777 Charlie: 6 ಮುದ್ದಾದ ಮರಿಗಳಿಗೆ ಜನ್ಮ ನೀಡಿದ ಚಾರ್ಲಿ: ರಕ್ಷಿತ್‌ ಶೆಟ್ಟಿ ಸರ್‌ಪ್ರೈಸ್‌ ಲೈವ್‌ ! - Vistara News

ಸಿನಿಮಾ

777 Charlie: 6 ಮುದ್ದಾದ ಮರಿಗಳಿಗೆ ಜನ್ಮ ನೀಡಿದ ಚಾರ್ಲಿ: ರಕ್ಷಿತ್‌ ಶೆಟ್ಟಿ ಸರ್‌ಪ್ರೈಸ್‌ ಲೈವ್‌ !

777 Charlie: 2022ರ ಜೂನ್​ 10ರಂದು ‘777 ಚಾರ್ಲಿ’ ಸಿನಿಮಾ ಬಿಡುಗಡೆ ಆಗಿತ್ತು. ಸಿನಿಮಾದಲ್ಲಿ ಚಾರ್ಲಿ ಮುಖ್ಯ ಪಾತ್ರ ವಹಿಸಿತ್ತು. ಸಿನಿಮಾದ ಕ್ಲೈಮ್ಯಾಕ್ಸ್​ನಲ್ಲಿ ಮರಿಗಳಿಗೆ ಚಾರ್ಲಿ ಜನ್ಮ ನೀಡಿತ್ತು. ಆದರೆ ರಿಯಲ್​ ಲೈಫ್​ನಲ್ಲಿ ಇಷ್ಟು ವರ್ಷ ಕಳೆದರೂ ಚಾರ್ಲಿಗೆ ತಾಯಿ ಆಗುವ ಸಮಯ ಬಂದಿರಲಿಲ್ಲ. ಈಗ ಅದು ನೆರವೇರಿದೆ. ಈ ಚಿತ್ರದಲ್ಲಿ ಚಾರ್ಲಿಯ ಹೃದಯಸ್ಪರ್ಶಿ ಅಭಿನಯ ರಕ್ಷಿತ್ ಶೆಟ್ಟಿ ಅಭಿಮಾನಿಗಳು ಮಾತ್ರವಲ್ಲದೆ ಪ್ಯಾನ್-ಇಂಡಿಯಾ ಪ್ರೇಕ್ಷಕರನ್ನೂ ಗೆದ್ದಿತ್ತು. ಇದೀಗ ಚಾರ್ಲಿ ಚಾರ್ಲಿಯಾಗಿರುವ ಸುದ್ದಿಯನ್ನು ಅಭಿಮಾನಿಗಳೊಂದಿಗೆ ರಕ್ಷಿತ್ ಶೆಟ್ಟಿ ಲೈವ್ ನಲ್ಲಿ ಹಂಚಿಕೊಂಡಿದ್ದಾರೆ.

VISTARANEWS.COM


on

777 Charlie Dog Gives Birth To 6 Puppies Rakshit Shetty on live
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

‘777 ಚಾರ್ಲಿ’ (777 Charlie) ಸಿನಿಮಾದಲ್ಲಿ ನಟಿಸಿದ ಚಾರ್ಲಿ ಈಗ ತಾಯಿ ಆಗಿದೆ. 6 ಮರಿಗಳಿಗೆ ಜನ್ಮ ನೀಡಿದೆ.

ನಟ ರಕ್ಷಿತ್ ಶೆಟ್ಟಿ (Rakshit Shetty) ಅವರು ಇನ್​ಸ್ಟಾಗ್ರಾಮ್​ನಲ್ಲಿ ಲೈವ್​ ಬಂದು ಅಭಿಮಾನಿಗಳಿಗೆ ಗುಡ್​ ನ್ಯೂಸ್​ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Cannes 2024: ʻಕಾನ್ ಫಿಲ್ಮ್ ಫೆಸ್ಟಿವಲ್‌ʼನಲ್ಲಿ ಪ್ರದರ್ಶನ ಕಾಣಲಿರುವ ಭಾರತೀಯ ಸಿನಿಮಾಗಳಿವು

2022ರ ಜೂನ್​ 10ರಂದು ‘777 ಚಾರ್ಲಿ’ ಸಿನಿಮಾ ಬಿಡುಗಡೆ ಆಗಿತ್ತು. ಸಿನಿಮಾದಲ್ಲಿ ಚಾರ್ಲಿ ಮುಖ್ಯ ಪಾತ್ರ ವಹಿಸಿತ್ತು. ಸಿನಿಮಾದ ಕ್ಲೈಮ್ಯಾಕ್ಸ್​ನಲ್ಲಿ ಮರಿಗಳಿಗೆ ಚಾರ್ಲಿ ಜನ್ಮ ನೀಡಿತ್ತು. ಆದರೆ ರಿಯಲ್​ ಲೈಫ್​ನಲ್ಲಿ ಇಷ್ಟು ವರ್ಷ ಕಳೆದರೂ ಚಾರ್ಲಿಗೆ ತಾಯಿ ಆಗುವ ಸಮಯ ಬಂದಿರಲಿಲ್ಲ. ಈಗ ಅದು ನೆರವೇರಿದೆ.

ರಕ್ಷಿತ್‌ ಶೆಟ್ಟಿ ಲೈವ್‌ಗೆ ಬಂದು ಮಾತನಾಡಿ ʻʻ777 ಚಾರ್ಲಿ ಸಿನಿಮಾ ಬಿಡುಗಡೆಯಾಗಿ 2 ವರ್ಷ ಆಗುತ್ತ ಬಂತು. ಒಂದು ವೇಳೆ ಚಾರ್ಲಿ ತಾಯಿಯಾದರೆ ಈ ಜರ್ನಿಗೆ ಒಂದು ಅರ್ಥ ಬರುತ್ತೆ ಎಂದು ನಾವು ಅದೆಷ್ಟೋ ಬಾರಿ ಯೋಚಿಸಿದ್ದೇವು. ಕಿರಣ್‌ ರಾಜ್‌ ನಾವೆಲ್ಲ ಚಾರ್ಲಿ ತಾಯಿಯಾಗಬೇಕು ಎಂದು ಕಾದಿದ್ದೆವುʼʼಎಂದರು.

ʻʻಪ್ರಮೋದ್‌ ಜತೆ ಚಾರ್ಲಿ ಇರುತ್ತದೆ. ಅವರು ಕಾಲ್‌ ಮಾಡಿದಾಗೆಲ್ಲ ಕೇಳುತ್ತಿದ್ದೆ. ಅದಕ್ಕೆ ವಯಸ್ಸು ಆಗಿದ್ದರಿಂದ ಏನಾಗತ್ತೋ ಗೊತ್ತಿಲ್ಲ ಅಂತ ಅವರು ಹೇಳುತ್ತಿದ್ದರು. ಮೇ 9ರಂದು ಚಾರ್ಲಿ 6 ಮರಿಗಳಿಗೆ ಜನ್ಮ ನೀಡಿದೆ. ಹಾಗಾಗಿ ಚಾರ್ಲಿ ಮತ್ತು ಅದರ ಮರಿಗಳನ್ನು ನೋಡಲು ನಾನು ಮೈಸೂರಿಗೆ ಬಂದೆ’ ಎಂದಿದ್ದಾರೆ ರಕ್ಷಿತ್​ ಶೆಟ್ಟಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Actor Darshan: ದರ್ಶನ್‌ಗೆ ಇಂದು ಮತ್ತೊಂದು ಅಗ್ನಿ ಪರೀಕ್ಷೆ; ಎರಡನೇ ಬಾರಿ ಪರಪ್ಪನ ಅಗ್ರಹಾರ ಜೈಲು ಸೇರುತ್ತಾರಾ ಚಾಲೆಂಜಿಂಗ್‌ ಸ್ಟಾರ್‌?

Actor Darshan: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ನಟ ದರ್ಶನ್‌  ಸೇರಿ ನಾಲ್ವರು ಆರೋಪಿಗಳ ಪೊಲೀಸ್‌ ಕಸ್ಟಡಿ ಅಂತ್ಯವಾಗುತ್ತಿದ್ದು, ಇಂದು (ಜೂನ್‌ 22) ಪೊಲೀಸರು ಮೂರನೇ ಬಾರಿಗೆ ನ್ಯಾಯಾಲಯದ ಮುಂದೆ ಹಾಜರು ಪಡಿಸಲಿದ್ದಾರೆ. ನಟ ದರ್ಶನ್ ಜತೆಗೆ ವಿನಯ್, ಪ್ರದೋಶ್ ಮತ್ತು ಧನರಾಜ್ ಕಸ್ಟಡಿ ಅಂತ್ಯವಾಗುತ್ತಿದ್ದು, ಪೊಲೀಸರು ಸಂಜೆ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

VISTARANEWS.COM


on

Actor Darshan
Koo

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಎರಡನೇ ಆರೋಪಿಯಾಗಿರುವ ನಟ ದರ್ಶನ್‌ (Darshan Arrested) ಸೇರಿ ನಾಲ್ವರು ಆರೋಪಿಗಳ ಪೊಲೀಸ್‌ ಕಸ್ಟಡಿ ಅಂತ್ಯವಾಗುತ್ತಿದ್ದು, ಇಂದು (ಜೂನ್‌ 22) ಪೊಲೀಸರು ಮೂರನೇ ಬಾರಿಗೆ ನ್ಯಾಯಾಲಯದ ಮುಂದೆ ಹಾಜರು ಪಡಿಸಲಿದ್ದಾರೆ. ಇಲ್ಲಿ ದರ್ಶನ್‌ ಭವಿಷ್ಯ ನಿರ್ಧಾರವಾಗಲಿದೆ.

ನಟ ದರ್ಶನ್ ಜತೆಗೆ ವಿನಯ್, ಪ್ರದೋಶ್ ಮತ್ತು ಧನರಾಜ್ ಕಸ್ಟಡಿ ಅಂತ್ಯವಾಗುತ್ತಿದ್ದು, ಪೊಲೀಸರು ಸಂಜೆ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಪ್ರಕರಣ ಸಂಬಂಧ ಜೂನ್ 11ರಂದು ಕಾಮಾಕ್ಷಿಪಾಳ್ಯ ಪೊಲೀಸರು ಮೈಸೂರಿನಲ್ಲಿ ದರ್ಶನ್‌ನನ್ನು ಬಂಧಿಸಿದ್ದರು. ಈಗಾಗಲೇ 12 ದಿನ ಪೊಲೀಸ್ ಕಸ್ಟಡಿಯಲ್ಲಿ ಕಳೆದಿರುವ ದರ್ಶನ್ ಮತ್ತು ಇನ್ನಿತರ ಆರೋಪಿಗಳಿಗೆ ಕೋರ್ಟ್‌ ಬಹುತೇಕ ನ್ಯಾಯಾಂಗ ಬಂಧನದ ಆದೇಶ ನೀಡುವ ಸಾಧ್ಯತೆ ಇದೆ.

ಒಂದುವೇಳೆ ನ್ಯಾಯಾಂಗ ಬಂಧನವಾದರೆ ದರ್ಶನ್‌ ಬೆಂಗಳೂರಿನ‌ ಪರಪ್ಪನ ಅಗ್ರಹಾರ ಜೈಲು ಸೇರಲಿದ್ದಾರೆ. ಈಗಾಗಲೇ ಪ್ರಕರಣದ ಎ1 ಆರೋಪಿ, ದರ್ಶನ್‌ ಸ್ನೇಹಿತೆ ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. 2011ರಲ್ಲಿ ಪತ್ನಿ ವಿಜಯಲಕ್ಷ್ಮೀ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ‌ ದರ್ಶನ್ ಜೈಲು ಸೇರಿದ್ದರು. ಇಂದು ಮತ್ತೆ ನ್ಯಾಯಾಂಗ ಬಂಧನವಾದರೆ ಅವರು ಎರಡನೇ ಬಾರಿಗೆ ಪರಪ್ಪನ ಅಗ್ರಹಾರ ಜೈಲು ಸೇರಿದಂತಾಗುತ್ತದೆ.

ಪೊಲೀಸರಿಂದ ಸಿದ್ಧತೆ

ದರ್ಶನ್ ಸೇರಿ 4 ಜನ ಬಂಧಿತ ಆರೋಪಿಗಳನ್ನು ಇಂದು ಕೋರ್ಟ್‌ಗೆ ಹಾಜರು ಪಡಿಸಲಿರುವ ಪೊಲೀಸರು ಅದಕ್ಕಾಗಿ ಸಿದ್ಧತೆ ಕೈಗೊಂಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಸಂಬಂಧ ಕಳೆದ 12 ದಿನಗಳಿಂದ ಎಲ್ಲ 17 ಆರೋಪಿಗಳ ವಿಚಾರಣೆ ನಡೆಸಿರುವ ಪೊಲೀಸರು ಈಗಾಗಲೇ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ನಂತರ ಕೃತ್ಯಕ್ಕೆ ಸಂಬಂಧಿಸಿದ ಹಲವೆಡೆ ಮಹಜರು ಪ್ರಕ್ರಿಯೆ ನಡೆಸಿ, ಕೊಲೆಗೆ ಸಂಬಂಧಿಸಿದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನೂ ಸಂಗ್ರಹಿಸಿದ್ದಾರೆ.

ಕೊಲೆ ನಡೆದ ಆರ್.ಆರ್‌.ನಗರ ಶೆಡ್ ಬಳಿಯಿರುವ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ, ಮೃತದೇಹ ಪತ್ತೆಯಾದ ಜಾಗ, ಆರೋಪಿಗಳು ಚಲನವಲನ ನಡೆಸಿದ್ದ ಜಾಗಗಳಲ್ಲಿನ ಸಾಕ್ಷ್ಯ ಕಲೆ ಹಾಕಿದ್ದಾರೆ. ಈಗಾಗಲೇ ಕೃತ್ಯಕ್ಕೆ ಬಳಸಿದ್ದ ವಸ್ತುಗಳು ಸೀಜ್ ಮಾಡಲಾಗಿದೆ. ಕೃತ್ಯ ನಡೆದ ದಿನ ಆರೋಪಿಗಳ ಸಂಪರ್ಕದಲ್ಲಿದ್ದ ನಟ ಚಿಕ್ಕಣ್ಣ, ದರ್ಶನ್ ಪತ್ನಿ ವಿಜಯಲಕ್ಷ್ಮೀ ಮತ್ತಿತರರ ಹೇಳಿಕೆಗಳನ್ನೂ ದಾಖಲಿಸಲಾಗಿದೆ.

ಡಿ ಗ್ಯಾಂಗ್ ಕೊಲೆಯ ಆರೋಪ ಸಾಬೀತು ಪಡಿಸಲು ಪ್ರತಿಯೊಂದು ಆಯಾಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳ ಬಟ್ಟೆಗಳು, ರಕ್ತ ಮತ್ತು ಕೂದಲಿನ ಮಾದರಿ ಪಡೆದು ಎಫ್ಎಸ್ಎಲ್‌ಗೆ ರವಾನಿಸಿದ್ದಾರೆ. ಆರೋಪಿಗಳ ಮೊಬೈಲ್ ಫೋನ್ ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗಿದ್ದು, ಮೊಬೈಲ್ ಡೇಟಾ ರಿಟ್ರೀವ್ ಮಾಡಿ ತನಿಖೆ ಕೈಗೊಳ್ಳಲಾಗಿದೆ. ತನಿಖೆ ವಿಚಾರವಾಗಿ ಖುದ್ದು ಕಮಿಷನರ್ ದಯಾನಂದ್ ನಿಗಾ ವಹಿಸಿದ್ದು, ಪ್ರತಿದಿನ ತನಿಖೆ ‌ವರದಿ ಪಡೆದು‌ ಚಾರ್ಜ್ ಶೀಟ್ ತಯಾರಿಕೆಗೆ ಸಿದ್ಧತೆ ನಡೆಸಿದ್ದಾರೆ. ದರ್ಶನ್‌ ಜೈಲಿಗೆ ಹೋಗುತ್ತಾರಾ ಎನ್ನುವ ಪ್ರಶ್ನೆಗೆ ಇಂದು ಉತ್ತರ ಸಿಗಲಿದೆ.

ಇದನ್ನೂ ಓದಿ: Darshan Arrested: ದರ್ಶನ್‌ ಸೇರಿ ನಾಲ್ವರನ್ನೇ ಪೊಲೀಸರು ಕಸ್ಟಡಿಗೆ ಪಡೆದಿದ್ದೇಕೆ? ಯಾವೆಲ್ಲ ತನಿಖೆ ಬಾಕಿ ಇದೆ?

Continue Reading

ಕರ್ನಾಟಕ

Kalki 2898 AD: ‘ಕಲ್ಕಿ 2898 AD’ ಚಿತ್ರದ ಫೈನಲ್‌ ಟ್ರೇಲರ್‌ ಹೀಗಿದೆ ನೋಡಿ! ಜೂ.27ರಂದು ಚಿತ್ರ ರಿಲೀಸ್

Kalki 2898 AD: ‘ಕಲ್ಕಿ 2898 AD’ ಚಿತ್ರದ ಬಹು ನಿರೀಕ್ಷಿತ ಬಿಡುಗಡೆಯ ಟ್ರೈಲರ್ ಅಂತಿಮವಾಗಿ ಅನಾವರಣಗೊಂಡಿದೆ. ಮೊದಲ ನೋಟವು ಭಾರತೀಯ ಪುರಾಣಗಳಲ್ಲಿ ಬೇರೂರಿರುವ ಅಸಾಧಾರಣ ‘ಕಲ್ಕಿ 2898 AD’ ಸಿನಿಮೀಯ ಬ್ರಹ್ಮಾಂಡವನ್ನು ಪ್ರೇಕ್ಷಕರಿಗೆ ಪರಿಚಯಿಸಿದರೆ, ಇದೀಗ ಬಿಡುಗಡೆ ಆಗಿರುವ ಟ್ರೇಲರ್ ಚಿತ್ರದೊಳಗಿನ ಇನ್ನಷ್ಟ ಆಳವನ್ನು ನೋಡುಗನಿಗೆ ಪರಿಚಯಿಸಿದೆ. ಇದು ಮಹಾಕಾವ್ಯದ ಇನ್ನೊಂದು ಹಂತದ ಬಗ್ಗೆ ಸುಳಿವು ನೀಡುತ್ತದೆ.

VISTARANEWS.COM


on

Kalki 2898 AD Final Trailer Released
Koo

ಬೆಂಗಳೂರು: ವೈಜ್ಞಾನಿಕ ಮತ್ತು ಕಾಲ್ಪನಿಕ ಸಮ್ಮಿಶ್ರಣದ ದೃಶ್ಯಕಾವ್ಯ ‘ಕಲ್ಕಿ 2898 AD’ ಚಿತ್ರದ ಬಹು ನಿರೀಕ್ಷಿತ ಬಿಡುಗಡೆಯ ಟ್ರೈಲರ್ ಅಂತಿಮವಾಗಿ ಅನಾವರಣಗೊಂಡಿದೆ. ಮೊದಲ ನೋಟವು ಭಾರತೀಯ ಪುರಾಣಗಳಲ್ಲಿ ಬೇರೂರಿರುವ ಅಸಾಧಾರಣ ‘ಕಲ್ಕಿ 2898 AD’ (Kalki 2898 AD) ಸಿನಿಮೀಯ ಬ್ರಹ್ಮಾಂಡವನ್ನು ಪ್ರೇಕ್ಷಕರಿಗೆ ಪರಿಚಯಿಸಿದರೆ, ಇದೀಗ ಬಿಡುಗಡೆ ಆಗಿರುವ ಟ್ರೇಲರ್ ಚಿತ್ರದೊಳಗಿನ ಇನ್ನಷ್ಟ ಆಳವನ್ನು ನೋಡುಗನಿಗೆ ಪರಿಚಯಿಸಿದೆ. ಇದು ಮಹಾಕಾವ್ಯದ ಇನ್ನೊಂದು ಹಂತದ ಬಗ್ಗೆ ಸುಳಿವು ನೀಡುತ್ತದೆ.

ಟ್ರೇಲರ್‌ನಲ್ಲಿ ಒಂದಕ್ಕಿಂತ ಒಂದು ಮೀರಿಸುವ ಪಾತ್ರಗಳೇ ಹೈಲೈಟ್.‌ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ‘ಅಶ್ವತ್ಥಾಮ’ ಆಗಿ ಧೈರ್ಯಶಾಲಿ ಸಾಹಸಗಳನ್ನು ಪ್ರದರ್ಶಿಸುತ್ತಾರೆ. ಉಳಗನಾಯಗನ್ ಕಮಲ್ ಹಾಸನ್ ಗುರುತಿಸಲಾಗದ ಇನ್ನೂ ಮಾರಣಾಂತಿಕ ಅವತಾರದಲ್ಲಿ ‘ಯಾಸ್ಕಿನ್’ ಆಗಿ ಕಾಣಿಸಿಕೊಂಡಿದ್ದಾರೆ. ಪ್ರಭಾಸ್ ಭೈರವನಾಗಿ, ದೀಪಿಕಾ ಪಡುಕೋಣೆ ‘ಸುಮತಿ’ ಪಾತ್ರದಲ್ಲಿ ಎದುರಾಗಿದ್ದಾರೆ. ದಿಶಾ ಪಟಾನಿ ‘ರಾಕ್ಸಿ’ ಖಡಕ್‌ ಆಗಿಯೇ ಮಿಂಚು ಹರಿಸಿದ್ದಾರೆ.

ಇದನ್ನೂ ಓದಿ: Rishabh Pant : ವಿಶ್ವ ಕಪ್​ನಲ್ಲಿ ವಿನೂತನ ವಿಕೆಟ್​ಕೀಪಿಂಗ್​​ ದಾಖಲೆ ಬರೆದ ರಿಷಭ್​ ಪಂತ್​

ʼಕಲ್ಕಿ 2898 ADʼ ಚಿತ್ರದ ಟ್ರೇಲರ್‌ನಲ್ಲಿ ಬಗೆಬಗೆ ವಿಭಿನ್ನ ಪ್ರಪಂಚಗಳನ್ನು ಕಾಣಬಹುದು. ಒಂದು ಕಾಶಿ, ಅದರ ಉಳಿವಿಗಾಗಿ ಹೋರಾಡುತ್ತಿರುವ, ಕೊನೆಯದಾಗಿ ಉಳಿದ ನಗರವೆಂದು ಬಿಂಬಿಸಲಾಗಿದೆ. ದೃಶ್ಯ ವೈಭವವೇ ಇಡೀ ಟ್ರೇಲರ್‌ನ ಜೀವಾಳ. ಊಹೆಗೂ ನಿಲುಕದ ಒಂದಷ್ಟು ಅಚ್ಚರಿಗೆ ದೂಡುವ ದೃಶ್ಯಗಳೇ ಇಲ್ಲಿನ ಹೈಲೈಟ್.‌

ಅತ್ಯುತ್ತಮ ಹಿನ್ನೆಲೆ ಸ್ಕೋರ್, ಹೈ ಕ್ಲಾಸ್ VFX ಮತ್ತು ರೋಮಾಂಚನಗೊಳಿಸುವ ದೃಶ್ಯಗಳೊಂದಿಗೆ, ಈ ಸಿನಿಮಾ ಮೂಡಿಬಂದಿದೆ. ತೆಲುಗು, ಹಿಂದಿ, ತಮಿಳು, ಮಲಯಾಳಂ, ಕನ್ನಡ ಮತ್ತು ಇಂಗ್ಲಿಷ್ ಸೇರಿದಂತೆ ಬಹು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.

‘ಕಲ್ಕಿ 2898 AD’ ಚಿತ್ರದಲ್ಲಿ ನಿರ್ದೇಶಕ ನಾಗ್ ಅಶ್ವಿನ್ ಅವರ ದೂರದೃಷ್ಟಿಯ ವಿಧಾನವು ಭಾರತೀಯ ಸಿನಿಮಾವನ್ನು ಅದರ ನೆಲದ ದೃಶ್ಯಗಳು ಮತ್ತು ಕಥೆ ಹೇಳುವ ಮೂಲಕ ಮರುವ್ಯಾಖ್ಯಾನಿಸುವ ಭರವಸೆ ನೀಡುತ್ತದೆ. ‘ಕಲ್ಕಿ 2898 AD’ ನಿಜವಾದ ಪ್ಯಾನ್-ಇಂಡಿಯನ್ ಸಿನಿಮಾ ಎನಿಸಿಕೊಂಡಿದೆ.

ಇದನ್ನೂ ಓದಿ: Pralhad Joshi: ಕಿಮ್ಸ್‌ಗೆ ಅತ್ಯಾಧುನಿಕ “ವೈರಾಣು ಸಂಶೋಧನೆ, ರೋಗ ನಿರ್ಣಯ ಪ್ರಯೋಗಾಲಯ” ಮಂಜೂರು

ತಾರಾಗಣದಲ್ಲಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ಪ್ರಭಾಸ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ನಾಗ್ ಅಶ್ವಿನ್ ನಿರ್ದೇಶಿಸಿದ್ದಾರೆ ಮತ್ತು ವೈಜಯಂತಿ ಮೂವೀಸ್ ಬಂಡವಾಳ ಹೂಡಿದೆ. ಈ ಬಹುಭಾಷಾ, ಪುರಾಣ- ಪ್ರೇರಿತ ವೈಜ್ಞಾನಿಕ ಕಥೆಯುಳ್ಳ ಸಿನಿಮಾ, ಜೂನ್ 27ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ‌

Continue Reading

ಬಾಲಿವುಡ್

Sonakshi Sinha: ಸೋನಾಕ್ಷಿ ಸಿನ್ಹಾ-ಜಹೀರ್‌ ಇಕ್ಬಾಲ್‌ ಮದುವೆ; ಮೆಹಂದಿ ಶಾಸ್ತ್ರದ ವೇಳೆ ಪತಿ ಜತೆ ನಟಿ ಮಿಂಚಿಂಗ್!

Sonakshi Sinha: ಸೋನಾಕ್ಷಿ ಸಿನ್ಹಾ ಅವರು ಮನೆಯವರ ಒಪ್ಪಿಗೆ ಪಡೆಯುವುದು ಬಿಡಿ, ಕನಿಷ್ಠ ಮಾಹಿತಿಯನ್ನೂ ನೀಡದೆ ಮದುವೆ ದಿನಾಂಕ ಫಿಕ್ಸ್‌ ಮಾಡಿರುವುದು ಆಕೆಯ ತಂದೆ ಶತ್ರುಘ್ನ ಸಿನ್ಹಾ ಮಾತ್ರವಲ್ಲ, ತಾಯಿ ಹಾಗೂ ಸಹೋದರನಿಗೂ ಬೇಸರ ತಂದಿತ್ತು. ಇದರಿಂದಾಗಿ ಶತ್ರುಘ್ನ ಸಿನ್ಹಾ ಮಾತ್ರವಲ್ಲದೆ ತಾಯಿ, ಸಹೋದರನೂ ಸೋನಾಕ್ಷಿ ಮದುವೆಗೆ ಹೋಗುವುದಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಈಗ ಶತ್ರುಘ್ನ ಮುನಿಸು ಕೂಡ ಶಮನವಾಗಿದೆ. ಇದರ ಮಧ್ಯೆಯೇ, ಸೋನಾಕ್ಷಿ ಸಿನ್ಹಾಗೆ ಮೆಹಂದಿ ಹಾಕುವ ಶಾಸ್ತ್ರವು ಅದ್ಧೂರಿಯಾಗಿ ನೆರವೇರಿದೆ.

VISTARANEWS.COM


on

Sonakshi Sinha
Koo

ಮುಂಬೈ: ಬಾಲಿವುಡ್ ನಟಿ (Bollywood Actress) ಸೋನಾಕ್ಷಿ ಸಿನ್ಹಾ (Sonakshi Sinha) ಅವರು ಮುಸ್ಲಿಂ ಯುವಕ ಜಹೀರ್‌ ಇಕ್ಬಾಲ್‌ (Zaheer Iqbal) ಅವರ ಜತೆ ಮದುವೆಯಾಗುತ್ತಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ತಂದಿದೆ. ಮುಂಬೈನಲ್ಲಿ ಸೋನಾಕ್ಷಿ ಸಿನ್ಹಾ ಅವರು ಜೂನ್‌ 23ರಂದು ಮದುವೆಯಾಗಲಿದ್ದು, ಶುಕ್ರವಾರ (ಜೂನ್‌ 21) ಮೆಹಂದಿ ಶಾಸ್ತ್ರವೂ ಅದ್ಧೂರಿಯಾಗಿ ನೆರವೇರಿದೆ. ಮೆಹಂದಿ ಶಾಸ್ತ್ರದ ಮೊದಲ ಫೋಟೊ ಕೂಡ ಲಭ್ಯವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಮುಂಬೈನಲ್ಲಿ ನಡೆದ ಮೆಹಂದಿ ಶಾಸ್ತ್ರದಲ್ಲಿ ಕುಟುಂಬಸ್ಥರು ಹಾಗೂ ಆಪ್ತರು ಭಾಗವಹಿಸಿದ್ದಾರೆ. ಸೋನಾಕ್ಷಿ ಸಿನ್ಹಾ ಅವರು ಜಹೀರ್‌ ಇಕ್ಬಾಲ್‌ ಹಾಗೂ ಗೆಳೆಯರೊಂದಿಗೆ ನಿಂತಿರುವ ಫೋಟೊ ಲಭ್ಯವಾಗಿದೆ. ಜಹೀರ್‌ ಇಕ್ಬಾಲ್‌ ಅವರ ಸಹೋದರಿ ಸನಮ್‌ ರತಾನ್ಸಿ ಅವರು ಇನ್‌ಸ್ಟಾಗ್ರಾಂನಲ್ಲಿ ಫೋಟೊ ಹಂಚಿಕೊಂಡಿದ್ದಾರೆ. ಜಹೀರ್‌ ಇಕ್ಬಾಲ್‌ ಕೂಡ ಕುರ್ತಾ ಧರಿಸಿ ಭಾವಿ ಪತ್ನಿಯೊಂದಿಗೆ ಮಿಂಚಿದ್ದಾರೆ. ಸೋನಾಕ್ಷಿ ಸಿನ್ಹಾ ಅವರ ಫೋಟೊ ವೈರಲ್‌ ಆಗುತ್ತಲೇ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಮದುವೆಗೆ ಹಾಜರ್‌ ಎಂದ ಶತ್ರುಘ್ನ ಸಿನ್ಹಾ

ಮುಸ್ಲಿಂ ಯುವಕನ ಜತೆ ಮದುವೆಯಾಗುತ್ತಿರುವುದಕ್ಕೆ, ಅದರಲ್ಲೂ ಮದುವೆ ದಿನಾಂಕವನ್ನೂ ಹೇಳದಿರುವುದಕ್ಕೆ ಮೊದಲು ನಟ, ಸೋನಾಕ್ಷಿ ಸಿನ್ಹಾ ಅವರ ತಂದೆ ಶತ್ರುಘ್ನ ಸಿನ್ಹಾ ಅವರು ಇದಕ್ಕೂ ಮೊದಲು ಅಸಮಾಧಾನ ವ್ಯಕ್ತಪಡಿಸಿದ್ದರು. ಶತ್ರುಘ್ನ ಸಿನ್ಹಾ, ನಟಿಯ ತಾಯಿ ಹಾಗೂ ಸಹೋದರ ಕೂಡ ಭಾಗಿಯಾಗುವುದಿಲ್ಲ ಎಂದು ಹೇಳಲಾಗಿತ್ತು. ಆದರೆ, ವದಂತಿಗಳಿಗೆಲ್ಲ ಶತ್ರುಘ್ನ ಸಿನ್ಹಾ ಅವರು ತೆರೆ ಎಳೆದಿದ್ದಾರೆ. “ಮೊದಲು ಸಣ್ಣಪುಟ್ಟ ಗೊಂದಲಗಳು ಸೃಷ್ಟಿಯಾಗಿದ್ದವು. ಈಗ ಎಲ್ಲವೂ ಬಗೆಹರಿದಿದೆ. ಜೂನ್‌ 23ರಂದು ನಾವೆಲ್ಲ ಮದುವೆಗೆ ಹೋಗಲಿದ್ದೇವೆ” ಎಂದು ತಿಳಿಸಿದ್ದಾರೆ.

ಕಳೆದ ವಾರವಷ್ಟೇ ಸೋನಾಕ್ಷಿ ಅವರು ತಮ್ಮ ಬಹುಕಾಲದ ಗೆಳೆಯ ಜಹೀರ್ ಇಕ್ಬಾಲ್ ಅವರನ್ನು ವರಿಸುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದ್ದು, ಬಳಿಕ ಇದನ್ನು ಮದುವೆಯ ಆಮಂತ್ರಣವು ದೃಢಪಡಿಸಿತು. ಸೋನಾಕ್ಷಿ ಏಳು ವರ್ಷಗಳಿಂದ ಜಹೀರ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ. ಮದುವೆಯ ವದಂತಿಗಳಿಗೆ ಮೊದಲ ಪ್ರತಿಕ್ರಿಯೆ ನೀಡಿದ ಶತ್ರುಘ್ನ ಅವರು ಮದುವೆಯ ಬಗ್ಗೆ ತಿಳಿದಿರಲಿಲ್ಲ ಎಂದು ಒಪ್ಪಿಕೊಂಡರು. ಮಾತ್ರವಲ್ಲದೇ ಅವರು ಇದರಿಂದ ಅಸಮಾಧಾನಗೊಂಡಿರುವುದು ಅವರ ಹೇಳಿಕೆಯಿಂದ ತಿಳಿದು ಬಂದಿತ್ತು. ನಂತರ ಎಲ್ಲವೂ ಸರಿಹೋಗಿದೆ.

ಇದನ್ನೂ ಓದಿ: Sonakshi Sinha: ಮುಸ್ಲಿಂ ಯುವಕನ ಜತೆ ಸೋನಾಕ್ಷಿ ಸಿನ್ಹಾ ವಿವಾಹ; ತಾಯಿ, ಸಹೋದರನೂ ಮದುವೆಗೆ ಹೋಗಲ್ಲ?

Continue Reading

Latest

Actress Milana Nagaraj: ಪತಿಯ ಹುಟ್ಟುಹಬ್ಬದಂದೇ ಮಿಲನಾ ನಾಗರಾಜ್ ʼಬೇಬಿ ಶವರ್ʼ; ವಿಡಿಯೊ ನೋಡಿ

Actress Milana Nagaraj: ಹೊಟ್ಟೆಯೊಳಗೆ ಹೊಸ ಜೀವವೊಂದು ಮಿಸುಕಾಡುತ್ತಿದ್ದರೆ ಅದರ ಖುಷಿ ಹೇಳತೀರದು. ನಟಿ ಮಿಲನಾ ನಾಗರಾಜ್ ಅವರು ಈಗ ಈ ಖುಷಿಯ ಕ್ಷಣಗಳನ್ನು ಅನುಭವಿಸುತ್ತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಪುಟಾಣಿ ಜೀವವೊಂದು ಅವರ ಮಡಿಲು ಸೇರಲಿದೆ. ಈಗಂತೂ ಎಲ್ಲರೂ ಬೇಬಿ ಶವರ್ ಅನ್ನು ವಿಶೇಷವಾಗಿ ಆಚರಿಸಿಕೊಳ್ಳುತ್ತಿದ್ದಾರೆ. ನಟಿ ಮಿಲನಾ ನಾಗರಾಜ್ ಕೂಡ ತಮ್ಮ ಬೇಬಿ ಶವರ್ ಅನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ.ಪತಿ ಡಾರ್ಲಿಂಗ್ ಕೃಷ್ಣ ಅವರ ಜನುಮದಿನದಂದೇ ತಮ್ಮ ಬೇಬಿ ಶವರ್ ಅನ್ನು ಸೆಲೆಬ್ರೆಟ್ ಮಾಡಿಕೊಳ್ಳುವ ಮೂಲಕ ಹುಟ್ಟುಹಬ್ಬವನ್ನು ವಿಶೇಷಗೊಳಿಸಿದ್ದಾರೆ.

VISTARANEWS.COM


on

Actress Milana Nagaraj
Koo

ಬೆಂಗಳೂರು: ಸ್ಯಾಂಡಲ್‌ವುಡ್‌ನ ಕ್ಯೂಟ್ ಕಪಲ್‌ಗಳಲ್ಲಿ ನಟಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಜೋಡಿ ಕೂಡ ಒಂದು. ಪ್ರೀತಿಸಿ ಮದುವೆಯಾದ ಈ ದಂಪತಿ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿರುತ್ತಾರೆ. ಇದೀಗ ತಾಯಿಯಾಗುತ್ತಿರುವ ಮಿಲನಾ ನಾಗರಾಜ್ (Actress Milana Nagaraj) ಅವರು ತಮ್ಮ ಬೇಬಿ ಶವರ್‌ನಲ್ಲಿ ತುಂಬಾ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್ ನಟ ಡಾರ್ಲಿಂಗ್ ಕೃಷ್ಣ ಅವರ ಜನುಮ ದಿನ ಜೂನ್ 12ರಂದು. ಈ ಬಾರಿ ಮಿಲನಾ ನಾಗರಾಜ್ ಅವರ ಬೇಬಿ ಶವರ್ ಕೂಡ ಅದೇ ದಿನ ಮಾಡಲಾಗಿದೆ. ಮಿಲನಾ ನಾಗರಾಜ್ ಅವರು ಪತಿಯ ಹುಟ್ಟುಹಬ್ಬದ ಸಂಭ್ರಮದ ಜೊತೆಗೆ ತಮ್ಮ ಬೇಬಿ ಶವರ್‌ ಅನ್ನು ಒಟ್ಟಿಗೇ ಸೆಲೆಬ್ರೆಟ್ ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ಪೋಟೊಗಳನ್ನು ಮಿಲನಾ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಮತ್ತು ಈ ದಿನವನ್ನು ತಮ್ಮ ಪತಿಗಾಗಿ ವಿಶೇಷಗೊಳಿಸಲು ಅವರು ಈ ರೀತಿ ಯೋಜನೆ ಮಾಡಿದ್ದರು ಎಂಬುದಾಗಿ ತಿಳಿಸಿದ್ದಾರೆ.

ಹಾಗೆಯೇ ಮಿಲನಾ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹುಟ್ಟುಹಬ್ಬದ ಪಾರ್ಟಿಯ ಸಣ್ಣ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ವಿಶೇಷವಾದುದೆಂದರೆ, ಪಿಂಟ್ ರೆಸ್ಟ್ ಶೈಲಿಯ ಹೊರಾಂಗಣ ಸೆಟಪ್ ನಲ್ಲಿರುವ ಬೋರ್ಡ್. ಇದರಲ್ಲಿ “ತಂದೆಯಾಗಲಿರುವವರಿಗೆ ಹುಟ್ಟು ಹಬ್ಬದ ಶುಭಾಶಯಗಳು” ಎಂದು ಬರೆಯಲಾಗಿದೆ.

ಈ ವರ್ಷದ ಮಾರ್ಚ್‌ನಲ್ಲಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಅವರು ಸೋಶಿಯಲ್ ಮೀಡಿಯಾದಲ್ಲಿ ಮಗುವಿನ ಪೋಟೊವೊಂದನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿರುವುದಾಗಿ ಘೋಷಿಸಿದರು. ಹಾಗೂ “ನಮ್ಮನ್ನು ಆಶೀರ್ವದಿಸಿ” ಎಂದು ಶೀರ್ಷಿಕೆ ನೀಡಿದ್ದರು. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಮಗು ಜನಿಸಲಿದೆ ಎಂದು ದಂಪತಿ ಬಹಿರಂಗಪಡಿಸಿದ್ದಾರೆ. ಈ ಪೋಸ್ಟ್ ಗೆ ಕನ್ನಡ ಚಿತ್ರರಂಗದವರು ಅಭಿನಂದನೆ ಸಲ್ಲಿಸಿದ್ದರು.

ಇದನ್ನೂ ಓದಿ: ರೈಲ್ವೆ ಟಿಕೆಟ್ ಈ ರೀತಿ ಬುಕ್ ಮಾಡಿದರೆ ಜೈಲೂಟ ಗ್ಯಾರಂಟಿ!

ಪ್ರೀತಂ ಗುಬ್ಬಿ ನಿರ್ದೇಶನದ ‘ನಮ್ ದುನಿಯಾ ನಮ್ ಸ್ಟೈಲ್’ ಚಿತ್ರದ ಚಿತ್ರೀಕರಣದ ವೇಳೆ ಭೇಟಿಯಾದ ಈ ಜೋಡಿ 2015ರಿಂದ ಡೇಟಿಂಗ್ ಪ್ರಾರಂಭಿಸಿದರು. ನಂತರ 2021ರಲ್ಲಿ ಬೆಂಗಳೂರಿನಲ್ಲಿ ಸಾಂಪ್ರದಾಯಿಕವಾಗಿ ವಿವಾಹವಾಗಿದ್ದರು. ಇದೀಗ ಮೊದಲ ಮಗುವಿನ ಬರುವಿಕೆಗಾಗಿ ಕಾಯುತ್ತಿದ್ದಾರೆ.

Continue Reading
Advertisement
Elon Musk
ತಂತ್ರಜ್ಞಾನ8 mins ago

Elon Musk: ಕೆಲವೇ ವರ್ಷಗಳಲ್ಲಿ ಮೊಬೈಲ್‌ ಫೋನೇ ಇರುವುದಿಲ್ಲ; ಬರಲಿದೆ ಹೊಸ ತಂತ್ರಜ್ಞಾನ!

Actor Darshan
ಕ್ರೈಂ14 mins ago

Actor Darshan: ದರ್ಶನ್‌ಗೆ ಇಂದು ಮತ್ತೊಂದು ಅಗ್ನಿ ಪರೀಕ್ಷೆ; ಎರಡನೇ ಬಾರಿ ಪರಪ್ಪನ ಅಗ್ರಹಾರ ಜೈಲು ಸೇರುತ್ತಾರಾ ಚಾಲೆಂಜಿಂಗ್‌ ಸ್ಟಾರ್‌?

ACP Chanda
Latest38 mins ago

ACP Chandan: ಕಾಲೇಜಿನಲ್ಲಿ ಇಂಗ್ಲಿಷ್ ಬರದೆ ಒದ್ದಾಡುತ್ತಿದ್ದ ಎಸಿಪಿ ಚಂದನ್ ಈ ಭಾಷೆ ಕಲಿತಿದ್ದು ಹೇಗೆ? ಇದು ಸ್ಫೂರ್ತಿದಾಯಕ!

karnataka weather Forecast
ಮಳೆ2 hours ago

Karnataka Weather :‌ ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿ 8 ಜಿಲ್ಲೆಗಳಲ್ಲಿ ರಣಮಳೆ ಫಿಕ್ಸ್!

Health Tips
ಆರೋಗ್ಯ3 hours ago

Health Tips: ನಮ್ಮ ದೇಹಕ್ಕೆ ಪ್ರೊಟೀನ್‌ ಪುಷ್ಟಿ ನೀಡಲು ಯಾವ ಮೊಳಕೆ ಕಾಳುಗಳು ಸೂಕ್ತ?

Yoga for Fertility
ಆರೋಗ್ಯ3 hours ago

Yoga for Fertility: ಈ 6 ಆಸನಗಳಿಂದ ಸಂತಾನ ಭಾಗ್ಯ ಸಾಧ್ಯ!

Dina Bhavishya
ಭವಿಷ್ಯ3 hours ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಸಿಗಲಿದೆ ಶುಭ ಸುದ್ದಿ

Kalki 2898 AD Final Trailer Released
ಕರ್ನಾಟಕ8 hours ago

Kalki 2898 AD: ‘ಕಲ್ಕಿ 2898 AD’ ಚಿತ್ರದ ಫೈನಲ್‌ ಟ್ರೇಲರ್‌ ಹೀಗಿದೆ ನೋಡಿ! ಜೂ.27ರಂದು ಚಿತ್ರ ರಿಲೀಸ್

Sonakshi Sinha
ಬಾಲಿವುಡ್8 hours ago

Sonakshi Sinha: ಸೋನಾಕ್ಷಿ ಸಿನ್ಹಾ-ಜಹೀರ್‌ ಇಕ್ಬಾಲ್‌ ಮದುವೆ; ಮೆಹಂದಿ ಶಾಸ್ತ್ರದ ವೇಳೆ ಪತಿ ಜತೆ ನಟಿ ಮಿಂಚಿಂಗ್!

T20 World Cup 2024
ಪ್ರಮುಖ ಸುದ್ದಿ8 hours ago

T20 World Cup 2024 : ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ ತಂಡಕ್ಕೆ 7 ರನ್ ಜಯ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ13 hours ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ19 hours ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ2 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು5 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು5 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ6 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ6 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ6 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ7 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ1 week ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

ಟ್ರೆಂಡಿಂಗ್‌