ಫಾಸ್ಟ್ ಫುಡ್ v/s ಸ್ಲೋ ಪುಡ್‌: ಅವಸರ v/s ಆರೋಗ್ಯ - Vistara News

ಆಹಾರ/ಅಡುಗೆ

ಫಾಸ್ಟ್ ಫುಡ್ v/s ಸ್ಲೋ ಪುಡ್‌: ಅವಸರ v/s ಆರೋಗ್ಯ

ಫಾಸ್ಟ್‌ ಫುಡ್‌ ಮತ್ತು ಸ್ಲೋ ಫುಡ್-‌ ಅವಸರ ಮತ್ತು ಆರೋಗ್ಯ- ಇವೆರಡರ ನಡುವೆ ಯಾವುದು ಆರಿಸಿಕೊಳ್ಳುತ್ತೀರಿ ಎಂಬುದರ ಮೇಲೆ ನಿಮ್ಮ ಮುಂದಿನ ಜೀವನದ ಆರೋಗ್ಯ ನೆಮ್ಮದಿ ನಿಂತಿದೆ.

VISTARANEWS.COM


on

ʼಫಾಸ್ಟ್ ಫುಡ್ʼ v/s ʼಸ್ಲೋ ಪುಡ್‌ʼ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಫಾಸ್ಟ್‌ ಫುಡ್‌ ಬಗ್ಗೆ ನಿಮಗೆ ಗೊತ್ತೇ ಇದೆ. ಸ್ಲೋ ಫುಡ್‌ ಬಗ್ಗೆ ಗೊತ್ತೇ? ಇಲ್ಲವಾದರೆ ಹೆಚ್ಚು ತಿಳಿದುಕೊಳ್ಳಲು ಇದು ಸುಸಮಯ. ಫಾಸ್ಟ್‌ ಫುಡ್‌ನಿಂದ ಸ್ಲೋ ಫುಡ್‌ನತ್ತ ಬದಲಾಯಿಸಲೂ ಇದು ಸಕಾಲ.

ಇಂದಿನ ಜೀವನದ ಅತಿ ವೇಗವಾಗಿದೆ. ಸಾಮಾನ್ಯ ಆಹಾರಕ್ಕಿಂತ ಮೊದಲೇ ಬೇಯಿಸಿದ ಅಥವಾ ಕಡಿಮೆ ಸಮಯದಲ್ಲಿ ಬೇಯಿಸಬಹುದಾದ ಆಹಾರ ಪದಾರ್ಥಗಳಿಗೆ ಬೇಡಿಕೆ ಹೆಚ್ಚು. ಇದೇ ʼಫಾಸ್ಟ್ ಫುಡ್ʼ ಮೂಲ.

ಸಾಮಾನ್ಯ ಆಹಾರಕ್ಕಿಂತ ಹೆಚ್ಚು ರುಚಿ ನೀಡುವ ಆಹಾರ ಪದಾರ್ಥಗಳು ಗಬಗಬನೆ ತಿಂದು ಮುಗಿಸಲು ಅನುಕೂಲಕರ. ಇವು ಹೆಚ್ಚು ಲವಣಗಳು, ಸಕ್ಕರೆ, ಫೈಬರ್ ಮತ್ತು ಹೆಚ್ಚು ಮಸಾಲೆಗಳನ್ನು ಹೊಂದಿರುತ್ತವೆ.

ʼಫಾಸ್ಟ್ ಫುಡ್ʼ v/s ʼಸ್ಲೋ ಪುಡ್‌ʼ

ನಾವು ದಿನನಿತ್ಯ ಹಲವಾರು ರೀತಿಯ ಪಾಸ್ಟ್‌ ಪುಡ್‌ ತಿನ್ನುತ್ತೇವೆ. ʼಫಾಸ್ಟ್ ಫುಡ್ʼ ಅಂದಾಗ ಪಿಜ್ಜಾ, ಮ್ಯಾಗಿ, ಬರ್ಗರ್‌, ಪಾನಿಪುರಿ, ಸೇವ್‌ಪುರಿ, ನೂಡಲ್ಸ್‌, ಗೋಬಿ ಮಂಚೂರಿ, ಸೂಪ್‌, ಚಿಪ್ಸ್‌, ಪಾಪ್‌ಕಾರ್ನ್‌, ಹಾಟ್‌ಡಾಗ್‌, ಫ್ರೆಂಚ್‌ಪ್ರೈಸ್‌, ಚಾಕಲೇಟ್‌, ಕ್ಯಾಂಡೀಸ್‌, ಸಮೊಸಾ, ಮೊಮೊಸ್‌, ದಹಿಪುರಿ, ಸ್ಯಾಂಡ್‌ವಿಚ್‌, ಕೇಕ್‌, ಕಟ್ಲೆಟ್‌, ಪಾಸ್ತಾ, ಕಚೋರಿ ನಮ್ಮ ಗಮನಕ್ಕೆ ಬಂದೇ ಬರುತ್ತವೆ.

ʼಫಾಸ್ಟ್ ಫುಡ್ʼ ನಾಲಿಗೆಗೆ ರುಚಿಕರವಾಗಿರುವುದು ನಿಜ. ಆದರೆ ನಮ್ಮ ದೇಹಕ್ಕೆ ಒಳ್ಳೆಯದೋ ಕೆಟ್ಟದ್ದೋ ಎಂಬ ಪ್ರಶ್ನೆ ಬರುತ್ತದೆ. ಈ ಪ್ರಶ್ನೆಗೆ ಉತ್ತರ ಕೊಡುವುದು ಖಂಡಿತವಾಗಿಯೂ ಸುಲಭವಲ್ಲ.

ಪೌಷ್ಟಿಕಾಂಶದ ವಿಷಯದಲ್ಲಿ ʼಫಾಸ್ಟ್ ಫುಡ್ʼ ಆಹಾರ ಅನಾರೋಗ್ಯಕರವಾದ ವಿವಿಧ ಪದಾರ್ಥಗಳನ್ನು ಹೊಂದಿರುತ್ತದೆ. ಇದು ಸಕ್ಕರೆ, ಉಪ್ಪು, ಸ್ಯಾಚುರೇಟೆಡ್ ಅಥವಾ ಟ್ರಾನ್ಸ್ ಕೊಬ್ಬುಗಳು, ಅನೇಕ ಸಂಸ್ಕರಿಸಿದ ಪದಾರ್ಥಗಳು, ಸೇರಿಸಿದ ಪ್ರಿಸರ್ವೇಟಿವ್‌ಗಳು ಅಧಿಕವಾಗಿರುತ್ತವೆ.

ಇದರಲ್ಲಿ ಕೆಲವು ಪ್ರಯೋಜನಕಾರಿ ಪೋಷಕಾಂಶಗಳ ಕೊರತೆಯೂ ಇರುತ್ತದೆ ಮತ್ತು ಈ ಆಹಾರವು ಕ್ಯಾಲೋರಿಗಳು, ಸೋಡಿಯಂ ಮತ್ತು ಅನಾರೋಗ್ಯಕರ ಕೊಬ್ಬಿನಿಂದ ತುಂಬಿರುತ್ತದೆ.

ಇದರಿಂದ ತಪ್ಪಿಸಿಕೊಳ್ಳಲು ʼಸ್ಲೋ ಫುಡ್‌ʼ ಮೊರೆ ಹೋಗುವುದೊಂದೇ ದಾರಿ. ಇದು ಬೇರೇನೂ ಅಲ್ಲ. ನಮ್ಮಲ್ಲಿ ತಲೆ ತಲಾಂತರದಿಂದ ಜಾರಿಯಲ್ಲಿ ಇರುವುದೇ ಆಗಿದೆ.

ʼಫಾಸ್ಟ್ ಫುಡ್ʼ v/s ʼಸ್ಲೋ ಪುಡ್‌ʼ

ಸ್ಲೋ ಫುಡ್ ಎಂಬುದು ಒಂದು ರೀತಿಯಲ್ಲಿ ಆಹಾರದ ಆಂದೋಲನ. ಪರಿಸರ ಅಥವಾ ದೇಹದ ಆರೋಗ್ಯಕ್ಕೆ ಹಾನಿಯಾಗದಂತೆ ಉತ್ತಮ ರುಚಿಯನ್ನು ಹೊಂದಿರುವ, ಶುದ್ಧ, ಸ್ಥಳೀಯವಾಗಿ ತಯಾರಿಸಿದ ಆಹಾರವಿದು. ಸಾಂಪ್ರದಾಯಿಕ ಅಡುಗೆ ವಿಧಾನಗಳು ಮತ್ತು ಸಾವಯವ ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತದೆ.

ಹಾಗಾದರೆ ʼಸ್ಲೋ ಪುಡ್‌ʼಗಳು ಯಾವವು?
ತರಕಾರಿಗಳು, ಹಣ್ಣುಗಳು, ಕಿರುಧಾನ್ಯಗಳ ಬ್ರೆಡ್‌, ಧಾನ್ಯಗಳು, ಹಾಲು, ಬೆಣ್ಣೆ, ಮೊಸರು, ತುಪ್ಪ, ರೆಡ್‌ಮೀಟ್‌ ಅಲ್ಲದ ಮಾಂಸ, ಪ್ರೊಟೀನ್‌ ಸಾಕಷ್ಟು ಹೊಂದಿರುವ ಇತರ ಆಹಾರಗಳು.

ʼಸ್ಲೋ ಪುಡ್‌ʼಗಳನ್ನು ಸಾಮಾನ್ಯವಾಗಿ ಮನೆಯಲ್ಲಿಯೆ ತಯಾರಿಸಿರುತ್ತಾರೆ. ಯಾವುದೇ ಕೆಮಿಕಲ್‌ ಬಳಸದೆ ಮಾಡುತ್ತಾರೆ. ಇವುಗಳಿಂದ ಆರೋಗ್ಯಕ್ಕೆ ಹಾನಿ ಇರುವುದಿಲ್ಲ.

ಯಾವುದು ಬೇಕೋ ನಿರ್ಧರಿಸಿ

ʼಫಾಸ್ಟ್ ಫುಡ್ʼ v/s ʼಸ್ಲೋ ಪುಡ್‌ʼ

ʼಫಾಸ್ಟ್ ಫುಡ್ʼ ಗಳನ್ನು ಹೆಚ್ಚಿನದಾಗಿ ರಸ್ತೆ ಬದಿ ಅಂಗಡಿಗಳಲ್ಲಿ, ಹೆಚ್ಚು ಹೆಚ್ಚು ಲವಣ ಬಳಸಿ ಮಾಡಿ ಮಾರುತ್ತಾರೆ. ಲವಣ, ಕೊಬ್ಬಿನ ಅಂಶಗಳ ಪ್ರಮಾಣ ಹೆಚ್ಚಿರುವುದರಿಂದ ಇವು ದೇಹಕ್ಕೆ ಕೆಡುಕನ್ನು ಉಂಟುಮಾಡುತ್ತವೆ. ಬೊಜ್ಜು ಬರುವುದು ಇದರ ಅತಿ ಹಾನಿಕರ ಸಂಗತಿ.

ಬಾಯಿ ಚಪಲ ತೀರಿಸಿಕೊಳ್ಳಲು ಇಂತಹ ಲವಣಯುಕ್ತ ತಿನಿಸುಗಳನ್ನು ದಿನೇದಿನೆ ತಿನ್ನುತ್ತಾ ಇದ್ದರೆ ಅನಾರೋಗ್ಯ ಉಂಟಾಗುವುದು ಖಚಿತ. ಆದ್ದರಿಂದ ಶುದ್ಧವಾದ, ಆರೋಗ್ಯಕರ, ಮನೆಯಲ್ಲಿಯೇ ಮಾಡಿದ ʼಸ್ಲೋ ಪುಡ್‌ʼಗಳನ್ನು ತಿನ್ನುವುದು ನಮ್ಮ ದೇಹಕ್ಕೆ ಬಹಳ ಒಳ್ಳೆಯದು. ಇದರಿಂದ ಆರೋಗ್ಯ ಹದಗೆಡುವುದಿಲ್ಲ.

ಇದನ್ನೂ ಓದಿ: World Food Safety Day: ನಿಮ್ಮ ಆಹಾರ ಆರೋಗ್ಯಕರ ಎನಿಸಬೇಕಾದರೆ…

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Pralhad Joshi: ಗೋಧಿ ಬೆಲೆ ಸ್ಥಿರತೆಗೆ ಕೇಂದ್ರ ಸರ್ಕಾರದ ಕ್ರಮ; ಪ್ರಲ್ಹಾದ್‌ ಜೋಶಿ

Pralhad Joshi: ಗೋಧಿ ದಾಸ್ತಾನು ಮತ್ತು ಬೆಲೆಗಳ ಬಗ್ಗೆ ಸಮಗ್ರ ಚರ್ಚೆ ನಡೆದಿದ್ದು, 2023ಕ್ಕೆ ಹೋಲಿಸಿದರೆ ಈ ಬಾರಿ 4 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ ಗೋಧಿ ದಾಸ್ತಾನಿದೆ. PDS ಮತ್ತು ಇತರ ಕಲ್ಯಾಣ ಯೋಜನೆಗಳ ಅಗತ್ಯವನ್ನು ಪೂರೈಸಿದ ನಂತರ ಸುಮಾರು 184 LMT ನಷ್ಟು ಗೋಧಿ ದಾಸ್ತಾನು ಲಭ್ಯವಿರಲಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಖಾತೆ ನೂತನ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

VISTARANEWS.COM


on

Central Government monitoring wheat price stability: Union Minister Pralhad Joshi
Koo

ನವದೆಹಲಿ: ದೇಶದಲ್ಲಿ ಗೋಧಿ ಬೆಲೆ ಸ್ಥಿರತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಿಗಾ ವಹಿಸಲು ಕೇಂದ್ರ ಸರ್ಕಾರ ಕ್ರಮಕ್ಕೆ ಮುಂದಾಗಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಖಾತೆ ನೂತನ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ತಿಳಿಸಿದ್ದಾರೆ.

ದೆಹಲಿಯಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಮಿತಿ ಸಭೆಯಲ್ಲಿ ಈ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದು, ಆಹಾರೋತ್ಪನ್ನಗಳ ಬೆಲೆ ಸ್ಥಿರತೆ ಕಾಯ್ದುಕೊಳ್ಳಲು ಇರುವ ಮಾರ್ಗಗಳ ಕುರಿತು ಮಾಹಿತಿ ಕಲೆ ಹಾಕಲಾಯಿತು ಎಂದು ಹೇಳಿದ್ದಾರೆ.

ಅಗತ್ಯ ವಸ್ತುಗಳ ಬೆಲೆಗಳನ್ನು ಪರಿಶೀಲಿಸಲೆಂದೇ ನಡೆದ ಈ ಸಭೆಯಲ್ಲಿ ವಿಶೇಷವಾಗಿ ಗೋಧಿ ದಾಸ್ತಾನು ಮತ್ತು ಬೆಲೆ ಬಗ್ಗೆ ಪ್ರಸ್ತಾಪಿಸಿ, ಚರ್ಚಿಸಲಾಯಿತು.

ಇದನ್ನೂ ಓದಿ: Rishabh Pant : ವಿಶ್ವ ಕಪ್​ನಲ್ಲಿ ವಿನೂತನ ವಿಕೆಟ್​ಕೀಪಿಂಗ್​​ ದಾಖಲೆ ಬರೆದ ರಿಷಭ್​ ಪಂತ್​

2024ರ ಜೂನ್ 18ರವರೆಗೆ 266 ಲಕ್ಷ ಮೆಟ್ರಿಕ್ ಟನ್ ಗೋಧಿ ಸಂಗ್ರಹಿಸಲಾಗಿದೆ. 2023ರಲ್ಲಿ ಇದೇ ವೇಳೆಗೆ 262 LMT ಗೋಧಿ ಸಂಗ್ರಹ ಇತ್ತು ಎಂದು ಸಚಿವ ಜೋಶಿ ತಿಳಿಸಿದ್ದಾರೆ.

ಗೋಧಿ ದಾಸ್ತಾನು ಮತ್ತು ಬೆಲೆಗಳ ಬಗ್ಗೆ ಸಮಗ್ರ ಚರ್ಚೆ ನಡೆದಿದ್ದು, 2023ಕ್ಕೆ ಹೋಲಿಸಿದರೆ ಈ ಬಾರಿ 4 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ ಗೋಧಿ ದಾಸ್ತಾನಿದೆ. PDS ಮತ್ತು ಇತರ ಕಲ್ಯಾಣ ಯೋಜನೆಗಳ ಅಗತ್ಯವನ್ನು ಪೂರೈಸಿದ ನಂತರ ಸುಮಾರು 184 LMTನಷ್ಟು ಗೋಧಿ ದಾಸ್ತಾನು ಲಭ್ಯವಿರಲಿದೆ ಎಂದು ಹೇಳಿದ್ದಾರೆ.

ಗೋಧಿ ಬೆಲೆಗಳ ಮೇಲೆ ನಿಕಟವಾಗಿ ನಿಗಾ ಇಡಲು ಮತ್ತು ದೇಶದ ಗ್ರಾಹಕರಿಗೆ ಬೆಲೆ ಸ್ಥಿರತೆಗಾಗಿ ಸೂಕ್ತ ನೀತಿ ರೂಪಿಸಿ ಕ್ರಮ ಕೈಗೊಳ್ಳಬಹುದು ಎಂದು ಸಭೆಯಲ್ಲಿ ಸಚಿವ ಪ್ರಲ್ಹಾದ್‌ ಜೋಶಿ ಸಲಹೆ ನೀಡಿದ್ದಾರೆ.

ರಾಜ್ಯ ಸಚಿವರು ಮತ್ತು ಉನ್ನತ ಅಧಿಕಾರಿಗಳ ಸಭೆ: ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ರಾಜ್ಯ ಸಚಿವರು ಮತ್ತು ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಸಚಿವ ಪ್ರಲ್ಹಾದ್‌ ಜೋಶಿ ಅವರು ಪ್ರತ್ಯೇಕ ಸಭೆ ನಡೆಸಿದರು.‌

ಇದನ್ನೂ ಓದಿ: Shivamogga News: ಕಾರ ಹುಣ್ಣಿಮೆ; ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಿಯ ದರ್ಶನ ಪಡೆದ ಸಾವಿರಾರು ಭಕ್ತರು

ಅಧ್ಯಕ್ಷತೆ ವಹಿಸಿದ್ದ ಸಚಿವರು, ಸಚಿವಾಲಯದ ವಿವಿಧ ಕಾರ್ಯಗಳ ಬಗ್ಗೆ ಕುರಿತು ಚರ್ಚೆ ನಡೆಸಿದರು. ಸಚಿವಾಲಯ ಮತ್ತು ಅದರ ಕಚೇರಿಗಳ ಕಾರ್ಯನಿರ್ವಹಣೆ ಪರಿಶೀಲಿಸಿ ಕಾರ್ಯಕ್ಷಮತೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವಂತೆ ನಿರ್ದೇಶನ ನೀಡಿದರು.

Continue Reading

ಆರೋಗ್ಯ

Health Tips Kannada: ಊಟದ ನಂತರ ಮೊಸರು ಸೇವಿಸಿದರೆ ಎಷ್ಟೊಂದು ಪ್ರಯೋಜನ ಗೊತ್ತೆ?

Health Tips Kannada: ಮೊಸರನ್ನುಸೇವಿಸಿದರೆ ಅದು ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೇ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದರಿಂದ ಹಿಡಿದು ಹೃದಯದ ಆರೋಗ್ಯವನ್ನು ಉತ್ತೇಜಿಸುವ ಮೊಸರನ್ನು ಊಟದ ಬಳಿಕ ಸೇವಿಸುವುದರಿಂದ (Health Benefits) ಐದು ಪ್ರಮುಖ ಪ್ರಯೋಜನಗಳಿವೆ.

VISTARANEWS.COM


on

By

Health Tips Kannada
Koo

ಕ್ಯಾಲ್ಸಿಯಂ, ಪ್ರೊಟೀನ್, ವಿಟಮಿನ್ ಬಿ2, (Health Tips Kannada) ವಿಟಮಿನ್ ಬಿ12, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್‌ಗಳು ಹೇರಳವಾಗಿರುವ ಮೊಸರನ್ನು (curd) ಊಟದ ಅನಂತರ (After Meal ) ಸೇವಿಸುವುದರಿಂದ ಸಾಕಷ್ಟು (Health Benefits) ಪ್ರಯೋಜನಗಳಿವೆ. ಮೊಸರು ಸೇವನೆಯು ಜೀರ್ಣಕ್ರಿಯೆಗೆ (digestion) ಸಹಾಯ ಮಾಡುತ್ತದೆ, ಕರುಳಿನ ಆರೋಗ್ಯವನ್ನು (gut health) ಹೆಚ್ಚಿಸುತ್ತದೆ, ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

ಅನೇಕ ಆರೋಗ್ಯ ಪ್ರಯೋಜನಗಳನ್ನು ಒದಗಿಸುವ ಮೊಸರು ದೇಹವನ್ನು ತಂಪಾಗಿಸುವ ಪರಿಣಾಮವನ್ನು ಹೊಂದಿದೆ. ದೇಹದ ಪೋಷಣೆ ಮಾಡುವುದರ ಜೊತೆಗೆ ಮನಸ್ಸನ್ನು ಶಾಂತಗೊಳಿಸುತ್ತದೆ. ಲ್ಯಾಕ್ಟಿಕ್ ಆಸಿಡ್ ಬ್ಯಾಕ್ಟೀರಿಯಾವನ್ನು ಸೇರಿಸುವ ಮೂಲಕ ಹುದುಗಿಸಿದ ಹಾಲಿನಲ್ಲಿ ಮೊಸರನ್ನು ತಯಾರಿಸಲಾಗುತ್ತದೆ. ಇದು ಮೂಳೆಯ ಆರೋಗ್ಯ ಮತ್ತು ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಆರೋಗ್ಯ ಪ್ರಯೋಜನಗಳನ್ನು ಉತ್ತೇಜಿಸಲು ದಿನಕ್ಕೆ 100- 200 ಗ್ರಾಂ ಮೊಸರನ್ನು ಮಾತ್ರ ಸೇವಿಸಬೇಕು. ಆದರೂ ಅತಿಯಾಗಿ ಮೊಸರು ತಿನ್ನುವುದು ಜೀರ್ಣಕ್ರಿಯೆಯಲ್ಲಿ ಅಸ್ವಸ್ಥತೆ, ತೂಕ ಹೆಚ್ಚಳ ಮತ್ತು ಲ್ಯಾಕ್ಟೋಸ್ ವೈಪರೀತ್ಯಕ್ಕೆ ಕಾರಣವಾಗುತ್ತದೆ.

ಮೊಸರು ಸೇವಿಸುವುದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭವಿದೆ. ಯಾಕೆಂದರೆ ಇದು ಪ್ರೋಬಯಾಟಿಕ್‌ಗಳ ಪೂರೈಕೆಗೆ ಸಹಾಯ ಮಾಡುತ್ತದೆ. ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ಅದರಲ್ಲಿರುವ ಪೌಷ್ಟಿಕಾಂಶದ ಅಂಶ ಮತ್ತು ಪ್ರೋಬಯಾಟಿಕ್ ಗುಣಲಕ್ಷಣಗಳಿಂದಾಗಿ ಒಟ್ಟಾರೆ ಆರೋಗ್ಯಕ್ಕೆ ಇದು ತುಂಬಾ ಪ್ರಯೋಜನಕಾರಿಯಾಗಿದೆ.

ಮೊಸರನ್ನು ಊಟದ ನಂತರ ಸೇವಿಸಿದರೆ ಅದು ಶಕ್ತಿಯನ್ನು ಹೆಚ್ಚಿಸುವುದು. ಊಟದ ಅನಂತರ ಸೇವಿಸಿದರೆ ಜೀರ್ಣಕ್ರಿಯೆಯನ್ನು ವರ್ಧಿಸಲು ಸಹಾಯ ಮಾಡುತ್ತದೆ. ಆದರೆ ರಾತ್ರಿಯ ಅನಂತರ ಮೊಸರು ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಯಾಕೆಂದರೆ ಅದು ನಿದ್ರೆಗೆ ಸಮಸ್ಯೆಯಾಗಬಹುದು ಮತ್ತು ಅಜೀರ್ಣಕ್ಕೆ ಕಾರಣವಾಗಬಹುದು.
ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದರಿಂದ ಹಿಡಿದು ಹೃದಯದ ಆರೋಗ್ಯವನ್ನು ಉತ್ತೇಜಿಸುವ ಮೊಸರನ್ನು ಊಟದ ಬಳಿಕ ಸೇವಿಸುವುದರಿಂದ ಐದು ಪ್ರಮುಖ ಪ್ರಯೋಜನಗಳಿವೆ.


ಆರೋಗ್ಯಕರ ಜೀರ್ಣಕ್ರಿಯೆ

ಮೊಸರು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಯಾಕೆಂದರೆ ಇದರಲ್ಲಿರುವ ವಿಟಮಿನ್, ಪ್ರೋಟೀನ್ ಮತ್ತು ಲ್ಯಾಕ್ಟೋಬಾಸಿಲಸ್ ಬ್ಯಾಕ್ಟೀರಿಯಾಗಳು ಸಮೃದ್ಧವಾಗಿವೆ.

ರೋಗನಿರೋಧಕ ಶಕ್ತಿ ಹೆಚ್ಚಳ

ಮೊಸರಿನಲ್ಲಿರುವ ಪ್ರೋಬಯಾಟಿಕ್ ಕರುಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ ಮತ್ತು ಅದರ ಸಕ್ರಿಯ ಬ್ಯಾಕ್ಟೀರಿಯಾ ಗುಣಲಕ್ಷಣಗಳು ಸೂಕ್ಷ್ಮಜೀವಿಗಳಿಂದ ಉಂಟಾಗುವ ಕಾಯಿಲೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಮಧುಮೇಹ ನಿಯಂತ್ರಣ

ಮೊಸರಿನಲ್ಲಿರುವ ಜೀರ್ಣವಾಗುವ ಪ್ರೋಟೀನ್‌ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಗ್ರೀಕ್ ಮೊಸರು ಹೃದ್ರೋಗದ ಅಪಾಯವನ್ನು ಕಾಪಾಡಿಕೊಳ್ಳಲು ಬಹಳ ಸಹಾಯಕವಾಗಿದೆ.

ತೂಕ ನಷ್ಟ

ಮೊಸರಿನಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಅದು ಕಾರ್ಟಿಸೋಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೊಸರಿನ ಸೇವನೆಯು ಕಾರ್ಟಿಸೋಲ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಯಾಕೆಂದರೆ ಇದು ಅಸಮತೋಲಿತ ಜೀವನಶೈಲಿಯಿಂದ ಉತ್ತುಂಗಕ್ಕೇರುವ ಹಾರ್ಮೋನ್ ಆಗಿದ್ದು, ಸೊಂಟದ ರೇಖೆಯಲ್ಲಿ ಕೊಬ್ಬನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ.

ಹೃದಯದ ಆರೋಗ್ಯ

ದೈನಂದಿನ ದಿನಚರಿಯಲ್ಲಿ ಮೊಸರು ಸೇರಿಸುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು.

ರಕ್ತದೊತ್ತಡ ನಿಯಂತ್ರಣ

ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಿ ಹೃದಯವನ್ನು ಆರೋಗ್ಯಕರವಾಗಿಡಬಹುದು.

ಹಲ್ಲಿನ ಆರೋಗ್ಯ

ಮೊಸರು ಕ್ಯಾಲ್ಸಿಯಂ ಮತ್ತು ರಂಜಕದ ಮೂಲವಾಗಿದೆ. ಇದು ಹಲ್ಲುಗಳ ಎನಾಮೆಲ್‌ಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ ಮತ್ತು ಹಲ್ಲಿನ ಕೊಳೆತವನ್ನು ತಡೆಯುತ್ತದೆ. ದೈನಂದಿನ ಆಹಾರದಲ್ಲಿ ಮೊಸರನ್ನು ಸೇರಿಸುವುದರಿಂದ ಬಾಯಿಯ ನೈರ್ಮಲ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಹಲ್ಲಿನ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: Mobile Addiction: ನಿಮ್ಮ ಮಗುವನ್ನು ಮೊಬೈಲ್ ಚಟದಿಂದ ತಪ್ಪಿಸಬೇಕೆ? ಈ 5 ಸಲಹೆ ಅನುಸರಿಸಿ

ಊಟದ ಅನಂತರ ಮೊಸರು ಯಾಕೆ ಸೇವಿಸಬೇಕು?

ಮೊಸರನ್ನು ಯಾವಾಗಲೂ ಊಟದ ಅನಂತರ ಸೇವಿಸಿದರೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಯಾಕೆಂದರೆ ಇದು ಕರುಳಿನ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುವುದು. ಅದರಲ್ಲಿ ಪ್ರೋಬಯಾಟಿಕ್ ಅಂಶ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಮೊಸರು ಶೀತವನ್ನು ಉಂಟು ಮಾಡುತ್ತದೆ. ಹೀಗಾಗಿ ಇದನ್ನು ಬೆಚ್ಚಗಿನ ವಾತಾವರಣದಲ್ಲಿ ದೇಹವನ್ನು ತಂಪಾಗಿರಿಸಲು ಸೇವಿಸುವುದು ಉತ್ತಮ. ಯಾವುದೇ ರೀತಿಯ ಡೈರಿ ಉತ್ಪನ್ನದ ಅಲರ್ಜಿ ಇದ್ದರೆ ಮೊಸರು ತಿನ್ನಬಾರದು ಅಥವಾ ತಿನ್ನುವ ಮೊದಲು ವೈದ್ಯರನ್ನು ಸಂಪರ್ಕಿಸಿ.

Continue Reading

ಪ್ರಮುಖ ಸುದ್ದಿ

CM Siddaramaiah: ಅವಧಿ ಮೀರಿದ ಆಹಾರ ಪದಾರ್ಥ ಮಾರಿದರೆ ಹುಷಾರ್!‌ ಸಿಎಂ ಎಚ್ಚರಿಕೆ

CM Siddaramaiah: ಬಸ್‌ ನಿಲ್ದಾಣಗಳ ಸ್ಟಾಲ್‌ಗಳಲ್ಲಿ ಮಾರಾಟವಾಗುವ ಆಹಾರ ಪದಾರ್ಥಗಳ ಬಗ್ಗೆ ಹಲವು ಬಳಕೆದಾರರು ಸಾಮಾಜಿಕ ಜಾಲತಾಣಗಳಲ್ಲಿ ದೂರು ತೋಡಿಕೊಂಡಿದ್ದರು. ಲಘು ಪಾನೀಯಗಳು, ತೆರೆದಿಟ್ಟ ಆಹಾರ ಪದಾರ್ಥಗಳ ಸ್ವಚ್ಛತೆ, ನೈರ್ಮಲ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.

VISTARANEWS.COM


on

food safety cm siddaramaih
Koo

ಬೆಂಗಳೂರು: ಬಸ್‌ ನಿಲ್ದಾಣಗಳಲ್ಲಿನ ವ್ಯಾಪಾರ ಮಳಿಗೆಗಳು (Food stalls) ಮತ್ತು ಆಹಾರ ಉದ್ದಿಮೆಗಳಲ್ಲಿ ಅವಧಿ ಮೀರಿದ (Expiry date) ಆಹಾರ ಪದಾರ್ಥಗಳ ಮಾರಾಟ ಮಾಡಿದರೆ ನಿರ್ದಾಕ್ಷಿಣ್ಯವಾಗಿ (Food safety) ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು (CM Siddaramaiah) ಎಚ್ಚರಿಸಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿಗಳ ಕಚೇರಿಯಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ. ಬಸ್‌ ನಿಲ್ದಾಣಗಳಲ್ಲಿನ ವ್ಯಾಪಾರ ಮಳಿಗೆಗಳು ಮತ್ತು ಆಹಾರ ಉದ್ದಿಮೆಗಳಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳ ಮಾರಾಟ, ನೈರ್ಮಲ್ಯದ ಕೊರತೆ ಮುಂತಾದ ವಿಷಯಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬಿತ್ತರವಾದ ವರದಿಗಳನ್ನು ಆಧರಿಸಿ ಮುಖ್ಯಮಂತ್ರಿ ಕಚೇರಿಯ ಸಾರ್ವಜನಿಕ ಕುಂದುಕೊರತೆ ವಿಭಾಗದ ವಿಶೇಷ ಕರ್ತವ್ಯಾಧಿಕಾರಿಗಳು ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ವ್ಯಾಪಾರ ಮಳಿಗೆಗಳು ಹಾಗೂ ಆಹಾರ ಉದ್ದಿಮೆಗಳಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಕಾಯ್ದೆ 2006 ಮತ್ತು ನಿಯಮಗಳು 2011 ಅನ್ನು ಪಾಲಿಸುತ್ತಿರುವ ಬಗ್ಗೆ ಪರಿಶೀಲನೆ ಮಾಡಲು 2024ರ ಜೂನ್‌ ತಿಂಗಳಲ್ಲಿ ವಿಶೇಷ ಅಭಿಯಾನವನ್ನು ಕೈಗೊಳ್ಳಲಾಗಿರುತ್ತದೆ. ಅದರಂತೆ ರಾಜ್ಯಾದ್ಯಂತ 201 ಜಿಲ್ಲಾ ಮತ್ತು ತಾಲೂಕು ಕೇಂದ್ರಗಳ ಕಚೇರಿ ಹಾಗೂ ಖಾಸಗಿ ಬಸ್‌ ನಿಲ್ದಾಣಗಳಲ್ಲಿ ಇರುವ 748 ವ್ಯಾಪಾರ ಮಳಿಗೆಗಳು ಮತ್ತು ಆಹಾರ ಉದ್ದಿಮೆಗಳನ್ನು ಪರಿಶೀಲನೆ ಮಾಡಲಾಗಿದ್ದು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ಮತ್ತು ನಿಯಮಗಳು 2011 ಅನ್ನು ಪಾಲಿಸುವಂತೆ ಅರಿವು ಮೂಡಿಸಲಾಗಿರುತ್ತದೆ. ಮುಂದಿನ ದಿನಗಳಲ್ಲಿ ಪುನರ್‌ ಪರಿಶೀಲನೆ ಸಂದರ್ಭದಲ್ಲಿ ಲೋಪದೋಷಗಳನ್ನು ಸರಿಪಡಿಸಿಕೊಳ್ಳದೇ ಇದ್ದಲ್ಲಿ ನಿಯಾಮಾನುಸಾರ ಕಾನೂನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ.

ಬಸ್‌ ನಿಲ್ದಾಣಗಳ ಸ್ಟಾಲ್‌ಗಳಲ್ಲಿ ಮಾರಾಟವಾಗುವ ಆಹಾರ ಪದಾರ್ಥಗಳ ಬಗ್ಗೆ ಹಲವು ಬಳಕೆದಾರರು ಸಾಮಾಜಿಕ ಜಾಲತಾಣಗಳಲ್ಲಿ ದೂರು ತೋಡಿಕೊಂಡಿದ್ದರು. ಲಘು ಪಾನೀಯಗಳು, ತೆರೆದಿಟ್ಟ ಆಹಾರ ಪದಾರ್ಥಗಳ ಸ್ವಚ್ಛತೆ, ನೈರ್ಮಲ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಅವಧಿ ಮುಗಿದ ವಸ್ತುಗಳಲ್ಲಿ ತಿಂಡಿ ತಯಾರಿ, ರಾಮೇಶ್ವರಂ ಕೆಫೆ ಮೇಲೆ ಅಧಿಕಾರಿಗಳ ದಾಳಿ

ಹೈದರಾಬಾದ್: ಹೈಟೆಕ್​ ರೀತಿಯಲ್ಲಿ ದೋಸೆ ಸೇರಿದಂತೆ ಆಹಾರ ಪದಾರ್ಥಗಳನ್ನು ತಯಾರಿ ಮಾಡುವ ಮತ್ತು ದಕ್ಷಿಣ ಭಾರತದ ಉಪಾಹಾರಕ್ಕೆ ಹೆಸರುವಾಸಿಯಾದ ಬೆಂಗಳೂರು ಮೂಲದ ರಾಮೇಶ್ವರಂ ಕೆಫೆ (Rameshwaram Cafe) ಮೇಲೆ ಹೈದರಾಬಾದ್​​ನ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತೆಲಂಗಾಣ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಗುರುವಾರ ರೆಸ್ಟೋರೆಂಟ್ ಅವಧಿ ಮೀರಿದ ಮತ್ತು ಲೇಬಲ್ ಮಾಡದ ಆಹಾರ ಪದಾರ್ಥಗಳನ್ನು ಬಳಸುತ್ತಿರುವುದು ಕಂಡುಬಂದಿದ್ದರಿಂದ ಅನೇಕ ಉಲ್ಲಂಘನೆಗಳನ್ನು ಕಂಡುಕೊಂಡಿದ್ದಾರೆ. ರಾಮೇಶ್ವರಂ ಕೆಫೆ ಕೆಲವು ತಿಂಗಳ ಹಿಂದೆ ರಾಷ್ಟ್ರ ಮಟ್ಟದ ಸುದ್ದಿಗೆ ಗ್ರಾಸವಾಗಿತ್ತು. ಬೆಂಗಳೂರಿನ ವೈಟ್​ಫೀಲ್ಡ್​ ಶಾಖೆಯ ಮೇಲೆ ಬಾಂಬ್​ ದಾಳಿ ನಡೆದ ಬಳಿಕ ಸಂಚಲನ ಮೂಡಿಸಿತ್ತು. ಈ ಪ್ರಕರಣದ ಬಗ್ಗೆ ಈಗಲೂ ತನಿಖೆ ನಡೆಯುತ್ತಿದೆ.

ಆಹಾರ ಸುರಕ್ಷತಾ ಇಲಾಖೆಯ ಪ್ರಕಾರ, 16,000 ರೂ ಮೌಲ್ಯದ 100 ಕೆಜಿ ಉದ್ದಿನ ಬೇಳೆ, 10 ಕೆ.ಜಿ. ನಂದಿನಿ ಮೊಸರು ಮತ್ತು ಎಂಟು ಲೀಟರ್ ಹಾಲು ಅವಧಿ ಮೀರಿ ಅಡುಗೆಮನೆಯಲ್ಲಿ ಪತ್ತೆಯಾಗಿದೆ. ಅಸ್ಪಷ್ಟ ಲೇಬಲ್ ಮಾಡಿದ್ದಕ್ಕಾಗಿ ಅಧಿಕಾರಿಗಳು ಅಡುಗೆಮನೆಯಲ್ಲಿದ್ದ ಇನ್ನೂ ಕೆಲವು ಆಹಾರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. 450 ಕೆ.ಜಿ ಹಸಿ ಅಕ್ಕಿ, 300 ಕೆಜಿ ಲೇಬಲ್ ಮಾಡದ ಬೆಲ್ಲವನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಆಹಾರ ಸುರಕ್ಷತಾ ಇಲಾಖೆ ತಿಳಿಸಿದೆ. ಏತನ್ಮಧ್ಯೆ, ಆಹಾರ ತಯಾರಿಸುವವರಿಗೆ ವೈದ್ಯಕೀಯ ಫಿಟ್ನೆಸ್ ಪ್ರಮಾಣಪತ್ರವನ್ನು ಸಲ್ಲಿಸಲಾಗಿಲ್ಲ ಮತ್ತು ರಾಮೇಶ್ವರಂ ಕೆಫೆಯಲ್ಲಿ ಕಸದ ಬುಟ್ಟಿಗಳನ್ನು ಮುಚ್ಚಳಗಳಿಂದ ಮುಚ್ಚಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅನೇಕ ಕಡೆ ದಾಳಿ

ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಹೈದರಾಬಾದ್​ನ ಅನೇಕ ಸ್ಥಳಗಳಲ್ಲಿ ದಾಳಿ ನಡೆಸುತ್ತಿದ್ದಾರೆ ಮತ್ತು ಅನೇಕ ಜನಪ್ರಿಯ ತಿನಿಸುಗಳ ಅಂಗಡಿಗಳು ನೈರ್ಮಲ್ಯ ಮಾನದಂಡಗಳನ್ನು ಕಾಪಾಡಿಕೊಳ್ಳದಿರುವುದು ಕಂಡುಬಂದಿದೆ. ಅದೇ ದಿನ, ಬಾಹುಬಲಿ ಕಿಚನ್ ಎಂಬ ರೆಸ್ಟೋರೆಂಟ್ ಮೇಲೆ ದಾಳಿ ನಡೆಸಲಾಗಿದೆ. ಸಂಗ್ರಹಿಸಿದ ಆಹಾರ ಪದಾರ್ಥಗಳಲ್ಲಿ ಜಿರಳೆಗಳು ಕಂಡುಬಂದಿದ್ದವು. ರೆಸ್ಟೋರೆಂಟ್​ನ ಅಡುಗೆಮನೆಯ ಆವರಣವು ತುಂಬಾ ಅನೈರ್ಮಲ್ಯ ಸ್ಥಿತಿಯಲ್ಲಿ ಕಂಡುಬಂದಿದ್ದು, ರೆಸ್ಟೋರೆಂಟ್ ಮಾಲೀಕರಿಗೆ ನೋಟಿಸ್ ನೀಡಲಾಗಿದೆ.

ಇದನ್ನೂ ಓದಿ: Food Tips Kannada: ಕಲಬೆರಕೆ ಆಹಾರಗಳಿಂದ ನಮ್ಮ ಆರೋಗ್ಯದ ಮೇಲಾಗುವ ಪರಿಣಾಮಗಳೇನು?

Continue Reading

ಆರೋಗ್ಯ

Morning Nutrition: ಆರೋಗ್ಯಕರ ಆಗಿರಬೇಕಿದ್ದರೆ ನಮ್ಮ ಬೆಳಗಿನ ತಿಂಡಿ ಹೇಗಿರಬೇಕು?

ರಾತ್ರಿಯಿಡೀ ದೇಹಕ್ಕೆ ಅಗತ್ಯವಾದ ವಿಶ್ರಾಂತಿಯನ್ನು ನೀಡಿದ್ದಾಗಿದೆ. ಇನ್ನೀಗ ಮುಂಜಾನೆ (Morning Nutrition) ಎದ್ದು ದಿನವನ್ನು ಪ್ರಾರಂಭಿಸಬೇಕು ಎನ್ನುವಾಗ, ದೇಹಕ್ಕೆ ನೀಡುವಂಥ ಗ್ರಾಸ ಹೇಗಿರಬೇಕು? ಒಂದು ಆಮ್ಲೇಟ್‌ ಸಾಕೇ? ಜೊತೆಗೆರಡು ಬ್ರೆಡ್‌…? ಅಥವಾ ಎರಡು ದೋಸೆ? ಹೀಗೆ ಗೊಂದಲಗಳು ಬಹಳಷ್ಟು ಇರಬಹುದು. ಅದಕ್ಕೆ ಉತ್ತರ ಇಲ್ಲಿದೆ.

VISTARANEWS.COM


on

Morning Nutrition
Koo

ಹೆಚ್ಚಿನ ಜನಕ್ಕೆ ಬೆಳಗಿನ ತಿಂಡಿಯ ಮಹತ್ವವೇ ತಿಳಿದಿರುವುದಿಲ್ಲ. ಈ ಮಾತನ್ನು ಹೇಳುವುದಕ್ಕೂ ಕಾರಣವಿದೆ. ಬೆಳಗ್ಗೆ (Morning Nutrition) ತಿಂಡಿಯನ್ನು ಎದ್ದ ನಾಲ್ಕು ತಾಸುಗಳ ನಂತರ ತಿನ್ನುವುದು, ಕೆಲವೊಮ್ಮೆ ತಿಂಡಿಯನ್ನೇ ತಿನ್ನದಿರುವುದು, ದಿನದ ಪ್ರಾರಂಭಕ್ಕೆ ಸೂಕ್ತ ಅಲ್ಲದ್ದನ್ನು ತಿನ್ನುವುದು, ಕೇವಲ ಕಾಫಿ/ಟೀ ಕುಡಿದು ಮಧ್ಯಾಹ್ನ ಊಟ ಮಾಡುವುದು- ಇಂಥ ಉದಾಹರಣೆಗಳು ಕಡಿಮೆಯೇನಿಲ್ಲ. ಆದರೆ ಬೆಳಗಿನ ತಿಂಡಿಯನ್ನು ದಿನದ ಅತ್ಯಂತ ಆರೋಗ್ಯಕರ ಊಟವನ್ನಾಗಿ ಮಾಡುವುದು ಮಹತ್ವದ್ದು ಎನ್ನುತ್ತಾರೆ ಪೌಷ್ಟಿಕಾಂಶ ತಜ್ಞರು. ರಾತ್ರಿಡೀ ದೇಹಕ್ಕೆ ಅಗತ್ಯವಾದ ವಿಶ್ರಾಂತಿಯನ್ನು ನೀಡಿದ್ದಾಗಿದೆ. ಇನ್ನೀಗ ಮುಂಜಾನೆದ್ದು ದಿನವನ್ನು ಪ್ರಾರಂಭಿಸಬೇಕು ಎನ್ನುವಾಗ, ದೇಹಕ್ಕೆ ನೀಡುವಂಥ ಗ್ರಾಸ ಹೇಗಿರಬೇಕು? ಅಧಿಕ ಸತ್ವಗಳನ್ನು ಹೊಂದಿದ ಆಹಾರವನ್ನೇ ತಿನ್ನಬೇಕು ಎಂದಾದರೆ, ಏಕೆ ಹಾಗೆ? ಬೆಳಗ್ಗೆ ತಿಂಡಿ ತಿನ್ನದಿದ್ದರೆ ತೂಕ ಇಳಿಸುವುದು ಸಾಧ್ಯವಿಲ್ಲವೇ? ಇಂತಹ ಹಲವಾರು ಪ್ರಶ್ನೆಗಳು ಮನದಲ್ಲಿದ್ದರೆ, ಅವಕ್ಕೆಲ್ಲ ಉತ್ತರ ಹುಡುಕುವ ಪ್ರಯತ್ನ ಇಲ್ಲಿದೆ. ಬೆಳಗಿನ ತಿಂಡಿಗೆ ಆರೋಗ್ಯಕರ ಕೊಬ್ಬುಗಳು, ಸಂಕೀರ್ಣ ಪಿಷ್ಟ ಮತ್ತು ಪ್ರೊಟೀನ್‌ ಇರುವಂಥ ಆಹಾರ ಅಗತ್ಯ. ಈ ಸತ್ವಗಳ ಮಿಶ್ರಣವು ದೇಹವು ದೀರ್ಘಕಾಲದವರೆಗೆ ಬಳಲದಂತೆ ನೋಡಿಕೊಳ್ಳುತ್ತದೆ. ದಿನವಿಡೀ ಅಗತ್ಯವಾದ ಚೈತನ್ಯವನ್ನು ದೇಹಕ್ಕೆ ನೀಡುತ್ತದೆ ಮತ್ತು ಆಹಾರ ತಿಂದ ತೃಪ್ತಿಯನ್ನು ಒದಗಿಸುತ್ತದೆ. ಜೊತೆಗೆ, ಬೇಗ ಹಸಿವಾಗುವುದನ್ನು ತಡೆಯುತ್ತದೆ. ಇಂಥ ಆಹಾರವು ದೇಹಕ್ಕೆ ಮಾತ್ರವಲ್ಲ, ಮನಸ್ಸಿಗೂ ಬೇಕಾದ ಗ್ರಾಸವನ್ನು ಒದಗಿಸಿಕೊಡುತ್ತದೆ. ಈ ಬಗ್ಗೆ ವಿವರಣೆ ಇಲ್ಲಿದೆ.

South Indian breakfast

ಸಂಕೀರ್ಣ ಪಿಷ್ಟಗಳು

ನಮ್ಮೆಲ್ಲ ಚಟುವಟಿಕೆಗಳನ್ನು ಮಾಡುವುದಕ್ಕೆ ನಮಗೆ ಪಿಷ್ಟ ಅಥವಾ ಕಾರ್ಬೊಹೈಡ್ರೇಟ್‌ಗಳು ಬೇಕು. ಆದರೆ ಮೈದಾ ಅಥವಾ ಸಂಸ್ಕರಿತ ತಿನಿಸುಗಳಿಂದ ಬರುವಂಥ ಸರಳ ಪಿಷ್ಟವಲ್ಲ, ದೀರ್ಘ ಕಾಲದವರೆಗೆ ಶಕ್ತಿಯನ್ನು ಉಣಿಸುವಂಥ ಸಂಕೀರ್ಣವಾದ ಪಿಷ್ಟಗಳು ಬೇಕು. ಇದನ್ನು ಇಡೀ ಧಾನ್ಯಗಳು, ಓಟ್ಸ್‌, ಸಿರಿ ಧಾನ್ಯಗಳು, ಕಿನೊವಾ, ರಾಗಿ ಮುಂತಾದ ನಾರುಭರಿತ ಅಂದರೆ ತೌಡು ಸಹಿತವಾದ ಧಾನ್ಯಗಳಿಂದ ಪಡೆಯಬಹುದು. ಈ ಧಾನ್ಯಗಳಿಂದ ಉಪ್ಪಿಟ್ಟು, ಅವಲಕ್ಕಿ, ದೋಸೆ, ಇಡ್ಲಿ, ಚಿತ್ರಾನ್ನ… ನಿಮಗೆ ಇಷ್ಟವಾದ ಯಾವುದನ್ನಾದರೂ ಮಾಡಿ.

ಪ್ರೊಟೀನ್‌

ಬೆಳಗಿನ ತಿಂಡಿಗೆ ಹೆಚ್ಚಿನ ಪ್ರಮಾಣದ ಪ್ರೊಟೀನ್‌ ಅಗತ್ಯ. ಇದರಿಂದ ದೇಹದ ರಿಪೇರಿ ಕೆಲಸ, ಹಾರ್ಮೋನುಗಳ ಕ್ಷಮತೆ, ಕಿಣ್ವಗಳ ಉತ್ಪಾದನೆ ಮುಂತಾದ ಮಹತ್ವದ ಕೆಲಸಗಳೆಲ್ಲವೂ ಮಟ್ಟಸವಾಗಿ ಇರುತ್ತದೆ. ಇದಕ್ಕಾಗಿ ಹಾಲು, ಮೊಸರು, ಗ್ರೀಕ್‌ ಯೋಗರ್ಟ್‌, ಪನೀರ್‌, ತೋಫು, ಮೊಟ್ಟೆ, ಕಾಳುಗಳು, ಸೋಯಾ, ಕಾಯಿ ಮತ್ತು ಬೀಜಗಳು ಬೆಳಗಿನ ಆಹಾರದಲ್ಲಿ ಇರಬೇಕು. ಆಮ್ಲೆಟ್‌ ಜೊತೆಗೆ ಇಡೀಧಾನ್ಯದ ಬ್ರೆಡ್‌ ಅಥವಾ ಚಪಾತಿಯಂಥವು ಬೇಕು ಎನ್ನುವುದು ಸ್ಪಷ್ಟವಾಗಿದೆಯಲ್ಲವೇ?

ಇದನ್ನೂ ಓದಿ: World Blood Donor Day: ರಕ್ತದಾನ ಯಾರು ಮಾಡಬಹುದು? ಯಾರು ಮಾಡಬಾರದು?

ಆರೋಗ್ಯಕರ ಕೊಬ್ಬು

ಇದು ಸಹ ಅತಿ ಮುಖ್ಯವಾದ ಸತ್ವ. ದೇಹದ ತೂಕವನ್ನು ನಿಯಂತ್ರಿಸಲು, ಹೆಚ್ಚಿನ ಕೊಬ್ಬು ದೇಹದಲ್ಲಿ ಜಮೆಯಾಗದಂತೆ ಕಾಯ್ದುಕೊಳ್ಳಲು ಇದು ಅಗತ್ಯ. ದೇಹದ ಅಂಗಾಂಗಗಳೆಲ್ಲ ಸರಿಯಾಗಿ ಕೆಲಸ ಮಾಡಲು ಈ ಕೊಬ್ಬು ಬೇಕೇಬೇಕು. ಇದಕ್ಕಾಗಿ ಅವಕಾಡೊ, ಕಾಯಿ-ಬೀಜಗಳು, ತುಪ್ಪ, ಕೊಬ್ಬರಿ ಎಣ್ಣೆಯಂಥ ಆರೋಗ್ಯಕರ ತೈಲಗಳು, ಪೀನಟ್‌ಬಟರ್‌ ಅಥವಾ ಇನ್ನಾವುದಾದರೂ ಬೀಜಗಳ ತುಪ್ಪ- ಇವೆಲ್ಲ ಶರೀರಕ್ಕೆ ಬೇಕು. ಮೆದುಳಿನ ಆರೋಗ್ಯ ರಕ್ಷಣೆಗಂತೂ ಇವು ತೀರಾ ಅಗತ್ಯವಾದವು. ಇವುಗಳಲ್ಲಿರುವ ಒಮೇಗಾ ೩ ಕೊಬ್ಬಿನಾಮ್ಲವು ಇಡೀ ದೇಹದ ಸ್ವಾಸ್ಥ್ಯಕ್ಕೆ ಅಗತ್ಯವಾಗಿದ್ದು.

drinking water

ನೀರು

ಇದಿಷ್ಟರ ಜೊತೆಗೆ ದಿನಕ್ಕೆ ಮೂರು ಲೀ. ನೀರು ಕುಡಿಯುವುದು ಬಹುಮುಖ್ಯ. ರಾತ್ರಿಡೀ ನೀರಿಲ್ಲದೆ ಇರುವಂಥ ದೇಹಕ್ಕೆ ಬೆಳಗಿನ ಹೊತ್ತು ಒಂದೆರಡು ಗ್ಲಾಸ್‌ ನೀರು ಕುಡಿಸಿ. ಬರೀ ನೀರು ಕುಡಿಯುವುದು ಕಷ್ಟ ಎನಿಸಿದರೆ, ಸಕ್ಕರೆ ರಹಿತವಾದ ಯಾವುದೇ ರಸಗಳನ್ನು ಸೇರಿಸಿಕೊಳ್ಳಬಹುದು. ಜೊತೆಗೆ, ದಿನವಿಡೀ ಹರ್ಬಲ್‌ ಚಹಾಗಳು, ಎಳನೀರು, ರಸಭರಿತ ಹಣ್ಣು-ತರಕಾರಿಗಳು, ಮಜ್ಜಿಗೆ- ಇಂಥವೆಲ್ಲ ದಿನದ ಮೂರು ಲೀ. ನೀರು ಕುಡಿಯುವ ಗುರಿಯನ್ನು ಪೂರ್ಣಗೊಳಿಸಲು ನೆರವಾಗುತ್ತವೆ.

Continue Reading
Advertisement
ಕ್ರೀಡೆ19 mins ago

T20 World Cup 2024: ವಿಂಡೀಸ್​ಗೆ ಆಘಾತ; ವಿಶ್ವಕಪ್​ ಟೂರ್ನಿಯಿಂದ ಹೊರಬಿದ್ದ ಕಿಂಗ್

PGCET 2024
ಶಿಕ್ಷಣ19 mins ago

PGCET 2024 : ಪಿಜಿಸಿಇಟಿ ಅಪ್‌ಡೇಟ್ಸ್‌ ; ಶುಲ್ಕ ಪಾವತಿ, ತಿದ್ದುಪಡಿ, ಪರೀಕ್ಷಾ ಕೇಂದ್ರ ಆಯ್ಕೆಗೆ ಜೂ.24 ಕೊನೆ ದಿನ

The Lion King 30 years influence on fans and actors
ಬಾಲಿವುಡ್20 mins ago

The Lion King: ಆಲ್‌ ಟೈಮ್‌ ಫೇವರೇಟ್‌ ಕಾರ್ಟೂನ್‌ `ದಿ ಲಯನ್ ಕಿಂಗ್’ 30ನೇ ವಾರ್ಷಿಕೋತ್ಸವ

Viral Video
ವೈರಲ್ ನ್ಯೂಸ್24 mins ago

Viral Video: ಕಾರು ತಡೆದ ಟ್ರಾಫಿಕ್‌ ಪೊಲೀಸ್‌ ಕ್ಯಾಬ್‌ ಡ್ರೈವರ್‌ ಮಾಡಿದ್ದೇನು ಗೊತ್ತಾ?

Floods In Assam
ದೇಶ27 mins ago

Floods In Assam: ಭೀಕರ ಪ್ರವಾಹಕ್ಕೆ ನಲುಗಿದ ಅಸ್ಸಾಂ; 37ಕ್ಕೆ ಏರಿದ ಸಾವಿನ ಸಂಖ್ಯೆ

Actor Darshan
ಕರ್ನಾಟಕ28 mins ago

Actor Darshan: ದರ್ಶನ್ ಸೇರಿ ನಾಲ್ವರು ಸ್ಟೇಷನ್‌ನಿಂದ ಪರಪ್ಪನ ಅಗ್ರಹಾರ ಜೈಲಿಗೆ

Swamji Murder
ಪ್ರಮುಖ ಸುದ್ದಿ44 mins ago

Swamji Murder : ಆಸ್ತಿ, ಅಧಿಕಾರಕ್ಕಾಗಿ ಗಲಾಟೆ; ಸ್ವಾಮೀಜಿಯೊಬ್ಬರನ್ನು ಕೊಲೆ ಮಾಡಿದ ಸ್ವಾಮೀಜಿಗಳ ಗುಂಪು

Child Death
ಬೆಳಗಾವಿ50 mins ago

Child Death : ಮಕ್ಕಳ ಮಾರಾಟ ಜಾಲದಲ್ಲಿ ರಕ್ಷಣೆಯಾಗಿದ್ದ ಮಗು ಮೃತ್ಯು; ಅಂತ್ಯ ಸಂಸ್ಕಾರ ನೆರವೇರಿಸಿದ ಪೊಲೀಸರು

Shobha Shetty car gift to yashwanth birthday
ಟಾಲಿವುಡ್1 hour ago

Shobha Shetty: ಭಾವಿ ಪತಿಗೆ ಕಾರ್ ಗಿಫ್ಟ್ ನೀಡಿದ ‘ಅಗ್ನಿಸಾಕ್ಷಿ’ ಖ್ಯಾತಿಯ ನಟಿ!

IND vs BAN
ಕ್ರೀಡೆ1 hour ago

IND vs BAN: ಕೊಹ್ಲಿ ಬ್ಯಾಟಿಂಗ್​ ಬಗ್ಗೆ ಸ್ವತಃ ಬೇಸರ ವ್ಯಕ್ತಪಡಿಸಿದ ಬ್ಯಾಟಿಂಗ್​ ಕೋಚ್​

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ22 hours ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ1 day ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ2 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು5 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು5 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ6 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ6 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ6 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 week ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ1 week ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

ಟ್ರೆಂಡಿಂಗ್‌