Udupi Suicide | 'ಕೆಟ್ಟ ನಿರ್ಧಾರ ತೆಗೆದುಕೊಂಡಿದ್ದೇವೆ' ಎಂದಿದ್ದೇ ಪ್ರೇಮಿಗಳ ಕೊನೆ ಮೆಸೇಜ್‌ - Vistara News

ಪ್ರಮುಖ ಸುದ್ದಿ

Udupi Suicide | ‘ಕೆಟ್ಟ ನಿರ್ಧಾರ ತೆಗೆದುಕೊಂಡಿದ್ದೇವೆ’ ಎಂದಿದ್ದೇ ಪ್ರೇಮಿಗಳ ಕೊನೆ ಮೆಸೇಜ್‌

Udupi Suicide | ಉಡುಪಿಯ ಮಂದಾರ್ತಿ ಸಮೀಪ ಹೆಗ್ಗುಂಜೆ ಬಳಿಯಲ್ಲಿ ಒಂದು ಕಾರು ಧಗಧಗನೆ ಉರಿದು ಬೆಂಗಳೂರಿನ ಯಶವಂತ ಯಾದವ್‌ ಹಾಗೂ ಜ್ಯೋತಿ ದೇಹಗಳು ಸುಟ್ಟು ಕರಕಲಾಗಿವೆ.

VISTARANEWS.COM


on

udupi suicide
ಧಗಧಗನೆ ಉರಿಯುತ್ತಿರುವ ಕಾರು. ಮೃತಪಟ್ಟ ಯಶವಂತ ಯಾದವ್‌ ಹಾಗೂ ಜ್ಯೋತಿ.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಉಡುಪಿ: ʼನಾವಿಬ್ಬರೂ ಒಂದು ಕೆಟ್ಟ ನಿರ್ಧಾರ ತೆಗೆದುಕೊಂಡಿದ್ದೇವೆ…ʼ ಇದು ಬೆಂಗಳೂರು ಮೂಲದ ಪ್ರೇಮಿಗಳು ತಮ್ಮ ಕುಟುಂಬದವರಿಗೆ ಉಡುಪಿಯಿಂದ ಕಳಿಸಿದ ಕೊನೆಯ ವಾಟ್ಸ್‌ಅಪ್‌ ಸಂದೇಶ. ಬೆಳಗಿನ ಜಾವ 3.02ಕ್ಕೆ ಬಂದ ಈ ಸಂದೇಶವನ್ನು ಕುಡುಂಬದವರು ನೋಡುವ ವೇಳೆಗಾಗಲೆ ಕಾಲ ಮಿಂಚಿ ಹೋಗಿ Udupi Suicide ಪ್ರಕರಣ ಬೆಳಕಿಗೆ ಬಂದಿದೆ.

ಉಡುಪಿಯ ಮಂದಾರ್ತಿ ಸಮೀಪ ಹೆಗ್ಗುಂಜೆ ಬಳಿಯಲ್ಲಿ ಒಂದು ಕಾರು ಧಗಧಗನೆ ಉರಿದು ಯಶವಂತ ಯಾದವ್‌ ಹಾಗೂ ಜ್ಯೋತಿ ದೇಹಗಳು ಸುಟ್ಟು ಕರಕಲಾಗಿವೆ. ಭಾನುವಾರ ಬೆಳಗ್ಗೆ ಹೆಗ್ಗುಂಜೆಯ ಸ್ಥಳೀಯರು ಹೊತ್ತಿ ಉರಿಯುತ್ತಿರುವ ಕಾರನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ನೋಡುವಷ್ಟರಲ್ಲಿ ಎರಡು ಜೀವಗಳು ಹಾರಿಹೋಗಿದ್ದವು.

ಇದನ್ನೂ ಓದಿ | ಎಂಬಿಎ ಪದವೀಧರೆ ವಿಷ ಸೇವಿಸಿ ಆತ್ಮಹತ್ಯೆ, ಇಷ್ಟು ಕಲಿತರೂ ಕೆಲಸ ಸಿಗಲಿಲ್ಲವೆಂಬ ಬೇಸರ

ಬ್ರಹ್ಮಾವರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳೀಯರ ನೆರವಿನಿಂದ ಕಾರಿನ ಬೆಂಕಿಯನ್ನು ನಂದಿಸಿದ್ದಾರೆ. ಈ ವೇಳೆಗಾಗಲೆ ಸ್ವಿಫ್ಟ್‌ ಕಾರಿನ ಹಿಂಬದಿಯ ಬಾಗಿಲು ತೆರೆದುಕೊಂಡಿದೆ. ಬಾಗಿಲಿನಿಂದ ಹೊರಕ್ಕೆ ಎರಡೂ ದೇಹಗಳು ಹೊರಬಿದ್ದಿದ್ದವು. ಪರಸ್ಪರ ತಬ್ಬಿಕೊಂಡ ಸ್ಥಿತಿಯಲ್ಲಿದ್ದ ದೇಹಗಳು ಸಂಪೂರ್ಣ ಸುಟ್ಟುಹೋಗಿದ್ದವು. ಕಾರಿನೊಳಗೆ ಕುಳಿತು ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಬೆಂಗಳೂರಿನಿಂದ ಕುಟುಂಬದವರೊಬ್ಬರು ಆಗಮಿಸಿದ್ದು, ಅವರ ಸಮ್ಮುಖದಲ್ಲೆ ಪೊಲೀಸರು ಮಹಜರು ಮಾಡಿದ್ದಾರೆ. ಇಬ್ಬರ ಶವವನ್ನೂ ಮಳಿಪಾಲದ ಕೆಎಂಸಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ.

Udupi Suicide
ಸುಟ್ಟು ಕರಕಲಾಗಿರುವ ಕಾರು

ಎರಡೂ ಕುಟುಂಬಗಳು ಮಾಹಿತಿ ನೀಡಿಲ್ಲ

ಬೆಂಗಳೂರಿನ ಆರ್‌ಟಿ ನಗರ ನಿವಾಸಿಯಾದ ಯಶವಂತ್‌ ಹಾಗೂ ಜ್ಯೋತಿ ಕಳೆದ ಮೂರು ದಿನದ ಹಿಂದೆ ಮನೆಯಿಂದ ಹೊರಟಿದ್ದರು. ಇಬ್ಬರ ಮನೆಯಲ್ಲೂ, ಎಲ್ಲಿಗೆ ಹೋಗುತ್ತಿದ್ದೇವೆ ಎಂದು ಹೇಳಿಲ್ಲ. ಈ ಕುರಿತು ಎರಡೂ ಕುಟುಂಬಗಳು ಪೊಲೀಸ್‌ ಠಾಣೆಯಲ್ಲಿ ಪ್ರತ್ಯೇಖ ದೂರನ್ನು ದಾಖಲಿಸಿದ್ದವು. ಎರಡೂ ದೂರಿನಲ್ಲಿಯೂ ಇವರಿಬ್ಬರ ಕುರಿತು ಮಾಹಿತಿಯನ್ನು ನೀಡಲಾಗಿಲ್ಲ. ವಮನೆ ಬಿಟ್ಟು ಹೋದವರು ಬಂದಿಲ್ಲ, ಹುಡುಕಿಕೊಡಿ ಎಂದಷ್ಟೆ ತಿಳಿಸಿದ್ದಾರೆ. ಎರಡೂ ಕುಟುಂಬದ ನಡುವೆ ಪ್ರೇಮದ ವಿಚಾರದಲ್ಲಿ ಏಣೋ ನಡೆದಿರುವ ಸಾಧ್ಯತೆ ಇದೆ. ಆದರೆ ಕುಟುಂಬಗಳೂ ಇದನ್ನು ಯಾವ ಕಾರಣದಿಂದ ಹೇಳಿಲ್ಲ ಎನ್ನುವುದು ಸೇರಿ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲು ಪೊಲೀಸರು ಸಿದ್ಧರಾಗುತ್ತಿದ್ದಾರೆ.

ನಿರ್ಜನ ಪ್ರದೇಶದಲ್ಲಿ ಘಟನೆ

ಮೂರು ದಿನದ ಹಿಂದೆ ಮಂಗಳೂರಿಗೆ ಆಗಮಿಸಿದ ಜೋಡಿ, ಅಲ್ಲಿ ಬಾಡಿಗೆ ಮನೆಯನ್ನು ಪಡೆದಿದ್ದಾರೆ. ಐದು ಸಾವಿರ ರೂಪಾಯಿ ಅಡ್ವಾನ್ಸ್‌ ನೀಡಿ, ಮನೆ ಮಾಲೀಕರಿಗೆ ತಮ್ಮ ಆಧಾರ್‌ ಕಾರ್ಡನ್ನೂ ನೀಡಿದ್ದಾರೆ. ನಂತರ ಅದೇಕೊ ಇದ್ದಕ್ಕಿದ್ದಂತೆ ಬಾಡಿಗೆ ಕಾರನ್ನು ಪಡೆದು ಮಂದರ್ತಿ ಬಳಿಯ ನಿರ್ಜನ ಪ್ರದೇಶಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಮಾರುತಿ ಸ್ವಿಫ್ಟ್‌ ಕಾರು ಅಲ್‌ಮಿಸ್ಬಾ ಕಾರ್‌ ರೆಂಟಲ್‌ ಕಂಪನಿಗೆ ಸೇರಿದ್ದು ಎಂದು ತಿಳಿದುಬಂದಿದೆ.

ಇದನ್ನೂ ಓದಿ | ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆಗೆ ಮಹಿಳೆ ಕಾರಣ !

ಮನೆ ಬಾಡಿಗೆ ಪಡೆದದ್ದೇಕೆ?

ಇಬ್ಬರೂ ಮನೆಯನ್ನು ಬಾಡಿಗೆಗೆ ಪಡೆದ ಕೂಡಲೆ ಪೋಷಕರಿಗೆ ಮೆಸೇಜ್‌ ಮಾಡಿದ್ದಾರೆ. ಎಲ್ಲ ಮೆಸೇಜ್‌ ಇಂಗ್ಲಿಷ್‌ನಲ್ಲಿದೆ. ನಾವಿಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದೇವೆ ಎಂದು ಮೊದಲಿಗೆ ತಿಳಿಸಿದ್ದಾರೆ. ಕೆಲ ನಿಮಿಷದಲ್ಲೆ, ಆದರೂ ನಾವು ಸಂತೋಷವಾಗಿಲ್ಲ ಎಂದು ಸಂದೇಶ ಕಳಿಸಿದ್ದಾರೆ. ಮತ್ತೆ ಕೆಲವೇ ಸಮಯದಲ್ಲಿ ಇನ್ನೊಂದು ಸಂದೇಶ ಕಳಿಸಿದ್ದಾರೆ. ನಮ್ಮನ್ನು ಕ್ಷಮಿಸಿ, ನಾವು ಕೆಟ್ಟ ನಿರ್ಧಾರ ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ. ಹಾಗಾದರೆ ಇಬ್ಬರೂ ಮನೆಯನ್ನು ಬಾಡಿಗೆ ಪಡೆದದ್ದು ಏಕೆ ಎಂಭ ಪ್ರಶ್ನೆ ಉದ್ಭವವಾಗಿದೆ. ಮನೆ ಮಾಡಿ ಜೀವಿಸುವ ಉದ್ದೇಶ ಹೊಂದಿದ್ದವರು ಇದ್ದಕ್ಕಿದ್ದಂತೆ ಆತ್ಮಹತ್ಯೆ ನಿರ್ಧಾರ ಮಾಡಲು ಕಾರಣ ಪೊಲೀಸ್‌ ತನಿಖೆ ನಂತರವಷ್ಟೆ ತಿಳಿಯಬೇಕಿದೆ.

ಲೊಕೇಷನ್‌ ರವಾನೆ

ನಾವು ಕೆಟ್ಟ ನಿರ್ಧಾರ ತೆಗೆದುಕೊಳ್ಳುತ್ತಿದ್ದೇವೆ ಎಂಬ ಕೊನೆಯ ಸಂದೇಶದ ನಂತರ, ಆತ್ಮಹತ್ಯೆ ಮಾಡಿಕೊಂಡ ಸ್ಥಳದ ಲೊಕೇಷನ್ನನ್ನೂ ಕಳಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ನಂತರ ಹುಡುಕಲು ಮನೆಯವರಿಗೆ ಕಷ್ಟವಾಗಬಾರದು ಎಂಬ ಕಾರಣಕ್ಕೆ ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ.

ಎಫ್‌ಎಸ್‌ಎಲ್‌ ಸಿಬ್ಬಂದಿ ಆಗಮನ

ಕಾರು ಸುಟ್ಟು ಭಸ್ಮವಾದ ಸ್ಥಳಕ್ಕೆ ವಿಧಿವಿಜ್ಞಾನ ತಜ್ಞರು ಆಗಮಿಸಿದ್ದಾರೆ. ಸ್ಥಳದಲ್ಲಿ ಇಬ್ಬರೂ ಸುಟ್ಟುಹೋಗಲು ಯಾವ ದ್ರಾವಣವನ್ನು ಹಾಕಿಕೊಂಡಿದ್ದಾರೆ? ಎಲ್ಲಿಂದ ತಂದರು? ಎಂಬುದೂ ಸೇರಿ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲು ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹ ಮಾಡುತ್ತಿದ್ದಾರೆ.

ಇದನ್ನೂ ಓದಿ | Acid Attack | ಆ್ಯಸಿಡ್‌ ನಾಗೇಶ್‌ ಬಂಧನಕ್ಕೆ ಕೈಕೊಟ್ಟ Technology: ಪೊಲೀಸರ ಕೈಹಿಡಿದ ಓಲ್ಡ್‌ ಟೆಕ್ನಿಕ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಒಪ್ಪಿಕೊಂಡರೆ ಸಾಲದು, ಪಾಕ್‌ ತನ್ನನ್ನು ಸರಿಪಡಿಸಿಕೊಳ್ಳಲಿ

ಭಾರತವನ್ನು ದ್ವೇಷಿಸುತ್ತ ಪಾಕ್‌ ಹುಟ್ಟುಹಾಕಿದ ಮತಾಂಧ ಭಯೋತ್ಪಾದನೆ ಇಂದು ಅದನ್ನೇ ತಿನ್ನುತ್ತಿದೆ. ಇನ್ನಾದರೂ ಪಾಕ್ ಆಡಳಿತಗಾರರಿಗೆ, ಸೇನಾಧಿಕಾರಿಗಳಿಗೆ ಬುದ್ಧಿ ಬರಲಿ. ಕಾಶ್ಮೀರ ಮತ್ತಿತರ ವಿಚಾರಗಳನ್ನು ಪ್ರಸ್ತಾಪಿಸುತ್ತ ಭಾರತಕ್ಕೆ ಮುಜುಗರ ಸೃಷ್ಟಿಸಲು ವಿಫಲ ಪ್ರಯತ್ನ ಮಾಡುತ್ತಿರುವ ಪಾಕ್‌ ತನ್ನ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ಮೊದಲು ಗಮನಿಸಲಿ.

VISTARANEWS.COM


on

Pakistan
Koo

ಕೆಲವು ದಿನಗಳ ಹಿಂದೆ ಪಾಕ್‌(Pakistan) ಸಂಸತ್‌ನಲ್ಲೇ ಅಲ್ಲಿನ ವಿಪಕ್ಷ ನಾಯಕನೇ ಭಾರತವನ್ನು ಹಾಡಿ ಹೊಗಳಿರುವ ವಿಡಿಯೋವೊಂದು ವೈರಲ್‌(Viral Video) ಆಗಿತ್ತು. ಇದೀಗ ಮತ್ತೊಬ್ಬ ಸಂಸದ ಭಾರತದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಸಂಸತ್‌ನಲ್ಲಿ ಮಾತನಾಡಿದ ಸಂಸದ ಸಯ್ಯದ್‌ ಮುಸ್ತಾಫಾ ಕಮಲ್‌ ಭಾರತ ಮತ್ತು ಪಾಕಿಸ್ತಾನವನ್ನು ಹೋಲಿಕೆ ಮಾಡಿ ಮಾತನಾಡಿದ್ದು, ಭಾರತ ಚಂದ್ರನ ಮೇಲೆ ಕಾಲಿಟ್ಟಿದೆ. ಆದರೆ ಪಾಕಿಸ್ತಾನದ ಸ್ಥಿತಿ ಹೇಗಿದೆ ನೋಡಿ ಎಂದು ಹೇಳಿದ್ದಾರೆ. ಇದೀಗ ಇವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಭಾರತ ಚಂದ್ರನ ಮೇಲೆ ಕಾಲಿಟ್ಟಿದೆ. ಆದರೆ ಪಾಕಿಸ್ತಾನ ಮಾತ್ರ ಮಕ್ಕಳು ಚರಂಡಿ ಬೀಳುತ್ತಿರುವ ಬಗ್ಗೆ ವರದಿ ಮಾಡುತ್ತಿದ್ದೇವೆ. ಕರಾಚಿಯಲ್ಲಿ ಜನ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ದೇಶದಲ್ಲಿ 2.6 ಕೋಟಿ ಮಕ್ಕಳಿದ್ದು, ಅವರಿಗೆ ಶಿಕ್ಷಣ ಸೌಲಭ್ಯವೂ ಸಿಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಕೆಲವು ದಿನಗಳ ಹಿಂದೆ ಇಡೀ ಪ್ರಪಂಚದಲ್ಲೇ ಭಾರತ ಬಲಿಷ್ಠ ರಾಷ್ಟ್ರವಾಗಿ ಬೆಳೆಯುತ್ತಿದೆ. ನಾವು ಮಾತ್ರ ಹಣಕಾಸಿನ ಸಹಾಯಕ್ಕಾಗಿ ಭಿಕ್ಷೆ ಬೇಡುತ್ತಿದ್ದೇವೆ ಎಂದು ಪಾಕಿಸ್ತಾನದ ವಿಪಕ್ಷ ನಾಯಕ ಮೌಲಾನ ಫಜ್ಲೂರ್‌ ರೆಹಮಾನ್‌ ಹೇಳಿದ್ದರು. ಅವರು ಪಾಕಿಸ್ತಾನ ಸಂಸತ್‌ನಲ್ಲಿ ಸರ್ಕಾರ ವೈಫಲ್ಯದ ವಿರುದ್ಧ ವಾಗ್ದಾಳಿ ನಡೆಸುತ್ತಾ, ಭಾರತ ಜಾಗತಿಕ ಮಟ್ಟದಲ್ಲಿ ಸೂಪರ್‌ ಪವರ್‌ಫುಲ್‌ ರಾಷ್ಟ್ರವಾಗಿ ಬೆಳೆಯುತ್ತಿದೆ ಪಾಕಿಸ್ತಾನ ಮಾತ್ರ ದಿವಾಳಿತನದತ್ತ ಸಾಗುತ್ತಿದೆ. 1947ರಲ್ಲಿ ಭಾರತ ಮತ್ತು ಪಾಕಿಸ್ತಾನ ಸ್ವಾತಂತ್ರ್ಯ ಪಡೆದುಕೊಂಡಿತ್ತು. ಇಂದು ಭಾರತದ ಸ್ಥಿತಿ ಎಲ್ಲಿದೆ ಹಾಗೂ ನಮ್ಮ ಸ್ಥಿತಿ ಎಲ್ಲಿದೆ? ಇಷ್ಟಕ್ಕೆಲ್ಲಾ ಯಾರು ಹೊಣೆ ಎಂದು ಕಟುವಾಗಿ ಪ್ರಶ್ನಿಸಿದ್ದರು.

ಪಾಕಿಸ್ತಾನದ ವೈಫಲ್ಯಗಳ ಪಟ್ಟಿ ಮಾಡಹೊರಟರೆ ಮುಗಿಯುವುದೇ ಇಲ್ಲ. ಶುದ್ಧ ಕುಡಿಯುವ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಸರಿಯಾದ ಆಧುನಿಕ ಶಿಕ್ಷಣ ಕಲಿಸುವ ಶಾಲೆಗಳಿಲ್ಲ. ಸಿಂಧ್‌ ಪ್ರಾಂತ್ಯದಲ್ಲಿ 70 ಲಕ್ಷ ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಅಲ್ಲಿ ಒಟ್ಟು 2.62 ಕೋಟಿ ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಮತಾಂಧತೆ ಕಲಿಸುವ ಮದ್ರಸ ಶಿಕ್ಷಣ ಮಾತ್ರ ವ್ಯಾಪಕವಾಗಿದೆ. ಹಣದುಬ್ಬರದ ಏರಿಕೆಯಿಂದಾಗಿ ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆಯು ದಿನೇದಿನೆ ಜಾಸ್ತಿಯಾಗುತ್ತಿದ್ದು, ಜನ ಹೈರಾಣಾಗುತ್ತಿದ್ದಾರೆ. ಒಂದು ಲೀಟರ್‌ ಪೆಟ್ರೋಲ್‌ಗೆ 290 ರೂ. (ಪಾಕಿಸ್ತಾನದ ರೂಪಾಯಿ) ಆದರೆ, ಒಂದು ಕೆ.ಜಿ ಗೋಧಿ ಹಿಟ್ಟಿಗೆ 800 ರೂ. ಕೊಡಬೇಕಾಗಿದೆ. ಒಂದು ರೊಟ್ಟಿಗೆ 25 ರೂ. ನೀಡಬೇಕಾಗಿದೆ. ಇದರಿಂದಾಗಿ ಸಾಮಾನ್ಯ ಜನ ಮೂರು ಹೊತ್ತು ಊಟ ಮಾಡಲು ಕೂಡ ತೊಂದರೆಯಾಗುತ್ತಿದೆ. ಹಣಕಾಸಿನ ಕೊರತೆಯಿಂದ ಬಳಲುತ್ತಿರುವ ಪಾಕ್‌ನ ವಿದೇಶಿ ವಿನಿಮಯ ಮೀಸಲು ನಿಧಿ ಆಮದನ್ನು ಪೂರೈಸಲು ಸಾಕಾಗುತ್ತಿಲ್ಲ.

ಉಗ್ರರ ಪೋಷಣೆ, ಅವರಿಗೆ ಹಣಕಾಸು ನೆರವು, ಅಸಮರ್ಥ ನಾಯಕತ್ವ, ಕೊರೊನಾ ಬಿಕ್ಕಟ್ಟು ಸೇರಿ ಹಲವು ಕಾರಣಗಳಿಂದ ಪಾಕಿಸ್ತಾನ ದಿವಾಳಿಯಾಗಿದೆ. ಇದೇ ಕಾರಣಕ್ಕಾಗಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (IMF) ಎದುರು ಹಣಕ್ಕಾಗಿ ಭಿಕ್ಷಾಪಾತ್ರೆ ಹಿಡಿದು ನಿಂತಿದೆ. ಈಗಾಗಲೇ ಐಎಂಎಫ್‌ 3 ಶತಕೋಟಿ ಡಾಲರ್‌ ಸಾಲ ನೀಡಲು ಒಪ್ಪಿಗೆ ಸೂಚಿಸಿದೆ. ಆದರೆ, ಮುಂದಿನ ಮೂರು ವರ್ಷಗಳವರೆಗೆ 6 ಶತಕೋಟಿ ಡಾಲರ್‌ ಸಾಲ ನೀಡಿ ಎಂದು ಪಾಕಿಸ್ತಾನ ಮನವಿ ಮಾಡುತ್ತಿದೆ. ಆದರೆ, ಪಾಕ್‌ನಲ್ಲಿ ದಿನೇದಿನೆ ಹಣದುಬ್ಬರದ ಏರಿಕೆಯಾಗುತ್ತಿರುವ ಕಾರಣ ಸಾಲ ನೀಡಲು ಐಎಂಎಫ್‌ ಹಿಂದೇಟು ಹಾಕುತ್ತಿದೆ. ಇದಕ್ಕಾಗಿಯೇ, ಆಡಳಿತ ಕಾರ್ಯತಂತ್ರದ ಘಟಕಗಳನ್ನು ಹೊರತುಪಡಿಸಿ ಎಲ್ಲ ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು ಖಾಸಗೀಕರಣಗೊಳಿಸಲು ಮುಂದಾಗಿದೆ. ಐಎಂಎಫ್‌ ಪಾಕಿಸ್ತಾನಕ್ಕೆ ಸೂಚಿದ ಶಿಫಾರಸ್ಸಿನ ಪಟ್ಟಿಯಲ್ಲಿ ನಷ್ಟದಲ್ಲಿರುವ ಸರ್ಕಾರಿ ಉದ್ಯಮಗಳ ಖಾಸಗೀಕರಣವೂ ಸೇರಿದೆ.

ಭಾರತವನ್ನು ದ್ವೇಷಿಸುತ್ತ ಪಾಕ್‌ ಹುಟ್ಟುಹಾಕಿದ ಮತಾಂಧ ಭಯೋತ್ಪಾದನೆ ಇಂದು ಅದನ್ನೇ ತಿನ್ನುತ್ತಿದೆ. ಇನ್ನಾದರೂ ಪಾಕ್ ಆಡಳಿತಗಾರರಿಗೆ, ಸೇನಾಧಿಕಾರಿಗಳಿಗೆ ಬುದ್ಧಿ ಬರಲಿ. ಕಾಶ್ಮೀರ ಮತ್ತಿತರ ವಿಚಾರಗಳನ್ನು ಪ್ರಸ್ತಾಪಿಸುತ್ತ ಭಾರತಕ್ಕೆ ಮುಜುಗರ ಸೃಷ್ಟಿಸಲು ವಿಫಲ ಪ್ರಯತ್ನ ಮಾಡುತ್ತಿರುವ ಪಾಕ್‌ ತನ್ನ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ಮೊದಲು ಗಮನಿಸಲಿ. ಅಲ್ಲಿನ ರಾಜಕೀಯ ನಾಯಕರೇ ತಮ್ಮ ಸ್ಥಿತಿಯನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡಾಗ, ತಿದ್ದಿಕೊಳ್ಳಲು ಸರಿಯಾದ ಕಾಲ ಬಂದಿದೆ ಎಂದರ್ಥ.

ಇದನ್ನೂ ಓದಿ: CAA: ಪಾಕಿಸ್ತಾನದಿಂದ ಬಂದ ಹಿಂದುಗಳಿಗೆ ಸಿಎಎ ಅನ್ವಯ ಭಾರತದ ಪೌರತ್ವ; ದೆಹಲಿಯಲ್ಲಿ ಸಂಭ್ರಮ, Video ಇಲ್ಲಿದೆ

Continue Reading

ದೇಶ

Kapil Sibal: ಸುಪ್ರೀಂ ಕೋರ್ಟ್‌ ಬಾರ್‌ ಅಸೋಸಿಯೇಷನ್‌ ಅಧ್ಯಕ್ಷರಾಗಿ ಕಪಿಲ್‌ ಸಿಬಲ್‌ ಆಯ್ಕೆ

Kapil Sibal: ಕಪಿಲ್‌ ಸಿಬಲ್‌ ಅವರು ಆಯ್ಕೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಅವರು ಅಭಿನಂದನೆ ಸಲ್ಲಿಸಿದ್ದಾರೆ. “ಸುಪ್ರೀಂ ಕೋರ್ಟ್‌ ಬಾರ್‌ ಅಸೋಸಿಯೇಷನ್‌ ಅಧ್ಯಕ್ಷರಾಗಿ ಕಪಿಲ್‌ ಸಿಬಲ್‌ ಅವರು ಆಯ್ಕೆಯಾಗಿದ್ದಾರೆ. ಇದು ಉದಾರವಾದಿಗಳು, ಜಾತ್ಯತೀತವಾದಿಗಳು, ಪ್ರಜಾಪ್ರಭುತ್ವವಾದಿಗಳು ಹಾಗೂ ಪ್ರಗತಿಪರರಿಗೆ ಸಿಕ್ಕ ದೊಡ್ಡ ಗೆಲುವಾಗಿದೆ” ಎಂದು ಪೋಸ್ಟ್‌ ಮಾಡಿದ್ದಾರೆ.

VISTARANEWS.COM


on

Kapil Sibal
Koo

ನವದೆಹಲಿ: ಸುಪ್ರೀಂ ಕೋರ್ಟ್‌ ಹಿರಿಯ ವಕೀಲ, ಕೇಂದ್ರದ ಮಾಜಿ ಸಚಿವರೂ ಆದ ಕಪಿಲ್‌ ಸಿಬಲ್‌ (Kapil Sibal) ಅವರು ಸುಪ್ರೀಂ ಕೋರ್ಟ್‌ ಬಾರ್‌ ಅಸೋಸಿಯೇಷನ್‌ (Supreme Court Bar Association) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸುಪ್ರೀಂ ಕೋರ್ಟ್‌ ಬಾರ್‌ ಅಸೋಸಿಯೇಷನ್‌ಗೆ ಗುರುವಾರ (ಮೇ 16) ಚುನಾವಣೆ ನಡೆದಿದ್ದು, ಕಪಿಲ್‌ ಸಿಬಲ್‌ ಅವರು ಪ್ರದೀಪ್‌ ರೈ ವಿರುದ್ಧ ಗೆಲುವು ಸಾಧಿಸುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮೇ 8ರಂದು ಚುನಾವಣೆಗೆ ಸ್ಪರ್ಧಿಸುವುದಾಗಿ ಕಪಿಲ್‌ ಸಿಬಲ್‌ ಘೋಷಣೆ ಮಾಡಿದ್ದರು.

ಕಪಿಲ್‌ ಸಿಬಲ್‌ ಅವರು ಆಯ್ಕೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಅವರು ಅಭಿನಂದನೆ ಸಲ್ಲಿಸಿದ್ದಾರೆ. “ಸುಪ್ರೀಂ ಕೋರ್ಟ್‌ ಬಾರ್‌ ಅಸೋಸಿಯೇಷನ್‌ ಅಧ್ಯಕ್ಷರಾಗಿ ಕಪಿಲ್‌ ಸಿಬಲ್‌ ಅವರು ಆಯ್ಕೆಯಾಗಿದ್ದಾರೆ. ಇದು ಉದಾರವಾದಿಗಳು, ಜಾತ್ಯತೀತವಾದಿಗಳು, ಪ್ರಜಾಪ್ರಭುತ್ವವಾದಿಗಳು ಹಾಗೂ ಪ್ರಗತಿಪರರಿಗೆ ಸಿಕ್ಕ ದೊಡ್ಡ ಗೆಲುವಾಗಿದೆ. ದೇಶದಲ್ಲಿ ಬದಲಾವಣೆಯಾಗುತ್ತಿದೆ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ದೇಶದ ಪ್ರಧಾನಿಯೂ ಬದಲಾಗಲಿದ್ದಾರೆ” ಎಂದು ನರೇಂದ್ರ ಮೋದಿ ಅವರಿಗೆ ಪರೋಕ್ಷವಾಗಿ ಟಾಂಗ್‌ ಕೊಟ್ಟಿದ್ದಾರೆ.

ಕಪಿಲ್‌ ಸಿಬಲ್‌ ಹಿನ್ನೆಲೆ ಏನು?

ದೇಶದ ಪ್ರಮುಖ ವಕೀಲರಲ್ಲಿ ಕಪಿಲ್‌ ಸಿಬಲ್‌ ಅವರು ಒಬ್ಬರಾಗಿದ್ದಾರೆ. ಪಂಜಾಬ್‌ನ ಜಲಂಧರ್‌ನವರಾದ ಕಪಿಲ್‌ ಸಿಬಲ್‌ ಅವರು ಹಾರ್ವರ್ಡ್‌ ಲಾ ಸ್ಕೂಲ್‌ನಲ್ಲಿ ಪದವಿ ಪಡೆದು, ವಕೀಲಿಕೆ ಆರಂಭಿಸಿದರು. 1983ರಲ್ಲಿ ಇವರು ಹಿರಿಯ ವಕೀಲ ಎಂಬ ಖ್ಯಾತಿ ಗಳಿಸಿದರು. ಇವರು 1989ರಿಂದ 1990ರವರೆಗೆ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಆಗಿದ್ದರು. ಇವರು 1995ರಿಂದ 2002ರ ಅವಧಿಯಲ್ಲಿ ಮೂರು ಬಾರಿ ಸುಪ್ರೀಂ ಕೋರ್ಟ್‌ ಬಾರ್‌ ಅಸೋಸಿಯೇಷನ್‌ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

ಕಾಂಗ್ರೆಸ್ ನಾಯಕರೂ ಆಗಿರುವ ಕಪಿಲ್‌ ಸಿಬಲ್‌ ಅವರು ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿದ್ದಾಗ ಸಚಿವರೂ ಆಗಿದ್ದರು. ರಾಜ್ಯಸಭೆ ಸದಸ್ಯರಾಗಿ, 2004ರಲ್ಲಿ ಚಾಂದಿನಿ ಚೌಕ್‌ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸ್ಮೃತಿ ಇರಾನಿ ಅವರನ್ನು ಸೋಲಿಸಿದ್ದರು. ಇದುವರೆಗೆ ಹಿರಿಯ ವಕೀಲ ಆದಿಶ್‌ ಅಗರ್ವಾಲ ಅವರು ಸುಪ್ರೀಂ ಕೋರ್ಟ್‌ ಬಾರ್‌ ಅಸೋಸಿಯೇಷನ್‌ ಅಧ್ಯಕ್ಷರಾಗಿದ್ದರು. ಈಗ ಕಪಿಲ್‌ ಸಿಬಲ್‌ ಅವರು ಮತ್ತೆ ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ: Ujjivan Small Finance Bank : ಉಜ್ಜೀವನ್ ಸ್ಮಾಲ್ ಫೈನಾನ್ಸ್ ಸಿಇಒ ಆಗಿ ಸಂಜೀವ್ ನೌಟಿಯಾಲ್ ನೇಮಕ

Continue Reading

ಕ್ರೀಡೆ

MS Dhoni : ಆರ್​​ಸಿಬಿ ವಿರುದ್ಧ ಬೌಲಿಂಗ್ ಮಾಡಲು ಅಭ್ಯಾಸ ನಡೆಸಿದ ಎಂ ಎಸ್​ ಧೋನಿ

MS Dhoni : ಧೋನಿ ಕಡಿಮೆ ವೇಗದ ಆಫ್-ಸ್ಪಿನ್ ಬೌಲಿಂಗ್ ಮಾಡುತ್ತಿರುವುದು ಕಂಡುಬಂದಿದೆ. ನೆಟ್ಸ್​ನಲ್ಲಿ ತಮ್ಮ ಕೈಚಳಕ ತೋರಿದ್ದಾರೆ. ಐಪಿಎಲ್ 2023 ರ ಸಮಯದಲ್ಲಿಯೂ ಧೋನಿ ಸಿಎಸ್​ಕೆ ಬ್ಯಾಟರ್​ಗಳಿಗೆ ನೆಟ್ಸ್​ನಲ್ಲಿ ಬೌಲಿಂಗ್ ಮಾಡುತ್ತಿರುವುದು ಕಂಡುಬಂದಿದೆ. ಸಿಎಸ್​ಕೆ ಸ್ಟಾರ್ ಬೌಲಿಂಗ್​ನ ಇತ್ತೀಚಿನ ವೀಡಿಯೊ ಈಗಾಗಲೇ ವೈರಲ್ ಆಗಿದೆ.

VISTARANEWS.COM


on

MS Dhoni
Koo

ಬೆಂಗಳೂರು: ಮೇ 18 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್​ಸಿಬಿ ಮತ್ತು ಸಿಎಸ್​ಕೆ ನಡುವಿನ ಪಂದ್ಯದ ಮೇಲೆ ಎಂಎಸ್ ಧೋನಿ (MS Dhoni) ಸಂಪೂರ್ಣ ಗಮನ ಹರಿಸಿದ್ದಾರೆ. ಸ್ಟಾರ್ ವಿಕೆಟ್ ಕೀಪರ್ ನೆಟ್ ಸೆಷನ್ ಸಮಯದಲ್ಲಿ ತಮ್ಮ ವಿಕೆಟ್​ಕೀಪಿಂಗ್​ ಗ್ಲೌಸ್ ಗಳೊಂದಿಗೆ ಸತತವಾಗಿ ಅಭ್ಯಾಸ ನಡೆಸುತ್ತಿದ್ದಾರೆ. ಏತನ್ಮಧ್ಯೆ ಅವರು ಸ್ವಲ್ಪ ಬೌಲಿಂಗ್ ಕೂಡ ಮಾಡುತ್ತಿದ್ದಾರೆ. ಧೋನಿ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಎಂದಿಗೂ ಬೌಲಿಂಗ್ ಮಾಡಿಲ್ಲ. ಆದರೆ ಆರ್​ಸಿಬಿ ವಿರುದ್ಧ ಬೌಲಿಂಗ್ ಮಾಡಬಲ್ಲರು ಎಂದು ಹೇಳಲಾಗುತ್ತಿದೆ!

ಧೋನಿ ಕಡಿಮೆ ವೇಗದ ಆಫ್-ಸ್ಪಿನ್ ಬೌಲಿಂಗ್ ಮಾಡುತ್ತಿರುವುದು ಕಂಡುಬಂದಿದೆ. ನೆಟ್ಸ್​ನಲ್ಲಿ ತಮ್ಮ ಕೈಚಳಕ ತೋರಿದ್ದಾರೆ. ಐಪಿಎಲ್ 2023 ರ ಸಮಯದಲ್ಲಿಯೂ ಧೋನಿ ಸಿಎಸ್​ಕೆ ಬ್ಯಾಟರ್​ಗಳಿಗೆ ನೆಟ್ಸ್​ನಲ್ಲಿ ಬೌಲಿಂಗ್ ಮಾಡುತ್ತಿರುವುದು ಕಂಡುಬಂದಿದೆ. ಸಿಎಸ್​ಕೆ ಸ್ಟಾರ್ ಬೌಲಿಂಗ್​ನ ಇತ್ತೀಚಿನ ವೀಡಿಯೊ ಈಗಾಗಲೇ ವೈರಲ್ ಆಗಿದೆ.

ನೆಟ್ಸ್​ನಲ್ಲಿ ತಾವು ಎದುರಿಸಿದ ಕಠಿಣ ಬೌಲರ್ ಧೋನಿ ಎಂದು ರೈನಾ ಒಮ್ಮೆ ಹೇಳಿದ್ದರು. ಅಭ್ಯಾಸದ ವೇಲೆ ಧೋನಿ ಎಸೆತಕ್ಕೆ ಔಟಾದರೆ ಅವರು ನಿಮ್ಮನ್ನು ಪದೇ ಪದೇ ಕಾಡುತ್ತಾರೆ. ಹೇಗೆ ಔಟ್ ಮಾಡಿದೆ ಎಂಬುದನ್ನು ನೆನಪಿಸುತ್ತಾರೆ ಎಂದು ಸಿಎಸ್​ಕೆ ಮಾಜಿ ಬ್ಯಾಟ್ಸ್ಮನ್ ಹೇಳಿದ್ದರು.

“ನಾನು ಎದುರಿಸಿದ ಕಠಿಣ ಬೌಲರ್​​ ಮುರಳೀಧರನ್ ಮತ್ತು ಮಾಲಿಂಗ ಎಂದು ಭಾವಿಸುತ್ತೇನೆ. ಆದರೆ ನೆಟ್ಸ್​ನಲ್ಲಿ ಅದು ಎಂಎಸ್ ಧೋನಿ. ಅವರಯ ನಿಮ್ಮನ್ನು ಔಟ್ ಮಾಡಿದರೆ ನೀವು ಒಂದೂವರೆ ತಿಂಗಳವರೆಗೆ ಅವರ ಬಳಿಗೆ ಹೋಗಲು ಸಾಧ್ಯವಾಗುವುದಿಲ್ಲ ಏಕೆಂದರೆ ಅವರು ಔಟಾದ ರೀತಿಯನ್ನು ಸನ್ನೆ ಮಾಡುತ್ತಲೇ ಇರುತ್ತಾರೆ. ಅವರು ನಿಮ್ಮನ್ನು ಹೇಗೆ ಔಟ್ ಮಾಡಿದನೆಂದು ನೆನಪಿಸುತ್ತಾರೆ . ಅವರು ಆಫ್-ಸ್ಪಿನ್, ಮಧ್ಯಮ ವೇಗ, ಲೆಗ್ ಸ್ಪಿನ್, ಎಲ್ಲವನ್ನೂ ಬೌಲಿಂಗ್ ಮಾಡುತ್ತಿದ್ದರು. ನೆಟ್ಸ್​ಬಲ್ಲಿ ಅವರು ತಮ್ಮ ಮುಂಭಾಗದ ಪಾದದ ನೋ-ಬಾಲ್​ಗಳನ್ನು ಸಹ ಸಮರ್ಥಿಸುತ್ತಿದ್ದರು. ಟೆಸ್ಟ್ ನೆಟ್ಸ್​ನಲ್ಲಿ ಅವರು ಬೌಲಿಂಗ್ ಚೆನ್ನಾಗಿ ಮಾಡುತ್ತಿದ್ದರು. ಇಂಗ್ಲೆಂಡ್​​ನಲ್ಲಿ ಅವರು ಅದನ್ನು ವೇಗದಲ್ಲಿ ಸ್ವಿಂಗ್ ಮಾಡುತ್ತಿದ್ದರು, “ಎಂದು ರೈನಾ ಹೇಳಿದ್ದರು.

ಇದನ್ನೂ ಓದಿ: MS Dhoni : ಆರ್​ಸಿಬಿಯವರು ಕೊಟ್ಟ ಬೆಂಗಳೂರಿನ ಸ್ಪೆಷಲ್​ ಚಹಾ ಕುಡಿದ ಧೋನಿ; ಇಲ್ಲಿದೆ ವಿಡಿಯೊ

ಧೋನಿ ಗುರುವಾರ ನೆಟ್ಸ್​ನಲ್ಲಿ ಬೌಲಿಂಗ್ ಮಾಡಿದ್ದರೂ, ಶನಿವಾರದ ಪಂದ್ಯದ ಸಮಯದಲ್ಲಿ ಸಿಎಸ್ಕೆ ಸ್ಟಾರ್ ಅದೇ ರೀತಿ ಮಾಡುವುದಿಲ್ಲ ಎಂದು ಅಭಿಮಾನಿಗಳು ಸಂಪೂರ್ಣವಾಗಿ ನಿರೀಕ್ಷಿಸಬಹುದು. ಧೋನಿ ಈ ಋತುವಿನಲ್ಲಿ ಕೆಲವು ಗಾಯದ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಚೆನ್ನೈನ ಮಾಜಿ ನಾಯಕ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ತಡವಾಗಿ ಬರಲು ಇದು ಕಾರಣವಾಗಿದೆ.

ಧೋನಿ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಬೌಲಿಂಗ್ ಮಾಡಿದ್ದಾರೆ. 50 ಓವರ್​ಗಳ ಸ್ವರೂಪದಲ್ಲಿ ಒಂದು ವಿಕೆಟ್ ಪಡೆದಿದ್ದಾರೆ. ಧೋನಿ ಆರ್​ಸಿಬಿ ಶಿಬಿರದೊಂದಿಗೆ ಸ್ವಲ್ಪ ಮೋಜಿನ ಸಮಯವನ್ನು ಕಳೆಯುತ್ತಿದ್ದರು. ಅವರೊಂದಿಗೆ ಚಹಾ ಕೂಡ ಸೇವಿಸಿದ್ದರು.

Continue Reading

ಕರ್ನಾಟಕ

Cauvery Dispute: ಕರ್ನಾಟಕದಿಂದ ಕಾವೇರಿ ನೀರು ಬಿಡಲು ಸಾಧ್ಯವಿಲ್ಲ; ತಮಿಳುನಾಡಿಗೆ CWRC ಚಾಟಿ

Cauvery Dispute: ಫೆಬ್ರವರಿಯಿಂದ ಮೇವರೆಗೆ ಕರ್ನಾಟಕವು ಪ್ರತಿ ತಿಂಗಳು 2.50 ಟಿಎಂಸಿಯಂತೆ ಪರಿಸರ ಹರಿವನ್ನು ನಿರಂತರವಾಗಿ ಬಿಡುಗಡೆ ಮಾಡಬೇಕು ಎಂದು ಕಳೆದ ಫೆಬ್ರವರಿಯಲ್ಲಿಯೇ ತಮಿಳುನಾಡು ಸಿಡಬ್ಲ್ಯೂಆರ್‌ಸಿ ಸಭೆಯಲ್ಲಿ ವಾದ ಮಂಡಿಸಿತ್ತು. ಸುಪ್ರೀಂ ಕೋರ್ಟ್‌ ಆದೇಶದಂತೆ ಮಾರ್ಚ್‌ ಹಾಗೂ ಏಪ್ರಿಲ್‌ನಲ್ಲಿ ಕರ್ನಾಟಕವು ತಮಿಳುನಾಡಿಗೆ ನೀರು ಬಿಟ್ಟಿತ್ತು.

VISTARANEWS.COM


on

cauvery dispute
Koo

ನವದೆಹಲಿ: ಕರ್ನಾಟಕದಲ್ಲಿ ಬರಗಾಲವಿದ್ದರೂ ಕಾವೇರಿ ನದಿ ನೀರು (Cauvery Dispute) ವಿಚಾರದಲ್ಲಿ ಮೊಂಡಾಟ ಪ್ರದರ್ಶಿಸುತ್ತಿದ್ದ ತಮಿಳುನಾಡಿಗೆ ಕಾವೇರಿ ನೀರು ನಿರ್ವಹಣಾ ಸಮಿತಿ (CWRC) ಸಮಿತಿ ಸಭೆಯಲ್ಲಿ ಭಾರಿ ಮುಖಭಂಗವಾಗಿದೆ. ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ತಮಿಳುನಾಡಿನ ವಾದವನ್ನು ಒಪ್ಪದ ಸಿಡಬ್ಲ್ಯೂಆರ್‌ಸಿಯು ಕರ್ನಾಟಕದಿಂದ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಇದರಿಂದಾಗಿ, ಸಮಿತಿ ಸಭೆಯಲ್ಲಿ ತಮಿಳುನಾಡಿಗೆ ಭಾರಿ ಮುಖಭಂಗವಾಗಿದೆ.

ತಮಿಳುನಾಡಿಗೆ ಕರ್ನಾಟಕದಿಂದ ಕಾವೇರಿ ನೀರು ಬಿಡಲು ಸಾಧ್ಯವಿಲ್ಲ ಎಂದು 2023-24ನೇ ಜಲವರ್ಷದ ಅಂತಿಮ ಸಭೆಯಲ್ಲಿ ಸಿಡಬ್ಲ್ಯೂಆರ್‌ಸಿ ಖಡಕ್‌ ಆದೇಶ ನೀಡಿದೆ. “ಕರ್ನಾಟಕದಲ್ಲಿ ತೀವ್ರ ಬರಗಾಲ ಇರುವುದರಿಂದ ಕಾವೇರಿ ನೀರು ಬಿಡಲು ಸಾಧ್ಯವಿಲ್ಲ. ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯಿಂದ ನೈಸರ್ಗಿಕವಾಗಿ ನದಿ ಸೇರುವ ನೀರನ್ನು ಬಳಸಿಕೊಳ್ಳಿ” ಎಂಬುದಾಗಿ ತಮಿಳುನಾಡಿಗೆ ಸೂಚನೆ ನೀಡಿದೆ. ಮೇ 21ರಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಭೆ ನಡೆಯಲಿದ್ದು, ಅಲ್ಲೂ ತಮಿಳುನಾಡು ತನ್ನ ಮೊಂಡುವಾದ ಮುಂದಿಡಲಿದೆ ಎಂದು ಹೇಳಲಾಗುತ್ತಿದೆ.

Cauvery water CWRC order

ಫೆಬ್ರವರಿಯಿಂದ ಮೇವರೆಗೆ ಕರ್ನಾಟಕವು ಪ್ರತಿ ತಿಂಗಳು 2.50 ಟಿಎಂಸಿಯಂತೆ ಪರಿಸರ ಹರಿವನ್ನು ನಿರಂತರವಾಗಿ ಬಿಡುಗಡೆ ಮಾಡಬೇಕು ಎಂದು ಕಳೆದ ಫೆಬ್ರವರಿಯಲ್ಲಿಯೇ ತಮಿಳುನಾಡು ಸಿಡಬ್ಲ್ಯೂಆರ್‌ಸಿ ಸಭೆಯಲ್ಲಿ ವಾದ ಮಂಡಿಸಿತ್ತು. ಸುಪ್ರೀಂ ಕೋರ್ಟ್‌ ಆದೇಶದಂತೆ ಮಾರ್ಚ್‌ ಹಾಗೂ ಏಪ್ರಿಲ್‌ನಲ್ಲಿ ಕರ್ನಾಟಕವು ತಮಿಳುನಾಡಿಗೆ ನೀರು ಬಿಟ್ಟಿತ್ತು. ಆದರೆ, ಮೇ ಅಂತ್ಯದವರೆಗೂ ನೀರು ಬಿಡಬೇಕು ಎಂಬುದು ತಮಿಳುನಾಡಿನ ವಾದವಾಗಿತ್ತು. ಇದನ್ನು ಸಿಡಬ್ಲ್ಯೂಆರ್‌ಸಿ ನಿರಾಕರಿಸಿದೆ.

ಕರ್ನಾಟಕದಲ್ಲಿ ಕೆಲ ದಿನಗಳಿಂದ ಮಳೆ ಬರುತ್ತಿದೆ. ಇಷ್ಟಾದರೂ ಅಣೆಕಟ್ಟುಗಳು ತುಂಬಿಲ್ಲ. ರಾಜ್ಯದ 200ಕ್ಕೂ ಅಧಿಕ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಮೇ 31 ದೇಶವನ್ನು ಮುಂಗಾರು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿರುವುದು ರೈತರ ಪಾಲಿಗೆ ಸಿಹಿ ಸುದ್ದಿಯೇ ಆಗಿದೆ. ಮೇ 27ರಿಂದ ಜೂನ್‌ 4ರ ಅವಧಿಯಲ್ಲಿ ಯಾವಾಗ ಬೇಕಾದರೂ ನೈಋತ್ಯ ಮುಂಗಾರು ಪ್ರವೇಶಿಸಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಪ್ರತಿ ವರ್ಷ ಜೂನ್‌ 1ರಂದು ಮುಂಗಾರು ಮಳೆಯು ಕೇರಳವನ್ನು ಪ್ರವೇಶಿಸಿ, ದೇಶಾದ್ಯಂತ ವ್ಯಾಪಿಸುವುದು ವಾಡಿಕೆಯಾಗಿದೆ. ಆದರೆ, ಹವಾಮಾನ ಇಲಾಖೆಯು ಈ ಬಾರಿ ಒಂದು ದಿನ ಮೊದಲೇ ಪ್ರವೇಶಿಸಲಿದೆ ಎಂದು ತಿಳಿಸಿದೆ. ಸೆಪ್ಟೆಂಬರ್‌ನಲ್ಲಿ ಮುಂಗಾರು ಮಳೆ ಅಂತ್ಯವಾಗಲಿದೆ.

ಇದನ್ನೂ ಓದಿ: HD Kumaraswamy: ಜನರ ಕಣ್ಣಿಗೆ ಮಣ್ಣೆರಚಬೇಡಿ; ಮಂಡ್ಯಕ್ಕೆ ಕಾವೇರಿ ಗ್ಯಾರಂಟಿ ಕೊಡಿ: ಕಾಂಗ್ರೆಸ್‌ಗೆ ಎಚ್‌ಡಿಕೆ ಸವಾಲು

Continue Reading
Advertisement
Pakistan
ಸಂಪಾದಕೀಯ25 seconds ago

ವಿಸ್ತಾರ ಸಂಪಾದಕೀಯ: ಒಪ್ಪಿಕೊಂಡರೆ ಸಾಲದು, ಪಾಕ್‌ ತನ್ನನ್ನು ಸರಿಪಡಿಸಿಕೊಳ್ಳಲಿ

Kapil Sibal
ದೇಶ39 seconds ago

Kapil Sibal: ಸುಪ್ರೀಂ ಕೋರ್ಟ್‌ ಬಾರ್‌ ಅಸೋಸಿಯೇಷನ್‌ ಅಧ್ಯಕ್ಷರಾಗಿ ಕಪಿಲ್‌ ಸಿಬಲ್‌ ಆಯ್ಕೆ

MS Dhoni
ಕ್ರೀಡೆ10 mins ago

MS Dhoni : ಆರ್​​ಸಿಬಿ ವಿರುದ್ಧ ಬೌಲಿಂಗ್ ಮಾಡಲು ಅಭ್ಯಾಸ ನಡೆಸಿದ ಎಂ ಎಸ್​ ಧೋನಿ

cauvery dispute
ಕರ್ನಾಟಕ22 mins ago

Cauvery Dispute: ಕರ್ನಾಟಕದಿಂದ ಕಾವೇರಿ ನೀರು ಬಿಡಲು ಸಾಧ್ಯವಿಲ್ಲ; ತಮಿಳುನಾಡಿಗೆ CWRC ಚಾಟಿ

MS Dhoni
ಪ್ರಮುಖ ಸುದ್ದಿ26 mins ago

MS Dhoni : ಆರ್​ಸಿಬಿಯವರು ಕೊಟ್ಟ ಬೆಂಗಳೂರಿನ ಸ್ಪೆಷಲ್​ ಚಹಾ ಕುಡಿದ ಧೋನಿ; ಇಲ್ಲಿದೆ ವಿಡಿಯೊ

Sri Vedavyasa Jayanti programme at Bengaluru
ಬೆಂಗಳೂರು41 mins ago

Bengaluru News: ಹರಿದಾಸ ಸಾಹಿತ್ಯ ಚಿಂತನೆಯಿಂದ ಬದುಕು ಸುಗಮ: ವಿ. ಅಪ್ಪಣ್ಣ ಆಚಾರ್ಯ

Opposition party leader r ashok latest statement in Mysuru
ಪ್ರಮುಖ ಸುದ್ದಿ43 mins ago

R Ashok: ಪೊಲೀಸ್‌ ಇಲಾಖೆ ಸತ್ತಿದೆಯೋ ಬದುಕಿದೆಯೋ ತಿಳಿಯುತ್ತಿಲ್ಲ: ಆರ್.ಅಶೋಕ್ ಆಕ್ರೋಶ

BJP district president N S Hegde pressmeet in Yallapur
ಉತ್ತರ ಕನ್ನಡ45 mins ago

Lok Sabha Election 2024: 2.5 ಲಕ್ಷ ಮತಗಳ ಅಂತರದಿಂದ ಕಾಗೇರಿ ಗೆಲುವು: ಬಿಜೆಪಿ ಜಿಲ್ಲಾಧ್ಯಕ್ಷರ ವಿಶ್ವಾಸ

IPL 2024
ಪ್ರಮುಖ ಸುದ್ದಿ48 mins ago

IPL 2024 : ಮಳೆಯಿಂದ ಪಂದ್ಯ ರದ್ದು, ಕೆಕೆಆರ್​, ಆರ್​ಆರ್​ ಬಳಿಕ ಪ್ಲೇಆಫ್​ಗೇರಿದ ಎಸ್​ಆರ್​ಎಚ್​​

Lady Constable
ದೇಶ2 hours ago

ಗಾಯಕನ ಹಾಡಿಗೆ ಮನಸೋತು ವೇದಿಕೆ ಮೇಲೆಯೇ ಕಿಸ್‌ ಕೊಟ್ಟ ಲೇಡಿ ಕಾನ್‌ಸ್ಟೆಬಲ್;‌ ಈಗ ಮುತ್ತು ತಂದಿದೆ ಕುತ್ತು!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ7 hours ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ10 hours ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು13 hours ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ2 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ2 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ2 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20242 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20242 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ2 days ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು3 days ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

ಟ್ರೆಂಡಿಂಗ್‌