಟ ನೀಡಿದರೆ ಮಾತ್ರ ಆರೋಗ್ಯ, ಚಿಕಿತ್ಸೆಯತ್ತ ಗಮನ ಹರಿಸಲು ಸಾಧ್ಯವಾಗುತ್ತದೆ. ಅನೇಕ ಪ್ರಾಣಿಗಳಿಗೆ ಪೌಷ್ಠಿಕ ಆಹಾರ ಅಗತ್ಯವಿರುತ್ತದೆ.
ಚಾರ್ಲೀ ಪ್ರಾಣಿ ದಯಾಸಂಘದ ವ್ಯವಸ್ಥಾಪಕಿ ಕೀರ್ತನಾ ಅವರ ಪ್ರಕಾರ, ಪ್ರಾಣಿಗಳಿಗೆ ಒಂದುಹೊತ್ತಿನ ಊಟ ತಯಾರಿಸಲು ಕನಿಷ್ಠ ಒಂದೂವರೆ ಗಂಟೆ ಬೇಕಾಗುತ್ತಿತ್ತು. ಆದರೆ ಈಗ ಎರಡೂವರೆ ಗಂಟೆಯಿಂದ ಮೂರು ಗಂಟೆಯವರೆಗೆ ಕಾಲಾವಕಾಶ ಬೇಕಾಗುತ್ತದೆ ಎನ್ನುತ್ತಾರೆ. ಇದಕ್ಕಾಗಿ ಸೌದೆಯನ್ನು ಸಂಗ್ರಹಿಸಬೇಕಾಗುತ್ತದೆ. ಒಲೆ ನಿರಂತರವಾಗಿ ಉರಿಯುವಂತೆ ನೋಡಿಕೊಳ್ಳಬೇಕಾಗಿದೆಎಂದು ಹೇಳುತ್ತಾರೆ.
ಪ್ರಾಣಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಆಹಾರ ತಯಾರಿಸಬೇಕಾಗುತ್ತದೆ. ಕಾರ್ಮಿಕರು ಮುಂಜಾನೆ 5 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ಅಡುಗೆ ಕೆಲಸದಲ್ಲಿ ನಿರತರಾಗುತ್ತಾರೆ. ಇದಕ್ಕಾಗಿ ಕಾರ್ಮಿಕರಿಗೆ ಹೆಚ್ಚಿನ ವೇತನವನ್ನೂ ಭರಿಬೇಕಾಗುತ್ತದೆ ಎಂದು ವಿವರಿಸುತ್ತಾರೆ.
ಚಾರ್ಲೀ ಪ್ರಾಣಿ ದಯಾಸಂಘದಲ್ಲಿ 600 ನಾಯಿಗಳಿಗೆ ಪ್ರತಿದಿನ 150 ಕೆಜಿ ಅನ್ನ, 100 ಕೆಜಿ ಚಿಕನ್‌, ಮತ್ತು 90 ಕೆಜಿ ಚಿಕನ್‌ ಲಿವರ್‌ ಬೇಯಿಸಬೇಕಾಗುತ್ತದೆ. ಈ ಪಟ್ಟಿಯಲ್ಲಿ ಗಾಯಗೊಂಡ, ಅನಾರೋಗ್ಯಕ್ಕೀಡಾದ ಮತ್ತು ಬೀದಿನಾಯಿಗಳೂ ಸೇರಿವೆ. ಅನೇಕ ನಾಯಿಗಳು ಸಮೀಪದ ನಾನ್‌ ವೆಜ್‌ ಹೋಟೆಲ್‌ ಗಳನ್ನು ಆಶ್ರಯಿಸಿದ್ದವು. ಆದರೆ ಈಗ ಸಿಲಿಂಡರ್‌ ಕೊರತೆಯಿಂದಾಗಿ ಅನೇಕ ಹೋಟೆಲ್‌ ಗಳು ಮುಚ್ಚಿವೆ. ಅಂತಹ ನಾಯಿಗಳಿಗೂ ಊಟ ಪೂರೈಕೆ ಮಾಡಬೇಕಾಗಿದೆಎನ್ನುತ್ತಾರೆ ಕೀರ್ತನಾ.
ಜತೆಗೆ ಇಲ್ಲಿನ ನಾಯಿಗಳ ಜತೆಗೆ ರೇವಾ ವಿಶ್ವವಿದ್ಯಾಲಯ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕಾಡುಗೋಡಿ, ಬಾಷ್‌, ಎಚ್‌ ಪಿ ಸಮೀಪ ಇರುವ ಶ್ವಾನಗಳಿಗೂ ಊಟ ಪೂರೈಸಲಾಗುತ್ತಿದೆ. ಊಟ ಪೂರೈಕೆಯಲ್ಲಿ ಏಕೆ ತಡವಾಗುತ್ತಿದೆ ಎಂದು ನಾಯಿಗಳಿಗೆ ಅರ್ಥವಾಗುತ್ತಿಲ್ಲ. ಎಲ್‌ ಪಿಜಿ ಬಿಕ್ಕಟ್ಟು ನಾಯಿಗಳಿಗೆ ಅರ್ಥವಾಗುವುದಾದರೂ ಹೇಗೆ? ಆದರೂ ನಾವು ಕಾಲಕಾಲಕ್ಕೆ ಆಹಾರ ಒದಗಿಸಲು ಪ್ರಯತ್ನ ಮಾಡುತ್ತಿದ್ದೇವೆ ಎಂದು ವಿವರಿಸುತ್ತಾರೆ.
ಸಮಸ್ಯೆ ಇಲ್ಲಿಗೆ ನಿಲ್ಲುವುದಿಲ್ಲ. ಸೌದೆ ಪೂರೈಕೆಯಲ್ಲೂ ಕೊರತೆ ಉಂಟಾಗಿದೆ. ಅಡುಗೆ ಅನಿಲಕ್ಕೆ ಬೇಡಿಕೆ ಇರುವಂತೆ ಸೌದೆಗೂ ಬೇಡಿಕೆ ಹೆಚ್ಚುತ್ತಿದೆ. ಹೀಗಾಗಿ ನಮ್ಮ ಇನ್‌ ಸ್ಟಾಗ್ರಾಂನಲ್ಲಿ ನಮ್ಮನ್ನು ಬೆಂಬಲಿಸುವಂತೆ ಕೋರಿದ್ದೇವೆ. ಈ ಮನವಿಗೆ ಸ್ಪಂದಿಸಿದ ಪ್ರಜ್ಞಾವಂತರು ಮುಂದಿನ 15 ರಿಂದ 20 ದಿನಗಳಿಗೆ ಸಾಕಾಗವಷ್ಟು ಸೌದೆ ಪೂರೈಕೆ ಮಾಡಿದ್ದಾರೆ. ನಂತರ ಏನಾಗಲಿದೆ ಎಂದು ಊಹಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ತಿಳಿಸುತ್ತಾರೆ.
ನಗರದ ಪ್ರಾಣಿ ದಯಾಸಂಘಗಳಲ್ಲಿ ಸಂಪನ್ಮೂಲ ಕೊರತೆ ಉಂಟಾಗಿದೆ.ಮಾತೇ ಬಾರದ ಪ್ರಾಣಿಗಳ ಆರೋಗ್ಯ ಮತ್ತು ಅವುಗಳನ್ನು ಕಾಪಾಡುವ ದೃಷ್ಟಿಯಿಂದ ಪರಿಸ್ಥಿತಿ ಮತ್ತಷ್ಟು ಹದಗೆಡುವ ಮುನ್ನ ನಿಯಂತ್ರಣಕ್ಕೆ ಮನವಿ ಮಾಡಿಕೊಂಡಿದ್ದೇವೆ ಎಂದು ಕೀರ್ತನಾ ಹೇಳುತ್ತಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

Latest

ಚಿನ್ನ ಕಳ್ಳ ಸಾಗಣೆ: ನಟಿ ರನ್ಯಾರಾವ್‌ ಗೆ ಸಿಕ್ತು ಜಾಮೀನು

VISTARANEWS.COM


on

ಬೆಂಗಳೂರು: ಕಳೆದ ವರ್ಷ 102 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಕಳೆದ ಒಂದು ವರ್ಷದಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ನಟಿ ರನ್ಯಾ ರಾವ್​​​ಗೆ ಕೊನೆಗೂ ಜಾಮೀನು ದೊರೆತಿದೆ. ಇಂದು ಆರ್ಥಿಕ ಅಪರಾಧಗಳ ತಡೆ ನ್ಯಾಯಾಲಯ ಜಾಮೀನು ನೀಡಿದೆ.
2025 ಮಾರ್ಚ್ 3ರಂದು ರನ್ಯಾ ರಾವ್ ಅಲಿಯಾಸ್ ಹರ್ಷವರ್ಧಿನಿ ರನ್ಯಾ(34), ಅವರನ್ನು ಚಿನ್ನ ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಇದೀಗ ಜಾಮೀನು ದೊರೆತಿದ್ದು, ಒಂದು ವರ್ಷದ ಸೆರೆವಾಸದ ಬಳಿಕ ಈಕೆ ಜೈಲಿನಿಂದ ಹೊರಬರಲಿದ್ದಾರೆ. ಈ ಹಿಂದೆ ಇವರ ಜಾಮೀನು ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ವಜಾ ಮಾಡಿತ್ತು. ಹೀಗಾಗಿ ರನ್ಯಾ ರಾವ್​ಗೆ ಒಂದು ವರ್ಷ ಜಾಮೀನು ಸಿಕ್ಕಿರಲಿಲ್ಲ.
ಈಕೆಯನ್ನು ವಿನಿಮಯ ಸಂರಕ್ಷಣೆ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆಗಟ್ಟುವಿಕೆ (ಕೋಫೆಪೋಸಾ) ಕಾಯ್ದೆಯಡಿಯಲ್ಲಿ ಬಂಧಿಸಲಾಗಿತ್ತು. ಜತೆಗೆ ತೆಲುಗು ನಟ ತರುಣ್ ಕೊಂಡೂರು (36) ಮತ್ತು ಸಾಹಿಲ್ ಸಕರಿಯಾ ಜೈನ್ (26) ಅವರನ್ನೂ ಬಂಧಿಸಲಾಗಿತ್ತು.

Continue Reading

Latest

ತಮಿಳುನಾಡು: ಯಾರು ಹಿತವರು ಈ ಮೂವರೊಳಗೆ?:dmk; aiadmk; tvk

VISTARANEWS.COM


on

ತಮಿಳುನಾಡು ವಿಧಾನಸಭೆಯ ಎಲ್ಲ 234 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ನಾಳೆ ಮತದಾನ ನಡೆಯಲಿದೆ. ದಶಕಗಳಿಂದ ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ಮಾತ್ರ ಹಣಾಹಣಿ ನಡೆಯುತ್ತಿತ್ತು. ಕಾಂಗ್ರೆಸ್‌ ಬಿಜೆಪಿ ಮೊದಲಾದ ಪಕ್ಷಗಳು ನಾಮಕಾವಸ್ತೆಗಾಗಿ ಸ್ಪರ್ಧೆ ಮಾಡುತ್ತಿದ್ದವು. ಆದರೆ ಈ ಬಾರಿ ತಮಿಳುನಾಡು ಚುನಾವಣೆ ಹಲವು ಕಾರಣಗಳಿಗೆ ಗಮನ ಸೆಳೆಯುತ್ತಿದೆ. ಮೊದಲನೆಯದಾಗಿ ನಟ, ರಾಜಕಾರಣಿ ಸಿ.ಜೋಸೆಫ್‌ ವಿಜಯ್‌ ಹೊಸ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಸ್ಥಾಪಿಸಿ ಅಖಾಡಾಕ್ಕಿಳಿದಿದ್ದಾರೆ. ಎರಡನೆಯದಾಗಿ ಬಿಜೆಪಿ ತೀವ್ರ ಪೈಪೋಟಿ ನೀಡುತ್ತಿದೆ.
234 ವಿಧಾನಸಭಾ ಕ್ಷೇತ್ರಗಳಲ್ಲಿ 4,000 ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮೇ 4ರಂದು ಪಂಚರಾಜ್ಯಗಳ ಫಲಿತಾಂಶ ಪ್ರಕಟವಾಗಲಿದೆ.
ವಿಜಯ್‌ ಅವರ ರಾಜಕೀಯ ಪ್ರವೇಶ ವಿಶೇಷವಾಗಿ ಯುವ ಸಮೂಹವನ್ನು ಸೆಳೆಯುತ್ತಿದೆ ಎಂದು ಹೇಳಲಾಗುತ್ತಿದೆ. ಒಟ್ಟು 5.73 ಕೋಟಿ ಮತದಾರರ ಪೈಕಿ 18-30 ವಯೋಮಾನದೊಳಗಿನ ಮತದಾರರನ್ನು ನಂಬಿಕೊಂಡಿದ್ದಾರೆ. ಈ ವಯೋಮಾನದ ಸುಮಾರು 1.50 ಕೋಟಿ ಮತದಾರರು ತಮ್ಮ ಕೈ ಹಿಡಿಯಲಿದ್ದಾರೆ ಎನ್ನುವುದು ವಿಜಯ್‌ ನಿರೀಕ್ಷೆ. 30-39 ವಯೋಮಾನದ 1.16 ಕೋಟಿ ಮತದಾರರೂ ಸೇರಿದರೆ ಸುಮಾರು 2.38 ಕೋಟಿ ಮತದಾರರು ವಿಜಯ್‌ ಬೆಂಬಲಕ್ಕೆ ನಿಲ್ಲಲಿದ್ದಾರೆಯೇ ಎಂಬ ಕುತೂಹಲವೂ ಇದೆ. ಮಹಿಳಾ ಮತದಾರರು ವಿಜಯ್ ಅವರ ಬೆಂಬಲಕ್ಕೆ ನಿಲ್ಲಬಹುದೇ ಎಂಬ ಕುತೂಹಲವೂ ಇದೆ.ಯುವ ಮತದಾರರ ಮೇಲೆ ವಿಜಯ್ ಅವರ ಪ್ರಭಾವ ಎಷ್ಟಿರಲಿದೆ ಎಂಬುದು ಕುತೂಹಲ ಮೂಡಿಸಿದೆ.
ಈ ವರ್ಗದ ಮತದಾರರು ದಶಕಗಳಿಂದ ಆಡಳಿತ ನಡೆಸಿಕೊಂಡು ಬರುತ್ತಿರುವ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳಿಂದ ಭ್ರಮನಿರಸನಗೊಂಡಿದ್ದಾರೆ. ವಿಜಯ್‌ ಅವರು ಮತಗಳನ್ನು ಕಬಳಿಸಬಹುದೇ ಹೊರತು ಅಧಿಕಾರ ಹಿಡಿಯುವುದು ಅಸಾಧ್ಯ ಎಂದು ಹೇಳಲಾಗುತ್ತಿದೆ.
ಇನ್ನು ಆಡಳಿತಾರೂಢ ಡಿಎಂಕೆ ಮರಳಿ ಅಧಿಕಾರ ಹಿಡಿಯುವ ವಿಶ್ವಾಸ ಹೊಂದಿದೆ. ತಮ್ಮ ಸರ್ಕಾರದ ಸಾಧನೆಗಳು, ಜನಪರ ಯೋಜನೆಗಳು ತಮ್ಮನ್ನು ಗೆಲ್ಲಿಸುತ್ತವೆ ಎಂದು ಮುಖ್ಯಮಂತ್ರಿ ಸ್ಟಾಲಿನ್‌ ನಿರೀಕ್ಷಿಸಿದ್ದಾರೆ. ಬಲವಾದ ಆಡಳಿತ ವಿರೋಧಿ ಅಲೆ ಇಲ್ಲದೆ ಇರುವುದು ಡಿಎಂಕೆ ಪಾಲಿಗೆ ಪ್ಲಸ್‌ ಪಾಯಿಂಟ್‌ ಆಗಿದೆ.
ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವ ಎಐಎಡಿಎಂಕೆ ಮರಳಿ ಗದ್ದುಗೆ ಹಿಡಿಯಲು ಹವಣಿಸುತ್ತಿದೆ. ಜಯಲಲಿತಾ ಅವರ ಅಗಲಿಕೆಯ ದಿನದಿಂದಲೂ ಪಕ್ಷ ಮೇಲೇರಲು ಸಾಧ್ಯವೇ ಆಗಿಲ್ಲ. ಜಯಲಲಿತಾ ಅವರ ಹೆಸರಿನಲ್ಲಿ ಮಹಿಳಾ ಮತದಾರರನ್ನು ಸೆಳೆಯಲು ಎಐಎಡಿಎಂಕೆ ಕಸರತ್ತು ನಡೆಸಿದೆ.ಆಡಳಿತ ವಿರೋಧಿ ಅಲೆ ಮತ್ತು ಕೇಂದ್ರ ಸರ್ಕಾರದ ಯೋಜೆನಗಳನ್ನು ನೆಚ್ಚಿಕೊಂಡಿದೆ.

Continue Reading

ಅವಿಭಾಗೀಕೃತ

“ನಿಮ್ಮಿಂದಲೇ ಟ್ರಾಫಿಕ್‌ ಜಾಮ್!‌ ಗೆಟ್‌ ಔಟ್‌” ಎಂದು ಸಚಿವರನ್ನು ನಿಂದಿಸಿದ ಮಹಿಳೆ

VISTARANEWS.COM


on

ಮುಂಬೈ: ಮಹಿಳಾ ಮೀಸಲಾತಿ ಕುರಿತು ಮುಂಬೈನಲ್ಲಿ ಬಿಜೆಪಿ ಪ್ರತಿಭಟನ ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಹಾರಾಷ್ಟ್ರ ಬಿಜೆಪಿ ಸರ್ಕಾರದ ಸಚಿವರೊಬ್ಬರನ್ನು ಮಹಿಳೆಯೊಬ್ಬರು ಸಚಿವರನ್ನು ತರಾಟೆಗೆ ತೆಗೆದುಕೊಂಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಸಾಕಷ್ಟು ವೈರಲ್‌ ಆಗಿದೆ.
ಮುಂಬೈನ ವೊರ್ಲಿ ಪ್ರದೇಶದಲ್ಲಿ ಸಚಿವ ಗಿರೀಶ್ ಮಹಾಜನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಈ ಪ್ರತಿಭಟನೆಯಿಂದ ಸಾರ್ವಜನಿಕರಿಗೆ ಅಡಚಣೆ ಉಂಟಾಗಿತ್ತು. ಇದರಿಂದ ರೊಚ್ಚಿಗೆದ್ದ ಈ ಮಹಿಳೆ ಸಚಿವರನ್ನು ಉದ್ದೇಶಿಸಿ ನಿಮ್ಮಿಂದಲೇ ಟ್ರಾಫಿಕ್ ಜ್ಯಾಮ್ ಉಂಟಾಗುತ್ತಿದ್ದು,ಫ್ರೆಂ ಹಿಯರ್.. ಗೆಟ್‌ ಔಟ್‌ ಎಂದು ನಿಂದಿಸಿದ್ದಾರೆ.
ಈ ರೀತಿ ನಡುರಸ್ತೆಯಲ್ಲಿ ಪ್ರತಿಭಟನೆ ನಡೆಸಿ ವಾಹನ ಸಂಚಾರಕ್ಕೆ ಅಡ್ಡಿಪಡಿಸುವ ಬದಲು ಸಮೀಪದ ಮೈದಾನದಲ್ಲಿ ಪ್ರತಿಭಟನೆ ನಡೆಸಲು ಏನು ಸಮಸ್ಯೆ ಎಂದು ಪ್ರಶ್ನಿಸಿದ್ದಾರೆ.
ಪೊಲೀಸ್ ಅಧಿಕಾರಿಯೊಬ್ಬರು ಈ ಮಹಿಳೆಯನ್ನು ಸಮಾಧಾನಪಡಿಸಲು ಪ್ರಯತ್ನಿಸಿದಾಗ ಮಾತನಾಡಲು ನಿರಾಕರಿಸಿದ ಮಹಿಳೆ ತನ್ನೊಂದಿಗೆ ಯಾರೂ ಮಾತನಾಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಈ ವಿಡಿಯೊವನ್ನು ಹಂಚಿಕೊಂಡಿರುವ ಮಹಾರಾಷ್ಟ್ರ ಕಾಂಗ್ರೆಸ್ ಘಟಕದ ಅಧ್ಯಕ್ಷ ಹರ್ಷವರ್ಧನ್ ಸಪ್ನಲ್, ಮಹಿಳಾ ಮೀಸಲಾತಿ ಕುರಿತು ಆಡಳಿತ ಪಕ್ಷದ ಅಭಿಯಾನದ ನೈಜ ಮುಖವನ್ನು ಬಹಿರಂಗಪಡಿಸಿದೆ ಎಂದು
ಟೀಕಿಸಿದ್ದಾರೆ. ರಾಜಕೀಯ ಲಾಭಕ್ಕಾಗಿ ಬಿಜೆಪಿ ಮಹಿಳೆಯರನ್ನು ದಾರಿ ತಪ್ಪಿಸುತ್ತಿದೆ ಮತ್ತು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದು ಅದಕ್ಕಾಗಿ ಮಹಿಳಾ ಮೀತಿ ವಿಷಯವನ್ನು ಒಂದು ಸಾಧನವಾಗಿ ಬಳಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

Continue Reading

Latest

ಯುದ್ಧವಿರಾಮ ಅನಿರ್ದಿಷ್ಠಾವಧಿಗೆ ವಿಸ್ತರಣೆ: ಡೋನಾಲ್ಡ್ ಟ್ರಂಪ್‌ ಘೋಷಣೆ

VISTARANEWS.COM


on

Donald trump

ವಾಷಿಂಗ್ಟನ್‌: ಅಮೆರಿಕಾ-ಇಸ್ರೇಲ್‌- ಇರಾನ್‌ ನಡುವಿನ ಯುದ್ಧ ವಿರಾಮಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇವೆ. ಅಷ್ಟರೊಳಗೆ ಯುದ್ಧ ವಿರಾಮ ಅನಿರ್ದಿಷ್ಠಾವಧಿಗೆ ವಿಸ್ತರಣೆಯಾಗಿದೆ.


ಈ ಕುರಿತು ಸಾಮಾಜಿಕ ಮಾಧ್ಯಮ ಪೋಸ್ಟ್‌ ನಲ್ಲಿ ಈ ವಿಷಯ ತಿಳಿಸಿರುವ ಅಮೆರಿಕಾ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಇರಾನ್‌ ನಾಯಕರು ಮತ್ತು ಅವರ ಪ್ರತಿನಿಧಿಗಳು ಏಕರೂಪದ ಪ್ರಸ್ತಾವನೆಯೊಂದಿಗೆ ಬರುವವರೆಗೆ ಯುದ್ಧ ವಿರಾಮ ಮುಂದುವರಿಸುತ್ತೇನೆ ಎಂದಿದ್ದಾರೆ.


ಶಾಂತಿ ಮಾತುಕತೆಯ ಮಧ್ಯಸ್ಥಿಕೆ ವಹಿಸಿರುವ ಪಾಕಿಸ್ತಾನ್‌ ಮನವಿಯನ್ನು ತಾನು ಒಪ್ಪಿಕೊಂಡಿರುವುದಾಗೆ ಟ್ರಂಪ್‌ ಸ್ಪಷ್ಟಪಡಿಸಿದ್ದಾರೆ. ಇರಾನ್‌ ಸರ್ಕಾರ ಗಂಭೀರವಾಗಿ ಹಾನಿಗೀಡಾಗಿದೆ. ಹೀಗಾಗಿ ಯುದ್ಧ ವಿರಾಮ ವಿಸ್ತರಿಸುತ್ತಿದ್ದೇನೆ ಹೊರತು ಇದು ಅನಿರಿಕ್ಷಿತವಲ್ಲ ಎಂದು ಹೇಳಿಕೊಂಡಿದ್ದಾರೆ.
ಕಳೆದ ಫೆ.28 ಅಮೆರಿಕಾ-ಇಸ್ರೇಲ್‌ ಜಂಟಿಯಾಗಿ ಇರಾನ್‌ ವಿರುದ್ಧ ಯುದ್ಧ ಆರಂಭಿಸಿದ್ದವು. ಈ ಹಿಂದೆ ಇರಾನ್‌ ನ ವಿದ್ಯುತ್‌ ಸ್ಥಾವರಗಳು, ಮತ್ತು ನಾಗರಿಕ ಮೂಲಸೌಕರ್ಯಗಳ ಮೇಲೆ ಬಾಂಬ್‌ ದಾಳಿ ನಡೆಸುವುದಾಗಿ ಟ್ರಂಪ್‌ ಗುಡುಗಿದ್ದರು. ಇದನ್ನು ಅಂತರ ರಾಷ್ಟ್ರೀಯ ಕಾನೂನಿನಲ್ಲಿ ಇದಕ್ಕೆ ಅವಕಾಶ ಇಲ್ಲ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಗೂ ಮತ್ತಿತರ ದೇಶಗಳ ಮುಖಂಡರು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

Continue Reading
Advertisement
Latest14 minutes ago

ಸಚಿವ ಪ್ರಲ್ಹಾದ ಜೋಶಿ ಮನವಿಗೆ ಸ್ಪಂದನೆ; “ಧಾರವಾಡ ಆಕಾಶವಾಣಿ ಕೇಂದ್ರ” ಸ್ಥಳಾಂತರಿಸದಿರಲು ನಿರ್ಧಾರ

Latest21 minutes ago

Latest21 minutes ago

ಚಿನ್ನ ಕಳ್ಳ ಸಾಗಣೆ: ನಟಿ ರನ್ಯಾರಾವ್‌ ಗೆ ಸಿಕ್ತು ಜಾಮೀನು

Latest43 minutes ago

ತಮಿಳುನಾಡು: ಯಾರು ಹಿತವರು ಈ ಮೂವರೊಳಗೆ?:dmk; aiadmk; tvk

Latest2 hours ago

ಗೋಲ್ಡ್ ಸ್ಮಗ್ಲಿಂಗ್ ಹಗರಣ: ನಟಿ ರನ್ಯಾ ರಾವ್​​ಗೆ ಜಾಮೀನು ಮಂಜೂರು ಮಾಡಿದ ನ್ಯಾಯಾಲಯ!

ಅವಿಭಾಗೀಕೃತ2 hours ago

“ನಿಮ್ಮಿಂದಲೇ ಟ್ರಾಫಿಕ್‌ ಜಾಮ್!‌ ಗೆಟ್‌ ಔಟ್‌” ಎಂದು ಸಚಿವರನ್ನು ನಿಂದಿಸಿದ ಮಹಿಳೆ

Latest2 hours ago

ಹಾರ್ದಿಕ್ ವಿರುದ್ಧ ಅಸಮಾಧಾನ: ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಸಹೋದರ ಕೃನಾಲ್ ಪಾಂಡ್ಯ.

Donald trump
Latest2 hours ago

ಯುದ್ಧವಿರಾಮ ಅನಿರ್ದಿಷ್ಠಾವಧಿಗೆ ವಿಸ್ತರಣೆ: ಡೋನಾಲ್ಡ್ ಟ್ರಂಪ್‌ ಘೋಷಣೆ

BJP State President B Y Vijayendra latest statement in bengaluru
Latest3 hours ago

ಸರ್ಕಾರಿ ನೌಕರರಿಗೆ ಸಂಬಳ ಕೊಡದ ಸರ್ಕಾರ: ವಿಜಯೇಂದ್ರ ವಾಗ್ದಾಳಿ

Latest3 hours ago

ವೈರಲ್ ಬೆಡಗಿ ಕುಂಭಮೇಳದ ಮೋನಾಲಿಸಾ ಬಗ್ಗೆ ಬಿಗ್ ಅಪ್ಡೇಟ್: ಪತ್ನಿ ಗರ್ಭಿಣಿ ಎಂದು ಪೊಲೀಸರಿಗೆ ಪತಿ ಫರ್ಮಾನ್ ಮಾಹಿತಿ

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ2 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌