Travel tips: ಪ್ರವಾಸ ದುಡ್ಡಿದ್ದವರಿಗೆ ಮಾತ್ರವೇ ಸಾಧ್ಯವೇ? - Vistara News

ಪ್ರಮುಖ ಸುದ್ದಿ

Travel tips: ಪ್ರವಾಸ ದುಡ್ಡಿದ್ದವರಿಗೆ ಮಾತ್ರವೇ ಸಾಧ್ಯವೇ?

ದುಡ್ಡಿದ್ದವರಿಗೆ ಮಾತ್ರ ಪ್ರವಾಸ ಎಂದುಕೊಳ್ಳುವುದು ತಪ್ಪು. ದುಡ್ಡಿಲ್ಲದವರು ನಿರಾಶೆ ಪಡದೇ, ತಮ್ಮ ಬಜೆಟ್‌ಗೆ ಅನುಗುಣವಾಗಿ ನೆನಪಿನಲ್ಲಿ ಉಳಿಯುವಂಥ ಪ್ರವಾಸಗಳನ್ನು ಖಂಡಿತಾ ಹಮ್ಮಿಕೊಳ್ಳಬಹುದು.

VISTARANEWS.COM


on

hill
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಂದುಕೊಂಡಂತೆ ದೇಶ ಸುತ್ತಬೇಕು ಅನ್ನುವುದು ಬಹಳಷ್ಟು ಮಂದಿಗೆ ಕನಸು. ಆ ಕನಸು ಬಹಳ ಸಾರಿ ಕನಸಾಗಿಯೇ ಉಳಿಯುತ್ತದೆ. ಅಂದುಕೊಂಡ ಜಾಗಕ್ಕೆಲ್ಲ ಹೋಗೋದಕ್ಕೆ ಹಲವರಿಗೆ ಬಜೆಟ್‌ ಸಮಸ್ಯೆ. ಬದುಕಿನ ಇತರ ಜವಾಬ್ದಾರಿಗಳನ್ನು ಪೂರೈಸುವುದರಲ್ಲಿ ಸೇವಿಂಗ್ಸ್‌ ಖಾಲಿಯಾಗುತ್ತದೆ. ಇನ್ನು ಪ್ರವಾಸಕ್ಕೆಲ್ಲಿದೆ ದುಡ್ಡು ಎಂದು ಕೈಚೆಲ್ಲಿ ಕುಳಿತುಬಿಡುತ್ತಾರೆ.

ಇನ್ನೂ ಕೆಲವರು, ʻನಿಮಗೇನು ಬಿಡಿ, ಬೇಕಾದಷ್ಟು ದುಡ್ಡಿದೆ, ಸುತ್ತಾಡುತ್ತೀರಿ, ನಮ್ಮ ಕಷ್ಟಗಳು ನಮಗೇ ಗೊತ್ತುʼ ಎಂಬ ಕುಹಕದ ಮಾತಾಡಿ ತಮ್ಮ ಹೊಟ್ಟೆ ತಣಿಸಿಕೊಳ್ಳುತ್ತಾರೆ. ಕೆಲವೇ ಕೆಲವು ಮಂದಿ ಮಾತ್ರ ನಮ್ಮಂತೆಯೇ ಇರುವ ಅವರಿಗೆ ಸಾಧ್ಯವಾಗಿದೆ ಎಂದರೆ, ನಮಗೂ ಸಾಧ್ಯವಾಗಲೇ ಬೇಕಲ್ಲ ಎಂದು ಸ್ಪೂರ್ತಿ ಪಡೆದು ಹಿತಮಿತವಾದ ಖರ್ಚಿನಲ್ಲಿ ತಿರುಗಾಡುತ್ತಾರೆ. ಇನ್ನು ಬೆರಳೆಣಿಕೆಯ ಮಂದಿ ಬದುಕಿನ ನಿಜವಾದ ಖುಷಿಯನ್ನು ತಿರುಗಾಟದಲ್ಲೇ ಕಂಡುಕೊಂಡು ಅದನ್ನೇ ಬದುಕಾಗಿಸಿಕೊಳ್ಳುತ್ತಾರೆ.

ನಿಜವಾಗಿ ನೋಡಿದರೆ ದುಡ್ಡಿದ್ದವರು ಮಾತ್ರ ಪ್ರವಾಸ ಮಾಡೋದಾ? ದುಡ್ಡಿಲ್ಲದವರಿಗೆ ಇದು ಎಟುಕದ ನಕ್ಷತ್ರವಾ? ಅಂತ ಪ್ರಶ್ನೆ ಮೂಡುವುದು ಸಹಜ. ಆದರೆ ಇದೊಂದು ತಪ್ಪು ತಿಳುವಳಿಕೆ. ಸಾಮಾನ್ಯರಲ್ಲಿ ಸಾಮಾನ್ಯರೂ ಮನಸಿದ್ದರೆ ತಿರುಗಾಟಕ್ಕೆ ನೂರು ದಾರಿ ಹುಡುಕಿಕೊಳ್ಳಬಹುದು. ಚಹಾ ಮಾರಿಯೋ, ಕೇವಲ ಸೈಕಲ್‌ ಹಿಡಿದೋ ದೇಶದೆಲ್ಲೆಡೆ ಸುತ್ತಿದ ಹಲವಾರು ಮಂದಿ ಇಂಥದ್ದನ್ನು ಮಾಡಿಯೂ ತೋರಿಸಿದ್ದಾರೆ.

ತೀರಾ ಇಷ್ಟಲ್ಲದಿದ್ದರೂ, ಕಡಿಮೆ ಖರ್ಚಿನಲ್ಲೂ ದೇಶವಿದೇಶ ಸುತ್ತಬಹುದು. ಖರ್ಚನ್ನು ಯಾವುದಕ್ಕೆ, ಎಲ್ಲಿ ಹೇಗೆ ಮಾಡಬೇಕು ಎಂಬ ಅರಿವಿರಬೇಕು ಅಷ್ಟೆ. ಬದುಕಿನ ಬೇಕುಬೇಡಗಳನ್ನು ನಿರ್ಧರಿಸಿ, ತನಗೆ ನಿಜವಾದ ಖುಷಿ ದಕ್ಕುವುದು ಯಾವುದರಿಂದ ಎಂಬುದನ್ನು ಆಯ್ಕೆ ಮಾಡಿಕೊಳ್ಳುವ ಬಿಚ್ಚು ಮನಸ್ಸು ಇರಬೇಕು. ಈ ಕೆಳಗಿನ 8 ಅಂಶಗಳನ್ನು ಗಮನಿಸಿ.

1.. ಆರಂಭದಲ್ಲಿ ಹತ್ತಿರದ ಜಾಗವೊಂದನ್ನು ಆರಿಸಿ. ಒಂದು ರಾತ್ರಿಯ ಪ್ರಯಾಣವಿರುವಂಥ ಜಾಗ. ಆ ಪ್ರಯಾಣಕ್ಕೆ ಇಷ್ಟು ಹಣವನ್ನು ಖರ್ಚು ಮಾಡಬಲ್ಲೆ ಎಂದು ಒಂದು ಬಜೆಟ್‌ ನಿಗದಿ ಮಾಡಿ. ಅದಕ್ಕೆ ಅನುಗುಣವಾಗಿ ಪ್ರಯಾಣ ಮಾಡಿ.

2. ಹೆಚ್ಚು ಇಷ್ಟಪಡುವ ವಿಷಯಕ್ಕಾಗಿ ಅಗತ್ಯವಿಲ್ಲದಕ್ಕೆ ಕತ್ತರಿ ಹಾಕುವ ಗುಣವನ್ನು ಅಭ್ಯಾಸ ಮಾಡಿ. ಉದಾಹರಣೆಗೆ, ನಿಮಗೆ ಈ ತಿಂಗಳ ಕೊನೆಗೊಂದು ಪ್ರವಾಸ ಮಾಡಲೇಬೇಕೆಂದು ಅನಿಸಿದ್ದರೆ, ವಾರಾಂತ್ಯದ ಮಾಲ್‌ ಭೇಟಿ, ಅನವಶ್ಯಕ ಡಿನ್ನರ್‌ಗಳಿಗೆ ಖರ್ಚು, ವೃಥಾ ಶಾಪಿಂಗ್‌ಗಳನ್ನೆಲ್ಲ ಮರೆತುಬಿಡಿ. ಆ ಮೂಲಕ, ಅವೆಲ್ಲ ತಾತ್ಕಾಲಿಕ ಖುಷಿಗಳಿಗಿಂತ ಜೀವನದಲ್ಲಿ ಸದಾ ನೆನಪಿಡಬಲ್ಲ ಪ್ರವಾಸವೊಂದಕ್ಕೆ ಖರ್ಚು ಮಾಡಿ.

3. ಯಾವುದೇ ಸಂದರ್ಭದಲ್ಲೂ ಹೊಂದಿಕೊಳ್ಳುವ ಗುಣ ಬೆಳೆಸಿಕೊಳ್ಳಿ. ಸಾರ್ವಜನಿಕ ಸಾರಿಗೆಯನ್ನು ಪ್ರವಾಸಕ್ಕೆ ಬಳಸಿ. ಬಸ್ಸು ಶೇರಿಂಗ್‌ ಟ್ಯಾಕ್ಸಿಗಳಿಂದ ಒಂದಷ್ಟು ಹಣ ಉಳಿಸಬಹುದು.

ಇದನ್ನೂ ಓದಿ: Rain travel: ಮಳೆಯಲಿ ಜೊತೆಯಲಿ ಇಲ್ಲಿಗೆ ಪ್ರವಾಸ ಮಾಡಿ!

4. ಹೊಟೇಲುಗಳ ಆಯ್ಕೆಯಲ್ಲಿ ಸ್ಪಷ್ಟತೆಯಿರಲಿ. ಈ ಪ್ರವಾಸದಲ್ಲಿ ಇಷ್ಟೇ ಹಣ ಖರ್ಚು ಮಾಡುವವನಿ/ಳಿದ್ದೇನೆ ಎಂಬ ಬಗ್ಗೆ ಸ್ಪಷ್ಟತೆಯಿದ್ದರೆ, ಸಾದಾರಣ, ಸರಳ ಹೊಟೇಲುಗಳಲ್ಲೂ ತೃಪ್ತಿ ಸಿಗುತ್ತದೆ. ಪ್ರವಾಸವೆಂದರೆ, ಹೊಸ ಜಾಗಕ್ಕೆ ಹೋಗಿ ಅದ್ದೂರಿ ರೂಂ ಬುಕ್‌ ಮಾಡಿ ಟೈಂ ಪಾಸ್‌ ಮಾಡುವುದಷ್ಟೇ ಅಲ್ಲ. ಹೊಸ ಜಾಗದ ನಿಜವಾದ ಘಮವನ್ನು ಒಳಗೆಳೆದುಕೊಳ್ಳುವುದು ಎಂಬುದರ ಅರಿವಿರಲಿ.

5. ನೀವು ನಿಮ್ಮದೇ ಸ್ವಂತ ಬೈಕು, ಕಾರು ಚಲಾಯಿಸಿಕೊಂಡು ಹೋಗಿದ್ದೀರೆಂದಾದಲ್ಲಿ, ಊರ ಹೊರಗೆ ಎಲ್ಲಾದರೂ ಸಣ್ಣ ಹೋಂಸ್ಟೇಯಲ್ಲೂ ಉಳಿದುಕೊಳ್ಳಬಹುದು. ಅಲ್ಲಿನ ಪ್ರಶಾಂತ ವಾತಾವರಣ ನಿಮ್ಮ ಪ್ರವಾಸಕ್ಕೆ ಇನ್ನೂ ಹೆಚ್ಚಿನ ಅರ್ಥ ನೀಡುತ್ತದೆ. ಕಡಿಮೆ ಖರ್ಚಿನ ಹಾಸ್ಟೆಲ್‌ಗಳು, ಡಾರ್ಮೆಟರಿಗಳೂ ಕೂಡಾ ಖರ್ಚು ಉಳಿಸುವ ದಾರಿಗಳು.

6. ಪ್ರತಿದಿನಕ್ಕೂ ಇಂತಿಷ್ಟು ಬಜೆಟ್‌ ಎಂಬುದಾಗಿ ನಿಗದಿ ಮಾಡಿಕೊಂಡರೆ ಒಳ್ಳೆಯದು. ಅದು ಊಟಕ್ಕಿರಬಹುದು, ಉಳಿದ ಖರೀದಿಯ ವಿಚಾರದಲ್ಲಿರಬಹುದು. ಆದಷ್ಟು ಆಯಾ ಊರುಗಳಲ್ಲಿ ಸ್ಥಳೀಯ ಆಹಾರವನ್ನೇ ಅವಲಂಬಿಸಿ. ಆಗ ಖರ್ಚು ಕಡಿಮೆಯಾಗುತ್ತದೆ.

7. ವಿಪರೀತ ಪ್ರವಾಸಿಗಳಿರುವ ಜಾಗದಲ್ಲಿ ಪ್ರತಿಯೊಂದರ ಬೆಲೆಯೂ ಗಗನಕ್ಕೇರಿರುತ್ತದೆ. ಅದಕ್ಕಾಗಿ ಯಾವಾಗಲೂ ಆಫ್‌ಬೀಟ್‌ ಜಾಗಗಳನ್ನೇ ಹುಡುಕಿ. ಅಷ್ಟಾಗಿ ಯಾರಿಗೂ ತಿಳಿಯದ, ಪ್ರವಾಸೀ ಕೇಂದ್ರವಾಗಿ ಸಾಕಷ್ಟು ಜನಪ್ರಿಯತೆ ಪಡೆಯದ ಜಾಗಗಳು ಅದ್ಭುತವೂ ನೆಮ್ಮದಿಯ ತಾಣವೂ ಆಗಿರುತ್ತವೆ.

8. ರಜಾದಿನಗಳು, ವೀಕೆಂಡ್‌ಗಳು, ಟೂರಿಸ್ಟ್‌ ಸೀಸನ್‌ಗಳನ್ನು ಹೊರತು ಪಡಿಸಿ ಬೇರೆ ದಿನಗಳನ್ನು ಪ್ರಯಾಣಕ್ಕೆ ಬಳಸುವುದೂ ಹಣ ಉಳಿತಾಯಕ್ಕೆ ಒಳ್ಳೆಯದೇ. ಆಗ, ಒಳ್ಳೆಯ ಹೊಟೇಲುಗಳು ಕಡಿಮೆ ದರದಲ್ಲಿ ಲಭ್ಯವಿರುತ್ತದೆ.

ಆಸಕ್ತಿಯೇ ಎಲ್ಲದರ ಮೂಲ ಬಂಡವಾಳ. ಅದೊಂದಿದ್ದರೆ ದುಡ್ಡು ನಗಣ್ಯ.

ಇದನ್ನೂ ಓದಿ: 777 ಚಾರ್ಲಿ- ಧರ್ಮ ಥರಾ ನೀವು ಜತೆಯಾಗಿ ಪ್ರವಾಸ ಹೋಗ್ತೀರಾ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

CAA Certificate: ದೀದಿ ವಿರೋಧದ ಮಧ್ಯೆಯೂ ಬಂಗಾಳದಲ್ಲಿ ಸಿಎಎ ಜಾರಿಗೆ ತಂದ ಕೇಂದ್ರ; ಪೌರತ್ವ ಪ್ರದಾನ!

CAA Certificate: ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವವನ್ನು ಪಡೆಯುವುದನ್ನು ಸಿಎಎ ಜಾರಿಯಿಂದ ಸುಲಭಗೊಳಿಸುತ್ತದೆ. ಡಿಸೆಂಬರ್ 31, 2014 ರಂದು ಮತ್ತು ಅದಕ್ಕೂ ಮೊದಲು ಭಾರತಕ್ಕೆ ಆಗಮಿಸಿದ ಮುಸ್ಲಿಮರನ್ನು ಹೊರತುಪಡಿಸಿ ವಲಸಿಗರಿಗೆ ಈ ಕಾನೂನು ಅನ್ವಯಿಸುತ್ತದೆ. ಈಗ ಸಿಎಎ ನಿಯಮಗಳ ಪಶ್ಚಿಮ ಬಂಗಾಳ ಸೇರಿ ಹಲವು ರಾಜ್ಯಗಳಲ್ಲಿ ನೆಲೆಸಿರುವ ನಿರಾಶ್ರಿತರಿಗೆ ಕೇಂದ್ರ ಸರ್ಕಾರ ಪೌರತ್ವ ನೀಡಿದೆ.

VISTARANEWS.COM


on

CAA Certificate
Koo

ಕೋಲ್ಕೊತಾ: “ಪಶ್ಚಿಮ ಬಂಗಾಳದ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರಲು ಬಿಡುವುದಿಲ್ಲ” ಎಂಬುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಹೇಳುತ್ತಲೇ ಇದ್ದರು. “ಸಿಎಎ ಜಾರಿಯನ್ನು ತಡೆಯಲು ಯಾವುದೇ ರಾಜ್ಯಗಳಿಗೆ ಸಾಧ್ಯವಿಲ್ಲ” ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಿರುಗೇಟು ನೀಡುತ್ತಲೇ ಇದ್ದರು. ಸಿಎಎ ಜಾರಿ ಕುರಿತು ದೀದಿ ಹಾಗೂ ಮೋದಿ ನಡುವೆ ಜಟಾಪಟಿ ನಡೆಯುತ್ತಿರುವ ಮಧ್ಯೆಯೇ ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳದಲ್ಲಿ ಸಿಎಎ ಜಾರಿಗೊಳಿಸಿದೆ. ಹೌದು, ಪಶ್ಚಿಮ ಬಂಗಾಳದಲ್ಲಿ ನೆಲೆಸಿರುವ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫಘಾನಿಸ್ತಾನದ ಧಾರ್ಮಿಕ ಸಿಎಎ ಅಡಿಯಲ್ಲಿ ಕೇಂದ್ರ ಸರ್ಕಾರವು ಭಾರತದ ಪೌರತ್ವ (CAA Certificate) ಪ್ರದಾನ ಮಾಡಿದೆ.

ಸಿಎಎ ಪ್ರಮಾಣಪತ್ರ ನೀಡಿರುವ ಕುರಿತು ಕೇಂದ್ರ ಗೃಹ ಸಚಿವಾಲಯವು ಮಾಹಿತಿ ನೀಡಿದೆ. “ಪಶ್ಚಿಮ ಬಂಗಾಳ, ಹರಿಯಾಣ ಹಾಗೂ ಉತ್ತರಾಖಂಡದಲ್ಲಿ ನೆಲೆಸಿರುವ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ಪ್ರಮಾಣಪತ್ರ ನೀಡಲಾಗಿದೆ. ಅರ್ಜಿದಾರರು ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಪೌರತ್ವ ನೀಡಲಾಗಿದೆ” ಎಂಬುದಾಗಿ ತಿಳಿಸಿದೆ. ಇದರೊಂದಿಗೆ ಪಶ್ಚಿಮ ಬಂಗಾಳದಲ್ಲಿ ಅಧಿಕೃತವಾಗಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬಂದಂತಾಗಿದೆ.

ಕೆಲ ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರವು 14 ನಿರಾಶ್ರಿತರಿಗೆ ಭಾರತದ ಪೌರತ್ವ ನೀಡಲಾಗಿತ್ತು. ಪಾಕಿಸ್ತಾನದಿಂದ ಬಂದು, ದೆಹಲಿಯ ಆದರ್ಶ ನಗರದಲ್ಲಿ ವಾಸಿಸುತ್ತಿರುವ ಹಲವರಿಗೆ ಭಾರತದ ಪೌರತ್ವ ನೀಡಲಾಗಿತ್ತು. ಮಹಿಳೆಯರು ಹಾಗೂ ಮಕ್ಕಳು ಸೇರಿ ಹಲವರು ಭಾರತದ ಪೌರತ್ವ ಪ್ರಮಾಣಪತ್ರ ಹಿಡಿದಿರುವ ಫೋಟೊ ಹಾಗೂ ವಿಡಿಯೊಗಳು ವೈರಲ್‌ ಆಗಿದ್ದವು. ಪೌರತ್ವ ಪಡೆದವರು ಕೇಂದ್ರ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದರು.

ಮಮತಾ ಬ್ಯಾನರ್ಜಿ ಏನು ಹೇಳಿದ್ದರು?

ಸಿಎಎ, ಏಕರೂಪ ನಾಗರಿಕ ಸಂಹಿತೆ ಹಾಗೂ ಎನ್‌ಆರ್‌ಸಿಯನ್ನು ವಿರೋಧಿಸುತ್ತಲೇ ಬಂದಿರುವ ಮಮತಾ ಬ್ಯಾನರ್ಜಿ ಅವರು ಹಲವು ಸಂದರ್ಭಗಳಲ್ಲಿ ಸಿಎಎ ಜಾರಿಯಾಗಲು ಬಿಡುವುದಿಲ್ಲ ಎಂದಿದ್ದರು. “ಪಶ್ಚಿಮ ಬಂಗಾಳದಲ್ಲಿ ಸಿಎಎ, ಎನ್‌ಆರ್‌ಸಿ ಜಾರಿಗೊಳಿಸಲು ಬಿಡುವುದಿಲ್ಲ. ಇದಕ್ಕಾಗಿ ನಾವು ರಕ್ತಪಾತಕ್ಕೂ ಸಿದ್ಧರಿದ್ದೇವೆ. ಚುನಾವಣೆ ಸಂದರ್ಭದಲ್ಲಿ ಗಲಾಟೆ ಎಬ್ಬಿಸಲು ಸಿಎಎ ಸೇರಿ ಹಲವು ವಿಷಯಗಳನ್ನು ಮುನ್ನೆಲೆಗೆ ತರುತ್ತಾರೆ. ಆದರೆ, ಪಶ್ಚಿಮ ಬಂಗಾಳದವರಾದ ನಾವು ಒಗ್ಗಟ್ಟಿನಿಂದ ಇದ್ದರೆ ಸಿಎಎ ಜಾರಿಗೊಳಿಸಲು ಆಗುವುದಿಲ್ಲ” ಎಂದು ಹೇಳಿದ್ದರು.

ಪೌರತ್ವ ತಿದ್ದುಪಡಿ ಕಾಯ್ದೆ ಎಂದರೇನು?

2014 ರ ಡಿಸೆಂಬರ್ 31 ಕ್ಕಿಂತ ಮೊದಲು ನೆರೆಯ ಮುಸ್ಲಿಂ ಬಹುಸಂಖ್ಯಾತ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ವಲಸೆ ಬಂದ ಹಿಂದೂಗಳು, ಸಿಖ್ಖರು, ಕ್ರಿಶ್ಚಿಯನ್ನರು, ಬೌದ್ಧರು, ಜೈನರು ಮತ್ತು ಪಾರ್ಸಿಗಳಿಗೆ ಭಾರತೀಯ ಪೌರತ್ವಕ್ಕೆ ಮಾರ್ಗವನ್ನು ಒದಗಿಸಲು ಸಿಎಎ 1955 ರ ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ.

ಸಿಎಎ ಅನುಷ್ಠಾನದ ಬಗ್ಗೆ ಆಡಳಿತಾರೂಢ ಭಾರತೀಯ ಜನತಾ ಪಕ್ಷವು ತನ್ನ ಹಿಂದಿನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಆದರೆ ಅದರ ನಿಯಮಗಳನ್ನು ತಿಳಿಸಿರಲಿಲ್ಲ. ಕಾಯ್ದೆಯ 2019ರ ತಿದ್ದುಪಡಿಯ ಪ್ರಕಾರ ಡಿಸೆಂಬರ್ 31, 2014 ರವರೆಗೆ ಭಾರತಕ್ಕೆ ಪ್ರವೇಶಿಸಿದ ಮತ್ತು ತಮ್ಮ ಮೂಲ ದೇಶದಲ್ಲಿ “ಧಾರ್ಮಿಕ ಕಿರುಕುಳ ಅಥವಾ ಭಯ ಅಥವಾ ಧಾರ್ಮಿಕ ಕಿರುಕುಳ” ಅನುಭವಿಸಿದ ವಲಸಿಗರಿಗೆ ಭಾರತೀಯ ಪೌರತ್ವ ಲಭಿಸುತ್ತದೆ.

ಸಿಎಎಗೆ 2019 ರ ತಿದ್ದುಪಡಿ ಮೂಲಕ ಮೇಲೆ ಹೇಳಿರುವ ದೇಶಗಳ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ನೀಡುವ ಕಾಯುವಿಕೆಯ ಹನ್ನೆರಡು ವರ್ಷಗಳನ್ನು ಕೇವಲ ಆರು ವರ್ಷಗಳಿಗೆ ಇಳಿಸಲಾಗಿದೆ. ಸಿಎಎ ಕುರಿತ ಗುಪ್ತಚರ ಬ್ಯೂರೋ ವರದಿಯ ಪ್ರಕಾರ, ಕಾಯ್ದೆಯ ನಿಯಮಗಳು ಪ್ರಕಟಗೊಂಡ ತಕ್ಷಣವೇ 30,000 ಕ್ಕೂ ಹೆಚ್ಚು ಫಲಾನುಭವಿಗಳು (ವಲಸಿಗರು) ಇದರ ಲಾಭವನ್ನು ಪಡೆಯುತ್ತಾರೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಸಿಎಎ ಅನುಷ್ಠಾನ ಮೋದಿ ಸರ್ಕಾರದ ದಿಟ್ಟ ನಿರ್ಧಾರ

Continue Reading

ದೇಶ

Modi Meditation: ಮೋದಿಗೆ ಧ್ಯಾನ ಮಾಡಲು ಬಿಡಬೇಡಿ; ಚುನಾವಣೆ ಆಯೋಗಕ್ಕೆ ಕಾಂಗ್ರೆಸ್ ಮೊರೆ!

Modi Meditation: ಸ್ವಾಮಿ ವಿವೇಕಾನಂದ ರಾಕ್ ಮೆಮೋರಿಯಲ್ ಭಾರತದ ದಕ್ಷಿಣ ತುದಿಯಾದ ಕನ್ಯಾಕುಮಾರಿಯ ಸಮುದ್ರದ ಮಧ್ಯದಲ್ಲಿದೆ. ಇದರು ತಮಿಳು ಸಂತ ತಿರುವಳ್ಳುವರ್ ಅವರ ಏಕಶಿಲಾ ಪ್ರತಿಮೆಗೆ ಹತ್ತಿರದಲ್ಲಿದೆ. ಮೂರನೇ ಅವಧಿಗೆ ಪ್ರಧಾನಿಯಾಗುವ ಕನಸು ಹೊಂದಿರುವ ನರೇಂದ್ರ ಮೋದಿ ಗುರುವಾರ (ಮೇ 30) ಸಂಜೆ ಕನ್ಯಾಕುಮಾರಿಗೆ ಭೇಟಿ ನೀಡಿದ್ದಾರೆ. ಬಳಿಕ ಜೂನ್ 1 ರಂದು ದೆಹಲಿಗೆ ತೆರಳುವ ಸಾಧ್ಯತೆ ಇದೆ.

VISTARANEWS.COM


on

Modi Meditation
Koo

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪಾಕಿಸ್ತಾನ, ಜಮ್ಮು-ಕಾಶ್ಮೀರ, ಮೀಸಲಾತಿ, ರಾಮಮಂದಿರ, ಜಾತಿ, ಧರ್ಮ ಸೇರಿ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಇದುವರೆಗೆ ಕಾಂಗ್ರೆಸ್‌ ಹಾಗೂ ಬಿಜೆಪಿ ಮಧ್ಯೆ ವಿಷಯಗಳ ಕುರಿತು ಟೀಕೆ, ವಾದ, ವಾಗ್ವಾದಗಳು ನಡೆದಿವೆ. ಈಗ ಚುನಾವಣೆ ಅಂತಿಮ ಹಂತ ತಲುಪಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಧ್ಯಾನ (Modi Meditation) ಮಾಡಲು ತೀರ್ಮಾನಿಸಿದ್ದಾರೆ. ಆದರೆ, ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಎಂದು ಚುನಾವಣೆ ಆಯೋಗಕ್ಕೆ ಕಾಂಗ್ರೆಸ್‌ ದೂರು ನೀಡಿದೆ.

ನರೇಂದ್ರ ಮೋದಿ ಅವರು ಗುರುವಾರ (ಮೇ 30) ತಮಿಳುನಾಡಿನ ಕನ್ಯಾಕುಮಾರಿಗೆ ಭೇಟಿ ನೀಡಲಿದ್ದಾರೆ. ಕನ್ಯಾಕುಮಾರಿಯಲ್ಲಿರುವ ರಾಕ್‌ ಮೆಮೋರಿಯಲ್‌ಗೆ ಭೇಟಿ ನೀಡಲಿದ್ದಾರೆ. ಮೇ 30 ಸಂಜೆಯಿಂದ ಜೂನ್‌ 1ರವರೆಗೆ ಧ್ಯಾನ ಮಂಟಪದಲ್ಲಿ ಮೋದಿ ಅವರು ಧ್ಯಾನ ಮಾಡಲು ತೀರ್ಮಾನಿಸಿದ್ದಾರೆ. ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ ಸ್ಥಳದಲ್ಲಿಯೇ ಮೋದಿ ಕೂಡ ಧ್ಯಾನ ಕೈಗೊಳ್ಳಲು ತೀರ್ಮಾನಿಸಿದ್ದಾರೆ. ಇದು ಈಗ ದೇಶದ ಗಮನ ಸೆಳೆದಿದ್ದು, ಕಾಂಗ್ರೆಸ್‌ ದೂರು ನೀಡಿದೆ.

“ಜೂನ್‌ 1ರಂದು ಏಳನೇ ಅಥವಾ ಕೊನೆಯ ಹಂತದ ಮತದಾನ ನಡೆಯಲಿದೆ. ಮಾದರಿ ನೀತಿ ಸಂಹಿತೆ ಪ್ರಕಾರ, ಮತದಾನಕ್ಕೂ 48 ಗಂಟೆ ಮೊದಲು ಯಾರೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪ್ರಚಾರ ಕೈಗೊಳ್ಳಬಾರದು. ನರೇಂದ್ರ ಮೋದಿ ಅವರು ಧ್ಯಾನ ಸೇರಿ ಏನು ಬೇಕಾದರೂ ಮಾಡಬಹುದು. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಅವರು ಮಾದರಿ ನೀತಿ ಸಂಹಿತೆಯನ್ನು ಮೀರಿ ಧ್ಯಾನ ಮಾಡಲು ತೀರ್ಮಾನಿಸಿದ್ದಾರೆ. ಇದು ಮತದಾನದ ಮೇಲೆ ಪರಿಣಾಮ ಬೀರಲಿದೆ. ಹಾಗಾಗಿ, ನರೇಂದ್ರ ಮೋದಿ ವಿರುದ್ಧ ನಾವು ಚುನಾವಣೆ ಆಯೋಗಕ್ಕೆ ದೂರು ನೀಡಿದ್ದೇವೆ” ಎಂದು ಕಾಂಗ್ರೆಸ್‌ ನಾಯಕ ಅಭಿಷೇಕ್‌ ಮನು ಸಿಂಘ್ವಿ ದೆಹಲಿಯಲ್ಲಿ ಮಾಹಿತಿ ನೀಡಿದ್ದಾರೆ.

“ಮೇ 30ರ ಸಂಜೆ 7 ಗಂಟೆಯಿಂದ ಜೂನ್‌ 1ರವರೆಗೆ ರಾಜಕೀಯ ನಾಯಕರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪ್ರಚಾರ ಮಾಡಬಾರದು ಎಂಬ ನಿಯಮವಿದೆ. ಆದರೆ, ನರೇಂದ್ರ ಮೋದಿ ಅವರು ಮೇ 30ರಿಂದ ಜೂನ್‌ 1ರವರೆಗೆ ಧ್ಯಾನ ಮಾಡಲಿದ್ದಾರೆ. ಇದರ ಕುರಿತು ಮಾಧ್ಯಮಗಳಲ್ಲಿ ವರದಿಗಳು ಪ್ರಸಾರವಾಗುತ್ತದೆ. ಪತ್ರಿಕೆಗಳಲ್ಲೂ ವರದಿಗಳು ಪ್ರಕಟವಾಗುತ್ತವೆ. ಇದರಿಂದ ಚುನಾವಣೆ ಮೇಲೆ ಪರಿಣಾಮ ಬೀರಲಿದೆ. ಹಾಗಾಗಿ, ನರೇಂದ್ರ ಮೋದಿ ಅವರು ಜೂನ್‌ 1ರ ಸಂಜೆಯಿಂದ ಧ್ಯಾನ ಆರಂಭಿಸಬೇಕು ಎಂಬುದಾಗಿ ಚುನಾವಣೆ ಆಯೋಗವು ಸೂಚಿಸಬೇಕು. ಜೂನ್‌ 30ರಂದೇ ಧ್ಯಾನ ಆರಂಭಿಸುವುದಾದರೆ, ಮಾಧ್ಯಮಗಳಲ್ಲಿ ವರದಿ ಪ್ರಕಟಿಸುವುದನ್ನು ತಡೆಯಬೇಕು ಎಂಬುದಾಗಿ ಮನವಿ ಮಾಡಿದ್ದೇವೆ” ಎಂದು ಸಿಂಘ್ವಿ ತಿಳಿಸಿದ್ದಾರೆ.

ಇದನ್ನೂ ಓದಿ: Lok Sabha Election : ಕನ್ಯಾಕುಮಾರಿಯಲ್ಲಿ 48 ಗಂಟೆಗಳ ಕಾಲ ಧ್ಯಾನ ಮಾಡಲಿದ್ದಾರೆ ಮೋದಿ

Continue Reading

ಕ್ರೀಡೆ

T20 World Cup 2024: ಟಿ20 ವಿಶ್ವಕಪ್​ನಲ್ಲಿ ಎಷ್ಟು ಬೌಲರ್​ಗಳು ಹ್ಯಾಟ್ರಿಕ್​ ವಿಕೆಟ್​ ಕಿತ್ತ ಸಾಧನೆ ಮಾಡಿದ್ದಾರೆ?

T20 World Cup 2024: ಕಳೆದ 8 ಆವೃತ್ತಿಯ ಟಿ20 ವಿಶ್ವಕಪ್​ ಟೂರ್ನಿ(T20 World Cup 2024)ಯಲ್ಲಿ ಒಟ್ಟು 6 ಬೌಲರ್​ಗಳು ಹ್ಯಾಟ್ರಿಕ್​ ವಿಕೆಟ್​ ಕಿತ್ತ ಸಾಧನೆ ಮಾಡಿದ್ದಾರೆ. ಈ ಪೈಕಿ 2021ರಲ್ಲಿ ಗರಿಷ್ಠ ಮೂರು ಮಂದಿ ಬೌಲರ್​ಗಳಿ ಈ ಸಾಧನೆ ಮಾಡಿದ್ದಾರೆ.

VISTARANEWS.COM


on

T20 World Cup 2024
Koo

ಬೆಂಗಳೂರು: ಟಿ20 ವಿಶ್ವಕಪ್​ ಟೂರ್ನಿ(T20 World Cup 2024) ಆರಂಭಕ್ಕೆ ದಿನಗಣನೆ ಶುರುವಾಗಿದೆ. ಇದೇ ಶನಿವಾರ(ಜೂನ್​ 1)ದಿಂದ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ. ಆತಿಥೇಯ ಅಮೆರಿಕ ಮತ್ತು ಕೆನಡಾ ತಂಡಗಳು ಉದ್ಘಾಟನ ಪಂದ್ಯದಲ್ಲಿ ಕಣಕ್ಕಿಳಿಯಲಿವೆ. ಕಳೆದ 8 ಆವೃತ್ತಿಯ ಟೂರ್ನಿಯಲ್ಲಿ(t20 world cup history) ಎಷ್ಟು ಬೌಲರ್​ಗಳು ಹ್ಯಾಟ್ರಿಕ್​ ವಿಕೆಟ್(Hat-tricks in Men’s T20 World Cup)​ ಪಡೆದಿದ್ದಾರೆ ಎಂಬ ಕುತೂಹಲಕಾರಿ ವರದಿ ಇಂತಿದೆ.

ಬ್ರೆಟ್​ ಲೀ


ಆಸ್ಟ್ರೇಲಿಯಾದ ಘಾತಕ ಮಾಜಿ ವೇಗಿ ಬ್ರೆಟ್​ ಲೀ ಅವರು ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಹ್ಯಾಟ್ರಿಕ್​ ವಿಕೆಟ್​ ಪಡೆದ ಮೊದಲ ಬೌಲರ್​. ಈ ಸಾಧನೆಯನ್ನು ಅವರು 2007 ಉದ್ಘಾಟನ ಆವೃತ್ತಿಯಲ್ಲೇ ನಿರ್ಮಿಸಿದ್ದು ವಿಶೇಷ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಶಕೀಬ್ ಅಲ್ ಹಸನ್, ಮಶ್ರಫೆ ಮೊರ್ತಜಾ, ಅಲೋಕ್ ಕಪಾಲಿ ವಿಕೆಟ್​ ಕೀಳುವ ಮೂಲಕ ಈ ದಾಖಲೆ ಬರೆದಿದ್ದರು.


ಕರ್ಟಿಸ್ ಕ್ಯಾಂಪರ್


ಬ್ರೆಟ್​ ಲೀ ಬಳಿಕ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್​ ದಾಖಲಾದದ್ದು 2021ರಲ್ಲಿ. ಐರ್ಲೆಂಡ್​ನ ಕರ್ಟಿಸ್ ಕ್ಯಾಂಪರ್​ ಈ ದಾಖಲೆ ಮಾಡಿದ ಬೌಲರ್​. ನೆದರ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಕರ್ಟಿಸ್ ಕ್ಯಾಂಪರ್ ಸತತವಾಗಿ ನಾಲ್ಕು ವಿಕೆಟ್​ ಕಿತ್ತು ಮಿಂಚಿದ್ದರು. ಇವರ ಬೌಲಿಂಗ್​ ದಾಳಿಗೆ ವಿಕೆಟ್​ ಕಳೆದುಕೊಂಡ ಬ್ಯಾಟರ್​ಗಳೆಂದರೆ, ಕಾಲಿನ್ ಅಕರ್ಮನ್, ರಿಯಾನ್ ಟೆನ್ ಡೋಸ್ಚೇಟ್, ಸ್ಕಾಟ್ ಎಡ್ವರ್ಡ್ಸ್ ಮತ್ತು ರೋಲೋಫ್ ವ್ಯಾನ್ ಡೆರ್ ಮೆರ್ವೆ.


ವನಿಂದು ಹಸರಂಗ


ಶ್ರೀಲಂಕಾದ ಸ್ಪಿನ್ನರ್​ ವನಿಂದು ಹಸರಂಗ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್​ ಕಿತ್ತ ಬೌಲರ್​ಗಳ ಯಾದಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಹಸರಂಗ 2021ರಲ್ಲಿ ನಡೆದಿದ್ದ ಆವೃತ್ತಿಯಲ್ಲಿ ಈ ಸಾಧನೆ ಮಾಡಿದ್ದರು. ದಕ್ಷಿಣ ಆಫ್ರಿಕಾದ ಐಡೆನ್ ಮಾರ್ಕ್ರಾಮ್, ಟೆಂಬಾ ಬವುಮಾ, ಡ್ವೈನ್ ಪ್ರಿಟೋರಿಯಸ್ ವಿಕೆಟ್​ ಕೀಳುವ ಮೂಲಕ ಈ ದಾಖಲೆ ಬರೆದರು.


ಕಗಿಸೊ ರಬಾಡ


ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ ಕೂಡ 2021ರಲ್ಲಿ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್​ ಕಿತ್ತ ಸಾಧನೆ ಮಾಡಿದ್ದರು. ಇಂಗ್ಲೆಂಡ್​ ತಂಡದ ಕ್ರಿಸ್ ವೋಕ್ಸ್, ಇಯಾನ್ ಮೋರ್ಗನ್, ಕ್ರಿಸ್ ಜೋರ್ಡಾನ್ ವಿಕೆಟ್​ ಕೀಳುವ ಮೂಲಕ ಈ ಸಾಧನೆ ತೋರಿದ್ದರು.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ನಲ್ಲಿ ಅತ್ಯಧಿಕ ಸಿಕ್ಸರ್​ ಬಾರಿಸಿದ ಭಾರತದ ಬ್ಯಾಟರ್​ಗಳಿವರು


ಕಾರ್ತಿಕ್ ಮೇಯಪ್ಪನ್

ಯುಎಇ ಸ್ಪಿನ್ನರ್ ಕಾರ್ತಿಕ್ ಮೇಯಪ್ಪನ್ ಟಿ20 ವಿಶ್ವ ಕಪ್​ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಿತ್ತ 5ನೇ ಬೌಲರ್​ ಎನಿಸಿಕೊಂಡಿದ್ದಾರೆ. 2022ರಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ಧದ ಅರ್ಹತಾ ಪಂದ್ಯದಲ್ಲಿ ಕಾರ್ತಿಕ್ ಈ ಸಾಧನೆ ಮಾಡಿದ್ದರು. ಭಾನುಕ ರಾಜಪಕ್ಸೆ, ಚರಿತ್ ಅಸಲಂಕಾ, ದಸುನ್ ಶನಕ ವಿಕೆಟ್​ ಕಿತ್ತಿದ್ದರು. ಈ ಮೂಲಕ ಟಿ20 ವಿಶ್ವಕಪ್​ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಯುಎಇ ಆಟಗಾರ ಎನಿಸಿಕೊಂಡರು.


ಜೋಶ್ ಲಿಟಲ್


ಐರ್ಲೆಂಡ್​ ತಂಡದ ಜೋಶ್ ಲಿಟಲ್ ಟಿ20 ವಿಶ್ವ ಕಪ್​ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಿತ್ತ ವಿಶ್ವದ 6ನೇ ಬೌಲರ್​ ಎನಿಸಿಕೊಂಡಿದ್ದಾರೆ. ನ್ಯೂಜಿಲ್ಯಾಂಡ್​ ವಿರುದ್ಧದ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದರು. 2022ರ ಆವೃತ್ತಿ ಇದಾಗಿತ್ತು. ಕೇನ್ ವಿಲಿಯಮ್ಸನ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್ ವಿಕೆಟ್​ ಒಪ್ಪಿಸಿದ ಬ್ಯಾಟರ್​ಗಳು.

ಇದನ್ನೂ ಓದಿ T20 World Cup 2024: ಮಿನಿ ವಿಶ್ವಕಪ್​ ಸಮರದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್‌ ಗಳಿಸಿದ ದಾಂಡಿಗರಿವರು!

Continue Reading

ದೇಶ

Rudram II: ಆಗಸದಿಂದಲೇ ವೈರಿಗಳನ್ನು ನಾಶಪಡಿಸುವ ರುದ್ರಂ II ಕ್ಷಿಪಣಿ ಪ್ರಯೋಗ ಯಶಸ್ವಿ; ಶತ್ರುಗಳಿಗೆ ನಡುಕ!

Rudram II: ರುದ್ರಂ II ಕ್ಷಿಪಣಿಯು ಪ್ರಮುಖ ಅಸ್ತ್ರವಾಗಿದೆ. ಸುಮಾರು 100 ಕಿಲೋಮೀಟರ್‌ ದೂರದಲ್ಲಿರುವ ಶತ್ರುಗಳ ರೇಡಾರ್‌ ಸಿಸ್ಟಮ್‌ಗಳು, ರೇಡಿಯೊಗಳು ಸೇರಿ ಯಾವುದೇ ಸಂವಹನ ಸಾಧನಗಳನ್ನು ಟ್ರ್ಯಾಕ್‌ ಮಾಡುವ ಸಾಮರ್ಥ್ಯವನ್ನು ಇದು ಹೊಂದಿದೆ. ಇದನ್ನು ದೇಶೀಯವಾಗಿಯೇ ತಯಾರಿಸಿರುವ ಕಾರಣ ಮೇಕ್‌ ಇನ್‌ ಇಂಡಿಯಾಗೂ ಬಲ ಬಂದಂತಾಗಿದೆ.

VISTARANEWS.COM


on

Rudram II
Koo

ಭುವನೇಶ್ವರ: ದೇಶದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (DRDO) ಬುಧವಾರ (ಮೇ 29) ಹೊಸ ಮೈಲುಗಲ್ಲು ಸ್ಥಾಪಿಸಿದೆ. ದೇಶೀಯವಾಗಿ ನಿರ್ಮಿಸಿದ, ಆ್ಯಂಟಿ-ರೇಡಿಯೇಷನ್‌ ಸಾಮರ್ಥ್ಯ (ವೈರಿಗಳ ರೇಡಾರ್‌, ಜಾಮರ್‌ ಹಾಗೂ ರೇಡಿಯೊಗಳನ್ನು ಗುರುತಿಸಿ, ಅವುಗಳನ್ನು ನಾಶಪಡಿಸುವ ಸಾಮರ್ಥ್ಯ) ಹೊಂದಿರುವ ರುದ್ರಂ II (Rudram II) ಕ್ಷಿಪಣಿಯ ಪ್ರಯೋಗಾರ್ಥ ಉಡಾವಣೆಯನ್ನು ಯಶಸ್ವಿಯಾಗಿ ಕೈಗೊಂಡಿದೆ. ಒಡಿಶಾದ (Odisha) ಕರಾವಳಿ ಪ್ರದೇಶದಿಂದ ನಡೆಸಿದ ಪ್ರಯೋಗಾರ್ಥ ಉಡಾವಣೆಯು ಯಶಸ್ವಿಯಾಗಿದೆ.

ಭಾರತೀಯ ವಾಯುಪಡೆಯ ಸುಖೋಯ್-‌30 ಎಂಕೆ-I (Su-30 MK-I) ಯುದ್ಧವಿಮಾನದ ಮೂಲಕ ಏರ್‌ ಟು ಸರ್ಫೆಸ್‌ ದಾಳಿಯ ದಕ್ಷತೆ ಹೊಂದಿರುವ (Air To Surface- ಯುದ್ಧವಿಮಾನದಿಂದ ಕ್ಷಿಪಣಿ ದಾಳಿ ನಡೆಸಿ ಭೂಮಿ ಹಾಗೂ ಸಾಗರದಲ್ಲಿರುವ ಶತ್ರುಗಳನ್ನು ಹೊಡೆದುರುಳಿಸುವ ಸಾಮರ್ಥ್ಯ) ಕ್ಷಿಪಣಿಯನ್ನು ಪ್ರಯೋಗಕ್ಕೆ ಒಳಪಡಿಸಲಾಗಿದೆ. ಪ್ರಯೋಗದ ಯಶಸ್ಸಿನಿಂದಾಗಿ ಭಾರತದ ವಾಯುಪಡೆಗೆ ಹೆಚ್ಚಿನ ಬಲ ಬಂದಂತಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಅಭಿನಂದನೆ ತಿಳಿಸಿದ ರಾಜನಾಥ್‌ ಸಿಂಗ್‌

ರುದ್ರಂ II ಕ್ಷಿಪಣಿಯ ಯಶಸ್ವಿ ಪ್ರಯೋಗಕ್ಕೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅಭಿನಂದನೆ ಸಲ್ಲಿಸಿದ್ದಾರೆ. “ರುದ್ರಂ II ಕ್ಷಿಪಣಿಯನ್ನು ಡಿಆರ್‌ಡಿಒ ಯಶಸ್ವಿಯಾಗಿ ಪ್ರಯೋಗಕ್ಕೆ ಒಳಪಡಿಸಿದೆ. ಇದಕ್ಕಾಗಿ ಡಿಆರ್‌ಡಿಒ, ವಾಯುಪಡೆಗೆ ಅಭಿನಂದನೆಗಳು. ಕ್ಷಿಪಣಿಯಿಂದ ಭಾರತೀಯ ಸೇನೆಗೆ ಭೀಮಬಲ ಸಿಕ್ಕಂತಾಗಲಿದೆ” ಎಂಬುದಾಗಿ ರಾಜನಾಥ್‌ ಸಿಂಗ್‌ ಹೇಳಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಕಚೇರಿಯು ಟ್ವೀಟ್‌ ಮಾಡಿದೆ. ಡಿಆರ್‌ಡಿಒ ಸಾಧನೆಗೆ ಹಲವರು ಅಭಿನಂದನೆ ಸಲ್ಲಿಸಿದ್ದಾರೆ.

ಏನಿದರ ಉಪಯೋಗ?

ಗಡಿ ಹಾಗೂ ಸಮುದ್ರ ಪ್ರದೇಶದಲ್ಲಿ ಭಾರತದ ಮೇಲೆ ದಾಳಿ ನಡೆಸುವ, ಆಕ್ರಮಣಕಾರಿ ನೀತಿ ಅನುಸರಿಸುವ ಚೀನಾ ಹಾಗೂ ಪಾಕಿಸ್ತಾನಕ್ಕೆ ತಿರುಗೇಟು ನೀಡಲು ಸಂಪೂರ್ಣ ದೇಶೀಯವಾಗಿಯೇ ತಯಾರಿಸಿದ ರುದ್ರಂ II ಕ್ಷಿಪಣಿಯು ಪ್ರಮುಖ ಅಸ್ತ್ರವಾಗಿದೆ. ಸುಮಾರು 100 ಕಿಲೋಮೀಟರ್‌ ದೂರದಲ್ಲಿರುವ ಶತ್ರುಗಳ ರೇಡಾರ್‌ ಸಿಸ್ಟಮ್‌ಗಳು, ರೇಡಿಯೊಗಳು ಸೇರಿ ಯಾವುದೇ ಸಂವಹನ ಸಾಧನಗಳನ್ನು ಟ್ರ್ಯಾಕ್‌ ಮಾಡುವ ಸಾಮರ್ಥ್ಯವನ್ನು ಇದು ಹೊಂದಿದೆ. ಆಗಸದಿಂದಲೇ ಸಮುದ್ರ ಹಾಗೂ ಭೂಮಿ ಮೇಲಿನ ವೈರಿಗಳನ್ನು ಹೊಡೆದುರುಳಿಸುವ ದಕ್ಷತೆ ಹೊಂದಿದೆ. ಹಾಗಾಗಿ ಕ್ಷಿಪಣಿ ಪ್ರಯೋಗದ ಯಶಸ್ಸು ಒಂದು ಮೈಲುಗಲ್ಲು ಎಂದೇ ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: DRDO India: ಫ್ಲೈಯಿಂಗ್ ವಿಂಗ್ ಟೆಕ್ನಾಲಜಿ ಡೆಮಾನ್‌ಸ್ಟ್ರೇಟರ್‌ನ ಹಾರಾಟದ ಪ್ರಯೋಗ ಯಶಸ್ವಿ

Continue Reading
Advertisement
CAA Certificate
ದೇಶ34 mins ago

CAA Certificate: ದೀದಿ ವಿರೋಧದ ಮಧ್ಯೆಯೂ ಬಂಗಾಳದಲ್ಲಿ ಸಿಎಎ ಜಾರಿಗೆ ತಂದ ಕೇಂದ್ರ; ಪೌರತ್ವ ಪ್ರದಾನ!

Modi Meditation
ದೇಶ1 hour ago

Modi Meditation: ಮೋದಿಗೆ ಧ್ಯಾನ ಮಾಡಲು ಬಿಡಬೇಡಿ; ಚುನಾವಣೆ ಆಯೋಗಕ್ಕೆ ಕಾಂಗ್ರೆಸ್ ಮೊರೆ!

T20 World Cup 2024
ಕ್ರೀಡೆ1 hour ago

T20 World Cup 2024: ಟಿ20 ವಿಶ್ವಕಪ್​ನಲ್ಲಿ ಎಷ್ಟು ಬೌಲರ್​ಗಳು ಹ್ಯಾಟ್ರಿಕ್​ ವಿಕೆಟ್​ ಕಿತ್ತ ಸಾಧನೆ ಮಾಡಿದ್ದಾರೆ?

Self Harming
ಕರ್ನಾಟಕ2 hours ago

Self Harming: ಶಾಲೆಗೆ ಹೋಗಲು ಬೇಸತ್ತು 11 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ

Rudram II
ದೇಶ3 hours ago

Rudram II: ಆಗಸದಿಂದಲೇ ವೈರಿಗಳನ್ನು ನಾಶಪಡಿಸುವ ರುದ್ರಂ II ಕ್ಷಿಪಣಿ ಪ್ರಯೋಗ ಯಶಸ್ವಿ; ಶತ್ರುಗಳಿಗೆ ನಡುಕ!

Chahal-Dhanashree
ಕ್ರೀಡೆ3 hours ago

Chahal-Dhanashree: ಶೀಘ್ರದಲ್ಲೇ ಸಿಹಿ ಸುದ್ದಿ ನೀಡಲಿದ್ದಾರಾ ಚಹಲ್?; ಕುತೂಹಲ ಮೂಡಿಸಿದ ಪತ್ನಿಯ ಪೋಸ್ಟ್!

Timing change of 5 trains arriving at Sri Siddharooda Swamiji Railway Station Hubballi
ಹುಬ್ಬಳ್ಳಿ3 hours ago

Hubballi Train: ಪ್ರಯಾಣಿಕರೇ ಗಮನಿಸಿ; ಹುಬ್ಬಳ್ಳಿಗೆ ಆಗಮಿಸುವ 5 ರೈಲುಗಳ ಸಮಯ ಬದಲಾಗಿದೆ

Valmiki corporation Scam
ಕರ್ನಾಟಕ3 hours ago

Valmiki Corporation Scam: ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಪ್ರಕರಣ; ಎಂಡಿ, ಲೆಕ್ಕಾಧಿಕಾರಿ ಅಮಾನತು

PM Kisan Samman
ಕೃಷಿ3 hours ago

PM Kisan Samman: ಪಿಎಂ ಕಿಸಾನ್ ಸಮ್ಮಾನ್ 17ನೇ ಕಂತಿನ ಹಣ ಬಿಡುಗಡೆ ಯಾವಾಗ? ಪರಿಶೀಲಿಸುವುದು ಹೇಗೆ?

Nita Ambani
ವಾಣಿಜ್ಯ4 hours ago

Nita Ambani: ನೀತಾ ಅಂಬಾನಿ ಕುಡಿಯುವ ನೀರಿನ ಬಾಟಲಿಯ ಬೆಲೆ 49 ಲಕ್ಷ ರೂಪಾಯಿ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ1 day ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು2 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ3 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು3 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ7 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌