ವಿಸ್ತಾರ ಸಂಪಾದಕೀಯ: ಕನ್ನಡದಲ್ಲೇ ಸಿಆರ್‌ಪಿಎಫ್ ಪರೀಕ್ಷೆ! ಬ್ಯಾಂಕಿಂಗ್ ಪರೀಕ್ಷೆಗಳೂ ಕನ್ನಡದಲ್ಲಿ ನಡೆಯಲಿ - Vistara News

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಕನ್ನಡದಲ್ಲೇ ಸಿಆರ್‌ಪಿಎಫ್ ಪರೀಕ್ಷೆ! ಬ್ಯಾಂಕಿಂಗ್ ಪರೀಕ್ಷೆಗಳೂ ಕನ್ನಡದಲ್ಲಿ ನಡೆಯಲಿ

Vistara Editorial: ಫೆ.20ರಿಂದ ಆರಂಭವಾಗುತ್ತಿರುವ ಸಿಆರ್‌ಪಿಎಫ್, ಬಿಎಸ್ಎಫ್ ಮತ್ತು ಸಿಐಎಸ್‌ಎಫ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸಲಾಗುತ್ತಿದ್ದು, ಇದೊಂದು ಸ್ವಾಗತಾರ್ಹ ನಡೆಯಾಗಿದೆ. ಅದೇ ರೀತಿ, ಬ್ಯಾಂಕಿಂಗ್ ವಲಯದ ಪರೀಕ್ಷೆಗಳನ್ನು ಕನ್ನಡದಲ್ಲೇ ನಡೆಸಲು ಕೇಂದ್ರ ಸರ್ಕಾರ ಮುಂದಾಗಲಿ.

VISTARANEWS.COM


on

Vistara Editorial, not only CRPF exam, Banking exams should also be conducted in Kannada
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸಿಆರ್‌ಪಿಎಫ್‌(CRPF), ಬಿಎಸ್‌ಎಫ್ (BSF) ಮತ್ತು ಸಿಐಎಸ್‌ಎಫ್‌ (CISF) ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ ಫೆ.20ರಿಂದ ನಡೆಯಲಿದ್ದು(Recruitment Examination), ಇದೇ ಮೊದಲ ಬಾರಿಗೆ ಕನ್ನಡ (Kannada) ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶವನ್ನು ಕೇಂದ್ರ ಗೃಹ ಸಚಿವಾಲಯವು (Central Government) ಕಲ್ಪಿಸಿದೆ. ಕೇಂದ್ರ ಸಶಸ್ತ್ರ ಹಾಗೂ ಮೀಸಲು ಪಡೆಗಳ ನೇಮಕಾತಿಯನ್ನು ಇಂಗ್ಲಿಷ್ ಮತ್ತು ಹಿಂದಿ ಮಾತ್ರವಲ್ಲದೇ ಪ್ರಾದೇಶಿಕಗಳಲ್ಲೂ ನಡೆಸಲು ಕಳೆದ ವರ್ಷ ಏಪ್ರಿಲ್‌ನಲ್ಲಿ ಸರ್ಕಾರ ನಿರ್ಧರಿಸಿತ್ತು ಮತ್ತು ಅದನ್ನೀಗ ಅನುಷ್ಠಾನಗೊಳಿಸುತ್ತಿದೆ. ಸರ್ಕಾರದ ಈ ನಿರ್ಧಾರವು ಸ್ವಾಗತಾರ್ಹವಾಗಿದೆ. ಕನ್ನಡದ ಜತೆಗೆ ಅಸ್ಸಾಮಿ, ಬೆಂಗಾಲಿ, ಗುಜರಾತಿ, ಮರಾಠಿ, ಮಲಯಾಳಂ, ತಮಿಳು, ತೆಲುಗು, ಉರ್ದು, ಪಂಜಾಬಿ, ಮಣಿಪುರಿ ಮತ್ತು ಕೊಂಕಣಿ ಭಾಷೆಗಳಲ್ಲೂ ಪರೀಕ್ಷೆಯನ್ನು ಕೈಗೊಳ್ಳಲಾಗುತ್ತಿದೆ(Vistara Editorial).

ದೇಶಾದ್ಯಂತ 128 ನಗರಗಳಲ್ಲಿ ನಡೆಯಲಿರುವ ಪರೀಕ್ಷೆಯಲ್ಲಿ ಸುಮಾರು 48 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಪ್ರಾದೇಶಿಕ ಭಾಷೆಗಳಿಗೆ ಉತ್ತೇಜನ ಮತ್ತು ಕೇಂದ್ರ ಸಶಸ್ತ್ರ ಹಾಗೂ ಮೀಸಲು ಪಡೆಯಲ್ಲಿ ಸ್ಥಳೀಯ ಯುವಕರು ಪಾಲ್ಗೊಳ್ಳುವುದನ್ನು ಹೆಚ್ಚಿಸುವುದಕ್ಕಾಗಿ ಕೇಂದ್ರ ಸರ್ಕಾರವು ಈ ಐತಿಹಾಸಿಕ ನಿರ್ಧಾರವನ್ನು ಕೈಗೊಂಡಿದೆ. ಪ್ರಾದೇಶಿಕ ಭಾಷೆಗಳ ಮೇಲೆ ವಿಶೇಷವಾಗಿ ದಕ್ಷಿಣ ಭಾರತದ ಭಾಷೆಗಳ ಮೇಲೆ ಕೇಂದ್ರ ಸರ್ಕಾರವು ಹಿಂದಿ ಭಾಷೆಯನ್ನು ಹೇರುತ್ತಿದೆ ಎಂಬ ಆರೋಪವಿದೆ. ಆದರೆ, ಈ ಆರೋಪವನ್ನು ಹೋಗಲಾಡಿಸುವ ಪ್ರಯತ್ನಗಳು ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಒಂಚೂರು ಬೆಳವಣಿಗೆಯನ್ನು ಕಾಣುತ್ತಿದ್ದೇವೆ, ಆ ಮೂಲಕ ಪ್ರಾದೇಶಿಕ ಭಾಷೆಗಳಿಗೂ ಸಮಾನ ಅವಕಾಶ ಕಲ್ಪಿಸಲಾಗುತ್ತಿರುವುದು ಅಭಿನಂದನಾರ್ಹವಾಗಿದೆ.

ಇಂಥ ವಿಕೇಂದ್ರೀಕೃತ ಕ್ರಮಗಳಿಂದಲೇ ಒಕ್ಕೂಟ ವ್ಯವಸ್ಥೆಯೊಂದು ಗಟ್ಟಿಯಾಗುತ್ತದೆ. ಹಿಂದಿ ಅಥವಾ ಇಂಗ್ಲಿಷ್‌ ಎಂಬ ಎರಡೇ ಭಾಷೆಗಳಲ್ಲಿ ಆಡಳಿತ ವ್ಯವಸ್ಥೆ ಅಥವಾ ನೇಮಕಾತಿ ಪರೀಕ್ಷಾ ವ್ಯವಸ್ಥೆಗಳನ್ನು ಕೇಂದ್ರೀಕರಿಸಿದಾಗ ಅದು ಕೆಲವೇ ಕೆಲವರಿಗೆ ಮಾತ್ರ ನೆರವಾಗುತ್ತದೆ. ಹೇಗೆ ಮೀಸಲಾತಿಯು ಸಮಾಜದ ತಳಮಟ್ಟದಲ್ಲಿ ಸಾಮಾಜಿಕ ನ್ಯಾಯವನ್ನು ಹಬ್ಬಿಸಲು ನೆರವಾಯಿತೋ, ಹಾಗೆಯೇ ಸ್ಥಳೀಯ ಭಾಷೆಗಳಲ್ಲಿ ನೇಮಕಾತಿ ಪರೀಕ್ಷೆ ಎಂಬುದು ಕೂಡ ನೆರವಾಗಲಿದೆ. ಹಾಗಾಗಿ, ಈ ಕೇಂದ್ರ ಸರ್ಕಾರದ ಪರೀಕ್ಷೆಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ನಡೆಸುತ್ತಿರುವುದರ ಸಕಾರಾತ್ಮಕ ಪರಿಣಾಮಗಳು ಅನುಭವಕ್ಕೆ ಬರಲಿವೆ.

ಸೇನಾ ಪರೀಕ್ಷೆಗಳಿಗೆ ದೈಹಿಕ ಪರೀಕ್ಷೆಯೇ ಪ್ರಧಾನ ಎಂಬುದು ನಿಜವಾದರೂ, ಇತ್ತೀಚೆಗೆ ಲಿಖಿತ ಪರೀಕ್ಷೆಗಳು ಕೂಡ ಅಭ್ಯರ್ಥಿಯ ಗುಣಮಟ್ಟವನ್ನು ಗ್ರಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕೇಂದ್ರೀಯ ಸಶಸ್ತ್ರ ಹಾಗೂ ಮೀಸಲು ಪೊಲೀಸ್‌ ಪಡೆಗಳು ಹಿಂದಿ ಬಲ್ಲ ರಾಜ್ಯಗಳಲ್ಲಿ ಕಾರ್ಯಾಚರಿಸುತ್ತದೆ ಎಂದೇನೂ ಇಲ್ಲ. ದೇಶದ ಎಲ್ಲ ಭಾಗಗಳಲ್ಲಿಯೂ ಕಾರ್ಯಾಚರಿಸುತ್ತವೆ. ಸ್ಥಳೀಯ ಭಾಷೆಗಳನ್ನು ಎಲ್ಲರೂ ಕಲಿಯುವುದು ಅಗತ್ಯವಾಗುತ್ತದೆ. ಆದ್ದರಿಂದ ಹಿಂದಿ ವಲಯದ ರಾಜ್ಯಗಳ ಸೈನಿಕರು ಕೂಡ ದಕ್ಷಿಣ ರಾಜ್ಯಗಳಲ್ಲಿ ನೇಮಕವಾದರೆ ಅಲ್ಲಿನ ಭಾಷೆಗಳನ್ನು ಕಲಿಯುವುದು ಅನಿವಾರ್ಯ. ಮಲ್ಟಿನ್ಯಾಷನಲ್‌ ಕಂಪನಿಗಳು ಕೂಡ ಇಂದು ಸ್ಥಳೀಯ ಭಾಷಿಕರನ್ನು ಒಲಿಸಿಕೊಳ್ಳಲು ಆಯಾ ಭಾಷೆಯಲ್ಲಿ ಹೆಚ್ಚಿನ ಆದ್ಯತೆಯ ವಹಿವಾಟನ್ನು ನಡೆಸುತ್ತಿವೆ. ಹೀಗೆ ಪ್ರಾದೇಶಿಕ ಭಾಷೆಗಳು ಕೂಡ ಇಂದು ವಿಶ್ವಾತ್ಮಕವಾಗುತ್ತಿವೆ.

ಕನ್ನಡದಲ್ಲಿ ಪರೀಕ್ಷೆ ನಡೆಸುತ್ತಿರುವುದು ಮೇಲ್ನೋಟಕ್ಕೆ ಸರಳ ಎನಿಸಿದರೂ, ಅದರ ಹಿಂದೆ ಸಾಕಷ್ಟು ಹೋರಾಟಗಳಿವೆ. ದಶಕಗಳ ಬೇಡಿಕೆಯ ಫಲವಿದು. 2011ಕ್ಕಿಂತ ಮೊದಲು ರೈಲ್ವೆ ನೇಮಕಾತಿ ಪರೀಕ್ಷೆಗಳು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ನಡೆಯುತ್ತಿದ್ದವು. ಆಗ ರೈಲ್ವೆ ಇಲಾಖೆಯಲ್ಲಿ ಹಿಂದಿ ಭಾಷಿಕರೇ ತುಂಬಿ ತುಳುಕುತ್ತಿದ್ದರು. ಇತ್ತೀಚೆಗೆ ಭಾರಿ ಹೋರಾಟದ ಬಳಿಕ ಕನ್ನಡದಲ್ಲೂ ರೈಲ್ವೆ ನೇಮಕಾತಿ ಪರೀಕ್ಷೆ ಲಭ್ಯವಾಗುವಂತಾಗಿದೆ.

ಇಷ್ಟಾಗಿಯೂ ಇನ್ನೂ ಅನೇಕ ಕೇಂದ್ರ ಸರ್ಕಾರಿ ವಲಯಗಳಲ್ಲಿ ಹಿಂದಿಯೇ ಯಜಮಾನಿಕೆಯ ಸ್ಥಾನದಲ್ಲಿದೆ. ಬ್ಯಾಂಕಿಂಗ್‌ ಪರೀಕ್ಷೆಗಳು, ಸ್ಟಾಫ್‌ ಸೆಲೆಕ್ಷನ್‌ ಕಮಿಷನ್ ಮುಂತಾದ ಕೇಂದ್ರ ಇಲಾಖೆಗಳು ನಡೆಸುವ ಪರೀಕ್ಷೆಗಳು ಕನ್ನಡದಲ್ಲಿ ಲಭ್ಯವಿಲ್ಲ. ಪರಿಣಾಮವಾಗಿ ಕರ್ನಾಟಕದ ಬ್ಯಾಂಕ್‌ಗಳಲ್ಲಿ ಉತ್ತರ ಭಾರತೀಯರೇ ತುಂಬಿ ಹೋಗಿದ್ದರೆ, ಉತ್ತರ ಭಾರತದಲ್ಲಿ ದಕ್ಷಿಣ ಭಾರತೀಯರು ಹುಡುಕಿದರೂ ಕಾಣಸಿಗುವುದಿಲ್ಲ. ಕನ್ನಡಿಗರ ಪಾಲಿನ ಹುದ್ದೆಗಳನ್ನು ಇತರರು ದೋಚಲು ಇದು ಕಾರಣವಾಗಿದೆ. ವರ್ಷಕ್ಕೆ ಒಂದು ಲಕ್ಷಕ್ಕೂ ಅಧಿಕ ಹುದ್ದೆಗಳನ್ನು ನೀಡುವ ಬ್ಯಾಂಕಿಂಗ್‌ ವಲಯದಲ್ಲಿ ಕನ್ನಡಿಗರ ನೇಮಕದ ಪ್ರಮಾಣ ತೀರಾ ಕಡಿಮೆ. ಇನ್ನು ಯು ಪಿ ಎಸ್ ಸಿ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಬರೆಯಬಹುದು ಎಂಬ ಅವಕಾಶ ನೀಡಲಾಗಿದೆ; ಆದರೆ ಇಲ್ಲೂ ಪೂರ್ವಭಾವಿ ಪರೀಕ್ಷೆಗಳನ್ನು ಹಿಂದಿ ಹಾಗೂ ಇಂಗ್ಲಿಷ್‌ಲ್ಲಿಯೇ ಬರೆಯಬೇಕು. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಕೂಡ ಗಮನ ಹರಿಸಿ ಈ ತಾರತಮ್ಯವನ್ನು ಆದಷ್ಟು ಬೇಗ ಸರಿಪಡಿಸಬೇಕು.

ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ಸಿಎಎ ಬಗೆಗಿನ ತಪ್ಪು ಕಲ್ಪನೆ ನಿವಾರಣೆ ಆಗಲಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ವಿದ್ಯುತ್‌ ದರ ಇಳಿಕೆ ಶ್ಲಾಘನೀಯ ಕ್ರಮ

ಎಸ್ಕಾಂಗಳ ಬೇಡಿಕೆಯಂತೆ ವಿದ್ಯುತ್‌ ದರ ಏರಿಕೆಯಾಗಲಿದೆ, ಎಲ್ಲರಿಗೂ ಶಾಕ್‌ ಹೊಡೆಯಲಿದೆ ಎಂದೇ ಮಾತನಾಡಿಕೊಳ್ಳಲಾಗುತ್ತಿತ್ತು. ಆದರೆ, ಆಯೋಗ ಮಾತ್ರ ವಾಣಿಜ್ಯ, ಗೃಹಬಳಕೆ ವಿದ್ಯುತ್‌ ಬಳಕೆದಾರರಿಗೆ ಭಾರಿ ಅಚ್ಚರಿ ನೀಡಿದೆ.

VISTARANEWS.COM


on

Electricity Bil
Koo

ಸಿಎಂ ಸಿದ್ದರಾಮಯ್ಯ ಸರ್ಕಾರ ರಾಜ್ಯದ ಜನತೆಗೆ ಸಿಹಿ ಸುದ್ದಿ ನೀಡಿದೆ. ರಾಜ್ಯ ವಿದ್ಯುತ್‌ ನಿಯಂತ್ರಣ ಆಯೋಗ (Karnataka Electricity regulatory Commission) ವಿದ್ಯುತ್‌ ದರವನ್ನು ಗಣನೀಯ ಪ್ರಮಾಣದಲ್ಲಿ ಇಳಿಸಿದೆ. ಬುಧವಾರ ಸಂಜೆ ವೇಳೆ ವಿದ್ಯುತ್‌ ದರ ಪರಿಷ್ಕರಣೆ ಘೋಷಣೆಯಾಗಿದೆ. ಎಸ್ಕಾಂಗಳ ಬೇಡಿಕೆಯಂತೆ ವಿದ್ಯುತ್‌ ದರ ಏರಿಕೆಯಾಗಲಿದೆ, ಎಲ್ಲರಿಗೂ ಶಾಕ್‌ ಹೊಡೆಯಲಿದೆ ಎಂದೇ ಮಾತನಾಡಿಕೊಳ್ಳಲಾಗುತ್ತಿತ್ತು. ಆದರೆ, ಆಯೋಗ ಮಾತ್ರ ವಾಣಿಜ್ಯ, ಗೃಹಬಳಕೆ ವಿದ್ಯುತ್‌ ಬಳಕೆದಾರರಿಗೆ ಭಾರಿ ಸರ್‌ಪ್ರೈಸ್‌ ನೀಡಿದೆ. ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯ ಸರ್ಕಾರ ದಿವಾಳಿ ಎದ್ದಿದೆ ಎಂಬ ಆರೋಪ, ಗುಲ್ಲುಗಳ ನಡುವೆಯೇ ಇದೊಂದು ಸಿಹಿಯಾದ ಶಾಕ್.‌ ಪರಿಷ್ಕೃತ ದರ ಮಾರ್ಚ್ 1ರಿಂದ ಅನ್ವಯವಾಗಲಿದೆ. ಕಳೆದ ಹಣಕಾಸು ವರ್ಷದಲ್ಲಿ ಎಸ್ಕಾಂಗಳಿಗೆ 259 ಕೋಟಿ ರೂ.‌ ಲಾಭವಾಗಿದೆ. ಇದರ ಲಾಭವನ್ನು ಬಳಕೆದಾರರಿಗೆ ನೀಡುವ ಉದ್ದೇಶದಿಂದ ದರವನ್ನು ಇಳಿಸಲಾಗಿದೆ ಎಂದು ಕೆಇಆರ್‌ಸಿ ಹೇಳಿದೆ. ಅಪರೂಪದಲ್ಲಿ ಅಪರೂಪವಾಗಿ ನಡೆಯುವ ಈ ಇಳಿಕೆಯ ಲಾಭವನ್ನು ಗೃಹ ಬಳಕೆದಾರರು ಮಾತ್ರವಲ್ಲ, ವಾಣಿಜ್ಯ, ಕೈಗಾರಿಕೆ, ರೈತರು ಎಲ್ಲರಿಗೂ ನೀಡಲಾಗಿದೆ. ಇದೊಂದು ಶ್ಲಾಘನೀಯ ಕ್ರಮ.

ಮುಖ್ಯವಾಗಿ ಗೃಹಬಳಕೆ ವಿದ್ಯುತ್ ಬಳಕೆದಾರರಿಗೆ 100 ಯೂನಿಟ್‌ಗಳಿಗಿಂತ ಹೆಚ್ಚಿನ ಯೂನಿಟ್‌ಗೆ 1 ರೂಪಾಯಿ 10 ಪೈಸೆ ಇಳಿಕೆ. ಇದರ ಲಾಭ 100 ಯುನಿಟ್‌ಗಿಂತ ಹೆಚ್ಚು ವಿದ್ಯುತ್‌ ಬಳಸುವವರಿಗೆ ಸಿಗಲಿದೆ. ವಾಣಿಜ್ಯ ಬಳಕೆದಾರರಿಗೆ ಒಂದು ಯುನಿಟ್‌ ವಿದ್ಯುತ್‌ಗೆ 1 ರೂಪಾಯಿ 25 ಪೈಸೆ ಇಳಿಕೆ. ಕೈಗಾರಿಕೆಗಳಿಗೆ ಬಳಸುವ ವಿದ್ಯುತ್‌ ದರದಲ್ಲಿ ಯುನಿಟ್‌ಗೆ 50 ಪೈಸೆ ಇಳಿಕೆ ಮಾಡಲಾಗಿದೆ. ಆಸ್ಪತ್ರೆ ಹಾಗು ಶೈಕ್ಷಣಿಕ ಸಂಸ್ಥೆಗಳಲ್ಲಿ ಬಳಸುವ ವಿದ್ಯುತ್‌ ದರ ಒಂದು ಯುನಿಟ್‌ಗೆ 40 ಪೈಸೆ ಇಳಿಕೆ. ಖಾಸಗಿ ಆಸ್ಪತ್ರೆಗಳು ಹಾಗು ಖಾಸಗಿ ಶಾಲೆಗಳಿಗೆ 50 ಪೈಸೆ ಇಳಿಕೆ. ಖಾಸಗಿ ಏತ ನೀರಾವರಿ ವಿದ್ಯುತ್‌ ಬಳಕೆದಾರರಿಗೆ ಗರಿಷ್ಠ ಲಾಭ ನೀಡಲಾಗಿದ್ದು, ಒಂದು ಯುನಿಟ್‌ಗೆ 2 ರೂಪಾಯಿ ಇಳಿಕೆ ಮಾಡಲಾಗಿದೆ. ಅಪಾರ್ಟ್‌ಮೆಂಟ್‌ಗಳಿಗೆ ಡಿಮ್ಯಾಂಡ್‌ ಚಾರ್ಜಸ್‌ನಲ್ಲಿ 10 ರೂ. ಇಳಿಕೆ ಪ್ರಕಟಿಸಲಾಗಿದೆ. ಇನ್ನು ಗೃಹ ಜ್ಯೋತಿ (Gruha Jyothi) ಉಚಿತ ವಿದ್ಯುತ್‌ ಬಳಕೆದಾರರಿಗೆ ಇದರ ಹೊರೆ ತಟ್ಟುವುದಿಲ್ಲ. ಯಾಕೆಂದರೆ, ಗೃಹಜ್ಯೋತಿಗೆ ಇರುವ ಷರತ್ತುಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. 200 ಯೂನಿಟ್‌ ವರೆಗೆ ವಿದ್ಯುತ್‌ ಬಳಸುವವರು ಬಿಲ್‌ ಕಟ್ಟಬೇಕಿಲ್ಲ. 200 ಯುನಿಟ್‌ಗಿಂತ ಹೆಚ್ಚು ವಿದ್ಯುತ್‌ ಬಳಸುವವರಿಗೆ ಬಿಲ್‌ ಬರುತ್ತದೆ.

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ನಿವೃತ್ತ ಐಎಎಸ್‌ ಜಿ. ಗುರುಚರಣ್‌ ಅವರ ಏಕಸದಸ್ಯ ಆಯೋಗವೊಂದನ್ನು ರಚಿಸಲಾಗಿದ್ದು, ಇದು ಎಸ್ಕಾಂಗಳ ಸುಧಾರಣೆಯ ಬಗ್ಗೆ ವರದಿಯೊಂದನ್ನು ನೀಡಿತ್ತು. ಇದರಲ್ಲಿ ಕರ್ನಾಟಕದ ಇಂಧನ ವಲಯದ ಸಾಮರ್ಥ್ಯಗಳನ್ನು ಎತ್ತಿ ತೋರಿಸಿತ್ತು. ಇಂಧನ ಉತ್ಪಾದನೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ರಾಜ್ಯವು ನಾಯಕತ್ವ ವಹಿಸಿದೆ. ಕರ್ನಾಟಕವು ನವೀಕರಿಸಬಹುದಾದ, ಹೆಚ್ಚುವರಿ ವಿದ್ಯುತ್ ಹೊಂದಿರುವ ರಾಜ್ಯವಾಗಿದೆ. ಆಧುನಿಕ ಗ್ರಿಡ್ ಸೌಲಭ್ಯಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಕೋಟ್ಯಂತರ ಗ್ರಾಹಕರಿಗೆ ವಿವಿಧ ಸೇವೆಗಳನ್ನು ಒದಗಿಸಿದೆ. ಆದರೆ ರಾಜ್ಯದ ಪೂರ್ಣ ಸಾಮರ್ಥ್ಯವನ್ನು ಇನ್ನೂ ಶೋಧಿಸಬೇಕಿದೆ. ಇನ್ನಷ್ಟು ಪರಿಣಾಮಕಾರಿ, ಸುಸ್ಥಿರವಾಗಿ ಬೆಳೆಯಬಲ್ಲ ಸಾಧ್ಯತೆಯನ್ನು ರಾಜ್ಯದ ಇಂಧನ ವಲಯ ಹೊಂದಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿತ್ತು. ಅದು ನಿಜವಾದುದು ಎಂದು ಈ ಬೆಳವಣಿಗೆ ತೋರಿಸಿದೆ.

ಇದನ್ನೂ ಓದಿ: Biggest Surprise! : ಹೀಗೂ ಉಂಟೆ! ರಾಜ್ಯದಲ್ಲಿ ವಿದ್ಯುತ್‌ ದರ ಭಾರಿ ಇಳಿಕೆ! ನಿಜಕ್ಕೂ ಶಾಕ್!‌

ವಿದ್ಯುತ್‌ ಬೆಲೆ ಮತ್ತು ವಿದ್ಯುತ್ತಿನ ಲಭ್ಯತೆ ರಾಜ್ಯದ ಆರ್ಥಿಕ ಬೆಳವಣಿಗೆಯಲ್ಲಿ ಮುಖ್ಯವಾದುದು. ವಿದ್ಯುತ್‌ ಬೆಲೆ ಏರಿದಂತೆಲ್ಲ ಕೈಗಾರಿಕೆಗಳ, ಕೃಷಿಯ ಉತ್ಪಾದನಾ ವೆಚ್ಚ ಹೆಚ್ಚಾಗುತ್ತದೆ. ಇದರಿಂದ ಕೈಗಾರಿಕೆ ಹಾಗೂ ಕೃಷಿ ಉತ್ಪನ್ನಗಳು ಗ್ರಾಹಕನವರೆಗೆ ಬರುವಾಗ ಅದರ ಬೆಲೆ ವರ್ಧಿಸುತ್ತದೆ. ಪೆಟ್ರೋಲ್‌ ಬೆಲೆ ಹೇಗೋ ಹಾಗೇ ವಿದ್ಯುತ್‌ ಬೆಲೆ ಹೆಚ್ಚಳವೂ ಹೀಗೆ ಹಣದುಬ್ಬರಕ್ಕೆ ಕಾರಣವಾಗುತ್ತದೆ. ಇದನ್ನು ತಪ್ಪಿಸಲು ಸಕಾರಣವಾದ ವಿದ್ಯುತ್‌ ಬೆಲೆಯನ್ನು ಉಳಿಸಿಕೊಳ್ಳುವುದೊಂದೇ ದಾರಿ. ಗೃಹಜ್ಯೋತಿ ಯೋಜನೆಯ ಮೂಲಕ ಮಧ್ಯಮ ವರ್ಗದವರ ಒಂದು ಹೊರೆಯನ್ನು ಸರ್ಕಾರ ಇಳಿಸಿದೆ. ವಿದ್ಯುತ್‌ ದರ ಇಳಿಕೆಯ ಮೂಲಕ ಅದನ್ನು ಇನ್ನಷ್ಟು ಹಗುರವಾಗಿಸಿದೆ. ಈ ಶ್ಲಾಘನೀಯ ಕ್ರಮದಿಂದ ಉಂಟಾಗುವ ಉಳಿಕೆಯನ್ನು ಮಧ್ಯಮ, ಕೆಳಮಧ್ಯಮ ವರ್ಗದವರು ಇತರ ವೆಚ್ಚಗಳನ್ನು ಸರಿದೂಗಿಸಲು ಬಳಸಬಹುದಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರಮುಖ ಸುದ್ದಿ

ವಿಸ್ತಾರ ಸಂಪಾದಕೀಯ: ಸಮಗ್ರ ರೈಲ್ವೇ ಅಭಿವೃದ್ಧಿಗೆ ಪ್ರಧಾನಿ ಸೋಪಾನ

ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ಇಲಾಖೆಗಳಲ್ಲೂ ಬದಲಾವಣೆ, ಹೊಸತನ ತರಲು ಮುಂದಾಗಿದ್ದಾರೆ. ಹೆದ್ದಾರಿ ಸಾರಿಗೆಯಲ್ಲಿ ನಿತಿನ್‌ ಗಡ್ಕರಿ ಅವರ ನೇತೃತ್ವದಲ್ಲಿ ಆಗಿರುವ ಸಾಧನೆಯೇ ಇದಕ್ಕೆ ಸಾಕ್ಷಿ. ಇದೇ ರೀತಿ ರೈಲ್ವೆಯಲ್ಲೂ ಆಗಬೇಕು.

VISTARANEWS.COM


on

Railway Project
Koo

ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು 41 ಸಾವಿರ ಕೋಟಿ ರೂ. ವೆಚ್ಚದ 2000 ರೈಲ್ವೆ ಪ್ರಾಜೆಕ್ಟ್‌ಗಳನ್ನು ದೇಶಾದ್ಯಂತ ಲೋಕಾರ್ಪಣೆ ಮಾಡಿದ್ದಾರೆ. ʼಈ ಮೊದಲು ರೈಲ್ವೆ ಇಲಾಖೆ ಎಂದರೆ ನಷ್ಟ ಎಂದು ಹೇಳಲಾಗುತ್ತಿತ್ತು. ಆದರೆ, ಈಗ ಅದೇ ರೈಲ್ವೆ ಪರಿವರ್ತನೆಯ ಬಹುದೊಡ್ಡ ಶಕ್ತಿಯಾಗಿ ಬದಲಾಗಿದೆʼ ಎಂದು ಅವರು ಹೇಳಿದ್ದು ಅಕ್ಷರಶಃ ನಿಜ. ವರ್ಚುಯಲ್ ಆಗಿ ಯೋಜನೆಗಳಿಗೆ ಚಾಲನೆ ಅವರು ನೀಡಿದ್ದಾರೆ. 27 ರಾಜ್ಯಗಳಲ್ಲಿ 300ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ 554 ರೈಲು ನಿಲ್ದಾಣಗಳ ಮರು ಅಭಿವೃದ್ಧಿಗೆ ಈ ಮೂಲಕ ಅಡಿಪಾಯ ಹಾಕಲಾಗಿದೆ. ಪ್ರಯಾಣದ ಅನುಭವವನ್ನು ಹೆಚ್ಚಿಸಲು, ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿಯಲ್ಲಿ ಇವು ನವೀಕೃತಗೊಳ್ಳಲಿವೆ. ಉತ್ತರ ಪ್ರದೇಶದ ಗೋಮತಿ ನಗರ ರೈಲು ನಿಲ್ದಾಣವನ್ನೂ ಉದ್ಘಾಟಿಸಿದ್ದಾರೆ. ಭಾರತೀಯ ರೈಲ್ವೆ ಮಾರ್ಗಗಳಲ್ಲಿ 1500 ರೋಡ್ ಓವರ್ ಬ್ರಿಡ್ಜ್‌ಗಳು/ರೋಡ್ ಅಂಡರ್ ಬ್ರಿಡ್ಜ್‌ಗಳನ್ನು ನಿರ್ಮಿಸಲೂ ಅಡಿಪಾಯ ಹಾಕಲಾಗಿದೆ. ಇದು ರೈಲ್ವೆ ಇಲಾಖೆಯ ಅಬಿವೃದ್ಧಿಯೊಂದಿಗೆ, ನೂತನ ಭಾರತದ ಅಭಿವೃದ್ಧಿಯೂ ಆಗಿದೆ.

ಇವುಗಳಲ್ಲಿ ರಾಜ್ಯದ 15 ರೈಲು ನಿಲ್ದಾಣಗಳ ಪುನರುತ್ಥಾನ, ಉನ್ನತೀಕರಣ, ಹಲವು ಸೌಕರ್ಯಗಳನ್ನು ಒದಗಿಸುವ ಯೋಜನೆಗಳು ಕೂಡ ಇವೆ. ಅಮೃತ್‌ ಭಾರತ್‌ ಸ್ಟೇಷನ್‌ ಯೋಜನೆಯಡಿ ನೈರುತ್ಯ ರೈಲ್ವೆ ಮೈಸೂರು ವಿಭಾಗದಲ್ಲಿ 367.24 ಕೋಟಿ ರೂ.ವೆಚ್ಚದ ಕಾಮಗಾರಿ ನಡೆಯಲಿದ್ದರೆ, ನೈರುತ್ಯ ರೈಲ್ವೆ ವಿಭಾಗದಲ್ಲಿ 12 ರೈಲ್ವೆ ನಿಲ್ದಾಣಗಳ ಉನ್ನತೀಕರಣ ಹಾಗೂ ರೈಲ್ವೆ ಮಾರ್ಗದಲ್ಲಿ ಕೆಳ ಸೇತುವೆ ನಿರ್ಮಾಣಕ್ಕೆ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಬೆಂಗಳೂರು ರೈಲ್ವೆ ವಲಯದಲ್ಲಿ ಕೆ.ಆರ್‌. ಪುರ, ಕೆಂಗೇರಿ, ಮಲ್ಲೇಶ್ವರ, ವೈಟ್‌ಫೀಲ್ಡ್‌, ಚನ್ನಪಟ್ಟಣ, ದೊಡ್ಡಬಳ್ಳಾಪುರ, ಮಂಡ್ಯ, ರಾಮನಗರ, ತುಮಕೂರು ಮುಂತಾದ ನಿಲ್ದಾಣಗಳು ನವೀಕರಣಗೊಳ್ಳಲಿವೆ. ಕರ್ನಾಟಕದ ಕಟ್ಟ ಕಡೆಯ ರೈಲು ನಿಲ್ದಾಣವಾದ ಚಾಮರಾಜನಗರ ರೈಲು ನಿಲ್ದಾಣದ ಅಭಿವೃದ್ಧಿಗೂ ಶಂಕುಸ್ಥಾಪನೆ ಆಗಿದೆ. ಕೊಪ್ಪಳ ತಾಲೂಕಿನ ಮುನಿರಾಬಾದ್‌, ಶಿವಮೊಗ್ಗ ರೈಲು ನಿಲ್ದಾಣ ಉನ್ನತೀಕರಣಕ್ಕೂ ಚಾಲನೆ ನೀಡಲಾಗಿದೆ.

ಕರ್ನಾಟಕದ ರೈಲ್ವೆ ವಲಯ ಸಾಕಷ್ಟು ಅಭಿವೃದ್ಧಿ ಹೊಂದಿದ ಒಂದು ವಿಭಾಗ. ಇಲ್ಲಿನ ಪ್ರಯಾಣಿಕ ರೈಲುಗಳು ಹಾಗೂ ಸರಕು ರೈಲುಗಳು ಸಾಕಷ್ಟು ಆದಾಯವನ್ನು ಕೇಂದ್ರಕ್ಕೆ ತಂದುಕೊಡುತ್ತಿವೆ. ಅದೇನೇ ಇದ್ದರೂ ರಾಜ್ಯಕ್ಕೆ ಬರುವ ಹೊಸ ಯೋಜನೆಗಳು, ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಹಣಕಾಸು ಸಮರ್ಪಕವಾಗಿ ವಿನಿಯೋಗ ಆಗಬೇಕಾದುದು ಅಗತ್ಯ. ಹೊಸ ಅನುದಾನಗಳ ಜೊತೆಗೆ ಈ ಹಿಂದಿನ ಯೋಜನೆಗಳೂ ಏನಾಗಿವೆ ಎಂಬುದನ್ನೂ ಪರಿಶೀಲಿಸಬೇಕು. ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ರೈಲು ನಿಲ್ದಾಣ ಬ್ಲೂಪ್ರಿಂಟ್ ದೇಶಕ್ಕೆ ಮಾದರಿಯಾಗಿದೆ. ಇದೇ ಮಾದರಿಯನ್ನು ದೇಶದ ಇತರ ಕಡೆಗೂ ಬಳಸಿಕೊಳ್ಳಲಾಗುವುದು. ಹಾಗೆಯೇ ರೈಲ್ವೆ ಯೋಜನೆಗಳಿಗೆ ಸಂಬಂಧಿಸಿದಂತೆ ಭೂ ಸ್ವಾಧೀನ ಸೇರಿ ಎಲ್ಲ ಹಂತಗಳಲ್ಲಿ ರಾಜ್ಯ ಸರ್ಕಾರ ಸಾಕಷ್ಟು ನೆರವು ನೀಡುತ್ತಿದೆ ಎಂದು ಈ ಹಿಂದೆ ಕೇಂದ್ರದ ರೈಲ್ವೆ ಸಚಿವರು ತಿಳಿಸಿದ್ದರು. ರೈಲ್ವೆಯ ಆದಾಯ ಕೇಂದ್ರಕ್ಕೆ ಸೇರಿದ್ದಾದರೂ ಅದು ಬಳಕೆಯ ರೂಪದಲ್ಲಿ ರಾಜ್ಯಗಳಿಗೆ ಗರಿಷ್ಠ ಉಪಕಾರಿಯಾಗಿದೆ. ಈ ಹಣದುಬ್ಬರದ ಕಾಲದಲ್ಲೂ ಕನಿಷ್ಠ ಪ್ರಯಾಣಿಕ ಹಾಗೂ ಸರಕು ಸಾಗಣೆ ಶುಲ್ಕವನ್ನು ಅದು ಹೊಂದಿರುವುದರಿಂದ, ಸಾರ್ವಜನಿಕ ಸೇವೆಯ ಮಾಧ್ಯಮವೂ ಆಗಿದೆ. ಹೀಗಾಗಿ ಕೇಂದ್ರ- ರಾಜ್ಯಗಳೆರಡೂ ಸಮನ್ವಯದಿಂದ ಈ ಇಲಾಖೆಯನ್ನು ನೋಡಿಕೊಳ್ಳುವುದರಿಂದ ಹೆಚ್ಚಿನ ಲಾಭವಿದೆ.

ಇದನ್ನೂ ಓದಿ : ರಾವಿ ನದಿಗೆ ಭಾರತದ ಅಣೆಕಟ್ಟು ದಿಟ್ಟ ಹೆಜ್ಜೆ

ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ಇಲಾಖೆಗಳಲ್ಲೂ ಬದಲಾವಣೆ, ಹೊಸತನ ತರಲು ಮುಂದಾಗಿದ್ದಾರೆ. ಹೆದ್ದಾರಿ ಸಾರಿಗೆಯಲ್ಲಿ ನಿತಿನ್‌ ಗಡ್ಕರಿ ಅವರ ನೇತೃತ್ವದಲ್ಲಿ ಆಗಿರುವ ಸಾಧನೆಯೇ ಇದಕ್ಕೆ ಸಾಕ್ಷಿ. ಇದೇ ರೀತಿ ರೈಲ್ವೆಯಲ್ಲೂ ಆಗಬೇಕು. ಕರ್ನಾಟಕ ಹೇಗೆ ಜಿಎಸ್‌ಟಿ ಸಂಗ್ರಹದಲ್ಲಿ ಮುಂದಿದೆಯೋ ಹಾಗೆಯೇ ರೈಲ್ವೇ ಆದಾಯದಲ್ಲೂ ಮುಂದಿದೆ. ಕಳೆದ ವರ್ಷ ಕರ್ನಾಟಕವನ್ನು ಒಳಗೊಂಡ ನೈರುತ್ಯ ರೈಲ್ವೇ ವಲಯವು 6214 ಕೋಟಿ ರೂ.ಗಳ ವ್ಯವಹಾರ ಮಾಡಿದೆ. ಇಷ್ಟು ಶ್ರೀಮಂತವಾಗಿರುವ ವಲಯವನ್ನು ಅಷ್ಟೇ ಕಾಳಜಿಯಿಂದ ನೋಡಿಕೊಳ್ಳಬೇಕಿರುವುದೂ ಮುಖ್ಯ. ರಾಜ್ಯದ ರೈಲ್ವೇ ಮಾರ್ಗಗಳ ವಿದ್ಯುದೀಕರಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ವಿವಿಧ ತಜ್ಞತೆಗಳು, ಲೊಕೊಪೈಲಟ್‌ಗಳ ತರಬೇತಿ, ಹಳಿ ದ್ವಿಗುಣ ಕಾಮಗಾರಿಗಳು, ಬ್ರಾಡ್‌ಗೇಜ್‌ ಕಾಮಗಾರಿಗಳು, ಕೆಲವು ಕಡೆ ಹೊಸ ರೈಲುಗಳ ಬೇಡಿಕೆ ಇದೆ. ಇವೆಲ್ಲವನ್ನೂ ಗಮನಿಸಿ ಸಮಗ್ರವಾದ ಸ್ವರೂಪದಲ್ಲಿ ರೈಲ್ವೇ ಇಲಾಖೆಯ ಅಭಿವೃದ್ಧಿಯಾಗಬೇಕು. ಆಗ ದೇಶದ ಬಹುತೇಕ ಮಧ್ಯಮ, ಕೆಳಮಧ್ಯಮ ವರ್ಗದವರು ನೆಚ್ಚಿರುವ ಈ ಸಾರಿಗೆಗೆ ನ್ಯಾಯ ಸಲ್ಲುತ್ತದೆ. ಆದಾಯವೂ ಇನ್ನಷ್ಟು ಹೆಚ್ಚುತ್ತದೆ.

Continue Reading

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ರಾವಿ ನದಿಗೆ ಭಾರತದ ಅಣೆಕಟ್ಟು ದಿಟ್ಟ ಹೆಜ್ಜೆ

Vistara Editorial: 1960ರಲ್ಲಿ ಸಿಂಧೂ ನದಿ ನೀರು ಹಂಚಿಕೆ ಕುರಿತು ಭಾರತ ಹಾಗೂ ಪಾಕಿಸ್ತಾನವು ಒಪ್ಪಂದ ಮಾಡಿಕೊಂಡಿವೆ. ಭಾರತದ ಹಲವು ನದಿಗಳ ನೀರನ್ನು ಪಾಕಿಸ್ತಾನ ಬಳಸುತ್ತಿದ್ದು ಅದಕ್ಕೀಗ ಕಡಿವಾಣ ಹಾಕಲಾಗುತ್ತಿದೆ. ಅದರ ಭಾಗವಾಗಿಯೇ ರಾವಿ ನದಿ ಅಣೆಕಟ್ಟು ನಿರ್ಮಾಣಗೊಂಡಿದೆ.

VISTARANEWS.COM


on

Vistara Editorial, India built dam to Ravi River, Water crisis for Pakistan
Koo

ಮೂರು ದಶಕಗಳಿಂದಲೂ ನನೆಗುದಿಗೆ ಬಿದ್ದಿದ್ದ, ಶಾಹ್‌ಪುರ ಕಂಡಿ ಅಣೆಕಟ್ಟು (Shahpur Kandi dam) ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ರಾವಿ ನದಿಯಿಂದ (Ravi River Water) ಪಾಕಿಸ್ತಾನಕ್ಕೆ ಹರಿಯುತ್ತಿದ್ದ ನೀರನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಇದರಿಂದ ಪಾಕಿಸ್ತಾನದ ಕೃಷಿಗೆ ಭಾರಿ ಪೆಟ್ಟು ಬೀಳುವ ಜತೆಗೆ ಭಾರತದ ಲಕ್ಷಾಂತರ ರೈತರಿಗೆ ಈ ನದಿಯ ನೀರಿನಿಂದ ಹೆಚ್ಚಿನ ಪ್ರಮಾಣದಲ್ಲಿ ಅನುಕೂಲವಾಗಲಿದೆ. ಇಚ್ಛಾಶಕ್ತಿ ಪ್ರದರ್ಶಿಸಿ ಅಣೆಕಟ್ಟೆ ನಿರ್ಮಾಣ ಮಾಡಿದ ಕೇಂದ್ರ ಸರ್ಕಾರದ ಕ್ರಮ ಅಭಿನಂದನಾರ್ಹವಾಗಿದೆ(Vistara Editorial).

ಜಮ್ಮು ಗಡಿ ಭಾಗದಲ್ಲಿ ಶಾಹ್‌ಪುರ ಕಂಡಿ ಅಣೆಕಟ್ಟೆಯಿಂದ ಜಮ್ಮು-ಕಾಶ್ಮೀರ ಹಾಗೂ ಪಂಜಾಬ್‌ನ 32 ಸಾವಿರ ಹೆಕ್ಟೇರ್‌ ಜಮೀನುಗಳಿಗೆ ನೀರು ಹರಿಸಬಹುದಾಗಿದೆ. ಸುಮಾರು 1,150 ಕ್ಯುಸೆಕ್‌ ನೀರು ಉಳಿತಾಯವಾಗುವುದರಿಂದ ಲಕ್ಷಾಂತರ ರೈತರು ಉತ್ತಮ ಬೆಳೆ ಬೆಳೆಯಲು ಸಹಕಾರಿಯಾಗಲಿದೆ. ಅದರಲ್ಲೂ, ಜಮ್ಮು-ಕಾಶ್ಮೀರದ ಕಠುವಾ, ಸಾಂಬಾ ರೈತರು ಅಣೆಕಟ್ಟಿನ ಲಾಭ ಪಡೆಯಲಿದ್ದಾರೆ. ರಾವಿ ನದಿಗೆ ಅಡ್ಡಲಾಗಿ ಅಣೆಕಟ್ಟೆ ಕಟ್ಟಬೇಕು ಎಂಬ ಯೋಜನೆಯು ಹಲವು ಕಾರಣಗಳಿಂದಾಗಿ ನನೆಗುದಿಗೆ ಬಿದ್ದಿತ್ತು. 1995ರಲ್ಲಿ ಪಿ.ವಿ. ನರಸಿಂಹರಾವ್‌ ಅವರು ಪ್ರಧಾನಿಯಾಗಿದ್ದಾಗ ಅಣೆಕಟ್ಟೆ ಕಟ್ಟುವ ಯೋಜನೆ ರೂಪಿಸಲಾಗಿತ್ತು. ಆದರೆ, ಹತ್ತಾರು ಅಡೆತಡೆಗಳಿಂದಾಗಿ ಯೋಜನೆಯು ನನೆಗುದಿಗೆ ಬಿದ್ದಿತ್ತು. 2018ರಲ್ಲಿ ಅಣೆಕಟ್ಟೆ ನಿರ್ಮಾಣ ಕಾಮಗಾರಿಯನ್ನು ಆರಂಭಿಸಲಾಯಿತು ಮತ್ತು ಆರು ವರ್ಷಗಳಲ್ಲಿಯೇ ಕಾಮಗಾರಿ ಪೂರ್ಣಗೊಂಡಿದೆ. ಈಗ ನದಿಯ ನೀರು ಪಾಕಿಸ್ತಾನಕ್ಕೆ ಹರಿಯದೆ, ಭಾರತದ ರೈತರು ಗದ್ದೆಗಳಿಗೆ ಹರಿಯುತ್ತಿದೆ.

ಅಣೆಕಟ್ಟೆಯು ರೈತರಿಗೆ ಅನುಕೂಲವಾಗುವ ಜತೆಗೆ ಜಲವಿದ್ಯುತ್‌ ಉತ್ಪಾದನೆ ಯೋಜನೆಯ ಜಾರಿಗೂ ಭಾರಿ ಅನುಕೂಲವಾಗಲಿದೆ. ಇದಕ್ಕೂ ಮೊದಲು ರಾವಿ ನದಿಯ ನೀರು ಹಳೆಯ ಲಖನ್‌ಪುರ ಡ್ಯಾಮ್‌ನಿಂದ ಪಾಕಿಸ್ತಾನದ ಕಡೆ ಹರಿಯುತ್ತಿತ್ತು. ಈಗ ಮಾಧೋಪುರ ಕಾಲುವೆ ಮೂಲಕ ಜಮ್ಮು-ಕಾಶ್ಮೀರ ಹಾಗೂ ಪಂಜಾಬ್‌ ಜಮೀನುಗಳಿಗೆ ನೀರು ಹರಿಸಲಾಗುತ್ತದೆ. 1960ರಲ್ಲಿ ಸಿಂಧೂ ನದಿ ನೀರು ಹಂಚಿಕೆ ಕುರಿತು ಭಾರತ ಹಾಗೂ ಪಾಕಿಸ್ತಾನವು ಒಪ್ಪಂದ ಮಾಡಿಕೊಂಡಿವೆ. ಅದರಂತೆ, ಭಾರತದ ಹಲವು ನದಿಗಳ ನೀರನ್ನು ಪಾಕಿಸ್ತಾನ ಬಳಸುತ್ತಿದೆ. ಈ ಹಿಂದಿನ ಆಡಳಿತದಲ್ಲಿ ತೋರಿದ ನಿರ್ಲಕ್ಷ್ಯ ಮತ್ತು ಪಾಕಿಸ್ತಾನ ಜತೆಗಿನ ಸಂಬಂಧ ದೃಷ್ಟಿಯಿಂದಾಗಿ ಒಪ್ಪಂದದ ಅನ್ವಯ ದೊರೆತ ನೀರನ್ನು ಭಾರತ ಬಳಸುತ್ತಿರಲಿಲ್ಲ. ಆದರೆ, ಈಗ ನ್ಯಾಯಯುತವಾಗಿ ನಮಗೆ ದೊರೆತ ನೀರನ್ನು ಬಳಸಿಕೊಳ್ಳುವ ಪ್ರಯತ್ನದಲ್ಲಿ ಭಾರತವು ಯಶಸ್ವಿಯಾಗಿದೆ. ಆ ಮೂಲಕ, ಪಾಕಿಸ್ತಾನಕ್ಕೆ ಸ್ಪಷ್ಟ ಎಚ್ಚರಿಕೆಯನ್ನೂ ರವಾನಿಸಿದೆ. ನೆರೆಯ ರಾಷ್ಟ್ರಕ್ಕೆ ಯಾವೆಲ್ಲ ಹಂತದಲ್ಲಿ, ಯಾವೆಲ್ಲ ವಲಯದಲ್ಲಿ ಪೆಟ್ಟು ನೀಡಲು ಸಾಧ್ಯವೋ ಅಲ್ಲೆಲ್ಲ ಭಾರತವು ಯಶಸ್ಸು ಸಾಧಿಸುತ್ತಿದೆ. ಇದು ಭಾರತೀಯರಿಗೆ ಹೆಮ್ಮೆ ವಿಷಯವಾಗಿದೆ.

ಭಾರತ ಮತ್ತು ಪಾಕಿಸ್ತಾನಗಳೆರಡೂ ಏಕಕಾಲಕ್ಕೆ ಸ್ವಾತಂತ್ರ್ಯವನ್ನು ಪಡೆದುಕೊಂಡು, 75 ವಸಂತಗಳನ್ನು ಕಂಡಿವೆ. ಭಾರತವು ಈಗ ಜಾಗತಿಕ ಮಟ್ಟದಲ್ಲಿ ಯಾವ ಸ್ಥಾನದಲ್ಲಿದೆ ಮತ್ತು ಪಾಕಿಸ್ತಾನ ಯಾವ ಸ್ಥಾನದಲಿಲ್ಲ ಎಂದು ನೋಡಿದರೆ, ಉಭಯ ರಾಷ್ಟ್ರಗಳ ಮಧ್ಯೆ ಅಜಗಜಾಂತರವಿದೆ. ಯಾವ ವಿಷಯದಲ್ಲೂ, ಯಾವ ಕ್ಷೇತ್ರದಲ್ಲೂ ಇಂದು ಪಾಕಿಸ್ತಾನವು ಭಾರತದ ಸನಿಹದಲ್ಲೂ ಇಲ್ಲ. ಪ್ರಗತಿಯನ್ನೇ ಮುಖ್ಯ ಧ್ಯೇಯವಾಗಿಸಿಕೊಂಡು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರೀತಿ-ವಿಶ್ವಾಸಗಳಿಂದ ಮುನ್ನಡೆದ ಪರಿಣಾಮ ಇಂದು ಭಾರತವು ಜಗತ್ತಿನ ಅಗ್ರಮಾನ್ಯ ರಾಷ್ಟ್ರವಾಗಿ ಬೆಳೆಯುತ್ತಿದೆ. ಆರ್ಥಿಕವಾಗಿ ಐದನೇ ಅತಿದೊಡ್ಡ ರಾಷ್ಟ್ರವಾಗಿ ಉದಯಿಸಿದೆ. ಎಲ್ಲ ಕ್ಷೇತ್ರಗಳಲ್ಲಿ ಇಂದು ಭಾರತೀಯರ ಪಾರುಪತ್ಯವಿದೆ. ಆದರೆ, ಈ ವಿಷಯದಲ್ಲಿ ಪಾಕಿಸ್ತಾನವು ಬಹಳ ಹಿಂದಿದೆ.

ದ್ವೇಷವನ್ನು ತುಂಬಿಕೊಂಡು, ಧಾರ್ಮಿಕ ಸಂಕುಚಿತವನ್ನೇ ಮುಂದೆ ಮಾಡಿಕೊಂಡ ಬಂದ ಪಾಕಿಸ್ತಾನವು ಆರ್ಥಿಕ ಸಂಕಟದ ಸ್ಥಿತಿಯಲ್ಲಿದೆ. ಅಲ್ಲಿಯ ಜನರ ಪರಿಸ್ಥಿತಿ ಈಗ ಚಿಂತಾಜನಕವಾಗಿದೆ. ಹೊಟ್ಟಿಗೆ ಹಿಟ್ಟಿರದಿದ್ದರೂ ಜುಟ್ಟಿಗೆ ಮಲ್ಲಿಗೆ ಎನ್ನುವಂತೆ, ಹಸಿದ ತನ್ನ ಜನರ ಹೊಟ್ಟೆಯನ್ನು ತುಂಬಿಸುವ ಬದಲು, ಭಾರತದ ಜತೆಗೆ ಶಸ್ತ್ರಾಸ್ತ್ರ ಪೈಪೋಟಿಗೆ ಇಳಿದು ಪಾಕಿಸ್ತಾನ ಪಾತಾಳಕ್ಕೆ ಕುಸಿದಿದೆ. ಭಾರತದ ವಿರುದ್ಧ ಉಗ್ರರಿಗೆ ನೆಲೆ ಒದಗಿಸಿ, ಈಗ ಅದರ ದುಷ್ಪರಿಣಾಮವನ್ನು ಎದುರಿಸುತ್ತಿದೆ. ಸ್ನೇಹಿತರನ್ನು ಬದಲಿಸಬಹುದು ಹೊರತ ನೆರೆ ಹೊರೆಯವರೆನ್ನಲ್ಲ ಎಂಬ ಮಾತಿನಂತೆ ಪಾಕಿಸ್ತಾನವು ಭಾರತದ ಜತೆಗೆ ಸ್ನೇಹದಿಂದಲೇ ವರ್ತಿಸಿದ್ದರೆ, ನದಿ ನೀರು ಹಂಚಿಕೆ, ಕಾಶ್ಮೀರ ವಿಷಯ ಸೇರಿದಂತೆ ಎಲ್ಲ ಸಮಸ್ಯೆಗಳೂ ಬಗೆಹರಿಯುತ್ತಿದ್ದವು. ಆದರೆ, ಪಾಕಿಸ್ತಾನ ಆರಿಸಿಕೊಂಡ ಹಾದಿಯು ಭಾರತದ ಹಾದಿಗಿಂತಲೂ ಭಿನ್ನ ಮತ್ತು ವಿಧ್ವಂಸಕಕಾರಿಯಾಗಿತ್ತು. ಆದರೆ, ಭಾರತ ಮಾತ್ರ ಪ್ರಜಾಸತ್ತಾತ್ಮಕ ಹಾದಿಯಲ್ಲಿ ನಡೆದ ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವಲ್ಲಿ ಈಗ ಯಶಸ್ವಿಯಾಗುತ್ತಿದೆ. ತನ್ನ ಹಕ್ಕುಗಳನ್ನು ಯಾರ ಮುಲಾಜಿಲ್ಲದೇ ಪಡೆದುಕೊಳ್ಳುತ್ತಿದೆ. ಇದಕ್ಕೆ ರಾವಿ ನದಿಗೆ ಕಟ್ಟಲಾದ ಅಣೆಕಟ್ಟೆ ಹೊಸ ಸಾಕ್ಷಿಯಾಗಿದೆ. ಪಾಕಿಸ್ತಾನವು ಇನ್ನಾದರೂ ಭಾರತದ ಶಕ್ತಿಯನ್ನು ಅರಿತಕೊಂಡು ಮುನ್ನಡೆಯಲಿ. ಇಲ್ಲದಿದ್ದರೆ, ಅದಕ್ಕೆ ಎಲ್ಲ ನಿಟ್ಟಿನಿಂದಲೂ ಸೋಲೇ ಸಿಗಲಿದೆ.

ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ಬೆಂಗಳೂರಿನ ಜಲ ದಾಹ ನೀಗಿಸಿ

Continue Reading

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಬೆಂಗಳೂರಿನ ಜಲ ದಾಹ ನೀಗಿಸಿ

ನೀರಿಗಾಗಿ ಬೆಂಗಳೂರು ಚಡಪಡಿಸುತ್ತಿದೆ. ಟ್ಯಾಂಕರ್‌ ನೀರಿಗೆ ಏಕರೂಪಿ ದರ ನಿಗದಿಪಡಿಸುವುದು, ಕುಡಿಯುವ ನೀರಿನ ಕೊರತೆ ನೀಗಿಸುವ ಇತರ ಸುಸ್ಥಿರ ಕ್ರಮಗಳನ್ನು ಕೈಗೊಳ್ಳುವುದು ಈಗ ಸರ್ಕಾರದಿಂದ ತುರ್ತಾಗಿ ಆಗಬೇಕಿದೆ.

VISTARANEWS.COM


on

Water Service
Koo

ಬೇಸಿಗೆ ಆರಂಭಕ್ಕೂ ಮುನ್ನವೇ ರಾಜಧಾನಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ (Bengaluru Water Crisis) ಉಂಟಾಗಿದೆ. ಈ ಸಂದರ್ಭವನ್ನೇ ಬಂಡವಾಳ ಮಾಡಿಕೊಂಡ ಕೆಲವರು ಟ್ಯಾಂಕರ್‌ ನೀರಿನ ದರ ಹೆಚ್ಚಳ ಮಾಡಿರುವುದರಿಂದ ಜನ ಸಾಮಾನ್ಯರು ಪರದಾಡುವಂತಾಗಿದೆ. ನಗರದಲ್ಲಿ ಕೆಲವೆಡೆ 6000 ಲೀ. ಟ್ಯಾಂಕರ್‌ ನೀರನ್ನು 2500 ರೂ.ವರೆಗೆ ಕೊಟ್ಟು ಖರೀದಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಇದಕ್ಕೆ ಅಸಮಾಧಾನ ಹೊರಹಾಕಿರುವ ವಿಪಕ್ಷ ನಾಯಕ ಆರ್‌. ಅಶೋಕ್‌ ಅವರು, ಈ ವಾಟರ್‌ ಮಾಫಿಯಾಗೆ ರಾಜ್ಯ ಸರ್ಕಾರ ಕಡಿವಾಣ ಹಾಕಬೇಕು, ಜತೆಗೆ ಸಮರ್ಪಕ ನೀರು ಪೂರೈಸುವ ಮೂಲಕ ನೀರಿನ ಗ್ಯಾರಂಟಿ ನೀಡುವಂತೆ ಒತ್ತಾಯಿಸಿದ್ದಾರೆ

ಇನ್ನೂ ಈ ವರ್ಷದ ಬೇಸಿಗೆ ಆರಂಭಕ್ಕೆ ಮುನ್ನವೇ ಬೆಂಗಳೂರು ನಗರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಬರ ಪರಿಸ್ಥಿತಿಯಿಂದ ಬೆಂಗಳೂರು ನಗರದಲ್ಲಿ ಉಂಟಾಗಬಹುದಾದ ನೀರಿನ ಸಮಸ್ಯೆ ಬಗ್ಗೆ ಮೊದಲೇ ಅಂದಾಜಿಸಿ ಹೆಚ್ಚುವರಿ ಕೊಳವೆ ಬಾವಿಗಳನ್ನು ಕೊರೆಸಲು, ಹಳೇ ಕೊಳವೆ ಬಾವಿಗಳ ಮರುಪೂರಣ ಮಾಡಲು, ನೀರಿಗಾಗಿ ಪರ್ಯಾಯ ವ್ಯವಸ್ಥೆ ಹುಡುಕಲು ಕ್ರಮ ಕೈಗೊಂಡಿದ್ದರೆ ಇವತ್ತು ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಬ್ರ್ಯಾಂಡ್ ಬೆಂಗಳೂರು ಕಟ್ಟುತ್ತೇವೆ ಎಂದು ಬಾಯಿ ಮಾತಿಗೆ ಘೋಷಣೆ ಮಾಡಿದರೆ ಸಾಲದು. ಸಿಎಂ ಸಿದ್ದರಾಮಯ್ಯ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವರಾದ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಈಗಲಾದರೂ ಎಚ್ಚೆತ್ತುಕೊಂಡು ಅಧಿಕಾರಿಗಳ ಸಭೆ ಕರೆದು ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು ಎಂದು ಅಶೋಕ್‌ ಆಗ್ರಹಿಸಿದ್ದಾರೆ.

ಬೆಂಗಳೂರಿಗೆ ಕಾವೇರಿ ನೀರು ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ ಎಂದು ಜಲಮಂಡಳಿ ಹೇಳುತ್ತಿದೆ. ಆದರೆ, ಇತ್ತೀಚೆಗೆ ನೀರಿನ ಪೂರೈಕೆ ಸಾಕಷ್ಟು ಕಡಿಮೆಯಾಗಿದೆ ಎಂದು ನಗರವಾಸಿಗಳು ಆರೋಪಿಸಿದ್ದಾರೆ. ಇದರಿಂದಲೇ ಖಾಸಗಿ ಟ್ಯಾಂಕರ್‌ಗಳ ಮಾಫಿಯಾ ಶುರುವಾಗಿದೆ. ಬೆಂಗಳೂರಿನ ಆರ್‌.ಆರ್‌.ನಗರದಲ್ಲಿ 6000 ಲೀ. ಟ್ಯಾಂಕರ್‌ 2500 ರೂ., ಕೆ.ಆರ್‌.ಪುರದಲ್ಲಿ 1500 ರೂ., ನಾರಾಯಣಪುರದಲ್ಲಿ 1500 ರೂ., ಹಾಗೂ ವರ್ತೂರಿನಲ್ಲಿ 4000 ಲೀ.ಟ್ಯಾಂಕರ್ 800 ರೂ. ಇದೆ. ಹೀಗೆ ಬೇಕಾಬಿಟ್ಟಿ ದರ ಹೆಚ್ಚಳ ಮಾಡುವುದಕ್ಕೆ ರಾಜ್ಯ ಸರ್ಕಾರ ಕಡಿವಾಣ ಹಾಕಿ, ಖಾಸಗಿ ಟ್ಯಾಂಕರ್‌ಗಳಿಗೆ ಏಕರೂಪ ದರ ನಿಗದಿಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇತ್ತೀಚೆಗೆ, ಬೆಂಗಳೂರಿನ ಒಳಭಾಗಕ್ಕೇ ಹೆಚ್ಚಿನ ಕಾವೇರಿ ನೀರು ಬೇಕಾಗುವುದರಿಂದ ಹೊರಭಾಗಗಳಿಗೆ ಕಾವೇರಿ ನೀರು ಪೂರೈಸಲು ಸಾಧ್ಯವಿಲ್ಲ ಎಂದು ಜಲಮಂಡಳಿ ಹೇಳಿದೆ. ಕೆಆರ್‌ಎಸ್‍ನಲ್ಲಿ ಸಂಗ್ರಹವಾಗುವ ನೀರಿನಲ್ಲಿ ಬೆಂಗಳೂರು ನಗರ ಒಂದಕ್ಕೆ ಪ್ರತಿ ತಿಂಗಳು 1.6 ಟಿಎಂಸಿ ನೀರು ಬೇಕು. ಮೈಸೂರು, ಮಂಡ್ಯ, ರಾಮನಗರ, ಚಾಮರಾಜನಗರಗಳಿಗೆ ಕಾವೇರಿ ನೀರೇ ಬೇಕು. ಪರಿಸ್ಥಿತಿ ಗಮನಿಸಿದರೆ ನೀರಿನ ಕೊರತೆ ಕಾಡುವ ಎಲ್ಲಾ ಲಕ್ಷಣಗಳೂ ಎದ್ದು ಕಾಣುತ್ತಿವೆ. 2010ರಲ್ಲಿ ಮಳೆ ಕೊರತೆಯುಂಟಾಗಿ ಕೆಆರ್‌ಎಸ್ ನೀರಿನ ಪ್ರಮಾಣ ಕುಸಿದಿದ್ದಾಗ ಬೆಂಗಳೂರಿನಲ್ಲಿ ಜಲಮಂಡಳಿ ವಾರದಲ್ಲಿ ಎರಡು ಬಾರಿ ಮಾತ್ರ ನೀರು ಪೂರೈಸಿತ್ತು. ಈಗ ಮತ್ತೆ ಅದೇ ರೀತಿಯ ಪರಿಸ್ಥಿತಿ ಎದುರಾಗಲಿದೆ ಎಂಬ ಭೀತಿ ಎದುರಾಗಿದೆ.

ಬೆಂಗಳೂರಿನಲ್ಲಿ ಒಂದು ಕಾಲದಲ್ಲಿ 1000ಕ್ಕೂ ಹೆಚ್ಚು ಕೆರೆಗಳಿದ್ದವು. ಇಂದು ಆ ಕೆರೆಗಳಲ್ಲಿ 200ಕ್ಕಿಂತ ಕಡಿಮೆ ಉಳಿದಿವೆ. ಉಳಿದಿರುವವೂ ಒಳಚರಂಡಿ ನೀರಿನ ಸಂಗ್ರಾಹಾಗಾರಗಳಾಗಿವೆ. ಇಲ್ಲಿ ಸಂಗ್ರಹವಾಗುವ ಕೊಳಚೆ ನೀರು ಅಂತರ್ಜಲವನ್ನೂ ಕಲುಷಿತಗೊಳಿಸುತ್ತದೆ. ಅದು ಕೊಳವೆ ಬಾವಿಗೆ ಸೇರುತ್ತದೆ. ಬೆಂಗಳೂರಿನಲ್ಲಿರುವ ಶೇಕಡಾ 52ರಷ್ಟು ಬೋರ್‌ವೆಲ್ ನೀರು ಮತ್ತು ಶೇಕಡಾ 59ರಷ್ಟು ಟ್ಯಾಪ್ ನೀರು ಕುಡಿಯಲು ಯೋಗ್ಯವಾಗಿಲ್ಲ. ಇವು ಕ್ರಮವಾಗಿ ಶೇಕಡಾ 8.4 ಮತ್ತು ಶೇಕಡಾ 19ರಷ್ಟು ಹಾನಿಕರ ಇ.ಕೋಲಿ ಬ್ಯಾಕ್ಟೀರಿಯಾಗಳನ್ನು ಹೊಂದಿವೆ ಎಂದು ಒಂದು ವರದಿ ಹೇಳುತ್ತದೆ.

ಇದನ್ನೂ ಓದಿ: MLC Election: ಬೆಂಗಳೂರು ಶಿಕ್ಷಕರ ಕ್ಷೇತ್ರ; ಕಾಂಗ್ರೆಸ್‌ನ ಪುಟ್ಟಣ್ಣ ಗೆಲುವು; ಮೈತ್ರಿ ಅಭ್ಯರ್ಥಿಗೆ ಸೋಲು

ಇಂಥ ಹೊತ್ತಿನಲ್ಲಿ ಜವಾಬ್ದಾರಿಯುತ ಸರ್ಕಾರ ಏನು ಮಾಡಬೇಕು? ಕುಡಿಯುವ ನೀರಿನ ಸ್ಥಿತಿಗತಿಯ ಕಡೆಗೆ ಆದ್ಯತೆ ನೀಡಬೇಕು. ಆದರೆ ನಮ್ಮ ರಾಜ್ಯ ಸರ್ಕಾರಕ್ಕೆ ಸದಾ ಗ್ಯಾರಂಟಿಗಳದೇ ಚಿಂತೆ. ಗ್ಯಾರಂಟಿಗಳ ಜೊತೆಗೆ ಮೂಲಸೌಕರ್ಯಗಳನ್ನೂ ಬಲಿಷ್ಠಗೊಳಿಸಬೇಕಾದುದು ಅದರ ಜವಾಬ್ದಾರಿ. ಕಾವೇರಿ ನದಿಯ ನೀರಿನ ಕುರಿತ ವಿವಾದದಲ್ಲಿ ತಮಿಳುನಾಡಿನ ಪರ ಪ್ರಾಧಿಕಾರ ಈ ಬಾರಿ ತೀರ್ಪು ನೀಡಿದಾಗ, ಸರ್ಕಾರ ದಿಟ್ಟವಾಗಿ ಪ್ರತಿಭಟಿಸಲಿಲ್ಲ. ಬದಲಾಗಿ ಮಣಿದು ನೀರನ್ನು ಬಿಟ್ಟಿತು. ಇದು ಕೂಡ ಕೊರತೆಗೆ ಕಾರಣವಾಗಿದೆ. ತಮಿಳುನಾಡಿನಲ್ಲಿ ಮಿತ್ರಪಕ್ಷ ಅಧಿಕಾರದಲ್ಲಿದೆ ಎಂಬುದು ಅವರ ಓಲೈಕೆಗೂ, ನಮ್ಮ ಜನರ ಕಡೆಗಣನೆಗೂ ಕಾರಣವಾಗಬಾರದು. ಇದೀಗ ಬೆಂಗಳೂರು ನೀರಿಗಾಗಿ ಚಡಪಡಿಸುತ್ತಿದೆ. ಟ್ಯಾಂಕರ್‌ ನೀರಿಗೆ ಏಕರೂಪಿ ದರ ನಿಗದಿಪಡಿಸುವುದು, ಕುಡಿಯುವ ನೀರಿನ ಕೊರತೆ ನೀಗಿಸುವ ಇತರ ಸುಸ್ಥಿರ ಕ್ರಮಗಳನ್ನು ಕೈಗೊಳ್ಳುವುದು ಈಗ ಸರ್ಕಾರದಿಂದ ಆಗಬೇಕಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Lakshmi Hebbalkar Handicapped
ಬೆಂಗಳೂರು20 mins ago

Lakshmi Hebbalkar : ವಿಕಲಚೇತನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಿದ ಸಚಿವೆ ಹೆಬ್ಬಾಳ್ಕರ್

FSL Report
ಪ್ರಮುಖ ಸುದ್ದಿ28 mins ago

Sedition Case : ವಿಧಾನಸೌಧದಲ್ಲಿ ಪಾಕ್​ ಜಿಂದಾಬಾದ್​ ಕೇಸ್​​ನ ಎಫ್​ಎಸ್​​ಎಲ್​ ವರದಿ ಸಲ್ಲಿಕೆ

Russia Ukraine War
ವಿದೇಶ36 mins ago

Russia Ukraine War: ರಷ್ಯಾ ಸೇನೆಯಲ್ಲಿರುವ ಭಾರತೀಯರು ಶೀಘ್ರ ತಾಯ್ನಾಡಿಗೆ; ವಿದೇಶಾಂಗ ಸಚಿವಾಲಯದ ಭರವಸೆ

Modi GDP
ಪ್ರಮುಖ ಸುದ್ದಿ2 hours ago

GDP Growth : ಜಿಡಿಪಿಯ ಭರ್ಜರಿ ಏರಿಕೆಗೆ ಮೋದಿ ಸಂತಸ; ಏನಂದ್ರು ಅವರು?

2nd PU Exam from tomorrow what are the conditions
ಶಿಕ್ಷಣ2 hours ago

2nd PU Exam: ನಾಳೆಯಿಂದ ರಾಜ್ಯಾದ್ಯಂತ ದ್ವಿತೀಯ ಪಿಯು ಪರೀಕ್ಷೆ; ವಿದ್ಯಾರ್ಥಿಗಳಿಗೆ ಇಲ್ಲಿದೆ ಕಂಡಿಷನ್!

insurance
ಮನಿ-ಗೈಡ್2 hours ago

Money Guide: ಸಾಮಾನ್ಯ ವಿಮೆ v/s ಜೀವ ವಿಮೆ; ಯಾವುದು ಉತ್ತಮ? ನಿಮಗೆ ತಿಳಿದಿರಲೇಬೇಕಾದ ಮಾಹಿತಿ ಇಲ್ಲಿದೆ

Budget session Siddaramaiah
ವಿಧಾನಮಂಡಲ ಅಧಿವೇಶನ2 hours ago

Budget Session : ಬಿಜೆಪಿಯ ಜೈ ಶ್ರೀರಾಮ್‌ VS ಸಿದ್ದರಾಮಯ್ಯರ ಜೈ ಸೀತಾರಾಮ್‌!

Nitasha Kaul
ದೇಶ2 hours ago

Nitasha Kaul : ಬ್ರಿಟನ್​ ಲೇಖಕಿಯನ್ನು ಏರ್​ಪೋರ್ಟ್​​ನಿಂದಲೇ ವಾಪಸ್​ ಕಳಿಸಿದ್ದಕ್ಕೆ ಕಾರಣ ಕೊಟ್ಟ ಕೇಂದ್ರ ಸರ್ಕಾರ

Siddaramaiah plan behind accepting Caste Census Report Sunil Kumar reveals reason
ರಾಜಕೀಯ2 hours ago

‌Caste Census Report: ಜಾತಿ ಗಣತಿ ಸ್ವೀಕಾರದ ಹಿಂದೆ ಸಿದ್ದರಾಮಯ್ಯ ಪ್ಲ್ಯಾನ್‌ ಏನು? ಕಾರಣ ಬಿಚ್ಚಿಟ್ಟಿದ್ದಾರೆ ಸುನಿಲ್‌ ಕುಮಾರ್!

Rowdy sheeter kidnaps cricket bookie
ಕ್ರಿಕೆಟ್3 hours ago

WPL 2024 : ಮಹಿಳಾ ಐಪಿಎಲ್‌ನಲ್ಲಿ ಬೆಟ್ಟಿಂಗ್ ಕಟ್ಟಿದ ಬುಕ್ಕಿಯೇ ಕಿಡ್ನ್ಯಾಪ್‌!

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for February 28 2024
ಭವಿಷ್ಯ16 hours ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ2 days ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

Ghar Wapsi ST Somashekhar and Shivaram Hebbar to quit BJP
ರಾಜಕೀಯ2 days ago

Ghar Wapsi: ಎಸ್‌.ಟಿ. ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಬಿಜೆಪಿಗೆ ಗುಡ್‌ ಬೈ? ಇಂದೇ ರಾಜೀನಾಮೆ?

Rajyasabha Elections 42 Congress MLAs contacted by JDS candidate says DK Shivakumar
ರಾಜಕೀಯ2 days ago

Rajya sabha Election: ಕಾಂಗ್ರೆಸ್‌ನ 42 ಶಾಸಕರನ್ನು ಸಂಪರ್ಕ ಮಾಡಿದ್ದಾರೆ: ಡಿ.ಕೆ. ಶಿವಕುಮಾರ್

read your daily horoscope predictions for february 27 2024
ಭವಿಷ್ಯ3 days ago

Dina Bhavishya : ಇಂದು ಆಪ್ತರಿಂದಲೇ ಈ ರಾಶಿಯವರಿಗೆ ಕಂಟಕ!

Crowd mistakes Arabic words as Quran Verses on the kurta and Pak Women mobbed
ವಿದೇಶ3 days ago

Pak Woman: ಕುರ್ತಾ ಮೇಲಿನ ಅರೇಬಿಕ್ ಪದಗಳನ್ನು ತಪ್ಪಾಗಿ ತಿಳಿದು ಮಹಿಳೆ ಮೇಲೆ ಹಲ್ಲೆಗೆ ಯತ್ನ

read your daily horoscope predictions for february 26 2024
ಭವಿಷ್ಯ4 days ago

Dina Bhavishya : ಈ ಮೂರು ರಾಶಿಯವರು ಇಂದು ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯವರು ಆಪ್ತರೊಂದಿಗೆ ಗೌಪ್ಯ ವಿಷಯವನ್ನು ಹೇಳುವಾಗ ಎಚ್ಚರ!

Video Viral Student falls under school bus He escaped with minor injuries
ವೈರಲ್ ನ್ಯೂಸ್5 days ago

Video Viral: ಸ್ಕೂಲ್ ಬಸ್‌ನಡಿ ಬಿದ್ದ ವಿದ್ಯಾರ್ಥಿ; ಪಾರಾಗಿದ್ದೇ ಪವಾಡ!

ಟ್ರೆಂಡಿಂಗ್‌