ಮತ್ತೊಂದು ಗ್ಯಾಂಗ್‌ಗೆ ಮಾಹಿತಿ ಕೊಟ್ಟ ಯುವಕ ಬರ್ಬರ ಹತ್ಯೆ: 8 ಆರೋಪಿಗಳ ಬಂಧನ - Vistara News

ಹಾಸನ

ಮತ್ತೊಂದು ಗ್ಯಾಂಗ್‌ಗೆ ಮಾಹಿತಿ ಕೊಟ್ಟ ಯುವಕ ಬರ್ಬರ ಹತ್ಯೆ: 8 ಆರೋಪಿಗಳ ಬಂಧನ

ಹಾಸನದಲ್ಲಿ ಗ್ಯಾಂಗ್‌ ವಾರ್!‌ ಬಾವನನ್ನು ಪ್ರಕರಣದ ಆರೋಪಿಯನ್ನು ಬಾಮೈದ ಹತ್ಯೆ ಮಾಡಿದ್ದಾರೆ. ಸೇಡಿಗೆ ಸೇಡು ಎಂಬಂತೆ ಹತ್ಯೆ ಮಾಡಿದ್ದಾರೆ.

VISTARANEWS.COM


on

ಹತ್ಯೆಯಾಗಿದ್ದ ಸುದೀ[ಪ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹಾಸನ: ಗ್ಯಾಂಗ್‌ ವಾರ್‌ ಒಂದರಲ್ಲಿ ಬೆಂಗಳೂರಿನ ರೌಡಿಶೀಟರ್‌ ಲಿಂಗರಾಜು ಎಂಬಾತನ ಕೊಲೆ ಪ್ರಕರಣದಲ್ಲಿ ಆರೋಫಿಯಾಗಿದ್ದ ಯುವಕನನ್ನು ಹತ್ಯೆ ಮಾಡಿದ್ದ 8 ಜನರನ್ನು ಪೊಲೀಸರು ಬಂಧಿಸಿದ್ದಾರೆ. ರೌಡಿಶೀಟರ್‌ ಲಿಂಗರಾಜು ಕಳೆದ ವರ್ಷ ಚನ್ನರಾಯಪಟ್ಟಣದ ಬಳಿಯ ಗ್ರಾಮದಲ್ಲಿ ನಡೆದಿತ್ತು.

ಈ ಪ್ರಕರಣದಲ್ಲಿ ಒಟ್ಟು 15 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಈ ಕೇಸ್ ಸಾಕ್ಷಾಧಾರಗಳಿಲ್ಲದೇ ಖುಲಾಸೆಯಾಯ್ತು. ಈ ಪ್ರಕರಣದಲ್ಲಿ ಕಮರವಳ್ಳಿ ಗ್ರಾಮದ ಸುದೀಪ್‌ 10ನೇ ಆರೋಪಿಯಾಗಿದ್ದ.

ಇದನ್ನೂ ಓದಿ | ಜುಗುರಾಜ್‌ ಕೊಲೆ‌ ಪ್ರಕರಣ: ಕಂಪ್ಲೀಟ್‌ ಡೀಟೇಲ್ಸ್‌ ಇಲ್ಲಿದೆ ನೋಡಿ..

ಈತನೂ ಬಿಡುಗಡೆಯಾಗಿ ಒಂದು ದಿನವಷ್ಟೆ ಆಗಿತ್ತು. ಸ್ನೇಹಿತನ ಜತೆಗೆ ಹಿರೀಸಾವೆಯಿಂದ ಗ್ರಾಮಕ್ಕೆ ರಾತ್ರಿ ಬೈಕ್‌ನಲ್ಲಿ ತೆರಳುತ್ತಿದ್ದಾಗ ಹಿಂಬದಿಯಿಂದ ಬಂದ ಕಾರು ಡಿಕ್ಕಿಯಾಗಿತ್ತು. ಸುದೀಪ್‌ ಹಾಗೂ ಸ್ನೇಹಿತ ಇಬ್ಬರೂ ಕೆಳಗೆ ಬಿದ್ದಿದ್ದರು. ನೀನು ಇಲ್ಲಿಂದ ಓಡಿಹೋಗು, ಇಲ್ಲದಿದ್ದರೆ ನಿನ್ನನ್ನೂ ಕೊಲ್ಲುತ್ತೇವೆ ಎಂದು ಕಾರನಲ್ಲಿದ್ದವರು ಹೇಳಿದ್ದರು. ಅಲ್ಲಿಂದ ಮಂಜುನಾಥ್‌ ಓಡಿ ಹೋಗುತ್ತಿದ್ದಂತೆ ಸುದೀಪ್‌ ಮೇಲೆ ಸುತ್ತಿಗೆ ಮತ್ತಿತರ ಹತಾರಗಳಿಂದ ಮನಬಂದಂತೆ ದಾಳಿ ಮಾಡಲಾಗಿತ್ತು.

ಮುಖದ ಗುರುತೇ ಸಿಗದಂತೆ ಬರ್ಬರವಾಗಿ ನಡೆದಿದ್ದ ಹತ್ಯೆ, ಎಂಥವರನ್ನೂ ಬಚ್ಚಿಬೀಳಿಸುವಂತಿತ್ತು. ಸುದೀಪ್‌ ಹತ್ಯೆ ನಡೆದು ಸುಮಾರು 15 ದಿನಗಳ ನಂತರ 8 ಆರೋಫಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸುದರ್ಶನ್, ದಿಲೀಪ್, ಸಚಿನ್, ಸಂಜಯ್, ಮಂಜುನಾಥ್, ನಾಗರಾಜು, ಅಜಿತ್, ಚರಣ್ ಎಂದು ಗುರುತಿಸಲಾಗಿದೆ.

ತನ್ನ ಭಾವವನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಎಂಬ ಕಾರಣಕ್ಕೆ ಭಾವಮೈದುನನೇ ಸ್ಕೆಚ್‌ ಹಾಕಿ ಸುದೀಪ್‌ನ ಹತ್ಯೆ ಮಾಡಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ರೀತಿಯ ರೌಡಿಗಳ ಗ್ಯಾಂಗ್‌ವಾರ್ ಇದೀಗ ಹಾಸನ ಜಿಲ್ಲೆಗೂ ಆವರಿಸಿಕೊಂಡಿದ್ದು, ಸ್ಥಳೀಯ ಜನರನ್ನು ಬೆಚ್ಚಿ ಬೀಳಿಸಿದೆ. ಒಂದೇ ಗ್ರಾಮದ ಸುತ್ತಮುತ್ತ ಎರಡು ಮರ್ಡರ್ ಆಗಿರುವುದು ಗ್ರಾಮಸ್ಥರ ನಿದ್ದೆಗೆಡುವಂತೆ ಮಾಡಿದೆ.

ಇದನ್ನೂ ಓದಿ: LOVE JIHAD | ಹಿಂದೂ ಯುವತಿಯ ಆತ್ಮಹತ್ಯೆಗೆ ಕಾರಣರಾದವರನ್ನು ಬಂಧಿಸಲು ಆಗ್ರಹ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Prajwal Revanna Case: ʼಪ್ರತಿ ದಿನ ಫೋನ್‌ ಮಾಡಿ ಬಟ್ಟೆ ಕಳಚಲು ಹೇಳ್ತಿದ್ದ…ʼ ಪ್ರಜ್ವಲ್‌ ವಿರುದ್ಧ ದಾಖಲಾದ 4ನೇ ದೂರಿನಲ್ಲಿ ಏನಿದೆ?

Prajwal Revanna Case: ಮಹಿಳೆಗೆ ವಿಡಿಯೊ ಕಾಲ್ ಮಾಡಿ ವಿವಸ್ತ್ರವಾಗುವಂತೆ ಒತ್ತಾಯಿಸುತ್ತಿದ್ದ. ವಿವಸ್ತ್ರಗೊಂಡ ಮಹಿಳೆಯನ್ನು ನೋಡುತ್ತ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ. ವಿವಸ್ತ್ರವಾಗಲು ಒಪ್ಪದಿದ್ದಾಗ ವಿಡಿಯೊ ಸೇವ್ ಮಾಡಿಕೊಂಡಿರುವುದಾಗಿಯೂ, ವೈರಲ್ ಮಾಡುವುದಾಗಿಯೂ ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿದೆ.

VISTARANEWS.COM


on

prajwal revanna case 4th
Koo

ಬೆಂಗಳೂರು: ಲೈಂಗಿಕ ದೌರ್ಜನ್ಯ (Physical Abuse) ಪ್ರಕರಣದ ಆರೋಪಿ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna Case) ವಿರುದ್ಧ ನಾಲ್ಕನೇ ಪ್ರಕರಣ ದಾಖಲಾಗಿದ್ದು, ಆರೋಪಿಯ ಕುರಿತು ಇನ್ನಷ್ಟು ವಿಕೃತಿಯ ದೂರುಗಳು ದಾಖಲಾಗಿವೆ. ಈ ಪ್ರಕರಣದಲ್ಲಿ ಮಾಜಿ ಶಾಸಕ ಪ್ರೀತಂ ಗೌಡ (Preetham Gowda) ಹೆಸರು ಕೂಡ ತಳುಕು ಹಾಕಿಕೊಂಡಿದೆ.

ಸಿಐಡಿ ಸೈಬರ್ ಕ್ರೈಂ (CID Cyber Crime) ಠಾಣೆಯಲ್ಲಿ ಸಂತ್ರಸ್ತೆ ನೀಡಿದ ದೂರಿನನ್ವಯ ಎಫ್ಐಆರ್ (FIR) ದಾಖಲಾಗಿದೆ. ಎಫ್ಐಆರ್‌ನಲ್ಲಿ ಸಂತ್ರಸ್ತೆಯಿಂದ ಉಲ್ಲೇಖವಾಗಿರುವ ಅಂಶಗಳು ಹೀಗಿವೆ: ಮಗನ ಶಾಲೆ‌ ವಿಚಾರಕ್ಕೆ ಪ್ರಜ್ವಲ್‌ನನ್ನು ಸಂತ್ರಸ್ತ ಮಹಿಳೆ ಭೇಟಿಯಾಗಿದ್ದರು. ಭೇಟಿ ವೇಳೆ ಸಂತ್ರಸ್ತೆಯಿಂದ ಪ್ರಜ್ವಲ್‌ ಫೋನ್‌ ನಂಬರ್ ಪಡೆದಿದ್ದ. ನಂಬರ್‌ ಪಡೆದು ವಿಡಿಯೊ ಕಾಲ್ ಮಾಡಿ ದಿನ ನಿತ್ಯ ಮಾತಾಡುತ್ತಿದ್ದ.

ನಂತರ ಮಹಿಳೆಗೆ ವಿಡಿಯೊ ಕಾಲ್ ಮಾಡಿ ವಿವಸ್ತ್ರವಾಗುವಂತೆ ಒತ್ತಾಯಿಸುತ್ತಿದ್ದ. ವಿವಸ್ತ್ರಗೊಂಡ ಮಹಿಳೆಯನ್ನು ನೋಡುತ್ತ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ. ವಿವಸ್ತ್ರವಾಗಲು ಒಪ್ಪದಿದ್ದಾಗ ವಿಡಿಯೊ ಸೇವ್ ಮಾಡಿಕೊಂಡಿರುವುದಾಗಿಯೂ, ವೈರಲ್ ಮಾಡುವುದಾಗಿಯೂ ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿದೆ.

ನಂತರ ಏಕಾಏಕಿ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೊ ವೈರಲ್ ಆಗಿರುವ ವಿಚಾರ ಸಂತ್ರಸ್ತೆ ಗಮನಕ್ಕೆ ಬಂದಿದೆ. ಈ ಕುರಿತು ಪ್ರಜ್ವಲ್‌ನನ್ನು ಸಂತ್ರಸ್ತ ಮಹಿಳೆ ಸಂಪರ್ಕ ಮಾಡಿದ್ದಾರೆ. ಆಗ ʼಸ್ಟೇ ತಂದಿದ್ದೇನೆ, ಏನೂ ಆಗಲ್ಲʼ ಎಂದಿದ್ದರಂತೆ. ಎರಡನೇ ಬಾರಿ ಫೋಟೊ ವೈರಲ್ ಆದಾಗ ಸಂತ್ರಸ್ತೆ ದೂರು ನೀಡಲು ಮುಂದಾಗಿದ್ದರು.

ವೈರಲ್ ಆದ ಕೆಲವು ಫೋಟೊಗಳನ್ನು ಕಿರಣ್, ಶರತ್ ಹಾಗೂ ಪ್ರೀತಂ ಗೌಡ ವೈರಲ್‌ ಮಾಡಿಸಿರುವ ಆರೋಪ ಇದೆ. ಈ ಹಿನ್ನೆಲೆಯಲ್ಲಿ ಒಟ್ಟು ನಾಲ್ಕು ಜನರ ಮೇಲೆ ದೂರು ನೀಡಲು ಮಹಿಳೆ ಮುಂದಾಗಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಎಸ್ಐಟಿ ಅಧಿಕಾರಿಗಳಿಂದ ತನಿಖೆ‌ ಚುರುಕುಗತಿ ಪಡೆದುಕೊಂಡಿದೆ.

ಜಾಮೀನು ಅರ್ಜಿ ಇಂದು ವಿಚಾರಣೆ

ಇಂದು ಹೊಳೆನರಸೀಪುರ ಟೌನ್ ಠಾಣೆಯಲ್ಲಿ ದಾಖಲಾಗಿರುವ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಿಚಾರಣೆಗೆ ಬರಲಿದೆ. ಈ ಪ್ರಕರಣದಲ್ಲಿ ಜಾಮೀನು ಸಿಕ್ಕರೂ ಪ್ರಜ್ವಲ್‌ಗೆ ಬಿಡುಗಡೆ ಇಲ್ಲ. ಎಚ್.ಡಿ ರೇವಣ್ಣ (HD Revanna) ಹಾಗೂ ಪ್ರಜ್ವಲ್ ರೇವಣ್ಣ ಇಬ್ಬರೂ ಆರೋಪಿಗಳಾಗಿರುವ ಪ್ರಕರಣದಲ್ಲಿ 82ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಎಚ್‌ಡಿ ರೇವಣ್ಣ ಈಗಾಗಲೇ ಜಾಮೀನು ಪಡೆದಿದ್ದಾರೆ. ಮೊದಲು ಲೈಂಗಿಕ‌ ದೌರ್ಜನ್ಯ ಆರೋಪದಡಿ ದಾಖಲಾಗಿದ್ದ ಪ್ರಕರಣದಲ್ಲಿ ನಂತರ ಅತ್ಯಾಚಾರ ಆರೋಪವನ್ನು ಸೇರಿಸಲಾಗಿತ್ತು.

ಪುರುಷತ್ವ ಪರೀಕ್ಷೆಗೆ ಒಳಗಾಗಲಿರುವ ಸೂರಜ್‌

ಲೈಂಗಿಕ ದೌರ್ಜನ್ಯ (physical abuse) ಪ್ರಕರಣಗಳಲ್ಲಿ ತಮ್ಮ ಪ್ರಜ್ವಲ್‌ ರೇವಣ್ಣಗೆ (Prajwal Revanna Case) ಮಾಡಲಾಗಿದ್ದ ಪುರುಷತ್ವ ಪರೀಕ್ಷೆಯನ್ನು (Medical Test) ಇದೀಗ ಅಣ್ಣ ಸೂರಜ್‌ ರೇವಣ್ಣಗೂ (Suraj Revanna Case) ಮಾಡಲು ತನಿಖಾ ತಂಡ ಮುಂದಾಗಿದೆ. ಬೆದರಿಕೆಯೊಡ್ಡಿ ಸಲಿಂಗಕಾಮ, ಅಸಹಜ ಲೈಂಗಿಕ ಕ್ರಿಯೆಯ ಆರೋಪ ಸೂರಜ್‌ ರೇವಣ್ಣ ಮೇಲಿದೆ.

ಸೂರಜ್ ರೇವಣ್ಣ ವಿರುದ್ಧ ದಾಖಲಾಗಿರುವ ಅಸಹಜ ಲೈಂಗಿಕ‌ ದೌರ್ಜನ್ಯ ಪ್ರಕರಣದಲ್ಲಿ, ಸೂರಜ್ ರೇವಣ್ಣಗೆ ಇಂದು ವೈದ್ಯಕೀಯ ಪರೀಕ್ಷೆ ಮಾಡಿಸುವ ಸಾಧ್ಯತೆ ಇದೆ. ಬೌರಿಂಗ್ ಆಸ್ಪತ್ರೆಯಲ್ಲಿ ಇಂದು ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಸೂರಜ್‌ ಪ್ರಕರಣದಲ್ಲಿ ಈಗಾಗಲೇ ಸಂತ್ರಸ್ತನ ವಿಚಾರಣೆ ಹಾಗೂ ವೈದ್ಯಕೀಯ ಪರೀಕ್ಷೆಯನ್ನು ಪೊಲೀಸರು ನಡೆಸಿದ್ದಾರೆ. ಮುಂದುವರಿದ ಭಾಗವಾಗಿ, ಇಂದು ಸೂರಜ್ ರೇವಣ್ಣ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಸಂತ್ರಸ್ತನ ಮೇಲೆ ಲೈಂಗಿಕ ಆಕ್ರಮಣ ನಡೆಸಿರುವ ಸಾಧ್ಯತೆಗಳನ್ನು ಶೋಧಿಸಲಾಗುತ್ತದೆ.

ಈ ಪ್ರಕರಣ ಸ್ವಲ್ಪ ಭಿನ್ನವಾಗಿದ್ದು, ಆರೋಪಿ ಪುರುಷರ ಜೊತೆಗೆ ಲೈಂಗಿಕ ಕ್ರಿಯೆ ನಡೆಸಬಲ್ಲನೇ ಎಂಬುದನ್ನು ಪರೀಕ್ಷಿಸಲಾಗುತ್ತದೆ. ಸೂರಜ್‌ ಮೇಲೆ ಬಂದಿರುವ ಆರೋಪ ಬೆದರಿಕೆ ಹಾಕಿ ಸಲಿಂಗಕಾಮ ಎಸಗಿದ್ದಾಗಿರುವುದರಿಂದ, ಆರೋಪಿಗೆ ಸಲಿಂಗಕಾಮ ಸಹಜವಾದುದೇ ಎಂದು ಪರೀಕ್ಷಿಸಲು ಕೆಲವು ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಹೀಗಾಗಿ ಇದು ಅಣ್ಣ ಪ್ರಜ್ವಲ್‌ಗೆ ನಡೆಸಿದ ಪರೀಕ್ಷೆಗಳಿಗಿಂತ ಸ್ವಲ್ಪ ಭಿನ್ನ. ಪ್ರಜ್ವಲ್‌ ಪ್ರಕರಣದಲ್ಲಿ ಸಂತ್ರಸ್ತರು ಮಹಿಳೆಯರಾಗಿದ್ದರು.

ಐಪಿಸಿ ಸೆಕ್ಷನ್ 377 ಹಾಕಿರುವ ಪ್ರಕರಣದಲ್ಲಿ ವೈದ್ಯಕೀಯ ಪರೀಕ್ಷೆ ಬಹಳ ಮುಖ್ಯವಾಗಿದೆ. ಇಲ್ಲಿ ಸಂತ್ರಸ್ತ ಹಾಗೂ ಆರೋಪಿ ಇಬ್ಬರ ವೈದ್ಯಕೀಯ ಪರೀಕ್ಷೆಯೂ ಮುಖ್ಯವಾಗಿದೆ. ಸಂತ್ರಸ್ತ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದಾನೆ. ಆರೋಪಿ ಸೂರಜ್ ರೇವಣ್ಣ ಸದ್ಯ ಸಿಐಡಿ ಕಸ್ಟಡಿಯಲ್ಲಿ ಇದ್ದಾರೆ.

ತಮ್ಮ ಪ್ರಜ್ವಲ್‌ ರೇವಣ್ಣಗೆ ಮೂರು ಸಲ ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು. ಮೂರು ಬೇರೆ ಬೇರೆ ಪ್ರಕರಣಗಳಲ್ಲಿ ಈ ಪರೀಕ್ಷೆ ನಡೆಸಲಾಗಿದ್ದು, “ಪದೇ ಪದೆ ಖಾಸಗಿ ಅಂಗವನ್ನು ತೋರಿಸಲು ಮುಜುಗರವಾಗುತ್ತದೆ” ಎಂದು ನ್ಯಾಯಾಧೀಶರ ಮುಂದೆ ಪ್ರಜ್ವಲ್‌ ಅಲವತ್ತುಕೊಂಡಿದ್ದರು. ಇದೀಗ ಅಣ್ಣನೂ ಈ ಪರೀಕ್ಷೆಗೆ ಗುರಿಯಾಗಬೇಕಿದೆ. ಸೂರಜ್‌ ಎಷ್ಟು ಬಾರಿ ಪರೀಕ್ಷೆಗೊಳಗಾಗಲಿದ್ದಾನೆ ಎಂದು ನೋಡಬೇಕಿದೆ.

ಇದನ್ನೂ ಓದಿ: Suraj Revanna Case: ಸೂರಜ್‌ ರೇವಣ್ಣಗೇ ʼಹಿಂದಿನಿಂದ ಇರಿದವರುʼ ಯಾರು?

Continue Reading

ಕ್ರೈಂ

Suraj Revanna Case: ಅಮಾವಾಸ್ಯೆ ದಿನ ಸೂರಜ್‌ ಬಳೆ ತೊಡ್ತಾನೆ, ಸೀರೆ ಉಡ್ತಾನೆ! ಬಯಲು ಮಾಡಿದ ಸಂತ್ರಸ್ತ

Suraj Revanna Case: ಸೂರಜ್ ರೇವಣ್ಣ ಅವರು Good Evening ಮೆಸೇಜ್ ಜತೆ ಲವ್ ಸಿಂಬಲ್ ಕಳಿಸಿ ಮಾತು ಆರಂಭಿಸಿದರು. ಬಳಿಕ ಫಾರ್ಮ್‌ಹೌಸ್‌ಗೆ ಒಂಟಿಯಾಗಿ ಕರೆಸಿಕೊಂಡು ಬಲಾತ್ಕಾರದಿಂದ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಸಂತ್ರಸ್ತ ಜೆಡಿಎಸ್ ಕಾರ್ಯಕರ್ತ ಹೇಳಿದ್ದಾನೆ.

VISTARANEWS.COM


on

suraj revanna case 1
Koo

ಬೆಂಗಳೂರು: ಅಸಹಜ ಲೈಂಗಿಕ ದೌರ್ಜನ್ಯ (Homosexuality, abnormal physical abuse) ಪ್ರಕರಣದಲ್ಲಿ ಈಗ ಪೊಲೀಸ್‌ ವಶದಲ್ಲಿರುವ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ (Suraj Revanna Case) ಬಗ್ಗೆ ಸಂತ್ರಸ್ತ ಯುವಕ ಕುತೂಹಲಕಾರಿ ಹೇಳಿಕೆ ನೀಡಿದ್ದಾನೆ. ಸೂರಜ್‌ ರೇವಣ್ಣ ಅಮಾವಾಸ್ಯೆ ದಿನ (New Moon) ಬಳೆ (bangles) ತೊಟ್ಟು, ಸೀರೆ (Saree) ಉಡುತ್ತಾರೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ಅವರ ಹಿರಿಯ ಪುತ್ರ ಸೂರಜ್‌ ರೇವಣ್ಣನನ್ನು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ವಶದಲ್ಲಿಟ್ಟುಕೊಂಡಿದ್ದಾರೆ. ಸೂರಜ್ ರೇವಣ್ಣ ಅವರ ಕುರಿತು ಜೆಡಿಎಸ್ ಕಾರ್ಯಕರ್ತ ಹಾಗೂ ಸಂತ್ರಸ್ತ ಯುವಕ ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಬೆಚ್ಚಿಬೀಳುವಂತಹ ಮಾಹಿತಿ ನೀಡಿದ್ದಾನೆ.

2019ರ ಚುನಾವಣೆ ಸಂದರ್ಭದಲ್ಲಿ ನಾನು ಅವರನ್ನು ಭೇಟಿ ಮಾಡಿದ್ದೆ. ಅರಕಲಗೂಡಿನಲ್ಲಿ ಜೆಡಿಎಸ್ ಕಾರ್ಯಕ್ರಮ ಚೆನ್ನಾಗಿ ಮಾಡಿದ್ದೆ. ಈ ವೇಳೆ ಕಾರ್ಯಕ್ರಮ ಚೆನ್ನಾಗಿ ಮಾಡಿದೀಯ ಅಂತ ನನ್ನನ್ನು ಹೊಗಳಿ ನನ್ನ ಫೋನ್‌ ನಂಬರ್ ಅನ್ನು ತೆಗೆದುಕೊಂಡರು. ನಂತರ ಅವರ ವಿಸಿಟಿಂಗ್ ಕಾರ್ಡ್ ಕೊಟ್ಟರು. ನಂತರ ಅವರು ನನ್ನ ಜೊತೆಗೆ ದೂರವಾಣಿಯಲ್ಲಿ ಮಾತನಾಡಿದರು ಎಂದಿದ್ದಾನೆ. ಸೂರಜ್ ರೇವಣ್ಣ ಅವರು Good Evening ಮೆಸೇಜ್ ಜತೆ ಲವ್ ಸಿಂಬಲ್ ಕಳಿಸಿ ಮಾತು ಆರಂಭಿಸಿದರು. ಬಳಿಕ ಫಾರ್ಮ್‌ಹೌಸ್‌ಗೆ ಒಂಟಿಯಾಗಿ ಕರೆಸಿಕೊಂಡು ಬಲಾತ್ಕಾರದಿಂದ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಸಂತ್ರಸ್ತ ಜೆಡಿಎಸ್ ಕಾರ್ಯಕರ್ತ ಹೇಳಿದ್ದಾನೆ.

ಸೂರಜ್ ರೇವಣ್ಣಗೆ ಎರಡು ವ್ಯಕ್ತಿತ್ವ ಇದೆ. ಅವರು ಸಾರ್ವಜನಿಕ ಜೀವನದಲ್ಲಿ ಇರುವುದಕ್ಕೆ ವಿರುದ್ಧವಾಗಿ ಒಳಗಡೆ ಇರುತ್ತಾರೆ. ಸೂರಜ್ ರೇವಣ್ಣ ಕಾಮುಕ, ಹೊರಗೆ ಒಂದು ಮುಖ, ಒಳಗೆ ಇನ್ನೊಂದು ಮುಖ. ನಾಲ್ಕು ವರ್ಷದಿಂದ ಎಲ್ಲೂ ಹೇಳಿಕೊಳ್ಳೋಕೆ ನನಗೆ ಆಗಿರಲಿಲ್ಲ, ಮನಸ್ಸಿನಲ್ಲಿ ಕಾಡುತ್ತಿತ್ತು. ಒಂದು ದಿನ ನನ್ನ ಜೊತೆಗೆ ಸೂರಜ್ ರೇವಣ್ಣ ಮಾತಾಡುತ್ತಾ ನನ್ನ ಜೀವನ ಹೇಗೆ ಏನು ಅಂತ ಎಲ್ಲಾ ಕೇಳಿದ್ರು. ನಾನು ನನ್ನ ಕೆಲಸ, ಕುಟುಂಬದ ಬಗ್ಗೆ ಹೇಳಿದೆ. ಯಾವುದಕ್ಕೂ ಯೋಚನೆ ಮಾಡಬೇಡ ನಾನು ಇದ್ದೇನೆ ಎಂದು ಹೇಳಿ ರೂಮ್ ಒಳಗೆ ಕರೆದುಕೊಂಡು ಹೋದ್ರು.
ನಂತರ ನನ್ನ ಕಾಲು ಒತ್ತುವಂತೆ ಹೇಳಿದರು. ನಾನು ಕಾಲು ಒತ್ತಿದೆ.. ಮುಂದೆ ಏನಾಯ್ತು ಅಂತ ನಾನು ಹೇಳಲು ಸಾಧ್ಯವಿಲ್ಲ ಎಂದು ಸಂತ್ರಸ್ತ ಯುವಕ ವಿವರಿಸಿದ್ದಾನೆ.

ಪೊಲೀಸ್ ವಿಚಾರಣೆ ವೇಳೆ ಹಾಗೂ ದೂರು ಪ್ರತಿಯಲ್ಲಿ ಘಟನೆಯನ್ನು 27 ವರ್ಷದ ಸಂತ್ರಸ್ತ ವಿವರಿಸಿದ್ದಾರೆ. “ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಪರಿಚಯವಾಗಿದ್ದ ಸೂರಜ್ ರೇವಣ್ಣ ಪಕ್ಷದ ಚಟುವಟಿಕೆಗಳಲ್ಲಿ ಹೆಚ್ಚು ಸಕ್ರಿಯನಾಗಿದ್ದ ಕಾರಣ ನನ್ನ ಮೊಬೈಲ್ ನಂಬರ್ ಪಡೆದಿದ್ದರು. ಜೂ.14ರಂದು ಮೊದಲ ಬಾರಿಗೆ ಗುಡ್ ಈವಿನಿಂಗ್ ಸಂದೇಶದ ಜತೆಗೆ ಲವ್ ಸಿಂಬಲ್ ಕಳಿಸಿ ಮಾತನಾಡಲು ಆರಂಭಿಸಿದ್ದರು. ಇದಾದ ಬಳಿಕ ಜೂನ್ 16ರಂದು ಗನ್ನಿಕಡದ ಫಾರ್ಮ್‌ಹೌಸ್‌ಗೆ ಒಂಟಿಯಾಗಿ ಬರಲು ತಿಳಿಸಿದ್ದರು. ಅದರಂತೆ ಸಾಯಂಕಾಲ 6.15ರ ಸುಮಾರಿಗೆ ಫಾರ್ಮ್ ಹೌಸ್‌ಗೆ ತೆರಳಿದ್ದ ವೇಳೆ ತನ್ನ ಬೆಡ್ ರೂಂಗೆ ಕರೆದೊಯ್ದ ಸೂರಜ್ ರೇವಣ್ಣ ಬೆದರಿಕೆ ಒಡ್ಡಿ ಬಲಾತ್ಕಾರದಿಂದ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬೇಡ ಎಂದು ಗೋಳಾಡಿದರೂ ಸೂರಜ್ ರೇವಣ್ಣ ಬಿಡದೆ ಕೃತ್ಯ ಎಸಗಿದ್ದಾರೆ” ಎಂದು ಸಂತ್ರಸ್ತ ದೂರಿನಲ್ಲಿ ಆರೋಪಿಸಿದ್ದಾನೆ.

ಸೂರಜ್ ರೇವಣ್ಣ ನನ್ನ ಮೇಲೆ ಎಸಗಿದ ಕೃತ್ಯದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದೆ. ಇದನ್ನು ಹೇಳಿದಾಗ, ಈ ವಿಚಾರ ಎಲ್ಲಿಯೂ ಹೇಳದಂತೆ 2 ಕೋಟಿ ರೂ. ಹಾಗೂ ಕೆಲಸದ ಆಮಿಷ ಒಡ್ಡಿದ್ದರು. ಒಪ್ಪದಿದ್ದಕ್ಕೆ ಜೀವಬೆದರಿಕೆ ಒಡ್ಡಿದ್ದರು ಎಂದು ಸಂತ್ರಸ್ತ ದೂರಿದ್ದಾನೆ.

ಇದನ್ನೂ ಓದಿ: Suraj Revanna Case: ಸೂರಜ್‌ ರೇವಣ್ಣಗೇ ʼಹಿಂದಿನಿಂದ ಇರಿದವರುʼ ಯಾರು?

Continue Reading

ಕರ್ನಾಟಕ

Karnataka Weather: ಇಂದು ಹಾಸನ, ಕೊಡಗು, ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ

Karnataka Weather: ಕರ್ನಾಟಕ ಕರಾವಳಿಯ ಉದ್ದಕ್ಕೂ ಬುಧವಾರ ವೇಗವಾಗಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮೀನುಗಾರರು ಹಾಗೂ ಮನರಂಜನೆಗಾಗಿ ಸಮುದ್ರಕ್ಕೆ ಇಳಿಯುವವರಿಗೆ ಎಚ್ಚರಿಕೆ ನೀಡಲಾಗಿದೆ.

VISTARANEWS.COM


on

Karnataka Weather
Koo

ಬೆಂಗಳೂರು: ಕರಾವಳಿ ಜಿಲ್ಲೆಗಳು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಜೂನ್‌ 26ರಂದು ಬಿರುಗಾಳಿ ಸಹಿತ ಭಾರಿ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ (Karnataka Weather) ನೀಡಿದೆ

ಇನ್ನು ರಾಜ್ಯದ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ ಸುರಿಯಲಿದೆ.

ಅದೇ ರೀತಿ ಜೂನ್‌ 27ರಂದು ಕೂಡ ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಚಿಕ್ಕಮಗಳೂರು, ಕೊಡಗು ಬೆಳಗಾವಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಬಿರುಸಿನ ಮಳೆ ಬೀಳಲಿದೆ.

ಮೀನುಗಾರರಿಗೆ ಎಚ್ಚರಿಕೆ

ಕರ್ನಾಟಕ ಕರಾವಳಿಯ ಉದ್ದಕ್ಕೂ ಬುಧವಾರ ಗಂಟೆಗೆ 35 ಕಿ.ಮೀನಿಂದ 55 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ದಕ್ಷಿಣ ಕನ್ನಡದಲ್ಲಿ ಮುಲ್ಕಿಯಿಂದ ಮಂಗಳೂರಿನವರೆಗೆ, ಅಲೆಗಳು ರಾತ್ರಿ 11.30ರವರೆಗೆ 3.3ರಿಂದ 3.6 ಮೀಟರ್ ವ್ಯಾಪ್ತಿಯಲ್ಲಿ ಎತ್ತರದ ಅಲೆಗಳು ಉಂಟಾಗುವ ಮುನ್ಸೂಚನೆ ನೀಡಲಾಗಿದೆ. ಸಾಗರ ಕಾರ್ಯಾಚರಣೆ ಮತ್ತು ಹತ್ತಿರದ ದಡದ ಮನರಂಜನೆ ಮಾಡುವಾಗ ಜಾಗರೂಕರಾಗಿರಿ ಎಂದು ಸಲಹೆ ನೀಡಲಾಗಿದೆ.

ಉಡುಪಿಯಲ್ಲಿ ಹೈ ವೇವ್ ಎಚ್ಚರಿಕೆ: ಬೈಂದೂರಿನಿಂದ ಕಾಪುವರೆಗಿನ ಉಡುಪಿ, ಕರ್ನಾಟಕ ಕರಾವಳಿಯಲ್ಲಿ, ರಾತ್ರಿ 11.30ರ ವರೆಗೆ 3.4ರಿಂದ 3.8 ಮೀಟರ್ ವ್ಯಾಪ್ತಿಯಲ್ಲಿ ಎತ್ತರದ ಅಲೆಗಳನ್ನು ಮುನ್ಸೂಚಿಸಲಾಗಿದೆ. ಸಣ್ಣ ಹಡಗುಗಳು ಸಂಚರಿಸದಂತೆ, ಸಮೀಪ ದಡದ ಮನರಂಜನಾ ಚಟುವಟಿಕೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಮತ್ತು ಸವೆತ/ಅಲೆಗಳ ಉಲ್ಬಣವು ಸಾಧ್ಯತೆ ಎಂದು ಸಲಹೆ ನೀಡಲಾಗಿದೆ.

ಉತ್ತರ ಕನ್ನಡ, ಕರ್ನಾಟಕ ಕರಾವಳಿಯಲ್ಲಿ ಮಾಜಾಳಿಯಿಂದ ಭಟ್ಕಳದವರೆಗೆ ರಾತ್ರಿ 11.30ರವರೆಗೆ 3.5 ರಿಂದ 4.0 ಮೀಟರ್ ವ್ಯಾಪ್ತಿಯಲ್ಲಿ ಎತ್ತರದ ಅಲೆಗಳನ್ನು ಮುನ್ಸೂಚಿಸಲಾಗಿದೆ. ಸಣ್ಣ ಹಡಗುಗಳು ಸಂಚರಿಸದಂತೆ, ಸಮೀಪ ದಡದ ಮನರಂಜನಾ ಚಟುವಟಿಕೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಮತ್ತು ಸವೆತ/ಅಲೆಗಳ ಉಲ್ಬಣ ಸಾಧ್ಯತೆ ಎಂದು ಸಲಹೆ ನೀಡಲಾಗಿದೆ.

ಇದನ್ನೂ ಓದಿ | Monsoon Hair care: ಮಳೆಗಾಲದಲ್ಲಿ ಕೂದಲಿನ ಆರೈಕೆಗೆ ಈ ಸಲಹೆ ಪಾಲಿಸಿ

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ

ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ಆಕಾಶ. ಲಘು ಮಳೆಯಾಗುವ ಸಾಧ್ಯತೆ ಹೆಚ್ಚು. ಕೆಲವೊಮ್ಮೆ ಮೇಲ್ಮೈ ಗಾಳಿಯು ಪ್ರಬಲವಾಗಿರುವ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ‘C ಮತ್ತು 21 ° C ಆಗಿರಬಹುದು.

Continue Reading

ಪ್ರಮುಖ ಸುದ್ದಿ

Suraj Revanna Case : ಸೂರಜ್ ವಿರುದ್ಧವೇ ತಿರುಗಿ ಬಿದ್ದು ದೂರು ದಾಖಲಿಸಿದ ಆಪ್ತ ಶಿವಕುಮಾರ್​ !

Suraj Revanna Case: ಶಿವಕುಮಾರ್​ ವಿಧಾನ ಪರಿಷತ್ ಸದಸ್ಯ ಡಾ.ಸೂರಜ್‌ರೇವಣ್ಣ ವಿರುದ್ದ ದೂರು ನೀಡಲು ಹೊಳೆನರಸೀಪುರ ನಗರ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಶಿವಕುಮಾರ್​ ಶಿವಕುಮಾರ್ ಹೊಳೆನರಸೀಪುರ ತಾಲ್ಲೂಕಿನ ಹನುಮನಹಳ್ಳಿ ಗ್ರಾಮದವರಾಗಿದ್ದಾರೆ. ಹಿಂದೆ ಸೂರಜ್ ಪರವಾಗಿ ಸಂತ್ರಸ್ತನ ವಿರುದ್ಧ ದೂರು ನೀಡಿ ಗಮನ ಸೆಳೆದಿದ್ದರು.

VISTARANEWS.COM


on

Suraj Revanna Case
Koo

ಹಾಸನ: ಅಸಹಜ ಲೈಂಗಿಕ ಕ್ರಿಯೆ ಪ್ರಕರಣದಲ್ಲಿ ಸೂರಜ್​ ರೇವಣ್ಣ (Suraj Revanna Case) ​​ ಪರವಾಗಿ ನಿಂತು ಸಂತ್ರಸ್ತರ ವಿರೋಧ ಕಟ್ಟಿಕೊಂಡಿದ್ದ ಶಿವಕುಮಾರ್​ ದಿಢೀರ್​ ತಮ್ಮ ನಿಲುವು ಬದಲಾಯಿಸಿದ್ದಾರೆ. ಇದೀಗ ಅವರು ಹೊಳೆನರಸೀಪುರ ಪೊಲೀಸ್ ಠಾಣೆಗೆ ಬಂದು ಸೂರಜ್ ರೇವಣ್ಣ ವಿರುದ್ಧವೇ ಪ್ರಕರಣ ದಾಖಲಿಸಿದ್ದಾರೆ. ಶಿವಕುಮಾರ್​ ಈ ಹಿಂದೆ ಸಂತ್ರಸ್ತರ ವಿರುದ್ಧವಾಗಿದ್ದರು. ಹೀಗಾಗಿ ಸಂತ್ರಸ್ತರು ಶಿವಕುಮಾರ್ ವಿರುದ್ಧವೇ ದೂರು ದಾಖಲಿಸಿದ್ದರು. ಅಲ್ಲಿಂದ ಅವರು ನಾಪತ್ತೆಯಾಗಿದ್ದರು. ಇದೀಗ ದಿಢೀರ್​ ಪ್ರತ್ಯಕ್ಷಗೊಂಡ ಸೂರಜ್ ವಿರುದ್ಧ ದೂರು ದಾಖಲಿಸಿದ್ದಾರೆ.

ಶಿವಕುಮಾರ್​ ವಿಧಾನ ಪರಿಷತ್ ಸದಸ್ಯ ಡಾ.ಸೂರಜ್‌ರೇವಣ್ಣ ವಿರುದ್ದ ದೂರು ನೀಡಲು ಹೊಳೆನರಸೀಪುರ ನಗರ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಶಿವಕುಮಾರ್​ ಶಿವಕುಮಾರ್ ಹೊಳೆನರಸೀಪುರ ತಾಲ್ಲೂಕಿನ ಹನುಮನಹಳ್ಳಿ ಗ್ರಾಮದವರಾಗಿದ್ದಾರೆ. ಹಿಂದೆ ಸೂರಜ್ ಪರವಾಗಿ ಸಂತ್ರಸ್ತನ ವಿರುದ್ಧ ದೂರು ನೀಡಿ ಗಮನ ಸೆಳೆದಿದ್ದರು.

ಶಿವಕಮಾರ ವಿರುದ್ಧವೂ ದಾಖಲಾಗಿದೆ ದೂರು

ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಡಾ.ಸೂರಜ್‌ ರೇವಣ್ಣ (Suraj Revanna Case) ಆಪ್ತ, ನಾಪತ್ತೆಯಾಗಿರುವ ಶಿವಕುಮಾರ್‌ ವಿರುದ್ಧವೂ ಸಂತ್ರಸ್ತ ದೂರು ದಾಖಲಿಲಾಗಿತ್ತು. ನನಗೆ ಆಗಿರುವ ಅನ್ಯಾಯದ ಬಗ್ಗೆ ಶಿವಕುಮಾರ್ ಬಳಿ ಹೇಳಿದ್ದೆ, ನನಗೆ ದೈಹಿಕ ಹಿಂಸೆ ಆಗಿದ್ದರೂ ಶಿವಕುಮಾರ್ ಆಸ್ಪತ್ರೆಗೆ ಹೋಗಲು ಬಿಟ್ಟಿರಲಿಲ್ಲ ಎಂದು ಸಂತ್ರಸ್ತ ಆರೋಪಿಸಿದ್ದರು.

ಹೀಗಾಗಿ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿ ಸೂರಜ್‌ ಆಪ್ತ ಶಿವಕುಮಾರ್ ಹೆಸರು ಸೇರ್ಪಡೆ ಮಾಡಲಾಗಿತ್ತು. ಸೂರಜ್‌ಗೆ 5 ಕೋಟಿ ರೂ. ನೀಡುವಂತೆ ಬ್ಲ್ಯಾಕ್‌ ಮೇಲ್‌ ಮಾಡಿದ್ದಾರೆ ಎಂದು ಸಂತ್ರಸ್ತನ ವಿರುದ್ಧ ಶಿವಕುಮಾರ್ ದೂರು ನೀಡಿದ್ದರು. ಆ ಬಳಿಕ ಶಿವಕುಮಾರ್‌ ಹಾಗೂ ಸಂತ್ರಸ್ತ ಇಬ್ಬರೂ ಸೇರಿ ಬ್ಲ್ಯಾಕ್‌ ಮೇಲ್‌ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು.

ಇದನ್ನೂ ಓದಿ: Suraj Revanna Case: ತಮ್ಮನಿಗೆ ಮೂರು ಸಲ; ಈಗ ಅಣ್ಣನಿಗೂ ಪುರುಷತ್ವ ಪರೀಕ್ಷೆ! ಇದೇ ಬೇರೆ ಥರ!

ಅಣ್ಣ ಸೂರಜ್‌ 8 ದಿನ ಸಿಐಡಿ ಕಸ್ಟಡಿಗೆ

ಸಲಿಂಗ ಕಾಮ ಪ್ರಕರಣದಲ್ಲಿ ಸಿಕ್ಕಿಬಿದ್ದು ನ್ಯಾಯಾಂಗ ಬಂಧನದಲ್ಲಿದ್ದ ಎಂಎಲ್‌ಸಿ ಸೂರಜ್‌ ರೇವಣ್ಣನನ್ನು (Suraj Revanna Case) 8 ದಿನ ಸಿಐಡಿ ಕಸ್ಟಡಿಗೆ ನೀಡಿ ಕೋರ್ಟ್​ ಬುಧವಾರ ಆದೇಶ ಹೊರಡಿತ್ತು. ಪ್ರಕರಣ ವಿಚಾರಣೆ ನಡೆಸಿದ 42ನೇ ಎಸಿಎಂಎಂ ಕೋರ್ಟ್‌ ನ್ಯಾಯಾಧೀಶರಾದ ಕೆ.ಎನ್‌.ಶಿವಕುಮಾರ್‌ ಅವರು ಸೂರಜ್‌ನನ್ನು ಜುಲೈ 1ರವರೆಗೆ ಸಿಐಡಿ ಕಸ್ಟಡಿಗೆ ನೀಡಿ ಆದೇಶ ನೀಡಿದ್ದಾರೆ.

ವಿಚಾರಣೆಗಾಗಿ ಹತ್ತು ದಿನ ಕಸ್ಟಡಿಗೆ ನೀಡುವಂತೆ ಸಿಐಡಿ ಅಧಿಕಾರಿಗಳು ಮನವಿ ಮಾಡಿದ್ದರು. ಆದರೆ, 10 ದಿನಕ್ಕೆ ಬದಲಾಗಿ 8 ದಿನ ಸಿಐಡಿ ಕಸ್ಟಡಿಗೆ ನೀಡಲು ಸೂಚಿಸಿದೆ. ಇದರಿಂದ ಜುಲೈ 1 ರವರೆಗೆ ಸೂರಜ್ ರೇವಣ್ಣ ಸಿಐಡಿ ಕಸ್ಟಡಿಯಲ್ಲಿ ಇರಲಿದ್ದಾರೆ.

ಜುಲೈ 8ರವರೆಗೆ ಪ್ರಜ್ವಲ್‌ಗೆ ನ್ಯಾಯಾಂಗ ಬಂಧನ

ಬುಧವಾರ ನ್ಯಾಯಾಲಯದಲ್ಲಿ ಅಣ್ಣ ಸೂರಜ್ ರೇವಣ್ಣ ಅಸಹಜ ಲೈಂಗಿಕ ಕಿರುಕುಳದ ಪ್ರಕರಣದ ಅರ್ಜಿ ವಿಚಾರಣೆ ಮುಗಿಯುತ್ತಿದ್ದಂತೆ ಪ್ರಜ್ವಲ್ ರೇವಣ್ಣನನ್ನು (Prajwal Revanna) ಕೋರ್ಟ್‌ಗೆ ಎಸ್ಐಟಿ ಟೀಂ ಹಾಜರುಪಡಿಸಿತ್ತು. ಅತ್ಯಾಚಾರ ಪ್ರಕರಣ ಸಂಬಂಧ ಪ್ರಜ್ವಲ್‌ನ ಕಸ್ಟಡಿಗೆ ಪಡೆಯಲಾಗಿತ್ತು. ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ 42 ಎಸಿಎಂಎಂ ಕೋರ್ಟ್‌ಗೆ ಎಸ್ಐಟಿ ಹಾಜರು ಪಡಿಸಿದೆ. ಹೀಗಾಗಿ ಜುಲೈ 8ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ‌ ಕೋರ್ಟ್‌ ಆದೇಶ ನೀಡಿತ್ತು.

ಸೋದರ ಸೂರಜ್ ರೇವಣ್ಣ ಕೇಸ್‌ನ ಆದೇಶ ಬರೆಸುತ್ತಿರುವುದನ್ನು ನೋಡಿದ ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ ಸಿಐಡಿ‌ ಕಸ್ಟಡಿಗೆ ಹೋಗಲಿದ್ದಾರೆ ಎಂಬ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದರು. ಅಣ್ಣನನ್ನು ಎಷ್ಟು ದಿನ ಕಸ್ಟಡಿಗೆ ನೀಡಿದ್ದಾರೆ ಎಂದು ಎಸ್‌ಐಟಿ ಅಧಿಕಾರಿಗಳನ್ನು ಪ್ರಜ್ವಲ್ ಕೇಳಿದ್ದಾರೆ.

Continue Reading
Advertisement
Actor Darshan Renukaswamy assault police lathi found How did D Gang get
ಕ್ರೈಂ2 mins ago

Actor Darshan: ರೇಣುಕಾಸ್ವಾಮಿ ಹಲ್ಲೆಗೆ ಬಳಸಿದ್ದ ʻಪೊಲೀಸ್ ಲಾಠಿʼ ಪತ್ತೆ! ʻಡಿ ಗ್ಯಾಂಗ್‌ʼಗೆ ಸಿಕ್ಕಿದ್ದು ಹೇಗೆ?

IRCTC
ದೇಶ24 mins ago

IRCTC: ಆನ್‌ಲೈನ್‌ನಲ್ಲಿ ರೈಲ್ವೇ ಟಿಕೆಟ್‌ ಬುಕ್ಕಿಂಗ್‌ ಮಾಡೋ ಮುನ್ನ ಹೊಸ ನಿಯಮದ ಬಗ್ಗೆ ಇರಲಿ ಗಮನ!

1983 World Cup
ಕ್ರೀಡೆ28 mins ago

1983 WC Win Anniversary: ಚೊಚ್ಚಲ ಏಕದಿನ ವಿಶ್ವಕಪ್ ಗೆಲುವಿನ​ ಸವಿ ನೆನಪನ್ನು ವಿಂಡೀಸ್​ನಲ್ಲಿ ಕೇಕ್​ ಕತ್ತರಿಸಿ ಸಂಭ್ರಮಿಸಿದ ರವಿಶಾಸ್ತ್ರಿ, ಗವಾಸ್ಕರ್, ​ಬಿನ್ನಿ

Viral Video
Latest29 mins ago

Viral Video: ಪೇಪರ್ ನೋಡದೆ ಪ್ರಮಾಣ ವಚನ ಸ್ವೀಕರಿಸಿ ಬೆರಗುಗೊಳಿಸಿದ ಅತ್ಯಂತ ಕಿರಿಯ ಸಂಸದೆ!

cm siddaramaiah water price hike
ಕರ್ನಾಟಕ34 mins ago

CM Siddaramaiah: ತೈಲ, ಹಾಲು ಆಯ್ತು; ಮುಂದಿನ ಸರದಿಯಲ್ಲಿ ನೀರು, ಆಟೋ, ಬಸ್‌ ಟಿಕೆಟ್‌ ದರ ಏರಿಕೆ ಗ್ಯಾರಂಟಿ

Neha Gowda in saree with baby bump
ಸ್ಯಾಂಡಲ್ ವುಡ್35 mins ago

Neha Gowda: ಸೀರೆಯುಟ್ಟು ಸಿಂಪಲ್‌ ಆಗಿ ಗಂಡನ ಜತೆ ಪೋಸ್‌ ಕೊಟ್ಟ ಗರ್ಭಿಣಿ ನೇಹಾ ಗೌಡ!

Viral Video
Latest36 mins ago

Viral Video : ‘ಅಲ್ಲಾಹು ಅಕ್ಬರ್’ ಎನ್ನದ ಹಿಂದೂ ಬಾಲಕನಿಗೆ ಎಂಜಲು ನೆಕ್ಕಲು ಹೇಳಿದ ಮುಸ್ಲಿಂ ಯುವಕರು

Lok Sabha Speaker
ದೇಶ38 mins ago

Lok Sabha Speaker: ಎರಡನೇ ಬಾರಿಗೆ ಲೋಕಸಭೆ ಸ್ಪೀಕರ್‌ ಆಗಿ ಓಂ ಬಿರ್ಲಾ ಆಯ್ಕೆ

Kaagada movie released on 5th July
ಕರ್ನಾಟಕ41 mins ago

Kannada New Movie: ಟ್ರೇಲರ್ ಮೂಲಕ ಸದ್ದು ಮಾಡುತ್ತಿರುವ “ಕಾಗದ” ಜುಲೈ 5ರಂದು ತೆರೆಗೆ

prajwal revanna case 4th
ಕ್ರೈಂ1 hour ago

Prajwal Revanna Case: ʼಪ್ರತಿ ದಿನ ಫೋನ್‌ ಮಾಡಿ ಬಟ್ಟೆ ಕಳಚಲು ಹೇಳ್ತಿದ್ದ…ʼ ಪ್ರಜ್ವಲ್‌ ವಿರುದ್ಧ ದಾಖಲಾದ 4ನೇ ದೂರಿನಲ್ಲಿ ಏನಿದೆ?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ2 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ5 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ5 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ6 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 weeks ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌