ಕನ್ನಡದ ಹುಡುಗರಿಗೆ ಬೇಕು ಕನ್ನಡದ ಡೇಟಿಂಗ್‌ ಆ್ಯಪ್‌! - Vistara News

ಲೈಫ್‌ಸ್ಟೈಲ್

ಕನ್ನಡದ ಹುಡುಗರಿಗೆ ಬೇಕು ಕನ್ನಡದ ಡೇಟಿಂಗ್‌ ಆ್ಯಪ್‌!

ಜನರೇಷನ್‌ z ಹಾಗೂ ಜನರೇಷನ್‌ ಆಲ್ಫಾ ಹುಡುಗ ಹುಡುಗೀರಿಗೆ ತಮ್ಮ ಪ್ರೀತಿಯನ್ನು ಕಂಡುಕೊಳ್ಳೋಕೆ ಕನ್ನಡದಲ್ಲೇ ಡೇಟಿಂಗ್‌ ಆಪ್ಸ್ ಬೇಕು ಅನ್ನೋದು ಬಡಪಾಯಿ ಕನ್ನಡ ಹುಡುಗರ ಆಗ್ರಹ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಂಗ್ಲಿಷ್‌ ಚೆನ್ನಾಗಿ ಬಲ್ಲ ಈ ತಲೆಮಾರಿನ ಹದಿ ಹರೆಯದವರು ಡೇಟಿಂಗ್‌ ಆ್ಯಪ್‌ಗಳ ಮೂಲಕ ತಮ್ಮ ಸಂಗಾತಿಗಳನ್ನು ಕಂಡುಕೊಳ್ಳುತ್ತಾರೆ. ಸದ್ಯ tinder ಎಂಬ ಡೇಟಿಂಗ್‌ ಆ್ಯಪ್‌ ತುಂಬಾ ಪ್ರಚಲಿತದಲ್ಲಿದೆ. ಇದನ್ನು ಬಳಸುವವರ ಸಂಖ್ಯೆ ಎಷ್ಟೆಂದು ಊಹಿಸುವುದೂ ಕಷ್ಟ. ಆದರೆ ಈ ರೀತಿಯ ಆ್ಯಪ್‌ಗಳು ಬಹುತೇಕ ವಿದೇಶ ಮೂಲದ್ದು. ಈ ಮಾದರಿಯ ಆ್ಯಪ್‌ ಒಂದು ನಮ್ಮ ನಾಡಿನದ್ದೇ ಆಗಿದ್ದರೆ ಹೇಗಿರುತ್ತದೆ? ಕನ್ನಡದಲ್ಲಿ, ಕನ್ನಡಿಗರಿಗಾಗಿ ಹೀಗೊಂದು ಡೇಟಿಂಗ್‌ ಆ್ಯಪ್‌ ಇದ್ದರೆ ಹೇಗೆ ಅಲ್ವಾ?

ಈವರೆಗೆ ಅತಿ ಹೆಚ್ಚು ಬಳಕೆಯಾಗಿರುವ ಟಿಂಡರ್‌ ಕೂಡ ಹಲವರಿಗೆ ಬೋರ್‌ ಎನ್ನಿಸಿದ್ದು ನಿಜ. ಆದ್ದರಿಂದ, ಮತ್ತೊಂದಿಷ್ಟು ಹೊಸ ಆ್ಯಪ್‌ಗಳನ್ನು ಈ ಜನರೇಷನ್ ಶೋಧಿಸಿತು. ಆಗ ಬಂಬಲ್‌, ಹ್ಯಾಪ್ನ್‌, ಓಕೆ ಕ್ಯೂಪಿಡ್‌ನಂಥ ಹೊಸ ಆಪ್‌ಗಳು ಹುಟ್ಟಿವೆ. ಎಲ್ಲವೂ ವಿದೇಶದ ಆ್ಯಪ್‌ಗಳು. ಇವೆಲ್ಲದರ ನಡುವೆ ಭಾರತದಲ್ಲೂ ಟ್ರೂಲಿಮ್ಯಾಡ್ಲಿ ಎಂಬ ಡೇಟಿಂಗ್‌ ಆ್ಯಪ್‌ ಆವಿಷ್ಕರಿಸಲಾಯಿತು. ಆದರೆ ಕನ್ನಡದಲ್ಲಿ ಈ ರೀತಿಯ ಪ್ರಯತ್ನ ಕಂಡುಬಂದಿಲ್ಲ. ಟಿಂಡರ್‌, ಬಂಬಲ್‌ನಂತಹ ಆ್ಯಪ್‌ಗಳ ಬಳಕೆ ಸಾಮಾನ್ಯ ಕನ್ನಡಿಗರಿಗೆ ಕಷ್ಟ. ಹಾಗಾಗಿ ಕನ್ನಡದಲ್ಲೊಂದು ಡೇಟಿಂಗ್‌ ಆ್ಯಪ್‌ ಇದ್ದರೆ ಅನುಕೂಲವಾಗಬಹುದು.

ಈ ಆ್ಯಪ್‌ಗಳ ಬಳಕೆ ಹೇಗೆ?
ಒಂದೊಂದು ಆ್ಯಪ್‌ನಲ್ಲಿ ಒಂದೊಂದು ವಿಶೇಷ ಫೀಚರ್‌ಗಳನ್ನು ನೀಡಲಾಗಿದೆ. ಕೆಲವು ಆ್ಯಪ್‌ಗಳಲ್ಲಿ ಕೇವಲ ಡೇಟಿಂಗ್‌ಗೆ ಸೀಮಿತಗೊಳಿಸಿಲ್ಲ. ಡೇಟಿಂಗ್‌ ಜೊತೆ ವೃತ್ತಿಗೆ ಸಂಬಂಧಿಸಿದ ಕಾರ್ಯಗಳಿಗೂ ವ್ಯಾಪಿಸಿದೆ. ಟಿಂಡರ್‌ ಆ್ಯಪ್‌ ಅತಿ ಹೆಚ್ಚು ಜನಪ್ರೀಯತೆ ಪಡೆದುಕೊಂಡಿದೆ. ಇದು ಸಂಪೂರ್ಣ ಡೇಟಿಂಗ್‌ ಆ್ಯಪ್‌. ಇದರಲ್ಲಿ ಇಷ್ಟಪಟ್ಟವರನ್ನು ಬಲಕ್ಕೆ ಸ್ವೈಪ್‌ ಮಾಡಬಹುದು ಅಥವಾ ಇಷ್ಟವಿಲ್ಲದವರನ್ನು ಮುಕ್ತವಾಗಿ ಎಡಕ್ಕೆ ಸ್ವೈಪ್‌ ಮಾಡಬಹುದು. ಟಿಂಡರ್‌ಗೆ ನಿಮ್ಮ ಫೇಸ್ಬುಕ್‌ ಅಥವಾ ಜಿಮೇಲ್‌ ಐಡಿ ಮೂಲಕ ಪ್ರವೇಶಿಸಬಹುದು. ನಿಮ್ಮ ಇಷ್ಟಗಳು, ಹವ್ಯಾಸಗಳು, ವೃತ್ತಿಯ ಬಗ್ಗೆ ಮಾಹಿತಿಯನ್ನೂ ನೀಡಬೇಕು. ಆದರೆ, ಎಲ್ಲದಕ್ಕಿಂತ ಮುಖ್ಯವಾಗಿ ನೀವು ನಿಮ್ಮ ಬಗ್ಗೆ ಕೆಲವೇ ಪದಗಳಲ್ಲಿ ಹೆಳಬೇಕು. ಅದನ್ನು ಎಷ್ಟು ಸುಂದರವಾಗಿ ವಿವರಿಸುತ್ತೀರಿ ಎನ್ನುವುದು ತುಂಬಾ ಮುಖ್ಯ. ಆ ಆಧಾರದ ಮೇಲೆ ಜನ ನಿಮ್ಮನ್ನು ʼಇಂಟರೆಸ್ಟಿಂಗ್‌ ಪರ್ಸ್ನಾಲಿಟಿʼ ಎಂದು ಇಷ್ಟಪಡುತ್ತಾರೆ. ಇಲ್ಲದಿದ್ದರೆ ನೀವು ತುಂಬಾ ಬೋರಿಂಗ್‌ ಎಂದು ಟ್ಯಾಗ್‌ ಮಾಡುತ್ತಾರೆ. ನಂತರ ರಿಜೆಕ್ಟ್‌ ಮಾಡುತ್ತಾರೆ. ಆ್ಯಪ್‌ ಖರೀದಿ ಮಾಡಿದರೆ, ಅನೇಕ ಫೀಚರ್‌ಗಳು ಲಭ್ಯವಾಗುತ್ತದೆ. ಎಷ್ಟು ಜನ ನಿಮ್ಮ ಪ್ರೊಫೈಲ್‌ನ್ನು ನೋಡಿದರು, ಯಾರಿಗೆ ನೀವು ಇಷ್ಟವಾಗಿದ್ದೀರಿ ಎಂದು ತಿಳಿಯಬಹುದು.


ನಿಮ್ಮ ಸುತ್ತಮುತ್ತಲಿನ ಜಾಗದಲ್ಲಿ ಯಾರಾದರೂ ನಿಮಗೆ ಮ್ಯಾಚ್‌ ಆಗುವಂಥವರು ಇದ್ದಾರ? ಎಂದು ಕೂಡ ತಿಳಿಯಬಹುದು. ಹಾಗೆ ಯಾರಾದರೂ ನಿಮ್ಮನ್ನು ಇಷ್ಟಪಟ್ಟರೆ ನೀವು ಅವರೊಂದಿಗೆ ವೈಯ್ಯಕ್ತಿಕ ಮೆಸೇಜ್‌ ಮಾಡನಹುದು. ಚಾಟ್‌ ಮಾಡಿ ಮಾತನಾಡಬಹುದು. ಇಬ್ಬರೂ ಪರಸ್ಪರ ಭೇಟಿಯಾಗಬಹುದು. ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಬಹುದು. ಆಸಕ್ತಿ ಇದ್ದರೆ, ಹೊಂದಾಣಿಕೆಯಾದರೆ ರಿಲೇಷನ್‌ಶಿಪ್‌ ಮುಂದುವರೆಸಬಹುದು. ಇಲ್ಲದಿದ್ದರೆ ಜೀವನದಲ್ಲಿ ಎಡಕ್ಕೆ ಸ್ವೈಪ್‌ ಮಾಡಿ ತಿರಸ್ಕರಿಸಬಹುದು. ಇದೊಂದು ಮಾಯಾಲೋಕ. ಇಷ್ಟೊಂದು ಸ್ವಾತಂತ್ರ್ಯ ಇರುವ ಕಾರಣದಿಂದಲೇ ಡೇಟಿಂಗ್‌ ಆ್ಯಪ್‌ಗಳು ಹೆಚ್ಚು ಪ್ರಚಲಿತದಲ್ಲಿವೆ.


ಹೀಗೆ ಅಪರಿಚತರೊಂದಿಗೆ ಸಂಬಂಧ ಬೆಸೆಯುವ ಕೆಲಸ ಈ ಮಾದರಿಯ ಆ್ಯಪ್‌ಗಳು ಮಾಡುತ್ತಿವೆ. ಎಷ್ಟೋ ಸಂಬಂಧಗಳು ಡೇಟಿಂಗ್‌ ಆ್ಯಪ್‌ ಮೂಲಕ ಶುರುವಾಗಿವೆ. ಈ ಸಂಬಂಧಗಳು ಒಟ್ಟಿಗೆ ಜೀವನ ಮಾಡುತ್ತಿರುವ, ಗಟ್ಟಿಯಾಗಿ ಉಳಿದಿರುವ ಎಷ್ಟೋ ಉದಾಹರಣೆಗಳಿವೆ.

ಕನ್ನಡದ್ದೇ ಬೇಕೆನ್ನಲು ಕಾರಣಗಳು:

  1. ವಿದೇಶಿಗರು ಪ್ರೀತಿಸುವ ರೀತಿ ಬೇರೆ. ಭಾರತೀಯರು ಪ್ರೀತಿಯನ್ನು ನೋಡುವ ದೃಷ್ಟಿ ವಿಭಿನ್ನವಾಗಿದೆ. ಅಮೆರಿಕ ಹಾಗೂ ಯುರೋಪ್‌ನ ಪ್ರೀತಿಯ ಅಭಿವ್ಯಕ್ತಿ ನಮ್ಮದಲ್ಲ. ಕನ್ನಡದ ಜಾಯಮಾನ ಬೇರೆ.
  2. ಕನ್ನಡಿಗರು ಕನ್ನಡದಲ್ಲಿ ಪ್ರೀತಿಯನ್ನು ವ್ಯಕ್ತಪಡಿಸಲು ಬಯಸಬಹುದು. ಅದಕ್ಕೆ ಕನ್ನಡದ್ದೇ ಫೀಚರ್‌ಗಳನ್ನು ಬಳಸಲು ಇಷ್ಟಪಡಬಹುದು.
  3. ಗ್ರಾಮೀಣ ಪ್ರದೇಶದವರು ಇಂಗ್ಲಿಷ್‌ ಎಂದರೆ ಮಾರು ದೂರ ಹಾರುತ್ತಾರೆ. ಇಂಥವರಿಗೆ ಕನ್ನಡ ನೆರವಾಗುತ್ತದೆ.
  4. ಕನ್ನಡದ ಸಿನಿಮಾ, ತಿಂಡಿಗಳು ಸೇರಿದಂತೆ ಸ್ವಂತ ಭಾಷೆಯ ಇಮೇಜ್‌ಗಳು ಸೃಷ್ಟಿಸುವ ಮಧುರ ಭಾವವೇ ಬೇರೆ.
  5. ಈಗಾಗಲೇ ಫೇಸ್ಬುಕ್‌ನಂತಹ ಆಪ್‌ಗಳು ಕನ್ನಡ ಭಾಷೆಯಲ್ಲಿ ಕೂಡ ಬಳಸುವ ಸೌಲಭ್ಯ ನೀಡಿದೆ. ಹಲವು ಶಾಪಿಂಗ್‌ ಆಪ್‌ಗಳು ಕೂಡ ಕನ್ನಡದಲ್ಲಿ ಬಳಸುವ ಅವಕಾಶ ಕಲ್ಪಿಸಿದೆ. ಆದರೆ ಕನ್ನಡದಲ್ಲಿ ಸುಲಭವಾಗಿ ಬಳುಸುವಂಥ ಡೇಟಿಂಗ್‌ ಆಪ್‌ ಇನ್ನೂ ಮೂಡಿಬಂದಿಲ್ಲ.

ಕನ್ನಡದಲ್ಲಿ ಹೀಗೊಂದು ಆ್ಯಪ್‌ ಬಂದರೆ ಹೇಗಿರಬಹುದು?

  1. ಕನ್ನಡದ ಡೇಟಿಂಗ್‌ ಆಪ್ ಕನ್ನಡಿಗರೇ ತುಂಬಿರುವ ಮನೆಯ ಹಾಗಿರಬಹುದು. ಅಲ್ಲಿ ಪರಸ್ಪರ ಸಂವಹನ ಮಾಡುವ ಭಾಷೆ ಕನ್ನಡವಾಗಿರುತ್ತದೆ. ನೀವು ಮೆಸೇಜ್‌ ಮಾಡುವವರು ಇಂಗ್ಲಿಂಷ್‌ನಲ್ಲಿ ಉತ್ತರ ನೀಡಿದರೆ ಅದಕ್ಕೆ ಪ್ರತಿಕ್ರಿಯೆ ಹೇಗೆ ನೀಡಬೇಕೆಂಬ ಭಯವಿರುವುದಿಲ್ಲ. ಯಾವುದೇ ಮಾತುಕತೆಯ ಆರಂಭಕ್ಕೆ ಭಾಷೆ ತುಂಬಾ ಮುಖ್ಯವಾಗುತ್ತದೆ. ಹಾಗಾಗಿ, ಪರಿಚಿತ ಭಾಷೆಯನ್ನು ಇಂತಹ ಆ್ಯಪ್‌ಗಳಲ್ಲಿ ಬಳಸಿದಾಗ ಮೆಸೇಜ್‌ಗಳ ಆಪ್ತತೆ ಹೆಚ್ಚುತ್ತದೆ.
  2. ನೀವು ಉಳಿದ ಡೇಟಿಂಗ್‌ ಆ್ಯಪ್‌ ಬಳಸುವಾಗ ಏನಾದರೂ ತೊಡಕು ಉಂಟಾಗಬಹುದು. ಆಗೆಲ್ಲ ಯಾರನ್ನಾದರೂ ಸಹಾಯ ಕೇಳಿಕೊಂಡು ಹೋಗಬೇಕಾಗುತ್ತದೆ. ಆಗ, ಅವರು ನಿಮ್ಮ ಮೆಸೇಜ್‌ಗಳನ್ನು ಓದಿದರೆ ಎಂಬ ಚಿಂತೆ ಮೂಡುತ್ತದೆ. ಅಥವಾ ಯಾರಾದರೂ ನಿಮ್ಮನ್ನು ರಿಜೆಕ್ಟ್‌ ಮಾಡಿದ್ದು ನೋಡಿದರೆ ಅವಮಾನವಾಗುವ ಭಯವಿರುತ್ತದೆ. ಆದರೆ, ನಿಮ್ಮದೇ ಭಾಷೆಯವರಿರುವ ಆ್ಯಪ್‌ ಇದ್ದಾಗ ಆ ಸಮಸ್ಯೆ ದೂರವಾಗುತ್ತದೆ. ನೀವು ಯಾರನ್ನೂ ಸಹಾಯ ಕೇಳಿಕೊಂಡು ಹೋಗಬೇಕಾಗಿಲ್ಲ.
  3. ಎದುರಿರುವವರು ಯಾರೋ, ಏನೋ? ಎಂಬ ಭಯ ಕಡಿಮೆಯಾಗುತ್ತದೆ. ಕೊನೇಪಕ್ಷ ಕನ್ನಡದವರು ಎಂಬ ಧೈರ್ಯದ ಭಾವನೆ ಇರುತ್ತದೆ. ಇದನ್ನು ಬಳಸುವುದು ಸುಲಭ. ಹಾಗಾಗಿ ಸಾಂಗತ್ಯದ ಹಂಬಲದಲ್ಲಿರುವ ಹಿರಿಯರು ಕೂಡ ಯಾವುದೇ ತೊಡಕುಗಳಿಲ್ಲದೇ ಬಳಸಬಹುದು.
  4. ಇದರ ವ್ಯಾಪ್ತಿ ಕನ್ನಡಿಗರಿಗೆ ಸೀಮಿತಗೊಳ್ಳುವುದರಿಂದ ಹೆಚ್ಚಿನ ಆಪ್ಷನ್‌ಗಳು ಇಲ್ಲದಿರಬಹುದು. ಹಾಗಾಗಿ ಗೆಳೆಯ-ಗೆಳತಿಯರನ್ನು ಹುಡುಕುತ್ತಾ ಅಣ್ಣ-ಅಕ್ಕಂದಿರು ಸಿಕ್ಕಬಹುದು! ಈ ಬಗ್ಗೆ ಸ್ವಲ್ಪ ಎಚ್ಚರ ವಹಿಸಬೇಕಾಗಬಹುದು.

ಹೆಚ್ಚಿನ ಓದಿಗಾಗಿ: ಇದು ಮನುಷ್ಯರನ್ನು ಓದೋ ‌ಹ್ಯೂಮನ್‌ ಲೈಬ್ರರಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

World No Tobacco Day: ಇಂದು ವಿಶ್ವ ತಂಬಾಕು ರಹಿತ ದಿನ; ತಂಬಾಕು ಸೇವನೆಯಿಂದ ವರ್ಷಕ್ಕೆ 60 ಲಕ್ಷ ಜನರ ಸಾವು!

ಈಗಾಗಲೇ ವರ್ಷಕ್ಕೆ 60 ಲಕ್ಷ ಜನ ತಂಬಾಕಿನ ಬಳಕೆಯಿಂದ ವಾರ್ಷಿಕವಾಗಿ ಮೃತಪಡುತ್ತಿದ್ದಾರೆ. 2030ರ ವೇಳೆಗೆ ಈ ಸಂಖ್ಯೆ 80 ಲಕ್ಷ ದಾಟುವ ಅಂದಾಜಿದೆ. ಸಂಖ್ಯೆಗಳನ್ನು ಕಾಣುವ ಈ ಹೆಚ್ಚಳವನ್ನೂ ಪ್ರಗತಿಯ ಸಾಲಿಗೆ ಸೇರಿಸಬಹುದೇ? ಇದು ಕೇವಲ ನೇರವಾಗಿ ಬಳಸುವವರ ಸಂಖ್ಯೆ. ಪರೋಕ್ಷವಾಗಿ ಇದರ ಪರಿಣಾಮಗಳಿಂದ ಮೃತಪಡುವವರ ಸಂಖ್ಯೆಯನ್ನೂ ಸೇರಿಸಿದರೆ, ತಂಬಾಕಿನ ಘೋರ ಪರಿಣಾಮದ ಅಂದಾಜಾದೀತು ನಮಗೆ. ಈ ಹಿನ್ನೆಲೆಯಲ್ಲಿ, ತಂಬಾಕು ರಹಿತವಾದ ವಿಶ್ವದ ಅಗತ್ಯವನ್ನು ಜಗತ್ತಿನ ಮನಗಾಣಿಸುವ ಉದ್ದೇಶದಿಂದ ಮೇ ತಿಂಗಳ ಕಡೆಯ ದಿನವನ್ನು ವಿಶ್ವ ತಂಬಾಕು ರಹಿತ ದಿನವನ್ನಾಗಿ (World No Tobacco Day) ಆಚರಿಸಲಾಗುತ್ತದೆ.

VISTARANEWS.COM


on

World No Tobacco Day
Koo

ಭವಿಷ್ಯದ ಪೀಳಿಗೆಯನ್ನು ತಂಬಾಕಿನ ಜಾಲದಿಂದ ರಕ್ಷಿಸಿಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಹೊರಡಿಸಿದೆ. ಇಂದು ಮಕ್ಕಳು, ವಯಸ್ಕರಾದಿಯಾಗಿ ಜಗತ್ತಿನಲ್ಲಿ ಕೋಟಿಗಟ್ಟಲೆ ಜನ ತಂಬಾಕಿನ ಚಟಕ್ಕೆ ಜೀವ ತೆರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೇ 31ನೇ ದಿನವನ್ನು ವಿಶ್ವದೆಲ್ಲೆಡೆ ಅರಿವಿನ ದಿನವನ್ನಾಗಿ ಆಚರಿಸಲಾಗುತ್ತಿದೆ.
ಪ್ರಗತಿಯನ್ನು ಸಂಖ್ಯೆಗಳಿಂದ ಅಳೆಯುತ್ತೇವೆ ಎಷ್ಟೋ ಸಾರಿ. ಈ ವರ್ಷಕ್ಕೆ ಇಷ್ಟಿರುವ ಸಂಖ್ಯೆ, 2030ಕ್ಕೆ ಎಷ್ಟು ಹೆಚ್ಚುತ್ತದೆ ಎನ್ನುವುದು ಪ್ರಗತಿಯ ಸಂಕೇತವಾಗಿ ತೋರುತ್ತದೆ ನಮಗೆ. ಈಗಾಗಲೇ ವರ್ಷಕ್ಕೆ 60 ಲಕ್ಷದಷ್ಟು ಜನ ತಂಬಾಕಿನ ಬಳಕೆಯಿಂದ ವಾರ್ಷಿಕವಾಗಿ ಮೃತಪಡುತ್ತಿದ್ದಾರೆ. 2030ರ ವೇಳೆಗೆ ಈ ಸಂಖ್ಯೆ 80 ಲಕ್ಷ ದಾಟುವ ಅಂದಾಜಿದೆ. ಸಂಖ್ಯೆಗಳನ್ನು ಕಾಣುವ ಈ ಹೆಚ್ಚಳವನ್ನೂ ಪ್ರಗತಿಯ ಸಾಲಿಗೆ ಸೇರಿಸಬಹುದೇ? ಇದು ಕೇವಲ ನೇರವಾಗಿ ಬಳಸುವವರ ಸಂಖ್ಯೆ. ಪರೋಕ್ಷವಾಗಿ ಇದರ ಪರಿಣಾಮಗಳಿಂದ ಮೃತಪಡುವವರ ಸಂಖ್ಯೆಯನ್ನೂ ಸೇರಿಸಿದರೆ, ತಂಬಾಕಿನ ಘೋರ ಪರಿಣಾಮದ ಅಂದಾಜಾದೀತು ನಮಗೆ. ಈ ಹಿನ್ನೆಲೆಯಲ್ಲಿ, ತಂಬಾಕು ರಹಿತವಾದ ವಿಶ್ವದ ಅಗತ್ಯವನ್ನು ಜಗತ್ತಿನ ಮನಗಾಣಿಸುವ ಉದ್ದೇಶದಿಂದ ಮೇ ತಿಂಗಳ ಕಡೆಯ ದಿನವನ್ನು ವಿಶ್ವ ತಂಬಾಕು ರಹಿತ ದಿನವನ್ನಾಗಿ (World No Tobacco Day) ಆಚರಿಸಲಾಗುತ್ತದೆ. ಈ ವರ್ಷ, ಅಂದರೆ 2024ರ ಸಾಲಿನ ಘೋಷ ವಾಕ್ಯ- ತಂಬಾಕು ಉದ್ದಿಮೆಯ ಹಸ್ತಕ್ಷೇಪದಿಂದ ಮಕ್ಕಳನ್ನು ಕಾಪಾಡುವುದು. ಅಪ್ರಾಪ್ತ ವಯಸ್ಕರು ಮತ್ತು ಯುವಜನತೆಯನ್ನೇ ಗುರಿಯಾಗಿಸಿಕೊಂಡು ತಂಬಾಕು ಮಾರಾಟ ವಿಸ್ತರಣೆಗೆ ಉದ್ದಿಮೆ ಯತ್ನಿಸುತ್ತಿರುವ ಹಿನ್ನೆಲೆಯಲ್ಲಿ, ಈ ಘೋಷವಾಕ್ಯ ಮಹತ್ವವನ್ನು ಪಡೆದಿದೆ. ವಿಶ್ವದಾದ್ಯಂತ 13ರಿಂದ 15 ವರ್ಷ ವಯಸ್ಸಿನ 37 ದಶಲಕ್ಷ ಮಕ್ಕಳು ಒಂದಿಲ್ಲೊಂದು ರೀತಿಯಲ್ಲಿ ತಂಬಾಕು ಬಳಸುತ್ತಿದ್ದಾರೆ. ಇವರಲ್ಲಿ ಹುಡುಗಿಯರಿಗಿಂತ ಹುಡುಗರೇ ಹೆಚ್ಚಿದ್ದಾರೆ.

No Tobacco Day

ಹಿನ್ನೆಲೆ ಏನು?

ವಿಶ್ವ ಆರೋಗ್ಯ ಸಂಸ್ಥೆಯ ಅಡಿಯಲ್ಲಿ 1987ರಿಂದ ಈ ಜಾಗೃತಿ ದಿನವನ್ನು ಆಚರಿಸಲಾಗುತ್ತಿದೆ. ನಿಕೋಟಿನ್‌ ವ್ಯಸನಕ್ಕೆ ಬಿದ್ದು, ಜೀವ ಕಳೆದುಕೊಳ್ಳುವ ಲಕ್ಷಾಂತರ ಮಂದಿಯ ದಾರುಣ ಕಥೆಗಳು ಎದುರಿಗಿದ್ದರೂ, ಮತ್ತೆ ತಂಬಾಕಿನ ಚಟಕ್ಕೆ ಅಂಟಿಕೊಳ್ಳುವವರನ್ನು ಇದರಿಂದ ಹೊರ ತರುವ ಅಗತ್ಯವನ್ನು ಮನಗಂಡು, ಈ ಅರಿವಿನ ದಿನವನ್ನು ಅಚರಿಸಲಾಗುತ್ತಿದೆ. ಈ ಕುರಿತಾದ ಅಂಕಿ-ಅಂಶಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ್ದು, ಹೆಚ್ಚಿನವು ಗಾಬರಿ ಹುಟ್ಟಿಸುವಂತಿವೆ.

ಸಂಖ್ಯೆಗಳು ಏನೆನ್ನುತ್ತವೆ?

20ನೇ ಶತಮಾನದಲ್ಲಿ ಸುಮಾರು 10 ಕೋಟಿ ಮಂದಿ ಧೂಮಪಾನದ ಚಟಕ್ಕೆ ಬಲಿಯಾಗಿದ್ದಾರೆ. ಇಡೀ ವಿಶ್ವದ ಒಟ್ಟಾರೆ ಮೃತ್ಯುಗಳಲ್ಲಿ ಶೇ. 15ರಷ್ಟು ಸಾವುಗಳು ಸಂಭವಿಸಿದ್ದು ತಂಬಾಕಿನ ಚಟದಿಂದ. ಇಷ್ಟೊಂದು ಅಗಾಧ ಪ್ರಮಾಣದಲ್ಲಿ ಜನ ಸಿಗರೇಟ್‌ಗೆ ಬಲಿಯಾಗುವುದಕ್ಕೆ ಕಾರಣವೆಂದರೆ ಜಗತ್ತಿನ ಐವರು ವಯಸ್ಕರ ಪೈಕಿ ಒಬ್ಬರಿಗೆ ಧೂಮಪಾನದ ಚಟವಿರುವುದು. ಜೊತೆಗೆ, 12 ಲಕ್ಷ ಮಂದಿ ಇನ್ನೊಬ್ಬರು ಸೇದುವ ಸಿಗರೇಟ್‌ ಹೊಗೆಗೆ ಬಲಿಯಾಗುತ್ತಿದ್ದಾರೆ. ಇವರಲ್ಲಿ ಶೇ. 28ರಷ್ಟು ಮಕ್ಕಳಿದ್ದಾರೆ. ಹಾಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧವನ್ನು ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೆ ತರಲೇಬೇಕಾದ ಅಗತ್ಯವಿದೆ. ತಂಬಾಕು ಉಪಯೋಗಿಸುವವರಲ್ಲಿ ಶೇ. 80ರಷ್ಟು ಮಂದಿ ಅಭಿವೃದ್ಧಿಶೀಲ ದೇಶಗಳಿಗೆ ಸೇರಿದವರು. ಈ ನಿಟ್ಟಿನಲ್ಲಿ ಬಡತನ ನಿವಾರಣೆಗೂ ತಂಬಾಕು ಉಪಯೋಗ ಕಡಿಮೆಯಾಗುವುದಕ್ಕೂ ನೇರ ಸಂಬಂಧವಿದೆ ಎಂದು ಹೇಳಬಹುದು.

ಇದನ್ನೂ ಓದಿ: Cervical Cancer: ಗರ್ಭಕೊರಳಿನ ಕ್ಯಾನ್ಸರ್‌ಗೆ ಮುನ್ನೆಚ್ಚರಿಕೆಯೇ ಮದ್ದು

ಮಕ್ಕಳೇ ಏಕೆ?

ಅಪ್ರಾಪ್ತ ವಯಸ್ಕರನ್ನೇ ತಂಬಾಕು ಉದ್ದಿಮೆ ಗುರಿಯಾಗಿಸಿಕೊಂಡಿರುವುದೇಕೆ? ಪ್ರತಿ ವರ್ಷ ತಂಬಾಕಿಗೆ ಜೀವ ಕಳೆದುಕೊಳ್ಳುವ ಮತ್ತು ಚಟದಿಂದ ದೂರವಾಗುವ ಲಕ್ಷಗಟ್ಟಲೆ ಜನಕ್ಕೆ ಬದಲಿಯಾಗಿ ಗ್ರಾಹಕರನ್ನು ತಂಬಾಕು ಉದ್ದಿಮೆ ಹುಡುಕುತ್ತಲೇ ಇರುತ್ತದೆ. ವಯಸ್ಕರಿಗೆ ಈ ಚಟವನ್ನು ಹೊಸದಾಗಿ ಅಂಟಿಸುವುದು ಸುಲಭವಲ್ಲ. ಆದರೆ ಇನ್ನೂ ಅರಿವು ಮೂಡದ ಮಕ್ಕಳನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳುವುದು ಮಾರಾಟಗಾರರಿಗೆ ಸುಲಭ. ಇದಿಷ್ಟೇ ಅಲ್ಲ, ವಯಸ್ಕರಲ್ಲಿ ತಂಬಾಕಿನಿಂದ ದೂರವಾಗುವ ಅಥವಾ ಚಟದಿಂದ ಬಿಡಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಅದೇ ಮಕ್ಕಳಲ್ಲಾದರೆ ಒಮ್ಮೆ ಅಂಟಿಸಿದರೆ ದೀರ್ಘ ಕಾಲ ಅವರನ್ನು ತಮ್ಮ ಗ್ರಾಹಕರನ್ನಾಗಿ ಇರಿಸಿಕೊಳ್ಳಬಹುದು ಎಂಬುದು ಉದ್ದಿಮೆಗೆ ತಿಳಿದಿದೆ. ಈ ಎಲ್ಲ ಕಾರಣಗಳಿಗಾಗಿ ಮಕ್ಕಳನ್ನು ತಂಬಾಕಿನ ಜಾಲದಿಂದ ರಕ್ಷಿಸಬೇಕೆಂಬ ಘೋಷಣೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಮುಂದಿರಿಸಿದೆ.

Continue Reading

ಆರೋಗ್ಯ

Cervical Cancer: ಗರ್ಭಕೊರಳಿನ ಕ್ಯಾನ್ಸರ್‌ಗೆ ಮುನ್ನೆಚ್ಚರಿಕೆಯೇ ಮದ್ದು

ಗರ್ಭಕೊರಳಿನ ಕ್ಯಾನ್ಸರ್‌ (Cervical Cancer) ಯಾವುದೇ ವಯಸ್ಸಿನವರನ್ನೂ ಬಾಧಿಸಬಹುದಾದರೂ, 30ರ ನಂತರದ ಮಹಿಳೆಯನ್ನು ಬಾಧಿಸುವುದು ಹೆಚ್ಚು. ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಂಡರೆ, ಗರ್ಭಕೊರಳಿನ ಕ್ಯಾನ್ಸರ್‌ ಬಾರದಂತೆ ತಡೆಯುವುದಕ್ಕೆ ಸಾಧ್ಯವಿದೆ. ಇಲ್ಲಿವೆ ವಿವರಗಳು.

VISTARANEWS.COM


on

Cervical Cancer
Koo

ನಮ್ಮ ಆರೋಗ್ಯ ರಕ್ಷಣೆಯಲ್ಲಿ ಹಲವು ವಿಷಯಗಳಿವೆ. ಒಂದು, ಸರಿಯಾದ ಸತ್ವಯುತ ಆಹಾರವನ್ನು ತೆಗೆದುಕೊಳ್ಳುವುದು, ತಪ್ಪದೆ ವ್ಯಾಯಾಮ ಮಾಡಿ ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳುವುದು ಮತ್ತು ನಿಯಮಿತವಾಗಿ ತಪಾಸಣೆಗಳಿಗೆ ಒಳಗಾಗುವುದು- ಈ ಮೂರು ವಿಷಯಗಳನ್ನು ಪಾಲಿಸುವುದು ಆರೋಗ್ಯ ರಕ್ಷಣೆಯಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಇದರಿಂದ ಮುಂದೆ ಬರಬಹುದಾದ ಬಹಳಷ್ಟು ತೊಂದರೆಗಳನ್ನು ಬುಡದಲ್ಲೇ ಕತ್ತರಿಸಬಹುದು. ನಿಯಮಿತ ತಪಾಸಣೆಯಿಂದ ಕೆಲವು ರೀತಿಯ ಕ್ಯಾನ್ಸರ್‌ಗಳನ್ನು ಪ್ರಾರಂಭಿಕ ಹಂತದಲ್ಲಿ ಅಥವಾ ಪ್ರಾರಂಭವಾಗುವ ಮುನ್ನವೇ ಪತ್ತೆ ಮಾಡಬಹುದು. ಉದಾ, ಸರ್ವೈಕಲ್‌ ಕ್ಯಾನ್ಸರ್‌ ಅಥವಾ ಗರ್ಭಕೊರಳಿನ ಕ್ಯಾನ್ಸರ್‌ (Cervical Cancer). ಇದು ಯಾವುದೇ ವಯಸ್ಸಿನವರನ್ನೂ ಬಾಧಿಸಬಹುದಾದರೂ, ೩೦ರ ನಂತರದ ಮಹಿಳೆಯನ್ನು ಬಾಧಿಸುವುದು ಹೆಚ್ಚು. ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಂಡರೆ, ಗರ್ಭಕೊರಳಿನ ಕ್ಯಾನ್ಸರ್‌ ಬಾರದಂತೆ ತಡೆಯುವುದಕ್ಕೆ ಸಾಧ್ಯವಿದೆ. ಇಲ್ಲಿವೆ ವಿವರಗಳು.

Ovarian and Cervical Cancer. Woman Touching on Lower Abdomen in

ವೈರಸ್‌ ಕಾರಣ

ಹ್ಯೂಮನ್‌ ಪ್ಯಾಪಿಲೋಮ ವೈರಸ್‌ ಅಥವಾ ಎಚ್‌ಪಿವಿ ಎಂದು ಕರೆಯಲಾಗುವ ವೈರಸ್‌ನಿಂದ ಗರ್ಭಕಂಠದ ಕ್ಯಾನ್ಸರ್‌ ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತದೆ. ಲೈಂಗಿಕವಾಗಿ ಸಕ್ರಿಯರಾಗಿರುವವರಲ್ಲಿ ಈ ವೈರಸ್‌ ಹರಡುತ್ತದೆ. ಒಮ್ಮೆ ವೈರಸ್‌ ಬಂದ ಮೇಲೆ ಹಲವಾರು ವರ್ಷಗಳ ನಂತರ ಗರ್ಭಕೋಶದ ಕಂಠದಲ್ಲಿ ಕ್ಯಾನ್ಸರ್‌ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಏಷ್ಯಾ ಖಂಡದಲ್ಲಿ ಮಹಿಳೆಯರು ತುತ್ತಾಗುತ್ತಿರುವ ಕ್ಯಾನ್ಸರ್‌ಗಳ ಪೈಕಿ ಮುಂಚೂಣಿಯಲ್ಲಿ ಸರ್ವೈಕಲ್‌ ಕ್ಯಾನ್ಸರ್‌ ಸಹ ಒಂದು. ಗ್ರಾಮೀಣ ಮತ್ತು ನಗರ ಭಾಗಗಳೆಂಬ ವ್ಯತ್ಯಾಸವಿಲ್ಲದಂತೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.

ಲಕ್ಷಣಗಳೇನು?

ಪ್ರಾರಂಭದಲ್ಲಿ ಈ ಕ್ಯಾನ್ಸರ್‌ ಯಾವುದೇ ಲಕ್ಷಣಗಳನ್ನು ತೋರುವುದಿಲ್ಲ ಎನ್ನುವುದು ಸಮಸ್ಯೆಯನ್ನು ಹೆಚ್ಚಿಸುತ್ತದೆ. ರೋಗ ಮುಂದುವರಿದಂತೆ, ಋತುಚಕ್ರಗಳ ನಡುವಿನ ಅವಧಿಯಲ್ಲಿ ರಕ್ತಸ್ರಾವ ಆಗುವುದು, ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ನೋವು ಅಥವಾ ರಕ್ತಸ್ರಾವ, ಮೂತ್ರದಲ್ಲಿನ ರಕ್ತ, ರಜೋನಿವೃತ್ತಿಯ ನಂತರ ರಕ್ತಸ್ರಾವ, ಕಿಬ್ಬೊಟ್ಟೆಯಲ್ಲಿ ನೋವು, ಬೆನ್ನಿನ ಕೆಳಭಾಗದಲ್ಲಿ ನೋವು- ಇಂಥ ಲಕ್ಷಣಗಳು ಕಾಣುತ್ತವೆ. ಆಗ ತುರ್ತಾಗಿ ಸ್ತ್ರೀರೋಗ ತಜ್ಞರನ್ನು ಕಾಣಬೇಕಾಗುತ್ತದೆ.

Vaccine

ಲಸಿಕೆ ಇದೆ

ಎಚ್‌ಪಿವಿ ರೋಗಾಣುವಿನಿಂದ ಬರುವ ಗರ್ಭಕೊರಳಿನ ಕ್ಯಾನ್ಸರ್‌ ತಡೆಯಲು ಸಾಧ್ಯವಿದೆ. ಇದಕ್ಕಾಗಿ ಪರಿಣಾಮಕಾರಿ ಲಸಿಕೆ ಲಭ್ಯವಿದ್ದು, 9-14 ವರ್ಷ ವಯೋಮಾನದ ಹೆಣ್ಣು ಮಕ್ಕಳಿಗೆ ಇದನ್ನು ನೀಡಿದರೆ, ಅತಿ ಹೆಚ್ಚಿನ ಪ್ರಮಾಣದಲ್ಲಿ ಯಶಸ್ಸಿದೆ. ಆನಂತರ 26 ವರ್ಷ ವಯಸ್ಸಿನವರೆಗೂ ಮಹಿಳೆಯರು ಇದನ್ನು ಪಡೆಯಬಹುದಾಗಿದ್ದು, ಯಶಸ್ಸಿನ ಪ್ರಮಾಣ ಸಮಾಧಾನಕರವಾಗಿದೆ. ಆನಂತರ 45 ವರ್ಷಗಳವರೆಗೂ ಮಹಿಳೆಯರು ಇದನ್ನು ಪಡೆಯಬಹುದಾಗಿದ್ದರೂ ವಯಸ್ಸು ಹೆಚ್ಚಿದಂತೆಲ್ಲಾ ಲಸಿಕೆಯ ಯಶಸ್ಸಿನ ಪ್ರಮಾಣ ಕಡಿಮೆಯಾಗುತ್ತದೆ.

ಏನು ಪರೀಕ್ಷೆ?

ಗರ್ಭ ಕಂಠದ ಕೆಲವು ಅಂಗಾಂಶಗಳನ್ನು ತೆಗೆಯುವ ವೈದ್ಯರು, ಅದನ್ನು ಪರೀಕ್ಷೆ ಮಾಡಿಸುತ್ತಾರೆ. ಅದರಲ್ಲಿ ಯಾವುದಾದರೂ ಅಸ್ವಾಭಾವಿಕ ಬೆಳವಣಿಗೆಗಳು ಇವೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ. ಈಗಾಗಲೇ ಕ್ಯಾನ್ಸರ್‌ ಬಂದಿರುವುದು ಮಾತ್ರವಲ್ಲ, ಮುಂದಿನ ನಾಲ್ಕಾರು ವರ್ಷಗಳಲ್ಲಿ ಈ ಕೋಶಗಳಲ್ಲಿ ಅನಿಯಂತ್ರಿತ ಬೆಳವಣಿಗೆ ಆಗಬಹುದೇ ಎಂಬುದನ್ನೂ ಈ ಪರೀಕ್ಷೆಯಲ್ಲಿ ಪತ್ತೆ ಮಾಡಬಹುದು. ಹಾಗಾಗಿ ಪ್ರತಿ ಮೂರು ವರ್ಷಗಳಿಗೊಮ್ಮೆ ಪ್ಯಾಪ್‌ ಸ್ಮೇರ್‌ ಪರೀಕ್ಷೆಯನ್ನು ಮಹಿಳೆಯರು ತಪ್ಪದೆ ಮಾಡಿಸುವುದು ಸೂಕ್ತ. ಈ ಪರೀಕ್ಷೆಯಲ್ಲಿ ಕ್ಯಾನ್ಸರ್‌ ಸಂಭಾವ್ಯತೆಯನ್ನು ಉದ್ಭವಾವಸ್ಥೆಯಲ್ಲೇ ಪತ್ತೆ ಮಾಡಬಹುದು.

ಇದನ್ನೂ ಓದಿ: Mint Leaf Water: ಪುದಿನ ಎಲೆಗಳ ನೀರನ್ನು ನಿತ್ಯವೂ ಕುಡಿಯಿರಿ, ಈ ಲಾಭಗಳನ್ನು ಪಡೆಯಿರಿ!

ಬದಲಾವಣೆಗಳು

ಬದುಕಿನ ಶೈಲಿಯಲ್ಲಿನ ಕೆಲವು ಬದಲಾವಣೆಗಳು ನಮ್ಮನ್ನು ಇಂಥ ರೋಗಗಳಿಂದ ದೂರ ಇರಿಸುತ್ತವೆ. ಸುರಕ್ಷಿತ ಲೈಂಗಿಕ ಅ‍ಭ್ಯಾಸಗಳು ಬದುಕಿನಲ್ಲಿ ಅತ್ಯಂತ ಮಹತ್ವವನ್ನು ಹೊಂದಿವೆ. ಒಂದಕ್ಕಿಂತ ಹೆಚ್ಚು ಲೈಂಗಿಕ ಸಂಗಾತಿಗಳನ್ನು ಹೊಂದುವುದು ಮತ್ತು ಕಾಂಡೊಮ್‌ ಬಳಸದೆ ಇರುವುದು ಹಲವು ರೋಗಗಳನ್ನು ತರಬಹುದು. ಅತಿ ಸಣ್ಣ ಪ್ರಾಯದಲ್ಲಿ ಲೈಂಗಿಕವಾಗಿ ಸಕ್ರಿಯರಾಗುವುದು ಸಹ ಕ್ಯಾನ್ಸರ್‌ ಸಹಿತ ಹಲವು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಸಮತೋಲನದಿಂದ ಕೂಡಿದ ತಾಜಾ ಆಹಾರಗಳ ಸೇವನೆ, ಸಿಗರೇಟ್‌ ಮತ್ತು ಮದ್ಯಗಳನ್ನು ದೂರ ಮಾಡುವುದು ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳು. ನಿಯಮಿತವಾದ ವ್ಯಾಯಾಮ ಮತ್ತು ಒತ್ತಡ ನಿವಾರಣೆಯ ಕ್ರಮಗಳು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

Continue Reading

ಆರೋಗ್ಯ

ICMR Guidelines: ಶಿಶು ಆಹಾರ ಹೇಗಿರಬೇಕು? ಐಸಿಎಂಆರ್‌ ಮಾರ್ಗಸೂಚಿ ಹೀಗಿದೆ

ಘನ ಆಹಾರ ಪ್ರಾರಂಭ ಮಾಡಿದ ತಕ್ಷಣ ಅತ್ಯಂತ ತೆಳುವಾದ ಹದದಲ್ಲಿರುವ ಅಕ್ಕಿ ಗಂಜಿ, ಬೇಳೆ-ತರಕಾರಿಯ ನೀರು ಮುಂತಾದವನ್ನು ಶಿಶುಗಳಿಗೆ ನೀಡಲಾಗುತ್ತದೆ. ಪ್ರಾರಂಭದಲ್ಲಿ ಇದು ಸೂಕ್ತವಾದರೂ, ಕ್ರಮೇಣ ಶಿಶುಗಳ ಆಹಾರದ ಹದವನ್ನು ಮಂದಗೊಳಿಸಿ ಎನ್ನುವುದು ಐಸಿಎಂಆರ್‌ ಸಲಹೆ. ಈ ಕುರಿತ ಉಪಯುಕ್ತ (ICMR guidelines) ಮಾಹಿತಿ ಇಲ್ಲಿದೆ.

VISTARANEWS.COM


on

ICMR Guidelines
Koo

ಎಳೆ ಮಕ್ಕಳಿಗೆ ಆರು ತಿಂಗಳು ತುಂಬುತ್ತಿದ್ದಂತೆ, ಅವುಗಳ ಬೆಳವಣಿಗೆಗೆ ಸೂಕ್ತವಾದ ಆಹಾರವನ್ನು ನೀಡಬೇಕಾಗುತ್ತದೆ. ಅಲ್ಲಿಯವರೆಗೆ ತಾಯಿಯ ಹಾಲು ಮಾತ್ರವೇ ಶಿಶುವಿಗೆ ಸಾಕಾದರೂ, ನಂತರ ತಾಯಿಯ ಹಾಲಿನ ಜೊತೆಗೆ ಹೆಚ್ಚುವರಿ ಆಹಾರಗಳ ಅಗತ್ಯ ಬಂದೇಬರುತ್ತದೆ. 6-12 ತಿಂಗಳವರೆಗೆ ಮತ್ತು ಒಂದು ವರ್ಷದ ನಂತರ ಆಹಾರ ಕ್ರಮವನ್ನು ಬದಲಿಸಬೇಕಾಗುತ್ತದೆ. ಈ ಕುರಿತಾಗಿ ಹಲವಾರು ವಿವರಗಳನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಇತ್ತೀಚೆಗೆ ಪ್ರಕಟಿಸಿದೆ. ತಾಯಿ ಹಾಲಿನ ಜೊತೆಗೆ, ಹೊರಗಿನಿಂದ ಆಹಾರ ಪ್ರಾರಂಭ ಮಾಡಿದ ತಕ್ಷಣ ಅತ್ಯಂತ ತೆಳುವಾದ ಹದದಲ್ಲಿರುವ ಅಕ್ಕಿ ಗಂಜಿ, ಬೇಳೆ-ತರಕಾರಿಯ ನೀರು ಮುಂತಾದವನ್ನು ಶಿಶುಗಳಿಗೆ ನೀಡಲಾಗುತ್ತದೆ. “ಪ್ರಾರಂಭದಲ್ಲಿ ಇದು ಸೂಕ್ತವಾದರೂ, ಕ್ರಮೇಣ ಶಿಶುಗಳ ಆಹಾರದ ಹದವನ್ನು ಮಂದಗೊಳಿಸಿ” ಎನ್ನುವುದು ಐಸಿಎಂಆರ್‌ ಸಲಹೆ (ICMR guidelines). ಅಂದರೆ ಬೇಳೆ-ತರಕಾರಿಯ ನೀರಿಗೇ ಶಿಶುಗಳ ಆಹಾರವನ್ನು ಸ್ಥಗಿತಗೊಳಿಸುವುದು ಸರಿಯಲ್ಲ. ಬದಲಿಗೆ, ತರಕಾರಿಗಳನ್ನು ಚೆನ್ನಾಗಿ ಬೇಯಿಸಿ ತೆಳುವಾದ ಪೇಸ್ಟ್‌ನಂತೆ ಮಾಡುವುದು, ಬೇಳೆಯ ಮಂದ ಕಟ್ಟು ಉಣಿಸುವುದು ಶಿಶುಗಳಿಗೆ ಹೆಚ್ಚು ಪೂರಕ. ಘನ ಆಹಾರ ನೀಡುವುದಕ್ಕೆ ಪ್ರಾರಂಭಿಸಿದಾಗ ಕೂಸುಗಳು ಉಗಿಯುವುದು, ಕಟವಾಯಲ್ಲಿ ಹರಿಸುವುದು ಸಾಮಾನ್ಯ. ಕಾರಣ ಅವುಗಳಿಗೆ ಘನ ಆಹಾರವನ್ನು ನುಂಗುವುದು ಅಭ್ಯಾಸವಾಗುವುದಕ್ಕೆ ಸಮಯ ಬೇಕು. ನಾಲಿಗೆಯಲ್ಲಿ ಅದನ್ನು ಒಳಗೆ ತಳ್ಳುವ ಪ್ರಯತ್ನದಲ್ಲಿ, ಹೆಚ್ಚಿನ ಆಹಾರವನ್ನು ಅವು ಬಾಯಿಂದ ಹೊರಗೆ ತಳ್ಳುವುದೇ ಹೆಚ್ಚು. ಇದೇ ನೆವದಿಂದ ತೀರಾ ನೀರಾದ ಆಹಾರವನ್ನು ಅವುಗಳಿಗೆ ಉಣಿಸುವ ಅಗತ್ಯವಿಲ್ಲ ಅಥವಾ ಆ ಆಹಾರಗಳನ್ನು ಕೂಸುಗಳು ಇಷ್ಟಪಡುವುದಿಲ್ಲ ಎಂದೂ ಅರ್ಥವಲ್ಲ. ಪ್ರಾರಂಭದಲ್ಲಿ ತೆಳುವಾದ ಹದದಲ್ಲಿ ಇದ್ದರೂ, ಕ್ರಮೇಣ ಇದನ್ನು ಮಂದವಾದ ಹದಕ್ಕೆ (ಇಡ್ಲಿ ಹಿಟ್ಟಿನ ಹದಕ್ಕೆ) ತರುವುದು ಅಗತ್ಯ ಎಂದು ತನ್ನ ವಿವರವಾದ ನಿರ್ದೇಶನಗಳಲ್ಲಿ ಸಂಸ್ಥೆ ಹೇಳಿದೆ.

Mother Feeding Baby⁠

ಪೂರಕ ಆಹಾರಗಳೆಂದರೆ…?

ಇದನ್ನು ಪಾಲಕರು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. 6 ತಿಂಗಳವರೆಗಿನ ಬೆಳವಣಿಗೆಗೆ ತಾಯಿಯ ಹಾಲು ಸಾಕಾಗುತ್ತದೆ. ಇದರಿಂದ ದಿನಕ್ಕೆ ಅಂದಾಜು 5 ಗ್ರಾಂ ಪ್ರೊಟೀನ್‌ ಮತ್ತು 500 ಕ್ಯಾಲರಿ ಶಕ್ತಿ ಮಗುವಿಗೆ ದೊರೆಯುತ್ತದೆ. 6 ತಿಂಗಳ ನಂತರ, ತನ್ನ ಚಟುವಟಿಕೆಯನ್ನು ಹೆಚ್ಚಿಸಿಕೊಳ್ಳುವ ಮಗುವಿಗೆ ಈ ಪ್ರಮಾಣ ಸಾಕಾಗುವುದಿಲ್ಲ. ದಿನಕ್ಕೆ 9-10 ಗ್ರಾಂ ಪ್ರೊಟೀನ್‌ ಮತ್ತು650ರಿಂದ720 ಕ್ಯಾಲರಿಗಳವರೆಗೆ ಶಕ್ತಿ ಬೇಕಾಗುತ್ತದೆ. ಈ ಕೊರತೆಯನ್ನು ತುಂಬುವುದಕ್ಕೆ ಪೂರಕವಾದ ಘನ ಆಹಾರಗಳನ್ನು ಮಗುವಿಗೆ ನೀಡಬೇಕಾಗುತ್ತದೆ.

ಏನು ಕೊಡಬೇಕು?

ಈ ದಿನಗಳಲ್ಲಿ ಸೂಕ್ಷ್ಮ ಪೋಷಕಾಂಶಗಳ ಅಗತ್ಯ ಶಿಶುಗಳಿಗೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಹಾಗಾಗಿ, ಧಾನ್ಯಗಳ ಜೊತೆಗೆ ಎಣ್ಣೆ ಬೀಜಗಳು, ಹಾಲು, ತರಕಾರಿಗಳು ಮತ್ತು ಹಣ್ಣುಗಳನ್ನು ನೀಡಬೇಕು. ಮಾತ್ರವಲ್ಲ, ತರಹೇವಾರಿ ಬೇಳೆಗಳು, ನಾನಾ ರೀತಿಯ ಕಾಳುಗಳೆಲ್ಲ ಪುಟ್ಟ ಮಕ್ಕಳ ಪ್ರೊಟೀನ್‌ ಅಗತ್ಯವನ್ನು ಪೂರೈಸುತ್ತವೆ. ಜೊತೆಗೆ ಬೇಯಿಸಿದ ಮೊಟ್ಟೆಯನ್ನು ಅಷ್ಟಷ್ಟಾಗಿ ಅಭ್ಯಾಸ ಮಾಡಿಸಬಹುದು.
ಬೇಯಿಸಿದ ಕ್ಯಾರೆಟ್‌, ಕುಂಬಳಕಾಯಿ, ಪಾಲಕ್‌, ಗೆಣಸು ಮುಂತಾದ ಸೊಪ್ಪು-ತರಕಾರಿಗಳ ಪೇಸ್ಟ್‌ ಮಕ್ಕಳಿಗೆ ಉಣಿಸಬಹುದು. ಸೇಬುಹಣ್ಣನ್ನೂ ಇದೇ ರೀತಿಯಲ್ಲಿ ನೀಡಬಹುದು. ಮೊದಲಿಗೆ ತರಕಾರಿ, ಹಣ್ಣುಗಳನ್ನು ಒಂದೊಂದಾಗಿ ನೀಡಿ, ಅದರಿಂದ ಶಿಶುಗಳ ಆರೋಗ್ಯದಲ್ಲಿ ವ್ಯತ್ಯಾಸವಾಗುವುದಿಲ್ಲ ಎಂದು ಖಾತ್ರಿಯಾದ ಮೇಲೆ, ಮಿಶ್ರ ತರಕಾರಿ ಮತ್ತು ಬೇಳೆಗಳನ್ನು ಉಣಿಸಬಹುದು. ಒಂದು ವರ್ಷದ ನಂತರ ಮೃದುವಾಗಿ ಬೇಯಿಸಿದ ಧಾನ್ಯದ ಉಪ್ಪಿಟ್ಟುಗಳು, ಬೇಳೆ ಹಾಕಿದ ಕಿಚಡಿಗಳು, ಬೇಯಿಸಿದ ಮೊಟ್ಟೆ, ಮೀನುಗಳನ್ನು ರೂಢಿಸಬಹುದು.

ಇದನ್ನೂ ಓದಿ: Mango For Diabetes: ಮಧುಮೇಹಿಗಳೂ ಮಾವಿನಹಣ್ಣಿನ ರುಚಿ ಸವಿಯಬಹುದೇ? ಇಲ್ಲಿದೆ ಉತ್ತರ!

ಯಾವುದು ಬೇಡ?

ಪುಟ್ಟ ಮಕ್ಕಳು ಉಪ್ಪಾದ ಚಿಪ್ಸ್‌, ಸಿಹಿ ಕ್ಯಾಂಡಿಗಳೆಲ್ಲ ಇಷ್ಟಪಟ್ಟು ನೆಕ್ಕುತ್ತವೆ. ಆದರೆ ಅವುಗಳನ್ನು ನೀಡುವುದು ಸಲ್ಲದು. ಆಹಾರಕ್ಕೆ ಸಕ್ಕರೆಯಂಥ ಕೃತಕ ಸಿಹಿಗಳು, ಫ್ರೂಟ್‌ ಜ್ಯೂಸ್‌ಗಳನ್ನು ಮಿಶ್ರ ಮಾಡುವುದಕ್ಕೂ ಐಸಿಎಂಆರ್‌ಗೆ ಸಹಮತವಿಲ್ಲ. ಬದಲಿಗೆ ನೈಸರ್ಗಿಕವಾದ ಹಣ್ಣುಗಳನ್ನೇ ಸೀರಿಯಲ್‌ಗೆ ಮಿಶ್ರ ಮಾಡುವುದು ಆರೋಗ್ಯಕರ. ಪೂರಕ ಆಹಾರಗಳಿಗೆ ಉಪ್ಪು-ಸಿಹಿಗಳನ್ನೆಲ್ಲಾ ಸೇರಿಸಿಯೇ ತಿನ್ನಿಸುವ ಅಭ್ಯಾಸ ಸರಿಯಲ್ಲ ಎಂದು ನಿರ್ದೇಶನದಲ್ಲಿ ಹೇಳಲಾಗಿದೆ.

Continue Reading

ಫ್ಯಾಷನ್

Star Fashion: ಪಂಚೆ ಜೊತೆ ಟ್ರೋಫಿ ಜಾಕೆಟ್‌ ಧರಿಸಿದ ನಟಿ ತಮನ್ನಾಳ ಯೂನಿಕ್‌ ಫ್ಯಾಷನ್‌!

ಸದಾ ಡಿಫರೆಂಟ್‌ ಸ್ಟೈಲಿಂಗ್‌ನಲ್ಲಿ (Star Fashion) ಕಾಣಿಸಿಕೊಳ್ಳುವ ಬಾಲಿವುಡ್‌ ನಟಿ ತಮನ್ನಾ, ಇದೀಗ ಖ್ಯಾತ ಸೆಲೆಬ್ರೆಟಿ ಡಿಸೈನರ್‌ ಮಸಾಬಾ ಅವರ ಕ್ರಿಯೇಷನ್‌ನ ಟ್ರೋಫಿ ಜಾಕೆಟ್‌, ಬಿಸ್ಕೆಟ್‌ ಬ್ರಾಲೆಟ್‌ ಜೊತೆ ಗ್ಲಾಮರಸ್‌ ಆಗಿ ಪಂಚೆ ಉಟ್ಟು ಕಾಣಿಸಿಕೊಂಡಿದ್ದಾರೆ. ಏನಿದು ಟ್ರೋಫಿ ಜಾಕೆಟ್‌? ಇದ್ಯಾವ ಬಗೆಯ ಸ್ಟೈಲಿಂಗ್‌ ಎಂಬುದರ ಬಗ್ಗೆ ಫ್ಯಾಷನ್‌ ವಿಮರ್ಶಕರು ವಿವರಿಸಿದ್ದಾರೆ.

VISTARANEWS.COM


on

Star Fashion
ಚಿತ್ರಗಳು: ತಮನ್ನಾ ಬಾಟಿಯಾ , ಬಾಲಿವುಡ್‌ ನಟಿ, ಫೋಟೋಗ್ರಾಫಿ : ಪಿಕ್ಸೆಲ್‌ ಎಕ್ಸ್‌ಫೋಷರ್ಸ್
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಾಲಿವುಡ್‌ ನಟಿ ತಮನ್ನಾ ಬಾಟಿಯಾ ಪಂಚೆ ಜೊತೆ ಟ್ರೋಫಿ ಜಾಕೆಟ್‌ನಲ್ಲಿ ಗ್ಲಾಮರಸ್‌ ಲುಕ್‌ನಲ್ಲಿ (Star Fashion) ಕಾಣಿಸಿಕೊಂಡಿದ್ದಾರೆ. ಹೌದು, ಸದಾ ಒಂದಲ್ಲ ಒಂದು ಡಿಫರೆಂಟ್‌ ಸ್ಟೈಲಿಂಗ್‌ನಲ್ಲಿ ಅದರಲ್ಲೂ ಗ್ಲಾಮರಸ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುವ ನಟಿ ತಮನ್ನಾ, ಇದೀಗ ಖ್ಯಾತ ಸೆಲೆಬ್ರೆಟಿ ಡಿಸೈನರ್‌ ಮಸಾಬಾ ಅವರ ಕ್ರಿಯೇಷನ್‌ನ ಟ್ರೋಫಿ ಜಾಕೆಟ್‌, ಬಿಸ್ಕೆಟ್‌ ಬ್ರಾಲೆಟ್‌ ಹಾಗೂ ಪಂಚೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲೇನು ವಿಶೇಷ ಎಂದು ಯೋಚಿಸುತ್ತಿದ್ದೀರಾ? ಊಹೆಗೂ ಮೀರಿದ ಫ್ಯಾಷನ್‌ ಕಾನ್ಸೆಪ್ಟ್ ಇದು ಎನ್ನುತ್ತಿದ್ದಾರೆ ಫ್ಯಾಷನ್‌ ಅನಾಲಿಸ್ಟ್‌ಗಳು.

Star Fashion tamanna bhatia

ಮಸಾಬಾ ಕ್ರಿಯೇಷನ್‌ ಫ್ಯಾಷನ್‌

ಅಂದಹಾಗೆ, ನಟಿ ತಮನ್ನಾ ಧರಿಸಿರುವ ಈ ಫ್ಯಾಷನ್‌ವೇರ್‌ಗಳು ಖ್ಯಾತ ಸೆಲೆಬ್ರೆಟಿ ಡಿಸೈನರ್‌ ಹಾಗೂ ನಟಿಯಾದ ಮಸಾಬಾ ಡಿಸೈನ್‌ ಮಾಡಿದ್ದು, ಹೊಸ ಪ್ರಯೋಗ ಕೂಡ ಮಾಡಿದ್ದಾರೆ. ನೋಡಲು ತಕ್ಷಣ ಇದ್ಯಾವುದೋ ಟೈಯಿಂಗ್‌ ಸ್ಕಾರ್ಫ್‌ ಮಿಡಿ ಸ್ಕರ್ಟ್ ಹಾಗೂ ಬ್ಲೇಝರ್‌ ಎಂದೆನಿಸಿದರೂ ಇವು ಅವಲ್ಲ! ಕಂಪ್ಲೀಟ್‌ ಡಿಫರೆಂಟ್‌ ಕಾನ್ಸೆಪ್ಟ್‌ನಲ್ಲಿ ಡಿಸೈನ್‌ ಆಗಿರುವಂತವು ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರಾದ ರಿಚಾ.

Star Fashion tamanna bhatia

ಏನಿದು ಟ್ರೋಫಿ ಜಾಕೆಟ್‌?

ಕೋಟ್‌ ಅಥವಾ ಬ್ಲೇಝರ್‌ನಂತೆ ಕಾಣುವ ಮಸ್ಟರ್ಡ್ ಶೇಡ್‌ನ ಜಾಕೆಟ್‌ನ ಕಾಲರ್‌ ತುಂಬೆಲ್ಲಾ ಚಿಕ್ಕ ಪುಟ್ಟ ಬ್ರೋಚರ್‌ನಂತೆ ಕಾಣುವ ಗೋಲ್ಡ್ ಪ್ಲೇಟೆಡ್‌ನ ಟ್ರೊಫಿಯಂತಹ ಮಿನಿಯೇಚರ್‌ಗಳನ್ನು ಅಂಟಿಸಲಾಗಿದೆ. ಇದರೊಳಗೆ ಧರಿಸಿರುವ ಬ್ರಾಲೆಟ್‌ ಕೂಡ ಹೀಗೆಯೇ ಡಿಸೈನ್‌ ಮಾಡಲಾಗಿದೆ. ಅದಕ್ಕೂ ಕೂಡ ಗೋಲ್ಡ್ ಪ್ಲೇಟೆಡ್‌ ಡಿಸೈನ್‌ ಮಾಡಲಾಗಿದೆ. ಇದು ಯೂನಿಕ್‌ ಫ್ಯಾಷನ್‌ಗೆ ನಾಂದಿ ಹಾಡಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

ಗೋಲ್ಡ್ ಪ್ಲೇಟೆಡ್‌ ಡಿಸೈನ್‌ನ ಪಂಚೆ

ಬ್ರಾಲೆಟ್‌ ಹಾಗೂ ಟ್ರೋಫಿ ಜಾಕೆಟ್‌ ಜೊತೆಗೆ ವಿಭಿನ್ನವಾಗಿ ಕಾಣುವಂತೆ ಪಂಚೆ ಮ್ಯಾಚ್‌ ಮಾಡಲಾಗಿದೆ. ಬೀಚ್‌ ಸ್ಟೈಲಿಂಗ್‌ ಶೈಲಿಯಲ್ಲಿ ಟೈಯಿಂಗ್‌ ಮಾಡಿರುವುದು ಈ ಔಟ್‌ಫಿಟ್‌ಗೆ ಗ್ಲಾಮರಸ್‌ ಟಚ್‌ ನೀಡಿದೆ. ಪಂಚೆಯ ಒಡಲೆಲ್ಲಾ ಗೋಲ್ಡ್ ಪ್ಲೇಟೆಡ್‌ ಡಿಸೈನ್‌ ಹಾಗೂ ಬಾರ್ಡರ್ ಹೈಲೈಟ್‌ ಮಾಡಲಾಗಿದೆ. ಇದು ಹೌಸ್‌ ಆಫ್‌ ಮಸಾಬಾರ ಕ್ರಿಯೇಟಿವಿಟಿಯನ್ನು ಎದ್ದು ತೋರಿಸುತ್ತಿದೆ. ಇತರೇ ಡಿಸೈನರ್‌ಗಳು ಕೂಡ ಒಮ್ಮೆ ತಮ್ಮನ್ನಾರ ಈ ಡಿಸೈಬರ್‌ವೇರ್‌ ಕುರಿತಂತೆ ಚಿಂತನೆ ನಡೆಸುವಂತೆ ಮಾಡಿದೆ. ಒಟ್ಟಾರೆ, ತಮನ್ನಾರ ಈ ಯೂನಿಕ್‌ ಫ್ಯಾಷನ್‌ವೇರ್‌ ಇತರೇ ನಟಿಯರನ್ನು ಒಮ್ಮೆ ತಿರುಗಿ ನೋಡುವಂತೆ ಮಾಡಿದೆ. ಮಸಾಬಾರ ಡಿಸೈನ್‌ ಸದ್ಯ ಫ್ಯಾಷನ್‌ ಲೋಕದಲ್ಲಿ ಸುದ್ದಿ ಮಾಡಿದೆ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

ಇದನ್ನೂ ಓದಿ: Summer Dress Fashion: ಸೀಸನ್‌ ಎಂಡ್‌ ಫ್ಯಾಷನ್‌ಗೆ ಕಾಲಿಟ್ಟ ಸಮುದ್ರದ ಅಲೆ ಬಿಂಬಿಸುವ ವೆವಿ ಡ್ರೆಸ್‌!

Continue Reading
Advertisement
theft Case
ಕ್ರೈಂ1 min ago

Theft Case : ದೇವರ ಹರಕೆ ಕುರಿಯನ್ನೇ ಕದ್ಯೊಯ್ದ ಕಳ್ಳರು; ಸೂಪರ್‌ ಮಾರ್ಕೆಟ್‌ಗಳಲ್ಲಿ ಖದೀಮರ ಕೈಚಳಕ

bhavani revanna sit notice
ಕ್ರೈಂ4 mins ago

Bhavani Revanna: ʼತನಿಖೆ ಬೇಕಿದ್ರೆ ಮನೆಗೇ ಬನ್ನಿʼ ಎಂದ ಭವಾನಿ ರೇವಣ್ಣ; ʼಆಯ್ತು ಅಲ್ಲಿಗೇ ಬರ್ತೀವಿʼ ಎಂದ ಎಸ್‌ಐಟಿ!

Gold Smuggling
ದೇಶ10 mins ago

Gold Smuggling: ಗುದನಾಳದಲ್ಲಿ 1ಕೆಜಿ ಚಿನ್ನ; ಕೇರಳದಲ್ಲಿ ಗಗನಸಖಿ ಅರೆಸ್ಟ್‌

prajwal Revanna Case
ಪ್ರಮುಖ ಸುದ್ದಿ10 mins ago

Prajwal Revanna Case : ಪ್ರಜ್ವಲ್​ನನ್ನು ಮಹಿಳಾ ಪೊಲೀಸ್ ಸಿಬ್ಬಂದಿಯೇ ಬಂಧಿಸಿದ್ದು ಯಾಕೆ?

India women’s squad
ಕ್ರೀಡೆ19 mins ago

India women’s squad: ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಭಾರತ ಮಹಿಳಾ ತಂಡ ಪ್ರಕಟ; ತಂಡಕ್ಕೆ ಮರಳಿದ ಪ್ರಿಯಾ ಪೂನಿಯಾ

Maharaja trailer released Vijay Sethupathi has a secret
ಟಾಲಿವುಡ್21 mins ago

Maharaja Trailer: ವಿಜಯ್‌ ಸೇತುಪತಿ 50ನೇ ಚಿತ್ರದ ʻಮಹಾರಾಜʼ ಟ್ರೈಲರ್‌ ಔಟ್‌: ಫ್ಯಾನ್ಸ್‌ ಫಿದಾ!

Huligemma Temple Road Accident
ಕೊಪ್ಪಳ38 mins ago

Huligemma Temple : ಹುಲಿಗೆಮ್ಮ ದೇವಿ ಜಾತ್ರೆಗೆ ಹೊರಟಿದ್ದ ಪಾದಯಾತ್ರಿ ಮೇಲೆ ಹರಿದ ಲಾರಿ; ಓರ್ವ ಸಾವು, ಮತ್ತೋರ್ವ ಗಂಭೀರ

Viral Video
ವೈರಲ್ ನ್ಯೂಸ್50 mins ago

Viral Video: ಬೆಂಕಿ ದುರಂತ ಸ್ಥಳದಲ್ಲಿ ಜಮಾಯಿಸಿದ್ದ ಜನ; ಆಮೇಲೆ ನಡೆದಿದ್ದೇ ಬೇರೆ- ವಿಡಿಯೋ ನೋಡಿ

back benchers Movie Kannada song
ಸ್ಯಾಂಡಲ್ ವುಡ್54 mins ago

Kannada New Movie: ಹಾಡಿನ ಮೂಲಕ ಸದ್ದು ಮಾಡ್ತಿದೆ ʻಬ್ಯಾಕ್ ಬೆಂಚರ್ಸ್ʼ ಸಿನಿಮಾ!

valmiki corporation scam self harming chandrashekar ವಾಲ್ಮೀಕಿ
ಪ್ರಮುಖ ಸುದ್ದಿ58 mins ago

Valmiki Corporation Scam: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ತನಿಖೆಗೆ ಎಸ್‌ಐಟಿ? ಸಿಬಿಐ ತನಿಖೆ ತಪ್ಪಿಸಲು ಪ್ಲಾನ್

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ22 hours ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ3 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು3 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ4 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ5 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು5 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌