ಭಾವಾಶ್ರಿತ ಗ್ರಹಫಲ | ಚಂದ್ರನು ನೀಡುವ ಫಲಗಳೇನು? - Vistara News

ಭವಿಷ್ಯ

ಭಾವಾಶ್ರಿತ ಗ್ರಹಫಲ | ಚಂದ್ರನು ನೀಡುವ ಫಲಗಳೇನು?

ಜಾತಕದಲ್ಲಿರುವ 9 ಗ್ರಹಗಳು ಒಂದೊಂದು ಮನೆಯಲ್ಲಿ ಒಂದೊಂದು ಗುಣವನ್ನು ಹೊಂದಿರುತ್ತದೆ. ಅದರಂತೆ ನಿಮ್ಮ ಜೀವನದಲ್ಲೂ ಆ ಗುಣಗಳು ಪ್ರತಿಬಿಂಬಿಸುತ್ತದೆ. ಚಂದ್ರಫಲದ ಬಗ್ಗೆ ಮಾಹಿತಿ ಇಲ್ಲಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಎರಡನೇ ಗ್ರಹನಾದ ಚಂದ್ರ ಯಾವ ಸ್ಥಾನದಲ್ಲಿದ್ದರೆ ಯಾವ ಫಲಗಳನ್ನು ಪ್ರಾಪ್ತಿಸುತ್ತಾನೆ? ಭಾವಾಶ್ರಿತ ಗ್ರಹಫಲ ಏನು ಹೇಳುತ್ತದೆ? ಇಲ್ಲಿದೆ ಮಾಹಿತಿ.

ಚಂದ್ರಭಾವ ಫಲ

ಶುಕ್ಲಪಕ್ಷದ ಚಂದ್ರನು ಲಗ್ನದಲ್ಲಿದ್ದರೆ, ಶುಭವೇ ಆಗುತ್ತದೆ. ಈ ಜಾತಕದವರು ಸದೃಢ ಶರೀರ ಹೊಂದಿರುತ್ತಾರೆ, ದೀರ್ಘವಾದ ಆಯುಷ್ಯ ಇವರಿಗಿರುತ್ತದೆ. ಇವರು ಬಲವಂತರು ಹಾಗೂ ನಿರ್ಭಯರಾಗಿರುತ್ತಾರೆ. ಧನಸಂಪತ್ತಿನ ಕೊರತೆ ಇವರಿಗೆ ಬಾಧಿಸುವುದಿಲ್ಲ. ಆದರೆ, ಕೃಷ್ಣಪಕ್ಷದಲ್ಲಿ ಜನಿಸಿದಾಗ, ಚಂದ್ರನು ಲಗ್ನದಲ್ಲಿದ್ದರೆ, ಇದರ ವಿರುದ್ಧ ಫಲಗಳು ಉಂಟಾಗುತ್ತವೆ.

ಚಂದ್ರನು ದ್ವಿತೀಯದಲ್ಲಿದ್ದರೆ, ವಿಷಯಸುಖದಲ್ಲಿ ಆಸಕ್ತಿ ಉಂಟಾಗುತ್ತದೆ. ಈ ಜಾತಕದವರು ಸಹಜವಾಗಿ ವಿದ್ವಾಂಸರಾಗುತ್ತಾರೆ ಹಾಗೂ ಮೃದುಭಾಷಿಯಾಗಿರುತ್ತಾರೆ. ಆದರೆ, ಅಂಗವಿಕಲತೆಯ ದೋಷದಿಂದ ಬಲಳುವ ಸಾಧ್ಯತೆ ಇರುತ್ತದೆ.

ತೃತೀಯ ಭಾವದಲ್ಲಿ ಚಂದ್ರನು ಮಾತೃಸುಖವನ್ನು ಪ್ರಾಪ್ತಿಸುತ್ತದೆ. ಹಾಗೂ ಕಾಮಾಂಧರಾದ ಸೋದರರು ಇವರಿಗುತ್ತಾರೆ. ಈ ಜಾತಕದವರು ಸಮಾನ್ಯವಾಗಿ ಬಲಶಾಲಿ, ಶೌರ್ಯವಂತರು, ಮತ್ತು ಅತ್ಯಂತ ಕೃಪಣರಾಗಿರುತ್ತಾರೆ.

ಚಂದ್ರನ ಚತುರ್ಥದಲ್ಲಿ ಬಲಿಷ್ಠ. ಈ ಜಾತಕದವರು ಸದಾ ಸುಖಿಯಾಗಿರುತ್ತಾರೆ. ಇವರು ಸಾಮಾನ್ಯವಾಗಿ ಭೋಗಿಯು, ತ್ಯಾಗಿಯೂ ಆಗಿರುತ್ತಾರೆ. ಇವರಿಗೆ ಮಿತ್ರರು ಮತ್ತು ವಾಹನ ಸುಖದ ಕೊರತೆ ಇರುವುದಿಲ್ಲ. ಇವರು ಜೀವನದಲ್ಲಿ ಯಶಸ್ವಿಯಾಗಿ ಬಾಳುತ್ತಾರೆ.

ಪಂಚಮಭಾವದಲ್ಲಿ ಚಂದ್ರನಿದ್ದ ಜಾತಕದವರು ಮೇಧಾವಿಯಾಗಿರುತ್ತಾರೆ. ಇವರು ಉತ್ತಮ ಸಲಹೆಯನ್ನ ನಿಡುವ ಸಾಮರ್ಥ್ಯದವರಾಗಿರುತ್ತಾರೆ. ಇವರ ನಡೆ ಮಂದಗತಿಯಲ್ಲಿರುತ್ತದೆ. ಸತ್ಪುತ್ರರನ್ನು ಪಡೆದು ಸುಖವಾಗಿರುತ್ತಾರೆ.

ಷಷ್ಟಮದಲ್ಲಿ ಚಂದ್ರನಿದ್ದರೆ ಫಲಗಳು ಸಾಮಾನ್ಯವಾಗಿ ಶುಭದಾಯಕವಾಗಿರುವುದಿಲ್ಲ. ಇವರು ಉತ್ತಮ ಬುದ್ಧಿಮಟ್ಟದವರಾಗಿರುವುದಿಲ್ಲ. ಉದರ ವ್ಯಾಧಿಯಂತಹ ಖಾಯಿಲೆಯಿಂದ ಪೀಡಿತರಾಗುತ್ತಾರೆ ಹಾಗೂ ಅಲ್ಪಾಯುವಾಗಿರುತ್ತಾರೆ.

ಚಂದ್ರನು ಸಪ್ತಮ ಭಾವದಲ್ಲಿದ್ದರೆ ಸೌಭಾಗ್ಯವಂತರಾಗಿರುತ್ತಾರೆ. ಇವರು ರೂಪವಂತರು ಹಾಗೂ ಎಲ್ಲರಿಗೆ ತ್ಯಂತ ಪ್ರೀತಿಪಾತ್ರರಾಗಿರುತ್ತಾರೆ.

ಅಷ್ಟಮದಲ್ಲಿ ಚಂದ್ರನಿದ್ದಾಗ ಅಶುಭ ಫಲಗಳು ಪ್ರಧಾನವಾಗಿರುತ್ತದೆ. ಈ ಜಾತಕದವರು ರೋಗಪೀಡಿತರಾಗುತ್ತಾರೆ ಹಾಗೂ ಅಲ್ಪಾಯುವಾಗಿರುತ್ತಾರೆ.

ಚಂದ್ರನು ನವಮದಲ್ಲಿ ಸುಖವನ್ನು ನೀಡುತ್ತಾನೆ.ಈ ಜಾತಕದವರು ಧರ್ಮಾತ್ಮರಾಗಿದ್ದು, ಉತ್ತಮ ಸಂತಾನ ಸುಖವುಳ್ಳುತ್ತಾರೆ.

ದಶಮಭಾವದಲ್ಲಿ ಚಂದ್ರನಿರುವ ಜಾತಕದವರು ಜೀವನದಲ್ಲಿ ಯಶಸ್ವಿಯಾಗುತ್ತಾರೆ. ಸತ್ಕರ್ಮನಿರತರಾಗಿದ್ದು, ಸಜ್ಜನರಿಗೆ ಸಹಾಯ ಮಾಡುವ ಮನೋಭಾವ ಹೊಂದಿರುತ್ತಾರೆ.

ಚಂದ್ರನು ಏಕಾದಶಸ್ಥನಾಗಿದ್ದ ಜಾತಕದಲ್ಲಿ ಆಯಸ್ಸು ದೀರ್ಘವಾಗಿರುತ್ತದೆ. ಇವರು ಧನಿಕರು ಹಾಗೂ ಸಂತತಿಯನ್ನು ಹೊಂದುತ್ತಾರೆ. ಇವರ ಕಾರ್ಯಗಳಿಗೆ ಸೇವಕರನ್ನು ಹೊಂದಿರುವ ನಾಯಕರಾಗುತ್ತಾರೆ.

ದ್ವಾದಶದಲ್ಲಿ ಚಂದ್ರನಿದ್ದರೆ ಆಲಸ್ಯ ಉಂಟಾಗುತ್ತದೆ. ಈ ಜಾತಕದವರು ದುಃಖಿಯಾಗಿರುತ್ತಾರೆ ಹಾಗೂ ಪರಾಭವ ಹೊಂದಿರುತ್ತಾರೆ. ಇವರು ಸಾಮನ್ಯವಾಗಿ ಸ್ನೇಹಜೀವಿಯಾಗಿರುವುದಿಲ್ಲ, ಎಲ್ಲರನ್ನೂ ದ್ವೇಷಿಸುವ ಗುಣ ಇವರಲ್ಲಿರುತ್ತದೆ.

ಇದನ್ನೂ ಓದಿ: ಭಾವಾಶ್ರಿತ ಗ್ರಹಫಲ | ಸೂರ್ಯನು ದಶಮ ಭಾವದಲ್ಲಿದ್ದರೆ ಬಲಿಷ್ಠ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಭವಿಷ್ಯ

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷದ ನವಮಿ ದಿನವಾದ ಇಂದು ದ್ವಾದಶಿ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina Bhavishya
Koo

ಚಂದ್ರನು ಶುಕ್ರವಾರವು ಕನ್ಯಾರಾಶಿಯಲ್ಲಿಯೇ ನೆಲೆಸಿರುತ್ತಾನೆ. ಇದರಿಂದಾಗಿ ಮಿಥುನ, ಸಿಂಹ, ತುಲಾ, ವೃಶ್ಚಿಕ, ಕುಂಭ, ಮೀನ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Kannada Dina Bhavishya) ನೋಡುವುದಾದರೆ, ಕಟಕ ರಾಶಿಯವರು ಗಾಳಿಯಲ್ಲಿ ಮನೆ ಕಟ್ಟುವಲ್ಲಿ ನಿಮ್ಮ ಸಮಯ ವ್ಯರ್ಥ ಮಾಡಬೇಡಿ. ಬದಲಿಗೆ ಏನಾದರೂ ಅರ್ಥಪೂರ್ಣವಾದದ್ದನ್ನು ಮಾಡಲು ನಿಮ್ಮ ಶಕ್ತಿ ವ್ಯಯಿಸಿ. ಇಂದು ನಿಮಗೆ ಹಣದ ಲಾಭವಾಗುವ ಪೂರ್ತಿ ಸಾಧ್ಯತೆ ಇದೆ. ಆದರೆ ಇದರೊಂದಿಗೆ ನೀವು ದಾನವನ್ನು ಸಹ ಮಾಡಬೇಕು ಏಕೆಂದರೆ ಇದರಿಂದ ನಿಮಗೆ ಮಾನಸಿಕ ಶಾಂತಿ ಸಿಗುತ್ತದೆ. ಸಿಂಹ ರಾಶಿಯವರು ಸಂಶಯಾಸ್ಪದ ಹಣಕಾಸು ವ್ಯವಹಾರಗಳಲ್ಲಿ ಸಿಲುಕಿಕೊಳ್ಳದಂತೆ ಎಚ್ಚರಿಕೆ ವಹಿಸಿ. ನೀವು ಯಾವುದೇ ಬದ್ಧತೆಯನ್ನು ಮಾಡುವ ಮೊದಲು ಎಲ್ಲಾ ಸತ್ಯಾಸತ್ಯತೆಗಳನ್ನು ಅರಿತುಕೊಳ್ಳುವುದು ಅಗತ್ಯ ಇದೆ. ಕುಟುಂಬದಲ್ಲಿ ಸಂಗಾತಿಯೊಂದಿಗೆ ಮಾತಿಗೆ ಮಾತು ಬೆಳೆಸಬೇಡಿ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (17-05-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ
ತಿಥಿ: ನವಮಿ 08:48 ವಾರ: ಶುಕ್ರವಾರ
ನಕ್ಷತ್ರ: ಪೂರ್ವ ಪಾಲ್ಗುಣಿ 21:17 ಯೋಗ: ವ್ಯಾಘಾತ 09:19
ಕರಣ: ಕೌಲವ 08:48 ಅಮೃತ ಕಾಲ: ಮಧ್ಯಾಹ್ನ 02:05ರಿಂದ 03:53
ದಿನದ ವಿಶೇಷ: ವಿಶ್ವ ಮಾಹಿತಿ ದಿನ

ಸೂರ್ಯೋದಯ : 05:54   ಸೂರ್ಯಾಸ್ತ : 06:38

ರಾಹುಕಾಲ :ಬೆಳಗ್ಗೆ 10.30 ರಿಂದ 12.00
ಗುಳಿಕಕಾಲ: ಬೆಳಗ್ಗೆ 7.30 ರಿಂದ 9.00
ಯಮಗಂಡಕಾಲ: ಮಧ್ಯಾಹ್ನ 3.00 ರಿಂದ 4.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಆರೋಗ್ಯ ಸುಧಾರಣೆಗಾಗಿ ಮಾಡುವ ಪ್ರಯತ್ನಗಳು ಸಹಕಾರಿಯಾಗಲಿವೆ. ಆರ್ಥಿಕ ಭಾಗವು ಬಲಗೊಳ್ಳುವ ಪೂರ್ಣ ಸಾಧ್ಯತೆ ಇದೆ. ಸಾಲದ ಮರುಪಾವತಿ ಆಗಲಿದೆ. ಇತರರ ದೋಷಗಳನ್ನು ಹುಡುಕುತ್ತಾ ಸಮಯ ವ್ಯರ್ಥ ಮಾಡುವುದು ಬೇಡ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಇರಲಿದೆ. ಅದೃಷ್ಟ ಸಂಖ್ಯೆ: 1

Horoscope Today

ವೃಷಭ: ಅನಿವಾರ್ಯ ಕಾರಣಗಳಿಂದ ನೀವು ಯಾವುದಾದರೂ ಸಹಾಯ ಕೋರುವ ಸಾಧ್ಯತೆ ಇದೆ. ನಿಮ್ಮ ಪ್ರಯತ್ನಗಳು ಖಂಡಿತವಾಗಿಯೂ ಸಕಾರಾತ್ಮಕ ಫಲಿತಾಂಶ ತರುತ್ತವೆ. ಆರೋಗ್ಯ ಪರಿಪೂರ್ಣ ಇರಲಿದೆ. ಉದ್ಯೋಗಿಗಳಿಗೆ ಕೊಂಚ ಕಿರಿ ಕಿರಿ ಇರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 9

Horoscope Today

ಮಿಥುನ: ಮನೆಯ ಸದಸ್ಯರು ಇಂದು ನಿಮ್ಮೊಂದಿಗೆ ಅನೇಕ ಸಮಸ್ಯೆಗಳನ್ನು ಹಂಚಿಕೊಳ್ಳುತ್ತಾರೆ. ಹಿರಿಯರ ಸತತ ಮಾರ್ಗದರ್ಶನ ಸಿಗಲಿದೆ. ಅವಸರದಲ್ಲಿ ಮಾತನಾಡಿದ ಕಾರಣಕ್ಕೆ ಪಶ್ಚಾತ್ತಾಪ ಮೂಡಲಿದೆ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಆರೋಗ್ಯ ಪರಿಪೂರ್ಣವಾಗಿ ಇರಲಿದೆ. ಉದ್ಯೋಗಿಗಳಿಗೆ ಶುಭ ಫಲ. ಕುಟುಂಬದಲ್ಲಿ ಸಾಮರಸ್ಯ ಇರಲಿದೆ.
ಅದೃಷ್ಟ ಸಂಖ್ಯೆ: 7

Horoscope Today

ಕಟಕ: ಗಾಳಿಯಲ್ಲಿ ಮನೆ ಕಟ್ಟುವಲ್ಲಿ ನಿಮ್ಮ ಸಮಯ ವ್ಯರ್ಥ ಮಾಡಬೇಡಿ. ಬದಲಿಗೆ ಏನಾದರೂ ಅರ್ಥಪೂರ್ಣವಾದದ್ದನ್ನು ಮಾಡಲು ನಿಮ್ಮ ಶಕ್ತಿ ವ್ಯಯಿಸಿ. ಇಂದು ನಿಮಗೆ ಹಣದ ಲಾಭವಾಗುವ ಪೂರ್ತಿ ಸಾಧ್ಯತೆ ಇದೆ. ಆದರೆ ಇದರೊಂದಿಗೆ ನೀವು ದಾನವನ್ನು ಸಹ ಮಾಡಬೇಕು ಏಕೆಂದರೆ ಇದರಿಂದ ನಿಮಗೆ ಮಾನಸಿಕ ಶಾಂತಿ ಸಿಗುತ್ತದೆ. ಆರೋಗ್ಯ ಕುರಿತಾಗಿ ಕಾಳಜಿ ವಹಿಸಿ. ಉದ್ಯೋಗಿಗಳಿಗೆ ಶುಭ ಫಲ.ಕೌಟುಂಬಿಕವಾಗಿ ಶುಭ ಫಲ ಇರಲಿದೆ.
ಅದೃಷ್ಟ ಸಂಖ್ಯೆ: 2

Horoscope Today

ಸಿಂಹ: ಸಂಶಯಾಸ್ಪದ ಹಣಕಾಸು ವ್ಯವಹಾರಗಳಲ್ಲಿ ಸಿಲುಕಿಕೊಳ್ಳದಂತೆ ಎಚ್ಚರಿಕೆ ವಹಿಸಿ. ನೀವು ಯಾವುದೇ ಬದ್ಧತೆಯನ್ನು ಮಾಡುವ ಮೊದಲು ಎಲ್ಲಾ ಸತ್ಯಾಸತ್ಯತೆಗಳನ್ನು ಅರಿತುಕೊಳ್ಳುವುದು ಅಗತ್ಯ ಇದೆ. ಕುಟುಂಬದಲ್ಲಿ ಸಂಗಾತಿಯೊಂದಿಗೆ ಮಾತಿಗೆ ಮಾತು ಬೆಳೆಸಬೇಡಿ. ಮಾನಸಿಕ ಹಾಗೂ ದೈಹಿಕವಾಗಿ ಜರ್ಜರಿತರಾಗುವ ಬದಲು ಯೋಗ ಧ್ಯಾನ ಮಾಡಿ ಮನಸ್ಸಿನ ಮೂಲೆಯಲ್ಲಿ ಸಂತಸ ಚಿಗರಲಿದೆ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಉದ್ಯೋಗಿಗಳಿಗೆ ಕೊಂಚ ಕಿರಿ ಕಿರಿ ಇರಲಿದೆ. ಕೌಟುಂಬಿಕವಾಗಿ ಸಾಧರಣ ಫಲ. ಅದೃಷ್ಟ ಸಂಖ್ಯೆ: 9

Horoscope Today

ಕನ್ಯಾ: ಅನಗತ್ಯ ಆಲೋಚನೆಗಳು ನಿಮ್ಮ ಮನಸ್ಸನ್ನು ಆಕ್ರಮಿಸಿಕೊಳ್ಳಲು ಬಿಡಬೇಡಿ. ಶಾಂತವಾಗಿ ಮತ್ತು ಒತ್ತಡ ಮುಕ್ತವಾಗಿ ಉಳಿಯಲು ಪ್ರಯತ್ನಿಸಿ ಹಾಗೂ ಅದು ನಿಮ್ಮ ಮಾನಸಿಕ ದೃಢತೆಯನ್ನು ಹೆಚ್ಚಿಸುತ್ತದೆ. ಹಣಕಾಸಿನಲ್ಲಿ ಸುಧಾರಣೆ ನಿಶ್ಚಿತವಾಗಿರಲಿದೆ. ಸಂಬಂಧಿಗಳ ಆಗಮನ ಸಂತಸ ತರಲಿದೆ. ಸಂಗಾತಿಯ ಹಸ್ತಕ್ಷೇಪ ಮುಜುಗರ ಉಂಟು ಮಾಡಲಿದೆ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಸಂತಸದ ಪ್ರಯಾಣ ಮತ್ತು ಸಾಮಾಜಿಕ ಕಾರ್ಯಕ್ರಮಗಳು ನಿಮಗೆ ಆರಾಮ ಮತ್ತು ಸಂತೋಷ ತರುತ್ತದೆ. ಈ ರಾಶಿಚಕ್ರದ ದೊಡ್ಡ ಉದ್ಯಮಿಗಳು ಇಂದು ತುಂಬಾ ಯೋಚಿಸಿ ಅರ್ಥಮಾಡಿಕೊಂಡು ಹಣದ ಹೂಡಿಕೆ ಮಾಡುವ ಅಗತ್ಯವಿದೆ. ನಿಮ್ಮ ಸ್ಪರ್ಧಾತ್ಮಕ ಸ್ವಭಾವ ನೀವು ಪ್ರವೇಶಿಸುವ ಯಾವುದೇ ಸ್ಪರ್ಧೆಯಲ್ಲೂ ನಿಮ್ಮನ್ನು ಗೆಲ್ಲಿಸುತ್ತದೆ. ಪ್ರೇಮಿಗಳಿಗೆ ಮನೆಯಿಂದ ಹಸಿರು ನಿಶಾನೆ ಸಿಗಲಿದೆ. ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

Horoscope Today

ವೃಶ್ಚಿಕ: ಭಾವನಾತ್ಮಕ ನಿರ್ಧಾರ ಕೈಗೊಳ್ಳುವ ಭರದಲ್ಲಿ ಮನಸ್ಸಿನ ಸ್ಥಿಮಿತ ಕಳೆದುಕೊಳ್ಳುವುದು ಬೇಡ. ಅಜಾಗೃತ ಕಾರ್ಯ ನಿಮಗೆ ಆರ್ಥಿಕ ನಷ್ಟ ಉಂಟು ಮಾಡಬಹುದು.ಕಠಿಣ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಸಿದ್ಧರಾಗುವಿರಿ.ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಹಿರಿಯ ಅಧಿಕಾರಿಗಳಿಂದ ಕಿರಿಕಿರಿಯಾಗಲಿದೆ. ಕುಟುಂಬದಲ್ಲಿ ಸಂಗಾತಿಯ ಸಂಪೂರ್ಣ ಬೆಂಬಲ ಸಿಗಲಿದೆ. ಅದೃಷ್ಟ ಸಂಖ್ಯೆ: 2

Horoscope Today

ಧನಸ್ಸು: ನೀವು ದೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಸಣ್ಣ ಉದ್ಯೋಗವನ್ನು ಮಾಡುವ ಜನರು, ಇಂದು ತಮ್ಮ ಆಪ್ತರಿಂದ ಯಾವುದೇ ಸಲಹೆಯನ್ನು ಪಡೆಯಬಹುದು. ಇದರಿಂದ ಅವರಿಗೆ ಆರ್ಥಿಕವಾಗಿ ಲಾಭ ಪಡೆಯುವ ಸಾಧ್ಯತೆ ಇದೆ. ಇಂದು ಹಣದ ಬಗ್ಗೆ ಕುಟುಂಬ ಸದಸ್ಯರಲ್ಲಿ ಗೊಂದಲ ಉಂಟಾಗಬಹುದು.ಆದಷ್ಟು ಸಾಲ ಮಾಡದಂತೆ ಎಚ್ಚರಿಕೆ ವಹಿಸಿ.ಆರೋಗ್ಯ ಪರಿಪೂರ್ಣ.ಮೇಲಾಧಿಕರಿಗಳು ನಿಮ್ಮ ಸಹನೆ ಪರೀಕ್ಷಿಸುವ ಸಾಧ್ಯತೆ, ಆದಷ್ಟು ಮೌನದಿಂದ ಕೆಲಸ ಸಾಧಿಸಿಕೊಳ್ಳಿ. ಆರೋಗ್ಯ ಪರಿಪೂರ್ಣ.ಕೌಟುಂಬಿಕವಾಗಿ ಶುಭ ಫಲ.ಅದೃಷ್ಟ ಸಂಖ್ಯೆ: 9

Horoscope Today

ಮಕರ: ಮನಸ್ಸಿನ ಭಾವನೆಗಳನ್ನ ಹತೋಟಿಯಲ್ಲಿ ಇಟ್ಟುಕೊಳ್ಳಿ ಆ ಸಿಟ್ಟನ್ನು ಇತರರ ಮೇಲೆ ಹಾಕಿ ಪಶ್ಚಾತ್ತಾಪ ಪಡುವುದು ಬೇಡ. ಹಳೆಯ ಪ್ರೀತಿಯ ನೆನಪು ಮರುಕಳಿಸಲಿದೆ. ವ್ಯಾಪಾರ ವ್ಯವಹಾರದಲ್ಲಿ ಲಾಭ ಸಿಗಲಿದೆ. ಆರೋಗ್ಯದ ಕುರಿತು ಕೊಂಚ ಕಾಳಜಿ ವಹಿಸಿ.ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 8

Horoscope Today

ಕುಂಭ: ಒಂದು ಲಾಭಕರವಾದ ದಿನವಾಗಲಿದೆ ಮತ್ತು ನೀವು ಧೀರ್ಘಕಾಲದ ಅನಾರೋಗ್ಯಕ್ಕೆ ಪರಿಹಾರ ಹುಡುಕಲು ಸಾಧ್ಯವಾಗಬಹುದು. ಮೂರನೇ ವ್ಯಕ್ತಿಯ ಹಸ್ತಕ್ಷೇಪ ನೀವು ಮತ್ತು ನಿಮ್ಮ ಪ್ರೀತಿಪಾತ್ರರಲ್ಲಿ ಕಂದಕ ತರಬಹುದು ಆದಷ್ಟು ಅಂತವರಿಂದ ಎಚ್ಚರಿಕೆ ವಹಿಸಿ. ಆರೋಗ್ಯ ಪರಿಪೂರ್ಣ ಇರಲಿದೆ.ಉದ್ಯೋಗಿಗಳಿಗೆ ಕಿರಿ ಕಿರಿ.ಕೌಟುಂಬಿಕವಾಗಿ ಸಾಧಾರಣ ಫಲ.ಅದೃಷ್ಟ ಸಂಖ್ಯೆ: 6

Horoscope Today

ಮೀನ: ಅಧ್ಯಾತ್ಮದ ಒಲವು ಹೆಚ್ಚಾಗಲಿದೆ. ನಿಮ್ಮ ಕನಸು ನನಸಾಗುವ ಕಾಲವಿದು. ಆರೋಗ್ಯ ಪರಿಪೂರ್ಣವಾಗಿರಲಿದೆ. ನೀವು ಹಣಕಾಸಿನ ಲಾಭ ತರುವ ಅದ್ಭುತವಾದ ಹೊಸ ಕಲ್ಪನೆಗಳನ್ನು ಪ್ರಸ್ತುತಪಡಿಸುತ್ತೀರಿ. ಉದ್ಯೋಗಿಗಳಿಗೆ ಶುಭ ಫಲ.ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 4

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading

ಭವಿಷ್ಯ

Dina Bhavishya : ಇಂದು 12 ರಾಶಿಯವರ ಫಲ ಏನಿದೆ? ಯಾರಿಗೆ ಶುಭ ತರುತ್ತೆ? ಹೂಡಿಕೆಯಲ್ಲಿ ಯಾರಿಗೆ ಲಾಭ?

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷದ ಅಷ್ಟಮಿ ದಿನವಾದ ಇಂದು ದ್ವಾದಶಿ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

dina bhavishya read your daily horoscope predictions for May 16 2024
Koo

ಚಂದ್ರನು ಕನ್ಯಾರಾಶಿಯಲ್ಲಿಯೇ ನೆಲೆಸಿರುತ್ತಾನೆ. ಇದರಿಂದಾಗಿ ಮಿಥುನ, ಸಿಂಹ, ತುಲಾ, ವೃಶ್ಚಿಕ, ಕುಂಭ, ಮೀನ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Kannada Dina Bhavishya) ನೋಡುವುದಾದರೆ, ಮಿಥುನ ರಾಶಿಯವರಿಗೆ ಮಹತ್ವಾಕಾಂಕ್ಷೆಯ ಯೋಜನೆಗಳು ಸಫಲವಾಗಲಿವೆ. ಮಕ್ಕಳಿಗಾಗಿ ಖರ್ಚು ಮಾಡುವ ಅನಿವಾರ್ಯತೆ ಹೆಚ್ಚಬಹುದು. ಅನವಶ್ಯಕವಾಗಿ ಒತ್ತಡ ತೆಗೆದುಕೊಂಡು ಜೀವನದ ಮಹತ್ವದ ವಿಷಯಗಳ ಬಗ್ಗೆ ಆಲಸ್ಯ ಮಾಡುವುದು ಬೇಡ. ಆರ್ಥಿಕವಾಗಿ ಉತ್ತಮವಾಗಿರಲಿದೆ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (16-05-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ
ತಿಥಿ: ಅಷ್ಟಮಿ 06:22 ವಾರ: ಗುರುವಾರ
ನಕ್ಷತ್ರ: ಮಘಾ 18:12 ಯೋಗ: ಧ್ರುವ 08:21
ಕರಣ: ಧ್ರುವ 08:21 ಅಮೃತ ಕಾಲ: ಮಧ್ಯಾಹ್ನ 03:33ರಿಂದ ಸಂಜೆ 05:20

ಸೂರ್ಯೋದಯ : 05:54   ಸೂರ್ಯಾಸ್ತ : 06:38

ರಾಹುಕಾಲ : ಮಧ್ಯಾಹ್ನ 1.30 ರಿಂದ 3.00
ಗುಳಿಕಕಾಲ: ಬೆಳಗ್ಗೆ 9.00 ರಿಂದ 10.30
ಯಮಗಂಡಕಾಲ: ಬೆಳಗ್ಗೆ 6.00 ರಿಂದ 7.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ ಆಗುವ ಸಾಧ್ಯತೆ ಇದೆ. ನಿಮ್ಮ ವರ್ತನೆ ಇತರರಿಗೆ ಒತ್ತಡವನ್ನು ಉಂಟು ಮಾಡುವ ಸಾಧ್ಯತೆ ಇದೆ. ಹಣಕಾಸು ಪ್ರಗತಿ ಉತ್ತಮವಾಗಿರಲಿದೆ. ಧಾರ್ಮಿಕ ವ್ಯಕ್ತಿಗಳನ್ನು ಭೇಟಿ ಮಾಡುವ ಸಾಧ್ಯತೆ ಇದ್ದು, ಕ್ಷೇತ್ರ ದರ್ಶನಕ್ಕೆ ತೆರಳಬಹುದಾಗಿದೆ. ಕೌಟುಂಬಿಕವಾಗಿ ಸಾಧಾರಣ ಫಲ
ಅದೃಷ್ಟ ಸಂಖ್ಯೆ: 7

Horoscope Today

ವೃಷಭ: ದ್ವೇಷದ ಭಾವನೆ ನಿಮ್ಮ ಮನಸ್ಸಿಗೆ ಅಸಮಾಧಾನ ತರುವುದರೊಂದಿಗೆ ಒತ್ತಡ ಉಂಟು ಮಾಡುವ ಸಾಧ್ಯತೆ ಹೆಚ್ಚಿದೆ. ಕುಟುಂಬದ ಸದಸ್ಯರೊಂದಿಗೆ ಸಮಾಧಾನದಿಂದ ವರ್ತಿಸಿ. ಮೌನದಿಂದ ಇರುವುದು ಒಳಿತು. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 7

Horoscope Today

ಮಿಥುನ: ಮಹತ್ವಾಕಾಂಕ್ಷೆಯ ಯೋಜನೆಗಳು ಸಫಲವಾಗಲಿವೆ. ಮಕ್ಕಳಿಗಾಗಿ ಖರ್ಚು ಮಾಡುವ ಅನಿವಾರ್ಯತೆ ಹೆಚ್ಚಬಹುದು. ಅನವಶ್ಯಕವಾಗಿ ಒತ್ತಡ ತೆಗೆದುಕೊಂಡು ಜೀವನದ ಮಹತ್ವದ ವಿಷಯಗಳ ಬಗ್ಗೆ ಆಲಸ್ಯ ಮಾಡುವುದು ಬೇಡ. ಆರ್ಥಿಕವಾಗಿ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5

Horoscope Today

ಕಟಕ: ಬಿಡುವಿಲ್ಲದ ಕೆಲಸದಿಂದ ಒತ್ತಡ ಉಂಟಾಗಲಿದೆ. ಆರೋಗ್ಯದಲ್ಲಿ ವ್ಯತ್ಯಾಸ ಆಗುವ ಸಾಧ್ಯತೆ ಇದೆ. ಈ ಬಗ್ಗೆ ಕಾಳಜಿ ವಹಿಸಿ. ಆರ್ಥಿಕ ಪ್ರಗತಿ ಕಾಣುವಿರಿ. ಉದ್ಯೋಗದ ಸ್ಥಳದಲ್ಲಿ ಕಿರಿಕಿರಿ ಉಂಟಾಗಿ ಮನಸ್ಸಿಗೆ ನೋವುಂಟು ಮಾಡಬಹುದು. ಆಪ್ತರೊಂದಿಗೆ ಭಾವನೆ ಹಂಚಿಕೊಳ್ಳುವಿರಿ. ಕುಟುಂಬದ ಸದಸ್ಯರಿಂದ ಬೆಂಬಲ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8

Horoscope Today

ಸಿಂಹ: ಸಾಮಾಜಿಕವಾಗಿ ಮನ್ನಣೆ ಸಿಗಲಿದೆ. ಪ್ರಭಾವಿ ವ್ಯಕ್ತಿಗಳ ಬೆಂಬಲ ಪಡೆದು ಕಾರ್ಯದಲ್ಲಿ ಯಶಸ್ಸು ಪಡೆಯುವಿರಿ. ಬಹುದಿನಗಳ ಕನಸು ನನಸಾಗುವ ಸಮಯ ಇದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

Horoscope Today

ಕನ್ಯಾ: ಈ ದಿನವು ನಿಮಗೆ ಸಂತೋಷವನ್ನುಂಟು ಮಾಡಲಿದೆ. ಇದು ಇತರರಿಗೆ ಸಂತಸ ಕೊಡಲಿದ್ದು, ಹಂಚಿಕೊಳ್ಳಲು ಹವಣಿಸುವಿರಿ. ಹೂಡಿಕೆ ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ಆತುರದ ಭರದಲ್ಲಿ ಇತರರನ್ನು ಟೀಕೆ ಮಾಡುವುದು ಬೇಡ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ನಿಮ್ಮ ಹರಿತವಾದ ಮಾತುಗಳಿಂದ ಇತರರ ಮನಸ್ಸು ನೋವಾಗಾವುದು ಬೇಡ, ಈ ಬಗ್ಗೆ ತುಸು ಎಚ್ಚರ ವಹಿಸುವುದು ಒಳಿತು. ಕುಟುಂಬದ ಪ್ರತಿಯೊಂದು ವಿಷಯದಲ್ಲೂ ತಪ್ಪು ಹುಡುಕುವುದು ಬೇಡ. ಇದರಿಂದ ಇತರರಿಗೆ ನೋವಾಗುತ್ತದೆ. ಇದು ನಿಮ್ಮ ಸಂಬಂಧಗಳ ಮೇಲೆ ಪರಿಣಾಮ ಬೀರಬಹುದು. ಆಧ್ಯಾತ್ಮದ ಹಾದಿ ಬಗ್ಗೆ ಗಮನಿಸಿ. ಗುರು ದತ್ತಾತ್ರೇಯನನ್ನು ಆರಾಧಿಸಿ.
ಅದೃಷ್ಟ ಸಂಖ್ಯೆ: 7

Horoscope Today

ವೃಶ್ಚಿಕ: ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯಲು ಸಮಯ ನೀಡುವಿರಿ. ಆಧ್ಯಾತ್ಮಿಕ ವ್ಯಕ್ತಿಗಳ ಮಾರ್ಗದರ್ಶನ ಪಡೆಯುವಿರಿ. ಭೂಮಿ, ಆಸ್ತಿ ಖರೀದಿಗಾಗಿ ಆಲೋಚನೆ ಮಾಡುವಿರಿ. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ ಪ್ರಾಪ್ತಿಯಾಗಲಿದೆ.
ಅದೃಷ್ಟ ಸಂಖ್ಯೆ: 4

Horoscope Today

ಧನಸ್ಸು: ದೂರದ ಕಡೆಗೆ ಪ್ರಯಾಣ ಮಾಡುವ ಸಾಧ್ಯತೆ ಇದೆ. ಹೂಡಿಕೆ ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ಹೊಸ ಕೆಲಸಗಳಲ್ಲಿ ದಿನದ ಮಟ್ಟಿಗೆ ತೊಡಗುವುದು ಬೇಡ. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಮಕರ: ಅತ್ಯಂತ ಪ್ರಭಾವಿ ಜನರ ಬೆಂಬಲ ನಿಮ್ಮ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಹಿಂದೆ ಮಾಡಿದ ಹೂಡಿಕೆ ವ್ಯವಹಾರವು ಇಮ್ಮಡಿ ಲಾಭ ತರುವುದು. ಮುಂಗೋಪದಿಂದ ನಷ್ಟ ಉಂಟಾಗುವ ಸಾಧ್ಯತೆ ಇದೆ. ಕೆಲವು ವಿಷಯದಲ್ಲಿ ನಿಮಗೆ ಸ್ನೇಹಿತರ ಸಲಹೆ – ಸಹಕಾರ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 6

Horoscope Today

ಕುಂಭ: ಆಲಸ್ಯ ಮಾಡಿದಲ್ಲಿ ನಿಮ್ಮ ಕೆಲಸಕ್ಕೇ ತೊಂದರೆಯಾಗಲಿದೆ. ಆರೋಗ್ಯದ ಕಡೆಗೆ ಗಮನ ಹರಿಸಬೇಕು. ಹಣಕಾಸು ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ಸೃಜನಾತ್ಮಕವಾಗಿ ಕೆಲಸ ಮಾಡಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

Horoscope Today

ಮೀನ: ಹೊಸ ಅವಕಾಶಗಳು ಗರಿಗೆದರಲಿವೆ. ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ನಿಮ್ಮ ಹಿಂದೆ ಟೀಕೆಗಳನ್ನು ಮಾಡುವ ಜನರಿಂದ ದೂರ ಇರಿ. ದಿನ ಮಟ್ಟಿಗೆ ಉದ್ಯೋಗದ ಸ್ಥಳದಲ್ಲಿ ಕಿರಿಕಿರಿ ಆಗುವ ಸಾಧ್ಯತೆ ಇದೆ. ಸಂಗಾತಿಯ ಸ್ವಾರ್ಥದಿಂದ ಕುಟುಂಬದ ವಾತಾವರಣದಲ್ಲಿ ವ್ಯತ್ಯಾಸ ಆಗಬಹುದು. ಹೀಗಾಗಿ ಈ ಬಗ್ಗೆ ಗಮನಹರಿಸಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 1

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading

ಭವಿಷ್ಯ

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷದ ಅಷ್ಟಮಿ ಅಹೋರಾತ್ರಿ ದಿನವಾದ ಇಂದು ದ್ವಾದಶಿ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina Bhavishya
Koo

ಚಂದ್ರನು ಸಿಂಹ ರಾಶಿಯಿಂದ ಬುಧವಾರ ಸಂಜೆ 05:32ಕ್ಕೆ ಕನ್ಯಾರಾಶಿಗೆ ಪ್ರವೇಶಿಸುತ್ತಾನೆ. ಇದರಿಂದಾಗಿ ಮಿಥುನ, ಸಿಂಹ, ತುಲಾ, ವೃಶ್ಚಿಕ, ಕುಂಭ, ಮೀನ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Kannada Dina Bhavishya) ನೋಡುವುದಾದರೆ, ಮೇಷ ರಾಶಿಯವರು ಇಂದು ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಗಳಿಸುವ ಸಾಧ್ಯತೆ ಇದೆ. ಮಾನಸಿಕವಾಗಿ ನೆಮ್ಮದಿ ಇರಲಿದೆ. ಅಗತ್ಯ ವಸ್ತುಗಳ ಖರೀದಿಗಾಗಿ ಖರ್ಚು ಮಾಡುವಿರಿ. ಉದ್ಯೋಗಿಗಳಿಗೆ ಕಿರಿಕಿರಿ ಸಾಧ್ಯತೆ ಇದೆ. ದಿನದ ಕೊನೆಯಲ್ಲಿ ಸಂಗಾತಿಯೊಂದಿಗೆ ಮನಸ್ತಾಪ ಇರಲಿದೆ. ಕಟಕ ರಾಶಿಯವರು ಯಾವುದೇ ಆಪ್ತ ಸಂಬಂಧಿಕರ ಬೆಂಬಲದಿಂದ ನೀವು ನಿಮ್ಮ ವ್ಯಾಪಾರದಲ್ಲಿ ಉತ್ತಮವಾಗಿ ಮಾಡಬಹುದು. ಇದು ನಿಮಗೆ ಆರ್ಥಿಕ ಲಾಭವನ್ನು ನೀಡುತ್ತದೆ. ಇವೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (15-05-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ
ತಿಥಿ: ಅಷ್ಟಮಿ ಅಹೋರಾತ್ರಿ ವಾರ: ಬುಧವಾರ
ನಕ್ಷತ್ರ: ಆಶ್ಲೇಷಾ 15:24 ಯೋಗ: ವೃದ್ಧಿ 07:39
ಕರಣ: ವಿಷ್ಟಿ (ಭದ್ರ) 17:16 ಅಮೃತ ಕಾಲ: ಮಧ್ಯಾಹ್ನ 01:40ರಿಂದ 03:25

ಸೂರ್ಯೋದಯ : 05:54   ಸೂರ್ಯಾಸ್ತ : 06:38

ರಾಹುಕಾಲ : ಮಧ್ಯಾಹ್ನ 12.00 ರಿಂದ 1.30
ಗುಳಿಕಕಾಲ: ಬೆಳಗ್ಗೆ 10.30 ರಿಂದ 12.00
ಯಮಗಂಡಕಾಲ: ಬೆಳಗ್ಗೆ 7.30 ರಿಂದ 9.00

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ:ಇಂದು ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಗಳಿಸುವ ಸಾಧ್ಯತೆ ಇದೆ. ಮಾನಸಿಕವಾಗಿ ನೆಮ್ಮದಿ ಇರಲಿದೆ. ಅಗತ್ಯ ವಸ್ತುಗಳ ಖರೀದಿಗಾಗಿ ಖರ್ಚು ಮಾಡುವಿರಿ. ಉದ್ಯೋಗಿಗಳಿಗೆ ಕಿರಿಕಿರಿ ಸಾಧ್ಯತೆ ಇದೆ. ದಿನದ ಕೊನೆಯಲ್ಲಿ ಸಂಗಾತಿಯೊಂದಿಗೆ ಮನಸ್ತಾಪ ಇರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 3

Horoscope Today

ವೃಷಭ:ಆರೋಗ್ಯದ ಕುರಿತು ವಿಶೇಷ ಕಾಳಜಿ ವಹಿಸಿ. ಅಧಿಕ ರಕ್ತದ ಒತ್ತಡ ಇರುವವರು ಯಾವುದೇ ಕಾರಣಕ್ಕೂ ತಾತ್ಸಾರ ಮಾಡುವುದು ಬೇಡ. ವ್ಯಾಪಾರ ವ್ಯವಹಾರಗಳಲ್ಲಿ ಲಾಭ ಸಿಗಲಿದೆ. ಆರ್ಥಿಕ ಪ್ರಗತಿ ಇರಲಿದೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಸಾಧಾರಣ. ಅದೃಷ್ಟ ಸಂಖ್ಯೆ: 2

Horoscope Today

ಮಿಥುನ:ಆಧ್ಯಾತ್ಮಿಕ ವಿಚಾರಗಳಿಂದ, ಹಿರಿಯರಿಂದ ಮಾರ್ಗದರ್ಶನ ಪಡೆಯುವಿರಿ. ಇದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಆರ್ಥಿಕವಾಗಿ ಪ್ರಗತಿ ಇರಲಿದೆ. ಅನಿವಾರ್ಯ ಕಾರಣಗಳಿಂದ ಉದ್ಯೋಗಿಗಳಿಗೆ ಒತ್ತಡ ಇರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 9

Horoscope Today

ಕಟಕ:ಯಾವುದೇ ಆಪ್ತ ಸಂಬಂಧಿಕರ ಬೆಂಬಲದಿಂದ ನೀವು ನಿಮ್ಮ ವ್ಯಾಪಾರದಲ್ಲಿ ಉತ್ತಮವಾಗಿ ಮಾಡಬಹುದು. ಇದು ನಿಮಗೆ ಆರ್ಥಿಕ ಲಾಭವನ್ನು ನೀಡುತ್ತದೆ. ಆರೋಗ್ಯ ಮಧ್ಯಮವಾಗಿರಲಿದೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 3

Horoscope Today

ಸಿಂಹ: ದೈಹಿಕ ಅನಾರೋಗ್ಯದಿಂದ ಚೇತರಿಸಿಕೊಳ್ಳುವ ಸಾಧ್ಯತೆಗಳಿವೆ. ಅನಾವಶ್ಯಕ ಕಾರಣಗಳಿಂದ ಖರ್ಚು ಇರಲಿದೆ. ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯುವಿರಿ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಉತ್ಸಾಹದ ದಿನವಿದು. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 2

Horoscope Today

ಕನ್ಯಾ: ಆರೋಗ್ಯ ಪರಿಪೂರ್ಣವಾಗಿರಲಿದೆ. ಅನಗತ್ಯ ಖರ್ಚುಗಳ ಮೇಲೆ ನಿಯಂತ್ರಣ ಸಾಧಿಸುವಿರಿ. ಜೀವನದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಒತ್ತಡದಿಂದಾಗಿ ಕಿರಿಕಿರಿ ಸಾಧ್ಯತೆ ಇದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 9

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಉದ್ಯೋಗದ ಸ್ಥಳದಲ್ಲಿ ಹಿರಿಯ ಅಧಿಕಾರಿಗಳಿಂದ ಹೆಚ್ಚಿನ ಒತ್ತಡ, ಮನೆಯಲ್ಲಿನ ಭಿನ್ನಾಭಿಪ್ರಾಯಗಳು ನಿಮ್ಮ ಏಕಾಗ್ರತೆಗೆ ದಕ್ಕೆ ತರುವ ಸಾಧ್ಯತೆ ಇದೆ. ಆದಷ್ಟು ಮಾತಿನಲ್ಲಿ ಹಿಡಿತವಿರಲಿ. ಹಿರಿಯರಿಂದ ಮಾರ್ಗದರ್ಶನ ಸಿಗಲಿದೆ. ದೈಹಿಕ ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 3

Horoscope Today

ವೃಶ್ಚಿಕ: ಆತುರದಲ್ಲಿ ಯಾವುದೇ ತೀರ್ಮಾನಗಳನ್ನು ಕೈಗೊಳ್ಳುವುದು ಬೇಡ, ದಿನದ ಮಟ್ಟಿಗೆ ಯಾವುದೇ ಹೂಡಿಕೆ ವ್ಯವಹಾರದಲ್ಲಿ ತೊಡಗುವುದರಿಂದ ನಷ್ಟವಾಗುವ ಸಾಧ್ಯತೆ ಇದೆ. ಕೆಲವು ರಹಸ್ಯ ಸುದ್ದಿಗಳಿಂದ ನಿಮಗೆ ಅಚ್ಚರಿಯಾಗಲಿದೆ. ನಿಮ್ಮ ಅಚ್ಚು ಕಟ್ಟು ಕೆಲಸದಿಂದ ಉದ್ಯೋಗದ ಸ್ಥಳದಲ್ಲಿ ಪ್ರಶಂಸೆ ಸಿಗಲಿದೆ. ಆರ್ಥಿಕ ಪ್ರಗತಿ ಉತ್ತಮವಾಗಿರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 4

Horoscope Today

ಧನಸ್ಸು: ಆರ್ಥಿಕ ಪ್ರಗತಿ ಸಾಧಾರಣವಾಗಿರುವುದರಿಂದ ಒತ್ತಡ ಹೆಚ್ಚಲಿದೆ. ಪ್ರಮುಖ ಕೆಲಸ ಕಾರ್ಯಗಳು ನಿಧಾನವಾಗಿ ಸಾಗಲಿದೆ. ಸ್ನೇಹಿತರೊಂದಿಗೆ ಕಾಲ ಕಳೆಯುವಿರಿ. ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾತುಕತೆಯಲ್ಲಿ ತೊಡಗುವಿರಿ. ಉದ್ಯೋಗಿಗಳಿಗೆ ಶುಭ ಫಲ. ದೈಹಿಕ ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 1

Horoscope Today

ಮಕರ: ಅನೇಕ ಕಾರಣಾಂತರಗಳಿಂದ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇದೆ. ಆರ್ಥಿಕವಾಗಿ ಪ್ರಗತಿ ಕಂಡರು, ನಿಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಆಪ್ತರೊಂದಿಗೆ ಮಾತುಕತೆ ಇರಲಿದೆ. ವ್ಯಾಪಾರದ ಉದ್ದೇಶದಿಂದಾಗಿ ಕೈಕೊಂಡ ಪ್ರವಾಸದಲ್ಲಿ ಯಶಸ್ಸು ಸಿಗಲಿದೆ. ಆರೋಗ್ಯ ಕೊಂಚಮಟ್ಟಿಗೆ ಹದಗೆಡುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಕುಂಭ: ಮನರಂಜನೆಗಾಗಿ ಸಮಯವನ್ನು ಕಳೆಯುವಿರಿ. ಸೃಜನಶೀಲ ಕಾರ್ಯಗಳಿಂದಾಗಿ ವ್ಯಕ್ತಿತ್ವ ಪ್ರಕಾಶಿಸುವ ಸಾಧ್ಯತೆ ಇದೆ. ನಿಮ್ಮ ಅನುಭವಗಳನ್ನು ಇತರರೊಂದಿಗೆ ಹಂಚಿಕೊಳ್ಳುವಿರಿ. ಆಧ್ಯಾತ್ಮಿಕ ಗುರುಗಳ ಮಾರ್ಗದರ್ಶನ ಪಡೆಯುವ ಸಾಧ್ಯತೆ ಇದೆ. ಆರ್ಥಿಕ ಪ್ರಗತಿ ಉತ್ತಮವಾಗಿರಲಿದೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 8

Horoscope Today

ಮೀನ: ಆಹಾರದ ವ್ಯತ್ಯಾಸದ ಕ್ರಮದಿಂದಾಗಿ ಆರೋಗ್ಯದಲ್ಲಿ ಕೊಂಚ ಏರುಪೇರಾಗಲಿದೆ, ಕಾಳಜಿ ವಹಿಸುವುದು ಸೂಕ್ತ. ಹೂಡಿಕೆ ಕುರಿತಾಗಿ ಆಲೋಚನೆ ಮಾಡುವಿರಿ. ಅನಿವಾರ್ಯ ಕಾರಣಗಳಿಂದ ಖರ್ಚು ಇರಲಿದೆ. ಆಪ್ತರೊಂದಿಗೆ ಮಾತುಕತೆಯಲ್ಲಿ ತೊಡಗುವಿರಿ. ಉದ್ಯೋಗಿಗಳಿಗೆ ಸಾಧಾರಣ ಫಲ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 6

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading

ಭವಿಷ್ಯ

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷದ ಸಪ್ತಮಿ ದಿನವಾದ ಇಂದು ದ್ವಾದಶಿ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina Bhavishya
Koo

ಚಂದ್ರನು ಮಂಗಳವಾರವು ಸಿಂಹ ರಾಶಿಯಲ್ಲೆ ನೆಲಸಲಿದ್ದಾನೆ. ಇದರಿಂದಾಗಿ ವೃಷಭ, ಕಟಕ, ಕನ್ಯಾ, ತುಲಾ, ಮಕರ, ಕುಂಭ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Kannada Dina Bhavishya) ನೋಡುವುದಾದರೆ, ಮೇಷ ರಾಶಿಯವರು ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡುವುವರ ಬಗ್ಗೆ ಎಚ್ಚರಿಕೆ ಇರಲಿ. ಅತಿಯಾದ ಒತ್ತಡ ಕಡಿಮೆ ಮಾಡಿಕೊಳ್ಳಲು ಆಧ್ಯಾತ್ಮಿಕ ಸಾಧನೆ ಅವಶ್ಯಕವಿದೆ. ಸಿಂಹ ರಾಶಿಯವರು ಮಿತಿಮೀರಿದ ಕೆಲಸದ ಒತ್ತಡದಿಂದಾಗಿ ದಣಿವಾಗಲಿದೆ, ಸಾಧ್ಯವಾದಷ್ಟು ವಿಶ್ರಾಂತಿ ಪಡೆಯಿರಿ.ಹೂಡಿಕೆ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಆರೋಗ್ಯದ ಬಗೆಗೆ ಕಾಳಜಿ ವಹಿಸಿ. ಮೀನ ರಾಶಿಯವರು ಉದ್ಯೋಗದ ಸ್ಥಳದಲ್ಲಿ ಹೊಸ ಭರವಸೆಗಳು ಮೂಡಲಿವೆ. ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಪಾಲುದಾರಿಕೆ ವ್ಯವಹಾರವು ನಷ್ಟ ತರುವುದು. ನಿಮ್ಮ ಉದಾರ ವರ್ತನೆಯನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇದೆ. ಇವೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (14-05-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ
ತಿಥಿ: ಸಪ್ತಮಿ 28:18 ವಾರ: ಮಂಗಳವಾರ
ನಕ್ಷತ್ರ: ಪುಷ್ಯ 13:04 ಯೋಗ: ಗಂಡ 07:23
ಕರಣ: ಗರಜ 15:29 ಅಮೃತ ಕಾಲ: ಬೆಳಗ್ಗೆ 06:14 ರಿಂದ 07:57
ದಿನದ ವಿಶೇಷ: ವೃಷಭ ಸಂಕ್ರಮಣ ಭಾಗೀರಥ ಜಯಂತಿ, ಭಾಗಮಂಡಲ ಚನ್ನಪಟ್ಟಣ ರಥೋತ್ಸವ

ಸೂರ್ಯೋದಯ : 05:55   ಸೂರ್ಯಾಸ್ತ : 06:37

ರಾಹುಕಾಲ : ಮಧ್ಯಾಹ್ನ 3.00 ರಿಂದ 4.30
ಗುಳಿಕಕಾಲ: ಮಧ್ಯಾಹ್ನ 12 ರಿಂದ 1.30
ಯಮಗಂಡಕಾಲ: ಬೆಳಗ್ಗೆ 9.00 ರಿಂದ 10.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡುವುವರ ಬಗ್ಗೆ ಎಚ್ಚರಿಕೆ ಇರಲಿ.
ಅತಿಯಾದ ಒತ್ತಡ ಕಡಿಮೆ ಮಾಡಿಕೊಳ್ಳಲು ಆಧ್ಯಾತ್ಮಿಕ ಸಾಧನೆ ಅವಶ್ಯಕವಿದೆ. ಹಣಕಾಸಿನ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 7

Horoscope Today

ವೃಷಭ: ಹಣಕಾಸಿನ ವ್ಯವಹಾರದಲ್ಲಿ ಪ್ರಗತಿ ಸಾಧಿಸಲಿದ್ದೀರಿ. ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯುವ ಅವಕಾಶ ಸಿಗಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಸಹದ್ಯೋಗಿಗಳಿಂದ ಕಿರಿಕಿರಿ ಆಗಲಿದೆ, ತಾಳ್ಮೆಯಿಂದ ವರ್ತಿಸಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 6

Horoscope Today

ಮಿಥುನ: ಬಂಧುಗಳು ಟೀಕೆಗಳನ್ನು ಮಾಡುವ ಸಾಧ್ಯತೆ ಇದೆ. ದಿನದ ಮಟ್ಟಿಗೆ ಒತ್ತಡ ಮಾನಸಿಕ ನೆಮ್ಮದಿ ಹಾಳು ಮಾಡುವ ಸಾಧ್ಯತೆ ಇದೆ. ಸಂಯಮದಿಂದ ವರ್ತಿಸಿ. ಆರ್ಥಿಕ ಪ್ರಗತಿ ಇರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 4

Horoscope Today

ಕಟಕ: ಪ್ರಮುಖ ವ್ಯಕ್ತಿಗಳ ಸಹಕಾರ ಸಿಗಲಿದೆ. ಆತುರದ ತೀರ್ಮಾನ ತೆಗೆದುಕೊಳ್ಳುವುದು ಬೇಡ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಆರೋಗ್ಯ ಪರಿಪೂರ್ಣವಾಗಿರುತ್ತದೆ. ಕೌಟುಂಬಿಕವಾಗಿ ಶುಭ ಫಲ.ಅದೃಷ್ಟ ಸಂಖ್ಯೆ: 8

Horoscope Today

ಸಿಂಹ: ಮಿತಿಮೀರಿದ ಕೆಲಸದ ಒತ್ತಡದಿಂದಾಗಿ ದಣಿವಾಗಲಿದೆ, ಸಾಧ್ಯವಾದಷ್ಟು ವಿಶ್ರಾಂತಿ ಪಡೆಯಿರಿ.ಹೂಡಿಕೆ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಆರೋಗ್ಯದ ಬಗೆಗೆ ಕಾಳಜಿ ವಹಿಸಿ. ಮಕ್ಕಳಿಂದ ಸಂತೋಷ ಸಿಗಲಿದೆ.ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 6

Horoscope Today

ಕನ್ಯಾ: ನಿಮ್ಮ ವರ್ತನೆ ಕುಟುಂಬದ ಸದಸ್ಯರಿಗೆ ಕಿರಿಕಿರಿ ಉಂಟು ಮಾಡುವ ಸಾಧ್ಯತೆ ಇದೆ. ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ಹಣಕಾಸು ಪ್ರಗತಿ ಇರಲಿದೆ. ಬಂಧುಗಳ ಭೇಟಿ ಕೊಂಚ ಸಮಾಧಾನ ತರುವುದು. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಆತುರದಲ್ಲಿ ಮಾತನಾಡಿ ಅಪಾಯ ತಂದುಕೊಳ್ಳುವುದು ಬೇಡ. ಸಂಗಾತಿಯ ವರ್ತನೆ ಮುಜುಗರ ಉಂಟು ಮಾಡುವ ಸಾಧ್ಯತೆ ಇದೆ. ಮಾತಿಗೆ ಮಾತು ಬೆಳೆಸುವುದು ಬೇಡ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 7

Horoscope Today

ವೃಶ್ಚಿಕ: ಕುಟುಂಬದ ಸದಸ್ಯರ ಆರೋಗ್ಯ ಕಡೆ ಗಮನ ಇರಲಿ. ನಕಾರಾತ್ಮಕ ಆಲೋಚನೆಗಳು ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಳಲುವಂತೆ ಮಾಡಬಹುದು. ದಿನದ ಮಟ್ಟಿಗೆ ಖರ್ಚು.ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 9

Horoscope Today

ಧನಸ್ಸು: ಹೂಡಿಕೆ ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ಆಪ್ತ ಸ್ನೇಹಿತ- ಸಂಬಂಧಿಗಳ ಸಮಸ್ಯೆಗಳಿಗೆ ಸ್ಪಂದಿಸುವಿರಿ. ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 6

Horoscope Today

ಮಕರ: ಆರೋಗ್ಯ ಉತ್ತಮವಾಗಿರಲಿದೆ. ಸ್ನೇಹಿತರ ಸಹಕಾರ ಸಿಗಲಿದೆ. ಆರ್ಥಿಕ ಪ್ರಗತಿ ಉತ್ತಮವಾಗಿರಲಿದೆ. ಕೆಲಸದ ನಿಧಾನಗತಿ ಸ್ವಲ್ಪ ಒತ್ತಡ ತರುವುದು. ಅತಿರೇಖದಲ್ಲಿ ಮಾತನಾಡುವುದು ಬೇಡ. ಸಮಾಧಾನದಿಂದ ವರ್ತಿಸಿ.ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 6

Horoscope Today

ಕುಂಭ: ಉದ್ಯೋಗದ ಸ್ಥಳದಲ್ಲಿ ಪ್ರಸಂಶೆ ಸಿಗಲಿದೆ.ಹಿರಿಯರ ಮಾರ್ಗದರ್ಶನ ಸಿಗುವುದು. ಆರೋಗ್ಯ ಉತ್ತಮವಾಗಿರಲಿದೆ .ಅನಿರೀಕ್ಷಿತ ಖರ್ಚು ಇರಲಿದೆ. ಸಂಗಾತಿಯ ಸಂಪೂರ್ಣ ಬೆಂಬಲ ಸಿಗಲಿದೆ. ಅದೃಷ್ಟ ಸಂಖ್ಯೆ: 3

Horoscope Today

ಮೀನ: ಉದ್ಯೋಗದ ಸ್ಥಳದಲ್ಲಿ ಹೊಸ ಭರವಸೆಗಳು ಮೂಡಲಿವೆ. ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಪಾಲುದಾರಿಕೆ ವ್ಯವಹಾರವು ನಷ್ಟ ತರುವುದು. ನಿಮ್ಮ ಉದಾರ ವರ್ತನೆಯನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇದೆ.ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 1

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading
Advertisement
Gopi Hinduja
ವಿದೇಶ4 mins ago

Gopi Hinduja: ನಮ್ಮನ್ನಾಳಿದ ಬ್ರಿಟನ್‌ನಲ್ಲಿ ಭಾರತದ ಉದ್ಯಮಿಯೇ ಅತ್ಯಂತ ಸಿರಿವಂತ; ಯಾರಿವರು?

AC visited Gandabommanahalli Goshala and inspected
ವಿಜಯನಗರ45 mins ago

Vijayanagara News: ಗಂಡಬೊಮ್ಮನಹಳ್ಳಿಯ ಗೋಶಾಲೆಗೆ ಉಪ ವಿಭಾಗಾಧಿಕಾರಿ ಭೇಟಿ, ಪರಿಶೀಲನೆ

Application Invited for TTTI and Toyota Skill Courses from Toyota Technical Training Institute
ಕರ್ನಾಟಕ50 mins ago

Toyota: ಟೊಯೊಟಾ ಕೌಶಲ್ಯ ಕೋರ್ಸ್‌ಗೆ ಅರ್ಜಿ ಆಹ್ವಾನ; ಗ್ರಾಮೀಣ ಯುವಕರೇ ಈ ಅವಕಾಶ ಬಳಸಿಕೊಳ್ಳಿ

SSLC Exam 2024
ಕರ್ನಾಟಕ55 mins ago

SSLC 2024 Exam 2: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಫೇಲ್‌ ಆದ ವಿದ್ಯಾರ್ಥಿಗಳಿಗೆ ವಿಶೇಷ ಪರಿಹಾರ ಬೋಧನೆ ತರಗತಿ ಮುಂದೂಡಿಕೆ

ಕ್ರಿಕೆಟ್1 hour ago

Gautam Gambhir : ಗೌತಮ್​ ಗಂಭೀರ್ ಟೀಮ್ ಇಂಡಿಯಾದ ಮುಂದಿನ ಕೋಚ್​​?

Retirement Plan
ಮನಿ ಗೈಡ್1 hour ago

Retirement Plan: ನಿವೃತ್ತಿ ನಂತರ ನೆಮ್ಮದಿ ಜೀವನ ನಡೆಸಬೇಕೆ? ಈ 5 ಯೋಜನೆಗಳನ್ನು ಮರೆಯಬೇಡಿ

Siddharth Kak
ದೇಶ1 hour ago

Siddharth Kak: ಡಿಡಿಯ ʼಸುರಭಿʼ ಕಾರ್ಯಕ್ರಮ ನೆನಪಿದೆಯಾ? ಪ್ರತಿ ವಾರ ಎಷ್ಟು ಲಕ್ಷ ಪೋಸ್ಟ್‌ ಕಾರ್ಡ್‌ ಬರುತ್ತಿತ್ತು ಗೊತ್ತಾ?

Prajwal Revanna Case JDS calls CD Shivakumar pen drive gang
ರಾಜಕೀಯ1 hour ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Swati Maliwal
ದೇಶ1 hour ago

Swati Maliwal: ಸ್ವಾತಿ ಮಾಲಿವಾಲ್‌ ಕೇಸ್‌ಗೆ ಟ್ವಿಸ್ಟ್;‌ ತಮ್ಮ ಸಂಸದೆ ವಿರುದ್ಧವೇ ತಿರುಗಿಬಿದ್ದ ಆಪ್‌ ನಾಯಕರು!

Irfan Pathan
ಕ್ರೀಡೆ1 hour ago

Irfan Pathan : ಕಹಿ ನೆನಪು; ಬುರ್ಖಾ ಧರಿಸದ ಪತ್ನಿ ಜತೆ ಫೋಟೋ ತೆಗಿಸಿಕೊಳ್ಳಲು ಒಪ್ಪದ ಇರ್ಫಾನ್ ಪಠಾಣ್​​

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ1 hour ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ15 hours ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ17 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ1 day ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು1 day ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ3 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ3 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ3 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20243 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌