ಕಾಡಾನೆಗಳ ನಿಯಂತ್ರಣಕ್ಕೆ ಸ್ಟೀಲ್ ವೈಯರ್ ರೋಪ್ ಬ್ಯಾರಿಕೇಡ್ ಅಳವಡಿಕೆ - Vistara News

ಮೈಸೂರು

ಕಾಡಾನೆಗಳ ನಿಯಂತ್ರಣಕ್ಕೆ ಸ್ಟೀಲ್ ವೈಯರ್ ರೋಪ್ ಬ್ಯಾರಿಕೇಡ್ ಅಳವಡಿಕೆ

ಇತ್ತೀಚೆಗೆ ಕಾಡಾನೆ ದಾಳಿ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಇದರ ತಡೆಗಾಗಿ ಪ್ರಯತ್ನ ಮುಂದುವರೆದಿದೆ. ಇದೀಗ ಹೊಸ ಹೊಸ ಪ್ರಯೋಗಗಳಿಗೆ ಕೈ ಹಾಕಿದ್ದು ಕಾಡಾನೆಗಳಿಗೆ ಹಾನಿಯಾಗದಂತೆ ಜನ- ಸಾಮಾನ್ಯರಿಗೂ ಅಪಾಯವಾಗದಂತೆ ಎಚ್ಚರವಹಿಸಲಾಗುತ್ತಿದೆ.

VISTARANEWS.COM


on

ಸ್ಟೀಲ್ ವೈಯರ್ ರೋಪ್ ಬ್ಯಾರಿಕೇಡ್
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಹಳ್ಳಿ ವಲಯ ವ್ಯಾಪ್ತಿಯಲ್ಲಿ ಸ್ಟೀಲ್ ವೈಯರ್ ರೋಪ್ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ. ಇದೊಂದು ಹೊಸತನದ ಪ್ರಯೋಗವಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ಕಾಡಿನಿಂದ ನಾಡಿಗೆ ಲಗ್ಗೆ ಇಡುವ ಕಾಡಾನೆಗಳ ನಿಯಂತ್ರಣಕ್ಕೆ, ರಾಜ್ಯದಲ್ಲೇ ಮೊದಲ ಬಾರಿಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಅಳವಡಿಸಿರುವ ಸ್ಟೀಲ್ ವೈಯರ್ ರೋಪ್ ಬ್ಯಾರಿಕೇಡ್ ಅನ್ನು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸೋಮಶೇಖರ್ ಅವರು ವೀಕ್ಷಿಸಿದರು.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಹಳ್ಳಿ ವಲಯ ವ್ಯಾಪ್ತಿಯಲ್ಲಿ ಸ್ಟೀಲ್ ವೈಯರ್ ರೋಪ್ ಬ್ಯಾರಿಕೇಡ್ ಅನ್ನು ಅಳವಡಿಕೆ ಮಾಡಲಾಗಿದೆ. ರೈಲ್ವೆ ಹಳಿ ಬ್ಯಾರಕೇಡ್‌ಗಳನ್ನೇ ಆನೆಗಳು ದಾಟಿ ಬರುವುದರಿಂದ ಸ್ಟೀಲ್ ವೈಯರ್ ರೋಪ್ ಬ್ಯಾರಿಕೇಡ್ ಅಳವಡಿಕೆ, ಆನೆಗಳ ತಡೆಗೆ ಹೇಗೆ ಸಹಕಾರಿಯಾಗಲಿದೆ ಎಂಬುದನ್ನು ಸಚಿವರಿಗೆ ಅರಣ್ಯ ಅಧಿಕಾರಿಗಳು ಪ್ರಾತ್ಯಕ್ಷಿಕೆ ಮೂಲಕ‌ ವಿವರಿಸಿದರು.

ಸ್ಟೀಲ್ ವೈಯರ್ ರೋಪ್ ಬ್ಯಾರಿಕೇಡ್

ರೈಲ್ವೆ ಬ್ಯಾರಿಕೇಡ್‌ಗೆ ಹಳಿಗಳ ಕೊರತೆ ಹಾಗೂ ದುಬಾರಿ ವೆಚ್ಚ ತಗುಲುವುದರಿಂದ ರಾಜ್ಯದಲ್ಲಿ ಇದೇ ಪ್ರಥಮಬಾರಿಗೆ ರೋಪ್ ಬ್ಯಾರಿಯರ್ ಅಳವಡಿಸಲಾಗಿದೆ. 13 ಅಡಿ ಉದ್ದದ 1.5 ಟನ್ ತೂಕದ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಸಿಮೆಂಟ್ ಕಂಬಗಳನ್ನು ನಿರ್ಮಿಸಿ ಅದನ್ನು ಭೂಮಿಯಿಂದ 5 ಅಡಿ ಆಳದಲ್ಲಿ ನೆಡಲಾಗುತ್ತದೆ. ನಾಗರಹೊಳೆಯಲ್ಲಿ ಪ್ರಥಮವಾಗಿ ಪ್ರಯೋಗ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಇತ್ತೀಚಿನ ದಿನಗಳಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದೆ. ಕಾಡಿನಿಂದ ನಾಡಿಗೆ ಆನೆಗಳ ದಾಳಿ ತಡೆಗೆ ರೈಲ್ವೆ ಹಳಿಗಳ ಬ್ಯಾರಿಕೇಡ್, ಸೋಲಾರ್ ತಂತಿ ಬೇಲಿ ಸೇರಿದಂತೆ ಹಲವು ಕ್ರಮಗಳನ್ನು ಅರಣ್ಯ ಇಲಾಖೆ ಕೈಗೊಂಡಿದೆ. ಈಗ ಸ್ಟೀಲ್ ವೈಯರ್ ರೋಪ್ ಬ್ಯಾರಿಕೇಡ್ ಅಳವಡಿಕೆ ಮಾಡಿದ್ದು ಇದರಿಂದ ಆನೆಗಳು ನಾಡಿಗೆ ಆಗಮಿಸುವುದನ್ನು ತಡೆಯಲು ಸಹಕಾರಿಯಾಗುತ್ತದೆ ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ: ಆನೆ ಮತ್ತು ಮಾನವನ ಸಂಘರ್ಷ : ಆನೆಗಳನ್ನು ಕಾಡಿಗೆ ಓಡಿಸುವಂತೆ ರೈತ ಸಂಘ ಒತ್ತಾಯ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಳೆ

Karnataka Weather : ಬೆಂಗಳೂರು, ಚಿಕ್ಕಮಗಳೂರಲ್ಲಿ ಸುರಿದ ಧಾರಾಕಾರ ಮಳೆ

Karnataka Weather Forecast : ರಾಜಧಾನಿ ಬೆಂಗಳೂರು, ಚಿಕ್ಕಮಗಳೂರಲ್ಲಿ (Rain News) ಮಳೆಯಾಗಿದ್ದು, ನಾಳೆ ಒಳನಾಡಿನ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗುವ (Heavy Rain) ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

VISTARANEWS.COM


on

By

Karnataka weather Forecast
Koo

ಚಿಕ್ಕಮಗಳೂರು/ಬೆಂಗಳೂರು:ಕಳೆದೊಂದು ವಾರದಿಂದ ಮಲೆನಾಡು ಭಾಗದಲ್ಲಿ ಬಿಡುವು ಕೊಟ್ಟಿದ್ದ ವರುಣ ಸೋಮವಾರ (Karnataka weather Forecast) ಅಬ್ಬರಿಸಿದ್ದ. ಕಾಫಿನಾಡು ಚಿಕ್ಕಮಗಳೂರಲ್ಲಿ ಒಂದು ಗಂಟೆಗೂ ಹೆಚ್ಚು ಸಮಯ ಧಾರಾಕಾರ ಮಳೆ (Rain News) ಸುರಿದಿದೆ. ಗಾಳಿ ಸಹಿತ ಮಳೆಗೆ ಸವಾರರು ಹೆಡ್ ಲೈಟ್ ಹಾಕಿಕೊಂಡೇ ವಾಹನ ಚಾಲನೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಾಳೂರು, ಬಣಕಲ್, ಚಾರ್ಮಾಡಿ ಘಾಟ್ ಸುತ್ತಮುತ್ತ ಭಾರೀ ಮಳೆಯಾಗಿದೆ. ನಿರಂತರ ಮಳೆಯಿಂದಾಗಿ ವಾಹನ ಸವಾರರು ಪರದಾಡಬೇಕಾಯಿತು. ಅದರಲ್ಲೂ ಚಾರ್ಮಾಡಿ ಘಾಟಿಯಲ್ಲಿ ವಾಹನಗಳು ಮಂದಗತಿಯಲ್ಲಿ ಸಾಗಿದ್ದವು. ಭಾರಿ ಮಳೆಗೆ ರಸ್ತೆ ಕಾಣದೆ ಹಲವರು ರಸ್ತೆ ಬದಿ ವಾಹನ ನಿಲ್ಲಿಸಿಕೊಂಡಿದ್ದರು.

ಬೆಂಗಳೂರಲ್ಲಿ ಸಣ್ಣ ಮಳೆ

ರಾಜಧಾನಿ ಬೆಂಗಳೂರಿನಲ್ಲೂ ಕಳೆದ ನಾಲ್ಕೈದು ದಿನಗಳಿಂದ ಮಳೆಯು ಮಾಯವಾಗಿತ್ತು. ನಗರದ ಹಲವು ಭಾಗಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆ ಶುರುವಾಗಿತ್ತು. ಮುಖ್ಯವಾಗಿ ಕಾರ್ಪೋರೇಶನ್, ಕೆಆರ್‌ ಮಾರ್ಕೆಟ್, ಮೆಜೆಸ್ಟಿಕ್, ಶೇಷಾದ್ರಿಪುರಂ ಸುತ್ತಮುತ್ತ ಹಗುರದಿಂದ ಕೂಡಿದ ಮಳೆಯಾಗಿದೆ. ದಿಢೀರ್‌ ಮಳೆಯಿಂದಾಗಿ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ತೊಂದರೆಯುನ್ನುಂಟಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕುಮಟಾದಲ್ಲಿ ಅತಿ ಹೆಚ್ಚು ಮಳೆ ದಾಖಲು

ನೈರುತ್ಯ ಮುಂಗಾರು ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಸಾಧಾರಣವಾಗಿತ್ತು. ದಕ್ಷಿಣ ಒಳನಾಡಿನಲ್ಲಿ ದುರ್ಬಲವಾಗಿತ್ತು. ಕರಾವಳಿ ಹಾಗೂ ಒಳನಾಡಿನ ಕೆಲವೆಡೆ ಮಳೆಯಾಗಿರುವ ವರದಿ ಆಗಿದೆ. ಉತ್ತರ ಕನ್ನಡದ ಕುಮಟಾದಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, 9 ಸೆಂ.ಮೀ ದಾಖಲಾಗಿದೆ.

ಉಳಿದಂತೆ ಗೇರ್ಸೊಪ್ಪ, ಗೋಕರ್ಣ, ಅಂಕೋಲಾ, ಗದಗದಲ್ಲಿ ತಲಾ 5 ಸೆಂ.ಮೀ ಮಳೆಯಾಗಿದೆ. ಮಂಕಿ, ಹಳಿಯಾಳ, ಶಿರಾಲಿ ಪಿಟಿಒ, ಸಂಕೇಶ್ವರ , ಕುಶಾಲನಗರದಲ್ಲಿ ತಲಾ 4 ಸೆಂ.ಮೀ ಮಳೆಯಾಗಿದೆ. ಇನ್ನೂ ಕಾರವಾರ, ಹೊನ್ನಾವರ, ನಿಪ್ಪಾಣಿಯಲ್ಲಿ 3 ಸೆಂ.ಮೀ ಹಾಗೂ ಯಲ್ಲಾಪುರ, ಮುಂಡಗೋಡು , ಚಿಕ್ಕೋಡಿ , ಹಿಡಕಲ್ ಅಣೆಕಟ್ಟು, ಬೆಳಗಾವಿ ವಿಮಾನ ನಿಲ್ದಾಣ, ಭಾಗಮಂಡಲದಲ್ಲಿ 2 ಸೆಂ.ಮೀ ಮಳೆಯಾಗಿದೆ. ಬೆಳ್ತಂಗಡಿ, ಸಿದ್ದಾಪುರ, ಜಗಲಬೆಟ್, ಕೋಟ, ಕಿರವ, ಕದ್ರಾ, ಲೋಂಡಾ, ಹಾವೇರಿ ಪಿಟಿಒ, ಔರಾದ್ , ಧಾರವಾಡ ಹಾಗೂ ಕುಂದಗೋಳ, ಚಿಂತಾಮಣಿ, ರಾಯಲ್ಪಾಡು, ಸೋಮವಾರಪೇಟೆ, ಕೊಡಗು, ಹಾರಂಗಿಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿರುವ ವರದಿ ಆಗಿದೆ.

ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

ಜೂನ್‌ 18ರಂದು ಕರಾವಳಿಯ ಬಹುತೇಕ ಸ್ಥಳಗಳಲ್ಲಿ ಗುಡುಗು ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಒಳನಾಡಿನ ಜಿಲ್ಲೆಗಳ ಅನೇಕ ಕಡೆಗಳಲ್ಲಿ ಬಿರುಗಾಳಿಯು ವೇಗವು 30-40 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ. ಜತೆಗೆ ಗುಡುಗು ಸಹಿತ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಬೆಂಗಳೂರಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಸಣ್ಣ ಪ್ರಮಾಣದಲ್ಲಿ ಮಳೆಯಾಗಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮೈಸೂರು

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Actor Darshan : ಕೊಲೆ ಕೇಸ್‌ನಲ್ಲಿ ಲಾಕ್‌ ಆಗಿರುವ ನಟ ದರ್ಶನ್‌ಗೆ ಒಂದರ ಮೇಲೊಂದು ಸಂಕಷ್ಟ ಎದುರಾಗಿದೆ. ಹಳೇ ಕೇಸ್‌ಗಳೆಲ್ಲವೂ ಇದೀಗ ತೆರೆದುಕೊಳ್ಳುತ್ತಿದ್ದು, ನಿಯಮ ಬಾಹಿರವಾಗಿ ಬಾರ್-ಹೆಡ್ ಬಾತುಕೋಳಿ ಸಾಕಿದ ಪ್ರಕರಣವನ್ನು ಅರಣ್ಯ ಇಲಾಖೆ ಚುರುಕುಗೊಳಿಸಿದೆ.

VISTARANEWS.COM


on

By

Actor Darshan
ಸಾಂದರ್ಭಿಕ ಚಿತ್ರ
Koo

ಮೈಸೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ಗೆ (Actor Darshan) ಮತ್ತೊಂದು ಸಂಕಷ್ಟ ಎದುರಾಗಿದೆ. ಕಾನೂನು ಬಾಹಿರವಾಗಿ ವಿಶಿಷ್ಟ ಪ್ರಬೇಧದ ಬಾರ್ ಹೆಡ್ ಬಾತುಕೋಳಿ (bar-headed goose) ಸಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ 2 ದಿನಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸಲು ನಿರ್ಧರಿಸಿದೆ.

ಈ ಕೇಸ್‌ನಲ್ಲಿ ನಟ ದರ್ಶನ್‌ ಮಾತ್ರವಲ್ಲದೆ ಪತ್ನಿ ವಿಜಯಲಕ್ಷ್ಮಿ ಕೂಡ ಆರೋಪಿಯಾಗಿದ್ದಾರೆ. ಮೈಸೂರು ಜಿಲ್ಲೆಯ ತಿ.ನರಸೀಪುರದಲ್ಲಿರುವ ದರ್ಶನ್ ತೋಟದಲ್ಲಿ ಕಾನೂನು ಬಾಹಿರ‌ವಾಗಿ ಬಾರ್ ಹೆಡ್ ಬಾತುಕೋಳಿ ಸಾಕಲಾಗಿತ್ತು. ಈ ಸಂಬಂಧ ಎಫ್ಐಆರ್ ದಾಖಲಾಗಿತ್ತು. ದರ್ಶನ್‌ ಪತ್ನಿ ವಿಜಯಲಕ್ಷ್ಮಿ A1 ಹಾಗೂ ಪ್ರಾಪರ್ಟಿ ಮ್ಯಾನೇಜರ್ ನಾಗರಾಜ್ ಅಲಿಯಾಸ್ ನಾಗ A2 ಹಾಗೂ ನಟ ದರ್ಶನ್ A3 ಆರೋಪಿ ಆಗಿದ್ದರು. ಐದು ಬಾರಿ ನೋಟಿಸ್ ಕೊಟ್ಟರು ನಟ ದರ್ಶನ್‌ ವಿಚಾರಣೆಗೆ ಹಾಜರಾಗಿ ಇರಲಿಲ್ಲ.

ಇತ್ತ ಪ್ರಕರಣ ಸಂಬಂಧ ದರ್ಶನ್‌ನನ್ನು ಬಂಧಿಸದೆ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿತ್ತು. ಸೆಲೆಬ್ರಿಟಿ ಆಗಿದ್ದರಿಂದ ತಲೆಮರೆಸಿಕೊಳ್ಳದ ಕಾರಣ ಬಲವಂತವಾಗಿ ಬಂಧಿಸದೇ, ವಿಚಾರಣೆಗೆ ಅವಕಾಶ‌‌ ಕೊಟ್ಟಿತ್ತು. ಇದೀಗ ಅರಣ್ಯ ಇಲಾಖೆಯು ಈ ಪ್ರಕರಣವನ್ನು ಚುರುಕುಗೊಳಿಸಿದೆ.

ಇದನ್ನೂ ಓದಿ: Actor Darshan: ದರ್ಶನ್ ಪ್ರಕರಣ; ಸ್ಯಾಂಡಲ್‌ವುಡ್‌ ಖ್ಯಾತ ಹಾಸ್ಯ ನಟ ಚಿಕ್ಕಣ್ಣಗೂ ನೋಟಿಸ್‌?

ಪ್ಲೀಸ್‌ ಪವಿತ್ರಾಳನ್ನು ಬಿಟ್ಟು ಬಿಡಿ ಎಂದು ಅಂಗಲಾಚುತ್ತಿರುವ ದರ್ಶನ್‌?

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆಯ‌ (Renuka Swamy Murder) ನಂತರ ಆಸುಪಾಸಿನ ಸ್ಥಳಗಳಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ (CCTV recording) ದಾಖಲಾಗಿದ್ದ ಎಲ್ಲ ದೃಶ್ಯಗಳನ್ನು ಡಿಲೀಟ್‌ (Delete) ಮಾಡಲಾಗಿದೆ ಎಂಬ ಆಘಾತಕಾರಿ ಸಂಗತಿ ಬಯಲಾಗಿದೆ. ಇದರ ಜತೆಗೆ ದರ್ಶನ್‌ (Actor Darshan) ಅವರು ಸ್ಥಳ ಮಹಜರು ವೇಳೆ ತನಿಖಾಧಿಕಾರಿಗಳಿಗೆ ಪವಿತ್ರ ಗೌಡಳನ್ನು ಬಿಟ್ಟು ಬಿಡಿ ಎಂದು ಅಂಗಲಾಚುತ್ತಿದ್ದಾರೆ ಎನ್ನಲಾಗಿದೆ.

ಸ್ಥಳ ಮಹಜರು ವೇಳೆ ತನಿಖಾಧಿಕಾರಿಗೆ ದರ್ಶನ್‌ ಮನವಿ ಮಾಡಿದ್ದಲ್ಲದೇ ಪೊಲೀಸ್ ಠಾಣೆಯಲ್ಲೂ ಪವಿತ್ರಾ ಗೌಡಳನ್ನು ಕೇಸ್‌ನಿಂದ ಕೈ ಬಿಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಪವಿತ್ರಾ ಗೌಡಳಿಗೂ ಈ ಕೊಲೆ ಕೇಸ್‌ಗೂ ಸಂಬಂಧವಿಲ್ಲವೆಂದು ದರ್ಶನ್ ಪದೇ ಪದೇ ಹೇಳುತ್ತಿದ್ದು, ಪವಿತ್ರ ಗೌಡಳನ್ನು ಬಿಟ್ಟು ಬಿಡಿ ಎಂದು ಅಂಗಲಾಚುತ್ತಿದ್ದಾರೆ ಎನ್ನಲಾಗಿದೆ. ಆದರೆ ದರ್ಶನ್‌ ಎಷ್ಟೇ ಮನವಿ ಮಾಡಿಕೊಂಡರೂ ಪೊಲೀಸರು ಮಾತ್ರ ಜಗ್ಗದೇ ಇನ್ನಷ್ಟು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಸಿಸಿಟಿವಿ ದಾಖಲೆ ಸಂಪೂರ್ಣ ನಾಶ ಮಾಡಿದ ಪಾತಕಿಗಳು

ಕೊಲೆಯ ಬಳಿಕ, ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನ ಹಾಗೂ ಹಲ್ಲೆ ನಡೆದ ಪಟ್ಟಣಗೆರೆಯ ಶೆಡ್‌ನ ದೃಶ್ಯಗಳನ್ನು ಡಿಲೀಟ್‌ ಮಾಡಿಸಲಾಗಿದೆ. ಆರೋಪಿಗಳು ಕಳೆದ ಒಂದು ವರ್ಷದ ಸಿಸಿ ಟಿವಿ ದೃಶ್ಯಗಳನ್ನು ಡಿಲೀಟ್ ಮಾಡಿಸಿದ್ದಾರೆ. ಸಿಸಿ ಟಿವಿ ದೃಶ್ಯಗಳೇ ಕೊಲೆಯ ಪ್ರಮುಖ ಸಾಕ್ಷಿ ಆಗಲಿವೆ ಎಂಬ ಹಿನ್ನೆಲೆಯಲ್ಲಿ, ಇವುಗಳನ್ನು ಪೂರ್ತಿಯಾಗಿ ಡಿಲೀಟ್‌ ಮಾಡಲು ಆರೋಪಿಗಳು ಅಪರಾಧ ಪರಿಣಿತರ ಸಲಹೆ ಪಡೆದೇ ಈ ಕೃತ್ಯ ಎಸಗಿದ್ದಾರೆ ಎಂದು ತರ್ಕಿಸಲಾಗಿದೆ.

ಇದನ್ನೂ ಓದಿ: Actor Darshan: ಮನಸ್ಸಿಗೆ ಹತ್ತಿರವಾದವರು ಕಷ್ಟ ಅನುಭವಿಸುತ್ತಿದ್ದಾರೆ; ಬರ್ತ್‌ಡೇ ಕ್ಯಾನ್ಸಲ್ ಮಾಡಿದ ರಕ್ಷಕ್ ಬುಲೆಟ್!

ರೇಣುಕಾಸ್ವಾಮಿ ಕೊಲೆಯ ಮೊದಲಿನ ಹಾಗೂ ನಂತರದ ಎಲ್ಲಾ ಸಿಸಿ ಕ್ಯಾಮರಾ ದೃಶ್ಯಗಳನ್ನು ಡಿಲೀಟ್‌ ಮಾಡಿಸಿದ್ದಾರೆ. ತನಿಖೆಗೆ ಇವು ಅತ್ಯಂತ ಅಗತ್ಯವಾಗಿದ್ದು, ಶೆಡ್ ಹಾಗೂ ರೆಸ್ಟೋರೆಂಟ್‌ನ ಸಿಸಿ ಟಿವಿ‌ ರೆಕಾರ್ಡಿಂಗ್‌ ರಿಕವರಿ ಮಾಡಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ದರ್ಶನ್‌ ಸೇರಿದಂತೆ ಆರೋಪಿಗಳ ಬಂಧನ ಆದ ಬಳಿಕ ಈ ರೆಕಾರ್ಡಿಂಗ್‌ ಡಿಲೀಟ್‌ ಮಾಡಲಾಗಿದೆಯೇ ಅಥವಾ ಮೊದಲೇ ಮಾಡಲಾಗಿದೆಯೇ ಎಂದು ತಿಳಿದುಬರಬೇಕಿದೆ.

ಕೊಲೆಯ ಪ್ರಮುಖ ಸಾಕ್ಷಿಗಳನ್ನೇ ಖತರ್‌ನಾಕ್ ಆರೋಪಿಗಳು ಡಿಲೀಟ್ ಮಾಡಿದ್ದು, ಈ ಹಿನ್ನೆಲೆಯಲ್ಲಿ ಸಾಕ್ಷಿ ನಾಶಕ್ಕೆ ಪೊಲೀಸ್‌ ಇಲಾಖೆಯಲ್ಲಿರುವವರಿಂದಲೂ ಆರೋಪಿಗಳು ಸಲಹೆ ಪಡೆದಿದ್ದಾರೆಯೇ ಎಂಬುದು ಕೂಡ ತನಿಖಾಧಿಕಾರಿಗಳಿಗೆ ಕುತೂಹಲ ಮೂಡಿಸಿದೆ. ಈಗಾಗಲೇ ಪ್ರಶ್ನೆಗೆ ಒಳಗಾಗುತ್ತಿರುವವರ ಪಟ್ಟಿಯಲ್ಲಿ ಒಬ್ಬ ಪೊಲೀಸ್‌ ಅಧಿಕಾರಿ ಕೂಡ ಇದ್ದಾರೆ ಎಂಬುದನ್ನು ಇಲ್ಲಿ ಗಮನಿಸಬಹುದು.

ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಪಟ್ಟಣಗೆರೆಯ ಶೆಡ್‌ನಲ್ಲಿ ಕೂಡಿಹಾಕಿ ಥಳಿಸಿ ಸಾಯಿಸಲಾಗಿತ್ತು. ನಂತರ ಇದನ್ನು ಮುಚ್ಚಿಹಾಕುವುದು ಹೇಗೆ ಎಂಬ ಕುರಿತು ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಲ್ಲಿ ನಟ ಹಾಗೂ ಆರೋಪಿಗಳು ಕೂತು ಮಾತನಾಡಿದ್ದರು. ಇಲ್ಲೇ 30 ಲಕ್ಷ ರೂಪಾಯಿಯ ಡೀಲ್‌ ಕೂಡ ನಡೆದಿತ್ತು. ಇದೀಗ ಎರಡೂ ಕಡೆಗಳ ಸಿಸಿಟಿವಿ ಹಾರ್ಡ್ ಡ್ರೈವ್‌ಗಳು ಕೂಡ ನಾಶವಾಗಿವೆ ಎಂದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನ ಮಾಲಿಕ‌ ವಿನಯ್‌ನನ್ನು ಕೂಡ ಪ್ರಶ್ನಿಸಲಾಗುತ್ತಿದೆ. ‌

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Bakrid 2024 : ನಾವೆಲ್ಲರೂ ಇನ್ನೊಂದು ಧರ್ಮವನ್ನು ಪ್ರೀತಿಸುವ ಮನೋಭಾವ ಬೆಳಸಿಕೊಳ್ಳಬೇಕು. ಆಗಲೇ ರಾಷ್ಟ್ರ ಹಾಗೂ ಸಮಾಜದ ಏಳಿಗೆ ಸಾಧ್ಯವಾಗುತ್ತದೆ ಎಂದು ಬಕ್ರೀದ್‌ ( Eid al Adha ) ಪ್ರಾರ್ಥನೆಯಲ್ಲಿ ಪಾಲ್ಗೊಂಡು ಸಿದ್ದರಾಮಯ್ಯ ಮಾತನಾಡಿದರು.

VISTARANEWS.COM


on

By

Bakrid 2024
Koo

ಬೆಂಗಳೂರು: ಸಮಾಜದಲ್ಲಿ ನಾವೆಲ್ಲರೂ ಅಣ್ಣ ತಮ್ಮಂದಿರ ರೀತಿ ಬಾಳಬೇಕು. ನಾವೆಲ್ಲರೂ ಇನ್ನೊಂದು ಧರ್ಮವನ್ನು ಪ್ರೀತಿಸುವ ಮನೋಭಾವ ಬೆಳಸಿಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಬಕ್ರೀದ್ (Eid al Adha) ಅಂಗವಾಗಿ ಚಾಮರಾಜಪೇಟೆ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ (Bakrid 2024 ) ಪಾಲ್ಗೊಂಡು ಮಾತನಾಡಿದರು.

ತ್ಯಾಗ ಬಲಿದಾನದ ಪ್ರತೀಕವಾಗಿರುವ ಬಕ್ರೀದ್ ಹಬ್ಬವನ್ನು ರಾಜ್ಯಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು.ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಒಬ್ಬರಿಗೊಬ್ಬರು ಶುಭಕೋರಿದರು. ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಸಾವಿರಾರು ಜನರು ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು. ಸಾಮೂಹಿಕ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವ ಜಮೀರ್ ಅಹಮದ್ ಉಪಸ್ಥಿತಿ ಇದ್ದರು. ಮುಸಲ್ಮಾನರ ಅಮಾಮ್ ಶಾಲು (ಟೋಪಿ) ಹಾಕಿ ಸಿದ್ದರಾಮಯ್ಯರಿಗೆ ಸನ್ಮಾನ ಮಾಡಿದರು.

bakrid 2024

ಬಳಿಕ ಮಾತನಾಡಿದ ಸಿಎಂ ಸಿದ್ಧರಾಮಯ್ಯ, ಇಡೀ ಭಾರತದಲ್ಲಿ ಬಕ್ರೀದ್ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಮನುಕುಲಕ್ಕೆ ಒಳ್ಳೆಯದಾಗಲಿ ಎಂದು ನೀವೆಲ್ಲರೂ ಪ್ರಾರ್ಥನೆ ಮಾಡಿದ್ದೀರಿ. ಸಮಾಜದಲ್ಲಿ ನಾವೆಲ್ಲರೂ ಅಣ್ಣ ತಮ್ಮಂದಿರ ರೀತಿ ಬಾಳಬೇಕು. ಎಲ್ಲಾ ಭಾಷೆ, ಧರ್ಮಕ್ಕೆ ಸಮಾನತೆ ಕೊಡುವ ಬಹುತ್ವದ ದೇಶವಿದು. ನಾವೆಲ್ಲರೂ ಇನ್ನೊಂದು ಧರ್ಮವನ್ನು ಪ್ರೀತಿಸುವ ಮನೋಭಾವ ಬೆಳಸಿಕೊಳ್ಳಬೇಕು. ಆಗಲೇ ರಾಷ್ಟ್ರ ಹಾಗೂ ಸಮಾಜದ ಏಳಿಗೆ ಸಾಧ್ಯವಾಗುತ್ತದೆ. ನಾವು ಸಂವಿಧಾನದ ಮೇಲೆ ನಂಬಿಕೆ ಇಟ್ಟವರು, ಯಾವುದೇ ತಾರತಮ್ಯ ಮಾಡಲ್ಲ ಎಂದರು.

ಕೊಪ್ಪಳದಲ್ಲೂ ತ್ಯಾಗ ಬಲಿದಾನದ ಪ್ರತೀಕವಾಗಿರುವ ಬಕ್ರೀದ್ ಹಬ್ಬವನ್ನು ಆಚರಿಸಲಾಯಿತು. ಈದ್ಗಾ ಮೈದಾನದಲ್ಲಿ ಸಾವಿರಾರು ಜನರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಸಂಸದ ಕೆ. ರಾಜಶೇಖರ ಹಿಟ್ನಾಳ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಸೇರಿ ಹಲವರು ಭಾಗಿಯಾಗಿದ್ದರು.

ಇದನ್ನೂ ಓದಿ: Bakrid: ಬಕ್ರೀದ್ ಹಿನ್ನೆಲೆಯಲ್ಲಿ ಮಾರಾಟಕ್ಕಿಟ್ಟಿದ್ದ ಈ ಮೇಕೆಯ ಬೆಲೆ 69 ಲಕ್ಷ ರೂ!

ಬೆಳಗಾವಿ ಅಂಜುಮಾನ ಮೈದಾನ ಹಾಗೂ ಶಿವಮೊಗ್ಗ, ವಿಜಯನಗರ ಹೊಸಪೇಟೆಯ ಅಂಬೇಡ್ಕರ್ ಸರ್ಕಲ್ ಬಳಿ ಇರುವ ಈದ್ಗಾ ಮೈದಾನದಲ್ಲೂ ಸಾಮೂಹಿಕ ಪ್ರಾರ್ಥನೆ ನಡೆಯಿತು. ಹೂಡಾ ಅಧ್ಯಕ್ಷ ಇಮಾಮ್, ಆನಂದ್ ಸಿಂಗ್ ಪುತ್ರ ಸಿದ್ದಾರ್ಥ ಸಿಂಗ್ ಸೇರಿ ಹಲವರು ಭಾಗಿಯಾಗಿದ್ದರು.

ಬಳ್ಳಾರಿ ನಗರದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆದಿದೆ. ಇದೇ ವೇಳೆ ಧರ್ಮಗುರುಗಳಿಂದ ಪ್ರವಾದಿ ಮಹಮದ್ ಪೈಗಂಬರರ ಜೀವನದ ಮಹತ್ವ ಬೋಧನೆ ಮಾಡಲಾಯಿತು. ತ್ಯಾಗ ಹಾಗೂ ಬಲಿದಾನಗಳ ಬಗ್ಗೆ ಧರ್ಮ ಗುರು ವಿವರಿಸಿದರು. ಪ್ರಾರ್ಥನೆ ನಂತರ ಪರಸ್ಪರ ಶುಭಾಶಯ ಕೋರಿದರು.

ಬಾಗಲಕೋಟೆಯ ಮುಧೋಳ ನಗರದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಮುಧೋಳ ಶಾಸಕ, ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಭಾಗಿಯಾದರು. ಪ್ರಾರ್ಥನೆ ಬಳಿಕ ಮುಸ್ಲಿಂ ಬಾಂಧವರಿಗೆ ಶುಭಾಶಯ ತಿಳಿಸಿದರು. ಹುಬ್ಬಳ್ಳಿಯ ರಾಣಿ ಚೆನ್ನಮ್ಮ ವೃತ್ತದ ಈದ್ಗಾ ಮೈದಾನದಲ್ಲೂ ನಮಾಜ್‌ ಮಾಡಲಾಯಿತು.

ಮೈಸೂರು ಹಾಗೂ ಮಂಡ್ಯದಲ್ಲೂ ಬಕ್ರೀದ್ ಅಂಗವಾಗಿ ವಿವಿಧೆಡೆಗಳಲ್ಲಿರುವ ಮಸೀದಿಗಳಲ್ಲಿ ಮುಸ್ಲಿಮರಿಂದ ಸಾಮೂಹಿಕ ಪ್ರಾರ್ಥನೆ ನಡೆಯಿತು. ಮೈಸೂರಿನ ತಿಲಕ್ ನಗರದಲ್ಲಿರುವ ಈದ್ಗಾ ಮೈದಾನದಲ್ಲಿ ಮುಸ್ಲಿಂ ಧರ್ಮಗುರು ಉಸ್ಮಾನ್ ಷರೀಫ್ ಅವರು ಭಾಗಿಯಾಗಿದ್ದರು. ಮಂಡ್ಯದ ಈದ್ಗಾ ಮೈದಾನದಲ್ಲಿ ನಗರಸಭೆ ಸದಸ್ಯ ನಹೀಮ್ ಪ್ರಾರ್ಥನೆ ಸಲ್ಲಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೈಂ

Drowned: ಈಜಲು ಹೋಗಿ ಬಾಲಕರು ನೀರುಪಾಲು; ಕಮಲ ಕೊಯ್ಯಲು ಹೋಗಿ ಕೆಸರಿನಲ್ಲಿ ವ್ಯಕ್ತಿ ಸಮಾಧಿ

Drowned: ಮುಸ್ಸಂಜೆ ವೇಳೆ ಈಜಲು ತೆರಳಿದ್ದ ಈ ಯುವಕರು ಈಜುವ ವೇಳೆ ದುರ್ಘಟನೆ ನಡೆದಿದೆ. ನಡು ಕೆರೆಯಲ್ಲಿದ್ದಾಗ ಬಳಲಿ ತೀರಕ್ಕೆ ಬರಲಾಗದೆ ಮುಳುಗಿ ಮೃತಪಟ್ಟಿದ್ದಾರೆ

VISTARANEWS.COM


on

Drowned in river
Koo

ಮೈಸೂರು: ಈಜಲು (Swimming) ಹೋಗಿ ಇಬ್ಬರು ಬಾಲಕರು ನೀರು ಪಾಲಾದ ಘಟನೆ (Drowned) ಮೈಸೂರಿನ ಸೌಕಾರಹುಂಡಿ ಕೆರೆಯಲ್ಲಿ (Lake) ನಡೆದಿದೆ. ಹೂಟಗಳ್ಳಿ ಹೌಸಿಂಗ್ ಬೋರ್ಡ್ ನಿವಾಸಿ ವರುಣ್ (16) ಹಾಗೂ ಬಸವನಪುರ ನಿವಾಸಿ ಜಸ್ವಂತ್ (14) ಮೃತ ದುರ್ದೈವಿಗಳು.

ಮುಸ್ಸಂಜೆ ವೇಳೆ ಈಜಲು ತೆರಳಿದ್ದ ಈ ಯುವಕರು ಈಜುವ ವೇಳೆ ದುರ್ಘಟನೆ ನಡೆದಿದೆ. ನಡು ಕೆರೆಯಲ್ಲಿದ್ದಾಗ ಬಳಲಿ ತೀರಕ್ಕೆ ಬರಲಾಗದೆ ಮುಳುಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ತಾವರೆ ಕೊಯ್ಯಲು ಹೋಗಿ ಹೂವಿನ ವ್ಯಾಪಾರಿ ಸಾವು

ತುಮಕೂರು: ಕೆರೆಯಲ್ಲಿದ್ದ ಕಮಲ ಕೀಳಲು ಹೋಗಿದ್ದ ವ್ಯಕ್ತಿ ಕೆಸರಿನಲ್ಲಿ ಸಿಲುಕಿ ಸಾವಿಗೀಡಾದ ಘಟನೆ ತುಮಕೂರು ತಾಲೂಕಿನ ಅರಕೆರೆ ಕೆರೆಯಲ್ಲಿ ನಡೆದಿದೆ. ಕೊರಟಗೆರೆ ತಾಲೂಕಿನ ಮಧ್ಯವೆಂಕಟಪುರದ ನಿವಾಸಿ ಶ್ರೀನಿವಾಸ್ (35) ಮೃತ ದುರ್ದೈವಿ.

ಹೂವಿನ ವ್ಯಾಪಾರಿಯಾಗಿದ್ದ ಶ್ರೀನಿವಾಸ್ ಅವರು, ಅದೇ ಊರಿನ ಕೆಂಪರಾಮಯ್ಯ, ಚಿಕ್ಕಹನುಮಯ್ಯ ಜೊತೆ ಕಮಲದ ಹೂ ಕೀಳಲು ಹೋಗಿದ್ದರು. ಈ ವೇಳೆ ಕೆಸರಲ್ಲಿ ಸಿಲುಕಿ ಮೇಲೇಳಲಾಗದೆ ಸಾವನ್ನಪ್ಪಿದ್ದಾರೆ. ನಿನ್ನೆ ಮಧ್ಯಾಹ್ನದ ಹೊತ್ತಿಗೆ ದುರ್ಘಟನೆ ನಡೆದಿದ್ದು, ಜೊತೆಗಿದ್ದವರು ಊರಿಗೆ ಹೋಗಿ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅತ್ತಿಬೆಲಯಲ್ಲಿ ಬಾಲಕ ನೀರುಪಾಲು

ಆನೇಕಲ್: ಸ್ನೇಹಿತರ ಜತೆ ಕೆರೆಗೆ ಈಜಲು ಹೋದ ಬಾಲಕ ನೀರುಪಾಲಾಗಿರುವ ಘಟನೆ (Drowns in lake) ಬೆಂಗಳೂರಿನ ಹೊರವಲಯದ ಆನೇಕಲ್ ತಾಲೂಕಿನ ಬಳ್ಳೂರು ಅತ್ತಿಬೆಲೆ ಸಮೀಪದ ಬಳ್ಳೂರು ಕೆರೆಯಲ್ಲಿ ನಡೆದಿದೆ. ಅತ್ತಿಬೆಲೆ ವಾಸಿ ಧನುಷ್ (14) ಮೃತ ಬಾಲಕ.

ರೈನ್ ಬೋ ಖಾಸಗಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಬಾಲಕ, ಭಾನುವಾರ ಶಾಲೆಗೆ ರಜೆ ಇದಿದ್ದದ್ದರಿಂದ ಸ್ನೇಹಿತರ ಜತೆ ಈಜಲು ಕೆರೆಗೆ ಹೋಗಿದ್ದ. ಈ ವೇಳೆ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಬಾಲಕನ ಮೃತ ದೇಹವನ್ನು ಅಗ್ನಿಶಾಮಕ ದಳ ಸಿಬ್ಬಂದಿ ಹೊರತೆಗೆದಿದ್ದು, ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಖಾಸಗಿ ಬಸ್- ಸ್ಕೂಟರ್ ಡಿಕ್ಕಿಯಾಗಿ ಸವಾರ ಸಾವು

ಕೊಡಗು: ಖಾಸಗಿ ಬಸ್ ಹಾಗೂ ದ್ವಿಚಕ್ರ ನಡುವೆ ಭೀಕರ ಅಪಘಾತ (Road Accident) ಸಂಭವಿಸಿ, ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಸುಂಟಿಕೊಪ್ಪದ ಗದ್ದೆಹಳ್ಳ ಬಳಿ‌ ನಡೆದಿದೆ. ಸುಂಟಿಕೊಪ್ಪ‌ ನಿವಾಸಿ ಪಟ್ಟೆಮನೆ ಲೋಕೇಶ್ ಕುಮಾರ್ (59) ಮೃತ ದುರ್ದೈವಿ.

ಕಳೆದ ಹಲವು ವರ್ಷಗಳಿಂದ ಲೋಕೇಶ್‌ ವಾಹನ ಚಾಲಕರಾಗಿದ್ದರು. ಸುಂಟಿಕೊಪ್ಪದ ಗದ್ದೆಹಳ್ಳ ಬಳಿ‌ ತೆರಳುತ್ತಿದ್ದಾಗ ಖಾಸಗಿ ಬಸ್‌ನೊಂದಿಗೆ ಡಿಕ್ಕಿಯಾಗಿ ಮೃತಪಟ್ಟಿದ್ದಾರೆ.

ಗುಂಡಿನ ದಾಳಿ; ರೌಡಿಶೀಟರ್‌ ಸ್ಥಳದಲ್ಲೇ ಸಾವು

ವಿಜಯಪುರ: ಭೀಮಾ ತೀರದಲ್ಲಿ ಗುಂಡಿನ ದಾಳಿ ನಡೆದು, ರೌಡಿಶೀಟರ್‌ ಮೃತಪಟ್ಟಿದ್ದಾನೆ. ಜಿಲ್ಲೆಯ ಚಡಚಣ ಪಟ್ಟಣದ ನೀವರಗಿ ರಸ್ತೆಯ ಮನೆ ಬಳಿ ಇದ್ದಾಗ ದುಷ್ಕರ್ಮಿಗಳು ಗುಂಡಿನ ದಾಳಿ (Shootout Case) ನಡೆಸಿ ರೌಡಿಶೀಟರ್‌ನ ಕೊಲ್ಲಲಾಗಿದೆ.

ಅಶೋಕ ಮಲ್ಲಪ್ಪ ಗಂಟಗಲ್ಲಿ ಮೃತ. ಮನೆಯಿಂದ ಚಡಚಣ ಪಟ್ಟಣಕ್ಕೆ ಆಗಮಿಸುತ್ತಿದ್ದ ವೇಳೆ ಹಂತಕರು ದಾಳಿ ಮಾಡಿದ್ದಾರೆ. ಅಶೋಕ‌ ಬೆನ್ನಿಗೆ ಮೂರಕ್ಕೂ ಅಧಿಕ ಗುಂಡಿಗಳು ತಾಗಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇತ್ತೀಚೆಗೆ ಜೈಲಿನಿಂದ ಪೆರೋಲ್ ಮೇಲೆ ಅಶೋಕ ಹೊರಬಂದಿದ್ದ. ಕೊಲೆ ಹಾಗೂ ಇತರೆ ಕೇಸ್‌ಗಳಲ್ಲಿ ಅಪರಾಧಿಯಾಗಿದ್ದ ವ್ಯಕ್ತಿಯನ್ನು ಹಳೆ ದ್ವೇಷದಿಂದ ಕೊಲೆ ಮಾಡಿರೋ ಸಂಶಯ ಮೂಡಿದೆ. ಕೊಲೆಗೀಡಾದ ಅಶೋಕ ಪತ್ನಿ ಚಡಚಣ ಪಟ್ಟಣದ ವಾರ್ಡ್ ನಂಬರ್ 2ರ ಬಿಜೆಪಿ ಸದಸ್ಯೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಚಡಚಣ ಪೊಲೀಸರ ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | Electric Shock: ಕುಷ್ಟಗಿಯಲ್ಲಿ ವಿದ್ಯುತ್ ತಂತಿ ತಗುಲಿ ರೈತ, 2 ಎತ್ತುಗಳ ಸಾವು

Continue Reading
Advertisement
Actor Chikkanna
ಕರ್ನಾಟಕ54 mins ago

Actor Chikkanna: ದರ್ಶನ್‌ ಊಟಕ್ಕೆ ಕರೆದಿದ್ರು, ಹೋಗಿದ್ದೆ; ಪೊಲೀಸ್‌ ವಿಚಾರಣೆ ಬಳಿಕ ಚಿಕ್ಕಣ್ಣ ಫಸ್ಟ್‌ ರಿಯಾಕ್ಷನ್!

Kalki 2898 AD Movie Bhairava Anthem Released
ಕರ್ನಾಟಕ2 hours ago

Kalki 2898 AD: ʼಕಲ್ಕಿ 2898 ADʼ ಚಿತ್ರದ ಭೈರವ ಆಂಥಮ್‌ ರಿಲೀಸ್‌!

Union Minister HD Kumaraswamy visit Shira
ತುಮಕೂರು2 hours ago

Shira News: ಶಿರಾಕ್ಕೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಭೇಟಿ

Maharashtra government appoints Marathi teachers to Kannada schools; Ashoka Chandragi wrote a letter to CM Siddaramaiah
ಬೆಳಗಾವಿ2 hours ago

Belagavi News: ಕನ್ನಡ ಶಾಲೆಗಳಿಗೆ ಮರಾಠಿ ಶಿಕ್ಷಕರು! ಮುಖ್ಯಮಂತ್ರಿಗಳೇ ಗಮನ ಹರಿಸಿ

District administration failed to prevent illegal activities in the district MLA Janardhana Reddy alleges
ಕರ್ನಾಟಕ2 hours ago

Koppala News: ಜಿಲ್ಲೆಯಲ್ಲಿ ಕಾನೂನುಬಾಹಿರ ಚಟುವಟಿಕೆ ತಡೆಯುವಲ್ಲಿ ಜಿಲ್ಲಾಡಳಿತ ವಿಫಲ; ಶಾಸಕ ಜನಾರ್ದನ ರೆಡ್ಡಿ ಆರೋಪ

Pushpa 2
ಸಿನಿಮಾ2 hours ago

Pushpa 2: ಪುಷ್ಪ 2 ಸಿನಿಮಾ ಬಿಡುಗಡೆ 5 ತಿಂಗಳು ಮುಂದೂಡಿಕೆ; ಇಲ್ಲಿದೆ ಹೊಸ ಡೇಟ್

HD Kumaraswamy
ಕರ್ನಾಟಕ2 hours ago

HD Kumaraswamy: ಕೊಬ್ಬರಿಗೆ 16-18 ಸಾವಿರ ಬೆಂಬಲ ಬೆಲೆ ಕೊಡಿಸುವೆ: ರೈತರಿಗೆ ಎಚ್‌ಡಿಕೆ ಭರವಸೆ

Narendra Modi
ದೇಶ2 hours ago

ಪೋಪ್‌-ಮೋದಿ ಭೇಟಿಯನ್ನು ಲೇವಡಿ ಮಾಡಲು ಹೋದ ಕಾಂಗ್ರೆಸ್‌ಗೆ ಮುಖಭಂಗ; ಕ್ರೈಸ್ತರ ಕ್ಷಮೆ ಕೇಳಿದ್ದೇಕೆ?

Health Tips Kannada
Latest2 hours ago

Health Tips Kannada: ನೆನಪಿಡಿ, ನಾಲಿಗೆ ಬಯಸುವ ಆಹಾರಗಳನ್ನೆಲ್ಲ ನಿಮ್ಮ ಮಿದುಳು ಬಯಸದು!

Petrol Diesel Price Hike
ಕರ್ನಾಟಕ3 hours ago

Petrol Diesel Price Hike: ಕೇಂದ್ರ ಸರ್ಕಾರ ಹಣ ಕೊಟ್ಟಿದ್ರೆ ತೆರಿಗೆ ಹೆಚ್ಚಿಸುವ ಅಗತ್ಯವೇ ಇರ್ತಿರಲಿಲ್ಲ: ಸಿಎಂ ಸಿದ್ದರಾಮಯ್ಯ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಮೈಸೂರು10 hours ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು11 hours ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 day ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 day ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 day ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ3 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ3 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

ಟ್ರೆಂಡಿಂಗ್‌