Health Tips Kannada: ಮಾರಕ ರೋಗಗಳನ್ನು ದೂರ ಇರಿಸುತ್ತದೆ ಬೂದುಗುಂಬಳದ ರಸ! - Vistara News

ಆರೋಗ್ಯ

Health Tips Kannada: ಮಾರಕ ರೋಗಗಳನ್ನು ದೂರ ಇರಿಸುತ್ತದೆ ಬೂದುಗುಂಬಳದ ರಸ!

Health Tips Kannada: ಬೆಳಗಿನ ಖಾಲಿ ಹೊಟ್ಟೆಯಲ್ಲಿ ಒಂದಿಡೀ ಗ್ಲಾಸ್‌ ಬೂದುಗುಂಬಳದ ರಸವನ್ನು ಕುಡಿಯುವುದು ಹಲವು ರೀತಿಯಲ್ಲಿ ಉಪಕಾರಿ. ಆಸಿಡಿಟಿ, ಹುಳಿತೇಗು ಮುಂತಾದ ಜೀರ್ಣಾಂಗಗಳ ತೊಂದರೆ ನಿವಾರಿಸುವಂಥ ಅಮೃತದಂತೆ ಇದು ಕೆಲಸ ಮಾಡುತ್ತದೆ. ಇದಲ್ಲದೆ ಇನ್ನೇನು ಲಾಭಗಳಿವೆ ಇದರ ರಸವನ್ನು ಕುಡಿಯುವುದರಿಂದ? ಇಲ್ಲಿದೆ ಮಾಹಿತಿ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕುಂಬಳಕಾಯಿ (Health Tips Kannada) ಎನ್ನುತ್ತಿದ್ದಂತೆ ಹೆಗಲು ಮುಟ್ಟಿ ನೋಡುವ ಗಾದೆ ನಮಗೆಲ್ಲ ಗೊತ್ತು. ಆದರೆ ಅದಕ್ಕಾಗಿ ನಾವು ತರಬೇಕಾದ್ದು ಸಿಹಿ ಕುಂಬಳಕಾಯನ್ನಲ್ಲ, ಬೂದುಗುಂಬಳ ಕಾಯನ್ನು. ಕಾರಣ, ಹೆಗಲ ಮೇಲಿಟ್ಟಾಗ ಬೂದಿ ಬಳಿದು ಕಳ್ಳನ ಸುಳಿವು ಕೊಡುವ ಕಾಯೆಂದರೆ ಅದೇ! ಇದೀಗ ಕಳ್ಳನ ಪತ್ತೇದಾರಿಕೆ ಮಾಡುವ ಉದ್ದೇಶಕ್ಕೆ ಕುಂಬಳಕಾಯನ್ನು ಪ್ರಸ್ತಾಪ ಮಾಡುತ್ತಿರುವುದಲ್ಲ. ಬದಲಿಗೆ, ಇದರ ರಸವನ್ನು ಬೆಳಗಿನ ಖಾಲಿ ಹೊಟ್ಟೆಯಲ್ಲಿ ಕುಡಿದಾಗ ಆಗುವ ಧನಾತ್ಮಕ ಪರಿಣಾಮಗಳ ಬಗ್ಗೆ ಹೇಳುವುದಕ್ಕೆ. ಹಲವು ರೀತಿಯ ಖನಿಜಗಳು, ವಿಟಮಿನ್‌ಗಳು ಮತ್ತು ನಾರು ಹೇರಳವಾಗಿರುವ ಬೂದುಗುಂಬಳ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಯಾಗಿ, ಮೂಳೆಗಳು ಬಲವಾಗುತ್ತವೆ. ಬೆಳಗಿನ ಖಾಲಿ ಹೊಟ್ಟೆಯಲ್ಲಿ ಒಂದಿಡೀ ಗ್ಲಾಸ್‌ ಬೂದುಗುಂಬಳದ ರಸವನ್ನು ಕುಡಿಯುವುದು ಹಲವು ರೀತಿಯಲ್ಲಿ ಉಪಕಾರಿ. ಆಸಿಡಿಟಿ, ಹುಳಿತೇಗು ಮುಂತಾದ ಜೀರ್ಣಾಂಗಗಳ ತೊಂದರೆ ನಿವಾರಿಸುವಂಥ ಅಮೃತದಂತೆ ಇದು ಕೆಲಸ ಮಾಡುತ್ತದೆ. ಈ ಕಾಯಿಯಲ್ಲಿರುವ ತಿರುಳಿನ ಬಹುಪಾಲು ನೀರು ಮತ್ತು ನಾರಿನಲ್ಲೇ ತುಂಬಿಹೋಗಿದೆ. ಹಾಗಾಗಿ ಇಡೀ ಶರೀರಕ್ಕೆ ಬೇಕಾದ ನೀರಿನಂಶವನ್ನು ಬೆಳಗಿನಿಂದಲೇ ದೇಹಕ್ಕೆ ಒದಗಿಸಲು ಈ ಮೂಲಕ ಸಾಧ್ಯವಾಗುತ್ತದೆ. ಅದರಲ್ಲೂ ಬೇಸಿಗೆಯ ದಿನಗಳಲ್ಲಿ ಇದನ್ನು ಸೇವಿಸುವುದು ಶರೀರವನ್ನು ತಂಪಾಗಿ ಇರಿಸಲಿಕ್ಕೆ ಸಹಕಾರಿ.

Cancer Risk

ಕ್ಯಾನ್ಸರ್‌ ದೂರ

ಇದರಲ್ಲಿರುವ ನೈಸರ್ಗಿಕ ನೀರಿನಂಶ ಮತ್ತು ಖನಿಜದ ಸಾಂದ್ರತೆಯು ಹಲವು ರೀತಿಯಲ್ಲಿ ಕೆಲಸ ಮಾಡುತ್ತದೆ. ಮುಖ್ಯವಾಗಿ ಕರುಳಿನ ಕ್ಯಾನ್ಸರ್‌ ಭೀತಿಯನ್ನು ತಡೆಯುವಲ್ಲಿ ಇದರ ಪಾತ್ರವನ್ನು ಹಿರಿದಾಗಿಸಲಾಗಿದೆ. ಕೆರಾಟಿನಾಯ್ಡ್‌ಗಳಂಥ ಉತ್ತಮ ಉತ್ಕರ್ಷಣ ನಿರೋಧಕಗಳು ದೇಹದಲ್ಲಿ ಕ್ಯಾನ್ಸರ್‌ಕಾರಕಗಳ ಕೆಲಸಕ್ಕೆ ತಡೆಯೊಡ್ಡುತ್ತವೆ; ಜೊತೆಗೆ, ಕ್ಯಾನ್ಸರ್‌ ಕಣಗಳು ಹರಡದಂತೆ ಮಾಡುವಲ್ಲಿ ಪ್ರಭಾವಶಾಲಿಯಾಗಿವೆ.

Heart Health Fish Benefits

ಹೃದಯದ ಮಿತ್ರ

ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಒಂದೆರಡೇ ಅಲ್ಲ. ಸರಳವಾದ ವಿಟಮಿನ್‌ ಸಿ ಯಂಥ ಉರಿಯೂತ ಶಾಮಕಗಳಿಂದ ಹಿಡಿದು, ಸಂಕೀರ್ಣ ಕೆರಾಟಿನಾಯ್ಡ್‌ಗಳವರೆಗೆ ಈ ಅಂಶಗಳು ಬೂದುಗುಂಬಳದಲ್ಲಿ ಸಾಂದ್ರವಾಗಿವೆ. ಹಾಗಾಗಿ ಹೃದಯದ ಆರೋಗ್ಯಕ್ಕೆ ಪೂರಕವಾಗಿ ಕೆಲಸ ಮಾಡುತ್ತವೆ. ಮಾತ್ರವಲ್ಲ, ಹಲವು ರೀತಿಯ ಮಾರಕ ರೋಗಗಳು ಬಳಿ ಬರದಂತೆ ತಡೆಯುತ್ತವೆ.

Diabetes Diabetes concept Tired of diabetes high sugar disea Pumpkin Benefits

ಮಧುಮೇಹಿಗಳಿಗೆ ಪೂರಕ

ತೂಕ ಇಳಿಸುವವರಿಗೆ ಮತ್ತು ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ತರಬಯಸುವವರಿಗೆ ಇದು ಒಳ್ಳೆಯ ಆಯ್ಕೆ. ಇದರಲ್ಲಿ ಕ್ಯಾಲರಿ ಅತಿ ಕಡಿಮೆ, ಸತ್ವ ಹೆಚ್ಚು. ಪೊಟಾಶಿಯಂ, ಕ್ಯಾಲ್ಶಿಯಂ, ಕಬ್ಬಿಣ, ಫಾಸ್ಫರಸ್‌ನಂಥ ಖನಿಜಗಳಿಂದ ಸಾಂದ್ರವಾಗಿರುವ ಇದು ದೇಹದ ಸ್ವಾಸ್ಥ್ಯ ಹೆಚ್ಚಿಸಲು ಸಹಕಾರಿ. ನೈಸರ್ಗಿಕವಾದ ನಾರಿನಂಶವು ದೀರ್ಘ ಕಾಲದವರೆಗೆ ಹೊಟ್ಟೆ ತುಂಬಿದ ಅನುಭವವನ್ನೇ ನೀಡುತ್ತದೆ. ಇದರಿಂದ ತೂಕ ಇಳಿಕೆಗೆ ಅನುಕೂಲ. ಜೊತೆಗೆ ರಕ್ತದಲ್ಲಿನ ಸಕ್ಕರೆಯಂಶ ತ್ವರಿತವಾಗಿ ಏರದಂತೆ ತಡೆಯಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: Health Tips: ನಿಂತು ಊಟ ಮಾಡುವುದಕ್ಕಿಂತ ಕೂತು ಊಟ‌ ಮಾಡಿದರೆ ಏನೇನು ಲಾಭಗಳಿವೆ ನೋಡಿ!

ದೃಷ್ಟಿ ಚುರುಕು

ವಿಟಮಿನ್‌ ಎ ಮತ್ತು ಸಿಯಂಥ ಜೀವಸತ್ವಗಳು ಕಣ್ಣಿನ ರೆಟಿನಾದ ಕಾಳಜಿ ಮಾಡುತ್ತವೆ. ಅದರಲ್ಲೂ ಕಣ್ಣಿಗೆ ದೊರೆಯುವ ಸಿ ಯಂಥ ಜೀವಸತ್ವಗಳು ಕಡಿಮೆಯಾಗಿ ದೃಷ್ಟಿ ಮಂದವಾಗುವುದನ್ನು ತಡೆಯಲು ಇದು ಒಳ್ಳೆಯ ಉಪಾಯ. ವಯಸ್ಸಾದಂತೆ ಕಾಡುವ ದೃಷ್ಟಿಹೀನತೆಯನ್ನೂ ಹತ್ತಿರ ಬಾರದಂತೆ ಇಋಿಸಲು ಇದು ಸಹಾಯಕ.

Asian Woman with a Beautiful Face and Fresh Smooth Skin Is Dres Sesame Benefits

ಸುಂದರ ತ್ವಚೆ

ಇದರಲ್ಲಿರುವ ನೀರಿನಂಶ, ವಿಟಮಿನ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳು ತ್ವಚೆಯ ಆರೋಗ್ಯ ಸುಧಾರಿಸುವಲ್ಲಿ ಸಹಕಾರಿ. ತ್ವಚೆಯ ಕಾಂತಿಯನ್ನು ಹೆಚ್ಚಿಸಿ, ಚರ್ಮ ಸುಕ್ಕಾಗದಂತೆ ತಡೆಯುವ ಸಾಮರ್ಥ್ಯ ಈ ಸತ್ವಗಳಿಗೆ ಇದೆ. ಅದರಲ್ಲೂ ವಿಟಮಿನ್‌ ಸಿ ಹೇರಳವಾಗಿರುವ ಆಹಾರ ಇದಾದ್ದರಿಂದ, ದೇಹದಲ್ಲಿ ಕೊಲಾಜಿನ್‌ ಉತ್ಪಾದನೆಗೆ ಪ್ರಚೋದನೆ ನೀಡುತ್ತದೆ. ಕೊಲಾಜಿನ್‌ ಅಂಶ ಚರ್ಮದಲ್ಲಿ ಸಾಕಷ್ಟಿದ್ದರೆ, ತ್ವಚೆಯ ಮೇಲಿನ ಸುಕ್ಕುಗಳನ್ನು ಕಡಿಮೆ ಮಾಡಿ, ತಾರುಣ್ಯಭರಿತ ಚರ್ಮವನ್ನು ಹೊಂದಲು ಸಾಧ್ಯ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Face Serum: ಚರ್ಮಕ್ಕೆ ಹೊಂದುವಂಥ ʻಫೇಸ್‌ ಸೀರಂʼ ಆಯ್ಕೆ ಮಾಡುವುದು ಹೇಗೆ?

Face Serum: ಇತ್ತೀಚಿನ ವರ್ಷಗಳಲ್ಲಿ ಚಾಲ್ತಿಯಲ್ಲಿರುವ ‘ಫೇಸ್ ಸೀರಂ’ ಶಬ್ದ ತ್ವಚೆಯ ಆರೈಕೆಯಲ್ಲಿ ಏನೆಲ್ಲ ಜಾದೂ ಮಾಡಬಹುದು ಎಂಬುದನ್ನು ತಿಳಿದುಕೊಳ್ಳುವ ಆಸಕ್ತಿಯೂ ಇರಬಹುದು. ಉಳಿದ ಕ್ರೀಮ್‌ ಅಥವಾ ಲೋಶನ್‌ಗಳಂತೆ ಮಂದವಾಗಿರದೆ, ಸಾಂದ್ರತೆಯಲ್ಲಿ ತೆಳುವಾಗಿ ಕಾಣುವ ಈ ದ್ರವ ವಸ್ತುಗಳಿಂದ ನಮ್ಮ ಚರ್ಮಕ್ಕೇನು ಪ್ರಯೋಜನ? ಎಂಥ ಚರ್ಮದವರಿಗೆ ಎಂಥಾ ಸೀರಂ ಉಪಯುಕ್ತ ಮುಂತಾದ ಹಲವಾರು ವಿಷಯಗಳು ಈ ಲೇಖನದಲ್ಲಿದೆ.

VISTARANEWS.COM


on

Face Serum
Koo

ಜಾಹೀರಾತುಗಳಲ್ಲಿ ʻಫೇಸ್‌ ಸೀರಂʼ (Face Serum) ಎನ್ನುವ ಶಬ್ದ ಕೇಳಿದಾಗೆಲ್ಲ, ಅದೇನು, ಹೇಗೆ ಎಂದೆಲ್ಲ ಕುತೂಹಲ ತಾಳಿದವರು ಎಷ್ಟೋ ಮಂದಿ ಇರಬಹುದು. ಇತ್ತೀಚಿನ ವರ್ಷಗಳಲ್ಲಿ ಚಾಲ್ತಿಯಲ್ಲಿರುವ ಈ ಶಬ್ದ, ತ್ವಚೆಯ ಆರೈಕೆಯಲ್ಲಿ ಏನೆಲ್ಲ ಜಾದೂ ಮಾಡಬಹುದು ಎಂಬುದನ್ನು ತಿಳಿದುಕೊಳ್ಳುವ ಆಸಕ್ತಿಯೂ ಇರಬಹುದು. ಉಳಿದ ಕ್ರೀಮ್‌ ಅಥವಾ ಲೋಶನ್‌ಗಳಂತೆ ಮಂದವಾಗಿರದೆ, ಸಾಂದ್ರತೆಯಲ್ಲಿ ತೆಳುವಾಗಿ ಕಾಣುವ ಈ ದ್ರವ ವಸ್ತುಗಳಿಂದ ನಮ್ಮ ಚರ್ಮಕ್ಕೇನು ಪ್ರಯೋಜನ? ಎಂಥ ಚರ್ಮದವರಿಗೆ ಎಂಥಾ ಸೀರಂ ಉಪಯುಕ್ತ ಮುಂತಾದ ಹಲವಾರು ವಿಷಯಗಳು ಈ ಲೇಖನದಲ್ಲಿದೆ.

Face Serum

ಏನು ಹಾಗೆಂದರೆ?

ಮೊದಲಿಗೆ ಮುಖಕ್ಕೆ ಬಳಸುವ ಸೀರಂ ಎಂದರೇನು ಅನ್ನುವುದನ್ನು ಅರ್ಥ ಮಾಡಿಕೊಳ್ಳೋಣ. ಸಕ್ರಿಯ ಅಂಶಗಳನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ಹೊಂದುವ ಮೂಲಕ ಚರ್ಮದ ಆರೈಕೆ ಮಾಡುವಂಥ ವಸ್ತುವಿದು. ಸಾಂದ್ರತೆಯಲ್ಲೂ ತೆಳುವಾಗಿಯೇ ಇರುವುದರಿಂದ, ನೇರವಾಗಿ ಚರ್ಮಕ್ಕೆ ಹೀರಿಕೊಳ್ಳಲು ಸುಲಭವಾಗಿ ಸಾಧ್ಯವಾಗುತ್ತದೆ. ಹಾಗಾಗಿ ಚರ್ಮದ ಆಳದವರೆಗೂ ತಲುಪಿ ಅರೈಕೆ ಮಾಡಲು ಇಂಥ ಸೀರಂಗಳಿಂದ ಸುಲಭಸಾಧ್ಯ. ಇದರಿಂದ ಮುಖದ ಮೇಲಿನ ಪಿಗ್ಮೆಟೇಶನ್‌, ಸೂಕ್ಷ್ಮ ಸುಕ್ಕುಗಳು, ಚರ್ಮದ ಬಣ್ಣ, ಕಾಂತಿ ಮುಂತಾದ ಹಲವು ವಿಷಯಗಳನ್ನು ಸುಧಾರಿಸಬಹುದು.

ಬಳಕೆ ಹೇಗೆ?

ಮುಖವನ್ನೆಲ್ಲ ಸ್ವಚ್ಛ ಮಾಡಿದ ಮೇಲೆ 2-3 ಹನಿ ಸೀರಂ ಅನ್ನು ಇಡೀ ಮುಖಕ್ಕೆ ನಯವಾಗಿ ಲೇಪಿಸಿ. ಕೆಲಕಾಲದ ನಂತರ ಮ್ಯಾಯಿಶ್ಚರೈಸರ್‌ ಹಚ್ಚಿ. ಕಣ್ಣಿನ ಸುತ್ತಲಿನ ಭಾಗಕ್ಕೆ ಇಂಥ ಯಾವುದನ್ನೂ ಲೇಪಿಸಬೇಡಿ. ಇದರ ಬಳಕೆಯ ಪರಿಣಾಮವನ್ನು ಸ್ಪಷ್ಟವಾಗಿ ಕಾಣುವುದಕ್ಕೆ ಸುಮಾರು 12ರಿಂದ 16 ವಾರಗಳು ಬೇಕಾಗಬಹುದು ಎನ್ನುತ್ತಾರೆ ಸೌಂದರ್ಯ ತಜ್ಞರು.

Smiling Woman Holding Vitamin C Serum near Her Face on Beige Bac
Girl applying a face serum to her skin

ಆಯ್ಕೆಗಳು ಯಾವುವು?

ಒಣ ಮತ್ತು ಸೂಕ್ಷ್ಮ ಚರ್ಮಗಳಿಗೆ ಸೂಕ್ತವಾದಂಥ ಆಯ್ಕೆಯೆಂದರೆ ಹ್ಯಾಲುರೋನಿಕ್‌ ಆಮ್ಲವನ್ನು ಇಲ್ಲವೇ ಗ್ಲಿಸರಿನ್‌ ಅವನ್ನು ಸಕ್ರಿಯ ಅಂಶವಾಗಿ ಹೊಂದಿರುವ ಸೀರಂಗಳು. ಚರ್ಮಕ್ಕೆ ತೇವ ಕಡಿಮೆಯಾಗಿ ಸುಕ್ಕಾಗುವುದು, ತಾಜಾತನ ಮಾಯವಾಗುವುದು, ಇದರಿಂದ ಸೂಕ್ಷ್ಮ ಸುಕ್ಕುಗಳು ಮೂಡಿ ವಯಸ್ಸಾದಂತೆ ಕಾಣುವುದು ಮುಂತಾದ ಹಲವು ಬಗೆಯ ಸಮಸ್ಯೆಗಳನ್ನು ಉದ್ದೇಶಿಸಲು ಹ್ಯಾಲುರೋನಿಕ್‌ ಆಮ್ಲವನ್ನು ಹೊಂದಿರುವ ಸೀರಂಗಳು ಉಪಯುಕ್ತವಾದವು.

ವಿಟಮಿನ್‌ ಸೀರಂಗಳು

ಸಾಮಾನ್ಯವಾಗಿ ವಿಟಮಿನ್‌ ಸಿ ಮತ್ತು ಇ ಅಂಶಗಳನ್ನು ಹೊಂದಿದ ಸೀರಂಗಳಿವು. ಚರ್ಮದ ಮೇಲಿನ ಸುಕ್ಕುಗಳ ನಿವಾರಣೆಗೆ ಮತ್ತು ಕಾಂತಿ ಹೆಚ್ಚಳದ ಉದ್ದೇಶವಿದ್ದರೆ ಇಂಥವು ಒಳ್ಳೆಯದ ಆಯ್ಕೆ. ಅದರಲ್ಲೂ ವಿಟಮಿನ್‌ ಸಿ ಇರುವಂಥ ಸೀರಂಗಳು ಚರ್ಮದಲ್ಲಿನ ಕೊಲಾಜಿನ್‌ ಉತ್ಪಾದನೆಯನ್ನು ಪ್ರೋತ್ಸಾಹಿಸುತ್ತವೆ. ಚರ್ಮದಲ್ಲಿ ಕೊಲಾಜಿನ್‌ ಅಂಶ ಹೆಚ್ಚಿದಷ್ಟೂ ಸುಕ್ಕುಗಳು ಮಾಯವಾಗಿ, ಚರ್ಮ ಬಿಗಿಯಾಗುತ್ತದೆ. ತಾರುಣ್ಯಭರಿತವಾಗುತ್ತದೆ.

Girl applying a face serum to her skin

ಪೆಪ್ಟೈಡ್‌ ಸೀರಂ

ಚರ್ಮದ ದುರಸ್ತಿ ಮಾಡುವುದಕ್ಕೆ ಅಗತ್ಯವಾದ ಅಂಶಗಳು ಈ ರೀತಿಯ ಸೀರಂಗಳಲ್ಲಿ ಇರುತ್ತವೆ. ನಯಸಿನಮೈಡ್‌ನಂಥ ಸಕ್ರಿಯ ಅಂಶಗಳು ಚರ್ಮಕ್ಕಾದ ಹಾನಿಯನ್ನು ಸರಿಪಡಿಸಿ, ಮಂಕಾದ ಚರ್ಮಕ್ಕೆ ಕಾಂತಿಯನ್ನು ತುಂಬುತ್ತವೆ. ಕೆಲವು ಅಧ್ಯಯನಗಳ ಪ್ರಕಾರ, ಚರ್ಮಕ್ಕೆ ಕಾಂತಿಯನ್ನು ಮರುಕಳಿಸುವಲ್ಲಿ ಪೆಪ್ಟೈಡ್‌ಗಳ ಪಾತ್ರ ಹಿರಿದು. ಹಾಗಾಗಿ ಯಾವ ಉದ್ದೇಶಕ್ಕಾಗಿ ಸೀರಂ ಬಳಸುತ್ತಿದ್ದೀರಿ ಎನ್ನುವುದರ ಮೇಲೆ ಯಾವ ಸೀರಂ ಸೂಕ್ತ ಎಂಬುದನ್ನು ನಿರ್ಧರಿಸಬಹುದು.

Health Tips Kannada: ಮಾರಕ ರೋಗಗಳನ್ನು ದೂರ ಇರಿಸುತ್ತದೆ ಬೂದುಗುಂಬಳದ ರಸ!ಇದನ್ನೂ ಓದಿ:

ಉದ್ದೇಶವೇನು?

ಇದು ಮುಖ್ಯವಾದ ಪ್ರಶ್ನೆ. ಇದಕ್ಕೆ ಉತ್ತರವೇನು ಎನ್ನುವುದರ ಆಧಾರ ಮೇಲೆ ಯಾವ ಸೀರಂ ಸರಿಯಾದದ್ದು ಎಂಬುದನ್ನು ನೀವೇ ನಿರ್ಧರಿಸಬಹುದು.

  • ಚರ್ಮದ ತೇವ ಹೆಚ್ಚಿಸುವುದಕ್ಕೆ: ಹ್ಯಾಲುರೋನಿಕ್‌ ಆಮ್ಲ ಹೊಂದಿರುವ ಸೀರಂ ಸೂಕ್ತ.
  • ತಾರುಣ್ಯಭರಿತ ತ್ವಚೆಗೆ: ರೆಟಿನೋಲ್‌, ವಿಟಮಿನ್‌ ಸಿ ಮತ್ತು ಪೆಪ್ಟೈಡ್‌ಯುಕ್ತ ಸೀರಂಗಳು ಒಳ್ಳೆಯವು
  • ಕಾಂತಿ ಹೆಚ್ಚಳಕ್ಕೆ: ವಿಟಮಿನ್‌ ಸಿ, ನಯಸಿನಮೈಡ್‌ ಅಂಶಗಳಿರುವುದನ್ನು ಉಪಯೋಗಿಸಬಹುದು
  • ಮೊಡವೆ ನಿಯಂತ್ರಣಕ್ಕೆ: ಸ್ಯಾಲಿಸಿಲಿಕ್‌ ಆಮ್ಲ ಅಥವಾ ಬೆನ್ಜೋಲ್‌ ಪೆರಾಕ್ಸೈಡ್‌ ಸೀರಂಗಳು ಉಪಯುಕ್ತ. ಟೀಟ್ರೀ ತೈಲ ಇರುವ ಸೀರಂಗಳನ್ನೂ ಬಳಸಲಾಗುತ್ತದೆ.
  • ಕಿರಕಿರಿ ತಡೆಯುವುದಕ್ಕೆ: ಅಲೋವೆರಾ, ಕ್ಯಾಮೊಮೈಲ್‌ ಅಂಶಗಳನ್ನು ಹೊಂದಿರುವ ಸೀರಂಗಳು ಇದಕ್ಕೆ ಸಹಾಯ ಮಾಡುತ್ತವೆ.
Continue Reading

ಆಹಾರ/ಅಡುಗೆ

Non Vegetarian Population: ಜಗತ್ತಿನಲ್ಲಿ ಕುಸಿಯುತ್ತಿದೆ ಮಾಂಸಾಹಾರಿಗಳ ಸಂಖ್ಯೆ! ಕಡಿಮೆ ಮಾಂಸಾಹಾರದ ದೇಶಗಳಲ್ಲಿ ಭಾರತವೇ ನಂ.1

ಆರೋಗ್ಯದ ಕಾಳಜಿಯಿಂದ, ಧರ್ಮ ಮತ್ತು ಸಂಸ್ಕೃತಿಯ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಸಸ್ಯಾಹಾರಿ ಆಹಾರವನ್ನು ಅನುಸರಿಸುತ್ತಾರೆ. ವಿಶ್ವದಲ್ಲಿ ಹಲವು ದೇಶಗಳಲ್ಲಿ ಮಾಂಸಾಹಾರಿಗಳು ಕಡಿಮೆಯಾಗುತ್ತಿದ್ದಾರೆ. ಅದರಲ್ಲೂ ಈ ಪ್ರಮುಖ ಏಳು ದೇಶಗಳು ಕಡಿಮೆ ಮಾಂಸಾಹಾರಿ ಜನರನ್ನು (Non Vegetarian Population) ಹೊಂದಿದೆ.

VISTARANEWS.COM


on

By

Non Vegetarian Population
Koo

ಆರೋಗ್ಯಕರ ಜೀವನಶೈಲಿಗಾಗಿ ಅನೇಕರು ಮಾಂಸಾಹಾರವನ್ನು (Non Vegetarian Population) ತ್ಯಜಿಸಿ ಸಸ್ಯಾಹಾರವನ್ನು (vegetarian) ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಜನರು ಪ್ರಾಣಿಗಳ ಬಗ್ಗೆ ವಿಶೇಷ ಪ್ರೀತಿ ಮತ್ತು ಕಾಳಜಿಯಿಂದಾಗಿ ಸಸ್ಯಾಹಾರವನ್ನೇ ಆಹಾರದಲ್ಲಿ (food) ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಕೆಲವು ಸಂದರ್ಭಗಳಲ್ಲಿ ಜನರು ಧರ್ಮ ಮತ್ತು ಸಂಸ್ಕೃತಿಯ ಕಾರಣದಿಂದ ಸಸ್ಯಾಹಾರಿ ಆಹಾರವನ್ನು ಅನುಸರಿಸುತ್ತಾರೆ. ವಿಶ್ವದಲ್ಲಿ ಹಲವು ದೇಶಗಳಲ್ಲಿ ಮಾಂಸಾಹಾರಿಗಳು ಕಡಿಮೆಯಾಗುತ್ತಿದ್ದಾರೆ. ಅದರಲ್ಲೂ ಈ ಪ್ರಮುಖ ಏಳು ದೇಶಗಳು ಕಡಿಮೆ ಮಾಂಸಾಹಾರಿ ಜನರನ್ನು ಹೊಂದಿದೆ.


ಭಾರತ

ಭಾರತವು ವಿಶ್ವದಲ್ಲೇ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮಾಂಸಾಹಾರ ಸೇವಿಸುವ ಜನರನ್ನು ಹೊಂದಿರುವ ದೇಶವಾಗಿದೆ. ʼವರ್ಲ್ಡ್‌ ಅಟ್ಲಾಸ್ʼ ಪ್ರಕಾರ ಪ್ರತಿ ವರ್ಷಕ್ಕೆ ತಲಾ ಒಬ್ಬರು ಕೇವಲ 3 ಕೆಜಿ ಮಾಂಸವನ್ನು ಮಾತ್ರ ಸೇವಿಸುತ್ತಾರೆ. ಇದಕ್ಕೆ ಹಲವಾರು ಅಂಶಗಳು ಕೊಡುಗೆ ನೀಡುತ್ತದೆ. ಇದರಲ್ಲಿ ಧರ್ಮವು ಅತ್ಯಂತ ಪ್ರಮುಖವಾದದ್ದು.


ಮೆಕ್ಸಿಕೋ

ಮೆಕ್ಸಿಕೋದಲ್ಲಿ ಸುಮಾರು ಶೇ. 19ರಷ್ಟು ಜನರು ಸಸ್ಯಾಹಾರಿಗಳು. ಅಲ್ಲಿನ ಜನರು ಆರೋಗ್ಯ ಕಾಳಜಿ, ಪ್ರಾಣಿ ಹಕ್ಕುಗಳು ಮತ್ತು ಪರಿಸರ ಸಮಸ್ಯೆಗಳಿಂದಾಗಿ ಸಸ್ಯ ಆಧಾರಿತ ಆಹಾರಕ್ಕೆ ಬದಲಾಗುತ್ತಿದ್ದಾರೆ. ಪ್ರಮುಖ ನಗರಗಳಲ್ಲಿ ಹೆಚ್ಚು ಸಸ್ಯಾಹಾರಿ ರೆಸ್ಟೋರೆಂಟ್‌ಗಳೇ ಇವೆ.

ಇಸ್ರೇಲ್

ಮಾಂಸಾಹಾರ ಸೇವನೆಯನ್ನು ನಿರ್ಬಂಧಿಸುವ ಜುದಾಯಿಸಂನಿಂದಾಗಿ ಇಸ್ರೇಲ್ ಕಡಿಮೆ ಮಾಂಸಾಹಾರಿ ಜನಸಂಖ್ಯೆಯನ್ನು ಹೊಂದಿದೆ. ದೇಶವು ವೇಗವಾಗಿ ಸಸ್ಯಾಹಾರಿಗಳಿಗೆ ಸ್ವರ್ಗವಾಗಿ ಮಾರ್ಪಡುತ್ತಿದೆ. ನೂರಾರು ರೆಸ್ಟೋರೆಂಟ್‌ಗಳು ಇಲ್ಲಿ ಸಸ್ಯಾಹಾರಿ ಊಟವನ್ನೇ ನೀಡುತ್ತಿವೆ. 2014 ರಲ್ಲಿ ವಿಶ್ವದ ಅತಿದೊಡ್ಡ ಸಸ್ಯಾಹಾರಿ ಉತ್ಸವವನ್ನು ಟೆಲ್ ಅವಿವ್‌ನಲ್ಲಿ ಆಯೋಜಿಸಲಾಯಿತು.

ಇಥಿಯೋಪಿಯಾ

ಆಫ್ರಿಕನ್ ದೇಶವು ಮಾಂಸ ಸೇವನೆಯ ಪ್ರಮಾಣವನ್ನು ಬಹಳ ಕಡಿಮೆ ಹೊಂದಿದೆ. ಬಡತನದ ಪ್ರಮಾಣ ಹೆಚ್ಚಿರುವುದರಿಂದ ಹೆಚ್ಚಿನ ಜನರಿಗೆ ಮಾಂಸಾಹಾರ ಇಲ್ಲಿ ದೊರೆಯುತ್ತಿಲ್ಲ. ಸರಾಸರಿಯಾಗಿ ದೇಶದ ಜನರು ತಲಾ 2.58 ಕೆ.ಜಿ. ಗೋಮಾಂಸ ಮತ್ತು ಕರುವಿನ ಮಾಂಸವನ್ನು ಸೇವಿಸುತ್ತಾರೆ. ಕೇವಲ 0.45 ಕೆ.ಜಿ. ಕೋಳಿ ಮಾಂಸಗಳನ್ನು ಸೇವಿಸುತ್ತಾರೆ.

ತೈವಾನ್

ಬೌದ್ಧಧರ್ಮದ ಕಾರಣದಿಂದಾಗಿ ತೈವಾನ್ ಗಣನೀಯ ಪ್ರಮಾಣದ ಸಸ್ಯಾಹಾರಿ ಜನಸಂಖ್ಯೆಯನ್ನು ಹೊಂದಿದೆ. ಯಾಕೆಂದರೆ ಧರ್ಮವು ಮಾಂಸ ಮುಕ್ತ ಆಹಾರಕ್ಕಾಗಿ ಪ್ರತಿಪಾದಿಸುತ್ತದೆ. ಅಲ್ಲದೇ ದೇಶದಲ್ಲಿ ಹಲವಾರು ಬಾಯಲ್ಲಿ ನೀರೂರಿಸುವಂತ ಸಸ್ಯಾಹಾರಿ ಪಾಕಪದ್ಧತಿಗಳಿವೆ. ಸರ್ಕಾರವು ಶಾಲೆಗಳು ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿ ಸಸ್ಯಾಹಾರಿ ಆಯ್ಕೆಗಳನ್ನೇ ಒದಗಿಸುತ್ತದೆ.


ಜರ್ಮನಿ

ಜರ್ಮನಿಯಲ್ಲಿ ಹೆಚ್ಚು ಜನರು ಮಾಂಸಾಹಾರಿ ಜೀವನಶೈಲಿಯನ್ನು ಬಿಟ್ಟು ಸಸ್ಯಾಹಾರಿ ಆಹಾರವನ್ನು ಆರಿಸಿಕೊಳ್ಳುತ್ತಿದ್ದಾರೆ. ಇಲ್ಲಿ ಬಲವಾದ ಪ್ರಾಣಿ ಹಕ್ಕುಗಳ ಆಂದೋಲನವನ್ನು ಹೊಂದಿದೆ. ಇದು ಮಾಂಸಾಹಾರಿ ಜನಸಂಖ್ಯೆಯ ಕುಸಿತಕ್ಕೆ ಕಾರಣವಾಗಿದೆ. ಬರ್ಲಿನ್‌ನಂತಹ ಪ್ರಮುಖ ನಗರಗಳು ಹೆಚ್ಚು ಸಸ್ಯಾಹಾರಿ ರೆಸ್ಟೊರೆಂಟ್‌ಗಳನ್ನು ಹೊಂದಿದ್ದು ಅವು ಸೌರ್‌ಕ್ರಾಟ್ ಮತ್ತು ಪ್ರಿಟ್ಜೆಲ್‌ಗಳಂತಹ ಸಾಂಪ್ರದಾಯಿಕ ಭಕ್ಷ್ಯಗಳನ್ನು ನೀಡುತ್ತವೆ.

ಇದನ್ನೂ ಓದಿ: Indian Dessert 2024: ವಿಶ್ವದ ಪ್ರಸಿದ್ಧ ʼಸಿಹಿತಿಂಡಿ ತಾಣʼಗಳ ಪಟ್ಟಿಯಲ್ಲಿ ಸ್ಥಾನ ಪಡೆದ 10 ಭಾರತೀಯ ಸ್ವೀಟ್‌ ಸ್ಟಾಲ್‌ಗಳಿವು

ಮೊಜಾಂಬಿಕ್

ಪೂರ್ವ ಆಫ್ರಿಕಾದ ದೇಶವು ವಿಶ್ವದ ಅತ್ಯಂತ ಬಡ ದೇಶಗಳಲ್ಲಿ ಒಂದಾಗಿದೆ. ಪರಿಣಾಮವಾಗಿ, ಸರಾಸರಿ ಮಾಂಸ ಸೇವನೆಯು ಅಲ್ಲಿ ಕಡಿಮೆಯಾಗಿದೆ. ಮೊಜಾಂಬಿಕ್‌ನಲ್ಲಿರುವ ಜನರು ಹೆಚ್ಚಾಗಿ ಆಮದು ಮಾಡಿಕೊಂಡ ಮಾಂಸವನ್ನು ಸೇವಿಸುತ್ತಾರೆ.

Continue Reading

ಆರೋಗ್ಯ

Health Tips: ಮಲಗುವ ಮುನ್ನ ಹಾಲು, ಬೆಲ್ಲ ಸೇವಿಸಿದರೆ ಹಲವು ಸಮಸ್ಯೆಗಳಿಗೆ ಪರಿಹಾರ

ಕಬ್ಬಿನ ರಸದಿಂದ ಕಚ್ಚಾ ರೂಪದಲ್ಲಿ ಸಂಗ್ರಹಿಸುವ ಬೆಲ್ಲವು ಅನೇಕ ಆರೋಗ್ಯಕರ ಗುಣವನ್ನು (Health Tips) ಹೊಂದಿದೆ. ಪ್ರತಿ ದಿನ ರಾತ್ರಿ ಮಲಗುವ ಮುನ್ನ ಹಾಲು ಮತ್ತು ಬೆಲ್ಲವನ್ನು ಸೇವಿಸಲು ಆಯುರ್ವೇದದಲ್ಲಿ ಶಿಫಾರಸು ಮಾಡಲಾಗುತ್ತದೆ. ಇದರಿಂದ ಸಾಕಷ್ಟು ಪ್ರಯೋಜಗಳು ಇವೆ. ಅವು ಯಾವುದು ಎನ್ನುವ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

By

Health Tips
Koo

ಉತ್ತಮ ಆರೋಗ್ಯಕ್ಕಾಗಿ (Health Tips) ಹಾಲು (milk benefits) ಸೇವಿಸಬೇಕು ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಬರೀ ಹಾಲು ಕುಡಿಯುವುದು ಬೇಸರ. ಹೀಗಾಗಿ ಕೆಲವರು ಅರಶಿನ ಹಾಲು (turmeric milk), ಬೆಲ್ಲದ ಹಾಲನ್ನು (jaggery milk) ಶಿಫಾರಸು ಮಾಡುತ್ತಾರೆ. ಅರಶಿನ ಹಾಲಿನ ಪ್ರಯೋಜನಗಳ ಬಗ್ಗೆ ಸಾಕಷ್ಟು ಮಂದಿಗೆ ಗೊತ್ತಿದೆ. ಆದರೆ ಬೆಲ್ಲದ ಹಾಲು ಸೇವನೆಯು ಕೆಲವೊಂದು ಪ್ರಯೋಜನಗಳನ್ನು ಹೊಂದಿದೆ. ಇದಕ್ಕೆ ಆಯುರ್ವೇದ ತಜ್ಞರು ನೀಡಿರುವ ಸಲಹೆಗಳು ಇಲ್ಲಿವೆ.

ಹಾಲು ಉತ್ತಮ ಗುಣಮಟ್ಟದ ಪ್ರೊಟೀನ್ ಅನ್ನು ಹೊಂದಿದೆ. ಸ್ನಾಯುಗಳ ದುರಸ್ತಿ ಮತ್ತು ಬೆಳವಣಿಗೆಗೆ ಇದರ ಸೇವನೆ ಅವಶ್ಯಕವಾಗಿದೆ. ಹಾಲಿನಲ್ಲಿ ಬಿ12 ಮತ್ತು ವಿಟಮಿನ್ ಡಿಯಂತಹ ಪೋಷಕಾಂಶಗಳಿದ್ದು, ನರಗಳ ಕಾರ್ಯ ಮತ್ತು ಮೂಳೆಗಳ ಆರೋಗ್ಯಕ್ಕೆ ಅತ್ಯಂತ ಅವಶ್ಯಕವಾಗಿ ಬೇಕಾಗುವ ಆಹಾರವಾಗಿದೆ.

ಕಬ್ಬಿನ ರಸದಿಂದ ಕಚ್ಚಾ ರೂಪದಲ್ಲಿ ಸಂಗ್ರಹಿಸುವ ಬೆಲ್ಲವು ಅನೇಕ ಖನಿಜಗಳು ಮತ್ತು ವಿಟಮಿನ್‌ಗಳ ರೂಪದಲ್ಲಿ ಪೌಷ್ಟಿಕಾಂಶವನ್ನು ಒದಗಿಸುತ್ತದೆ. ಬೆಲ್ಲವು ಜೀರ್ಣಕಾರಿ ಬೆಂಕಿಯನ್ನು ಉತ್ತೇಜಿಸುತ್ತದೆ ಮತ್ತು ಕಫ ದೋಷವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಬೆಲ್ಲವು ಜೀರ್ಣವಾಗದ ಆಹಾರಗಳು ಮತ್ತು ಕರುಳಿನಲ್ಲಿ ಸಂಗ್ರಹವಾಗಬಹುದಾದ ಜೀವಾಣುಗಳನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ.

ಇದಲ್ಲದೆ ಬೆಲ್ಲವು ಕಬ್ಬಿನಾಂಶವನ್ನು ಹೊಂದಿದೆ. ಇದು ವಿಶೇಷವಾಗಿ ಕಬ್ಬಿಣದ ಕೊರತೆಯಿರುವ ವ್ಯಕ್ತಿಗಳಲ್ಲಿರಕ್ತಹೀನತೆಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಸಣ್ಣ ಪ್ರಮಾಣದ ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಇತರ ಖನಿಜಗಳನ್ನು ಹೊಂದಿರುವ ಬೆಲ್ಲವು ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡುತ್ತದೆ ಮತ್ತು ಚಯಾಪಚಯ ಪ್ರಕ್ರಿಯೆಗಳನ್ನು ಸುಸ್ಥಿಯಲ್ಲಿ ಇರಿಸುತ್ತದೆ.

ಸಂಸ್ಕರಿಸಿದ ಸಕ್ಕರೆಗಿಂತ ಭಿನ್ನವಾಗಿ ಬೆಲ್ಲವು ಕಡಿಮೆ ಗ್ಲೈಸೆಮಿಕ್ ಅನ್ನು ಹೊಂದಿದೆ. ಅಂದರೆ ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟದ ನಿಧಾನಗತಿಯ ಏರಿಕೆಗೆ ಕಾರಣವಾಗುತ್ತದೆ. ಇದು ಶಕ್ತಿಯ ಮಟ್ಟವನ್ನು ನಿರ್ವಹಿಸಲು ಉತ್ತಮ ಪರ್ಯಾಯವಾಗಿದೆ ಎನ್ನುತ್ತಾರೆ ಆಯುರ್ವೇದ ತಜ್ಞರು.

ಹಲವು ಸಮಸ್ಯೆಗಳಿಗೆ ಪರಿಹಾರ

ಹಾಲು ಮತ್ತು ಬೆಲ್ಲವು ಜೀರ್ಣಾಂಗ ವ್ಯವಸ್ಥೆಯಲ್ಲಿ ಶುಷ್ಕತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೆಚ್ಚುವರಿ ಶಾಖ ಮತ್ತು ಅತಿಯಾದ ಶೀತವನ್ನು ಕಡಿಮೆ ಮಾಡುತ್ತದೆ. ಇದು ಶಾಂತತೆ ಮತ್ತು ಸ್ಥಿರತೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ನಿದ್ರೆಯ ಸಮಸ್ಯೆಗಳು ಮತ್ತು ನಿದ್ರಾಹೀನತೆಗೆ ಇದು ಅತ್ಯುತ್ತಮ ಪರಿಹಾರವಾಗಿದೆ.

ಹಾಲಿನಲ್ಲಿರುವ ಕ್ಯಾಲ್ಸಿಯಂ ದೃಢವಾದ ಮೂಳೆ ಮತ್ತು ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಮುಖ್ಯವಾಗಿದೆ. ಬೆಲ್ಲವು ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಮೂಳೆಯ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.

ಮಿತವಾಗಿ ಸೇವಿಸಬೇಕು

ಬೆಲ್ಲ ಮಿಶ್ರಿತ ಹಾಲು ಮಿತವಾಗಿ ಸೇವಿಸುವುದು ಉತ್ತಮ. ವಿಶೇಷವಾಗಿ ರಕ್ತದಲ್ಲಿ ಸಕ್ಕರೆಯ ಸಮಸ್ಯೆ ಇರುವವರಿಗೆ ಬೆಲ್ಲವು ನೈಸರ್ಗಿಕ ಸಿಹಿಕಾರಕವಾಗಿದ್ದರೂ ಸಹ ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ.
ಡೈರಿ ಉತ್ಪನ್ನಗಳ ಅಲರ್ಜಿ ಇರುವವರು ಈ ಮಿಶ್ರಣವನ್ನು ತಪ್ಪಿಸಬೇಕು. ಬಾದಾಮ್ ಅಥವಾ ತೆಂಗಿನ ಹಾಲಿನಂತಹ ಪರ್ಯಾಯಗಳನ್ನು ಪರಿಗಣಿಸಬೇಕು ಎನ್ನುತ್ತಾರೆ ಪರಿಣತ ವೈದ್ಯರು.

15 ದಿನಗಳಿಗೊಮ್ಮೆ ಬೆಲ್ಲದೊಂದಿಗೆ ಹಾಲನ್ನು ಸೇವಿಸುವುದು ಉತ್ತಮ. ಆದರೆ ಇದನ್ನು ದೈನಂದಿನ ಅಭ್ಯಾಸವಾಗಿ ಸೇವಿಸುವುದು ಸರಿಯಲ್ಲ ಎಂಬ ಅಭಿಪ್ರಾಯವೂ ಇದೆ.


ವೈಜ್ಞಾನಿಕ ದೃಷ್ಟಿಕೋನದಿಂದ ಕ್ಯಾಲ್ಸಿಯಂ ಮತ್ತು ಕಬ್ಬಿಣದ ನಡುವಿನ ಸಂಭಾವ್ಯ ಪರಸ್ಪರ ಕ್ರಿಯೆಯಿಂದಾಗಿ ಹಾಲು ಮತ್ತು ಬೆಲ್ಲವನ್ನು ಸಂಯೋಜಿಸುವುದು ಸೂಕ್ತವಲ್ಲ. ಹಾಲಿನಲ್ಲಿ ಕ್ಯಾಲ್ಸಿಯಂ ಅಧಿಕವಾಗಿದೆ. ಇದು ಬೆಲ್ಲದಲ್ಲಿ ಕಂಡುಬರುವ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ. ಇದರಿಂದಾಗಿ ಬೆಲ್ಲದ ಪೌಷ್ಟಿಕಾಂಶದ ಪ್ರಯೋಜನಗಳನ್ನು ಒಟ್ಟಿಗೆ ಸೇವಿಸಿದಾಗ ಸಂಭಾವ್ಯವಾಗಿ ಇದು ಅದರ ಪ್ರಭಾವವನ್ನು ಕಡಿಮೆ ಮಾಡುತ್ತದೆ ಎಂಬ ಅಭಿಪ್ರಾಯವೂ ಇದೆ.

ಇದನ್ನೂ ಓದಿ: Eye Care Food: ನೀವು ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿದ್ದೀರಾ? ಈ ಆಹಾರಗಳನ್ನು ಸೇವಿಸಿ

Continue Reading

ಬೆಂಗಳೂರು

Fortis Hospital: ಜನನಾಂಗದಿಂದ ಹೊರಗೆ ಚಾಚಿದ್ದ ಗರ್ಭಕೋಶ ರೋಬೋಟಿಕ್‌ ಮೂಲಕ ಮರುಸ್ಥಾಪನೆ!

39 ವರ್ಷದ ಅನಿವಾಸಿ ಭಾರತೀಯ ಮಹಿಳೆಯ ಜನನಾಂಗದ ಮೂಲಕ ಹೊರಗೆ ಹಿಗ್ಗಿಕೊಂಡಿದ್ದ ಗರ್ಭಕೋಶವನ್ನು ಫೋರ್ಟಿಸ್‌ ಆಸ್ಪತ್ರೆ (Fortis Hospital) ವೈದ್ಯರ ತಂಡ ಯಶಸ್ವಿಯಾಗಿ ರೋಬೋಟಿಕ್‌ ಶಸ್ತ್ರಚಿಕಿತ್ಸೆಯಿಂದ ಯಥಾಸ್ಥಿತಿಯಲ್ಲಿ ಇರಿಸಲು ಯಶಸ್ವಿಯಾಗಿದೆ. ಇದು ಅಪರೂಪದ ಶಸ್ತ್ರ ಚಿಕಿತ್ಸೆಯಾಗಿದೆ. ಫೋರ್ಟಿಸ್ ಆಸ್ಪತ್ರೆಯ ಮೂತ್ರಶಾಸ್ತ್ರ, ಸ್ತ್ರೀರೋಗ-ಆಂಕೊಲಾಜಿ ಮತ್ತು ರೋಬೋಟಿಕ್ ಶಸ್ತ್ರಚಿಕಿತ್ಸೆಯ ಹಿರಿಯ ಸಲಹೆಗಾರರಾದ ಡಾ. ರುಬಿನಾ ಶಾನವಾಜ್ ಅವರ ತಂಡ ಈ ಶಸ್ತ್ರಚಿಕಿತ್ಸೆ ನಡೆಸಿದೆ. ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Fortis Hospital
Koo

ಬೆಂಗಳೂರು: 39 ವರ್ಷದ ಅನಿವಾಸಿ ಭಾರತೀಯ ಮಹಿಳೆಗೆ ತನ್ನ ಜನನಾಂಗದ ಮೂಲಕ ಹೊರಗೆ ಹಿಗ್ಗಿಕೊಂಡಿದ್ದ ಗರ್ಭಕೋಶವನ್ನು ಫೋರ್ಟಿಸ್‌ ಆಸ್ಪತ್ರೆ (Fortis Hospital) ವೈದ್ಯರ ತಂಡ ಯಶಸ್ವಿಯಾಗಿ ರೋಬೋಟಿಕ್‌ ಮೂಲಕ ಶಸ್ತ್ರಚಿಕಿತ್ಸೆಯ ನಡೆಸಿ ಯಥಾಸ್ಥಿತಿಗೆ ಪುನಃಸ್ಥಾಪಿಸಿದೆ.

ಫೋರ್ಟಿಸ್ ಆಸ್ಪತ್ರೆಯ ಮೂತ್ರಶಾಸ್ತ್ರ, ಸ್ತ್ರೀರೋಗ-ಆಂಕೊಲಾಜಿ ಮತ್ತು ರೋಬೋಟಿಕ್ ಶಸ್ತ್ರಚಿಕಿತ್ಸೆಯ ಹಿರಿಯ ಸಲಹೆಗಾರರಾದ ಡಾ. ರುಬಿನಾ ಶಾನವಾಜ್ ಅವರ ತಂಡ ಈ ಶಸ್ತ್ರಚಿಕಿತ್ಸೆ ನಡೆಸಿದೆ.

ಇದನ್ನೂ ಓದಿ: Pralhad Joshi: ಮುಂಬೈ, ಕೋಲ್ಕತಾದಲ್ಲಿ ಇವಿ ಬ್ಯಾಟರಿ ಚಾರ್ಜರ್ ಘಟಕಕ್ಕೆ ಬೆಂಗಳೂರು ಮಾದರಿ

ಈ ಕುರಿತು ಮಾತನಾಡಿದ ಡಾ. ರುಬಿನಾ, ಎರಡು ಮಕ್ಕಳನ್ನು ಹೊಂದಿರುವ 39 ವರ್ಷದ ಎನ್‌ಆರ್‌ಐ ಮಹಿಳೆಗೆ ನಾಲ್ಕು ವರ್ಷಗಳ ಹಿಂದೆಯೇ ಗರ್ಭಕೋಶವು ಜನನಾಂಗದ ಮೂಲಕ ಹೊರಗೆ ಚಾಚಿಕೊಂಡಿತ್ತು. ಸಾಮಾನ್ಯವಾಗಿ ಋತುಬಂಧ ನಿಂತ ಬಳಿಕ ಈ ಸಮಸ್ಯೆ ಕೆಲವರಲ್ಲಿ ಕಾಣಿಸುತ್ತದೆ. ಆದರೆ ಇವರಿಗೆ ಋತುಬಂಧ ನಿಲ್ಲುವ ಮೊದಲೇ ಗರ್ಭಕೋಶ ಜನನಾಂಗದ ಮೂಲಕ ಚಾಚಿಕೊಂಡಿತ್ತು. ಈ ಸಮಸ್ಯೆಯಿಂದ ಇವರು ದಿನನಿತ್ಯದ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅಷ್ಟೇ ಅಲ್ಲ, ಕಿಬ್ಬೊಟ್ಟೆ ನೋವು, ಹೊಟ್ಟೆ ಉಬ್ಬುವಿಕೆಯಿಂದ ತೊಡೆಗಳ ಅಸ್ವಸ್ಥತೆ, ಮೂತ್ರ ವಿಸರ್ಜನೆ ಮಾಡುವುದು ಸಹ ಕಷ್ಟಕರವಾಗಿತ್ತು. ಕೆಲವರು ಇದಕ್ಕೆ ಗರ್ಭಕೋಶವನ್ನೇ ತೆಗೆದುಹಾಕುವ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳುತ್ತಾರೆ. ಆದರೆ, ಫೋರ್ಟಿಸ್‌ ಆಸ್ಪತ್ರೆಯಲ್ಲಿ ಕೆಳಗೆ ಜಾರಿದ ಗರ್ಭಕೋಶವನ್ನು ರೋಬೋಟಿಕ್‌ ಸಹಾಯದ ಮೂಲಕ ಮೇಲೆತ್ತುವ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗುತ್ತದೆ. ಅಂತೆಯೇ ಇವರಿಗೂ ಸಹ ಹಲವು ಆಸ್ಪತ್ರೆಗಳಲ್ಲಿ ಗರ್ಭಕೋಶವನ್ನು ತೆಗೆಸುವಂತೆಯೇ ಸಲಹೆ ನೀಡಲಾಗಿತ್ತು.

ಇದನ್ನೂ ಓದಿ: Gold Rate Today: ಆಭರಣ ಪ್ರಿಯರಿಗೆ ಗೋಲ್ಡನ್‌ ಟೈಮ್‌; ಚಿನ್ನದ ದರ ಇಂದು ಕೂಡ ಇಳಿಮುಖ

ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದ ಇವರಿಗೆ “ರೋಬೋಟ್-ಅಸಿಸ್ಟೆಡ್ ಸ್ಯಾಕ್ರೋ-ಹಿಸ್ಟರೊಪೆಕ್ಸಿ ಶಸ್ತ್ರಚಿಕಿತ್ಸೆಯ ಸಲಹೆ ನೀಡಲಾಯಿತು. ಈ ಶಸ್ತ್ರಚಿಕಿತ್ಸೆಯ ಮೂಲಕ ಕೆಳಗೆ ಜಾರಲಾದ ಗರ್ಭಕೋಶವನ್ನು ಅದೇ ಸ್ಥಳದಲ್ಲಿ ಕೂರಿಸಲಾಯಿತು. ಇದೀಗ ಅವರು ಚೇತರಿಸಿಕೊಂಡಿದ್ದಾರೆ ಎಂದು ವಿವರಿಸಿದರು.

Continue Reading
Advertisement
Actor darshan
ಸ್ಯಾಂಡಲ್ ವುಡ್2 mins ago

Actor Darshan : ಕೊಲೆ ಕೇಸ್‌ನಲ್ಲಿ ದರ್ಶನ್‌ ಮೂಲಕವೇ ಪವಿತ್ರಾಗೌಡ ಲಾಕ್‌; ಜತೆಗೆ ಇದ್ದ ಹುಡುಗರನ್ನು ನಂಬಿ ಕೆಟ್ಟೆ ಎಂದ ನಟ!

Western Ghats
ಕರ್ನಾಟಕ27 mins ago

Western Ghats: ಭೂ ಕುಸಿತ ಹಿನ್ನೆಲೆ; ಪಶ್ಚಿಮ ಘಟ್ಟಗಳಲ್ಲಿನ ರೆಸಾರ್ಟ್, ಹೋಮ್ ಸ್ಟೇ, ತೋಟ, ಬಡಾವಣೆ ತೆರವಿಗೆ ಸರ್ಕಾರದ ಆದೇಶ

Israel vs Hezbollah War
ವಿದೇಶ45 mins ago

Israel vs Hezbollah War: ಹೆಜ್ಬುಲ್ಲಾ ಉಗ್ರರ ಅಟ್ಟಹಾಸ; ಲೆಬನಾನ್‌ ಮೇಲೆ ರಾಕೆಟ್​ ದಾಳಿ ಆರಂಭಿಸಿದ ಇಸ್ರೇಲ್​; ಭಯಾನಕ ವಿಡಿಯೊ ಇಲ್ಲಿದೆ

Dhanya Ramkumar-Vicky Varun starrer Kaalapathar to release on September 13
ಸಿನಿಮಾ1 hour ago

Dhanya Ramkumar: ತೆರೆಗೆ ಸಿದ್ಧವಾಯ್ತು ಕಾಲಾಪತ್ಥರ್‌; ಸೆ.13ಕ್ಕೆ ಧನ್ಯಾ ರಾಮ್‌ಕುಮಾರ್- ವಿಕ್ಕಿ ವರುಣ್‌ ನಟನೆ ಮೋಡಿ

Karkala Shocker
ಕರ್ನಾಟಕ1 hour ago

Karkala Shocker: ಹಿಂದೂ ಯುವತಿ ಮೇಲೆ ಅತ್ಯಾಚಾರ ಎಸಗಿದ ಅಲ್ತಾಫ್‌ಗೆ ಕಠಿಣ ಶಿಕ್ಷೆಯಾಗಲಿ ಎಂದ ಮುಸ್ಲಿಂ ಒಕ್ಕೂಟ

Pavel Durov Arrest
ವಿದೇಶ1 hour ago

Pavel Durov Arrest: ಟೆಲಿಗ್ರಾಂ ಸಿಇಒ ಪಾವೆಲ್‌‌ ಫ್ರಾನ್ಸ್‌‌ನಲ್ಲಿ ಬಂಧನ; ಕಾರಣ ಏನು?

CBI Raid
ದೇಶ2 hours ago

CBI Raid: ಆರ್‌.ಜಿ. ಕರ್ ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ನಿವಾಸದ ಮೇಲೆ ಸಿಬಿಐ ದಾಳಿ

Israel strike
ವಿದೇಶ2 hours ago

Israel strike: ರಾಕೆಟ್ ದಾಳಿ; ಇಸ್ರೇಲ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ

Rohit Sharma
ಕ್ರೀಡೆ3 hours ago

Rohit Sharma: ಪಾರ್ಕ್​ನಲ್ಲಿ ಅಭ್ಯಾಸ ನಡೆಸಿದ ರೋಹಿತ್​; ವಿಡಿಯೊ ವೈರಲ್​

Chain snatching Case
ಕ್ರೈಂ3 hours ago

Chain snatching Case: ಆನ್‌ಲೈನ್‌ ಬೆಟ್ಟಿಂಗ್ ಚಟಕ್ಕೆ ಬಿದ್ದು ಮೈತುಂಬ ಸಾಲ ಮಾಡಿದ; ಚೈನ್ ಸ್ನಾಚಿಂಗ್‌ಗೆ ಇಳಿದು ಸಿಕ್ಕಿಬಿದ್ದ

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ12 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

ಮಳೆ21 hours ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು3 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ3 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

ಟ್ರೆಂಡಿಂಗ್‌