Indian Dessert 2024: ವಿಶ್ವದ ಪ್ರಸಿದ್ಧ ʼಸಿಹಿತಿಂಡಿ ತಾಣʼಗಳ ಪಟ್ಟಿಯಲ್ಲಿ ಸ್ಥಾನ ಪಡೆದ 10 ಭಾರತೀಯ ಸ್ವೀಟ್‌ ಸ್ಟಾಲ್‌ಗಳಿವು - Vistara News

Latest

Indian Dessert 2024: ವಿಶ್ವದ ಪ್ರಸಿದ್ಧ ʼಸಿಹಿತಿಂಡಿ ತಾಣʼಗಳ ಪಟ್ಟಿಯಲ್ಲಿ ಸ್ಥಾನ ಪಡೆದ 10 ಭಾರತೀಯ ಸ್ವೀಟ್‌ ಸ್ಟಾಲ್‌ಗಳಿವು

Indian Dessert 2024: ಪಾಕಶಾಲೆಯ ಮಾರ್ಗದರ್ಶಿ ʼಟೇಸ್ಟ್ ಅಟ್ಲಾಸ್ʼ ಇತ್ತೀಚೆಗೆ 2024ರ ವಿಶ್ವದ ಅತ್ಯಂತ ಪ್ರಸಿದ್ಧ ಸಿಹಿತಿಂಡಿ ತಯಾರಿಸುವ ಸ್ಥಳಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಜಗತ್ತಿನಾದ್ಯಂತ ವಿಶೇಷವಾದ ಸಿಹಿತಿಂಡಿಗಳು ಮತ್ತು ಪೇಸ್ಟ್ರಿಗಳನ್ನು ತಯಾರಿಸುವಂತಹ ಸ್ಥಳಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಇವುಗಳಲ್ಲಿ, 10 ಭಾರತೀಯ ತಿನಿಸುಗಳು ಸ್ಥಾನವನ್ನು ಗಳಿಸಿವೆ. ಆ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Indian Dessert 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo


ವಿಶ್ವದ ಹಲವು ಕಡೆಗಳಲ್ಲಿ ಬಗೆಬಗೆಯ ತಿನಿಸುಗಳನ್ನು ತಯಾರಿಸುತ್ತಾರೆ. ಒಂದೊಂದು ತಿಂಡಿ ಒಂದೊಂದು ರೀತಿಯ ರುಚಿಯನ್ನು ಹೊಂದಿರುತ್ತದೆ. ಆದರೆ ತಿಂಡಿ ಪ್ರಿಯರಿಗೆ ಯಾವ ತಿಂಡಿ ತುಂಬಾ ರುಚಿಕರವಾಗಿರುತ್ತದೆ ಮತ್ತು ಅದು ಎಲ್ಲಿ ಸಿಗುತ್ತದೆ ಎಂಬ ಮಾಹಿತಿ ತಿಳಿದಿರುವುದಿಲ್ಲ. ಹಾಗಾಗಿ ಅಂಥವರಿಗಾಗಿ ಪಾಕಶಾಲೆಯ ಮಾರ್ಗದರ್ಶಿ ಟೇಸ್ಟ್ ಅಟ್ಲಾಸ್ ಇತ್ತೀಚೆಗೆ 2024ರ ವಿಶ್ವದ ಅತ್ಯಂತ ಪ್ರಸಿದ್ಧ ಸಿಹಿತಿಂಡಿ ತಯಾರಿಸುವ ಸ್ಥಳಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಜಗತ್ತಿನಾದ್ಯಂತ ವಿಶೇಷವಾದ ಸಿಹಿತಿಂಡಿಗಳು ಮತ್ತು ಪೇಸ್ಟ್ರಿಗಳನ್ನು ತಯಾರಿಸುವಂತಹ ಸ್ಥಳಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಇವುಗಳಲ್ಲಿ, 10 ಭಾರತೀಯ ತಿನಿಸುಗಳು (Indian Dessert 2024) ಸ್ಥಾನವನ್ನು ಗಳಿಸಿವೆ. ಆ 10 ಭಾರತೀಯ ತಿನಿಸುಗಳು ಮತ್ತು ಅವುಗಳು ಯಾವ ಸ್ಥಾನ ಪಡೆದುಕೊಂಡಿದ್ದಾವೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

Indian Dessert 2024
Indian Dessert 2024

1. ಕಯಾನಿ ಬೇಕರಿ, ಪುಣೆ

ಈ ಪಟ್ಟಿಯಲ್ಲಿ ಜಾಗತಿಕವಾಗಿ 18ನೇ ಸ್ಥಾನ ಪಡೆದುಕೊಂಡ ಕಯಾನಿ ಬೇಕರಿ 1955ರಲ್ಲಿ ಪ್ರಾರಂಭವಾಗಿತ್ತು. ಪುಣೆಯ ಕಯಾನಿ ಬೇಕರಿ ಶ್ರೂಸ್ಬರಿ ಬಿಸ್ಕತ್ತುಗಳು ಮತ್ತು ಮಾವಾ ಕೇಕ್‍ಗಳಿಗೆ ಹೆಸರುವಾಸಿಯಾಗಿದೆ.

ಪುಣೆಗೆ ಭೇಟಿ ನೀಡುವ ಅನೇಕ ಪ್ರವಾಸಿಗರು ಆಗಾಗ್ಗೆ ಈ ಬೇಕರಿ ಬಳಿ ಈ ಸಿಹಿತಿಂಡಿಗಳನ್ನು ಖರೀದಿಸುತ್ತಾರೆ.

Indian Dessert 2024
Indian Dessert 2024

2. ಕೆ.ಸಿ.ದಾಸ್, ಕೋಲ್ಕತಾ

ಪಟ್ಟಿಯಲ್ಲಿ 25ನೇ ಸ್ಥಾನ ಪಡೆದುಕೊಂಡ ಕೆ.ಸಿ.ದಾಸ್ 1866ರಲ್ಲಿ ಪ್ರಾರಂಭವಾಗಿತ್ತು. ಕೆ.ಸಿ.ದಾಸ್‌ ರಸಗುಲ್ಲಾಗಳಿಗೆ ಸಮಾನಾರ್ಥಕ ಹೆಸರು ಎಂಬ ಖ್ಯಾತಿ ಹೊಂದಿದೆ.

ಕೋಲ್ಕತ್ತಾ ಮೂಲದ ಈ ಮಿಠಾಯಿ ತಯಾರಕರು ಪ್ರವಾಸಿಗರಿಗೆ ಪ್ರಿಯವಾದ ಬಂಗಾಳಿ ಪಾಕಪದ್ಧತಿಯ ಮೂಲಕ ಸಿಹಿತಿಂಡಿಗಳನ್ನು ತಯಾರಿಸುತ್ತಾರೆ.

Indian Dessert 2024
Indian Dessert 2024

3. ಫ್ಲೂರಿಸ್, ಕೋಲ್ಕತಾ

ಪಟ್ಟಿಯಲ್ಲಿ 26ನೇ ಸ್ಥಾನ ಪಡೆದುಕೊಂಡ ಕೋಲ್ಕತ್ತಾದ ಜನಪ್ರಿಯ ಟೀ ರೂಮ್ ಮತ್ತು ಬೇಕರಿಯಾದ ಫ್ಲೂರಿಸ್ 1927ರಿಂದ ಸ್ವಿಸ್ ಚಾಕೊಲೇಟ್‍ಗಳು ಮತ್ತು ಪ್ಯಾಟಿಸ್ಸೆರಿಯನ್ನು ಒದಗಿಸುತ್ತಿದೆ. ಈ ಐತಿಹಾಸಿಕ ಸಂಸ್ಥೆಗೆ ಭೇಟಿ ನೀಡುವವರು ಒಮ್ಮೆ ಇಲ್ಲಿ ಸಿಗುವ ರಮ್ ಬಾಲ್ ಸವಿಯಲೇಬೇಕು.

Indian Dessert 2024
Indian Dessert 2024

4. ಕರಾಚಿ ಬೇಕರಿ, ಹೈದರಾಬಾದ್

ಪಟ್ಟಿಯಲ್ಲಿ 29ನೇ ಸ್ಥಾನ ಪಡೆದುಕೊಂಡಿರುವ ಹೈದರಾಬಾದ್‍ನ ಕರಾಚಿ ಬೇಕರಿ ಹಣ್ಣಿನ ಬಿಸ್ಕತ್ತುಗಳು ಮತ್ತು ಇತರ ಬೇಯಿಸಿದ ಆಹಾರಗಳಿಗೆ ಹೆಸರುವಾಸಿಯಾಗಿದೆ.

ಇದು 1953ರಿಂದ ಜನರ ಗಮನ ಸೆಳೆದಿದೆ. ಬೇಕರಿಯ ವೈವಿಧ್ಯಮಯ ತಿಂಡಿತಿನಿಸುಗಳು ಸಿಹಿತಿಂಡಿ ಪ್ರಿಯರನ್ನು ಸಂತೋಷಪಡಿಸುತ್ತಲೇ ಇವೆ.

Indian Dessert 2024
Indian Dessert 2024

5. ಬಿ&ಆರ್ ಮುಲ್ಲಿಕ್, ಕೋಲ್ಕತಾ

ಪಟ್ಟಿಯಲ್ಲಿ 37ನೇ ಸ್ಥಾನ ಪಡೆದುಕೊಂಡ ಕೋಲ್ಕತ್ತಾದ ಬಿ&ಆರ್ ಮಲ್ಲಿಕ್ 1978ರಿಂದ ಪ್ರಾರಂಭವಾಗಿದೆ. ಬಲರಾಮ್ ಮುಲ್ಲಿಕ್ ಮತ್ತು ರಾಧಾರಮಣ್ ಮುಲ್ಲಿಕ್ ಎಂಬುವವರು ತನ್ನ ಸಾಂಪ್ರದಾಯಿಕ ಬಂಗಾಳಿ ಸಿಹಿತಿಂಡಿಗಳಿಗೆ ಹೆಸರುವಾಸಿಯಾಗಿದ್ದಾರೆ, ಇದು ಕೋಲ್ಕತ್ತಾದಲ್ಲಿ ವಿಶೇಷ ಸಿಹಿ ತಿಂಡಿಗಳು ದೊರೆಯುವ ಪ್ರಮುಖ ಸ್ಥಳವಾಗಿದೆ.

Indian Dessert 2024
Indian Dessert 2024

6. ಕೆ ರುಸ್ತುಂ ಅಂಡ್ ಕೋ, ಮುಂಬೈ

ಪಟ್ಟಿಯಲ್ಲಿ 49ನೇ ಸ್ಥಾನದಲ್ಲಿರುವ ಮುಂಬೈನ ಕೆ ರುಸ್ತುಂ ಅಂಡ್ ಕೋ 1953ರಲ್ಲಿ ಪ್ರಾರಂಭವಾಗಿದೆ. ಇದು ಮುಂಬೈನ ಪ್ರಸಿದ್ಧ ಐಸ್‌ಕ್ರೀಮ್ ಪಾರ್ಲರ್ ಆಗಿದೆ. ಇಲ್ಲಿ ಸಿಗುವ ವಿಶಿಷ್ಟ ಐಸ್‌ಕ್ರೀಮ್ ಸ್ಯಾಂಡ್ ವಿಚ್‍ಗಳು ಸ್ಥಳೀಯರಿಗೆ ಮತ್ತು ಸಂದರ್ಶಕರಿಗೆ ಬಹಳ ಅಚ್ಚುಮೆಚ್ಚು.

Indian Dessert 2024
Indian Dessert 2024

7. ಕುರೆಮಾಲ್ ಕುಲ್ಫಿ, ನವದೆಹಲಿ

ಪಟ್ಟಿಯಲ್ಲಿ 67ನೇ ಸ್ಥಾನದಲ್ಲಿದ್ದ ನವದೆಹಲಿಯ ಕುರೆಮಾಲ್ ಕುಲ್ಫಿ ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ಸಿಹಿತಿಂಡಿಗಳನ್ನು ಮಾರಾಟ ಮಾಡುತ್ತಿದೆ. ಇದು ರುಚಿಕರವಾದ ವಿಶೇಷವಾದ ಕುಲ್ಫಿಗಳಿಗೆ ಹೆಸರುವಾಸಿಯಾಗಿದ್ದು, ಇಲ್ಲಿ ಸ್ಟಫ್ಡ್ ಮಾವಿನ ಕುಲ್ಫಿಯನ್ನು ಸಿಗುತ್ತದೆ.

Indian Dessert 2024
Indian Dessert 2024

8. ಪ್ರಕಾಶ್ ಕುಲ್ಫಿ, ಲಕ್ನೋ

ಪಟ್ಟಿಯಲ್ಲಿ 77ನೇ ಸ್ಥಾನ ಪಡೆದುಕೊಂಡ ಲಕ್ನೋದ ಪ್ರಕಾಶ್ ಕುಲ್ಫಿ 1956ರಿಂದ ಪ್ರಾರಂಭವಾಗಿದ್ದು, ಇಲ್ಲಿ ಕ್ರೀಂ ಕುಲ್ಫಿಗಳು ಸಿಗುತ್ತವೆ. ಇದು ಎಲ್ಲಾ ಕಡೆಗಳಲ್ಲಿ ಸಿಗುವಂತಹ ಕುಲ್ಫಿಗಿಂತ ಹೆಚ್ಚು ರುಚಿಕರವಾಗಿದೆ.. ಹಾಗಾಗಿ ಇದು ಕುಲ್ಫಿ ಪ್ರಿಯರ ನೆಚ್ಚಿನ ಸ್ಥಳವಾಗಿದೆ.

Indian Dessert 2024
Indian Dessert 2024

9. ಚಿಟಾಲೆ ಬಂಧು, ಪುಣೆ

ಪಟ್ಟಿಯಲ್ಲಿ 85ನೇ ಸ್ಥಾನದಲ್ಲಿರುವ ಪುಣೆಯ ಚಿಟಾಲೆ ಬಂಧು ಸಿಹಿತಿಂಡಿಗಳು ಮತ್ತು ಬಕರ್ವಾಡಿಯಂತಹ ರುಚಿಕರವಾದ ತಿಂಡಿಗಳಿಗೆ ಹೆಸರುವಾಸಿಯಾಗಿದೆ. ಇದು 1950ರಿಂದ ಪುಣೆಯಲ್ಲಿ ಪ್ರಾರಂಭವಾಗಿದೆ.

Indian Dessert 2024
Indian Dessert 2024

10. ಜಿಲೇಬಿ ವಾಲಾ, ನವದೆಹಲಿ

ಪಟ್ಟಿಯಲ್ಲಿ 93ನೇ ಸ್ಥಾನ ಪಡೆದುಕೊಂಡ ನವದೆಹಲಿಯ ಹೃದಯಭಾಗದಲ್ಲಿರುವ ಜಿಲೇಬಿ ವಾಲಾ 1884ರಿಂದ ಹೊಸದಾದ ವಿಧಾನದಲ್ಲಿ ತಯಾರಿಸಿದ ಜಿಲೇಬಿಗಳನ್ನು ನೀಡುತ್ತಿದೆ. ಈ ಸ್ಥಳವು ಸ್ಥಳೀಯರಿಗೆ ಮತ್ತು ಸಂದರ್ಶಕರಿಗೆ ಅಚ್ಚುಮೆಚ್ಚಿನದಾಗಿದೆ.

ಇದನ್ನೂ ಓದಿ:  ಶ್ರಾವಣ ಶನಿವಾರದ ವಿಶೇಷ ಏನು? ಇದನ್ನು ಹೇಗೆ ಆಚರಿಸಿದರೆ ದೋಷ ನಿವಾರಣೆಯಾಗುತ್ತದೆ?

ಸಿಹಿತಿಂಡಿಗಳ ವಿಷಯಕ್ಕೆ ಬಂದಾಗ, ಭಾರತದ ಶ್ರೀಮಂತ ಮತ್ತು ವೈವಿಧ್ಯಮಯ ಪಾಕಶಾಲೆಯ ಸಂಪ್ರದಾಯಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿವೆ ಎಂಬುದನ್ನು ಈ 10 ಭಾರತೀಯ ತಿನಿಸುಗಳು ಸಾಬೀತುಪಡಿಸಿವೆ. ಈ ಪ್ರತಿಯೊಂದು ಸ್ಥಳಗಳು ಭಾರತದ ಸಿಹಿ ಪಾಕವಿಧಾನದಲ್ಲಿ ವಿಶಿಷ್ಟ ರುಚಿಯನ್ನು ನೀಡುತ್ತವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಶಿಕ್ಷಣ

NIRF 2024 Rank: ದೇಶದ ಟಾಪ್‌ 10 ಮೆಡಿಕಲ್‌ ಕಾಲೇಜುಗಳಲ್ಲಿ ನಿಮ್ಹಾನ್ಸ್‌ ನಂ.4; ಫಾರ್ಮಸಿಯಲ್ಲಿ ರಾಜ್ಯದ 2 ಕಾಲೇಜುಗಳಿಗೆ ಸ್ಥಾನ

ಎನ್‌ಐಆರ್‌ಎಫ್ 2024ರ (NIRF 2024 Rank) ಶ್ರೇಯಾಂಕಗಳನ್ನು ಬಿಡುಗಡೆ ಮಾಡಿದ್ದು, ಹಿಂದಿನ ವರ್ಷದ ಶ್ರೇಯಾಂಕದಂತೆಯೇ ಈ ಬಾರಿಯೂ ಏಮ್ಸ್ ದೆಹಲಿಯು ಭಾರತದ ಅತ್ಯುತ್ತಮ ವೈದ್ಯಕೀಯ ಕಾಲೇಜುಗಳಲ್ಲಿ ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ. ಉಳಿದ ಯಾವ ಸಂಸ್ಥೆಗಳು ವೈದ್ಯಕೀಯ, ದಂತ ಕಾಲೇಜುಗಳು ಮತ್ತು ಔಷಧಾಲಯಗಳು ಟಾಪ್ ಹತರರೊಳಗಿನ ಸ್ಥಾನದಲ್ಲಿದೆ ಎನ್ನುವ ಕುರಿತು ಮಾಹಿತಿಯಿ ಇಲ್ಲಿದೆ.

VISTARANEWS.COM


on

By

NIRF 2024 Rank
Koo

ದೆಹಲಿಯಲ್ಲಿರುವ ಏಮ್ಸ್ (AIIMS Delhi) ಭಾರತದ ಅತ್ಯುತ್ತಮ ವೈದ್ಯಕೀಯ ಕಾಲೇಜು ಎಂಬುದಾಗಿ ಎನ್‌ಐಆರ್‌ಎಫ್ (The National Institutional Ranking Framework) ಪ್ರಕಟಿಸಿದೆ. ಪಿಜಿಐ ಚಂಡೀಗಢ (PGI Chandigarh) ಮತ್ತು ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು (Christian Medical College, Vellore) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದೆ. ಎನ್‌ಐಆರ್‌ಎಫ್ ನೀಡಿರುವ ಶ್ರೇಯಾಂಕಗಳನ್ನು (NIRF 2024 Rank) ಭಾರತದ ಶಿಕ್ಷಣ ಸಚಿವಾಲಯವು ಇತ್ತೀಚೆಗೆ ಬಿಡುಗಡೆ ಮಾಡಿದೆ.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಸೋಮವಾರ ಭಾರತ್ ಮಂಟಪದಲ್ಲಿ ಎನ್‌ಐಆರ್‌ಎಫ್ 2024ರ ಶ್ರೇಯಾಂಕವನ್ನು ಅನಾವರಣಗೊಳಿಸಿದರು. ಹಿಂದಿನ ವರ್ಷದ ಶ್ರೇಯಾಂಕದಂತೆಯೇ ಏಮ್ಸ್ ದೆಹಲಿಯು ಭಾರತದ ಅತ್ಯುತ್ತಮ ವೈದ್ಯಕೀಯ ಕಾಲೇಜುಗಳಲ್ಲಿ ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ. ಡೆಂಟಲ್ ಕಾಲೇಜುಗಳಿಗೆ ಸಂಬಂಧಿಸಿದಂತೆ ಚೆನ್ನೈನ ಸವೀತಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಆಂಡ್ ಟೆಕ್ನಿಕಲ್ ಸೈನ್ಸಸ್ ಅಗ್ರ ಶ್ರೇಯಾಂಕವನ್ನು ಪಡೆದುಕೊಂಡಿದೆ. ಹೊಸದಿಲ್ಲಿಯ ಜಾಮಿಯಾ ಹಮ್ದರ್ದ್ ಫಾರ್ಮಸಿಯಲ್ಲಿ ಪ್ರಥಮ ಸ್ಥಾನದಲ್ಲಿದೆ.

ಟಾಪ್ ಐದರ ಸ್ಥಾನದಲ್ಲಿರುವ ಕಾಲೇಜುಗಳು

ವೈದ್ಯಕೀಯ ಕಾಲೇಜು ವಿಭಾಗದಲ್ಲಿ ನವದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಚಂಡೀಗಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ವೆಲ್ಲೂರಿನ ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜು, ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್(ನಿಮ್ಹಾನ್ಸ್‌) , ಪುದುಚೇರಿಯ ಜವಾಹರಲಾಲ್ ಇನ್ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್ ಕ್ರಮವಾಗಿ ಸ್ಥಾನ ಪಡೆದಿವೆ.


ದಂತ ಕಾಲೇಜು ವಿಭಾಗದಲ್ಲಿ ಚೆನ್ನೈನ ಸವೀತಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಅಂಡ್ ಟೆಕ್ನಿಕಲ್ ಸೈನ್ಸಸ್, ಮಣಿಪಾಲದ ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್, ನವದೆಹಲಿಯ ಮೌಲಾನಾ ಆಜಾದ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್, ಲಕ್ನೋದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯಗಳು, ಪುಣೆಯ ಡಾ. ಡಿ.ವೈ. ಪಾಟೀಲ್ ವಿದ್ಯಾಪೀಠ ಕ್ರಮವಾಗಿ ಸ್ಥಾನ ಪಡೆದಿವೆ.

NIRF 2024 Rank
NIRF 2024 Rank


ಫಾರ್ಮಸಿ ವಿಭಾಗದಲ್ಲಿ ಯಾವ ಕಾಲೇಜು?

ಹತ್ತು ಅತ್ಯುತ್ತಮ ಔಷಧಾಲಯ ವಿಭಾಗದಲ್ಲಿ ನವದೆಹಲಿಯ ಜಾಮಿಯಾ ಹಮ್ದರ್ದ್, ಹೈದರಾಬಾದ್‌ನ
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಎಜುಕೇಶನ್ ಅಂಡ್ ರಿಸರ್ಚ್, ಪಿಲಾನಿಯ
ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್, ಊಟಿಯ ಜೆಎಸ್ಎಸ್ ಕಾಲೇಜ್ ಆಫ್ ಫಾರ್ಮಸಿ, ಮುಂಬಯಿ ನ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ, ಮೈಸೂರಿನ ಜೆಎಸ್‌ಎಸ್ ಕಾಲೇಜ್ ಆಫ್ ಫಾರ್ಮಸಿ, ಚಂಡೀಗಢದ ಪಂಜಾಬ್ ವಿಶ್ವವಿದ್ಯಾಲಯ, ಮಣಿಪಾಲದ ಮಣಿಪಾಲ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್, ಮೊಹಾಲಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಎಜುಕೇಶನ್ ಅಂಡ್ ರಿಸರ್ಚ್, ಮುಂಬಯಿನ ಎಸ್‌ವಿಕೆಎಂನ ನರ್ಸೀ ಮೊಂಜಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಸ್ಥಾನ ಪಡೆದಿದೆ.

ಎನ್‌ಐಆರ್‌ಎಫ್ ಶ್ರೇಯಾಂಕ ಎಂದರೇನು?

ಎನ್‌ಐಆರ್‌ಎಫ್ ಅನ್ನು ಎಂಎಚ್‌ಆರ್‌ಡಿ ಅನುಮೋದಿಸಿದ್ದು, 2015ರ ಸೆಪ್ಟೆಂಬರ್ 29ರಲ್ಲಿ ಇದನ್ನು ಮೊದಲ ಬಾರಿಗೆ ಬಿಡುಗಡೆ ಮಾಡಲಾಗಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು ಇದನ್ನು ಪ್ರಾರಂಭಿಸಿದರು. ಇದು ದೇಶಾದ್ಯಂತ ಇರುವ ಶಿಕ್ಷಣ ಸಂಸ್ಥೆಗಳಿಗೆ ಶ್ರೇಯಾಂಕ ನೀಡುತ್ತದೆ.

ಇದನ್ನೂ ಓದಿ: NIRF 2024 Rank: ದೇಶದಲ್ಲೇ ಮದ್ರಾಸ್ ಐಐಟಿ ಬೆಸ್ಟ್; ಬೆಂಗಳೂರಿನ ಐಐಎಸ್‌ಸಿ ನೆಕ್ಸ್ಟ್;‌ ಇಲ್ಲಿದೆ ಪೂರ್ಣ ಪಟ್ಟಿ

ವಿಶ್ವವಿದ್ಯಾನಿಲಯ, ಕಾಲೇಜು, ಸಂಶೋಧನಾ ಸಂಸ್ಥೆ, ಎಂಜಿನಿಯರಿಂಗ್, ನಿರ್ವಹಣೆ, ಔಷಧಾಲಯ, ವೈದ್ಯಕೀಯ, ದಂತ ವೈದ್ಯಕೀಯ, ಕಾನೂನು, ವಾಸ್ತುಶಿಲ್ಪ ಮತ್ತು ಯೋಜನೆ, ಕೃಷಿ ಮತ್ತು ಸಂಬಂಧಿತ ವಲಯಗಳು, ನಾವೀನ್ಯತೆ, ರಾಜ್ಯ ವಿಶ್ವವಿದ್ಯಾಲಯ, ಕೌಶಲ್ಯ ವಿಶ್ವವಿದ್ಯಾಲಯ ಮತ್ತು ಮುಕ್ತ ವಿಶ್ವವಿದ್ಯಾಲಯ ಸೇರಿದಂತೆ ಒಟ್ಟು 16 ವಿವಿಧ ವಿಭಾಗಗಳಿಗೆ ಶ್ರೇಯಾಂಕಗಳನ್ನು ಇದರಲ್ಲಿ ಬಿಡುಗಡೆ ಮಾಡಲಾಗಿದೆ. ಬೋಧನೆ, ಕಲಿಕೆ, ಮತ್ತು ಸಂಪನ್ಮೂಲಗಳು, ಹಾಗೆಯೇ ಸಂಶೋಧನೆ ಮತ್ತು ವೃತ್ತಿಪರ ಅಭ್ಯಾಸ ಮತ್ತು ಪದವಿ ಫಲಿತಾಂಶಗಳ ಆಧಾರದಲ್ಲಿ ಈ ಶ್ರೇಯಾಂಕ ನೀಡಲಾಗಿದೆ.

Continue Reading

ಕರ್ನಾಟಕ

Tungabhadra Dam: ತುಂಗಭದ್ರಾ ಜಲಾಶಯಕ್ಕೆ ಸಮಾನಾಂತರ ಜಲಾಶಯ ನಿರ್ಮಿಸಲು ಬೊಮ್ಮಾಯಿ ಆಗ್ರಹ

Tungabhadra Dam: ಮುನಿರಾಬಾದ್ ಬಳಿಯಿರುವ ತುಂಗಭದ್ರಾ ಜಲಾಶಯಕ್ಕೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ, ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾ‌ರ್, ಈ ಘಟನೆಗೆ ಯಾರೂ ಹೊಣೆಯಲ್ಲ ಎಂದು ಹೇಳಿರುವುದನ್ನು ನಾನು ಒಪ್ಪುವುದಿಲ್ಲ. ಇದರಲ್ಲಿ ಲೋಪ ಇದೆ. ಅದು ಯಾರಿಂದ ಆಗಿದೆ ಎನ್ನುವುದನ್ನು ತಿಳಿಯಲು ತನಿಖೆ ಮಾಡಬೇಕು ಎಂದು ತಿಳಿಸಿದ್ದಾರೆ.

VISTARANEWS.COM


on

Tungabhadra Dam
Koo

ವಿಜಯನಗರ/ಮುನಿರಾಬಾದ್: ತುಂಗಭದ್ರಾ ಡ್ಯಾಮ್‌ನ ಕ್ರಸ್ಟ್ ಗೇಟ್‌ನ ಚೈನ್ ಕತ್ತರಿಸಿ ನೀರು ಹರಿದು ಪೋಲಾಗಿರುವುದರಿಂದ ರಾಜ್ಯ ಸರ್ಕಾರವು ತುಂಗಭದ್ರಾ ಜಲಾಶಯಕ್ಕೆ (Tungabhadra Dam) ಸಮಾನಾಂತರ ಜಲಾಶಯ ನಿರ್ಮಾಣ ಮಾಡಲು ಚಾಲನೆ ಕೊಡಲು ಇದು ಸೂಕ್ತ ಸಮಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರೊಂದಿಗೆ ಇಂದು ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಇದನ್ನೂ ಓದಿ: KSET Updates: ಕೆಸೆಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದವರಿಗೆ ಆ.17ಕ್ಕೆ ದಾಖಲೆ ಪರಿಶೀಲನೆ

ತುಂಗಭದ್ರಾ ಜಲಾಶಯಕ್ಕೆ ಸಮಾನಾಂತರ ಜಲಾಶಯ ನಿರ್ಮಾಣ ಮಾಡಲು ಚಾಲನೆ ಕೊಡಲು ಇದು ಒಳ್ಳೆಯ ಕಾರಣ ಮತ್ತು ಸಮಯ. ಈಗಾಗಲೇ ಡಿಪಿಆರ್ ಸಿದ್ಧವಾಗಿದೆ. ಅದನ್ನು ಆಂಧ್ರಪ್ರದೇಶ ಸರ್ಕಾರದ ಜತೆಗೆ ಹಂಚಿಕೊಂಡಿದ್ದೇವೆ. ಹಿಂದಿನ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಆರ್. ಜಗನಮೋಹನ್ ರೆಡ್ಡಿ ಅವರೊಂದಿಗೆ ಚರ್ಚೆ ನಡೆಸಿದ್ದೇವು. ಅವರು ತಾಂತ್ರಿಕ ತಂಡ ಕಳುಹಿಸಿಕೊಟ್ಟಿದ್ದರು. ತಾಂತ್ರಿಕವಾಗಿ ಒಪ್ಪಿಗೆಯೂ ಆಗಿತ್ತು. ರಾಜಕೀಯ ತೀರ್ಮಾನ ಮಾಡುವುದು ಬಾಕಿ ಉಳಿದಿತ್ತು. ರಾಜ್ಯದ ಕಾಂಗ್ರೆಸ್ ಸರ್ಕಾರ ಕಳೆದ ಒಂದೂವರೆ ವರ್ಷದಿಂದ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಮುಖ್ಯಮಂತ್ರಿಗಳು ಈಗಿನ ಆಂಧ್ರಪ್ರದೇಶ ಹಾಗೂ ತೆಲಂಗಾಣ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಮುಂದಾಗಬೇಕು. ಇದರಿಂದ 28 ಟಿಎಂಸಿ ನೀರು ಉಳಿತಾಯವಾಗಲಿದೆ ಎಂದು ಹೇಳಿದರು.

ತುಂಗಭದ್ರಾ ಕಲ್ಯಾಣ ಕರ್ನಾಟಕದ ಜೀವನಾಡಿ, ನಮ್ಮ ಕರ್ನಾಟಕದ ಒಟ್ಟು ಕೃಷಿ ಆದಾಯದಲ್ಲಿ ಶೇ. 40% ಕ್ಕಿಂತ ಹೆಚ್ಚು ಆದಾಯ ತುಂಗಭದ್ರಾ ಡ್ಯಾಮ್ ಪ್ರದೇಶದಿಂದ ಬರುತ್ತದೆ. ಮೂರು ರಾಜ್ಯಗಳು ಇದರ ಪಾಲು ಪಡೆಯುತ್ತವೆ. ಸುಮಾರು 20 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. ತುಂಗಭದ್ರಾ ಡ್ಯಾಮ್‌ನಲ್ಲಿ ಹೂಳು ತುಂಬಿರುವುದರಿಂದ ಸಂಕಷ್ಟ ಬಂದಿದೆ‌. ಇದರಿಂದ ಸುಮಾರು ಮೂವತ್ತು ಟಿಎಂಸಿ ನೀರಿನಷ್ಟು ಹೂಳು ತುಂಬಿದೆ. ಇವತ್ತಿನ ಘಟನೆ ಮುಂದಿನ ಘಟನೆಗಳಿಗೆ ಆತಂಕ ಹುಟ್ಟಿಸುವ ಘಟನೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಅಧಿಕಾರಿಗಳು ಗೇಟನ್ನು ಪ್ಯಾಬ್ರಿಕೆಟ್ ಮಾಡುತ್ತೇವೆ ಅಂತ ಹೇಳುತ್ತಾರೆ. ಅಷ್ಡೇ ಅಲ್ಲ. ನೀರು ಶಕ್ತಿ ಮೀರಿ ಬರುತ್ತದೆ‌. ಓವರ್ ಲೋಡ್ ಅನಾಹುತಕ್ಕೆ ಕಾರಣವಾಗಿದೆ.

ಇದರಲ್ಲಿ ಎರಡು ಸಮಸ್ಯೆ ಇದೆ. ಮುಂಗಾರು ಪೂರ್ವ ನಿರ್ವಹಣೆ ಸಮಸ್ಯೆಯಾಗಿದೆ. ಇದು ವರ್ಟಿಕಲ್ ಗೇಟ್, ಈ ಗೇಟನ್ನು ಆಪರೇಟ್ ಮಾಡುವಾಗ ಆಗುವ ಲೀಕೇಜ್ ಎಲಿಮೆಂಟ್ ಬಹಳ ಮುಖ್ಯ. ಒಂದು ಬೇರಿಂಗ್ ಹೋದರೂ ಕೂಡ ಗೇಟ್ ಕಿತ್ತು ಹೋಗುತ್ತದೆ. ಎಲ್ಲಿ ಗೇಟಿಗೆ ಸಂಪರ್ಕ ಕಲ್ಪಿಸಬೇಕಿತ್ತೊ ಅದೇ ಲಿಂಕ್ ಕಿತ್ತು ಹೋಗಿದೆ. ಇದು ನಿಷ್ಕ್ರೀಯ ಲಿಂಕ್ ಇದೆ. ಹೀಗಾಗಿ ಅದು ಕಿತ್ತು ಹೋಗಿದೆ. ಇದಕ್ಕೆ ಯಾರೂ ಕಾರಣ ಅಲ್ಲ ಅಂತ ಹೇಳುವುದನ್ನು ನಾನು ಒಪ್ಪುವುದಿಲ್ಲ. ಅಧಿಕಾರಿಗಳು, ಸರ್ಕಾರವೂ ಕಾರಣ ಅಲ್ಲ ಆಂದರೆ ಹೇಗೆ? ಇಷ್ಟು ದಿನ ಆಗದಿರುವುದು ಈಗ ಏಕೆ ಆಯಿತು. ನೀರು ಎಷ್ಟು ಬಿಡಬೇಕು, ಎಷ್ಟು ಹಿಡಿದಿಟ್ಟುಕೊಳ್ಳಬೇಕೊ ಅದನ್ನು ನೋಡಿಕೊಳ್ಳಲು ನೀರು ನಿರ್ವಹಣೆ ತುಂಗಭದ್ರ ಬೊರ್ಡ್ ಇದೆ. ಅದು ಸರಿಯಾಗಿ ನೋಡಿಕೊಳ್ಳಬೇಕು. ಡ್ಯಾಮ್‌ನ ಗೇಟುಗಳನ್ನು ಹಂಚಿಕೊಂಡಿದ್ದಾರೆ. 0-16 ಆಂಧ್ರದ್ದು, ಆ ನಂತರದ್ದು ಕರ್ನಾಟಕದ್ದು, ಇಬ್ಬರು ಮುಖ್ಯ ಎಂಜನೀಯರ್ ಇದ್ದಾರೆ. 19ನೇ ಗೇಟು ಕರ್ನಾಟಕದ ವ್ಯಾಪ್ತಿಗೆ ಬರುತ್ತದೆ. ಕರ್ನಾಟಕದ ಎಂಜನೀಯರ್ಗಳ ಜವಾಬ್ದಾರಿ ಹೆಚ್ಚಿದೆ. ಇದನ್ನು ಎಂಜನಿಯರು ಸರಿಯಾಗಿ ನಿರ್ವಹಣೆ ಮಾಡಿಲ್ಲ. ಎಲ್ಲ ಗೇಟುಗಳನ್ನು ಪರಿಶೀಲನೆ ಮಾಡಬೇಕಿದೆ. ಈಗ ನೀರಿನ ಪ್ರಮಾಣ ಕಡಿಮೆ ಇದೆ. ನೀರು ಹೆಚ್ಚಾದಾಗ ಮತ್ತೆ ಏನು ಸಮಸ್ಯೆಯಾಗುತ್ತದೊ ಗೊತ್ತಿಲ್ಲ. ನೀರಿನ ನಿರ್ವಹಣೆಗೆ ಹೊಸ ಮಾನದಂಡ ನಿರ್ಧರಿಸಬೇಕು. ಈ ವರ್ಟಿಕಲ್ ಗೇಟ್‌ಗೆ ಬೇಕಾದ ಸಾಧನಗಳ ಬಗ್ಗೆ ಪರಿಶೀಲನೆ ಮಾಡಿ ತನಿಖೆ ಮಾಡಬೇಕು. ಆಗ ಎಲ್ಲಿ ವೈಫ್ಯಲ ಆಗಿದೆ ಎನ್ನುವುದು ಗೊತ್ತಾಗುತ್ತದೆ ಎಂದರು.

ಸರ್ಕಾರದವರು ಮೂರು ನಾಲ್ಕು ದಿನಗಳಲ್ಲಿ ಸರಿಪಡಿಸುವುದಾಗಿ ಹೇಳುತ್ತಾರೆ. ಅಖಂಡ ಗೇಟ್ ಇರುವಾಗ ಈ ಸಮಸ್ಯೆ ಆಗಿದೆ. ಫ್ಯಾಬ್ರಿಕೇಟ್ ಹಾಕಿದರೆ ಏನಾಗುತ್ತದೊ ಗೊತ್ತಿಲ್ಲ. ಎಚ್ಚರಿಕೆಯಿಂದ ಮಾಡುವಂತೆ ಸಲಹೆ ನೀಡಿದ್ದೇವೆ.

ಇದನ್ನೂ ಓದಿ: Karnataka Weather : ಗದ್ದೆಯಲ್ಲಿ ನಾಟಿ ಮಾಡುತ್ತಿದ್ದಾಗಲೇ ಬಡಿದ ಸಿಡಿಲು; 15 ಮಂದಿ ಆಸ್ಪತ್ರೆ ಪಾಲು

ಇನ್ನೊಂದು ಸಮಸ್ಯೆ ಇವತ್ತು ನೀರನ್ನು ಉಳಿತಾಯ ಮಾಡಬೇಕು. ನೀರು ಹರಿವು ಇಟ್ಟುಕೊಂಡೆ ಈ ಗೇಟನ್ನು ನಾವು ಫ್ಯಾಬ್ರಿಕೆಟ್ ಮಾಡಿ ಜೋಡಿಸುತ್ತೇವೆ ಎನ್ನುವುದು ಸ್ವಾಭಾವಿಕ. ಇದನ್ನು ಮಾಡುವಾಗ ಎಲ್ಲ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಫ್ಯಾಬ್ರಿಕೆಶನ್ ಕೆಳಗಿಳಿಸಿ ಮತ್ತೆ ಜೋಡಿಸುವುದು ಬಹಳ ಮುಖ್ಯ, ಅದಕ್ಕೆ ಕ್ರೇನ್ ವ್ಯವಸ್ಥೆ ಇರಬೇಕು. ಇದಕ್ಕೆ ಲಿಫ್ಟ್ ಮಾದರಿಯಲ್ಲಿ ಕೌಂಟರ್ ವೇಟ್ ಇರಬೇಕು. ಇವೆಲ್ಲವನ್ನು ಎಚ್ಚರಿಕೆಯಿಂದ ಮಾಡಬೇಕು ಎಂದು ಸಲಹೆ ನೀಡಿದ್ದೇವೆ. ಇವರು ಕ್ರೇನ್ ಮೂಲಕ ಮಾಡುತ್ತಿರುವುದಾಗಿ ಹೇಳಿದ್ದಾರೆ. ಕೆಆ‌ರ್‌ಎಸ್‌ನಲ್ಲಿ ಇದೇ ರೀತಿ ಸಮಸ್ಯೆಯಾದಾಗ ನಾವು 16 ಗೇಟ್‌ಗಳನ್ನು ಆಳವಡಿಸಬೇಕಾಗಿತ್ತು. ಆಗ ಗೇಟ್ ಒಡೆದಿರಲಿಲ್ಲ. ಸೋರಿಕೆಯಾಗಿತ್ತು. ಆಗ ಇದೇ ನಾರಾಯಣ ಸಂಸ್ಥೆಯವರು ಮಾಡಿದ್ದರು. ಆ ಸಂದರ್ಭದಲ್ಲಿ ದೊಡ್ಡ ಸವಾಲಾಗಿತ್ತು. 2005 ರಲ್ಲಿ ಖರ್ಗೆಯವರು ನೀರಾವರಿ ಸಚಿವರಾಗಿದ್ದಾಗ ನಾರಾಯಣ ಸಂಸ್ಥೆಯವರು ನಾರಾಯಣಪುರ ಡ್ಯಾಮ್ ಗೇಟ್ ಅಳವಡಿಸುತ್ತಿದ್ದರು. ಆಗ ಅವರನ್ನು ಬಳಸಿಕೊಂಡು ಗೇಟ್ ಸರಿಪಡಿಲಾಗಿತ್ತು ಎಂದು ಹೇಳಿದರು.

ತಜ್ಞರ ತಂಡ ರಚಿಸಿ

ನೀರಿನ ನಿರ್ವಹಣೆಯನ್ನು ಸರಿಯಾಗಿ ಮಾಡದಿರುವ ಬಗ್ಗೆ ಸರಿಯಾದ ತನಿಖೆಯಾಗಬೇಕು. ಡ್ಯಾಂ ಸುರಕ್ಷತಾ ನಿರ್ವಹಣಾ ಸಮಿತಿ ನೀಡಿರುವ ಸಲಹೆಗಳನ್ನು ಸರಿಯಾಗಿ ಪಾಲಿಸಿಲ್ಲ. ಡ್ಯಾಮ್‌ಗಳ ನಿರ್ವಹಣೆಗೆ ವಿಶ್ವ ಬ್ಯಾಂಕ್ ಹಣ ಕೊಡುತ್ತದೆ. ಆ ಹಣವನ್ನು ಸಂಪೂರ್ಣ ಬಳಕೆ ಮಾಡಿ, ಎಲ್ಲ ಗೇಟ್‌ಗಳನ್ನು ಪರಿಶೀಲನೆ ಮಾಡಿ ಯಾವುದು ಬದಲಾವಣೆ ಮಾಡಬೇಕೊ ಅದನ್ನು ಬದಲಾಯಿಸಬೇಕು. ರಾಜ್ಯದ ಬಹುತೇಕ ಆಣೆಕಟ್ಟೆಗಳು ಐವತ್ತು ವರ್ಷ ಪೂರೈಸಿವೆ. ಬಹಳಷ್ಟು ಡ್ಯಾಮ್‌ಗಳಿಗೆ ಸ್ಟ್ರಾಪ್‌ಪ್ಲಗ್ ಗೇಟ್‌ಗಳು ಇಲ್ಲ. ಸ್ಟಾಪ್ ಪ್ಲಗ್ ಗೇಟ್‌ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು. ಅಲ್ಲದೇ ಡ್ಯಾಮ್‌ಗಳ ಸುರಕ್ಷತೆಯ ಒಂದು ವಿಶೇಷ ತಜ್ಞರ ತಂಡ ರಚನೆ ಮಾಡಿ, ಕೇಂದ್ರದ ಮಾದರಿಯಲ್ಲಿ ಈ ತಂಡ ಡ್ಯಾಮ್‌ಗಳ ಸುರಕ್ಷತೆಯ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡಬೇಕು. ಈ ಕೆಲಸವನು ಎಲ್ಲರೂ ಸೇರಿ ಮಾಡೋಣ ಎಂದರು.

ರೈತರಿಗೆ ಪರಿಹಾರ ಕೊಡಿ

ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾ‌ರ್ ಅವರು ಈ ಘಟನೆಗೆ ಯಾರೂ ಹೊಣೆಯಲ್ಲ ಎಂದು ಹೇಳಿರುವುದನ್ನು ನಾನು ಒಪ್ಪುವುದಿಲ್ಲ. ಇದರಲ್ಲಿ ಲೋಪ ಇದೆ. ಅದು ಯಾರಿಂದ ಆಗಿದೆ ಎನ್ನುವುದನ್ನು ತಿಳಿಯಲು ತನಿಖೆ ಮಾಡಬೇಕು. ಆಗ ಮಾತ್ರ ಸರ್ಕಾರದ ಮೇಲೆ ನಂಬಿಕೆ ಬರುತ್ತದೆ.

ನಮಗೆ 115 ಟಿಎಂಸಿ ನೀರು ಬೇಕು. ಈಗಾಗಲೇ 20 ಟಿಎಂಸಿ ನೀರು ಹರಿದು ಹೋಗಿದೆ. ಇನ್ನೂ ಮಳೆಯಿಂದ ಸುಮಾರು 40 ಟಿಎಂಸಿ ನೀರು ಬರುವ ನಿರೀಕ್ಷೆ ಇದೆ. ಆದರೆ ಅದು ಪ್ರಕೃತಿ ಮೇಲೆ ನಿರ್ಧಾರ ಆಗುತ್ತದೆ. ಈಗಿರುವ ಪರಿಸ್ಥಿತಿಯಲ್ಲಿ ಎರಡನೇ ಬೆಳೆ ಬೆಳೆಯುವುದು ಕಷ್ಟವಾಗಲಿದ್ದು, ರಾಜ್ಯ ಸರ್ಕಾರ ಕೂಡಲೇ ರೈತರಿಗೆ ಪ್ರತಿ ಹೆಕ್ಟೇರ್‌ಗೆ 50 ಸಾವಿರ ರೂ. ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪ್ರವಾಹ ಬಂದಾಗ ನಾವು ನೀರಾವರಿ ಬೆಳೆಗೆ ಪ್ರತಿ ಹೆಕ್ಟೇರ್‌ಗೆ 13500 ರೂ. ನೀಡಿದ್ದೇವು. ಈಗ ರಾಜ್ಯ ಸರ್ಕಾರ ನಷ್ಟವನ್ನು ಪರಿಶೀಲಿಸಿ ಪತಿ ಹೆಕ್ಟೇರ್‌ಗೆ 50 ಸಾವಿರ ರೂ.ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: NIRF 2024 Rank: ದೇಶದಲ್ಲೇ ಮದ್ರಾಸ್ ಐಐಟಿ ಬೆಸ್ಟ್; ಬೆಂಗಳೂರಿನ ಐಐಎಸ್‌ಸಿ ನೆಕ್ಸ್ಟ್;‌ ಇಲ್ಲಿದೆ ಪೂರ್ಣ ಪಟ್ಟಿ

ಈ ವೇಳೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಹಾಜರಿದ್ದರು.

Continue Reading

ವಾಣಿಜ್ಯ

Rent Agreement: ಬಾಡಿಗೆ ಒಪ್ಪಂದ 11 ತಿಂಗಳ ಅವಧಿಗೆ ಮಾತ್ರ ಯಾಕೆ ಅನ್ನೋದು ಗೊತ್ತಾ?

ಉದ್ಯೋಗ, ಆಶ್ರಯ ಬಯಸಿ ಒಂದೂರಿನಿಂದ ಇನ್ನೊಂದು ಊರಿಗೆ ಹೋಗುವವರು ತಮ್ಮ ಹೊಸ ಬದುಕನ್ನು ಬಾಡಿಗೆ ಮನೆಯಿಂದಲೇ ಆರಂಭಿಸುತ್ತಾರೆ. ಅದು ಚಿಕ್ಕದಾಗಿದ್ದರೂ ಸರಿ ಚೆನ್ನಾಗಿರಬೇಕು, ಅಗತ್ಯ ಸೌಕರ್ಯಗಳಿರಬೇಕು ಎಂದು ಬಯಸುತ್ತಾರೆ. ಬಾಡಿಗೆ ಒಪ್ಪಂದದ ಬಗ್ಗೆ ಹೆಚ್ಚಿನವರು ಯೋಚಿಸುವುದಿಲ್ಲ. ಮನೆ ಮಾಲೀಕ ಹೇಳುವ ಬಜೆಟ್ ಸೂಕ್ತ ಎನಿಸಿದರೆ ಒಪ್ಪಂದ ಪತ್ರಕ್ಕೆ ಸಹಿ ಹಾಕುತ್ತಾರೆ. ಈ ಬಾಡಿಗೆ ಒಪ್ಪಂದವನ್ನು (Rent Agreement) ಕೇವಲ 11 ತಿಂಗಳ ಅವಧಿಗೆ ಮಾತ್ರ ಮಾಡಲಾಗುತ್ತದೆ. ಇದು ಯಾಕೆ ಎಂದು ಎಂದಾದರೂ ಯೋಚಿಸಿದ್ದೀರಾ? ಅದಕ್ಕೆ ಇಲ್ಲಿದೆ ಉತ್ತರ.

VISTARANEWS.COM


on

By

Rent Agreement
Koo

ಮನೆ, ಅಂಗಡಿ, ಕಚೇರಿ ಬಾಡಿಗೆ ಒಪ್ಪಂದ ಪತ್ರಗಳನ್ನು (Tenancy agreement letter) ಎಂದಾದರೂ ಗಮನಿಸಿದ್ದೀರಾ? ಬಾಡಿಗೆ ಒಪ್ಪಂದವನ್ನು (Rent Agreement) ಕೇವಲ 11 ತಿಂಗಳ ಅವಧಿಗೆ ಮಾತ್ರ ಮಾಡಲಾಗುತ್ತದೆ. ಇದು ಯಾಕೆ ಎಂದು ಎಂದಾದರೂ ಯೋಚಿಸಿದ್ದೀರಾ? ಬಾಡಿಗೆ ಒಪ್ಪಂದ ಪತ್ರ ಓದಿರುವವರು ಇದು ಕಾನೂನಿನ ನಿಯಮ (rule of law) ಅಂದುಕೊಂಡು ಸುಮ್ಮನೆ ಸಹಿ ಮಾಡಿರುತ್ತಾರೆ. ಇಲ್ಲದವರು ಇದರ ಬಗ್ಗೆ ಯೋಚಿಸಲು ಹೋಗಿರಲಿಕ್ಕಿಲ್ಲ. ನಾವು ಇರಬೇಕಾದ ಸ್ಥಳ ಚೆನ್ನಾಗಿದೆ, ಎಲ್ಲ ಸವಲತ್ತು ಇದೆ, ಕಾನೂನು ಕಟ್ಟಳೆ ಏನೇ ಇದ್ದರೂ ಅದನ್ನು ಮಾಲೀಕರು ನೋಡಿಕೊಳ್ಳುತ್ತಾರೆ ಎಂದುಕೊಂಡು ಅದರ ಚಿಂತೆಗೆ ಹೋಗುವುದಿಲ್ಲ.

ಬಾಡಿಗೆ ಒಪ್ಪಂದ ಎಂದರೇನು?

ಬಾಡಿಗೆ ಒಪ್ಪಂದವು ನಿರ್ದಿಷ್ಟಪಡಿಸಿದ ನಿಯಮಗಳು ಮತ್ತು ಷರತ್ತುಗಳನ್ನು ಒಳಗೊಂಡಿರುವ ದಾಖಲೆಯಾಗಿದೆ. ಆಸ್ತಿಯನ್ನು ಬಾಡಿಗೆಗೆ ನೀಡುವಾಗ ಆಸ್ತಿ ಮಾಲೀಕರಿಗೆ ಇರುವ ಅಧಿಕಾರವನ್ನು ಇದು ವ್ಯಾಖ್ಯಾನಿಸುತ್ತದೆ ಹಾಗೂ ಆಸ್ತಿ ಮಾಲೀಕ ಮತ್ತು ಬಾಡಿಗೆದಾರರಿಗೆ ಇರುವ ಸಂಬಂಧ, ಎರಡೂ ಕಡೆಯವರಿಗೆ ಇರುವ ಕಟ್ಟುಪಾಡುಗಳನ್ನು ಇದು ಉಲ್ಲೇಖಿಸುತ್ತದೆ.


ಬಾಡಿಗೆ ಒಪ್ಪಂದವು ಕೇವಲ 11 ತಿಂಗಳದ್ದಾಗಿರುತ್ತದೆ. 11 ತಿಂಗಳ ಬಳಿಕ ಅದನ್ನು ಮತ್ತೆ ನವೀಕರಿಸುವುದು ಮುಖ್ಯವಾಗಿರುತ್ತದೆ. ಇದಕ್ಕೆ ಮುಖ್ಯ ಕಾರಣ ಇದು ಕಾನೂನು ಸಂಬಂಧವನ್ನು ಹೊಂದಿದೆ. ಆಸ್ತಿ ಮಾಲೀಕರು ಮತ್ತು ಬಾಡಿಗೆದಾರರ ನಡುವೆ ಜವಾಬ್ದಾರಿಗಳನ್ನು ಕಾನೂನು ನಿರ್ಧರಿಸುತ್ತದೆ. ಇದರಲ್ಲಿ ಬಾಡಿಗೆದಾರ ಮತ್ತು ಆಸ್ತಿ ಮಾಲೀಕರಿಗೆ ಇರುವ ಕಾನೂನು ನಿಯಮಗಳನ್ನು ಉಲ್ಲೇಖಿಸಲಾಗುತ್ತದೆ. ಇದರಲ್ಲಿ ಆಸ್ತಿಯ ಬಾಡಿಗೆ, ನಿರ್ವಹಣೆ, ಭದ್ರತೆ ಇತ್ಯಾದಿಗಳ ಷರತ್ತುಗಳ ಮೇಲೆ ಎರಡು ಪಕ್ಷದವರಿಗೂ ಜವಾಬ್ದಾರಿ ಹಂಚಿಕೆ ಮಾಡಲಾಗುತ್ತದೆ.

ಭೂಮಾಲೀಕರು ಮತ್ತು ಹಿಡುವಳಿದಾರರು ಈ ನಿಯಮಗಳು ಮತ್ತು ಷರತ್ತುಗಳ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಂಡು ಅನುಸರಿಸುವುದನ್ನು ಬಾಡಿಗೆ ಒಪ್ಪಂದವು ಖಚಿತಪಡಿಸುತ್ತದೆ. ಬಾಡಿಗೆ ಒಪ್ಪಂದವು ಕೆಲವೊಂದು ಸಂದರ್ಭದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಎರಡೂ ಪಕ್ಷಗಳ ನಡುವೆ ವಿವಾದ ಉಂಟಾದರೆ ಅದನ್ನು ಸುಲಭವಾಗಿ ಕಾನೂನಿನ ರೂಪದಲ್ಲಿ ಪ್ರಸ್ತುತಪಡಿಸಿ ತ್ವರಿತ ಪರಿಹಾರವನ್ನು ಪಡೆಯಲು ಇದು ಸಹಾಯ ಮಾಡುತ್ತದೆ.

11 ತಿಂಗಳ ಬಾಡಿಗೆ ಒಪ್ಪಂದವು ನ್ಯಾಯಾಲಯದಲ್ಲಿ ಕಾನೂನುಬದ್ಧವಾಗಿ ಮಾನ್ಯವಾಗಿದೆ ಮತ್ತು ಯಾವುದೇ ವಿವಾದಗಳ ಸಂದರ್ಭದಲ್ಲಿ ಅದನ್ನು ಪುರಾವೆಯಾಗಿ ಪರಿಗಣಿಸಬಹುದು.


ನಿಯಮಗಳು ಏನು?

100 ರೂ.ಯ ಸ್ಟ್ಯಾಂಪ್ ಡ್ಯೂಟಿ ಪೇಪರ್‌ನಲ್ಲಿ ಬರೆದಿರುವ ನಿಯಮಗಳನ್ನು ಓದಿ ಬಾಡಿಗೆದಾರರು ಮತ್ತು ಜಮೀನುದಾರರು ಅದರಲ್ಲಿ ಸಹಿ ಮಾಡಬೇಕು. ಜೊತೆಗೆ ಒಪ್ಪಂದಕ್ಕೆ ಇಬ್ಬರು ಸಾಕ್ಷಿಗಳಿರಬೇಕು. ಗುರುತು ಪತ್ರ, ಬಾಡಿಗೆ ಒಪ್ಪಂದವನ್ನು ಮಾನ್ಯ ಮಾಡಲು ಅವರ ಸಹಿಗಳು ಅಗತ್ಯವಿದೆ. 11 ತಿಂಗಳ ಬಾಡಿಗೆ ಒಪ್ಪಂದವನ್ನು ಕಾನೂನು ಪ್ರಕಾರ ಮುಕ್ತಾಯ ದಿನಾಂಕದ ಮೊದಲ 30 ದಿನಗಳಲ್ಲಿ ನವೀಕರಿಸಬೇಕಾಗಿದೆ.

11 ತಿಂಗಳ ಬಾಡಿಗೆ ಒಪ್ಪಂದಕ್ಕೆ ನೋಟರಿ ನೋಂದಣಿ ಮುಖ್ಯವಲ್ಲ. ಆದರೆ ಬಾಡಿಗೆ 11 ತಿಂಗಳುಗಳಿಗಿಂತ ಹೆಚ್ಚಿನ ಅವಧಿಯ ಒಪ್ಪಂದವಾಗಿದ್ದರೆ ಜಮೀನುದಾರ ಮತ್ತು ಹಿಡುವಳಿದಾರರ ಅಥವಾ ಮಾಲೀಕರು ಮತ್ತು ಬಾಡಿಗೆದಾರರ ಸಮ್ಮುಖದಲ್ಲಿ ಹತ್ತಿರದ ಉಪ-ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಲೇಬೇಕು.

ಬಾಡಿಗೆ ಒಪ್ಪಂದ 11 ತಿಂಗಳುಗಳ ಕಾಲ ಏಕೆ?

ಕೇವಲ 11 ತಿಂಗಳ ಬಾಡಿಗೆ ಒಪ್ಪಂದವನ್ನು ರಚಿಸಲು ಪ್ರಮುಖ ಕಾರಣಗಳಿವೆ. ಇದಕ್ಕೆ ಯಾವುದೇ ನೋಂದಣಿ ಅಗತ್ಯವಿಲ್ಲ. ನೋಂದಣಿ ಕಾಯಿದೆ 1908ರ ಪ್ರಕಾರ ಉಪ-ವಿಭಾಗ (1) ನ ಷರತ್ತು (ಡಿ) ಅಡಿಯಲ್ಲಿ ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಬಾಡಿಗೆ ಒಪ್ಪಂದದ ನೋಂದಣಿ ಕಡ್ಡಾಯವಾಗಿದೆ. ಬಾಡಿಗೆ ನಿಯಂತ್ರಣ ಕಾಯಿದೆ ಅಡಿಯಲ್ಲಿ, ಒಳಗೊಂಡಿರುವ ಪಕ್ಷಗಳು ಯಾವುದೇ ಹೆಚ್ಚುವರಿ ಶುಲ್ಕಗಳನ್ನು ಪಾವತಿಸಬೇಕಾಗಿಲ್ಲ. 11 ತಿಂಗಳ ಬಾಡಿಗೆ ಒಪ್ಪಂದವನ್ನು ರಚಿಸಲು ಯಾವುದೇ ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕಗಳನ್ನು ಪಾವತಿಸಬೇಕಿಲ್ಲ.

100 ರೂಪಾಯಿಯ ಸ್ಟ್ಯಾಂಪ್ ಡ್ಯೂಟಿ ಪೇಪರ್ ಅನ್ನು ಬಳಸಿಕೊಂಡು ಒಪ್ಪಂದಗಳನ್ನು ಸುಲಭವಾಗಿ ನವೀಕರಿಸಬಹುದು. ಬಾಡಿಗೆ ಒಪ್ಪಂದವನ್ನು ವಿಸ್ತರಿಸಲು ಇದರಲ್ಲಿ ಅವಕಾಶವಿದೆ. 11 ತಿಂಗಳ ಬಾಡಿಗೆ ಒಪ್ಪಂದದ ಸ್ವರೂಪವು ಭೂಮಾಲೀಕರಿಗೆ ಆಸ್ತಿಯ ಮೇಲಿನ ಭದ್ರತೆಯನ್ನು ಖಚಿತಪಡಿಸುತ್ತದೆ. ಒಂದು ವರ್ಷದೊಳಗೆ ಅವರಿಗೆ ಮಾರುಕಟ್ಟೆ ಪರಿಸ್ಥಿತಿಗಳು ಮತ್ತು ಅವರ ಹಣಕಾಸಿನ ಆದ್ಯತೆಗಳ ಆಧಾರದ ಮೇಲೆ ಮಾಸಿಕ ಬಾಡಿಗೆಯನ್ನು ಪರಿಶೀಲಿಸಬಹುದು.


11 ತಿಂಗಳಿಗಿಂತ ಹೆಚ್ಚು ಬಾಡಿಗೆ ಒಪ್ಪಂದಕ್ಕೆ ನೋಂದಣಿ ಕಡ್ಡಾಯವಾಗಿದೆ. ನೋಟರಿ ಮೂಲಕ ಮಾಡಬೇಕಾಗುತ್ತದೆ. ಯಾವುದೇ ವಿವಾದದ ಸಂದರ್ಭದಲ್ಲಿ ಎರಡೂ ಪಕ್ಷಗಳು ನಿರ್ದಿಷ್ಟ ಹಣವನ್ನು ಪಾವತಿಸಬೇಕಾಗಬಹುದು. ದಾಖಲಾತಿಯನ್ನು ನೋಂದಾಯಿಸದಿದ್ದಕ್ಕಾಗಿ ದಂಡವನ್ನೂ ವಿಧಿಸಬಹುದು. ಬಾಡಿಗೆಯನ್ನು ನೋಂದಾಯಿಸಲು ಆಸ್ತಿ ಮಾಲೀಕರು ಮುದ್ರಾಂಕ ಶುಲ್ಕವನ್ನು ಪಾವತಿಸಬೇಕು. ಒಪ್ಪಂದವು 11 ತಿಂಗಳಿಗಿಂತ ಹೆಚ್ಚು ಕಾಲ ಜಾರಿಯಲ್ಲಿದ್ದರೆ ಇವುಗಳ ಶುಲ್ಕಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗಿರಬಹುದು.

ಇದನ್ನೂ ಓದಿ: Money Guide: ಕೃಷಿ ಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ತಿಳಿದಿರಲೇಬೇಕಾದ ಅಂಶಗಳಿವು

11 ತಿಂಗಳ ಬಾಡಿಗೆ ಒಪ್ಪಂದವು ಮಾನ್ಯವೇ?

ಭಾರತೀಯ ನ್ಯಾಯಾಲಯಗಳಲ್ಲಿ 11 ತಿಂಗಳ ಬಾಡಿಗೆ ಒಪ್ಪಂದ ಮಾನ್ಯವಾಗಿದೆ. ಈ ಒಪ್ಪಂದವನ್ನು 100 ರೂ. ಮೌಲ್ಯದ ಸ್ಟಾಂಪ್ ಪೇಪರ್ ಮೇಲೆ ಮಾಡಿಸಲೇಬೇಕು. ಇದಕ್ಕೆ ಯಾವುದೇ ಮುದ್ರಾಂಕ ಶುಲ್ಕವಿಲ್ಲ. ಬಾಡಿಗೆ ಒಪ್ಪಂದವು 12 ತಿಂಗಳಿಗಿಂತ ಹಳೆಯದಾಗಿದ್ದರೆ ಮಾತ್ರ ಮುದ್ರಾಂಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

11 ತಿಂಗಳು ಪೂರ್ಣಗೊಳ್ಳುವ ಮೊದಲು ಆಸ್ತಿ ಬಿಡಬಹುದೇ?

ಹಿಡುವಳಿದಾರ ಅಥವಾ ಬಾಡಿಗೆದಾರ 11 ತಿಂಗಳುಗಳು ಪೂರ್ಣಗೊಳ್ಳುವ ಮೊದಲು ಆಸ್ತಿ ಖಾಲಿ ಮಾಡಿ ಹೋಗಬಹುದು. ಆದರೆ ಇದಕ್ಕೆ ನಿಯಮಗಳಿವೆ. ಬಾಡಿಗೆ ಒಪ್ಪಂದದಲ್ಲಿ ನಿರ್ದಿಷ್ಟಪಡಿಸಿದ ನಿಯಮಗಳನ್ನು ಅನುಸರಿಸಬೇಕು. ಇದರಲ್ಲಿ ಮುಖ್ಯವಾಗಿ ನೊಟೀಸ್ ನೀಡಬೇಕು. ಇಲ್ಲವಾದರೆ ಮಾಲೀಕರಿಗೆ ದಂಡವನ್ನು ಪಾವತಿಸಬೇಕಾಗಬಹುದು.

Continue Reading

ಶಿಕ್ಷಣ

NIRF 2024 Rank: ದೇಶದಲ್ಲೇ ಮದ್ರಾಸ್ ಐಐಟಿ ಬೆಸ್ಟ್; ಬೆಂಗಳೂರಿನ ಐಐಎಸ್‌ಸಿ ನೆಕ್ಸ್ಟ್;‌ ಇಲ್ಲಿದೆ ಪೂರ್ಣ ಪಟ್ಟಿ

ಎನ್‌ಐಆರ್‌ಎಫ್ 2024ರ (NIRF 2024 Rank) ಶ್ರೇಯಾಂಕಗಳನ್ನು ಬಿಡುಗಡೆ ಮಾಡಿದ್ದು, ಸತತ ಆರನೇ ವರ್ಷ ಮದ್ರಾಸ್ ಐಐಟಿ ಮೊದಲ ಸ್ಥಾನ ಪಡೆದಿದೆ. ಕಳೆದ ಸಾಲಿನಂತೆ ಬೆಂಗಳೂರು ಐಐಎಸ್‌ಸಿ ಈ ಬಾರಿಯೂ ಎರಡನೇ ಸ್ಥಾನವನ್ನು ಉಳಿಸಿಕೊಂಡಿದೆ. ಉಳಿದ ಯಾವ ಸಂಸ್ಥೆಗಳು ಟಾಪ್ ಹತರಲ್ಲಿದೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ. ಎನ್ಐಆರ್‌ಎಫ್ ರಾಂಕಿಂಗ್ 2024 ಅನ್ನು ನವದೆಹಲಿಯ ಭಾರತ್ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಭಾರತದ ಒಂಬತ್ತನೇ ಆವೃತ್ತಿಯ ಶ್ರೇಯಾಂಕವನ್ನು ಬಿಡುಗಡೆ ಮಾಡಿದರು.

VISTARANEWS.COM


on

By

NIRF 2024 Rank
Koo

ಭಾರತದ ಅತ್ಯುತ್ತಮ ವಿಶ್ವವಿದ್ಯಾನಿಲಯಗಳಲ್ಲಿ ಐಐಟಿ ಮದ್ರಾಸ್ (IIT Madras) ಅಗ್ರ ಸ್ಥಾನ ಪಡೆದಿದ್ದು, ಬೆಂಗಳೂರಿನ ಐಐಎಸ್‌ಸಿ (IISC Bangalore) ಎರಡನೇ ಸ್ಥಾನ ಪಡೆದಿದೆ. ಬಾಂಬೆ ಐಐಟಿ (Bombay IIT) ಮೂರನೇ ಸ್ಥಾನದಲ್ಲಿದೆ. ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಿಗೆ ಶ್ರೇಯಾಂಕ ನೀಡುವ The National Institutional Ranking Framework (NIRF) ನೀಡಿರುವ ಈ ಶ್ರೇಯಾಂಕಗಳನ್ನು (NIRF 2024 Rank) ಭಾರತದ ಶಿಕ್ಷಣ ಸಚಿವಾಲಯವು ಇತ್ತೀಚೆಗೆ ಬಿಡುಗಡೆ ಮಾಡಿದೆ.

ಎನ್‌ಐಆರ್‌ಎಫ್ 2024ರ ಶ್ರೇಯಾಂಕವನ್ನು ಇತ್ತೀಚಿಗೆ ಬಿಡುಗಡೆ ಮಾಡಿತ್ತು. ಈ ವರ್ಷ ಐಐಟಿ ಮದ್ರಾಸ್ ಮೊದಲ ಸ್ಥಾನ ಗಳಿಸಿದ್ದು, ಐಐಎಸ್‌ಸಿ ಬೆಂಗಳೂರು ಮತ್ತು ಐಐಟಿ ಬಾಂಬೆ ಕ್ರಮವಾಗಿ ಎರಡು, ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ವಿಶ್ವವಿದ್ಯಾನಿಲಯ, ಕಾಲೇಜು, ಸಂಶೋಧನಾ ಸಂಸ್ಥೆ, ಎಂಜಿನಿಯರಿಂಗ್, ನಿರ್ವಹಣೆ, ಔಷಧಾಲಯ, ವೈದ್ಯಕೀಯ, ದಂತ ವೈದ್ಯಕೀಯ, ಕಾನೂನು, ವಾಸ್ತುಶಿಲ್ಪ ಮತ್ತು ಯೋಜನೆ, ಕೃಷಿ ಮತ್ತು ಸಂಬಂಧಿತ ವಲಯಗಳು, ನಾವೀನ್ಯತೆ, ರಾಜ್ಯ ವಿಶ್ವವಿದ್ಯಾಲಯ, ಕೌಶಲ್ಯ ವಿಶ್ವವಿದ್ಯಾಲಯ ಮತ್ತು ಮುಕ್ತ ವಿಶ್ವವಿದ್ಯಾಲಯ ಸೇರಿದಂತೆ ಒಟ್ಟು 16 ವಿವಿಧ ವಿಭಾಗಗಳಿಗೆ ಶ್ರೇಯಾಂಕಗಳನ್ನು ಇದರಲ್ಲಿ ಬಿಡುಗಡೆ ಮಾಡಲಾಗಿದೆ. ರಾಜ್ಯ ವಿಶ್ವವಿದ್ಯಾಲಯ, ಕೌಶಲ್ಯ ವಿಶ್ವವಿದ್ಯಾಲಯ ಮತ್ತು ಮುಕ್ತ ವಿಶ್ವವಿದ್ಯಾನಿಲಯ ಶ್ರೇಯಾಂಕಗಳು ಎನ್ ಐಆರ್ ಎಫ್ ಶ್ರೇಯಾಂಕದ ವರ್ಗಗಳಿಗೆ ಇತ್ತೀಚಿನ ಸೇರ್ಪಡೆಗಳಾಗಿವೆ.

NIRF 2024 Rank
NIRF 2024 Rank


ಟಾಪ್ 10ನಲ್ಲಿರುವ ಸಂಸ್ಥೆಗಳು

ಎನ್‌ಐಆರ್‌ಎಫ್ ನೀಡಿರುವ ಶ್ರೇಯಾಂಕದ ಆಧಾರದ ಮೇಲೆ ಟಾಪ್ ಹತ್ತರಲ್ಲಿ ಈ ಕೆಳಗಿನ ಶಿಕ್ಷಣ ಸಂಸ್ಥೆಗಳು ಗುರುತಿಸಿಕೊಂಡಿವೆ. ಐಐಟಿ ಮದ್ರಾಸ್, ಐಐಎಸ್ಸಿ ಬೆಂಗಳೂರು, ಐಐಟಿ ಬಾಂಬೆ, ಐಐಟಿ ದೆಹಲಿ, ಐಐಟಿ ಕಾನ್ಪುರ, ಐಐಟಿ ಖರಗ್‌ಪುರ, ಏಮ್ಸ್, ಹೊಸದಿಲ್ಲಿ, ಐಐಟಿ ರೂರ್ಕಿ, ಐಐಟಿ ಗುವಾಹಟಿ, ಜೆಎನ್‌ಯು, ಹೊಸದಿಲ್ಲಿ.


ಎನ್ಐಆರ್‌ಎಫ್ ರಾಂಕಿಂಗ್ 2024 ಅನ್ನು ನವದೆಹಲಿಯ ಭಾರತ್ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಭಾರತದ ಒಂಬತ್ತನೇ ಆವೃತ್ತಿಯ ಶ್ರೇಯಾಂಕವನ್ನು ಬಿಡುಗಡೆ ಮಾಡಿದರು. ಸಚಿವಾಲಯವು 2025ರಿಂದ ಸುಸ್ಥಿರತೆಯ ಶ್ರೇಯಾಂಕದ ವರ್ಗವನ್ನು ಪ್ರಾರಂಭಿಸಲು ಯೋಜಿಸಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ವಿವಿಧ ವಿಶ್ವವಿದ್ಯಾನಿಲಯ ಮತ್ತು ಸಂಸ್ಥೆಗಳಿಗೆ ಶ್ರೇಯಾಂಕ ನೀಡಲು ವಿಶಾಲವಾದ ನಿಯತಾಂಕಗಳನ್ನು ಗುರುತಿಸಲು ಎಂಹೆಚ್ ಆರ್ ಡಿ ಸ್ಥಾಪಿಸಿದ ಕೋರ್ ಕಮಿಟಿಯಿಂದ ಬಂದ ಶಿಫಾರಸುಗಳನ್ನು ಆಧರಿಸಿ ಎನ್ಐಆರ್‌ಎಫ್ ಈ ಶ್ರೇಯಾಂಕವನ್ನು ನೀಡಿದೆ. ಕೋರ್ ಕಮಿಟಿಯು ವಿವಿಧ ವಿಶ್ವವಿದ್ಯಾನಿಲಯ ಮತ್ತು ಸಂಸ್ಥೆಗಳಿಗೆ ಶ್ರೇಯಾಂಕ ನೀಡಲು ವಿಶಾಲವಾದ ನಿಯತಾಂಕಗಳನ್ನು ಗುರುತಿಸಲು ಎಂಎಚ್‌ಆರ್‌ಡಿ ಸ್ಥಾಪಿಸಿದ ಶ್ರೇಯಾಂಕ ಸಂಸ್ಥೆಗಳಿಗೆ ವಿವಿಧ ನಿಯಮಗಳನ್ನು ರೂಪಿಸಿದೆ. ಇದರಲ್ಲಿ ಬೋಧನೆ, ಕಲಿಕೆ, ಸಂಪನ್ಮೂಲ, ಸಂಶೋಧನೆ, ವೃತ್ತಿಪರ ಅಭ್ಯಾಸ, ಪದವಿ ಫಲಿತಾಂಶ, ಪ್ರಭಾವ ಮತ್ತು ಒಳಗೊಳ್ಳುವಿಕೆ ಮತ್ತು ಗ್ರಹಿಕೆಗಳ ಮೇಲೆ ಸಂಸ್ಥೆಗಳಿಗೆ ಶ್ರೇಣಿಯನ್ನು ನೀಡಲಾಗುತ್ತದೆ.

ಇದನ್ನೂ ಓದಿ: Submarines: ಎರಡು ಪರಮಾಣು ಜಲಾಂತರ್ಗಾಮಿ ನೌಕೆಗಳಿಗಾಗಿ ಕೇಂದ್ರಕ್ಕೆ ಭಾರತೀಯ ನೌಕಾಪಡೆ ಮನವಿ

ಕಳೆದ ವರ್ಷದ ಶ್ರೇಯಾಂಕ ಹೇಗಿತ್ತು?

2023ರಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮದ್ರಾಸ್ ಒಟ್ಟಾರೆ ವಿಭಾಗದಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿತ್ತು. ಅನಂತರ ಐಐಎಸ್‌ಸಿ ಬೆಂಗಳೂರು ಎರಡನೇ ಸ್ಥಾನ ಮತ್ತು ಐಐಟಿ ದೆಹಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿತ್ತು. 2023ರಲ್ಲಿ ಐಐಟಿ ಮದ್ರಾಸ್ ಶೇ. 86.69 ಅಂಕಗಳನ್ನು ಪಡೆದುಕೊಂಡಿದ್ದು, ಐದನೇ ಬಾರಿಗೆ ಅಗ್ರಸ್ಥಾನದಲ್ಲಿ ಹೊರಹೊಮ್ಮಿತ್ತು. ಎನ್‌ಐಆರ್‌ಎಫ್ ಅನ್ನು ಎಂಎಚ್‌ಆರ್‌ಡಿ ಅನುಮೋದಿಸಿದ್ದು, 2015ರ ಸೆಪ್ಟೆಂಬರ್ 29ರಲ್ಲಿ ಇದನ್ನು ಮೊದಲಬಾರಿಗೆ ಬಿಡುಗಡೆ ಮಾಡಲಾಗಿದೆ.

Continue Reading
Advertisement
NIRF 2024 Rank
ಶಿಕ್ಷಣ1 min ago

NIRF 2024 Rank: ದೇಶದ ಟಾಪ್‌ 10 ಮೆಡಿಕಲ್‌ ಕಾಲೇಜುಗಳಲ್ಲಿ ನಿಮ್ಹಾನ್ಸ್‌ ನಂ.4; ಫಾರ್ಮಸಿಯಲ್ಲಿ ರಾಜ್ಯದ 2 ಕಾಲೇಜುಗಳಿಗೆ ಸ್ಥಾನ

Paris Olympics 2024
ಪ್ರಮುಖ ಸುದ್ದಿ14 mins ago

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಭಾರತೀಯ ಕ್ರೀಡಾಪಟುಗಳಿಗೆ ಸಿಕ್ಕಿದ ಕೋಟಿಗಟ್ಟಲೆ ಬಹುಮಾನಗಳ ವಿವರ ಇಲ್ಲಿದೆ

Government Employees Sports
ಕರ್ನಾಟಕ17 mins ago

Government Employees Sports: ಆ.17ರಿಂದ 19ರವರೆಗೆ ರಾಜ್ಯಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ

Uttara Kannada News
ಉತ್ತರ ಕನ್ನಡ26 mins ago

Uttara Kannada News: ʼಹರ್ ಘರ್ ತಿರಂಗಾʼ ಪ್ರಯುಕ್ತ ಉ.ಕ ಜಿಲ್ಲೆಯಾದ್ಯಂತ ಕಾರ್ಯಕ್ರಮ

Tungabhadra Dam
ಕರ್ನಾಟಕ28 mins ago

Tungabhadra Dam: ತುಂಗಭದ್ರಾ ಜಲಾಶಯಕ್ಕೆ ಸಮಾನಾಂತರ ಜಲಾಶಯ ನಿರ್ಮಿಸಲು ಬೊಮ್ಮಾಯಿ ಆಗ್ರಹ

Bengaluru Rain
ಬೆಂಗಳೂರು32 mins ago

Bengaluru Rain: ಕಟ್ಟಡ ನಿರ್ಮಾಣ ತ್ಯಾಜ್ಯ ತೆರವು; ಒಳಚರಂಡಿ, ರಸ್ತೆ ಬದಿ ಚರಂಡಿಗಳ ಸ್ವಚ್ಛತೆಗೆ ಡಿ. ಕೆ. ಶಿವಕುಮಾರ್ ಸೂಚನೆ

Whiten Your Yellow Teeth
ಆರೋಗ್ಯ44 mins ago

Whiten Your Yellow Teeth: ಈ ಆಹಾರಗಳು ನಿಮ್ಮ ಹಲ್ಲುಗಳ ಬಣ್ಣಗೆಡಿಸುತ್ತವೆ ಎನ್ನುವುದು ಗೊತ್ತಿದೆಯೆ?

Part Time Lecturers
ಪ್ರಮುಖ ಸುದ್ದಿ49 mins ago

Part Time Lecturers: ಅರೆಕಾಲಿಕ ಉಪನ್ಯಾಸಕರಿಗೆ ಗುಡ್ ನ್ಯೂಸ್; ಗೌರವಧನದಲ್ಲಿ ಭಾರಿ ಹೆಚ್ಚಳ

Faiz Hameed
ಪ್ರಮುಖ ಸುದ್ದಿ60 mins ago

Faiz Hameed : ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್​​ಐನ ಮಾಜಿ ಮುಖ್ಯಸ್ಥ ಫೈಜ್ ಹಮೀದ್ ಬಂಧನ

Varamahalakshmi Festival 2024
ಫ್ಯಾಷನ್1 hour ago

Varamahalakshmi Festival 2024: ಹಬ್ಬಕ್ಕೆ ಮಾರುಕಟ್ಟೆ ಪ್ರವೇಶಿಸಿವೆ ರೆಡಿಮೇಡ್‌ ವರಮಹಾಲಕ್ಷ್ಮಿ ಮೂರ್ತಿಗಳು!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ4 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ4 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ4 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು6 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ6 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 week ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 week ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌