Prajwal Revanna Case: ಪ್ರಜ್ವಲ್ ರೇವಣ್ಣಗೆ ಸಂಕಷ್ಟ; ಅರೆಸ್ಟ್ ವಾರಂಟ್ ನೀಡಿದ ಕೋರ್ಟ್‌ - Vistara News

ಪ್ರಮುಖ ಸುದ್ದಿ

Prajwal Revanna Case: ಪ್ರಜ್ವಲ್ ರೇವಣ್ಣಗೆ ಸಂಕಷ್ಟ; ಅರೆಸ್ಟ್ ವಾರಂಟ್ ನೀಡಿದ ಕೋರ್ಟ್‌

Prajwal Revanna Case: ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್‌, ಪ್ರಜ್ವಲ್ ರೇವಣ್ಣ ವಿರುದ್ಧ ಅರೆಸ್ಟ್‌ ವಾರಂಟ್‌ ಜಾರಿ ಮಾಡಿದೆ. ಜತೆಗೆ ಪಾಸ್‌ಪೋರ್ಟ್ ಕ್ಯಾನ್ಸಲ್ ಮಾಡಲು ಅನುಮತಿ ನೀಡಲಾಗಿದೆ.

VISTARANEWS.COM


on

Prajwal Revanna Case
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಪ್ರಜ್ವಲ್ ರೇವಣ್ಣಗೆ ಅಸಲಿ ಸಂಕಷ್ಟ ಶುರುವಾಗಿದೆ. ವಿದೇಶದಲ್ಲಿರುವ ಪ್ರಜ್ವಲ್‌ ಸೆರೆಗೆ ಎಸ್‌ಐಟಿ ಸರ್ಜಿಕಲ್ ಸ್ಟ್ರೈಕ್‌ ಆರಂಭಿಸಿದ್ದು, ಇದೀಗ ಹೊಳೆನರಸೀಪುರ ಕೇಸ್‌ನಲ್ಲಿ (Prajwal Revanna Case) ಪ್ರಜ್ವಲ್‌ ಬಂಧನಕ್ಕೆ ಅರೆಸ್ಟ್ ವಾರಂಟ್ ಪಡೆದಿದೆ. ಜತೆಗೆ ಪಾಸ್‌ಪೋರ್ಟ್ ಕ್ಯಾನ್ಸಲ್ ಮಾಡಲು ಕೂಡ ಕೋರ್ಟ್ ಅನುಮತಿ ನೀಡಿದೆ.

ನಗರದ 42ನೇ ಎಸಿಎಂಎಂ ಕೋರ್ಟ್‌, ಪ್ರಜ್ವಲ್ ರೇವಣ್ಣ ವಿರುದ್ಧ ಅರೆಸ್ಟ್‌ ವಾರಂಟ್‌ ಜಾರಿ ಮಾಡಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ಹೊರಡಿಸಿದ್ದ ನೋಟಿಸ್‌ಗಳ ಬಗ್ಗೆ ಕೋರ್ಟ್‌ ಮಾಹಿತಿ ಕೇಳಿತ್ತು. ಈ ವೇಳೆ ಲುಕ್‌ ಔಟ್ ನೋಟಿಸ್, ಬ್ಲೂ ಕಾರ್ನರ್ ನೋಟಿಸ್ ನೀಡಿರುವ ಬಗ್ಗೆ ಮಾಹಿತಿ ನೀಡಿದ್ದ ಎಸ್‌ಐಟಿ, ಬಂಧನಕ್ಕೆ ಚಾರ್ಜ್ ಶೀಟ್ ಅವಶ್ಯಕತೆ ಇಲ್ಲ ಎಂದು ಕೋರ್ಟ್‌ಗೆ ಮನವರಿಕೆ ಮಾಡಿತ್ತು. ಹೀಗಾಗಿ ಕೋರ್ಟ್‌ ಅರೆಸ್ಟ್‌ ವಾರಂಟ್‌ ಜಾರಿ ಮಾಡಿದೆ.

ಸಿಬಿಐ ಮೂಲಕ ರೆಡ್ ಕಾರ್ನರ್ ನೋಟಿಸ್

ವಿದೇಶದಲ್ಲಿರುವ ಪ್ರಜ್ವಲ್‌ ರೇವಣ್ಣಗೆ ವಿಚಾರಣೆಗೆ ಹಾಜರಾಗಲು ಈಗಾಗಲೇ ಎಸ್‌ಐಟಿ ಲುಕ್‌ ಔಟ್‌ ನೋಟಿಸ್‌ ಹಾಗೂ ಬ್ಲೂ ಕಾರ್ನರ್‌ ನೋಟಿಸ್‌ ನೀಡಿತ್ತು. ಇದೀಗ ಅರೆಸ್ಟ್‌ ವಾರಂಟ್‌ ಲಭಿಸಿರುವುದರಿಂದ ಸಿಬಿಐ ಮೂಲಕ ರೆಡ್ ಕಾರ್ನರ್ ನೋಟಿಸ್ ಹೊರಡಿಸಲು ಎಸ್‌ಐಟಿ ಸಿದ್ಧತೆ ನಡೆಸುತ್ತಿದೆ. ರೆಡ್‌ ಕಾರ್ನರ್‌ ನೋಟಿಸ್‌ ಬಳಿಕ ಪ್ರಜ್ವಲ್‌ ಪಾಸ್‌ಪೋರ್ಟ್‌ ರದ್ದು ಆಗಲಿದ್ದು, ಇದರಿಂದ ಬಂಧನಕ್ಕೆ ಸಹಕಾರಿಯಾಗಲಿದೆ.

ರೆಡ್ ಕಾರ್ನರ್ ನೋಟಿಸ್ ಎನ್ನುವುದು ಹಸ್ತಾಂತರ, ಶರಣಾಗತಿ ಅಥವಾ ಅಂತಹುದ್ದೇ ಕಾನೂನು ಕ್ರಮಕ್ಕೆ ಬಾಕಿ ಇರುವ ವ್ಯಕ್ತಿಯನ್ನು ಪತ್ತೆಹಚ್ಚಲು ಮತ್ತು ತಾತ್ಕಾಲಿಕವಾಗಿ ಬಂಧಿಸುವುದಕ್ಕೆ ವಿಶ್ವಾದ್ಯಂತ ಕಾನೂನು ಜಾರಿಗೊಳಿಸಲು ಮಾಡುವ ವಿನಂತಿಯಾಗಿದೆ.

ಅಶ್ಲೀಲ ವಿಡಿಯೊ ವೈರಲ್ ಕೇಸ್‌; ವಕೀಲ ದೇವರಾಜೇಗೌಡ ಎಸ್‌ಐಟಿ ಕಸ್ಟಡಿ ಅವಧಿ 2 ವಿಸ್ತರಣೆ

Prajwal Revanna Case obscene video goes viral Advocate Devarajegowda SIT custody extended by 2 days

ಹಾಸನ: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೊ ವೈರಲ್ ಪ್ರಕರಣದಲ್ಲಿ (Prajwal Revanna Case) ಎಂಟನೇ ಆರೋಪಿಯಾಗಿರುವ ವಕೀಲ ದೇವರಾಜೇಗೌಡ (Devarajegowda) ಅವರನ್ನೂ ಮತ್ತೂ ಎರಡು ದಿನ ಪೊಲೀಸ್‌ ಕಸ್ಟಡಿಗೆ ನೀಡಿ 5ನೇ ಅಧಿಕ ಸಿವಿಲ್ ನ್ಯಾಯಾಲಯ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ಆದೇಶಿಸಿದೆ.

ಏಪ್ರಿಲ್ 23 ರಂದು ಹಾಸನ ನಗರದ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ನಲ್ಲಿ 8ನೇ ಆರೋಪಿಯಾಗಿ ದೇವರಾಜೇಗೌಡ ಅವರ ಹೆಸರು ಸೇರ್ಪಡೆ ಮಾಡಲಾಗಿದೆ. ಹೀಗಾಗಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದೇವರಾಜೇಗೌಡ ಅವರನ್ನು ವಿಚಾರಣೆಗಾಗಿ ಶುಕ್ರವಾರ ಒಂದು ದಿನದ ಮಟ್ಟಿಗೆ ಎಸ್‌ಐಟಿ ವಶಕ್ಕೆ ಪಡೆಯಲಾಗಿತ್ತು.

ದೇವರಾಜೇಗೌಡ ಅವರ ಕಸ್ಟಡಿ ಅವಧಿ ಮುಕ್ತಾಯವಾಗಿದ್ದರಿಂದ ಪುನಃ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಎಸ್‌ಐಟಿ ಅಧಿಕಾರಿಗಳು ಮತ್ತೆ ಎರಡು ದಿನ ಕಸ್ಟಡಿಗೆ ಕೇಳಿದ್ದರು. ಹೀಗಾಗಿ ಮೇ 20ರ ಸಂಜೆ ಐದು ಗಂಟೆಗೆ ಕೋರ್ಟ್ ಮುಂದೆ ಹಾಜರು ಪಡಿಸುವಂತೆ ನ್ಯಾಯಾಲಯ ಸೂಚಿಸಿ, ಎರಡು ದಿನ ಕಸ್ಟಡಿಯನ್ನು ಮುಂದುವರಿಸಿ ಆದೇಶಿಸಿದೆ.
ಎರಡೆರಡು ಕೇಸ್‌

ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ (physical Abuse) ಕೇಸ್‌ ಆರೋಪಿ ವಕೀಲ ದೇವರಾಜೇಗೌಡ (Devarajegowda) ಅವರ ಪೊಲೀಸ್ ಕಸ್ಟಡಿ ಅಂತ್ಯವಾಗಿದ್ದರಿಂದ ಅವರನ್ನು ಶುಕ್ರವಾರ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಮೇ 14 ರಂದು ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದ ಹೊಳೆನರಸೀಪುರ ನಗರ ಪೊಲೀಸರು, ಗುರುವಾರವೂ ಒಂದು ದಿನ ಕಸ್ಟಡಿಗೆ ಪಡೆದುಕೊಂಡಿದ್ದರು. ಶುಕ್ರವಾರ ಕೋರ್ಟ್‌ ಮುಂದೆ ಹಾಜರುಪಡಿಸಿದ ಹಿನ್ನೆಲೆಯಲ್ಲಿ ಅವರಿಗೆ ನ್ಯಾಯಾಂಗ ಬಂಧನವಿರಿಸಿ ಆದೇಶಿಸಲಾಗಿತ್ತು. ಸದ್ಯ ನ್ಯಾಯಾಂಗ ಬಂಧನದಲ್ಲಿದ್ದ ವಕೀಲರನ್ನು ಪೆನ್‌ಡ್ರೈವ್‌ ಪ್ರಕರಣದಲ್ಲಿ ಶುಕ್ರವಾರ ಎಸ್‌ಐಟಿ ಕಸ್ಟಡಿಗೆ ಪಡೆದುಕೊಂಡಿತ್ತು. ಈಗ ಮತ್ತೆ ಎರಡು ದಿನ ಕಸ್ಟಡಿ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.

ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಸಾಕ್ಷ್ಯ ಬಿಡುಗಡೆಗೆ ಮುಂದಾಗಿದ್ದ ದೇವರಾಜೇಗೌಡ ಅವರು ಬೇರೆ ಕೇಸ್‌ನಲ್ಲಿ ಬಂಧನವಾಗಿದ್ದಾರೆ. ಒಟ್ಟು ನಾಲ್ಕು ದಿನ ಪೊಲೀಸ್ ಕಸ್ಟಡಿಯಲ್ಲಿದ್ದ ದೇವರಾಜೇಗೌಡ ಅವರನ್ನು ಮತ್ತೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು.

ದೇವರಾಜೇಗೌಡ ಮೇ 11ರಂದು ಬಂಧನಕ್ಕೆ ಒಳಗಾಗಿದ್ದರು. ಇವರ ಮೇಲೆ ಲೈಂಗಿಕ ದೌರ್ಜನ್ಯ, ಕಿರುಕುಳ ಆರೋಪಗಳನ್ನು ಹೊರಿಸಲಾಗಿದೆ. ಹೀಗಾಗಿ ಹೆಚ್ಚಿನ ವಿಚಾರಣೆಗಾಗಿ ಹೊಳೆನರಸೀಪುರ ನಗರ ಠಾಣೆ ಪೊಲೀಸರು ಅವರನ್ನು ಕಸ್ಟಡಿಗೆ ಪಡೆದುಕೊಂಡಿದ್ದರು. ಹೊಳೆನರಸೀಪುರ, ಹಾಸನ ಸೇರಿ ಇತರ ಅಗತ್ಯ ಸ್ಥಳಗಳಿಗೆ ಕರೆದೊಯ್ದು ವಿಚಾರಣೆಯನ್ನು ಕೈಗೊಂಡಿದ್ದರು.
ಸರ್ಕಾರದ ವಿರುದ್ಧ ತೊಡೆ ತಟ್ಟಿದ್ದ ದೇವರಾಜೇಗೌಡ

ವಕೀಲ ದೇವರಾಜೇಗೌಡ ಬಂಧನವಾಗಿರುವುದು ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಾದರೂ ಹಾಸನ ಪೆನ್ ಡ್ರೈವ್ ಪ್ರಕರಣಕ್ಕೇ ತಳುಕು ಹಾಕಿಕೊಂಡಿದೆ. ಈಗಾಗಲೇ ಮಾಜಿ ಸಂಸದ ಶಿವರಾಮೇಗೌಡ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ವಿರುದ್ಧ ಗಂಭೀರ ಆರೋಪ ಮಾಡಿದ್ದಲ್ಲದೆ, ಅವರ ಜತೆಗಿನ ಮಾತುಕತೆ ಎನ್ನಲಾದ ಆಡಿಯೊವನ್ನು ಬಿಡುಗಡೆ ಮಾಡಿದ್ದರು. ಇದಲ್ಲದೆ, ಸಾಕಷ್ಟು ವಿಡಿಯೊಗಳು, ಸಾಕ್ಷಿಗಳು ಸಹ ತಮ್ಮ ಬಳಿ ಇದೆ ಎಂದು ಹೇಳಿಕೊಂಡಿದ್ದರು. ಸಾಕ್ಷ್ಯಗಳನ್ನು ಮುಂದಿನ ದಿನಗಳಲ್ಲಿ ಸಿಬಿಐ ಮುಂದೆ ಇಡುತ್ತೇನೆ ಎಂದು ಸಹ ಸುದ್ದಿಗೋಷ್ಠಿ ನಡೆಸಿ ನೇರವಾಗಿ ರಾಜ್ಯ ಸರ್ಕಾರದ ವಿರುದ್ಧ ಸವಾಲು ಹಾಕಿದ್ದರು. ಆದರೆ, ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿದ್ದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಅವರನ್ನು ಬಂಧಿಸಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Bomb Threat: ಮುಂಬೈನ 50ಕ್ಕೂ ಅಧಿಕ ಆಸ್ಪತ್ರೆಗಳಿಗೆ ಬಾಂಬ್‌ ದಾಳಿ ಬೆದರಿಕೆ; ಎಲ್ಲೆಡೆ ಕಟ್ಟೆಚ್ಚರ

Bomb Threat: ಮುಂಬೈನಲ್ಲಿರುವ ಪ್ರತಿಷ್ಠಿತ ಜಸ್ಲೋಕ್‌ ಹಾಸ್ಪಿಟಲ್‌, ರಹೇಜಾ ಹಾಸ್ಪಿಟಲ್‌, ಸೆವೆನ್‌ ಹಿಲ್ಸ್‌, ಕೊಹಿನೂರ್‌, ಕೆಇಎಂ, ಜೆಜೆ ಹಾಸ್ಪಿಟಲ್‌, ಸೇಂಟ್‌ ಜಾರ್ಜ್‌ ಹಾಸ್ಪಿಟಲ್‌ ಸೇರಿ ಹಲವು ಆಸ್ಪತ್ರೆಗಳ ಮೇಲೆ ಬಾಂಬ್‌ ದಾಳಿ ಮಾಡಲಾಗುವುದು ಎಂಬುದಾಗಿ ಬೆದರಿಕೆ ಹಾಕಲಾಗಿದೆ. ಇದಕ್ಕೂ ಕೆಲ ಗಂಟೆಗಳ ಮೊದಲು ದೇಶದ 41 ಏರ್‌ಪೋರ್ಟ್‌ಗಳನ್ನು ಸ್ಫೋಟಿಸಲಾಗುವುದು ಎಂದು ಬೆದರಿಕೆ ಒಡ್ಡಲಾಗಿತ್ತು.

VISTARANEWS.COM


on

Bomb threat
Koo

ಮುಂಬೈ: ದೇಶದಲ್ಲಿ ಇತ್ತೀಚೆಗೆ ಪ್ರಮುಖ ನಗರಗಳಲ್ಲಿ ಬಾಂಬ್‌ ದಾಳಿಗಳ ಬೆದರಿಕೆಗಳು (Bomb Threat) ಜಾಸ್ತಿಯಾಗಿವೆ. ಬೆಂಗಳೂರಿನ ಶಾಲೆಗಳು ಸೇರಿ ಮುಂಬೈ, ದೆಹಲಿ ಏರ್‌ಪೋರ್ಟ್‌ಗಳು (Airports), ಸರ್ಕಾರದ ಕಟ್ಟಡಗಳಿಗೆ ಹುಸಿ ಬೆದರಿಕೆ ಕರೆಗಳು, ಇ-ಮೇಲ್‌ಗಳು ರವಾನೆಯಾಗುತ್ತಲೇ ಇವೆ. ಇದರ ಬೆನ್ನಲ್ಲೇ, ಮಂಗಳವಾರ (ಜೂನ್‌ 18) ಮುಂಬೈನಲ್ಲಿರುವ 50ಕ್ಕೂ ಅಧಿಕ ಆಸ್ಪತ್ರೆಗಳನ್ನು (Mumbai Hospitals) ಸ್ಫೋಟಿಸುವುದಾಗಿ ಇ-ಮೇಲ್‌ ಮೂಲಕ ಬಾಂಬ್‌ ಬೆದರಿಕೆ ಹಾಕಲಾಗಿದೆ. ಹಾಗಾಗಿ, ಪೊಲೀಸರು ಆಸ್ಪತ್ರೆಗಳ ಸುತ್ತ ಕಟ್ಟೆಚ್ಚರ ವಹಿಸಿದ್ದಾರೆ.

ಮಂಗಳವಾರವೇ ದೇಶದ 41 ವಿಮಾನ ನಿಲ್ದಾಣಗಳನ್ನು ಸ್ಫೋಟಿಸಲಾಗುವುದು ಎಂಬುದಾಗಿ ಹುಸಿ ಬಾಂಬ್‌ ಬೆದರಿಕೆ ಹಾಕಲಾಗಿತ್ತು. ಆಗಲೂ ಭದ್ರತಾ ಸಿಬ್ಬಂದಿ, ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿಯ ಪರಿಶೀಲನೆ ನಡೆಸಿದ್ದರು. ಇದಾದ ಕೆಲವೇ ಗಂಟೆಯಲ್ಲಿ ಮುಂಬೈನ ಆಸ್ಪತ್ರೆಗಳಿಗೂ ಬಾಂಬ್‌ ಬೆದರಿಕೆ ಹಾಕಲಾಗಿದೆ. ಬಾಂಬ್‌ ಬೆದರಿಕೆಯ ಕುರಿತು ಪೊಲೀಸರೇ ಮಾಹಿತಿ ನೀಡಿದ್ದಾರೆ. ವಿಪಿಎನ್‌ ನೆಟ್‌ವರ್ಕ್‌ ಬಳಸಿ ಬಾಂಬ್‌ ದಾಳಿಯ ಬೆದರಿಕೆ ಹಾಕಿದ್ದಾರೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.

ಮುಂಬೈನಲ್ಲಿರುವ ಪ್ರತಿಷ್ಠಿತ ಜಸ್ಲೋಕ್‌ ಹಾಸ್ಪಿಟಲ್‌, ರಹೇಜಾ ಹಾಸ್ಪಿಟಲ್‌, ಸೆವೆನ್‌ ಹಿಲ್ಸ್‌, ಕೊಹಿನೂರ್‌, ಕೆಇಎಂ, ಜೆಜೆ ಹಾಸ್ಪಿಟಲ್‌, ಸೇಂಟ್‌ ಜಾರ್ಜ್‌ ಹಾಸ್ಪಿಟಲ್‌ ಸೇರಿ ಹಲವು ಆಸ್ಪತ್ರೆಗಳ ಮೇಲೆ ಬಾಂಬ್‌ ದಾಳಿ ಮಾಡಲಾಗುವುದು ಎಂಬುದಾಗಿ ಬೆದರಿಕೆ ಹಾಕಲಾಗಿದೆ. ಇ-ಮೇಲ್‌ ಮೂಲಕ ಬೆದರಿಕೆ ಒಡ್ಡುತ್ತಲೇ ಪೊಲೀಸರು ಹಾಗೂ ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿಯು ಆಸ್ಪತ್ರೆಗಳಿಗೆ ತೆರಳಿ, ಪರಿಶೀಲನೆ ನಡೆಸಿದ್ದಾರೆ. ಹಾಗೆಯೇ, ಭದ್ರತೆಯನ್ನು ಕೂಡ ಹೆಚ್ಚಿಸಿದ್ದಾರೆ ಎಂದು ತಿಳಿದುಬಂದಿದೆ.

ಕೆಲ ದಿನಗಳ ಹಿಂದಷ್ಟೇ, ದೇಶದ 13 ವಿಮಾನ ನಿಲ್ದಾಣಗಳನ್ನು ಸ್ಫೋಟಿಸಲಾಗುವುದು ಎಂದು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) ಸಿಬ್ಬಂದಿಗೆ ಬೆದರಿಕೆಯ ಮೇಲ್‌ ಬಂದಿತ್ತು. ಬೆಂಗಳೂರು, ದೆಹಲಿ, ಅಹಮದಾಬಾದ್‌, ಚೆನ್ನೈ ಸೇರಿ ಹಲವು ನಗರಗಳ ಶಾಲೆಗಳನ್ನೂ ಸ್ಫೋಟಿಸುವ ಬೆದರಿಕೆ ಕರೆಗಳು ಬಂದಿದ್ದವು. ಬಳಿಕ ನಕಲಿ ಬಾಂಬ್‌ ಬೆದರಿಕೆ ಎಂಬುದಾಗಿ ತಿಳಿದುಬಂದಿತ್ತು. ಬೆಂಗಳೂರಿನಲ್ಲಿ ಶಾಲೆಗಳಿಗೆ ಬಾಂಬ್‌ ಬೆದರಿಕೆ ಬಂದಾಗಲಂತೂ ಭಾರಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇದಾದ ಬಳಿಕ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಭಯಪಡುವಂತಾಗಿತ್ತು.

ಇದನ್ನೂ ಓದಿ: Kannur Bomb Blast: ಕೇರಳದಲ್ಲಿ ಬಾಂಬ್‌ ಸ್ಫೋಟಕ್ಕೆ ವೃದ್ಧ ಬಲಿ; ಕಣ್ಣೂರು ಆಗುತ್ತಿದೆಯೇ ಬಾಂಬ್‌ ಕಾರ್ಖಾನೆ?

Continue Reading

ದೇಶ

Jagan Mohan Reddy: ಸರ್ಕಾರದ 500 ಕೋಟಿ ರೂ.ನಲ್ಲಿ ಜಗನ್‌ ಅರಮನೆ ನಿರ್ಮಾಣ? ಟಿಡಿಪಿ ಸ್ಫೋಟಕ ಆರೋಪ

Jagan Mohan Reddy: ಋಷಿಕೊಂಡ ಹಿಲ್ಸ್‌ ಪ್ರವಾಸಿ ತಾಣವಾಗಿತ್ತು. ಇಲ್ಲಿಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಆದರೆ, 9.88 ಎಕರೆ ಜಾಗದಲ್ಲಿ ಜಗನ್‌ ಮೋಹನ್‌ ರೆಡ್ಡಿ ಅವರು ಬಂಗಲೆ ನಿರ್ಮಿಸಿದ್ದಾರೆ. ಸುಮಾರು 36 ಲಕ್ಷ ರೂ. ವೆಚ್ಚದಲ್ಲಿ ಬಾತ್‌ ಟಬ್‌ ನಿರ್ಮಿಸಿದ್ದಾರೆ. ಇಂತಹ ಹತ್ತಾರು ಐಷಾರಾಮಿ ಕೋಣೆಗಳು, ಸೌಕರ್ಯಗಳು ಬಂಗಲೆಯಲ್ಲಿವೆ.

VISTARANEWS.COM


on

Jagan Mohan Reddy
Koo

ಅಮರಾವತಿ: ಆಂಧ್ರಪ್ರದೇಶದಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ (Andhra Pradesh Assembly Election 2024) ವೈ.ಎಸ್.ಜಗನ್‌ ಮೋಹನ್‌ ರೆಡ್ಡಿ (Jagan Mohan Reddy) ಅವರ ವೈಎಸ್‌ಆರ್‌ಸಿಪಿ ಪಕ್ಷವು ಸೋಲನುಭವಿಸಿದ್ದು, ಜಗನ್‌ ಮೋಹನ್‌ ರೆಡ್ಡಿ ಅವರು ಮುಖಭಂಗ ಅನುಭವಿಸಿದ್ದಾರೆ. ಎನ್‌.ಚಂದ್ರಬಾಬು ನಾಯ್ಡು (N Chandra Babu Naidu) ಅವರ ಟಿಡಿಪಿಯು ಆಂಧ್ರದಲ್ಲಿ ಅಧಿಕಾರಕ್ಕೆ ಬಂದಿದೆ. ಇದರ ಬೆನ್ನಲ್ಲೇ, “ಜಗನ್‌ ಮೋಹನ್‌ ರೆಡ್ಡಿ ಅವರು ಮುಖ್ಯಮಂತ್ರಿ ಆಗಿದ್ದಾಗ ಸರ್ಕಾರದ 500 ಕೋಟಿ ರೂ. ವೆಚ್ಚದಲ್ಲಿ ವಿಶಾಖಪಟ್ಟಣಂನಲ್ಲಿ ಅರಮನೆಯಂತಹ ಐಷಾರಾಮಿ ಬಂಗಲೆ ಕಟ್ಟಿಸಿಕೊಂಡಿದ್ದಾರೆ” ಎಂಬುದಾಗಿ ಟಿಡಿಪಿ ಗಂಭೀರ ಆರೋಪ ಮಾಡಿದೆ.

ವಿಶಾಖಪಟ್ಟಣಂನಲ್ಲಿರುವ ಋಷಿಕೊಂಡ ಬೆಟ್ಟದಲ್ಲಿ ನಿರ್ಮಿಸಲಾಗಿರುವ ಟಿಡಿಪಿ ಶಾಸಕ ಗಂಟಾ ಶ್ರೀನಿವಾಸ್‌ ರಾವ್‌ ನೇತೃತ್ವದ ಎನ್‌ಡಿಎ ನಿಯೋಗವು ಭೇಟಿ ನೀಡಿದ್ದು, ಇದಾದ ಬಳಿಕ ಟಿಡಿಪಿಯು ಗಂಭೀರ ಆರೋಪ ಮಾಡಿದೆ. “ಜಗನ್‌ ಮೋಹನ್‌ ರೆಡ್ಡಿ ಅವರು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರದ 500 ಕೋಟಿ ರೂ. ವೆಚ್ಚದಲ್ಲಿ ಐಷಾರಾಮಿ ಬಂಗಲೆಯನ್ನು ಕಟ್ಟಿಸಿಕೊಂಡಿದ್ದಾರೆ. ಇನ್ನೂ 10 ವರ್ಷ ಆಡಳಿತದಲ್ಲಿರುತ್ತೇನೆ ಎಂದು ಭಾವಿಸಿ, ವೈಯಕ್ತಿಕ ಕಾರಣಗಳಿಗಾಗಿ ಇದನ್ನು ಬಳಸುವುದು ಅವರ ಉದ್ದೇಶವಾಗಿತ್ತು” ಎಂದು ಟಿಡಿಪಿ ಆರೋಪಿಸಿದೆ.

ವಿಶಾಖಪಟ್ಟಣಂ ಅಥವಾ ವೈಜಾಗ್‌ಅನ್ನೇ ಇದಕ್ಕೂ ಮೊದಲು ಆಂಧ್ರಪ್ರದೇಶದ ರಾಜಧಾನಿ ಎಂದು ಘೋಷಿಸಲಾಗಿತ್ತು. ವೈ.ಎಸ್.ಜಗನ್‌ ಮೋಹನ್‌ ರೆಡ್ಡಿ ಅವರು ಇದಕ್ಕೂ ಮೊದಲು ಮೂರು ನಗರಗಳನ್ನು ರಾಜಧಾನಿ ಎಂಬುದಾಗಿ ಘೋಷಿಸಲಾಗಿತ್ತು. ವಿಶಾಖಪಟ್ಟಣಂಅನ್ನು ಕೂಡ ರಾಜಧಾನಿ ಎಂಬುದಾಗಿ ಘೋಷಿಸಲಾಗಿತ್ತು. ಹಾಗಾಗಿ, ಇಲ್ಲಿಯೇ ಐಷಾರಾಮಿ ಮನೆಯನ್ನು ಕಟ್ಟಿಸಿದ್ದಾರೆ. ಪತ್ನಿಯ ಆಸೆಯಂತೆಯೇ ಜಗನ್‌ ಮೋಹನ್‌ ರೆಡ್ಡಿ ಅವರು ಐಷಾರಾಮಿ ಬಂಗಲೆ ಕಟ್ಟಿಸಿದ್ದಾರೆ ಎಂದು ಟಿಡಿಪಿ ಆರೋಪಿಸಿದೆ.

ಋಷಿಕೊಂಡ ಹಿಲ್ಸ್‌ ಪ್ರವಾಸಿ ತಾಣವಾಗಿತ್ತು. ಇಲ್ಲಿಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಆದರೆ, 9.88 ಎಕರೆ ಜಾಗದಲ್ಲಿ ಜಗನ್‌ ಮೋಹನ್‌ ರೆಡ್ಡಿ ಅವರು ಬಂಗಲೆ ನಿರ್ಮಿಸಿದ್ದಾರೆ. ಸುಮಾರು 36 ಲಕ್ಷ ರೂ. ವೆಚ್ಚದಲ್ಲಿ ಬಾತ್‌ ಟಬ್‌ ನಿರ್ಮಿಸಿದ್ದಾರೆ. ಇಂತಹ ಹತ್ತಾರು ಐಷಾರಾಮಿ ಕೋಣೆಗಳು, ಸೌಕರ್ಯಗಳು ಬಂಗಲೆಯಲ್ಲಿವೆ. ಇದನ್ನೇ ಪಾರ್ಟಿ ಕಚೇರಿ ಮಾಡುವುದು ಜಗನ್‌ ಮೋಹನ್‌ ರೆಡ್ಡಿ ಅವರ ಉದ್ದೇಶವಾಗಿತ್ತು ಎಂದು ಆರೋಪಿಸಲಾಗಿದೆ. ಆಂಧ್ರ ಪ್ರದೇಶ ವಿಧಾನ ಸಭೆಯ 175 ಸೀಟುಗಳ ಪೈಕಿ ಎನ್‌ಡಿಎ 164 ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಈ ಪೈಕಿ ಟಿಡಿಪಿ 135, ಜನಸೇನಾ ಪಾರ್ಟಿ 21 ಮತ್ತು ಬಿಜೆಪಿ 8 ಕಡೆ ಗೆದ್ದಿದೆ. ವೈಎಸ್‌ಆರ್‌ಸಿಪಿಯು ಕೇವಲ 11 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವುದು ಅವರಿಗೆ ಮುಖಭಂಗ ತಂದಿದೆ.

ಇದನ್ನೂ ಓದಿ: Jagan Reddy : ಚುನಾವಣಾ ರ್ಯಾಲಿಯಲ್ಲಿ ಆಂಧ್ರ ಸಿಎಂ ಜಗನ್​​ ತಲೆಗೆ ಕಲ್ಲೆಸೆತ

Continue Reading

ಬಾಲಿವುಡ್

Sonakshi Sinha: ಮುಸ್ಲಿಂ ಯುವಕನ ಜತೆ ಸೋನಾಕ್ಷಿ ಸಿನ್ಹಾ ವಿವಾಹ; ತಾಯಿ, ಸಹೋದರನೂ ಮದುವೆಗೆ ಹೋಗಲ್ಲ?

Sonakshi Sinha: ಸೋನಾಕ್ಷಿ ಸಿನ್ಹಾ ಅವರು ಮನೆಯವರ ಒಪ್ಪಿಗೆ ಪಡೆಯುವುದು ಬಿಡಿ, ಕನಿಷ್ಠ ಮಾಹಿತಿಯನ್ನೂ ನೀಡದೆ ಮದುವೆ ದಿನಾಂಕ ಫಿಕ್ಸ್‌ ಮಾಡಿರುವುದು ಆಕೆಯ ತಂದೆ ಶತ್ರುಘ್ನ ಸಿನ್ಹಾ ಮಾತ್ರವಲ್ಲ, ತಾಯಿ ಹಾಗೂ ಸಹೋದರನಿಗೂ ಬೇಸರ ತಂದಿದೆ. ಇದರಿಂದಾಗಿ ಶತ್ರುಘ್ನ ಸಿನ್ಹಾ ಮಾತ್ರವಲ್ಲದೆ ತಾಯಿ, ಸಹೋದರನೂ ಸೋನಾಕ್ಷಿ ಮದುವೆಗೆ ಹೋಗುವುದಿಲ್ಲ ಎಂಬ ಮಾತುಗಳು ಕೇಳಿಬಂದಿವೆ.

VISTARANEWS.COM


on

Sonakshi Sinha
Koo

ಮುಂಬೈ: ಬಾಲಿವುಡ್ ನಟಿ (Bollywood Actress) ಸೋನಾಕ್ಷಿ ಸಿನ್ಹಾ (Sonakshi Sinha) ಅವರು ಮುಸ್ಲಿಂ ಯುವಕ ಜಹೀರ್‌ ಇಕ್ಬಾಲ್‌ (Zaheer Iqbal) ಅವರ ಜತೆ ಮದುವೆಯಾಗುತ್ತಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ತಂದಿದೆ. ಆದರೆ, ಮದುವೆ ಬಗ್ಗೆ ಮಾಹಿತಿಯನ್ನೇ ನೀಡದ ಹಿನ್ನೆಲೆಯಲ್ಲಿ ನಟಿಯ ತಂದೆ ಶತ್ರುಘ್ನ ಸಿನ್ಹಾ (Shatrughan Sinha) ಅವರಿಗೆ ಸಿಟ್ಟು ಬಂದಿದೆ. ಅವರು ಮದುವೆಗೆ ಹೋಗುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಇದರ ಬೆನ್ನಲ್ಲೇ, ನಟಿಯ ತಾಯಿ ಪೂನಂ ಸಿನ್ಹಾ ಹಾಗೂ ಸಹೋದರ ಲವ ಸಿನ್ಹಾ ಕೂಡ ಮದುವೆ ಹೋಗುವುದಿಲ್ಲ ಎಂದು ಹೇಳಲಾಗುತ್ತಿದೆ.

ಹೌದು, ಶತ್ರುಘ್ನ ಸಿನ್ಹಾ ಮುನಿಸಿನ ಮಧ್ಯೆಯೇ ಇಂತಹದ್ದೊಂದು ಸುದ್ದಿ ಬಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿದೆ. ಇನ್‌ಸ್ಟಾಗ್ರಾಂನಲ್ಲಿ ಪೂನಂ ಸಿನ್ಹಾ ಹಾಗೂ ಲವ ಸಿನ್ಹಾ ಅವರು ನಟಿಯನ್ನು ಫಾಲೋ ಮಾಡುತ್ತಿಲ್ಲ. ಮನೆಯವರಿಗೆ ಹೇಳದೆ-ಕೇಳದೆ ಮದುವೆ ದಿನಾಂಕವನ್ನು ಫಿಕ್ಸ್‌ ಮಾಡಿ, ಮೂರನೇಯವರಿಂದ ಮಗಳ ಮದುವೆ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಶತ್ರುಘ್ನ ಸಿನ್ಹಾ ಕೋಪ ಮಾಡಿಕೊಂಡಿದ್ದಾರೆ. ಸೋನಾಕ್ಷಿ ಸಿನ್ಹಾ ಅವರ ವರ್ತನೆಯು ಪೂನಂ ಸಿನ್ಹಾ ಹಾಗೂ ಸಹೋದರ ಲವ ಸಿನ್ಹಾ ಅವರಿಗೂ ಹಿಡಿಸಿಲ್ಲ. ಇದರಿಂದಾಗಿ ಇಬ್ಬರೂ ಸೋನಾಕ್ಷಿ ಸಿನ್ಹಾ ಅವರು ಇನ್‌ಸ್ಟಾಗ್ರಾಂನಲ್ಲಿ ಅನ್‌ಫಾಲೋ ಮಾಡಿದ್ದಾರೆ. ಹಾಗೆಯೇ, ಇವರು ಸೋನಾಕ್ಷಿ ಸಿನ್ಹಾ ಮದುವೆಗೂ ಹೋಗುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಮದುವೆ ಬಗ್ಗೆ ಶತ್ರುಘ್ನ ಸಿನ್ಹಾ ಹೇಳಿದ್ದೇನು?

ಸೋನಾಕ್ಷಿ ವಿವಾಹದ ಕುರಿತು ಮಾತನಾಡಿದ್ದ ಶತ್ರುಘ್ನ ಅವರು, ನನಗೆ ಸೋನಾಕ್ಷಿ ಮದುವೆ ಬಗ್ಗೆ ಯಾಕೆ ತಿಳಿದಿಲ್ಲ ಎಂದು ನನ್ನ ಹತ್ತಿರದ ಜನರು ನನ್ನನ್ನು ಕೇಳುತ್ತಿದ್ದಾರೆ. ನಾನು ಹೇಳುವುದು ಇಷ್ಟೇ, ಅವರು ಇವತ್ತಿನ ಮಕ್ಕಳು ತಂದೆ ತಾಯಿಯ ಅನುಮತಿ ಕೇಳುವುದಿಲ್ಲ. ಕೇವಲ ಮಾಹಿತಿ ನೀಡುತ್ತಾರೆ. ನಾವು ಆ ಮಾಹಿತಿಗಾಗಿ ಕಾಯುತ್ತಿದ್ದೇವೆ ಎಂದಿದ್ದರು. ಅವರ ಈ ಹೇಳಿಕೆ ಬಳಿಕ ಮದುವೆಯ ವದಂತಿಗಳನ್ನು ಅವರು ದೃಢೀಕರಿಸದೇ ಇದ್ದರೂ, ಸೋನಾಕ್ಷಿಗೆ ತಮ್ಮ ಜೀವನದ ಮಹತ್ವದ ದಿನಕ್ಕಾಗಿ ಎಲ್ಲಾ ಆಶೀರ್ವಾದಗಳನ್ನು ನೀಡುತ್ತಿದ್ದೇನೆ ಎಂದು ಹೇಳಿದ್ದರು.

ನನ್ನ ಮಗಳು ಮದುವೆಯಾದರೆ ನಾನು ಅವಳಿಗೆ ನನ್ನ ಆಶೀರ್ವಾದವನ್ನು ನೀಡುತ್ತೇನೆ. ಅವಳ ನಿರ್ಧಾರ ಮತ್ತು ಆಯ್ಕೆಯನ್ನು ಬೆಂಬಲಿಸುತ್ತೇನೆ. ಸೋನಾಕ್ಷಿಗೆ ತನ್ನ ಒಡನಾಡಿಯನ್ನು ಆಯ್ಕೆ ಮಾಡುವ ಹಕ್ಕಿದೆ ಮತ್ತು ಅವಳ ಮದುವೆಯ ದಿನದಂದು ನಾನು ಅತ್ಯಂತ ಸಂತೋಷದ ತಂದೆಯಾಗುತ್ತೇನೆ. ನಾನು ಯಾವಾಗಲೂ ಅವಳಿಗೆ ಶುಭ ಹಾರೈಸುತ್ತೇನೆ ಎಂದು ಶತ್ರುಘ್ನ ಹೇಳಿದರು. ಮುಂಬೈನಲ್ಲಿ ಆತ್ಮೀಯರ ಸಮ್ಮುಖದಲ್ಲಿ ಜೂನ್ 23ರಂದು ಸೋನಾಕ್ಷಿ ಮತ್ತು ಜಹೀರ್ ವಿವಾಹವಾಗಲಿದ್ದಾರೆ.

ಕಳೆದ ವಾರವಷ್ಟೇ ಸೋನಾಕ್ಷಿ ಅವರು ತಮ್ಮ ಬಹುಕಾಲದ ಗೆಳೆಯ ಜಹೀರ್ ಇಕ್ಬಾಲ್ ಅವರನ್ನು ವರಿಸುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದ್ದು, ಬಳಿಕ ಇದನ್ನು ಮದುವೆಯ ಆಮಂತ್ರಣವು ದೃಢಪಡಿಸಿತು. ಸೋನಾಕ್ಷಿ ಏಳು ವರ್ಷಗಳಿಂದ ಜಹೀರ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ. ಮದುವೆಯ ವದಂತಿಗಳಿಗೆ ಮೊದಲ ಪ್ರತಿಕ್ರಿಯೆ ನೀಡಿದ ಶತ್ರುಘ್ನ ಅವರು ಮದುವೆಯ ಬಗ್ಗೆ ತಿಳಿದಿರಲಿಲ್ಲ ಎಂದು ಒಪ್ಪಿಕೊಂಡರು. ಮಾತ್ರವಲ್ಲದೇ ಅವರು ಇದರಿಂದ ಅಸಮಾಧಾನಗೊಂಡಿರುವುದು ಅವರ ಹೇಳಿಕೆಯಿಂದ ತಿಳಿದು ಬಂದಿತ್ತು.

ಇದನ್ನೂ ಓದಿ: Sonakshi Sinha: ಮುಸ್ಲಿಂ ಹುಡುಗನ ಜತೆ ಮಗಳು ಸೋನಾಕ್ಷಿ ಮದುವೆ; ಶತ್ರುಘ್ನ ಸಿನ್ಹಾ ಮುನಿಸು?

Continue Reading

ದೇಶ

IPS Officer: ಕ್ಯಾನ್ಸರ್‌ನಿಂದ ಪತ್ನಿ ಸಾವಿನ ಸುದ್ದಿ ತಿಳಿದ ಕೆಲವೇ ನಿಮಿಷದಲ್ಲಿ ಐಪಿಎಸ್‌ ಅಧಿಕಾರಿ ಆತ್ಮಹತ್ಯೆ!

IPS Officer: ಹಿರಿಯ ಐಪಿಎಸ್‌ ಅಧಿಕಾರಿಯಾಗಿದ್ದ, ಅಸ್ಸಾಂ ಸರ್ಕಾರದ ಗೃಹ ಮತ್ತು ರಾಜಕೀಯ ಇಲಾಖೆಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶೀಲಾದಿತ್ಯ ಚೇಟಿಯಾ ಅವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪತ್ನಿಯು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಈ ಸುದ್ದಿಯನ್ನು ಅರಗಿಸಿಕೊಳ್ಳಲಾಗದೆ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

VISTARANEWS.COM


on

IPS Officer
Koo

ದಿಸ್ಪುರ: ಮನುಷ್ಯ ಎಷ್ಟೇ ದೊಡ್ಡ ಹುದ್ದೆಯಲ್ಲಿರಲಿ, ಎಷ್ಟೇ ಖಡಕ್‌ ಆಗಿರಲಿ, ಧೈರ್ಯವಂತನಾಗಿರಲಿ, ತನ್ನವರನ್ನು ಕಳೆದುಕೊಂಡಾಗ, ತಾನು ಪ್ರೀತಿಸುತ್ತಿದ್ದವರು ಕಣ್ಣೆದುರೇ ನಿಧನರಾದಾಗ ಅಧೀರನಾಗುತ್ತಾನೆ. ಇನ್ನೇಕೆ ಬದುಕಬೇಕು ಎಂದು ಹತಾಶನಾಗುತ್ತಾನೆ. ಇದೇ ಆತನನ್ನು ಆತ್ಮಹತ್ಯೆಗೆ ದಾರಿಮಾಡಿಕೊಡುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ಅಸ್ಸಾಂನಲ್ಲಿ (Assam) ಐಪಿಎಸ್‌ ಅಧಿಕಾರಿಯೊಬ್ಬರು (IPS Officer) ಪತ್ನಿ ಕ್ಯಾನ್ಸರ್‌ನಿಂದ ನಿಧನರಾದ ಕೆಲವೇ ನಿಮಿಷಗಳಲ್ಲಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ.

ಹಿರಿಯ ಐಪಿಎಸ್‌ ಅಧಿಕಾರಿಯಾಗಿದ್ದ, ಅಸ್ಸಾಂ ಸರ್ಕಾರದ ಗೃಹ ಮತ್ತು ರಾಜಕೀಯ ಇಲಾಖೆಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶೀಲಾದಿತ್ಯ ಚೇಟಿಯಾ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಪತ್ನಿ ಅಗೋಮೊನಿ ಬರ್ಬರುವಾ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅವರು ಗುವಾಹಟಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ (ಜೂನ್‌ 18) ಆಸ್ಪತ್ರೆಯಲ್ಲಿಯೇ ನಿಧನರಾದರು. ಶೀಲಾದಿತ್ಯ ಚೇಟಿಯಾ ಅವರು ಆಸ್ಪತ್ರೆಗೆ ತೆರಳುವ ಮೊದಲೇ ಅವರ ಪತ್ನಿ ನಿಧನರಾಗಿದ್ದರು ಎಂದು ತಿಳಿದುಬಂದಿದೆ.

ಅಗೋಮೊನಿ ಬರ್ಬರುವಾ ಅವರು ಅಗಲಿದ್ದಾರೆ ಎಂಬ ಸುದ್ದಿಯು ಶೀಲಾದಿತ್ಯ ಚೇಟಿಯಾ ಅವರಿಗೆ ಬರಸಿಡಿಲು ಬಡಿದಂತೆ ಭಾಸವಾಗಿದೆ. ಇದಾದ ಕೆಲವೇ ನಿಮಿಷಗಳಲ್ಲಿ ಅವರು ತಮ್ಮ ಸೇವಾ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಡಿಐಜಿ ರ‍್ಯಾಂಕ್‌ ಆಫೀಸರ್‌ ಆಗಿದ್ದ ಶೀಲಾದಿತ್ಯ ಚೇಟಿಯಾ ಅವರು ಪತ್ನಿಯ ಅನಾರೋಗ್ಯದಿಂದಾಗಿ ಕಳೆದ ನಾಲ್ಕು ತಿಂಗಳಿಂದ ಸುದೀರ್ಘ ರಜೆಯಲ್ಲಿದ್ದರು ಎಂದು ತಿಳಿದುಬಂದಿದೆ.

‌”2009ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿ ಶೀಲಾದಿತ್ಯ ಚೇಟಿಯಾ ಅವರು ನಿಧನರಾಗಿರುವುದು ದುರದೃಷ್ಟಕರ ಸಂಗತಿಯಾಗಿದೆ. ಶೀಲಾದಿತ್ಯ ಚೇಟಿಯಾ ಪತ್ನಿ ನಿಧನರಾದ ಕೆಲವೇ ನಿಮಿಷಗಳಲ್ಲಿ ಅಧಿಕಾರಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಅಸ್ಸಾಂ ಪೊಲೀಸ್‌ ಇಲಾಖೆಗೆ ಶಾಕಿಂಗ್‌ ವಿಚಾರವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂಬುದಾಗಿ ಪ್ರಾರ್ಥಿಸುತ್ತೇವೆ” ಎಂದು ಅಸ್ಸಾಂ ಪೊಲೀಸ್‌ ಮಹಾನಿರ್ದೇಶಕ ಜಿ.ಪಿ. ಸಿಂಗ್ ಅವರು ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: Self Harming: ತಿಂಗಳ ಹಿಂದಷ್ಟೇ ಮದುವೆ ಆಗಿದ್ದ ಇನ್ಫೋಸಿಸ್‌ ಉದ್ಯೋಗಿ ಆತ್ಮಹತ್ಯೆ; ರೈಲಿಗೆ ತಲೆಕೊಟ್ಟ ಫ್ಲಿಪ್‌ಕಾರ್ಟ್‌ ಉದ್ಯೋಗಿ

Continue Reading
Advertisement
Bomb threat
ದೇಶ2 hours ago

Bomb Threat: ಮುಂಬೈನ 50ಕ್ಕೂ ಅಧಿಕ ಆಸ್ಪತ್ರೆಗಳಿಗೆ ಬಾಂಬ್‌ ದಾಳಿ ಬೆದರಿಕೆ; ಎಲ್ಲೆಡೆ ಕಟ್ಟೆಚ್ಚರ

Drowned in Water boy who went swimming drowned and died
ಬೀದರ್‌2 hours ago

Drowned in Water: ಡ್ಯಾಮ್ ನೀರಿನಲ್ಲಿ ಈಜಲು ಹೋದ ಬಾಲಕ ಮುಳುಗಿ ಸಾವು!

Jagan Mohan Reddy
ದೇಶ2 hours ago

Jagan Mohan Reddy: ಸರ್ಕಾರದ 500 ಕೋಟಿ ರೂ.ನಲ್ಲಿ ಜಗನ್‌ ಅರಮನೆ ನಿರ್ಮಾಣ? ಟಿಡಿಪಿ ಸ್ಫೋಟಕ ಆರೋಪ

PM Surya Ghar Yojana Comprehensive Review Meeting by Union Minister Pralhad Joshi
ಕರ್ನಾಟಕ2 hours ago

Pralhad Joshi: ಇಂಧನ ಕ್ಷೇತ್ರದಲ್ಲಿ ಆತ್ಮನಿರ್ಭರದ ಪ್ರತೀಕ ಸೂರ್ಯ ಘರ್: ಜೋಶಿ

Sonakshi Sinha
ಬಾಲಿವುಡ್3 hours ago

Sonakshi Sinha: ಮುಸ್ಲಿಂ ಯುವಕನ ಜತೆ ಸೋನಾಕ್ಷಿ ಸಿನ್ಹಾ ವಿವಾಹ; ತಾಯಿ, ಸಹೋದರನೂ ಮದುವೆಗೆ ಹೋಗಲ್ಲ?

Construction of International Cricket Stadium at Shira MLA T B Jayachandra KSCA team inspection
ಕರ್ನಾಟಕ4 hours ago

Shira News: ಶಿರಾದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ; ಶಾಸಕ ಜಯಚಂದ್ರ ಪರಿಶೀಲನೆ

Malayali actress Honey Rose starring Rachel movie Teaser release
ಕರ್ನಾಟಕ4 hours ago

Rachel Movie: ಮಲಯಾಳಿ ನಟಿ ಹನಿ ರೋಸ್ ನಾಯಕಿಯಾಗಿ ನಟಿಸಿರುವ ‘ರೆಚೆಲ್’ ಚಿತ್ರದ ಟೀಸರ್ ರಿಲೀಸ್‌

IPS Officer
ದೇಶ4 hours ago

IPS Officer: ಕ್ಯಾನ್ಸರ್‌ನಿಂದ ಪತ್ನಿ ಸಾವಿನ ಸುದ್ದಿ ತಿಳಿದ ಕೆಲವೇ ನಿಮಿಷದಲ್ಲಿ ಐಪಿಎಸ್‌ ಅಧಿಕಾರಿ ಆತ್ಮಹತ್ಯೆ!

Sambhavami Yuge Yuge movie release on June 21
ಕರ್ನಾಟಕ4 hours ago

Kannada New Movie: ಜೂ.21ಕ್ಕೆ ‘ಸಂಭವಾಮಿ ಯುಗೇ ಯುಗೇ’ ಚಿತ್ರ ರಿಲೀಸ್‌

Kodi Mutt Swamiji
ಪ್ರಮುಖ ಸುದ್ದಿ4 hours ago

Kodi Mutt Swamiji: ದೇಶದಲ್ಲಿ ಶುಭಕ್ಕಿಂತ ಅಶುಭಗಳೇ ಹೆಚ್ಚು, ರಾಜ್ಯದಲ್ಲಿ ಅತಿವೃಷ್ಟಿ: ಕೋಡಿಮಠ ಶ್ರೀ ಭವಿಷ್ಯ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಮೈಸೂರು2 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು2 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ2 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ2 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ3 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ3 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ4 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು4 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು4 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ4 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

ಟ್ರೆಂಡಿಂಗ್‌